Tag: afghanistan

  • Asian Games 2023: ಚಿನ್ನದ ಮಳೆ – ಚೊಚ್ಚಲ ಚಾಂಪಿಯನ್‌ ಕಿರೀಟ ಧರಿಸಿದ ಭಾರತ

    Asian Games 2023: ಚಿನ್ನದ ಮಳೆ – ಚೊಚ್ಚಲ ಚಾಂಪಿಯನ್‌ ಕಿರೀಟ ಧರಿಸಿದ ಭಾರತ

    ಹ್ಯಾಂಗ್‌ಝೌ: ಏಷ್ಯನ್‌ ಗೇಮ್ಸ್‌ 2023ರ ಕ್ರಿಕೆಟ್‌ ಟೂರ್ನಿಯಲ್ಲಿ (Asian Games Cricket) ಭಾರತ ಚೊಚ್ಚಲ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದು, ಚಿನ್ನದ ಪದಕಕ್ಕೆ ಕೊರಳೊಡ್ಡಿದೆ.

    ಶನಿವಾರ ಅಫ್ಘಾನಿಸ್ತಾನದ (Afghanistan) ವಿರುದ್ಧ ನಡೆದ ಫೈನಲ್‌ ಪಂದ್ಯವು ಮಳೆಯಿಂದಾಗಿ ರದ್ದಾಯಿತು. ಆದ್ರೆ ಟೀಂ ಇಂಡಿಯಾ (Team India) ಉತ್ತಮ ರನ್‌ರೇಟ್‌ ಹೊಂದಿದ್ದರಿಂದ ಚಿನ್ನದ ಪದಕ ಗೆದ್ದುಕೊಂಡಿತು.

    2010 ಮತ್ತು 2014ರ ಏಷ್ಯನ್ ಗೇಮ್ಸ್‌ ಟೂರ್ನಿಯಲ್ಲಿ ಭಾರತ ಭಾಗವಹಿಸಲು ನಿರಾಕರಿಸಿತ್ತು. 2010ರ ಏಷ್ಯನ್‌ ಗೇಮ್ಸ್‌ ಟೂರ್ನಿಯಲ್ಲಿ ಬಾಂಗ್ಲಾದೇಶ, 2014ರ ಆವೃತ್ತಿಯಲ್ಲಿ ಶ್ರೀಲಂಕಾ (Sri Lanka) ಪುರುಷರ ತಂಡ ಚಿನ್ನದ ಪದಕ ಮುಡಿಗೇರಿಸಿಕೊಂಡಿತ್ತು. ಇದೇ ಮೊದಲ ಬಾರಿಗೆ ಏಷ್ಯನ್‌ ಗೇಮ್ಸ್‌ ಪ್ರವೇಶಿಸಿದ ಟೀಂ ಇಂಡಿಯಾ ಚೊಚ್ಚಲ ಚಾಂಪಿಯನ್‌ ಪಟ್ಟ ತನ್ನದಾಗಿಸಿಕೊಂಡಿದೆ. ಅಫ್ಘಾನಿಸ್ತಾನ ಸತತ‌ 3ನೇ ಬಾರಿಗೆ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ. ಇದಕ್ಕೂ ಮೊದಲು ಹ್ಯಾಂಗ್‌ಝೌನಲ್ಲಿ ನಡೆದ ಟಿ20 ಮಹಿಳಾ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ಚಿನ್ನದ ಪದಕ ಬಾಚಿಕೊಂಡಿತು.

    ಪಿಂಗ್‌ಫೆಂಗ್ ಕ್ಯಾಂಪಸ್ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಭಾರತ, ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಎದುರಾಳಿ ಅಫ್ಘಾನಿಸ್ತಾನ ತಂಡಕ್ಕೆ ನೀಡಿತ್ತು. ಟೀಂ ಇಂಡಿಯಾ ಬೌಲರ್‌ಗಳ ಮಾರಕ ದಾಳಿ ಎದುರಿಸುವಲ್ಲಿ ವಿಫಲವಾದ ಅಫ್ಘಾನಿಸ್ತಾನ ತಂಡ 4ನೇ ಓವರ್‌ನಲ್ಲೇ 12 ರನ್‌ಗಳಿಗೆ ಪ್ರಮುಖ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇದು ಟೀಂ ಇಂಡಿಯಾಕ್ಕೆ ವರದಾನವಾಯಿತು. ಇದನ್ನೂ ಓದಿ: 20 ಓವರ್‌ಗಳಲ್ಲಿ 314 ರನ್‌, 9 ಎಸೆತಗಳಲ್ಲಿ ಸ್ಫೋಟಕ ಫಿಫ್ಟಿ; T20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದ ನೇಪಾಳ

    ಅಂತಿಮವಾಗಿ ಅಫ್ಘಾನಿಸ್ತಾನ 18.2 ಓವರ್‌ಗಲ್ಲಿ 5 ವಿಕೆಟ್‌ ನಷ್ಟಕ್ಕೆ 112 ರನ್‌ ಗಳಿಸಿ ಆಡುತ್ತಿದ್ದಾಗಲೇ ಮಳೆ ಕಾಟ ಶುರುವಾಯಿತು. ಮಳೆ ಬಿಡುವು ನೀಡದ ಕಾರಣ ಹಿಂದಿನ ಪಂದ್ಯಗಳ ನೆಟ್‌ ರನ್‌ರೇಟ್‌ ಆಧಾರದ ಮೇಲೆ ಭಾರತ ತಂಡವನ್ನು ವಿನ್ನರ್‌ ಎಂದು ಘೋಷಿಸಲಾಯಿತು. ಇದನ್ನೂ ಓದಿ: Asian Games 2023 ನಲ್ಲಿ ಟೀಂ ಇಂಡಿಯಾ ಪಾಲ್ಗೊಳ್ಳಲು ಬಿಸಿಸಿಐ ಗ್ರೀನ್‌ ಸಿಗ್ನಲ್‌

    ಅಫ್ಘಾನ್‌ ಪರ ಶಾಹಿದುಲ್ಲಾ 49 ರನ್‌ (43 ಎಸೆತ, 2 ಸಿಕ್ಸರ್‌, 3 ಬೌಂಡರಿ), ನಾಯಕ ಗುಲ್ಬದಿನ್ ನೈಬ್ 27 ರನ್‌ ಹಾಗೂ ಅಫ್ಸರ್‌ ಝಾಝಿ 15 ರನ್‌ಗಳ ಕೊಡುಗೆ ನೀಡಿದರೆ, ಉಳಿದವರು ಟೀಂ ಇಂಡಿಯಾ ಬೌಲರ್‌ಗಳ ದಾಳಿಗೆ ತುತ್ತಾದರು. ಭಾರತದ ಪರ ಅರ್ಷ್‌ದೀಪ್‌ ಸಿಂಗ್‌, ಶಿವಂ ದುಬೆ, ಶಹಬಾಜ್ ಅಹಮದ್ ಹಾಗೂ ರವಿ ಬಿಷ್ಣೋಯಿ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೇಶ ಬಿಟ್ಟು ತೊಲಗುವಂತೆ ಅಫ್ಘಾನ್‌ ನಿರಾಶ್ರಿತರಿಗೆ ಪಾಕ್ ಸರ್ಕಾರ ವಾರ್ನಿಂಗ್

    ದೇಶ ಬಿಟ್ಟು ತೊಲಗುವಂತೆ ಅಫ್ಘಾನ್‌ ನಿರಾಶ್ರಿತರಿಗೆ ಪಾಕ್ ಸರ್ಕಾರ ವಾರ್ನಿಂಗ್

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ (Pakistan) ಆಶ್ರಯ ಪಡೆದಿರುವ 17 ಲಕ್ಷ ಅಫ್ಘಾನ್‌ ನಿರಾತ್ರಿತರಿಗೆ ನವೆಂಬರ್ 1ರೊಳಗೆ ದೇಶ ತೊರೆಯಲು ಪಾಕ್ ಸರ್ಕಾರ ಗಡುವು ನೀಡಿದೆ.

    ಅನುಮತಿ ಇಲ್ಲದೇ ಪಾಕಿಸ್ತಾನಕ್ಕೆ ಎಂಟ್ರಿಕೊಟ್ಟಿರುವ ಅಫ್ಘಾನ್‌ (Afghanistan) ಪ್ರಜೆಗಳು ಕೂಡಲೇ ದೇಶ ತೊರೆಯಬೇಕು. ಇಲ್ಲದಿದ್ದರೇ ಹುಡುಕಿ ಹುಡುಕಿ ಹೊಡೆದೋಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ನಿಲ್ಲದ ಸಮರ – ಉಕ್ರೇನ್‌ ದಿನಸಿ ಅಂಗಡಿ ಮೇಲೆ ರಷ್ಯಾ ರಾಕೆಟ್‌ ದಾಳಿಗೆ 49 ಮಂದಿ ಬಲಿ

    ಒಂದುವೇಳೆ ಗುರುತಿನ ಚೀಟಿ ತೋರಿಸದಿದ್ರೆ, ಅವ್ರ ರಾಷ್ಟ್ರೀಯತೆಯನ್ನ ಗುರುತಿಸಲು DNA ಟೆಸ್ಟ್ ಕೂಡ ಮಾಡಿಸ್ತೇವೆ. ಸೇನೆಯನ್ನು ಬಳಸಿಕೊಂಡು ದೇಶದಿಂದಲೇ ಹೊರಹಾಕುತ್ತೇವೆ ಎಂದು ವಾರ್ನಿಂಗ್ ಕೊಟ್ಟಿದೆ. 2021ರಲ್ಲಿ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ (Taliban Government) ಆಡಳಿತಕ್ಕೆ ಬಂದ ಬಳಿಕ ಲಕ್ಷಾಂತರ ಮಂದಿ ನೆರೆಯ ದೇಶಗಳಿಗೆ ತೆರಳಿದರು. ಈ ಸಂರ್ಭದಲ್ಲಿ ಅಫ್ಘಾನಿಸ್ತಾನದ ಲಕ್ಷಾಂತರ ಮಂದಿ ಪಾಕಿಸ್ತಾನದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಜಗತ್ತಿಗೆ ಭಿಕ್ಷುಕರ ರಫ್ತಿನಲ್ಲಿ ಪಾಕಿಸ್ತಾನವೇ ಫಸ್ಟ್ – ಜೇಬುಗಳ್ಳರ ಸಂಖ್ಯೆಯಲ್ಲೂ ಪಾಕಿಸ್ತಾನಿಯರೇ ಹೆಚ್ಚು

