Tag: afghanistan

  • ವಿಮಾನದಿಂದ ಬಿದ್ದವರ ಗುರುತು ಪತ್ತೆ- ಮೂವರಲ್ಲಿ ಒಬ್ಬ ಯುವ ಫುಟ್‍ಬಾಲ್ ಆಟಗಾರ

    ವಿಮಾನದಿಂದ ಬಿದ್ದವರ ಗುರುತು ಪತ್ತೆ- ಮೂವರಲ್ಲಿ ಒಬ್ಬ ಯುವ ಫುಟ್‍ಬಾಲ್ ಆಟಗಾರ

    ಕಾಬೂಲ್: ಅಘ್ಘಾನಿಸ್ತಾನ ತಾಲಿಬಾನಿಗಳ ಕೈವಶವಾಗುತ್ತಿದ್ದಂತೆ ಜನ ಭಯಗೊಂಡು ದೇಶ ತೊರೆಯಲು ಸಿಕ್ಕ ಸಿಕ್ಕ ವಿಮಾನ ಹತ್ತಲು ಪ್ರಾರಂಭಿಸಿದ್ದರು. ಈ ವೇಳೆ ಅಮೆರಿಕಾಗೆ ತೆರಳಲುತ್ತಿದ್ದ ವಿಮಾನ ಟೇಕಾಫ್ ಗೊಂಡ ಕೆಲವೇ ನಿಮಿಷಗಳಲ್ಲಿ ವಿಮಾನದ ಮೇಲಿಂದ ಮೂವರು ಬಿದ್ದಿದ್ದರು. ಇದೀಗ ಅವರ ಗುರುತು ಪತ್ತೆಯಾಗಿದ್ದು, ಮೂವರಲ್ಲಿ ಓರ್ವ ಅಘ್ಘಾನ್‍ನ ಯುವ ಫುಟ್‍ಬಾಲ್ ಆಟಗಾರ ಎಂದು ವರದಿಯಾಗಿದೆ.

    ಆಗಸ್ಟ್ 16ರಂದು ಅಘ್ಘಾನಿಸ್ತಾನದ ಜನರು ವಿಮಾನ ನಿಲ್ದಾಣಗಳತ್ತ ಆಗಮಿಸಿ ವಿಮಾನಗಳನ್ನೇರಿ ದೇಶ ತೊರೆಯಲು ಪ್ರಯತ್ನಿಸುತ್ತಿದ್ದರು. ಈ ವೇಳೆ ವಿಮಾನದಿಂದ ಮೂವರು ಕೆಳಗೆ ಬಿದ್ದಿರುವ ಬಗ್ಗೆ ವರದಿಯಾಗಿತ್ತು. ಆ ಮೂವರಲ್ಲಿ ಒಬ್ಬರು ಶಫೀವುಲ್ಲಾ ಮತ್ತೊಬ್ಬರು ಫಿದಾ ಮೊಹಮ್ಮದ್ ಎಂದು ಗುರುತು ಪತ್ತೆಯಾಗಿತ್ತು. ಬಳಿಕ ಇದೀಗ ಇನ್ನೊಬ್ಬರ ಗುರುತು ಕೂಡ ಪತ್ತೆಯಾಗಿದ್ದು ಅವರನ್ನು ಅಘ್ಘಾನಿಸ್ತಾನದ ಯುವ ಫುಟ್‍ಬಾಲ್ ಆಟಗಾರ ಝಾಕಿ ಅನ್ವಾರಿ ಎಂದು ಗುರುತಿಸಲಾಗಿದೆ.

    ಈ ಬಗ್ಗೆ ಅಘ್ಘಾನಿಸ್ತಾನದ ರಾಷ್ಟ್ರೀಯ ಫುಟ್‍ಬಾಲ್ ತಂಡ ಯುವ ಆಟಗಾರರಾದ ಝಾಕಿ ಅನ್ವಾರಿ ಅವರ ಸಾವಿನ ಬಗ್ಗೆ ದೃಢಪಡಿಸಿ ಸಂತಾಪ ಸೂಚಿಸಿದೆ. ಇದನ್ನೂ ಓದಿ: “ಜೋರಾದ ಸದ್ದು ಕೇಳಿಸ್ತು.. ನೋಡಿದ್ರೆ ಮನೆ ಮೇಲೆ ಇಬ್ರು ಬಿದ್ದಿದ್ರು”

    ಅಮೆರಿಕಾದ ಪ್ಲೇನ್ ಟೇಕಾಫ್ ಗೊಂಡ ಕೆಲವೇ ನಿಮಿಷಗಳಲ್ಲಿ ಮೇಲಿಂದ ಇಬ್ಬರು ಬೀಳುವ ಭಯಾನಕ ದೃಶ್ಯ ಮೊಬೈಲ್ ಗಳಲ್ಲಿ ಸೆರೆಯಾಗಿತ್ತು. ಅಂದು ವಿಮಾನದಿಂದ ಕೆಳಗೆ ಬಿದ್ದವರ ಗುರುತು ಪತ್ತೆಯಾಗಿದೆ.

    ವಲಿ ಸಾಲೆಕ್ ಎಂಬವರ ಮನೆ ಮೇಲೆ ಬಿದ್ದು ಸಾವನ್ನಪ್ಪಿದ್ದಾರೆ. ಸೋಮವಾರ ಮಧ್ಯಾಹ್ನ ಎರಡು ಗಂಟೆ ನಂತ್ರ ವಿಶ್ರಾಂತಿ ಪಡೆಯುತ್ತಿದ್ದೆ. ಆಗ ಮೇಲಿನಿಂದ ಏನೋ ಬಿದ್ದಂತೆ ಆಯ್ತು. ನಾವು ಟೈರ್ ಸ್ಫೋಟಗೊಂಡು ಮನೆಯ ಮೇಲೆ ಬಂದಿದೆಯಾ ಅಂತ ನೋಡಲು ಹೋದೆ. ನನ್ನೊಂದಿಗೆ ಮಗಳು ಮತ್ತು ಪತ್ನಿ ಸಹ ಬಂದರು. ಮೇಲೆ ನೋಡಿದ್ರೆ ಇಬ್ಬರ ಶವಗಳು ಎರಡು ತುಂಡಾಗಿದ್ದವು. ಈ ಭೀಕರ ದೃಶ್ಯ ಕಂಡ ಪತ್ನಿ ಮತ್ತು ಮಗಳು ಮೂರ್ಛೆ ಹೋದರು ಎಂದು ವಲಿ ಹೇಳ್ತಾರೆ.  ಇದನ್ನೂ ಓದಿ: ಅಘ್ಘಾನ್ ಕ್ರಿಕೆಟ್ ಮಂಡಳಿ ವಶಕ್ಕೆ ತಾಲಿಬಾನ್ ಕಸರತ್ತು

    ಸ್ಥಳೀಯರ ಸಹಾಯದಿಂದ ಎರಡೂ ಶವಗಳನ್ನು ಸಮೀಪದ ಮಸೀದಿ ಬಳಿ ತೆಗೆದುಕೊಂಡು ಹೋಗಲಾಯ್ತು. ಅಲ್ಲಿ ಇಬ್ಬರ ಜೇಬುಗಳನ್ನ ಪರಿಶೀಲಿಸಿದಾಗ ಅವರ ಗುರುತು ಪತ್ತೆಯಾಯ್ತು. ಒಬ್ಬರು ಶಫೀವುಲ್ಲಾ, ಮತ್ತೊಬ್ಬರು ಫಿದಾ ಮೊಹಮ್ಮದ್. ಶಫೀವುಲ್ಲಾ ದಾಖಲೆ ಆತ ವೈದ್ಯ ಅಂತ ಗೊತ್ತಾಯ್ತು. ಇಬ್ಬರ 30 ವರ್ಷದೊಳಗಿನ ಯುವಕರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ರಕ್ತಪಾತ ತಡೆಗಾಗಿ ದೇಶ ತೊರೆದೆ- ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ

  • ಅಘ್ಘಾನ್ ಕ್ರಿಕೆಟ್ ಮಂಡಳಿ ವಶಕ್ಕೆ ತಾಲಿಬಾನ್ ಕಸರತ್ತು

    ಅಘ್ಘಾನ್ ಕ್ರಿಕೆಟ್ ಮಂಡಳಿ ವಶಕ್ಕೆ ತಾಲಿಬಾನ್ ಕಸರತ್ತು

    ಕಾಬೂಲ್: ಅಘ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ ಮುಂದುವರಿದಿದೆ. ಇದೀಗ ಅಘ್ಘಾನ್ ಕ್ರಿಕೆಟ್ ಮಂಡಳಿಯನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲು ತಾಲಿಬಾನಿಗಳು ಕಸರತ್ತು ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

