ಕರಾಚಿ: ಅಫ್ಘಾನಿಸ್ತಾನದ ವಿರುದ್ಧದ ಚಾಂಪಿಯನ್ಸ್ ಟ್ರೋಫಿಯ 3ನೇ ಪಂದ್ಯದಲ್ಲಿ ರಿಯಾನ್ ರಿಕಲ್ಟನ್ ಶತಕ, ಸಂಘಟಿತ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನದಿಂದ ದಕ್ಷಿಣ ಆಫ್ರಿಕಾ 107 ರನ್‌ಗಳ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 315 ರನ್‌ಗಳನ್ನು ದಾಖಲಿಸಿ, ಅಫ್ಘಾನಿಸ್ತಾನಕ್ಕೆ 316 ರನ್‌ಗಳ ಬೃಹತ್ ಗುರಿಯನ್ನು ನೀಡಿತು. ಆದರೆ ಅಫ್ಘಾನ್ ತಂಡ 43.3 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 208 ರನ್ ಕಲೆಹಾಕಲು ಮಾತ್ರ ಶಕ್ತವಾಯಿತು.
ಅಫ್ಘಾನಿಸ್ತಾನ ಪರ ರಹಮತ್ ಶಾ 92 ಎಸೆತಗಳಲ್ಲಿ 1 ಸಿಕ್ಸರ್ 9 ಬೌಂಡರಿ ನೆರವಿನಿಂದ 90 ರನ್ ಕಲೆಹಾಕಿದರು. ಅದು ಬಿಟ್ಟರೆ ಉಳಿದ ಆಟಗಾರರು ಕಳಪೆ ಬ್ಯಾಟಿಂಗ್ ಪ್ರದರ್ಶನ ಅಫ್ಘಾನ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು, ತಂಡಕ್ಕೆ ರಶೀದ್ ಖಾನ್, ಅಜ್ಮತುಲ್ಲಾ ಉಮರ್ಜೈ ತಲಾ 18 ರನ್‌ಗಳ ಕೊಡುಗೆ ಕೊಟ್ಟರು.
ದಕ್ಷಿಣ ಆಫ್ರಿಕಾ ಪರ ಕಗಿಸೋ ರಬಾಡ 3 ವಿಕೆಟ್ ಪಡೆದರೆ, ಲುಂಗಿ ಎನ್‌ಗಿಡಿ ಮತ್ತು ವಿಯಾನ್ ಮುಲ್ಡರ್ ತಲಾ 2 ವಿಕೆಟ್ ಪಡೆದರು. ಮಾರ್ಕೊ ಯಾನ್ಸನ್ ಮತ್ತು ಕೇಶವ್ ಮಹಾರಾಜ್ 1 ವಿಕೆಟ್ ಪಡೆದುಕೊಂಡರು.
ದಕ್ಷಿಣ ಆಫ್ರಿಕಾ ತಂಡದ ಪರ ರಿಯಾನ್ ರಿಕಲ್ಟನ್ 106 ಎಸೆತಗಳಲ್ಲಿ 103 ರನ್ ಗಳಿಸಿದರು. ಇವರಲ್ಲದೆ ಟೆಂಬಾ ಬವುಮಾ (58). ರಾಸ್ಸಿ ವ್ಯಾನ್ ಡೆರ್ ಡಸೆನ್ (52) ಮತ್ತು ಐಡೆನ್ ಮಾರ್ಕ್ರಾಮ್(52) ಅರ್ಧಶತಕ ಸಿಡಿಸಿ ದೊಡ್ಡ ಮೊತ್ತಕ್ಕೆ ನೆರವಾದರು.
ಟೋನಿ ಡಿ ಜಾರ್ಜಿ 11 ಎಸೆತಗಳಲ್ಲಿ 11 ರನ್‌ಗಳಿಸಿ ನಬಿ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ನಂತರ 2ನೇ ವಿಕೆಟ್‌ಗೆ ಆರಂಭಿಕ ರಿಕಲ್ಟನ್ ಜೊತೆಗೂಡಿದ ನಾಯಕ ಟೆಂಬ ಬವುಮಾ 129 ರನ್‌ಗಳ ಅದ್ಭುತ ಜೊತೆಯಾಟ ನೀಡಿದರು. ಈ ಜೋಡಿ 23.4 ಓವರ್ಗಳ ಕಾಲ ಬ್ಯಾಟಿಂಗ್ ತಂಡವನ್ನು ಸುಸ್ಥಿತಿಗೆ ತಂದರು. 76 ಎಸೆತಗಳನ್ನು ಎದುರಿಸಿದ ಬವುಮಾ 5 ಬೌಂಡರಿ ಸಹಿತ 58 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು.
ಅಫ್ಘಾನಿಸ್ತಾನದ ಪರ ಮೊಹಮ್ಮದ್ ನಬಿ 2 ವಿಕೆಟ್ ಪಡೆದರೆ, ಫಜ್ಲಹಾಕ್ ಫಾರೂಕಿ, ಅಜ್ಮತುಲ್ಲಾ ಒಮರ್ಜೈ ಮತ್ತು ನೂರ್ ಅಹ್ಮದ್ ತಲಾ 1 ವಿಕೆಟ್ ಪಡೆದರು.
ಕಾಬೂಲ್: ಅಫ್ಘಾನಿಸ್ತಾನದಲ್ಲಿ (Afghanistan) ಮಹಿಳೆಯರ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಮತ್ತೊಂದು ಕಠೋರ ನಿಯಮಕ್ಕೆ ತಾಲಿಬಾನ್ ಸರ್ಕಾರ (Taliban) ಮುಂದಾಗಿದೆ. ದೇಶದಲ್ಲಿ ಎಲ್ಲಾ ರಾಷ್ಟ್ರೀಯ ಮತ್ತು ವಿದೇಶಿ ಸರ್ಕಾರೇತರ ಸಂಸ್ಥೆಗಳು ಹಾಗೂ ಎನ್‌ಜಿಒಗಳಿಂದ ಮಹಿಳಾ ಉದ್ಯೋಗಿಗಳನ್ನು ಕೈಬಿಡಲು ಆದೇಶಿಸಿದೆ. ಈ ಆದೇಶ ಉಲ್ಲಂಘಿಸಿ ಮಹಿಳೆಯರನ್ನು ನೇಮಿಸಿಕೊಂಡರೆ ಅಂತಹ ಸಂಸ್ಥೆಗಳನ್ನು ಮುಚ್ಚುವುದಾಗಿ ಹೇಳಿದೆ.
وزارت اقتصاد منحیث مرجع ثبت و راجستر موسسات غیر امارتی، مسولیت انسجام، رهبری و نظارت تمامی فعالیت های انجو های داخلی و خارجی را به عهده دارد.
بناً یکبار دیگر طی متحدالمال تعقیبی در مورد توقف کار طبقه اناث در موسسات غیر امارتی داخلی و خارجی هدایت داده شده است. در صورت عدم همکاری… pic.twitter.com/kqiW7Re3an
ಅಫ್ಘಾನಿಸ್ತಾನದ ಆರ್ಥಿಕ ಸಚಿವಾಲಯ ಈ ಬಗ್ಗೆ ಎಕ್ಸ್‌ನಲ್ಲಿ ಆದೇಶ ಪ್ರತಿಯನ್ನು ಪ್ರಕಟಿಸಿದೆ. ಆದೇಶದ ಅನ್ವಯ ವಿದೇಶಿ ಸಂಸ್ಥೆಗಳಲ್ಲಿ ಮಹಿಳಾ ಉದ್ಯೋಗಿಗಳ ಕೆಲಸವನ್ನು ಕೂಡಲೇ ನಿಲ್ಲಿಸಲು ಸೂಚಿಸಲಾಗಿದೆ. ಈ ನಿಯಮ ಅನುಸರಿಸಲು ವಿಫಲವಾದರೆ NGO ಹಾಗೂ ಸಂಸ್ಥೆಗಳ ಪರವಾನಗಿಯನ್ನು ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಿದೆ.
ಅಫ್ಘಾನ್ ಮಹಿಳೆಯರನ್ನು ಉದ್ಯೋಗದಿಂದ ಅಮಾನತುಗೊಳಿಸುವಂತೆ ತಾಲಿಬಾನ್ ಎನ್‌ಜಿಒಗಳಿಗೆ ಹೇಳಿದ ಎರಡು ವರ್ಷಗಳ ನಂತರ ಈ ಆದೇಶ ಬಂದಿದೆ. ಹಿಜಬ್ ಸರಿಯಾಗಿ ಧರಿಸದ ಕಾರಣ ಈ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ತಾಲಿಬಾನ್ ಸರ್ಕಾರ ಈಗಾಗಲೇ ಅನೇಕ ಉದ್ಯೋಗ ಮತ್ತು ಬಹುತೇಕ ಸಾರ್ವಜನಿಕ ಸ್ಥಳಗಳಿಂದ ಮಹಿಳೆಯರನ್ನು ನಿರ್ಬಂಧಿಸಲಾಗಿದೆ. ಆರನೇ ತರಗತಿಯ ನಂತರದ ಶಿಕ್ಷಣದಿಂದಲೂ ಹೆಣ್ಣುಮಕ್ಕಳನ್ನು ಹೊರಗಿಡಲಾಗಿದೆ.
ಕಾಬೂಲ್: ಅಫ್ಘಾನಿಸ್ತಾನದ (Afghanistan) ಪಕ್ಟಿಕಾ ಪ್ರಾಂತ್ಯದ ಬರ್ಮಾಲ್ ಜಿಲ್ಲೆಯ ಮೇಲೆ ಪಾಕಿಸ್ತಾನ (Pakistan) ಏರ್ ಸ್ಟ್ರೈಕ್ (Air Strike) ಮಾಡಿದೆ. ಈ ದಾಳಿಯಲ್ಲಿ 15 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಡಿಸೆಂಬರ್ 24 ರ ರಾತ್ರಿ ಲಮನ್ ಸೇರಿದಂತೆ ಏಳು ಗ್ರಾಮಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ. ವರದಿಗಳ ಪ್ರಕಾರ ಬರ್ಮಾಲ್‌ನ ಮುರ್ಗ್ ಬಜಾರ್ ಗ್ರಾಮವನ್ನು ನಾಶಪಡಿಸಲಾಗಿದೆ.
ಪಾಕಿಸ್ತಾನದ ಅಧಿಕಾರಿಗಳು ವೈಮಾನಿಕ ದಾಳಿಯನ್ನು ಅಧಿಕೃತವಾಗಿ ದೃಢೀಕರಿಸದಿದ್ದರೂ ಸೇನೆಗೆ ನಿಕಟವಾಗಿರುವ ಭದ್ರತಾ ಮೂಲಗಳು ಗಡಿಯ ಸಮೀಪವಿರುವ ತಾಲಿಬಾನ್ ಅಡಗುತಾಣಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಿವೆ.
ತಮ್ಮ ದೇಶದ ಒಳಗಡೆ ನಡೆಯುತ್ತಿರುವ ಉಗ್ರ ಕೃತ್ಯಗಳಿಗೆ ಅಫ್ಘಾನಿಸ್ತಾನ ಕಾರಣ ಎನ್ನುವುದು ಪಾಕ್ ಆರೋಪ. ಪಾಕಿಸ್ತಾನಿ ತಾಲಿಬಾನ್, ಅಥವಾ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಇತ್ತೀಚಿನ ತಿಂಗಳುಗಳಲ್ಲಿ ಪಾಕಿಸ್ತಾನಿ ಪಡೆಗಳ ಮೇಲೆ ತನ್ನ ದಾಳಿಯನ್ನು ಹೆಚ್ಚಿಸಿದ. ಅಫ್ಘಾನ್‌ನಲ್ಲಿರುವ ತಾಲಿಬಾನ್ ಸರ್ಕಾರ ಈ ಉಗ್ರರಿಗೆ ಆಶ್ರಯ ನೀಡುತ್ತಿದೆ ಎಂದು ಪಾಕಿಸ್ತಾನ ದೂರಿದೆ.
– ಇಸ್ಲಾಂ ಧರ್ಮ ರಕ್ಷಣೆಗೆ ಪ್ರಾಣವನ್ನೇ ಮುಡಿಪಾಗಿಟ್ಟಿದ್ದ ಹಕ್ಕಾನಿ
ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಭಯೋತ್ಪಾದಕರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ತಾಲಿಬಾನ್ ನಿರಾಶ್ರಿತರ ಸಚಿವ ಖಲೀಲ್ ಉರ್-ರಹಮಾನ್ ಹಕ್ಕಾನಿ (Khalil Ur Rahman Haqqani) ಹಾಗೂ ಇತರ ಇಬ್ಬರು ಮೃತಪಟ್ಟಿದ್ದಾರೆ. ಇದು ಮೂರು ವರ್ಷಗಳ ಹಿಂದೆ ಅಧಿಕಾರಕ್ಕೆ ಮರಳಿದ ನಂತರ ತಾಲಿಬಾನ್ ಹಿರಿಯ ಅಧಿಕಾರಿ ಮೇಲಿನ ಅತ್ಯಂತ ಮಹತ್ವದ ದಾಳಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಚಿವಾಲಯದ ಆವರಣದಲ್ಲೇ ಸ್ಫೋಟ ಸಂಭವಿಸಿದ್ದು, ನಿರಾಶ್ರಿತರ ಸಚಿವ ಖಲೀಲ್ ಹಕ್ಕಾನಿ ಹತರಾಗಿದ್ದಾರೆ. ಇವರು ತಾಲಿಬಾನ್ ಆಡಳಿತದಲ್ಲಿ ಮತ್ತೊಬ್ಬ ಪ್ರಭಾವಿ ನಾಯಕನಾಗಿರುವ ಗೃಹ ಸಚಿವ ಸಿರಾಜುದ್ದೀನ್ ಹಕ್ಕಾನಿಯವರ ಚಿಕ್ಕಪ್ಪ. ಈ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ಸದ್ಯಕ್ಕೆ ಹೊತ್ತುಕೊಂಡಿಲ್ಲ. ಇದನ್ನೂ ಓದಿ: ಜೈಲಿಂದ ಹೊರಬಂದು ಅತ್ಯಾಚಾರ ಸಂತ್ರಸ್ತೆಯ ಹತ್ಯೆ – ಮೃತದೇಹ ಕತ್ತರಿಸಿ ನದಿಗೆಸೆದ ಹಂತಕ
ಈ ಕುರಿತು ತಾಲಿಬಾನ್ ಸರ್ಕಾರದ (Taliban Government) ಪ್ರಾಥಮಿಕ ವಕ್ತಾರರಾದ ಜಬಿಹುಲ್ಲಾ ಮುಜಾಹಿದ್ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ ಹಕ್ಕಾನಿ ಅವರ ಮರಣವು ಅತ್ಯಂತ ಗಮನಾರ್ಹವಾದುದು. ಇಸ್ಲಾಂ ಧರ್ಮ ರಕ್ಷಣೆಗಾಗಿ ಹಕ್ಕಾನಿ ಜೀವವನ್ನೇ ಮುಡಿಪಾಗಿಟ್ಟಿದ್ದರು. ಅವರೊಬ್ಬ ನಿಜವಾದ ಧಾರ್ಮಿಕ ಯೋಧ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ವೈದ್ಯನ ಕೈಹಿಡಿದ್ರೂ ಸುಖವಿಲ್ಲದ ಬದುಕು, 4 ವರ್ಷದಿಂದ ಗೃಹಬಂಧನದಲ್ಲಿ ಗೃಹಿಣಿ!
ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ (Khyber Pakhtunkhwa) ಜಿಲ್ಲೆಯೊಂದರಲ್ಲಿ ಕೋಮುಗಲಭೆ ಭುಗಿಲೆದ್ದಿದೆ. ಮುಸ್ಲಿಂ ಧರ್ಮದ ಎರಡು ದೊಡ್ಡ ಪಂಗಡಗಳಾದ ಶಿಯಾ ಮತ್ತು ಸುನ್ನಿಗಳ ನಡುವಿನ ಸಂಘರ್ಷ ಸಂಘರ್ಷಗಳು ನಿರಂತರವಾಗಿ ಶಾಂತಿ ಕದಡುತ್ತಿವೆ. ಪಾಕ್‌ನ ಆಫ್ಘನ್ ಗಡಿಯ ಕುರ್ರಂ ಜಿಲ್ಲೆಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಈ ಎರಡು ಪಂಗಡಗಳು ಪರಸ್ಪರ ಕಾದಾಟಕ್ಕಿಳಿದಿದ್ದು, ಕಂಡಕಂಡಲ್ಲಿ ದಾಳಿಗಳು ನಡೆಯುತ್ತಿವೆ. ಈ ಸಂಘರ್ಷ ಕೇವಲ ಪಾಕಿಸ್ತಾನ ಮಾತ್ರವಲ್ಲದೇ ವಿಶ್ವದ ಇತರ ಮುಸ್ಲಿಂ ರಾಷ್ಟ್ರಗಳಲ್ಲೂ (Muslims Nation) ಕಂಪನ ಸೃಷ್ಟಿಸಿವೆ.
ಕಳೆದ 6 ತಿಂಗಳಿನಿಂದ ಮತ್ತೆ ಶಿಯಾ – ಸುನ್ನಿ ಪಂಗಡಗಳ ನಡುವಿನ ಸಂಘರ್ಷ (Shia Sunni Clash) ತಾರಕಕ್ಕೇರಿದ್ದು, ಈ ಅವಧಿಯಲ್ಲಿ ನೂರಾರು ಮಂದಿ ಪ್ರಾಣ ತೆತ್ತಿದ್ದಾರೆ. ಸದ್ಯ ಒಂದು ವಾರ ಕದನವಿರಾಮ ಘೋಷಣೆಯಾಗಿದ್ದರೂ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರುತಲೇ ಇದೆ. ಇದರಿಂದ 1 ವಾರದಲ್ಲಿ 87 ಇದ್ದ ಸಾವಿನ ಸಂಖ್ಯೆ ಕಳೆದ 3 ದಿನಗಳಿಂದ 133ಕ್ಕೆ ಏರಿಕೆಯಾಗಿದೆ. ಇದರೊಂದಿಗೆ 300ಕ್ಕೂ ಅಧಿಕ ಕುಟುಂಬಗಳು ವಲಸೆ ಹೋಗಿವೆ. ಈ ಸಂಘರ್ಷ ನಿಯಂತ್ರಣಕ್ಕೆ ಅಲ್ಲಿನ ಜಿಲ್ಲಾಡಳಿತ ಹಾಗೂ ಭದ್ರತಾ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ಅದಕ್ಕಾಗಿ ಭದ್ರತಾ ಪಡೆಗಳು ಸ್ಥಳದಲ್ಲೇ ಬೀಡುಬಿಟ್ಟಿವೆ. ಕುರ್ರಂನ ಪ್ರಮುಖ ನಗರಗಳಾದ ಪರಾಚಿಬಾರ್, ಪೇಶಾಬವರ್ ಅನ್ನು ಸಂಪರ್ಕಿಸುವ ಮುಖ್ಯರಸ್ತೆಯನ್ನು ಬಂದ್ ಮಾಡಲಾಗಿದೆ.
ಸಂಘರ್ಷಕ್ಕೆ ಕಾರಣವೇನು?
ಇಸ್ಲಾಮಿನ ಅಂತಿಮ ಪ್ರವಾದಿ ಮೊಹಮ್ಮದ್‌ರ ನಂತರದ ಉತ್ತರಾಧಿಕಾರ ವಿಚಾರದಲ್ಲಿ ಹುಟ್ಟಿಕೊಂಡ ವಿವಾದ ಇಂದಿಗೂ ಮುಂದುವರಿದಿದೆ. ಪಾಕ್‌ನಲ್ಲಿ ಬಹುಸಂಖ್ಯಾತರಾಗಿರುವ ಸುನ್ನಿ ಸಮುದಾಯದವರು ರಾಜಕೀಯ ಸಹಿತ ಎಲ್ಲ ಅಧಿಕಾರವೂ ತಮ್ಮ ಬಳಿಯೇ ಇರಬೇಕೆಂದು ಬಯಸುತ್ತಿದ್ದು, ಹಾಗಾಗಿ ಅವರು ಶಿಯಾಗಳ (Shia) ನೆರಳನ್ನೂ ಕಾಣಲು ತಯಾರಿಲ್ಲ. ಈ ವಿಚಾರದಲ್ಲಿ ಎರಡೂ ಪಂಗಡಗಳ ನಡುವೆ ಘರ್ಷಣೆ ಸದಾ ಇದ್ದಿದ್ದೇ.
ಸಂಘರ್ಷ ಶುರುವಾಗಿದ್ದು ಎಲ್ಲಿಂದ?
ಪಾಕಿಸ್ತಾನದ ಪಖ್ತುಂಖ್ವಾ ಪ್ರಾಂತ್ಯ ಅನ್ನೋದು ಅಫ್ಘಾನಿಸ್ತಾನದ (Afghanistan) ಗಡಿಯಲ್ಲಿರುವ ಒಂದು ಸಣ್ಣ ಜಿಲ್ಲೆ. ಇಂದು ಅಲ್ಲಿ ಈ ಪರಿಯಾಗಿ ಸಂಘರ್ಷ ಶುರುವಾಗಲು ಕಾರಣ ಏನು ಎಂದು ಹುಡುಕುತ್ತಾ ಹೋದರೆ ಅಫ್ಘಾನಿಸ್ತಾನದ ಸಂಘರ್ಷ ಹಾಗೂ 70ರ ದಶಕದಲ್ಲಿ ಪಾಕಿಸ್ತಾನದ ಮಿಲಿಟರಿ ಅಧಿ ಕಾರಿಯಾಗಿದ್ದ ಜಿಯಾ ಉಲ್ ಹಕ್ ಎಂಬ ಸೇನಾ ನಾಯಕನ ಪಾತ್ರ ಕಾಣಿಸುತ್ತದೆ.
ವಿಶ್ವದ 2ನೇ ಮಹಾಯುದ್ಧದ ಬಳಿಕ 2 ಬಲಾಡ್ಯ ರಾಷ್ಟ್ರಗಳ ನಡುವೆ ಉಂಟಾದ ʻಶೀತಲ ಸಮರ’ದ ಕಾಲದಲ್ಲಿ ಅಫ್ಘಾನಿಸ್ತಾನದಲ್ಲಿ ರಷ್ಯಾದ ಪಡೆಗಳು ಬೀಡುಬಿಟ್ಟಿದ್ದವು. ಇತ್ತ ಪಾಕಿಸ್ತಾನವು ಅಮೆರಿಕ ಪರ ನಿಂತುಕೊಂಡಿತ್ತು. ಆಗ ಅಫ್ಘಾನಿಸ್ತಾನದ ನಿರಾಶ್ರಿತರನ್ನು ಕರೆತಂದಿರುವ ಜಿಯಾ ಉಲ್ ಹಕ್ ಇದೇ ಪ್ರಾಂತ್ಯದಲ್ಲಿ ಆಶ್ರಯ ನೀಡುತ್ತಾ ಬಂದ. ಅವರಿಗಾಗಿಯೇ ಮದರಸಾಗಳನ್ನ ತೆರೆಯಲಾಯಿತು. ಇವರೆಲ್ಲರೂ ಶಿಯಾ ಸಮುದಾಯದವರಾಗಿದ್ದು, ಇವರನ್ನು ಅಫ್ಘಾನ್‌ನಲ್ಲಿದ್ದ ರಷ್ಯಾ ಪಡೆಗಳ ವಿರುದ್ಧ ಹಾಗೂ ಕಾಶ್ಮೀರದಲ್ಲಿ ಗೆರಿಲ್ಲಾ ಮಾದರಿಯ ಯುದ್ಧದಲ್ಲಿ ಬಳಸಲು ಯೋಜನೆ ರೂಪಿಸಿ ಅವರಿಗೆ ಹಣಕಾಸಿನ ನೆರವನ್ನೂ ನೀಡಲಾಯಿತು. ವರ್ಷಗಳು ಉರುಳಿದಂತೆ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶಿಯಾಗಳ ಸಂಖ್ಯೆ ಕಡಿಮೆಯಾಗಿ ಸುನ್ನಿಗಳ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಇದರಿಂದ ನಿಧಾನವಾಗಿ ಎರಡು ಪಂಗಡಗಳ ನಡುವೆ ಸಂಘರ್ಷದ ಕಿಡಿ ಹೊತ್ತಿಕೊಂಡಿತ್ತು.
ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು ಹೇಗೆ?
ಈ ಸಮುದಾಯಗಳ ಸಂಘರ್ಷಕ್ಕೆ ಇನ್ನೂ ಒಂದು ಮುಖ್ಯ ಕಾರಣವಿದೆ. ಕುರ್ರಂ ಜಿಲ್ಲೆಯು ಬುಡಕಟ್ಟು ಪ್ರದೇಶವಾಗಿದ್ದು, 7.84 ಲಕ್ಷದಷ್ಟು ಜನಸಂಖ್ಯೆಯನ್ನು ಹೊಂದಿದೆ. ಈ ಪೈಕಿ ಶೇ.99 ರಷ್ಟು ತುರಿ, ಬಂಗಾಶ್, ಜೈಮುಷ್ಟ್, ಮಂಗಲ್, ಮುಕ್ಬಾಲ್ ಮತ್ತು ಮುಸುಜೈ ಮತ್ತು ಪರ್ಷಮ್ಕಾನಿ, ಬಂಗಾಶ್ ಶಿಯಾ ಸಮುದಾಗಳಿವೆ. ಉಳಿದವರು ಸುನ್ನಿಗಳಿದ್ದಾರೆ. 2001ರಲ್ಲಿ ಅಮೆರಿಕವು ಪಾಕಿಸ್ತಾನದ ಮೇಲೆ ದಾಳಿ ಮಾಡಿದಾಗ ಲಕ್ಷಾಂತರ ಸುನ್ನಿಗಳು ಪಾಕಿಸ್ತಾನಕ್ಕೆ ಪಲಾಯನ ಮಾಡಿದರು. ಅಫ್ಘಾನಿಸ್ತಾನದಲ್ಲಿದ್ದ ಸುನ್ನಿಗಳು ಪಾಕ್‌ನ ಹಲವು ಪ್ರದೇಶಗಳಲ್ಲಿ ನೆಲೆದರು. ಆದ್ರೆ ಕುರ್ರಂ ಜಿಲ್ಲೆಯಲ್ಲಿದ್ದ ಶಿಯಾಗಳು ಇಲ್ಲಿನ ಸುನ್ನಿಗಳಿಗೆ ನೆಲೆಯೂರಲು ವಿರೋಧ ವ್ಯಕ್ತಪಡಿಸಿತ್ತು. ಆದ್ರೆ ಅಂದಿನ ಜನರಲ್ ಜಿಯಾ ಉಲ್ ಹಕ್‌ನಿಂದಾಗಿ ಸುನ್ನಿಗಳಿಗೆ ಈ ಪ್ರದೇಶದಲ್ಲಿ ನೆಲೆಸುವ ಅವಕಾಶ ಸಿಕ್ಕಿತು. 2007ರಲ್ಲಿ ಶಿಯಾ – ಸುನ್ನಿಗಳ ನಡುವೆ ರಕ್ತಸಿಕ್ತ ಘರ್ಷಣೆ ನಡೆಯಿತು. ಈ ನಡುವೆ 2008 ರಲ್ಲಿ, ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಹೆಸರಿನ ಶಿಯಾ ವಿರೋಧಿ ಭಯೋತ್ಪಾದಕ ಸಂಘಟನೆ ರಚಿಸಲಾಯಿತು. ಇದು ಹಿಂಸಾಚಾರವನ್ನು ಮತ್ತಷ್ಟು ಹೆಚ್ಚಿಸಿತು. ಸುಮಾರು ನಾಲ್ಕು ವರ್ಷಗಳ ಕಾಲ ನಡೆದ ಈ ಯುದ್ಧದಲ್ಲಿ ಸಾವಿರಾರು ಜನ ಸತ್ತರು. ಅಂತಿಮವಾಗಿ 2011ರಲ್ಲಿ ಶಾಂತಿ ಒಪ್ಪಂದಕ್ಕೆ ಬರಲಾಯಿತು. 2021ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಾಗ ಮತ್ತೆ ಇಲ್ಲಿ ಹಿಂಸಾಚಾರ ಭುಗಿಲೆದ್ದಿತು.
ಸಮುದಾಯಗಳ ಬಲಾ-ಬಲ ಹೇಗಿದೆ?
ಪಾಕಿಸ್ತಾನದಲ್ಲಿ ಒಟ್ಟು 24.5 ಕೋಟಿ ಜನಸಂಖ್ಯೆಯಲ್ಲಿ ಸುಮಾರು 96% ರಷ್ಟು ಮುಸ್ಲಿಮರೇ ಇದ್ದಾರೆ. ಮುಸ್ಲಿಮರಲ್ಲಿ 80% ರಷ್ಟು ಸುನ್ನಿಗಳಿದ್ದಾರೆ. ಸುಮಾರು 12% ರಷ್ಟು ಶಿಯಾಗಳು ವಾಸವಾಗಿದ್ದಾರೆ. ಈ ಎರಡು ಪಂಗಡಗಳಲ್ಲದೇ ಸುಮಾರು 45 ಲಕ್ಷ ಅಹಮದೀಯರು ಈ ದೇಶದಲ್ಲಿದ್ದಾರೆ. ಧರ್ಮಾಚರಣೆ ಸಹಿತ ಅನೇಕ ವಿಚಾರಗಳಲ್ಲಿ ಈ ಪಂಗಡಗಳ ನಡುವೆ ಭಿನ್ನತೆ ಇದೆ.
ಹಲವು ಬುಡಕಟ್ಟು ಸಮುದಾಯಗಳ ನೆಲೆಯಾಗಿರುವ ಕುರ್ರಂನಲ್ಲಿ ರಕ್ತಪಾತವಾಗಲು ಸ್ಥಳೀಯರು ಮಾತ್ರ ಕಾರಣವಲ್ಲ, ವಾಸ್ತವವಾಗಿ ಸೌದಿ ಅರೇಬಿಯಾ, ಇರಾನ್ ಸಹ ಇಲ್ಲಿನ ಹಿಂಸಾಚಾರಕ್ಕೆ ಕಾರಣ ಅನುಮಾನಗಳು ವ್ಯಕ್ತವಾಗಿವೆ. ಇರಾನ್ ಶಿಯಾಗಳನ್ನು ಹೆಚ್ಚಾಗಿ ಹೊಂದಿರುವ ದೇಶವಾಗಿದ್ದು, ಸೌದಿ ಅರೇಬಿಯಾ ಸುನ್ನಿಗಳ ಬಹುಸಂಖ್ಯಾತ ರಾಷ್ಟ್ರವಾಗಿದೆ. ಪಾಕಿಸ್ತಾನದ ಸೆಂಟರ್ ಫಾರ್ ಸ್ಟ್ರಾಟೆಜಿಕ್ ಅಂಡ್ ಕಾಂಟೆಂಪರರಿ ರಿಸರ್ಚ್ ವರದಿಯು ಸೌದಿ ಅರೇಬಿಯಾ ಕುರ್ರಂನಲ್ಲಿ ಸುನ್ನಿ ಉಗ್ರಗಾಮಿ ಸಂಘಟನೆಗಳನ್ನು ಹಾಗೂ ಇರಾನ್ ಶಿಯಾ ಸಂಘಟನೆಗಳನ್ನು ಬೆಂಬಲಿಸುತ್ತಿದೆ. ತಾಲಿಬಾನ್ ಬೆಂಬಲಿತ ಸಂಘಟನೆಗಳ ವಿರುದ್ಧ ಹೋರಾಡಲು ಜೈನ್ಬಿಯುನ್ ಬ್ರಿಗೇಡ್ ಎಂಬ ಹೆಸರಿನ ಸಂಘಟನೆಯನ್ನು ಇರಾನ್ ಇಲ್ಲಿ ಸ್ಥಾಪಿಸಿದೆ. ಪಾಕಿಸ್ತಾನ ಸರ್ಕಾರ ಜೈನ್ಬಿಯುನ್ ಬ್ರಿಗೇಡ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. ಅಂಕಿ ಅಂಶಗಳ ಪ್ರಕಾರ 2007 ಮತ್ತು 2011ರ ನಡುವೆ ಕುರ್ರಂನಲ್ಲಿ ನಡೆದ ಶಿಯಾ-ಸುನ್ನಿಗಳ ನಡುವಿನ ದಂಗೆಗಳಲ್ಲಿ 2 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 5 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡರು, 10 ಸಾವಿರಕ್ಕೂ ಹೆಚ್ಚು ಮಂದಿ ಆ ಪ್ರದೇಶದಿಂದಲೇ ಕಾಲ್ಕಿತ್ತರು ಎಂದು ಹೇಳಲಾಗಿದೆ.
ಇತರ ಪಂಗಡಗಳಿಗೂ ನೆಮ್ಮದಿ ಇಲ್ಲ!
ಪಾಕಿಸ್ತಾನದಲ್ಲಿ ಶಿಯಾ- ಸುನ್ನಿಗಳ ಹೊರತಾಗಿ ಅಹಮದೀಯರು, ಇಸ್ಮಾಯಿಲಿ, ಬಹುರಾ, ಜೈದಿ, ಸೂಫಿ ಪಂಥ ಸಹಿತ ಇನ್ನಿತರ ಪಂಗಡಗಳು ಇವೆ. ಆದರೆ, ಇವರೆಲ್ಲ ತೀರಾ ಚಿಕ್ಕ ಸಮುದಾಯ ಆಗಿರುವ ಕಾರಣ ಇವರ ಏಳಿಗೆಯನ್ನು ಅಲ್ಲಿನ ಬಹುಸಂಖ್ಯಾತರು ಸಹಿಸುತ್ತಿಲ್ಲ. ಬಹುತೇಕ ಈ ಚಿಕ್ಕ ಸಮುದಾಯವನ್ನು ಗುರಿಯಾಗಿಸಿಯೇ ಭಯೋತ್ಪಾದನಾ ದಾಳಿಗಳು ನಡೆಯುತ್ತಿದ್ದು, ರಕ್ತಸಿಕ್ತ ಅಧ್ಯಾಯದಿಂದ ಈ ಪಂಗಡಗಳು ನಲುಗಿ ಹೋಗಿವೆ.
ಅಹಮದೀಯರಿಗೇಕೆ ನೆಲೆ ಇಲ್ಲ?
ಪಾಕಿಸ್ತಾನದಲ್ಲಿ ಸುನ್ನಿ ಮತ್ತು ಶಿಯಾಗಳ ನಡುವೆ ಇನ್ನೊಂದು ಮುಸ್ಲಿಂ ಪಂಗಡ ವಾಸಿಸುತ್ತಿದೆ. ಅದುವೇ ಅಹಮ್ಮದೀಯ ಸಮುದಾಯ. ಆದರೆ, ಪಾಕಿಸ್ತಾನದಲ್ಲಿ ಸದ್ಯ ಅವರಿಗೆ ನೆಲೆಯೇ ಇಲ್ಲದ ಸ್ಥಿತಿ ಇದೆ. ಅಹಮದೀಯ ಪಂಥದವರು ತಮ್ಮನ್ನು ತಾವು ಮುಸ್ಲಿಂ ಎಂದು ಕರೆದುಕೊಳ್ಳುತ್ತಾರೆ. ಆದರೆ, ಅವರನ್ನು ಪಾಕಿಸ್ತಾನದ ಸಂವಿಧಾನದ ಅಡಿಯಲ್ಲಿ 1974ರಲ್ಲಿ ʻಮುಸ್ಲಿಮೇತರರು’ ಎಂದು ಘೋಷಿಸಲಾಯಿತು. ಪಂಜಾಬ್ ಪ್ರಾಂತ್ಯದಲ್ಲಿ ಇವರ ಸಂಖ್ಯೆ ಹೆಚ್ಚಾಗಿದೆ. ಧಾರ್ಮಿಕ ವಿಚಾರವಾಗಿ ಇವರ ಮೇಲೆ ನಿರಂತರ ದಾಳಿಗಳು ನಡೆಯುತ್ತಿದ್ದು, ಅವರಿಗೆ ಸೇರಿದ ಧಾರ್ಮಿಕ ಸ್ಥಳಗಳು ಮತ್ತು ಖಬರಸ್ಥಾನಗಳನ್ನು (ಸ್ಮಶಾನ) ನಾಶ ಮಾಡಲಾಗಿದೆ. ಪಾಕಿಸ್ತಾನದಲ್ಲಿ 1985ರಲ್ಲಿ ವಿವಿಧ ಧಾರ್ಮಿಕ ಗುಂಪುಗಳಿಗೆ ಪ್ರತ್ಯೇಕ ಮತದಾರರ ಪಟ್ಟಿಯನ್ನು ಪರಿಚಯಿಸಲಾಯಿತು. ಇದರಲ್ಲಿ ಅಹಮ್ಮದೀಯರನ್ನೂ ಸೇರಿಸಲಾಯಿತು. ಇದು ಅಹಮ್ಮದೀಯರನ್ನು ಕೆರಳಿಸಿದ್ದು, ಇಂದಿಗೂ ಅವರು ಪೂರ್ಣ ಪ್ರಮಾಣದಲ್ಲಿ ಅಲ್ಲಿನ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸದೆ ದೂರವೇ ಉಳಿದಿದ್ದಾರೆ ಎನ್ನುತ್ತವೆ ವರದಿಗಳು.
WTC ದಾಳಿಯೂ ಸಂಘರ್ಷಕ್ಕೆ ಕಾರಣವಾಗಿದ್ದು ಹೇಗೆ?
ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ 2001ರ ಸೆ.11ರಂದು ತಾಲಿಬಾನಿಗಳು ದಾಳಿ ನಡೆಸಿದ ಬಳಿಕ ಅಮೆರಿಕದಿಂದ ಲಕ್ಷಾಂತರ ಮಂದಿ ಸುನ್ನಿ ಸಮುದಾಯದವರನ್ನು ಓಡಿಸಲಾಯಿತು. ಅವರು ನೆಲೆ ಇಲ್ಲದೇ ಬೇರೆ-ಬೇರೆ ದೇಶಗಳಿಗೆ ಹೋಗಿ ಆಶ್ರಯ ಪಡೆದರು. ಪಾಕಿಸ್ತಾನಕ್ಕೂ ಲಕ್ಷಾಂತರ ಸುನ್ನಿಗಳು ವಲಸೆ ಹೋದರು. ಅವರಿಗೆ ಪುನರ್ವಸತಿ ಕಲ್ಪಿಸುವುದೇ ಸರ್ಕಾರಕ್ಕೆ ದೊಡ್ಡ ಸವಾಲಾಗಿತ್ತು. ಈ ಹಂತದಲ್ಲಿ ಪಾಕಿಸ್ತಾನದ ಅಂದಿನ ಸರ್ಕಾರ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಆಶ್ರಯ ಕಲ್ಪಿಸಲು ಮುಂದಾಗಿತ್ತು. ಆದ್ರೆ, ಆ ಪ್ರಾಂತ್ಯದಲ್ಲಿ ಬಹುಸಂಖ್ಯಾತರಾಗಿದ್ದ ಶಿಯಾ ಸಮುದಾಯ ಸುನ್ನಿಗಳಿಗೆ ಆಶ್ರಯ ನೀಡುವುದನ್ನು ವಿರೋಧಿಸಿತು. ಇಲ್ಲಿಂದ ಸಂಘರ್ಷ ತಾರಕಕ್ಕೇರಿತು.
ಕಾಬೂಲ್: ಅಫ್ಘಾನಿಸ್ತಾನದಲ್ಲಿರುವ (Afghanistan) ತಾಲಿಬಾನ್ (Taliban) ಆಡಳಿತವು ಅಫ್ಘಾನ್ ಮಹಿಳೆಯರ ಸ್ವಾತಂತ್ರ‍್ಯವನ್ನು ಮತ್ತಷ್ಟು ನಿರ್ಬಂಧಿಸುವ ಹೊಸ ಸುಗ್ರೀವಾಜ್ಞೆಯನ್ನು ಹೊರಡಿಸಿದೆ. ಮಹಿಳೆಯರು ಪರಸ್ಪರರ ಉಪಸ್ಥಿತಿಯಲ್ಲಿ ಗಟ್ಟಿಯಾಗಿ ಪ್ರಾರ್ಥನೆ ಮಾಡುವುದನ್ನು ನಿಷೇಧಿಸಲಾಗಿದೆ. ಸದ್ಗುಣ ಪ್ರಚಾರ ಮತ್ತು ದುಷ್ಕೃತ್ಯಗಳ ತಡೆಗಟ್ಟಲು ಈ ಆದೇಶವನ್ನು ಹೊರಡಿಸಲಾಗುತ್ತಿದೆ ಎಂದು ತಾಲಿಬಾನ್ ಸಚಿವ ಮೊಹಮ್ಮದ್ ಖಾಲಿದ್ ಹನಾಫಿ (Mohammad Khalid Hanafi) ಹೇಳಿದ್ದಾರೆ.
ಈ ಆದೇಶವು ಮಹಿಳೆಯರು ಇತರ ಮಹಿಳೆಯರ ಬಳಿ ಇರುವಾಗ ಕುರಾನ್ (Quran) ಅನ್ನು ಶ್ರವ್ಯವಾಗಿ ಪಠಿಸುವುದನ್ನು ತಪ್ಪಿಸಬೇಕು ಎಂದು ಸುದ್ದಿ ವಾಹಿನಿಯೊಂದು ವರದಿ ಮಾಡಿದೆ. ಮಹಿಳೆಯ ಧ್ವನಿಯನ್ನು ಇಲ್ಲಿ ‘ಅವ್ರಾ’ ಎಂದು ಪರಿಗಣಿಸಲಾಗುತ್ತದೆ. ಒಬ್ಬ ಮಹಿಳೆಯ ಅವ್ರಾವನ್ನು ಇತರ ಮಹಿಳೆಯರು ಸಹ ಸಾರ್ವಜನಿಕವಾಗಿ ಕೇಳಬಾರದು ಎಂದು ಹೇಳುವ ಮೂಲಕ ಹನಾಫಿ ಈ ನಿರ್ಬಂಧವನ್ನು ಸಮರ್ಥಿಸಿದ್ದಾರೆ. ಇದನ್ನೂ ಓದಿ: ಬುಲೆಟ್ ಬೈಕ್ ಡಿವೈಡರ್‌ಗೆ ಡಿಕ್ಕಿ – ಬೈಕ್ ಸವಾರ ಸ್ಥಳದಲ್ಲೇ ಸಾವು
ಈ ಹೊಸ ನಿರ್ಬಂಧವು ಮಹಿಳೆಯರಲ್ಲಿ ಮುಕ್ತವಾಗಿ ಮಾತನಾಡುವ ಸಾಮರ್ಥ್ಯವನ್ನು ಪ್ರತಿಬಂಧಿಸಬಹುದೆಂದು ತಜ್ಞರು ಕಳವಳ ವ್ಯಕ್ತಪಸಿದ್ದಾರೆ. ಇದರಿಂದಾಗಿ ಮಹಿಳೆಯರು ಸಾರ್ವಜನಿಕ ಜೀವನದಿಂದ ಮತ್ತಷ್ಟು ದೂರ ಸರಿಯಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ತೇರದಾಳದ 111 ಮಂದಿ ರೈತರಿಗೆ ವಕ್ಫ್ ನೋಟಿಸ್
2021ರಲ್ಲಿ ಅಧಿಕಾರಕ್ಕೆ ಮರಳಿದ ತಾಲಿಬಾನ್ ಅಫ್ಘಾನ್ ಮಹಿಳೆಯರ ಮೇಲೆ ಹಲವು ನಿರ್ಬಂಧ ಹೇರಿದೆ. ಮಹಿಳೆಯರು ಸಾರ್ವಜನಿಕವಾಗಿದ್ದಾಗ ಮುಖದ ಮುಸುಕು ಸೇರಿದಂತೆ ಸಂಪೂರ್ಣ ದೇಹ ಮುಚ್ಚುವಂತೆ ಬಟ್ಟೆ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಮನೆಯ ಹೊರಗೆ ಕೆಲಸ ಮಾಡಲು ಅನುಮತಿಸಲಾದ ಕೆಲವು ಅಫ್ಘಾನ್ ಮಹಿಳೆಯರು ಸಾರ್ವಜನಿಕವಾಗಿ, ವಿಶೇಷವಾಗಿ ಪುರುಷ ಸಂಬಂಧಿಕರೊಂದಿಗೆ ಮಾತನಾಡುವುದನ್ನು ನಿರ್ಬಂಧಿಸಲಾಗಿದೆ. ಕೆಲಸ ಮತ್ತು ಶಿಕ್ಷಣಕ್ಕೆ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಕುಟುಂಬದ ಗಂಡಸಿನ ಜೊತೆ ಇಲ್ಲದಂತೆ ಮಹಿಳೆ ಏಕಾಂಗಿಯಾಗಿ ಓಡಾಡುವಂತಿಲ್ಲ ಎಂಬ ನಿಯಮ ಹೇರಿದೆ. ಇದನ್ನೂ ಓದಿ: ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆ ಪಡೆದ ವ್ಯಕ್ತಿಯನ್ನೇ ನೋಡಿಲ್ಲ – ಮೋದಿಗೆ ಕೇಜ್ರಿವಾಲ್ ತಿರುಗೇಟು
– ಭಾರತದ ನೆರೆ ರಾಷ್ಟ್ರಗಳಲ್ಲಿ ಆಗಿದ್ದೇನು?.. ಒಂದು ಹಿನ್ನೋಟ!
ಕಳೆದ ಮೂರು ವರ್ಷಗಳಿಂದ ದಕ್ಷಿಣ ಏಷ್ಯಾದ ರಾಜಕೀಯ, ಆರ್ಥಿಕ ಪರಿಸ್ಥಿತಿಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ನಿರ್ದಿಷ್ಟವಾಗಿ ಭಾರತದ ನೆರೆಹೊರೆ ರಾಷ್ಟ್ರಗಳಲ್ಲಿ ಅಧಿಕಾರದ ನಿರ್ವಾತ, ರಾಜಕೀಯ ಕ್ರಾಂತಿಗಳು, ಸಾಮೂಹಿಕ ಪ್ರತಿಭಟನೆಗಳಿಂದ ಪ್ರಕ್ಷುಬ್ಧತೆ ಸೃಷ್ಟಿಯಾಗಿದೆ. ಇದರಿಂದ ಆಡಳಿತ ಬದಲಾವಣೆಗೆ ಸಾಕ್ಷಿಯಾಗಿವೆ. ಅಫ್ಘಾನಿಸ್ತಾನ, ಶ್ರೀಲಂಕಾ, ಪಾಕಿಸ್ತಾನದಲ್ಲಿ ಬಿಕ್ಕಟ್ಟು ಎದುರಾಗಿತ್ತು. ಈಗ ಬಾಂಗ್ಲಾದೇಶದಲ್ಲೂ ಅದೇ ಪರಿಸ್ಥಿತಿ ನಿರ್ಮಾಣವಾಗಿತ್ತು.
2021 ರ ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಶಪಡಿಸಿಕೊಂಡಾಗಿನಿಂದ, 2022 ರ ಏಪ್ರಿಲ್‌ನಲ್ಲಿ ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಅವರನ್ನು ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸಿದವರೆಗೆ.. ಶ್ರೀಲಂಕಾದಲ್ಲಿ ನಡೆದ ಬೃಹತ್ ಪ್ರತಿಭಟನೆಗಳಿಂದ 2022 ರ ಜುಲೈನಲ್ಲಿ ಗೋತಬಯ ರಾಜಪಕ್ಸೆ ದೇಶದಿಂದ ಪಲಾಯನದಿಂದ, ಬಾಂಗ್ಲಾದೇಶದಲ್ಲಿ ಪ್ರಸ್ತುತ ಸೃಷ್ಟಿಯಾಗಿರುವ (ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ) ಪ್ರಕ್ಷುಬ್ಧತೆವರೆಗೆ.. ಏನೇನಾಯಿತು ಎಂಬುದು ನಿಜಕ್ಕೂ ಕುತೂಹಲಕಾರಿ. ದಕ್ಷಿಣ ಏಷ್ಯಾದ ರಾಜಕೀಯ ಡೈನಾಮಿಕ್ಸ್ ಕೇವಲ ಮೂರು ವರ್ಷಗಳಲ್ಲಿ ಸಂಪೂರ್ಣವಾಗಿ ತಲೆಕೆಳಗಾಗಿದೆ.
ಅತ್ತ ಭಾರತ ಸೂಪರ್ ಪವರ್ ಆಗುತ್ತಿದ್ದರೆ, ಇತ್ತ ನೆರೆಹೊರೆ ರಾಷ್ಟ್ರಗಳ ಪರಿಸ್ಥಿತಿ ಢೋಲಾಯಮಾನವಾಗುತ್ತಿದೆ. ಅಷ್ಟಕ್ಕೂ ಭಾರತದ ಸುತ್ತಾ ಏನಾಗ್ತಿದೆ? ನೆರೆಹೊರೆ ದೇಶಗಳಲ್ಲಿ ಏನೇನಾಯಿತು? ಕಾರಣವೇನು? ಇದರಿಂದಾಗಬಹುದಾದ ಪರಿಣಾಮಗಳೇನು? ಬನ್ನಿ ತಿಳಿಯೋಣ.
ಅಫ್ಘಾನಿಸ್ತಾನದಿಂದ ಯುಎಸ್ ಔಟ್.. ತಾಲಿಬಾನ್ ಇನ್
ಆಗ ತಾನೇ ಅಮೆರಿಕದಲ್ಲಿ ಜೋ ಬೈಡೆನ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಅದಾಗಲೇ ಬೈಡೆನ್ ತನ್ನ ದೇಶದ ಆರ್ಥಿಕ, ಸೇನಾ ಹಿತದೃಷ್ಟಿಯಿಂದ ಒಂದು ಘೋಷಣೆಯನ್ನು ಮಾಡಿಯೇಬಿಟ್ಟರು. ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ಸೈನಿಕರು ವಾಪಸ್ ಕರೆಸಿಕೊಳ್ಳುವುದಾಗಿ ಹೇಳಿದರು. ನುಡಿದಂತೆ ಸೇನೆ ವಾಪಸ್ ಕರೆಸಿಕೊಂಡರು. ಅಫ್ಘಾನಿಸ್ತಾನದಲ್ಲಿನ ರಾಜಕೀಯ ಕ್ರಾಂತಿಯು 2021 ರಲ್ಲಿ ತಾಲಿಬಾನ್‌ನ ಮಿಲಿಟರಿ ಆಕ್ರಮಣದೊಂದಿಗೆ ಪ್ರಾರಂಭವಾಯಿತು. ಅದೇ ವರ್ಷ ಆಗಸ್ಟ್ 15 ರಂದು ಅವರು ಕಾಬೂಲ್ ಅನ್ನು ವಶಪಡಿಸಿಕೊಂಡರು. ಇದು 2001 ರಲ್ಲಿ ಯುಎಸ್ ಆಕ್ರಮಣದ ನಂತರ ಜಾರಿಯಲ್ಲಿದ್ದ ಯುಎಸ್ ಬೆಂಬಲಿತ ಆಫ್ಘನ್ ಸರ್ಕಾರದ ಅಂತ್ಯಕ್ಕೆ ಕಾರಣವಾಯಿತು.
2021ರ ಮೇ 1 ರಂದು ಅಫ್ಘಾನಿಸ್ತಾನದಿಂದ ಯುಎಸ್ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳುತ್ತಿದ್ದಂತೆ, ಇತ್ತ ತಾಲಿಬಾನ್ ಆಕ್ರಮಣ ನಡೆಸಿತು. ತಾಲಿಬಾನ್ ದೇಶಾದ್ಯಂತ ಪ್ರಮುಖ ಪ್ರಾಂತೀಯ ರಾಜಧಾನಿಗಳು ಮತ್ತು ಪ್ರದೇಶಗಳನ್ನು ವಶಪಡಿಸಿಕೊಳ್ಳುತ್ತಾ ಬಂತು. ಇದರಿಂದ ಪರಿಸ್ಥಿತಿ ಮತ್ತಷ್ಟು ಉಲ್ಬಣವಾಯಿತು. ಒಂದಷ್ಟು ಪ್ರತಿರೋಧದೊಂದಿಗೆ ಕಾಬೂಲ್ ಪತನವೂ ಆಯಿತು. ಅಧ್ಯಕ್ಷ ಅಶ್ರಫ್ ಘನಿ ಪಲಾಯನ ಮಾಡಿದರು. ಹೆಲಿಕಾಪ್ಟರ್ ತುಂಬಾ ಹಣ ತುಂಬಿಕೊಂಡು ಪರಾರಿಯಾದರು. ಇದು ಮತ್ತೊಮ್ಮೆ ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನದ ಸ್ಥಾಪನೆಗೆ ಕಾರಣವಾಯಿತು. ದೇಶವನ್ನು ತಾಲಿಬಾನ್ ವಶಪಡಿಸಿಕೊಂಡ ಪರಿಯನ್ನು ಕಂಡು ಅಮೆರಿಕ ಗುಪ್ತಚರ ಮತ್ತು ರಕ್ಷಣಾ ಏಜೆನ್ಸಿ ಕೂಡ ಅಚ್ಚರಿಗೊಂಡಿತ್ತು.
ತಾಲಿಬಾನ್ ಅಫ್ಘಾನ್ ಪ್ರವೇಶಿಸುತ್ತಿದ್ದಂತೆ ಹುಚ್ಚಾಟ ಮೆರೆಯಿತು. ಸಿಕ್ಕಸಿಕ್ಕ ಅಂಗಡಿಗಳಿಗೆ ನುಗ್ಗಿ ವಸ್ತುಗಳನ್ನು ತಾಲಿಬಾನಿಗಳು ಧ್ವಂಸಗೊಳಿಸಿದರು. ಮಹಿಳೆಯರ ವಸ್ತ್ರದ ಅಂಗಡಿಗಳು, ಮೇಕಪ್ ಶಾಪ್‌ಗಳನ್ನು ಪುಡಿಗಟ್ಟಿದರು. ಸಿನಿಮಾ ನಟಿಯರು, ಮಾಡೆಲ್‌ಗಳ ಫ್ಲೆಕ್ಸ್‌ಗಳನ್ನು ಹರಿದುಹಾಕಿದರು. ಅಂಗಡಿಗಳಲ್ಲಿನ ಆಹಾರ ಪದಾರ್ಥಗಳನ್ನು ಸೇವಿಸಿದರು. ಆಡಳಿತ ಕಚೇರಿಗಳನ್ನು ವಶಕ್ಕೆ ಪಡೆದರು. ಯುಎಸ್ ಸೇನೆ ಬಿಟ್ಟು ಹೋಗಿದ್ದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡರು. ತಾಲಿಬಾನ್‌ಗಳ ಆಕ್ರಮಣಕಾರಿ ಪ್ರವೇಶದಿಂದ ಭಯಭೀತರಾದ ಜನರು ದೇಶ ತೊರೆಯಲು ಮುಂದಾದರು. ಸಾವಿರಾರು ಸಂಖ್ಯೆಯಲ್ಲಿ ಜನರು ವಿಮಾನ ನಿಲ್ದಾಣಕ್ಕೆ ಧಾವಿಸಿದರು. ವಿಮಾನ ತುಂಬಿದ್ದರೂ ಜನ ಬಿಡಲಿಲ್ಲ. ಟೇಕಾಪ್ ಆಗಿದ್ದ ವಿಮಾನದಿಂದ ಬಿದ್ದು ಕೆಲವರು ಸಾವನ್ನಪ್ಪಿದ ಘಟನೆ ಕೂಡ ನಡೆಯಿತು. ಅಫ್ಘಾನ್ ಅನ್ನು ತಾಲಿಬಾನಿಗಳು ಸಂಪೂರ್ಣವಾಗಿ ಹಿಡಿತಕ್ಕೆ ತೆಗೆದುಕೊಂಡರು.
ಸ್ವಾಧೀನಪಡಿಸಿಕೊಂಡ ನಂತರ ಅಫ್ಘಾನಿಸ್ತಾನವು ಭೀಕರ ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಭಯೋತ್ಪಾದಕ-ಸಂಬಂಧಿತ ಘಟನೆಗಳ ವಿಚಾರವಾಗಿ ಪಾಕಿಸ್ತಾನದೊಂದಿಗೂ ಸಂಬಂಧ ಹದಗೆಟ್ಟಿದೆ. ಕಾಬೂಲ್‌ನಲ್ಲಿ ಭಯೋತ್ಪಾದಕ ಸಂಘಟನೆಗಳಿಗೆ ಆಶ್ರಯ ನೀಡುತ್ತಿದೆ ಎಂದು ಇಸ್ಲಾಮಾಬಾದ್ ಪದೇ ಪದೇ ದೂಷಿಸಿದೆ. ಇದು ಪಾಕಿಸ್ತಾನದ ಗಡಿ ಪ್ರದೇಶಗಳಲ್ಲಿ ಭಾರೀ ಮತ್ತು ಮಾರಣಾಂತಿಕ ದಾಳಿಗಳನ್ನು ನಡೆಸುತ್ತಿದೆ.
ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ ದೇಶದ ಆರ್ಥಿಕತೆ ಅಂದಾಜು 30% ಕುಸಿತ ಕಂಡಿದ್ದು, ಗಣನೀಯವಾಗಿ ಸಂಕುಚಿತಗೊಂಡಿದೆ. 28 ಮಿಲಿಯನ್‌ಗಿಂತಲೂ (2.8 ಕೋಟಿ) ಹೆಚ್ಚು ಜನರಿಗೆ ಅಥವಾ ಜನಸಂಖ್ಯೆಯ ಮೂರನೇ ಎರಡರಷ್ಟು ಜನರಿಗೆ ತುರ್ತು ಮಾನವೀಯ ನೆರವು ಬೇಕಾಗಿದೆ. 17 ಮಿಲಿಯನ್ (1.2 ಕೋಟಿ) ಜನರು ತೀವ್ರ ಹಸಿವಿನಿಂದ ಬಳಲುತ್ತಿದ್ದಾರೆ. ತಾಲಿಬಾನ್‌ನ ಇಸ್ಲಾಮಿಕ್ ಕಾನೂನಿನ ಕಟ್ಟುನಿಟ್ಟಿನ ವ್ಯಾಖ್ಯಾನವು ಶಿಕ್ಷಣ ಮತ್ತು ಉದ್ಯೋಗದ ಮೇಲಿನ ನಿಷೇಧಗಳನ್ನು ಒಳಗೊಂಡಂತೆ ಮಹಿಳೆಯರ ಹಕ್ಕುಗಳ ಮೇಲೆ ತೀವ್ರವಾದ ನಿರ್ಬಂಧಗಳಿಗೆ ಕಾರಣವಾಗಿದೆ. ಇದು ಆರ್ಥಿಕ ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸಿದೆ.
ಅಂತರರಾಷ್ಟ್ರೀಯ ಸಮುದಾಯದ ಪ್ರತಿಕ್ರಿಯೆಯು ಬಹುಮಟ್ಟಿಗೆ ವಿಮರ್ಶಾತ್ಮಕವಾಗಿದೆ. ಅನೇಕ ದೇಶಗಳು ನಿರ್ಬಂಧಗಳನ್ನು ವಿಧಿಸುತ್ತವೆ ಮತ್ತು ತಾಲಿಬಾನ್ ಸರ್ಕಾರದ ಮಾನ್ಯತೆಯನ್ನು ತಡೆಹಿಡಿಯುತ್ತವೆ. ತಾಲಿಬಾನ್ ಆಡಳಿತವನ್ನು ಅಧಿಕೃತ ಅಫ್ಘಾನಿಸ್ತಾನ ಸರ್ಕಾರವೆಂದು ಭಾರತ ಸರ್ಕಾರ ಇನ್ನೂ ಅಧಿಕೃತವಾಗಿ ಗುರುತಿಸದಿದ್ದರೂ, ವ್ಯಾಪಾರ ಸಂಬಂಧಗಳು ಸ್ಥಿರವಾಗಿ ಮುಂದುವರೆದಿದೆ.
ಪಾಕ್‌ನಲ್ಲಿ ಇಮ್ರಾನ್ ಖಾನ್ ಪದಚ್ಯುತಿ
2022 ರ ಏಪ್ರಿಲ್‌ನಲ್ಲಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸುವುದರೊಂದಿಗೆ ಪಾಕಿಸ್ತಾನದ ರಾಜಕೀಯದಲ್ಲಿ ಬದಲಾವಣೆಯಾಯಿತು. 2018 ರಲ್ಲಿ ಅಧಿಕಾರಕ್ಕೆ ಬಂದ ಖಾನ್ ಅವರನ್ನು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅವಿಶ್ವಾಸ ಮತದ ಮೂಲಕ ತೆಗೆದುಹಾಕಲಾಯಿತು. ಇದು ಮಿಲಿಟರಿ ಮತ್ತು ವಿರೋಧ ಪಕ್ಷಗಳನ್ನು ಒಳಗೊಂಡ ರಾಜಕೀಯ ತಂತ್ರಗಾರಿಕೆಯಾಗಿತ್ತು. ಸೇನಾ ನೇಮಕಾತಿಗಳು ಮತ್ತು ವಿದೇಶಾಂಗ ನೀತಿ ನಿರ್ಧಾರಗಳ ವಿಚಾರವಾಗಿ ಖಾನ್ ಅವರ ಮಿಲಿಟರಿಯೊಂದಿಗಿನ ಸಂಬಂಧವು ಹದಗೆಟ್ಟಿತು.
ಈ ಕಾರಣದಿಂದ ಮಿಲಿಟರಿಯ ಬೆಂಬಲ ಹಿಂತೆಗೆದುಕೊಂಡಿದ್ದು, ಅವರ ರಾಜಕೀಯ ಅವನತಿಗೆ ಕಾರಣವಾಯಿತು. ಅವರ ಉಚ್ಚಾಟನೆಯ ನಂತರ ಹಲವಾರು ಕಾನೂನು ಸವಾಲುಗಳು ಮತ್ತು ಭ್ರಷ್ಟಾಚಾರದ ಆರೋಪಗಳು ಕೇಳಿಬಂದವು. ಪ್ರಧಾನಿ ಹುದ್ದೆಯಿಂದ ಕೆಳಗಿಳಿಸುತ್ತಿದ್ದಂತೆ ಖಾನ್ ಅವರ ರಾಜಕೀಯ ಹೋರಾಟಗಳು ತೀವ್ರಗೊಂಡವು. ಭ್ರಷ್ಟಾಚಾರ ಮತ್ತು ಮಿಲಿಟರಿ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಆರೋಪದ ಮೇಲೆ ಇಮ್ರಾನ್ ಖಾನ್‌ರನ್ನು 2023 ರ ಆಗಸ್ಟ್‌ನಲ್ಲಿ ಬಂಧಿಸಲಾಯಿತು. ಇದು ಅವರ ಬೆಂಬಲಿಗರಿಂದ ವ್ಯಾಪಕ ಪ್ರತಿಭಟನೆಗೆ ಕಾರಣವಾಯಿತು.
ದೇಶದಲ್ಲಿ ರಾಜಕೀಯ ಉದ್ವಿಗ್ನತೆ ನಡುವೆ. ಆರ್ಥಿಕತೆಯ ಅನಿಶ್ಚಿತತೆ ತಲೆದೋರಿತು. ಹಣದುಬ್ಬರ, ಕರೆನ್ಸಿ ಮೌಲ್ಯ ಕುಸಿತ, ವಿವಿಧ ಯೋಜನೆಗಳಿಗೆ ಚೀನಾದಿಂದ ಪಡೆದಿರುವ ಬೃಹತ್ ಸಾಲದಿಂದಾಗಿ ದೇಶ ಬಿಕ್ಕಟ್ಟಿಗೆ ಸಿಲುಕಿತು. ರಾಜಕೀಯ ಅಸ್ಥಿರತೆಯು ಆರ್ಥಿಕ ಚೇತರಿಕೆಯ ಪ್ರಯತ್ನಗಳನ್ನು ಮತ್ತಷ್ಟು ಸಂಕೀರ್ಣಗೊಳಿಸಿತು. ಆರ್ಥಿಕ ಬಿಕ್ಕಟ್ಟಿನ ಜೊತೆಗೆ ದೇಶದಲ್ಲಿ ಆಹಾರ ಅಭದ್ರತೆ ಕಾಡಿತು. ಆಹಾರ ಪದಾರ್ಥ ಹಾಗೂ ಇತರೆ ವಸ್ತುಗಳ ಬೆಲೆ ಗಗನಕ್ಕೇರಿತು. ಆಹಾರ ಪದಾರ್ಥಕ್ಕಾಗಿ ಜನ ಮುಗಿಬೀಳುವ ಪರಿಸ್ಥಿತಿ ಎದುರಾಯಿತು. ಪೆಟ್ರೋಲ್ ಬಂಕ್‌ಗಳಲ್ಲಿ ಕಿಲೋಮೀಟರ್‌ಗಟ್ಟಲೇ ಕ್ಯೂ, ಗೋದಿ ಹಿಟ್ಟಿನ ಮೂಟೆಗಳಿಗಾಗಿ ಜನ ಮುಗಿಬೀಳುತ್ತಿದ್ದ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.
ಶ್ರೀಲಂಕಾ ಉದ್ವಿಗ್ನತೆ; ಅಧ್ಯಕ್ಷ ರಾಜಪಕ್ಸೆ ಪಲಾಯನ
2022ರ ಜುಲೈನಲ್ಲಿ ಶ್ರೀಲಂಕಾದಲ್ಲಿ ಸರ್ಕಾರದ ವಿರುದ್ಧ ಜನರೇ ಧಂಗೆಯೆದ್ದ ಘಟನೆ ನಡೆಯಿತು. ದೇಶಾದ್ಯಂತ ನಡೆದ ಸಾಮೂಹಿಕ ಪ್ರತಿಭಟನೆ ಪರಿಣಾಮದಿಂದಾಗಿ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದರು. ಕೋವಿಡ್-19 ಸಾಂಕ್ರಾಮಿಕ ರೋಗ, ಹೆಚ್ಚುತ್ತಿರುವ ಜಾಗತಿಕ ಇಂಧನ ಬೆಲೆಗಳು, ಚೀನಾಕ್ಕೆ ಹೆಚ್ಚುತ್ತಿರುವ ಸಾಲ ಮತ್ತು ಸಾರ್ವಜನಿಕ ಸಂಪನ್ಮೂಲಗಳ ಅಸಮರ್ಪಕ ನಿರ್ವಹಣೆಯಿಂದ ದೇಶ ಬಿಕ್ಕಟ್ಟಿಗೆ ಸಿಲುಕಿತು. ಇದು ಜನರ ವ್ಯಾಪಕ ಆಕ್ರೋಶಕ್ಕೆ ಗುರಿಯಾಯಿತು. ಶ್ರೀಲಂಕಾದಲ್ಲಿನ ಆರ್ಥಿಕ ಬಿಕ್ಕಟ್ಟು ಆಹಾರ, ಇಂಧನ ಮತ್ತು ಔಷಧ ಸೇರಿದಂತೆ ಅಗತ್ಯ ವಸ್ತುಗಳ ತೀವ್ರ ಕೊರತೆಗೆ ಕಾರಣವಾಯಿತು. ಹಣದುಬ್ಬರವು ಹೆಚ್ಚಾಗಿ ಸರ್ಕಾರವು ವಿದ್ಯುತ್ ಕಡಿತ ಮತ್ತು ಸೀಮಿತವಾಗಿ ಇಂಧನ ಮಾರಾಟದಂತಹ ಕಠಿಣ ಕ್ರಮಗಳನ್ನು ಕೈಗೊಂಡಿತು. ಇದು ಜನರನ್ನು ಮತ್ತಷ್ಟು ಕೆರಳಿಸಿತು.
ಪ್ರತಿಭಟನೆಗಳು ಶಾಂತಿಯುತವಾಗಿ ಪ್ರಾರಂಭವಾದವು. ನಂತರ ರಾಜಪಕ್ಸೆ ಅವರ ರಾಜೀನಾಮೆಗೆ ಒತ್ತಾಯಿಸಿ ದೊಡ್ಡ ಚಳವಳಿಯಾಗಿ ರೂಪುಗೊಂಡಿತು. ಕೆರಳಿದ ಜನ ಸರ್ಕಾರಿ ಕಟ್ಟಡಗಳ ಮೇಲೆ ದಾಳಿ ಮಾಡಿದರು. ಮಿಲಿಟರಿಯ ಯಾವುದೇ ಪ್ರತಿರೋಧಗಳಿಗೂ ಜಗ್ಗಲಿಲ್ಲ. ಪ್ರಧಾನಿ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಿದರು. ಅಲ್ಲಿ ಸಿಕ್ಕಸಿಕ್ಕ ವಸ್ತುಗಳು, ಹಣವನ್ನು ಲೂಟಿ ಮಾಡಿದರು. ಆಟವಾಡಿದರು, ಸೋಫಾ ಮೇಲೆ ಹೊರಳಾಡಿದರು. ನಿವಾಸದಲ್ಲಿದ್ದ ಆಹಾರ ಪದಾರ್ಥಗಳನ್ನು ತಿಂದು ಹುಚ್ಚಾಟ ಮೆರೆದರು. ರಾಜಪಕ್ಸೆ ಅವರ ನಿರ್ಗಮನದ ನಂತರ, ರನಿಲ್ ವಿಕ್ರಮಸಿಂಘೆ ನೇತೃತ್ವದ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿತು. ಸರ್ಕಾರವು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ನೆರವು ಕೋರಿದೆ. ಆರ್ಥಿಕತೆಯನ್ನು ಸ್ಥಿರಗೊಳಿಸಲು ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ.
ಬಾಂಗ್ಲಾ ಬಿಕ್ಕಟ್ಟು; ಪ್ರಧಾನಿ ರಾಜೀನಾಮೆ – ಭಾರತಕ್ಕೆ ಪಲಾಯನ
ಬಾಂಗ್ಲಾದಲ್ಲೂ ಬಿಕ್ಕಟ್ಟು ಎದುರಾಗಿದೆ. 2024ರ ಆಗಸ್ಟ್ 5 ರಿಂದ ಸರ್ಕಾರದ ವಿರುದ್ಧ ಜನರು ತಿರುಗಿಬಿದ್ದಿದ್ದಾರೆ. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದರು. ತೀವ್ರ ಪ್ರತಿಭಟನೆಯಲ್ಲಿ 300 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಇದೇ ವೇಳೆ ಹಿಂದೂಗಳನ್ನು ಗುರಿಯಾಗಿ ಹಲವೆಡೆ ಹಿಂಸಾಚಾರ ನಡೆದಿದೆ.
ಸ್ವಾತಂತ್ರ್ಯ ಹೋರಾಟಗಾರರಿಗೆ ಸರ್ಕಾರಿ ಹುದ್ದೆಗಳಲ್ಲಿ ಶೇ.30 ಮೀಸಲಾತಿ ಕಲ್ಪಿಸುವ ನಿರ್ಧಾರವು ಸರ್ಕಾರದ ವಿರುದ್ಧ ಜನಾಕ್ರೋಶಕ್ಕೆ ಕಾರಣವಾಯಿತು. ಸಾವಿರಾರು ಸಂಖ್ಯೆಯಲ್ಲಿ ಯುವಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಇದರಿಂದ ಎಚ್ಚೆತ್ತು, ಬಾಂಗ್ಲಾದ ಸುಪ್ರೀಂ ಕೋರ್ಟ್ ಶೇ.30 ರಿಂದ ಶೇ.5ಕ್ಕೆ ಮೀಸಲಾತಿ ಪ್ರಮಾಣ ಇಳಿಸಿತು. ಆದರೆ ಬಾಂಗ್ಲಾ ಪ್ರಧಾನಿ ವಿರುದ್ಧ ಬೀದಿಗಿಳಿದ ಪ್ರತಿಭಟನಾಕಾರರು ರಾಜೀನಾಮೆಗೆ ಆಗ್ರಹಿಸಿ ಹಿಂಸಾಚಾರ ನಡೆಸಿದರು. ಪರಿಣಾಮವಾಗಿ ಹಸೀನಾರು ರಾಜೀನಾಮೆ ನೀಡಿ ಪಲಾಯನ ಮಾಡಿದರು.
ದೊಣ್ಣೆಗಳನ್ನು ಹಿಡಿದು ಬೀದಿಗಿಳಿದ ಪ್ರತಿಭಟನಾಕಾರರು ಸಿಕ್ಕಸಿಕ್ಕದ್ದನ್ನೆಲ್ಲ ಧ್ವಂಸ ಮಾಡಿದರು. ಪ್ರತಿಮೆಗಳನ್ನು ನೆಲಕ್ಕುರುಳಿಸಿದರು. ಬೋಟ್‌ಗಳಲ್ಲಿ ವಿಹಾರ ಮಾಡಿ ಮೋಜು-ಮಸ್ತಿ ಮಾಡಿದರು. ಅಂಗಡಿ, ಶಾಪ್‌ಗಳ ಮೇಲೆ ದಾಳಿ ನಡೆಸಿದರು. ವಸ್ತುಗಳನ್ನೆಲ್ಲ ಲೂಟಿ ಮಾಡಿದರು. ಪ್ರಧಾನಿ ಅಧಿಕೃತ ನಿವಾಸಕ್ಕೆ ನುಗ್ಗಿ ವಸ್ತುಗಳನ್ನು ದೋಚಿದರು. ಮಾಡಿದ್ದ ಅಡುಗೆಯನ್ನೆಲ್ಲ ಭಕ್ಷಿಸಿದರು. ಸೋಫಾ ಮೇಲೆ ಬಿದ್ದು ಹೊರಳಾಡಿದರು. ಈ ದೃಶ್ಯದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಹಸೀನಾ ರಾಜೀನಾಮೆ ನೀಡುತ್ತಿದ್ದಂತೆ ದೇಶದಲ್ಲಿ ಸೇನಾಡಳಿತ ಜಾರಿಗೊಳಿಸಲಾಗಿತ್ತು. ನಂತರ ಮಧ್ಯಂತರ ಸರ್ಕಾರ ರಚನೆಯಾಯಿತು.
ಬಾಂಗ್ಲಾದಲ್ಲಿ ಕ್ಷಿಪ್ರ ಕಾಂತಿ ಹಿನ್ನೋಟ 1975: ಸೇನಾ ಕ್ರಾಂತಿಯಲ್ಲಿ ದೇಶದ ಮೊದಲ ಪ್ರಧಾನಿ ಶೇಖ್ ಮುಜೀಬುರ್ ರಹಮಾನ್ (ಶೇಖ್ ಹಸೀನಾ ತಂದೆ) ಮತ್ತು ಕುಟುಂಬ ಸದಸ್ಯರ ಹತ್ಯೆಯಾಗಿತ್ತು. ಸೇನಾ ಆಡಳಿತ ಜಾರಿಗೆ ಬಂದಿತ್ತು. ನಂತರ ಜನರಲ್ ಜಿಯಾಉರ್ ರೆಹಮಾನ್ ಅಧಿಕಾರಕ್ಕೆ.
1981: ಚಿತ್ತಗಾಂಗ್ ನಗರಲ್ಲಿನ ಸರ್ಕಾರಿ ಅತಿಥಿಗೃಹಕ್ಕೆ ನುಗ್ಗಿದ ಬಂಡುಕೋರರಿಂದ ಜಿಯಾಉರ್ ರೆಹಮಾನ್ ಹತ್ಯೆ ಮಾಡಲಾಯಿತು.
1982: ರೆಹಮಾನ್ ಉತ್ತರಾಧಿಕಾರಿ ಅಬ್ದುಸ್ ಸತ್ತಾರ್ ಅವರನ್ನು ಹುನೇಸ್ ಮುಹಮ್ಮದ್ ಇರ್ಷಾದ್ ನೇತೃತ್ವದ ತಂಡ ರಕ್ತರಹಿತ ಕ್ರಾಂತಿ ಮೂಲಕ ಪದಚ್ಯುತಿಗೊಳಿಸಿತು. ಮುಖ್ಯ ಸೇನಾ ಆಡಳಿತಾಧಿಕಾರಿಯಾಗಿ ಸತ್ತಾರ್ ಅಧಿಕಾರ ವಹಿಸಿಕೊಂಡರು.
2007: ಸೇನಾ ಮುಖ್ಯಸ್ಥರ ನೇತೃತ್ವದಲ್ಲಿ ಸೇನಾ ಕ್ರಾಂತಿ ನಡೆಯಿತು. ಹಂಗಾಮಿ ಸರ್ಕಾರಕ್ಕೆ ಸೇನೆ ಬೆಂಬಲ ನೀಡಿತು.
2009: ಶೇಖ್ ಹಸೀನಾ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಅದೇ ವರ್ಷ ವೇತನ ಮತ್ತು ಸೌಲಭ್ಯಗಳ ಬಗ್ಗೆ ಅಸಮಾಧಾನಗೊಂಡಿದ್ದ ಅರೆಸೇನಾ ಪಡೆಯ ಸಿಬ್ಬಂದಿ ಬಂಡಾಯವೆದ್ದು, ಢಾಕಾದಲ್ಲಿ 70 ಜನರ ಹತ್ಯೆಯಾಗಿತ್ತು. ಮೃತಪಟ್ಟವರಲ್ಲಿ ಬಹುತೇಕ ಮಂದಿ ಸೇನಾಧಿಕಾರಿಗಳಾಗಿದ್ದರು. 10ಕ್ಕೂ ಹೆಚ್ಚು ನಗರಗಳಿಗೆ ದಂಗೆ ಹಬ್ಬಿತ್ತು. 6 ದಿನಗಳಲ್ಲಿ ಈ ದಂಗೆಯನ್ನು ನಿಯಂತ್ರಣಕ್ಕೆ ತರಲಾಯಿತು.
2012: ನಿವೃತ್ತ ಮತ್ತು ಸೇವೆಯಲ್ಲಿದ್ದ ಅಧಿಕಾರಿಗಳು ಮಾಡಿದ ದಂಗೆ ಇದು. ದೇಶಾದ್ಯಂತ ಷರಿಯಾ ಕಾನೂನು ಜಾರಿಗೆ ತರಬೇಕು ಎಂಬ ಅಭಿಯಾನದ ಭಾಗವಾಗಿ ದಂಗೆ ಎದ್ದಿತ್ತು. ಈ ಯತ್ನವನ್ನು ವಿಫಲಗೊಳಿಸಿದ್ದಾಗಿ ಬಾಂಗ್ಲಾ ಸೇನೆ ಹೇಳಿಕೆ.
ನವದೆಹಲಿ: ಟಿ20 ವಿಶ್ವಕಪ್ ಕ್ರಿಕೆಟ್‌ನಲ್ಲಿ (World Cup Cricket) ಬಾಂಗ್ಲಾದೇಶದ ವಿರುದ್ಧ ಗೆಲುವು ಸಾಧಿಸಿ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ್ದ ಅಫ್ಘಾನಿಸ್ತಾನ (Afghanistan) ತಂಡದ ಸಾಧನೆಯ ಹಿಂದೆ ಬಿಸಿಸಿಐ (BCCI) ಪಾಲಿದೆ.
ಹೌದು. ಆಂತರಿಕ ಕಿತ್ತಾಟದಿಂದ ನಲುಗಿ ಹೋಗಿದ್ದ ಅಫ್ಘಾನಿಸ್ತಾನಕ್ಕೆ ಆರ್ಥಿಕ ಸಹಕಾರ ನೀಡಿ ಆಟಗಾರರನ್ನು ಬಿಸಿಸಿಐ ಪ್ರೋತ್ಸಾಹಿಸಿದ ಪರಿಣಾಮ ಕ್ರಿಕೆಟ್ ಟೂರ್ನಿಗಳಲ್ಲಿ ಅಫ್ಘಾನ್ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಈ ಹಿಂದೆ ಪಾಕಿಸ್ತಾನದಲ್ಲಿ (Pakistan) ಅಫ್ಘಾನಿಸ್ತಾನ ತಂಡಕ್ಕೆ ತರಬೇತಿ ಸಿಕ್ಕಿತ್ತು. ಆದರೆ ತರಬೇತಿ ಅಷ್ಟೇನು ಚೆನ್ನಾಗಿ ಸಿಗದ ಕಾರಣ ಬಿಸಿಸಿಐ 2015ರಲ್ಲಿ ಅಫ್ಘಾನಿಸ್ತಾನ ತಂಡಕ್ಕೆ ನೆರವು ನೀಡಲು ಆರಂಭಿಸಿತು. ಗ್ರೇಟರ್ ನೋಯ್ಡಾದಲ್ಲಿರುವ ವಿಜಯ್ ಸಿಂಗ್ ಸ್ಫೋರ್ಟ್ಸ್ ಕಾಂಪ್ಲೆಕ್ಸ್ ಅಫ್ಘಾನಿಸ್ತಾನದ ಹೋಮ್ ಗ್ರೌಂಡ್ ಆಗಿತ್ತು. ಶಾರ್ಜಾದಿಂದ ನೋಯ್ಡಾಕ್ಕೆ ಶಿಫ್ಟ್ ಆಗಿದ್ದ ಅಫ್ಘಾನಿಸ್ತಾನ 2017ರಲ್ಲಿ ಗ್ರೇಟರ್ ನೋಯ್ಡಾದಲ್ಲೇ ಐರ್ಲೆಂಡ್ ವಿರುದ್ಧ ಸರಣಿ ಆಡಿತ್ತು.
We, therefore, thank India and in particular BCCI for their role in the development of Afghan cricket and thank them for arranging this match. We also request all other test cricketing nations to arrange regular series with Afghanistan.
ಅಫ್ಘಾನಿಸ್ತಾನ ಡೆಹ್ರಾಡೂನ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಟಿ20 ಸರಣಿ ಸಹ ಆಯೋಜಿಸಿತ್ತು. ಟೀಂ ಇಂಡಿಯಾದ ಮಾಜಿ ಆಟಗಾರರಾದ ಲಾಲ್‌ಚಂದ್ ರಜಪುತ್ ಮತ್ತು ಮನೋಜ್ ಪ್ರಭಾಕರ್ ಅವರು ಕೋಚ್ ಆಗಿ ಮಾರ್ಗದರ್ಶನ ಸಹ ನೀಡಿದ್ದರು. ಸಂಬಂಧ ಮತ್ತಷ್ಟು ಉತ್ತಮವಾಗುತ್ತಿದ್ದಂತೆ ಬೆಂಗಳೂರಿನಲ್ಲಿ ನಡೆದ ಟೆಸ್ಟ್ ಪಂದ್ಯಕ್ಕೆ ಬಿಸಿಸಿಐ ಅಫ್ಘಾನಿಸ್ತಾನದ ಅಧ್ಯಕ್ಷರಾಗಿದ್ದ ಅಶ್ರಫ್ ಘನಿ ಅವರನ್ನು ಆಹ್ವಾನಿಸಿತ್ತು. ಅಂದು ಅಶ್ರಫ್ ಘನಿ ಟ್ವೀಟ್ ಮಾಡಿ ಅಫ್ಘಾನ್ ಆಟಗಾರರಿಗೆ ತಮ್ಮ ಕೌಶಲ್ಯವನ್ನು ತೋರಿಸಲು ವೇದಿಕೆಯನ್ನು ನೀಡಿದ್ದಕ್ಕಾಗಿ ನಾನು ನಮ್ಮ ಭಾರತೀಯ ಸ್ನೇಹಿತರಿಗೆ ಕೃತಜ್ಞನಾಗಿದ್ದೇನೆ ಎಂದು ಬರೆದು ಧನ್ಯವಾದ ತಿಳಿಸಿದ್ದರು. ಇದನ್ನೂ ಓದಿ: T20 ವಿಶ್ವಕಪ್ ಸೆಮಿಸ್‌ಗೆ ಅಫ್ಘಾನ್ – ತಾಲಿಬಾನ್ ಅಭಿನಂದನೆ, ತವರಲ್ಲಿ ಅಭಿಮಾನಿಗಳ ಜಾತ್ರೆ
ಭಾರತ ಸರ್ಕಾರ ಅಫ್ಘಾನಿಸ್ತಾನದಲ್ಲಿ ಕ್ರಿಕೆಟ್‌ಗೆ ಪ್ರೋತ್ಸಾಹ ನೀಡಲು 1 ಮಿಲಿಯನ್ ಡಾಲರ್ ನೀಡಿತ್ತು. ಈ ಹಣದಲ್ಲಿ ಕಂದಹಾರ್‌ನಲ್ಲಿ ನಿರ್ಮಾಣವಾದ ಕ್ರಿಕೆಟ್ ಕ್ರೀಡಾಂಗಣವನ್ನು ಭಾರತದ ರಾಯಭಾರಿ 2018ರ ಏಪ್ರಿಲ್‌ನಲ್ಲಿ ಉದ್ಘಾಟಿಸಿದ್ದರು. ಸ್ನೇಹದ ಭಾಗವಾಗಿ 2019ರಲ್ಲಿ ಅಮುಲ್ ಕಂಪನಿ ಅಫ್ಘಾನಿಸ್ತಾನದ ಮುಖ್ಯ ಪ್ರಾಯೋಜಕತ್ವ ವಹಿಸಿಕೊಂಡಿದೆ. ಕಳೆದ 2 ದಶಕಗಳಿಂದ ಅಮುಲ್ ತನ್ನ ಹಾಲಿನ ಪುಡಿ ಮತ್ತು ಮಗುವಿನ ಆಹಾರವನ್ನು ಅಫ್ಘಾನಿಸ್ತಾನಕ್ಕೆ ರಫ್ತು ಮಾಡುತ್ತಿದೆ.
ಐಪಿಎಲ್‌ನಲ್ಲಿ ಪಾಕ್ ಆಟಗಾರರಿಗೆ ನಿರ್ಬಂಧವಿದ್ದರೆ ಅಫ್ಘಾನ್ ಆಟಗಾರರು ಬಿಡ್‌ನಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಅದರಲ್ಲೂ ಸ್ಪಿನ್ನರ್ ರಶೀದ್ ಖಾನ್ ಅವರಿಗೆ ಭಾರತದಲ್ಲಿ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಈ ಹಿಂದೆ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ರಶೀದ್ ಖಾನ್ ಅವರು ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸಿದ್ದರು. ದೆಹಲಿಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ವಿಶ್ವಕಪ್ ಪಂದ್ಯದ ವೇಳೆ ಅಫ್ಘಾನಿಸ್ತಾನ ತಂಡವನ್ನು ಅಭಿಮಾನಿಗಳು ಹುರಿದುಂಬಿಸಿದ್ದರು. ಪ್ರೇಕ್ಷಕರ ಅಭಿಮಾನಕ್ಕೆ ರಶೀದ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಕೃತಜ್ಞತೆ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟಿಗೆ ಡೇವಿಡ್ ವಾರ್ನರ್ ನಿವೃತ್ತಿ
ಐಪಿಎಲ್‌ನಲ್ಲಿ ಆಡಿದ ರಶೀದ್, ಅಜ್ಮತುಲ್ಲಾ ಒಮರ್ಜಾಯ್, ನೂರ್ ಅಹ್ಮದ್, ಫಜಲ್ಹಕ್ ಫಾರೂಕಿ, ನವೀನ್ ಉಲ್ ಹಕ್, ಮೊಹಮ್ಮದ್ ನಬಿ, ರಹಮಾನುಲ್ಲಾ ಗುರ್ಬಾಜ್ ಮತ್ತು ಗುಲಬ್‌ದಿನ್ ನೈಬ್ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಕಿಂಗ್ಸ್‌ಟೌನ್: 2024ರ ಟಿ20 ವಿಶ್ವಕಪ್ (T20 World Cup) ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ ಅಫ್ಘಾನಿಸ್ತಾನ ತಂಡಕ್ಕೆ ತಾಲಿಬಾನ್ ವಿದೇಶಾಂಗ ಸಚಿವ (Taliban Foreign Minister) ಅಭಿನಂದನೆ ಸಲ್ಲಿಸಿದ್ದಾರೆ.
ಮಂಗಳವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ 8 ರನ್‌ಗಳ ರೋಚಕ ಜಯ ಸಾಧಿಸುವ ಮೂಲಕ ಇತಿಹಾಸದಲ್ಲೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಸೆಮಿಸ್‌ಗೆ ಎಂಟ್ರಿ ಕೊಟ್ಟಿದೆ. ಇದರಿಂದ ಹರ್ಷಗೊಂಡ ತಾಲಿಬಾನ್ ವಿದೇಶಾಂಗ ಸಚಿವ ಕೂಡಲೇ ಅಫ್ಘಾನ್ ತಂಡದ ನಾಯಕ ರಶೀದ್ ಖಾನ್‌ಗೆ (Rashid Khan) ವೀಡಿಯೋ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: T20 World Cup: ಇತಿಹಾಸ ಸೃಷ್ಟಿ, ಚಕ್ರವ್ಯೂಹ ಭೇದಿಸಿದ ಅಫ್ಘಾನ್ ಸೆಮಿಸ್‌ಗೆ – ಆಸ್ಟ್ರೇಲಿಯಾ ಮನೆಗೆ!
ಅಫ್ಘಾನ್‌ನಲ್ಲಿ ಅಭಿಮಾನಿಗಳ ಜಾತ್ರೆ:
ಇನ್ನು ಅಫ್ಘಾನಿಸ್ತಾನದಲ್ಲಿ ಕ್ರಿಕೆಟ್ ಅಭಿಮಾನಿಗಳಸಂಭ್ರಮವಂತೂ ಮುಗಿಲು ಮುಟ್ಟಿದೆ. ಗೆದ್ದ ಖುಷಿಯಲ್ಲಿದ್ದ ಅಫ್ಘಾನ್ ತಂಡದ ಆಟಗಾರರ ಕಣ್ಣಲ್ಲಿ ಖುಷಿಯಿಂದ ಆನಂದಬಾಷ್ಪ ಹರಿಸಿದರೆ, ತಂಡವು ಗೆಲ್ಲುತ್ತಿದ್ದಂತೆಯೇ ತಾಲಿಬಾನ್ ನಾಡಲ್ಲಿ ಜನರು ಖುಷಿಯಿಂದ ರಸ್ತೆಗಿಳಿದು, ಸಂಭ್ರಮಾಚರಣೆ ನಡೆಸಿದರು. ಇದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಅಫ್ಘಾನಿಸ್ತಾನದ ಪೊಲೀಸರು, ನೆರೆದಿದ್ದ ಜನರನ್ನು ಚದುರಿಸಲು ಜಲಫಿರಂಗಿ ಬಳಸಿದರಾದರೂ ಅಭಿಮಾನಿಗಳ ಸಂಭ್ರಮವನ್ನು ತಡೆಯಲಾಗಲಿಲ್ಲ. ಇದನ್ನೂ ಓದಿ: 24 ರನ್‌ಗಳ ಗೆಲುವು, ಸೆಮಿಗೆ ಎಂಟ್ರಿ – ವಿಶ್ವಕಪ್ ಫೈನಲ್ ಸೋಲಿಗೆ ಸೇಡು ತೀರಿಸಿದ ಭಾರತ
ಅಮೆರಿಕದ ಕಿಂಗ್ಸ್‌ಟೌನ್‌ನ ಅರ್ನೋಸ್ ವೇಲ್ ಮೈದಾನದಲ್ಲಿ ಮಂಗಳವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ ಕೇವಲ 115 ರನ್ ಗಳಿಸಿತ್ತು. ನಂತರ ಪಂದ್ಯಕ್ಕೆ ಮಳೆ ಅಡ್ಡಿಯುಂಟಾದ್ದರಿಂದ ಬಾಂಗ್ಲಾದೇಶ ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ 19 ಓವರ್‌ಗಳಲ್ಲಿ 114 ರನ್‌ಗಳ ಅಲ್ಪ ಮೊತ್ತದ ಗುರಿ ಪಡೆದಿತ್ತು. ಆದ್ರೆ ಅಫ್ಘಾನ್ ಬೌಲರ್‌ಗಳ ದಾಳಿಗೆ ತತ್ತರಿಸಿದ ಬಾಂಗ್ಲಾ 105 ರನ್‌ಗಳಿಗೆ ಆಲೌಟ್ ಆಗಿ ವಿಶ್ವಕಪ್‌ಗೆ ವಿದಾಯ ಹೇಳಿತು.
ಕಿಂಗ್ಸ್‌ಟೌನ್: 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ (Afghanistan) ಕ್ರಿಕೆಟ್ ತಂಡ ಹೊಸ ಇತಿಹಾಸ ಸೃಷ್ಟಿಸಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ 8 ರನ್‌ಗಳ ರೋಚಕ ಜಯ ಸಾಧಿಸುವ ಮೂಲಕ ಇತಿಹಾಸದಲ್ಲೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಸೆಮಿಫೈನಲ್ (T20WC SemiFinal) ಪ್ರವೇಶಿಸಿದೆ. ಆದ್ರೆ ವಿಶ್ವಕಪ್ ಸೆಮಿಸ್ ಪ್ರವೇಶಿಸುವ ಕನಸು ಕಂಡಿದ್ದ ಬಲಿಷ್ಠ ಆಸ್ಟ್ರೇಲಿಯಾ ತಂಡ ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದಿದೆ.
ಕಿಂಗ್ಸ್‌ಟೌನ್‌ನ ಅರ್ನೋಸ್ ವೇಲ್ ಮೈದಾನದಲ್ಲಿ ನಡೆದ ಪಂದ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ ಕೇವಲ 115 ರನ್ ಗಳಿಸಿತ್ತು. ನಂತರ ಪಂದ್ಯಕ್ಕೆ ಮಳೆ ಅಡ್ಡಿಯುಂಟಾದ್ದರಿಂದ ಬಾಂಗ್ಲಾದೇಶ ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ 19 ಓವರ್‌ಗಳಲ್ಲಿ 114 ರನ್‌ಗಳ ಅಲ್ಪ ಮೊತ್ತದ ಗುರಿ ಪಡೆದಿತ್ತು. ಆದ್ರೆ ಅಫ್ಘಾನ್ ಬೌಲರ್‌ಗಳ ದಾಳಿಗೆ ತತ್ತರಿಸಿದ ಬಾಂಗ್ಲಾ 105 ರನ್‌ಗಳಿಗೆ ಆಲೌಟ್ ಆಗಿ ವಿಶ್ವಕಪ್‌ಗೆ ವಿದಾಯ ಹೇಳಿತು. ಇದನ್ನೂ ಓದಿ: ಮಂದಾನ ಬ್ಯಾಟಿಂಗ್ ಕಮಾಲ್ – ಆಫ್ರಿಕಾ ವಿರುದ್ಧ ಕ್ಲೀನ್‍ಸ್ವೀಪ್ ಸಾಧನೆ
ಚೇಸಿಂಗ್ ಆರಂಭಿಸಿದ ಬಾಂಗ್ಲಾ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಗಿ ಅಫ್ಘಾನ್ ಬೌಲರ್‌ಗಳ ದಾಳಿಗೆ ತತ್ತರಿಸಿತು. 6.3 ಓವರ್‌ಗಳಲ್ಲೇ 48 ರನ್‌ಗಳಿಗೆ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಒಂದೆಡೆ ವಿಕೆಟ್ ಕಳೆದುಕೊಳ್ಳುತ್ತಿದ್ದರೂ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ್ದ ಆರಂಭಿಕ ಆಟಗಾರ ಲಿಟ್ಟನ್ ದಾಸ್ 49 ಎಸೆತಗಳಲ್ಲಿ 54 ರನ್‌ಗಳಿಸಿ ನೆರವಾಗಿದ್ದರು. ಆದ್ರೆ ಸಹ ಆಟಗಾರರು ಉತ್ತಮ ಸಾಥ್ ನೀಡದ ಕಾರಣ ಬಾಂಗ್ಲಾ ಕೇವಲ 105 ರನ್‌ಗಳಿಗೆ ಸರ್ವಪತನ ಕಂಡಿತು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಅಫ್ಘಾನ್ ಪರ ರೆಹ್ಮಾನುಲ್ಲಾ ಗುರ್ಬಾಝ್ 55 ಎಸೆತಗಳಲ್ಲಿ 43 ರನ್, ರಶೀದ್ ಖಾನ್ 19 ರನ್, ಇಬ್ರಾಹಿಮ್ 18 ರನ್, ಅಝ್ಮತ್ತುಲ್ಲಾ ಒಮರ್ಝೈ 10 ರನ್‌ಗಳ ಕೊಡುಗೆ ನೀಡಿದರು. ಇದನ್ನೂ ಓದಿ: ಮಂದಾನ ಬ್ಯಾಟಿಂಗ್ ಕಮಾಲ್ – ಆಫ್ರಿಕಾ ವಿರುದ್ಧ ಕ್ಲೀನ್‍ಸ್ವೀಪ್ ಸಾಧನೆ
ರಶೀದ್, ನವೀನ್ ಸಮಬಲ ಪ್ರದರ್ಶನ:
ಬಾಂಗ್ಲಾ ಬ್ಯಾಟರ್‌ಗಳನ್ನ ಕಟ್ಟಿಹಾಕುವಲ್ಲಿ ಮಾರಕ ದಾಳಿ ನಡೆಸಿದ ನವೀನ್ ಉಲ್ ಹಕ್ ಹಾಗೂ ರಶೀದ್ ಖಾನ್ ಸಮಬಲ ಪ್ರದರ್ಶನ ಸಾಧಿಸಿದ್ದಾರೆ. ನವೀನ್ 3.5 ಓವರ್‌ಗಳಲ್ಲಿ 26 ರನ್ ಕೊಟ್ಟು 4 ವಿಕೆಟ್ ಕಿತ್ತರೆ, ರಶೀದ್ ಖಾನ್ 4 ಓವರ್‌ಗಳಲ್ಲಿ 23 ರನ್ ಕೊಟ್ಟು 4 ವಿಕೆಟ್ ಉರುಳಿಸಿದರು. ಫಸಲ್‌ಹಕ್ ಫರೂಕಿ ಮತ್ತು ಗುಲ್ಬದೀನ್ ನೈಬ್ ತಲಾ ಒಂದೊಂದು ವಿಕೆಟ್ ಕಿತ್ತರು. ಇದನ್ನೂ ಓದಿ: 24 ರನ್‌ಗಳ ಗೆಲುವು, ಸೆಮಿಗೆ ಎಂಟ್ರಿ – ವಿಶ್ವಕಪ್ ಫೈನಲ್ ಸೋಲಿಗೆ ಸೇಡು ತೀರಿಸಿದ ಭಾರತ