Tag: African Union

  • G20 ಒಕ್ಕೂಟಕ್ಕೆ ಆಫ್ರಿಕನ್ ಯೂನಿಯನ್ ಸೇರ್ಪಡೆ

    G20 ಒಕ್ಕೂಟಕ್ಕೆ ಆಫ್ರಿಕನ್ ಯೂನಿಯನ್ ಸೇರ್ಪಡೆ

    ನವದೆಹಲಿ: ಜಿ20 ಒಕ್ಕೂಟ ರಾಷ್ಟ್ರಗಳ ಪಟ್ಟಿಗೆ ಆಫ್ರಿಕನ್ ಯೂನಿಯನ್ (African Union) ಸೇರ್ಪಡೆಯಾಗಿದ್ದು ಈ ಮೂಲಕ ದೆಹಲಿಯಲ್ಲಿ (Delhi) ನಡೆಯುತ್ತಿರುವ ಜಿ20 ಶೃಂಗಸಭೆ (G20 Summit) ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಜಿ20 ಅಧ್ಯಕ್ಷ ರಾಷ್ಟ್ರ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಆಫ್ರಿಕನ್ ಯೂನಿಯನ್ ಅಧ್ಯಕ್ಷ ಅಜಲಿ ಅಸ್ಸೌಮಾ ಅವರನ್ನು ಅಪ್ಪಿಕೊಳ್ಳುವ ಮೂಲಕ ಒಕ್ಕೂಟಕ್ಕೆ ಸ್ವಾಗತಿಸಿದರು.

    ಜಿ20 ಸೇರ್ಪಡೆಯಾಗುತ್ತಿದ್ದಂತೆ ಸಭೆ ಉದ್ದೇಶಿಸಿ ಮಾತು ಆರಂಭಿಸಿದ ನರೇಂದ್ರ ಮೋದಿ, ನಿಮ್ಮೆಲ್ಲರ ಬೆಂಬಲದೊಂದಿಗೆ ನಾನು ಆಫ್ರಿಕನ್ ಯೂನಿಯನ್ ಅನ್ನು ಜಿ20 ಗೆ ಸೇರಲು ಆಹ್ವಾನಿಸುತ್ತೇನೆ ಎಂದು ಹೇಳಿದರು. ಬಳಿಕ ಆಫ್ರಿಕನ್ ಯೂನಿಯನ್ ಅನ್ನು ಜಿ20ಗೆ ಸೇರಲು ಆಹ್ವಾನಿಸಿದರು. ಪ್ರಧಾನಿ ಮೋದಿ ಪ್ರಸ್ತಾಪವನ್ನು ಎಲ್ಲಾ ಸದಸ್ಯ ರಾಷ್ಟ್ರಗಳು ಒಪ್ಪಿಕೊಂಡ ಬಳಿಕ ಕೊಮೊರೊಸ್ ಒಕ್ಕೂಟ ಮತ್ತು ಆಫ್ರಿಕನ್ ಯೂನಿಯನ್ ಅಧ್ಯಕ್ಷ ಅಜಲಿ ಅಸ್ಸೌಮಾನಿ ಅವರನ್ನು ಜಿ20 ಹೈ ಟೇಬಲ್‌ನಲ್ಲಿ ತಮ್ಮ ಸ್ಥಾನವನ್ನು ಪಡೆದುಕೊಳ್ಳಲು ಆಹ್ವಾನಿಸಲಾಯಿತು.

    ಆಫ್ರಿಕನ್ ಯೂನಿಯನ್ 55 ರಾಷ್ಟ್ರಗಳನ್ನು ಒಳಗೊಂಡಿದೆ ಜಿ20ನಲ್ಲಿ ಅದರ ಸೇರ್ಪಡೆಯೊಂದಿಗೆ, ಈ ಮೂಲಕ ಯುರೋಪಿಯನ್ ಒಕ್ಕೂಟದ ಬಳಿಕ 2ನೇ ಅತಿದೊಡ್ಡ ಯೂನಿಯನ್ ಇದಾಗಿದೆ. ಆಫ್ರಿಕನ್ ಯೂನಿಯನ್ ಪ್ರವೇಶದ ಬಳಿಕ ಜಿ20 ಅನ್ನು ಜಿ21 ಎಂದು ಮರುನಾಮಕರಣ ಮಾಡುವ ನಿರೀಕ್ಷೆಯಿದೆ. ಇದನ್ನೂ ಓದಿ: ಜಿ20 ಸಭೆಯಲ್ಲಿ ಮತ್ತೆ ‘ಭಾರತ್’ ನಾಮಸ್ಮರಣೆ – ಪ್ರಧಾನಿ ಆಸನದ ಮುಂದೆ ಭಾರತ್ ಪದ ಬಳಕೆ

