Tag: agni shridhar

  • ಡಿಜಿಗೆ ಮನವಿ ಪತ್ರ ಕೊಟ್ಟು ಸಿಕ್ಕಿಬಿದ್ದ ಅಗ್ನಿ ಶ್ರೀಧರ್?

    ಡಿಜಿಗೆ ಮನವಿ ಪತ್ರ ಕೊಟ್ಟು ಸಿಕ್ಕಿಬಿದ್ದ ಅಗ್ನಿ ಶ್ರೀಧರ್?

    ಬೆಂಗಳೂರು:`ಹಲವು ಕಾರಣಗಳಿಂದಾಗಿ 1981 ರಿಂದ 1998ರ ಅವಧಿಯವರೆಗೂ ನಾನು ಭೂಗತ ಜಗತ್ತಿನಲ್ಲಿ ಇದ್ದೆ. 1986ರಲ್ಲಿ ನಡೆದ ಕುಖ್ಯಾತ ಭೂಗತ ಪಾತಕಿ ಕೊತ್ವಾಲ್ ರಾಮಚಂದ್ರ ಕೊಲೆ ಪ್ರಕರಣದಲ್ಲಿ ನಾನು ಭಾಗಿಯಾಗಿದ್ದೆ. ತುಂಡರಿಸದ ಸರಪಣಿ ರೀತಿ ಹತ್ತು ಹಲವು ಘಟನಾವಳಿಗಳ ನಡೆದು ಹೋದ ಕಾರಣ ನಾನು 13 ವರ್ಷ ಭೂಗತ ಪ್ರಪಂಚದಲ್ಲಿ ಇದ್ದೆ’ ಎಂದು ಅಗ್ನಿ ಶ್ರೀಧರ್ ಡಿಜಿಪಿ ಆರ್‍ಕೆ ದತ್ತಾಗೆ ಸಲ್ಲಿಸಿರುವ ಮನವಿಯೇ ಈಗ ಆತನಿಗೆ ಉರುಳಾಗುವ ಸಾಧ್ಯತೆಯಿದೆ.

    ಹೌದು.ಭೂಗತ ಜಗತ್ತಿನ ದಿನಗಳ ಬಗ್ಗೆ ವಿವರಣೆ ಇರುವ ಮನವಿ ಪತ್ರವನ್ನು ಡಿಜಿಪಿಗೆ ಅಗ್ನಿ ಶ್ರೀಧರ್ ಕೊಟ್ಟಿದ್ದ. ಕೊತ್ವಾಲ್ ಮರ್ಡರ್ ಕೇಸ್‍ನಲ್ಲಿ ನಾನು ಭಾಗಿಯಾಗಿದ್ದೇನೆ ಎನ್ನುವ ಅಂಶವನ್ನು ಅಗ್ನಿ ಶ್ರೀಧರ್ ಈ ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದ. ಈ ಅಂಶವನ್ನು ಉಲ್ಲೇಖಿಸಿದ ಹಿನ್ನೆಲೆಯಲ್ಲಿ ಮತ್ತೆ ಈ ಕೊಲೆ ಕೇಸಿಗೆ ಮರು ಜೀವ ನೀಡಲು ಬೆಂಗಳೂರು ಪೊಲೀಸರು ಸಿದ್ದತೆ ಮಾಡಿಕೊಂಡಿದ್ದಾರೆ.ಇವತ್ತು ಮಾಧ್ಯಮಗಳ ಜೊತೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್, ಅಗ್ನಿಶ್ರೀಧರ್ ಮನವಿ ಪತ್ರವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಅಂಥ ಹೇಳಿದ್ದಾರೆ.

