Tag: Agneepath

  • ಅಗ್ನಿಪಥ್ ದೈಹಿಕ ಪರೀಕ್ಷೆಗೆ ಪದವಿ ಪರೀಕ್ಷೆ ಅಡ್ಡಿ – 20 ದಿನ ಪದವಿ ಪರೀಕ್ಷೆ ಮುಂದೂಡಲು ಆಗ್ರಹ

    ಅಗ್ನಿಪಥ್ ದೈಹಿಕ ಪರೀಕ್ಷೆಗೆ ಪದವಿ ಪರೀಕ್ಷೆ ಅಡ್ಡಿ – 20 ದಿನ ಪದವಿ ಪರೀಕ್ಷೆ ಮುಂದೂಡಲು ಆಗ್ರಹ

    ಧಾರವಾಡ: ಸೆಪ್ಟೆಂಬರ್ 1 ರಿಂದ 20 ರವರೆಗೆ ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಗ್ನಿಪಥ್ ಯೋಜನೆ ಅಡಿಯಲ್ಲಿ ಸೇನಾ ಭರ್ತಿಗಾಗಿ ದೈಹಿಕ ಪರೀಕ್ಷೆ ನಡೆಯಲಿವೆ. ಈ ದೈಹಿಕ ಪರೀಕ್ಷೆಗೆ ಸಾಕಷ್ಟು ವಿದ್ಯಾರ್ಥಿಗಳು ಹೋಗಲು ತಯಾರಿ ನಡೆಸಿದ್ದಾರೆ. ಆದರೆ ಈಗ ಆ ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯ ಆರಂಭವಾಗಿದೆ.

    ಧಾರವಾಡ ಕರ್ನಾಟಕ ವಿವಿಯ ಪದವಿ ಪರೀಕ್ಷೆಗಳು ಕೂಡಾ ಇದೇ ಸಮಯದಲ್ಲಿ ಇವೆ. ಈಗಾಗಲೇ ಆಗಸ್ಟ್ 29 ರಿಂದ ಸೆಪ್ಟೆಂಬರ್ 20ರವರೆಗೆ ಕರ್ನಾಟಕ ವಿವಿ ಪರೀಕ್ಷಾ ದಿನಾಂಕ ಘೋಷಣೆ ಮಾಡಿ ಆಗಿದೆ. ಆದರೆ ಇದೇ ಸಮಯದಲ್ಲಿ ಸೇನಾ ಭರ್ತಿಯ ದೈಹಿಕ ಪರೀಕ್ಷೆ ಇವೆ. ಕರ್ನಾಟಕ ವಿವಿ ವ್ಯಾಪ್ತಿಯ ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಈಗ ಪದವಿ ಪರೀಕ್ಷೆ ಬರೆಯಬೇಕೋ ಅಥವಾ ಅಗ್ನಿಪಥ್ ದೈಹಿಕ ಪರೀಕ್ಷೆಗೆ ಹೋಗಬೇಕೋ ಎನ್ನುವ ಗೊಂದಲದಲ್ಲಿದ್ದಾರೆ. ಹೀಗಾಗಿ ಕರ್ನಾಟಕ ವಿವಿಯ ಮೌಲ್ಯ ಮಾಪನ ಕುಲಸಚಿವರಿಗೆ ಮನವಿ ಕೊಟ್ಟು ಸೆಪ್ಟೆಂಬರ್ 20ರ ನಂತರ ಪದವಿ ಪರೀಕ್ಷೆ ನಡೆಸಲು ಮನವಿ ಮಾಡಿದ್ದಾರೆ. ಇದನ್ನೂ ಓದಿ: 12 ಸಾವಿರ ರೂ. ಒಳಗಿನ ಚೀನಿ ಫೋನ್‌ಗಳನ್ನು ನಿಷೇಧಿಸಲ್ಲ: ಕೇಂದ್ರ ಸರ್ಕಾರ

    ಕರ್ನಾಟಕ ವಿವಿ ಕೂಡಾ ಈ ಹಿಂದೆ ಇದೇ ವಿಚಾರವಾಗಿ ಕೊಟ್ಟ ಅರ್ಜಿಯನ್ನು ಆಲಿಸಿದೆ. ಆದರೆ 2 ದಿನ ಮಾತ್ರ ಅಗ್ನಿಪಥ್ ದೈಹಿಕ ಪರೀಕ್ಷೆಗೆ ಅವಕಾಶ ಕೊಟ್ಟಿದೆ. ಆದರೆ ದಿನ ಕಳೆದಂತೆ ಹೆಚ್ಚು ಮನವಿ ಬರುತ್ತಿರುವುದರಿಂದ ಸಮಸ್ಯೆ ಆರಂಭವಾಗಿದೆ. ಎರಡು ಅಥವಾ ಮೂರು ದಿನ ಪರೀಕ್ಷೆ ಮುಂದೂಡಬಹುದು. ಆದರೆ 20 ದಿನ ಪರೀಕ್ಷೆ ದಿನಾಂಕ ಬದಲಾವಣೆ ಮಾಡುವುದು ಕಷ್ಟ ಎಂದು ಕರ್ನಾಟಕ ವಿವಿ ಮೌಲ್ಯಮಾಪನ ಕುಲಸಚಿವ ಕೃಷ್ಣ ಮೂರ್ತಿ ಹೇಳ್ತಾರೆ. ಅದರಲ್ಲಿ ಮತ್ತೆ ಬೇರೆ ಸಮಸ್ಯೆ ಬಂದರೆ ಅದಕ್ಕೂ ನಾವು ಪರೀಕ್ಷೆ ಸಮಯ ಬದಲಾವಣೆ ಮಾಡಬೇಕಾಗಿದ್ದು, ಈ ಬಗ್ಗೆ ಕುಲಪತಿಗಳ ಜೊತೆ ಮಾತನಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಛತ್ತೀಸ್‌ಗಢ ಗ್ರಾಮ ಈಗ ಯೂಟ್ಯೂಬ್ ಹಬ್ – ಬೀದಿ ಬೀದಿಯಲ್ಲೂ ಸಿಗ್ತಾರೆ ಕ್ರಿಯೇಟರ್‌ಗಳು

    Live Tv
    [brid partner=56869869 player=32851 video=960834 autoplay=true]

  • ಅಗ್ನಿಪಥ್ ಪ್ರತಿಭಟನೆಯಲ್ಲಿ ಮೈಕ್ ಭಾಷಣಕ್ಕೆ ಬ್ರೇಕ್ ಹಾಕಿದ ಪೊಲೀಸರು

    ಅಗ್ನಿಪಥ್ ಪ್ರತಿಭಟನೆಯಲ್ಲಿ ಮೈಕ್ ಭಾಷಣಕ್ಕೆ ಬ್ರೇಕ್ ಹಾಕಿದ ಪೊಲೀಸರು

    ಬೀದರ್: ಅಗ್ನಿಪಥ್ ಯೋಜನೆ ವಿರೋಧಿಸಿ ಬೀದರ್‌ನಲ್ಲಿ ಇಂದು ಕಾಂಗ್ರೆಸ್‍ನಿಂದ ಬೃಹತ್ ಧರಣಿ ಸತ್ಯಾಗ್ರಹ ಮಾಡಲಾಗಿತ್ತು. ಧರಣಿ ಸತ್ಯಾಗ್ರಹದ ವೇದಿಕೆಯ ಮೈಕ್ ಭಾಷಣಕ್ಕೆ ಪೊಲೀಸ್ ಇಲಾಖೆ ಅನುಮತಿ ನೀಡದೆ ಬ್ರೇಕ್ ಹಾಕಿದೆ.

    ಸತ್ಯಾಗ್ರಹದಲ್ಲಿ ಕಾಂಗ್ರೆಸ್ ಮುಖಂಡರು ಮೈಕ್‍ನಲ್ಲಿ ಭಾಷಣ ಮಾಡುತ್ತಿದ್ದು, ಈ ವೇಳೆ ಸ್ಥಳಕ್ಕೆ ಬಂದ ಡಿವೈಎಸ್‍ಪಿ ಸತೀಶ್ ಮೈಕ್ ಭಾಷಣಕ್ಕೆ ಬ್ರೇಕ್ ಹಾಕಿದರು. ಡಿವೈಎಸ್‍ಪಿ ಬ್ರೇಕ್ ಹಾಕುತ್ತಿದಂತೆ ಕಾಂಗ್ರೆಸ್ ಮುಖಂಡರು ಮೈಕ್ ಭಾಷಣ ನಿಲ್ಲಿಸಿ, ಸ್ಥಳದಲ್ಲಿದ್ದ ಮೈಕ್ ಹೊತ್ತ ಆಟೋ ಅಲ್ಲಿಂದ ಕಣ್ಮರೆಯಾಯಿತು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಇರೋದು ಮೂರಾಬಟ್ಟೆ ಸರ್ಕಾರ: ಕಾರಜೋಳ

    ಅಗ್ನಿಪಥ್ ಯೋಜನೆ ವಿರೋಧಿಸಿ ಮಾಜಿ ಸಚಿವ ರಹೀಂಖಾನ್ ನೇತೃತ್ವದಲ್ಲಿ ಬೀದರ್‌ನಲ್ಲಿ ಧರಣಿ ಸತ್ಯಾಗ್ರಹ ಮಾಡಿದ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಭಾಲ್ಕಿಯಲ್ಲೂ ಪ್ರತಿಭಟನೆ ಮಾಡಲಾಯಿತು.

