Tag: agency

  • ಹಜ್, ಉಮ್ರಾ ಯಾತ್ರೆ ಹೆಸ್ರಲ್ಲಿ ಪಂಗನಾಮ- ಕೋಟ್ಯಂತರ ರೂ. ವಂಚಿಸಿ ಎಸ್ಕೇಪ್

    ಹಜ್, ಉಮ್ರಾ ಯಾತ್ರೆ ಹೆಸ್ರಲ್ಲಿ ಪಂಗನಾಮ- ಕೋಟ್ಯಂತರ ರೂ. ವಂಚಿಸಿ ಎಸ್ಕೇಪ್

    – ಐಜಿಪಿ ಮೊರೆ ಹೋದ ನೊಂದ ಮುಸ್ಲಿಮರು

    ಬಳ್ಳಾರಿ: ಜೀವನದಲ್ಲೊಮ್ಮೆ ಹಜ್ ಯಾತ್ರೆ ಮಾಡುವುದು ಪ್ರತಿಯೊಬ್ಬ ಮುಸ್ಲಿಮನ ಕನಸಾಗಿರುತ್ತದೆ. ಹಾಗಾಗಿ ಅದೆಷ್ಟೇ ಜನ ಬಡವರಾದರೂ ಸರಿ ಹಣ ಕೂಡಿಟ್ಟು ಜೀವನದಲ್ಲಿ ಒಮ್ಮೆಯಾದರೂ ಹಜ್ ಯಾತ್ರೆಗೆ ಹೋಗುತ್ತಾರೆ. ಆದರೆ ಏಜೆನ್ಸಿಯೊಂದು ಹಜ್ ಉಮ್ರಾ ಯಾತ್ರೆ ಹೆಸರಲ್ಲಿ ನೂರಾರು ಜನರಿಗೆ ಪಂಗನಾಮ ಹಾಕಿ ಕೋಟ್ಯಂತರ ರೂಪಾಯಿ ವಂಚಿಸಿ ಪರಾರಿಯಾಗಿದೆ.

    ಬಡ ಅಮಾಯಕ ಜನರನ್ನು ನಂಬಿಸಿ, ವಂಚಿಸುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ನಮ್ಮ ಜನ ಇಂತಹ ಅದೆಷ್ಟೋ ಘಟನೆಗಳು ನಡೆದರೂ ಇನ್ನೂ ಬುದ್ಧಿ ಕಲಿತಿಲ್ಲ. ಐಎಂಎ ವಂಚಕ ಮನ್ಸೂರ್ ಖಾನ್ ರೀತಿಯಲ್ಲೇ ಬಳ್ಳಾರಿಯಲ್ಲೊಬ್ಬ ನೂರಾರು ಜನರಿಗೆ ಪಂಗನಾಮ ಹಾಕಿದ್ದಾನೆ. ಹೊಸಪೇಟೆಯ ಮೆಹಬೂಬ್ ಸಾಬ್ ಪವಿತ್ರ ಸ್ಥಳವಾದ ಮೆಕ್ಕಾ ಮದೀನಾಕ್ಕೆ ಕಳಿಸುತ್ತೇವೆಂದು ಒಬ್ಬೊಬ್ಬರಿಂದ ತಲಾ 30 ರಿಂದ 60 ಸಾವಿರ ರೂಗಳಂತೆ 150ಕ್ಕೂ ಹೆಚ್ಚು ಜನರಿಂದ ಹಣ ಪೀಕಿ ಪರಾರಿಯಾಗಿದ್ದಾನೆ. ವಂಚನೆಗೊಳಗಾದ ನೂರಾರು ಜನ ಈಗ ಯಾತ್ರೆಯೂ ಇಲ್ಲದೇ ಹಣವೂ ಸಿಗದೇ ಕಣ್ಣಿರಿಡುತ್ತಿದ್ದಾರೆ.

