Tag: africa

  • ಆಫ್ರಿಕಾದಲ್ಲಿ ಹೆಚ್ಚಾಗ್ತಿದೆ ಮಾರಕ ಮಾರ್ಬರ್ಗ್‌ ವೈರಸ್‌ – ಈ ರೋಗಕ್ಕಿಲ್ಲ ಲಸಿಕೆ!

    ಆಫ್ರಿಕಾದಲ್ಲಿ ಹೆಚ್ಚಾಗ್ತಿದೆ ಮಾರಕ ಮಾರ್ಬರ್ಗ್‌ ವೈರಸ್‌ – ಈ ರೋಗಕ್ಕಿಲ್ಲ ಲಸಿಕೆ!

    ಕೊರೊನಾ ವೈರಸ್‌, ಎಂಪಾಕ್ಸ್‌ ಸೇರಿದಂತೆ ವಿವಿಧ ವೈರಸ್‌ಗಳು ಜಗತ್ತಿನಾದ್ಯಂತ ಹೆಚ್ಚಾಗುತ್ತಿವೆ. ದಿನ ಕಳೆದಂತೆ ಜನರು ಹೊಸ ಹೊಸ ಕಾಯಿಲೆಗೆ ತುತ್ತಾಗುತ್ತಲೇ ಇದ್ದಾರೆ. ಆ ಪಟ್ಟಿಗೆ ಈಗ ಅಪಾಯಕಾರಿ ಮಾರ್ಬರ್ಗ್ ವೈರಸ್ (Marburg Virus) ಕೂಡ ಸೇರಿದೆ. ಆಫ್ರಿಕಾದ (Africa) ರುವಾಂಡದಲ್ಲಿ (Rwanda) ಸೆಪ್ಟೆಂಬರ್‌ ಅಂತ್ಯದಲ್ಲಿ ಮಾರ್ಬರ್ಗ್‌ ವೈರಸ್‌ಗೆ 11 ಮಂದಿ ಸಾವನ್ನಪ್ಪಿದ್ದು, 49 ಮಂದಿ ಸೋಂಕಿಗೆ ತುತ್ತಾಗಿದ್ದಾರೆ ಎಂದು ರುವಾಂಡದ ಆರೋಗ್ಯ ಸಚಿವರು ತಿಳಿಸಿದ್ದಾರೆ. ಹಾಗಿದ್ರೆ ಏನಿದು ಮಾರ್ಬರ್ಗ್‌ ವೈರಸ್?‌ ರೋಗಲಕ್ಷಣಗಳೇನು ಎಂಬುದನ್ನು ನೋಡೋಣ.

    ಮಾರ್ಬರ್ಗ್ ವೈರಸ್ ಎಂದರೇನು?
    ಮಾರ್ಬರ್ಗ್ ವೈರಸ್ ಅನ್ನು ಹೆಮರಾಜಿಕ್‌ ಜ್ವರ (Haemorrhagic Fever) ಅಂತಲೂ ಕರೆಯಲಾಗುತ್ತದೆ. ಈ ಸಾಂಕ್ರಾಮಿಕ ರೋಗವು ಬಾವಲಿಗಳಿಗೆ ಮೊದಲು ಹರಡಿ ನಂತರ ಮನುಷ್ಯರಿಗೂ ಹರಡುತ್ತದೆ. ನಂತರ ರೋಗಿಯ ಸಂಪರ್ಕದಲ್ಲಿರುವ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ರೋಗ ಇದಾಗಿದೆ. ಇದರಿಂದ ಶೇಕಡಾ 88ರಷ್ಟು ಸಾಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

    ಮಾರ್ಬರ್ಗ್ ರೋಗ ಹೆಚ್ಚಿನ ಸೋಂಕುಕಾರಕ ಕಾಯಿಲೆಯಾಗಿದ್ದು, ಸದ್ಯ ಆಫ್ರಿಕಾ ದೇಶದ ಜನರನ್ನು ಅಲ್ಲಿನ ಸರ್ಕಾರ ಎಚ್ಚರವಾಗಿರುವಂತೆ ಹೇಳಿದೆ ಮತ್ತು ಇದಕ್ಕೆ ತಕ್ಕಂತಹ ತ್ವರಿತ ಕಾರ್ಯವಿಧಾನಗಳನ್ನು ಅನುಸರಿಸಿದೆ.

    ಮಾರ್ಬರ್ಗ್ ರೋಗ ಹೇಗೆ ಹರಡುತ್ತದೆ?
    ಎಬೋಲಾದಂತೆ, ಮಾರ್ಬರ್ಗ್ ವೈರಸ್ ಬಾವಲಿಗಳಲ್ಲಿ ಹುಟ್ಟುತ್ತದೆ ಮತ್ತು ಸೋಂಕಿತ ಜನರೊಂದಿಗೆ ಯಾರು ಸಂಪರ್ಕದಲ್ಲಿರುತ್ತಾರೆ ಅವರ ಆರೈಕೆಯಲ್ಲಿರುವವರಿಗೆ ಹರಡುತ್ತದೆ ಎಂದು ಸಂಶೋಧನೆಯ ಮೂಲಕ ತಿಳಿದುಬಂದಿದೆ.

    ಮಾರ್ಬರ್ಗ್ ಅನ್ನು ಮೊದಲ ಬಾರಿಗೆ 1967 ರಲ್ಲಿ ಗುರುತಿಸಲಾಯಿತು. ಜರ್ಮನಿಯ ಮಾರ್ಬರ್ಗ್ ಮತ್ತು ಫ್ರಾಂಕ್‌ಫರ್ಟ್ ಮತ್ತು ಸರ್ಬಿಯಾದ ಬೆಲ್‌ಗ್ರೇಡ್‌ನಲ್ಲಿ ಏಕಕಾಲದಲ್ಲಿ ಕಾಣಿಸಿಕೊಂಡ ಈ ವೈರಸ್ ಆಫ್ರಿಕನ್ ಹಸಿರು ಉಗಾಂಡಾ ಕೋತಿಗಳಿಗೆ ಸಂಬಂಧಿಸಿದೆ. ಆ ಸಮಯದಲ್ಲಿ 31 ಪ್ರಕರಣಗಳು ಮತ್ತು ಏಳು ಸಾವುಗಳು ವರದಿಯಾಗಿದೆ.

    ಅಂಗೋಲಾ, ಕಾಂಗೋ, ಕೀನ್ಯಾ, ದಕ್ಷಿಣ ಆಫ್ರಿಕಾ ಮತ್ತು ಉಗಾಂಡಾ ಸೇರಿ ಹಲವು ಆಫ್ರಿಕನ್ ದೇಶಗಳಲ್ಲಿ ಇದನ್ನು 1967ರಲ್ಲಿ ಗುರುತಿಸಲಾಯಿತು. ಮಾರ್ಬರ್ಗ್ ವೈರಸ್ ಇರುವ ವ್ಯಕ್ತಿಯು ಹೆಮರಾಜಿಕ್ ಜ್ವರಕ್ಕೆ ತುತ್ತಾಗುತ್ತಾನೆ.

    ಎಬೋಲಾದಂತೆ ಮಾರ್ಬರ್ಗ್ ವೈರಸ್ ಸಹ ಬಾವಲಿಗಳಿಂದ ಮೂಲಸ್ಥಾನ ಪಡೆದಿದ್ದು, ಜನರ ನಡುವೆ ಹರಡಲು, ಅವರ ದೇಹದ ದ್ರವ, ಯಾವುದಾದರೂ ಮೇಲ್ಮೈ ಪ್ರದೇಶ ಅಥವಾ ಸೋಂಕು ಈಗಾಗಲೇ ಹರಡಿಕೊಂಡಿರುವ ಬೆಡ್ ಶೀಟ್ ಈ ತರಹದ ವಸ್ತುಗಳನ್ನು ಉಪಯೋಗಿಸಿ ಕೊಳ್ಳುತ್ತದೆ.

    ಮಾರ್ಬರ್ಗ್ ಕಾಯಿಲೆಯ ಲಕ್ಷಣಗಳು:
    ತೀವ್ರ ಜ್ವರದಿಂದ ಬಳಲುವುದು ಮಾರ್ಬರ್ಗ್ ವೈರಸ್​​​ನ ಮೊದಲ ಲಕ್ಷಣ. ಜೊತೆಗೆ ತಲೆನೋವು, ಸುಸ್ತು ಮುಂತಾದ ಲಕ್ಷಣಗಳನ್ನು ಕಾಣಬಹುದು. ಅನೇಕ ರೋಗಿಗಳಲ್ಲಿ ಏಳು ದಿನಗಳಲ್ಲಿ ತೀವ್ರವಾದ ರಕ್ತಸ್ರಾವದ ಲಕ್ಷಣಗಳನ್ನು ಕೂಡ ಕಾಣಬಹುದು.

