Tag: agent

  • ಏಜೆಂಟ್ ಸಿನಿಮಾಗೆ ಬಾಲಿವುಡ್ ಸ್ಟಾರ್: ಡಿನೋ ಮೋರಿಯಾ ಫಸ್ಟ್ ಲುಕ್

    ಏಜೆಂಟ್ ಸಿನಿಮಾಗೆ ಬಾಲಿವುಡ್ ಸ್ಟಾರ್: ಡಿನೋ ಮೋರಿಯಾ ಫಸ್ಟ್ ಲುಕ್

    ಟಾಲಿವುಡ್ ಯಂಗ್ ಅಂಡ್ ಡೈನಾಮಿಕ್ ಹೀರೋ ಅಖಿಲ್ ಅಕ್ಕಿನೇನಿ (Akhil Akkineni) ನಟನೆಯ ಕ್ರೇಜಿ ಪ್ರಾಜೆಕ್ಟ್ ಏಜೆಂಟ್ ಅಂಗಳದಿಂದ ಹೊಸ ಅಪ್ ಡೇಟ್ ಸಿಕ್ಕಿದೆ. ಅಖಿಲ್ ಹುಟ್ಟುಹಬ್ಬಕ್ಕೆ ಹೊಸ ಪೋಸ್ಟರ್ ಅನಾವರಣ ಮಾಡಿದ್ದ ಚಿತ್ರತಂಡ ಈಗ ಮತ್ತೊಂದು ಪ್ರಮುಖ ಪಾತ್ರವನ್ನು ಸಿನಿರಸಿಕರಿಗೆ ಪರಿಚಯಿಸಿದೆ.  ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ (Mummutty) ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಸಾಕ್ಷಿ ವೈದ್ಯ ನಾಯಕಿಯಾಗಿ ಅಭಿನಯಿಸಿರುವ ಏಜೆಂಟ್ (Agent) ಸಿನಿಮಾಗೆ ಬಾಲಿವುಡ್ ತಾರೆ ಎಂಟ್ರಿ ಕೊಟ್ಟಿದ್ದಾರೆ.

    ರಾಝ್, ಅಕ್ಸರ್, ಜೂಲಿ ಮುಂತಾದ ಪಾತ್ರಗಳ‌ ಮೂಲಕ ಖ್ಯಾತಿ ಪಡೆದಿರುವ ಬಿಟೌನ್ ಸ್ಟಾರ್ ಡಿಯೋ ಮೋರಿಯಾ (Deo Morea) ಏಜೆಂಟ್ ಸಿನಿಮಾದಲ್ಲಿ ದಿ ಗಾಡ್ ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉದ್ದವಾದ ಕೇಶರಾಶಿ, ಮುಖದ‌ ಮೇಲೆ ಗಾಯದ ಗುರುತು, ಕೈಯಲ್ಲಿ ಗನ್ ಹಿಡಿದು ಡಿಯೋ ಮೋರಿಯಾ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್ ಎದುರು ಅಬ್ಬರಿಸಲಿದ್ದಾರೆ ಸೈಫ್ ಅಲಿ ಖಾನ್

    ಈಗಾಗಲೇ ಏಜೆಂಟ್ ಮೊದಲ ಎರಡು ಹಾಡುಗಳ ಹಿಟ್ ಲೀಸ್ಟ್ ಸೇರಿದ್ದು, ನಿನ್ನೆ ರಿಲೀಸ್ ಆಗಿರುವ ರಾಮ ಶ್ರೀಕೃಷ್ಣ ಎಂಬ ಹಾಡು ಬಜ್ ಕ್ರಿಯೇಟ್ ಮಾಡಿದೆ. ಆಕ್ಷನ್ ಹೈವೋಲ್ಟೇಜ್  ಏಜೆಂಟ್ ಸಿನಿಮಾವನ್ನು ರಾಮಬ್ರಹ್ಮಂ ಸುಂಕರ AK ಎಂಟರ್ಟೈನ್ಮೆಂಟ್ಸ್ ಹಾಗೂ ಸುರೇಂದ್ರ 2 ಸಿನಿಮಾ ಬ್ಯಾನರ್ ನಡಿ ನಿರ್ಮಾಣ ಮಾಡಿದ್ದಾರೆ.

    ಚಿತ್ರಕ್ಕೆ ವಕ್ಕನಾಥಂ ವಂಶಿ ಕಥೆ ಬರೆದಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ನವೀನ್ ನೂಲಿ ಸಂಕಲನ, ಅವಿನಾಶ ಕೊಲ್ಲ ಕಲಾ ನಿರ್ದೇಶನ, ಅಜೇಯ್ ಸುಂಕರ, ಪಾತಿ ದೀಪ ರೆಡ್ಡಿ ಸಹ ನಿರ್ಮಾಣ ಚಿತ್ರಕ್ಕಿದೆ. ಹಿಪ್ ಹಾಪ್ ಥಮೀಜಾ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಏಜೆಂಟ್ ಚಿತ್ರ ರಸೂಲ್ ಎಲ್ಲೋರೆ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿರುವ ಏಜೆಂಟ್ ಸಿನಿಮಾ ಏಪ್ರಿಲ್ 28ಕ್ಕೆ ಬಿಡುಗಡೆಯಾಗುತ್ತಿದೆ.

  • ಅಖಿಲ್ ಅಕ್ಕಿನೇನಿ ಹುಟ್ಟುಹಬ್ಬಕ್ಕೆ ‘ಏಜೆಂಟ್’ ಹೊಸ ಪೋಸ್ಟರ್ ರಿಲೀಸ್

    ಅಖಿಲ್ ಅಕ್ಕಿನೇನಿ ಹುಟ್ಟುಹಬ್ಬಕ್ಕೆ ‘ಏಜೆಂಟ್’ ಹೊಸ ಪೋಸ್ಟರ್ ರಿಲೀಸ್

    ಡೈನಾಮಿಕ್ ಹೀರೋ ಅಖಿಲ್ ಅಕ್ಕಿನೇನಿ (Akhil Akkineni), ಸ್ಟೈಲಿಶ್ ಮೇಕರ್ ಸುರೇಂದರ್ ರೆಡ್ಡಿ (Surender Reddy) ಕಾಂಬಿನೇಶನ್ ಹೈ ವೋಲ್ಟೇಜ್ ಸಿನಿಮಾ ‘ಏಜೆಂಟ್’ (Agent) ಬಿಡುಗಡೆಗೆ ಸಜ್ಜಾಗಿದೆ. ಟಾಲಿವುಡ್ ಅಂಗಳದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲೊಂದಾದ ‘ಏಜೆಂಟ್’ ಏಪ್ರಿಲ್ 28ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ.