    ತಾಲಿಬಾನ್ ಪ್ರತಿಕ್ರಿಯೆ ಏನು?
    ಪಾಕಿಸ್ತಾನ ಸರ್ಕಾರದ ನಿರ್ಧಾರ ಸ್ವೀಕಾರಾರ್ಹವಲ್ಲ ಎಂದು ಕಾಬೂಲ್‌ನಲ್ಲಿ ತಾಲಿಬಾನ್ ಆಡಳಿತದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ಅಫ್ಘಾನ್ ನಿರಾಶ್ರಿತರು ಪಾಕಿಸ್ತಾನದ ಭದ್ರತಾ ಸಮಸ್ಯೆಗಳಲ್ಲಿ ಭಾಗಿಯಾಗಿಲ್ಲ. ಎಲ್ಲಿಯವರೆಗೆ ಅವರು ಸ್ವಯಂಪ್ರೇರಣೆಯಿಂದ ಪಾಕಿಸ್ತಾನವನ್ನು ತೊರೆಯುತ್ತಾರೆಯೋ ಅಲ್ಲಿಯವರೆಗೆ ದೇಶವು ಅವರನ್ನು ಸಹಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಶ್ವಕಪ್ ಬಳಿಕ ಏಕದಿನ ಪಂದ್ಯಕ್ಕೆ ನಿವೃತ್ತಿ ಘೋಷಿಸಿದ ನವೀನ್

    ವಿಶ್ವಕಪ್ ಬಳಿಕ ಏಕದಿನ ಪಂದ್ಯಕ್ಕೆ ನಿವೃತ್ತಿ ಘೋಷಿಸಿದ ನವೀನ್

    ಕಾಬುಲ್: ಕ್ರಿಕೆಟ್ ವಿಶ್ವಕಪ್ 2023 (Cricket World Cup 2023) ಅಫ್ಘಾನಿಸ್ತಾನದ (Afghanistan) ಕ್ರಿಕೆಟಿಗ ನವೀನ್-ಉಲ್-ಹಕ್ (Naveen-ul-Haq) ಅವರು ಭಾರತದಲ್ಲಿ ನಡೆಯುವ ವಿಶ್ವಕಪ್ ತನ್ನ ಕೊನೆಯ ಏಕದಿನ ಕ್ರಿಕೆಟ್ ಎಂದು ಘೋಷಿಸಿದ್ದಾರೆ. ಈ ಮೂಲಕ ತಮ್ಮ 24ನೇ ವಯಸ್ಸಿಲ್ಲಿಯೇ ಅವರು ಏಕದಿನ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದಾರೆ.

    ವಿಶ್ವಕಪ್ ಪಂದ್ಯದಲ್ಲಿ ನನ್ನ ದೇಶವನ್ನು ಪ್ರತಿನಿಧಿಸುತ್ತಿರುವುದು ವಿಶಿಷ್ಟ ಗೌರವವಾಗಿದೆ. ಈ ವಿಶ್ವಕಪ್‍ನ ಬಳಿಕ ಟಿ20 ಕ್ರಿಕೆಟ್‍ನಲ್ಲಿ ಮುಂದುವರಿಸುತ್ತೇನೆ ಎಂದು ಇನ್ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಬಂದ ಪಾಕ್‌ ತಂಡಕ್ಕೆ ಕೇಸರಿ ಶಾಲು ಹಾಕಿ ಸ್ವಾಗತ – ಬಾಬರ್‌ ಆಜಂ ಬಿಜೆಪಿ ಯುವನಾಯಕ ಎಂದು ಟ್ರೋಲ್‌

    2023ರ ಐಸಿಸಿ ವಿಶ್ವಕಪ್‍ನಲ್ಲಿ ಭಾರತ ಹಾಗೂ ಅಫ್ಘಾನ್ ನಡುವಿನ ಪಂದ್ಯಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಕಪ್‍ನಲ್ಲಿ ನವೀನ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಇದೀಗ ವಿಶ್ವಕಪ್‍ನಲ್ಲಿ ಅವರ ಹೆಸರನ್ನು ಪ್ರಕಟಿಸಲಾಗಿದೆ.

    ಅಫ್ಘಾನ್ ವಿಶ್ವಕಪ್ ತಂಡ
    ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮತ್ ಷಾ, ರಹಮಾನುಲ್ಲಾ ಗುರ್ಬಾಜ್, ಇಕ್ರಮ್ ಅಲಿಖಿಲ್, ರಿಯಾಜ್ ಹಸನ್, ಇಬ್ರಾಹಿಂ ಝದ್ರಾನ್, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಶಾಹಿದುಲ್ಲಾ ಕಮಾಲ್, ರಶೀದ್ ಖಾನ್, ಅಜ್ಮತುಲ್ಲಾ ಒಮರ್ಜಾಯ್, ಮುಜೀಬ್ ಉರ್ ರಹಕ್ಮಾನ್, ಫಜಲ್ ರಹಕ್ಮಾನ್, ಫಜಲ್ಹರ್ಖ್, ಅಬ್ದುಲ್ ರೆಹಮಾನ್, ವಫಾದರ್ ಮೊಮಂಡ್, ಸಲೀಮ್ ಸಫಿ ಮತ್ತು ಸೈಯದ್ ಅಹ್ಮದ್ ಶಿರ್ಜಾದ್. ಇದನ್ನೂ ಓದಿ: Asian Games: ಮಹಿಳೆಯರ 60 ಕೆ.ಜಿ ವುಶು ಫೈನಲ್‍ನಲ್ಲಿ ಭಾರತಕ್ಕೆ ಬೆಳ್ಳಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಗತ್ತಿನಲ್ಲೇ ಮೊದಲ ರಾಷ್ಟ್ರ – ತಾಲಿಬಾನ್‌ ಆಡಳಿತದ ರಾಷ್ಟ್ರಕ್ಕೆ ರಾಯಭಾರಿ ನೇಮಿಸಿದ ಚೀನಾ

    ಜಗತ್ತಿನಲ್ಲೇ ಮೊದಲ ರಾಷ್ಟ್ರ – ತಾಲಿಬಾನ್‌ ಆಡಳಿತದ ರಾಷ್ಟ್ರಕ್ಕೆ ರಾಯಭಾರಿ ನೇಮಿಸಿದ ಚೀನಾ

    ಕಾಬೂಲ್: ತಾಲಿಬಾನ್ (Taliban) ಅಫ್ಘಾನಿಸ್ತಾನಕ್ಕೆ (Afghanistan) ಚೀನಾದ ಹೊಸ ರಾಯಭಾರಿಯನ್ನು (China Ambassador) ಸ್ವಾಗತಿಸಿದೆ. ತಾಲಿಬಾನ್‌ ಆಡಳಿತದ ರಾಷ್ಟ್ರಕ್ಕೆ ರಾಯಭಾರಿ ನೇಮಿಸಿದ ಜಗತ್ತಿನ ಮೊದಲ ರಾಷ್ಟ್ರವಾಗಿ ಚೀನಾ ಹೊರಹೊಮ್ಮಿದೆ.

    2021 ರಲ್ಲಿ ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ಕಾಬೂಲ್‌ಗೆ ರಾಯಭಾರಿಯೊಬ್ಬರಿಗೆ ಇಂತಹ ಅದ್ದೂರಿ ಸ್ವಾಗತ ನೀಡಿರುವುದು ಇದೇ ಮೊದಲು. ಹೊಸ ರಾಯಭಾರಿಯ ಆಗಮನವು ಇತರ ರಾಷ್ಟ್ರಗಳು ಮುಂದೆ ಬರಲು ಮತ್ತು ತಾಲಿಬಾನ್ ನೇತೃತ್ವದ ಸರ್ಕಾರದೊಂದಿಗೆ ಸಂಬಂಧ ಸ್ಥಾಪಿಸುವ ಸಂಕೇತವಾಗಿದೆ ಎಂದು ಅಫ್ಘಾನ್ ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಮಾಂತ್ರಿಕನೊಂದಿಗೆ ಮದುವೆ ಘೋಷಿಸಿದ ನಾರ್ವೆಯ ರಾಜಕುಮಾರಿ

    ಚೀನಾ ರಾಯಭಾರಿ ಝಾವೋ ಅವರಿಗೆ ಅಫ್ಘಾನ್ ಸೈನಿಕರು ಸ್ವಾಗತ ಕೋರಿದರು. ಆಡಳಿತದ ಮುಖ್ಯಸ್ಥರಾದ ಮೊಹಮ್ಮದ್ ಹಸನ್ ಅಖುಂಡ್ ಮತ್ತು ವಿದೇಶಾಂಗ ಸಚಿವ ಮುತಾಕಿ ಸೇರಿದಂತೆ ಉನ್ನತ ಶ್ರೇಣಿಯ ತಾಲಿಬಾನ್ ಅಧಿಕಾರಿಗಳನ್ನು ರಾಯಭಾರಿ ಭೇಟಿ ಮಾಡಿದರು.

    ಚೀನಾ ಮತ್ತು ಅಫ್ಘಾನಿಸ್ತಾನದ ನಡುವೆ ಮಾತುಕತೆ, ಸಹಕಾರವನ್ನು ಮುಂದುವರಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಅಫ್ಘಾನಿಸ್ತಾನದ ಬಗ್ಗೆ ಚೀನಾದ ನೀತಿ ಸ್ಪಷ್ಟ ಮತ್ತು ಸ್ಥಿರವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಕ್ಯಾನ್ಸರ್ ಔಷಧಕ್ಕೆ ಬರ – ಇದರಲ್ಲಿ ಭಾರತದ ಪಾತ್ರವೇನು?

    ತಾಲಿಬಾನ್ ಆಫ್ಘಾನಿಸ್ತಾನದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಮತ್ತು ಮಾನವೀಯ ಬಿಕ್ಕಟ್ಟನ್ನು ಪರಿಹರಿಸಲು ಹೆಣಗಾಡುತ್ತಿದೆ. ಪಾಶ್ಚಿಮಾತ್ಯ ರಾಷ್ಟ್ರಗಳು ಈ ದೇಶಕ್ಕೆ ಹಣಕಾಸಿನ ನೆರವು ಸ್ಥಗಿತಗೊಳಿಸಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೋರಾಟ ಅಂದ್ರೆ ಇದು – ಕೊನೆಯವರೆಗೂ ಕಾದಾಡಿ ಸೋತ ಅಫ್ಘಾನಿಸ್ತಾನ

    ಹೋರಾಟ ಅಂದ್ರೆ ಇದು – ಕೊನೆಯವರೆಗೂ ಕಾದಾಡಿ ಸೋತ ಅಫ್ಘಾನಿಸ್ತಾನ

    – 2 ರನ್‌ ರೋಚಕ ಜಯ, ಸೂಪರ್‌ 4ಗೆ ಶ್ರೀಲಂಕಾ

    ಲಾಹೋರ್‌: ಏಷ್ಯಾ ಕಪ್‌ ಕ್ರಿಕೆಟ್‌ (Asia Cup Cricket) ಸೂಪರ್‌ 4 ಪ್ರವೇಶಕ್ಕೆ ಕೊನೆಯವರೆಗೆ ಹೋರಾಡಿದ ಅಫ್ಘಾನಿಸ್ತಾನ (Afghanistan) ವಿರೋಚಿತ ಸೋಲನ್ನು ಅನುಭವಿಸಿದ್ದು, ಶ್ರೀಲಂಕಾ (Sri Lanka) 2 ರನ್‌ಗಳ ಜಯ ಸಾಧಿಸುವ ಮೂಲಕ ಸೂಪರ್‌ 4 ಪ್ರವೇಶ ಮಾಡಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಶ್ರೀಲಂಕಾ 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 291 ರನ್‌ ಗಳಿಸಿತು. ಈ ಮೊತ್ತ ಸವಾಲಿನ ಮೊತ್ತವಾಗಿದ್ದರೂ ಅಫ್ಘಾನಿಸ್ತಾನಕ್ಕೆ ಮತ್ತೊಂದು ಸವಾಲು ಇತ್ತು.

    ಬಾಂಗ್ಲಾದೇಶದ (Bangladesh) ವಿರುದ್ಧ ಪಂದ್ಯ ಸೋತಿದ್ದರಿಂದ ನೆಟ್‌ ರನ್‌ ರೇಟ್‌ ಬಹಳ ಕಡಿಮೆ ಇತ್ತು. ಹೀಗಾಗಿ 37 ಓವರ್‌ನಲ್ಲಿ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡ ಇತ್ತು. ಈ ಕಾರಣಕ್ಕೆ ಕೊನೆಯವರೆಗೆ ಹೋರಾಡಿದ ಅಫ್ಘಾನಿಸ್ತಾನ 37.4 ಓವರ್‌ಗಳಲ್ಲಿ 289 ರನ್‌ಗಳಿಸಿ ಆಲೌಟ್‌ ಆಗಿ ಟೂರ್ನಿಯಿಂದ ಹೊರ ಬಿತ್ತು.

    ಆರಂಭದಲ್ಲೇ ಅಫ್ಘಾನಿಸ್ತಾನ ವಿಕೆಟ್‌ ಕಳೆದುಕೊಂಡಿದ್ದರೂ ನಾಯಕ ಹಶ್ಮತುಲ್ಲಾ ಶಾಹಿದಿ 59 ರನ್‌(66 ಎಸೆತ, 3 ಬೌಂಡರಿ, 1 ಸಿಕ್ಸರ್‌) ರಹ್ಮತ್‌ ಶಾ 45 ರನ್‌ (40 ಎಸೆತ, 5 ಬೌಂಡರಿ, 1 ಸಿಕ್ಸರ್‌) ಹೊಡೆದು ಚೇತರಿಕೆ ನೀಡಿದರು. ಇದನ್ನೂ ಓದಿ: ಟೀಂ ಭಾರತ್ ಅಂತಾ ಜೆರ್ಸಿ ಬದಲಿಸಿ – ಬಿಸಿಸಿಐಗೆ ಸೆಹ್ವಾಗ್ ಆಗ್ರಹ

    ನಂತರ ಬಂದ ಮೊಹಮ್ಮದ್‌ ನಬಿ ಬಿರುಸಿನ ಬ್ಯಾಟ್‌ ಬೀಸಿದರು. ಕೇವಲ 32 ಎಸೆತಗಳಲ್ಲಿ 65 ರನ್‌(6 ಬೌಂಡರಿ, 5 ಸಿಕ್ಸರ್‌ ) ಸಿಡಿಸಿ ಪಂದ್ಯವನ್ನು ರೋಚಕ ಘಟ್ಟದತ್ತ ತಂದು ನಿಲ್ಲಿಸಿದರು. ಕೊನೆಯಲ್ಲಿ ನಜಿಬುಲ್ಲಾ ಮತ್ತು ರಷೀದ್‌ ಖಾನ್‌ ಗೆಲುವಿನ ದಡದತ್ತ ತಂದಿದ್ದರು. ಇವರಿಬ್ಬರು 23 ಎಸೆತಗಳಲ್ಲಿ 39 ರನ್‌ ಜೊತೆಯಾಟವಾಡಿದರು. ಇನ್ನೇನು ಅಫ್ಘಾನ್‌ಗೆ ಗೆಲುವು ಸಿಗಬಹುದು ಎಂಬ ಲೆಕ್ಕಾಚಾರ ಹಾಕುತ್ತಿದ್ದಾಗ ನಜಿಬುಲ್ಲಾ 23 ರನ್‌( 15 ಎಸೆತ, 1 ಬೌಂಡರಿ, 2 ಸಿಕ್ಸರ್)‌ ಹೊಡೆದು ಔಟಾದರು. ಹೀಗಿದ್ದರೂ ರಶೀದ್‌ ಖಾನ್‌ ಇನ್ನೊಂದು ಕಡೆಯಲ್ಲಿ ನಿಂತು ಅಬ್ಬರಿಸುತ್ತಿದ್ದರು. ಆದರೆ 37.1ನೇ ಓವರಿಗೆ ಮುಜೀಬ್‌ ಮತ್ತು 37.4ನೇ ಎಸೆತಕ್ಕೆ ಫಾರೂಕಿ ಔಟಾಗುವುದರೊಂದಿಗೆ ಅಫ್ಘಾನಿಸ್ತಾನ ಏಷ್ಯಾ ಕಪ್‌ನಿಂದ ನಿರ್ಗಮಿಸಿತು.

    ರಶೀದ್‌ ಖಾನ್‌ ಔಟಾಗದೇ 27 ರನ್‌(16 ಎಸೆತ, 4 ಬೌಂಡರಿ, 1 ಸಿಕ್ಸರ್‌) ಹೊಡೆದರು. ರಶೀದ್‌ ಖಾನ್‌ ನಾನ್‌ ಸ್ಟ್ರೈಕ್‌ನಲ್ಲಿ ಇದ್ದ ಕಾರಣ 37ನೇ ಓವರ್‌ನಲ್ಲಿ ಸ್ಟ್ರೈಕ್‌ ಸಿಕ್ಕಿರಲಿಲ್ಲ. 37ನೇ ಓವರ್‌ನಲ್ಲಿ ಪಂದ್ಯ ಮುಗಿಸದೇ ಇದ್ದರೂ 37.4 ಓವರ್‌ನಲ್ಲಿ ಸಿಕ್ಸ್‌ ಚಚ್ಚಿ 295 ರನ್‌ ಗಳಿಸಿದ್ದರೆ ಅಫ್ಘಾನಿಸ್ತಾನ ಸೂಪರ್‌ 4 ಪ್ರವೇಶಿಸುವ ಸಾಧ್ಯತೆ ಇತ್ತು. ಆದರೆ ಧನಂಜಯ ಡಿಸಿಲ್ವಾ ಬಿಗಿಯಾದ ಬೌಲಿಂಗ್‌ನಿಂದಾಗಿ ಲಂಕಾ 2 ರನ್‌ಗಳ ಜಯ ಸಾಧಿಸುವುದರೊಂದಿಗೆ ಸೂಪರ್‌ 4 ಪ್ರವೇಶಿಸಿದೆ.

    ಇದಕ್ಕೂ ಮೊದಲು ಬ್ಯಾಟ್‌ ಬೀಸಿದ ಲಂಕಾ ಪರವಾಗಿ ಕುಸಾಲ್ ಮೆಂಡಿಸ್ 92 ರನ್‌( 84 ಎಸೆತ, 6 ಬೌಂಡರಿ, 3 ಸಿಕ್ಸರ್‌), ಪಾತುಮ್‌ ನಿಸ್ಸಾಂಕ 41 ರನ್‌, ಮಹೇಶ್‌ ತೀಕ್ಷಣ 28 ರನ್‌, ದುನಿತ್ ವೆಲ್ಲಲಾಗೆ 36 ರನ್‌ ಹೊಡೆದರು.

    ಅಫ್ಘಾನಿಸ್ತಾನ ಸೋತರೂ ಕ್ರಿಕೆಟ್‌ ಇತಿಹಾಸದಲ್ಲಿ ರೋಚಕ ಹೋರಾಟ ನಡೆಸಿದ ಪಂದ್ಯಗಳ ಸಾಲಿಗೆ ಈ ಪಂದ್ಯ ಸೇರ್ಪಡೆಯಾಗಿದೆ. ಕ್ರಿಕೆಟ್‌ ಅಭಿಮಾನಿಗಳು ಅಫ್ಘಾನ್‌ ಆಟಗಾರರ ಕೆಚ್ಚೆದೆಯ ಹೋರಾಟಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೆಹ್ದಿ, ನಜ್ಮಲ್‌ ಶತಕದ ಆಟ- ಬಾಂಗ್ಲಾಗೆ 89 ರನ್‌ಗಳ ಭರ್ಜರಿ ಜಯ

    ಮೆಹ್ದಿ, ನಜ್ಮಲ್‌ ಶತಕದ ಆಟ- ಬಾಂಗ್ಲಾಗೆ 89 ರನ್‌ಗಳ ಭರ್ಜರಿ ಜಯ

    ಲಾಹೋರ್‌: ಮೆಹ್ದಿ, ನಜ್ಮಲ್‌ ಶತಕದ ಆಟದಿಂದ ಏಷ್ಯಾ ಕಪ್‌ ಕ್ರಿಕೆಟ್‌ನಲ್ಲಿ (Asia Cup Cricket) ಅಫ್ಘಾನಿಸ್ತಾನದ (Afghanistan) ವಿರುದ್ಧ ಬಾಂಗ್ಲಾದೇಶ (Bangladesh) 89 ರನ್‌ಗಳ ಭರ್ಜರಿ ಜಯಗಳಿಸಿದೆ.

    ಗೆಲ್ಲಲು 335 ರನ್‌ಗಳ ಕಠಿಣ ಗುರಿಯನ್ನು ಪಡೆದ ಅಫ್ಘಾನಿಸ್ತಾನ 44.3 ಓವರ್‌ಗಳಲ್ಲಿ 245 ರನ್‌ಗಳಿಗೆ ಆಲೌಟ್‌ ಆಯ್ತು. ಇದನ್ನೂ ಓದಿ: Asia Cup ಭಾರತ Vs ನೇಪಾಳ ಪಂದ್ಯಕ್ಕೂ ಮಳೆ ಕಾಟ – ರದ್ದಾದ್ರೆ ಏನು?

    ಆರಂಭಿಕ ಆಟಗಾರ ಇಬ್ರಾಹಿಂ ಜದ್ರಾನ್ 75 ರನ್‌ (74 ಎಸೆತ, 10 ಬೌಂಡರಿ, 1 ಸಿಕ್ಸರ್)‌, ಹಶ್ಮತುಲ್ಲಾ ಶಾಹಿದಿ 51 ರನ್‌ (60 ಎಸೆತ, 6 ಬೌಂಡರಿ), ರಹ್ಮತ್‌ ಶಾ 33 ರನ್‌ (‌ 51 ರನ್‌, 60 ಎಸೆತ, 6 ಬೌಂಡರಿ) ಕೊನೆಯಲ್ಲಿ ರಶೀದ್‌ ಖಾನ್‌ 24 ರನ್‌ (15 ಎಸೆತ, 3 ಬೌಂಡರಿ, 1 ಸಿಕ್ಸರ್) ಹೊಡೆದು ಪ್ರತಿರೋಧ ತೋರಿದರು. ಬಾಂಗ್ಲಾ ಪರ ತಸ್ಕಿನ್‌ ಅಹ್ಮದ್‌ 4 ವಿಕೆಟ್‌, ಶರಿಫುಲ್ ಇಸ್ಲಾಂ 3 ವಿಕೆಟ್‌ ಕಿತ್ತರು.

    ಮೆಹ್ದಿ, ನಜ್ಮಲ್‌ ಶತಕದ ಆಟ:
    63 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡಿದ್ದಾಗ ಜೊತೆಯಾದ ಮೆಹ್ದಿ ಹಸನ್‌ (Mehidy Hasan Miraz ) ಮತ್ತು ನಜ್ಮಲ್‌ ಹಸನ್‌ (Najmul Hossain Shanto) ಮೂರನೇ ವಿಕೆಟಿಗೆ 190 ಎಸೆತಗಳಲ್ಲಿ 194 ರನ್‌ ಜೊತೆಯಾಟವಾಡಿದರು.

    ಮೆಹ್ದಿ ಹಸನ್‌ 112 ರನ್‌(119 ಎಸೆತ, 7 ಬೌಂಡರಿ, 3 ಸಿಕ್ಸರ್)‌ ಸಿಡಿಸಿದರೆ ನಜ್ಮಲ್‌ 104 ರನ್‌ (105 ಎಸೆತ, 9 ಬೌಂಡರಿ, 2 ಸಿಕ್ಸರ್‌) ಸಿಡಿಸಿ ರನೌಟ್‌ ಆದರು.  ಇದನ್ನೂ ಓದಿ: ನೇಪಾಳ ಪಂದ್ಯಕ್ಕೆ ಗೈರು – ಭಾರತಕ್ಕೆ ಮರಳಿದ ಬುಮ್ರಾ

    ಕೊನೆಯಲ್ಲಿ ಮುಶ್ಫಿಕರ್ ರಹೀಮ್ 25 ರನ್‌ (15 ಎಸೆತ, 1 ಬೌಂಡರಿ, 1 ಸಿಕ್ಸರ್)‌ , ನಾಯಕ ಶಕಿಬ್‌ ಉಲ್‌ ಹಸನ್‌ 32 ರನ್‌( 18 ಎಸೆತ, 4 ಬೌಂಡರಿ, 1 ಸಿಕ್ಸರ್)‌ ಚಚ್ಚಿದ ಪರಿಣಾಮ ತಂಡದ ಮೊತ್ತ 330 ರನ್‌ಗಳ ಗಡಿದಾಟಿತು.

     

    ಗುಂಪು ಬಿಯಲ್ಲಿ ಬಾಂಗ್ಲಾ ಎರಡು ಪಂದ್ಯವಾಡಿ ಲಂಕಾ ವಿರುದ್ಧ ಸೋತಿರುವ ಹಿನ್ನೆಲೆಯಲ್ಲಿ 2 ಅಂಕ ಗಳಿಸಿದೆ. ಶ್ರೀಲಂಕಾ ಬಾಂಗ್ಲಾವನ್ನು ಸೋಲಿಸಿದ ಪರಿಣಾಮ 2 ಅಂಕ ಪಡೆದುಕೊಂಡಿದೆ. ಅಫ್ಘಾನಿಸ್ತಾನದ ನೆಟ್‌ ರನ್‌ ರೇಟ್‌ -1.780 ಇದ್ದು ಲಂಕಾ ವಿರುದ್ಧ ಭಾರೀ ಅಂತರದಿಂದ ಜಯಗಳಿಸಿದರೆ ಮಾತ್ರ ಸೂಪರ್‌ 4 ಪ್ರವೇಶಿಸಬಹುದು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತಾಲಿಬಾನ್‌ ಆಡಳಿತಕ್ಕೆ 2 ವರ್ಷ – ಮಹಿಳೆಯರ ಮೇಲೆ ಹೇರಿದ ನಿರ್ಬಂಧಗಳೇನು?

    ತಾಲಿಬಾನ್‌ ಆಡಳಿತಕ್ಕೆ 2 ವರ್ಷ – ಮಹಿಳೆಯರ ಮೇಲೆ ಹೇರಿದ ನಿರ್ಬಂಧಗಳೇನು?

    ಭಾರತದ ಸ್ವಾತಂತ್ರ್ಯ ದಿನವೇ ಅಫ್ಘಾನಿಸ್ತಾನದ ತಾಲಿಬಾನ್ (Taliban) ಅಧಿಕಾರಕ್ಕೆ ಮರಳಿ ಎರಡು ವರ್ಷಗಳನ್ನು ಪೂರೈಸಿತು. 20 ವರ್ಷಗಳ ಅನಿರ್ದಿಷ್ಟ ಯುದ್ಧದ ನಂತರ ಅಮೆರಿಕ ಪಡೆಗಳು ಅಫ್ಘಾನಿಸ್ತಾನದಿಂದ (Afghanistan) ವಾಪಸ್ ಆದ ಬಳಿಕ ತಾಲಿಬಾನ್ ಅಧಿಕಾರಕ್ಕೆ ಮರಳಿತು. ಇಸ್ಲಾಮಿಕ್ ವ್ಯವಸ್ಥೆಯಡಿ ದೇಶದಲ್ಲಿ ಭದ್ರತೆಯನ್ನು ಪುನಃಸ್ಥಾಪಿಸಲು ಹೊರಟಿದ್ದೇವೆ ಎಂದು ಈ ವೇಳೆ ತಾಲಿಬಾನ್ ಸಂಘಟನೆ ಹೇಳಿತ್ತು.

    ಉಗ್ರಗಾಮಿ ಸಂಘಟನೆ ಅಧಿಕಾರ ವಹಿಸಿಕೊಂಡ ನಂತರ ಅಲ್ಲಿನ ಮಹಿಳೆಯರ (Women) ಪರಿಸ್ಥಿತಿ ಹೀನಾಯ ಪರಿಸ್ಥಿತಿಗೆ ತಲುಪಿದೆ. ಮಹಿಳೆಯರಿಗೆ ಚೌಕಟ್ಟಿನೊಳಗೆ ಅಧ್ಯಯನ ಮಾಡಲು ಮತ್ತು ಕೆಲಸ ಮಾಡಲು ಅವಕಾಶ ನೀಡಲಿದ್ದೇವೆ. ಮಹಿಳೆಯರು ನಮ್ಮ ಸಮಾಜದಲ್ಲಿ ತುಂಬಾ ಸಕ್ರಿಯರಾಗಲಿದ್ದಾರೆ ಎಂದು ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡ ಸ್ವಲ್ಪ ಸಮಯದ ನಂತರ ಮೊದಲ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿಕೊಂಡಿತ್ತು. ಆದರೆ ತಾಲಿಬಾನ್ ತನ್ನ ಭರವಸೆಯನ್ನು ಉಳಿಸಿಕೊಂಡಿಲ್ಲ. 

    ಸೆಪ್ಟೆಂಬರ್ 2021 ರಲ್ಲಿ ಬಾಲಕಿಯರಿಗೆ ಶಾಲೆಗೆ ಹೋಗದಂತೆ ನಿರ್ಬಂಧಿಸಲಾಯಿತು. ಬಳಿಕ ಕಾಬೂಲ್ ನಗರ ಆಡಳಿತ ವಿಭಾಗದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಮನೆಯಲ್ಲೇ ಇರುವಂತೆ ಹೇಳಲಾಯಿತು. ಪುರುಷರಿಂದ ಮಾಡಲಾಗದ ಕೆಲಸಗಳನ್ನು ಹೊಂದಿರುವ ಮಹಿಳೆಯರಿಗೆ ಮಾತ್ರ ಮುಂದುವರೆಯಲು ಅವಕಾಶ ನೀಡಲಾಯಿತು.

    ಡಿಸೆಂಬರ್ 2021 ರಲ್ಲಿ ಮಹಿಳೆಯರು 72 ಕಿ.ಮೀ (45 ಮೈಲುಗಳು) ಗಿಂತ ಹೆಚ್ಚು ದೂರ ಪ್ರಯಾಣಿಸುತ್ತಿದ್ದರೆ ಪುರುಷ ಸಂಬಂಧಿ ಇರಬೇಕೆಂದು ಆದೇಶವನ್ನು ಹೊರಡಿಸಿತು. ಈ ವಿಚಾರವಾಗಿ ಮಹಿಳೆಯರು ಹೋರಾಟ ನಡೆಸಿದ್ದರು. ಅವರನ್ನು ತಾಲಿಬಾನ್ ಹಿಂಸಾತ್ಮಕವಾಗಿ ಶಿಕ್ಷಿಸಿತ್ತು. 

    ಜನವರಿ 2022 ರಲ್ಲಿ ಕನಿಷ್ಠ ನಾಲ್ಕು ಮಹಿಳಾ ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಲಾಯಿತು. ವಾರಗಟ್ಟಲೆ ಹಿಡಿದು ಅವರನ್ನು ಕಸ್ಟಡಿಯಲ್ಲಿ ಥಳಿಸಿದರು. 21 ಮಾರ್ಚ್ 2023 ರಂದು ತಾಲಿಬಾನ್ ಶಿಕ್ಷಣ ಇಲಾಖೆಯು ಎಲ್ಲಾ ವಿದ್ಯಾರ್ಥಿಗಳು ಹೊಸ ಶೈಕ್ಷಣಿಕ ಅವಧಿಯ ಪ್ರಾರಂಭದಲ್ಲಿ ಶಾಲೆಗೆ ಮರಳಲು ಸಾಧ್ಯವಾಗುತ್ತದೆ ಎಂದು ಘೋಷಿಸಿದೆ.

    ಮೇ 7, 2022 ರಂದು ಮಹಿಳೆಯರಿಗೆ ತಲೆಯಿಂದ ಕಾಲಿನವರೆಗೆ ಉಡುಪುಗಳನ್ನು ಕಡ್ಡಾಯಗೊಳಿಸುವ ಆದೇಶವನ್ನು ಸರ್ಕಾರ ಪ್ರಕಟಿಸಿತು. ಈ ಕ್ರಮವನ್ನು ತಾಲಿಬಾನ್‌ನ ಸರ್ವೋಚ್ಚ ನಾಯಕ ಮುಲ್ಲಾ ಹೈಬತುಲ್ಲಾ ಅಖುಂಡ್‌ಜಾದಾ ಅನುಮೋದಿಸಿದ್ದಾನೆ. ಈ ಆದೇಶದ ಅಡಿಯಲ್ಲಿ ಮಹಿಳೆಯರು ತಮ್ಮ ಕಣ್ಣುಗಳನ್ನು ಹೊರತುಪಡಿಸಿ ತಮ್ಮ ಮುಖಗಳನ್ನು ಸಹ ಮುಚ್ಚಿಕೊಳ್ಳಬೇಕು. ಇಲ್ಲದಿದ್ದರೆ ಅವರು ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ಬಳಿಕ ಮಹಿಳೆಯರು ಸಡಿಲವಾದ ಕಪ್ಪು ಅಬಯಾಸ್ (ಗೌನ್) ಮತ್ತು ಹಿಜಾಬ್ ಧರಿಸಲು ಪ್ರಾರಂಭಿಸಿದರು. 

    ಅಕ್ಟೋಬರ್ 2022ರ ಸುಮಾರಿಗೆ ಶಾಲೆಯ ಕೊನೆಯ ವರ್ಷವನ್ನು ಪೂರ್ಣಗೊಳಿಸದ ಹೆಣ್ಣು ಮಕ್ಕಳು ಸೇರಿದಂತೆ, ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಗಳನ್ನು ಬರೆಯಬಹುದು ಎಂದು ಘೋಷಿಸಲಾಯಿತು. ನವೆಂಬರ್‌ನಲ್ಲಿ ಮಹಿಳೆಯರು ಷರಿಯಾವನ್ನು (ಇಸ್ಲಾಮಿಕ್ ಕಾನೂನು) ಅನುಸರಿಸದ ಕಾರಣ ಕಾಬೂಲ್ ಉದ್ಯಾನವನಗಳಿಂದ ನಿಷೇಧಿಸಲಾಯಿತು. ಈಜು ಕೊಳಗಳು ಮತ್ತು ಸಾರ್ವಜನಿಕ ಸ್ನಾನಗೃಹಗಳಿಗೆ ಹೋಗುವುದನ್ನು ಸಹ ನಿಷೇಧಿಸಲಾಗಿದೆ. 

    ಡಿಸೆಂಬರ್ 20, 2022 ರಂದು ತಾಲಿಬಾನ್ ಉನ್ನತ ಶಿಕ್ಷಣ ಸಚಿವ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಮಹಿಳಾ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದರು. ತಾಲಿಬಾನ್‌ನ ಆರ್ಥಿಕ ಸಚಿವಾಲಯವು ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಎನ್‌ಜಿಒಗಳು ತಮ್ಮ ಮಹಿಳಾ ಉದ್ಯೋಗಿಗಳನ್ನು ಕೆಲಸಕ್ಕೆ ಬರುವುದನ್ನು ನಿಲ್ಲಿಸುವಂತೆ ಆದೇಶಿಸಲಾಯಿತು.

    ಜುಲೈ 2023 ರಲ್ಲಿ, ತಾಲಿಬಾನ್ ಸರ್ಕಾರವು ಬ್ಯೂಟಿ ಪಾರ್ಲರ್‌ಗಳು ಮತ್ತು ಸಲೂನ್‌ಗಳನ್ನು ಮುಚ್ಚುವುದಾಗಿ ಘೋಷಿಸಿತು, ಹಲವಾರು ಮಹಿಳೆಯರ ಆದಾಯದ ಮೂಲವನ್ನು ಕಸಿದುಕೊಂಡಿತು. 

    ಸುಮಾರು 4 ಕೋಟಿ ಜನರಿರುವ ದೇಶದಲ್ಲಿ, ಈ ವರ್ಷ ಸುಮಾರು 1.50 ಕೋಟಿ ಜನರು ಆಹಾರ ಅಭದ್ರತೆಯನ್ನು ಎದುರಿಸುತ್ತಿದ್ದಾರೆ. 

    ವಿಶ್ವ ಆರೋಗ್ಯ ಸಂಸ್ಥೆಯು ಆಫ್ಘನ್ನರ ಮೂಲಭೂತ ಆರೋಗ್ಯ ಸೇವೆಗಳ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಜನಸಂಖ್ಯೆಯ ಸುಮಾರು 20% ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಮತ್ತು 4 ಮಿಲಿಯನ್ ಜನರು ಮಾದಕ ವ್ಯಸನದಿಂದ ಅಸ್ವಸ್ಥತೆಗಳಿಂದ ಬಳಲುತ್ತಿದ್ದಾರೆ. ಹೆಚ್ಚಿನ ಆರೋಗ್ಯ ಸೌಲಭ್ಯಗಳು ಕಳಪೆ ಮೂಲಸೌಕರ್ಯವನ್ನು ಹೊಂದಿವೆ. ವಲಸೆ, ಮಹಿಳೆಯರ ಓಡಾಟಕ್ಕೆ ನಿರ್ಬಂಧ ಮತ್ತು ಉದ್ಯೋಗದ ಮೇಲಿನ ಮಿತಿಗಳಿಂದ ಕಡಿಮೆ ಅರ್ಹ ಆರೋಗ್ಯ ಕಾರ್ಯಕರ್ತರಿದ್ದಾರೆ. ಇದು ಅಲ್ಲಿನ ಅರೋಗ್ಯ ಸಮಸ್ಯೆಗಳ ಹೆಚ್ಚಳಕ್ಕೂ ಕಾರಣವಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತಾಲಿಬಾನ್‌ ಉಗ್ರರಿಗೆ ಪಾಕ್‌ ಮೇಲೆ ಸಿಟ್ಯಾಕೆ?

    ತಾಲಿಬಾನ್‌ ಉಗ್ರರಿಗೆ ಪಾಕ್‌ ಮೇಲೆ ಸಿಟ್ಯಾಕೆ?

    ಗ್ರರನ್ನು ಸೃಷ್ಟಿಸಿ, ಬೆಳೆಸಿ, ಪೋಷಿಸಿ ಭಾರತದ (India) ವಿರುದ್ಧ ಛೂ ಬಿಡುತ್ತಿದ್ದ ಪಾಕಿಸ್ತಾನದ (Pakistan) ಮೇಲೆ ಈಗ ಉಗ್ರರೇ ದಾಳಿ ಮಾಡುತ್ತಿದ್ದಾರೆ. ಅಂದು ತಾಲಿಬಾನ್ (Taliban) ಉಗ್ರರಿಗೆ ರಾಜಾಶ್ರಯ ನೀಡಿದ್ದ ಪಾಕಿಸ್ತಾನ ಈಗ ಅದೇ ಉಗ್ರರಿಂದ ಸಂಕಷ್ಟ ಅನುಭವಿಸುತ್ತಿದೆ. ಹೀಗಾಗಿ ಇಲ್ಲಿ ಪಾಕ್ ವಿರುದ್ಧ ತಾಲಿಬಾನ್‌ ಉಗ್ರರು ಹೋರಾಟ ಮಾಡುತ್ತಿರುವುದು ಯಾಕೆ? ಪಾಕ್ ಸರ್ಕಾರ ಉಗ್ರರನ್ನು ಮಟ್ಟ ಹಾಕಲು ವಿಫಲವಾಗಿದ್ದು ಯಾಕೆ ಎಂಬ ವಿವರವನ್ನು ನೀಡಲಾಗಿದೆ.

    ಮೊದಲು ಅಫ್ಘಾನಿಸ್ತಾನ ಹೇಗಿತ್ತು?
    ಎರಡನೇ ವಿಶ್ವಯುದ್ಧದ ಬಳಿಕ ಅಫ್ಘಾನಿಸ್ತಾನ (Afghanistan) ಸೋವಿಯತ್‌ ಯೂನಿಯನ್‌ ಜೊತೆ ಉತ್ತಮ ಸಂಬಂಧ ಹೊಂದಿತ್ತು. ಸೋವಿಯತ್‌ ಯೂನಿಯನ್‌ (Soviet Union) ಆರ್ಥಿಕ, ಮಿಲಿಟರಿ, ಸಹಕಾರವನ್ನು ನೀಡಿತ್ತು. ಶೀತಲ ಸಮರದ ಸಮಯದಲ್ಲಿ ಅಫ್ಘಾನ್‌- ಯುಎಸ್‌ಎಸ್‌ಆರ್‌ ಸಂಬಂಧ ಉತ್ತಮವಾಗುತ್ತಿರುವುದನ್ನು ಸಹಿಸದ ಅಮೆರಿಕ (America) ಪಾಕಿಸ್ತಾದಲ್ಲಿ ಮುಜಾಹಿದ್ದೀನ್‌ಗಳ ಕೈಗೆ ಶಸ್ತ್ರಾಸ್ತ್ರ ನೀಡಿ ಬೆಳೆಸತೊಡಗಿತು. ಅಮೆರಿಕದ ಈ ತಂತ್ರಕ್ಕೆ ಪಾಕಿಸ್ತಾನದ ಐಎಸ್‌ಐ ಸಾಥ್‌ ನೀಡಿತು.

    ಈ ನಿರ್ಧಾರದಿಂದ ಅಮೆರಿಕಕ್ಕೆ ಎರಡು ಲಾಭವಿತ್ತು. ಒಂದನೇಯದಾಗಿ ಅಮೆರಿಕದ ಸೈನಿಕರು ಅಫ್ಘಾನಿಸ್ತಾನಕ್ಕೆ ಹೋಗಿ ನೇರವಾಗಿ ಯುದ್ಧ ಮಾಡದ ಕಾರಣ ಸೈನಿಕರ ಸಾವು, ನೋವು ಸಂಭವಿಸುವುದಿಲ್ಲ. ಎರಡನೇಯದಾಗಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪವೂ ಬರುವುದಿಲ್ಲ. ಅಮೆರಿಕ ಕೃಪಾಪೋಷಿತ ಉಗ್ರರು ಸೋವಿಯತ್‌ ಸೈನಿಕರ ಮೇಲೆ ದಾಳಿ ನಡೆಸುತ್ತಿದ್ದರು. ಗೆರಿಲ್ಲಾ ಯುದ್ಧಗಳನ್ನು ಮಾಡಲು ಆರಂಭಿಸಿದರು. ಕೊನೆಗೆ 1989ರಲ್ಲಿ ಸೋವಿಯತ್‌ ಯೂನಿಯನ್‌ ಅಫ್ಘಾನಿಸ್ತಾನದಲ್ಲಿದ್ದ ಎಲ್ಲ ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡಿತು. 1991ರಲ್ಲಿ ಯುಎಸ್‌ಎಸ್‌ಆರ್‌ ಛಿದ್ರಗೊಳ್ಳುವ ಮೂಲಕ ಅಮೆರಿಕದ ತಂತ್ರ ಯಶಸ್ವಿಯಾಯಿತು.  ಇದನ್ನೂ ಓದಿ: ದೇಶದ್ರೋಹ ಕಾನೂನು ರದ್ದು: ಅಮಿತ್ ಶಾ ಮಸೂದೆ ಮಂಡನೆ

    ಅಮೆರಿಕದ ಮೇಲೆ ಕೆಂಗಣ್ಣು
    ಶೀತಲ ಸಮರದಲ್ಲಿ ಗೆದ್ದ ಅಮೆರಿಕ ಪ್ಯಾಲೆಸ್ಟೀನ್‌ (Palestine) ವಿಚಾರದಲ್ಲಿ ಇಸ್ರೇಲ್‌ಗೆ (Israel) ಬೆಂಬಲ ನೀಡಿತ್ತು. ಅಷ್ಟೇ ಅಲ್ಲದೆ ಇರಾಕ್‌ (Iraq) ಮೇಲೆ ವ್ಯಾಪಾರ ನಿರ್ಬಂಧ ಹೇರಿತು. ಇದು ಅಮೆರಿಕವೇ ಸೃಷ್ಟಿಸಿದ್ದ ಜಿಹಾದಿಗಳ ಸಿಟ್ಟಿಗೆ ಕಾರಣವಾಯಿತು. ಈ ಎಲ್ಲಾ ಉಗ್ರ ಸಂಘಟನೆ ಒಂದಾಗಿ ಅಲ್ ಖೈದಾ ಸಂಘಟನೆ ಸೃಷ್ಟಿಯಾಯಿತು ಒಸಾಮಾ ಬಿನ್ ಲಾಡೆನ್ (Osama bin Laden) ಇದರ ನಾಯಕನಾಗಿ ಹೊರಹೊಮ್ಮಿದ. ಈ ಉಗ್ರರು 2001ರ ಸೆಪ್ಟೆಂಬರ್‌ 11 ರಂದು ಅಮೆರಿಕದ ವಿಶ್ವ ವಾಣಿಜ್ಯ ಅವಳಿ ಕಟ್ಟಡದ ಮೇಲೆ ದಾಳಿ ಮಾಡಿದರು.

    ತನ್ನ ಮೇಲೆ ದಾಳಿ ಮಾಡಿದ್ದಕ್ಕೆ ಕೆರಳಿದ ಅಮೆರಿಕ ಅಫ್ಘಾನಿಸ್ತಾನದಲ್ಲಿರುವ ತಾಲಿಬಾನ್‌ ಮೇಲೆ ಯುದ್ಧ ಸಾರಿತು. ಯುದ್ಧ, ಅಭಿವೃದ್ಧಿ ಹೆಸರಿನಲ್ಲಿ ಅಮೆರಿಕ ಬಿಲಿಯನ್‌ಗಟ್ಟಲೇ ಡಾಲರ್‌ ಸುರಿದು ಕೊನೆಗೆ ಅಫ್ಘಾನಿಸ್ತಾನದಲ್ಲಿ ಒಂದು ಸರ್ಕಾರ ರಚಿಸುವಲ್ಲೂ ಯಶಸ್ವಿಯಾಯಿತು. ಆದರೆ ಅಫ್ಘಾನ್‌ ಜನರಿಗೆ ಸರ್ಕಾರ ಮತ್ತು ಅಮೆರಿಕದ ಮೇಲೆ ವಿಶ್ವಾಸ ಇರಲಿಲ್ಲ. ಮತ್ತೊಂದು ಕಡೆ ತಾಲಿಬಾನ್‌ ಉಗ್ರರು ಅಮೆರಿಕ ಸೈನಿಕರಿಗೆ ಭಾರೀ ಪ್ರತಿರೋಧ ಒಡ್ಡುತ್ತಿದ್ದರು. ತಾಲಿಬಾನ್‌ ಉಗ್ರರನ್ನು ನಿಭಾಯಿಸಲು ಸಾಧ್ಯವಾಗದೇ ಕೊನೆಗೆ 2021ರಲ್ಲಿ ಅಮೆರಿಕ ಸೇನೆ ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ತೊರೆಯಿತು. ಇದನ್ನೂ ಓದಿ: ಕ್ರೀಡೆಗೆ ಸೌದಿ ಕೋಟಿ ಕೋಟಿ ಹೂಡಿಕೆ ಮಾಡುತ್ತಿರುವುದು ಯಾಕೆ?

    ತಾಲಿಬಾನ್‌ ಸರ್ಕಾರಕ್ಕೆ ಪಾಕ್‌ ಬೆಂಬಲ
    ಅಮೆರಿಕ ಸೇನೆ ಅಫ್ಘಾನಿಸ್ತಾದಿಂದ ಮರಳಿದ್ದನ್ನು ಪಾಕಿಸ್ತಾನ ಸ್ವಾಗತಿಸಿತ್ತು. ಅಂದು ಅಧಿಕಾರದಲ್ಲಿದ್ದ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌, ಆಮದು ಮಾಡಿದ ಸರ್ಕಾರ ದೇಶವನ್ನು ಆಳುವುದು ಸರಿಯಲ್ಲ ಎಂದು ಹೇಳಿ ತಾಲಿಬಾನ್‌ ಸರ್ಕಾರವನ್ನು ಶ್ಲಾಘಿಸಿದ್ದರು. ಪಾಕ್‌ ಜನತೆ ತಾಲಿಬಾನ್‌ ಸರ್ಕಾರವನ್ನು ಮೆಚ್ಚಿಕೊಂಡಿದ್ದರು. ಆದರೆ ನಾವು ಹೊಗಳಿದ ಸರ್ಕಾರವೇ ನಮಗೆ ತಿರುಗುಬಾಣವಾಗುತ್ತದೆ ಎಂದು ಪಾಕ್‌ ಅಂದುಕೊಂಡಿರಲಿಲ್ಲ. ಯಾವಾಗ ಅಫ್ಘಾನಿಸ್ತಾನವನ್ನು ಅಮೆರಿಕ ತೊರೆಯಿತೋ ಅಂದಿನಿಂದ ನಾವೇ ಬೆಂಬಲ ನೀಡಿದ್ದ ಉಗ್ರರ ಬಣ್ಣ ಏನು ಎನ್ನುವುದು ಪಾಕಿಸ್ತಾನಕ್ಕೆ ತಿಳಿಯತೊಡಗಿತು.

    ಪಾಕ್‌ ಮೇಲೆ ಸಿಟ್ಯಾಕೆ?
    1. ಡುರಾಂಡ್‌ ಗಡಿ ರೇಖೆ:
    ಫ್ಘಾನಿಸ್ತಾನಕ್ಕೆ ಪಾಕಿಸ್ತಾನದ ಮೇಲೆ ವಿರೋಧ ಕೆಲ ವರ್ಷಗಳಿಂದ ಆರಂಭವಾಗಿಲ್ಲ. ವಿರೋಧಕ್ಕೆ ಮುಖ್ಯ ಕಾರಣ ಡುರಾಂಡ್‌ ಗಡಿ ರೇಖೆ. ಪಾಕಿಸ್ತಾನ ಮತ್ತು ಅಫ್ಘಾನ್‌ ಮಧ್ಯೆ ಈ 2,670 ಕಿ.ಮೀ ಉದ್ದದ ಗಡಿ ರೇಖೆ (Durand Line) ಹಾದು ಹೋಗಿದೆ. ಅಫ್ಘಾನಿಸ್ತಾನದಲ್ಲಿ ಪಶ್ತೂನ್‌ ಬುಡಕಟ್ಟು ಜನಸಂಖ್ಯೆಯ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇತ್ತ ಪಾಕಿಸ್ತಾನದಲ್ಲೂ ಪಶ್ತೂನ್‌ ಜನ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಇಲ್ಲಿ ಕೆಲ ಸಂಬಂಧಿಕರು ಅಫ್ಘಾನಿಸ್ತಾನ ಭಾಗದಲ್ಲಿದ್ದರೆ ಇನ್ನು ಕೆಲವರು ಪಾಕಿಸ್ತಾನದಲ್ಲಿದ್ದಾರೆ. ಈ ಕಾರಣಕ್ಕೆ ಅಫ್ಘಾನಿಸ್ತಾನ ಇಲ್ಲಿಯವರೆಗೆ ಅದು ಗಡಿ ರೇಖೆ ಎಂಬುದನ್ನು ಒಪ್ಪಿಕೊಂಡಿಲ್ಲ.

    2. ಅಮೆರಿಕಕ್ಕೆ ಪಾಕ್‌ ಸಹಾಯ
    ಅಫ್ಘಾನಿಸ್ತಾನ ಭೂಮಿಯಿಂದ ಅವೃತವಾದ ದೇಶ. ಈ ಕಾರಣಕ್ಕೆ ಅಮೆರಿಕ ಪಾಕಿಸ್ತಾನದ ಮೂಲಕ ತನ್ನ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿತ್ತು. ಅಮೆರಿಕದ ಹಡಗುಗಳು ಕರಾಚಿ ಬಂದರಿಗೆ ಬಂದು ಅಲ್ಲಿಂದ ನೆಲ ಮಾರ್ಗದ ಮೂಲಕ ಶಸ್ತ್ರಾಸ್ತ್ರಗಳನ್ನು ಅಫ್ಘಾನಿಸ್ತಾನದಲ್ಲಿರುವ ಮಿಲಿಟರಿ ಕ್ಯಾಂಪ್‌ಗಳಿಗೆ ಸಾಗಿಸುತ್ತಿತ್ತು. ತನ್ನ ವಿರುದ್ಧದ ಯುದ್ಧಕ್ಕೆ ಪಾಕಿಸ್ತಾನ ಅಮೆರಿಕಕ್ಕೆ ಸಹಾಯ ನೀಡಿದ್ದು ತಾಲಿಬಾನ್‌ ಸಿಟ್ಟಿಗೆ ಮತ್ತೊಂದು ಕಾರಣ.

    3. ಗಡಿ ಬೇಲಿ:
    ತಾಲಿಬಾನ್‌ನಲ್ಲಿ ಉಗ್ರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ದೇಶವನ್ನು ರಕ್ಷಿಸಿಕೊಳ್ಳಲು ಗಡಿಯಲ್ಲಿ ಬೇಲಿ ಹಾಕಲು ಪಾಕಿಸ್ತಾನ ಮುಂದಾಗಿತ್ತು. ಗಡಿ ಬೇಲಿಗೆ ಅಫ್ಘಾನಿಸ್ತಾನ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸಿತ್ತು. ಆದರೂ ಅಮೆರಿಕದ ಬೆಂಬಲದಿಂದ ಬೇಲಿ ಹಾಕುವ ಕೆಲಸವನ್ನು ಆರಂಭಿಸಿತ್ತು. 2600 ಕಿ.ಮೀ ಉದ್ದದ ಗಡಿಯಲ್ಲಿ 94% ಬೇಲಿ ಹಾಕುವ ಕೆಲಸ ಪೂರ್ಣಗೊಂಡಿದೆ. ಬೇಲಿ ಹಾಕುವ ಮೊದಲು ಪ್ರತಿದಿನ 50 ಸಾವಿರಕ್ಕೂ ಹೆಚ್ಚು ಜನರು ಎರಡು ಗಡಿಯನ್ನು ದಾಟುತ್ತಿದ್ದರು.

    FATA ಪ್ರಾಂತ್ಯದ ಬಿಕ್ಕಟ್ಟು
    ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದ ಮೇಲೆ ಉಗ್ರರ ದಾಳಿ ಹೆಚ್ಚಾಗಲು ಕಾರಣ ಫಾಟಾ ಪ್ರ್ಯಾಂತ್ಯದ ಬಿಕ್ಕಟ್ಟು. 1947ರಲ್ಲಿ ಪಾಕಿಸ್ತಾನ ರಚನೆಯಾದ ಬಳಿಕ 2017ರವರೆಗೆ ಈ Federally Administered Tribal Areas ಎಂದು ಕರೆಸಿಕೊಳ್ಳುವ ಪ್ರದೇಶದ ನಿಯಂತ್ರಣ ಪಾಕ್‌ ಬಳಿ ಇರಲಿಲ್ಲ. 2018ರಲ್ಲಿ ಪಾಕ್‌ ಸಂಸತ್ತು ಮಸೂದೆ ಪಾಸ್‌ ಮಾಡಿ ಅದು ತನ್ನ ಭಾಗ ಎಂದು ಘೋಷಿಸಿತು. ಈ ಪ್ರದೇಶವನ್ನು ಖೈಬರ್ ಪಖ್ತುಂಕ್ವಾದ ಜೊತೆ ವಿಲೀನಗೊಳಿಸಿತು. ಪಾಕಿಸ್ತಾನದ ಈ ನಿರ್ಧಾರ ತಾಲಿಬಾನ್‌ ಉಗ್ರರನ್ನು ಕೆರಳಿಸಿತು. ಇದನ್ನೂ ಓದಿ: ಡಾಲರ್‌ಗೆ ರೂಪಾಯಿ ಸೆಡ್ಡು – ಇಂಟರ್‌ನ್ಯಾಷನಲ್‌ ಕರೆನ್ಸಿ ಆಗುತ್ತಾ?

    ಪಾಕಿಸ್ತಾನದಲ್ಲಿರುವ ತಹ್ರಿಕ್‌ ಇ ತಾಲಿಬಾನ್‌ ಮತ್ತು ಅಫ್ಘಾನಿಸ್ತಾನ ತಾಲಿಬಾನ್‌ ಬೇರೆ ಬೇರೆಯಾದರೂ ಎರಡೂ ಸಂಘಟನೆಗಳು ಪರಸ್ಪರ ಸಹಕಾರ ನೀಡುತ್ತಿದ್ದವು. ಅಮೆರಿಕದ ದಾಳಿ ಜಾಸ್ತಿಯಾದಾಗ ಪಾಕ್‌ನಲ್ಲಿರುವ ತೆಹ್ರಿಕ್‌-ಇ-ತಾಲಿಬಾನ್‌ ಸಂಘಟನೆ ತಾಲಿಬಾನ್‌ ಉಗ್ರರಿಗೆ ರಕ್ಷಣೆ ನೀಡುತ್ತಿತ್ತು. ಗಡಿ ಕಿತ್ತಾಟ ನಡೆಯುವ ಮೊದಲು ಅ‍ಫ್ಘಾನಿಸ್ತಾನದ ಸಾಕಷ್ಟು ಮಂದಿ ಪಾಕಿಸ್ತಾನದ ಕರಾಚಿ, ಪೇಶಾವರದಲ್ಲಿ ರಿಯಲ್‌ ಎಸ್ಟೇಟ್‌, ಇತ್ಯಾದಿಗಳಲ್ಲಿ ಹೂಡಿಕೆ ಮಾಡಿದ್ದರು. ಎರಡು ಸಂಘಟನೆಗಳು ಬೇರೆ ಬೇರೆಯಾಗಿದ್ದರೂ ಎರಡರ ಶತ್ರು ಈಗ ಪಾಕಿಸ್ತಾನ. ಪಾಕಿಸ್ತಾನ ಫಾಟಾ ಕೈವಶ ಮಾಡಿದ್ದನ್ನು ಅರಗಿಸಿಕೊಳ್ಳದ ಉಗ್ರರು ಮತ್ತಷ್ಟು ಕೆರಳಿ ಪಾಕ್‌ನ ಹಲವು ಕಡೆ ಬಾಂಬ್‌ ದಾಳಿ ನಡೆಸುತ್ತಿದ್ದಾರೆ.

    ಉಗ್ರರ ಉಪಟಳ ಹೆಚ್ಚಾಗುತ್ತಿದ್ದಂತೆ ಪಾಕ್‌ ಸರ್ಕಾರ ಸಂಧಾನಕ್ಕೆ ಮುಂದಾಗಿತ್ತು. ಈ ಮಾತುಕತೆಯ ವೇಳೆ ಉಗ್ರ ಸಂಘಟನೆಗಳು ಎರಡು ಮಹತ್ವದ ಬೇಡಿಕೆ ಇಟ್ಟಿತ್ತು. ಫಾಟಾ ಪ್ರಾಂತ್ಯದಿಂದ ಪಾಕ್‌ ಸೈನಿಕರು ಹಿಂದಕ್ಕೆ ಹೋಗಬೇಕು ಮತ್ತು ಫಾಟಾವನ್ನು ಅಫ್ಘಾನಿಸ್ತಾನದ ಜೊತೆ ವಿಲೀನ ಮಾಡಬೇಕು ಎಂದು ಹೇಳಿತ್ತು. ಈ ಎರಡು ಬೇಡಿಕೆಯನ್ನು ಪಾಕ್‌ ಒಪ್ಪಲಿಲ್ಲ. ಒಂದು ವೇಳೆ ಉಗ್ರರಿಗೆ ಶರಣಾಗಿ ಒಪ್ಪಿದರೆ ಸರ್ಕಾರ ಪತನವಾಗುತ್ತದೆ ಎನ್ನುವುದು ಪಾಕ್‌ ರಾಜಕಾರಣಿಗಳಿಗೆ ಗೊತ್ತಿತ್ತು. ತಮ್ಮ ಬೇಡಿಕೆಯನ್ನು ಒಪ್ಪದ್ದಕ್ಕೆ ಪಾಕ್‌ನಲ್ಲಿ ಉಗ್ರರ ದಾಳಿ ಈಗ ಮತ್ತಷ್ಟು ಹೆಚ್ಚಾಗುತ್ತಿದೆ.

    ದಿವಾಳಿಯತ್ತ ಪಾಕ್‌
    ಭಾರೀ ಮಳೆಯಿಂದ ಉಂಟಾದ ನೆರೆಯಿಂದ ಪಾಕ್‌ ಈಗಾಗಲೇ ತತ್ತರಿಸಿ ಹೋಗಿದೆ. ಸೇನೆ ಹಿಡಿತದಲ್ಲಿರುವ ಕಾರಣ ಸರ್ಕಾರ ಆಗಾಗ ಅಸ್ಥಿರಗೊಳ್ಳುತ್ತಿದ್ದು ಇಲ್ಲಿಯವರೆಗೆ ಯಾವುದೇ ಸರ್ಕಾರ ಪೂರ್ಣಾವಧಿ ಮಾಡಲೇ ಇಲ್ಲ. ಪರಿಣಾಮ ಯಾವುದೇ ವಿದೇಶಿ ಹೂಡಿಕೆ ಇಲ್ಲ. ಇದರಿಂದಾಗಿ ಹೊಸ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಪರಿಣಾಮ ಹಣದುಬ್ಬರ ಏರಿದ್ದು ಬೆಲೆಗಳು ಏರಿಕೆಯಾಗಿದೆ. ಉದ್ಯೋಗ ಸಿಗದ ಕಾರಣ ವಿದ್ಯಾವಂತರು ದೇಶವನ್ನು ತೊರೆಯುತ್ತಿದ್ದಾರೆ. ಈ ಮಧ್ಯೆ ಉಗ್ರರ ಕಾಟ. ಎಲ್ಲದರ ಪರಿಣಾಮ ಪಾಕಿಸ್ತಾನ ಈಗ ದಿವಾಳಿಯಾಗುವ ಹಂತಕ್ಕೆ ತಲುಪಿದೆ.

    – ಅಶ್ವಥ್‌ ಸಂಪಾಜೆ

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಫ್ಘಾನಿಸ್ತಾನದಲ್ಲಿ 5.8 ತೀವ್ರತೆಯ ಪ್ರಬಲ ಭೂಕಂಪನ – ದೆಹಲಿ, ಪಂಜಾಬ್​ನಲ್ಲೂ ನಡುಗಿದ ಭೂಮಿ

    ಅಫ್ಘಾನಿಸ್ತಾನದಲ್ಲಿ 5.8 ತೀವ್ರತೆಯ ಪ್ರಬಲ ಭೂಕಂಪನ – ದೆಹಲಿ, ಪಂಜಾಬ್​ನಲ್ಲೂ ನಡುಗಿದ ಭೂಮಿ

    ನವದೆಹಲಿ/ಕಾಬೂಲ್‌: ಅಫ್ಘಾನಿಸ್ತಾನದಲ್ಲಿ (Afghanistan) ಪ್ರಬಲ ಭೂಕಂಪನ (Earthquake) ಸಂಭವಿಸಿದೆ.  ರಾಷ್ಟ್ರ ರಾಜಧಾನಿ ದೆಹಲಿ (Delhi) ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲೂ ಶನಿವಾರ ರಾತ್ರಿ ಭೂಮಿ ಕಂಪಿಸಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ.

    ನ್ಯಾಷನಲ್ ಸೆಂಟರ್ ಫಾರ್ ಸಿಸ್ಮಾಲಜಿ ಮಾಹಿತಿ ಪ್ರಕಾರ, ಭೂಕಂಪನದ ಕೇಂದ್ರಬಿಂದು ಅಕ್ಷಾಂಶ 36.38 ಮತ್ತು ರೇಖಾಂಶ 70.77 ನಲ್ಲಿ 181 ಕಿ.ಮೀ ಆಳದಲ್ಲಿ ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶದಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: Chandrayaan-3: ಭೂಮಿಯಿಂದ ಹಾರಿದ 22 ದಿನಗಳ ಬಳಿಕ ಚಂದ್ರನ ಕಕ್ಷೆ ಸೇರಿದ ಚಂದ್ರಯಾನ-3 ನೌಕೆ

    ಶನಿವಾರ ರಾತ್ರಿ 9:31ರ ಸುಮಾರಿನಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.8 ಭೂಕಂಪದ ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಅಫ್ಘಾನಿಸ್ತಾನ ಮಾತ್ರವಲ್ಲದೇ ಪಾಕಿಸ್ತಾನದಲ್ಲೂ ಭೂಕಂಪನವಾಗಿದೆ. ಇದನ್ನೂ ಓದಿ: ಹರಿಯಾಣದಲ್ಲಿಯೂ ಘರ್ಜಿಸಿದ ಬುಲ್ಡೋಜರ್- ಅಕ್ರಮವಾಗಿ ನಿರ್ಮಿಸಿದ್ದ ಎರಡು ಡಜನ್‌ ಕಟ್ಟಡಗಳ ತೆರವು

    ಭಾರತದಲ್ಲಿ ನವದೆಹಲಿ, ಎನ್‌ಸಿಆರ್, ಪಂಜಾಬ್ ಮತ್ತು ಚಂಡೀಘಡ, ಜಮ್ಮು ಮತ್ತು ಕಾಶ್ಮೀರದ ರಾಜೌರಿ, ಶ್ರೀನಗರ, ಗುಲ್ಮಾರ್ಗ್, ಕತ್ರಾ ಪ್ರದೇಶ, ಮಾತಾ ವೈಷ್ಣೋದೇವಿ ದೇಗುಲದ ಮೂಲ ಶಿಬಿರ ಮತ್ತು ಪಾಕಿಸ್ತಾನದ ಲಾಹೋರ್, ಇಸ್ಲಾಮಾಬಾದ್, ರಾವಲ್ಪಿಂಡಿ, ಪೇಶಾವರ್ ಮತ್ತು ಇತರ ನಗರಗಳಲ್ಲಿ ಭೂಮಿ ನಡುಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಾಕಿಸ್ತಾನದಲ್ಲಿ ಬಾಂಬ್‌ ಸ್ಫೋಟ – 39 ಮಂದಿ ಬಲಿ, 200ಕ್ಕೂ ಹೆಚ್ಚು ಮಂದಿಗೆ ಗಾಯ

    ಪಾಕಿಸ್ತಾನದಲ್ಲಿ ಬಾಂಬ್‌ ಸ್ಫೋಟ – 39 ಮಂದಿ ಬಲಿ, 200ಕ್ಕೂ ಹೆಚ್ಚು ಮಂದಿಗೆ ಗಾಯ

    ಪೇಶಾವರ: ರಾಜಕೀಯ ಕಾರ್ಯಕ್ರಮದಲ್ಲಿ ಬಾಂಬ್‌ ಸ್ಫೋಟಗೊಂಡ (Bomb Blast) ಪರಿಣಾಮ ಕನಿಷ್ಠ 39 ಮಂದಿ ಸಾವನ್ನಪ್ಪಿ 200 ಮಂದಿ ಗಾಯಗೊಂಡ ಘಟನೆ ಪಾಕಿಸ್ತಾನ ಅಫ್ಘಾನಿಸ್ತಾನ ಗಡಿಯ (Pakistan-Afghanistan Border) ಸಮೀಪವಿರುವ ಖಾರ್ ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದಲ್ಲಿ  ಧಾರ್ಮಿಕವಾಗಿ ಹೆಚ್ಚು ಗುರುತಿಸಿಕೊಂಡಿದ್ದ ಜಮಿಯತ್ ಉಲೇಮಾ-ಎ-ಇಸ್ಲಾಂ-ಎಫ್ (Jamiat Ulema-e-Islam-F) ರಾಜಕೀಯ ಪಕ್ಷದ ಕಾರ್ಯಕ್ರಮ ನಡೆಯುತ್ತಿತ್ತು. ಟೆಂಟ್‌ ಒಳಗಡೆ ನಡೆಯುತ್ತಿದ್ದ ಈ ಕಾರ್ಯಕ್ರಮದಲ್ಲಿ 400ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಈ ದಾಳಿಯಲ್ಲಿ ಸ್ಥಳೀಯ ಜೆಯುಎಲ್‌-ಎಫ್‌ ನಾಯಕ ಮೃತಪಟ್ಟಿದ್ದಾರೆ.

    https://twitter.com/AqssssFajr/status/1685660799082045440

    ಆಸ್ಪತ್ರೆಯಲ್ಲಿ 39 ಮೃತ ದೇಹಗಳಿವೆ. 123 ಮಂದಿ ಗಾಯಗೊಂಡಿದ್ದು ಈ ಪೈಕಿ 17 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಆರೋಗ್ಯ ಸಚಿವ ರಿಯಾಜ್ ಅನ್ವರ್ ತಿಳಿಸಿದ್ದಾರೆ. ಇದನ್ನೂ ಓದಿ: ಮಾಸ್ಕೋ ಮೇಲೆ ಡ್ರೋನ್‌ ದಾಳಿ – ಇದು ಉಕ್ರೇನ್‌ ಕೃತ್ಯ ಎಂದ ರಷ್ಯಾ

    ಯಾವುದೇ ಗುಂಪು ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ಪಾಕಿಸ್ತಾನದಲ್ಲಿರುವ ತೆಹ್ರಿಕ್‌ ಇ ತಾಲಿಬಾನ್‌ (Tehreek-e-Taliban) ಸಂಘಟನೆ ಪೊಲೀಸ್ ಅಧಿಕಾರಿಗಳು ಸೇರಿದಂತೆ ಅಲ್ಲಿನ ಸೈನಿಕರ ವಿರುದ್ಧ ಈ ಹಿಂದೆ ದಾಳಿ ನಡೆಸಿತ್ತು.

    ಜನವರಿಯಲ್ಲಿ ಪಾಕಿಸ್ತಾನದ ತಾಲಿಬಾನ್‌ಗೆ ಸಂಬಂಧ ಹೊಂದಿರುವ ಆತ್ಮಹತ್ಯಾ ಬಾಂಬರ್ ವಾಯುವ್ಯ ನಗರದ ಪೇಶಾವರ್‌ನ ಪೊಲೀಸ್ ಆವರಣದೊಳಗಿನ ಮಸೀದಿಯೊಂದರಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದ. ಈ ದಾಳಿಯಲ್ಲಿ 80 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.

    2021 ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪಾಕಿಸ್ತಾನದಲ್ಲಿ ಭಾರೀ ಪ್ರಮಾಣದಲ್ಲಿ ಉಗ್ರ ದಾಳಿ ನಡೆಯುತ್ತಿದೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]