    ತಾಲಿಬಾನಿಗಳು ಅಘ್ಘಾನಿಸ್ತಾನ್ ಕ್ರಿಕೆಟ್ ಮಂಡಳಿಗೆ ಮುತ್ತಿಗೆ ಹಾಕಿ ಅಲ್ಲಿನ ಮಾಜಿ ಕ್ರಿಕೆಟಿಗರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದ್ದು, ಕೆಲದಿನಗಳ ಹಿಂದೆ ಕ್ರಿಕೆಟ್ ತಂಡಕ್ಕೂ ತಾಲಿಬಾನಿಗಳು ಕಾಟ ಕೊಡುವ ಬಗ್ಗೆ ಅಲ್ಲಿನ ಕ್ರಿಕೆಟ್ ಆಟಗಾರರು ತಮ್ಮ ನೋವು ತೋಡಿಕೊಂಡಿದ್ದರು. ಇದನ್ನೂ ಓದಿ: ಐಸ್‍ಕ್ರೀಮ್ ಸವಿದು, ಜಿಮ್ ಮಾಡಿ ಫುಲ್ ಎಂಜಾಯ್ ಮೂಡ್‍ನಲ್ಲಿ ತಾಲಿಬಾನಿಗಳು

    ತಾಲಿಬಾನ್ ಉಗ್ರರು ಅಘ್ಘಾನಿಸ್ತಾನದ ಎಲ್ಲಾ ಕ್ರಿಕೆಟ್ ಸ್ಟೇಡಿಯಂಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹೀಗಾಗಿ ಅಘ್ಘಾನಿಸ್ತಾನದ ಕ್ರಿಕೆಟಿಗರ ಭವಿಷ್ಯ ಅಪಾಯಕ್ಕೆ ಸಿಲುಕಿದೆ. ಈ ನಡುವೆ ಅಘ್ಘಾನಿಸ್ತಾನ ತಂಡ ಮುಂಬರುವ ಟಿ20 ವಿಶ್ವಕಪ್‍ಗೂ ಅರ್ಹತೆ ಪಡೆದುಕೊಂಡಿದೆ.

    ಅಘ್ಘಾನಿಸ್ತಾನದ ಸ್ಟಾರ್ ಕ್ರಿಕೆಟರ್ ರಶೀದ್ ಖಾನ್, ಅಘ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ವಶಕ್ಕೆ ತೆಗೆದುಕೊಂಡಿದ್ದಾರೆ. ಜನರು ಭಯ ಭೀತಿಯಿಂದ ದೇಶ ತೊರೆಯುತ್ತಿದ್ದಾರೆ. ಇವೆಲ್ಲವನ್ನೂ ನೋಡಿ ನನಗೆ ನಿದ್ದೆ ಮಾಡಲಾಗುತ್ತಿಲ್ಲ. ದಯವಿಟ್ಟು ಎಲ್ಲರೂ ನಮಗಾಗಿ ಪ್ರಾರ್ಥಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಮಹಿಳೆಯರು ಕೆಲಸ ಮಾಡಬಹುದು, ಮುಸ್ಲಿಂ ಕಾನೂನುಗಳ ವ್ಯಾಪ್ತಿಯಲ್ಲಷ್ಟೇ: ತಾಲಿಬಾನ್

  • ಜೋರಾದ ಸದ್ದು ಕೇಳಿಸ್ತು.. ನೋಡಿದ್ರೆ ಮನೆ ಮೇಲೆ ಇಬ್ರು ಬಿದ್ದಿದ್ರು!

    ಜೋರಾದ ಸದ್ದು ಕೇಳಿಸ್ತು.. ನೋಡಿದ್ರೆ ಮನೆ ಮೇಲೆ ಇಬ್ರು ಬಿದ್ದಿದ್ರು!

    – ವಿಮಾನದಿಂದ ಕೆಳಗೆ ಬಿದ್ದವರನ್ನ ಕಂಡ ವ್ಯಕ್ತಿಯ ಮಾತು

    ಕಾಬೂಲ್: ಆಗಸ್ಟ್ 16ರ ಮಧ್ಯಾಹ್ನ ಜೋರಾದ ಸದ್ದು ಕೇಳಿಸಿತು. ಮನೆಯ ಮೇಲೆ ಹೋಗಿ ನೋಡಿದ್ರೆ ಇಬ್ಬರ ಶವಗಳು ಎರಡು ತುಂಡಾಗಿರೋದು ಕಂಡು ಬಂತು ಎಂದು ವಿಮಾನದಿಂದ ಕೆಳಗೆ ಬಿದ್ದವರನ್ನ ಕಂಡ ವ್ಯಕ್ತಿ ಹೇಳಿದ್ದಾರೆ.

    ಅಫ್ಘಾನಿಸ್ತಾನ ತಾಲಿಬಾನಿಗಳ ಕೈವಶವಾಗುತ್ತಲೇ ಭಯಗೊಂಡ ಜನ ದೇಶ ತೊರೆಯಲು ಆರಂಭಿಸಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ತಾಲಿಬಾನಿಗಳ ಕ್ರೌರ್ಯದ ವರದಿಗಳು ಪ್ರಕಟವಾಗುತ್ತಿವೆ. ಅಗಸ್ಟ್ 16ರಂದು ಅಫ್ಘಾನಿಸ್ತಾನದ ಜನರು ವಿಮಾನ ನಿಲ್ದಾಣಗಳತ್ತ ಆಗಮಿಸಿ, ಸಿಕ್ಕ ಸಿಕ್ಕ ಪ್ಲೇನ್ ಹತ್ತಲು ಆರಂಭಿಸಿದ್ದರು. ಅಮೆರಿಕಾದ ಪ್ಲೇನ್ ಟೇಕಾಫ್ ಗೊಂಡ ಕೆಲವೇ ನಿಮಿಷಗಳಲ್ಲಿ ಮೇಲಿಂದ ಇಬ್ಬರು ಬೀಳುವ ಭಯಾನಕ ದೃಶ್ಯ ಮೊಬೈಲ್ ಗಳಲ್ಲಿ ಸೆರೆಯಾಗಿತ್ತು. ಅಂದು ವಿಮಾನದಿಂದ ಕೆಳಗೆ ಬಿದ್ದವರ ಗುರುತು ಪತ್ತೆಯಾಗಿದೆ. ಇದನ್ನೂ ಓದಿ: ತಾಲಿಬಾನ್ ಉಗ್ರರಿಗಾಗಿ ಕಾಯುತ್ತಿದ್ದೇನೆ, ನನ್ನನ್ನು ಕೊಲ್ಲುತ್ತಾರೆ: ಅಫ್ಘಾನಿಸ್ತಾನದ ಮಹಿಳಾ ಮೇಯರ್

    ವಲಿ ಸಾಲೆಕ್ ಎಂಬವರ ಮನೆ ಮೇಲೆ ಬಿದ್ದು ಸಾವನ್ನಪ್ಪಿದ್ದಾರೆ. ಸೋಮವಾರ ಮಧ್ಯಾಹ್ನ ಎರಡು ಗಂಟೆ ನಂತ್ರ ವಿಶ್ರಾಂತಿ ಪಡೆಯುತ್ತಿದ್ದೆ. ಆಗ ಮೇಲಿನಿಂದ ಏನೋ ಬಿದ್ದಂತೆ ಆಯ್ತು. ನಾವು ಟೈರ್ ಸ್ಫೋಟಗೊಂಡು ಮನೆಯ ಮೇಲೆ ಬಂದಿದೆಯಾ ಅಂತ ನೋಡಲು ಹೋದೆ. ನನ್ನೊಂದಿಗೆ ಮಗಳು ಮತ್ತು ಪತ್ನಿ ಸಹ ಬಂದರು. ಮೇಲೆ ನೋಡಿದ್ರೆ ಇಬ್ಬರ ಶವಗಳು ಎರಡು ತುಂಡಾಗಿದ್ದವು. ಈ ಭೀಕರ ದೃಶ್ಯ ಕಂಡ ಪತ್ನಿ ಮತ್ತು ಮಗಳು ಮೂರ್ಛೆ ಹೋದರು ಎಂದು ವಲಿ ಹೇಳ್ತಾರೆ. ಇದನ್ನೂ ಓದಿ: ರಕ್ತಪಾತ ತಡೆಗಾಗಿ ದೇಶ ತೊರೆದೆ- ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ

    https://www.youtube.com/watch?v=2fj1FGePoZE

    ಸ್ಥಳೀಯರ ಸಹಾಯದಿಂದ ಎರಡೂ ಶವಗಳನ್ನು ಸಮೀಪದ ಮಸೀದಿ ಬಳಿ ತೆಗೆದುಕೊಂಡು ಹೋಗಲಾಯ್ತು. ಅಲ್ಲಿ ಇಬ್ಬರ ಜೇಬುಗಳನ್ನ ಪರಿಶೀಲಿಸಿದಾಗ ಅವರ ಗುರುತು ಪತ್ತೆಯಾಯ್ತು. ಒಬ್ಬರು ಶಫೀವುಲ್ಲಾ, ಮತ್ತೊಬ್ಬರು ಫಿದಾ ಮೊಹಮ್ಮದ್. ಶಫೀವುಲ್ಲಾ ದಾಖಲೆ ಆತ ವೈದ್ಯ ಅಂತ ಗೊತ್ತಾಯ್ತು. ಇಬ್ಬರ 30 ವರ್ಷದೊಳಗಿನ ಯುವಕರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಪ್ರಜಾಪ್ರಭುತ್ವ ಸರ್ಕಾರ ಇಲ್ಲ, ಷರಿಯಾ ಕಾನೂನುಗಳೇ ಜಾರಿ – ತಾಲಿಬಾನ್