    ಮೇಕಿಂಗ್ ವೀಡಿಯೋ ಹಾಗೂ ಹಾಡಿನ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಹೊಸ ಪೋಸ್ಟರ್ ಅಖಿಲ್ ಅಕ್ಕಿನೇನಿ ಹುಟ್ಟುಹಬ್ಬಕ್ಕೆ ರಿಲೀಸ್ ಆಗಿದೆ. ಕೈಯಲ್ಲಿ ಗನ್ ಹಿಡಿದು ಸ್ಟೈಲೀಶ್ ಲುಕ್ ನಲ್ಲಿ ಅಖಿಲ್ ಎಂಟ್ರಿ ಕೊಟ್ಟಿರುವ ಪೋಸ್ಟರ್ ಕಿಚ್ಚು ಹಚ್ಚಿದೆ. ಈ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಚಿತ್ರತಂಡ ಪ್ರಮೋಷನ್ ಗೆ ಕಿಕ್ ಸ್ಟಾರ್ಟ್ ಕೊಟ್ಟಿದೆ. ಮುಂಬರುವ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡು ಏಜೆಂಟ್ ಟೀಂ ಪ್ಲಾನ್ ಮಾಡಿಕೊಂಡಿದೆ. ಇದನ್ನೂ ಓದಿ: ‘ವಿಷ್ಣುಪ್ರಿಯಾ’ಗಾಗಿ ಕೇರಳದಿಂದ ಹಾರಿಬಂದ ಕಣ್ಸನ್ನೆ ಬೆಡಗಿ ಪ್ರಿಯಾ

    ನಿರ್ದೇಶಕ ಸುರೇಂದರ್ ರೆಡ್ಡಿ ಏಜೆಂಟ್ ಚಿತ್ರವನ್ನು ಇತರೆ ಸ್ಪೈ ಥ್ರಿಲ್ಲರ್ ಸಿನಿಮಾಗಳಿಗಿಂತಲೂ ಡಿಫ್ರೆಂಟ್ ಆಗಿ ತೆರೆ ಮೇಲೆ ತರುತ್ತಿದ್ದು ಇಬ್ಬರ ಕಾಂಬಿನೇಶನ್ ಮೇಲೆ ಸಿನಿ ಪ್ರೇಮಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರದಲ್ಲಿ ಸಾಕ್ಷಿ ವೈದ್ಯ ಅಖಿಲ್ ಅಕ್ಕಿನೇನಿಗೆ ನಾಯಕಿಯಾಗಿ ನಟಿಸಿದ್ದು, ಮಮ್ಮುಟ್ಟಿ ಚಿತ್ರದ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರಾಮಬ್ರಹ್ಮಂ ಸುಂಕರ AK ಎಂಟರ್ಟೈನ್ಮೆಂಟ್ಸ್ ಹಾಗೂ ಸುರೇಂದ್ರ 2 ಸಿನಿಮಾ ಬ್ಯಾನರ್ ನಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

    ಚಿತ್ರಕ್ಕೆ ವಕ್ಕನಾಥಂ ವಂಶಿ ಕಥೆ ಬರೆದಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ನವೀನ್ ನೂಲಿ ಸಂಕಲನ, ಅವಿನಾಶ ಕೊಲ್ಲ ಕಲಾ ನಿರ್ದೇಶನ, ಅಜೇಯ್ ಸುಂಕರ, ಪಾತಿ ದೀಪ ರೆಡ್ಡಿ ಸಹ ನಿರ್ಮಾಣ ಚಿತ್ರಕ್ಕಿದೆ. ಹಿಪ್ ಹಾಪ್ ಥಮೀಜಾ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಏಜೆಂಟ್ ಚಿತ್ರ ರಸೂಲ್ ಎಲ್ಲೋರೆ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿರುವ ಪ್ಯಾನ್ ಇಂಡಿಯಾ ಸಿನಿಮಾ ಏಜೆಂಟ್ ಬೇಸಿಗೆ ರಜೆ ದಿನಗಳಲ್ಲಿ ತೆರೆಗೆ ಬರ್ತಿದ್ದು, ಬಾಕ್ಸಾಫೀಸ್ ಧೂಳ್ ಎಬ್ಬಿಸಲು ಅಖಿಲ್ ಸನ್ನದ್ಧರಾಗಿದ್ದಾರೆ.

  • ಅಖಿಲ್ ಅಕ್ಕಿನೇನಿ ‘ಏಜೆಂಟ್’ ಸಿನಿಮಾ ಬಿಡುಗಡೆಗೆ ಡೇಟ್ ಫಿಕ್ಸ್

    ಅಖಿಲ್ ಅಕ್ಕಿನೇನಿ ‘ಏಜೆಂಟ್’ ಸಿನಿಮಾ ಬಿಡುಗಡೆಗೆ ಡೇಟ್ ಫಿಕ್ಸ್

    ಯಂಗ್ ಅಂಡ್ ಡೈನಾಮಿಕ್ ಹೀರೋ ಅಖಿಲ್ ಅಕ್ಕಿನೇನಿ, ಸ್ಟೈಲಿಶ್ ಮೇಕರ್ ಸುರೇಂದರ್ ರೆಡ್ಡಿ ಕಾಂಬಿನೇಶನ್ ಹೈ ವೋಲ್ಟೇಜ್ ಸಿನಿಮಾ ‘ಏಜೆಂಟ್’. ಟಾಲಿವುಡ್ ಅಂಗಳದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲೊಂದಾದ ‘ಏಜೆಂಟ್’ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ.  ಏಪ್ರಿಲ್ 28ಕ್ಕೆ ಸಿನಿಮಾ ತೆರೆ ಮೇಲೆ ಬರುತ್ತಿದೆ. ಹೊಸ ವರ್ಷದ ಆರಂಭದಲ್ಲಿ ಮೇಕಿಂಗ್ ವೀಡಿಯೋ ಬಿಡುಗಡೆ ಮಾಡಿ ಬೇಸಿಗೆಯಲ್ಲಿ ಸಿನಿಮಾ ರಿಲೀಸ್ ಎಂದು ತಿಳಿಸಿದ್ದ ಚಿತ್ರತಂಡ ಇದೀಗ ಬಿಡುಗಡೆಯ ದಿನಾಂಕವನ್ನು ರಿವೀಲ್ ಮಾಡಿದೆ.

