Tag: afghanistan

  • ಕಾಬೂಲ್‍ನಲ್ಲಿ ಮತ್ತೊಂದು ಪ್ರಬಲ ಬಾಂಬ್ ಸ್ಫೋಟ

    ಕಾಬೂಲ್‍ನಲ್ಲಿ ಮತ್ತೊಂದು ಪ್ರಬಲ ಬಾಂಬ್ ಸ್ಫೋಟ

    ಕಾಬೂಲ್: ರಕ್ತಪಿಪಾಸುಗಳ ಕೈಗೆ ಸಿಲುಕಿರುವ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ಮತ್ತೊಂದು ಪ್ರಬಲ ಬಾಂಬ್ ಸ್ಫೋಟಗೊಂಡಿದೆ. ಇತ್ತ ಕಾಬೂಲ್ ವಿಮಾನ ನಿಲ್ದಾಣದ ಬಳಿಯೂ ರಾಕೆಟ್ ದಾಳಿ ನಡೆದಿರುವ ಬಗ್ಗೆ ವರದಿಯಾಗಿದೆ.

    ಇದುವರೆಗೂ ಈ ದಾಳಿಯ ಹೊಣೆಯನ್ನು ಯಾವ ಸಂಘಟನೆಗಳು ಹೊತ್ತುಕೊಂಡಿಲ್ಲ. ಬಾಂಬ್ ಸ್ಫೋಟದ ಬಳಿಕದ ಕೆಲ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಬಾಂಬ್ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದ್ದು, ಆದ್ರೆ ಈ ಬಗ್ಗೆ ಅಧಿಕೃತವಾಗಿ ದೃಢಪಟ್ಟಿಲ್ಲ. ಗುರುವಾರ ನಡೆದ ಬಾಂಬ್ ಸ್ಫೋಟದಲ್ಲಿ 13 ಅಮೆರಿಕ ಸೈನಿಕರು ಸೇರಿದಂತೆ 170 ಜನರು ಪ್ರಾಣ ಕಳೆದುಕೊಂಡಿದ್ದರು.

    ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಜೆನ್ ಸಾಕಿ, ಕಾಬೂಲ್ ಏರ್ ಪೋರ್ಟ್ ರಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಎಲ್ಲ ಆತಂಕಗಳ ನಡುವೆಯೂ ನಮ್ಮ ಸೈನಿಕರು ಸಂತ್ರಸ್ತರನ್ನು ಏರ್ ಲಿಫ್ಟ್ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಆದ್ರೆ ಈ ಕಾರ್ಯಾಚರಣೆ ಮುಂದಿನ ದಿನಗಳು ಅಪಾಯಕಾರಿಯಾಗಿರಲಿವೆ ಎಂದು ಎಚ್ಚರಿಕೆ ನೀಡಿದ್ದರು. ಇತ್ತ ಅಮೆರಿಕ ಅಧ್ಯಕ್ಷ ಜೋ ಬೈಡನ್ ದಾಳಿ ಬಗ್ಗೆ ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ಕಾಬೂಲ್ ವಿಮಾನ ನಿಲ್ದಾಣದ ಎಂಟ್ರಿ ಗೇಟ್ ಬಳಿ ಮತ್ತೆ ಫೈರಿಂಗ್

    ಗುರುವಾರ ಬಾಂಬ್ ದಾಳಿ ಬಳಿಕ ದೇಶ ತೊರೆಯುವವರ ಸಂಖ್ಯೆ ಹೆಚ್ಚಳವಾಗಿದೆ. ಆದ್ದರಿಂದ ತಾಲಿಬಾನಿಗಳನ್ನು ವಿಮಾನ ನಿಲ್ದಾಣದ ಸಮೀಪ ಮತ್ತು ಸಂಪರ್ಕಿಸುವ ಕಲ್ಪಿಸುವ ಮಾರ್ಗಗಳಲ್ಲಿ ಜನರನ್ನು ನೇಮಿಸಿದೆ. ಇತ್ತ ಬ್ರಿಟನ್, ಜರ್ಮನಿ ಸೇರಿದಂತೆ ಹಲವು ದೇಶಗಳು ಏರ್ ಲಿಫ್ಟ್ ಮಾಡೋದನ್ನ ಸ್ಥಗಿತಗೊಳಿಸಿವೆ. ಇತ್ತ ಆಗಸ್ಟ್ 31ರೊಳಗೆ ರಕ್ಷಣಾ ಕಾರ್ಯ ಪೂರ್ಣವಾಗದಿದ್ರೆ ನಮ್ಮ ಕಾರ್ಯಚರಣೆ ಮುಂದುವರಿಯಲಿದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಆಗಸ್ಟ್ 31ರೊಳಗೆ ತಮ್ಮ ಸೇನೆಯನ್ನು ಹಿಂಪಡೆಯುವಂತೆ ಅಮೆರಿಕಾಗೆ ತಾಲಿಬಾನಿಗಳು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಟಿವಿ, ರೇಡಿಯೋಗಳಲ್ಲಿ ಮಹಿಳೆಯ ಧ್ವನಿ ಬ್ಯಾನ್- ತಾಲಿಬಾನ್ ಆದೇಶ

  • ಜನಪ್ರಿಯ ಹಾಡುಗಾರನನ್ನ ಹತ್ಯೆಗೈದ ತಾಲಿಬಾನಿಗಳು

    ಜನಪ್ರಿಯ ಹಾಡುಗಾರನನ್ನ ಹತ್ಯೆಗೈದ ತಾಲಿಬಾನಿಗಳು

    ಕಾಬೂಲ್: ಅಫ್ಘಾನಿಸ್ತಾನದಲ್ಲಿ ಜನರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಹೀಗಿರುವಾಗ ಜನಪ್ರಿಯ ಹಾಡುಗಾರ ಫವಾದ್ ಕಿಶನಾಬಾದ್ ಅವರನ್ನು ಉಗ್ರರು ಹತ್ಯೆ ಗೈದಿದ್ದಾರೆ.