  • ತಾಲಿಬಾನಿಗಳನ್ನ RSS, ಬಜರಂಗದಳಕ್ಕೆ ಹೋಲಿಸಿದ ಕವಿ ಮುನ್ವರ್ ರಾಣಾ

    ತಾಲಿಬಾನಿಗಳನ್ನ RSS, ಬಜರಂಗದಳಕ್ಕೆ ಹೋಲಿಸಿದ ಕವಿ ಮುನ್ವರ್ ರಾಣಾ

    ನವದೆಹಲಿ: ತಾಲಿಬಾನಿಗಳನ್ನು ಆರ್‍ಎಸ್‍ಎಸ್ ಮತ್ತು ಬಜರಂಗದಳಕ್ಕೆ ಹೋಲಿಕೆ ಮಾಡಿ ಕವಿ ಮುನ್ವರ್ ರಾಣಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಅಫ್ಘಾನಿಸ್ತಾನಕ್ಕಿಂತ ಭಾರತದಲ್ಲಿಯೇ ಹೆಚ್ಚು ಕ್ರೂರತೆ ಇದೆ. ತಾಲಿಬಾನಿಗಳು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿರುವ ವಿಚಾರ ಅಫ್ಘಾನಿಸ್ತಾನದ ಆಂತರಿಕ ವಿಚಾರ. ತಾಲಿಬಾನಿ ಅಥವಾ ಅಫ್ಘಾನಿಗಳು ಯಾರೇ ಇರಲಿ, ಅವರೆಲ್ಲರೂ ಒಂದೇ. ಅದೇ ರೀತಿಯಲ್ಲಿ ಭಾರತದಲ್ಲಿಯ ಬಿಜೆಪಿ, ಆರ್‍ಎಸ್‍ಎಸ್ ಮತ್ತು ಬಜರಂಗದಳ ಸಹ ಒಂದೇ ಆಗಿವೆ. ಸಾವಿರ ವರ್ಷಗಳ ಇತಿಹಾಸದ ಪುಟಗಳನ್ನ ತೆಗೆದುನೋಡಿದ್ರೆ ಅಫ್ಘಾನಿಗಳು ಹಿಂದೂಸ್ತಾನಕ್ಕೆ ಎಂದೂ ದ್ರೋಹ ಮಾಡಿಲ್ಲ ಎಂದು ಹೇಳಿದ್ದಾರೆ.

    ಅಫ್ಘಾನಿಸ್ತಾನದ ವಿಷಯವನ್ನು ಭಾರತದಲ್ಲಿ ಚರ್ಚೆ ನಡೆಸುವ ಅವಶ್ಯಕತೆ ಇಲ್ಲ. ಮುಂದೊಂದು ದಿನ ತಾಲಿಬಾನಿಗಳ ಹಿಂದೂಸ್ತಾನದ ಸಹಾಯ ಕೇಳುತ್ತಾರೆ ಮತ್ತು ಭಾರತ ಅವರಿಗೆ ನೆರವು ನೀಡುವ ಸಮಯ ಬರಲಿದೆ. ಭಾರತದ ಮಾಫಿಯಾ ಬಳಿ ತಾಲಿಬಾನಿಗಳಿಗಿಂತ ಹೆಚ್ಚಿನ ಶಸ್ತ್ರಾಸ್ತ್ರಗಳಿವೆ. ತಾಲಿಬಾನಿಗಳು ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡ್ರೆ, ನಮ್ಮಲ್ಲಿ ಮಾಫಿಯಾಗಳನ್ನ ಖರೀದಿಸಲಾಗುತ್ತದೆ ಎಂದಿದ್ದಾರೆ.

    ಔರಂಗಜೇಬ್ ಆಡಳಿತಾವಧಿಯಲ್ಲಿ ಭಾರತ ಅಫ್ಘಾನಿಸ್ತಾನದ ಭಾಗವಾಗಿತ್ತು. ಇಂದು ಮೊಘಲ್ ಚಕ್ರವರ್ತಿಗಳಿದಿದ್ರೆ ಭಾರತ ಸಹ ಅಫ್ಘಾನಿಸ್ತಾನದ ಭಾಗವಾಗಿರುತ್ತಿತ್ತು. ಬ್ರಿಟಿಷರ ಆಳ್ವಿಕೆ ಬಂದಾಗ ಅಫ್ಘಾನರು ಅವರನ್ನ ಮರಕ್ಕೆ ನೇತು ಹಾಕಲು ಆರಂಭಿಸಿದರು. ಹಾಗಾಗಿ ಭಾರತ ಮತ್ತು ಅಫ್ಘಾನಿಸ್ತಾನವನ್ನು ಇಬ್ಭಾಗ ಮಾಡಲಾಯ್ತು.

    ಮೋದಿ ಸರ್ಕಾರ ಅಫ್ಘಾನಿಸ್ತಾನದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಸಂಸತ್ ಭವನ, ರಸ್ತೆ ನಿರ್ಮಿಸಿರೋದನ್ನು ಯಾರೂ ಅಲ್ಲಗಳೆಯುತ್ತಿಲ್ಲ. ತಾಲಿಬಾನಿ ಅಥವಾ ಇನ್ನಾರೇ ಬರಲಿ ಭಾರತದಿಂದ ಅಫ್ಘಾನಿಸ್ತಾನಕ್ಕೆ ಒಳ್ಳೆಯದು ಆಗಿದೆಯೇ ಹೊರತು ಕೆಟ್ಟದ್ದು ಆಗಿಲ್ಲ ಎಂಬ ವಿಷಯವನ್ನು ಅಫ್ಘನ್ನರು ಒಪ್ಪಿಕೊಳ್ಳಬೇಕು ಎಂದು ಮೋದಿ ಸರ್ಕಾರದ ಕೆಲಸಗಳಿಗೆ ಮೆಚ್ಚುಗೆ ಸೂಚಿಸಿದರು.  ಇದನ್ನೂ ಓದಿ: ಮಹಿಳೆಯರು ಕೆಲಸ ಮಾಡಬಹುದು, ಮುಸ್ಲಿಂ ಕಾನೂನುಗಳ ವ್ಯಾಪ್ತಿಯಲ್ಲಷ್ಟೇ: ತಾಲಿಬಾನ್

    ತಾಲಿಬಾನಿಗಳು ಸ್ವಾತಂತ್ರ್ಯ ಸೇನಾನಿ ಅಂದ ಮುಖಂಡ:
    ತಾಲಿಬಾನಿಗಳ ಬಗ್ಗೆ ಮೊದಲಿಗೆ ಸಮಾಜವಾದಿ ಪಕ್ಷದ ಸಂಸದ ಶಫಿಕುರ್ ರಹಮಾನ್ ಬರ್ಖ್ ಒಲವು ವ್ಯಕ್ತಪಡಿಸಿದ್ದಾರೆ. ತಾಲಿಬಾನಿಗಳನ್ನು ಸ್ವಾತಂತ್ರ್ಯ ಸೇನಾನಿಗಳು ಅಂದಿದ್ದಾರೆ. ಬ್ರಿಟಿಷ್ ಆಡಳಿತದಲ್ಲಿ ಭಾರತೀಯರು ಕೂಡ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು. ಅದೇ ರೀತಿ ತಾಲಿಬಾನಿಗಳು ಅಫ್ಘಾನಿಸ್ತಾನದ ಸ್ವಾತಂತ್ರ್ಯಕ್ಕೆ ಹೋರಾಡಿದ್ದಾರೆ ಎಂದು ಹೇಳಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ತಾಲಿಬಾನ್ ಉಗ್ರರ ಸರ್ಕಾರಕ್ಕೆ ಪಾಕಿಸ್ತಾನ, ಚೀನಾ, ಇರಾನ್ ಬೆಂಬಲ

    ತಾಲಿಬಾನಿಗಳನ್ನು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿರೋ ಉತ್ತರ ಪ್ರದೇಶದ ಸಂಭಾಲ್ ಕ್ಷೇತ್ರದ ಎಂಪಿ ಬರ್ಖ್ ವಿರುದ್ಧ ದೇಶದ್ರೋಹ ಕೇಸ್ ದಾಖಲಾಗಿದೆ. ಎರಡನೇಯದಾಗಿ ಎಂಐಎಂ ಅಧ್ಯಕ್ಷ ಸಂಸದ ಅಸಾದುದ್ದೀನ್ ಓವೈಸಿ ಕೂಡ ತಾಲಿಬಾನಿ ಪ್ರೇಮ ಮೆರೆದಿದ್ದಾರೆ. ಭಾರತ ಅಫ್ಘಾನ್‍ನಲ್ಲಿ ಭಾರೀ ಹೂಡಿಕೆ ಮಾಡಿದೆ. ಭಾರತದ ಹೂಡಿಕೆ ವ್ಯರ್ಥವಾಗಬಾರದು. ತಾಲಿಬಾನ್ ಜೊತೆಗೆ ಭಾರತ ಔಪಚಾರಿಕ ಅಥವಾ ಅನೌಪಚಾರಿಕ ಚರ್ಚೆ ನಡೆಸಲಿ. ಭಾರತದ ಬಗ್ಗೆ ತಾಲಿಬಾನಿಗಳಿಗೆ ಉತ್ತಮ ಅಭಿಪ್ರಾಯ ಇದೆ ಎಮದು ತಿಳಿಸಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ – ಭಾರತಕ್ಕೆ ಇರುವ ಸವಾಲುಗಳೇನು?