    ವೈಲ್ಡ್ ಆಕ್ಷನ್ ಗ್ಲಿಂಪ್ಸ್ ಬಿಡುಗಡೆ ಮಾಡುವ ಮೂಲಕ ‘ಏಜೆಂಟ್’ ಚಿತ್ರದ ರಿಲೀಸ್ ಡೇಟ್ ರಿವೀಲ್ ಮಾಡಿದೆ ಚಿತ್ರತಂಡ. ಚಿತ್ರದಲ್ಲಿ ಅಖಿಲ್ ಅಕ್ಕಿನೇನಿ ಸಖತ್ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಸಿಕ್ಸ್ ಪ್ಯಾಕ್ ನಲ್ಲಿ ತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ನಿರ್ದೇಶಕ ಸುರೇಂದರ್ ರೆಡ್ಡಿ ಈ ಚಿತ್ರವನ್ನು ಇತರೆ ಸ್ಪೈ ಥ್ರಿಲ್ಲರ್ ಸಿನಿಮಾಗಳಿಗಿಂತಲೂ ಡಿಫ್ರೆಂಟ್ ಆಗಿ ತೆರೆ ಮೇಲೆ ತರುತ್ತಿದ್ದು ಇಬ್ಬರ ಕಾಂಬಿನೇಶನ್ ಮೇಲೆ ಸಿನಿ ಪ್ರೇಮಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರದಲ್ಲಿ ಸಾಕ್ಷಿ ವೈದ್ಯ ಅಖಿಲ್ ಅಕ್ಕಿನೇನಿಗೆ ನಾಯಕಿಯಾಗಿ ನಟಿಸಿದ್ದು, ಮಮ್ಮುಟ್ಟಿ ಚಿತ್ರದ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದನ್ನೂ ಓದಿ:ಮಗಳ ಜೊತೆಗಿನ ಮುದ್ದಾದ ಫೋಟೋ ಹಂಚಿಕೊಂಡ ನಟಿ ಬಿಪಾಶಾ ಬಸು

    ರಾಮಬ್ರಹ್ಮಂ ಸುಂಕರ AK ಎಂಟರ್ಟೈನ್ಮೆಂಟ್ಸ್ ಹಾಗೂ ಸುರೇಂದ್ರ 2 ಸಿನಿಮಾ ಬ್ಯಾನರ್ ನಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ವಕ್ಕನಾಥಂ ವಂಶಿ ಕಥೆ ಬರೆದಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ನವೀನ್ ನೂಲಿ ಸಂಕಲನ, ಅವಿನಾಶ ಕೊಲ್ಲ ಕಲಾ ನಿರ್ದೇಶನ, ಅಜೇಯ್ ಸುಂಕರ, ಪಾತಿ ದೀಪ ರೆಡ್ಡಿ ಸಹ ನಿರ್ಮಾಣ ಚಿತ್ರಕ್ಕಿದೆ. ಹಿಪ್ ಹಾಪ್ ಥಮೀಜಾ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಏಜೆಂಟ್ ಚಿತ್ರ ರಸೂಲ್ ಎಲ್ಲೋರೆ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿರುವ ಏಜೆಂಟ್ ಸಿನಿಮಾ ಏಪ್ರಿಲ್ 28ಕ್ಕೆ ಬಿಡುಗಡೆಯಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಖಿಲ್ ಅಕ್ಕಿನೇನಿ ನಟನೆಯ ಏಜೆಂಟ್ ಗೆ ಸಾಥ್ ಕೊಟ್ಟ ಸುದೀಪ್ ಹಾಗೂ ಶಿವ ಕಾರ್ತಿಕೇಯನ್

    ಅಖಿಲ್ ಅಕ್ಕಿನೇನಿ ನಟನೆಯ ಏಜೆಂಟ್ ಗೆ ಸಾಥ್ ಕೊಟ್ಟ ಸುದೀಪ್ ಹಾಗೂ ಶಿವ ಕಾರ್ತಿಕೇಯನ್

    ಟಾಲಿವುಡ್ ಚಿತ್ರರಂಗದ ಭರವಸೆ ನಾಯಕ ನಟ ಅಖಿಲ್ ಅಕ್ಕಿನೇನಿ ನಟನೆಯ ಮೋಸ್ಟ್ ಅವೇಟೇಡ್  ಏಜೆಂಟ್ ಸಿನಿಮಾದ ಟೀಸರ್ ರಿವೀಲ್ ಆಗಿದ್ದು, ಯೂಟ್ಯೂಬ್ ನಲ್ಲಿ ಸೆನ್ಸೇಷನಲ್ ಸೃಷ್ಟಿಸ್ತಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಶಿವ ಕಾರ್ತಿಕೇಯನ್ ಟೀಸರ್ ಝಲಕ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಸಾಥ್ ಕೊಟ್ಟಿದ್ದಾರೆ.  ಸಿಕ್ಸ್ ಪ್ಯಾಕ್ ಅವತಾರದಲ್ಲಿ ಸಖತ್ ಸ್ಟೈಲೀಶ್ ಲುಕ್ ನಲ್ಲಿ ಅಖಿಲ್ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದು, ಭರ್ಜರಿ ಆಕ್ಷನ್ ಧಮಾಕಾ ಟೀಸರ್ ನಲ್ಲಿದೆ. ಮಮ್ಮುಟ್ಟಿ ಅಮೋಘ ಅಭಿನಯ ನೋಡುಗರಿಗೆ ಥ್ರಿಲ್ ಕೊಡುತ್ತದೆ.

    ಹೈ ಬಜೆಟ್‌ನಲ್ಲಿ ಮೂಡಿಬಂದಿರುವ ಏಜೆಂಟ್ ಸ್ಪೈ ಥ್ರಿಲ್ಲರ್ ಕಥಾಹಂದರ ಹೊಂದಿದ್ದು, ಸಾಕ್ಷಿ ವೈದ್ಯ ಅಖಿಲ್ ಗೆ ಜೋಡಿಯಾಗಿ ನಟಿಸಿದ್ದಾರೆ. ಸೈರಾ ನರಸಿಂಹ ರೆಡ್ಡಿ ಸಿನಿಮಾ ಖ್ಯಾತಿಯ ಸುರೇಂದ್ರ ರೆಡ್ಡಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ವಕ್ಕಂತಂ ವಂಶಿ ಕಥೆ ಬರೆದಿರುವ ಚಿತ್ರವನ್ನು ಎಕೆ ಎಂಟರ್‌ಟೈನ್‌ಮೆಂಟ್ಸ್ ಮತ್ತು ಸುರೇಂದರ್ 2 ಸಿನಿಮಾ ಬ್ಯಾನರ್ ನಡಿ ರಾಮಬ್ರಹ್ಮ ಸುಂಕರ ನಿರ್ಮಾಣ ಮಾಡಿದ್ದಾರೆ. ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದರು : ಸಾರಾ ಅಲಿ ಖಾನ್

    ಸೆನ್ಸೇಷನಲ್ ಮ್ಯೂಸಿಕ್ ಕಂಪೋಸರ್ ಹಿಪ್ ಹಾಪ್ ತಮಿಝಾ ಸಂಗೀತ, ರಸೂಲ್ ಎಲ್ಲೂರು ಕ್ಯಾಮೆರಾ, ರಾಷ್ಟ್ರ ಪ್ರಶಸ್ತಿ ವಿಜೇತ ನವೀನ್ ನೂಲಿ ಸಂಕಲನ, ಅವಿನಾಶ್ ಕೊಲ್ಲಾ ಕಲಾ ನಿರ್ದೇಶನ ಚಿತ್ರಕ್ಕಿದ್ದು, ಅಜಯ್ ಸುಂಕರ, ಪತಿ ದೀಪಾ ರೆಡ್ಡಿ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಈಗಾಗ್ಲೇ ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಟೀಸರ್ ರಿಲೀಸ್ ಮಾಡಿ ಪ್ರಚಾರ ಕಹಳೆ‌ ಮೊಳಗಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಅಖಿಲ್ ಅಕ್ಕಿನೇನಿ ನಟನೆಯ ‘ಏಜೆಂಟ್’ಸಿನಿಮಾದ ಟೀಸರ್ ರಿಲೀಸ್ ಗೆ ಮುಹೂರ್ತ ಫಿಕ್ಸ್…

