Tag: afghanistan

  • ತಾಲಿಬಾನ್‌ ಸರ್ಕಾರದಲ್ಲಿ ಸೂಸೈಡ್‌ ಬಾಂಬರ್‌ ಕುಟುಂಬಕ್ಕೆ ನಗದು ಪರಿಹಾರ, ನಿವೇಶನ ಗಿಫ್ಟ್‌

    ತಾಲಿಬಾನ್‌ ಸರ್ಕಾರದಲ್ಲಿ ಸೂಸೈಡ್‌ ಬಾಂಬರ್‌ ಕುಟುಂಬಕ್ಕೆ ನಗದು ಪರಿಹಾರ, ನಿವೇಶನ ಗಿಫ್ಟ್‌

    ಕಾಬೂಲ್‌: ಅಫ್ಘಾನಿಸ್ತಾನದ ಹೋಟೆಲಿನಲ್ಲಿ ದಾಳಿ ಎಸಗಿ ಪ್ರವಾಸಿಗರ ಹತ್ಯೆ ಮಾಡಿದ್ದ ಉಗ್ರರನ್ನು ತಾಲಿಬಾನ್‌ ಸರ್ಕಾರದ ಸಚಿವ ಪ್ರಶಂಸಿಸಿ ಕುಟುಂಬಕ್ಕೆ ನಗದು ಬಹುಮಾನ ಮತ್ತು ನಿವೇಶನವನ್ನು ನೀಡುವುದಾಗಿ ಹೇಳಿದ್ದಾನೆ.

    ನೂತನವಾಗಿ ರಚನೆಯಾಗಿರುವ ತಾಲಿಬಾನ್‌ ಸರ್ಕಾರದ ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿ ಕಾಬೂಲ್‌ ಹೋಟೆಲಿನಲ್ಲಿ ಮೃತ ಉಗ್ರರ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾನೆ. ಈ ವೇಳೆ ಪ್ರತಿಯೊಬ್ಬ ಸೂಸೈಡ್‌ ಬಾಂಬರ್‌ ಕುಟುಂಬಕ್ಕೆ 125 ಡಾಲರ್‌(ಅಂದಾಜು 9,300 ರೂ.) ಮತ್ತು ಜಾಗ ನೀಡುವುದಾಗಿ ಘೋಷಿಸಿದ್ದಾನೆ.

    ತಾಲಿಬಾನ್ ಪರ ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಸ್ಥಳೀಯ ಮಾಧ್ಯಮಗಳು ಹಕ್ಕಾನಿ ಹೇಳಿಕೆಯನ್ನು ಆಧಾರಿಸಿ ವರದಿ ಮಾಡಿವೆ. ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಕೋಮುಗಲಭೆ – ಇಸ್ಕಾನ್ ದೇವಾಲಯದ ಟ್ವಿಟ್ಟರ್ ಖಾತೆ ಬ್ಲಾಕ್

    ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ಹುತಾತ್ಮರಾಗಿರುವವರನ್ನು ನಾವು ಸ್ಮರಿಸಿಕೊಳ್ಳಬೇಕು. ನಾವು ಹುತಾತ್ಮರ ಆಕಾಂಕ್ಷೆಗಳಿಗೆ ಯಾವುದೇ ದ್ರೋಹ ಮಾಡಬಾರದು. ಅವರು ದೇಶದ ಮತ್ತು ಇಸ್ಲಾಂನ ನಿಜವಾದ ಹೀರೋಗಳು ಎಂಬುದಾಗಿ ಉಗ್ರರನ್ನು ಸಿರಾಜುದ್ದೀನ್ ಬಣ್ಣಿಸಿದ್ದಾನೆ.

    2018 ರ ಜನವರಿಯಲ್ಲಿ ಇಂಟರ್ ಕಾಂಟಿನೆಂಟಲ್ ಹೋಟೆಲ್‌ಗೆ ನುಗ್ಗಿದ್ದ 6 ಮಂದಿ ಉಗ್ರರು ಜನರನ್ನು ಒತ್ತೆಯಾಳಾಗಿ ಇರಿಸಿ ಮನ ಬಂದಂತೆ ಗುಂಡು ಹಾರಿಸಿ 40 ಜನರನ್ನು ಹತ್ಯೆ ಮಾಡಿದ್ದರು.

    ಸಿರಾಜುದ್ದೀನ್ ತಂದೆ ಜಲಾಲುದ್ದೀನ್ ರಚಿಸಿದ, ಹಕ್ಕಾನಿ ಜಾಲವು ತಾಲಿಬಾನ್‌ನ ಅತ್ಯಂತ ಭಯಾನಕ ಉಗ್ರ ಸಂಘಟನೆಯಾಗಿದ್ದು, ಕಳೆದ ಎರಡು ದಶಕಗಳಲ್ಲಿ ಅಫ್ಘಾನಿಸ್ತಾನದಲ್ಲಿ ನಡೆದ ಕೆಲವು ಮಾರಣಾಂತಿಕ ದಾಳಿಗಳಿಗೆ ಕಾರಣವಾಗಿದೆ.

    ಸಿರಾಜುದ್ದೀನ್ ಹಕ್ಕಾನಿ ಅಮೆರಿಕದ ಭಯೋತ್ಪಾದಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾನೆ. ಆತನ ಬಂಧನಕ್ಕಾಗಿ 10 ದಶಲಕ್ಷ ಡಾಲರ್(75.13 ಕೋಟಿ ರೂ.) ಬಹುಮಾನವನ್ನು ಅಮೆರಿಕ ಘೋಷಿಸಿತ್ತು.