    ಇದನ್ನೂ ಓದಿ: Exclusive : ಅಗ್ನಿ ಶ್ರೀಧರ್ ರಕ್ಷಣೆ ಮುಂದಾಗಿದ್ದ ಸರ್ಕಾರದ ಪ್ರಭಾವಿ ಸಚಿವ

    ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ದರ್ಪ ತೋರಿಸಿ ನನ್ನ ಮೇಲೆ ಸುಳ್ಳು ಆರೋಪ ದಾಖಲಿಸಿದ್ದಾರೆ. ಆದರೆ ನಾನು ಈಗ ಭೂಗತ ಜಗತ್ತಿನಿಂದ ಹೊರ ಬಂದಿದ್ದೇನೆ. ಈ ಪ್ರಕರಣದಲ್ಲಿ ನಾನು ವಿಲನ್ ಅಲ್ಲ. ನಿಂಬಾಳ್ಕರ್ ನನಗೆ ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಬೇಕೆಂದು ಅಗ್ನಿ ಶ್ರೀಧರ್ ಮನವಿ ಮಾಡಿದ್ದ.

    ಏನಿದು ಕೊತ್ವಾಲ್ ಮರ್ಡರ್ ಕೇಸ್?
    80ರ ದಶಕದಲ್ಲಿ ಕೊತ್ವಾಲ್ ರಾಮಚಂದ್ರಪ್ಪ ಬೆಂಗಳೂರಿನ ಅಂಡರ್ ವಲ್ರ್ಡ್ ಡಾನ್ ಆಗಿದ್ದ. 1986ರ ಮಾರ್ಚ್ 22 ರಂದು ಕುಣಿಗಲ್ ಸಮೀಪ ತೋಟದ ಮನೆಯೊಂದಕ್ಕೆ ಕರೆದುಕೊಂಡು ಹೋಗಿ ಹತ್ಯೆ ಮಾಡಿದ್ದರು. ಈ ಕೊಲೆ ಪ್ರಕರಣದಲ್ಲಿ ಜೈರಾಜ್, ಸೀತಾರಾಮ್ ಶೆಟ್ಟಿ, ಶ್ರೀಧರ್‍ಮೂರ್ತಿ ಅಲಿಯಾಸ್ ಅಗ್ನಿಶ್ರೀಧರ್ ಸೇರಿದಂತೆ ಅನೇಕರನ್ನು ಆರೋಪಿಗಳನ್ನಾಗಿ ಪೊಲೀಸರು ಪ್ರಕರಣ ದಾಖಲಿಸಿದ್ದರು.

    ಕೋರ್ಟ್‍ನಲ್ಲಿ ಖುಲಾಸೆ :
    ಈ ಪ್ರಕರಣದಲ್ಲಿ ಸಾಕ್ಷ್ಯ ಹೇಳಲು ಬಂದಿದ್ದವರು ಹೆದರಿಕೊಂಡು ಹೋಗಿದ್ದರಂತೆ. ಸಾಕ್ಷ್ಯಗಳ ಕೊರತೆಯಿಂದಾಗಿ ಕೊತ್ವಾಲ್ ಕೊಲೆ ಪ್ರಕರಣದಲ್ಲಿದ್ದ ಎಲ್ಲ ಆರೋಪಿಗಳನ್ನು ಕೋರ್ಟ್ ಖುಲಾಸೆಗೊಳಿಸಿತ್ತು. ಈಗ ಅಗ್ನಿ ಶ್ರೀಧರ್ ಕೊತ್ವಾಲ್ ಕೊಲೆ ಕೇಸ್‍ನಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ಸಹಿ ಹಾಕಿರುವ ಪತ್ರವನ್ನು ಡಿಜಿಗೆ ನೀಡಿದ್ದು ಈ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿದೆ.