    ಕಾಂಗ್ರೆಸ್ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಅಗ್ನಿಪಥ್ ಯೋಜನೆ ವಿರೋಧಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ರು. ಟ್ರೈನಿಂಗ್ ಮಾಡಿ ಬಂದ ಮೇಲೆ ಯುವಕರಿಗೆ ವಾಚ್ ಮ್ಯಾನ್ ಕೆಲಸ ಕೊಡುತ್ತೇವೆ ಎಂದು ಬಿಜೆಪಿ ಹೇಳುತ್ತಿದೆ.

    ಮಿಲಿಟರಿ ಎಂದರೆ ದೇಶದಲ್ಲಿ ಗೌರವವಿದೆ. ಹಿಗಾಗೀ ಅಗ್ನಿಪಥ್ ಯೋಜನೆಯನ್ನು ಈ ಕೂಡಲೇ ಕೇಂದ್ರ ಸರ್ಕಾರ ವಾಪಸ್ ಪಡೆಯಬೇಕು ಎಂದು ರಹೀಂಖಾನ್ ಅವರು ಆಗ್ರಹಿಸಿದರು. ಇದನ್ನೂ ಓದಿ: ಶಿವ ಪೂಜೆಗೆ ಹೋದ ರೌಡಿಯ ಬರ್ಬರ ಹತ್ಯೆ

    Live Tv

  • ಕೇಂದ್ರ ಸರ್ಕಾರ 8 ವರ್ಷಗಳಲ್ಲಿ 100 ಲಕ್ಷ ಕೋಟಿ ರೂ. ಸಾಲ ಮಾಡಿ ಜನರನ್ನು ಸಾಲಗಾರರನ್ನಾಗಿಸಿದೆ: ರಾಮಲಿಂಗಾ ರೆಡ್ಡಿ

    ಕೇಂದ್ರ ಸರ್ಕಾರ 8 ವರ್ಷಗಳಲ್ಲಿ 100 ಲಕ್ಷ ಕೋಟಿ ರೂ. ಸಾಲ ಮಾಡಿ ಜನರನ್ನು ಸಾಲಗಾರರನ್ನಾಗಿಸಿದೆ: ರಾಮಲಿಂಗಾ ರೆಡ್ಡಿ

    ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯಗಳು ಜಿಎಸ್‍ಟಿ ಪಾಲು ಕೇಳಿದರೆ ಕೂಡುತ್ತೇವೆ ಎನ್ನುತ್ತಾರೆ. ಕೇಂದ್ರ ಸರ್ಕಾರ 8 ವರ್ಷಗಳಲ್ಲಿ 100 ಲಕ್ಷ ಕೋಟಿ ರೂ. ಸಾಲ ಮಾಡಿ ಎಲ್ಲಾ ಜನರನ್ನು ಸಾಲಗಾರರನ್ನಾಗಿ ಮಾಡಿದೆ. ಈಗ ಅಗ್ನಿಪಥ್ ಯೋಜನೆ ಮೂಲಕ ಯುವಜನರ ದಾರಿ ತಪ್ಪಿಸುತ್ತಿದೆ ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಮುಖಂಡರ ಮಕ್ಕಳು ವಿದ್ಯಾವಂತರಾಗಿ ಉತ್ತಮ ಕೆಲಸ ಮಾಡಬೇಕು, ಬಡವರ ಮಕ್ಕಳು ಬಿಜೆಪಿ ಕಚೇರಿ ಗಾರ್ಡ್ ಆಗಬೇಕಾ? ಈ ಯೋಜನೆ ವಿರುದ್ಧ ಪ್ರತಿಭಟನೆ ಹೆಚ್ಚಿದ ಪರಿಣಾಮ, ಬಿಜೆಪಿ ಸರ್ಕಾರ ಹಾಗೂ ಬಿಜೆಪಿ ನಾಯಕರು, ಅಗ್ನಿಪಥ್ ಯೋಧರಿಗೆ ಕೆಲವು ಹೆಚ್ಚುವರಿ ಆಫರ್ ಕೊಟ್ಟಿದ್ದಾರೆ. ರಕ್ಷಣಾ ಇಲಾಖೆ ಹುದ್ದೆಗಳಲ್ಲಿ 10% ಮೀಸಲಾತಿ, ಅಸ್ಸಾಂ ರೈಫಲ್ಸ್ ಪಡೆಗಳಲ್ಲಿ 10% ಮೀಸಲಾತಿ. ಈ ಎರಡು ಪಡೆಗಳ ನೇಮಕಾತಿಯ ವಯೋಮಿತಿಯಲ್ಲಿ 3 ವರ್ಷ ಸಡಿಲಿಕೆ ಮಾಡಲಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯದಲ್ಲಿ ಉದ್ಯೋಗ ಅವಕಾಶ ನೀಡಲಾಗುವುದು ಎಂದು ಹೇಳಿದೆ. ಸರ್ಕಾರ ಕಳೆದ 3 ವರ್ಷಗಳಿಂದ ಸರಿಯಾಗಿ ಸೇನಾ ನೇಮಕಾತಿಯನ್ನೇ ನಡೆಸಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: BJP, RSS ನಾಯಕರು ತಮ್ಮ ಮಕ್ಕಳನ್ನು ಯಾಕೆ ಅಗ್ನಿಪಥ್ ಯೋಜನೆಯಡಿ ಸೈನ್ಯಕ್ಕೆ ಸೇರಿಸುತ್ತಿಲ್ಲ: ರೈತ ಮುಖಂಡರ ಕಿಡಿ

    95 ಸಾವಿರ ಅಗ್ನಿವೀರರಿಗೆ ರಕ್ಷಣಾ ಇಲಾಖೆಯಲ್ಲಿ 10% ಮೀಸಲಾತಿಯ ಪ್ರಕಾರ ಎಷ್ಟು ಉದ್ಯೋಗ ನೀಡಲು ಸಾಧ್ಯ? ಸಶಸ್ತ್ರ ಪಡೆಗಳಲ್ಲಿ 10% ಮೀಸಲಾತಿಯಂತೆ ಎಷ್ಟು ಜನರ ನೇಮಕ ಮಾಡಲು ಸಾಧ್ಯ? ಈಗ ನಾಗರೀಕ ವಿಮಾನಯಾನ ಸಚಿವಾಲಯದಲ್ಲಿ ಉದ್ಯೋಗ ನೀಡುತ್ತೇವೆ ಎನ್ನುತ್ತಿದ್ದಾರೆ. ಇದುವರೆಗೂ ಎಷ್ಟು, ನಿವೃತ್ತ ಯೋಧರಿಗೆ ಸಚಿವಾಲಯದಲ್ಲಿ ಕೆಲಸ ಕೊಟ್ಟಿದ್ದಾರೆ? ನಾಲ್ಕು ವರ್ಷಗಳಲ್ಲಿ ಅಗ್ನಿವೀರರು ದೇಶ ಕಾಯಬೇಕೋ ಅಥವಾ ಮರ್ಚೆಂಟ್ ನೇವಿ ಸೇರಲು ತರಬೇತಿ ಪಡೆಯಬೇಕೂ. ಈ ಯೋಜನೆ ಆರಂಭಿಸುವ ಮುನ್ನ ಸರ್ಕಾರ ಯಾರ ಜೊತೆಗೂ ಚರ್ಚೆ ಮಾಡಿಲ್ಲ. ಈ ಯೋಜನೆ ಜಾರಿಗೆ ಮುನ್ನ ಪ್ರಾಯೋಗಿಕ ಅಧ್ಯಯನ ನಡೆಸಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.