    ಅಖಿಲ್ ಅಕ್ಕಿನೇನಿ ನಟನೆಯ ‘ಏಜೆಂಟ್’ಸಿನಿಮಾದ ಟೀಸರ್ ರಿಲೀಸ್ ಗೆ ಮುಹೂರ್ತ ಫಿಕ್ಸ್…

    ಟಾಲಿವುಡ್ ಚಿತ್ರರಂಗದ ಭರವಸೆ ನಾಯಕ ಅಖಿಲ್ ಅಕ್ಕಿನೇನಿ ಏಜೆಂಟ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಲು ಸಜ್ಜಾಗಿದ್ದಾರೆ. ಸುರೇಂದ್ರ ರೆಡ್ಡಿ ನಿರ್ದೇಶನದಲ್ಲಿ ತಯಾರಾಗ್ತಿರುವ ಈ ಸಿನಿಮಾದ ಟೀಸರ್ ಇದೇ 15ಕ್ಕೆ ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗ್ತಿದೆ.

    ಹೈ ಬಜೆಟ್ ಸಿನಿಮಾವಾಗಿರುವ ಏಜೆಂಟ್ ಸ್ಪೈ ಥ್ರಿಲ್ಲರ್ ಕಥಾಹಂದರ ಹೊಂದಿದ್ದು, ಈ ಚಿತ್ರಕ್ಕಾಗಿ ಅಖಿಲ್ ಬೇಜಾನ್ ಕಸರತ್ತು ನಡೆಸಿ ಬಾಡಿ ಟ್ರಾನ್ಸ್ ಫಾರ್ಮೆಷನ್ ಮಾಡಿಕೊಂಡಿದ್ದಾರೆ. ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಏಜೆಂಟ್ ಚಿತ್ರದಲ್ಲಿ ಸಾಕ್ಷಿ ವೈದ್ಯಗೆ ಅಖಿಲ್ ಗೆ ಜೋಡಿಯಾಗಿ ನಟಿಸಿದ್ದಾರೆ. ವಕ್ಕಂತಂ ವಂಶಿ ಕಥೆ ಬರೆದಿರುವ ಚಿತ್ರವನ್ನು ಎಕೆ ಎಂಟರ್‌ಟೈನ್‌ಮೆಂಟ್ಸ್ ಮತ್ತು ಸುರೇಂದರ್ 2 ಸಿನಿಮಾ ಬ್ಯಾನರ್ ನಡಿ ರಾಮಬ್ರಹ್ಮ ಸುಂಕರ ನಿರ್ಮಾಣ ಮಾಡಿದ್ದಾರೆ. ಇದನ್ನೂ ಓದಿ:`ಹೊಯ್ಸಳ’ ಡಾಲಿಗೆ ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ ಸಾಥ್

    ಸೆನ್ಸೇಷನಲ್ ಮ್ಯೂಸಿಕ್ ಕಂಪೋಸರ್ ಹಿಪ್ ಹಾಪ್ ತಮಿಝಾ ಸಂಗೀತ, ರಸೂಲ್ ಎಲ್ಲೂರು ಕ್ಯಾಮೆರಾ, ರಾಷ್ಟ್ರ ಪ್ರಶಸ್ತಿ ವಿಜೇತ ನವೀನ್ ನೂಲಿ ಸಂಕಲನ, ಅವಿನಾಶ್ ಕೊಲ್ಲಾ ಕಲಾ ನಿರ್ದೇಶನ ಚಿತ್ರಕ್ಕಿದ್ದು, ಅಜಯ್ ಸುಂಕರ, ಪತಿ ದೀಪಾ ರೆಡ್ಡಿ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಈಗಾಗ್ಲೇ ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ, ಇದೇ ತಿಂಗಳ 15ಕ್ಕೆ ಟೀಸರ್ ಬಿಡುಗಡೆ ಮಾಡುವ ಮೂಲಕ ಪ್ರಚಾರಕ್ಕೆ ಮುನ್ನುಡಿ ಬರೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ದುಡ್ಡು ಕೊಟ್ರೆ ಟ್ರೈನಿಂಗ್‌ ಇಲ್ಲದೇ ಸಿಗುತ್ತೆ ಬ್ಯೂಟಿಪಾರ್ಲರ್ ಸರ್ಟಿಫಿಕೇಟ್..!

    ದುಡ್ಡು ಕೊಟ್ರೆ ಟ್ರೈನಿಂಗ್‌ ಇಲ್ಲದೇ ಸಿಗುತ್ತೆ ಬ್ಯೂಟಿಪಾರ್ಲರ್ ಸರ್ಟಿಫಿಕೇಟ್..!

    ಬೆಂಗಳೂರು: ಬ್ಯೂಟಿ ಪಾರ್ಲರ್‌ಗೆ ಹೆಣ್ಣುಮಕ್ಕಳು ಹೋಗೋದು ಕಾಮನ್. ಕೆಲವರಂತೂ ತಿಂಗಳಿಗೆ ಒಂದು ಬಾರಿಯಾದ್ರೂ ಹೋಗೇ ಹೋಗ್ತಾರೆ. ಆದರೆ ಈಗ ಶಾಕಿಂಗ್ ವಿಷಯ ಬಯಲಾಗಿದೆ.

    ಬ್ಯೂಟಿಷಿಯನ್ಸ್ ಗಳು ನೋಂದಾಯಿತ ಬ್ಯೂಟಿಪಾರ್ಲರ್ ನಲ್ಲಿ ವರ್ಷಗಟ್ಟಲೇ ಟ್ರೈನಿಂಗ್‌ ಮಾಡಿ ಪ್ರಾಕ್ಟಿಕಲ್ ತರಬೇತಿಯನ್ನೂ ಪಡೆದುಕೊಂಡು ಅದಾದ ಬಳಿಕ ಅವರಿಗೆ ಸರ್ಟಿಫಿಕೇಟ್ ನೀಡಲಾಗುತ್ತದೆ. ಆದರೀಗ ನೋಂದಾಯಿತ ಪಾರ್ಲರ್ ಅಸೋಸಿಯೇಷನ್ ಹೆಸರಿನಲ್ಲಿಯೇ 10 ಸಾವಿರ ದುಡ್ಡು ಕೊಟ್ರೇ ಯಾರಿಗೆ ಬೇಕಾದ್ರೂ, ಎಷ್ಟು ಬೇಕಾದ್ರೂ ಪಟಾಫಟ್ ಅಂತಾ ಟ್ರೈನಿಂಗ್‌ ಕೇಳದೇ ಸರ್ಟಿಫಿಕೇಟ್ ಕೊಡುವ ಏಜೆಂಟರು ಹುಟ್ಟುಕೊಂಡಿದ್ದಾರೆ ಎನ್ನುವ ಸ್ಫೋಟಕ ಮಾಹಿತಿ ಬಯಲಾಗಿದೆ. ಇದನ್ನೂ ಓದಿ: ಹನುಮನ ಜನ್ಮಸ್ಥಳಕ್ಕಾಗಿ ನಿಲ್ಲದ ರಾಜ್ಯಗಳ ಕ್ಯಾತೆ – ಹನುಮಂತ ಹುಟ್ಟಿದ್ದು ಗೋವಾದಲ್ಲಿ ಎಂದ ಶ್ರೀನಿವಾಸ್ ಖಲಾಪ್