    ಈ ವೈರಸ್‌ ಬಾವಲಿಗಳ ಮೂಲಕ ಮನುಷ್ಯರಿಗೆ ತಗುಲುತ್ತದೆ ಹಾಗೂ ಮನುಷ್ಯರಿಂದ ಮನುಷ್ಯರಿಗೆ ರಕ್ತ, ಸಲೈವಾ ಸೇರಿದಂತೆ ದೇಹದ ದ್ರವಗಳಿಂದ ಹರಡುತ್ತದೆ. ಸೋಂಕಿತ ವ್ಯಕ್ತಿಗೆ ಅತಿಯಾದ ತಲೆ ನೋವು, ಜ್ವರ, ಮಾಂಸ ಖಂಡಗಳಲ್ಲಿ ನೋವಿನ ಜೊತೆಗೆ ರಕ್ತ ವಾಂತಿ ಆಗುತ್ತದೆ. ರೋಗ ಲಕ್ಷಣಗಳು ತೀವ್ರವಾದರೆ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಿದೆ.

    ಎಬೋಲಾ ಸೋಂಕಿತರಲ್ಲಿ ಕಾಣಿಸುವ ರೀತಿಯಲ್ಲೇ ಜ್ವರ ಮತ್ತು ರಕ್ತಸ್ರಾವವು ಉಂಟಾಗುತ್ತದೆ. ಆದರೆ, ಎಬೋಲಾಗೂ ಮಾರ್ಬರ್ಗ್‌ ವೈರಸ್‌ಗೂ ವ್ಯತ್ಯಾಸವಿದೆ. ಸೋಂಕಿತ ವ್ಯಕ್ತಿ ಅಥವಾ ಪ್ರಾಣಿ ದೇಹದ ದ್ರವಗಳ ಮೂಲಕ ಮತ್ತೊಬ್ಬರಿಗೆ ಈ ವೈರಸ್‌ ಸುಲಭವಾಗಿ ಹರಡುತ್ತದೆ. ಸೋಂಕು ತಗುಲಿದ ಎರಡರಿಂದ 21 ದಿನಗಳಲ್ಲಿ ದೇಹದಲ್ಲಿ ರೋಗದ ಲಕ್ಷಣಗಳು ಕಂಡು ಬರುತ್ತವೆ ಎಂದು ತಜ್ಞರು ತಿಳಿಸಿದ್ದಾರೆ.

    ಮಾರ್ಬರ್ಗ್ ಕಾಯಿಲೆಗೆ ಚಿಕಿತ್ಸೆ ಏನು?
    ಮಾರ್ಬರ್ಗ್ ಕಾಯಿಲೆಗೆ ಸದ್ಯಕ್ಕೆ ಯಾವುದೇ ಅನುಮೋದಿತ ಚಿಕಿತ್ಸೆಗಳಿಲ್ಲ. CDCಯ ಪ್ರಕಾರ ಚಿಕಿತ್ಸೆಯ ಆಯ್ಕೆಗಳನ್ನು ಬೆಂಬಲ ಆರೈಕೆಗೆ ನಿರ್ಬಂಧಿಸಲಾಗಿದೆ. ಇದು ಸಾಕಷ್ಟು ನಿದ್ರೆ ಪಡೆಯುವುದು, ರಕ್ತದೊತ್ತಡ ಮತ್ತು ಆಮ್ಲಜನಕದ ಮಟ್ಟವನ್ನು ನಿಯಂತ್ರಿಸುವುದು ಮತ್ತು ಯಾವುದೇ ದ್ವಿತೀಯಕ ಸೋಂಕುಗಳಿಗೆ ಚಿಕಿತ್ಸೆ ನೀಡುವುದನ್ನು ಒಳಗೊಂಡಿರುತ್ತದೆ.

    ಮಾರ್ಬರ್ಗ್‌ ಸೋಂಕಿಗೆ ನಿರ್ದಿಷ್ಟ ಚಿಕಿತ್ಸೆ ಈವರೆಗೂ ಅಭಿವೃದ್ಧಿ ಪಡಿಸಲಾಗಿಲ್ಲ. ಆದರೆ, ಸಾಕಷ್ಟು ನೀರು ಕುಡಿಯುವುದು ಹಾಗೂ ನಿರ್ದಿಷ್ಟ ಲಕ್ಷಣಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ರೋಗಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬಹುದು ಎಂದು ವೈದ್ಯರು ಹೇಳಿದ್ದಾರೆ.‌

    ಬಾವಲಿಗಳು ಹೆಚ್ಚಾಗಿ ಸಂಚರಿಸುವ, ಬದುಕುವ ಗುಹೆಗಳ ಬಳಿಗೆ ಹೋಗದಂತೆ ರುವಾಂಡನ್ ಅಧಿಕಾರಿಗಳು ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಎಲ್ಲ ಮಾಂಸ ಪದಾರ್ಥಗಳನ್ನು ಚೆನ್ನಾಗಿ ಬೇಯಿಸಿ ಸೇವಿಸುವಂತೆ ತಿಳಿಸಲಾಗಿದೆ. 2005ರಲ್ಲಿ ಅಂಗೋಲಾದಲ್ಲಿ ಮಾರ್ಬರ್ಗ್‌ನಿಂದಾಗಿ 200 ಜನರು ಸಾವಿಗೀಡಾಗಿದ್ದರು.

  • ಅಳಿವಿನಂಚಿನಲ್ಲಿ ಬಾಬಾಬ್‌ ಮರಗಳು  – ಕಾರಣವೇನು?

    ಅಳಿವಿನಂಚಿನಲ್ಲಿ ಬಾಬಾಬ್‌ ಮರಗಳು  – ಕಾರಣವೇನು?

    ನೈಸರ್ಗಿಕ ವಾಟರ್‌ ಟ್ಯಾಂಕ್‌ ಎಂದು ಕರೆಯಲ್ಪಡುವ ಬಾಬಾಬ್‌ ಮರಗಳು (Baobab Trees) ಬದಲಾಗುತ್ತಿರುವ ಹವಾಮಾನ (Weather) ಹಾಗೂ ಪರಿಸರದ ಮೇಲಿನ ಮನುಷ್ಯನ ಮಿತಿ ಮೀರಿದ ದಾಳಿಯಿಂದ ಅಪಾಯದಲ್ಲಿವೆ. ಇದು ಎಷ್ಟರ ಮಟ್ಟಿಗೆ ತಲುಪಿದೆ ಎಂದರೆ 2080ರ ವೇಳೆಗೆ ಈ ವರ್ಗದ ಕೆಲವು ಮರಗಳು ಸಂಪೂರ್ಣವಾಗಿ ನಾಶಹೊಂದಲಿವೆ ಎಂದು ಇಂಟರ್‌ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಷನ್ ಆಫ್ ನೇಚರ್ (IUCN) ನಡೆಸಿದ ಸಂಶೋಧನಾ ವರದಿ ತಿಳಿಸಿದೆ. 

    ಬಾಬಾಬ್ ಮರಗಳು ಎಂದರೇನು?

    ಬಾಬಾಬ್ ಮರಗಳ ಡಿಎನ್ಎ (DNA) ಅಧ್ಯಯನಗಳ ಪ್ರಕಾರ, ಮರಗಳು ಮೊದಲು 21 ಮಿಲಿಯನ್ ವರ್ಷಗಳ ಹಿಂದೆ ಮಡ್ಗಾಸ್ಕರ್‌ನಲ್ಲಿ (Madagascar) ಹುಟ್ಟಿಕೊಂಡಿವೆ. ಮರಗಳ ಬೀಜಗಳು ನಂತರ ಸಮುದ್ರದ ಪ್ರವಾಹದಲ್ಲಿ ಆಸ್ಟ್ರೇಲಿಯಾಕ್ಕೆ (Australia) ಮತ್ತು ಆಫ್ರಿಕಾದ (Africa) ಮುಖ್ಯ ಭೂಭಾಗಗಳಿಗೆ ಬಂದು ವಿಭಿನ್ನ ಜಾತಿಗಳಾಗಿ ವಿಕಸನಗೊಂಡಿವೆ.

    ಬಾವೊಬಾಬ್ ಮರಗಳು ಅಡಾನ್ಸೋನಿಯಾ ಕುಲಕ್ಕೆ ಸೇರಿದ್ದು, ಇದರಲ್ಲಿ  9 ಜಾತಿಗಳಿವೆ ಎರಡು ಆಫ್ರಿಕಾ, ಆರು ಮಡಗಾಸ್ಕರ್‌ಗೆ ಮತ್ತು ಒಂದು ಆಸ್ಟ್ರೇಲಿಯಾಕ್ಕೆ ಸೇರಿದೆ. ಕೆಲವು ಪ್ರಬೇಧಗಳು ಭಾರತದಲ್ಲೂ ಕಂಡು ಬರುತ್ತವೆ. ಮಧ್ಯಪ್ರದೇಶದ ಧಾರ್ ಜಿಲ್ಲೆಯ ಮಾಂಡು ಬಾಬಾಬ್‌ ಮರಗಳು ಹೇರಳವಾಗಿ ಕಂಡುಬರುವ ಭಾರತದ ಏಕೈಕ ಸ್ಥಳವಾಗಿದೆ. ಈ ಪ್ರದೇಶದಲ್ಲಿ ಅಂದಾಜು 1,000 ಮರಗಳಿವೆ. 