    ಯಾರೊಂದಿಗೆ ಚರ್ಚಿಸಿದೆ? ಯೋಜನೆಯ ಅನುಕೂಲ, ಅನಾನುಕೂಲ ತಿಳಿಯಲು ಸಮಿತಿ ರಚಿಸಿದ್ದಾರೆಯೇ? ಅಥವಾ ಸಂಸತ್ ಸದನದಲ್ಲಿ ಚರ್ಚೆ ಮಾಡಿದ್ರಾ ಯಾವುದೂ ಇಲ್ಲ. ಇದು ದೇಶ ಎಂಬುದನ್ನು ಮರೆತು, ಏನು ಮಾಡಿದರೂ ನಡೆಯುತ್ತದೆ, ನಾವು ಹೇಳಿದ ಹಾಗೆ ನಡೆಯಬೇಕು ಎನ್ನುವ ಸರ್ವಾಧಿಕಾರಿ ಮನಸ್ಥಿತಿಯಿಂದ ಈ ಯೋಜನೆ ತಂದಿದ್ದಾರೆ. ಈ ಮೊದಲು ಘೋಷಣೆ ಮಾಡಿದ್ದ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡಲಾಗದೆ ಯುವ ಸಮುದಾಯವನ್ನು ವಂಚಿಸಿದವರು. ಈಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಅವರ ಮೂಗಿಗೆ ತುಪ್ಪ ಸವರಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಭೂಕಂಪದಿಂದ ತೊಂದರೆಗೆ ಸಿಲುಕಿರುವ ಆಫ್ಘನ್ನರಿಗೆ ನೆರವು – ಭಾರತಕ್ಕೆ ಧನ್ಯವಾದ ತಿಳಿಸಿದ ತಾಲಿಬಾನ್‌

    ಅಗ್ನಿಪಥ್ ಯೋಜನೆ ವಿರೋಧಿಸಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಜೂನ್ 27 ರಂದು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

    Live Tv

  • ಬಿಜೆಪಿ ಕಚೇರಿಯ ಬಾಗಿಲು ಕಾಯಲು ಯುವಕರು ಸೈನ್ಯ ಸೇರಬೇಕೆ?: ದಿನೇಶ್ ಗುಂಡೂರಾವ್

    ಬಿಜೆಪಿ ಕಚೇರಿಯ ಬಾಗಿಲು ಕಾಯಲು ಯುವಕರು ಸೈನ್ಯ ಸೇರಬೇಕೆ?: ದಿನೇಶ್ ಗುಂಡೂರಾವ್

    ಬೆಂಗಳೂರು: ಬಿಜೆಪಿ ಕಚೇರಿಯ ಬಾಗಿಲು ಕಾಯಲು ಯುವಕರು ಸೈನ್ಯ ಸೇರಬೇಕೆ ಸೆಕ್ಯೂರಿಟಿ ಗಾರ್ಡ್ ಮಾಡಿಕೊಳ್ಳಲು ಬಿಜೆಪಿಯವರಿಗೆ ಸೈನ್ಯಕ್ಕೆ ಸೇರಿದ ಅಗ್ನಿವೀರರೆ ಬೇಕೆ? ಯುವ ಸಮುದಾಯದ ಬಗ್ಗೆ ಬಿಜೆಪಿಯವರ ನಿಲುವೇನು ಎಂಬುದು ಅವರ ಹೇಳಿಕೆಗಳಿಂದಲೇ ತಿಳಿಯುತ್ತದೆ ಎಂದು ಬಿಜೆಪಿ ವಿರುದ್ಧ ಟ್ವಿಟ್ಟರ್ ಮೂಲಕ ಕಾಂಗ್ರೆಸ್‌ ಮುಖಂಡ ದಿನೇಶ್ ಗುಂಡುರಾವ್ ವಾಗ್ದಾಳಿ ನಡೆಸಿದ್ದಾರೆ.

    bjP

    ಟ್ವೀಟ್‍ನಲ್ಲಿ ಏನಿದೆ?
    ಅಗ್ನಿಪಥ್ ವಿರುದ್ದ ಹೋರಾಡುತ್ತಿರುವ ಯುವಕರ ಬಗ್ಗೆ ಬಿಜೆಪಿಯವರ ಹೇಳಿಕೆಗಳು ಆ ಪಕ್ಷದ ಮನೋವಿಕಾರವನ್ನು ಅನಾವರಣ ಮಾಡಿದೆ. ಯೋಜನೆಯ ಮೂಲಕ ಆಯ್ಕೆಯಾಗಿ ನಿರ್ಗಮಿಸುವ ಅಗ್ನಿವೀರರು ಬಿಜೆಪಿ ಕಚೇರಿ ಕಾಯುವ ಸೆಕ್ಯೂರಿಟಿ ಗಾರ್ಡ್ ಆಗಲು ಆದ್ಯತೆ ಎಂದಿರುವ ಕೈಲಾಶ್ ಹೇಳಿಕೆ ಖಂಡನೀಯ. ಈ ಹೇಳಿಕೆ ಯುವ ಸಮುದಾಯ ಮಾತ್ರವಲ್ಲ ಇಡೀ ಸೈನ್ಯಕ್ಕೆ ಮಾಡಿದ ಅವಮಾನ.ಬಿಜೆಪಿ ಕಚೇರಿಯ ಬಾಗಿಲು ಕಾಯಲು ಯುವಕರು ಸೈನ್ಯ ಸೇರಬೇಕೆ? ಸೆಕ್ಯೂರಿಟಿ ಗಾರ್ಡ್ ಮಾಡಿಕೊಳ್ಳಲು ಬಿಜೆಪಿಯವರಿಗೆ ಸೈನ್ಯಕ್ಕೆ ಸೇರಿದ ಅಗ್ನಿವೀರರೆ ಬೇಕೆ? ಯುವ ಸಮುದಾಯದ ಬಗ್ಗೆ ಬಿಜೆಪಿಯವರ ನಿಲುವೇನು ಎಂಬುದು ಅವರ ಹೇಳಿಕೆಗಳಿಂದಲೇ ತಿಳಿಯುತ್ತದೆ. ಸೇನೆಯಲ್ಲಿ ಸೇವೆ ಸಲ್ಲಿಸಿದವರು ಬಿಜೆಪಿಯ ಪರಿಚಾರಕರಾಗಬೇಕೆಂಬುದು ಬಿಜೆಪಿ ನಾಯಕರ ಅಜೆಂಡಾವೇ? ಇದನ್ನೂ ಓದಿ: ಅಮಿತ್ ಶಾ ಮಗ ಜಯ್ ಶಾಗೆ ಅಗ್ನಿಪಥ್ ಕೆಲಸಕ್ಕೆ ಹೋಗೋಕೆ ಹೇಳಿ: ಲಕ್ಷ್ಮೀ ಹೆಬ್ಬಾಳ್ಕರ್

    ಇತ್ತ ಆರಗ ಜ್ಞಾನೇಂದ್ರ ಅಗ್ನಿಪಥ್ ವಿರುದ್ಧ ಬೀದಿಗೆ ಬಿದ್ದಿರುವ ಯುವಕರನ್ನು ಪುಂಡರು ಎಂದಿದ್ದಾರೆ. ಜ್ಞಾನೇಂದ್ರರವರೆ, ಸೈನ್ಯಕ್ಕೆ ಸೇರುವುದಾಕ್ಕಾಗಿಯೇ ಲಕ್ಷಾಂತರ ಯುವಕರು ತಪ್ಪಸ್ಸಿನಂತೆ ಶ್ರಮ ಪಟ್ಟಿರುತ್ತಾರೆ. ಆ ಯುವಕರಿಗೆ ಕೇವಲ 4 ವರ್ಷ ಕೆಲಸ ಕೊಟ್ಟು ನಂತರ ಮನೆಗೆ ಕಳುಹಿಸಿದರೆ ಅವರೇನು ಮಾಡಬೇಕು? ಯುವಕರು ಪ್ರತಿಭಟಿಸುವುದು ತಪ್ಪೆ? ಅಗ್ನಿಪಥ್ ಕೇವಲ ಯುವಕರ ಬದುಕಿಗೆ ಮಾತ್ರ ಸಂಬಂಧಿಸಿದಲ್ಲ. ದೇಶದ ಭದ್ರತೆಯ ವಿಚಾರದಲ್ಲೂ ಇದು ಅತ್ಯಂತ ಅಪಾಯಕಾರಿ ಪ್ರಯೋಗ. ದೇಶದ ರಕ್ಷಣೆಯಲ್ಲಿ ತೊಡಗಿಕೊಳ್ಳುವ ಹಾಗೂ ಗಡಿ ಕಾಯುವ ಯೋಧನನ್ನು ರೂಪಿಸಲು ವರ್ಷಗಳೇ ಬೇಕು. ಕೇವಲ 6 ತಿಂಗಳ ತರಬೇತಿ ಪಡೆದ ಯುವಕ ಪರಿಪೂರ್ಣ ಯೋಧನಾಗಲು ಸಾಧ್ಯವೆ? ಕೇಂದ್ರಕ್ಕೆ ದೇಶದ ಭದ್ರತಾ ವಿಚಾರದಲ್ಲಿ ರಾಜಿಯೇಕೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಆಕ್ಸಿಜನ್ ಕೊಡೋಕೆ ಆಗದವರು ಈಗ ಯೋಗ ಮಾಡುವುದಕ್ಕೆ ಬಂದಿದ್ದಾರೆ: ಸಿದ್ದರಾಮಯ್ಯ