    ಮತ್ತೊಂದೆಡೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕೂಡ ತಾಲಿಬಾನ್‍ಗೆ ಕೊಂಡಾಡಿದೆ. ತಾಲಿಬಾನಿಗಳು ಅಹಿಂಸಾತ್ಮಕವಾಗಿ ಅಭೂತಪೂರ್ವವಾಗಿ ಅಧಿಕಾರ ಪಡೆದಿದ್ದಾರೆ ಅಂತ ಮೌಲಾನಾ ಸಜ್ಜದ್ ನೋಮಾನಿ ಹೇಳಿದ್ದಾರೆ. ಆದರೆ ಇದು ನೋಮಾನಿ ವೈಯಕ್ತಿಕ ಹೇಳಿಕೆ ಅಂತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಅಂತರ ಕಾಯ್ದುಕೊಂಡಿದೆ. ಇದನ್ನೂ ಓದಿ: ಪ್ರತಿಭಟನಾಕಾರರ ಮೇಲೆ ತಾಲಿಬಾನಿಗಳಿಂದ ಗುಂಡಿನ ದಾಳಿ

  • ಪ್ರಜಾಪ್ರಭುತ್ವ ಸರ್ಕಾರ ಇಲ್ಲ, ಷರಿಯಾ ಕಾನೂನುಗಳೇ ಜಾರಿ – ತಾಲಿಬಾನ್

    ಪ್ರಜಾಪ್ರಭುತ್ವ ಸರ್ಕಾರ ಇಲ್ಲ, ಷರಿಯಾ ಕಾನೂನುಗಳೇ ಜಾರಿ – ತಾಲಿಬಾನ್

    ಕಾಬೂಲ್: ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಸರ್ಕಾರದ ಕಾನೂನು ಜಾರಿಯಾಗುವುದಿಲ್ಲ. ಷರಿಯಾ ಕಾನೂನುಗಳೇ ಜಾರಿಯಾಗಲಿದೆ ಎಂದು ತಾಲಿಬಾನ್ ಹೇಳಿದೆ.

    ಪ್ರಜಾಪ್ರಭುತ್ವ ಸರ್ಕಾರ ಬೀಳಿಸಿದ ಬಳಿಕ ನಾವು ಬದಲಾಗಿದ್ದೇವೆ ಎಂದು ಹೇಳಿದ್ದ ತಾಲಿಬಾನ್ ಈಗ ನಾವು ಷರಿಯಾ ಕಾನೂನುಗಳನ್ನೇ ಜಾರಿ ಮಾಡುತ್ತೇವೆ ಎಂದು ತಿಳಿಸಿದೆ. ಇದನ್ನೂ ಓದಿ: ಉಗ್ರರಿಗೆ ಆಟ, ಮಹಿಳೆಯರಿಗೆ ಪ್ರಾಣ ಸಂಕಟ – ಷರಿಯತ್ ಏನು ಹೇಳುತ್ತದೆ? ತಾಲಿಬಾನ್ ಕಾನೂನು ಏನು? 

    ಮಾಧ್ಯಮಕ್ಕೆ ಸಂದರ್ಶನ ನೀಡಿದ ತಾಲಿಬಾನ್ ಮುಖಂಡ ವಹಿದುಲ್ಲಾ ಹಶೆಮಿ, ಅಫ್ಘಾನಿಸ್ತಾನದಲ್ಲಿ ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆ ಇರುವುದಿಲ್ಲ. ಯಾಕೆಂದರೆ ನಮ್ಮ ದೇಶದಲ್ಲಿ ಅದಕ್ಕೆ ಯಾವುದೇ ನೆಲೆ ಇಲ್ಲ. ದೇಶದಲ್ಲಿ ಷರಿಯಾ ಕಾನೂನು ಅನ್ವಯವಾಗಲಿದೆ ಎಂದು ಹೇಳಿದ್ದಾನೆ.

    ಅಫ್ಘಾನಿಸ್ತಾನದಲ್ಲಿ ಯಾವ ರೀತಿಯ ರಾಜಕೀಯ ವ್ಯವಸ್ಥೆ ಇರಬೇಕು ಎಂಬುದರ ಬಗ್ಗೆ ನಾವು ಯಾವುದೇ ಚರ್ಚೆ ಮಾಡುವುದಿಲ್ಲ. ಈಗಾಗಲೇ ಷರಿಯಾ ಕಾನೂನು ಜಾರಿಗೆ ತರುವ ಬಗ್ಗೆ ನಿರ್ಧಾರ ಸ್ಪಷ್ಟವಾಗಿದೆ ಎಂದಿದ್ದಾನೆ. ಇದನ್ನೂ ಓದಿ: 1,250 ಕೋಟಿ ರೂ. ಜೊತೆ ಘನಿ ಪರಾರಿ – ಈಗ ಯುಎಇಯಲ್ಲಿ ಆಶ್ರಯ


    ಈ ವೇಳೆ ತನ್ನದೇ ಆದ ಸೇನೆಯನ್ನು ಸರ್ಕಾರ ಸ್ಥಾಪಿಸಲಿದೆ. ಈಗಾಗಲೇ ಸರ್ಕಾರದಲ್ಲಿದ್ದ ಸೈನಿಕರ ಪೈಕಿ ಹೆಚ್ಚಿನವರು ಟರ್ಕಿ, ಜರ್ಮನಿ ಮತ್ತು ಇಂಗ್ಲೆಂಡ್‍ನಲ್ಲಿ ತರಬೇತಿ ಪಡೆದಿದ್ದಾರೆ. ಅವರು ಮತ್ತೆ ಸೇನೆಗೆ ಸೇರುವಂತಾಗಲು ನಾವು ಮಾತನಾಡಲಿದ್ದೇವೆ. ಹತ್ತಿರದ ರಾಷ್ಟ್ರಗಳಲ್ಲಿ ಲ್ಯಾಂಡ್ ಆಗಿರುವ ನಮ್ಮ ದೇಶದ ವಾಯುಸೇನಾ ವಿಮಾನಗಳನ್ನು ಆ ರಾಷ್ಟ್ರಗಳು ಶೀಘ್ರವೇ ನಮಗೆ ಹಸ್ತಾಂತರ ಮಾಡಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ವಹಿದುಲ್ಲಾ ಹಶೆಮಿ ಹೇಳಿದ್ದಾನೆ. ಇದನ್ನೂ ಓದಿ: ತಾಲಿಬಾನ್ ಉಗ್ರರಿಗಾಗಿ ಕಾಯುತ್ತಿದ್ದೇನೆ, ನನ್ನನ್ನು ಕೊಲ್ಲುತ್ತಾರೆ: ಅಫ್ಘಾನಿಸ್ತಾನದ ಮಹಿಳಾ ಮೇಯರ್

    ತಾಲಿಬಾನ್ ಆಕ್ರಮಣಕ್ಕೆ ಬೆದರಿ ಕಳೆದ ವಾರ 22 ಮಿಲಿಟರಿ ವಿಮಾನಗಳು, 24 ಹೆಲಿಕಾಪ್ಟರ್ ಗಳ ಮೂಲಕ ನೂರಕ್ಕೂ ಅಧಿಕ ಅಫ್ಘಾನ್ ಸೈನಿಕರು ಉಜ್ಬೇಕಿಸ್ತಾನಕ್ಕೆ ಪಲಾಯನ ಮಾಡಿದ್ದರು.

  • ಐಸ್‍ಕ್ರೀಮ್ ಸವಿದು, ಜಿಮ್ ಮಾಡಿ ಫುಲ್ ಎಂಜಾಯ್ ಮೂಡ್‍ನಲ್ಲಿ ತಾಲಿಬಾನಿಗಳು

    ಐಸ್‍ಕ್ರೀಮ್ ಸವಿದು, ಜಿಮ್ ಮಾಡಿ ಫುಲ್ ಎಂಜಾಯ್ ಮೂಡ್‍ನಲ್ಲಿ ತಾಲಿಬಾನಿಗಳು

    – ಮುಂದಿನ ಪ್ಯಾರಿಸ್ ಒಲಿಂಪಿಕ್ಸ್ ಗೆ ತಯಾರಾಗುತ್ತಿದ್ದಾರೆ ಎಂದ ನೆಟ್ಟಿಗರು

    ಕಾಬೂಲ್: ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆಯುತ್ತಿದ್ದಂತೆ ಫುಲ್ ಎಂಜಾಯ್ ಮೂಡ್‍ನಲ್ಲಿದ್ದು, ಇತ್ತೀಚೆಗಷ್ಟೇ ಅಮ್ಯೂಸ್‍ಮೆಂಟ್ ಪಾರ್ಕ್‍ನಲ್ಲಿ ಮಸ್ತ್ ಮಜಾ ಮಾಡಿದ್ದರು. ಇದೀಗ ಐಸ್ ಕ್ರೀಮ್ ಸವಿದು, ಜಿಮ್ ಮಾಡಿದ ವೀಡಿಯೋಗಳು ವೈರಲ್ ಆಗಿವೆ. ಇದು ಅದೇ ಅಫ್ಘಾನಿಸ್ತಾನದಲ್ಲಿ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ರಾಜಧಾನಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ದುಃಖಕರ ಸ್ಥಿತಿಯನ್ನು ವ್ಯಂಗ್ಯ ಮಾಡಿದಂತಿದೆ.

    ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ತಾಲಿಬಾನಿಗಳು ಫುಲ್ ಎಂಜಾಯ್ ಮೂಡ್‍ನಲ್ಲಿದ್ದಾರೆ. ಈ ಕುರಿತ ವೀಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿವೆ. ಈ ಹಿಂದೆ ಅಮ್ಯೂಸ್‍ಮೆಂಟ್ ಪಾರ್ಕ್‍ನಲ್ಲಿ ಮಕ್ಕಳ ಆಟದ ಕಾರುಗಳನ್ನು ಹತ್ತಿ, ಆಟವಾಡಿ ಖುಷಿಪಟ್ಟಿದ್ದ ವೀಡಿಯೋಗಳು ವೈರಲ್ ಆಗಿದ್ದವು. ಅದರೆ ಇದೀಗ ಐಸ್ ಕ್ರೀಮ್ ಸವಿದು, ಜಿಮ್ ಮಾಡಿರುವ ವೀಡಿಯೋಗಳು ವೈರಲ್ ಆಗಿವೆ. ಆದರೆ ಪಾರ್ಲರ್ ಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಐಸ್ ಕ್ರೀಮ್ ಸವಿಯುವುದರಲ್ಲಿ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ತಾಲಿಬಾನಿಗಳು ಹೇಳಿದ್ದಾರೆ. ಅಲ್ಲದೆ ಐಸ್ ಕ್ರೀಮ್ ಅಂಗಡಿಗೆ ಆಗಮಿಸಿದ ತಾಲಿಬಾನಿಗಳು, ಅವರೇ ವಿವಿಧ ಬಗೆಯ ಐಸ್ ಕ್ರೀಮ್ ಹಾಕಿಕೊಂಡು ಸೇವಿಸಿ ತೆರಳಿದ್ದಾರೆ. ಇದನ್ನೂ ಓದಿ: ಅಮ್ಯೂಸ್‍ಮೆಂಟ್ ಪಾರ್ಕ್‍ನಲ್ಲಿ ಮಕ್ಕಳಂತೆ ಆಟವಾಡಿದ ತಾಲಿಬಾನಿಗಳು

    ಅಮ್ಯೂಸ್‍ಮೆಂಟ್ ಪಾರ್ಕ್‍ಗಳಲ್ಲಿ ಮಕ್ಕಳಂತೆ ಆಟವಾಡುವುದು, ಐಸ್‍ಕ್ರೀಮ್ ಸವಿಯುವುದು, ಜಿಮ್ ಮಾಡುವುದು ಸೇರಿಂದತೆ ಫುಲ್ ಮಜಾ ಮಾಡುತ್ತಿದ್ದಾರೆ. ಇದನ್ನು ಕಂಡ ನೆಟ್ಟಿಗರು ಮುಂದಿನ ಪ್ಯಾರಿಸ್ ಒಲಿಂಪಿಕ್ಸ್ ಗೆ ತಯಾರಾಗುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ. ಇದನ್ನೂ ಓದಿ: 1,250 ಕೋಟಿ ರೂ. ಜೊತೆ ಘನಿ ಪರಾರಿ – ಈಗ ಯುಎಇಯಲ್ಲಿ ಆಶ್ರಯ

    ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಸಂದರ್ಭದಲ್ಲಿ ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ದೃಶ್ಯಗಳನ್ನು ಕಂಡು ಜಗತ್ತು ಭಯದಿಂದಲೇ ನೋಡುತ್ತಿದೆ. ಅಲ್ಲದೆ ತಾಲಿಬಾನ್ ದಂಗೆಕೋರರು ಮನೆಗೆ ಪ್ರವೇಶಿಸುತ್ತಿದ್ದಂತೆ ಮಹಿಳೆಯರ ಆಕ್ರಂದನ ಆಘಾತಕ್ಕೆ ಸಿಲುಕಿಸುತ್ತಿದೆ. ಇಷ್ಟಾದರೂ ತಾಲಿಬಾನಿಗಳು ಮಾತ್ರ ಎಂಜಾಯ್ ಮಾಡುತ್ತ ಕಾಲ ಕಳೆಯುತ್ತಿದ್ದಾರೆ.

  • ಬದಲಾಗಿದ್ದೇವೆ ಅಂತಲೇ ತಾಲಿಬಾನ್ ಹಿಂಸಾಚಾರ – ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ, ಇಬ್ಬರು ಬಲಿ

    ಬದಲಾಗಿದ್ದೇವೆ ಅಂತಲೇ ತಾಲಿಬಾನ್ ಹಿಂಸಾಚಾರ – ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ, ಇಬ್ಬರು ಬಲಿ

    ಕಾಬೂಲ್: ತಾಲಿಬಾನಿಗಳ ಗೋಮುಖ-ವ್ಯಾಘ್ರ ಮುಖವಾಡ ಕಳಚಿದೆ. ನಾವು ಬದಲಾಗಿದ್ದೇವೆ. ನಾವು ಸರ್ವಧರ್ಮ ಸಹಿಷ್ಣುಗಳು, ಹೆಂಗಸರು ಸೇರಿದಂತೆ ಯಾರ ಮೇಲೂ ದೌರ್ಜನ್ಯ, ದಬ್ಬಾಳಿಕೆ ಮಾಡಲ್ಲ ಅಂತೆಲ್ಲಾ ಮಂಗಳವಾರ ಪುಂಖಾನುಪುಂಖವಾಗಿ ಬೊಗಳೆಬಿಟ್ಟಿದ್ದ ತಾಲಿಬಾನಿಗಳ ಸಂಸ್ಕೃತಿ ಮಾರನೇ ದಿನವೇ ಜಾಹೀರಾಗಿದೆ.

    ರಾಜಧಾನಿ ಕಾಬೂಲ್‍ನಲ್ಲಿ ನಾಲ್ವರು ಕಮಾಂಡರ್ ಗಳನ್ನು ಗುಂಡಿಕ್ಕಿ ಕೊಂದಿದ್ದಾರೆ. ತಮ್ಮ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರ ಗುಂಡಿನ ದಾಳಿ ನಡೆಸಿದ್ದಾರೆ. ಇದರಲ್ಲಿ ಇಬ್ಬರು ಬಲಿಯಾಗಿ, ಹಲವಾರು ಮಂದಿ ಗಾಯಗೊಂಡಿದ್ದಾರೆ.

    ಅಫ್ಘಾನಿಸ್ತಾನದಲ್ಲಿ ಇಂದು ಏನೇನಾಗಿದೆ..?
    ಗೋಡೆ ಹತ್ತಿದವನಿಗೆ ಗುಂಡು: ಬೃಹತ್ ಗೋಡೆ ಹತ್ತಿ ಏರ್‍ಪೋರ್ಟ್‍ಗೆ ತಲುಪಲು ಯತ್ನಿಸಿದ ನಾಗರಿಕನೊಬ್ಬನಿಗೆ ತಾಲಿಬಾನ್ ಬಂದೂಕುಧಾರಿ ಗುಂಡು ಹಾರಿಸಿದ್ದಾನೆ. ಬೇಡ ಬೇಡ ಅಂತ ಗೋಗರೆದರೂ ಗುಂಡು ಸಿಡಿಸಿದ್ದಾನೆ. ಬೆಚ್ಚಿದ ನಾಗರಿಕ ಗೋಡೆ ಮೇಲಿಂದ ಬಿದ್ದಿದ್ದಾನೆ. ಇದನ್ನೂ ಓದಿ: ತಾಲಿಬಾನಿಗಳಿಗೆ ಸಂಸದ ಬರ್ಖ್, ಓವೈಸಿ ಸಪೋರ್ಟ್ – ಸ್ವಾತಂತ್ರ್ಯ ಹೋರಾಟಗಾರರಿಗೆ ಉಗ್ರರ ಹೋಲಿಕೆ

    ಇಬ್ಬರಿಗೆ ಗುಂಡೇಟು: ಮತ್ತೊಂದು ಕಡೆ ಜಲಾಲಾಬಾದ್‍ನಲ್ಲಿ ಅಫ್ಘಾನ್ ಬಾವುಟ ತೆರವು ವಿಚಾರವಾಗಿ ಸ್ಥಳೀಯರು ಮತ್ತು ತಾಲಿಬಾನಿಗಳ ಮಧ್ಯೆ ಸಂಘರ್ಷ ನಡೆದಿದೆ. ಪ್ರತಿಭಟನೆಗೆ ಮುಂದಾದ ಸ್ಥಳೀಯರ ಮೇಲೆ ತಾಲಿಬಾನಿಗಳು ಗುಂಡಿನ ದಾಳಿ ಮಾಡಿದ್ದಾರೆ. ಇಬ್ಬರು ಬಲಿಯಾಗಿದ್ದು, 12ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