    ಜಿ20ಗೆ ಆಫ್ರಿಕನ್ ಯೂನಿಯನ್ ಸೇರ್ಪಡೆಯಾದ ಬಳಿಕ ಟ್ವೀಟ್ ಮಾಡಿದ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಮಾಫೋಸಾ ಸಂತಸ ವ್ಯಕ್ತಪಡಿಸಿದ್ದಾರೆ. ಜಿ20 ಸದಸ್ಯತ್ವ ಸ್ವೀಕರಿಸಿರುವುದು ನಮಗೆ ಸಂತೋಷವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜಾಗತಿಕ ಒಳಿತಿಗಾಗಿ ನಾವೆಲ್ಲರೂ ಒಟ್ಟಾಗಿ ನಡೆಯಬೇಕಾದ ಸಮಯ ಇದು: ಮೋದಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಾಗತಿಕ ಒಳಿತಿಗಾಗಿ ನಾವೆಲ್ಲರೂ ಒಟ್ಟಾಗಿ ನಡೆಯಬೇಕಾದ ಸಮಯ ಇದು: ಮೋದಿ

    ಜಾಗತಿಕ ಒಳಿತಿಗಾಗಿ ನಾವೆಲ್ಲರೂ ಒಟ್ಟಾಗಿ ನಡೆಯಬೇಕಾದ ಸಮಯ ಇದು: ಮೋದಿ

    ನವದೆಹಲಿ: ಕೋವಿಡ್ ನಂತರದ ಪ್ರಪಂಚವು ನಂಬಿಕೆಯ ಕೊರತೆಯಿಂದ ಬಳಲುತ್ತಿದೆ. ಯುದ್ಧವು ಅದನ್ನು ಮತ್ತಷ್ಟು ಆಳಗೊಳಿಸಿದೆ. ಹಳೆಯ ಸಮಸ್ಯೆಗಳು ಉತ್ತರಗಳನ್ನು ಹುಡುಕುತ್ತಿರುವ ಕಾಲದಲ್ಲಿ ನಾವು ವಾಸಿಸುತ್ತಿದ್ದೇವೆ. ಮಾನವ ಕೇಂದ್ರಿತ ವಿಧಾನದೊಂದಿಗೆ ನಮ್ಮ ಜವಾಬ್ದಾರಿಗಳನ್ನು ಪೂರೈಸುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅಭಿಪ್ರಾಯಪಟ್ಟಿದ್ದಾರೆ.

    ಜಿ20 ಶೃಂಗಸಭೆಯನ್ನು (G20 Summit) ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಾಯಸ್ ಎಂಬ ಕಲ್ಪನೆಯು ಜಗತ್ತಿಗೆ ಮಾರ್ಗದರ್ಶಿಯಾಗಬಹುದು. ನಾವು ಕೋವಿಡ್ ಅನ್ನು ಸೋಲಿಸಲು ಸಾಧ್ಯವಾದರೆ, ಯುದ್ಧದಿಂದ ಉಂಟಾದ ನಂಬಿಕೆಯ ಕೊರತೆಯ ಮೇಲೂ ನಾವು ಜಯಗಳಿಸಬಹುದು ಎಂದರು. ಇದನ್ನೂ ಓದಿ: ಭಾರತ, ಅಮೆರಿಕದ ನಡುವೆ ದ್ವಿಪಕ್ಷೀಯ ಮಾತುಕತೆ – ಮೋದಿ, ಬೈಡೆನ್ ಮಧ್ಯೆ ಏನು ಚರ್ಚೆ ನಡೆದಿದೆ?

