Tag: Afridi

  • ಟ್ವೀಟ್ ಮಾಡಿ ವಿಲನ್‍ಗಳಾದ ಯುವಿ, ಭಜ್ಜಿ – ಯುವರಾಜ್ ಸಿಂಗ್ ಸ್ಪಷ್ಟನೆ

    ಟ್ವೀಟ್ ಮಾಡಿ ವಿಲನ್‍ಗಳಾದ ಯುವಿ, ಭಜ್ಜಿ – ಯುವರಾಜ್ ಸಿಂಗ್ ಸ್ಪಷ್ಟನೆ

    ಮುಂಬೈ: ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಟೀಕೆ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಪಾಕಿಸ್ತಾನದಲ್ಲಿ ಕೊರೊನಾ ನಿಯಂತ್ರಣ ಮಾಡಲು ಪಾಕ್ ಮಾಜಿ ಕ್ರಿಕೆಟಿಗ ಆಫ್ರಿದಿ ಅವರ ಫೌಂಡೇಶನ್‍ಗೆ ಸಹಾಯ ಮಾಡುವಂತೆ ಯುವರಾಜ್ ಸಿಂಗ್ ಮನವಿ ಮಾಡಿಕೊಂಡ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.

    ಭಾರತದಲ್ಲಿ ಕೊರೊನಾ ನಿಯಂತ್ರಣಕ್ಕೆ ಸಹಾಯ ಮಾಡಲು ಆಟಗಾರರು ಮನವಿ ಮಾಡಿಬೇಕಾಗಿತ್ತು. ಆದರೆ ಪಾಕ್‍ನಲ್ಲಿರೋ ಮಂದಿಗೆ ಸಹಾಯ ಮಾಡುವಂತೆ ಮನವಿ ಮಾಡಿರುವುದು ಎಷ್ಟು ಸರಿ ಎಂಬುವುದು ನೆಟ್ಟಿಗರ ಪ್ರಶ್ನೆಯಾಗಿದೆ. ಇತ್ತ ಯುವರಾಜ್‍ಸಿಂಗ್ ದಾರಿಯನ್ನೇ ಅನುಸರಿಸಿರೋ ಹರ್ಭಜನ್ ಸಿಂಗ್ ವಿರುದ್ಧವೂ ನೆಟ್ಟಿಗರು ಗರಂ ಆಗಿದ್ದಾರೆ. ಟ್ವಿಟ್ಟರ್ ನಲ್ಲಿ #shameonyuvibhajji ಎಂಬ ಹ್ಯಾಶ್ ಟ್ಯಾಗ್ ಬಳಸಿ 50 ಸಾವಿರಕ್ಕೂ ಹೆಚ್ಚು ಟ್ವೀಟ್‍ಗಳೊಂದಿಗೆ ಟ್ರೆಂಡ್ ಆಗಿತ್ತು.

    ಇತ್ತ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ಕೇಳಿ ಬರುತ್ತಿದಂತೆ ಪ್ರತಿಕ್ರಿಯೆ ನೀಡರೋ ಯುವರಾಜ್ ಸಿಂಗ್, ಎಲ್ಲವುದಕ್ಕಿಂತ ಮಾನವೀಯತೆ ದೊಡ್ಡದು ಎಂದು ಹೇಳಿ ತಮ್ಮ ಈ ಹಿಂದಿನ ಮನವಿಯನ್ನು ಸಮರ್ಥಿಸಿಕೊಂಡಿದ್ದಾರೆ. ತಮ್ಮ ಸಾಮಾಜಿಕ ಕಾರ್ಯಕ್ಕೆ ಬೆಂಬಲವಾಗಿ ನಿಂತಿದ್ದ ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ಅವರಿಗೆ ಅಫ್ರಿದಿ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ಮಾನವೀಯತೆ ದೃಷ್ಟಿಯಿಂದ ದೇಶ ಗಡಿಯನ್ನು ಮೀರಿದ ನಿಮ್ಮ ಬೆಂಬಲ, ಪ್ರೀತಿ ಮತ್ತು ಶಾಂತಿಯನ್ನು ವ್ಯಕ್ತಪಡಿಸುತ್ತದೆ ಎಂದಿದ್ದಾರೆ.

