Tag: afghanistan

  • ತಾಲಿಬಾನ್‌ ಸೇನೆಗೆ ಆತ್ಮಹತ್ಯಾ ಬಾಂಬರ್‌ಗಳ ನೇಮಕ

    ತಾಲಿಬಾನ್‌ ಸೇನೆಗೆ ಆತ್ಮಹತ್ಯಾ ಬಾಂಬರ್‌ಗಳ ನೇಮಕ

    ಕಾಬೂಲ್: ಆತ್ಮಹತ್ಯಾ ಬಾಂಬರ್‌ಗಳನ್ನು ತಾಲಿಬಾನ್‌ ಸೇನೆಗೆ ಅಧಿಕೃತವಾಗಿ ನೇಮಿಸಿಕೊಳ್ಳುತ್ತಿದೆ. ನಾಲ್ಕು ತಿಂಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ಸರ್ಕಾರವನ್ನು ರಚಿಸಿದ ನಂತರ ತನ್ನ ಮೇಲಿನ ಭದ್ರತಾ ಬೆದರಿಕೆಗಳಿಗೆ ಪ್ರತಿಸ್ಪರ್ಧೆ ನೀಡುವ ಉದ್ದೇಶದಿಂದ ಸೇನಾ ಶ್ರೇಣಿಯಲ್ಲಿ ಆತ್ಮಹತ್ಯಾ ಬಾಂಬರ್‌ಗಳನ್ನೂ ನೇಮಕಾತಿ ಮಾಡಿಕೊಳ್ಳುತ್ತಿದೆ.

    ಅಧಿಕಾರಕ್ಕೆ ಬರುವ ಮೊದಲು ತಾಲಿಬಾನ್‌ 20 ವರ್ಷಗಳ ಯುದ್ಧದಲ್ಲಿ ಯುಎಸ್‌ ಮತ್ತು ಅಫ್ಘಾನ್‌ ಪಡೆಗಳ ಮೇಲೆ ದಾಳಿ ಮಾಡಲು ಆತ್ಮಹತ್ಯಾ ಬಾಂಬರ್‌ಗಳನ್ನು ಪ್ರಮುಖ ಅಸ್ತ್ರವಾಗಿ ಬಳಸಿತ್ತು. ಈಗ ಗುಂಪು ಒಂದೇ ಘಟಕದ ಅಡಿಯಲ್ಲಿ ಕಾರ್ಯನಿರ್ವಹಿಸಲು ಹಾಗೂ ಅಪ್ಘಾನಿಸ್ತಾನವನ್ನು ರಕ್ಷಿಸಲು ದೇಶಾದ್ಯಂತ ಆತ್ಮಹತ್ಯಾ ಬಾಂಬರ್‌ಗಳನ್ನು ಸಂಘಟಿಸಲು ತಾಲಿಬಾನ್‌ ಮುಂದಾಗಿದೆ ಎಂದು ಉಪ ವಕ್ತಾರ ಬಿಲಾಲ್‌ ಕರಿಮಿ ತಿಳಿಸಿದ್ದಾರೆ. ಇದನ್ನೂ ಓದಿ: ಏರ್‌ ಇಂಡಿಯಾ ಹರಾಜು – ಟಾಟಾ ಡೀಲ್‌ ಪ್ರಶ್ನಿಸಿ ಸುಬ್ರಮಣಿಯನ್‌ ಸ್ವಾಮಿ ಸಲ್ಲಿಸಿದ್ದ ಅರ್ಜಿ ವಜಾ

    ತಾಲಿಬಾನ್‌ನ ಈಗಿನ ಮುಖ್ಯ ಗುರಿ ಇಸ್ಲಾಮಿಕ್‌ ಸ್ಟೇಟ್‌ನ ಸ್ಥಳೀಯ ಶಾಖೆಯಾಗಿದೆ. ಕಳೆದ ವರ್ಷದ ಆಗಸ್ಟ್‌ ತಿಂಗಳಲ್ಲಿ ಅಪ್ಘಾನಿಸ್ತಾನದಿಂದ ಯುಎಸ್‌ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದಾಗ, ದೇಶದಲ್ಲಿ ಅಧಿಕಾರವನ್ನು ಬಲಪಡಿಸಲು ತಾಲಿಬಾನ್‌ ಮುಂದಾಗಿತ್ತು. ಈ ವೇಳೆ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಐದು ಪ್ರಮುಖ ದಾಳಿಗಳನ್ನು ನಡೆಸಿತ್ತು.

    ಗಡಿಯಲ್ಲಿ ಆತ್ಮಹತ್ಯಾ ಬಾಂಬರ್‌ಗಳು ಕಾರ್ಯತಂತ್ರದ ಅವಿಭಾಜ್ಯ ಅಂಗವಾಗಿದೆ. ಅಲ್ಲದೇ ರಕ್ಷಣೆಯನ್ನು ಹೆಚ್ಚಿಸಲು ಬಲವಾದ ಮತ್ತು ಸಂಘಟಿತ ಸೈನ್ಯಕ್ಕೆ ಸಹಕಾರಿಯಾಗಿದೆ. ಸುಮಾರು 1,50,000 ಯೋಧರನ್ನು ಸೇನೆಗೆ ಆಹ್ವಾನಿಸಲಾಗುವುದು ಎಂದು ಕರಿಮಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಫುಡ್ ಡೆಲಿವರಿ ಬಾಯ್‍ಗೆ ನಡು ರಸ್ತೆಯಲ್ಲಿ ಹಿಗ್ಗಾಮುಗ್ಗ ಥಳಿಸಿದ ಪೊಲೀಸ್

    ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಸಂಘಟನೆ ತಾಲಿಬಾನ್‌ ಅಧಿಕಾರವನ್ನು ಪ್ರಶ್ನಿಸುತ್ತಾ ಬಂದಿದೆ. ಈ ಬೆಳವಣಿಗೆ ಅಫ್ಘಾನಿಸ್ತಾನದಲ್ಲಿ ಮತ್ತೊಂದು ಯುದ್ಧ ಸಾಧ್ಯತೆಯ ಸುಳಿವನ್ನು ನೀಡುತ್ತಿದೆ. ಯುಎಸ್‌ ಯೋಧರು ಹಾಗೂ ಅಫ್ಘಾನ್‌ ಜನರ ಹತ್ಯೆಯಲ್ಲಿ ಆತ್ಮಹತ್ಯಾ ಬಾಂಬರ್‌ಗಳು ಪ್ರಮುಖ ಪಾತ್ರ ವಹಿಸಿದ್ದರು.

