Tag: Aftab Ameen Poonawala

  • ತಾಕತ್ ಇದ್ರೆ ಶ್ರದ್ಧಾಳ ದೇಹದ ಭಾಗಗಳನ್ನೆಲ್ಲ ಹುಡುಕಿ – ಪೊಲೀಸರಿಗೆ ಅಫ್ತಾಬ್ ಚಾಲೆಂಜ್

    ತಾಕತ್ ಇದ್ರೆ ಶ್ರದ್ಧಾಳ ದೇಹದ ಭಾಗಗಳನ್ನೆಲ್ಲ ಹುಡುಕಿ – ಪೊಲೀಸರಿಗೆ ಅಫ್ತಾಬ್ ಚಾಲೆಂಜ್

    ನವದೆಹಲಿ: ರಾಷ್ಟ್ರ ರಾಜಧಾನಿಯನ್ನು ಬೆಚ್ಚಿ ಬೀಳಿಸಿದ್ದ ಶ್ರದ್ಧಾ ವಾಕರ್ (Shraddha Walkar) ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಫ್ತಾಬ್ ಪೂನಾವಾಲಾನನ್ನು (Aftab Ameen Poonawala) ಇತ್ತೀಚೆಗಷ್ಟೇ ನಾರ್ಕೋ ಅನಾಲಿಸಿಸ್ ಪರೀಕ್ಷೆ ಮತ್ತು ಪಾಲಿಗ್ರಾಫ್ ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದಾದ ಬಳಿಕ ಆತನನ್ನು ತಿಹಾರ್ ಜೈಲಿನಲ್ಲಿ ಇಡಲಾಗಿದೆ. ಈ ವೇಳೆ ಶ್ರದ್ಧಾಳ ಹತ್ಯೆಯ ಬಗ್ಗೆ ಕೆಲವು ಆಘಾತಕಾರಿ ವಿಷಯವನ್ನು ಪೊಲೀಸ್‌ ಮೂಲಗಳು ತಿಳಿಸಿದೆ.

    ಮೇ 17 ರಂದು ಸಂಜೆ ಶ್ರದ್ಧಾ ಡೇಟಿಂಗ್ ಅಪ್ಲಿಕೇಶನ್ ಬಬಲ್‍ನಲ್ಲಿ ಸಿಕ್ಕ ವ್ಯಕ್ತಿಯೊಂದಿಗೆ ಡೇಟಿಂಗ್‍ಗೆ ಹೋಗಿದ್ದಳು. ಅದಾದ ಬಳಿಕ ಮೇ 18ರಂದು ತಡರಾತ್ರಿ ಮಹ್ರಾಲಿಯಲ್ಲಿರುವ ಫ್ಲಾಟ್‍ಗೆ ಮರಳಿದ್ದಳು. ಅದಾದ ಬಳಿಕ ನನ್ನನ್ನು ಬಿಟ್ಟು ಹೋಗುವುದಾಗಿ ಬೆದರಿಕೆ ಹಾಕಿದ್ದಳು. ಅಷ್ಟೇ ಅಲ್ಲದೇ ಆಕೆ ತಾನು ಇನ್ನೊಬ್ಬ ವ್ಯಕ್ತಿಯೊಂದಿಗೆ ಡೇಟಿಂಗ್‍ಗೆ ಹೋಗುತ್ತಿರುವುದರ ಬಗ್ಗೆ ತಿಳಿಸಿದ್ದಳು. ಇದರಿಂದ ಕೋಪಗೊಂಡು ನಾನು ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಅದಾದ ಬಳಿಕ ಆಕೆಯ ದೇಹವನ್ನು ಕತ್ತರಿಸಿದ್ದೇನೆ ಎಂದಿದ್ದಾನೆ.