    ಜಿ20 ಅಧ್ಯಕ್ಷರಾಗಿ ಭಾರತವು ನಂಬಿಕೆ ಕೊರತೆಯನ್ನು ಪರಸ್ಪರ ವಿಶ್ವಾಸವನ್ನಾಗಿ ಪರಿವರ್ತಿಸಲು ಇಡೀ ಜಗತ್ತಿಗೆ ಮನವಿ ಮಾಡುತ್ತದೆ. ಜಾಗತಿಕ ಒಳಿತಿಗಾಗಿ ನಾವೆಲ್ಲರೂ ಒಟ್ಟಾಗಿ ನಡೆಯಬೇಕಾದ ಸಮಯ ಇದು. ಆಫ್ರಿಕನ್ ಯೂನಿಯನ್ (African Union) ಅನ್ನು ಶಾಶ್ವತ ಜಿ20 ಸದಸ್ಯರನ್ನಾಗಿ ಮಾಡಲು ಭಾರತ ಪ್ರಸ್ತಾಪಿಸುತ್ತದೆ. ಈ ಪ್ರಸ್ತಾವನೆಯನ್ನು ಎಲ್ಲಾ ಸದಸ್ಯರು ಒಪ್ಪುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು. ಇದನ್ನೂ ಓದಿ: ನಾನೊಬ್ಬ ಹೆಮ್ಮೆಯ ಹಿಂದೂ: ರಿಷಿ ಸುನಕ್

    ಉತ್ತರ ಮತ್ತು ದಕ್ಷಿಣದ ನಡುವಿನ ಒಡಕು, ಪೂರ್ವ ಮತ್ತು ಪಶ್ಚಿಮ ನಡುವಿನ ಅಂತರ, ಆಹಾರ ಮತ್ತು ಇಂಧನ ನಿರ್ವಹಣೆ, ಭಯೋತ್ಪಾದನೆ, ಸೈಬರ್ ಭದ್ರತೆ, ಆರೋಗ್ಯ, ಇಂಧನ ಅಥವಾ ನೀರಿನ ಭದ್ರತೆ, ಭವಿಷ್ಯದ ಪೀಳಿಗೆಗೆ ನಾವು ದೃಢವಾದ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ ಎಂದರು. ಇದನ್ನೂ ಓದಿ: ರಷ್ಯಾ-ಉಕ್ರೇನ್‌ ಯುದ್ಧ ವಿಚಾರದಲ್ಲಿ ಭಾರತದ ನಿಲುವಿಗೆ ನಮ್ಮ ಸಹಮತ ಇದೆ: ರಾಹುಲ್‌ ಗಾಂಧಿ

    ನಿಮ್ಮೆಲ್ಲರ ಬೆಂಬಲದೊಂದಿಗೆ, ನಾನು ಆಫ್ರಿಕನ್ ಯೂನಿಯನ್ ಅನ್ನು ಜಿ20ಗೆ ಸೇರಲು ಆಹ್ವಾನಿಸುತ್ತೇನೆ ಎಂದ ಮೋದಿ ಬಳಿಕ ಆಫ್ರಿಕನ್ ಯೂನಿಯನ್ ಅನ್ನು ಜಿ20ಗೆ ಸೇರಲು ಆಹ್ವಾನಿಸಿದರು. ಪ್ರಧಾನಿ ಮೋದಿ ಪ್ರಸ್ತಾಪವನ್ನು ಎಲ್ಲಾ ಸದಸ್ಯ ರಾಷ್ಟ್ರಗಳು ಒಪ್ಪಿಕೊಂಡವು. ಕೊಮೊರೊಸ್ ಒಕ್ಕೂಟದ ಅಧ್ಯಕ್ಷ, ಆಫ್ರಿಕನ್ ಯೂನಿಯನ್ (AU) ಅಧ್ಯಕ್ಷ ಅಜಲಿ ಅಸ್ಸೌಮಾನಿ ಅವರನ್ನು ಜಿ20 ಹೈ ಟೇಬಲ್‍ನಲ್ಲಿ ತಮ್ಮ ಸ್ಥಾನವನ್ನು ಪಡೆದುಕೊಳ್ಳಲು ಆಹ್ವಾನಿಸಲಾಯಿತು. ಇದನ್ನೂ ಓದಿ: HAL ಜೊತೆಗೂಡಿ ಫೈಟರ್‌ ಜೆಟ್‌ ಎಂಜಿನ್‌ ತಯಾರಿಕೆ & ನಾಗರಿಕ ಪರಮಾಣು ತಂತ್ರಜ್ಞಾನದ ಬಗ್ಗೆ ಮೋದಿ-ಬೈಡನ್ ಚರ್ಚೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]