    ಅಫ್ಘಾನಿಸ್ತಾನದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಹಾಡುವುದನ್ನು ತಾಲಿಬಾನಿಗಳು ನಿಷೇಧಿಸಿದ್ದಾರೆ. ಹಾಡುಗಾರ ಫವಾದ್ ಕಿಶನಾಬಾದ್ ತಾಲಿಬಾನ್‍ಗೆ ವಿರುದ್ದವಾಗಿ ಹಾಡುಗಳನ್ನು ಕಟ್ಟಿ ಹಾಡುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಯಲ್ಲಿ ತಾಲಿಬಾನಿಗಳು ಫವಾದ್‍ರನ್ನು ಹುಡುಕಿ ಹತ್ಯೆ ಮಾಡಿದ್ದಾರೆ. ಇದನ್ನೂ ಓದಿ:  ಕಾರಿಗೆ ಮೂತ್ರ ಮಾಡಿದ ನಾಯಿ- ಕಾರ್ ಮಾಲೀಕನಿಗೆ ಬಿತ್ತು ಗೂಸಾ

    ಅಂದ್ರಾಬ್ ಪ್ರದೇಶದ ಗಾಯಕನನ್ನು ತಾಲಿಬಾನಿಗಳು ಕೊಂದಿದ್ದನ್ನು ಸ್ಥಳೀಯ ಮಾಧ್ಯಮ ದೃಢಪಡಿಸಿದೆ. ಮಾಜಿ ಆಂತರಿಕ ವ್ಯವಹಾರಗಳ ಸಚಿವ ಮಸೂದ್ ಅಂದರಾಬಿ ಹೇಳಿದ್ದಾಗಿ ಉಲ್ಲೇಖಿಸಿದೆ. ಆಗಸ್ಟ್ 15ರಂದು ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದಾರೆ.

  • ಭಾರತೀಯರು ಅಪಾಯದಲ್ಲಿದ್ದರೆ ದೇಶ ಅವರ ಸಹಾಯಕ್ಕೆ ಯಾವತ್ತು ನಿಲ್ಲುತ್ತದೆ: ಮೋದಿ

    ಭಾರತೀಯರು ಅಪಾಯದಲ್ಲಿದ್ದರೆ ದೇಶ ಅವರ ಸಹಾಯಕ್ಕೆ ಯಾವತ್ತು ನಿಲ್ಲುತ್ತದೆ: ಮೋದಿ

    ನವದೆಹಲಿ: ಭಾರತ ಕೊರೊನಾ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸುತ್ತ ಮುಂದುವರಿಯುತ್ತಿದ್ದರೂ ಕೂಡ ಅಘ್ಘಾನಿಸ್ತಾನದಂತಹ ಯುದ್ಧ ಪೀಡಿತ ಸನ್ನಿವೇಶದಲ್ಲಿರುವ ದೇಶದಿಂದ ಭಾರತೀಯರನ್ನು ರಕ್ಷಿಸಿದೆ. ಭಾರತೀಯರು ಅಪಾಯದಲ್ಲಿದ್ದರೆ ದೇಶ ಅವರ ಸಹಾಯಕ್ಕೆ ಯಾವತ್ತು ನಿಲ್ಲುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

    ವಿಡೀಯೋ ಕಾನ್ಫರೆನ್ಸ್ ಮೂಲಕ ನವೀಕೃತ ಜಲಿಯನ್ ವಾಲಾಬಾಗ್ ಸ್ಮಾರಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಭಾರತ ಹಲವಾರು ಸವಾಲುಗಳನ್ನು ಮೆಟ್ಟಿನಿಂತು ಅಘ್ಘಾನಿಸ್ತಾನದಲ್ಲಿ ಅಪಾಯದಲ್ಲಿದ್ದ ಭಾರತೀಯರ ರಕ್ಷಣೆಗೆ ಮುಂದಾಗಿದೆ. ಈ ಕಾರ್ಯ ಇನ್ನೂ ಕೂಡ ಮುಂದುವರಿಯುತ್ತದೆ. ತಾಲಿಬಾನಿಗಳ ಅಟ್ಟಹಾಸದಿಂದಾಗಿ ಅಫ್ಘಾನಿಸ್ತಾನ ನಲುಗಿ ಹೋಗಿದೆ. ಈ ನಡುವೆ ಅಲ್ಲಿದ್ದ ನೂರಾರು ಭಾರತೀಯರನ್ನು ಸುರಕ್ಷಿತವಾಗಿ ಏರ್ ಲಿಫ್ಟ್ ಮಾಡುವ ಮೂಲಕ ದೇಶಕ್ಕೆ ಸುರಕ್ಷಿತವಾಗಿ ಕರೆತರಲಾಗಿದೆ ಎಂದರು. ಇದನ್ನೂ ಓದಿ: ಮಧ್ಯರಾತ್ರಿ ಆಪರೇಷನ್ ಇಂಡಿಯನ್ಸ್ – ಕಾಬೂಲ್‍ನಿಂದ ದೋಹಾ ಮೂಲಕ ದೆಹಲಿಗೆ ಭಾರತೀಯರು

    ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ನಾವು ಈ ಸಂಭ್ರಮದ ಹಿಂದೆ ಹಲವಾರು ಮಹನೀಯರ ತ್ಯಾಗ, ಬಲಿದಾನವಿದೆ ಎಂಬುದನ್ನು ಮರೆಯಬಾರದು. ನಾವಿಂದು ಜಲಿಯನ್ ವಾಲಾ ಬಾಗ್‍ನ್ನು ನವೀಕೃತಗೊಳಿಸಿ ಲೋಕಾರ್ಪಣೆಗೊಳಿಸಿದ್ದೇವೆ. ಜಲಿಯನ್ ವಾಲಾಬಾಗ್ ದೇಶದ ಸ್ವಾತಂತ್ಯಕ್ಕಾಗಿ ತಮ್ಮ ಪ್ರಾಣವನ್ನೆ ಅರ್ಪಿಸಿದ ಸರ್ದಾರ್ ಉದ್ದಮ್ ಸಿಂಗ್, ಭಗತ್ ಸಿಂಗ್ ಸೇರಿದಂತೆ ಹಲವು ಸ್ವಾತಂತ್ರ್ಯ ಸೇನಾನಿಗಳಿಗೆ ಧೈರ್ಯ ಕೊಟ್ಟ ಸ್ಥಳವಾಗಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಕಾಬೂಲ್‍ನಲ್ಲಿ ಎಟಿಎಂಗಳ ಮುಂದೆ ಜನಸಾಗರ – ಬ್ಯಾಂಕ್ ಸಿಬ್ಬಂದಿಯಿಂದ ಪ್ರತಿಭಟನೆ