    ಸ್ವತಃ ಈ ಆರೋಪ ಮಾಡ್ತಾ ಇರೋದು ಕರ್ನಾಟಕ ಬ್ಯೂಟಿ ಪಾರ್ಲರ್ ಅಸೋಸಿಯೇಷನ್. ಇವರದ್ದೇ ಸಂಸ್ಥೆಯ ಹೆಸರು ಬಳಸಿಕೊಂಡು ಸರ್ಟಿಫಿಕೇಟ್ ಮಾಡಿ ಕೆಲ ಏಜೆಂಟ್‌ರು ಮಾರಾಟ ಮಾಡುತ್ತಾ ಇದ್ದಾರೆ ಎಂದು ಸಂಘಟನೆ ಆರೋಪಿಸಿದೆ. ಈ ಸಂಬಂಧ ಮಾತನಾಡಿರುವ ಆಡಿಯೋ ಸಹ ಲೀಕ್ ಆಗಿದೆ. ಇದನ್ನೂ ಓದಿ: ಗೋ ಶಾಲೆಯಲ್ಲಿ ಒಂದು ತಿಂಗಳ ಕಾಲ ಸೇವೆ – ಷರತ್ತು ವಿಧಿಸಿ ಆರೋಪಿಗೆ ಜಾಮೀನು

    ಈ ರೀತಿ ಬೇಕಾಬಿಟ್ಟಿ ದುಡ್ಡಿಗೆ ಸರ್ಟಿಫಿಕೇಟ್ ಮಾರಾಟ ಮಾಡೋದ್ರಿಂದ ಸೈಡ್‌ಎಫೆಕ್ಟ್ ಉಂಟಾಗುತ್ತದೆ. ಸಾಮಾನ್ಯವಾಗಿ ಆಯಾಯ ಚರ್ಮಕ್ಕೆ ಹೊಂದುವ ಪ್ರಾಡೆಕ್ಟ್ ಬಳಕೆ ಮಾಡಬೇಕು. ಕೆಲವು ಬಿಪಿ ಶುಗರ್ ಸಮಸ್ಯೆ ಇರೋರಿಗೆ ಕೆಲ ಪ್ರಾಡೆಕ್ಟ್ ಅಲರ್ಜಿ ಇರುತ್ತೆ. ಇದೆಲ್ಲವನ್ನು ತರಬೇತಿ ಪಡೆದುಕೊಂಡವರಿಗೆ ಅಷ್ಟೇ ಅರ್ಥವಾಗುತ್ತದೆ. ಆದರೆ ಹೀಗೆ ಟ್ರೈನಿಂಗ್‌ ಇಲ್ಲದೇ ಸರ್ಟಿಫಿಕೇಟ್ ಕೊಡುವ ದಂಧೆಯಿಂದ ನಿಜವಾಗಿಯೂ ತರಬೇತಿ ಪಡೆದವರಿಗೆ ಸಮಸ್ಯೆಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

    ಆಡಿಯೋ ನಲ್ಲಿ ಏನಿದೆ?

    • ಏಜೆಂಟ್ – ಅದು ಮಾಡಿಸಿರೋದು ಏಜೆಂಟ್
      ಅನಿತಾ – ಯಾರು?
    • ಏಜೆಂಟ್ – ಅದಕ್ಕೆ ಒಬ್ರು ಏಜೆಂಟ್ ರ‍್ತಾರೆ ಅವ್ರು ಮಾಡಿಸೋದು
      ಅನಿತಾ – ಹೋ ಅದಕ್ಕೆ ಏಜೆಂಟ್ ಬೇರೆ ರ‍್ತಾರಾ?
    • ಅನಿತಾ – ನಮ್ಗೆ ಬೇಕು ಅಂದ್ರೆ?
      ಏಜೆಂಟ್ – ಅದನ್ನು ಹತ್ತುಸಾವಿರ ಕೊಟ್ಟುಮಾಡಿಸಿರೋದು
    • ಏಜೆಂಟ್ – ನಿಮ್ಗೆ ಬೇಕಾದ್ರೇ ಹೇಳಿ ಮಾಡಿಸಿಕೊಡ್ತೀನಿ ನಾನು
      ಅನಿತಾ – ಹಂಗಾದ್ರೇ ಬೇಕು 2 ಸರ್ಟಿಫಿಕೇಟ್
    • ಏಜೆಂಟ್ – 2 ಯಾಕೆ 10 ಕೊಡ್ತೀನಿ ಬೇಕಾದ್ರೇ

  • ಎರಡು ರಾತ್ರಿ ನನ್ನೊಂದಿಗೆ ಕಳೆದ್ರೆ ಬಾಕಿ ಸಾಲ ಮನ್ನಾ – ಬ್ಯೂಟಿಷಿಯನ್‍ಗೆ ಕಿರುಕುಳ

    ಎರಡು ರಾತ್ರಿ ನನ್ನೊಂದಿಗೆ ಕಳೆದ್ರೆ ಬಾಕಿ ಸಾಲ ಮನ್ನಾ – ಬ್ಯೂಟಿಷಿಯನ್‍ಗೆ ಕಿರುಕುಳ

    – 4 ಸಾವಿರ ಸಾಲ ನೀಡಿ, 8,000 ವಾಪಸ್ ಕೊಡುವಂತೆ ಒತ್ತಾಯ

    ಬೆಂಗಳೂರು: ಎರಡು ರಾತ್ರಿ ನನ್ನೊಂದಿಗೆ ಕಳೆದರೆ ತೆಗೆದುಕೊಂಡಿರುವ ಸಾಲವನ್ನು ಮನ್ನಾ ಮಾಡುವುದಾಗಿ ಏಜೆಂಟ್ ಓರ್ವ ಬ್ಯೂಟಿಷಿಯನ್‍ಗೆ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಜೀವನ್ ಭೀಮಾನಗರ ನಿವಾಸಿ ಅಕ್ಷತಾಗೆ (ಹೆಸರು ಬದಲಾಯಿಸಲಾಗಿದೆ) ಸಾಲ ನೀಡಿದ್ದ ಏಜೆಂಟ್ ಓರ್ವ ಕಿರುಕುಳ ನೀಡಿದ್ದಾನೆ. ಅಕ್ಷತಾ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಕೊರೊನಾದಿಂದ ಕೆಲಸ ಕಳೆದುಕೊಂಡಿದ್ದು, ಆರ್ಥಿಕ ಸಮಸ್ಯೆ ಉಂಟಾಗಿದೆ. ಹೀಗಾಗಿ ಲಾಕ್‍ಡೌನ್ ಜಾರಿಗೆ ಬರುವ ಮೊದಲು ಸಾಲವನ್ನು ತೆಗೆದುಕೊಂಡಿದ್ದರು. ಆದರೆ ಸಾಲವನ್ನು ಮರು ಪಾವತಿಸುವಂತೆ ಏಜೆಂಟರು ಆಕೆಗೆ ನಿರಂತರವಾಗಿ ಫೋನ್ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ಬ್ಯೂಟಿಷಿಯನ್ ಏಜೆಂಟರ ಕಿರುಕುಳವನ್ನು ಸಹಿಸಲಾಗದೆ ಪೊಲೀಸರಿಗೆ ದೂರು ನೀಡಿದ್ದಾರೆ.