    ದಾಳಿಯಾಗಿದ್ದು ಯಾಕೆ?
    ಕಡಬಗೆರೆ ಶ್ರೀನಿವಾಸ್ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ಸ್‍ಗೆ ಆಶ್ರಯ ನೀಡಿದ್ದ ಮಾಹಿತಿ ಮೇರೆಗೆ ಇತ್ತೀಚೆಗೆ ಪೊಲೀಸರು ಅಗ್ನಿ ಶ್ರೀಧರ್ ಮನೆ ಮೇಲೆ ದಾಳಿ ನಡೆಸಿದ್ದರು. ಈ ಸಂದರ್ಭ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ, ವಿದೇಶಿ ಮದ್ಯ ದೊರಕಿತ್ತು. ದಾಳಿ ನಡೆದಾಗ ಅತಿಯಾದ ರಕ್ತದೊತ್ತಡದಿಂದ ಕುಸಿದು ಬಿದ್ದಿದ್ದರಿಂದ ಅಗ್ನಿ ಶ್ರೀಧರ್ ಕುಮಾರಸ್ವಾಮಿ ಲೇಔಟ್‍ನಲ್ಲಿರುವ ಸಾಗರ್ ಆಸ್ಪತ್ರೆಗೆ ದಾಖಲಾಗಿದ್ದ. ಬಳಿಕ ಶ್ರೀಧರ್ ಆಪ್ತ, ಬಲಗೈ ಬಂಟ ಬಚ್ಚನ್ ಸೇರಿದಂತೆ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

    ಸಾಗರ್ ಆಸ್ಪತ್ರೆಯ ಸ್ಪೆಶಲ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಧರ್, ಬಂಧನದ ಭೀತಿ ಹಿನ್ನೆಲೆಯಲ್ಲಿ ವಕೀಲರ ಮೂಲಕ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್ ಜಾಮೀನು ಮಂಜೂರು ಮಾಡಿ ಆದೇಶ ನೀಡಿತ್ತು.

    https://www.youtube.com/watch?v=ZhUvTr8EtIk

    ಕೊತ್ವಾಲ್ ರಾಮಚಂದ್ರ
  • ಅಗ್ನಿ ಶ್ರೀಧರ್‍ಗೆ ಚಿಕಿತ್ಸೆ ಮುಂದುವರಿಕೆ, ಆಸ್ಪತ್ರೆಗೆ ಬಂದ ಚಂಪಾ: ಎಷ್ಟು ಪೊಲೀಸರು ನಿಯೋಜನೆಗೊಂಡಿದ್ದಾರೆ?

    ಬೆಂಗಳೂರು: ಮಂಗಳವಾರ ಪೊಲೀಸರ ಹಠಾತ್ ದಾಳಿಯಿಂದ ಮಧ್ಯಾಹ್ನ ಲಘು ಹೃದಯಾಘಾತವಾಗಿ ಕುಸಿದುಬಿದ್ದು ಕುಮಾರಸ್ವಾಮಿ ಲೇಔಟ್‍ನಲ್ಲಿರುವ ಸಾಗರ್ ಆಸಸ್ಪತ್ರೆಗೆ ದಾಖಲಾಗಿದ್ದ ಅಗ್ನಿ ಶ್ರೀಧರ್‍ಗೆ ಚಿಕಿತ್ಸೆ ಮುಂದುವರಿಯುತ್ತಿದೆ.

    ಎದೆನೋವು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಐಸಿಯುನಲ್ಲಿರು ಆರೋಪಿ ಅಗ್ನಿ ಶ್ರೀಧರ್‍ಗೆ ಹೃದ್ರೋಗ ತಜ್ಞ ಡಾ. ಕಿಶೋರ್ ನೇತೃತ್ವದ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಇಂದು ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಬಳಿಕ ಅಗ್ನಿ ಶ್ರೀಧರ್ ಬಂಧನವಾಗುವ ಸಾಧ್ಯತೆಯಿದೆ.

    ರಾತ್ರಿಯಿಡಿ ಆಸ್ಪತ್ರೆ ಬಳಿ ಒಂದು ಕೆಎಸ್ ಆರ್ ಪಿ ತುಕಡಿ ಹಾಗೂ ಕುಮಾರಸ್ವಾಮಿ ಲೇಔಟ್ ಪೆÇಲೀಸರಿಂದ ಭದ್ರತೆಗೆ ನಿಯೋಜನೆಗೊಂಡಿದ್ದು, ವಾರ್ಡ್ ಬಳಿ ಎಂಟು ಜನ ಪೆÇಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

    ಚಂಪಾ ಭೇಟಿ: ಹಿರಿಯ ಸಾಹಿತಿ ಚಂದ್ರಶೇಖರ್ ಪಾಟೀಲ ಅವರು ಸಾಗರ್ ಆಸ್ಪತ್ರೆಗೆ ಭೇಟಿ ನೀಡಿ ಅಗ್ನಿ ಶ್ರೀಧರ್ ಆರೋಗ್ಯ ವಿಚಾರಿಸಿದರು.