  • ಕಾಬೂಲ್ ವಿಮಾನ ನಿಲ್ದಾಣದ ಎಂಟ್ರಿ ಗೇಟ್ ಬಳಿ ಮತ್ತೆ ಫೈರಿಂಗ್

    ಕಾಬೂಲ್ ವಿಮಾನ ನಿಲ್ದಾಣದ ಎಂಟ್ರಿ ಗೇಟ್ ಬಳಿ ಮತ್ತೆ ಫೈರಿಂಗ್

    ಕಾಬೂಲ್: ಅಮೆರಿಕ ಎಚ್ಚರಿಕೆ ನಡುವೆಯೂ ಮತ್ತೆ ಕಾಬೂಲ್ ವಿಮಾನ ನಿಲ್ದಾಣದ ಪ್ರವೇಶದ್ವಾರದ ಬಳಿ ಗುಂಡಿನ ಸದ್ದು ಕೇಳಿದೆ. ಗುಂಡಿನ ಸದ್ದು ಕೇಳುತ್ತಿದ್ದಂತೆ ಭಯಗೊಂಡ ಜನರು ಚದುರಿದ್ದಾರೆ. ಗುಂಡಿನ ದಾಳಿ ಜೊತೆ ಅಶ್ರುವಾಯು ಪ್ರಯೋಗಿಸಲಾಗಿದೆ ಎಂದು ವರದಿಯಾಗಿದೆ.

    ಗುಂಡಿನ ದಾಳಿ ಯಾರು ನಡೆಸಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಇದುವರೆಗೂ ಯಾವುದೇ ಉಗ್ರ ಸಂಘಟನೆಗಳು ಘಟನೆ ಹೊಣೆಯನ್ನು ಹೊತ್ತುಕೊಂಡಿಲ್ಲ. ಗುರುವಾರ ನಡೆದ ಬಾಂಬ್ ಸ್ಫೋಟದಲ್ಲಿ 13 ಅಮೆರಿಕ ಸೈನಿಕರು ಸೇರಿದಂತೆ 170 ಜನರು ಪ್ರಾಣ ಕಳೆದುಕೊಂಡಿದ್ದರು.

    ಒಂದು ದಿನ ಮುಂಚೆಯೇ ಅಮೆರಿಕ ಉಗ್ರರ ದಾಳಿಯ ಸುಳಿವು ನೀಡಿತ್ತು. ಆದ್ದರಿಂದ ತನ್ನ ದೇಶದ ಜನರಿಗೆ ಕಾಬೂಲ್ ವಿಮಾನ ನಿಲ್ದಾಣದತ್ತ ತೆರಳದಂತೆ ಸೂಚನೆ ನೀಡಿತ್ತು. ಕಾಬೂಲ್ ವಿಮಾನ ನಿಲ್ದಾಣದ ಅಬ್ಬೆ ಗೇಟ್, ಈಸ್ಟ್ ಗೇಟ್ ಮತ್ತು ನಾರ್ಥ್ ಗೇಟ್ ಬಳಿ ದಾಳಿ ನಡೆಯುವ ಸಾಧ್ಯತೆಗಳಿವೆ ಎಂದು ಅಮೆರಿಕ ಎಚ್ಚರಿಕೆ ಸಂದೇಶ ನೀಡಿತ್ತು. ಇದನ್ನೂ ಓದಿ: ಕಾಬೂಲ್‍ನಲ್ಲಿ 3 ಸಾವಿರ ರೂ.ಗೆ ಒಂದು ಬಾಟೆಲ್ ನೀರು, ಪ್ಲೇಟ್ ರೈಸ್‍ಗೆ 7,500 ರೂ.

    ಕಾಬೂಲ್ ನಿಂದ ಅಮೆರಿಕ ಸೇನೆ ಹಿಂದಿರುಗುವ ಮೊದಲೇ ಐಎಸ್‍ಐಎಸ್ ದಾಳಿ ನಡೆಸುವ ಎಚ್ಚರಿಕೆಯನ್ನು ಅಧ್ಯಕ್ಷ ಜೋ ಬೈಡನ್ ಎಚ್ಚರಿಸಿದ್ದರು. ಈ ಕುರಿತು ಮಾಹಿತಿ ನೀಡಿರುವ¸ ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಜೆನ್ ಸಾಕಿ, ಕಾಬೂಲ್ ಏರ್ ಪೋರ್ಟ್ ರಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಎಲ್ಲ ಆತಂಕಗಳ ನಡುವೆಯೂ ನಮ್ಮ ಸೈನಿಕರು ಸಂತ್ರಸ್ತರನ್ನು ಏರ್ ಲಿಫ್ಟ್ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಆದ್ರೆ ಈ ಕಾರ್ಯಾಚರಣೆ ಮುಂದಿನ ದಿನಗಳು ಅಪಾಯಕಾರಿಯಾಗಿರಲಿವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜರ್ಮನಿಯಲ್ಲಿ ಪಿಜ್ಜಾ ಡೆಲಿವರಿ ಬಾಯ್ ಆದ ಅಫ್ಘಾನ್ ಮಾಜಿ ಸಚಿವ!