    ಯಾತ್ರೆಗೆ ಹೋಗಲು ಹಣ ಕೊಟ್ಟವರು ದಿನನಿತ್ಯ ಈತನ ಕಚೇರಿಗೆ ಬಂದು ವಾಪಸ್ ಆಗಿದ್ದಾರೆ. ಆದರೆ ಈತ ಮಾತ್ರ ಫೋನ್ ಸ್ವಿಚ್ ಆಫ್ ಮಾಡಿಕೊಂಡು, ಕಚೇರಿಗೆ ಬೀಗ ಹಾಕಿ ಎಸ್ಕೇಪ್ ಆಗಿದ್ದಾನೆ. ಹೀಗಾಗಿ ನೂರಾರು ಜನರಿಗೆ ದಿಕ್ಕೇ ತೋಚದಂತಾಗಿದೆ. ಆತ್ತ ಮೋಸ ಹೋದ ಜನರು ಹಣವೂ ಇಲ್ಲದೆ ಯಾತ್ರೆಗೂ ಹೋಗದೆ ಬಳ್ಳಾರಿ ಐಜಿಪಿ ಎಂ.ನಂಜುಂಡಸ್ವಾಮಿಯವರಿಗೆ ದೂರು ಕೊಟ್ಟಿದ್ದಾರೆ.

    ಬಳ್ಳಾರಿಯಲ್ಲಿ ಕಳೆದೆರಡು ವರ್ಷಗಳಿಂದ ಹಜ್ ಉಮ್ರಾ ಯಾತ್ರೆ ಹೆಸರಿನಲ್ಲಿ ಕೋಟಿ ಕೋಟಿ ವಂಚನೆಯಾಗುತ್ತಿದೆ. ಬಡ ಹಾಗೂ ಮಧ್ಯಮ ವರ್ಗದ ಮುಸ್ಲಿಂ ಸಮಾಜದವರನ್ನೇ ಟಾರ್ಗೆಟ್ ಮಾಡುವ ಇಂತಹ ವಂಚಕರು ಯಾತ್ರೆ ಹೆಸರಲ್ಲಿ ಪಂಗನಾಮ ಹಾಕ್ತಿದ್ದಾರೆ. ಹೀಗಾಗಿ ಪೊಲೀಸ್ ಅಧಿಕಾರಿಗಳು ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಅಮಾಯಕರನ್ನು ರಕ್ಷಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಹಜ್ ಯಾತ್ರೆ ಪ್ರಕರಣದಲ್ಲಿ ಮೋಸಕ್ಕೊಳಗಾದ ಬಡವರಿಗೆ ಸರ್ಕಾರದಿಂದ ಯಾತ್ರೆಗೆ ಅವಕಾಶ: ಜಮೀರ್

    ಹಜ್ ಯಾತ್ರೆ ಪ್ರಕರಣದಲ್ಲಿ ಮೋಸಕ್ಕೊಳಗಾದ ಬಡವರಿಗೆ ಸರ್ಕಾರದಿಂದ ಯಾತ್ರೆಗೆ ಅವಕಾಶ: ಜಮೀರ್

    ಬೆಂಗಳೂರು: ಹಜ್ ಯಾತ್ರೆ ಪ್ರಕರಣದಲ್ಲಿ ಮೋಸಕ್ಕೆ ಒಳಗಾದ ಬಡ ಕುಟುಂಬಕ್ಕೆ ಸರ್ಕಾರವೇ ಉಚಿತ ಹಜ್ ಯಾತ್ರೆಗೆ ಅವಕಾಶ ಕಲ್ಪಿಸಿಕೊಡಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.

    ತಿಲಕ್ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಚಿವರು, ಮೋಸಕ್ಕೆ ಒಳಗಾದ 113 ಜನರು ಬಡವರೆಂದು ಕೇಳಿಬಂದಿದೆ. ಮೂರ್ನಾಲ್ಕು ವರ್ಷಗಳಿಂದ ಹಣ ಕೂಡಿಸಿ ಹಜ್ ಯಾತ್ರೆಗೆ ಸಿದ್ಧತೆ ಮಾಡಿಕೊಂಡಿದ್ದರೆಂದು ನನ್ನ ಬಳಿ ಅಳಲು ತೋಡಿಕೊಂಡಿದ್ದಾರೆ ಎಂದು ಹೇಳಿದರು.

