Tag: Afternoon

  • ಮಧ್ಯಾಹ್ನ ನಿದ್ದೆ ಮಾಡುವ ಸೊಸೆಗೆ ಗೂಸಾ ಕೊಟ್ಟ ಅತ್ತೆ, ಮಾವ

    ಮಧ್ಯಾಹ್ನ ನಿದ್ದೆ ಮಾಡುವ ಸೊಸೆಗೆ ಗೂಸಾ ಕೊಟ್ಟ ಅತ್ತೆ, ಮಾವ

    ಗಾಂಧಿಗನರ: ಮನೆಯ ಕೆಲಸವನ್ನು ಮಾಡಿ ಸುಸ್ತಾಗಿದೆ ಎಂದು ಮಧ್ಯಾಹ್ನ ಮಲಗಿದ್ದ ಸೊಸೆಯನ್ನು ನೋಡಿದ ಅತ್ತೆ, ಮಾವ ಹೊಡೆದು ಹಲ್ಲೆ ಮಾಡಿರುವ ಘಟನೆ ಗುಜರಾತಿನ ಅಹ್ಮದಾಬಾದ್‍ನ ಶಾಹಿಬಾಗ್‍ನಲ್ಲಿ ನಡೆದಿದೆ.

    2016ರಲ್ಲಿ ಮೆಹ್ಸಾನಾದಲ್ಲಿರುವ ಕಾಡಿಯ ವ್ಯಕ್ತಿಯೊಬ್ಬನನ್ನು ಮದುವೆಯಾದಳು ಮತ್ತು ಅಂದಿನಿಂದ ತನ್ನ ಅತ್ತೆ-ಮಾವನೊಂದಿಗೆ ಒಂದೇ ಮನೆಯಲ್ಲಿಯೇ ವಾಸಿಸುತ್ತಿದ್ದಳು. ಸೊಸೆ ಮಧ್ಯಾಹ್ನ ವೇಳೆ ನಿದ್ದೆ ಜಾರಿರುವುದನ್ನು ಕಂಡು ಆಕೆಯ ಮೇಲೆ ಹಲ್ಲೇ ಮಾಡಿದ್ದಾರೆ.

    ನಾನು ಈ ಮನೆಗೆ ಬಂದಾಗಿನಿಂದಲೂ ನಾನು ಮಧ್ಯಾಹ್ನ ನಿದ್ರೆ ಮಾಡುವುದನ್ನು ಅತ್ತೆ, ಮಾವ ವಿರೋಧಿಸುತ್ತಿದ್ದರು. ನಾನು ಮುಂಜಾನೆ ಬೇಗೆ ಏಳುವುದರಿಂದ ನನಗೆ ಮಧ್ಯಾಹ್ನ ಬರುವ ನಿದ್ರೆ ತಡೆಯಲು ಸಾಧ್ಯವಾಗುವುದಿಲ್ಲ. ಅತ್ತೆ ಮತ್ತು ಮಾವ ಇಬ್ಬರೂ ಹೊಡೆಯಲು ಪ್ರಾರಂಭಿಸಿದ್ದರು. ಮೊದಲ ಬಾರಿಗೆ ತನ್ನ ಪತಿ ಹೊಡೆದಾಗ ಕಾಡಿ ಪೊಲೀಸರಿಗೆ ದೂರು ಸಲ್ಲಿಸಿದ್ದೆ. ನಂತರ ರಾಜಿ ಮಾಡಿಕೊಂಡು ಪತಿ ಜೊತೆಗೆ ವಾಸಿಸಲು ನಿರ್ಧರಿಸಿದ್ದಳು. ಆದರೆ ಅತ್ತೆ ಮಾವನ ಕಿರುಕುಳ ನಿರಂತರವಾಗಿತ್ತು. ನಾನು ಗರ್ಭಿಣಿಯಾಗಿದ್ದಾಗ ನನ್ನ ಪತಿ ಮತ್ತು ಅತ್ತೆ ಮಾವ ನನಗೆ ಸಹಾಯ ಮಾಡಲಿಲ್ಲ ಮತ್ತು ನನ್ನನ್ನು ನನ್ನ ಹೆತ್ತವರ ಮನೆಗೆ ಕಳುಹಿಸಿದರು ಎಂದು ಹಲ್ಲೆಗೊಳಗಾದ ಸೊಸೆ ಹೇಳಿಕೊಂಡಿದ್ದಾಳೆ. ಇದನ್ನೂ ಓದಿ: ನಾಯಕರಿಗೆ ಗತಿ ಇಲ್ಲ, ಅಭ್ಯರ್ಥಿಗಳಿಗಂತೂ ದಟ್ಟ ದಾರಿದ್ರ್ಯ- ಕಾಂಗ್ರೆಸ್ ವಿರುದ್ಧ ಹೆಚ್‍ಡಿಕೆ ಕಿಡಿ