  • ಅಫ್ಘಾನಿಸ್ತಾನದ ಮಸೀದಿಯಲ್ಲಿ ಬಾಂಬ್ ಸ್ಫೋಟ – 32 ಸಾವು, 100ಕ್ಕೂ ಅಧಿಕ ಮಂದಿಗೆ ಗಾಯ

    ಅಫ್ಘಾನಿಸ್ತಾನದ ಮಸೀದಿಯಲ್ಲಿ ಬಾಂಬ್ ಸ್ಫೋಟ – 32 ಸಾವು, 100ಕ್ಕೂ ಅಧಿಕ ಮಂದಿಗೆ ಗಾಯ

    ಕಾಬೂಲ್: ಅಫ್ಘಾನಿಸ್ತಾನದ ಕುಂದುಜ್ ನಗರದ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ನಡೆಸುತ್ತಿದ್ದಾಗ ಬಾಂಬ್ ಸ್ಫೋಟ ಸಂಭವಿಸಿ 16 ಜನ ಸಾವನ್ನಪ್ಪಿದ್ದು, 100 ಕ್ಕೂ ಹೆಚ್ಚು ಗಂಭೀರವಾಗಿ ಗಾಯಗೊಂಡಿದ್ದಾರೆ.

    ವಾರದ ಪ್ರಾರ್ಥನೆಗಾಗಿ ಮಸೀದಿಗೆ ಆಗಮಿಸಿದವರನ್ನು ಗುರಿಯಾಗಿಸಿ ಮಸೀದಿ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ ಎಂದು ತಾಲಿಬಾನ್ ಸ್ಪಷ್ಟಪಡಿಸಿದೆ. ಮಸೀದಿಯಲ್ಲಿ ನೂರಕ್ಕೂ ಹೆಚ್ಚು ಜನ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಉಳಿದಂತೆ ಕೆಲ ಜನ ಪ್ರಾರ್ಥನೆಗೆ ಬರಲು ಸಿದ್ಧರಾಗುತ್ತಿದ್ದರು ಈ ವೇಳೆ ಬಾಂಬ್ ಸ್ಫೋಟಗೊಂಡಿದೆ. ಇದನ್ನೂ ಓದಿ: ಬೇಯಿಸಿದ ಮೊಟ್ಟೆಯಿಂದ ಪ್ರಾಣ ಬಿಟ್ಟ ಮಹಿಳೆ

    ಗಾಯಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗುತ್ತಿದ್ದು, ಸ್ಥಳದಲ್ಲಿ 15ಕ್ಕೂ ಹೆಚ್ಚು ಅಂಬುಲೆನ್ಸ್ ಗಳನ್ನು ನಿಯೋಜನೆ ಮಾಡಲಾಗಿದೆ. ಮಸೀದಿಯಲ್ಲಿ ರಕ್ತದ ಮಡುವಿನಲ್ಲಿ ನೂರಾರು ಹೆಣಗಳ ರಾಶಿ ಕಂಡುಬರುತ್ತಿದೆ. ಇದನ್ನೂ ಓದಿ: ಮತ್ತೆ ಸರ್ಜಿಕಲ್‌ ಸ್ಟ್ರೈಕ್‌? – ಪಾಕಿಸ್ತಾನಕ್ಕೆ ಅಮಿತ್‌ ಶಾ ಎಚ್ಚರಿಕೆ

    ದಾಳಿಯ ಬಗ್ಗೆ ಮಾತನಾಡಿರುವ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್, ನಮ್ಮ ಶಿಯಾ ಪಂಗಡದ ದೇಶವಾಸಿಗಳ ಮಸೀದಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಹಲವಾರು ಮಂದಿ ಸಾವನ್ನಪ್ಪಿ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದಿದ್ದಾರೆ.

    ದಾಳಿಯ ಹೊಣೆಗಾರಿಕೆಯನ್ನು ಯಾವುದೇ ಸಂಘಟನೆ ಒಪ್ಪದೇ ಇದ್ದರೂ ತಾಲಿಬಾನ್‍ನ ವಿರೋಧಿ ಬಣವಾಗಿ ಗುರುತಿಸಿಕೊಂಡಿರುವ ಇಸ್ಲಾಮಿಕ್ ಸ್ಟೇಟ್ ದಾಳಿ ಮಾಡಿರುವ ಸಾಧ್ಯತೆ ಇದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

  • ಕಾಬೂಲ್ ಮಸೀದಿ ಬಳಿ ಬಾಂಬ್ ಸ್ಫೋಟ – ಇಬ್ಬರು ಸಾವು, ಹಲವರಿಗೆ ಗಾಯ

    ಕಾಬೂಲ್ ಮಸೀದಿ ಬಳಿ ಬಾಂಬ್ ಸ್ಫೋಟ – ಇಬ್ಬರು ಸಾವು, ಹಲವರಿಗೆ ಗಾಯ

    ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಬಳಿ ಇರುವ ಮಸೀದಿಯ ಪ್ರವೇಶ ದ್ವಾರದಲ್ಲಿ ಬಾಂಬ್ ದಾಳಿ ನಡೆಸಲಾಗಿದ್ದು, ಹಲವಾರು ಮಂದಿ ಮೃತಪಟ್ಟಿದ್ದಾರೆ ಎಂದು ತಾಲಿಬಾನ್ ವಕ್ತಾರ ಝುಬಿಯುಲ್ಲಾ ಮುಜಾಹಿದ್ ಹೇಳಿದ್ದಾರೆ.