    ಭಾರತದಲ್ಲಿ ಕೊರೊನಾ ನಿಯಂತ್ರಣಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರಾದ ರೋಹಿತ್ ಶರ್ಮಾ 80 ಲಕ್ಷ ರೂ., ಸುರೇಶ್ ರೈನಾ 52 ಲಕ್ಷ ರೂ., ರಹಾನೆ 10 ಲಕ್ಷ ರೂ., ಕೊಹ್ಲಿ-ಅನುಷ್ಕಾ ಜೋಡಿ 3 ಕೋಟಿ ರೂ., ಸಚಿನ್ 50 ಲಕ್ಷ ರೂ. ದೇಣಿಗೆ ನೀಡಿದ್ದರು. ಪರಿಣಾಮ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಅವರ ನಿಲುವಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕೆಲ ನೆಟ್ಟಿಗರು, ಪಾಕಿಸ್ತಾನ ಸರ್ಕಾರ, ಎನ್‍ಜಿಓಗಳು ಅಲ್ಲಿನ ಹಿಂದೂ, ಕ್ರೈಸ್ತ ಮಂದಿಗೆ ಕೊರೊನಾದಂತಹ ಸಂದರ್ಭದಲ್ಲೂ ಆಹಾರ ಪೂರೈಕೆ ಮಾಡಲು ನಿರಾಕರಿಸಿದೆ. ಅಲ್ಲದೇ ಭಾರತದಿಂದ ಭೂ ಗಡಿ ಪ್ರದೇಶದ ಮೂಲಕ ಆಹಾರವನ್ನು ಪೂರೈಕೆ ಮಾಡಿಸಿಕೊಳ್ಳುವಂತೆ ಸೂಚನೆ ನೀಡಿ ನಿರ್ಲಕ್ಷ್ಯ ತೋರಿದೆ. ಇದುವರೆಗೂ ಈ ಬಗ್ಗೆ ಅಫ್ರಿದಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲಿನ ಜನತೆಯ ಬಗ್ಗೆ ಧ್ವನಿಯನ್ನು ನೀಡಿಲ್ಲ. ಇಂತಹ ಸಂದರ್ಭದಲ್ಲಿ ಯುವಿ, ಬಜ್ಜಿ ಅವರು ಅಫ್ರಿದಿಗೆ ಬೆಂಬಲ ನೀಡಿರೋದು ಎಷ್ಟು ಸರಿ ಎಂಬುವುದು ಹಲವರ ಪ್ರಶ್ನೆಯಾಗಿದೆ.

  • ರಾಷ್ಟ್ರೀಯ ಸಮಾರಂಭದಲ್ಲಿ ತಂಬಾಕು ಸೇವಿಸಿ ಸಿಕ್ಕಿಬಿದ್ದ ಅಫ್ರಿದಿ

    ರಾಷ್ಟ್ರೀಯ ಸಮಾರಂಭದಲ್ಲಿ ತಂಬಾಕು ಸೇವಿಸಿ ಸಿಕ್ಕಿಬಿದ್ದ ಅಫ್ರಿದಿ

    ಇಸ್ಲಾಮಾಬಾದ್: ಕ್ರಿಕೆಟ್ ವೃತ್ತಿ ಜೀವನದಲ್ಲಿ ಹಲವು ಬಾರಿ ವಿವಾದಕ್ಕೆ ಗುರಿಯಾಗಿದ್ದ ಪಾಕ್ ಮಾಜಿ ಆಟಗಾರ ಶಾಹಿದ್ ಅಫ್ರಿದಿ ನಿವೃತ್ತಿಯ ಬಳಿಕವೂ ತಮ್ಮ ಚಾಳಿಯನ್ನು ಮುಂದುವರೆಸಿದ್ದಾರೆ.

    ಪಾಕಿಸ್ತಾನದ ರಕ್ಷಣಾ ದಿವಸ್ ಕಾರ್ಯಕ್ರಮ ಸೆ.6 ರ ಗುರುವಾರದಂದು ರಾವಲ್ಪಿಂಡಿಯಲ್ಲಿ ಏರ್ಪಡಿಸಲಾಗಿತ್ತು. ಈ ಸಮಾರಂಭದಲ್ಲಿ ಭಾಗವಹಿಸಿದ್ದ ವೇಳೆ ಅಫ್ರಿದಿ ಯಾರಿಗೂ ತಿಳಿದಂತೆ ತಂಬಾಕು ಸೇವನೆ ಮಾಡಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಕಾರ್ಯಕ್ರಮದಲ್ಲಿ ಪಾಕ್ ನೂತನ ಪ್ರಧಾನಿ ಇಮ್ರಾನ್ ಖಾನ್ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

    https://twitter.com/babarbinatta/status/1037726413959450624

    ಅಫ್ರಿದಿ ತಂಬಾಕು ಸೇವಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಕಾರ್ಯಕ್ರಮದಲ್ಲಿ ಗಣ್ಯರೊಂದಿಗೆ ಕುಳಿತಿದ್ದ ಅಫ್ರಿದಿ ತಮ್ಮ ಜೇಬಿನಿಂದ ತಂಬಾಕು ತಗೆದು ಯಾರಿಗೂ ತಿಳಿಯದಂತೆ ಸೇವಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದಂತೆ ಟ್ವೀಟಿಗರು ಅಫ್ರಿದಿಯನ್ನು ಟ್ರೋಲ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    ಪಾಕಿಸ್ತಾನದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಅಫ್ರಿದಿಯ ವಿಡಿಯೋ ನೋಡಿದವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ರಕ್ಷಣಾ ಕಾರ್ಯಕ್ರಮದಲ್ಲಿ ಉನ್ನತ ರಕ್ಷಣಾ ಅಧಿಕಾರಿಗಳು ಹಾಗೂ ಪೊಲೀಸರ ಪಕ್ಕದಲ್ಲೇ ಕುಳಿತು ಅಫ್ರಿದಿ ಈ ರೀತಿ ವರ್ತಿಸಿದ್ದ ವಿರುದ್ಧ ಬೇಸರ ವ್ಯಕ್ತಪಡಿಸಿ ಕಿಡಿಕಾರಿದ್ದಾರೆ. ಕೆಲವರು ಅಫ್ರಿದಿ ಕಾಲೆಳೆದು ರೀ ಟ್ವೀಟ್ ಮಾಡಿದ್ದಾರೆ.