    2017 ಸೆಪ್ಟೆಂಬರ್ 18ರಂದು ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದೆ. ಗಂಡು ಮಗು ಆಗದ ಕಾರಣ ಅವರು ನನಗೆ ತುಂಬಾನೇ ಕಿರುಕುಳ ನೀಡಿದರು ಮತ್ತು ಥಳಿಸಿದರು. ವರ್ಷದ 2021 ಫೆಬ್ರವರಿ 7ರಂದು ಪತಿ ಮನೆಯಿಂದ ಹೊರ ಹಾಕಿದ್ದಾರೆ. ಸಮುದಾಯದ ನಾಯಕರ ಹಸ್ತಕ್ಷೇಪದ ಹೊರತಾಗಿಯೂ, ಪತಿ ಮನೆಗೆ ಕರೆದುಕೊಂಡು ಹೋಗಲು ನಿರಾಕರಿಸಿದ್ದಾರೆ. ಇದನ್ನೂ ಓದಿ: ಗೋ ಕಳ್ಳರಿಗೆ ಸಹಾಯ ಮಾಡಿದ್ದ ಪೊಲೀಸರ ಬಗ್ಗೆಯಷ್ಟೇ ಮಾತನಾಡಿದ್ದೇನೆ: ಆರಗ ಜ್ಞಾನೇಂದ್ರ

    ಇದೀಗ ಈ ವಿಚಾರವಾಗಿ ಸೊಸೆ ಮಾಧವಪುರ ಪೊಲೀಸರನ್ನು ಸಂಪರ್ಕಿಸಿ ತನ್ನ ಪತಿ ಮತ್ತು ಅತ್ತೆ ಮಾವಂದಿರ ವಿರುದ್ಧ ಕೌಟುಂಬಿಕ ಹಿಂಸೆಯ ಬಗ್ಗೆ ದೂರು ಸಲ್ಲಿಸಿದ್ದಾಳೆ.

  • ರಾಯಚೂರಿನಲ್ಲಿ ಮಧ್ಯಾಹ್ನ ಆದ್ರೆ ಸಾಕು ಮನೆಗಳ್ಳತನ ಗ್ಯಾರಂಟಿ

    ರಾಯಚೂರಿನಲ್ಲಿ ಮಧ್ಯಾಹ್ನ ಆದ್ರೆ ಸಾಕು ಮನೆಗಳ್ಳತನ ಗ್ಯಾರಂಟಿ

    ರಾಯಚೂರು: ಸಾಮಾನ್ಯವಾಗಿ ಕಳ್ಳತನಗಳು ರಾತ್ರಿ ವೇಳೆ ನಡೆಯುತ್ತವೆ. ಆದ್ರೆ ರಾಯಚೂರಿನಲ್ಲೊಂದು ಡಿಫರೆಂಟ್ ಗ್ಯಾಂಗ್ ಓಡಾಡುತ್ತಿದೆ. ಕಳೆದ 15 ದಿನಗಳಿಂದ ಮಧ್ಯಾಹ್ನ ಆದ್ರೆ ಸಾಕು ಒಂದು ಕಳ್ಳತನ ನಡೆದಿರುತ್ತೆ.