    Afghanistan

    ಭಾನುವಾರ ಈದ್ಗಾ ಮಸೀದಿಯಲ್ಲಿ ಸೇರಿದ್ದವರನ್ನು ಗುರಿಯಾಗಿಸಿಕೊಂಡು ಈ ಬಾಂಬ್ ದಾಳಿ ನಡೆಸಲಾಗಿದ್ದು, ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಪಾರ್ಟಿ ಪ್ರಕರಣ – ಇಂದು ಆರ್ಯನ್ ಖಾನ್ ಜಾಮೀನು ಅರ್ಜಿ ಸಲ್ಲಿಕೆ

    ಈ ದಾಳಿಯ ಹೊಣೆಯನ್ನು ಯಾರೂ ಸದ್ಯಕ್ಕೆ ಯಾರು ಒಪ್ಪಿಕೊಂಡಿಲ್ಲ. ಆಗಸ್ಟ್‌ನಲ್ಲಿ  ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ತಾಲಿಬಾನ್ ವಿರುದ್ಧ ಇಸ್ಲಾಮಿಕ್ ಸ್ಟೇಟ್ ಗುಂಪು ಉಗ್ರರ ದಾಳಿಗಳು ಹೆಚ್ಚಾಗಿದೆ. ಈ ಎರಡು ಉಗ್ರವಾದಿ ಸಂಘಟನೆಗಳ ನಡುವೆ ದಾಳಿ ಹೆಚ್ಚಾಗಿ ನಡೆಯುವ ಸಾಧ್ಯತೆ ಇದೆ. ಇದನ್ನೂ ಓದಿ: ರೈತರ ಮೇಲೆ ಕಾರು ಹತ್ತಿಸಿದ ಕೇಂದ್ರ ಸಚಿವನ ಮಗ – ನಾಲ್ವರು ರೈತರು ಸೇರಿ 8 ಮಂದಿ ಸಾವು

    ನಂಗರ್ ಹಾರ್‍ನ ಪೂರ್ವ ಪ್ರಾಂತ್ಯದಲ್ಲಿ ಐಎಸ್ ತನ್ನ ಪ್ರಬಲ ಅಸ್ತಿತ್ವವನ್ನು ಉಳಿಸಿಕೊಂಡಿದ್ದು, ತಾಲಿಬಾನಿಗರನ್ನು ಶತ್ರು ಎಂದು ಪರಿಗಣಿಸಿದೆ. ಹೀಗಾಗಿ ಈ ದಾಳಿ ಹಿಂದೆ ಐಸಿಸ್ ಉಗ್ರರ ಕೈವಾಡವಿರುವ ಶಂಕೆಯಿದೆ ಎಂದು ತಾಲಿಬಾನ್ ತಿಳಿಸಿದೆ.

  • ತಾಲಿಬಾನ್ ಬೆಂಬಲಿಸಿ ರ‍್ಯಾಲಿ  – 1,000ಕ್ಕೂ ಹೆಚ್ಚು ಜನ ಭಾಗಿ

    ತಾಲಿಬಾನ್ ಬೆಂಬಲಿಸಿ ರ‍್ಯಾಲಿ – 1,000ಕ್ಕೂ ಹೆಚ್ಚು ಜನ ಭಾಗಿ

    ಕಾಬೂಲ್: ತಾಲಿಬಾನ್ ಸರ್ಕಾರಕ್ಕೆ ಬೆಂಬಲ ಸೂಚಿಸಲು ಉತ್ತರ ಕಾಬೂಲ್ ನ ಮೈದಾನದಲ್ಲಿ ಸುಮಾರು 1,000 ಕ್ಕೂ ಹೆಚ್ಚು ಜನರು ರ‍್ಯಾಲಿಯಲ್ಲಿ ಭಾಗವಹಿಸುವ ಮೂಲಕ ಅಫ್ಘಾನಿಸ್ತಾನದ ಆಳ್ವಿಕೆಯನ್ನು ಬೆಂಬಲಿಸಿದ್ದಾರೆ.

    ರಾಜಧಾನಿಯ ಹೊರವಲಯದಲ್ಲಿರುವ ಕೊಹ್ಧಮಾನ್ ಟೌನ್ ಶಿಪ್ ನಲ್ಲಿ ಈ ರ‍್ಯಾಲಿಯನ್ನು ಹಮ್ಮಿಕೊಂಡಿದ್ದು, ಈ ರ‍್ಯಾಲಿಗೆ ಪುರುಷರು ಮತ್ತು ಹುಡುಗರು ಮಾತ್ರ ಬಂದಿದ್ದರು. ಈ ವೇಳೆ ತಾಲಿಬಾನ್ ನ ಪ್ರಮುಖ ಅಧಿಕಾರಿಗಳು ಭಾಷಣ ಮಾಡಿದರು. ತಾಲಿಬಾನ್ ಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಮೊದಲ ಬಾರಿಗೆ ಈ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಇದನ್ನೂ ಓದಿ: 29ರ ವಸಂತಕ್ಕೆ ಕಾಲಿಟ್ಟ ಚಂದನವನದ ಡಿಂಪಲ್ ಕ್ವೀನ್