    ಬಾಬಾಬ್ ಮರಗಳು ಎತ್ತರಕ್ಕೆ ಹೆಸರುವಾಸಿಯಾಗಿದ್ದು, 50 ಮೀಟರ್‌ಗಳವರೆಗೆ ಈ ಮರಗಳು ಬೆಳೆಯುತ್ತವೆ. ಈ ಮರಗಳ  ಜೀವಿತಾವಧಿಯು 2,000 ವರ್ಷಗಳಾಗಿದೆ. ಭಾರತದಲ್ಲಿಯೂ ಬಾಬಾಬ್‌ ಮರಗಳು ಕಂಡುಬರುತ್ತವೆ. ಆಂಧ್ರಪ್ರದೇಶದ ಗೋಲ್ಕೊಂಡ ಕೋಟೆಯ ಬಳಿ ಇರುವ ಬಾಬಾಬ್‌ ಮರ 400 ವರ್ಷಗಳಿಗಿಂತ ಹೆಚ್ಚು ಹಳೆಯದು ಎನ್ನಲಾಗಿದೆ. ಕರ್ನಾಟಕದ ದೇವದುರ್ಗದಲ್ಲಿ 500 ವರ್ಷಗಳ ಹಳೆಯ ಬಾಬಾಬ್ ಮರವಿದೆ. ಮತ್ತೊಂದು ಮರವು ಹಾವೇರಿ (Haveri) ಜಿಲ್ಲೆಯ ಹವನೂರ್‌ನಲ್ಲಿದೆ.

    ಮರಗಳ ಸುತ್ತಳತೆ ದೊಡ್ಡ ಗಾತ್ರದ್ದಾಗಿದ್ದು, ಕಾಂಡದ ಮೇಲೆ ತೆಳುವಾದ ಸಿಪ್ಪೆಯ ರೀತಿಯ ತೊಗಟೆಯನ್ನು ಹೊಂದಿವೆ. ಈ ಮರದ ಹಣ್ಣುಗಳನ್ನು ತಿನ್ನಲು ಹಾಗೂ ಬೀಜಗಳು ಅಡುಗೆಗೆ ಬಳಸುವ ಎಣ್ಣೆಯ ತಯಾರಿಕೆಗೆ ಬಳಸಲಾಗುತ್ತದೆ. ಅಲ್ಲದೇ ಬಟ್ಟೆಗಾಗಿ ತೊಗಟೆಯ ನಾರುಗಳನ್ನು ಬಳಸಲಾಗುತ್ತದೆ. ಈ ಮರಗಳಿಂದ ಸಂಗೀತ ವಾದ್ಯಗಳನ್ನು ತಯಾರಿಸಲಾಗುತ್ತದೆ.

    ಈ ಮರದ ಕಾಂಡದಲ್ಲಿ ನೀರನ್ನು ಅಪಾರ ಪ್ರಮಾಣದಲ್ಲಿ ಸಂಗ್ರಹಿಸಿಕೊಳ್ಳುವದರಿಂದ ಬರಗಾಲದ ಸಮಯದಲ್ಲಿ ಜನ, ಕಾಂಡಕ್ಕೆ ಕನ್ನ ಕೊರೆದು ನೀರನ್ನು ಸಂಗ್ರಹಿಸಿ ಬಳಸುತ್ತಾರೆ. ಇದೇ ಕಾರಣಕ್ಕೆ ಈ ಮರಗಳನ್ನು ನೈಸರ್ಗಿಕ ವಾಟರ್‌ ಟ್ಯಾಂಕ್‌ ಎಂದು ಕರೆಯಲಾಗುತ್ತದೆ. 

    IUCN ಅಧ್ಯಯನ ವರದಿಯಲ್ಲಿ ಏನಿದೆ?

    ಬಾಬಾಬ್‌ ಮರಗಳು ಎದುರಿಸುತ್ತಿರುವ ಸಮಸ್ಯೆ ತಿಳಿಯಲು, ಮರಗಳ ಆನುವಂಶಿಕ ರಚನೆಯನ್ನು IUCN ಅಧ್ಯಯನ ಮಾಡಿದೆ. ಅಧ್ಯಯನದ ಆಧಾರದ ಮೇಲೆ ಬಾವೊಬಾಬ್ ಮರಗಳ ಮೂರು ಮಡಗಾಸ್ಕರ್ ಜಾತಿಗಳು ಅಳಿವಿನಂಚಿನಲ್ಲಿವೆ ಎಂದು ಅದು ಹೇಳಿದೆ. ಇನ್ನೂ ಉಳಿದ ಮೂರು ಜಾತಿಯ ಮರಗಳನ್ನು ಕಡಿಮೆ ಆತಂಕ ಎದುರಿಸುತ್ತಿರುವ ಪಟ್ಟಿಗೆ ಸೇರಿಸಿದೆ. ಹವಾಮಾನ ಬದಲಾವಣೆಯು 2080ರ ಮೊದಲು ಅದರ ಅಳಿವಿಗೆ ಕಾರಣವಾಗಲಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

    ಬಾಬಾಬ್ ಮರಗಳು ಸಾವಿರಾರು ವರ್ಷಗಳವರೆಗೆ ಬದುಕಬಲ್ಲವು ದಾಖಲೆಯಲ್ಲಿರುವ ಅತ್ಯಂತ ಹಳೆಯ ಬಾವೊಬಾಬ್ ಮರವೆಂದರೆ ಜಿಂಬಾಬ್ವೆಯ ಪಂಕೆಯಲ್ಲಿರುವ ಬಾಬಾಬ್‌ ಮರ. ಇದು 2450 ವರ್ಷಗಳವರೆಗೆ ಬದುಕಿತ್ತು. 

    ಬಾಬಾಬ್ ಮರಗಳಿಗಿರುವ ನಾಶಕ್ಕೆ ಕಾರಣವೇನು?

    ಬಾಬಾಬ್ ಮರಗಳುತೀವ್ರ ಅಪಾಯವನ್ನು ಎದುರಿಸುತ್ತಿವೆ. ಅತಿ ದೊಡ್ಡ ಅಪಾಯವೆಂದರೆ ಮರಗಳನ್ನು ಕಡಿದು ಕೃಷಿ ಭೂಮಿಯನ್ನಾಗಿ ಪರಿವರ್ತಿಸಲಾಗುತ್ತಿದೆ. ಮಡ್ಗಾಸ್ಕರ್‌ನಲ್ಲಿ ಪ್ರತಿ ವರ್ಷ 4,000 ಹೆಕ್ಟೇರ್ ಬಾಬಾಬ್ ಅರಣ್ಯ ನಾಶವಾಗುತ್ತದೆ. ಇದರಿಂದಾಗಿ ಬಾಬಾಬ್‌ ಮರಗಳು ವೇಗವಾಗಿ ಕ್ಷೀಣಿಸುತ್ತಿವೆ. ಇದಲ್ಲದೆ, ಹವಾಮಾನ ಬದಲಾವಣೆಯು ಈ ಮರಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ದೀರ್ಘಕಾಲದ ಬರ ಮತ್ತು ವಿಪರೀತ ತಾಪಮಾನವು ಮರದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರಬಹುದು, ಇದು ಕೆಲವು ಪ್ರದೇಶಗಳಲ್ಲಿ ಬಾಬಾಬ್ ಮರಗಳ ಸಂಖ್ಯೆಯ ಕುಸಿತಕ್ಕೆ ಕಾರಣವಾಗಬಹುದು. 

    ಬಾಬಾಬ್ ಕಾಡುಗಳಿಗೆ ಮತ್ತೊಂದು ಗಮನಾರ್ಹ ಸಮಸ್ಯೆ ಎಂದರೆ ದೈತ್ಯ ಲೆಮರ್ಸ್ ಅಥವಾ ದೈತ್ಯ ಆಮೆಗಳಂತಹ ದೊಡ್ಡ ದೇಹದ ಪ್ರಾಣಿಗಳ ಅವನತಿ. ಈ ಪ್ರಾಣಿಗಳು ತಮ್ಮ ಮಲದಲ್ಲಿ ಬಾಬಾಬ್ ಮರಗಳ ಬೀಜಗಳನ್ನು ಹರಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿವೆ. ಈ ಪ್ರಾಣಿಗಳಿಲ್ಲದೆ, ಬಾಬಾಬ್ ಬೀಜಗಳು ಪರಿಣಾಮಕಾರಿಯಾಗಿ ಹರಡುವುದಿಲ್ಲ. ಬಾಬಾಬ್‌ ಮೊಳಕೆ ಫಲ ನೀಡುವ ಮರವಾಗಿ ಬೆಳೆಯಲು ಸುಮಾರು 50 ವರ್ಷಗಳನ್ನು ತೆಗೆದುಕೊಳ್ಳುತ್ತದೆ.  ಮಡಗಾಸ್ಕರ್‌ನ ಕಾಡಿನಲ್ಲಿ 20 ವರ್ಷ ವಯಸ್ಸಿನ ಬಾಬಾಬ್ ಸಸಿಗಳನ್ನು ಗುರುತಿಸುವುದು ಬಹಳ ಕಷ್ಟ. ಅಂದರೆ ಬಹಳ ವರ್ಷಗಳಿಂದ ಬಾಬಾಬ್‌ ಬೀಜಗಳು ಮೊಳಕೆಯೊಡೆಯುವದು ನಿಂತಿದೆ ಎಂಬುದನ್ನು ಸೂಚಿಸುತ್ತದೆ. 