    ಗುರುವಾರ ಬಾಂಬ್ ದಾಳಿ ಬಳಿಕ ದೇಶ ತೊರೆಯುವವರ ಸಂಖ್ಯೆ ಹೆಚ್ಚಳವಾಗಿದೆ. ಆದ್ದರಿಂದ ತಾಲಿಬಾನಿಗಳನ್ನು ವಿಮಾನ ನಿಲ್ದಾಣದ ಸಮೀಪ ಮತ್ತು ಸಂಪರ್ಕಿಸುವ ಕಲ್ಪಿಸುವ ಮಾರ್ಗಗಳಲ್ಲಿ ಜನರನ್ನು ನೇಮಿಸಿದೆ. ಇತ್ತ ಬ್ರಿಟನ್, ಜರ್ಮನಿ ಸೇರಿದಂತೆ ಹಲವು ದೇಶಗಳು ಏರ್ ಲಿಫ್ಟ್ ಮಾಡೋದನ್ನ ಸ್ಥಗಿತಗೊಳಿಸಿವೆ. ಇತ್ತ ಆಗಸ್ಟ್ 31ರೊಳಗೆ ರಕ್ಷಣಾ ಕಾರ್ಯ ಪೂರ್ಣವಾಗದಿದ್ರೆ ನಮ್ಮ ಕಾರ್ಯಚರಣೆ ಮುಂದುವರಿಯಲಿದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಆಗಸ್ಟ್ 31ರೊಳಗೆ ತಮ್ಮ ಸೇನೆಯನ್ನು ಹಿಂಪಡೆಯುವಂತೆ ಅಮೆರಿಕಾಗೆ ತಾಲಿಬಾನಿಗಳು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:  ಐಸಿಸ್-ಕೆ ಉಗ್ರರ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುಡುಗು

  • ಕ್ಯಾನ್ಸರ್ ರೋಗ 4ನೇ ಹಂತ ತಲುಪಿದಾಗ ಏನಾಗುತ್ತೋ ಹಾಗೆ ಅತ್ಯಾಚಾರಿಗಳಿಗೆ ಶಿಕ್ಷೆಯಾಗ್ಬೇಕು: ವಿನಯ್ ಗುರೂಜಿ

    ಕ್ಯಾನ್ಸರ್ ರೋಗ 4ನೇ ಹಂತ ತಲುಪಿದಾಗ ಏನಾಗುತ್ತೋ ಹಾಗೆ ಅತ್ಯಾಚಾರಿಗಳಿಗೆ ಶಿಕ್ಷೆಯಾಗ್ಬೇಕು: ವಿನಯ್ ಗುರೂಜಿ

    ರಾಯಚೂರು: ಮೈಸೂರಿನಲ್ಲಿ ನಡೆದಿರುವ ಗ್ಯಾಂಗ್‍ರೇಪ್ ಸಂಬಂಧಿಸಿದಂತೆ ಕ್ಯಾನ್ಸರ್ ರೋಗ ನಾಲ್ಕನೇ ಹಂತ ತಲುಪಿದಾಗ ಏನಾಗುತ್ತದೆಯೋ ಹಾಗೆ ಅತ್ಯಾಚಾರಿಗಳಿಗೆ ಶಿಕ್ಷೆಯಾಗಬೇಕು ಎಂದು ಅವದೂತ ವಿನಯ್ ಗುರೂಜಿ ಅಭಿಪ್ರಾಯಪಟ್ಟಿದ್ದಾರೆ.

    ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣ ಖಂಡನೀಯವಾಗಿದೆ. ರಾಜ್ಯದಲ್ಲಿ ಅತ್ಯಾಚಾರ ಪ್ರಕರಣದ ಕಾನೂನನ್ನು ಮತ್ತಷ್ಟು ಬಿಗಿಗೊಳಿಸಬೇಕಿದೆ. ಪಕ್ಷ ಭೇದವಿಲ್ಲದೆ ಕಾನೂನನ್ನು ಬಿಗಿಗೊಳಿಸುವ ಕೆಲಸ ಆಗಬೇಕು. ಅಹಿಂಸಾವಾದಿಯಾದ ನಾನು ಎಲ್ಲವನ್ನೂ ಹೇಳಲಾಗುವುದಿಲ್ಲ. ಆದರೆ ಅತ್ಯಾಚಾರಿಗಳಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಬಿಯರ್ ಬಾಟ್ಲಿ, ಬಸ್ ಟಿಕೆಟ್ ಆಧರಿಸಿ ಅತ್ಯಾಚಾರಿಗಳ ಬಂಧನ

    ಅತ್ಯಾಚಾರಿಗಳಿಗೆ, ಹೈದರಾಬಾದ್ ನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಕ್ರಮದಂತೆ ಇಲ್ಲಿಯೂ ಮಾಡಲಿ. ಕ್ಯಾನ್ಸರ್ ರೋಗ ನಾಲ್ಕನೇ ಹಂತ ತಲುಪಿದಾಗ ಏನಾಗುತ್ತದಯೋ ಹಾಗೆ ಅತ್ಯಾಚಾರಿಗಳಿಗೆ ಶಿಕ್ಷೆಯಾಗಬೇಕು ಎನ್ನುವ ಮೂಲಕ ಪರೋಕ್ಷವಾಗಿ ಶೂಟ್ ಮಾಡಿ ಎಂದರು. ಇದನ್ನೂ ಓದಿ: ದರೋಡೆ ಮಾಡಲು ಹೋಗಿ ಏನೂ ಸಿಗದಿದ್ದಾಗ ಯುವತಿಯ ಅತ್ಯಾಚಾರವೆಸಗಿದ ಕಾಮುಕರು!

    ಪ್ರಪಂಚದ ಎಲ್ಲ ದೇಶಗಳು ಒಂದಾದರೆ ತಾಲಿಬಾನ್ ಉಗ್ರರನ್ನು ಮಟ್ಟ ಹಾಕಬಹುದು. ತಾಲಿಬಾನ್ ಮೇಲೆ ದಾಳಿ ಮಾಡಿರುವ ಉಗ್ರರು ಪ್ರಾಯೋಗಿಕವಾಗಿ ಅಘ್ಘಾನ್ ದೇಶವನ್ನು ಬಳಸಿಕೊಂಡಿದ್ದಾರೆ. ಚೀನಾ ಮತ್ತು ಪಾಕಿಸ್ತಾನ, ಭಾರತದ ಮೇಲೆ ದಾಳಿ ಮಾಡುವ ಸಂಚಿನಲ್ಲಿವೆ ಎಂದು ವಿನಯ್ ಗುರೂಜಿ ಅಭಿಪ್ರಾಯಪಟ್ಟರು.