    ಠಾಣೆಗೆ ಬಂದ ಹೊಟ್ಟೆ ಕೃಷ್ಣ: ಲೋಕಾಯುಕ್ತ ಡೀಲ್ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಹೊಟ್ಟೆ ಕೃಷ್ಣ ಆರೋಪಿ ಬಚ್ಚನ್ ನೋಡಲು ಕುಮಾರಸ್ವಾಮಿ ಲೇಔಟ್ ಠಾಣೆಗೆ ಆಗಮಿಸಿದ್ದ. ಬಚ್ಚನ್ ಅಕ್ಕನ ಮಗನಾಗಿರುವ ಬಿಬಿಎಂಪಿಯ ಬನಶಂಕರಿ ದೇಗುಲ ವಾರ್ಡ್ ಸದಸ್ಯ ಅನ್ಸರ್ ಪಾಷಾ ಕೂಡ ಬಚ್ಚನ್ ಯೋಗಕ್ಷೇಮ ವಿಚಾರಿಸಿದ್ರು..

    ಪೊಲೀಸ್ ಕಸ್ಟಡಿಗೆ: ಕಾಂಗ್ರೆಸ್ ಮುಖಂಡ ಕಡಬಗೆರೆ ಶ್ರೀನಿವಾಸ್ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾದ 10 ಆರೋಪಿಗಳನ್ನು ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ನೀಡಿದೆ.

    ಬಂಧಿತ ಆರೋಪಿಗಳನ್ನು ಬುಧವಾರ 44 ನೇ ಎಸಿಎಂ ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡಿಸಿದರು. ಈ ವೇಳೆ ಕೋರ್ಟ್ ಫೆ.20ರವರೆಗೆ ಪೊಲೀಸ್ ಕಸ್ಟಡಿ ನೀಡಿ ಆದೇಶ ಪ್ರಕಟಿಸಿತು.

    ಕೇಸ್ ವರ್ಗಾವಣೆ: ಅಗ್ನಿ ಶ್ರೀಧರ್ ಮನೆಯ ಮೇಲೆ ದಾಳಿಗೆ ಸಂಬಂಧಿಸಿದಂತೆ ಮಂಗಳವಾರ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಈಶಾನ್ಯ ವಿಭಾಗಕ್ಕೆ ಪ್ರಕರಣ ವರ್ಗಾವಣೆಯಾಗಿದ್ದು, ಸಂಪಿಗೆಹಳ್ಳಿ ಠಾಣೆಯ ಇನ್ಸ್‍ಪೆಕ್ಟರ್‍ಗೆ ತನಿಖೆ ಜವಾಬ್ದಾರಿ ವಹಿಸಿದ್ದಾರೆ.