    ವಿರೋಧಿಸಿದರೆ ಗುಂಡೇಟು: ಮನೆ ಮನೆಗೂ ನುಗ್ತಿರೋ ತಾಲಿಬಾನಿಗಳಿಗೆ ಯಾರಾದರೂ ವಿರೋಧ, ಪ್ರತಿರೋಧ ತೋರಿದರೆ ಒದ್ದು ಮನೆಗೆ ದಬ್ಬುತ್ತಿದ್ದಾರೆ. ಜೊತೆಗೆ, ಮನೆಯ ಮುಂದೆಯೇ ಮಂಡಿಯೂರಿಸಿ ಹಿಂದಿನಿಂದ ಗುಂಡು ಹಾರಿಸಿ ಕೊಲ್ಲುತ್ತಿದ್ದಾರೆ. ಇದನ್ನೂ ಓದಿ: ಪ್ರತಿಭಟನಾಕಾರರ ಮೇಲೆ ತಾಲಿಬಾನಿಗಳಿಂದ ಗುಂಡಿನ ದಾಳಿ

    ತಾಲಿಬಾನ್ ವಿರುದ್ಧ ಪ್ರತಿಭಟನೆ: ತಾಲಿಬಾನಿಗಳ ವಿರುದ್ಧ ಆಫ್ಘನ್ ಜನರೇ ಸೆಟೆದು ನಿಂತಿದ್ದಾರೆ. ನಿಮ್ಮ ದಬ್ಬಾಳಿಕೆ, ದರ್ಬಾರ ಬೇಕಾಗಿಲ್ಲ. ನೀವು ದೇಶ ಬಿಟ್ಟು ತೊಲಗಿ ಅಂತ ಅಫ್ಘಾನ್ ಧ್ವಜ ಹಿಡಿದು, ಬಸ್‍ಗಳನ್ನೇರಿ ಬೃಹತ್ ಸಂಖ್ಯೆಯಲ್ಲಿ ಜನ ಬೀದಿಗೆ ಇಳಿದು ಪ್ರತಿಭಟನೆ ಮಾಡಿದ್ದಾರೆ.

    ಕಾರ್ ಗಳೆಲ್ಲಾ ತಾಲಿಬಾನ್‍ಮಯ: ತಾಲಿಬಾನಿಗಳು ಯಾವ ಮಟ್ಟಕ್ಕೆ ಇಳಿದಿದ್ದಾರೆ ಅಂದರೆ ಯಾವುದೇ ನಗರದಲ್ಲಿ ಕಾರ್‍ಗಳು ಕಂಡರೆ ಸಾಕು ಅವನ್ನು ಕಸಿದುಕೊಂಡು ಅವುಗಳಲ್ಲಿ ಶಸ್ತ್ರಾಸ್ತ್ರ ತುಂಬಿಕೊಂಡು ಮೆರವಣಿಗೆ ಹೊರಟು ಜನರಲ್ಲಿ ಭೀತಿ ಮನೆ ಮಾಡುವಂತೆ ಮಾಡ್ತಿದ್ದಾರೆ.

    ಮಹಿಯರಿಗೆ ಕಿರುಕುಳ: ನಾವು ಮಹಿಳೆಯರನ್ನು ಗೌರವಿಸ್ತೇವೆ. ಷರಿಯಾ ಕಾನೂನಡಿ ಅವರಿಗೂ ಸಮಾನ ಹಕ್ಕುಗಳಿವೆ ಅಂತ ನಿನ್ನೆ ತಾಲಿಬಾನ್ ನಾಯಕರು ಹೇಳಿದ್ದರು. ಆದರೆ, ಇವತ್ತು ತಾಲಿಬಾನಿಗಳಿ ಕಿರುಕುಳ ಕೊಟ್ಟಿರೋದು ವರದಿಯಾಗಿದೆ. ತಾಲಿಬಾನಿಗಳಿಂದ ರಕ್ಷಿಸಿಕೊಳ್ಳಲು ಕೆಲವು ಮಹಿಳೆಯರು ಧರ್ಮದ ಪ್ರಾರ್ಥನೆ ಮಾಡಿದ್ದಾರೆ.  ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಸೇನೆ ಹಿಂಪಡೆದಿದ್ದು ಅಮೆರಿಕಾ ಇತಿಹಾಸದಲ್ಲಿ ಕಪ್ಪು ಚುಕ್ಕೆ: ಬೈಡನ್ ವಿರುದ್ಧ ಟ್ರಂಪ್ ವಾಗ್ದಾಳಿ

    ಕುರ್ಚಿ ಕಾದಾಟ: ಒಂದೆಡೆ ತಾಲಿಬಾನಿಗಳು ಸರ್ಕಾರ ರಚನೆಯಲ್ಲಿ ನಿರತರಾಗಿದ್ದಾರೆ. ಮತ್ತೊಂದೆಡೆ ಅಧ್ಯಕ್ಷ ಅಶ್ರಫ್ ಘನಿ ದೇಶ ತೊರೆದ ಬೆನ್ನಲ್ಲಿ ಉಪಾಧ್ಯಕ್ಷ ಅಮರುಲ್ಲಾ ಸಲೇ ನಾನೇ ಅಧ್ಯಕ್ಷ ಅಂತ ನಿನ್ನೆ ಘೋಷಿಸಿಕೊಂಡಿದ್ದ. ಇಂದು ಘನಿ ಫೋಟೋ ತೆಗೆದು ತನ್ನ ಫೋಟೋ ಹಾಕಿಕೊಂಡಿದ್ದಾನೆ. ಹಣದ ಜೊತೆ ದೇಶ ತೊರೆದಿದ್ದ ಘನಿ, ಯುಎಇಯಲ್ಲಿ ಆಶ್ರಯ ಪಡೆದಿದ್ದಾರೆ.

    ಬರಾದರ್ ಮರು ಪ್ರವೇಶ: ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರಾದರ್ 20 ವರ್ಷಗಳ ಬಳಿಕ ಕತಾರ್‍ನಿಂದ ಕಂದಹಾರ್ ಮೂಲಕ ಕಾಬೂಲ್ ಪ್ರವೇಶಿಸಿದ್ದಾನೆ. ಮೂಲಗಳ ಪ್ರಕಾರ ಈತನೇ ಅಫ್ಘಾನಿಸ್ತಾನದ ಅಧ್ಯಕ್ಷನಾಗುವ ಸಾಧ್ಯತೆ ಇದೆ.

    ಕರ್ಜೈ-ತಾಲಿಬಾನ್ ಭೇಟಿ: ಸರ್ಕಾರ ರಚನೆ ಕಸರತ್ತಿಗೆ ಚುರುಕು ಕೊಟ್ಟಿರೋ ತಾಲಿಬಾನ್, ಕಮಾಂಡರ್ ಅನಸ್ ಹಕ್ಕಾನಿಯನ್ನು ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜೈ ನಿವಾಸಕ್ಕೆ ಕಳಿಸಿ ಮಾತುಕತೆ ನಡೆಸಿದೆ. ಈ ವೇಳೆ ಹಿಂದಿನ ಸರ್ಕಾರ ಪ್ರಮುಖ ಅಧಿಕಾರಿ ಅಬ್ದುಲ್ಲಾ ಅಬ್ದುಲ್ಲಾ ಸಾಥ್ ನೀಡಿದ್ದರು. ಇದನ್ನೂ ಓದಿ: ಮಹಿಳೆಯರು ಕೆಲಸ ಮಾಡಬಹುದು, ಮುಸ್ಲಿಂ ಕಾನೂನುಗಳ ವ್ಯಾಪ್ತಿಯಲ್ಲಷ್ಟೇ: ತಾಲಿಬಾನ್

    ಶಿಯಾ ನಾಯಕನ ಪ್ರತಿಮೆ ಧ್ವಂಸ: 1990ರ ಅಫ್ಘಾನಿಸ್ತಾನದ ಅಂತರ್ಯುದ್ಧದ ಸಮಯದಲ್ಲಿ ತಾಲಿಬಾನ್ ವಿರುದ್ಧ ಹೋರಾಡಿದ್ದ ಶಿಯಾ ನಾಯಕ ಅಬ್ದುಲ್ ಅಲಿ ಮಜಾರಿ ಪ್ರತಿಮೆಯನ್ನು ತಾಲಿಬಾನ್ ಸ್ಫೋಟಿಸಿದ್ದಾರೆ. ಈ ಮಧ್ಯೆ ಅಫ್ಘನ್ ಮಹಿಳೆಯರು ದಿನಸಿಗೂ ಹೆಚ್ಚಾಗಿ ಬುರ್ಖಾ ಖರೀದಿಗೆ ಮುಗಿಬಿದ್ದಿದ್ದಾರೆ.