  • ಅಫ್ಘಾನ್ ಮುಸ್ಲಿಮರಿಗೆ ಭಾರತದಲ್ಲಿ ಆಶ್ರಯ ಕಲ್ಪಿಸಬಾರದು: ಪ್ರವೀಣ್ ತೊಗಾಡಿಯಾ

    ಅಫ್ಘಾನ್ ಮುಸ್ಲಿಮರಿಗೆ ಭಾರತದಲ್ಲಿ ಆಶ್ರಯ ಕಲ್ಪಿಸಬಾರದು: ಪ್ರವೀಣ್ ತೊಗಾಡಿಯಾ

    ಮುಂಬೈ: ಅಫ್ಘಾನಿಸ್ತಾನದಿಂದ ಬರುವ ಮುಸ್ಲಿಂ ಪ್ರಜೆಗಳಿಗೆ ಭಾರತದಲ್ಲಿ ಆಶ್ರಯ ಕಲ್ಪಿಸಬಾರದು ಎಂದು ಅಂತರರಾಷ್ಟ್ರೀಯ ಹಿಂದೂ ಪರಿಷತ್‍ನ ಮುಖ್ಯಸ್ಥ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ.

    ನಾಗ್ಪುರ-ವಾರ್ಧಾ ಪ್ರದೇಶದ ಮೂರು ದಿನಗಳ ಭೇಟಿಗಾಗಿ ಇಲ್ಲಿಯ ವಿಮಾನ ನಿಲ್ದಾಣಕ್ಕೆ ಬಂದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಭಾರತವು ತಾಲಿಬಾನ್ ಉದ್ದೇಶದ ಕೇಂದ್ರಬಿಂದುವಾಗಿರುವುದರಿಂದ ದೇಶವು ಬಹಳ ದೊಡ್ಡ ಅಪಾಯ ಎದುರಿಸುತ್ತಿದೆ. ಆದ್ದರಿಂದ ದೇಶವು ತಾಲಿಬಾನೀಕರಣ ಆಗುವುದನ್ನು ತಡೆಯಬೇಕಿದೆ ಎಂದರು.

    ಅಫ್ಘಾನಿಸ್ತಾನದ ಮುಸ್ಲಿಂರಿಗೆ ಆಶ್ರಯ ಕಲ್ಪಿಸ ಬಾರದು. ಆದರೆ ಅಲ್ಲಿಂದ ಬರುವ ಹಿಂದೂ ಮತ್ತು ಸಿಖ್ ನಿರಾಶ್ರಿತರಿಗೆ ಭಾರತವು ಗಡಿಯನ್ನು ತೆರೆದಿರಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಕಾಬೂಲ್ ದಾಳಿಯ ಹೊಣೆ ಹೊತ್ತ ISKP ಸಂಘಟನೆ

    Kabul Airport

    ಅಘ್ಘಾನಿಸ್ತಾನದಲ್ಲಿ ನೆತ್ತರಕೋಡಿ ಹರಿಸಿದ್ದು ನಾವೇ ಎಂದು ಇಸ್ಲಾಮಿಕ್ ಸ್ಟೇಟ್ ಐಎಸ್‍ಕೆಪಿ(ISKP) ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ. ಅಮೆರಿಕ ನೇತೃತ್ವದಲ್ಲಿ ಸೇನಾ ಪಡೆಗಳ ಹಿಂತೆಗೆತ ಕಾರ್ಯಾಚರಣೆ ವೇಳೆ ಅಘ್ಘಾನಿಸ್ತಾನದಲ್ಲಿ ಏಳು ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಬಳಿಕ ರಾತ್ರಿಯಿಡಿ ನೆತ್ತರು ಹರಿಸಿದ ಪಾಪಿಗಳು ನಾವು ಎಲ್ಲಾ ಭದ್ರತಾ ತಡೆಗೋಡೆಗಳನ್ನೂ ದಾಟಿ ಅಮೆರಿಕ ಭದ್ರತಾ ಪಡೆಗಳಿರುವ ಪ್ರದೇಶಕ್ಕಿಂತ 16 ಅಡಿ ದೂರದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸುವುದಕ್ಕೆ ಒಬ್ಬ ಬಾಂಬರ್‍ನಿಂದ ಸಾಧ್ಯವಾಗಿದೆ ಎಂದು ದಾಳಿಯ ಹೊಣೆ ಹೊತ್ತ ಐಎಸ್‍ಕೆಪಿ ಸಂಘಟನೆ ಪ್ರಚಾರ ಪಡೆದುಕೊಂಡಿದೆ.

  • ಕಾಬೂಲ್ ದಾಳಿಯ ಹೊಣೆ ಹೊತ್ತ ISKP ಸಂಘಟನೆ

    ಕಾಬೂಲ್ ದಾಳಿಯ ಹೊಣೆ ಹೊತ್ತ ISKP ಸಂಘಟನೆ

    ಕಾಬೂಲ್: ಅಘ್ಘಾನಿಸ್ತಾನದಲ್ಲಿ ನೆತ್ತರಕೋಡಿ ಹರಿಸಿದ್ದು ನಾವೇ ಎಂದು ಇಸ್ಲಾಮಿಕ್ ಸ್ಟೇಟ್ ಐಎಸ್‍ಕೆಪಿ(ISKP) ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ.