    ರಾಯಚೂರು ತಾಲೂಕಿನ ಆಂಧ್ರಪ್ರದೇಶದ ಗಡಿ ಭಾಗದ ಗ್ರಾಮಗಳಲ್ಲಿ ಮಧ್ಯಾಹ್ನ ಆದ್ರೆ ಸಾಕು ಜನ ಮನೆಗೆ ಓಡುತ್ತಾರೆ. ಒಂದು ವೇಳೆ ಮಧ್ಯಾಹ್ನ ಮನೆಗೆ ಹೋಗೋದು ಮರೆತ್ರೆ ಮನೆ ಕಳ್ಳತನ ಗ್ಯಾರೆಂಟಿ. ತಾಲೂಕಿನ ಸರ್ಜಾಪುರ, ಸಗಮಕುಂಟಾ, ನಾಗನದೊಡ್ಡಿ, ಅಪ್ಪನದೊಡ್ಡಿ, ಚಂದ್ರಬಂಡಾ, ಯಾಪಲದಿನ್ನಿ, ರಾಳದೊಡ್ಡಿ ಗ್ರಾಮಗಳಲ್ಲಿ ಸತತವಾಗಿ ಕಳ್ಳತನ ನಡೆದಿದೆ. ಮಧ್ಯಾಹ್ನ ಒಂದು ಗಂಟೆಯಿಂದ ಎರಡು ಗಂಟೆ ಸಮಯದೊಳಗೆ ಕಳ್ಳರ ಗ್ಯಾಂಗ್ ತಮ್ಮ ಕರಾಮತ್ತು ತೋರಿಸಿ ಮಾಯವಾಗುತ್ತಿದ್ದಾರೆ. ಮನೆ ಬೀಗ ಒಡೆದು ಸಿಕ್ಕ ವಸ್ತುಗಳನ್ನ ಕದ್ದು ಪರಾರಿಯಾಗುತ್ತಿದ್ದಾರೆ.

    ಉತ್ತಮ ಮಳೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕೃಷಿ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ಇನ್ನು ಮನೆಯ ಮಕ್ಕಳು ಶಾಲೆಗೆ ಹೋಗಿರುತ್ತಾರೆ. ಹೀಗಾಗಿ ಮನೆಗಳಿಗೆ ಬೀಗ ಹಾಕಿರುವುದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ಅಂತಹ ಮನೆಗಳನ್ನ ಗುರುತಿಸಿ ಕಳ್ಳತನ ಮಾಡುತ್ತಿದ್ದಾರೆ. ಇದುವರೆಗೆ ಎಂಟಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ. ರಾಳದೊಡ್ಡಿ ಒಂದರಲ್ಲೆ ಹನಮಂತು ಹಾಗೂ ಅವರ ಸಹೋದರನ ಮನೆ ಕಳ್ಳತನವಾಗಿದ್ದು 450 ಗ್ರಾಂ ಚಿನ್ನ, 600 ಗ್ರಾಂ ಬೆಳ್ಳಿ, 4 ಲಕ್ಷ 10 ಸಾವಿರ ನಗದು ದೋಚಿದ್ದಾರೆ. ಉಳಿದ ಎಲ್ಲಾ ಪ್ರಕರಣಗಳಿಂದ ಬಡ ಕೃಷಿಕರ ಲಕ್ಷಾಂತರ ರೂಪಾಯಿ ಹಣ ಕಳ್ಳತನವಾಗಿದೆ.

     

    ಮಧ್ಯಾಹ್ನ ಕಳ್ಳರ ಗ್ಯಾಂಗ್‍ನ ಕರಾಮತ್ತಿನಿಂದ ಯಾಪಲದಿನ್ನಿ ಠಾಣೆ ಪೊಲೀಸರು ನಿದ್ದೆ ಕೆಡಿಸಿಕೊಂಡಿದ್ದಾರೆ. ಹದಿನೈದು ದಿನಗಳಿಂದ ಕಳ್ಳತನ ಪ್ರಕರಣಗಳು ಬೆಳಕಿಗೆ ಬರುತ್ತಿದ್ದರೂ ಕಳ್ಳರ ಸುಳಿವು ಮಾತ್ರ ಇದುವರೆಗೂ ಸಿಕ್ಕಿಲ್ಲ. ಈಗಲಾದ್ರೂ ಪೊಲೀಸ್ ಇಲಾಖೆ ಚುರುಕಿನ ಕಾರ್ಯಾಚರಣೆಗೆ ಮುಂದಾಗಿ ಕಳ್ಳರ ಗ್ಯಾಂಗ್ ಸೆರೆ ಹಿಡಿಯಬೇಕಿದೆ.