  • ತಾಲಿಬಾನಿಗಳಿಗೆ ಸಂಸದ ಬರ್ಖ್, ಓವೈಸಿ ಸಪೋರ್ಟ್ – ಸ್ವಾತಂತ್ರ್ಯ ಹೋರಾಟಗಾರರಿಗೆ ಉಗ್ರರ ಹೋಲಿಕೆ

    ತಾಲಿಬಾನಿಗಳಿಗೆ ಸಂಸದ ಬರ್ಖ್, ಓವೈಸಿ ಸಪೋರ್ಟ್ – ಸ್ವಾತಂತ್ರ್ಯ ಹೋರಾಟಗಾರರಿಗೆ ಉಗ್ರರ ಹೋಲಿಕೆ

    ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನಿ ಭಯೋತ್ಪಾದಕರು ಅಶಾಂತಿ, ಅರಾಜಕತೆ ಸೃಷ್ಟಿಸಿ ಅತಿಮಾನುಷವಾಗಿ ವರ್ತಿಸ್ತಿದ್ದಾರೆ. ಅಲ್ಲಿನ ಅಮಾಯಕ ಜನ ವಿಲವಿಲ ಒದ್ದಾಡ್ತಿದ್ದಾರೆ. ಆದರೆ ಮಾನವೀಯತೆ ಪರವಾಗಿ ನಿಲ್ಲಬೇಕಾದ ಹೊತ್ತಲ್ಲಿ ಕೆಲವು ತಾಲಿಬಾನಿ ಮನಸ್ಥಿತಿಯ ಸೋಗಿನ ರಾಜಕಾರಣಿಗಳು ಉಗ್ರರ ಸ್ನೇಹಿತರಂತೆಯೂ, ಸಾರ್ವಜನಿಕ ಸಂಪರ್ಕ ಅಧಿಕಾರಿಗಳ (ಪಿಆರ್‍ಓ) ರೀತಿಯೂ ಹೇಳಿಕೆ ಕೊಟ್ಟಿದ್ದಾರೆ.

    ತಾಲಿಬಾನಿಗಳ ಬಗ್ಗೆ ಮೊದಲಿಗೆ ಸಮಾಜವಾದಿ ಪಕ್ಷದ ಸಂಸದ ಶಫಿಕುರ್ ರಹಮಾನ್ ಬರ್ಖ್ ಒಲವು ವ್ಯಕ್ತಪಡಿಸಿದ್ದಾರೆ. ತಾಲಿಬಾನಿಗಳನ್ನು ಸ್ವಾತಂತ್ರ್ಯ ಸೇನಾನಿಗಳು ಅಂದಿದ್ದಾರೆ. ಬ್ರಿಟಿಷ್ ಆಡಳಿತದಲ್ಲಿ ಭಾರತೀಯರು ಕೂಡ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು. ಅದೇ ರೀತಿ ತಾಲಿಬಾನಿಗಳು ಅಫ್ಘಾನಿಸ್ತಾನದ ಸ್ವಾತಂತ್ರ್ಯಕ್ಕೆ ಹೋರಾಡಿದ್ದಾರೆ ಎಂದು ಹೇಳಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಪ್ರತಿಭಟನಾಕಾರರ ಮೇಲೆ ತಾಲಿಬಾನಿಗಳಿಂದ ಗುಂಡಿನ ದಾಳಿ

    ತಾಲಿಬಾನಿಗಳನ್ನು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿರೋ ಉತ್ತರ ಪ್ರದೇಶದ ಸಂಭಾಲ್ ಕ್ಷೇತ್ರದ ಎಂಪಿ ಬರ್ಖ್ ವಿರುದ್ಧ ದೇಶದ್ರೋಹ ಕೇಸ್ ದಾಖಲಾಗಿದೆ. ಎರಡನೇಯದಾಗಿ ಎಂಐಎಂ ಅಧ್ಯಕ್ಷ ಸಂಸದ ಅಸಾದುದ್ದೀನ್ ಓವೈಸಿ ಕೂಡ ತಾಲಿಬಾನಿ ಪ್ರೇಮ ಮೆರೆದಿದ್ದಾರೆ. ಭಾರತ ಅಫ್ಘಾನ್‍ನಲ್ಲಿ ಭಾರೀ ಹೂಡಿಕೆ ಮಾಡಿದೆ. ಭಾರತದ ಹೂಡಿಕೆ ವ್ಯರ್ಥವಾಗಬಾರದು. ತಾಲಿಬಾನ್ ಜೊತೆಗೆ ಭಾರತ ಔಪಚಾರಿಕ ಅಥವಾ ಅನೌಪಚಾರಿಕ ಚರ್ಚೆ ನಡೆಸಲಿ. ಭಾರತದ ಬಗ್ಗೆ ತಾಲಿಬಾನಿಗಳಿಗೆ ಉತ್ತಮ ಅಭಿಪ್ರಾಯ ಇದೆ ಎಮದು ತಿಳಿಸಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಸೇನೆ ಹಿಂಪಡೆದಿದ್ದು ಅಮೆರಿಕಾ ಇತಿಹಾಸದಲ್ಲಿ ಕಪ್ಪು ಚುಕ್ಕೆ: ಬೈಡನ್ ವಿರುದ್ಧ ಟ್ರಂಪ್ ವಾಗ್ದಾಳಿ

    ಮತ್ತೊಂದೆಡೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕೂಡ ತಾಲಿಬಾನ್‍ಗೆ ಕೊಂಡಾಡಿದೆ. ತಾಲಿಬಾನಿಗಳು ಅಹಿಂಸಾತ್ಮಕವಾಗಿ ಅಭೂತಪೂರ್ವವಾಗಿ ಅಧಿಕಾರ ಪಡೆದಿದ್ದಾರೆ ಅಂತ ಮೌಲಾನಾ ಸಜ್ಜದ್ ನೋಮಾನಿ ಹೇಳಿದ್ದಾರೆ. ಆದರೆ ಇದು ನೋಮಾನಿ ವೈಯಕ್ತಿಕ ಹೇಳಿಕೆ ಅಂತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಅಂತರ ಕಾಯ್ದುಕೊಂಡಿದೆ. ಇದನ್ನೂ ಓದಿ: ಮಹಿಳೆಯರು ಕೆಲಸ ಮಾಡಬಹುದು, ಮುಸ್ಲಿಂ ಕಾನೂನುಗಳ ವ್ಯಾಪ್ತಿಯಲ್ಲಷ್ಟೇ: ತಾಲಿಬಾನ್

  • ಪ್ರತಿಭಟನಾಕಾರರ ಮೇಲೆ ತಾಲಿಬಾನಿಗಳಿಂದ ಗುಂಡಿನ ದಾಳಿ

    ಪ್ರತಿಭಟನಾಕಾರರ ಮೇಲೆ ತಾಲಿಬಾನಿಗಳಿಂದ ಗುಂಡಿನ ದಾಳಿ

    ಕಾಬೂಲ್: ತಾಲಿಬಾನಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ಇದರ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಫ್ಘಾನಿಸ್ತಾನ ಉಳಿಯಬೇಕೆಂದು ಆಗ್ರಹಿಸಿ ಫ್ರಂಟ್ ನಾರ್ದನ್ ಅಲೈನ್ಸ್ ಸಂಘಟನೆ ತಾಲಿಬಾನಿಗಳ ವಿರುದ್ಧ ಘೋಷಣೆ ಕೂಗುತ್ತಾ ರಸ್ತೆಗೆ ಇಳಿದಿದ್ದರು. ತಾಲಿಬಾನಿಗಳ ಸರ್ಪಗಾವಲು ಹಾಕಿದ್ರೂ ಅಫ್ಘನಿಸ್ತಾನದ ಧ್ವಜ ಹಾರಿಸಲಾಯ್ತು.

    ಅಫ್ಘಾನಿಸ್ತಾನದ ರಾಜಕಾರಣಿ ದಿ.ಅಹ್ಮದ್ ಶಾ ಮಸೂದ್ ಪತ್ರನ ಮನವಿ ಮೇರೆ ಅಲ್ಲಿಯ ಸೈನಿಕರು ಪಂಜಶೀರ್ ತಲುಪುತ್ತಿದ್ದಾರೆ. ಜಲಾಲಾಬಾದ್ ನಲ್ಲಿಯೂ ಕೆಲ ಜನರು ಅಫ್ಘಾನಿಸ್ತಾನದ ಧ್ವಜ ಹಾರಿಸುವ ಮೂಲಕ ತಾಲಿಬಾನಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಬಂದ ತಾಲಿಬಾನಿಗಳು ಧ್ವಜ ತೆಗೆಯಲು ಬಂದಾಗ ಜನ ವಿರೋಧಿಸಿದ್ದಕ್ಕೆ ಗುಂಡಿನ ದಾಳಿ ನಡೆಸಿದರು. ಈ ಗುಂಡಿನ ದಾಳಿಯಲ್ಲಿ ಓರ್ವ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.

    ಸದ್ಯ ಇರುವ ಧ್ವಜವನ್ನ ಬದಲಿಸಬಾರದು. ಇದನ್ನೇ ರಾಷ್ಟ್ರೀಯ ಧ್ವಜ ಎಂದು ಪರಿಗಣಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಪಾಕಿಸ್ತಾನದ ಗಡಿ ಭಾಗದಲ್ಲಿರುವ ಅಫ್ಘಾನಿಗಳು ಸಹ ಧ್ವಜ ಹಾರಿಸುವ ಮೂಲಕ ತಾಲಿಬಾನಿಗಳ ನಡೆಯನ್ನು ಖಂಡಿಸಿದ್ದರು.