    ಅಮೆರಿಕ ನೇತೃತ್ವದಲ್ಲಿ ಸೇನಾ ಪಡೆಗಳ ಹಿಂತೆಗೆತ ಕಾರ್ಯಾಚರಣೆ ವೇಳೆ ಅಘ್ಘಾನಿಸ್ತಾನದಲ್ಲಿ ಏಳು ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಬಳಿಕ ರಾತ್ರಿಯಿಡಿ ನೆತ್ತರು ಹರಿಸಿದ ಪಾಪಿಗಳು ನಾವು ಎಲ್ಲಾ ಭದ್ರತಾ ತಡೆಗೋಡೆಗಳನ್ನೂ ದಾಟಿ ಅಮೆರಿಕ ಭದ್ರತಾ ಪಡೆಗಳಿರುವ ಪ್ರದೇಶಕ್ಕಿಂತ 16 ಅಡಿ ದೂರದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸುವುದಕ್ಕೆ ಒಬ್ಬ ಬಾಂಬರ್‍ ನಿಂದ ಸಾಧ್ಯವಾಗಿದೆ, ಎಂದು ದಾಳಿಯ ಹೊಣೆ ಹೊತ್ತ ಐಎಸ್‍ಕೆಪಿ ಸಂಘಟನೆ ಪ್ರಚಾರ ಪಡೆದುಕೊಂಡಿದೆ. ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧ ಜಗತ್ತು ಒಟ್ಟಾಗಿ ಹೋರಾಡಬೇಕು: ಭಾರತ

    ಐಎಸ್‍ಕೆಪಿ ಸಂಘಟನೆ ಅಥವಾ ಐಎಸ್‍ಐಎಸ್-ಕೆ ಇಸ್ಲಾಮಿಕ್ ಸ್ಟೇಟ್ ಖೋರಸಾನ್ ಪ್ರಾಂತ್ಯದ ಐಸಿಸ್ ಉಗ್ರ ಸಂಘಟನೆಯ ಪ್ರಾಂತೀಯ ಸಂಘಟನೆಯಾಗಿದೆ. 2015 ಜನವರಿಯಲ್ಲಿ ಈ ಸಂಘಟನೆ ಅಸ್ತಿತ್ವಕ್ಕೆ ಬಂದಿದ್ದು, ಐಎಸ್‍ಕೆಪಿ ಸಂಘಟನೆಯು ಆಫ್ಘಾನಿಸ್ತಾನ, ಪಾಕಿಸ್ತಾನದಲ್ಲಿ ಸಕ್ರಿಯವಾಗಿದೆ ಎಂಬ ಬಗ್ಗೆ ಮಾಹಿತಿ ಇದೆ. ಇದನ್ನೂ ಓದಿ: ಐಸಿಸ್-ಕೆ ಉಗ್ರರ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುಡುಗು

    ಜಿಹಾದಿ ಸಂಘಟನೆಗಳಲ್ಲೇ ಅತೀ ಕ್ರೂರವಾದ ಸಂಘಟನೆಯಾಗಿ ಗುರುತಿಸಿಕೊಂಡಿರುವ ಐಎಸ್‍ಕೆಪಿ, ತಾಲಿಬಾನ್ ಮತ್ತು ಅಮೆರಿಕ ಸೇನೆಯನ್ನು ಟಾರ್ಗೆಟ್ ಮಾಡಿಕೊಂಡು ದಾಳಿ ನಡೆಸಿರುವುದು ಸ್ಪಷ್ಟವಾಗಿದೆ. ತಾಲಿಬಾನ್, ಹಕ್ಕಾನಿ ಸಂಘಟನೆಗಿಂತಲೂ ಐಎಸ್‍ಕೆಪಿ ಸಂಘಟನೆ ಬಲಿಷ್ಠವಾಗಿದ್ದು, ತಾಲಿಬಾನ್‍ನಿಂದ ಹೊರಬಿದ್ದವರೇ ಐಎಸ್‍ಕೆಪಿ ಜೊತೆ ಸೇರಿಕೊಂಡು ಉಗ್ರರಾಗಿದ್ದಾರೆ. ಈ ಪಾಪಿಗಳು ಶಾಲಾ ಮಕ್ಕಳು, ಗರ್ಭಿಣಿ, ಹಸುಗೂಸುಗಳಿಗೂ ಗುಂಡಿಕ್ಕಿದ್ದು, ಆಸ್ಪತ್ರೆಗಳಿಗೂ ನುಗ್ಗಿ ರಕ್ತ ಹರಿಸಿರುವ ಚರಿತ್ರೆಯನ್ನು ಐಎಸ್‍ಕೆಪಿ ಹೊಂದಿದೆ.

  • ಐಸಿಸ್-ಕೆ ಉಗ್ರರ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುಡುಗು

    ಐಸಿಸ್-ಕೆ ಉಗ್ರರ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುಡುಗು

    – ಪೈಶಾಚಿಕ ದಾಳಿಯಲ್ಲಿ 13 ಅಮೆರಿಕ ಯೋಧರು ಸಾವು

    ವಾಷಿಂಗ್ಟನ್: ಅಫ್ಘಾನಿಸ್ತಾನದಲ್ಲಿ ರಕ್ತದೋಕುಳಿ ಹರಿಸಿದ ಐಸಿಸ್-ಕೆ ಉಗ್ರರ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುಡುಗಿದ್ದಾರೆ. ನಿಮ್ಮನ್ನು ಸುಮ್ಮನೆ ಬಿಡುವ ಅಥವಾ ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

    ಈ ದಾಳಿ ಮಾಡಿರುವ, ಅಮೆರಿಕಾಗೆ ಕೇಡು ಬಯಸುತ್ತಿರುವ ಶಕ್ತಿಗಳು ಇದನ್ನು ಗಮನಿಸಬೇಕು. ನಿಮ್ಮನ್ನು ಕ್ಷಮಿಸಲ್ಲ, ನಾವು ಮರೆಯಲ್ಲ. ನಿಮ್ಮನ್ನು ಬೇಟೆ ಆಡುತ್ತೆವೆ. ತಕ್ಕ ಶಾಸ್ತಿ ಮಾಡುತ್ತೇವೆ. ನಾವು ತೆರವು ಕಾರ್ಯಾಚರಣೆ ಮುಂದುವರಿಸುವುದಾಗಿ ಅಮೆರಿಕ ಹೇಳಿದೆ.  ಇದನ್ನೂ ಓದಿ: ಕಾಬೂಲ್‍ನಲ್ಲಿ 7 ಸರಣಿ ಬಾಂಬ್ ಸ್ಫೋಟ – 90ಕ್ಕೂ ಹೆಚ್ಚು ಬಲಿ, 150ಕ್ಕೂ ಹೆಚ್ಚು ಮಂದಿಗೆ ಗಾಯ

