Tag: Aged woman

  • 80ರ ವೃದ್ಧೆ ಮೇಲೆ ಅತ್ಯಾಚಾರವೆಸಗಿ ಯುವಕ ಪರಾರಿ

    80ರ ವೃದ್ಧೆ ಮೇಲೆ ಅತ್ಯಾಚಾರವೆಸಗಿ ಯುವಕ ಪರಾರಿ

    ದಾವಣಗೆರೆ: ಗಂಡ ಹಾಗೂ ಮಕ್ಕಳಿಲ್ಲದೆ ಒಂಟಿಯಾಗಿ ಜೀವನ ನಡೆಸುತ್ತಿದ್ದ 80 ವರ್ಷದ ವೃದ್ಧೆಯ (Old Aged Woman Rape) ಮೇಲೆ 30 ವರ್ಷದ ಯುವಕನೊಬ್ಬ ಅತ್ಯಾಚಾರವೆಸಗಿರುವ ಘಟನೆ ದಾವಣಗೆರೆ (Davanagere) ಜಿಲ್ಲೆಯ ಹೊನ್ನಾಳಿ ಬೀರಗೊಂಡನಹಳ್ಳಿಯಲ್ಲಿ ನಡೆದಿದೆ.

    ಆರೋಪಿ ಎಸ್.ರವಿ (30) ವೃದ್ಧೆಯ ಮೇಲೆ ಅತ್ಯಾಚಾರ ಮಾಡಿದ ನಂತರ ತಲೆಮರೆಸಿಕೊಂಡಿದ್ದಾನೆ. ಕಳೆದ ಶನಿವಾರ ಬೆಳಗ್ಗಿನ ಜಾವ ಒಂಟಿಯಾಗಿದ್ದ ವೃದ್ಧೆಯ ಮನೆಯೊಳಗೆ ನುಗ್ಗಿದ ಆರೋಪಿ ಆಕೆಯನ್ನು ಅಡುಗೆ ಕೋಣೆಗೆ ಎಳೆದೊಯ್ದ ಎಷ್ಟೇ ಕೂಗಿದರೂ ಬಿಡದೆ, ಅತ್ಯಾಚಾರ ಎಸಗಿದ್ದಾನೆ ಎಂದು ವೃದ್ಧೆಯು ದೂರಿನಲ್ಲಿ ವಿವರಿಸಿದ್ದಾರೆ. ಇದನ್ನೂ ಓದಿ: ಗ್ಯಾಂಗ್ ರೇಪ್ – ಮಹಿಳೆಯ ಖಾಸಗಿ ಭಾಗಕ್ಕೆ ಸಿಗರೇಟ್‌ನಿಂದ ಸುಟ್ಟು ವಿಕೃತಿ

    20 ವರ್ಷಗಳ ಹಿಂದೆ ವೃದ್ಧೆ ಪತಿ ತೀರಿಕೊಂಡಿದ್ದು, ಮಕ್ಕಳಿಲ್ಲದ್ದರಿಂದ ಒಂಟಿ ಜೀವನ ನಡೆಸುತ್ತಿದ್ದಾರೆ. ಕೂಲಿ ನಾಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ವೃದ್ಧೆ ಮೇಲೆ ಕಿರಾತಕ ಅತ್ಯಾಚಾರ ವೆಸಗಿದ್ದಾನೆ. ಅತ್ಯಾಚಾರವಾದ ನಂತರ ವೃದ್ಧೆಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಹೊನ್ನಾಳಿ ಪೊಲೀಸ್ ಠಾಣೆ (Honnalli Police Station) ಯಲ್ಲಿ ವೃದ್ಧೆ ದೂರು ದಾಖಲಿಸಿದ್ದಾರೆ.

    ಸದ್ಯ ಆರೋಪಿ ಪತ್ತೆಗೆ ಹೊನ್ನಾಳಿ ಪೊಲೀಸರು ಬಲೆ ಬೀಸಿದ್ದು, ಹುಡುಕಾಟ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವೃದ್ಧೆಯ ಕಿವಿಯಿಂದ ಓಲೆ ಕಿತ್ತುಕೊಂಡು ಪರಾರಿಯಾದ ಕಳ್ಳ!

    ವೃದ್ಧೆಯ ಕಿವಿಯಿಂದ ಓಲೆ ಕಿತ್ತುಕೊಂಡು ಪರಾರಿಯಾದ ಕಳ್ಳ!