    ಬ್ಯೂಟಿಷಿಯನ್ ಜೀವನ್‍ಭೀಮಾನಗರ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಆದರೂ ಪೊಲೀಸರು ಕ್ರಮ ತೆಗೆದುಕೊಂಡಿಲ್ಲ ಎಂದು ಬ್ಯೂಟಿಷಿಯನ್ ಆರೋಪಿಸಿದ್ದಾರೆ. ನನಗೆ ಬಂದಂತಹ ಮೆಸೇಜ್ ಮತ್ತು ಏಜೆಂಟರ ನಂಬರ್‌ಗಳನ್ನು ಸ್ಕ್ರೀನ್‍ಶಾಟ್ ತೆಗೆದು ಪೊಲೀಸರಿಗೆ ನೀಡಿದ್ದೇನೆ. ಆದರೂ ಪೊಲೀಸರು ಪ್ರಕರಣವನ್ನು ದಾಖಲಿಸಿಲ್ಲ. ಮೇಲ್ ಮಾಡುವ ಮೂಲಕ ನಾನು ಪೊಲೀಸರಿಗೆ ದೂರು ಕಳುಹಿಸಿದ್ದೇನೆ ಎಂದು ಹೇಳಿದ್ದಾರೆ.

    ನಾನು ಮಾರ್ಚ್ ತಿಂಗಳಲ್ಲಿ ಆಸ್ಪತ್ರೆಗಾಗಿ 4,000 ರೂ. ಸಾಲ ಪಡೆದುಕೊಂಡಿದ್ದೆ. ಸಾಲವನ್ನು ಮರುಪಾವತಿಸಲು ನನಗೆ 15 ದಿನಗಳ ಕಾಲ ಸಮಯ ನೀಡಿದ್ದರು. ಆದರೆ ನಾನು ಕೆಲಸವನ್ನು ಕಳೆದುಕೊಂಡಿದ್ದರಿಂದ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಸಲು ಸಾಧ್ಯವಾಗಿಲ್ಲ. ಆಗ ನನಗೆ ಇನ್ನೂ ಸ್ವಲ್ಪ ಸಮಯ ನೀಡುವಂತೆ ಮನವಿ ಮಾಡಿಕೊಂಡೆ. ಆದರೆ ಅವರು ಸಾಲ ಹಿಂದಿರುಗಿಸಲು ವಿಳಂಬ ಮಾಡಿದ್ದಕ್ಕೆ ದಂಡವನ್ನು ಸೇರಿಸಲು ಪ್ರಾರಂಭಿಸಿದರು. ಅದು ಏಪ್ರಿಲ್ ಅಂತ್ಯದ ವೇಳೆಗೆ 8,000 ಆಗಿತ್ತು. ನನಗೆ ಯಾವುದೇ ಕೆಲಸವಿಲ್ಲದ ಕಾರಣ ಹಣ ವಾಪಸ್ ನೀಡಲು ಸಾಧ್ಯವಾಗಿಲ್ಲ ಎಂದು ಬ್ಯೂಟಿಷಿಯನ್ ಹೇಳಿದ್ದಾರೆ.

    ಏಜೆಂಟ್ ಓರ್ವ ನನಗೆ ನಿರಂತರವಾಗಿ ಮೆಸೇಜ್ ಕಳುಹಿಸುತ್ತಿದ್ದನು. ಒಂದು ವೇಳೆ ನಾನು ಹಣ ಮರುಪಾವತಿ ಮಾಡದಿದ್ದರೆ ಸಾರ್ವಜನಿಕವಾಗಿ ಅವಮಾನಿಸುವುದಾಗಿ ಬೆದರಿಕೆ ಹಾಕಿದನು. ಕೊನೆಗೆ ನಾನು ಹೇಗೋ ಸ್ವಲ್ಪ ಹಣವನ್ನು ಹೊಂದಿಸಿ ಸಾಲ ತೀರಿಸಿದೆ. ಆದರೂ ಏಜೆಂಟ್ ಎರಡು ರಾತ್ರಿ ನನ್ನೊಂದಿಗೆ ಕಳೆಯಲು ಒಪ್ಪಿದರೆ ಉಳಿದ ಬಾಕಿ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿದನು. ಅಲ್ಲದೇ ನನ್ನೊಂದಿಗೆ ಅಶ್ಲೀಲವಾಗಿ ಮಾತನಾಡುತ್ತಾ ಕಿರುಕುಳ ನೀಡುತ್ತಿದ್ದಾನೆ ಎಂದು ನೊಂದ ಬ್ಯೂಟಿಷಿಯನ್ ಹೇಳಿಕೊಂಡಿದ್ದಾರೆ.

    ನಾನು ಪೊಲೀಸ್ ಠಾಣೆಗೆ ಹೋಗಿ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಪೊಲೀಸರು ಆ ನಂಬರಿಗೆ ಫೋನ್ ಮಾಡಿದರೆ ಕನೆಕ್ಟ್ ಆಗುತ್ತಿಲ್ಲ. ಸದ್ಯಕ್ಕೆ ಪೊಲೀಸರು ಈ ಬಗ್ಗೆ ತನಿಖೆ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.

  • 5 ವರ್ಷದಲ್ಲಿ ಹಣ ಡಬಲ್ – 150 ಜನರಿಗೆ ಪಂಗನಾಮ ಹಾಕಿದ ಕಂಪನಿ

    5 ವರ್ಷದಲ್ಲಿ ಹಣ ಡಬಲ್ – 150 ಜನರಿಗೆ ಪಂಗನಾಮ ಹಾಕಿದ ಕಂಪನಿ

    ಬೀದರ್: ಹಣ ಡಬಲ್ ಮಾಡಿಕೊಡುವುದಾಗಿ ಹೇಳಿ ದುಡ್ಡು ಕಟ್ಟಿಸಿಕೊಂಡು “ಗ್ರೀಮ್ ಹೋಮ್ ಅಂಡ್ ಫಾಮ್9 ಹೌಸ್” ಎಂಬ ಖಾಸಗಿ ಕಂಪನಿ ಗಡಿ ಜಿಲ್ಲೆಯ 100 ರಿಂದ 150 ಜನರಿಗೆ ಮಹಾದೋಖಾ ಮಾಡಿದೆ. ಪಾಲಿಸಿ ಕಟ್ಟಿದ ಜನರು ಏಜೆಂಟ್ ಮನೆಗೆ ಹೋಗಿ ಇಂದು ಚಳಿ ಬಿಡಿಸಿದ ಘಟನೆ ನಗರದ ಕುಂಭಾರವಾಡ ಕಾಲೋನಿಯಲ್ಲಿ ನಡೆದಿದೆ.