  • ಕುಟುಂಬವನ್ನು ಸಾಕಲು ಮಗಳನ್ನೇ ಮಾರಿದ ತಂದೆ – ಗಂಡನಿಗೆ ವಿಚ್ಛೇದನ ನೀಡಿದ ಅಫ್ಘಾನ್‌ ಮಹಿಳೆ

    ಕುಟುಂಬವನ್ನು ಸಾಕಲು ಮಗಳನ್ನೇ ಮಾರಿದ ತಂದೆ – ಗಂಡನಿಗೆ ವಿಚ್ಛೇದನ ನೀಡಿದ ಅಫ್ಘಾನ್‌ ಮಹಿಳೆ

    ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಆಡಳಿತ ಆರಂಭವಾದ ನಂತರ ದೇಶದಲ್ಲಿ ಅನೇಕ ಸಮಸ್ಯೆಗಳು ತಲೆದೋರುತ್ತಿವೆ. ಯುದ್ಧ, ಬರ ಪರಿಸ್ಥಿತಿಯಿಂದ ಬೇಸತ್ತ ಜನ ಪಶ್ಚಿಮ ಅಫ್ಘಾನ್‌ ಕಡೆಗೆ ಗುಳೆ ಹೋಗುತ್ತಿದ್ದಾರೆ. ತುತ್ತು ಅನ್ನಕ್ಕೂ ಪರದಾಡುವಂತಹ ಪರಿಸ್ಥಿತಿ ಅಲ್ಲಿನ ಬಡಜನರಿಗೆ ಎದುರಾಗಿದೆ. ಇಂತಹ ಬಿಕ್ಕಟ್ಟಿನಲ್ಲೇ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ.

    ಅಜಿಜ್‌ ಗುಲ್‌ ಎಂಬ ಮಹಿಳೆಯ ಪತಿ ತಮ್ಮ 10 ವರ್ಷದ ಹೆಣ್ಣು ಮಗಳನ್ನು ಬೇರೊಬ್ಬರಿಗೆ ಮಾರಾಟ ಮಾಡಿದ್ದಾರೆ. ಕುಟುಂಬದ ಉಳಿದ ಮಕ್ಕಳ ಕೂಳಿಗಾಗಿ ಹೆಂಡತಿಗೂ ತಿಳಿಯದಂತೆ ಹೆಣ್ಣುಮಗಳನ್ನು ಹಣಕ್ಕಾಗಿ ಮಾರಾಟ ಮಾಡಿದ್ದಾನೆ. ಇದನ್ನೂ ಓದಿ: ಮಾಜಿ ಸೈನಿಕರನ್ನು ಹತ್ಯೆಗೈದ ತಾಲಿಬಾನಿಗಳ ವಿರುದ್ಧ ಅಫ್ಘಾನ್ ಮಹಿಳೆಯರ ಪ್ರತಿಭಟನೆ

    ಗುಲ್‌ ದಂಪತಿಗೆ ಆರು ಮಂದಿ ಮಕ್ಕಳಿದ್ದರು. ಆಹಾರವಿಲ್ಲದೇ ಕಂಗೆಟ್ಟಿದ್ದ ಕುಟುಂಬ ಕೊನೆಗೆ ತಮ್ಮ ಒಬ್ಬಳು ಪುತ್ರಿಯನ್ನು ಮಾರಾಟ ಮಾಡಿದ್ದಾರೆ. ಆದರೆ ತನಗೆ ತಿಳಿಯದಂತೆ ಪತಿ, ಮಗಳನ್ನು ಮಾರಾಟ ಮಾಡಿರುವುದನ್ನು ಪತ್ನಿ ಖಂಡಿಸಿದ್ದಾಳೆ.

    ಪತಿಯ ವರ್ತನೆಯಿಂದ ಬೇಸತ್ತ ಗುಲ್‌ ಆತನಿಗೆ ವಿಚ್ಛೇದನ ನೀಡಿದ್ದಾಳೆ. ಒಪ್ಪಂದದಂತೆ ತನ್ನ ನೆರೆಹೊರೆಯವರಿಂದ ಹಣ ಸಹಾಯ ಪಡೆದು ವಿಚ್ಛೇದಿತ ಪತಿಗೆ 1 ಲಕ್ಷ ಅಫ್ಘಾನೀಸ್‌ ಅನ್ನು ನೀಡಿದ್ದಾಳೆ. ಇದನ್ನೂ ಓದಿ: ಅನುಮತಿ ಇಲ್ಲದೇ ಯಾರೋ ಮನೆಯೊಳಗೆ ಬಂದರೆಂದು ತಪ್ಪಾಗಿ ಭಾವಿಸಿ ಮಗಳನ್ನೇ ಕೊಂದ ತಂದೆ!

    ಪಶ್ಚಿಮ ಅಫ್ಘಾನ್‌ ಭಾಗದಲ್ಲಿ ಹೆಣ್ಣು ಮಕ್ಕಳಿಗೆ 15 ವರ್ಷ ತುಂಬುತ್ತಿದ್ದಂತೆ ಬೇರೆಯವರಿಗೆ ಮದುವೆ ಮಾಡುವುದು ಸಾಮಾನ್ಯ. ಮದುವೆಯಾಗುವ ವರನ ಕಡೆಯವರು ಒಪ್ಪಂದದಂತೆ ಹೆಣ್ಣಿನ ಮನೆಯವರಿಗೆ ಹಣ ನೀಡುತ್ತಾರೆ. ಆದರೆ ತಾಲಿಬಾನ್‌ ಆಡಳಿತದಿಂದಾಗಿ ಬಡಜನರ ಜೀವನ ಡೋಲಾಯಮಾನವಾಗಿದೆ. ಒಪ್ಪೊತ್ತಿನ ಊಟಕ್ಕೂ ಪರಿತಪಿಸುವ ಪರಿಸ್ಥಿತಿ ಇರುವುದರಿಂದ, ಕೆಲವರು ತಮ್ಮ ಹೆಣ್ಣು ಮಕ್ಕಳಿಗೆ 15 ವರ್ಷ ತುಂಬುವುದರೊಳಗೇ ಹಣ ಪಡೆದು ಬೇರೆಯವರಿಗೆ ಒಪ್ಪಿಸಲು ಮುಂದಾಗುತ್ತಿದ್ದಾರೆ.

    ಅಫ್ಘಾನಿಸ್ತಾನದಿಂದ ತನ್ನ ಸೇನಾ ಪಡೆಯನ್ನು ಅಮೆರಿಕ ವಾಪಸ್‌ ಕರೆಸಿಕೊಂಡ ನಂತರ ತಾಲಿಬಾನಿಗಳು ಅಪ್ಘಾನಿಸ್ತಾನವನ್ನು ವಶಪಡಿಸಿಕೊಂಡು ಪ್ರಾಬಲ್ಯ ಸ್ಥಾಪಿಸಿದರು. ತದನಂತರ ಅಲ್ಲಿನ ಬಡಜನರು ಜೀವನ ನಡೆಸಲು ಕಷ್ಟಪಡುತ್ತಿದ್ದಾರೆ. ಸರ್ಕಾರಿ ಉದ್ಯೋಗಿಗಳು ತಿಂಗಳ ಸಂಬಳವಿಲ್ಲದೇ ಕಂಗೆಟ್ಟಿದ್ದಾರೆ. ದೇಶದ ಪರಿಸ್ಥಿತಿ ದಿನೇ ದಿನೆ ಹದಗೆಡುತ್ತಿದೆ.