    Live Tv

  • ಅಮಿತ್ ಶಾ ಮಗ ಜಯ್ ಶಾಗೆ ಅಗ್ನಿಪಥ್ ಕೆಲಸಕ್ಕೆ ಹೋಗೋಕೆ ಹೇಳಿ: ಲಕ್ಷ್ಮೀ ಹೆಬ್ಬಾಳ್ಕರ್

    ಅಮಿತ್ ಶಾ ಮಗ ಜಯ್ ಶಾಗೆ ಅಗ್ನಿಪಥ್ ಕೆಲಸಕ್ಕೆ ಹೋಗೋಕೆ ಹೇಳಿ: ಲಕ್ಷ್ಮೀ ಹೆಬ್ಬಾಳ್ಕರ್

    – ಆರ್‌ಎಸ್‌ಎಸ್‌ ವಾದ ತರುತ್ತಿದ್ದಾರೆ

    ಬೆಳಗಾವಿ: ಬಿಜೆಪಿ ಸರ್ಕಾರಕ್ಕೆ 16 ಕೋಟಿ ಉದ್ಯೋಗ ಕೊಡಲಾಗದಿದ್ದಕ್ಕೆ ಅಗ್ನಿಪಥ್ ಎಂಬ ಡ್ರಾಮಾ ರಿಲೀಸ್ ಮಾಡಿದ್ದಾರೆ.  ಗೃಹ ಸಚಿವ ಅಮಿತ್ ಶಾ ಮಗ ಜಯ್ ಶಾಗೆ ಅಗ್ನಿಪಥ್ ಕೆಲಸಕ್ಕೆ ಹೋಗೋಕೆ ಹೇಳಿ ನೋಡೋಣ. ಯಾವ ಮಂತ್ರಿ, ಎಂಎಲ್‍ಎ ಮಕ್ಕಳು ಅಗ್ನಿಪಥ್ ಕೆಲಸಕ್ಕೆ ಹೋಗ್ತಾರೆ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

    Amith

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದ ಪ್ರಧಾನಿ ರಾಜ್ಯಕ್ಕೆ ಬಂದಿದ್ದಾರೆ ಅಂದ್ರೆ ಅವರಿಗೆ ಮರ್ಯಾದೆ ಕೊಡೋದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಕಾಂಗ್ರೆಸ್‍ನವರು ಆಗಿರಬಹುದು ಬೇರೆ ಯಾರೋ ಆಗಿರಬಹುದು. ಕಾನೂನು ಸುವ್ಯವಸ್ಥೆ ಹದಗೆಡಬಾರದು ಅಂತಾ ಪೊಲೀಸರು ಕ್ರಮಕೈಗೊಂಡಿದ್ದಾರೆ. ಎಲ್ಲಾ ಕಡೆ ಬೆಂಕಿ ಹಚ್ಚೋದು ಕಲ್ಲು ಒಡೆಯೋದು ನಡೀತಿದೆ ಅದಕ್ಕೋಸ್ಕರ ಮುಂಜಾಗ್ರತೆ ತಗೆದುಕೊಂಡಿರಬಹುದು. ಆದ್ರೆ, ಪ್ರತಿಭಟನೆಯನ್ನು ಒಂದು ದಿನ ತಡೆಯಬಹುದು ಅಷ್ಟೇ ಎಂದರು. ಇದನ್ನೂ ಓದಿ: ಯಡಿಯೂರಪ್ಪ ಜೊತೆ ಮಾತ್ರ ಹೆಚ್ಚು ಮಾತನಾಡಿದ ಮೋದಿ

    ಯಾರನ್ಯಾರು ತಡೆಯೋಕಾಗಲ್ಲ. ನನ್ನನ್ನು ನೀವು ತಡೆಯೋಕಾಗಲ್ಲ. ನಿಮ್ಮನ್ನು ನಾವು ತಡೆಯೋಕಾಗಲ್ಲ. ಅದೇ ರೀತಿ ಪ್ರಜಾಪ್ರಭುತ್ವದಲ್ಲಿ ಯಾವ ಹೋರಾಟ ತಡೆಯ ಸಾಧ್ಯವಿಲ್ಲ ಎರಡು ವರ್ಷ ಕೊರೊನಾ ಟೈಮ್ ಇತ್ತು. ಪ್ರತಿ ವರ್ಷ 45 ಸಾವಿರ ಹುದ್ದೆ ಭರ್ತಿ ಆಗ್ತಿತ್ತು. 1 ಲಕ್ಷ 35 ಸಾವಿರ ಹುದ್ದೆ ಖಾಲಿ ಇರುವಾಗ ಅವರಿಗೆ ಹೊಳೆದಿದ್ದು ಅಗ್ನಿಪಥ್ ಯೋಜನೆ. ಅಗ್ನಿಪಥ್ ಯೋಜನೆಯಲ್ಲಿ ರಿಟೈರ್‍ಮೆಂಟ್ ಆದವರನ್ನು ಸೆಕ್ಯೂರಿಟಿ ಗಾರ್ಡ್ ಆಗಿ ಇಟ್ಟುಕೊಳ್ತೀವಿ ಎಂದು ಹೇಳುತ್ತಿದ್ದಾರೆ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಯಾವ ದೇಶದಲ್ಲಿ ಸೈನಿಕ ಸೇವೆ ಕಡ್ಡಾಯ? – ಟೂರ್ ಆಫ್ ಡ್ಯೂಟಿ ಎಲ್ಲಿದೆ?

    ಬಿಜೆಪಿ ಕಚೇರಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಇಟ್ಟುಕೊಳ್ತೀವಿ ಅಂತಾ ಬಿಜೆಪಿ ಲೀಡರ್ ಹೇಳ್ತಾರೆ. ಹಾಗಾದರೆ ಇವರ ಮೆಂಟಾಲಿಟಿ ಯಾವ ಮಟ್ಟಕ್ಕಿದೆ. ಬಡವರ ಮಕ್ಕಳು ಹೋಗ್ತಾರೆ. 16 ಕೋಟಿ ಉದ್ಯೋಗ ಕೊಡಲಾಗದಿದ್ದಕ್ಕೆ ಅಗ್ನಿಪಥ್ ಡ್ರಾಮಾ ರಿಲೀಸ್ ಮಾಡಿದ್ದಾರೆ. ಪ್ರತಿಯೊಂದರಲ್ಲೂ ಆರ್‍ಎಸ್‍ಎಸ್ ವಾದ ತರುತ್ತಿದ್ದಾರೆ. ವೈಯಕ್ತಿಕವಾಗಿ ನನಗೆ ವಿರೋಧ ಇಲ್ಲ. ಜಾಬ್ ಸೆಕ್ಯೂರಿಟಿ, ಹೆಲ್ತ್ ಸೆಕ್ಯೂರಿಟಿ, ಪೇನ್ಷನ್ ಇಲ್ಲ. ರಿಟೈಡ್ ಆದ ಎಷ್ಟೋ ಮಾಜಿ ಸೈನಿಕರಿಗೆ ಉದ್ಯೋಗ ಸಿಗುತ್ತಿಲ್ಲ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

    Live Tv

  • ಅಗ್ನಿಪಥ್ ಯೋಜನೆ ವಿರೋಧಿಸಿ ಬೆಳಗಾವಿ ಬಂದ್ ಕರೆ – ರ‍್ಯಾಪಿಡ್ ಆಕ್ಷನ್ ಫೋರ್ಸ್‌ನಿಂದ ಪಂಥ ಸಂಚಲನ

    ಅಗ್ನಿಪಥ್ ಯೋಜನೆ ವಿರೋಧಿಸಿ ಬೆಳಗಾವಿ ಬಂದ್ ಕರೆ – ರ‍್ಯಾಪಿಡ್ ಆಕ್ಷನ್ ಫೋರ್ಸ್‌ನಿಂದ ಪಂಥ ಸಂಚಲನ

    ಬೆಳಗಾವಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆ ವಿರೋಧಿಸಿ ಬೆಳಗಾವಿ ಬಂದ್‍ಗೆ ಕರೆ ನೀಡಿದೆ. ಈ ಹಿನ್ನೆಲೆ ಬೆಳಗಾವಿ ನಗರ ಹಾಗೂ ಜಿಲ್ಲಾ ಪೊಲೀಸರು ಬಿಗಿ ಭದ್ರತೆ ವಹಿಸಿದ್ದು, ರ‍್ಯಾಪಿಡ್ ಆಕ್ಷನ್ ಫೋರ್ಸ್‌ ಪಂಥ ಸಂಚಲನ ನಡೆಸಿದೆ.