    ಹೆಂಡತಿ ಕೃಷಿ ಇಲಾಖೆ ಹಾಗೂ ಪತಿ ರಾಮಪ್ಪ ಪಶು ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಗ್ರೀಮ್ ಹೋಮ್ ಅಂಡ್ ಫಾಮ್9 ಹೌಸ್ ಎಂಬ ಕಂಪನಿಯಲ್ಲಿ ಹಲವು ತಿಂಗಳ ಹಿಂದೆ ದಂಪತಿ ಏಜೆಂಟಾಗಿ ಕೆಲಸ ಮಾಡುತ್ತಿದ್ದರು. ಇವರa ಮನೆಯ ಬಳಿ ಹಣ ಕಳೆದುಕೊಂಡವರು ಮುತ್ತಿಗೆ ಹಾಕಿದ್ದಾರೆ.

    5 ವರ್ಷದಲ್ಲಿ ಹಣ ಡಬಲ್ ಆಗುವ ಆಸೆಯಿಂದ ನೂರಾರು ಜನರು ಪ್ರತಿ ತಿಂಗಳು 500 ರಿಂದ 2000 ವರೆಗೆ ದುಡ್ಡು ಕಟ್ಟಿದ್ದರು. ಈಹ ಖಾಸಗಿ ಕಂಪನಿ ಮುಚ್ಚಿಕೊಂಡು ಹೋದ ನಂತರ ಇದು ಬೋಗಸ್ ಅಂಥಾ ಗೊತ್ತಾಗಿ ಜನರು ಕಂಗಾಲಾಗಿದ್ದಾರೆ. ಇಂದು ಏಜೆಂಟ್ ರಾಮಪ್ಪ ಮನೆ ಖಾಲಿ ಮಾಡುವ ವಿಷಯ ತಿಳಿದು ಆಕ್ರೋಶಗೊಂಡ ಜನರು, ಮನೆ ಬಳಿ ಹೋಗಿ ನಮ್ಮ ಹಣ ನಮಗೆ ವಾಪಸ್ ಕೊಡಿಸಿ ಎಂದು ಎಜೆಂಟ್ ಗೆ ಚಳಿ ಬಿಡಿಸಿದ್ದಾರೆ.

    ಜನರು ಮನೆ ಮುಂದೆ ಬಂದು ಎಜೆಂಟ್ ರಾಮಪ್ಪ ವಿರುದ್ಧ ದಿಕ್ಕಾರ ಕೂಗಿದ್ದಾರೆ. ಹಣ ಡಬಲ್ ಮಾಡಿಕೊಡುವ ಆಸೆ ಹೇಳಿ ಇಂದು ರಾಮಪ್ಪ ಮನೆ ಖಾಲಿ ಮಾಡುತ್ತಿದ್ದಾನೆ ಎಂದು ಹಣ ಕಟ್ಟಿದವರು ಹೇಳುತ್ತಿದ್ದಾರೆ. ಇತ್ತ ಎಲ್ಲರು ನಮ್ಮ ಜೊತೆ ಕೈ ಜೋಡಿಸಿ ನಾನು ಕೂಡಾ ಕಂಪನಿ ಜೊತೆ ಮಾತನಾಡಿ ಹಣ ವಾಪಸ್ ಕೊಡಿಸುತ್ತೆನೆ ಎಂದು ಎಜೆಂಟ್ ಪುತ್ರ ಹಣ ಕಟ್ಟಿದವರಿಗೆ ಭರವಸೆ ನೀಡುತ್ತಿದ್ದಾನೆ.

  • ಸಿಸಿಬಿ ಸಮಯ ಪ್ರಜ್ಞೆಯಿಂದ ತಪ್ಪಿದ ಮತ್ತೊಂದು ಮೆಗಾ ಪೇಪರ್ ಲೀಕ್ ಪ್ಲ್ಯಾನ್

    ಸಿಸಿಬಿ ಸಮಯ ಪ್ರಜ್ಞೆಯಿಂದ ತಪ್ಪಿದ ಮತ್ತೊಂದು ಮೆಗಾ ಪೇಪರ್ ಲೀಕ್ ಪ್ಲ್ಯಾನ್

    ಬೆಂಗಳೂರು: ಸಿಸಿಬಿ ಪೊಲೀಸರ ಸಮಯ ಪ್ರಜ್ಞೆಯಿಂದ ಮತ್ತೊಂದು ಮೆಗಾ ಪೇಪರ್ ಲೀಕ್ ಪ್ಲ್ಯಾನ್ ತಪ್ಪಿದ್ದು, ಈ ಸಂಬಂಧ ಸಿಸಿಬಿ ಪೊಲೀಸರು ಐವರು ಏಜೆಂಟರನ್ನು ಬಂಧಿಸಿದ್ದಾರೆ.

    ಇಂದು ರಾಜ್ಯಾದ್ಯಂತ ಪಿಎಸ್‍ಐ ಪರೀಕ್ಷೆ ಇತ್ತು. ಇದೇ ವೇಳೆ ಪ್ರಶ್ನೆ ಪತ್ರಿಕೆಯನ್ನು ಲೀಕ್ ಮಾಡಲು ಏಜೆಂಟ್ ಗಳು ಸಂಚು ರೂಪಿಸಿದ್ದರು. ಅದೇ ರೀತಿ ಪೊಲೀಸರ ಕಣ್ಣುತಪ್ಪಿಸಿ ಲೀಕ್ ಮಾಡಲು ಮುಂದಾಗಿದ್ದರು. ಆದರೆ ಖಚಿತ ಮಾಹಿತಿ ಸಂಗ್ರಹಿಸಿ ಸಿಸಿಬಿ ಪೊಲೀಸರು ದಾಳಿ ಮಾಡಿ ಗದಗಿನ ಗಜೇಂದ್ರಗಡದಲ್ಲಿ ಬೆಂಗಳೂರು ಮೂಲದ ಮೂವರು ಹಾಗೂ ಗದಗ ಮೂಲದ ಇಬ್ಬರು ಸೇರಿ ಒಟ್ಟು ಐವರು ಏಜೆಂಟರನ್ನು ಬಂಧಿಸಿದ್ದಾರೆ.