    ಐಎಸ್‍ಕೆಪಿ ವಿರುದ್ಧ ಕಾರ್ಯಾಚರಣೆಗೆ ಪ್ಲಾನ್ ಮಾಡಿ. ಐಸಿಸ್‍ಕೆ ಆಸ್ತಿ, ನಾಯಕರು, ಸೌಲಭ್ಯಗಳ ಮೇಲೆ ಸ್ಟ್ರೈಕ್ ಮಾಡಲು ಪ್ಲಾನ್ ಮಾಡಿ. ನಾವು ನಮ್ಮ ಸೇನೆ ಮೂಲಕ, ಸೂಕ್ತ ಸಂದರ್ಭದಲ್ಲಿ ಪ್ರತ್ಯುತ್ತರ ನೀಡುತ್ತೇವೆ. ಸ್ಥಳ, ಸಮಯ ನಿಗದಿ ಮಾಡುತ್ತೇವೆ. ಐಸಿಸ್ ಭಯೋತ್ಪಾದಕರು ಗೆಲ್ಲಲು ಸಾಧ್ಯವಿಲ್ಲ ಎಂದು ಅಮೆರಿಕ ಹೇಳಿದೆ.

    ತಾಲಿಬಾನ್ ತೆಕ್ಕೆಗೆ ಹೋಗಿರುವ ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಆತ್ಮಾಹುತಿ ದಾಳಿಗಳಿಂದ ತತ್ತರಿಸಿದೆ. ಭಯೋತ್ಪಾದಕರ ನಗರದಲ್ಲಿನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಗುರುವಾರ ಸಂಜೆಯಿಂದ ಮಧ್ಯರಾತ್ರಿವರೆಗೆ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿವೆ.  ಇದನ್ನೂ ಓದಿ: ಮತ್ತೊಂದು ರೇಪ್ ಕೇಸ್- ಸಿದ್ದಾಪುರದಲ್ಲಿ 11ರ ಬಾಲೆ ಮೇಲೆ ಮಾವನಿಂದಲೇ ಅತ್ಯಾಚಾರ

    ಕಾಬೂಲ್ ನಗರದಲ್ಲಿ ಮೂರು ಕಡೆ ಸೇರಿ ಒಟ್ಟು ಏಳು ಕಡೆ ಬಾಂಬ್ ಸ್ಫೋಟ ಸಂಭವಿಸಿದ್ದು, ಈವರೆಗಿಗೂ ಮಹಿಳೆಯರು, ಮಕ್ಕಳು ಸೇರಿ 90ಕ್ಕೂ ಹೆಚ್ಚು ಮಂದಿ ಬಲಿ ಆಗಿದ್ದಾರೆ. ಇದರಲ್ಲಿ 13 ಅಮೆರಿಕನ್ ಯೋಧರು ಸೇರಿದ್ದಾರೆ. 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಂಭವ ಇದೆ. ಬಾಂಬ್ ಸ್ಫೋಟ ನಡೆದ ಸ್ಥಳದಲ್ಲಿನ ದೃಶ್ಯಗಳು ಬಲು ಭೀಕರವಾಗಿವೆ. ರಕ್ತದ ಕೋಡಿ ಹರಿದಿದೆ.

  • ಕಾಬೂಲ್‍ನಲ್ಲಿ 7 ಸರಣಿ ಬಾಂಬ್ ಸ್ಫೋಟ – 90ಕ್ಕೂ ಹೆಚ್ಚು ಬಲಿ, 150ಕ್ಕೂ ಹೆಚ್ಚು ಮಂದಿಗೆ ಗಾಯ

    ಕಾಬೂಲ್‍ನಲ್ಲಿ 7 ಸರಣಿ ಬಾಂಬ್ ಸ್ಫೋಟ – 90ಕ್ಕೂ ಹೆಚ್ಚು ಬಲಿ, 150ಕ್ಕೂ ಹೆಚ್ಚು ಮಂದಿಗೆ ಗಾಯ

    ಕಾಬೂಲ್: ತಾಲಿಬಾನ್ ತೆಕ್ಕೆಗೆ ಹೋಗಿರುವ ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಆತ್ಮಾಹುತಿ ದಾಳಿಗಳಿಂದ ತತ್ತರಿಸಿದೆ. ಭಯೋತ್ಪಾದಕರ ನಗರದಲ್ಲಿನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಸಂಜೆಯಿಂದ ಮಧ್ಯರಾತ್ರಿವರೆಗೆ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿವೆ.

    ಕಾಬೂಲ್ ನಗರದಲ್ಲಿ ಮೂರು ಕಡೆ ಸೇರಿ ಒಟ್ಟು ಏಳು ಕಡೆ ಬಾಂಬ್ ಸ್ಫೋಟ ಸಂಭವಿಸಿದ್ದು, ಈವರೆಗೂ ಮಹಿಳೆಯರು, ಮಕ್ಕಳು ಸೇರಿ 90ಕ್ಕೂ ಹೆಚ್ಚು ಮಂದಿ ಬಲಿ ಆಗಿದ್ದಾರೆ. ಇದರಲ್ಲಿ 13 ಅಮೆರಿಕನ್ ಯೋಧರು ಸೇರಿದ್ದಾರೆ. 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಂಭವ ಇದೆ. ಬಾಂಬ್ ಸ್ಫೋಟ ನಡೆದ ಸ್ಥಳದಲ್ಲಿನ ದೃಶ್ಯಗಳು ಬಲು ಭೀಕರವಾಗಿವೆ. ರಕ್ತದ ಕೋಡಿ ಹರಿದಿದೆ. ಇದನ್ನೂ ಓದಿ: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟ – 11 ಮಂದಿ ಸಾವು

    ಮೃತರ ದೇಹಗಳು ಛಿದ್ರ-ಛಿದ್ರವಾಗಿವೆ. ಎಲ್ಲೆಲ್ಲೂ ಆಕ್ರಂದನ ಮುಗಿಲುಮುಟ್ಟಿದೆ. ಇದು ತಮ್ಮ ಕೃತ್ಯ ಎಂದು ಐಎಸ್‍ಕೆಪಿ(ISKP) ಹೇಳಿಕೊಂಡಿದೆ. ಇದು ತಾಲಿಬಾನ್ ಮತ್ತು ಅಮೆರಿಕ ಸೇನೆಯನ್ನು ಟಾರ್ಗೆಟ್ ಮಾಡಿಕೊಂಡು ಐಎಸ್‍ಕೆಪಿ ಈ ದಾಳಿ ನಡೆಸಿರೋದು ಸ್ಪಷ್ಟವಾಗಿದೆ. ಸರಣಿ ಸ್ಫೋಟಗಳು ನಡೆಯುವ ಕೆಲವೇ ಗಂಟೆ ಮೊದಲು ಸಂಭಾವ್ಯ ಆತ್ಮಾಹುತಿ ದಾಳಿ ಕುರಿತಂತೆ ಬ್ರಿಟನ್, ಅಮೆರಿಕ, ಆಸ್ಟ್ರೇಲಿಯಾ ಎಚ್ಚರಿಕೆ ನೀಡಿತ್ತು. ಇದನ್ನೂ ಓದಿ: ಕಾಬೂಲ್‍ನಲ್ಲಿ 3 ಸಾವಿರ ರೂ.ಗೆ ಒಂದು ಬಾಟೆಲ್ ನೀರು, ಪ್ಲೇಟ್ ರೈಸ್‍ಗೆ 7,500 ರೂ.

    ಅಫ್ಘನ್ ತೊರೆಯಲು ಮುಂದಾದವರ ಮೇಲೆ ಭಯೋತ್ಪಾದಕ ದಾಳಿಗಳು ನಡೆಯುವ ಸಂಭವ ಇದೆ. ಕೂಡಲೇ ಸುರಕ್ಷಿತ ಪ್ರಾಂತ್ಯಗಳಿಗೆ ಜನತೆ ತೆರಳಬೇಕೆಂದು ಎಚ್ಚರಿಕೆ ನೀಡಿತ್ತು. ಆದರೆ ಅಷ್ಟರಲ್ಲೇ ಐಎಸ್‍ಕೆಪಿ ಉಗ್ರರು ಈ ಭಯಾನಕ ದಾಳಿ ನಡೆಸಿದ್ದಾರೆ. ಈ ದಾಳಿಯನ್ನು ತಾಲಿಬಾನ್ ಖಂಡಿಸಿರೋದು ವಿಶೇಷ.  ಇದನ್ನೂ ಓದಿ :ಜರ್ಮನಿಯಲ್ಲಿ ಪಿಜ್ಜಾ ಡೆಲಿವರಿ ಬಾಯ್ ಆದ ಅಫ್ಘಾನ್ ಮಾಜಿ ಸಚಿವ! 

  • ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟ – 11 ಮಂದಿ  ಸಾವು

    ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟ – 11 ಮಂದಿ ಸಾವು

    ಕಾಬೂಲ್: ಅಫ್ಘಾನಿಸ್ತಾನದಲ್ಲಿ ಒಂದು ಕಡೆ ತಾಲಿಬಾನಿಗಳ ಹಿಂಸೆ ನಡುವೆ, ಕಾಬೂಲ್ ವಿಮಾನ ನಿಲ್ದಾಣದ ಪ್ರವೇಶದ್ವಾರವೊಂದರಲ್ಲಿ ಆತ್ಮಾಹುತಿ ದಾಳಿ ಸಂಭವಿಸಿದೆ.

    ಪ್ರಾಥಮಿಕ ವರದಿಗಳ ಪ್ರಕಾರ 11 ಮಂದಿ ಮೃತಪಟ್ಟಿದ್ದಾರೆ. ಸಾವು, ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.ತಾಲಿಬಾನಿ ಉಗ್ರರು ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಬ್ರಿಟನ್ ಎಚ್ಚರಿಕೆ ನೀಡಿತ್ತು. ಅಮೆರಿಕ ಕೂಡ ಕಾಬೂಲ್ ಏರ್‍ಪೋರ್ಟ್‍ನಿಂದ ದೂರ ಇರುವಂತೆ ಎಚ್ಚರಿಸಿತ್ತು. ಈ ಬೆನ್ನಲ್ಲೇ ಆತ್ಮಾಹುತಿ ದಾಳಿ ನಡೆದಿದೆ.  ಇದನ್ನೂ ಓದಿ :ಜರ್ಮನಿಯಲ್ಲಿ ಪಿಜ್ಜಾ ಡೆಲಿವರಿ ಬಾಯ್ ಆದ ಅಫ್ಘಾನ್ ಮಾಜಿ ಸಚಿವ! 

    ಯಾರೂ ದೇಶಬಿಟ್ಟು ಹೋಗಬೇಡಿ. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ರಚನೆಯಾಗಲಿದೆ ಎಂದು ತಾಲಿಬಾನಿಗಳು ಆಫ್ಘನ್ ಪ್ರಜೆಗಳಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕಾಬೂಲ್‍ನಲ್ಲಿ 3 ಸಾವಿರ ರೂ.ಗೆ ಒಂದು ಬಾಟೆಲ್ ನೀರು, ಪ್ಲೇಟ್ ರೈಸ್‍ಗೆ 7,500 ರೂ.

    ಸಾವಿರಾರು ಜನರು ವಿದೇಶಕ್ಕೆ ತೆರಳಲು ಕಾಬೂಲ್ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ. ಭಾರೀ ಸಂಖ್ಯೆಯಲ್ಲಿ ಜನ ಸೇರುತ್ತಿರುವ ಹಿನ್ನೆಲೆಯಲ್ಲಿ ಭಯ ಹುಟ್ಟಿಸಲು ಉಗ್ರರು ಈ ಬಾಂಬ್ ದಾಳಿ ನಡೆಸಿದ್ದಾರೆ.

    https://twitter.com/BarzanSadiq/status/1430901687544279043

    ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಾಂಬ್ ದಾಳಿ ಆಗಿರುವುದನ್ನು ಅಮೆರಿಕ ದೃಢಪಡಿಸಿದೆ. ಈ ಸಮಯದಲ್ಲಿ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ ಎಂದು ಪೆಂಟಗನ್ ತಿಳಿಸಿದೆ.