    ವಾಟ್ಸಪ್ ಮೂಲಕ ಬೆಳಗಾವಿ ಬಂದ್‍ಗೆ ಅನಾಮಧೇಯ ಸೇನಾ ಆಕಾಂಕ್ಷಿ ಯುವಕರ ಆಹ್ವಾನ ಹಿನ್ನೆಲೆ ಬೆಳಗಾವಿ ನಗರ, ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ನಿಯೋಜಿಸಿದ್ದಾರೆ. ಈಗಾಗಲೇ ಸಂದೇಶ ರವಾನೆ ಮಾಡಿದ್ದ ಯುವಕರನ್ನ ಕರೆಯಿಸಿ ಪೊಲೀಸರು ಖಡಕ್ ವಾರ್ನಿಂಗ್ ಸಹ ಕೊಟ್ಟಿದ್ದಾರೆ. ಇದನ್ನೂ ಓದಿ: ಅಗ್ನಿಪಥ್ ಪ್ರತಿಭಟನೆಗಳ ನಡುವೆ, ಅಗ್ನಿವೀರರಿಗೆ ಆನಂದ್ ಮಹೀಂದ್ರಾ ಕೊಟ್ರು ಬಿಗ್ ಆಫರ್ 

    ಸೇನಾಕಾಂಕ್ಷಿಗಳು, ಕೋಚಿಂಗ್ ಸೆಂಟರ್ ಮುಖ್ಯಸ್ಥರಿಂದ ಬಂದ್ ಮಾಡದಂತೆ ವೀಡಿಯೋ ಹೇಳಿಕೆ ರಿಲೀಸ್ ಮಾಡಲಾಗಿದೆ. ಬೆಳಗಾವಿ ನಗರ ಸಂಪರ್ಕ ಕಲ್ಪಿಸುವ ಮಾರ್ಗಗಳು, ಬಸ್ ನಿಲ್ದಾಣ, ರೈಲು ನಿಲ್ದಾಣ, ಟೋಲ್‍ಗಳಲ್ಲಿ ಬಿಗಿ ಬಂದೋಬಸ್ತ್ ಮಾಡುವ ಮೂಲಕ ಬೆಳಗಾವಿಗೆ ಬರುವ ಯುವಕರ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಇದರ ಜೊತೆಗೆ ಬೆಳಗಾವಿ ಜಿಲ್ಲಾ ಪೊಲೀಸ್ ವತಿಯಿಂದ ಎಸ್‍ಪಿ ಲಕ್ಷ್ಮಣ ನಿಂಬರಗಿ ನೇತೃತ್ವದಲ್ಲಿ ಗೋಕಾಕ್ ನಗರದಲ್ಲಿ ಪಥಸಂಚಲನ ಮಾಡುವ ಮೂಲಕ ಪ್ರತಿಭಟನೆ ಮಾಡುವ ಯುವಕರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

    ರ‍್ಯಾಪಿಡ್ ಆಕ್ಷನ್ ಫೋರ್ಸ್‌ನಿಂದ ಪಥಸಂಚಲನ
    ಬೆಳಗಾವಿಯಲ್ಲಿ ಅಗ್ನಿಪಥ್ ವಿರೋಧಿಸಿ ಬೆಳಗಾವಿ ಬಂದ್ ಕರೆ ಹಿನ್ನೆಲೆ ನಗರದ ಚೆನ್ನಮ್ಮ ವೃತ್ತದಲ್ಲಿ ರೈಲ್ವೆ ಪೊಲೀಸರು, ರ‍್ಯಾಪಿಡ್ ಆಕ್ಷನ್ ಫೋರ್ಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೀಡುಬಿಟ್ಟಿದ್ದಾರೆ. ಇದಾದಬಳಿಕ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ನೇತೃತ್ವದಲ್ಲಿ ನಗರದ ಚೆನ್ನಮ್ಮ ವೃತ್ತದಿಂದ ರೈಲ್ವೆ ಪೊಲೀಸರು, ರ‍್ಯಾಪಿಡ್ ಆಕ್ಷನ್ ಫೋರ್ಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳಿಂದ ಪಥಸಂಚಲನ ನಡೆಸಲಾಯಿತು.

    ಬೆಳಗಾವಿಯ ರಾಣಿ ಚನ್ನಮ್ಮಾಜಿ ವೃತ್ತದಿಂದ ಆರಂಭವಾದ ಪಥಸಂಚಲನ ಲಿಂಗರಾಜು ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ಸರ್ಕಲ್, ಕಿರ್ಲೋಸ್ಕರ್ ರೋಡ್, ರಾಮದೇವ ಗಲ್ಲಿ, ಖಡೇ ಬಜಾರ್ ಬಳಿಕ ಅಂತಿಮವಾಗಿ ಚೆನ್ನಮ್ಮಾಜಿ ವೃತ್ತಕ್ಕೆ ಆಗಮಿಸಿ ಅಂತ್ಯವಾಯಿತು. ಪರೇಡ್‍ನಲ್ಲಿ ಸ್ವತಃ ಬೋರಲಿಂಗಯ್ಯ ಅವರು ಹೆಜ್ಜೆ ಹಾಕಿದ್ರು. ಕಮಿಷನರ್‌ಗೆ ಡಿಸಿಪಿ ರವೀಂದ್ರ ಗಡಾದಿ, ಎಸಿ ರವೀಂದ್ರ ಕರಿಲಿಂಗನ್ನವರ, ಎಸಿಪಿ ಚಂದ್ರಪ್ಪ, ಸಿಪಿಐ ಧೀರಜ ಶಿಂಧೆ, ಸಿಪಿಐ ದಿಲೀಪ ನಿಂಬಾಳ್ಕರ್, ಸಿಪಿಐ ರಾಘವೇಂದ್ರ ಹವಾಲ್ದಾರ್ ಸೇರಿದಂತೆ ಇನ್ನಿತರ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

    ಹುಕ್ಕೇರಿ, ಹಿರೇಬಾಗೆವಾಡಿ ಚೆಕ್  ಪೋಸ್ಟ್‌ನಲ್ಲಿ ಹೈ ಅಲರ್ಟ್:
    ಬೆಳಗಾವಿ ಚಲೋ, ಬೆಳಗಾವಿ ಬಂದ್‍ಗೆ ಕರೆ ಹಿನ್ನೆಲೆ ಬೆಳಗಾವಿ ಜಿಲ್ಲೆಯಾದ್ಯಂತ ಇರುವ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರು ಹೈ ಅಲರ್ಟ ಘೋಷಣೆ ಮಾಡಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ. ಹುಕ್ಕೇರಿ ತಾಲೂಕಿನ ಹತ್ತರಗಿ ಚೆಕ್ ಹಾಗೂ ನಿಪ್ಪಾಣಿ ತಾಲೂಕಿನ ಕುಗನೊಳ್ಳಿಯಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಇದರ ಜೊತೆಗೆ ಬೆಳಗಾವಿ ತಾಲೂಕಿನ ಹಿರೇಬಾಗೆವಾಡಿ ಚೆಕ್ ಪೋಸ್ಟ್‌ನಲ್ಲಿ ಬೆಳಗಾವಿಗೆ ಬರುವ ಯುವಕರನ್ನು ತಡೆಯಲು ಸಜ್ಜಾಗಿದ್ದು, ಬೆಳಗಾವಿ ನಗರಕ್ಕೆ ಬರುವ ಯುವಕರನ್ನು ಅಲ್ಲಿಯೇ ತಡೆದು ವಾಪಸ್ ಕಳಿಸಲು ನಿರ್ಧರಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಆಸ್ಕರ್ ಪ್ರಶಸ್ತಿ ವಿಜೇತ ನಿರ್ದೇಶಕ ಅರೆಸ್ಟ್

    ಕುಂದಾನಗರಿ ಬೆಳಗಾವಿಯಲ್ಲಿ ಎಂದಿನಂತೆ ಜನಜೀವನ
    ಅಗ್ನಿಪಥ್ ಯೋಜನೆ ವಿರೋಧಿಸಿ ಬೆಳಗಾವಿ ಬಂದ್ ಕರೆ ಹಿನ್ನೆಲೆ ಕುಂದಾನಗರಿ ಬೆಳಗಾವಿಯಲ್ಲಿ ಎಂದಿನಂತೆ ಜನಜೀವನ ನಡೆದಿದೆ. ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ವಹಿವಾಟು ನಡೆದಿದ್ದು, ಶಾಲಾ-ಕಾಲೇಜುಗಳು, ಬಸ್‍ಗಳು ಎಂದಿನಂತೆ ಸಂಚಾರ ನಡೆಸಿವೆ.