    ಭಾರತಕ್ಕೆ ಇರುವ ಸವಾಲುಗಳು:
    ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಆಡಳಿತ ಆರಂಭಗೊಂಡಿದ್ದು ಪಾಕಿಸ್ತಾನ-ಅಫ್ಘಾನ್ ಗಡಿಯಲ್ಲಿ ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿದೆ. ಲಷ್ಕರ್ ಇ ತೋಯ್ಬಾ, ಇಂಡಿಯನ್ ಮುಜಾಹಿದ್ದೀನ್ ಇನ್ನಷ್ಟು ಕೃತ್ಯಗಳಿಗೆ ಯತ್ನಿಸಬಹುದು.

    ತಾಲಿಬಾನಿಗಳ ಆಡಳಿತದಲ್ಲಿ ಪಾಕಿಸ್ತಾನ ಮಿಲಿಟರಿ, ಗುಪ್ತಚರ ಸಂಸ್ಥೆ ಐಎಸ್‍ಐ ನೇರ ಹಸ್ತಕ್ಷೇಪವಿದೆ. ಈಗಾಗಲೇ ತಾಲಿಬಾನಿಗಳಿಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಬೆಂಬಲ ವ್ಯಕ್ತಪಡಿಸಿದ್ದಾರೆ. ತಾಲಿಬಾನಿಗಳ ಆಡಳಿತದಲ್ಲಿ ಪಾಕಿಸ್ತಾನ ಇನ್ನಷ್ಟು ಬಾಲ ಬಿಚ್ಚಲು ಯತ್ನಿಸಬಹುದು. ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಸೇನೆ ಹಿಂಪಡೆದಿದ್ದು ಅಮೆರಿಕಾ ಇತಿಹಾಸದಲ್ಲಿ ಕಪ್ಪು ಚುಕ್ಕೆ: ಬೈಡನ್ ವಿರುದ್ಧ ಟ್ರಂಪ್ ವಾಗ್ದಾಳಿ

    ತಾಲಿಬಾನಿಗಳ ಕೈವಶ ಬಳಿಕ ಅಫ್ಘಾನ್ ಬಗ್ಗೆ ಚೀನಾ ಆಸಕ್ತಿ ಹೆಚ್ಚಿಸಿಕೊಂಡಿದೆ. ಈಗಾಗಲೇ ತಾಲಿಬಾನ್ ಪರ ಸಾಫ್ಟ್ ಕಾರ್ನರ್ ತೋರಿಸಿರುವ ಚೀನಾ ರೈಲು, ಬೆಲ್ಟ್-ರೋಡ್ ಯೋಜನೆಗಳನ್ನು ಅಫ್ಘಾನಿಸ್ತಾನಕ್ಕೂ ವಿಸ್ತರಿಸುವ ಮೂಲಕ ಪ್ರಭಾವ ಬೀರಬಹುದು. ದಕ್ಷಿಣ ಏಷ್ಯಾದಲ್ಲಿ ಚೀನಾದ ಕುತಂತ್ರಗಳಿಗೆ ಅಫ್ಘಾನಿಸ್ತಾನವೂ ವೇದಿಕೆ ಆಗಬಹುದು. ಇದನ್ನೂ ಓದಿ: ತಾಲಿಬಾನ್ ಉಗ್ರರಿಗಾಗಿ ಕಾಯುತ್ತಿದ್ದೇನೆ, ನನ್ನನ್ನು ಕೊಲ್ಲುತ್ತಾರೆ: ಅಫ್ಘಾನಿಸ್ತಾನದ ಮಹಿಳಾ ಮೇಯರ್

  • ಪ್ರಾಣಿಗಳನ್ನು ತುಂಬಿಕೊಂಡಂತೆ 800 ಜನ ಒಂದೇ ವಿಮಾನದಲ್ಲಿ ಭಾರತಕ್ಕೆ ಬಂದಿಲ್ಲ

    ಪ್ರಾಣಿಗಳನ್ನು ತುಂಬಿಕೊಂಡಂತೆ 800 ಜನ ಒಂದೇ ವಿಮಾನದಲ್ಲಿ ಭಾರತಕ್ಕೆ ಬಂದಿಲ್ಲ

    ನವದೆಹಲಿ: ಅಫ್ಘಾನಿಸ್ತಾನದಿಂದ 800 ಮಂದಿ ವಿಮಾನದ ಮೂಲಕ ಭಾರತಕ್ಕೆ ಮರಳುತ್ತಿದ್ದಾರೆ ಎಂಬ ಹೆಡ್‍ಲೈನ್ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಫೇಕ್ ಫೋಟೋವೊಂದು ಹರಿದಾಡುತ್ತಿದೆ.

    ತಾಲಿಬಾನ್‍ಗಳ ಅಟ್ಟಹಾಸಕ್ಕೆ ನಡುಗಿ ಅಲ್ಲಿನ ಜನ ಜೀವ ಉಳಿದರೆ ಸಾಕು ಎಂದು ಭಾವಿಸಿ ವಿದೇಶಗಳ ವಾಯುಸೇನೆಯ ವಿಮಾನ, ಪ್ರಯಾಣಿಕ ವಿಮಾನ ಏರತೊಡಗಿದ್ದಾರೆ. ಈ ವೇಳೆ 2013ರ ಫೋಟೋಗೆ ಭಾರತಕ್ಕೆ ಜನ ಮರಳುತ್ತಿದ್ದಾರೆ. ವಿಮಾನ ಸಾಮರ್ಥ್ಯಕ್ಕಿಂತಲೂ ಹೆಚ್ಚು ಜನರನ್ನು ಪ್ರಾಣಿಗಳಂತೆ ತುಂಬಲಾಗಿದೆ ಎಂದು ಬರೆದು ಬರೆದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದು, ಫೋಟೋ ವೈರಲ್ ಆಗಿದೆ. ಇದನ್ನೂ ಓದಿ: ಅಫ್ಘಾನ್ ನಿರಾಶ್ರಿತರಿಗೆ ಭಾರತದ ಆಶ್ರಯ – ಏನಿದು ವೀಸಾ? ವಿಶೇಷತೆ ಏನು?

    ಸತ್ಯ ಏನು?
    ಜನರನ್ನು ರಕ್ಷಣೆ ಮಾಡುತ್ತಿರುವ ದೃಶ್ಯ ಸರಿಯಾಗಿದ್ದರೂ ಇದು ಅಫ್ಘಾನಿಸ್ತಾನದಿಂದ ಭಾರತಕ್ಕೆ ಮರಳುತ್ತಿರುವ ಫೋಟೋ ಅಲ್ಲ. 2013ರ ಡಿಸೆಂಬರ್ ನಲ್ಲಿ  ಭೀಕರ ಚಂಡಮಾರುತಕ್ಕೆ ಫಿಲಿಪೈನ್ಸ್ ತತ್ತರಿಸಿತ್ತು. ಈ ವೇಳೆ ಅಮೆರಿಕ ವಾಯಸೇನೆಯ ವಿಮಾನದ ಮೂಲಕ 600 ಮಂದಿಯನ್ನು ಸ್ಥಳಾಂತರಿಸಿತ್ತು. ಈ ಫೋಟೋ ಈಗ ವೈರಲ್ ಆಗುತ್ತಿದೆ.

    ಭಾರತ ಮತ್ತು ಮತ್ತು ಅಮೆರಿಕ ಅಫ್ಘಾನಿಸ್ತಾನಕ್ಕೆ ಗ್ಲೋಬ್ ಮಾಸ್ಟರ್ ವಿಮಾನವನ್ನು ಕಳುಹಿಸಿ ತನ್ನ ಪ್ರಜೆಗಳನ್ನು ಸ್ವದೇಶಕ್ಕೆ ಕರೆದುಕೊಂಡು ಬರುತ್ತಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ – ಭಾರತಕ್ಕೆ ಇರುವ ಸವಾಲುಗಳೇನು?

    ವೈರಲ್ ಯಾಕೆ?
    ಸಾಧಾರಣವಾಗಿ ಯಾವುದಾದರು ಒಂದು ಟ್ರೆಂಡ್ ಸೃಷ್ಟಿಸುವ ಘಟನೆ ನಡೆದರೆ ಆ ಘಟನೆಗೆ ಪೂರಕವಾಗುವ ಫೋಟೋ, ವಿಡಿಯೋಗಳನ್ನು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಾರೆ. ಈಗ ಅಫ್ಘಾನಿಸ್ತಾನ ವಿಚಾರ ವಿಶ್ವದಲ್ಲೇ ಟ್ರೆಂಡ್ ಆಗುತ್ತಿರುವ ಕಾರಣ ಹಲವು ವಿಡಿಯೋ, ಫೋಟೋಗಳು ಬರುತ್ತಿವೆ. ಇದರಲ್ಲಿ ಸತ್ಯ ಯಾವುದು? ಸುಳ್ಳು ಯಾವುದು ಎನ್ನುವುದು ಕೂಡಲೇ ತಿಳಿಯುವುದಿಲ್ಲ. ಫೋಟೋ, ವಿಡಿಯೋ ವೈರಲ್ ಆದ ಬಳಿಕ ಮೂಲ ಯಾವುದು ಎನ್ನುವುದು ತಿಳಿಯುತ್ತದೆ. ಆದರೆ ಅಷ್ಟು ಹೊತ್ತಿಗೆ ಫೋಟೋ, ವಿಡಿಯೋ ವೈರಲ್ ಆಗಿರುತ್ತದೆ.