    ಪೇಪರ್ ಲೀಕ್ ಬಗ್ಗೆ ಶನಿವಾರ ಸಂಜೆಯೇ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕಿದ್ದರು. ಕೂಡಲೇ ಎಂಟು ತಂಡಗಳನ್ನು ನಿಯೋಜನೆ ಮಾಡಿ ಉತ್ತರ ಕರ್ನಾಟಕ ಸೇರಿ ಹಲವೆಡೆ ಮಿಂಚಿನ ಕಾರ್ಯಾಚರಣೆ ಮಾಡಿದ್ದಾರೆ. ಆಗ ಪೇಪರ್ ಲೀಕ್ ಮಾಡಲು ಪ್ಲ್ಯಾನ್ ಮಾಡಿದ್ದವರನ್ನೆ ಸಿಸಿಬಿ ಪೊಲೀಸ್ ಬಂಧಿಸಿದ್ದಾರೆ.

    ಸಿಸಿಬಿಯ ಎಸಿಪಿ ವೇಣುಗೋಪಾಲ್ ನೇತೃತ್ವದ ತಂಡ ಕಾರ್ಯಾಚರಣೆ ಮಾಡಿದೆ. ಆದರೆ ದಾಳಿ ವೇಳೆ ಇನ್ನೂ ನಾಲ್ವರು ಏಜೆಂಟ್ ಗಳು ಪರಾರಿಯಾಗಿದ್ದು, ನಾಲ್ವರು ಏಜೆಂಟ್ ಗಳಿಗೆ ಶೋಧಕಾರ್ಯ ಮುಂದುವರಿದಿದೆ. ಏಜೆಂಟ್ ಗಳು ಪೇಪರ್ ಇಲ್ಲದೆಯೇ ಅಭ್ಯರ್ಥಿಗಳ ಬಳಿ ಹಣ ಪಡೆಯಲು ಮುಂದಾಗಿದ್ದು, ನೂರಾರು ಅಭ್ಯರ್ಥಿಗಳನ್ನ ಸಂಪರ್ಕಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ವೇಳೆ ಮಾಹಿತಿ ಪಡೆದು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

    ಸದ್ಯ ಐವರು ಏಜೆಂಟ್ ಗಳನ್ನ ಬಂಧಿಸಿ ಗದಗದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಈ ಹಿಂದೆ ಇವರು ಪೊಲೀಸ್ ಪೇದೆ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ದರು. ಆದರೆ ಈಗ ಸಿಸಿಬಿ ಸಮಯ ಪ್ರಜ್ಞೆಯಿಂದ ಪಿಎಸ್‍ಐ ಪ್ರಶ್ನೆ ಪತ್ರಿಕೆ ಸೋರಿಕೆ ತಪ್ಪಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅರೆಬೆತ್ತಲೆ ಮಹಿಳೆಯರ ಮೇಲೆ ಅಪಾರ್ಟ್ ಮೆಂಟ್ ಚಿತ್ರ ಬಿಡಿಸಿ ಪ್ರಚಾರ!

    ಅರೆಬೆತ್ತಲೆ ಮಹಿಳೆಯರ ಮೇಲೆ ಅಪಾರ್ಟ್ ಮೆಂಟ್ ಚಿತ್ರ ಬಿಡಿಸಿ ಪ್ರಚಾರ!

    ಬೀಜಿಂಗ್: ಅರೆಬೆತ್ತಲೆ ಮಹಿಳೆಯರ ಮೇಲೆ ಅಪಾರ್ಟ್ ಮೆಂಟ್ ಚಿತ್ರ ಬಿಡಿಸಿ ಚೀನಾದ ಪ್ರಾಪರ್ಟಿ ಡೆವಲಪರ್ ಗಳು ವಿಲಕ್ಷಣವಾಗಿ ಕಾಂಪ್ಲೆಕ್ಸ್ ಗಳ ಪ್ರಚಾರ ಮಾಡುತ್ತಿದ್ದಾರೆ.

    ದಕ್ಷಿಣ ಚೀನಾದ ಗುವಾಂಗ್ಕ್ಸಿ ಝುವಾಂಗ್ ಸ್ವಾಯತ್ತ ಪ್ರದೇಶದ ಪ್ರಾಪರ್ಟಿ ಡೆವಲಪರ್ ನವೆಂಬರ್ 30ರಂದು ಘಟನೆ ನಡೆದಿದೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು, ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ ಎಂದು ವರದಿಯಾಗಿದೆ.

    ವಿಡಿಯೋದಲ್ಲಿ ಏನಿದೆ?:
    ಪ್ರಾಪರ್ಟಿ ಡೆವಲಪರ್ ಗಳು ಖರೀದಿದಾರರನ್ನು ಸೆಳೆಯಲು ನಾಲ್ವರು ಮಹಿಳೆಯರನ್ನು ಅರೆಬೆತ್ತಲಾಗಿ ಮಾಡಿ. ಅವರ ಬೆನ್ನಿನ ಮೇಲೆ ಅಪಾರ್ಟ್ ಮೆಂಟ್ ಒಳ ನಕ್ಷೆ ಹಾಗೂ ಹೊಸ ವಿನ್ಯಾಸವನ್ನು ಬಿಡಿಸಿ, ಸಾಲಾಗಿ ಕೂರಿಸಲಾಗಿತ್ತು. ಬಳಿಕ ಒಬ್ಬೊರನ್ನೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಗ್ರಾಹಕರು ಇದನ್ನು ನೋಡಿ ಅಪಾರ್ಟ್ ಮೆಂಟ್ ಖರೀದಿಗೆ ಮುಂದಾಗುತ್ತಾರೆ ಎನ್ನುವ ಉದ್ದೇಶದಿಂದ ಹೀಗೆ ಮಾಡಲಾಗಿದೆ.

    ಮಹಿಳೆಯ ಮೈ ಮೇಲೆ ಕೇವಲ ಒಂದು ತುಂಡು ಬಟ್ಟೆ, ಎದೆಯ ಭಾಗದಲ್ಲಿ ಚಿಟ್ಟೆ ಮತ್ತು ಹೂವುಗಳ ಚಿತ್ತಾರ ಬಿಡಿಸಿಕೊಂಡಿದ್ದಾರೆ. ಇದು ಸಾರ್ವಜನಿಕರ ಕೋಪಕ್ಕೆ ಕಾರಣವಾಗಿದೆ.

    ಇದೊಂದು ಅಶ್ಲೀಲ ಮತ್ತು ಅವಮಾನಕರ ಘಟನೆ ಎಂದು ಸ್ಥಳೀಯರು ಟೀಕಿಸಿದ್ದಾರೆ. ಈ ಕುರಿತು ಅಧಿಕಾರಿಗಳು ತನಿಖೆ ಕೈಗೊಂಡಿದ್ದು, ರಿಯಲ್ ಎಸ್ಟೇಟ್ ಕಚೇರಿಯನ್ನು ಬಂದ್ ಮಾಡಲಾಗಿದೆ ಎಂದು ಚೀನಾದ ಮಾಧ್ಯಮವೊಂದರ ವರದಿ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv