Tag: afghanistan

  • 7 ಟಿ20 ಆಡಿದ 16 ವರ್ಷದ ಅಫ್ಘಾನ್ ಆಟಗಾರ 4 ಕೋಟಿಗೆ ಸೇಲ್!

    7 ಟಿ20 ಆಡಿದ 16 ವರ್ಷದ ಅಫ್ಘಾನ್ ಆಟಗಾರ 4 ಕೋಟಿಗೆ ಸೇಲ್!

    ಬೆಂಗಳೂರು: 2018 ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ ಎರಡನೇ ದಿನವು ಹಲವು ಅಚ್ಚರಿಯ ಬಿಡ್‍ಗಳಿಗೆ ಕಾರಣವಾಗಿದ್ದು, ಅಫ್ಘಾನಿಸ್ತಾನದ 16 ವರ್ಷದ ಆಟಗಾರನಿಗೆ ಈ ಬಾರಿ ಜಾಕ್ ಪಾಟ್ ಹೊಡೆದಿದೆ.

    ನೆರೆಯ ರಾಷ್ಟ್ರ ಅಫ್ಘಾನಿಸ್ತಾನದ ಯುವ ಆಟಗಾರ 16 ವರ್ಷದ ಮುಜೀಬ್ ಜಾಡ್ರನ್ ಅವರನ್ನು ಬರೋಬ್ಬರಿ ನಾಲ್ಕು ಕೋಟಿ ರೂ. ಗಳಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ಖರೀದಿಸಿದೆ. ಇದರೊಂದಿಗೆ ಈ ಬಾರಿಯ ಐಪಿಎಲ್‍ನಲ್ಲಿ ರಶೀದ್ ಖಾನ್ (09 ಕೋಟಿ ರೂ.), ಮೊಹಮ್ಮದ್ ನಬಿ (1 ಕೋಟಿ ರೂ.) ಸನ್ ರೈಸರ್ಸ್ ಹೈದರಾಬಾದ್ ತಂಡದ ಪಾಲದರೆ ಅಫ್ಘಾನ್ ನ ಮೂರನೇ ಆಟಗಾರನಾಗಿ ಮುಜೀಬ್ ಮಾರಾಟವಾದರು.

    ಹರಾಜು ಪ್ರಕ್ರಿಯೆಯಲ್ಲಿ 50 ಲಕ್ಷ ರೂ. ಮೂಲ ಬೆಲೆ ಹೊಂದಿದ್ದ ಮಜೀಬ್ ಜಾಡ್ರನ್ ರನ್ನು ತೀವ್ರ ಪೈಪೋಟಿಯ ನಡುವೆ ನಾಲ್ಕು ಕೋಟಿ ರೂ. ಗಳಿಗೆ ಬಿಡ್ ಮಾಡಿ ಪಂಜಾಬ್ ಖರೀದಿಸಿತು. 2001ರ ಮಾರ್ಚ್ 28 ರಂದು ಜನಿಸಿದ ಮುಜೀಬ್ ಬಲಗೈ ಆಫ್ ಬ್ರೇಕ್ ಸ್ಪಿನ್ನರ್ ಆಗಿದ್ದು, 21 ನೇ ಶತಮಾನದಲ್ಲಿ ಹುಟ್ಟಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

    ಮುಜೀಬ್ ಜಾಡ್ರನ್ ಸಾಧನೆ: 2017 ಡಿಸೆಂಬರ್ 05 ದಂದು ಐಲ್ರ್ಯಾಂಡ್ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ ಮುಜೀಬ್ ಇದುವರೆಗೂ 3 ಪಂದ್ಯಗಳನ್ನು ಆಡಿದ್ದು, 3.86 ಎಕನಾಮಿ ಯೊಂದಿಗೆ ಏಳು ವಿಕೆಟ್ ಉರುಳಿಸಿದ್ದರೆ. ಟಿ20 ಮಾದರಿಯಲ್ಲಿ 7 ಪಂದ್ಯಗಳಲ್ಲಿ ಆಡಿದ್ದು 6.71 ಎಕನಾಮಿಯೊಂದಿಗೆ 5 ವಿಕೆಟ್ ಪಡೆದಿದ್ದಾರೆ. 2017 ಡಿಸೆಂಬರ್ 02 ರಂದು ಕೊನೆಯ ಟಿ20 ಪಂದ್ಯವನ್ನು ಆಡಿದ್ದಾರೆ. ಐಸಿಸಿ ಅಂಡರ್ 19 ತಂಡದಲ್ಲಿ ಅಫ್ಘಾನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

    ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದ ಅಂಡರ್ 19 ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಅಫ್ಘಾನಿಸ್ತಾನ ಪಾಕ್ ಸೋಲಿಸಿ ಪ್ರಶಸ್ತಿ ಜಯಿಸಿತ್ತು. ಈ ಟೂರ್ನಿಯಲ್ಲಿ ಒಟ್ಟು 20 ವಿಕೆಟ್ ಮುಜೀಬ್ ಪಡೆದಿದ್ದರು. ನಂತರ ಬಾಂಗ್ಲಾ ವಿರುದ್ಧ ಸರಣಿಯಲ್ಲಿ ಒಟ್ಟು 17 ವಿಕೆಟ್ ಕಬಳಿಸಿ ಟೂರ್ನಿಯಲ್ಲಿ ಮಿಂಚಿದ್ದರು.

  • ಮತ್ತೊಮ್ಮೆ ತನ್ನ ಮಾನವನ್ನು ತಾನೇ ಹರಾಜು ಹಾಕಿದ ಪಾಕ್!

    ಮತ್ತೊಮ್ಮೆ ತನ್ನ ಮಾನವನ್ನು ತಾನೇ ಹರಾಜು ಹಾಕಿದ ಪಾಕ್!

    ಇಸ್ಲಾಮಾಬಾದ್: ಪಾಕಿಸ್ತಾನ ಮತ್ತೊಮ್ಮೆ ತನ್ನ ಮಾನವನ್ನು ತಾನೇ ಹರಾಜು ಹಾಕಿ ಸಾಮಾಜಿಕ ಜಾಲತಾಣದಲ್ಲಿ ನಗೆಪಾಟಲಿಗೆ ಗುರಿಯಾಗಿದೆ.

    ಪಾಕಿಸ್ತಾನ ಸರ್ಕಾರ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ದೇಶದ ಪಾರಂಪರೆಯ ತಾಣಗಳ ವಿಡಿಯೋದಲ್ಲಿ ಅಫ್ಘಾನಿಸ್ತಾನದ ಮಸೀದಿಯನ್ನು ಪ್ರಕಟಿಸಿ ಎಡವಟ್ಟು ಮಾಡಿಕೊಂಡಿದೆ.

    ಪಾಕ್ ಸರ್ಕಾರದ ಅಧಿಕೃತ ಟ್ವಿಟ್ಟರ್ ಖಾತೆ ಯಲ್ಲಿ ಒಂದು ವಿಡಿಯೋ ಅಪ್ಲೋಡ್ ಆಗಿತ್ತು. ಈ ಪಾರಂಪರೆಯ ತಾಣಗಳನ್ನು ವಿವರಿಸುವ ವಿಡಿಯೋ ಗೆ ದೇಶದ ನಾಗರಿಕತೆ, ಪರಂಪರೆ, ಸಂಸ್ಕೃತಿಯನ್ನು ತೋರಿಸುವ ಸುಂದರ ದೃಶ್ಯಗಳು ಎನ್ನುವ ಶೀರ್ಷಿಕೆಯನ್ನು ಹಾಕಿತ್ತು. ಆದರೆ ಈ ವಿಡಿಯೋದಲ್ಲಿ ಅಫ್ಘಾನಿಸ್ತಾನದ ಪ್ರಸಿದ್ಧ ಹಜರ್ ಅಲಿ ಮಸೀದಿಯ ಫೋಟೋವನ್ನು ತೋರಿಸಿತ್ತು. ಈ ಫೋಟೋ ನೋಡಿದ ಜನರು ಪಾಕ್ ಸರ್ಕಾರದ ಎಡವಟ್ಟನ್ನು ತೋರಿಸಿದ ಕೂಡಲೇ ಈ ವಿಡಿಯೋ ಖಾತೆಯಿಂದ ಈಗ ಡಿಲೀಟ್ ಆಗಿದೆ.

    ಪಾಕ್ ಈ ರೀತಿ ಫೋಟೋ ಎಡವಟ್ಟು ಮಾಡುವುದು ಹೊಸದೆನಲ್ಲ. ಸೆಪ್ಟೆಂಬರ್ ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನ ಪ್ರತಿನಿಧಿ ಮಲೇಹಾ ಲೋಧಿ ಭಾರತದ ಕಾಶ್ಮೀರದಲ್ಲಿ ಹೇಗೆ ಹಿಂಸಾಚಾರ ನಡೆಯುತ್ತಿದೆ ಎನ್ನುವುದನ್ನು ವಿಶ್ವಕ್ಕೆ ತೋರಿಸಲು ಪೆಲೆಟ್ ಗನ್‍ನಿಂದ ಗಾಯಗೊಂಡಿದ್ದ ಯುವತಿ ಫೋಟೋವನ್ನು ಪ್ರದರ್ಶಿಸಿದ್ದರು. ಆದರೆ ಈ ಫೋಟೋ ಗಾಜಾ ಯುದ್ಧ ಸಂದರ್ಭದಲ್ಲಿನ ಫೋಟೋ ಎಂದು ಮಾಧ್ಯಮಗಳು ಪ್ರಕಟಿಸುವ ಮೂಲಕ ಪಾಕ್ ನೈಜ ಬಣ್ಣವನ್ನು ಬಯಲು ಮಾಡಿತ್ತು. ಗಾಜಾ ಯುದ್ಧದ ಸಂದರ್ಭದಲ್ಲಿ ದಾವಿ ಅಬು ಜೊಮ್(17) ಯುವತಿ ಗಾಯಗೊಂಡಿದ್ದಳು. ಈ ಫೋಟೋವನ್ನು ಪಾಕ್ ಅಧಿಕಾರಿ ಪ್ರದರ್ಶಿಸಿದ ಬಳಿಕ ವಿಶ್ವದಾದ್ಯಂತ ಪಾಕ್ ವಿರುದ್ಧ ಟೀಕೆಗಳು ವ್ಯಕ್ತವಾಗಿತ್ತು.

    https://youtu.be/cYL8Bo_YolA

     

  • ಇಂದು ನಡೆಯಲಿದೆ 357 ಕ್ರಿಕೆಟಿಗರ ಅದೃಷ್ಟ ಪರೀಕ್ಷೆ!

    ಇಂದು ನಡೆಯಲಿದೆ 357 ಕ್ರಿಕೆಟಿಗರ ಅದೃಷ್ಟ ಪರೀಕ್ಷೆ!

    ಬೆಂಗಳೂರು: ಐಪಿಎಲ್ ಸೀಸನ್ 10ರ ಹರಾಜು ಪ್ರಕ್ರಿಯೆ ಇಂದು ಬೆಂಗಳೂರಿನ ರಿಟ್ಜ್ ಕಾರ್ಲಟನ್ ಹೋಟೆಲ್‍ನಲ್ಲಿ ನಡೆಯಲಿದೆ. ಈ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 357 ಕ್ರಿಕೆಟಿಗರು ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ತಿದ್ದು, ಇದರಲ್ಲಿ 227 ಮಂದಿ ಭಾರತೀಯ ಆಟಗಾರರೇ ಇದ್ದಾರೆ.

    ಉಳಿದಂತೆ 130 ಮಂದಿ ವಿದೇಶಿ ಆಟಗಾರರು ಹರಾಜಿಗೆ ಲಭ್ಯ ಇದ್ದಾರೆ. ಇದರಲ್ಲಿ ಅಫ್ಘಾನಿಸ್ತಾನದ ಐವರು ಆಟಗಾರರು ಹರಾಜಿಗೆ ಇರೋದು ಈ ಬಾರಿ ವಿಶೇಷ. ಐಪಿಎಲ್ ಫ್ರಾಂಚೈಸಿಗಳಿಗೆ ಬೇಕಾಗಿರೋದು 76 ಆಟಗಾರರು ಮಾತ್ರ. ಐಪಿಎಲ್‍ನ ಒಟ್ಟು 8 ಫ್ರಾಂಚೈಸಿಗಳು ಪಾಲ್ಗೊಳ್ಳುತ್ತಿದ್ದು, ಯಾರು ಯಾವ ತಂಡದ ಪಾಲಾಗಲಿದ್ದಾರೆ ಅನ್ನೊದು ಕುತೂಹಲ ಮೂಡಿಸಿದೆ. ಎಲ್ಲರ ಕಣ್ಣು ಇಂಗ್ಲೆಂಡ್‍ನ ಬೆನ್ ಸ್ಟೋಕ್ಸ್, ನ್ಯೂಜಿಲೆಂಡ್‍ನ ಗ್ರಾಂಡ್‍ಹೋಮ್, ಆಫ್ರಿಕಾದ ಕಾಗಿಸೋ ರಬಾಡಾ, ಇಮ್ರಾನ್ ತಾಹೀರ್, ಲಂಕಾದ ಅಸಿಲಾ ಗುಣರತ್ನೆ, ಭಾರತದ ಇಶಾಂತ್ ಶರ್ಮಾ ಮೇಲಿದೆ.

    ಇನ್ನು ಆಟಗಾರರನ್ನು ಕೊಳ್ಳಲು ಯಾವ ಯಾವ ಫ್ರಾಂಚೈಸಿ ಬಳಿ ಎಷ್ಟೆಷ್ಟು ಹಣ ಇದೆ ಅನ್ನೋದನ್ನು ನೋಡೋದಾದ್ರೆ,

    1. ಕಿಂಗ್ಸ್ ಇಲೆವೆನ್ ಪಂಜಾಬ್ – 23.35 ಕೋಟಿ
    2. ಡೆಲ್ಲಿ ಡೇರ್ ಡೆವಿಲ್ಸ್ – 21.5 ಕೋಟಿ
    3. ಸನ್ ರೈಸರ್ಸ್ ಹೈದ್ರಾಬಾದ್ – 20.9 ಕೋಟಿ
    4. ಕೊಲ್ಕೊತಾ ನೈಟ್ ರೈಡರ್ಸ್ – 19.75 ಕೋಟಿ
    5. ಜೈಸಿಂಗ್ ಪುಣೆ ಸೂಪರ್ ಜೈಂಟ್ಸ್ – 19.01 ಕೋಟಿ
    6. ಗುಜರಾತ್ ಲಯನ್ಸ್ – 14.35 ಕೋಟಿ
    7. ರಾಯಲ್ ಚಾಲೆಂಜರ್ಸ್ ಬೆಂಗಳೂರು – 12.82 ಕೋಟಿ
    8. ಮುಂಬೈ ಇಂಡಿಯನ್ಸ್ – 11.55 ಕೋಟಿ