    ಬಾಬಾಬ್ ಮರಗಳು ಏಕೆ ಮುಖ್ಯವಾಗಿವೆ?

    ಬಾಬಾಬ್‌ ಮರಗಳು ನೈಸರ್ಗಿ ದತ್ತ ವರವಾಗಿದ್ದು, ಪ್ರಕೃತಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಪರಿಸರದ ಉಷ್ಣಾಂಶ ತಗ್ಗಿಸಲು, ಭೂಮಿಯಲ್ಲಿನ ಅಂತರ್ಜಲವನ್ನು ಕಾಪಾಡುವಲ್ಲಿ ಬಾಬಾಬ್‌ ಮರಗಳ ಪಾತ್ರ ಹೆಚ್ಚಿದೆ. ನಿಸರ್ಗದತ್ತವಾದ ಈ ಮರಗಳು ಒಮ್ಮೆ ಭೂಮಿಯಿಂದ ಕಣ್ಮರೆಯಾದರೆ ಮತ್ತೆ ಬೆಳೆಸುವುದು ಅಷ್ಟು ಸುಲಭದ ಕೆಲಸವಲ್ಲ. ಇದೇ ರೀತಿಯಾಗಿ ಹಲವಾರು ವಿಧದ ಮರಗಳನ್ನು ನಾವು ಈಗಾಗಲೇ ಕಳೆದುಕೊಂಡಿದ್ದೇವೆ. 

    ಬಾಬಾಬ್ ಮರಗಳು ಪರಿಸರ ವ್ಯವಸ್ಥೆ ಮತ್ತು ಸಾಂಸ್ಕೃತಿಕ ಪರಂಪರೆಗೆ ಗಾಢವಾಗಿ ಮಹತ್ವದ್ದಾಗಿದೆ. ತಮ್ಮ ಹಣ್ಣನ್ನು ಆರಿಸಿ ಮತ್ತು ಆಹಾರ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸಲು ಕಂಪನಿಗಳಿಗೆ ಮಾರಾಟ ಮಾಡುವ ಗ್ರಾಮೀಣ ಮಹಿಳೆಯರಿಗೆ ಅವು ಅಮೂಲ್ಯವಾಗಿವೆ. ಬಾಬಾಬ್ ಮರಗಳು ಬಡ ಸಮುದಾಯಗಳಿಗೆ ಆದಾಯದ ಮೂಲವು ಆಗಿದೆ.

    ಪ್ರವಾಸಿಗರ ಪ್ರಮುಖ ಆಕರ್ಷಣೆ ಈ ಬಾಬಾಬ್‌ 

    ಈ ದೈತ್ಯಾಕಾರದ ಮರಗಳು ಪ್ರಪಂಚದ ಅನೇಕ ಭಾಗಗಳಲ್ಲಿ ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದೆ. ಅನೇಕ ಪ್ರಯಾಣಿಕರು ಮಡ್ಗಾಸ್ಕರ್‌ ಮತ್ತು ಆಫ್ರಿಕಾದಂತಹ ಪ್ರದೇಶಗಳಿಗೆ ಬಾಬಾಬ್‌ಗಳ ಸೌಂದರ್ಯ ಹಾಗೂ ಮರಗಳ ಬಗ್ಗೆ ಅನ್ವೇಷಿಸಲು ಭೇಟಿ ನೀಡುತ್ತಾರೆ. ಇದರ ಜೊತೆಗೆ, ಕೆಲವು ಪ್ರದೇಶಗಳಲ್ಲಿ, ಬಾಬಾಬ್‌ಗಳು ವಿಶಿಷ್ಟ ವನ್ಯಜೀವಿಗಳಿಗೆ ನೆಲೆಯಾಗಿದೆ. ಈ ಕಾರಣಕ್ಕೆ ಮರಗಳು ಪಕ್ಷಿ ವೀಕ್ಷಕರು ಮತ್ತು ಪ್ರಕೃತಿ ಪ್ರಿಯರಿಗೆ ಒಂದು ಆಕರ್ಷಣೆಯಾಗಿದೆ.

    ಪರಿಸರಶಾಸ್ತ್ರಜ್ಞ ಸೆಹೆನೊ ಆಂಡ್ರಿಯಾಂಟ್ಸರಾಲಾಜಾರಿಂದ  ಬಾಬಾಬ್‌ ಮರು ನಾಟಿ

    ಪರಿಸರಶಾಸ್ತ್ರಜ್ಞ ಸೆಹೆನೊ ಆಂಡ್ರಿಯಾಂಟ್ಸರಾಲಾಜಾ ಅವರು ಮಡಗಾಸ್ಕರ್‌ನಲ್ಲಿ ಬಾಬಾಬ್ ಮರಗಳ ಬೀಜ ಪ್ರಸರಣವನ್ನು 2009 ರಿಂದ ಸಂಶೋಧಿಸುತ್ತಿದ್ದಾರೆ. ಅವರು ಮಡ್ಗಾಸ್ಕರ್‌ನ ಬಾಬಾಬ್‌ಗಳ ಬಗ್ಗೆ ಸಂಶೋಧನೆ ಹಾಗೂ ಗಿಡಗಳ ಪೋಷಣೆಯಲ್ಲಿ ತೊಡಗಿದ್ದಾರೆ. 

    ದೈತ್ಯ ಆಮೆಗಳು, ಅಲ್ಡಾಬ್ರಾಚೆಲಿಸ್ ಗಿಗಾಂಟಿಯಾ , ಹಣ್ಣನ್ನು ಇಷ್ಟಪಟ್ಟವು. ಅವರು ಹಣ್ಣನ್ನು ತಿಂದ ಸುಮಾರು 15 ದಿನಗಳ ನಂತರ ಅವರ ಮಲದಲ್ಲಿ ಬಾಬಾಬ್ ಬೀಜಗಳು ಹೊರ ಬರುತ್ತದೆ. ಈ ಬೀಜಗಳು ಚೆನ್ನಾಗಿ ಮೊಳಕೆಯೊಡೆದು ಸಸಿಯಾಗುತ್ತವೆ ಎಂದು ಅವರು ಕಂಡುಕೊಂಡಿದ್ದಾರೆ. ಈ ಮೂಲಕ ಗಿಡಗಳನ್ನು ಮರು ನಾಟಿ ಮಾಡುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.  

  • ಆಫ್ರಿಕಾದ ನೈಜರ್‌ನಲ್ಲಿ ಕ್ಷಿಪ್ರಕ್ರಾಂತಿ – ಸೇನೆಯಿಂದಲೇ ಅಧ್ಯಕ್ಷ ಅರೆಸ್ಟ್‌

    ಆಫ್ರಿಕಾದ ನೈಜರ್‌ನಲ್ಲಿ ಕ್ಷಿಪ್ರಕ್ರಾಂತಿ – ಸೇನೆಯಿಂದಲೇ ಅಧ್ಯಕ್ಷ ಅರೆಸ್ಟ್‌

    ನಿಯಾಮಿ: ಪಶ್ಚಿಮ ಆಫ್ರಿಕಾದ ದೇಶವಾದ ನೈಜರ್‌ನಲ್ಲಿ (Niger) ಸೇನೆ ಕ್ಷಿಪ್ರಕ್ರಾಂತಿ (Military Coup) ನಡೆಸಿ ಅಧ್ಯಕ್ಷ ಮಹ್ಮದ್ ಬಜೌಮ್‍ರನ್ನು (Mohamed Bazoum) ಅವರನ್ನು ಬಂಧಿಸಿದೆ.

    ಸರ್ಕಾರವನ್ನು ಪತನ ಮಾಡಿದ್ದೇವೆ. ದೇಶದ ಎಲ್ಲಾ ಸರ್ಕಾರಿ ಸಂಸ್ಥೆಗಳನ್ನು ಅಮಾನತಿನಲ್ಲಿ ಇಟ್ಟಿದ್ದೇವೆ ಎಂದು‌ ಕರ್ನಲ್ ಮೇಜರ್ ಅಮದೌ ಅಬ್ದ್ರಮಾನೆ ಹೇಳಿದ್ದಾರೆ. ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನಗಳು ಆರ್ಥಿಕತೆಯ ಮೇಲೆ ಹೇಗೆ ಪ್ರಭಾವ ಬೀರುತ್ತೆ?

    ಗಡಿಗಳನ್ನು ಬಂದ್ ಮಾಡಲಾಗಿದೆ. ಇದು ನಮ್ಮ ದೇಶದ ಆಂತರಿಕ ವಿಚಾರ. ಪಶ್ಚಿಮ ದೇಶಗಳು ಮೂಗು ತೂರಿಸುವಂತಿಲ್ಲ ಎಂದು ಸೇನೆ ಎಚ್ಚರಿಕೆ ನೀಡಿದೆ. ನೈಜರ್ ಕ್ಷಿಪ್ರಕ್ರಾಂತಿಯನ್ನು ವಿಶ್ವಸಂಸ್ಥೆ ಖಂಡಿಸಿದೆ.