    Live Tv

  • ದೇಶಭಕ್ತಿ ಇರೋರು ಸೇನೆ ಸೇರ್ತಾರೆ ಇಲ್ಲದಿರೋರು ಸಿದ್ದರಾಮಯ್ಯ ಥರ ಮಾತನಾಡುತ್ತಾರೆ: ಸಿ.ಟಿ ರವಿ

    ದೇಶಭಕ್ತಿ ಇರೋರು ಸೇನೆ ಸೇರ್ತಾರೆ ಇಲ್ಲದಿರೋರು ಸಿದ್ದರಾಮಯ್ಯ ಥರ ಮಾತನಾಡುತ್ತಾರೆ: ಸಿ.ಟಿ ರವಿ

    ಬೆಂಗಳೂರು: ದೇಶಭಕ್ತಿ ಇರೋರು ಸೇನೆ ಸೇರ್ತಾರೆ ದೇಶಭಕ್ತಿ ಇಲ್ಲದಿರೋರು ಸಿದ್ದರಾಮಯ್ಯ ಥರ ಮಾತನಾಡುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಅಗ್ನಿಪಥ್ ವಿಚಾರವಾಗಿ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ ಕುರಿತಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಗ್ನಿಪಥ್ ವಿಚಾರ ಬಗ್ಗೆ ಮೂರೂ ಸೇನೆಯ ದಂಡನಾಯಕರೂ ಸ್ಪಷ್ಟಪಡಿಸಿದ್ದಾರೆ. ಇಸ್ರೇಲ್, ಸ್ವಿಟ್ಜರ್ಲೆಂಡ್, ರಷ್ಯಾ, ಅಮೆರಿಕಗಳಲ್ಲಿ ಯುವಕರನ್ನು ಸೇನೆಗೆ ಭರ್ತಿಮಾಡಿಕೊಳ್ಳುವ ಅವಕಾಶ ಇದೆ. ಎಂಟತ್ತು ದೇಶಗಳು ಶಿಕ್ಷಣದ ಜೊತೆಗೆ ಸೇನೆಗೂ ತರಬೇತಿ ಕೊಡುತ್ತಿವೆ. ಇದರಿಂದ ಅವರ ಕಾರ್ಯಕ್ಷಮತೆ ಹೆಚ್ಚುತ್ತೆ. ನಾಲ್ಕುವರ್ಷದ ಪ್ಯಾಕೇಜ್ ಸಿಗುತ್ತೆ. ಕೇಂದ್ರ, ರಾಜ್ಯ, ಬ್ಯಾಂಕಿಂಗ್ ವಲಯಗಳಲ್ಲಿ ಸೇರಲು ಆಧ್ಯತೆಯನ್ನೂ ನೀಡಲಾಗುತ್ತದೆ. ಅಗ್ನಿಪಥ್ ಸಾಮರ್ಥ್ಯ ತುಂಬುವ ಕೆಲಸ ಮಾಡುತ್ತೆ, ದುರ್ಬಲ ಮಾಡಲು ತಂದಿದ್ದಲ್ಲ. ಸೇನೆ ದುರ್ಬಲ ಮಾಡಲು ಸೇನೆಗೆ ತಗೋತಿದ್ದಾರಾ? ಇಲ್ಲ ಅಲ್ವಾ? ಸಿದ್ಧಾಂತ ಇಲ್ಲದಿರೋರು ಸಿದ್ದರಾಮಯ್ಯ ಥರ ಮಾತನಾಡುತ್ತಾರೆ ಸಿದ್ದರಾಮಯ್ಯ ಎಡಬಿಡಂಗಿ ಎಂದು ಮೊನ್ನೆನೇ ಹೇಳಿದ್ದೇನೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಲ್ಲ: ಫಾರೂಕ್ ಅಬ್ದುಲ್ಲಾ

    ಸೈನ್ಯಕ್ಕೆ ಹೋಗುವವನ ಮನಸ್ಸಿನ ಸ್ಥಿತಿ ಹೇಗೆ ಇರಬೇಕು? ಅದು ಜಾಬ್ ಗ್ಯಾರಂಟಿ ಸ್ಕೀಮ್ ಅಲ್ಲ. ಇದು ಭಾರತ ಮಾತೆಯ ಸೇವೆ. ಅಲ್ಲಿ ಹೋಗೊದು ಬೆಂಕಿ ಹಾಕೋಕೆ ಅಲ್ಲ. ಬೆಂಕಿ ಹಾಕೋರು ಸೈನ್ಯಕ್ಕೆ ಹೋದರೆ ಇನ್ನೂ ಅಪಾಯಕಾರಿ. ಈ ಬೆಂಕಿ ಹಾಕಿರುವ ಹಿಂದೆ ಷಢ್ಯಂತ್ರ ಇರಬಹುದು ಎಂಬ ಅನುಮಾನ. ದೇಶ ಪ್ರೇಮ ಇರುವವರು ಬೆಂಕಿ ಹಾಕಲ್ಲ. ಇದರ ಹಿಂದೆ ಪೂರ್ವ ಯೋಜನೆ ಇದೆ ಅನಿಸುತ್ತಿದೆ. ದೇಶದ ಆಸ್ತಿ ಸುಡೋರು ಯಾರು ಸೈನ್ಯಕ್ಕೆ ಸೇರೋರು ಅಲ್ಲ. ಅನೇಕ ಕಾರಣಕ್ಕೆ ದೇಶ ವಿರೋಧ ಮಾಡೋರು ಹೀಗೆ ಮಾಡಿರಬಹುದು. ಮೊದಲೇ ಬೆಂಕಿ ಪೊಟ್ಟಣ ತಂದಿದ್ರು, ಪೆಟ್ರೋಲ್ ತಂದಿದ್ರು. ಏಕಾಏಕಿ ಬೆಂಕಿ ಹಾಕಿದ್ರು. ಕೆಲವರಿಗೆ ಯಾವ ಕಾರಣಕ್ಕೂ ದೇಶಕ್ಕೆ ಒಳ್ಳೆಯದು ಆಗಬಾರದು ಅನ್ನೋದು ಇರತ್ತೆ. ಇವರ ರೈತ ಹೋರಾಟ ನೋಡಿ ಪಂಜಾಬ್‍ನಲ್ಲಿ ಕಾಂಗ್ರೆಸ್ ಸೋಲಿಸಿದರು ಎಂದರು. ಇದನ್ನೂ ಓದಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯ ಆಪ್ತ ಸಹಾಯಕ ಎಂದು ಹಣ ಪಡೆದು ವಂಚನೆ – ಪ್ರಕರಣ ದಾಖಲು

    ಪಠ್ಯ ಪರಿಷ್ಕರಣೆ ವಿರುದ್ಧ ಫ್ರೀಡಂಪಾರ್ಕ್‍ನಲ್ಲಿ ಪ್ರತಿಭಟನೆ ವಿಚಾರವಾಗಿ ಮಾತನಾಡಿ, ಹೋರಾಟ ಮಾಡೋದು ತಪ್ಪಲ್ಲ. ಆದ್ರೆ ಅವರು ಯಾವ ಉದ್ದೇಶಕ್ಕೆ ಹೋರಾಟ ಮಾಡ್ತಿದ್ದಾರೋ ಆ ವಿಚಾರದಲ್ಲಿ ಅವರಿಗೆ ಮಾಹಿತಿ ಕಮ್ಮಿ ಇದೆ. ಕುವೆಂಪು ಪಾಠ ತೆಗೆದಿದ್ರು ಬರಗೂರು ರಾಮಚಂದ್ರಪ್ಪ. ಅದರ ಬದಲು ಪೆರಿಯಾರ್ ಪಾಠ ಸೇರಿಸಿದ್ರು. ಪೆರಿಯಾರ್ ಶ್ರೀರಾಮನಿಗಿಂತ ರಾವಣನೇ ಹೆಚ್ಚು ಅಂದವರು. ಇದೀಗ ಅಂಬೇಡ್ಕರ್ ಬಗ್ಗೆ ಪರಿಷ್ಕರಣೆಯಲ್ಲಿ ಇನ್ನೂ ಹೆಚ್ಚಿನ ಮಾಹಿತಿ ಸೇರಿಸಲಾಗಿದೆ. ಕೆಲವರಿಗೆ ಇದು ರಾಜಕಾರಣ. ಕೆಲವರಿಗೆ ದೇಶ ಸೇವೆ ಬೇಕಾಗಿಲ್ಲ. ಹೀಗಾಗಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ ಎಂದು ಹರಿಹಾಯ್ದರು.