    ರಾಕೆಟ್ ಲಾಂಚರ್ ಗಳು ಸೇರಿದಂತೆ ಧ್ವಜಗಳು ಮತ್ತು ಆಯುಧಗಳನ್ನು ಹೊತ್ತು ತಾಲಿಬಾನ್ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ಜನರು ಬರಲು ಆರಂಭಿಸಿದಂತೆ, ತಾಲಿಬಾನಿಗಳು ‘ಅಮೆರಿಕವನ್ನು ಸೋಲಿಸಲಾಗಿದೆ. ಅಸಾಧ್ಯ, ಅಸಾಧ್ಯ – ಆದರೆ ಸಾಧ್ಯ’ ಎಂದು ಹಾಡುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಈ ಹಿನ್ನೆಲೆ ನೆರೆದಿದ್ದ ಜನರು ತಾಲಿಬಾನ್ ಪರ ಘೋಷಣೆಗಳನ್ನು ಕೂಗಿದರು. ತಾಲಿಬಾನ್ ನಾಯಕರು ವೇದಿಕೆಯ ಮುಂಭಾಗಕ್ಕೆ ಬರುತ್ತಿದಂತೆ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದರು. ಇದನ್ನೂ ಓದಿ: ಗಗನಸಖಿ ಡ್ಯಾನ್ಸ್ ವೀಡಿಯೋ ವೈರಲ್

  • ತಂದೆ ತಾಲಿಬಾನ್ ವಿರೋಧಿಯಾಗಿದ್ದಕ್ಕೆ ಮಗುವನ್ನು ಗಲ್ಲಿಗೇರಿಸಿದ್ರು

    ತಂದೆ ತಾಲಿಬಾನ್ ವಿರೋಧಿಯಾಗಿದ್ದಕ್ಕೆ ಮಗುವನ್ನು ಗಲ್ಲಿಗೇರಿಸಿದ್ರು

    ಕಾಬೂಲ್: ತಾಲಿಬಾನ್ ಉಗ್ರರು ಮಗು ಎಂಬುದನ್ನು ನೋಡದೆ ಕ್ರೂರವಾಗಿ ಗಲ್ಲಿಗೆರಿಸಿದ ಮತ್ತೊಂದು ಹೃದಯವಿದ್ರಾವಕ ಘಟನೆ ತಖರ್ ಪ್ರಾಂತ್ಯದಲ್ಲಿ ನಡೆದಿದೆ.

    ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದ ತಖರ್ ಪ್ರಾಂತ್ಯದಲ್ಲಿ, ಮಗುವಿನ ತಂದೆ ಅಫ್ಘಾನಿಸ್ತಾನದ ಪ್ರತಿರೋಧ ಪಡೆಗಳ ಭಾಗವಾಗಿರಬಹುದು ಎಂದು ಶಂಕಿಸಿ ಮಗುವನ್ನು ಕ್ರೂರವಾಗಿ ಗಲ್ಲಿಗೇರಿಸಲಾಗಿದೆ. ಈ ಮೂಲಕ ಇವರು ಮತ್ತೆ ತಮ್ಮ ರಕ್ತದಾಹಕ್ಕೆ ಯಾರನ್ನು ಬಿಡುವುದಿಲ್ಲ ಎಂದು ನಿರೂಪಿಸಿದ್ದಾರೆ. ಇದನ್ನೂ ಓದಿ:  ಕೋವಿಡ್ 19 ಬೂಸ್ಟರ್ ಡೋಸ್ ಪಡೆದ ಜೋ ಬೈಡನ್

    ನಾವು ಬದಲಾಗಿದ್ದೇವೆ ಎಂದು ತಾಲಿಬಾನ್ ನಾಯಕರು ಹೇಳುತ್ತಿದ್ದಾರೆ. ಆದರೆ ಅವರ ನಡವಳಿಕೆ ನೋಡಿದರೆ ಮತ್ತೆ ಹಿಂದಿನ ಆಡಳಿತದಂತೆ ಆಡಳಿತ ನಡೆಸುತ್ತಿರುವುದು ಸ್ಪಷ್ಟವಾಗಿದೆ.

  • ನಾನು ಶಾಲೆಗೆ ಹೋಗ್ಬೇಕು – ಅಫ್ಘಾನ್ ಬಾಲಕಿಯ ಖಡಕ್ ಭಾಷಣ

    ನಾನು ಶಾಲೆಗೆ ಹೋಗ್ಬೇಕು – ಅಫ್ಘಾನ್ ಬಾಲಕಿಯ ಖಡಕ್ ಭಾಷಣ

    ಕಾಬೂಲ್: ಅಫ್ಘಾನಿಸ್ತಾನದ ಬಾಲಕಿಯೊಬ್ಬಳು ನಾನು ಶಾಲೆಗೆ ಹೋಗಬೇಕೆಂದು ಪ್ರತಿಭಟನೆ ಮಾಡುತ್ತಾ, ಖಡಕ್ ಭಾಷಣ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    Afghanistan school

    ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡು ಮಹಿಳೆಯರ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದೆ ಮತ್ತು ಮಹಿಳೆಯರ ಶಿಕ್ಷಣ ಮತ್ತು ಕೆಲಸದ ಹಕ್ಕುಗಳ ಕುರಿತಂತೆ ಕಠಿಣ ನಿಯಮಗಳನ್ನು ಜಾರಿಗೊಳಿದೆ. ತಾಲಿಬಾನ್ ಮಹಿಳೆಯರಿಗೆ ಮಾಧ್ಯಮಿಕ ಶಾಲಾ ಶಿಕ್ಷಣವನ್ನು ನಿಷೇಧಿಸುವುದಾಗಿ ಘೋಷಿಸಿ ಅವರ ಆಸೆಗಳಿಗೆ ತಣ್ಣೀರು ಎರಚಿದೆ. ಸದ್ಯ ಅಫ್ಘಾನ್ ಬಾಲಕಿಯೊಬ್ಬಳು ಶಾಲೆಗೆ ಹೋಗುವ ಹಕ್ಕಿನ ಬಗ್ಗೆ ಚುರುಕಾದ ಭಾಷಣ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ: ದೇವರಿಗೆ ಕೈ ಮುಗಿದು ಕಾಣಿಕೆ ಹಾಕಿ ಹುಂಡಿ ಮುಂದಿದ್ದ ಹಾಲಿನ ಬಾಟ್ಲಿ ಎಗರಿಸಿದ ಭೂಪ

    Afghanistan Girl

    ವೀಡಿಯೋದಲ್ಲಿ ಬಾಲಕಿ ಇಬ್ಬರು ಹುಡುಗಿಯರು ಮತ್ತು ಹುಡುಗರೊಂದಿಗೆ ಪ್ಲಾಕಾರ್ಡ್ ಹಿಡಿದು ನಿಂತುಕೊಂಡಿರುವುದನ್ನು ಕಾಣಬಹುದಾಗಿದೆ. ನಂತರ ಮಹಿಳೆಯರ ಶಿಕ್ಷಣದ ಹಕ್ಕು ಮತ್ತು ಅಫ್ಘಾನಿಸ್ತಾನದ ಅಭಿವೃದ್ಧಿಗೆ ಕೊಡುಗೆ ನೀಡುವ ಹಕ್ಕಿನ ಬಗ್ಗೆ ಮಾತನಾಡಿದ್ದಾಳೆ. ಆಕೆಯ ಸುಲಲಿತವಾದ ಇಂಗ್ಲೀಷ್ ಭಾಷಣಕ್ಕೆ ಅನೇಕ ಮಂದಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ವೈರಲ್ ಆಗುತ್ತಿರುವ ಈ ವೀಡಿಯೋವನ್ನು 68,200ಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಕಾಮೆಂಟ್‍ಗಳ ಸುರಿಮಳೆಯೇ ಹರಿದು ಬಂದಿದೆ. ಬಾಲಕಿಯ ಕೆಚ್ಚೆದೆಯ ಭಾಷಣವನ್ನು ಮೆಚ್ಚಿ ನೆಟ್ಟಿಗರು ದೇಶಕ್ಕೆ ಇಂತಹ ಧೈರ್ಯಶಾಲಿ ಹುಡುಗಿಯರು ಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಲೈಂಗಿಕ ದೌರ್ಜನ್ಯದಿಂದ ತಪ್ಪಿಸಿಕೊಳ್ಳಲು ತಂದೆಯನ್ನೇ ಹತ್ಯೆಗೈದ ಬಾಲಕಿ

  • ಬಾಲಕಿಯರಿಗೆ ಶಾಲೆ ತೆರೆಯುವವರೆಗೂ ನಾವು ಹೋಗಲ್ಲ – ಅಫ್ಘಾನ್ ಬಾಲಕರ ಪಟ್ಟು

    ಬಾಲಕಿಯರಿಗೆ ಶಾಲೆ ತೆರೆಯುವವರೆಗೂ ನಾವು ಹೋಗಲ್ಲ – ಅಫ್ಘಾನ್ ಬಾಲಕರ ಪಟ್ಟು

    ಕಾಬೂಲ್: ಅಫ್ಘಾನಿಸ್ತಾನದಲ್ಲಿ ಬಾಲಕಿಯರಿಗೆ ಶಾಲೆ ತೆರೆಯುವವರೆಗೂ ನಾವು ಶಾಲೆಗೆ ಹೋಗುವುದಿಲ್ಲ ಎಂದು ಬಾಲಕರು ಪಟ್ಟು ಹಿಡಿದು ಮನೆಯಲ್ಲಿಯೇ ಇದ್ದಾರೆ.

    Afghanistan school

    ಈ ಬಗ್ಗೆ ಮಾತನಾಡಿದ 12ನೇ ತರಗತಿ ವಿದ್ಯಾರ್ಥಿಯೊಬ್ಬರು, ಮಹಿಳೆಯರು ಸಮಾಜದಲ್ಲಿ ಅರ್ಧದಷ್ಟಿದ್ದಾರೆ. ಬಾಲಕಿಯರಿಗೆ ಕೂಡ ಶಾಲೆಗಳು ತೆರೆಯುವವರೆಗೂ ನಾವು ಶಾಲೆಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಆಪರೇಷನ್ ಪಾಲಿಟಿಕ್ಸ್ ಶುರು – ಬಿಜೆಪಿ, ಜೆಡಿಎಸ್ ಶಾಸಕರಿಗೆ ಡಿಕೆಶಿ ಗಾಳ..?

    ಬಾಲಕಿಯರು ಬೆಳಗ್ಗೆ ಮತ್ತು ಬಾಲಕರು ಮಧ್ಯಾಹ್ನ ಓದಬೇಕು. ಅಲ್ಲದೇ ಅಧ್ಯಾಪಕರು ಹುಡುಗರಿಗೆ ಮತ್ತು ಮಹಿಳಾ ಅಧ್ಯಾಪಕಿಯರು ಹುಡುಗಿಯರಿಗೆ ಪಾಠಮಾಡಬೇಕು ಎಂದು ಅಫ್ಘಾನಿಸ್ತಾನದ ಶಿಕ್ಷಣ ಸಚಿವಾಲಯ ಪ್ರಕಟಿಸಿದೆ. ಓದುವುದರಲ್ಲಿ ಆಸಕ್ತಿ ಕಡಿಮೆ ಇರುವ ಹುಡುಗಿಯರಿಗೆ ಶಾಲೆಯನ್ನು ತೆರೆಯಬೇಕೆ ಎಂಬುವುದರ ಬಗ್ಗೆ ಇನ್ನೂ ಚರ್ಚೆ ನಡೆಸಲಾಗುತ್ತಿದೆ ಎಂದು ಕಾಬೂಲ್‍ನ ಖಾಸಗಿ ಶಾಲೆಯ ಕೆಲವು ಶಿಕ್ಷಕರು ಹೇಳಿದ್ದಾರೆ.

    ಹೆಣ್ಣು ಮಕ್ಕಳಿಗೆ ನೀಡುವ ಶಿಕ್ಷಣವು ಒಂದು ಪೀಳಿಗೆಯನ್ನು ಸರಿಪಡಿಸುತ್ತದೆ. ಗಂಡು ಮಕ್ಕಳಿಗೆ ನೀಡುವ ಶಿಕ್ಷಣವು ಕುಟುಂಬದ ಮೇಲೆ ಪರಿಣಾಮ ಬೀರುಬಹುದು. ಆದರೆ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಅದು ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಹೆಣ್ಣು ಮಕ್ಕಳು ಶಿಕ್ಷಣವನ್ನು ಪುನಾರಂಭಿಸಲು ಮತ್ತು ತಮ್ಮ ಅಧ್ಯಯನವನ್ನು ಪೂರ್ಣಗೊಳಿಸುವ ವಿಷಯದ ಬಗ್ಗೆ ನಾವು ಸೂಕ್ಷ್ಮವಾಗಿ ಆಲೋಚಿಸುತ್ತಿದ್ದೇವೆ ಎಂದು ಖಾಸಗಿ ಶಾಲೆಯೊಂದರ ಪ್ರಾಂಶುಪಾಲರು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಬಿಹಾರದ ಸಿಎಂ ಮುಂದಿನ ಪ್ರಧಾನಿ ಆಗ್ಬೇಕು: ಜಮಾ ಖಾನ್

    ತಾಲಿಬಾನ್ ಸರ್ಕಾರ ಇತ್ತೀಚೆಗಷ್ಟೇ ಪ್ರೌಢ ಶಾಲೆಗಳನ್ನು ಹುಡುಗರಿಗೆ ತೆರೆಯಲು ಅನುಮತಿ ನೀಡಿದ್ದು, ಅವರಿಗೆ ಅಧ್ಯಾಪಕರು ಪಾಠ ಮಾಡಬೇಕೆಂದು ಸೂಚಿಸಿತ್ತು. ಶನಿವಾರದಿಂದ 7-12ನೇ ತರಗತಿವರೆಗೂ ಬಾಲಕರಿಗೆ ತರಗತಿಗಳನ್ನು ಪುನರಾಂಭಿಸಲು ಘೋಷಿಸಿದ ಶಿಕ್ಷಣ ಸಚಿವಾಲಯವು ಪ್ರಕಟಣೆಯಲ್ಲಿ ಬಾಲಕಿಯರಿಗೆ ಹಾಗೂ ಮಹಿಳಾ ಶಿಕ್ಷಕರ ಬಗ್ಗೆ ಯಾವುದೇ ಮಾಹಿತಿಯನ್ನು ಉಲ್ಲೇಖಿಸಿಲ್ಲ.

  • ಅಫ್ಘಾನ್‍ನಲ್ಲಿ ನಿಲ್ಲದ ತಾಲಿಬಾನ್ ಅಟ್ಟಹಾಸ- ಮಹಿಳೆಯರ ಹಕ್ಕುಗಳನ್ನು ಹತ್ತಿಕ್ಕಲು ಪ್ರಯತ್ನ

    ಅಫ್ಘಾನ್‍ನಲ್ಲಿ ನಿಲ್ಲದ ತಾಲಿಬಾನ್ ಅಟ್ಟಹಾಸ- ಮಹಿಳೆಯರ ಹಕ್ಕುಗಳನ್ನು ಹತ್ತಿಕ್ಕಲು ಪ್ರಯತ್ನ

    ಕಾಬೂಲ್: ಅಘ್ಘಾನಿಸ್ತಾನದಲ್ಲಿ ಮಹಿಳೆಯರ ಮೇಲಿನ ತಾಲಿಬಾನ್ ದಮನಕಾಂಡ ನಿಲ್ಲುತ್ತಿಲ್ಲ. ಈಗಾಗಲೇ ಮಹಿಳೆಯರ ಹಕ್ಕುಗಳನ್ನು ಹತ್ತಿಕ್ಕಿರುವ ತಾಲಿಬಾನ್ ಉಗ್ರರು, ಕಳೆದ ಸರ್ಕಾರದಲ್ಲಿದ್ದ ಮಹಿಳಾ ಸಚಿವಾಲಯದ ಕಟ್ಟಡಕ್ಕೆ ನುಗ್ಗಿ ಕೈಗೆ ಸಿಕ್ಕಿದ್ದನ್ನು ಧ್ವಂಸ ಮಾಡಿದ್ದಾರೆ.

    ತಾಲಿಬಾನಿಗಳು ಮಹಿಳಾ ಸಚಿವಾಲಯಕ್ಕೆ ನುಗ್ಗಿ ಅಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ಹೊರಹಾಕಿದ್ದಾರೆ. ತಾಲಿಬಾನ್ ಸರ್ಕಾರ ಹೊಸದಾಗಿ ರಚಿಸಿದ್ದ ಧರ್ಮಪ್ರಚಾರ ಇಲಾಖೆಯ ಕೆಲಸವನ್ನು ಅಲ್ಲಿ ಶುರು ಮಾಡಿದ್ದಾರೆ. ಷರಿಯಾ ಜಾರಿ ಈ ಇಲಾಖೆಯ ಜವಾಬ್ದಾರಿಯಾಗಿದೆ ಎಂಬುದು ಗಮನಿಸಬೇಕಾದ ವಿಚಾರವಾಗಿದೆ. ದೇಶದ ಮಹಿಳಾ ಸಚಿವಾಲಯವನ್ನು ತಾಲಿಬಾನ್‍ನ ನೈತಿಕ ಪೊಲೀಸ್‍  ಗಿರಿಗೆ  ಬದಲಿಸುವುದಕ್ಕೆ ಸಹಿ ಹಾಕಿದೆ ಎಂದು ವರದಿಯಾಗಿದೆ. ಅಲ್ಲದೆ ಇಲಾಖೆಯ ಮಹಿಳಾ ಉದ್ಯೋಗಿಗಳನ್ನು ಕಟ್ಟಡದಿಂದ ಹೊರಗೆ ಹಾಕಲಾಗಿದೆ. ಮಹಿಳಾ ಸಚಿವಾಲಯವನ್ನು ಪ್ರಾರ್ಥನೆ, ಮಾರ್ಗದರ್ಶನ ಹಾಗೂ ಸದ್ಗುಣಗಳ ಪ್ರಚಾರ, ದುರಾಚಾರ ತಡೆ ಸಚಿವಾಲಯ ಎಂದು ಬದಲಿಸಲಾಗಿದೆ. ಇದನ್ನೂ ಓದಿ: ಮಹಿಳಾ ಸಚಿವಾಲಯವನ್ನೇ ತೆಗೆದ ತಾಲಿಬಾನ್ ಸರ್ಕಾರ

    ಈ ಮಧ್ಯೆ, ಕಾಬೂಲ್ ಏರ್ ಪೋರ್ಟ್ ಮೇಲೆ ಆತ್ಮಾಹುತಿ ದಾಳಿ ನಡೆಸಿದ ಲೋಗ್ರಿಯನ್ನು ದೆಹಲಿಯಲ್ಲಿ ಐದು ವರ್ಷಗಳ ಹಿಂದೆ ಬಂಧಿಸಿ, ಅಫ್ಘನ್ ವಶಕ್ಕೆ ಒಪ್ಪಿಸಿತ್ತು ಎಂಬ ವಿಚಾರ ಬಯಲಾಗಿದೆ. ಶ್ರೀಮಂತ ವರ್ತಕನ ಮಗನಾಗಿದ್ದ ಲೋಗ್ರಿ, ದೆಹಲಿಯಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಎನ್ನಲಾಗಿದೆ. ಇದನ್ನೂ ಓದಿ: ತಾಲಿಬಾನ್ ಸರ್ಕಾರ ವಿರುದ್ಧ ಸಿಡಿದ ಅಫ್ಘಾನ್ ಮಹಿಳೆಯರು

     

  • ಮಹಿಳಾ ಸಚಿವಾಲಯವನ್ನೇ ತೆಗೆದ ತಾಲಿಬಾನ್ ಸರ್ಕಾರ

    ಮಹಿಳಾ ಸಚಿವಾಲಯವನ್ನೇ ತೆಗೆದ ತಾಲಿಬಾನ್ ಸರ್ಕಾರ

    ಕಾಬೂಲ್: ತಾಲಿಬಾನ್ ಸರ್ಕಾರ ಮಹಿಳಾ ಸಚಿವಾಲಯವನ್ನೇ ತೆಗೆದು ಹಾಕಿದ್ದು, ಸದ್ಗುಣ ಸಚಿವಾಲಯ ಎಂದು ಬದಲಿಸಿದೆ. ಈ ಮೂಲಕ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಭರವಸೆಗೆ ವಿರುದ್ಧವಾಗಿ ವರ್ತಿಸುತ್ತಿದೆ.

    ದೇಶದ ಮಹಿಳಾ ಸಚಿವಾಲಯವನ್ನು ತಾಲಿಬಾನ್‍ನ ನೈತಿಕ ಪೊಲೀಸ್‍ಗೆ ಬದಲಿಸುವುದಕ್ಕೆ ಸಹಿ ಹಾಕಿದೆ ಎಂದು ವರದಿಯಾಗಿದೆ. ಅಲ್ಲದೆ ಇಲಾಖೆಯ ಮಹಿಳಾ ಉದ್ಯೋಗಿಗಳನ್ನು ಕಟ್ಟಡದಿಂದ ಹೊರಗೆ ಹಾಕಲಾಗಿದೆ. ಮಹಿಳಾ ಸಚಿವಾಲಯವನ್ನು ಪ್ರಾರ್ಥನೆ, ಮಾರ್ಗದರ್ಶನ ಹಾಗೂ ಸದ್ಗುಣಗಳ ಪ್ರಚಾರ, ದುರಾಚಾರ ತಡೆ ಸಚಿವಾಲಯ ಎಂದು ಬದಲಿಸಲಾಗಿದೆ. ಇದನ್ನೂ ಓದಿ: ಆಡಿದ್ರೆ ದೇಹ ಪ್ರದರ್ಶನವಾಗುತ್ತೆ – ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಕ್ರೀಡೆ ನಿಷೇಧ

    ಮಹಿಳೆಯರು ಕೆಲಸ ಮಾಡಲು ಅವಕಾಶ ನಿಡುವುದಿಲ್ಲ ಎಂದು ತಾಲಿಬಾನ್ ಈಗಾಗಲೇ ಘೋಷಿಸಿದೆ. ಆದರೆ ಶಿಕ್ಷಣ ಪಡೆಯಬಹುದು ಎಂದು ಹೇಳಿದೆ. ಹೀಗಾಗಿ ಇದೀಗ ಮಹಿಳಾ ಸಚಿವಾಲಯದ ಉದ್ಯೋಗಿಗಳನ್ನು ಸಹ ಕಚೇರಿಯಿಂದ ಹೊರಗೆ ಹಾಕಲಾಗಿದೆ. ಮಹಿಳೆಯರು ಕೆಲಸ ಮಾಡುವುದನ್ನು ಅನುಮತಿಸುತ್ತಿಲ್ಲ. ಮಹಿಳೆಯರು ಕೆಲಸಕ್ಕೆ ತೆರಳಲು ಪ್ರಯತ್ನಿಸಿದಾಗ ವಾಪಸ್ ಮನೆಗೆ ಕಳುಹಿಸಲಾಗುತ್ತಿದೆ. ಇದನ್ನೂ ಓದಿ: ತಾಲಿಬಾನ್ ಸರ್ಕಾರ ವಿರುದ್ಧ ಸಿಡಿದ ಅಫ್ಘಾನ್ ಮಹಿಳೆಯರು

    ಮಹಿಳೆಯರು ಕೆಲಸಕ್ಕಾಗಿ ಕಚೇರಿಗೆ ತೆರಳುವುಕ್ಕೆ ನಿರ್ಬಂಧ ವಿಧಿಸಿದ ಬಳಿಕ ಸಚಿವಾಲಯದ ಬಹುತೇಕ ಮಹಿಳಾ ಉದ್ಯೋಗಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ನಮ್ಮ ಕುಟುಂಬದಲ್ಲಿ ನಾನೊಬ್ಬಳೇ ಕೆಲಸ ಮಾಡುವುದು, ಯಾವುದೇ ಸಚಿವಾಲಯದಲ್ಲಿ ಕೆಲಸವಿಲ್ಲದಿದ್ದಾಗ ಅಫ್ಘಾನ್ ಮಹಿಳೆಯರು ಏನು ಮಾಡಬೇಕು ಎಂದು ಅಳಲು ತೋಡಿಕೊಂಡಿದ್ದಾರೆ.

  • ಕೆಲಸಕ್ಕೆ ಹಾಜರಾಗಿ – ಪೊಲೀಸರಿಗೆ ತಾಲಿಬಾನ್ ಕಮಾಂಡರ್​ಗಳಿಂದ ಕರೆ

    ಕೆಲಸಕ್ಕೆ ಹಾಜರಾಗಿ – ಪೊಲೀಸರಿಗೆ ತಾಲಿಬಾನ್ ಕಮಾಂಡರ್​ಗಳಿಂದ ಕರೆ

    ಕಾಬೂಲ್: ತಾಲಿಬಾನ್ ಉಗ್ರರು ಅಫ್ಘಾನ್‍ನಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಮೊದಲ ಬಾರಿಗೆ ಪೊಲೀಸ್ ಸಿಬ್ಬಂದಿ ಮರಳಿ ಕೆಲಸಕ್ಕೆ ಸೇರಿಸಿಕೊಂಡಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಅಧಿಕಾರಿಗಳು, ತಾಲಿಬಾನ್ ಕಮಾಂಡರ್​ಗಳಿಂದ ನಮಗೆ ಕರೆ ಬಂದ ನಂತರ ಶನಿವಾರದಿಂದ ನಾವು ಕೆಲಸಕ್ಕೆ ಮರಳಿದ್ದೇವೆ. ಎರಡು ವಾರಗಳ ನಂತರ ನಾವು ಮತ್ತೆ ಕೆಲಸಕ್ಕೆ ಬಂದಿದ್ದೇವೆ. ನಿನ್ನೆ ಅದ್ಭುತವಾಗಿತ್ತು, ಮತ್ತೆ ಕೆಲಸಕ್ಕೆ ಬಂದಿರುವುದು ಖುಷಿಯಾಗಿದೆ ಎಂದಿದ್ದಾರೆ. ಇದನ್ನೂ ಓದಿ:  ಹುಬ್ಬಳ್ಳಿ ರೈಲಿನಲ್ಲಿ 15 ಕೆಜಿ ಹಸಿ ಗಾಂಜಾ ಪತ್ತೆ!

    kabul

    ಹಿಂದಿನ ಸರ್ಕಾರಕ್ಕಾಗಿ ಕೆಲಸ ಮಾಡಿದ ಪೊಲೀಸ್ ಮತ್ತು ಇತರ ಭದ್ರತಾ ಇಲಾಖೆಯಲ್ಲಿ ಕೆಲಸ ಮಾಡಿದವರನ್ನು ಕ್ಷಮಿಸಿದ್ದೇವೆ ಎಂದು ತಾಲಿಬಾನ್ ಹೇಳಿದೆ. ಇದನ್ನೂ ಓದಿ:  ನಿವಾಸದಲ್ಲಿದ್ದ ಮರಗಳಿಗೆ ಕೊಡಲಿ – ಮಂಡ್ಯ ಎಸ್‍ಪಿಯಿಂದ ಸರ್ವಾಧಿಕಾರಿ ಧೋರಣೆ

    ಅಮೆರಿಕ ಸೇನೆ ಕಾಬೂಲ್ ವಿಮಾನ ನಿಲ್ದಾಣವನ್ನು ತೊರೆದ ಬಳಿಕ ಚೆಕ್ ಪೋಸ್ಟ್ ನಲ್ಲಿದ್ದ ಪೊಲೀಸ್ ಸಿಬ್ಬಂದಿ ಗೈರು ಹಾಜರಿ ಹಾಕಿದ್ದರು. ಈಗ ತಾಲಿಬಾನ್ ಕಮಾಂಡರ್​ಗಳಿಂದ ಕರೆ ಬಂದ ಹಿನ್ನೆಲೆಯಲ್ಲಿ ಕೆಲಸಕ್ಕೆ ಹಾಜರಾಗಿದ್ದಾರೆ.