    ಒಂಟೆ ರೋಹಿತ್

  • ಇನ್ನು ಮುಂದೆ ರೌಡಿಗಳ ಆಕ್ರಮ ಆಸ್ತಿಯನ್ನು ಕಲೆ ಹಾಕಲಿದ್ದಾರೆ ಪೊಲೀಸರು

    ಬೆಂಗಳೂರು: ಇಲ್ಲಿಯವರೆಗೆ ರೌಡಿ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೆವು. ಇನ್ನು ಮುಂದೆ ರೌಡಿಗಳ ಅಕ್ರಮ ಆಸ್ತಿಗಳನ್ನು ಕಲೆ ಹಾಕಲಾಗುವುದು ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಬಾಳ್ಕರ್ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಾರ್ವಜನಿಕರ ಹಿತಾಸಕ್ತಿ ಕಾಪಾಡುವುದು ನಮ್ಮ ಹೊಣೆ. ಕಾನೂನು ಸುವ್ಯವಸ್ಥೆ ವಿರುದ್ಧವಾಗಿದ್ದವರನ್ನು ಸುಮ್ಮನೇ ಬಿಡುವುದಿಲ್ಲ. ಸಾರ್ವಜನಿಕರು ಧೈರ್ಯವಾಗಿ ಮುಂದೆ ಬಂದು ದೂರು ನೀಡಿ. ಸ್ಥಳೀಯ ಠಾಣೆಗಳಿಗೆ ದೂರು ನೀಡಿ, ಇಲ್ಲವಾದಲ್ಲಿ ನಮ್ಮ ಬಳಿ ಬನ್ನಿ ಎಂದು ಅವರು ಹೇಳಿದರು.

    ಬೆಂಗಳೂರಿನಲ್ಲಿ ಅಂಡರ್ ವರ್ಲ್ಡ್ ಮಾಫಿಯಾ, ರಿಯಲ್ ಎಸ್ಟೇಟ್, ಪುಡಿ ರೌಡಿಗಳ ಉಪಟಳ ಹೆಚ್ಚಾಗಿದೆ. ಗುಂಪಿನಲ್ಲಿದ್ದರೆ ಮಾತ್ರ ಅವರು ರೌಡಿಗಳು, ಒಬ್ಬರೆ ಇದ್ದರೆ ಇವರು ಪುಕ್ಕಲರು. ಭೂಮಾಫಿಯಾ, ಗಾರ್ಬೆಜ್ ಮಾಫಿಯಾ, ಸಂಬಂಧ ವಿಲ್ಲದ ವಿಚಾರಗಳಿಗೆ ತಲೆಹಾಕುವವರ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಟಾಟಾ ರಮೇಶ ನೀಡಿದ ದೂರಿನನ್ವಯ ಮಂಗಳವಾರ ಅಗ್ನಿ ಶ್ರೀಧರ್ ನಿವಾಸದ ಮೇಲೆ 150 ಕೂ ಹೆಚ್ಚು ಅಧಿಕಾರಿ ಹಾಗು ಸಿಬ್ಬಂದಿಯಿಂದ ದಾಳಿ ನಡೆಸಿದ್ದೆವು. ದಾಳಿ ನಡೆಸಿದ್ದ ಸಂದರ್ಭದಲ್ಲಿ ಅಕ್ರಮ ಶಸ್ತ್ರಸ್ತ್ರಗಳು ಪತ್ತೆಯಾಗಿವೆ. ಶ್ರೀಧರ್‍ಗೆ ಲಘು ಹೃದಯಘಾತವಾಗಿದ್ದು, ಪೊಲೀಸ್ ಭದ್ರತೆಯಲ್ಲಿ ಚಿಕಿತ್ಸೆ ನಡೆಸಲಾಗ್ತಿದೆ.

    ಏಳು ಮಂದಿ ಆರೋಪಿಗಳ ಮೇಲೆ ಕುಮಾರಸ್ವಾಮಿ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ರೋಹಿತ್ ಅಲಿಯಾಸ್ ಒಂಟೆ ಮತ್ತು ಸೈಲೆಂಟ್ ಸುನಿಲನ್ನು ಟಾಟಾ ರಮೇಶ್ ಕೊಲೆ ಬೆದರಿಕೆ ಮೇಲೆ ವಿಚಾರಣೆ ನಡೆಸಲಾಗ್ತಿದೆ. ಕಬಡಗೆರೆ ಶ್ರೀನಿವಾಸ್ ಶೂಟೌಟ್ ಪ್ರಕರಣದಲ್ಲಿ ಇವರು ಶಾಮೀಲಾಗಿರುವ ಶಂಕೆ ಇದ್ದು ವಿಚಾರಣೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.