    ದೂರದರ್ಶನದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಅಮದೌ ಅಬ್ದ್ರಮಾನೆ, ಅಧ್ಯಕ್ಷ ಬಜೌಮ್ ಅವರ ಆಡಳಿತವನ್ನು ಕೊನೆಗೊಳಿಸಲು ಸೇನೆ ನಿರ್ಧರಿಸಿದೆ. ಮುಂದಿನ ಸೂಚನೆ ಬರುವವರೆಗೆ ದೇಶಾದ್ಯಂತ ಕರ್ಫ್ಯೂ ವಿಧಿಸಲಾಗಿದೆ ಎಂದು ಅವರು ಹೇಳಿದರು.  ಇದನ್ನೂ ಓದಿ: ವಿದೇಶಕ್ಕೆ ಭಾರತದ ಬ್ರಹ್ಮೋಸ್‌ – ಶಸ್ತ್ರಾಸ್ತ ರಫ್ತು ಎಷ್ಟಿತ್ತು? ಎಷ್ಟು ಏರಿಕೆಯಾಗಿದೆ?

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರುವಾಂಡದಲ್ಲಿ ಭೀಕರ ಪ್ರವಾಹ – 109 ಮಂದಿ ಬಲಿ

    ರುವಾಂಡದಲ್ಲಿ ಭೀಕರ ಪ್ರವಾಹ – 109 ಮಂದಿ ಬಲಿ

    ಕಿಗಾಲಿ/ರುವಾಂಡಾ: ಉತ್ತರ ಮತ್ತು ಪಶ್ಚಿಮ ರುವಾಂಡಾದಲ್ಲಿ (Rwanda) ಪ್ರವಾಹಕ್ಕೆ (Flood) ಕನಿಷ್ಠ 109 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

    ಕಳೆದ ರಾತ್ರಿ ಬಿದ್ದ ಮಳೆಯು ದೇಶದ ಉತ್ತರ ಮತ್ತು ಪಶ್ಚಿಮ ಪ್ರಾಂತ್ಯಗಳಲ್ಲಿ ಪ್ರವಾಹವನ್ನುಂಟುಮಾಡಿದೆ. ಅತಿ ಹೆಚ್ಚು ಹಾನಿಗೊಳಗಾದ ಪಶ್ಚಿಮ ಪ್ರಾಂತ್ಯದಲ್ಲಿ 95 ಜನ ಮತ್ತು ಉತ್ತರ ಪ್ರಾಂತ್ಯದಲ್ಲಿ (Northern Province) 14 ಜನರು ಸಾವನ್ನಪ್ಪಿದ್ದಾರೆ. ಪ್ರವಾಹಕ್ಕೆ ಹಲವಾರು ಮನೆಗಳು ಕೊಚ್ಚಿಹೋಗಿವೆ. ರಸ್ತೆಗಳು ಸಂಪೂರ್ಣ ಬಂದ್ ಆಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸರ್ಬಿಯಾದ ಶಾಲೆಯಲ್ಲಿ ಅಪ್ರಾಪ್ತ ಬಾಲಕನಿಂದ ಗುಂಡಿನ ದಾಳಿ – 8 ಮಕ್ಕಳ ಸಾವು

    ಪ್ರವಾಹದಿಂದ ಕಂಗಾಲಾಗಿರುವ ಜನರ ರಕ್ಷಣಾ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ. ಜನರಿಗೆ ಸೂಕ್ತ ಆಹಾರ ಹಾಗೂ ಔಷಧಗಳನ್ನು ಸರಬರಾಜು ಮಾಡಲಾಗುತ್ತಿದೆ. ಮೃತಪಟ್ಟವರನ್ನು ಹೂಳಲು ಕ್ರಮಕೈಗೊಳ್ಳಲಾಗಿದೆ ಎಂದು ತುರ್ತು ನಿರ್ವಹಣೆಯ ಉಸ್ತುವಾರಿ ಸಚಿವರು ತಿಳಿಸಿದ್ದಾರೆ.

    ಮೇ 2020 ರಲ್ಲಿ ಪೂರ್ವ ಆಫ್ರಿಕಾದಲ್ಲಿ (Africa) ಸುರಿದಿದ್ದ ಭಾರೀ ಮಳೆಯಿಂದಾಗಿ ರುವಾಂಡಾದಲ್ಲಿ ಕನಿಷ್ಠ 65 ಜನರು ಸಾವನ್ನಪ್ಪಿದ್ದರು. ಅಲ್ಲದೆ ಕೀನ್ಯಾದಲ್ಲಿ (Kenya) ಕನಿಷ್ಠ 194 ಸಾವುಗಳಿಗೆ ಇದು ಕಾರಣವಾಗಿತ್ತು. ಇದನ್ನೂ ಓದಿ: 12ನೇ ತರಗತಿ ಓದಿ ದಿನಕ್ಕೆ 10 ಕೋಟಿ ಸಂಪಾದನೆ – ಸೈಬರ್ ಕಿರಾತಕರು ಅಂದರ್

  • ಚಿನ್ನದ ಗಣಿ ಕುಸಿದು 15 ಕಾರ್ಮಿಕರು ಸಾವು

    ಚಿನ್ನದ ಗಣಿ ಕುಸಿದು 15 ಕಾರ್ಮಿಕರು ಸಾವು

    ಕೇಪ್‌ಟೌನ್: ಪೂರ್ವ ಆಫ್ರಿಕಾದ (Africa) ಬುರುಂಡಿಯಲ್ಲಿ (Burundi) ಚಿನ್ನದ ಗಣಿ ಕುಸಿದು ಹದಿನೈದು ಕಾರ್ಮಿಕರು ಬಲಿಯಾಗಿದ್ದಾರೆ. ಸಿಬಿಟೋಕ್ ಪ್ರಾಂತ್ಯದ ಮಾಬಾಯಿ ಕಮ್ಯೂನ್‌ನಲ್ಲಿ ಈ ದುರಂತ ನಡೆದಿದೆ.

    ಭಾರೀ ಮಳೆಯಿಂದಾಗಿ ಚಿನ್ನದ ಗಣಿಯಲ್ಲಿ (Gold Mine) ನೀರು ತುಂಬಿಕೊಂಡಿತ್ತು. ಕೆಲಸ ಮಾಡುತ್ತಿದ್ದಾಗ ಗಣಿ ಕುಸಿದು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿ 15 ಮಂದಿ ಮೃತಪಟ್ಟಿದ್ದಾರೆ. ಘಟನೆಯ ಬಗ್ಗೆ ತಿಳಿದ ನಂತರ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ. ಇದನ್ನೂ ಓದಿ: ರಂಜಾನ್ ಸಂದರ್ಭ ಸಂಗೀತ ನಿಷೇಧ – ಅಫ್ಘಾನಿಸ್ತಾನದ ಮಹಿಳಾ ರೇಡಿಯೋ ಸ್ಟೇಷನ್ ಮುಚ್ಚಿದ ತಾಲಿಬಾನ್

    ಮಳೆ ಕಾರಣಕ್ಕೆ ರುಗೊಗೊ ನದಿ ಉಕ್ಕಿ ಹರಿದು ಚಿನ್ನದ ಗಣಿಯಲ್ಲಿ ನೀರು ತುಂಬಿಕೊಂಡಿತ್ತು. ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಅನೇಕ ಕಾರ್ಮಿಕರು ಹೊಂಡಗಳಲ್ಲಿ ಸಿಲುಕಿಕೊಂಡಿದ್ದರು. ಅವರನ್ನು ಹೊರ ಕರೆತರುವಲ್ಲಿ ರಕ್ಷಣಾ ತಂಡಕ್ಕೆ ಸಾಧ್ಯವಾಗಿಲ್ಲ. ನಂತರ ಕಾರ್ಮಿಕರು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇಂತಹ ಗಣಿಗಾರಿಕೆ ದುರಂತಗಳು ಬುರುಂಡಿಯ ವಾಯುವ್ಯ ಮತ್ತು ಈಶಾನ್ಯದಲ್ಲಿ ಆಗಾಗ್ಗೆ ವರದಿಯಾಗುತ್ತವೆ. ಅಲ್ಲಿ ಗಣಿಗಾರಿಕೆ ಮಾಡುವ ಜನರು ಅಧಿಕಾರಿಗಳ ಮೇಲ್ವಿಚಾರಣೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ರಾತ್ರಿ ವೇಳೆ ಕೆಲಸಕ್ಕೆ ಹೋಗುತ್ತಾರೆ. ಇಲ್ಲಿ ಅಕ್ರಮ ಗಣಿಗಾರಿಕೆ ಹೆಚ್ಚಾಗಿ ನಡೆಯುತ್ತದೆ. ಇದನ್ನೂ ಓದಿ: ಅಬ್ಬಾ..! ಇದೆಂಥಾ ಮೀನು? – ಡೆಡ್ಲಿ ಫಿಶ್‌ ಸೇವಿಸಿ ಮಹಿಳೆ ಸಾವು; ಕೋಮಾದಲ್ಲಿ ಪತಿ