  • ಅಭಿಮಾನಿಯ ಜೊತೆ ಪೋಸ್ ನೀಡಿ ಭಾರತೀಯರ ಮನಗೆದ್ದ ಅಫ್ರಿದಿ

    ಅಭಿಮಾನಿಯ ಜೊತೆ ಪೋಸ್ ನೀಡಿ ಭಾರತೀಯರ ಮನಗೆದ್ದ ಅಫ್ರಿದಿ

    ಸೇಂಟ್ ಮೊರಿಟ್ಜ್: ಭಾರತದ ರಾಷ್ಟ್ರಧ್ವಜಕ್ಕೆ ಗೌರವ ನೀಡುವ ಮೂಲಕ ಪಾಕಿಸ್ತಾನದ ಕ್ರಿಕೆಟಿಗ ಶಾಹಿದ್ ಆಫ್ರಿದಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಫೆ.8 ರಂದು ಸೈಂಟ್ ಮೊರಿಟ್ಜ್ ನಗರದ ಸ್ಕಿ ರಿಸಾರ್ಟ್ ನಲ್ಲಿ ನಡೆದ ಐಸ್ ಕ್ರಿಕೆಟ್ ಟೂರ್ನಿಯಲ್ಲಿ ವಿರೇಂದ್ರ ಸೆಹ್ವಾಗ್, ಆಸ್ಟ್ರೇಲಿಯಾಗ ಮೈಕ್ ಹಸ್ಸಿ, ಪಾಕಿಸ್ತಾನದ ಶೊಯೆಬ್ ಅಖ್ತರ್ ಹಾಗೂ ಶ್ರೀಲಂಕಾದ ಮಹೇಲಾ ಜಯವರ್ಧನೆ ಸೇರಿದಂತೆ ಹಲವು ಕ್ರಿಕೆಟಿಗರು ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು.

    ಸೆಹ್ವಾಗ್ ನೇತೃತ್ವದ ಪ್ಯಾಲೇಸ್ ಡೈಮಂಡ್ಸ್ ತಂಡವನ್ನು ಶಾಹಿದ್ ಅಫ್ರಿದಿ ನೇತೃತ್ವದ ರಾಯಲ್ಸ್ ತಂಡ ಸೋಲಿಸಿತ್ತು. ಪಂದ್ಯದ ಬಳಿಕ ಅಫ್ರಿದಿ ಅಭಿಮಾನಿಗಳ ಬಳಿ ಧಾವಿಸಿ ಫೋಟೋಗಳಿಗೆ ಪೋಸ್ ನೀಡುತ್ತಿದ್ದರು.

    ಈ ವೇಳೆ ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದುಕೊಂಡಿದ್ದ ಭಾರತದ ಮಹಿಳಾ ಅಭಿಮಾನಿಯೊಬ್ಬರು ಅಫ್ರಿದಿ ಜೊತೆ ಫೋಟೋ ತೆಗೆಯಲು ಮುಂದಾಗಿದ್ದರು. ಮಹಿಳಾ ಅಭಿಮಾನಿ ಸರಿಯಾಗಿ ಧ್ವಜ ಹಿಡಿದುಕೊಳ್ಳದೇ ಇರುವುದನ್ನು ಗಮನಿಸಿದ ಅಫ್ರಿದಿ, ಧ್ವಜವನ್ನು ಬಿಡಿಸಿ ಎಂದು ಹೇಳಿದರು. ಕೂಡಲೇ ಮಹಿಳಾ ಅಭಿಮಾನಿ ಧ್ವಜವನ್ನು ಬಿಡಿಸಿ ಅಫ್ರಿದಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು.

    ಅಫ್ರಿದಿ ಈಗ ಮಹಿಳಾ ಅಭಿಮಾನಿಯ ಜೊತೆ ಕ್ಲಿಕ್ಕಿಸಿಕೊಂಡ ವಿಡಿಯೋ ಈಗ ವೈರಲ್ ಆಗಿದ್ದು, ಭಾರತೀಯರ ಅಫ್ರಿದಿಯನ್ನು ಹೊಗಳಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ.

    https://twitter.com/Nibrazcricket/status/962004645806718977