    ಅದಾದ ಬಳಿಕ ಅಫ್ತಾಬ್‍ನನ್ನು ವಿಚಾರಣೆ ನಡೆಸುವಾಗ ದೆಹಲಿ ಪೊಲೀಸರು ಮತ್ತು ತನಿಖಾ ಸಂಸ್ಥೆಗಳಿಗೆ ಅಫ್ತಾಬ್ ಕೊಲೆಯ ಆಯುಧ ಮತ್ತು ಶ್ರದ್ಧಾಳ ದೇಹದ ಭಾಗಗಳನ್ನು ಪತ್ತೆ ಮಾಡುವಂತೆ ಸವಾಲು ಹಾಕಿದ್ದ ಎಂಬ ವಿಷಯ ಇದೀಗ ಮೂಲಗಳಿಂದ ತಿಳಿದು ಬಂದಿದೆ.

    ಪೊಲೀಸರು (Police) ಅಫ್ತಾಬ್‍ನನ್ನು ವಿಚಾರಣೆ ನಡೆಸಿದ್ದ ವೇಳೆ, ಆತ ಶ್ರದ್ಧಾಳನ್ನು ಕೊಂದಿರುವ ಬಗ್ಗೆ ಒಪ್ಪಿಕೊಂಡಿದ್ದ. ಅಷ್ಟೇ ಅಲ್ಲದೇ ಶ್ರದ್ಧಾಳ ದೇಹದ ಭಾಗಗಳು ಹಾಗೂ ಕೊಲೆ ಮಾಡಲು ಬಳಸಿದ್ದ ಆಯುಧವನ್ನು ಹುಡುಕಲು ನಾನು ನಿಮಗೆ ಚಾಲೆಂಜ್ ಮಾಡುತ್ತೇನೆ ಎಂದು ಪೊಲೀಸರಿಗೆ ತಿಳಿಸಿದ್ದ. ಅಷ್ಟೇ ಅಲ್ಲದೇ ಅಫ್ತಾಬ್ ಕೊಲೆಯ ಆಯುಧವನ್ನು ತನ್ನ ಗುರುಗ್ರಾಮ್ ಕಚೇರಿಯ ಬಳಿಯ ಪೊದೆಗೆ ಎಸೆದಿದ್ದಾಗಿಯೂ ತಿಳಿಸಿದ್ದ ಎಂಬ ವಿಷಯಗಳು ಇದೀಗ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಭೀಕರ ಅಪಘಾತ- ಸಿಪಿಐ, ಪತ್ನಿ ಸಾವು

    ಶ್ರದ್ಧಾಳನ್ನು ಕೊಂದ ನಂತರ ಅಫ್ತಾಬ್ ಬೇರೊಂದು ಹುಡುಗಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದ. ಅವನ ಹೊಸ ಗೆಳತಿ (Girl friend) ಗುರುಗ್ರಾಮದವಳಾಗಿದ್ದು, ವೈದ್ಯಳಾಗಿದ್ದಳು. ಆಕೆಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾಗ ಕೊಲೆಯ ಬಗ್ಗೆ ಆಕೆ ಆಘಾತವನ್ನು ವ್ಯಕ್ತಪಡಿಸಿದ್ದಳು. ಇದನ್ನೂ ಓದಿ: ಹಾವಿನಿಂದ ಹೆದ್ದಾರಿಯಲ್ಲಿ ಸರಣಿ ಅಪಘಾತ – ಸಂಚಾರಿ ಪೊಲೀಸರ ವಿರುದ್ದ ಆಕ್ರೋಶ

    Live Tv
    [brid partner=56869869 player=32851 video=960834 autoplay=true]

