Tag: Africa Cheetah

  • ಮೈಸೂರು ಮೃಗಾಲಯಕ್ಕೆ ಬಂತು ಆಫ್ರಿಕಾ ಚೀತಾ

    ಮೈಸೂರು ಮೃಗಾಲಯಕ್ಕೆ ಬಂತು ಆಫ್ರಿಕಾ ಚೀತಾ

    – ಪ್ರಪಂಚದಲ್ಲೇ ಅತಿ ವೇಗವಾಗಿ ಚಲಿಸುವ ಪ್ರಾಣಿ

    ಮೈಸೂರು: ಜಿಲ್ಲೆಯ ಚಾಮರಾಜೇಂದ್ರ ಮೃಗಾಲಯಕ್ಕೆ ವೇಗದ ಸರದಾರ ಆಫ್ರಿಕಾ ಚೀತಾ ಆಗಮನವಾಗಿದೆ.

    ಆಫ್ರಿಕನ್ ಚೀತಾ ಪ್ರಪಂಚದಲ್ಲೇ ಅತಿ ವೇಗವಾಗಿ ಚಲಿಸುವ ಪ್ರಾಣಿ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಇದೀಗ ಪ್ರಾಣಿ ವಿನಿಮಯ ಯೋಜನೆ ಮೂಲಕ ದಕ್ಷಿಣಾ ಆಫ್ರಿಕಾದಿಂದ ಚಿರತೆಯನ್ನು ರವಾನೆ ಮಾಡಲಾಗಿದೆ. ಸಿಂಗಪೂರ ಮಾರ್ಗವಾಗಿ ಮೈಸೂರು ಮೃಗಾಲಯಕ್ಕೆ ಚೀತಾ ತಲುಪಿದೆ. ಈ ಬಗ್ಗೆ ಕರ್ನಾಟಕ ಮೃಗಾಲಯದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಲಾಗಿದೆ.

    “ದಕ್ಷಿಣ ಆಫ್ರಿಕಾದಿಂದ ಸಿಂಗಾಪುರದ ಮಾರ್ಗವಾಗಿ ಆಫ್ರಿಕಾ ಚೀತಾ ಮೈಸೂರು ಮೃಗಾಲಯಕ್ಕೆ ಆಗಮನವಾಗಿದೆ. ನಿರ್ದೇಶಕ ಅಜಿತ್ ಕುಲಕರ್ಣಿ ಅವರ ನೇತೃತ್ವದ ತಂಡಕ್ಕೆ ಧನ್ಯವಾದಗಳು. ಕ್ವಾರಂಟೈನ್ ಅವಧಿ ಮುಗಿದಿದ್ದು, ಈಗ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಲಾಗಿದೆ” ಎಂದು ಟ್ವಿಟ್ಟರಿನಲ್ಲಿ ತಿಳಿಸಲಾಗಿದೆ. ಜೊತೆಗೆ ಆಫ್ರಿಕಾ ಚೀತಾದ ಫೋಟೋಗಳನ್ನು ಹಂಚಿಕೊಂಡಿದೆ.

    ಮೃಗಾಲಯ ನಿರ್ದೇಶಕ ಅಜಿತ್ ಕುಲಕರ್ಣಿ ನೇತೃತ್ವದಲ್ಲಿ ಚೀತಾವನ್ನು ವಿನಿಮಯ ಮಾಡಿಕೊಳ್ಳಲಾಗಿದೆ. ಕಳೆದ ಕೆಲ ದಿನಗಳ ಹಿಂದೆಯೇ ಆಫ್ರಿಕಾ ಚೀತಾದ ಆಗಮನವಾಗಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಇದೀಗ ಕ್ವಾರಂಟೈನ್ ಅವಧಿ ಮುಗಿಸಿ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿದೆ.