Tag: afghanistan

  • ಲೀಕ್ ಆಯ್ತು ಜೋ ಬೈಡನ್- ಅಶ್ರಫ್ ಘನಿ ಫೋನ್ ಸಂಭಾಷಣೆ

    ಲೀಕ್ ಆಯ್ತು ಜೋ ಬೈಡನ್- ಅಶ್ರಫ್ ಘನಿ ಫೋನ್ ಸಂಭಾಷಣೆ

    ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಅಫ್ಘಾನಿಸ್ತಾನದ ಮಾಜಿ ಪ್ರಧಾನಿ ಅಶ್ರಫ್ ಘನಿ ನಡುವಿನ 14 ನಿಮಿಷದ ಸಂಭಾಷಣೆಯ ಮಾಹಿತಿ ಹೊರ ಬಂದಿದೆ. ಕಾಬೂಲ್ ನಗರವನ್ನು ತಾಲಿಬಾನಿಗಳು ವಶಕ್ಕೆಪಡೆಯುವ 23 ದಿನ ಮೊದಲು ಈ ಮಾತುಕತೆ ನಡೆದಿತ್ತು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

    23 ಜುಲೈ 2021 ರಂದು ಘನಿ ಮತ್ತು ಬೈಡನ್ ನಡುವೆ ಫೋನ್ ಸಂಭಾಷಣೆ ನಡೆದಿತ್ತು. ಅಂದು ಜೋ ಬೈಡನ್ ತಾಲಿಬಾನಿಗಳನ್ನು ತಡೆಯುವ ಪ್ಲಾನ್ ನೀಡುವಂತೆ ಅಶ್ರಫ್ ಘನಿಗೆ ಸೂಚಿಸಿದ್ದರು. ನಾವು ಸಹಾಯ ಮಾಡಲು ಸಿದ್ಧರಿದ್ದು, ನಿಮ್ಮ ಯೋಜನೆಯ ರೂಪರೇಷಗಳನ್ನು ಮೊದಲು ತಿಳಿಸಬೇಕು ಎಂದು ಷರತ್ತು ಹಾಕಿದ್ದರು. ಜೊತೆಗೆ ತಾಲಿಬಾನಿಗಳ ವಿರುದ್ಧದ ನಡೆಯುವ ಹೋರಾಟ ಅಫ್ಘಾನಿಸ್ತಾನದ ಜನರಲ್ ಬಿಸ್ಮಿಲ್ಲಾಹ ನೇತೃತ್ವದಲ್ಲಿ ಮುನ್ನಡೆಯಬೇಕು ಎಂದು ಹೇಳಿದ್ದರು.

    ತಾಲಿಬಾನಿಗಳನ್ನು ತಡೆಯಲು ಅಮೆರಿಕ ಸಂಪೂರ್ಣ ಸಹಾಯಕ್ಕೆ ಮುಂದಾಗಿತ್ತು ಎಂಬುವುದು ಸಂಭಾಷಣೆಯಲ್ಲಿ ತಿಳಿದು ಬಂದಿದೆ. ಅಫ್ಘಾನಿಸ್ತಾನದ ರಕ್ಷಣೆಗಾಗಿಯೇ ಅಮೆರಿಕ ಏರ್ ಸ್ಟ್ರೈಕ್ ನಡೆಸಿತ್ತು ಸಹ ಎಂದು ವರದಿಗಳು ಪ್ರಕಟವಾಗುತ್ತಿವೆ. ಇದನ್ನೂ ಓದಿ: ರಕ್ತಪಾತ ತಡೆಗಾಗಿ ದೇಶ ತೊರೆದೆ- ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ

    ಇದೇ ಸಂಭಾಷಣೆಯಲ್ಲಿ ಅಶ್ರಫ್ ಘನಿ ಪಾಕಿಸ್ತಾನದ ಬಗ್ಗೆಯೂ ಎಚ್ಚರಿಕೆ ನೀಡಿದ್ದಾರೆ. ತಾಲಿಬಾನಿಗಳ ಸಪೋರ್ಟ್ ಗಾಗಿ ಪಾಕಿಸ್ತಾನ ತನ್ನ ದೇಶದ 10 ರಿಂದ 15 ಸಾವಿರ ಜನರನ್ನು ಅವರೊಂದಿಗೆ ಕಳುಹಿಸುತ್ತಿದೆ. ಅಫ್ಘಾನಿಸ್ತಾನದ ಹೋರಾಟದಲ್ಲಿ ಪಾಕ್ ಬೆಂಬಲ ಪಡೆದಿರುವ ತಾಲಿಬಾನಿಗಳು ಪ್ರಬಲವಾಗಿ ದಾಳಿ ಮಾಡುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನದ ಸ್ಥಿತಿ ಘನಘೋರ – ವಿಮಾನದಿಂದ ಬಿದ್ದು ಮೂವರು ಸಾವು

    ಜುಲೈ 23ರಂದು ಇಬ್ಬರು ನಾಯಕರು ನಡೆದಿದೆ ಎನ್ನಲಾದ ಫೋನ್ ಸಂಭಾಷಣೆಯ ಮಾಹಿತಿಯನ್ನು ನ್ಯೂಸ್ ಏಜೆನ್ಸಿ ಹಂಚಿಕೊಂಡಿದೆ. ಈ ವರದಿ ಬಗ್ಗೆ ಜೋ ಬೈಡನ್ ಅಥವಾ ಶ್ವೇತ ಭವನದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇತ್ತ ಅಶ್ರಫ್ ಘನಿ ಸಹ ಈ ವರದಿ ಬಗ್ಗೆ ಯಾವುದೇ ಹೇಳಿಕೆಯನ್ನು ಬಿಡುಗಡೆಗೊಳಿಸಿಲ್ಲ. ಇದನ್ನೂ ಓದಿ: ತಾಲಿಬಾನಿಗಳಿಗೆ ಹೆದರಿ 1 ವಿಮಾನದಲ್ಲಿ ಪ್ರಯಾಣಿಸಲು ಮುಗಿಬಿದ್ದ ನೂರಾರು ಜನ

    ಆಗಸ್ಟ್ 15ರಂದು ಅಶ್ರಫ್ ಘನಿ ದೇಶ ತೊರೆದ ನಂತರ ಫುಲ್ ಆ್ಯಕ್ಟಿವ್ ಆದ ತಾಲಿಬಾನಿಗಳು ಇಡೀ ನಗರವನ್ನು ತಮ್ಮ ತೆಕ್ಕಗೆ ತೆಗೆದುಕೊಂಡರು. ಆಗಸ್ಟ್ 31ರ ರಾತ್ರಿ ಅಮೆರಿಕ ಸೇನೆ ಹಿಂದಿರುಗುತ್ತಿದ್ದಂತೆ ಸ್ವತಂತ್ರ ಸಿಕ್ಕಿತು ಎಂದು ಗುಂಡಿನ ಮಳೆಗೈದು ಸಂಭ್ರಮಾಚರಣೆ ಮಾಡಿದ್ದವು. ನಂತರ ಅಮೆರಿಕ ಸೇನೆಯ ಹೆಲಿಕಾಪ್ಟರ್ ಗೆ ಶವ ಕಟ್ಟಿ ಹಾರಾಟಿ ನಡೆಸಿ ವಿಕೃತಿಯನ್ನು ಮೆರದಿದ್ದವು. ಇದೀಗ ಭಾರತ ಸೇರಿದಂತೆ ಹಲವು ದೇಶಗಳ ಜೊತೆ ತಾಲಿಬಾನಿಗಳು ಔಪಚಾರಿಕ ಮಾತುಕತೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಸೇನೆ ಹಿಂಪಡೆದಿದ್ದು ಅಮೆರಿಕಾ ಇತಿಹಾಸದಲ್ಲಿ ಕಪ್ಪು ಚುಕ್ಕೆ: ಬೈಡನ್ ವಿರುದ್ಧ ಟ್ರಂಪ್ ವಾಗ್ದಾಳಿ

  • ಇನ್ನೊಂದು ವಾರದಲ್ಲಿ ಅಫ್ಘಾನ್‍ನಲ್ಲಿ ತಾಲಿಬಾನ್ ಸರ್ಕಾರ – ಹೇಗಿರಲಿದೆ ಆಡಳಿತ ವ್ಯವಸ್ಥೆ?

    ಇನ್ನೊಂದು ವಾರದಲ್ಲಿ ಅಫ್ಘಾನ್‍ನಲ್ಲಿ ತಾಲಿಬಾನ್ ಸರ್ಕಾರ – ಹೇಗಿರಲಿದೆ ಆಡಳಿತ ವ್ಯವಸ್ಥೆ?

    ಕಾಬೂಲ್: ಅಮೇರಿಕ ಸೇನೆ ಸಂಪೂರ್ಣ ಖಾಲಿ ಮಾಡಿದ್ದು ಇನ್ನೊಂದು ವಾರದಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಆಡಳಿತ ಆರಂಭವಾಗಲಿದೆ. ಸರ್ಕಾರ ರಚನೆಗೆ ತಾಲಿಬಾನ್ ಸಿದ್ದತೆ ಮಾಡಿಕೊಳ್ಳುತ್ತಿದ್ದು ಈ ಬಗ್ಗೆ ಹಿರಿಯ ನಾಯಕರು ರೂಪುರೇಷೆಗಳನ್ನು ಸಿದ್ದಪಡಿಸುತ್ತಿದ್ದಾರೆ.

    ಅಫ್ಘಾನ್‍ನಲ್ಲಿ ಇರಾನ್ ಮಾದರಿ ಅಧ್ಯಕ್ಷೀಯ ಆಡಳಿತ ಜಾರಿ ಮಾಡುವ ಉದ್ದೇಶವನ್ನು ತಾಲಿಬಾನ್ ನಾಯಕರು ಹೊಂದಿದ್ದು, ದೇಶದ ರಾಜಕೀಯ ಮತ್ತು ಧಾರ್ಮಿಕ ನಿರ್ಧಾರಗಳಿಗೆ ಅಧ್ಯಕ್ಷರೇ ಸಾರ್ವಭೌಮರಾಗಲಿದ್ದಾರೆ ಎನ್ನಲಾಗಿದೆ. ಅಫ್ಘಾನ್ ಹೊಸ ಅಧ್ಯಕ್ಷರು ಕಂದಹಾರ್ ನಿಂದ ಕಾಬೂಲ್ ಆಡಳಿತವನ್ನು ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.

    ತಾಲಿಬಾನ್ ಉಗ್ರರ ಹೊಸ ಸರ್ಕಾರದಲ್ಲಿ ನ್ಯಾಯಾಂಗ, ಆಂತರಿಕ ಭದ್ರತೆ, ರಕ್ಷಣಾ, ವಿದೇಶಾಂಗ ವ್ಯವಹಾರಗಳು, ಹಣಕಾಸು, ಮಾಹಿತಿ ಪ್ರಸಾರ ಸೇರಿ 26 ಇಲಾಖೆಯ ಕ್ಯಾಬಿನೆಟ್ ಇರಲಿದೆ. ಇದನ್ನು ನಿಭಾಯಿಸಲು ಪ್ರಧಾನಮಂತ್ರಿ ರೂಪದ ಹುದ್ದೆಯನ್ನು ಸೃಷ್ಟಿಸಲು ತಾಲಿಬಾನಿಗಳು ಚಿಂತಿಸಿದ್ದಾರಂತೆ.

    ತಾಲಿಬಾನ್ ಸಂಘಟನೆಯ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂಡಜಾದ್ ಅಫ್ಘಾನಿಸ್ತಾನದ ನೂತನ ಅಧ್ಯಕ್ಷರಾಗುವ ಸಾಧ್ಯತೆ ಇದೆ. ಹಿಬತುಲ್ಲಾ ಅಖುಂಡಜಾದ್ ಆಪ್ತ ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದಾರ್ ಅಥವಾ ತಾಲಿಬಾನ್ ಮತ್ತೊರ್ವ ಮುಖಂಡ ಮುಲ್ಲಾ ಒಮರ್ ಪುತ್ರ ಮುಲ್ಲಾ ಯಾಕೂಬ್ ಪ್ರಧಾನಿಯಾಗುವ ಸಾಧ್ಯತೆ ಎನ್ನಲಾಗುತ್ತಿದೆ. ಕ್ಯಾಬಿನೆಟ್ ನಲ್ಲಿ ಶೇ.42 ರಷ್ಟಿರುವ ಪಶ್ತೂನ್‍ಗಳು ಸೇರಿ ಇತರೆ ಜಾತಿಗೂ ಅವಕಾಶ ಸಿಗಬಹುದು ಎಂದು ವರದಿಯಾಗಿದೆ.

    ಇತರೆ ದೇಶಗಳೊಂದಿಗೆ ಸ್ನೇಹ ಸೌಹಾರ್ದತೆ ಕಾಪಾಡಿಕೊಳ್ಳಲು ದೃಷ್ಟಿಯಿಂದ ವಿದೇಶಾಂಗ ವ್ಯವಹಾರಗಳಿಗೆ ತಾಲಿಬಾನ್ ವಿಶೇಷ ಆದ್ಯತೆ ನೀಡಬಹುದು. ಈಗಾಗಲೇ ತಾಲಿಬಾನ್ ಮುಖಂಡರ ಜೊತೆಗೆ ಭಾರತ, ಇರಾನ್, ಕತಾರ್, ಪಾಕಿಸ್ತಾನ, ಚೀನಾ ಸೇರಿದಂತೆ ಹಲವು ದೇಶಗಳಿಂದ ಮಾತುಕತೆ ನಡೆಸುತ್ತಿವೆ. ಪಾಕಿಸ್ತಾನದಲ್ಲಿ ಮಾಜಿ ತಾಲಿಬಾನ್ ರಾಜತಾಂತ್ರಿಕ ಮುಹಮ್ಮದ್ ಜಹೀದ್ ಅಹ್ಮದ್ಜಾಯಿ ವಿದೇಶಾಂಗ ಸಚಿವರಾಗುವ ಸಾಧ್ಯತೆ ಇದ್ದು 72 ದೇಶಗಳಲ್ಲಿ ರಾಯಭಾರಿ ಕಚೇರಿ ತೆರೆಯಲು ತಾಲಿಬಾನ್ ಚಿಂತಿಸಿದೆ. ಇದನ್ನೂ ಓದಿ : ದೋಹಾದಲ್ಲಿ ಭಾರತ-ತಾಲಿಬಾನಿಗಳ ಮೊದಲ ಔಪಚಾರಿಕ ಮಾತುಕತೆ

    ಅಬ್ದುಲ್ ಹಕೀಂ ಹಕ್ಕಾನಿ ಮುಖ್ಯ ನ್ಯಾಯಮೂರ್ತಿಯಾಗುವ ಸಾಧ್ಯತೆ ಇದೆ. ಭ್ರಷ್ಟಾಚಾರ, ಅಪರಾಧ ಕೃತ್ಯಗಳು ನಿಭಾಯಿಸಲು ಸ್ಥಳೀಯ ಮಟ್ಟದ ನ್ಯಾಯಲಯ ಸ್ಥಾಪನೆ ಮಾಡಲಿದ್ದು, ಸ್ಥಳೀಯ ಕೋರ್ಟ್‍ಗಳ ಮೂಲಕ ನ್ಯಾಯದಾನ ಮಾಡಲು ತಾಲಿಬಾನ್ ನಿರ್ಧಾರ ಮಾಡಿದೆಯಂತೆ.

    ರಾಷ್ಟ್ರೀಯ ಧ್ವಜ ಮತ್ತು ಸಂವಿಧಾನದ ಬಗ್ಗೆ ಇನ್ನು ತಾಲಿಬಾನಿಗಳು ಒಮ್ಮತಕ್ಕೆ ಬಂದಿಲ್ಲ. ಹಳೆ ಸಂವಿಧಾನ ಅಥವಾ ರಾಷ್ಟ್ರ ಧ್ವಜ ಮುಂದುವರಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದ್ದು ಹೊಸ ಧ್ವಜ ಮತ್ತು ಸಂವಿಧಾನದ ಬಗ್ಗೆ ನೂತನ ಕ್ಯಾಬಿನೆಟ್‍ನಿಂದಲೇ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಾಲಿಬಾನ್ ವಕ್ತಾರರು ಹೇಳಿದ್ದಾರೆ. ಇದನ್ನೂ ಓದಿ : ಕಾಬೂಲ್ ತೊರೆಯುವ ಮುನ್ನ 73 ಏರ್​​ಕ್ರಾಫ್ಟ್ ನಿಷ್ಕ್ರಿಯಗೊಳಿಸಿದ ಅಮೆರಿಕ ಸೈನಿಕರು

    ಅಫ್ಘಾನ್‍ನಲ್ಲಿ ಮಹಿಳೆಯರಿಗೂ ಸ್ಥಾನಮಾನ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಮಹಿಳೆಯರ ಹಕ್ಕುಗಳ ಬಗ್ಗೆ ತಾಲಿಬಾನ್ ಚಿಂತನೆ ಮಾಡಿದೆ. ಮಹಿಳೆಯರ ಹಕ್ಕುಗಳ ವಿಚಾರದಿಂದ ಜಾಗತಿಕ ಮಟ್ಟದಲ್ಲಿ ವಿರೋಧ ವ್ಯಕ್ತವಾಗುವ ಹಿನ್ನಲೆಯಲ್ಲಿ ಶಿಕ್ಷಣ ಉದ್ಯೋಗಗಳಲ್ಲಿ ಅವಕಾಶ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಷರಿಯತ್ ಕಾನೂನು ಅಡಿಯಲ್ಲಿ ಮಹಿಳೆಯರಿಗೆ ಅವಕಾಶಕ್ಕೆ ಚಿಂತನೆ ನಡೆದಿದ್ದು ಈ ಮೂಲಕ ತಾಲಿಬಾನ್ ಬದಲಾಗಿದೆ ಎಂದು ಸಾಬೀತುಪಡಿಸುವ ಪ್ರಯತ್ನವೂ ನಡೆಯಲಿದೆ ಎನ್ನಲಾಗುತ್ತಿದೆ.

  • ದೋಹಾದಲ್ಲಿ ಭಾರತ-ತಾಲಿಬಾನಿಗಳ ಮೊದಲ ಔಪಚಾರಿಕ ಮಾತುಕತೆ

    ದೋಹಾದಲ್ಲಿ ಭಾರತ-ತಾಲಿಬಾನಿಗಳ ಮೊದಲ ಔಪಚಾರಿಕ ಮಾತುಕತೆ

    – ರಾಯಭಾರಿಯನ್ನ ಭೇಟಿಯಾದ ತಾಲಿಬಾನಿ ನಾಯಕ

    ದೋಹಾ: ಭಾರತ ಮತ್ತು ತಾಲಿಬಾನಿಗಳ ನಡುವಿನ ಮೊದಲ ಔಪಚಾರಿಕ ಮಾತುಕತೆ ಇಂದು ದೋಹಾದಲ್ಲಿ ನಡೆದಿದೆ. ಕತಾರ್ ನಲ್ಲಿ ಭಾರತದ ರಾಯಭಾರಿ ದೀಪಕ್ ಮಿತ್ತಲ್ ಅವರನ್ನು ತಾಲಿಬಾನಿ ನಾಯಕ ಶೇರ್ ಮೊಹಮ್ಮದ್ ಅಬ್ಬಾಸ್ ಭೇಟಿಯಾಗಿರುವ ಬಗ್ಗೆ ಸರ್ಕಾರ ಹೇಳಿದೆ.

    ಅಬ್ಬಾಸ್ ತಾಲಿಬಾನಿಗಳ ರಾಜಕೀಯ ವಿಭಾಗದ ಮುಖ್ಯಸ್ಥನಾಗಿದ್ದು, ಭಾರತದ ಜೊತೆಗೆ ಹಳೆಯ ಸ್ನೇಹ ಹೊಂದಿರುವ ನಾಯಕ ಎನ್ನಲಾಗಿದೆ. ಇದೀಗ ದೀಪಕ್ ಮಿತ್ತಲ್ ಮತ್ತು ಅಬ್ಬಾಸ್ ಭೇಟಿ ಹಲವು ಚರ್ಚೆಗಳಿಗೆ ಮುನ್ನಡಿಯಾಗಿದೆ. 1980ರಲ್ಲಿ ಅಬ್ಬಾಸ್ ಭಾರತದಲ್ಲಿದ್ದು, ಡೆಹರಾಡೂನ್ ನಲ್ಲಿರುವ ಮಿಲಿಟರಿ ಅಕಾಡೆಮಿಲ್ಲಿ ತರಬೇತಿ ಪಡೆದುಕೊಂಡಿದ್ದನು. ನಂತರ ಅಫ್ಘಾನಿಸ್ತಾನ ಸೇನೆ ಸಹ ಸೇರ್ಪಡೆಯಾಗಿದ್ದನು. ಅಫ್ಘಾನಿಸ್ತಾನ ತೊರೆದ ಬಳಿಕ ತಾಲಿಬಾನಿ ಗ್ಯಾಂಗ್ ಸೇರಿಕೊಂಡಿರುವ ಬಗ್ಗೆ ವರದಿಯಾಗಿದೆ.

    ಭೇಟಿಯ ವೇಳೆ ದೀಪಕ್ ಮಿತ್ತಲ್, ಭಾರತ ಪ್ರದೇಶದಲ್ಲಿ ಅಫ್ಘಾನಿಸ್ತಾನ ಉಗ್ರ ಚುಟುವಟಿಕೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಭಾರತದ ಆತಂಕ ನಮಗೆ ಗೊತ್ತಾಗುತ್ತದೆ. ತಾಲಿಬಾನ್ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಿದೆ ಎಂದು ಅಬ್ಬಾಸ್ ಭರವಸೆ ನೀಡಿರುವ ಬಗ್ಗೆ ಹೇಳಲಾಗುತ್ತಿದೆ. ಇದನ್ನೂ ಓದಿ: ಕಾಬೂಲ್ ತೊರೆಯುವ ಮುನ್ನ 73 ಏರ್​​ಕ್ರಾಫ್ಟ್ ನಿಷ್ಕ್ರಿಯಗೊಳಿಸಿದ ಅಮೆರಿಕ ಸೈನಿಕರು

    ಮಾತುಕತೆಯಲ್ಲಿ ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ದೇಶಕ್ಕೆ ಹಿಂದಿರುಗಿಸುವ ಕುರಿತು ಸುದೀರ್ಘ ಚರ್ಚೆ ನಡೆದಿದೆ. ಇದೇ ವೇಳೆ ಅಫ್ಘಾನಿಸ್ತಾನದಲ್ಲಿರುವ ಅಲ್ಪಸಂಖ್ಯಾತರು ಭಾರತ ಆಗಮಿಸಲು ಇಚ್ಛಿಸಿದ್ರೆ ನಾವು ಬರಮಾಡಿಕೊಳ್ಳಲು ಸಿದ್ಧರಿದ್ದೇವೆ. ಭಾರತದ ಭೌಗೋಳಿಕ ಪ್ರದೇಶದಲ್ಲಿ ಯಾವುದೇ ಭಯೋತ್ಪಾದಕ ಚಟುವಟಿಕೆ ನಡೆಸಕೂಡದು ಎಂಬ ಎಚ್ಚರಿಕೆಯನ್ನು ಮಿತ್ತಲ್ ನೀಡಿದ್ದಾರೆ. ಇದನ್ನೂ ಓದಿ: ಕಾರಿನಿಂದ ರಾಕೆಟ್ ಉಡಾಯಿಸ್ತಿದ್ದ ಉಗ್ರರು- ಫೋಟೋಗಳು ಔಟ್

  • ಕಾಬೂಲ್ ತೊರೆಯುವ ಮುನ್ನ 73 ಏರ್​​ಕ್ರಾಫ್ಟ್ ನಿಷ್ಕ್ರಿಯಗೊಳಿಸಿದ ಅಮೆರಿಕ ಸೈನಿಕರು

    ಕಾಬೂಲ್ ತೊರೆಯುವ ಮುನ್ನ 73 ಏರ್​​ಕ್ರಾಫ್ಟ್ ನಿಷ್ಕ್ರಿಯಗೊಳಿಸಿದ ಅಮೆರಿಕ ಸೈನಿಕರು

    ಕಾಬೂಲ್: ತಾಲಿಬಾನಿಗಳು ನೀಡಿದ ಎಚ್ಚರಿಕೆಯಂತೆ ಅಮೆರಿಕ ಸೇನೆ ಸೋಮವಾರ ಕಾಬೂಲ್ ನಿಂದ ತೆರಳಿದ್ದಾರೆ. ಆದ್ರೆ ತೆರಳುವ ಮುನ್ನ ಕಾಬೂಲ್ ವಿಮಾನ ನಿಲ್ದಾಣದಲ್ಲಿ 73 ಏರ್ ಕ್ರಾಫ್ಟ್ ಗಳನ್ನು ಬಳಕೆ ಬರದಂತೆ ಮಾಡಿ ಹೋಗಿದ್ದಾರೆ. ಇತ್ತ ಅಮೆರಿಕ ಸೈನಿಕರ ವಿಮಾನ ಟೇಕಾಫ್ ಆಗುತ್ತಿದ್ದಂತೆ ತಾಲಿಬಾನಿಗಳು ಕಾಬೂಲ್ ಏರ್ ಪೋರ್ಟ್ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

    73 ಏರ್ ಕ್ರಾಫ್ಟ್ ಗಳನ್ನು ಹಮಿದ್ ಕರ್ಜಾಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ. ಆದ್ರೆ ಇನ್ಮುಂದೆ ಈ ಏರ್ ಕ್ರಾಫ್ಟ್ ಬಳಕೆಗೆ ಬರದಂತೆ ನಿಷ್ಕ್ರಿಯಗೊಳಿಸಲಾಗಿದೆ. ಈ ವಿಮಾನಗಳು ಮುಂದೆ ಹಾರಾಡುವ ಸ್ಥಿತಿಯಲ್ಲಿಲ್ಲ. ಇವುಗಳನ್ನು ಮತ್ತೆ ರಿಪೇರಿ ಮಾಡಲು ಸಹ ಸಾಧ್ಯವಿಲ್ಲ ಎಂದು ಸೆಂಟ್ರಲ್ ಕಮಾಂಡ್ ಮುಖ್ಯಸ್ಥ ಜನರಲ್ ಕೆನೆಥ್ ಮೌಕೆಂಜಿ ಹೇಳಿದ್ದಾರೆ.

    ಅಮೆರಿಕ ಸೇನೆ ಸುಮಾರು 70 ಮೇನ್ ರಿಜಿಸ್ಟೆಂಟ್ ಆಂಬುಶ್ ಪ್ರೊಟೆಕ್ಷನ್ (MRAP) ವೆಹಿಕಲ್ ಗಳನ್ನು ಕಾಬೂಲ್ ವಿಮಾನನಿಲ್ದಾಣದಲ್ಲಿ ಬಿಟ್ಟು ತೆರಳಿದೆ. ಈ ವೆಹಿಕಲ್ ಗಳು ಐಇಡಿ ದಾಳಿ ಮತ್ತು ಶತ್ರುಗಳ ದಾಳಿ ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹೊಂದಿವೆ. ಒಂದು ವೆಹಿಕಲ್ ಬೆಲೆ ಸುಮಾರು 10 ಲಕ್ಷ ಡಾಲರ್ ಗೂ ಅಧಿಕವಾಗಿದೆ. ಆದ್ರೆ ಇವುಗಳನ್ನು ಸಹ ಅಮೆರಿಕ ಬಳಕೆ ಬಾರದಂತೆ ನಿಷ್ಕ್ರಿಯ ಮಾಡಿದೆ. ಇದನ್ನೂ ಓದಿ: ಕಾರಿನಿಂದ ರಾಕೆಟ್ ಉಡಾಯಿಸ್ತಿದ್ದ ಉಗ್ರರು- ಫೋಟೋಗಳು ಔಟ್

    ಅಮೆರಿಕ ಸೇನೆ ತೆರಳುತ್ತಿದ್ದಂತೆ ರಾತ್ರಿ 12 ಗಂಟೆಗೆ ಕಾಬೂಲ್ ವಿಮಾನ ನಿಲ್ದಾಣ ಪ್ರವೇಶಿಸಿದ ತಾಲಿಬಾನಿಗಳು, ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ಇನ್ಮುಂದೆ ಸಂಪೂರ್ಣ ಅಫ್ಘಾನಿಸ್ತಾನ ನಮ್ಮದು. ಇದು ನಮ್ಮೆಲ್ಲರ ಗೆಲುವು, ಇದುವೆ ಸ್ವತಂತ್ರ ದಿನ. ಅಮೆರಿಕ ಸೇರಿದಂತೆ ಎಲ್ಲ ದೇಶಗಳ ಜೊತೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳೋಣ ಎಂದು ತಾಲಿಬಾನಿಗಳು ಘೋಷಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಇದನ್ನೂ ಓದಿ: ತಾಲಿಬಾನಿಗಳ ಮುಂದಿನ ಪ್ರಧಾನಿ ಅಫ್ರಿದಿ – ನೆಟ್ಟಿಗರಿಂದ ಫುಲ್ ಟ್ರೋಲ್

  • ತಾಲಿಬಾನಿಗಳ ಮುಂದಿನ ಪ್ರಧಾನಿ ಅಫ್ರಿದಿ – ನೆಟ್ಟಿಗರಿಂದ ಫುಲ್ ಟ್ರೋಲ್

    ತಾಲಿಬಾನಿಗಳ ಮುಂದಿನ ಪ್ರಧಾನಿ ಅಫ್ರಿದಿ – ನೆಟ್ಟಿಗರಿಂದ ಫುಲ್ ಟ್ರೋಲ್

    ಇಸ್ಲಾಮಾಬಾದ್: ಉಗ್ರರ ಆಡಳಿತವನ್ನು ನೋಡಿ ಜನರು ಅಫ್ಘಾನಿಸ್ತಾನ ತೊರೆಯುತ್ತಿದ್ದರೆ ಇತ್ತ ಪಾಕಿಸ್ತಾನದ ಮಾಜಿ ಆಟಗಾರ ಶಾಹಿದ್ ಅಫ್ರಿದಿ ತಾಲಿಬಾನ್ ಪರ ಹೇಳಿಕೆ ನೀಡಿ ಈಗ ಫುಲ್ ಟ್ರೋಲ್ ಆಗುತ್ತಿದ್ದಾರೆ.

    ಶಾಹಿದ್ ಅಫ್ರಿದಿ ಅವರು, ತಾಲಿಬಾನಿಗಳು ಅತ್ಯಂತ ಧನಾತ್ಮಕ ಮನಸ್ಸಿನಿಂದ ಬಂದಿದ್ದಾರೆ ಎಂದು ಹೇಳಿ ಉಗ್ರರನ್ನು ಹೊಗಳಿದ್ದಾರೆ.

    ಪಾಕಿಸ್ತಾನದ ಪತ್ರಕರ್ತೆ ನೈಲಾ ಇನಾಯತ್ ಅವರು ಶಾಹಿದ್ ಅಫ್ರಿದಿ ಅವರು ಮಾಧ್ಯಮಗಳ ಜೊತೆ ಮಾತನಾಡಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ತಾಲಿಬಾನಿಗಳು ಧನಾತ್ಮಕ ಮನಸ್ಸಿನಿಂದ ಬಂದಿದ್ದಾರೆ. ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಮಹಿಳೆಯರಿಗೆ ಅವಕಾಶ ನೀಡುತ್ತಿದ್ದಾರೆ ಎಂದು ಅಫ್ರಿದಿ ಹೇಳಿದ್ದಾರೆ. ಇದನ್ನೂ ಓದಿ : ಇನ್ಮೇಲಿಂದ ಅಫ್ರಿದಿಗೂ ನನಗೂ ಸಂಬಂಧವಿಲ್ಲ, ಅವನು ಮಿತಿ ಮೀರಿದ್ದಾನೆ: ಭಜ್ಜಿ ಗರಂ 

    ಅಫ್ರಿದಿ ತಾಲಿಬಾನಿಗಳ ಪರ ಬ್ಯಾಟಿಂಗ್ ಮಾಡಿದ್ದಕ್ಕೆ ಜನ ಈಗ ಟೀಕಿಸಿ ವ್ಯಂಗ್ಯವಾಡುತ್ತಿದ್ದಾರೆ. “ತಾಲಿಬಾನಿಗಳ ಮುಂದಿನ ಪ್ರಧಾನಿ ಅಫ್ರಿದಿ”, “ಪಾಕಿಸ್ತಾನ ಉಗ್ರರ ಸ್ವರ್ಗ ಎನ್ನುವುದಕ್ಕೆ ಇಲ್ಲಿದೆ ಉತ್ತಮ ಉದಾಹರಣೆ” ಎಂದು ಜನ ಸಾಮಾಜಿಕ ಜಾಲತಾಣದಲ್ಲಿ ಬರೆದು ಟ್ರೋಲ್ ಮಾಡುತ್ತಿದ್ದಾರೆ.

    https://twitter.com/AxisofE/status/1432641701055643650

    ಭಾರತದ ಬಗ್ಗೆ ಕಟುವಾಗಿ ಟೀಕೆ ಮಾಡುವ ಮನಸ್ಥಿತಿ ಹೊಂದಿರುವ ಅಫ್ರಿದಿ ಈ ಹಿಂದೆ ನಾನು ಟಿವಿಯನ್ನು ಒಡೆದು ಹಾಕಿದ್ದೆ ಎಂದು ಹೇಳಿದ್ದರು. ಇದನ್ನೂ ಓದಿ : ನನ್ನ ವೃತ್ತಿಜೀವನ ಹಾಳು ಮಾಡಿದ್ದೇ ಅಫ್ರಿದಿ- ದಾನಿಶ್ ಕನೇರಿಯಾ

    ಶಾಹಿದ್ ಅಫ್ರಿದಿ ಈ ಕುರಿತು ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದ ಹಳೆಯ ವಿಡಿಯೋ ಹಿಂದೆ ವೈರಲ್ ಆಗಿತ್ತು. ಟಿವಿ ವಾಹಿನಿಯ ನಿರೂಪಕಿ ಸಂದರ್ಶನವೊಂದರಲ್ಲಿ ನೀವು ಎಷ್ಟು ಬಾರಿ ಟಿವಿ ಒಡೆದಿದ್ದೀರಿ ಎಂದು ಪ್ರಶ್ನಿಸಿದ್ದರು. ಇದಕ್ಕೆ ಅಫ್ರಿದಿ, ನಾನು ಒಂದು ಬಾರಿ ಟಿವಿಯನ್ನು ಒಡೆದಿದ್ದೇನೆ ಎಂದು ಉತ್ತರಿಸಿದ್ದರು.

    ನನ್ನ ಪತ್ನಿಯ ಕಾರಣದಿಂದಾಗಿ ಒಂದು ಬಾರಿ ಟಿವಿ ಒಡೆದಿದ್ದೇನೆ. ಭಾರತೀಯ ವಾಹಿನಿಯೊಂದರ ಡ್ರಾಮಾ ಶೋ ತುಂಬಾ ಜನಪ್ರಿಯವಾಗಿತ್ತು. ಈ ಶೋವನ್ನು ನನ್ನ ಪತ್ನಿ ನೋಡುತ್ತಿದ್ದಳು, ಆಗ ನೀನೊಬ್ಬಳೆ ನೋಡು ಮಕ್ಕಳು ಇದನ್ನು ನೋಡಲು ಬಿಡಬೇಡ ಎಂದು ಹೇಳಿದ್ದೆ. ಒಂದು ಬಾರಿ ನಾನು ರೂಮಿನಿಂದ ಹೊರಗಡೆ ಬಂದಾಗ ನನ್ನ ಮಕ್ಕಳಲ್ಲಿ ಒಬ್ಬಳು ಟಿವಿ ಶೋ ನೋಡಿಕೊಂಡು ಆರತಿ ಮಾಡುವುದನ್ನು ಅನುಕರಣೆ ಮಾಡುತ್ತಿದ್ದಳು. ಇದನ್ನು ಕಂಡ ತಕ್ಷಣ ಕೋಪ ಬಂತು ಹೀಗಾಗಿ ಟಿವಿಯನ್ನೇ ಒಡೆದು ಹಾಕಿದ್ದೆ ಎಂದು ಹೇಳಿದ್ದರು.

  • ದೇಶವನ್ನೇ ತೊರೆದ ತಾಲಿಬಾನ್ ನಾಯಕನನ್ನು ಸಂದರ್ಶಿಸಿದ ಪತ್ರಕರ್ತೆ

    ದೇಶವನ್ನೇ ತೊರೆದ ತಾಲಿಬಾನ್ ನಾಯಕನನ್ನು ಸಂದರ್ಶಿಸಿದ ಪತ್ರಕರ್ತೆ

    ಕಾಬೂಲ್: ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ತಾಲಿಬಾನ್ ನಾಯಕರ ಜೊತೆ ಲೈವ್‍ನಲ್ಲಿ ಕುಳಿತು ಸಂದರ್ಶನ ನಡೆಸಿದ್ದ ಮಹಿಳಾ ಪತ್ರಕರ್ತೆ ತಾಲಿಬಾನಿಗರಿಗೆ ಹೆದರಿ ದೇಶವನ್ನೇ ತೊರೆದಿದ್ದಾರೆ.

    ಟೋಟೋ ನ್ಯೂಸ್ ಚಾನೆಲ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬೆಹೆಸ್ತಾ ಅರ್ಗಾಂಡ್(24) ಆಗಸ್ಟ್ 17ರಂದು ತಾಲಿಬಾನ್ ನಾಯಕನ ಜೊತೆ ನೇರಪ್ರಸಾರದಲ್ಲಿ ಕುಳಿತು ಸಂದರ್ಶನ ನಡೆಸಿದ್ದರು. ಇದನ್ನೂ ಓದಿ:ಮನೆ ಮೇಲ್ಛಾವಣಿ, ಗೋಡೆ ಕುಸಿತ- ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರು

    women journalist

    ವೃತ್ತಿ ಜೀವನದಲ್ಲಿ ಉನ್ನತ ಸ್ಥಾನದಲ್ಲಿ ಬೆಹೆಸ್ತಾ ಅರ್ಗಾಂಡ್ 9ನೇ ತರಗತಿಯಲ್ಲಿ ಓದುತ್ತಿಗಲಿಂದಲೂ ಪತ್ರಕರ್ತೆಯಾಗುವ ಕನಸ್ಸನ್ನು ಹೊಂದಿದ್ದರು. ಆದರೆ ಇದೀಗ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಂಡ ನಂತರ ಪತ್ರಕರ್ತರು ಹಾಗೂ ಅಲ್ಲಿನ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಭಯಭೀತರಾಗಿ ಬೆಹೆಸ್ತಾ ಅರ್ಗಾಂಡ್ ದೇಶ ತೊರೆದಿದ್ದಾರೆ.  ಇದನ್ನೂ ಓದಿ:ಲಾರಿ ರಿಪೇರಿ ಮಾಡುತ್ತಿದ್ದವರಿಗೆ ಪಿಕಪ್ ಡಿಕ್ಕಿ- ಮೂವರು ಸಾವು

    ಈ ಕುರಿತಂತೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನಾನು ದೇಶವನ್ನು ತೊರೆದಿದ್ದೇನೆ ಕಾರಣ ಲಕ್ಷಾಂತರ ಜನರಂತೆ ನಾನು ಕೂಡ ತಾಲಿಬಾನಿಗರಿಗೆ ಹೆದರುತ್ತೇನೆ. ಹೀಗಾಗಿ ದೇಶ ಬಿಟ್ಟು ಹೋಗುತ್ತಿದ್ದೇನೆ. ಒಂದು ವೇಳೆ ತಾಲಿಬಾನಿಗರು ತಾವು ನೀಡಿದ ಭರವಸೆಯಂತೆಯೇ ನಡೆದುಕೊಂಡರೆ ಹಾಗೂ ದೇಶದ ಪರಿಸ್ಥಿತಿ ಸುಧಾರಿಸಿದರೆ, ನಾನು ಪುನಃ ದೇಶಕ್ಕೆ ಮರಳುತ್ತೇನೆ ಎಂದಿದ್ದಾರೆ.

  • ಕಾರಿನಿಂದ ರಾಕೆಟ್ ಉಡಾಯಿಸ್ತಿದ್ದ ಉಗ್ರರು- ಫೋಟೋಗಳು ಔಟ್

    ಕಾರಿನಿಂದ ರಾಕೆಟ್ ಉಡಾಯಿಸ್ತಿದ್ದ ಉಗ್ರರು- ಫೋಟೋಗಳು ಔಟ್

    ಕಾಬೂಲ್: ಇಂದು ಬೆಳಗ್ಗೆ ಕಾಬೂಲ್ ವಿಮಾನ ನಿಲ್ದಾಣದ ವ್ಯಾಪ್ತಿಯಲ್ಲಿ ಐದು ರಾಕೆಟ್ ಗಳ ದಾಳಿ ನಡೆದಿದ್ದು, ಆದ್ರೆ ಈ ಯತ್ನ ವಿಫಲವಾಗಿದೆ ಎಂದು ಹೇಳಲಾಗುತ್ತಿದೆ. ಅಮೆರಿಕ ಸೇನೆ ಮಿಸೈಲ್ ಸಿಸ್ಟಂ (ರಾಕೆಟ್ ಉಡಾವಣೆ ಮಾಡುತ್ತಿದ್ದ ಕಾರ್)ನ್ನು ಸ್ಫೋಟಗೊಳಿಸಿದೆ.

    ಐಸಿಸ್-ಕೆ ಉಗ್ರ ಸಂಘಟನೆ ಅಮೆರಿಕಾ ನಡೆಸಿದ ಏರ್ ಸ್ಟ್ರೈಕ್ ಗೆ ಪ್ರತ್ಯುತ್ತರ ನಡೆಸಲು ಈ ರಾಕೆಟ್ ದಾಳಿ ನಡೆಸಿದೆ ಎನ್ನಲಾಗಿದೆ. ಭಾನುವಾರ ಸಹ ಕಾಬೂಲ್ ವಿಮಾನ ನಿಲ್ದಾಣದ ಬಳಿಯ ಜನವಸತಿ ಪ್ರದೇಶದ ಮೇಲೆ ರಾಕೆಟ್ ಬಿದ್ದು ಸ್ಫೋಟಗೊಂಡಿತ್ತು. ಅಮೆರಿಕ ಸೇನಾ ತುಕಡಿಯನ್ನು ಗುರಿಯಾಗಿಸಿಯೇ ಈ ದಾಳಿ ನಡೆದಿತ್ತು. ಆದ್ರೆ ಗುರಿ ತಪ್ಪಿದ ರಾಕೆಟ್ ಜನವಸತಿ ಪ್ರದೇಶದ ಮೇಲೆ ಪತನಗೊಂಡಿತ್ತು. ಸದ್ಯ ಕಾಬೂಲ್ ಏರ್ ಪೋರ್ಟ್ ಮೇಲಿನ ದಾಳಿ ನಡೆಸಿದ ಕಾರ್ ಫೋಟೋಗಳು ಹೊರ ಬಂದಿವೆ.

    ಸೋಮವಾರ ಬೆಳಗ್ಗೆ ಕಾಬೂಲ್‍ನ ಸಲೀಂ ಕರ್ವಾನ್ ಬಳಿ ರಾಕೆಟ್ ದಾಳಿ ನಡೆಸಲಾಗಿದ್ದು, ಜೊತೆಗೆ ಗುಂಡಿನ ದಾಳಿ ಕೂಡ ನಡೆಸಲಾಗಿದೆ. ಆದರೆ ಘಟನೆ ವೇಳೆ ಗುಂಡು ಹಾರಿಸಿದವರು ಯಾರು ಎಂಬುದರ ಬಗ್ಗೆ ಪತ್ತೆಯಾಗಿಲ್ಲ. ಅಲ್ಲದೇ 3 ಬಾರಿ ಸ್ಫೋಟಗೊಂಡ ಶಬ್ಧ ಮತ್ತು ಆಕಾಶದಲ್ಲಿ ಏನೋ ಮಿಂಚಿದಂತೆ ಕಂಡಿದೆ. ಈ ಸ್ಫೋಟಗಳ ನಂತರ ಜನರು ಸ್ಥಳ ತೊರೆದು ಹೋಗಿರುವುದಾಗಿ ಎಂದು ಅಲ್ಲಿನ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಾಬೂಲ್ ಏರ್ ಪೋರ್ಟ್ ಬಳಿ ಐಸಿಸ್-ಕೆ ರಾಕೆಟ್ ದಾಳಿ – ಇಬ್ಬರ ಸಾವು.

    ರಾಕೆಟ್ ದಾಳಿಯನ್ನು ವಿಫಲಗೊಸುವಲ್ಲಿ ನಮ್ಮ ಸೇನೆ ಯಶಸ್ವಿಯಾಗಿದೆ ಎಂದು ಶ್ವೇತ ಭವನ ಅಧಿಕೃತ ಹೇಳಿಕೆ ನೀಡಿದೆ. ದಾಳಿಯ ಎಚ್ಚರಿಕೆಯನ್ನು ಮೊದಲೇ ನೀಡಿ, ಅಫ್ಘಾನಿಸ್ತಾನದಲ್ಲಿರುವ ಅಮೆರಿಕನ್ನರಿಗೆ ವಿಮಾನ ನಿಲ್ದಾಣದತ್ತ ಬರಬಾರದು ಎಂದು ಸಂದೇಶ ರವಾನಿಸಿತ್ತು. ಗುರುವಾರ ನಡೆದ ದಾಳಿಯಲ್ಲಿ 13 ಸೈನಿಕರು ಸೇರಿದಂತೆ 170 ಜನರು ಸಾವನ್ನಪ್ಪಿದ್ದರು. ಇದನ್ನೂ ಓದಿ: ತಾಲಿಬಾನಿಗಳ ಹೊಸ ಆದೇಶ- ಹುಡುಗ, ಹುಡುಗಿ ಜೊತೆಯಾಗಿ ಓದುವಂತಿಲ್ಲ

  • ಶಾಂತಿಯಿಂದ ಆಗಲಿಲ್ಲ – ಈಗ ಪಂಜ್‍ಶೀರ್ ವಶಕ್ಕೆ ತಾಲಿಬಾನಿಗಳ ಕುತಂತ್ರ

    ಶಾಂತಿಯಿಂದ ಆಗಲಿಲ್ಲ – ಈಗ ಪಂಜ್‍ಶೀರ್ ವಶಕ್ಕೆ ತಾಲಿಬಾನಿಗಳ ಕುತಂತ್ರ

    ಕಾಬೂಲ್: ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡರೂ ಪಂಜ್‍ಶೀರ್ ಕಣಿವೆಯನ್ನು ತಾಲಿಬಾನ್ ಇನ್ನೂ ವಶಪಡಿಸಿಕೊಂಡಿಲ್ಲ. ಈಗ ಈ ಕಣಿವೆಯನ್ನು ಕುತಂತ್ರದ ಮೂಲಕ ವಶಪಡಿಸಿಕೊಳ್ಳಲು ತಾಲಿಬಾನ್ ಉಗ್ರರು ಮುಂದಾಗಿದ್ದಾರೆ.

    ಹೌದು. ಪಂಜ್‍ಶೀರ್ ಪ್ರಾಂತ್ಯದಲ್ಲಿ ತಾಲಿಬಾನ್ ಈಗ ಇಂಟರ್ನೆಟ್, ದೂರವಾಣಿ ಸಂಪರ್ಕವನ್ನೇ ಕಡಿತಗೊಳಿಸಿದೆ. ಈ ಮೂಲಕ ಅಲ್ಲಿನ ಸಂವಹನ ವ್ಯವಸ್ಥೆಯನ್ನು ಸಂಪೂರ್ಣ ಬಂದ್ ಮಾಡಿದೆ.

    ಪಂಜ್‍ಶೀರ್ ಅಫ್ಘಾನಿಸ್ತಾನ ಪ್ರಾಂತ್ಯವಾಗಿದ್ದರೂ ಹಲವಾರು ತಾಲಿಬಾನ್ ವಿರೋಧಿಗಳು ಪಂಜ್‌ಶೀರ್‌ನಲ್ಲಿ ಜಮಾಯಿಸಿದ್ದಾರೆ. ಅಫ್ಘಾನ್ ಬಂಡುಕೋರ ಕಮಾಂಡರ್ ಅಹ್ಮದ್ ಶಾ ಮಸೂದ್ ಅವರ ಪುತ್ರ ಅಹ್ಮದ್ ಮಸೂದ್, ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಇಲ್ಲಿ ನೆಲೆಸಿದ್ದಾರೆ.

    ಅಹ್ಮದ್ ಮಸೂದ್ ಅವರ ವಕ್ತಾರ ಫಾಹೀಮ್ ದಷ್ಟಿ ಅವರು ಆಗಸ್ಟ್ 28ರ ಸಂಜೆಯಿಂದ ಪಂಜ್‍ಶೀರ್ ಪ್ರಾಂತ್ಯದಲ್ಲಿ ಟೆಲಿಕಾಂ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಮೊಬೈಲ್ ಇಂಟರ್ನೆಟ್ ಅಲ್ಲದೇ ಕರೆ, ಸಂದೇಶ ಸೇವೆಗಳನ್ನು ಸಹ ಕಡಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತಾಲಿಬಾನಿಗಳ ಹೊಸ ಆದೇಶ- ಹುಡುಗ, ಹುಡುಗಿ ಜೊತೆಯಾಗಿ ಓದುವಂತಿಲ್ಲ

    ಸಂವಹನ ವ್ಯವಸ್ಥೆಯನ್ನು ಬಂದ್ ಮಾಡಿದರೆ ವಿದೇಶಗಳಿಗೆ ಸುದ್ದಿ ಹೋಗುವುದನ್ನು ತಡೆಯಬಹುದು ಮತ್ತು ಈ ಪ್ರಾಂತ್ಯದ ಮೇಲೆ ದಾಳಿ ಮಾಡುವುದು ಸುಲಭ ಎಂಬ ಲೆಕ್ಕಾಚಾರವನ್ನು ಹಾಕಿದ ತಾಲಿಬಾನ್ ಈಗ ಇಂಟರ್ನೆಟ್ ಸೇವೆಯನ್ನೇ ಬಂದ್ ಮಾಡಿದೆ. ಇದನ್ನೂ ಓದಿ: ತಾಲಿಬಾನಿಗಳ ಮೇಲೆ ಗುಂಡಿನ ಮಳೆ – ನಾರ್ಥರ್ನ್ ಅಲಯನ್ಸ್‌ಗೆ ತಜಕಿಸ್ತಾನ ಬೆಂಬಲ

    ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಅವರು ಟ್ವಿಟ್ಟರ್ ನಲ್ಲಿ ತಾಲಿಬಾನಿ ಉಗ್ರರ ಆಡಳಿತದ ವಿರುದ್ಧ ಕಠಿಣ ಅಭಿಪ್ರಾಯವನ್ನು ವ್ಯಕ್ತಪಡಿಸಿ ಜಗತ್ತಿಗೆ ತಿಳಿಸುತ್ತಿದ್ದರು. ಇದರಿಂದಾಗಿ ತಾಲಿಬಾನ್ ಕುಕೃತ್ಯ ಜಗತ್ತಿಗೆ ತಿಳಿಯುತ್ತಿತ್ತು.

    ಈ ಹಿಂದೆ ಆಗಸ್ಟ್ 23 ರಂದು ಈ ಕಣಿವೆಯನ್ನು ವಶಪಡಿಸಿಕೊಳ್ಳಲು 3 ಸಾವಿರ ತಾಲಿಬಾನ್ ಹೋರಾಟಗಾರರನ್ನು ಪಂಜಶೀರ್ ಗಡಿಗೆ ಕಳುಹಿಸಿತ್ತು. ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ಒತ್ತಡದಿಂದಾಗಿ, ತಾಲಿಬಾನ್ ಹೋರಾಟಗಾರರು ಇನ್ನೂ ಪಂಜಶೀರ್ ಮೇಲೆ ದಾಳಿ ಮಾಡಿಲ್ಲ. ಶಾಂತಿ ಮತ್ತು ಮಾತುಕತೆಯ ಮೂಲಕ ಪಂಜಶೀರ್ ವಶ ಪಡೆಯಲು ಬಯಸುತ್ತೇವೆ ಎಂದು ತಾಲಿಬಾನ್ ಹೇಳಿಕೊಂಡಿತ್ತು. ಆದರೆ ಈಗ ಈ ನಡೆಯನ್ನು ಗಮನಿಸಿದಾಗ ಕಣಿವೆಯನ್ನು ಹಿಂಸಾತ್ಮಕವಾಗಿ ವಶಪಡಿಸಿಕೊಳ್ಳಲು ತಾಲಿಬಾನ್ ಮುಂದಾಗಿರುವುದು ದೃಢವಾಗಿದೆ.

  • ತಾಲಿಬಾನಿಗಳ ಹೊಸ ಆದೇಶ- ಹುಡುಗ, ಹುಡುಗಿ ಜೊತೆಯಾಗಿ ಓದುವಂತಿಲ್ಲ

    ತಾಲಿಬಾನಿಗಳ ಹೊಸ ಆದೇಶ- ಹುಡುಗ, ಹುಡುಗಿ ಜೊತೆಯಾಗಿ ಓದುವಂತಿಲ್ಲ

    – ವಿದ್ಯಾರ್ಥಿನಿಯರಿಗೆ ಕಡ್ಡಾಯವಾಗಿ ಶಿಕ್ಷಕಿಯರಿಂದಲೇ ಪಾಠ

    ಕಾಬೂಲ್: ಅಫ್ಘಾನಿಸ್ತಾನ ವಶ ಪಡೆದುಕೊಂಡಿರುವ ತಾಲಿಬಾನಿಗಳು ದಿನಕ್ಕೊಂದು ಆದೇಶಗಳನ್ನು ಹೊರಡಿಸುತ್ತಿದ್ದಾರೆ. ಹುಡುಗ ಮತ್ತು ಹುಡುಗಿಯರು ಶಾಲೆಗಳಲ್ಲಿ ಜೊತೆಯಾಗಿ ಓದುವಂತಿಲ್ಲ. ವಿದ್ಯಾರ್ಥಿಗಳು ಶಿಕ್ಷಕರು ಪಾಠ ಮಾಡುವ ಹಾಗಿಲ್ಲ. ವಿದ್ಯಾರ್ಥಿನಿಯರಿಗೆ ಕಡ್ಡಾಯವಾಗಿ ಶಿಕ್ಷಕಿಯರೇ ಪಾಠ ಮಾಡಬೇಕು ಎಂದು ಆದೇಶ ಹೊರಡಿಸಿದ್ದಾರೆ.

    ಶನಿವಾರ ಶೇಖ್ ಅಬ್ದುಲ್ ಬಾಕಿ ಹಕ್ಕಾನಿಯನ್ನು ಶಿಕ್ಷಣ ಸಚಿವ ಎಂದು ತಾಲಿಬಾನಿಗಳು ನೇಮಕ ಮಾಡಿದ್ದವು. ಇದಕ್ಕೂ ಮೊದಲು ಅಫ್ಘಾನಿಸ್ತಾನದ ಪೂರ್ವ ಹೆರಾತ್ ನಗರದಲ್ಲಿ ಕೋ-ಎಜುಕ್ಷೆನ್ ಮೇಲೆ ನಿರ್ಬಂಧ ಹಾಕಲಾಗಿತ್ತು.

    ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿಯ ಪಖ್ತೂನಾಖ್ವಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಪಾಕ್ ಸೈನಿಕರಿಬ್ಬರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಮೊದಲಿಗೆ ಅಫ್ಘಾನಿಸ್ತಾನವೇ ಗುಂಡಿನ ದಾಳಿ ನಡೆಸಿದ್ದರಿಂದ ಪ್ರತ್ತುತ್ತರವಾಗಿ ಗುಂಡಿನ ದಾಳಿ ನಡೆಸಿದೆ ಎನ್ನಲಾಗಿದೆ.  ಇದನ್ನೂ ಓದಿ: ಕಾಬೂಲ್ ಏರ್ ಪೋರ್ಟ್ ಬಳಿ ಐಸಿಸ್-ಕೆ ರಾಕೆಟ್ ದಾಳಿ – ಇಬ್ಬರ ಸಾವು

    ಖ್ಯಾತ ಸಂಗೀತಗಾರನನ್ನು ಹತ್ಯೆಗೈದ ಬಳಿಕ ಇದೀಗ ಅಫ್ಘಾನಿಸ್ತಾನದ ಕಂದಹಾರ್ ನಲ್ಲಿ ಮಹಿಳೆಯರ ಧ್ವನಿಯನ್ನು ಬ್ಯಾನ್ ಮಾಡಲಾಗಿದೆ. ಟಿವಿ, ರೇಡಿಯೋಗಳಲ್ಲಿ ಎಲ್ಲೂ ಸಂಗೀತ ಹಾಗೂ ಮಹಿಳೆಯರ ಧ್ವನಿ ಕೇಳುವಂತಿಲ್ಲ ಎಂದು ತಾಲಿಬಾನಿಗಳು ಹೇಳಿದ್ದಾರೆ. ಆಗಸ್ಟ್ 15ರಂದು ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡ ಬಳಿಕ ಕೆಲ ಟಿವಿ ವಾಹಿನಿಗಳು ಮಹಿಳಾ ನಿರೂಪಕಿಯರನ್ನು ಕೆಲಸದಿಂದ ತೆಗೆದುಹಾಕಿವೆ. ಅಲ್ಲದೆ ಕಾಬೂಲ್‍ನಲ್ಲಿನ ಸ್ಥಳೀಯ ಮೀಡಿಯಾಗಳಲ್ಲಿ ಹಲವು ಮಹಿಳೆಯರನ್ನು ಮನೆಗೆ ಕಳುಹಿಸಿವೆ. ಇದನ್ನೂ ಓದಿ: ಶಾಲೆ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತಾ?

  • ಕಾಬೂಲ್ ಏರ್ ಪೋರ್ಟ್ ಬಳಿ ಐಸಿಸ್-ಕೆ ರಾಕೆಟ್ ದಾಳಿ – ಇಬ್ಬರ ಸಾವು

    ಕಾಬೂಲ್ ಏರ್ ಪೋರ್ಟ್ ಬಳಿ ಐಸಿಸ್-ಕೆ ರಾಕೆಟ್ ದಾಳಿ – ಇಬ್ಬರ ಸಾವು

    – ಅಮೆರಿಕ ಸೇನೆ ಗುರಿಯಾಗಿಸಿ ನಡೆದ ದಾಳಿ

    ಕಾಬೂಲ್: ಅಫ್ಘಾನಿಸ್ತಾನದಲ್ಲಿ ನೆತ್ತರ ಕೋಡಿ ಮುಂದುವರಿದಿದ್ದು, ಇಂದು ನಡೆದ ರಾಕೆಟ್ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಗುರುವಾರ ನಡೆದ ಬಾಂಬ್ ಸ್ಫೋಟದಲ್ಲಿ 13 ಅಮೆರಿಕ ಸೈನಿಕರು ಸೇರಿದಂತೆ 170 ಜನರು ಸಾವನ್ನಪ್ಪಿದ್ದರು.

    ಇಂದು ಸಂಜೆ ಕಾಬೂಲ್ ವಿಮಾನ ನಿಲ್ದಾಣದ ಪಶ್ಚಿಮ ರಿಹಾಯಶಿ ಇಲಾಖೆಯ ಖಾಜಾ-ಏ-ಬುಗಾರದಲ್ಲಿ ಈ ದಾಳಿ ನಡೆದಿದೆ. ಐಸಿಸ್-ಕೆ ಉಗ್ರ ಸಂಘಟನೆ ಕಾಬೂಲ್ ವಿಮಾನ ನಿಲ್ದಾಣದಲ್ಲಿರುವ ಅಮೆರಿಕ ಸೇನೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಮುಂದಾಗಿತ್ತು. ಆದ್ರೆ ಗುರಿ ತಪ್ಪಿದ ರಾಕೆಟ್ ಜನವಸತಿ ಪ್ರದೇಶದಲ್ಲಿ ಬಿದ್ದು ಸ್ಫೋಟಗೊಂಡಿದೆ. ಆದ್ರೆ ಇದರಲ್ಲಿ ಯಾವುದೇ ಸೂಸೈಡ್ ಬಾಂಬರ್ ಗಳು ಇರಲಿಲ್ಲ ಎಂಬುದರ ಬಗ್ಗೆ ಖಚಿತ ಮಾಹಿತಿ ಪ್ರಕಟವಾಗಿಲ್ಲ.

    ಕಾಬೂಲ್ ಸ್ಥಳೀಯ ಮಾಧ್ಯಮಗಳ ಪ್ರಕಾರ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿ, ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಮಕ್ಕಳು ಮತ್ತು ಮಹಿಳೆಯರಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತ ಅಫ್ಘಾನ್ ಪೊಲೀಸರ ಪ್ರಕಾರ ರಾಕೆಟ್ ವಿಮಾನ ನಿಲ್ದಾಣದಲ್ಲಿ ಪತನಗೊಂಡಿದೆ ಎಂದು ಹೇಳಲಾಗುತ್ತಿದೆ. . ಇದನ್ನೂ ಓದಿಕಾಬೂಲ್ ವಿಮಾನ ನಿಲ್ದಾಣದ ಎಂಟ್ರಿ ಗೇಟ್ ಬಳಿ ಮತ್ತೆ ಫೈರಿಂಗ್

    ಅಮೆರಿಕ ಅಧ್ಯಕ್ಷ ಜೋ ಬೈಡನ್ ಶುಕ್ರವಾರವೇ ಕಾಬೂಲ್ ಏರ್ ಪೋರ್ಟ್ ಮೇಲೆ ಉಗ್ರರ ದಾಳಿ ನಡೆಸುವ ಸಾಧ್ಯತೆಗಳಿವೆ. ಹಾಗಾಗಿ ತಮ್ಮ ದೇಶದ ಜನರು ವಿಮಾನ ನಿಲ್ದಾಣದತ್ತ ಬರಬಾರದು ಎಂದು ಹೇಳಿದ್ದರು. ಇತ್ತ ತಾಲಿಬಾನಿಗಳು ಸಹ ಐಸಿಸ್-ಕೆ ದಾಳಿ ನಡೆಸುವ ಸಾಧ್ಯತೆಗಳಿದ್ದು, ಜನರು ವಿಮಾನ ನಿಲ್ದಾಣದತ್ತ ಬರಕೂಡದು ಎಂದು ಹೇಳಿ, ಏರ್ ಪೋರ್ಟಿಗೆ ಸಂಪರ್ಕಿಸುವ ರಸ್ತೆಗಳಿಗೆ ತನ್ನ ಜನರನ್ನು ನಿಯೋಜಿಸಿತ್ತು. ಇದನ್ನೂ ಓದಿ: ಟಿವಿ, ರೇಡಿಯೋಗಳಲ್ಲಿ ಮಹಿಳೆಯ ಧ್ವನಿ ಬ್ಯಾನ್- ತಾಲಿಬಾನ್ ಆದೇಶ

    ಐಎಸ್‍ಕೆಪಿ ಉಗ್ರರು ಯಾವುದೇ ಕ್ಷಣದಲ್ಲಿ ಮತ್ತಷ್ಟು ದಾಳಿಗಳನ್ನು ನಡೆಸಬಹುದು ಎನ್ನಲಾಗಿದೆ. ಈ ದಾಳಿ ನಡುವೆಯೂ ಕಾಬೂಲ್ ಏರ್ ಪೋರ್ಟ್ ನಿಂದ ಜನರ ಏರ್‍ಲಿಫ್ಟ್ ಮುಂದುವರಿದಿದೆ. ಈ ಮಧ್ಯೆ ಕಾಬೂಲ್ ಸೇರಿ ಎಲ್ಲಾ ಕಡೆ, ಬ್ಯಾಂಕ್ ಮತ್ತು ಎಟಿಎಂಗಳಿಗೆ ಜನ ಮುಗಿಬಿದ್ದಿದ್ದಾರೆ. ತಮ್ಮ ಖಾತೆಯಲ್ಲಿನ ಹಣ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದ್ರೆ ಬ್ಯಾಂಕ್‍ನಲ್ಲಿ ದುಡ್ಡಿಲ್ಲ. ಎಟಿಎಂನಲ್ಲಿಯೂ ದುಡ್ಡಿಲ್ಲದೇ ಜನ ಪರದಾಡುತ್ತಿದ್ದಾರೆ. ಜನ ಆಕ್ರೋಶಗೊಳ್ಳುತ್ತಿದ್ದಂತೆ ಅವರನ್ನು ಚೆದುರಿಸಲು ತಾಲಿಬಾನ್ ಉಗ್ರರು ಬ್ಯಾಂಕ್ ಬಳಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದನ್ನೂ ಓದಿ: ಕಾಬೂಲ್‍ನಲ್ಲಿ ಮತ್ತೊಂದು ಪ್ರಬಲ ಬಾಂಬ್ ಸ್ಫೋಟ

    ಈ ನಡುವೆ ಭಾರತದೊಂದಿಗೆ ತಾಲಿಬಾನ್ ಉತ್ತಮ ಬಾಂದವ್ಯ ಬಯಸುತ್ತಿದೆ ಅಂತ ತಾಲಿಬಾನ್ ಮುಖಂಡ ಮೊಹಮ್ಮದ್ ಅಬ್ಬಾಸ್ ಸಂದೇಶ ನೀಡಿದ್ದಾರೆ. ಈ ಎಲ್ಲದರ ಮಧ್ಯೆ, ಭಾರತ-ಅಫ್ಘಾನ್ ಸ್ನೇಹದ ಭಾಗವಾಗಿ ಹೆರಾತ್‍ನಲ್ಲಿ ಭಾರತ ಕಟ್ಟಿಸಿರುವ ಬೃಹತ್ ಅಣೆಕಟ್ಟಿಗೆ ಭೇಟಿಗೆ ತಾಲಿಬಾನಿಗಳು ಭೇಟಿ ನೀಡಿದ್ದಾರೆ. ಈ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ ರಕ್ಷಣಾ ಸಚಿವ ರಾಜನಾಥ್, ಬದಲಾದ ಪರಿಸ್ಥಿತಿಯಲ್ಲಿ ನಾವೂ ವ್ಯೂಹಗಳನ್ನು ಬದಲಿಸುತ್ತಿದ್ದೇವೆ. ಎಂಥಹ ಪರಿಸ್ಥಿತಿ ಬಂದರೂ ಎದುರಿಸಲು ಸಿದ್ಧ ಇದ್ದೇವೆ ಎಂದು ಘೋಷಿಸಿದ್ದಾರೆ.