Tag: aggesh

  • ಶಿವರಾಜ್ ಕುಮಾರ್ ಭೇಟಿಯಾದ ಜಗ್ಗೇಶ್

    ಶಿವರಾಜ್ ಕುಮಾರ್ ಭೇಟಿಯಾದ ಜಗ್ಗೇಶ್

    ವರಸ ನಾಯಕ ಜಗ್ಗೇಶ್ ಅವರು ತಮ್ಮ ಹೊಸ ಸಿನಿಮಾ ‘ರಾಘವೇಂದ್ರ ಸ್ಟೋರ್ಸ್’ ಚಿತ್ರೀಕರಣ ಮುಗಿಸಿಕೊಂಡು ಸದ್ಯ ಅದರ ಡಬ್ಬಿಂಗ್ ಕಾರ್ಯದಲ್ಲಿ ತೊಡಗಿದ್ದಾರೆ. ಡಬ್ಬಿಂಗ್ ಗಾಗಿ ಸ್ಟುಡಿಯೋಗೆ ಹೋದ ಸಂದರ್ಭದಲ್ಲಿ ಅವರು ಆಕಸ್ಮಿಕ ಎನ್ನುವಂತೆ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಆ ಭೇಟಿಯನ್ನು ಅವರು ‘ಇದೊಂದು ಆಕಸ್ಮಿಕ ಭೇಟಿಯಾದರೂ, ಶಿವಣ್ಣನ ನೋಡಿದರೆ ನನಗಾಗುವ ಆನಂದವೇ ಬೇರೆ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಮಾಜಿ ಸಿಎಂ ಸಿದ್ಧರಾಮಯ್ಯಗೆ ಹೆದರಿಸಿದ ಬಿಗ್ ಬಾಸ್ ಪ್ರಥಮ್

    ಡಾ.ರಾಜ್ ಕುಟುಂಬಕ್ಕೂ ಮತ್ತು ಜಗ್ಗೇಶ್ ಅವರಿಗೂ ತೀರಾ ಹತ್ತಿರದ ನಂಟಿದೆ. ಜಗ್ಗೇಶ್ ಅವರ ಕಷ್ಟದ ಎಷ್ಟೋ ಸಂದರ್ಭದಲ್ಲಿ ಡಾ.ರಾಜ್ ಕುಮಾರ್ ಅವರೇ ಸಹಾಯಕ್ಕೆ ನಿಂತಿದ್ದಾರೆ. ಅಲ್ಲದೇ, ಪುನೀತ್ ರಾಜ್ ಕುಮಾರ್ ಜತೆಗೆ ಜಗ್ಗೇಶ್ ಅವರಿಗೆ ತೀರಾ ಆತ್ಮಿಯತೆ ಇತ್ತು. ಪುನೀತ್ ನಿಧನಕ್ಕೂ ಒಂದು ವಾರ ಮುಂಚೆ ಜಗ್ಗೇಶ್ ಮತ್ತು ಪುನೀತ್ ರಾಜ್ ಕುಮಾರ್ ಮಲ್ಲೇಶ್ವರಂನಲ್ಲಿ ಭೇಟಿ ಮಾಡಿ, ಒಂದು ತಾಸಿಗೂ ಹೆಚ್ಚು ಕಾಲ ಮಾತನಾಡಿದ್ದರು. ಪುನೀತ್ ರಾಜ್ ಕುಮಾರ್ ಏನಾದರೂ ಮಲ್ಲೇಶ್ವರಂ ಕಡೆ ಬಂದಾಗ, ಜಗ್ಗೇಶ್ ಅವರಿಗೆ ಫೋನ್ ಮಾಡಿ, ತಾವಿದ್ದಲ್ಲಿಗೆ ಕರೆಯಿಸಿಕೊಳ್ಳುತ್ತಿದ್ದರು. ಈ ಬಾಂಧವ್ಯದ ಕಾರಣಕ್ಕಾಗಿಯೇ ಜಗ್ಗೇಶ್ ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾವನ್ನು ಒಪ್ಪಿಕೊಂಡಿದ್ದು. ಇದನ್ನೂ ಓದಿ : ಅಶರೀರವಾಣಿ ಆಲ್ಬಂಗೆ ನೀನಾಸಂ ಸತೀಶ್ ಸಿಂಗರ್ : ಮಗಳೊಂದಿಗೆ ಹಾಡಿದ ಸ್ಟಾರ್ ನಟ

    ಪುನೀತ್ ರಾಜ್ ಕುಮಾರ್ ಅವರ ಎರಡು ಚಿತ್ರಗಳನ್ನು ನಿರ್ದೇಶನ ಮಾಡಿರುವ ಸಂತೋಷ್ ಆನಂದ್ ರಾಮ್ ‘ರಾಘವೇಂದ್ರ ಸ್ಟೋರ್’ ಚಿತ್ರದ ನಿರ್ದೇಶಕರು. ಪುನೀತ್ ಅವರ ಸಿನಿಮಾದ ಮೂಲಕವೇ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ ಹೊಂಬಾಳೆ ಫಿಲ್ಮ್ಸ್ ಚಿತ್ರವನ್ನು ನಿರ್ಮಾಣ ಮಾಡಿದೆ.