  • ಪ್ರಬಲ ನಾಯಕನಿಲ್ಲದಿದ್ರೆ ಅಫ್ತಾಬ್‌ನಂಥ ಹಂತಕರು ಪ್ರತಿ ನಗರದಲ್ಲೂ ಹುಟ್ತಾರೆ – ಅಸ್ಸಾಂ ಸಿಎಂ

    ಪ್ರಬಲ ನಾಯಕನಿಲ್ಲದಿದ್ರೆ ಅಫ್ತಾಬ್‌ನಂಥ ಹಂತಕರು ಪ್ರತಿ ನಗರದಲ್ಲೂ ಹುಟ್ತಾರೆ – ಅಸ್ಸಾಂ ಸಿಎಂ

    ಗಾಂಧಿನಗರ: ದೇಶದಲ್ಲಿ ಪ್ರಬಲ ನಾಯಕ ಇಲ್ಲದಿದ್ದರೇ ಅಫ್ತಾಬ್ ಅಮೀನ್ ಪೂನಾವಾಲನಂತಹ (Aftab Ameen Poonawala) ಹಂತಕರು ಪ್ರತಿ ನಗರದಲ್ಲೂ ಹುಟ್ಟುತ್ತಾರೆ ಎಂದು ಅಸ್ಸಾಂ ಸಿಎಂ ಹಿಮಾಂತ ಬಿಸ್ವಾ ಶರ್ಮಾ (Himanta Biswa Sarma) ಎಚ್ಚರಿಸಿದ್ದಾರೆ.

    ಗುಜರಾತ್ ಚುನಾವಣಾ (Gujarat Election) ಪ್ರಚಾರ ಸಭೆಯ ಭಾಗವಾಗಿ ಕಚ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಅವರು, ದೆಹಲಿಯ ಶ್ರದ್ಧಾ ಹತ್ಯೆ (Shraddha Murder Case) ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿದರು. ದೇಶದಲ್ಲಿ ಪ್ರಬಲ ನಾಯಕನಿಲ್ಲದಿದ್ದರೆ, ಅಫ್ತಾಬ್‌ನಂತಹ ಹಂತಕರು ಪ್ರತಿ ನಗರದಲ್ಲೂ ಹುಟ್ಟುತ್ತಾರೆ. ಆಗ ನಮ್ಮ ಸಮಾಜ ರಕ್ಷಿಸಲು ಸಾಧ್ಯವಾಗುವುದಿಲ್ಲ ಹೇಳಿದ್ದಾರೆ. ಇದನ್ನೂ ಓದಿ: ವಿಮೆ ಹಣಕ್ಕಾಗಿ ಸುಪಾರಿ ಕೊಟ್ಟು ತಂದೆಯನ್ನೇ ಕೊಲ್ಲಿಸಿದ ಮಗ

    ಕೊಲೆ ಪ್ರಕರಣದ ಭೀಕರತೆಗಳನ್ನು ವಿಚಾರಸಿದಾಗ ಇದನ್ನು ಲವ್ ಜಿಹಾದ್ (Love Jihad) ಪ್ರಕರಣ ಎನ್ನಲಾಗಿದೆ. ಅಲ್ಲದೆ ಹಿಂದೂ ಮಹಿಳೆಯರು ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸುತ್ತಾರೆ ಎಂದು ಆರೋಪಿಸಿದ್ದಾರೆ.  

    ಮೋದಿ ಪರ ಬ್ಯಾಟಿಂಗ್:
    ಮುಂಬೈನಿಂದ ಶ್ರದ್ಧಾಳನ್ನು ಕರೆದುಕೊಂಡು ಬಂದಿದ್ದ ಅಫ್ತಾಬ್ 35 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟಿದ್ದ. ಇದೇ ಸಮಯದಲ್ಲಿ ಮತ್ತೊಬ್ಬ ಮಹಿಳೆಯನ್ನು ಕರೆತಂದು ಲೈಂಗಿಕ ಸಂಪರ್ಕ ಮಾಡಿದ್ದಾನೆ. ಇಂತಹ ಕೃತ್ಯಗಳಿಂದ ದೇಶವನ್ನು ರಕ್ಷಿಸಬೇಕಾದರೆ ನಮ್ಮ ದೇಶಕ್ಕೆ ಶಕ್ತಿಯುತ ನಾಯಕನನ್ನು ಹೊಂದಿರಬೇಕು, ರಾಷ್ಟ್ರವನ್ನು ತಮ್ಮ ತಾಯಿ ಎಂದು ಪರಿಗಣಿಸುವವರಾಗಿರಬೇಕು. ಹಾಗಾಗಿ 2024ರಲ್ಲಿ 3ನೇ ಬಾರಿಗೆ ನರೇಂದ್ರ ಮೋದಿ (Narendra Modi) ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವುದು ಬಹಳ ಮುಖ್ಯ ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಲವ್ ಜಿಹಾದ್‌ಗೆ ಬಲಿಯಾದ್ರೆ ಇದೇ ಗತಿ – ಹೊಸ ಆಯಾಮದಲ್ಲಿ ತನಿಖೆ ನಡೆಸುವಂತೆ VHP ಮನವಿ