  • ಶೂಟಿಂಗ್‌ಗೆ ಬ್ರೇಕ್, ತಾಂಜಾನಿಯಾ ಕಾಡಿನಲ್ಲಿ ಪತ್ನಿ ಜೊತೆ ರಾಮ್‌ಚರಣ್

    ಶೂಟಿಂಗ್‌ಗೆ ಬ್ರೇಕ್, ತಾಂಜಾನಿಯಾ ಕಾಡಿನಲ್ಲಿ ಪತ್ನಿ ಜೊತೆ ರಾಮ್‌ಚರಣ್

    `ಆರ್‌ಆರ್‌ಆರ್’ ಸಕ್ಸಸ್ ನಂತರ ರಾಮ್‌ಚರಣ್ ಸಿನಿಮಾ ಆಯ್ಕೆಯಲ್ಲಿ ಸಖತ್ ಸೆಲೆಕ್ಟೀವ್ ಆಗಿದ್ದಾರೆ. ಸದ್ಯ ಚಿತ್ರೀಕರಣಕ್ಕೆ ಬ್ರೇಕ್ ಹಾಕಿ, ಪತ್ನಿ ಉಪಾಸನಾ ಜೊತೆ ಆಫ್ರಿಕಾದ ತಾಂಜಾನಿಯಾ ಕಾಡಿನಲ್ಲಿ ರಾಮ್ ಚರಣ್ ರೊಮ್ಯಾನ್ಸ್ ಮಾಡುತ್ತಿದ್ದಾರೆ. ಈಗ ಈ ದಂಪತಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ರಾಜಮೌಳಿ ನಿರ್ದೇಶನದ `ಆರ್‌ಆರ್‌ಆರ್’ ಸಕ್ಸಸ್ ನಂತರ ಟಾಪ್ ನಿರ್ದೇಶಕರಲ್ಲಿ ಒಬ್ಬರಾದ ಶಂಕರ್ ಜೊತೆ ರಾಮ್ ಚರಣ್ ಸಿನಿಮಾ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಚಿತ್ರವಾಗಿ ಮೂಡಿ ಬರಲಿರುವ ಪಕ್ಕಾ ಆ್ಯಕ್ಷನ್ ಸಿನಿಮಾದಲ್ಲಿ ರಾಮ್ ಚರಣ್ ನಟಿಸುತ್ತಿದ್ದಾರೆ. ಸದ್ಯ ಶೂಟಿಂಗ್‌ಗೆ ಬ್ರೇಕ್ ಹಾಕಿ, ಪತ್ನಿ ಜೊತೆ ತಾಂಜಾನಿಯಾ ಕಾಡಿನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಇದನ್ನೂ ಓದಿ:ದೂದ್ ಪೇಡ ದಿಗಂತ್ ಗೆ ಜೊತೆಯಾದ ರಂಗಿತರಂಗ ಬೆಡಗಿ ರಾಧಿಕಾ ನಾರಾಯಣ್

     

    View this post on Instagram

     

    A post shared by Ram Charan (@alwaysramcharan)

    ಚಿತ್ರರಂಗದ ಬೆಸ್ಟ್ ಜೋಡಿಗಳಲ್ಲಿ ಒಂದಾಗಿರುವ ರಾಮ್ ಚರಣ್ ಮತ್ತು ಉಪಾಸನಾ ಆಗಾಗ ವೇಕೇಷನ್ಸ್ ದೂರದ ವಿದೇಶಕ್ಕೆ ಸುಂದರ ತಾಣಗಳಿಗೆ ಭೇಟಿ ಕೊಡುತ್ತಿರುತ್ತಾರೆ. ಈಗ ತಾಂಜಾನಿಯಾ ಕಾಡಿಗೆ ಪತ್ನಿ ಜೊತೆ ರಾಮ್ ಚರಣ್ ತೆರಳಿದ್ದಾರೆ.

    ತಾಂಜಾನಿಯಾ ಕಾಡಿಗೆ ಬಂದಿರುವ ರಾಮ್ ಚರಣ್ ದಂಪತಿಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ನಾಯಕಿ ರುಕ್ಮಿಣಿ ಜೊತೆ ಆಫ್ರಿಕಾಗೆ ಹೊರಟು ನಿಂತ ಗೋಲ್ಡನ್ ಸ್ಟಾರ್ ಗಣೇಶ್

    ನಾಯಕಿ ರುಕ್ಮಿಣಿ ಜೊತೆ ಆಫ್ರಿಕಾಗೆ ಹೊರಟು ನಿಂತ ಗೋಲ್ಡನ್ ಸ್ಟಾರ್ ಗಣೇಶ್

    ಗೋಲ್ಡನ್ ಸ್ಟಾರ್ ಗಣೇಶ್ (Ganesh) – ಪ್ರೀತಂ ಗುಬ್ಬಿ ಕಾಂಬಿನೇಶನ್ ನಲ್ಲಿ ಬರುತ್ತಿದೆ ಮತ್ತೊಂದು ಸುಂದರ ಚಿತ್ರ. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಪ್ರೀತಂ ಗುಬ್ಬಿ ಕಾಂಬಿನೇಶನ್ ನಲ್ಲಿ ಈ ಹಿಂದೆ ಕೆಲವು ಚಿತ್ರಗಳು ಪ್ರೇಕ್ಷಕರನ್ನು ಮೋಡಿ ಮಾಡಿದೆ. ಈಗ ಇದೇ ಕಾಂಬಿನೇಷನ್ ನಲ್ಲಿ ” ಬಾನ ದಾರಿಯಲ್ಲಿ” (Banadariyalli) ಚಿತ್ರ ಬರುತ್ತಿದೆ.

    ಸ್ಪೋರ್ಟ್ಸ್ ಜಾನರ್ ನ ಈ ಚಿತ್ರದಲ್ಲಿ ಗಣೇಶ್ ಕ್ರಿಕೆಟ್ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿ ರುಕ್ಮಿಣಿ ವಸಂತ್ (Rukmini Vasanth) ಈಜುಗಾರ್ತಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.  ಪ್ರಸ್ತುತ ಈ ಚಿತ್ರಕ್ಕೆ ಮಂಗಳೂರಿನಲ್ಲಿ ದ್ವಿತೀಯ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ವಾಟರ್‌ ಗೇಮ್ಸ್ ಸೇರಿದಂತೆ ಕೆಲವು ಭಾಗದ ಚಿತ್ರೀಕರಣ ನಾಯಕ ಗಣೇಶ್, ನಾಯಕಿ ರುಕ್ಮಿಣಿ ವಸಂತ್ ಮುಂತಾದವರ ಅಭಿನಯದಲ್ಲಿ ಮಂಗಳೂರಿನಲ್ಲಿ ನಡೆದಿದೆ. ಮೂರನೇ ಹಂತದ ಚಿತ್ರೀಕರಣ ಆಫ್ರಿಕಾದಲ್ಲಿ (Africa) ನಡೆಯಲಿದ್ದು, ಸದ್ಯದಲ್ಲೇ ಚಿತ್ರತಂಡ ಆಫ್ರಿಕಾಗೆ ತೆರಳಲಿದೆ.

    ಪ್ರೀತಂ ಗುಬ್ಬಿ (Pritam Gubbi) ನಿರ್ದೇಶನದ ಈ ಚಿತ್ರದ ಕಥೆ ಪ್ರೀತಾ ಜಯರಾಂ ಅವರದು. ಮಾಸ್ತಿ ಸಂಭಾಷಣೆ,  ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಅಭಿಲಾಷ್ ಕಲ್ಲತ್ತಿ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ. ಇದನ್ನೂ ಓದಿ:ನಂದಿನಿ ಔಟ್ ಆದ್ಮೇಲೆ ಸಾನ್ಯ ಜೊತೆ ಜಶ್ವಂತ್ ಲವ್ವಿ-ಡವ್ವಿ: ರೂಪೇಶ್‌ಗೆ ಟೆನ್ಷನ್ ಶುರು

    ಶ್ರೀವಾರಿ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ “ಬಾನ ದಾರಿಯಲ್ಲಿ” ಚಿತ್ರದ ತಾರಾಬಳಗದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ರುಕ್ಮಿಣಿ ವಸಂತ್, ರೀಶ್ಮಾ ನಾಣಯ್ಯ, ರಂಗಾಯಣ ರಘು ಮುಂತಾದವರಿದ್ದಾರೆ‌. ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ಅಭಿನಯದ ಹಾಡೊಂದರ ಸಾಲು ಚಿತ್ರದ ಶೀರ್ಷಿಕೆಯಾಗಿದ್ದು, “ಬಾನ ದಾರಿಯಲ್ಲಿ” ಶೀರ್ಷಿಕೆ ಈಗಾಗಲೇ ಜನರ ಮನ ಗೆದ್ದಿದೆ.