  • ಪಾಕಿಸ್ತಾನ ತಾಲಿಬಾನ್ ಮಧ್ಯೆ ಬೇಲಿಗಾಗಿ ಘರ್ಷಣೆ – ತಂತಿಯನ್ನೇ ಕದ್ದ ಉಗ್ರರು

    ಪಾಕಿಸ್ತಾನ ತಾಲಿಬಾನ್ ಮಧ್ಯೆ ಬೇಲಿಗಾಗಿ ಘರ್ಷಣೆ – ತಂತಿಯನ್ನೇ ಕದ್ದ ಉಗ್ರರು

    ಇಸ್ಲಾಮಾಬಾದ್: ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವನ್ನು ಸ್ವಾಗತಿಸಿದ್ದ ಪಾಕಿಸ್ತಾನಕ್ಕೆ ಈಗ ಅಲ್ಲಿನ ಉಗ್ರರು ಕಾಟ ನೀಡಲು ಆರಂಭಿಸಿದ್ದಾರೆ. ಗಡಿ ವಿಚಾರದಲ್ಲಿ ಅಫ್ಘಾನ್ ಉಗ್ರರು ಮತ್ತು ಪಾಕ್ ಸೇನೆಯ ಮಧ್ಯೆ ತಿಕ್ಕಾಟ ನಡೆದಿದೆ.

    ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಬಜೌರ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಬೇಲಿ ಹಾಕುವ ವಿಚಾರಕ್ಕೆ ತಾಲಿಬಾನ್ ಉಗ್ರರು ಮತ್ತು ಪಾಕ್ ಯೋಧರ ನಡುವೆ ಗಂಜ್ಗಾಲ್, ಸಾರ್ಕನೋ ಮತ್ತು ಕುನಾರ್ ಎಂಬಲ್ಲಿ ಅರ್ಧ ಗಂಟೆ ಗುಂಡಿನ ಚಕಮಕಿ ನಡೆದಿದೆ ಎಂದು ವರದಿಯಾಗಿದೆ

    ತಾಲಿಬಾನ್ ಉಗ್ರರೊಬ್ಬರು ಗಡಿ ಬೇಲಿಯ ಬಳಿ ಇದ್ದ ಇಬ್ಬರು ಪಾಕ್ ಸೈನಿಕರನ್ನು ಹತ್ಯೆಗೈದಿದ್ದಾರೆ. ಆ ಹಿನ್ನೆಲೆಯಲ್ಲಿ ಪಾಕ್ ಸೇನೆ, ಆಫ್ಘಾನ್ ಭಾಗದ ಗ್ರಾಮಗಳತ್ತ ಗುಂಡು ಮತ್ತು ಶೆಲ್ ದಾಳಿ ನಡೆಸಿದ್ದಾರೆ. ಅದಕ್ಕೆ ಪ್ರತಿಯಾಗಿ ತಾಲಿಬಾನ್‌ರು ಪ್ರತಿದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸೋಮವಾರ ಯಾದಗಿರಿಯಲ್ಲಿ ಚುನಾವಣೆ – ಪೊಲೀಸ್ ಇಲಾಖೆ ಸಜ್ಜು

    ಗಡಿ ವಿಚಾರದಲ್ಲಿ ಉಭಯ ರಾಷ್ಟ್ರಗಳ ನಡುವೆ ಸಾಕಷ್ಟು ಗೊಂದಲಗಳಿವೆ. ಕೆಲವು ದಿನಗಳ ಹಿಂದೆ ಅಷ್ಟೇ ಅದರ ಬಗ್ಗೆ ಸಭೆ ನಡೆಸಿ ಪರಿಹಾರ ಮಾಡಿಕೊಂಡಿದ್ದೇವೆ ಎಂದು ಎರಡು  ರಾಷ್ಟ್ರಗಳು ಹೇಳಿಕೊಂಡಿದ್ದವು. ತೆಹ್ರೀಕ್-ಎ-ತಾಲಿಬಾನ್ ಉಗ್ರ ಸಂಘಟನೆ ಪಾಕಿಸ್ತಾನದೊಂದಿಗೆ ಮಾಡಿಕೊಂಡಿದ್ದ ಕದನ ವಿರಾಮವನ್ನು ಮುಂದುವರೆಸುವುದಾಗಿಯೂ ಹೇಳಿತ್ತು. ಆದರೆ ಅದರ ಬೆನ್ನಲ್ಲೇ ಈ ಘರ್ಷಣೆ ನಡೆದಿದೆ.

    ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ 2,600 ಕಿಮೀ ದೂರದ ಅಂತಾರಾಷ್ಟ್ರೀಯ ಗಡಿ ಇದೆ. ಆಫ್ಘಾನ್‌ನ ಉಗ್ರರ ಒಳನುಸುಳುವಿಕೆ ತಪ್ಪಿಸುವ ನಿಟ್ಟಿನಲ್ಲಿ ಪಾಕಿಸ್ತಾನವು 2017ರ ರಿಂದ ತನ್ನ ಗಡಿಗೆ ಬೇಲಿ ಹಾಕಿಕೊಳ್ಳಲಾರಂಭಿಸಿದೆ. 90 ಶೇಕಡಾದಷ್ಟು ಕೆಲಸ ಮುಗಿದಿದೆ.

    ಬೇಲಿ ಹಾಕುವ ಕೆಲಸಕ್ಕೆ ವಿರೋಧ ವ್ಯಕ್ತಪಡಿಸಿರುವ ತಾಲಿಬಾನ್ ಉಗ್ರರು ನಂಗರ ಹಾರ್‌ನ ಪೂರ್ವ ಭಾಗದಲ್ಲಿರುವ ಗುಷ್ಟಾ ಜಿಲ್ಲೆಯಲ್ಲಿ ಪಾಕಿಸ್ತಾನದ ಬೇಲಿಯನ್ನು ಹಾಳು ಮಾಡಿದ್ದಾರೆ. ಅಲ್ಲಿದ್ದ ತಂತಿಯನ್ನೆಲ್ಲಾ ತುಂಡರಿಸಿದ್ದು, ಬೇಲಿಗೆಂದು ಇಟ್ಟಿದ್ದ ತಂತಿಯನ್ನು ಎತ್ತಿಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಯೋಗಿ ಆದಿತ್ಯನಾಥ್‌ ಸರ್ಕಾರ ಜಾಹೀರಾತಿಗೆ ವಾರ್ಷಿಕ 2,000 ಕೋಟಿ ಖರ್ಚು ಮಾಡ್ತಿದೆ: ಎಎಪಿ

  • ಪುರುಷ ಸಂಬಂಧಿಗಳು ಜೊತೆಯಲ್ಲಿ ಇಲ್ಲದಿದ್ರೆ ಮಹಿಳೆಯರು ದೂರ ಪ್ರಯಾಣಿಸುವಂತಿಲ್ಲ: ತಾಲಿಬಾನ್‌

    ಪುರುಷ ಸಂಬಂಧಿಗಳು ಜೊತೆಯಲ್ಲಿ ಇಲ್ಲದಿದ್ರೆ ಮಹಿಳೆಯರು ದೂರ ಪ್ರಯಾಣಿಸುವಂತಿಲ್ಲ: ತಾಲಿಬಾನ್‌

    ಕಾಬೂಲ್: ಪುರುಷ ಸಂಬಂಧಿಗಳು ಜೊತೆಯಲ್ಲಿಲ್ಲದಿದ್ದರೆ ಮಹಿಳೆಯರು ಪ್ರವಾಸ ಕೈಗೊಳ್ಳುವಂತಿಲ್ಲ ಎಂದು ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಆದೇಶ ಹೊರಡಿಸಿದೆ.