    ಬೆಂಗಳೂರು: ಹೊಲದಲ್ಲಿ ಕೆಲಸ ಮಾಡುವ ಒಂಟಿ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಕಳ್ಳನೊಬ್ಬ ಚಿನ್ನದ ಓಲೆಗಳನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನೆಲಮಂಗಲ ಸಮೀಪದ ಮುಪ್ಪೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮುಪ್ಪೇನಹಳ್ಳಿ ಗ್ರಾಮದ ಹೊನ್ನಮ್ಮ (65) ಕಳ್ಳರಿಂದ ಹಲ್ಲೆಗೊಳಗಾಗಿ, ಓಲೆಗಳನ್ನು ಕಳೆದುಕೊಂಡ ವೃದ್ಧೆ. ಹೊನ್ನಮ್ಮ ಅವರು ಇಂದು ತಮ್ಮ ಗ್ರಾಮದ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಮುಸುಕುಧಾರಿ ವ್ಯಕ್ತಿಯೊಬ್ಬ ಹೊನ್ನಮ್ಮ ಅವರ ಮೇಲೆ ದಾಳಿ ಮಾಡಿದ್ದಾನೆ. ನಂತರ ವೃದ್ಧೆಯ ಬಳಿ ಇದ್ದ ಓಲೆಗಳನ್ನು ನೋಡಿದ ಕಳ್ಳ, ಬಲವಾಗಿ ಕಿತ್ತುಕೊಂಡಿದ್ದಾನೆ. ಪರಿಣಾಮ ವೃದ್ಧೆಯ ಕಿವಿ ಹರಿದಿದ್ದು, ರಕ್ತಸ್ರಾವಕ್ಕೆ ಒಳಗಾಗಿದ್ದಾರೆ.

    ಓಲೆಗಳು ತನ್ನ ಕೈ ಸೇರುತ್ತಿದ್ದಂತೆ ಕಳ್ಳ ಅಲ್ಲಿಂದ ಪರಾರಿಯಾಗಿದ್ದಾನೆ. ಇತ್ತ ಗಂಭೀರವಾಗಿ ಗಾಯಗೊಂಡಿದ್ದ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮುಪ್ಪೇನಹಳ್ಳಿ ಗ್ರಾಮದ ಪಕ್ಕದ ಹಳ್ಳಿಯ ಮಂಜುನಾಥ್ ಎಂಬವನೇ ಕೃತ್ಯ ಎಸಗಿದ್ದಾನೆ ಎಂದು ವೃದ್ಧೆ ಆರೋಪಿಸಿದ್ದಾರೆ. ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಲಾರಿಯಡಿ ಸಿಲುಕಿ ವೃದ್ಧೆ ಒದ್ದಾಟ- ತುಮಕೂರಿನಲ್ಲೊಂದು ಮನಕಲಕುವ ಘಟನೆ

    ಲಾರಿಯಡಿ ಸಿಲುಕಿ ವೃದ್ಧೆ ಒದ್ದಾಟ- ತುಮಕೂರಿನಲ್ಲೊಂದು ಮನಕಲಕುವ ಘಟನೆ

    ತುಮಕೂರು: ವೃದ್ಧೆಯೊಬ್ಬರು ಲಾರಿ ಅಡಿಗೆ ಸಿಲುಕಿ ವಿಲವಿಲನೆ ಒದ್ದಾಡಿದ ಹೃದಯ ವಿದ್ರಾವಕ ಘಟನೆ ತುಮಕೂರಿನಲ್ಲಿ ನಡೆದಿದೆ.

    ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ ಈ ಮನಕಲಕುವ ದುರಂತ ಸಂಭವಿಸಿದೆ. ಚಾಲಕ ಮದ್ಯ ಸೇವಿಸಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಬಂದ ಹಿನ್ನೆಲೆ ಘಟನೆ ಸಂಭವಿಸಿದೆ ಎನ್ನಲಾಗಿದೆ.

    ಸರ್ಕಾರಿ ಬಸ್ ನಿಲ್ದಾಣದ ಬಳಿಯ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಪಾದಾಚಾರಿ ವೃದ್ಧೆಗೆ ಟಿಪ್ಪರ್ ಲಾರಿ ಡಿಕ್ಕಿಯಾಗಿದೆ. ಪರಿಣಾಮ ಟಿಪ್ಪರ್ ಲಾರಿ ಅಡಿ ಬಿದ್ದ ವೃದ್ಧೆ ಚಕ್ರಕ್ಕೆ ಸಿಲುಕಿದ್ದರು. ಕೂಡಲೇ ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ವೃದ್ಧೆಯನ್ನು ರಕ್ಷಿಸಿ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ.

    ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗಿದೆ. ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.