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಿಗೆ ಬಂದಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ಅಲ್ಲ, ಚಿಕನ್ ಪಾಕ್ಸ್: ಸುಧಾಕರ್

    ಬೆಂಗಳೂರಿಗೆ ಬಂದಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ಅಲ್ಲ, ಚಿಕನ್ ಪಾಕ್ಸ್: ಸುಧಾಕರ್

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿಗೆ ಬಂದಿದ್ದ ಆಫ್ರಿಕಾ ಮೂಲದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ನೆಗೆಟೀವ್ ಎಂದು ದೃಢಪಟ್ಟಿದ್ದು, ಅವರಿಗೆ ಚಿಕನ್ ಪಾಕ್ಸ್ ಇರುವುದು ಪತ್ತೆ ಆಗಿದೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

    ಶನಿವಾರ ಬೆಂಗಳೂರಿನಲ್ಲಿ ಆಫ್ರಿಕಾ ಮೂಲದ ವ್ಯಕ್ತಿಗೆ ಮಂಕಿಪಾಕ್ಸ್ ಇರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಹಿನ್ನೆಲೆ ಪುಣೆಗೆ ರಿಪೋರ್ಟ್ ರವಾನೆ ಮಾಡಲಾಗಿತ್ತು. ಇದೀಗ ಪುಣೆಯಿಂದ ರಿಪೋರ್ಟ್ ಹೊರಬಿದ್ದಿದ್ದು, ಬೆಂಗಳೂರಿನ ವ್ಯಕ್ತಿಗೆ ಮಂಕಿಪಾಕ್ಸ್ ಇಲ್ಲವೆಂದು ದೃಢವಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?: ಬೆಂಗಳೂರಿಗೆ ಬಂದಿದ್ದ ಇಥಿಯೋಪಿಯಾ ಮೂಲದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಲಕ್ಷಣಗಳು ಕಂಡುಬಂದಿದ್ದ ಹಿನ್ನೆಲೆಯಲ್ಲಿ ಅವರನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಈಗ ಅವರ ಪರೀಕ್ಷಾ ವರದಿಯಲ್ಲಿ ಮಂಕಿಪಾಕ್ಸ್ ನೆಗಟೀವ್ ಎಂದು ಧೃಢಪಟ್ಟಿದ್ದು, ಚಿಕನ್ ಪಾಕ್ಸ್ ಇರುವುದು ಪತ್ತೆಯಾಗಿದೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪಾಕ್ ಪ್ರಧಾನಿಗೆ ಸಮನ್ಸ್ ಜಾರಿ

    ರಾಜ್ಯದಲ್ಲಿ ಮಂಕಿಪಾಕ್ಸ್ ತಡೆಗಟ್ಟುವ ಸೋಂಕು ಕಾಣಿಸಿಕೊಂಡಿದೆ. ದೇಶಗಳಿಂದ ಬರುವ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲೇ ಜ್ವರ, ಶೀತ, ತಲೆನೋವು, ಸ್ನಾಯು ನೋವು, ಆಯಾಸ ಮತ್ತು ದುಗ್ಧರಸ ಗ್ರಂಥಿಗಳ ಊತ ಮುಂತಾದ ಲಕ್ಷಣಗಳ ಪತ್ತೆಗಾಗಿ ತಪಾಸಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಲಾಲ್, ಜಟ್ಕಾ ಜಟಾಪಟಿಯೇ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆಗೆ ಕಾರಣವಾಯ್ತಾ..?

    ಏನಿದು ಚಿಕನ್ ಪಾಕ್ಸ್: ಚಿಕನ್ ಪಾಕ್ಸ್ ಖಾಯಿಲೆ ಹಳೆಯದಾದ ಸಾಂಕ್ರಾಮಿಕ ಖಾಯಿಲೆಯಾಗಿದ್ದು, ಸಾಮಾನ್ಯವಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಇದು ವೆರೆಸೆಲ್ಲಾ ಬೋಸ್ಟರ್ ಎಂಬ ವೈರಾಣುವಿನಿಂದ ಹರಡುವ ರೋಗವಾಗಿದೆ. ಸೊಂಕು ಆಗಿರುವ ವ್ಯಕ್ತಿಯ ಗಾಯದ ಸ್ಪರ್ಶದಿಂದ ಮತ್ತು ಬಳಸಿದ ವಸ್ತುಗಳನ್ನು ಬಳಸುವುದರಿಂದ ಈ ಖಾಯಿಲೆ ಬರುತ್ತದೆ.

    ರೋಗ ಲಕ್ಷಣಗಳು ಏನು?: ಜ್ವರ ,ಮೈ, ಕೈ ನೋವು, ಮೂಗು ಸೋರುವುದು. ಈ ರೋಗ ಲಕ್ಷಣ ಕಾಣಿಸಿಕೊಂಡ ಎರಡನೇ ದಿನದಂದು ಮೈಯೆಲ್ಲ ಮೊಡವೆಯಂತೆ ಗುಳ್ಳೆಗಳಾಗುತ್ತವೆ. ಕ್ರಮೇಣ ನೀರು ಗುಳ್ಳೆಗಳಾಗಿ ತುರಿಕೆ ಕಾಣಿಸಿಕೊಳ್ಳುತ್ತದೆ. ಮೊದಲು ಹೊಟ್ಟೆ ಮತ್ತು ಬೆನ್ನಿನ ಭಾಗದಲ್ಲಿ ಗುಳ್ಳೆಗಳಾಗಿ ದೇಹದ ಎಲ್ಲಾ ಭಾಗ ಆವರಿಸುತ್ತದೆ. 200 ರಿಂದ 250 ಗುಳ್ಳೆಗಳು ಆಗುತ್ತವೆ. ಬೇರೆ ಖಾಯಿಲೆಯಿಂದ ಬಳಲುತ್ತಾ ಇರುವವರು ಹೆಚ್ಚು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.

    Live Tv
    [brid partner=56869869 player=32851 video=960834 autoplay=true]

  • 300 ವರ್ಷಗಳ ನಂತ್ರ ಅಂಗೋಲಾದಲ್ಲಿ ಪಿಂಕ್ ಡೈಮಂಡ್ ಪತ್ತೆ!

    300 ವರ್ಷಗಳ ನಂತ್ರ ಅಂಗೋಲಾದಲ್ಲಿ ಪಿಂಕ್ ಡೈಮಂಡ್ ಪತ್ತೆ!

    ಲುವಾಂಡಾ: ಅಂಗೋಲಾದಲ್ಲಿ ಗಣಿಗಾರಿಕೆ ಮಾಡುತ್ತಿದ್ದ ವೇಳೆ ಅಪರೂಪದ ಪ್ಯೂರ್ ಪಿಂಕ್ ಬಣ್ಣದ ವಜ್ರವೊಂದು ಪತ್ತೆಯಾಗಿದೆ. ಈ ಬೆಲೆಬಾಳುವ ವಜ್ರ 300 ವರ್ಷಗಳಲ್ಲಿಯೇ ಕಂಡು ಬಂದ ಅತಿದೊಡ್ಡ ವಜ್ರವಾಗಿದೆ.

    170 ಕ್ಯಾರೆಟ್ ತೂಕದ ಪಿಂಕ್ ವಜ್ರವನ್ನು ದಿ ಲುಲೋ ರೋಸ್ ಎಂದು ಕರೆಯಲಾಗುತ್ತದೆ. ಇದು ಅಂಗೋಲಾದ ಲುಲೋ ಮೈನ್ಸ್‍ನಲ್ಲಿ ಪತ್ತೆಯಾಗಿದ್ದು, ದೇಶದ ಈಶಾನ್ಯ ಭಾಗದಲ್ಲಿ ಹೆಚ್ಚು ವಜ್ರ ದೊರೆಯುತ್ತದೆ ಎಂದು ತಿಳಿದುಬಂದಿದೆ. ಅಲ್ಲದೇ ಇದುವರೆಗೂ ದೊರೆತ ಅತಿದೊಡ್ಡ ಪಿಂಕ್ ಬಣ್ಣದ ವಜ್ರಗಳ ಪಟ್ಟಿಯಲ್ಲಿ ಇದು ಸಹ ಸ್ಥಾನ ಪಡೆಯುತ್ತದೆ ಎಂದು ಲ್ಯೂಕಾಪಾ ವಜ್ರದ ಕಂಪನಿ ಹೂಡಿಕೆದಾರು ತಿಳಿಸಿದ್ದಾರೆ.