    Live Tv

  • ಅಜಾಗರೂಕ ನಿರ್ಧಾರದ ಜವಾಬ್ದಾರಿಯನ್ನು ಎದುರಿಸಲು ನಿಮಗೆ ಗಟ್ಸ್ ಇದೆಯಾ?: ಮೋದಿಗೆ ಓವೈಸಿ ಟೀಕೆ

    ಅಜಾಗರೂಕ ನಿರ್ಧಾರದ ಜವಾಬ್ದಾರಿಯನ್ನು ಎದುರಿಸಲು ನಿಮಗೆ ಗಟ್ಸ್ ಇದೆಯಾ?: ಮೋದಿಗೆ ಓವೈಸಿ ಟೀಕೆ

    ನವದೆಹಲಿ: ಕೇಂದ್ರದ ಅಗ್ನಿಪಥ್ ಯೋಜನೆ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿರುವ ಹಿನ್ನೆಲೆ, ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್(ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಟುವಾಗಿ ಟೀಕಿಸಿದ್ದಾರೆ. ನಿಮ್ಮ ಅಜಾಗರೂಕ ನಿರ್ಧಾರ ಹಾಗೂ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಓವೈಸಿ, ದಯವಿಟ್ಟು ಮಿಲಿಟರಿ ಮುಖ್ಯಸ್ಥರು ಮೋದಿಯವರ ಹಿಂದೆ ಅಡಗಿಕೊಳ್ಳುವುದನ್ನು ನಿಲ್ಲಿಸಿ. ನಿಮ್ಮ ಅಜಾಗರೂಕ ನಿರ್ಧಾರದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಹಾಗೂ ಪರಿಣಾಮಗಳನ್ನು ಎದುರಿಸಲು ನಿಮ್ಮಲ್ಲಿ ಗಟ್ಸ್(ಧೈರ್ಯ) ಇದೆಯಾ? ದೇಶದ ಯುವಕರ ಭವಿಷ್ಯದ ಬಗೆಗಿನ ಆಕ್ರೋಶ ಕೇವಲ ನಿಮ್ಮನ್ನೇ ಗುರಿಯಾಗಿಸಿಕೊಂಡಿದೆ ಎಂದು ವಾದಿಸಿದ್ದಾರೆ. ಇದನ್ನೂ ಓದಿ: ಇಂಡಿಯನ್ ಆರ್ಮಿ ವಿಶ್ವದಲ್ಲೇ ಫೈನೆಸ್ಟ್ ಆರ್ಮಿ, ಇದಕ್ಕೆ ಡಿಸ್ಟರ್ಬ್ ಮಾಡ್ಬೇಡಿ: ನಿವೃತ್ತ ಸೇನಾಧಿಕಾರಿ ಎಚ್ಚರಿಕೆ

    ಅಗ್ನಿಪಥ್ ಯೋಜನೆಯನ್ನು ಸರ್ಕಾರ ಹಿಂಪಡೆಯಬೇಕು ಎಂದು ಜನರು ಒತ್ತಾಯಿಸಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಹೈದರಾಬಾದ್‌ನ ಸಿಕಂದರಾಬಾದ್‌ನಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ರೈಲುಗಳಿಗೆ ಬೆಂಕಿ ಹಚ್ಚುವುದರ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಇಲ್ಲಿಯವರೆಗೆ 300ಕ್ಕೂ ಹೆಚ್ಚು ರೈಲುಗಳು ಸ್ಥಗಿತಗೊಂಡಿವೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ದೇಶದಲ್ಲಿ ಅಗ್ನಿಪಥ್ ಪ್ರತಿಭಟನೆಯ ಕಾವು- ಉತ್ತರದ ಬಳಿಕ ದಕ್ಷಿಣದಲ್ಲಿ ಹಿಂಸಾತ್ಮಕ ಪ್ರೊಟೆಸ್ಟ್

    ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ಯುವ ಸೈನಿಕರಿಗಾಗಿ 4 ವರ್ಷಗಳ ಕಾಲಾವಧಿಗೆ ಸೀಮಿತವಾಗಿದ್ದು, ಸೇನೆ, ನೌಕಾಪಡೆ ಹಾಗೂ ವಾಯುಪಡೆಗಳಲ್ಲಿ ನೇಮಿಸಿಕೊಳ್ಳುವ ಯೋಜನೆಯಾಗಿದೆ.

    Live Tv

  • ಇಂಡಿಯನ್ ಆರ್ಮಿ ವಿಶ್ವದಲ್ಲೇ ಫೈನೆಸ್ಟ್ ಆರ್ಮಿ, ಇದಕ್ಕೆ ಡಿಸ್ಟರ್ಬ್ ಮಾಡ್ಬೇಡಿ: ನಿವೃತ್ತ ಸೇನಾಧಿಕಾರಿ ಎಚ್ಚರಿಕೆ

    ಇಂಡಿಯನ್ ಆರ್ಮಿ ವಿಶ್ವದಲ್ಲೇ ಫೈನೆಸ್ಟ್ ಆರ್ಮಿ, ಇದಕ್ಕೆ ಡಿಸ್ಟರ್ಬ್ ಮಾಡ್ಬೇಡಿ: ನಿವೃತ್ತ ಸೇನಾಧಿಕಾರಿ ಎಚ್ಚರಿಕೆ

    ಮಡಿಕೇರಿ: ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ಅಗ್ನಿಪಥ್ ಯೋಜನೆಯು ಸೇನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎನ್ನುವುದು ಕೊಡಗಿನ ವೀರ ಯೋಧರ ಆತಂಕ. ಸೈನಿಕ ನೇಮಕಾತಿಗೆ ಸಂಬAಧಿಸಿದAತೆ ಅಗ್ನಿಪಥ್ ಎಂಬ ಹೊಸ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಆದರೆ ಇಂಡಿಯನ್ ಆರ್ಮಿ ವಿಶ್ವದ ಒಂದು ಫೈನೆಸ್ಟ್ ಆರ್ಮಿಯಾಗಿದೆ. ಇಷ್ಟು ಚೆನ್ನಾಗಿರುವಾಗ ಯಾಕೆ ಅದಕ್ಕೆ ಡಿಸ್ಟರ್ಬ್ ಮಾಡ್ತೀರ? ನ್ಯಾಷನಲ್ ಸೆಕ್ಯೂರಿಟಿ ವಿಚಾರದಲ್ಲಿ ಹುಡುಗಾಟ ಆಡಬೇಡಿ ಎಂದು ಕೊಡಗಿನ ನಿವೃತ್ತ ಸೇನಾಧಿಕಾರಿ ಕರ್ನಲ್ ಮುತ್ತಣ್ಣ ಎಚ್ಚರಿಕೆಯ ಮಾತನ್ನಾಡಿದ್ದಾರೆ. ಇದನ್ನೂ ಓದಿ: ದೇಶದಲ್ಲಿ ಅಗ್ನಿಪಥ್ ಪ್ರತಿಭಟನೆಯ ಕಾವು- ಉತ್ತರದ ಬಳಿಕ ದಕ್ಷಿಣದಲ್ಲಿ ಹಿಂಸಾತ್ಮಕ ಪ್ರೊಟೆಸ್ಟ್

    ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲುವಿನಲ್ಲಿ ಮಾತಾನಾಡಿದ ಅವರು, ತಾನು 24 ವರ್ಷ ದೇಶಕ್ಕಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದೇನೆ. ಇಡೀ ವಿಶ್ವದಲ್ಲೇ ಅತ್ಯುತ್ತಮ ಸೇನೆ ಎಂಬ ಹೆಗ್ಗಳಿಕೆ ನಮ್ಮ ಇಂಡಿಯನ್ ಆರ್ಮಿಗಿದೆ. ಎಲ್ಲವೂ ಚೆನ್ನಾಗಿರುವಾಗ ಅದಕ್ಕೆ ತೊಂದರೆ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ತಿಳಿಸಿದರು.

    ಸರ್ಕಾರದ ಯೋಚನೆ ಸರಿ ಇರಬಹುದು. ಆದರೆ ಸರಿಯಾಗಿ ಆಲೋಚನೆ ಮಾಡಿದಂತಿಲ್ಲ. ಸೇನೆಯಲ್ಲಿ ಲೋಪ ದೋಶಗಳಿಲ್ಲದೆ ಇರುವಾಗ ಯಾಕೆ ಈ ಹೊಸ ಯೋಜನೆ? ಹಣ ಉಳಿಸಬೇಕಾದರೆ ಎಂಎಲ್‌ಎ, ಎಂಪಿ ಪೆನ್ಷನ್ ಕಡಿತಗೊಳಿಸಿ, ರಕ್ಷಣಾ ಇಲಾಖೆ ಕಛೇರಿಯ ಸಿಬ್ಬಂದಿಯನ್ನು ಕಡಿತ ಮಾಡಿ. ಅದು ಬಿಟ್ಟು ಜಗತ್ತಿನ ಶ್ರೇಷ್ಠ ಆರ್ಮಿಗೆ ಡಿಸ್ಟರ್ಬ್ ಮಾಡಬೇಡಿ ಎಂದರು. ಇದನ್ನೂ ಓದಿ: ತೆಲಂಗಾಣ, ಬಿಹಾರದಲ್ಲಿ ಪರಿಸ್ಥಿತಿ ಉದ್ವಿಗ್ನ- ಗುಂಡಿನ ದಾಳಿಗೆ ವ್ಯಕ್ತಿ ಬಲಿ