    ಬುರ್ಕಾ ಧರಿಸಿರುವ ಮಹಿಳೆಯರು ವಾಹನಗಳಲ್ಲಿ ಪ್ರಯಾಣಿಸಬಹುದು. ಬುರ್ಕಾ ಧರಿಸದವರನ್ನು ವಾಹನಗಳಲ್ಲಿ ಕೂರಿಸಿಕೊಳ್ಳುವಂತಿಲ್ಲ ಎಂದು ಆದೇಶದಲ್ಲಿ ತಾಲಿಬಾನ್‌ ತಿಳಿಸಿದೆ. ಇದನ್ನೂ ಓದಿ: ತನ್ನ ಬರ್ತ್‌ಡೇ ಪಾರ್ಟಿ ಸಿದ್ಧತೆಗೆ ಫಾರ್ಮ್‌ಹೌಸ್‌ಗೆ ಹೋಗಿದ್ದ ಸಲ್ಲುಗೆ ಹಾವು ಕಡಿತ!

    ಪುರುಷ ಸಂಬಂಧಿಗಳು 72 ಕಿ.ಮೀ.ಗೂ ಹೆಚ್ಚು ದೂರ ಪ್ರಯಾಣಿಸುವ ಮಹಿಳೆಯರ ಜೊತೆಯಲ್ಲಿ ಕುಟುಂಬದ ಸದಸ್ಯರಿರಬೇಕು. ಇಲ್ಲದಿದ್ದರೆ ಅಂತಹವರಿಗೆ ಪ್ರವಾಸ ನಿಷಿದ್ಧ ಎಂದು ತಾಲಿಬಾನ್‌ ಸಚಿವಾಲಯದ ವಕ್ತಾರ ಸಾದಿಕ್‌ ಅಕಿಫ್‌ ಮುಹಜಿರ್‌ ತಿಳಿಸಿದ್ದಾರೆ.

    ಈ ಮಾರ್ಗಸೂಚಿಯು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ನಟಿಯರನ್ನು ಒಳಗೊಂಡ ನಾಟಕಗಳು ಮತ್ತು ಸೋಪ್‌ ಜಾಹೀರಾತುಗಳನ್ನು ನಿಲ್ಲಿಸುವಂತೆ ಸಚಿವಾಲಯವು ದೂದರ್ಶನ ಚಾನೆಲ್‌ಗಳಿಗೆ ಸೂಚನೆ ನೀಡಿದ ಕೆಲ ದಿನಗಳಲ್ಲೇ ಈ ಮಾರ್ಗಸೂಚಿ ಹೊರಡಿಸಿದೆ. ಇದನ್ನೂ ಓದಿ: ಅಂಕಲ್ ಅಂದಿದ್ದೇ ತಪ್ಪಾಯ್ತು – ಯುವತಿಗೆ ಹಿಗ್ಗಾಮುಗ್ಗಾ ಥಳಿಸಿದ ಅಂಗಡಿ ಮಾಲೀಕ

    ಮಹಿಳಾ ಪತ್ರಕರ್ತರು ದೂರದರ್ಶನದಲ್ಲಿ ಸುದ್ದಿಗಳನ್ನು ವಾಚಿಸುವಾಗ ಕಡ್ಡಾಯವಾಗಿ ಬುರ್ಕಾ ಧರಿಸಬೇಕು ಎಂದು ಖಡಕ್‌ ಸೂಚನೆ ನೀಡಿದೆ. ವಾಹನಗಳಲ್ಲಿ ಯಾರೂ ಸಹ ಹಾಡುಗಳನ್ನು ಹಾಕಬಾರದು. ಸಾರಿಗೆ ವ್ಯವಸ್ಥೆ ಬಯಸುವ ಮಹಿಳೆಯರು ಬುರ್ಕಾ ಧರಿಸಬೇಕು ಎಂದು ತಿಳಿಸಿದೆ.

  • ಅಫ್ಘಾನ್ ಹುಡುಗಿಯರ ಪರ ನಿಂತ ಮಲಾಲಾ ಯೂಸುಫ್ ಝಾಯಿ

    ಅಫ್ಘಾನ್ ಹುಡುಗಿಯರ ಪರ ನಿಂತ ಮಲಾಲಾ ಯೂಸುಫ್ ಝಾಯಿ

    ವಾಷಿಂಗ್ಟನ್: 2012 ರಲ್ಲಿ ತಾಲಿಬಾನ್ ದಾಳಿಯಿಂದ ಬದುಕುಳಿದ ಮಾನವ ಹಕ್ಕುಗಳ ವಕೀಲೆ ಮಲಾಲಾ ಯೂಸುಫ್ ಝಾಯಿ ಅವರು ವಾಷಿಂಗ್ಟನ್‍ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಫ್ಘಾನ್ ಹುಡುಗಿಯರು ಮತ್ತು ಮಹಿಳೆಯರಿಗೆ ಯುಎಸ್ ಬೆಂಬಲ ನೀಡುವಂತೆ ವಾದಿಸಿದರು.

    ಯುನೈಟೆಡ್ ಸ್ಟೇಟ್ಸ್, ಯುಎನ್ ಜೊತೆ ಸೇರಿ ಅಫ್ಘಾನ್ ಹುಡುಗಿಯರು ಶಾಲೆಗಳಿಗೆ ಸಾಧ್ಯವಾದಷ್ಟು ಬೇಗ ಹಿಂದಿರುಗಲು ಅನುಮತಿ ನೀಡುವಂತೆ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮಲಾಲಾ ಅವರು ಯುಎಸ್ ವಿದೇಶಾಂಗ ಕಾರ್ಯದರ್ಶಿಯೊಂದಿಗಿನ ಖಾಸಗಿ ಸಭೆಯಲ್ಲಿ ಗಮನಕ್ಕೆ ತಂದರು.

    Afghanistan school

    ಮಲಾಲಾ ಅಫ್ಘಾನ್ ಹುಡುಗಿಯರಿಗೆ ಆಗುತ್ತಿರುವ ಅನ್ಯಾಯ ಕುರಿತು ವಿದೇಶಾಂಗ ಕಾರ್ಯದರ್ಶಿಗೆ ವಿವರಿಸುತ್ತ, ಅಫ್ಘಾನಿಸ್ತಾನ ಈಗ ಹುಡುಗಿಯರಿಗೆ ಮಾಧ್ಯಮಿಕ ಶಿಕ್ಷಣಕ್ಕೆ ಪ್ರವೇಶವಿಲ್ಲದ ಏಕೈಕ ದೇಶವಾಗಿದೆ. ಹುಡುಗಿಯರು ಶಿಕ್ಷಣ ಕಲಿಯುವುದನ್ನೆ ಅವರು ನಿಷೇಧಿಸಲಾಗಿದೆ ಎಂದು ಅಫ್ಘಾನ್ ಹುಡುಗಿಯವರ ದುಃಖವನ್ನು ತಿಳಿಸಿದರು. ಇದನ್ನೂ ಓದಿ: ಓಟಿಟಿಯಿಂದ ವಿಕ್ಕಿ-ಕತ್ರಿನಾ ವೆಡ್ಡಿಂಗ್ ಕ್ಲಿಪ್ಸ್ 100 ಕೋಟಿ ರೂ. ಆಫರ್

    ಅಲ್ಲದೇ ಈ ಕುರಿತು 15 ವರ್ಷದ ಸೊಟೊಡಾಹ್ ಎನ್ನುವ ಅಫ್ಘಾನ್ ಹುಡುಗಿ, ಎಲ್ಲ ಹುಡುಗಿಯರು ಸುರಕ್ಷಿತ ಮತ್ತು ಗುಣಮಟ್ಟದ ಶಿಕ್ಷಣವನ್ನು ಪಡೆಯುವ ಜಗತ್ತನ್ನು ನಾವು ನೋಡಲು ಬಯಸುತ್ತೇವೆ ಎಂದು ಅಧ್ಯಕ್ಷ ಜೋ ಬಿಡೆನ್ ಅವರನ್ನು ಉದ್ದೇಶಿಸಿ ಪತ್ರವನ್ನು ಬರೆದಿದ್ದು, ಸಭೆಯಲ್ಲಿ ಆ ಪತ್ರ ಕುರಿತು ಮಲಾಲಾ ಅವರು ಪ್ರಸ್ತುತಪಡಿಸಿದರು.

    ಸೊಟೊಡಾಹ್ ತನ್ನ ಪತ್ರದಲ್ಲಿ, ಹೆಚ್ಚು ಕಾಲ ಶಾಲೆಗಳು ಮತ್ತು ವಿಶ್ವವಿದ್ಯಾನಿಲಯಗಳು ಹುಡುಗಿಯರಿಗೆ ಮುಚ್ಚಲ್ಪಟ್ಟಿದ್ದು, ಇದು ಅವರ ಭವಿಷ್ಯಕ್ಕೆ ಮಾರಕವಾಗಿರುತ್ತೆ. ಬಾಲಕಿಯರ ಶಿಕ್ಷಣವು ಶಾಂತಿ ಮತ್ತು ಭದ್ರತೆಯನ್ನು ತರಲು ಪ್ರಬಲ ಸಾಧನವಾಗಿದೆ ಎಂದು ಆ ಹುಡುಗಿ ಬರೆದಿರುವ ಪತ್ರದ ಸಾರವನ್ನು ಮಲಾಲಾ ವಿವರಿಸಿದರು.

    ಹೆಣ್ಣುಮಕ್ಕಳು ಕಲಿಯದಿದ್ದರೆ, ಅಫ್ಘಾನಿಸ್ತಾನವೂ ಸಹ ಬಳಲುತ್ತದೆ. ಅವಳ ಕೆಲಸದಿಂದ, ಅವರ ಪ್ರಯತ್ನಗಳಿಂದ, ನಿಜವಾದ ಬದಲಾವಣೆಯನ್ನು ಮಾಡಲು ಸಾಧ್ಯ ಎಂದು ವಾದಿಸಿದರು. ಇದನ್ನೂ ಓದಿ: ಸೈಬರ್ ವಂಚನೆ ಮಾಡಿದ್ದ ಇಬ್ಬರ ಬಂಧನ

    ತಾಲಿಬಾನ್ ಅಧಿಕಾರವನ್ನು ಸ್ವೀಕರಿಸಿದ ನಂತರ ಅಫ್ಘಾನಿಸ್ತಾನದ ಮಾಧ್ಯಮಿಕ ಶಾಲೆಗಳು ಪುನಃ ತೆರೆಯಲ್ಪಟ್ಟಿದ್ದು, ಪುರುಷರಿಗೆ ಮಾತ್ರ ಕಲಿಸಲು ಅನುಮತಿ ಇದೆ. ಯುನೈಟೆಡ್ ಸ್ಟೇಟ್ಸ್, ಯುಎನ್ ಜೊತೆಗೂಡಿ ಹುಡುಗಿಯರ ಶಿಕ್ಷಣಕ್ಕೆ ಸಾಧ್ಯವಾದಷ್ಟು ಬೇಗ ಹಿಂದಿರುಗಲು ಅನುಮತಿಸುವುದನ್ನು ನೀಡುವಂತೆ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಾವು ಭಾವಿಸುತ್ತೇವೆ ಎಂದು ಮಲಾಲಾ ಅವರು ಕಾರ್ಯದರ್ಶಿಯೊಂದಿಗಿನ ಖಾಸಗಿ ಸಭೆಯಲ್ಲಿ ಗಮನಕ್ಕೆ ತಂದರು.

  • ಭಾರತ ಆಯೋಜಿಸಿದ್ದ ಅಫ್ಘಾನಿಸ್ತಾನದ ಸಭೆಯಿಂದ ಹೊರಗುಳಿದ ಪಾಕಿಸ್ತಾನ, ಚೀನಾ

    ಭಾರತ ಆಯೋಜಿಸಿದ್ದ ಅಫ್ಘಾನಿಸ್ತಾನದ ಸಭೆಯಿಂದ ಹೊರಗುಳಿದ ಪಾಕಿಸ್ತಾನ, ಚೀನಾ

    ನವದೆಹಲಿ: ಅಫ್ಘಾನಿಸ್ತಾನದ ಕುರುತು ಚರ್ಚೆ ಸಭೆಯನ್ನು ಭಾರತ ಆಯೋಜಿಸಿದ್ದು, ಈ ಸಭೆಯಿಂದ ಚೀನಾ ಮತ್ತು ಪಾಕಿಸ್ತಾನ ಹೊರಗುಳಿದಿದೆ.

    ದೆಹಲಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಸಭೆಯನ್ನು ಭಾರತ ಆಯೋಜಿಸಿದೆ. ಈ ಸಭೆ ಭಾರತದ ಎನ್ ಎಸ್ ಎ ಅಜಿತ್ ದೋವಲ್ ನೇತೃತ್ವದಲ್ಲಿ ನಡೆಯಲಿದ್ದು, ನಾಳೆ ಅಫ್ಘಾನಿಸ್ತಾನದ ಕುರಿತು ಪ್ರಾದೇಶಿಕ ಭದ್ರತಾ ಸಭೆ ನಡೆಯುತ್ತಿದೆ. ಈ ಹಿನ್ನೆಲೆ ಸಭೆಗೆ ಕಜಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಉನ್ನತ ಭದ್ರತಾ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ವರ್ಷಾಂತ್ಯಕ್ಕೆ ಎಲ್ಲ ವಯಸ್ಕರಿಗೂ ಡಬಲ್ ಡೋಸ್ ಅನುಮಾನ

    ರಷ್ಯಾ ಮತ್ತು ಇರಾನ್ ದೇಶದ ಪ್ರತಿನಿಧಿಗಳು ಸಹ ನಾಳೆಯ ಸಭೆಯಲ್ಲಿ ಭಾಗಿಯಾಗಲಿದ್ದು, ಭಯೋತ್ಪಾದನೆ, ಮಾದಕವಸ್ತು ಕಳ್ಳಸಾಗಣೆ ಬೆದರಿಕೆಗಳನ್ನು ಎದುರಿಸುವ ಸಹಕಾರಕ್ಕಾಗಿ ಈ ಸಭೆಯನ್ನು ಕರೆಯಲಾಗಿದೆ. ಆದರೆ ಈ ಸಭೆಯಿಂದ ಚೀನಾ ಮತ್ತು ಪಾಕಿಸ್ತಾನ ಹೊರಗುಳಿದಿದೆ.

  • ಅಘ್ಘಾನ್ ಮಣಿಸಿದ ನ್ಯೂಜಿಲೆಂಡ್ ಸೆಮೀಸ್‍ಗೆ – ಭಾರತ ಮನೆಗೆ

    ಅಘ್ಘಾನ್ ಮಣಿಸಿದ ನ್ಯೂಜಿಲೆಂಡ್ ಸೆಮೀಸ್‍ಗೆ – ಭಾರತ ಮನೆಗೆ

    ದುಬೈ: ಸೆಮಿಫೈನಲ್‍ಗೇರಲು ಕಡೆಯ ಅವಕಾಶವನ್ನೂ ಸಂಪೂರ್ಣವಾಗಿ ಬಳಸಿಕೊಂಡ ನ್ಯೂಜಿಲೆಂಡ್ ತಂಡ ಅಘ್ಘಾನಿಸ್ತಾನ ವಿರುದ್ಧ 8 ವಿಕೆಟ್‍ಗಳ ಜಯದೊಂದಿಗೆ ಗ್ರೂಪ್-2ರಲ್ಲಿ ದ್ವಿತೀಯ ಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸಿತು. ಈ ಮೂಲಕ ಭಾರತದ ಸೆಮಿಫೈನಲ್ ಕನಸು ಭಗ್ನಗೊಂಡಿದೆ.


    ನ್ಯೂಜಿಲೆಂಡ್ ವಿರುದ್ಧ ಅಘ್ಘಾನಿಸ್ತಾನ ಗೆಲ್ಲುತ್ತಿದ್ದರೆ ಭಾರತ ತಂಡ ನಾಳೆಯ ಪಂದ್ಯದ ಫಲಿತಾಂಶವನ್ನು ಗಮನಿಸಿ ಸೆಮಿಫೈನಲ್ ಪ್ರವೇಶಿಸುವ ಅವಕಾಶವಿತ್ತು. ಆದರೆ ಇಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆಲುವಿನೊಂದಿಗೆ ಈ ಅವಕಾಶ ಭಾರತಕ್ಕೆ ಕೈತಪ್ಪಿತು.

    ಅಘ್ಘಾನಿಸ್ತಾನ ನೀಡಿದ 125 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ನ್ಯೂಜಿಲೆಂಡ್ 18.1 ಓವರ್‍ ಗಳಲ್ಲಿ 125 ರನ್ ಸಿಡಿಸಿ ಗೆದ್ದು ಬೀಗಿತು. ನ್ಯೂಜಿಲೆಂಡ್ ಪರ ಕೇನ್ ವಿಲಿಯಮ್ಸನ್ 40 ರನ್ (42 ಎಸೆತ, 3 ಬೌಂಡರಿ) ಮತ್ತು ಡೆವೊನ್ ಕಾನ್ವೇ 36 ರನ್ ( 32 ಎಸೆತ, 4 ಬೌಂಡರಿ) ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದನ್ನೂ ಓದಿ: ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಗುಡ್ ಬೈ ಹೇಳಲು ಮುಂದಾದ್ರಾ ಕ್ರಿಸ್ ಗೇಲ್?

    ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಅಘ್ಘಾನಿಸ್ತಾನ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಕೇವಲ 19 ರನ್‍ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನಜೀಬುಲ್ಲಾ ಜದ್ರಾನ್ ಆಸರೆಯಾದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರು ಇನ್ನೊಂದು ಕಡೆ ಭರ್ಜರಿ ಬ್ಯಾಟ್ ಬೀಸಿದ ಜದ್ರಾನ್ 73 ರನ್ (48 ಎಸೆತ, 6 ಬೌಂಡರಿ, 3 ಸಿಕ್ಸ್) ಸಿಡಿಸಿ ತಂಡದ ಮೊತ್ತವನ್ನು 100ರ ಗಡಿದಾಟಿಸಿ 18ನೇ ಓವರ್‍ ನಲ್ಲಿ ವಿಕೆಟ್ ಒಪ್ಪಿಸಿದರು.

    ಜದ್ರಾನ್‍ಗೆ ಗುಲ್ಬದಿನ್ ನಾಯಬ್ 15 ರನ್ (18 ಎಸೆತ, 1 ಬೌಂಡರಿ) ಮತ್ತು ಮೊಹಮ್ಮದ್ ನಬಿ 14 ರನ್ (20 ಎಸೆತ) ಸಿಡಿಸಿ ಸಾಥ್ ನೀಡಿದ್ದನ್ನು ಹೊರತು ಪಡಿಸಿ ಉಳಿದ 6 ಮಂದಿ ಆಟಗಾರರು ಒಂದಂಕಿ ಮೊತ್ತಕ್ಕೆ ಔಟ್ ಆದರು. ಪರಿಣಾಮ 20 ಓವರ್‍ ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 124 ರನ್ ಕುಸಿತಕಂಡು ಸಾಧಾರಣ ಮೊತ್ತ ಕಲೆಹಾಕಿತು. ಇದನ್ನೂ ಓದಿ: ಟೀಂ ಇಂಡಿಯಾ ಸೆಮಿಫೈನಲ್ ಕನಸು ನನಸಾಗಲು ಇದೊಂದೇ ಮಾರ್ಗ

    ನ್ಯೂಜಿಲೆಂಡ್ ಪರ ಟ್ರೆಂಟ್ ಬೌಲ್ಟ್ 3 ವಿಕೆಟ್ ಕಿತ್ತು ಮಿಂಚಿದರೆ, ಟಿಮ್ ಸೌಥಿ 2 ವಿಕೆಟ್ ಬೇಟೆಯಾಡಿದರು. ಆಡಮ್ ಮಿಲ್ನೆ, ಜೇಮ್ಸ್ ನೀಶಮ್, ಇಶ್ ಸೋಧಿ ತಲಾ 1 ವಿಕೆಟ್ ಕಿತ್ತರು.

  • ಅಫ್ಘಾನ್‌ನಲ್ಲಿ ವಿದೇಶಿ ಕರೆನ್ಸಿ ಬಳಕೆ ನಿಷೇಧಿಸಿದ ತಾಲಿಬಾನ್‌

    ಅಫ್ಘಾನ್‌ನಲ್ಲಿ ವಿದೇಶಿ ಕರೆನ್ಸಿ ಬಳಕೆ ನಿಷೇಧಿಸಿದ ತಾಲಿಬಾನ್‌

    ಕಾಬೂಲ್: ಅಫ್ಘಾನಿಸ್ತಾನದಲ್ಲಿ ವಿದೇಶಿ ಕರೆನ್ಸಿಗಳನ್ನು ಬಳಸುವುದನ್ನು ನಿಷೇಧಿಸಿ ತಾಲಿಬಾನ್‌ ಆದೇಶ ಹೊರಡಿಸಿದೆ. ಈಗಾಗಲೇ ದುರ್ಬಲಗೊಂಡಿರುವ ಆರ್ಥಿಕ ಪರಿಸ್ಥಿತಿಯು ಈ ಆದೇಶದಿಂದ ಮತ್ತಷ್ಟು ಕುಂಠಿತಗೊಳ್ಳುವ ಸಾಧ್ಯತೆ ಇದೆ.

    ಭಯೋತ್ಪಾದಕರ ಗುಂಪು ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನದಲ್ಲಿ ಅಧಿಕಾರ ವಶಪಡಿಸಿಕೊಂಡಾಗಿನಿಂದ ಅಫ್ಘಾನ್‌ ರಾಷ್ಟ್ರೀಯ ಕರೆನ್ಸಿಯು ಮೌಲ್ಯ ಕಳೆದುಕೊಂಡಿದೆ.

    ಅಫ್ಘಾನ್‌ ದೇಶದ ಆರ್ಥಿಕತೆಯು ಕ್ಷೀಣಿಸುತ್ತಿರುವಾಗ ಬ್ಯಾಂಕ್‌ಗಳು ನಗದು ಕೊರತೆಯನ್ನು ಎದುರಿಸುತ್ತಿವೆ. ಅಂತಾರಾಷ್ಟ್ರೀಯ ಸಮುದಾಯವು ತಾಲಿಬಾನ್‌ ಆಡಳಿತವನ್ನು ಸರ್ಕಾರವೆಂದು ಪರಿಗಣಿಸಲು ನಿರಾಕರಿಸಿದೆ. ಇದನ್ನೂ ಓದಿ: 5-11 ವಯಸ್ಸಿನ ಮಕ್ಕಳಿಗೆ ಫೈಜರ್‌ ಲಸಿಕೆ ನೀಡಲು ಅಮೆರಿಕ ಅನುಮೋದನೆ

    ಇನ್ಮುಂದೆ ಯಾರಾದರೂ ವಿದೇಶಿ ಕರೆನ್ಸಿಯನ್ನು ದೇಶೀಯ ವ್ಯವಹಾರಕ್ಕೆ ಬಳಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಾಲಿಬಾನ್‌ ವಕ್ತಾರ ಜಬೀವುಲ್ಲಾ ಮುಜಾಹಿದ್‌ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ದೇಶದ ಆರ್ಥಿಕ ಪರಿಸ್ಥಿತಿ ಮತ್ತು ರಾಷ್ಟ್ರದ ಹಿತಾಸಕ್ತಿಗಾಗಿ ಪ್ರತಿ ವ್ಯವಹಾರದಲ್ಲೂ ಅಫ್ಘಾನಿ ಕರೆನ್ಸಿ ಬಳಸುವ ಅಗತ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಅವನು ಇನ್ನೂ ನನ್ನ ಮಡಿಲಲ್ಲಿ, ಆಲೋಚನೆಗಳಲ್ಲಿ ಶಾಶ್ವತವಾಗಿದ್ದಾನೆ: ರಾಘವೇಂದ್ರ ರಾಜ್‍ಕುಮಾರ್

    ದೇಶದ ಎಲ್ಲಾ ನಾಗರಿಕರು, ಅಂಗಡಿಯವರು, ವ್ಯಾಪಾರಿಗಳು, ಉದ್ಯಮಿಗಳು ಅಫ್ಘಾನಿ ಕರೆನ್ಸಿಯನ್ನೇ ವ್ಯವಹಾರಕ್ಕೆ ಬಳಸಬೇಕು. ವಿದೇಶಿ ಕರೆನ್ಸಿ ಬಳಕೆ ನಿಲ್ಲಿಸಬೇಕು ಎಂದು ಸೂಚನೆ ನೀಡಲಾಗಿದೆ.

  • ಅಫ್ಘಾನಿಸ್ತಾನದ ಜನತೆಗೆ ತಾಲಿಬಾನ್ ಸರ್ಕಾರದಿಂದ ಉಚಿತ ಗೋಧಿ ವಿತರಣೆ

    ಅಫ್ಘಾನಿಸ್ತಾನದ ಜನತೆಗೆ ತಾಲಿಬಾನ್ ಸರ್ಕಾರದಿಂದ ಉಚಿತ ಗೋಧಿ ವಿತರಣೆ

    ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವು ಭಾನುವಾರ ಹಸಿವನ್ನು ನೀಗಿಸುವ ಕಾರ್ಯಕ್ರಮವನ್ನು ಆರಂಭಿಸಿದ್ದು, ಜನತೆಗೆ ಗೋಧಿಯನ್ನು ನೀಡಿದೆ.

    ಅಫ್ಘಾನ್ ನ ಈ ಯೋಜನೆಯು ನಗರದ ಪ್ರಮುಖ ಪಟ್ಟಣಗಳು ಮತ್ತು ನಗರಗಳ ಸುತ್ತ ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿಯೂ ಅಫ್ಘಾನ್ ನ ರಾಜಧಾನಿಯಲ್ಲಿ ಮಾತ್ರ 40,000 ಪುರುಷರಿಗೆ ಉದ್ಯೋಗ ನೀಡಲಾಗುವುದು ಎಂದು ತಾಲಿಬಾನ್‍ನ ಮುಖ್ಯ ವಕ್ತಾರರು ದಕ್ಷಿಣ ಕಾಬೂಲ್‍ನಲ್ಲಿ ಮಾಧ್ಯಮಗಳಿಗೆ ತಿಳಿಸಿದರು.

    ಈ ಕುರಿತು ಮಾತನಾಡಿದ ಜಬಿಹುಲ್ಲಾ ಮುಜಾಹಿದ್, ನಿರುದ್ಯೋಗದ ವಿರುದ್ಧ ಹೋರಾಡಲು ಇದು ಒಂದು ಪ್ರಮುಖ ಹೆಜ್ಜೆಯಾಗಿದೆ. ಈ ಪರಿಣಾಮ ಕಾರ್ಮಿಕರು ಕಷ್ಟಪಟ್ಟು ಕೆಲಸ ಮಾಡಬೇಕು ಎಂದು ಹೇಳಿದರು. ಇದನ್ನೂ ಓದಿ: ಸಾಗರದ ಮಾಲ್ವೆ ಬಳಿ ಕಾರು ಅಪಘಾತ – ಚಾಲಕ ಸ್ಥಳದಲ್ಲೇ ಸಾವು

    ಅಫ್ಘಾನಿಸ್ತಾನ ಈಗಾಗಲೇ ಬಡತನ, ಬರ, ವಿದ್ಯುತ್ ಸಮಸ್ಯೆ ಮತ್ತು ವಿಫಲ ಆರ್ಥಿಕ ವ್ಯವಸ್ಥೆಯಿಂದ ಬಳಲುತ್ತಿದ್ದು, ಈಗ ಕಠಿಣ ಚಳಿಗಾಲವನ್ನು ಎದುರಿಸುತ್ತಿದೆ. ತಾಲಿಬಾನ್‍ನ ಆಹಾರ ಯೋಜನೆಯ ಕೆಲಸಕ್ಕಾಗಿ ಕಾರ್ಮಿಕರಿಗೆ ವೇತನವನ್ನು ನೀಡುತ್ತಿಲ್ಲ. ಪ್ರಸ್ತುತ ನಿರುದ್ಯೋಗಿಗಳು ಮತ್ತು ಚಳಿಗಾಲದಲ್ಲಿ ಹಸಿವಿನಿಂದ ಬಳಲುತ್ತಿರುವವರನ್ನು ಗುರಿಯಾಗಿಸಿಕೊಂಡು ಈ ಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

    ಈ ಎರಡು ತಿಂಗಳ ಕಾರ್ಯಕ್ರಮದಿಂದ ರಾಜಧಾನಿಯಲ್ಲಿ 11,600 ಟನ್ ಗೋಧಿಯನ್ನು ವಿತರಿಸಲಾಗಿದೆ. ಹೆರಾತ್, ಜಲಾಲಾಬಾದ್, ಕಂದಹಾರ್, ಮಜರ್-ಐ-ಷರೀಫ್ ಮತ್ತು ಪೋಲ್-ಐ-ಖೋಮ್ರಿ ಸೇರಿದಂತೆ ದೇಶದ ಇತರೆಡೆಗಳಿಗೆ ಸುಮಾರು 55,000 ಟನ್‍ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.

    ರಾಜಧಾನಿಯ ಗ್ರಾಮೀಣ ರಿಶ್ ಖೋರ್ ಪ್ರದೇಶದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಮುಜಾಹಿದ್, ಕೃಷಿ ಸಚಿವ ಅಬ್ದುಲ್ ರಹ್ಮಾನ್ ರಶೀದ್ ಮತ್ತು ಕಾಬೂಲ್ ಮೇಯರ್ ಹಮ್ದುಲ್ಲಾ ನೊಮಾನಿ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಆಗಮಿಸಿದ್ದರು. ಇದನ್ನೂ ಓದಿ: ತೋಳನಕೆರೆಗೆ ಕೊಳಚೆ ನೀರು ಸೇರದಂತೆ ಕ್ರಮ ವಹಿಸಿ: ಶೆಟ್ಟರ್ ಸೂಚನೆ

  • ಸಿದ್ದರಾಮಯ್ಯನನ್ನು ಒಂದು ತಿಂಗಳು ತಾಲಿಬಾನ್ ಪ್ರದೇಶಕ್ಕೆ ಕಳುಹಿಸಬೇಕು: ಶ್ರೀನಿವಾಸ್ ಪ್ರಸಾದ್

    ಸಿದ್ದರಾಮಯ್ಯನನ್ನು ಒಂದು ತಿಂಗಳು ತಾಲಿಬಾನ್ ಪ್ರದೇಶಕ್ಕೆ ಕಳುಹಿಸಬೇಕು: ಶ್ರೀನಿವಾಸ್ ಪ್ರಸಾದ್

    ಮೈಸೂರು: ಪತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಒಂದು ತಿಂಗಳು ಅಫ್ಘಾನಿಸ್ತಾನದ ತಾಲಿಬಾನ್ ಪ್ರದೇಶಕ್ಕೆ ಕಳುಹಿಸಬೇಕೆಂದು ಮೈಸೂರು ಸಂಸದ ಶ್ರೀನಿವಾಸ್ ಪ್ರಸಾದ್ ಕಿಡಿಕಾರಿದ್ದಾರೆ.

    ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ರಾಜ್ಯ ನಾಯಕರ ಮಾತು ಮಿತಿ ಮೀರಿದೆ. ನಾನು ಕೂಡ ಮಾಧ್ಯಮಗಳಲ್ಲಿ ಅವರ ಹೇಳಿಕೆ ನೋಡಿದ್ದೇನೆ. ಚುನಾವಣೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ಮಾತು ಮಿತಿ ಮೀರಿದೆ. ಆಡಳಿತ ಪಕ್ಷಕ್ಕೂ ಜವಾಬ್ದಾರಿ ಇದೆ, ಪ್ರತಿ ಪಕ್ಷಕ್ಕೂ ಒಂದು ಜವಾಬ್ದಾರಿ ಇದೆ. ಪ್ರತಿಪಕ್ಷದ ನಾಯರ ಮಾತು ಮಿತಿ ಮೀರಿದೆ. ವಿರೋಧ ಪಕ್ಷದ ನಾಯಕ ಅವರ ಜವಾಬ್ದಾರಿ ಮರೆಯಬಾರದು ಎಂದು ವಾಗ್ದಾಳಿ ನಡೆಸಿದರು.

    ಪ್ರಧಾನ ಮಂತ್ರಿಗಳಿಗೆ ಒಂದು ಗೌರವ ಇದೆ. ಅವರ ಬಗ್ಗೆ ಈ ರೀತಿಯಲ್ಲಿ ಅವಹೇಳನ ಮಾಡಬಾರದು. ಒಂದು ತಿಂಗಳು ತಾಲಿಬಾನ್‍ಗಳ ಜೊತೆಗೆ ಸಿದ್ದರಾಮಯ್ಯನನ್ನು ಕಳುಹಿಸಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಈ ರೀತಿಯ ಹೇಳಿಕೆಗಳಿಂದ ಬಹಳ ನೋವಾಗಿದೆ. ಬೇರೆ ಸಮಯದಲ್ಲಿ ಈ ವಿಚಾರದ ಬಗ್ಗೆ ಮಾತನಾಡುತ್ತೇನೆ. ನಾನು ಚುನಾವಣಾ ಕ್ಷೇತ್ರಗಳಿಗೆ ಹೋಗಿಲ್ಲ. ಆದರೆ ಚುನಾವಣೆಯಲ್ಲಿ ನಾವು ಎರಡು ಕ್ಷೇತ್ರವನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.