    ಮೋಸಕ್ಕೆ ಒಳಗಾದವರ 113 ಜನರ ಬಗ್ಗೆ ಮಾಹಿತಿ ಕಲೆ ಹಾಕಿ, ಅತ್ಯಂತ ಬಡವರನ್ನು ಗುರುತಿಸಲಾಗುತ್ತದೆ. ಅವರ ಸಂಖ್ಯೆ 20ಕ್ಕೂ ಹೆಚ್ಚಾದರೂ ಸರಿ, ಅವರಿಗೆ ಸರ್ಕಾರದಿಂದ ಹಜ್ ಯಾತ್ರೆಗೆ ಕಳುಹಿಸಲಾಗುತ್ತದೆ. ಒಂದು ವೇಳೆ ಸರ್ಕಾರ ಒಪ್ಪದಿದ್ದರೆ ನನ್ನ ಸ್ವಂತ ಹಣದಲ್ಲಿ ಅವರ ಯಾತ್ರೆಗೆ ಖರ್ಚು ಮಾಡುತ್ತೇನೆ ಎಂದು ಸಚಿವರು ಭರವಸೆ ನೀಡಿದ್ದಾರೆ.

    ಏನಿದು ಹಜ್ ಯಾತ್ರೆ ಪ್ರಕರಣ?
    ಜಯನಗರದ ‘ಹರೀಂ ಟೂರ್ಸ್’ ಏಜೆನ್ಸಿ ಮಾಲೀಕ ಸಿಗ್ಬತ್‍ವುಲ್ಲಾ ಷರೀಫ್ ರಿಯಾಯ್ತಿ ದರದಲ್ಲಿ ಹಜ್ ಯಾತ್ರೆಗೆ ಕರೆದುಕೊಂಡು ಹೋಗುವುದಾಗಿ 113 ಮಂದಿಯಿಂದ ಹಣ ಸಂಗ್ರಹಿಸಿದ್ದರು. 15 ವರ್ಷಗಳಿಂದ ಏಜೆನ್ಸಿ ನಡೆಸುತ್ತಿರುವ ಸಿಗ್ಬತ್‍ವುಲ್ಲಾ ಹಾಗೂ ಮಕ್ಕಳು ಇದರಲ್ಲಿ ಭಾಗಿಯಾಗಿದ್ದರು.

    ಹಜ್ ಯಾತ್ರೆಯ ಕುರಿತು ಜಯನಗರ ಸುತ್ತಮುತ್ತ ಪ್ರಚಾರ ಮಾಡಿದ್ದರು. ಅದನ್ನು ನಂಬಿದ ಕೆಲ ಸ್ಥಳೀಯರು, ಬೇರೆ ಬೇರೆ ಊರುಗಳಲ್ಲಿ ನೆಲೆಸಿರುವ ತಮ್ಮ ಸಂಬಂಧಿಕರಿಗೂ ವಿಷಯ ತಿಳಿಸಿದ್ದರು. ಈ ಸೌಲಭ್ಯ ಪಡೆಯಲು 113 ಮಂದಿ ತಲಾ 3.20 ಲಕ್ಷ ರೂ. ಹಾಗೂ ತಮ್ಮ ಪಾಸ್ ಪೋರ್ಟ್ ಗಳನ್ನು ಏಜೆನ್ಸಿಗೆ ಕೊಟ್ಟಿದ್ದರು.

    ಜುಲೈ 30ರಂದು ಹಣ ಪಾವತಿ ಮಾಡಿದ್ದ ವ್ಯಕ್ತಿಯೊಬ್ಬರು ತಮ್ಮ ಯಾತ್ರೆಯ ಕುರಿತು ವಿಚಾರಿಸಲು ಬಂದಾಗ, ನೀವು ಯಾರು? ನಮಗೆ ನೀವು ಹಣ ನೀಡಿಲ್ಲ. ಇನ್ನೊಮ್ಮೆ ಕಚೇರಿ ಕಡೆಗೆ ಬಂದರೆ ಜೀವಸಹಿತ ಬಿಡುವುದಿಲ್ಲ ಎಂದು ಸಿಗ್ಬತ್‍ವುಲ್ಲಾ ಜೀವ ಬೆದರಿಕೆ ಹಾಕಿದ್ದರಂತೆ. ಇವರ ವಿರುದ್ಧ ಮೈಸೂರಿನ ಎನ್.ಆರ್.ಮೊಹಲ್ಲಾ ನಿವಾಸಿ ಮೊಹಮದ್ ಅರಾಫತ್ ಶಫಿ ಎಂಬುವರು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಅವರಿಗೆ ದೂರು ಕೊಟ್ಟಿದ್ದರು. ವಂಚಕರ ವಿರುದ್ಧ ಕ್ರಮಕೈಗೊಳ್ಳುವಂತೆ ಕಮಿಷನರ್ ತಿಲಕ್ ನಗರ ಪೊಲೀಸರಿಗೆ ಸೂಚಿಸಿದ್ದರು.