    ಟೈಪ್ IIa ಎಂಬ ಈ ವಜ್ರ ನೈಸರ್ಗಿಕ ಕಲ್ಲುಗಳಲ್ಲಿ ದೊರೆಯುವ ಅಪರೂಪದ ಹಾಗೂ ಅತಿ ಶುದ್ಧವಾದ ವಜ್ರವಾಗಿದ್ದು, ಈ ವಜ್ರ ದೊರೆತಿರುವುದನ್ನು ಅಂಗೋಲಾ ಸರ್ಕಾರ ಸಹ ಸ್ವಾಗತಿಸಿದ್ದು, ಈ ಗಣಿಗಾರಿಕೆಯಲ್ಲಿ ಅಲ್ಲಿನ ಸರ್ಕಾರ ಸಹ ಪಾಲುದಾರರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಸರ್ಕಾರಕ್ಕೆ ಜನೋತ್ಸವದ ಬದಲು ಜನಾಕ್ರೋಶದ ದರ್ಶನವಾಗಿದೆ – ಕಾರ್ಯಕ್ರಮ ರದ್ದುಗೊಳಿಸಿದ್ದು ಮೃತನ ಮೇಲಿನ ಗೌರವದಿಂದಲ್ಲ: ಕಾಂಗ್ರೆಸ್

    ಈ ಗುಲಾಬಿ ವಜ್ರದಿಂದ  ವಿಶ್ವದಲ್ಲೇ  ವಜ್ರದ ಉದ್ಯಮದಲ್ಲಿ ಅಂಗೋಲಾ ಪ್ರಮುಖ ದೇಶವಾಗಿ ಹೊರಹೊಮ್ಮಿದೆ. ಆಟಗಾರನಾಗಿ ಪ್ರದರ್ಶಿಸುವುದನ್ನು ಮುಂದುವರೆಸಿದೆ. ಬಹುಶಃ ಈ ವಜ್ರವನ್ನು ಅಂತರರಾಷ್ಟ್ರೀಯ ಟೆಂಡರ್‌ನಲ್ಲಿ ಅಚ್ಚರಿ ಪಡುವಂತಹ ಬೆಲೆಗೆ ಮಾರಾಟ ಮಾಡಬಹುದು. ದಿ ಲುಲೋ ರೋಸ್‍ನ ನಿಜವಾದ ಮೌಲ್ಯವನ್ನು ಅರಿತುಕೊಳ್ಳಲು ವಜ್ರವನ್ನು ಕತ್ತರಿಸಿ ಪಾಲಿಶ್ ಮಾಡಬೇಕಾಗಿದೆ. ಅಲ್ಲದೇ ಈ ಪ್ರಕ್ರಿಯೆಯಲ್ಲಿ ಬೆಲೆಬಾಳುವ ಸ್ಟೋನ್ ತನ್ನ ತೂಕದ 50 ಪ್ರತಿಶತವನ್ನು ಕಳೆದುಕೊಳ್ಳುತ್ತದೆ ಅಂತ ಹೇಳಲಾಗುತ್ತಿದೆ ಎಂದು ಅಂಗೋಲಾದ ಖನಿಜ ಸಂಪನ್ಮೂಲ ಸಚಿವ ಡೈಮಂಟಿನೋ ಅಜೆವೆಡೊ ಹೇಳಿದ್ದಾರೆ.

    2017 ರಲ್ಲಿ ಹಾಂಗ್ ಕಾಂಗ್‍ನಲ್ಲಿ ನಡೆದ ಹರಾಜಿನಲ್ಲಿ 59.6 ಕ್ಯಾರೆಟ್ ಪಿಂಕ್ ಸ್ಟಾರ್ ಅನ್ನು 71. 2 ಮಿಲಿಯನ್ ಅಮೆರಿಕ ಡಾಲರ್‌ಗೆ ಮಾರಾಟ ಮಾಡಲಾಗಿತು. ಇದು ಇಲ್ಲಿಯವರೆಗೂ ಮಾರಾಟವಾದ ಅತ್ಯಂತ ದುಬಾರಿ ವಜ್ರವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಇನ್ನೊಂದು ವಾರದಲ್ಲಿ ಮೀಸಲಾತಿ ಪ್ರಕಟಿಸಿ, ಬಿಬಿಎಂಪಿ ಚುನಾವಣೆ ನಡೆಸಿ – ಸುಪ್ರೀಂ ಕೋರ್ಟ್

    Live Tv
    [brid partner=56869869 player=32851 video=960834 autoplay=true]

  • ಮಹಿಳೆಯನ್ನು ಗುದ್ದಿ ಕೊಂದ ಟಗರಿಗೆ 3 ವರ್ಷ ಜೈಲು ಶಿಕ್ಷೆ

    ಮಹಿಳೆಯನ್ನು ಗುದ್ದಿ ಕೊಂದ ಟಗರಿಗೆ 3 ವರ್ಷ ಜೈಲು ಶಿಕ್ಷೆ

    ದಕ್ಷಿಣ ಸುಡಾನ್ (ಆಫ್ರಿಕಾ): ವಿಲಕ್ಷಣ ಪ್ರಕರಣವೊಂದರಲ್ಲಿ, ದಕ್ಷಿಣ ಸುಡಾನ್‌ನಲ್ಲಿ ಟಗರೊಂದು ಮಹಿಳೆಯನ್ನು ಕೊಂದ ಆರೋಪ ಸಾಬೀತಾದ ನಂತರ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

    ದಕ್ಷಿಣ ಸುಡಾನ್‌ನಲ್ಲಿ 45 ವರ್ಷದ ಅಧಿಯು ಚಾಪಿಂಗ್ ಎಂಬವರ ಮೇಲೆ ಟಗರು ದಾಳಿ ನಡೆಸಿದೆ. ʼರಾಮ್‌ʼ ಹೆಸರಿನ ಟಗರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದರು. ಟಗರು, ಚಾಪಿಂಗ್‌ ಅವರಿಗೆ ಗುದ್ದಿ ಗಂಭೀರವಾಗಿ ಗಾಯಗೊಳಿಸಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಉತ್ತರ ಕೊರಿಯಾದಲ್ಲಿ ನಿಯಂತ್ರಣಕ್ಕೆ ಬಂದ ಕೊರೊನಾ

    ರುಂಬೆಕ್ ಪೂರ್ವದಲ್ಲಿನ ಅಕುಯೆಲ್ ಯೋಲ್ ಎಂಬ ಸ್ಥಳದಲ್ಲಿ ಈ ಘಟನೆ ನಡೆದಿದೆ. ಮಾಲೆಂಗ್ ಆಗೋಕ್ ಪಾಯಂನ ಪೊಲೀಸ್ ಠಾಣೆಯಲ್ಲಿ ಟಗರನ್ನು ಬಂಧಿಸಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    court order law

    ಮಾಲೀಕ ನಿರಪರಾಧಿ. ಆದರೆ ಟಗರು ʼರಾಮ್‌ʼ ಅಪರಾಧವನ್ನು ಎಸಗಿದ ಕಾರಣ ಅದನ್ನು ಬಂಧಿಸಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಮುಂದಿನ ಮೂರು ವರ್ಷಗಳ ಕಾಲ ಸುಡಾನ್‌ನ ಲೇಕ್ಸ್ ಸ್ಟೇಟ್‌ನಲ್ಲಿರುವ ಅಡ್ಯುಯೆಲ್ ಕೌಂಟಿಯ ಪ್ರಧಾನ ಕಚೇರಿಯ ಮಿಲಿಟರಿ ಶಿಬಿರದಲ್ಲಿ ಟಗರು ಸೆರೆವಾಸ ಕಳೆಯಲಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಟಗರಿನ ಮಾಲೀಕ ಡುಯೋನಿ ಮಾನ್ಯಂಗ್ ಧಾಲ್, ಸಂತ್ರಸ್ತೆ ಕುಟುಂಬಕ್ಕೆ ತಮ್ಮ ಐದು ಹಸುಗಳನ್ನು ಪರಿಹಾರವಾಗಿ ನೀಡಬೇಕು ಎಂದು ಸ್ಥಳೀಯ ನ್ಯಾಯಾಲಯ ತೀರ್ಪು ನೀಡಿದೆ. ಇದನ್ನೂ ಓದಿ: ಲುಲು ಗ್ರೂಪ್‍ನೊಂದಿಗೆ 2,000 ಕೋಟಿ ರೂ. ಹೂಡಿಕೆ ಒಪ್ಪಂದ – ಪ್ರತಿಷ್ಠಿತ ಕಂಪನಿಗಳೊಂದಿಗೆ ಬೊಮ್ಮಾಯಿ ಚರ್ಚೆ

    ಅಮೆರಿಕದಲ್ಲೂ ನಡೆದಿತ್ತು ದಾಳಿ
    ಕುರಿ, ಟಗರು ದಾಳಿಯಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ, ಅಮೆರಿಕಾದಲ್ಲಿ ಮಹಿಳೆಯೊಬ್ಬರು ಕೂಡ ಜಮೀನಿನಲ್ಲಿ ಕುರಿಗಳ ದಾಳಿಯಿಂದ ಸಾವನ್ನಪ್ಪಿದ್ದರು. 73 ವರ್ಷದ ಕಿಮ್ ಟೇಲರ್ ಮಸಾಚುಸೆಟ್ಸ್‌ನ ಬೋಲ್ಟನ್‌ನಲ್ಲಿರುವ ಕಲ್ಟಿವೇಟ್ ಕೇರ್ ಫಾರ್ಮ್‌ನಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದಾಗ, ಅವರು ಸಾಕುಪ್ರಾಣಿ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ವೇಳೆ ಹೃದಯ ಸ್ತಂಭನಕ್ಕೆ ಒಳಗಾಗಿ ಮೃತಪಟ್ಟಿದ್ದರು. ಇದನ್ನೂ ಓದಿ: ಆಸ್ಟ್ರೇಲಿಯಾ ನೂತನ ಪ್ರಧಾನಿಯಾಗಿ ಅಂಥೋನಿ ಎಲ್ಬನೀಸ್ ಅಧಿಕಾರಕ್ಕೆ