    ಏನಿದು ಘಟನೆ?
    ರಾಷ್ಟ್ರ ರಾಜಧಾನಿಯಲ್ಲಿ ತನ್ನೊಂದಿಗೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಗೆಳತಿಯ ಹತ್ಯೆ ಮಾಡಿ, ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ಅದನ್ನು ಫ್ರಿಡ್ಜ್ನಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಅನೇಕ ಭಯಾನಕ ಸಂಗತಿಗಳು ಹೊರಬಿದ್ದಿವೆ. ಆರೋಪಿ ಅಫ್ತಾಬ್ ಹಾಗೂ ಶ್ರದ್ಧಾ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಆದರೆ ಮೇ 18ರಂದು ಜಗಳವಾದಾಗ ಶ್ರದ್ಧಾಳ ಎದೆಯ ಮೇಲೆ ಕುಳಿತು ಆಕೆಯ ಕತ್ತು ಹಿಸುಕಿ ಕೊಂದಿದ್ದಾನೆ.

    ಬಳಿಕ ದೇಹವನ್ನು ಕತ್ತರಿಸೋದು ಹೇಗೆ? ಅದನ್ನು ಡಿಎನ್‌ಎಗಳ ಸಾಕ್ಷ್ಯಾಧಾರವೂ ಸಿಗದಂತೆ ದೇಹವನ್ನ ವಿಲೇವಾರಿ ಮಾಡೋದು ಹೇಗೆ ಎಂಬ ಮಾಹಿತಿಗಳ ಬಗ್ಗೆ ಗೂಗಲ್‌ನಲ್ಲಿ ಹುಡುಕಾಡಿದ್ದಾನೆ. ನಂತರ ದೇಹವನ್ನು 35 ಪೀಸ್‌ಗಳಾಗಿ ತಂಡು ಮಾಡಿದ್ದು, ಅದನ್ನು ಸಂಗ್ರಹಿಸಲು 300 ಲೀಟರ್ ಸಾಮರ್ಥ್ಯದ ಹೊಸ ಫ್ರಿಡ್ಜ್ ಸಹ ಖರೀದಿಸಿದ್ದಾನೆ. ದೇಹದ ಮಾಂಸದ ವಾಸನೆ ಹರಡಬಾರದೆಂದು ದಿನವೂ ಅಗರಬತ್ತಿ ಹಚ್ಚಿಡುತ್ತಿದ್ದ. ಈ ನಡುವೆ ಶ್ರದ್ಧಾಳನ್ನು ಕೊಲೆ ಮಾಡಿ ಕೆಲ ದಿನಗಳ ನಂತರ ಮತ್ತೊಬ್ಬ ಮಹಿಳೆಯನ್ನು ತನ್ನ ಅಪಾರ್ಟ್ಮೆಂಟ್‌ಗೆ ಕರೆದು ಸೆಕ್ಸ್ ಮಾಡ್ತಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ.

    Live Tv
    [brid partner=56869869 player=32851 video=960834 autoplay=true]