    ಸೇನೆಯಲ್ಲಿ ಟೂರ್ ಆಫ್ ಡ್ಯೂಟಿ ಮಾಡಿದರೆ ದೊಡ್ಡ ಆಪತ್ತು. ಹಾಗಾದರೆ ಡಾಕ್ಟರ್‌ಗಳನ್ನು ಟೂರ್ ಆಫ್ ಡ್ಯೂಟಿ ಮಾಡಿಸಿಬಿಡಿ. ಅಂತಹ ಡಾಕ್ಟರ್‌ಗಳಿಂದ ಆಪರೇಷನ್ ಮಾಡಿಸಿಕೊಳ್ಳುತ್ತೀರಾ? ರಷ್ಯಾ-ಉಕ್ರೇನ್ ಯುದ್ಧದಲ್ಲಿ ರಷ್ಯಾ ನಷ್ಟಕ್ಕೆ ಇದೇ ನೀತಿ ಕಾರಣ. ಅಗ್ನಿಪಥ್ ಯೋಜನೆಯಿಂದ ಸೈನಿಕರ ಆತ್ಮಸ್ಥೈರ್ಯ ಕುಗ್ಗುತ್ತದೆ. ಆರ್ಮಿ ಚೆನ್ನಾಗಿದೆ, ದಯವಿಟ್ಟು ಅದಕ್ಕೆ ಡಿಸ್ಟರ್ಬ್ ಮಾಡಬೇಡಿ ಎಂದು ನಿವೃತ್ತ ಸೇನಾಧಿಕಾರಿ ಕರ್ನಲ್ ಮುತ್ತಣ್ಣ ಮನವಿ ಮಾಡಿದ್ದಾರೆ.

    Live Tv

  • ಇಸ್ರೇಲ್ ಮಾದರಿಯ ʼಅಗ್ನಿಪಥ್ʼ- ಏನಿದು ಯೋಜನೆ, ಯಾಕಿಷ್ಟು ವಿರೋಧ?

    ಇಸ್ರೇಲ್ ಮಾದರಿಯ ʼಅಗ್ನಿಪಥ್ʼ- ಏನಿದು ಯೋಜನೆ, ಯಾಕಿಷ್ಟು ವಿರೋಧ?

    ನವದೆಹಲಿ: ಸುತ್ತಮುತ್ತ ನಿರಂತರವಾಗಿ ಶತ್ರು ದೇಶದ ಯುದ್ಧ ಭೀತಿ ಇರುವುದರಿಂದ ಇಸ್ರೇಲ್‍ನಲ್ಲಿ ಪ್ರತಿ ಮನೆಯಿಂದ ಒಬ್ಬ ವ್ಯಕ್ತಿಗೆ ಮಿಲಿಟರಿ ಟ್ರೈನಿಂಗ್ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ. ಈ ಮಾದರಿಯಲ್ಲಿಯೇ ಕೊಂಚ ಬದಲಾವಣೆ ಮಾಡಿ ನಿರುದ್ಯೋಗ ಸಮಸ್ಯೆ ನಿವಾರಣೆಯ ಜೊತೆಗೆ ಯುವಕರನ್ನು ಮಿಲಿಟರಿಯತ್ತ ಸೆಳೆಯಲು ದೇಶದಲ್ಲಿ ಅಗ್ನಿಪಥ್ ಯೋಜನೆಯನ್ನು ತರಲಾಗಿದೆ.

    ಏನಿದು ಅಗ್ನಿಪಥ್?:
    ನೂತನ ಅಗ್ನಿಪಥ್ ಯೋಜನೆ ಪ್ರಕಾರ ಸೇನೆಯ 3 ವಿಭಾಗಗಳಲ್ಲಿ ಆಸಕ್ತ ಯುವಕ-ಯುವತಿಯರ ತರಬೇತಿಯೂ ಸೇರಿದಂತೆ ನಾಲ್ಕು ವರ್ಷದ ಮಟ್ಟಿಗೆ ಅಗ್ನಿವೀರ್ ಎಂಬ ಹೆಸರಿನ ಯೋಧರಾಗಿ ಕೆಲಸ ಮಾಡಬಹುದಾಗಿದೆ. 10ನೇ ತರಗತಿ ಹಾಗೂ ಪಿಯುಸಿ ಪಾಸಾಗಿರುವವರು ಅಗ್ನಿವೀರರಾಗಲು ಅರ್ಹರಾಗಿದ್ದಾರೆ. 4 ವರ್ಷದಲ್ಲಿ ಮೊದಲು 6 ತಿಂಗಳು ತರಬೇತಿ ಇರುತ್ತದೆ. ಮೆರಿಟ್ ರೀತಿಯ ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ ಇರಲಿದೆ. ಇದು ಇಡೀ ದೇಶಕ್ಕೆ ಅನ್ವಯ ಆಗುತ್ತದೆ.

    ಅಗ್ನಿವೀರರಾದ ಪ್ರತಿಯೊಬ್ಬರಿಗೆ ನಾಲ್ಕು ವರ್ಷದ ಅವಧಿಗೆ ಮಾತ್ರ ವರ್ಷಕ್ಕೆ 4.62 ಲಕ್ಷ ರೂ. ದಿಂದ 6.92 ಲಕ್ಷ ರೂ.ದವರೆಗೆ ಸ್ಯಾಲರಿ ಪ್ಯಾಕೇಜ್ ಇರುತ್ತದೆ. ತಿಂಗಳಿಗೆ 30 ಸಾವಿರದಿಂದ 40 ಸಾವಿರವರೆಗೆ ಸಂಬಳ ಸಿಗಲಿದೆ. ನಾಲ್ಕು ವರ್ಷ ಸೇವೆ ಸಲ್ಲಿಸಿದ ಬಳಿಕ ಅಗ್ನಿವೀರರಿಗೆ ಸುಮಾರು 11.70 ಲಕ್ಷ ರೂ. ಸೇವಾ ನಿಧಿಯಾಗಿ ಕೊಡಲಾಗುತ್ತದೆ. ಇದಕ್ಕೆ ಟ್ಯಾಕ್ಸ್ ಇರಲ್ಲ. ವೈದ್ಯಕೀಯ ವಿಮೆಯೂ ಇರಲಿದೆ. ಆದರೆ ಪಿಂಚಣಿ ಇರಲ್ಲ.

    ಇದರಲ್ಲಿ ಶೇ. 25ರಷ್ಟು ಅಗ್ನಿವೀರರು ಸೇನೆಯಲ್ಲಿ 15 ವರ್ಷ ಸೇನೆಯ ವಿವಿಧ ವಿಭಾಗದಲ್ಲಿ ಉದ್ಯೋಗಕ್ಕೆ ಅವಕಾಶ ನೀಡಲಾಗಿದೆ. ಅಗ್ನಿವೀರರು ತಮ್ಮ ಸೇವೆಯ ಅವಧಿಯಲ್ಲಿ ಹುತಾತ್ಮರಾದರೆ ಅವರಿಗೆ ವಿಮೆ ಹೊರತುಪಡಿಸಿ 1 ಕೋಟಿ ರೂ. ಪರಿಹಾರ ನೀಡಲಾಗುವುದು. ಇದನ್ನೂ ಓದಿ: ಮೋದಿ ನಾಟಕ ನಂಬಲು ಯುವಕರು ಮೂರ್ಖರಲ್ಲ: ದಿನೇಶ್ ಗುಂಡೂರಾವ್

    ಅಗ್ನಿಪಥ್ ವಿರೋಧ ಯಾಕೆ?: ನಿರುದ್ಯೋಗದಿಂದ ಹೊರಬರಲು ತಕ್ಷಣ ಮಾಡಿರುವ ಯೋಜನೆಯಾಗಿದೆ. ಇದು ತಾತ್ಕಾಲಿಕ ಪರಿಹಾರ ಎನ್ನುವುದು ವಿರೋಧಿಸುತ್ತಿರುವವರ ವಾದವಾಗಿದೆ. 4 ವರ್ಷದ ಬಳಿಕ ವಾಟ್ ನೆಕ್ಸ್ಟ್ ಎನ್ನುವ ಪ್ರಶ್ನೆಯೂ ಮೂಡುತ್ತದೆ. ಇದರ ಬದಲು ಬೇರೆ ವಲಯಕ್ಕೆ ಸೀಮಿತವಾಗುವಂತೆ ಉದ್ಯೋಗಾವಕಾಶವನ್ನು ಮಾಡಬಹುದು. 4 ವರ್ಷದ ಅವಧಿಗೆ ಕೆಲಸ ಮಾಡುವ ಉದ್ದೇಶ ಇದ್ದರೆ ಇವರಲ್ಲಿ ದೇಶ ಸೇವೆಯ ಮನೋಭಾವ ಬರಲ್ಲ ಎನ್ನುವ ವಾದದ ಮೇಲೆ ವಿರೋಧ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ರೈತರನ್ನು ಬಲಿ ಕೊಟ್ಟಾಯಿತು, ಈಗ ಸೈನಿಕರ ಸರದಿಯೇ?: ಅಗ್ನಿಪಥ್ ಯೋಜನೆಗೆ ಸಿದ್ದು ವಿರೋಧ

    Live Tv