    ತಮ್ಮನ್ನು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸುತ್ತಾರೆ ಎಂದು ಅರಿತ ಆರೋಪಿಗಳು ಏಜೆನ್ಸಿ ಮುಚ್ಚಿ ತಲೆ ಮರೆಸಿಕೊಂಡು ಹೋಗಿದ್ದರು. ಅವರ ಪತ್ತೆಗಾಗಿ ಡಿಸಿಪಿ ವಿಶೇಷ ತಂಡ ರಚಿಸಿದ್ದರು. ಆ ತಂಡವು ಆರೋಪಿಗಳ ಮೊಬೈಲ್ ಕರೆ ಮಾಹಿತಿ ಆಧಾರ ಮೇಲೆ ಅಜ್ಮೇರ್ ಹಾಗೂ ಮುಂಬೈನಲ್ಲಿ ಇರುವುದನ್ನು ಖಚಿತಪಡಿಸಿಕೊಂಡು ಬಲೆ ಬೀಸಿದ್ದರು. ಬುಧವಾರ ಅವರನ್ನು ಬಂಧಿಸಿ ತಿಲಕ್ ನಗರ ಪೊಲೀಸ್ ಠಾಣೆಗೆ ತಂದಿದ್ದರು.

    ಸಿಗ್ಬತ್‍ವುಲ್ಲಾ, ಅವರ ಮಕ್ಕಳಾದ ರೆಹಮಾನ್, ರಿಜ್ವಾನ್, ಏಜೆಂಟರಾದ ತೌಸಿಫ್, ಮಹಮದ್ ಮಾಮ್ಜ್ ಹಾಗೂ ಉಮೇರ್ ಬಂಧಿತ ಆರೋಪಿಗಳು. ಪ್ರಕರಣದ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಯುತ್ತಿದ್ದಂತೆ ಮೋಸಕ್ಕೆ ಒಳಗಾದವರು ಹಾಗೂ ಅವರ ಸಂಬಂಧಿಕರು ಗುರುವಾರ ಸಂಜೆ ತಿಲಕ್ ನಗರ ಪೊಲೀಸ್ ಠಾಣೆ ಮುಂದೆ ನಿಂತಿದ್ದರು.

  • ಜಾನುವಾರು ಸಾಗಿಸುತ್ತಿದ್ದ ಐವರ ಬಂಧನ

    ಜಾನುವಾರು ಸಾಗಿಸುತ್ತಿದ್ದ ಐವರ ಬಂಧನ

    ಬೆಂಗಳೂರು: ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಐವರನ್ನು ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಐವರು ಆರೋಪಿಗಳು ಅಕ್ರಮವಾಗಿ ಆನೇಕಲ್ ನ ಚಂದಾಪುರ ಸಂತೆಯಿಂದ ತಮಿಳುನಾಡಿಗೆ ಜಾನುವಾರುಗಳನ್ನು ಸಾಗಿಸುತ್ತಿದ್ದರು. ಖಚಿತ ಮಾಹಿತಿ ಪಡೆದ ಕೌ ಕ್ಯಾನ್ ಪೌಂಡೇಶನ್ ಸಂಸ್ಥೆಯ ರಮಣ್ ಎಂಬವರ ನೇತೃತ್ವದ ತಂಡವು, ಅತ್ತಿಬೆಲೆಯ ಟೋಲ್ ಗೇಟ್ ಬಳಿ ವಾಹನವನ್ನು ತಡೆದು ಪರಿಶೀಲನೆ ನಡೆಸಿದೆ.

    ಈ ವೇಳೆ ವಾಹನದಲ್ಲಿ ಅಕ್ರಮವಾಗಿ 7 ಎತ್ತುಗಳು ಹಾಗೂ 21 ಸೀಮೆಹಸುವಿನ ಕರುಗಳನ್ನು ಕಂಡುಬಂದಿದ್ದು, ಕೂಡಲೇ ವಾಹನದಲ್ಲಿದ್ದ ಐವರನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಸಂಘಟನೆಯು ವಶಪಡಿಸಿಕೊಂಡ ಜಾನುವಾರುಗಳನ್ನು ಆದಿಚುಂಚನಗಿರಿ ಮಠದ ಗೋಶಾಲೆಗೆ ಕಳುಹಿಸಿಕೊಟ್ಟಿದ್ದಾರೆ.

    ಘಟನೆ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews