Tag: afghanistan

  • ಅಫ್ಘಾನಿಸ್ತಾನ ವಿಚಾರದಲ್ಲಿ ರಷ್ಯಾ,ಭಾರತದ ನಿಲುವು ಒಂದೇ: ವರ್ಶಿನಿನ್

    ನವದೆಹಲಿ: ಅಫ್ಘಾನಿಸ್ತಾನದ ಪರಿಸ್ಥಿತಿಯಲ್ಲಿ ರಷ್ಯಾ ಹಾಗೂ ಭಾರತ ಒಂದೇ ರೀತಿಯಾಗಿ ಕೆಲಸ ಮಾಡುತ್ತಿದೆ ಎಂದು ರಷ್ಯಾದ ವಿಶ್ವಸಂಸ್ಥೆಯ ರಾಯಭಾರಿ ಸೆರ್ಗೆಯ್ ವಾಸಿಲಿವಿಚ್ ವರ್ಶಿನಿನ್ ಹೇಳಿದ್ದಾರೆ.

    ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಭಯ ದೇಶಗಳ ನಡುವಿನ ಸಹಕಾರದ ಕುರಿತು ನಡೆದ ಸಭೆಯಲ್ಲಿ ವರ್ಶಿನಿನ್ ಭಾಗವಹಿಸಿದ್ದರು.

    ಅಫ್ಘಾನಿಸ್ತಾನದ ಪರಿಸ್ಥಿತಿಯ ಕುರಿತು ರಷ್ಯಾ ಹಾಗೂ ಭಾರತ ಒಂದೇ ನಿಲುವನ್ನು ಹೊಂದಿದೆ. ಅಫ್ಘಾನಿಸ್ತಾನದ ಜನರಿಗೆ ಮಾನವೀಯ ನೆರವು ಕಳುಹಿಸಬೇಕು. ಅದನ್ನು ನವದೆಹಲಿ ಹಾಗೂ ಮಾಸ್ಕೋ ಎರಡೂ ಒದಗಿಸುತ್ತಿವೆ. ಸದ್ಯ ಅಫ್ಘಾನಿಸ್ತಾನದಲ್ಲಿರುವ ಆಡಳಿತ ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಲಿ ಎಂದು ನಾವು ಆಶಿಸುತ್ತೇವೆ ಎಂದರು. ಇದನ್ನೂ ಓದಿ: ಒಮಿಕ್ರಾನ್ ಉಪ ರೂಪಾಂತರಿ ಬಿಎ.2 – 57 ದೇಶಗಳಲ್ಲಿ ಪತ್ತೆ: WHO

    ಅಫ್ಘಾನಿಸ್ತಾನದ ಇಂದಿನ ಸ್ಥಿತಿಗೆ ಕಳೆದ 20 ವರ್ಷಗಳಿಂದ ಇದ್ದ ಅಮೆರಿಕಾ ಪಡೆ ಹಾಗೂ ಅವರ ಮಿತ್ರರಾಷ್ಟ್ರಗಳ ಉಪಸ್ಥಿತಿಯೇ ಕಾರಣ. ಕಳೆದ ವರ್ಷ ಅಗಸ್ಟ್‌ನಲ್ಲಿ ಅಮೆರಿಕಾ ತಮ್ಮ ಪಡೆಗಳನ್ನು ಹಿಂತೆಗೆದುಕೊಂಡ ಬಳಿಕ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಳ್ಳು ಸಾಧ್ಯವಾಯಿತು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಜಯಲಲಿಲಾ ಆಪ್ತೆ ಶಶಿಕಲಾಗೆ ಜೈಲಿನಲ್ಲಿ ರಾಜಾತಿಥ್ಯ – ಪೊಲೀಸರಿಗೆ ಸಂಕಷ್ಟ

    ಅಫ್ಘಾನಿಸ್ತಾನದ ಜನರಿಗೆ ಮಾನವೀಯ ನೆರವು ಒದಗಿಸಬೇಕು ಎಂಬುದು ಸ್ಪಷ್ಟವಾಗಿದೆ. ಈ ಕೆಲಸವನ್ನು ನಾವು ಮತ್ತು ಭಾರತ ಎರಡೂ ಮಾಡುತ್ತಿದ್ದೇವೆ. ಈ ಕಾರ್ಯ ಹೀಗೆಯೇ ಮುಂದುವರಿಯಬೇಕು ಎಂದು ವರ್ಶಿನಿನ್ ಹೇಳಿದರು.

  • Budget 2022: ತಾಲಿಬಾನ್‌ ಆಡಳಿತದ ಅಫ್ಘಾನಿಸ್ತಾನಕ್ಕೆ 200 ಕೋಟಿ ನೆರವು

    Budget 2022: ತಾಲಿಬಾನ್‌ ಆಡಳಿತದ ಅಫ್ಘಾನಿಸ್ತಾನಕ್ಕೆ 200 ಕೋಟಿ ನೆರವು

    ನವದೆಹಲಿ: ಸಂಸತ್‌ನಲ್ಲಿ ಮಂಗಳವಾರ ಮಂಡಿಸಲಾದ 2022-23ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಭಾರತವು ನೆರೆ ರಾಷ್ಟ್ರಗಳಿಗೆ ಆರ್ಥಿಕ ನೆರವು ಘೋಷಿಸಿದೆ.

    ತಾಲಿಬಾನ್‌ ಆಡಳಿತದ ಅಫ್ಘಾನಿಸ್ತಾನಕ್ಕೆ 200 ಕೋಟಿ ರೂ. ಆರ್ಥಿಕ ನೆರವು ನೀಡುವುದಾಗಿ ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ ಮ್ಯಾನ್ಮಾರ್‌ ದೇಶಕ್ಕೆ 600 ಕೋಟಿ ರೂ. ಘೋಷಿಸಲಾಗಿದೆ. ಮ್ಯಾನ್ಮಾರ್‌ 2021ರಿಂದಲೂ ಮಿಲಿಟರಿ ದಂಗೆಯಿಂದ ತತ್ತರಿಸಿ ಹೋಗಿದೆ. ಭೂತಾನ್‌ಗೆ ಅತಿ ಹೆಚ್ಚು ಅಂದರೆ, 2,266.24 ಕೋಟಿ ರೂ. ನೆರವು ನೀಡಲಾಗುತ್ತಿದೆ. ಅಂತೆಯೇ ಮಾರಿಷಸ್‌ಗೆ 900 ಕೋಟಿ, ಆಫ್ರಿಕಾ ಖಂಡಕ್ಕೆ 250 ಕೋಟಿ ರೂ. ಬಾಂಗ್ಲಾದೇಶಕ್ಕೆ 300 ಕೋಟಿ ಮತ್ತು ನೇಪಾಳಕ್ಕೆ 750 ಕೋಟಿ ರೂ. ನೆರವು ನೀಡುವುದಾಗಿ ತಿಳಿಸಿದೆ. ಇದನ್ನೂ ಓದಿ: Budget 2022: ಯಾವುದು ಇಳಿಕೆ? ಯಾವುದು ಏರಿಕೆ?

    ಭಾರತವು ಕಾಬೂಲ್‌ನಲ್ಲಿ ರಾಜತಾಂತ್ರಿಕ ಉಪಸ್ಥಿತಿಯನ್ನು ಹೊಂದಿಲ್ಲ ಎಂಬುದು ಗಮನಾರ್ಹ. ಕಳೆದ ವರ್ಷದ ಆಗಸ್ಟ್‌ನಲ್ಲಿ ತಾಲಿಬಾನ್‌ ಅಧಿಕಾರ ವಹಿಸಿಕೊಂಡ ನಂತರ ಅದರ ರಾಯಭಾರಿ ಕಚೇರಿಯನ್ನು ಮುಚ್ಚಲಾಗಿದೆ. ಅಫ್ಘಾನಿಸ್ತಾನ ಕಳೆದೆರಡು ದಶಕಗಳಲ್ಲಿ ಭಾರತದ ಅನುದಾನವನ್ನು ಸ್ವೀಕರಿಸುತ್ತಿದೆ. ಕಳೆದ ವರ್ಷ ಅಫ್ಘಾನ್‌ ಅಧ್ಯಕ್ಷರಾಗಿದ್ದ ಅಶ್ರಫ್‌ ಘನಿ ಸರ್ಕಾರವು ಸುಮಾರು 348 ಕೋಟಿ ರೂ. ನೆರವು ಸ್ವೀಕರಿಸಿದೆ. ಈ ನೆರವು ಅಲ್ಲಿನ ಅಭಿವೃದ್ಧಿ ಯೋಜನೆಗಳ ಮೇಲೆ ಕೇಂದ್ರೀಕರಿಸಿದೆ.

    ಈಚೆಗಷ್ಟೇ ಭಾರತವು ಅಫ್ಘಾನಿಸ್ತಾನಕ್ಕೆ ಔಷಧ ಮತ್ತು ಮಾನವೀಯ ನೆರವು ನೀಡಿದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗೋಧಿಯನ್ನು ಕಾಬೂಲ್‌ಗೆ ರವಾನಿಸಲಾಗುವುದು ಎಂದು ತಿಳಿಸಿದೆ. ಇದನ್ನೂ ಓದಿ: Budget 2022: ಆದಾಯ ತೆರಿಗೆ ಮಿತಿಯಲ್ಲಿ ಬದಲಾವಣೆ ಇಲ್ಲ

  • ಅಫ್ಘಾನಿಸ್ತಾನಕ್ಕೆ ಭಾರತ ವೈದ್ಯಕೀಯ ನೆರವು – 3 ಟನ್ ಔಷಧಿ ರವಾನೆ

    ನವದೆಹಲಿ: ತಾಲಿಬಾನ್ ಆಡಳಿತದಿಂದಾಗಿ ತತ್ತರಿಸುವ ಅಫ್ಘಾನಿಸ್ತಾನಕ್ಕೆ ಭಾರತ ನೆರವು ನೀಡಲು ಮುಂದಾಗಿದೆ ಸತತ ನಾಲ್ಕನೇ ಬಾರಿಗೆ ಅಪ್ಘಾನಿಸ್ತಾನಕ್ಕೆ ಭಾರತ ವೈದ್ಯಕೀಯ ನೆರವು ನೀಡಿದೆ. ಶನಿವಾರ ಭಾರತ ಅಫ್ಘಾನಿಸ್ತಾನಕ್ಕೆ ಮೂರು ಟನ್‍ಗಳಷ್ಟು ಅಗತ್ಯ ಜೀವರಕ್ಷಕ ಔಷಧಿಗಳನ್ನು ಕಳುಹಿಸಿದೆ.

    ಯುದ್ಧ ಪೀಡಿತ ದೇಶಕ್ಕೆ ಭಾರತ ನಾಲ್ಕನೇ ಬ್ಯಾಚ್‍ನಲ್ಲಿ 3 ಟನ್‍ಗಳಷ್ಟು ವೈದ್ಯಕೀಯ ನೆರವನ್ನು ನೀಡಿದೆ. ಮುಂದಿನ ವಾರಗಳಲ್ಲಿ ಅಲ್ಲಿನ ಜನರಿಗೆ ಔಷಧ ಹಾಗೂ ಆಹಾರ ಧಾನ್ಯಗಳ ರೂಪದಲ್ಲಿ ಇನ್ನಷ್ಟು ಸಹಾಯ ಮಾಡಲಿದ್ದೇವೆ ಎಂದು ವಿದೇಶಾಂಗ ಸಚಿವಾಲಯ ಶನಿವಾರ ತಿಳಿಸಿದೆ. ಇದನ್ನೂ ಓದಿ: ಆಕಾಶ ಬೆಳಗಿದವು 1,000 ಮೇಡ್ ಇನ್ ಇಂಡಿಯಾ ಡ್ರೋನ್‍ಗಳು

    ಅಫ್ಘಾನಿಸ್ತಾನ ಜನರೊಂದಿಗೆ ವಿಶೇಷ ಸಂಬಂಧವನ್ನು ಮುಂದುವರಿಸಲು ಹಾಗೂ ಮಾನವೀಯ ನೆರವನ್ನು ನೀಡಲು ಭಾರತ ಬದ್ಧವಾಗಿದೆ. ಮಾನವೀಯ ನೆರವಿನ ಭಾಗವಾಗಿ ಭಾರತ ಅಫ್ಘಾನಿಸ್ತಾನಕ್ಕೆ 3 ಟನ್‍ಗಳಷ್ಟು ಔಷಧಿಗಳನ್ನು ಒಳಗೊಂಡಿರುವ ನಾಲ್ಕನೇ ಬ್ಯಾಚ್ ವೈದ್ಯಕೀಯ ನೆರವನ್ನು ಪೂರೈಸಿದೆ. ಅದನ್ನು ಕಾಬೂಲ್‍ನ ಇಂದಿರಾ ಗಾಂಧಿ ಆಸ್ಪತ್ರೆಗೆ ಹಸ್ತಾಂತರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

    ಇದಕ್ಕೂ ಮೊದಲು ಭಾರತ ಅಫ್ಘಾನಿಸ್ತಾನಕ್ಕೆ ಕೋವಿಡ್-19 ಲಸಿಕೆಯ 5 ಲಕ್ಷ ಡೋಸ್‍ಗಳನ್ನು ಸರಬರಾಜು ಮಾಡಿತ್ತು. ಇದರೊಂದಿಗೆ 2 ಬಾರಿ ಇತರ ಅಗತ್ಯ ಔಷಧಗಳ ಸರಬರಾಜನ್ನೂ ಭಾರತ ಮಾಡಿತ್ತು. ಅದನ್ನು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಕಾಬೂಲ್‍ನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಗೆ ಹಸ್ತಾಂತರಿಸಲಾಗಿತ್ತು. ಇದನ್ನೂ ಓದಿ: ಅಫ್ಘಾನಿಸ್ತಾನಕ್ಕೆ ಭಾರತದ ನೆರವು – ಇರಾನ್ ಸಹಾಯ

    ಭಾರತ, ಪಾಕಿಸ್ತಾನದ ಮೂಲಕ ರಸ್ತೆಯ ಮಾರ್ಗವಾಗಿ ಅಫ್ಘಾನಿಸ್ತಾನಕ್ಕೆ 50 ಸಾವಿರ ಟನ್ ಗೋಧಿ ಹಾಗೂ ಔಷಧಿಗಳನ್ನು ಕಳುಹಿಸುವುದಾಗಿ ಘೋಷಿಸಿದೆ. ಇದಕ್ಕೆ ಇರಾನ್ ಸಹಾಯ ಮಾಡಿವುದಾಗಿಯೂ ತಿಳಿಸಿತ್ತು.

  • ಆಹಾರಕ್ಕಾಗಿ ಅಪ್ಘಾನ್‌ ಜನರಿಂದ ಮಕ್ಕಳು, ದೇಹದ ಅಂಗಾಂಗಗಳ ಮಾರಾಟ

    ಆಹಾರಕ್ಕಾಗಿ ಅಪ್ಘಾನ್‌ ಜನರಿಂದ ಮಕ್ಕಳು, ದೇಹದ ಅಂಗಾಂಗಗಳ ಮಾರಾಟ

    ಕಾಬೂಲ್‌: ತಾಲಿಬಾನಿಗಳು ಸರ್ಕಾರವನ್ನು ಸ್ಥಾಪಿಸಿದ ನಂತರ ಅಫ್ಘಾನಿಸ್ತಾನದಲ್ಲಿ ಮಾನವೀಯ ಬಿಕ್ಕಟ್ಟು ತಲೆದೋರಿದೆ. ಇಲ್ಲಿನ ಜನರು ಆಹಾರಕ್ಕಾಗಿ ತಮ್ಮ ಮಕ್ಕಳನ್ನು ಮಾರುತ್ತಿದ್ದಾರೆ. ಅಲ್ಲದೇ ತಮ್ಮ ದೇಹದ ಅಂಗಾಂಗಗಳನ್ನು ಮಾರುತ್ತಿದ್ದಾರೆ ಎಂದು ವಿಶ್ವ ಆಹಾರ ಕಾರ್ಯಕ್ರಮದ (ಡಬ್ಲ್ಯೂಎಫ್‌ಪಿ) ಯುಎನ್‌ ಮುಖ್ಯಸ್ಥ ಕಳವಳ ವ್ಯಕ್ತಪಡಿಸಿದ್ದಾರೆ.

    ಡಬ್ಲ್ಯೂಎಫ್‌ಪಿ ಮುಖ್ಯಸ್ಥ ಡೇವಿಡ್‌ ಬೇಸ್ಲಿ, ಅಫ್ಘಾನಿಸ್ತಾನದಲ್ಲಿ ಅರ್ಧದಷ್ಟು ಜನಸಂಖ್ಯೆಯು ಹಸಿವಿನಿಂದ ಬಳಲುತ್ತಿರುವುದರಿಂದ ಜಾಗತಿಕ ಸಮುದಾಯವು ನೆರವು ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬಾಗ್ದಾದ್ ವಿಮಾನ ನಿಲ್ದಾಣದ ಬಳಿ 3 ರಾಕೆಟ್‍ಗಳ ದಾಳಿ

    ಬರ, ಸಾಂಕ್ರಾಮಿಕ, ಆರ್ಥಿಕ ಕುಸಿತ, ನಿರಂತರ ಸಂಘರ್ಷಗಳ ನಡುವೆ ಅಫ್ಘಾನಿಸ್ತಾನದ ಜನರು ದಿಕ್ಕೆಟ್ಟಿದ್ದಾರೆ. ಈ ಗಂಭೀರ ಸಮಸ್ಯೆಗಳ ವಿರುದ್ಧ ಸಂಘರ್ಷ ನಡೆಸುತ್ತಿದ್ದಾರೆ. ದೇಶದಲ್ಲಿ ಸುಮಾರು 2.4 ಕೋಟಿ ಜನರು ಆಹಾರ ಅಭದ್ರತೆಯಿಂದ ನರಳುತ್ತಿದ್ದಾರೆ. ಚಳಿಗಾಲದ ಪರಿಸ್ಥಿತಿಯಲ್ಲಿ ದೇಶದ ಅರ್ಧದಷ್ಟು ಜನರು ಕ್ಷಾಮವನ್ನು ಎದುರಿಸುತ್ತಿದ್ದಾರೆ. ಈ ವರ್ಷದ ಅಂತ್ಯದ ವೇಳೆಗೆ ಶೇ.97ರಷ್ಟು ಮಂದಿ ಬಡತನ ರೇಖೆಗಿಂತ ಕೆಳಗೆ ಬೀಳಬಹುದು.

    ತಾಲಿಬಾನ್‌ ಸಂಘರ್ಷದಿಂದಾಗಿ ಕಳೆದ 20 ವರ್ಷಗಳಿಂದಲೂ ವಿಶ್ವದಲ್ಲೇ ಅತ್ಯಂತ ಬಡರಾಷ್ಟ್ರವಾಗಿ ಅಫ್ಘಾನಿಸ್ತಾನ ಗುರುತಿಸಿಕೊಂಡಿದೆ. ಇದನ್ನೂ ಓದಿ: ಹೊಸ ವೈರಸ್‌ NeoCoV ಬಗ್ಗೆ ಚೀನಾ ಎಚ್ಚರ – ಮೂವರು ಸೋಂಕಿತರಲ್ಲಿ ಒಬ್ಬರು ಸಾವು!

    ಕಳೆದ ವರ್ಷ ಆಗಸ್ಟ್‌ನಲ್ಲಿ ಅಮೆರಿಕ ಮತ್ತು ಮಿತ್ರರಾಷ್ಟ್ರಗಳು ಅಪ್ಘಾನಿಸ್ತಾನದಿಂದ ತಮ್ಮ ಸೇನಾಪಡೆಯನ್ನು ವಾಪಸ್‌ ಕರೆಸಿಕೊಂಡವು. ಪರಿಣಾಮವಾಗಿ ತಾಲಿಬಾನ್‌ ಸುಲಭವಾಗಿ ದೇಶದಲ್ಲಿ ತನ್ನ ಪ್ರಾಬಲ್ಯ ಸ್ಥಾಪಿಸಿತು. ಪ್ರಸ್ತುತ ದೇಶದಲ್ಲಿ ಮಾನವೀಯ ಬಿಕ್ಕಟ್ಟು ಏರ್ಪಟ್ಟಿದೆ. ಆದರೂ ಕೆಲವು ಅಂತಾರಾಷ್ಟ್ರೀಯ ದತ್ತಿಗಳು ಮತ್ತು ಸಹಾಯ ಗುಂಪುಗಳು, ಸ್ಥಳೀಯ ಜನರಿಗೆ ಸಹಾಯ ಹಸ್ತ ನೀಡುತ್ತಿವೆ.

  • ಅಫ್ಘಾನಿಸ್ತಾನದಲ್ಲಿ ಭಾರೀ ಹಿಮಪಾತ – 42 ಮಂದಿ ಸಾವು

    ಅಫ್ಘಾನಿಸ್ತಾನದಲ್ಲಿ ಭಾರೀ ಹಿಮಪಾತ – 42 ಮಂದಿ ಸಾವು

    ಕಾಬೂಲ್: ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭಾರೀ ಹಿಮಪಾತದಿಂದಾಗಿ 42 ಮಂದಿ ದುರ್ಮರಣಕ್ಕೀಡಾಗಿದ್ದು, 76 ಮಂದಿ ಗಾಯಗೊಂಡಿದ್ದಾರೆ.

    ಇಸ್ಲಾಮಿಕ್‌ ಎಮಿರೇಟ್‌ ಆಫ್‌ ಆಫ್ಘಾನಿಸ್ತಾನದ (ಐಇಎ) ವಿಪತ್ತು ನಿರ್ವಹಣಾ ವ್ಯವಹಾರಗಳ ರಾಜ್ಯ ಸಚಿವಾಲಯವು, ಕಳೆದ 20 ದಿನಗಳಿಂದ ಹಿಮಪಾತದ ತೀವ್ರತೆಯಿಂದಾಗಿ 2,000 ಮನೆಗಳು ನಾಶವಾಗಿವೆ. ಹಿಮಪಾತದಿಂದಾಗಿ 42 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿಸಿದೆ. ಇದನ್ನೂ ಓದಿ: ಬಿಜೆಪಿ ಶಾಸಕನ ಪುತ್ರ ಸೇರಿ 7 ವೈದ್ಯಕೀಯ ವಿದ್ಯಾರ್ಥಿಗಳ ದುರ್ಮರಣ!

    ಭಾರೀ ಹಿಮಪಾತದಿಂದಾಗಿ ನೂರಾರು ಜನರು ಹಲವು ಹೆದ್ದಾರಿಗಳಲ್ಲಿ ಸಿಲುಕಿಕೊಂಡಿದ್ದಾರೆ. ಅವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅಲ್ಲದೇ ಹೆಚ್ಚಿನ ಅನಾಹುತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದೆ.

    ವಿವಿಧ ಏಜೆನ್ಸಿಗಳು ಕೂಡ ಸಂತ್ರಸ್ತರ ನೆರವಿಗೆ ಧಾವಿಸಿವೆ. ಹಿಮಪಾತಕ್ಕೂ ಮೊದಲು ಪಶ್ಚಿಮ ಬದ್ಘಿಸ್‌ ಪ್ರಾಂತ್ಯದಲ್ಲಿ ಸಂಭವಿಸಿದ ಎರಡು ಭೂಕಂಪಗಳಲ್ಲಿ 28 ಮಂದಿ ಮೃತಪಟ್ಟಿದ್ದರು. ಆಗ 1 ಸಾವಿರ ಮನೆಗಳು ನಾಶವಾಗಿದ್ದವು ಎಂದು ಹೇಳಿದೆ. ಇದನ್ನೂ ಓದಿ: ಪಂಜಾಬ್‍ನಲ್ಲಿ ಕಾಳಿ ವಿಗ್ರಹ ವಿರೂಪಗೊಳಿಸಲು ಯತ್ನ

    ತಾಲಿಬಾನ್‌ ಆಡಳಿತದಿಂದಾಗಿ ನಿರುದ್ಯೋಗ, ಹಸಿವು, ಬರದಿಂದ ತತ್ತರಿಸಿರುವ ಅಫ್ಘಾನಿಸ್ತಾನದ ಜನತೆಗೆ ಹಿಮಪಾತವು ಮತ್ತೊಂದು ಹೊಡೆತ ನೀಡಿದೆ.

  • ಅಫ್ಘಾನಿಸ್ತಾನದಲ್ಲಿ  ಭೂಕಂಪನ-26 ಮಂದಿ ಸಾವು

    ಅಫ್ಘಾನಿಸ್ತಾನದಲ್ಲಿ ಭೂಕಂಪನ-26 ಮಂದಿ ಸಾವು

    ಕಾಬೂಲ್: ಅಫ್ಘಾನಿಸ್ತಾನದಲ್ಲಿ ಭೂಕಂಪನದಿಂದ ಸುಮಾರು 26 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 5.3 ರಷ್ಟು ತೀವ್ರತೆ ದಾಖಲಾಗಿದೆ.

    ಐವರು ಮಹಿಳೆಯರು ಹಾಗೂ ನಾಲ್ವರು ಮಕ್ಕಳು ಸೇರಿ ಒಟ್ಟು 26 ಜನರು ಈ ಭೂಕಂಪನದಲ್ಲಿ ಸಾವನ್ನಪ್ಪಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಭೂಕಂಪನವು ಪ್ರಾಂತ್ಯದ ಮುಖರ್ ಜಿಲ್ಲೆಯ ನಿವಾಸಿಗಳಿಗೆ ಹಾನಿಯನ್ನುಂಟು ಮಾಡಿದೆ.  ದನ್ನೂ ಓದಿ: ರಜನಿಕಾಂತ್ ಪುತ್ರಿಗೆ ಡಿವೋರ್ಸ್ ನೀಡಿದ ಧನುಷ್

    ಬಾದ್ಘಿಸ್‍ನ ಪಶ್ಚಿಮ ಪ್ರಾಂತ್ಯದ ಖಾದಿಸ್ ಜಿಲ್ಲೆಯಲ್ಲಿ ಭೂಮಿ ಕಂಪಿಸಿದಾಗ ಮನೆಗಳ ಮೇಲ್ಛಾವಣಿ ಕುಸಿದು ಜನರು ಸಾವನ್ನಪ್ಪಿದ್ದಾರೆ ಎಂದು ಪ್ರಾಂತ್ಯದ ವಕ್ತಾರ ಬಾಜ್ ಮೊಹಮ್ಮದ್ ಸರ್ವಾರಿ ಎಎಫ್‍ಪಿಗೆ ತಿಳಿಸಿದ್ದಾರೆ. ಯುಎಸ್ ಜಿಯೋಲಾಜಿಕಲ್ ಸರ್ವೇ ರಿಕ್ಟರ್‌ ಮಾಪಕದಲ್ಲಿ  5.3 ತೀವ್ರತೆಯನ್ನು ಹೊಂದಿದೆ ಎಂದು ತಿಳಿಸಿದೆ.  ದನ್ನೂ ಓದಿ: ಸಲಿಂಗ ಸಂಗಾತಿ ಜೊತೆಗೆ ವಧು ಎಸ್ಕೇಪ್

    ಕಳೆದ 20 ವರ್ಷಗಳಲ್ಲಿ ಅಂತರಾಷ್ಟ್ರೀಯ ನೆರವಿನಿಂದ ಕಡಿಮೆ ಲಾಭವನ್ನು ಪಡೆದಿರುವ, ವಿನಾಶಕಾರಿ ಬರಗಾಲದಿಂದ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಖಾದಿಸ್ ಸಹ ಒಂದಾಗಿದೆ. ಅಫ್ಘಾನಿಸ್ತಾನ  ಆಗಾಗ ಭೂಕಂಪನಗಳಿಗೆ ಸಾಕ್ಷಿಯಾಗುತ್ತಿದೆ. ವಿಶೇಷವಾಗಿ ಹಿಂದೂ ಕುಶ್ ಪರ್ವತ ಶ್ರೇಣಿಯಲ್ಲಿ ಹೆಚ್ಚಾಗಿ ಭೂಮಿ ಕಂಪಿಸುತ್ತದೆ. ಇದು ಯುರೇಷಿಯನ್ ಮತ್ತು ಭಾರತೀಯ ಟೆಕ್ಟೋನಿಕ್ ಪ್ಲೇಟ್‍ಗಳ ಜಂಕ್ಷನ್‍ನ ಸಮೀಪದಲ್ಲಿದೆ. ದನ್ನೂ ಓದಿ: ಕೆಟ್ಟದಾಗಿ ಮುಟ್ಟಿದ್ದಕ್ಕಾಗಿ ಛೀಮಾರಿ ಹಾಕಿದ ಮಹಿಳೆಯನ್ನೇ ಕೊಲ್ಲಲು ಮುಂದಾದ ವ್ಯಕ್ತಿ ಅರೆಸ್ಟ್

  • ಅಫ್ಘಾನಿಸ್ತಾನದಲ್ಲಿ ಮಾರ್ಚ್‍ನಿಂದ ಶಾಲೆ, ವಿಶ್ವವಿದ್ಯಾಲಯ ಪುನಾರಂಭ

    ಅಫ್ಘಾನಿಸ್ತಾನದಲ್ಲಿ ಮಾರ್ಚ್‍ನಿಂದ ಶಾಲೆ, ವಿಶ್ವವಿದ್ಯಾಲಯ ಪುನಾರಂಭ

    ಕಾಬೂಲ್: ಬಾಲಕಿಯರು ಮತ್ತು ಬಾಲಕರಿಗೆ ಶಾಲೆಗಳು ಹಾಗೂ ವಿಶ್ವವಿದ್ಯಾಲಯಗಳನ್ನು 2022ರ ಮಾರ್ಚ್‍ನಿಂದ ಮತ್ತೆ ತೆರೆಯಲಾಗುತ್ತದೆ ಎಂದು ತಾಲಿಬಾನ್ ತಿಳಿಸಿದೆ.

    ಮಾಹಿತಿ ಮತ್ತು ಸಂಸ್ಕೃತಿಯ ಉಪಮಂತ್ರಿ ಮತ್ತು ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್‍ನ ವಕ್ತಾರ ಜಬೀವುಲ್ಲಾ ಮುಜಾಹಿದ್ ಈ ಕುರಿತಂತೆ ಮಾತನಾಡಿ, ತಾಲಿಬಾನ್ ಶಿಕ್ಷಣದ ವಿರುದ್ಧವಲ್ಲ. ಆದರೆ ಹುಡುಗರು ಮತ್ತು ಹುಡುಗಿಯರಿಗೆ ಶಾಲೆಗಳಲ್ಲಿ ಪ್ರತ್ಯೇಕವಾಗಿ ತರಗತಿ ನಡೆಸಬೇಕು ಎಂದಿದ್ದಾರೆ. ಇದನ್ನೂ ಓದಿ: ಸಿಗರೇಟ್‌ನಿಂದ ಸುಟ್ಟು ಸಾಮೂಹಿಕ ಅತ್ಯಾಚಾರ- ಪತಿ, ಆತನ ಸ್ನೇಹಿತರು ಅರೆಸ್ಟ್‌

    ಎರಡು ತಿಂಗಳಲ್ಲಿ ಉನ್ನತ ಶಾಲೆಗಳು ಮತ್ತು ಸಾರ್ವಜನಿಕ ವಿಶ್ವವಿದ್ಯಾಲಯಗಳನ್ನು ಪುನಃ ತೆರೆಯಲು ಶಿಕ್ಷಣ ಸಚಿವಾಲಯ ಮತ್ತು ಉನ್ನತ ಶಿಕ್ಷಣ ಸಚಿವಾಲಯವು ಶ್ರಮಿಸುತ್ತಿದೆ. ಅನೇಕ ಪ್ರದೇಶಗಳಲ್ಲಿ ಪ್ರೌಢ ಶಾಲೆಗಳನ್ನು ಪುನಃ ತೆರೆಯಲಾಗಿದೆ ಮತ್ತು ಕೆಲವು ಭಾಗಗಳಲ್ಲಿ ಆರ್ಥಿಕ ಸಮಸ್ಯೆಗಳಿಂದ ಇನ್ನೂ ಶಾಲೆಯನ್ನು ಮುಚ್ಚಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶಲ್ಯ ಮುಖಕ್ಕೆ ಕಟ್‌ಕೊಂಡಿನ್ರೀ ಮತ್ ಮಾಸ್ಕ್ ಯಾಕ್ ಹಾಕಬೇಕು: ವ್ಯಕ್ತಿಯ ಕಿರಿಕ್

    ಹುಡುಗರು ಮತ್ತು ಹುಡುಗಿಯರಿಗೆ ಪ್ರತ್ಯೇಕವಾಗಿ ತರಗತಿಗಳನ್ನು ನಡೆಸಲಾಗುತ್ತದೆ ಮತ್ತು ಅಫ್ಘಾನಿಸ್ತಾನದ ಸುತ್ತಲೂ ಹೆಣ್ಣುಮಕ್ಕಳಿಗೆ ಹೆಚ್ಚಿನ ಹಾಸ್ಟೆಲ್‍ಗಳನ್ನು ನಿರ್ಮಿಸುವ ಕೆಲಸಗಳು ನಡೆಯುತ್ತಿದೆ. ಅಫ್ಘಾನಿಸ್ತಾನದಾದ್ಯಂತ 150 ವಿಶ್ವವಿದ್ಯಾಲಯಗಳನ್ನು ಮುಚ್ಚಲಾಗಿದ್ದು, 40 ಖಾಸಗಿ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಸಾರ್ವಜನಿಕ ಶಾಲೆಗಳಲ್ಲಿ ಹುಡುಗಿಯರಿಗೆ ಆರನೇ ತರಗತಿಯವರೆಗೂ ತರಗತಿಗೆ ಹಾಜರಾಗಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದಿದ್ದಾರೆ.

    ಕಳೆದ ವರ್ಷ ಆಗಸ್ಟ್‌ನಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಅಫ್ಘಾನಿಸ್ತಾನದ ಹಲವೆಡೆ ಹೆಣ್ಣು ಮಕ್ಕಳಿಗೆ 7ನೇ ತರಗತಿಯ ನಂತರ ಶಾಲೆಗೆ ಹೋಗಲು ಅನುಮತಿ ನೀಡಲಾಗಿಲ್ಲ. ಅಲ್ಲದೇ ದೇಶದಲ್ಲಿ ಬಾಲಕಿಯರ ಶಾಲೆಗಳನ್ನು ಮುಚ್ಚುತ್ತಿರುವುದಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

  • ಆಫ್ಘಾನ್ ಸಂಗೀತಗಾರನ ಮುಂದೆಯೇ ವಾದ್ಯ ಸುಟ್ಟ ತಾಲಿಬಾನಿಗಳು

    ಆಫ್ಘಾನ್ ಸಂಗೀತಗಾರನ ಮುಂದೆಯೇ ವಾದ್ಯ ಸುಟ್ಟ ತಾಲಿಬಾನಿಗಳು

    ಕಾಬೂಲ್: ಆಫ್ಘಾನ್ ಸಂಗೀತಗಾರನ ಮುಂದೆಯೇ ತಾಲಿಬಾನ್ ಸಿಬ್ಬಂದಿ ಆತನ ವಾದ್ಯವನ್ನು ಸುಟ್ಟುಹಾಕಿದ್ದಾನೆ.

    ಅಫ್ಘಾನಿಸ್ತಾನದಲ್ಲಿ ಸಂಗೀತಗಾರನ ಮುಂದೆಯೇ ತಾಲಿಬಾನ್ ಸಂಗೀತ ವಾದ್ಯವನ್ನು ಸುಟ್ಟು ಹಾಕಿರುವುದರ ಕುರಿತ ವೀಡಿಯೋವನ್ನು ಅಲ್ಲಿನ ವರದಿಗಾರ ಟ್ವಟ್ಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ. ಸಂಗೀತ ವಾದ್ಯ ಬೆಂಕಿಯಲ್ಲಿ ಸುಟ್ಟು ಬೂದಿಯಾಗಿದೆ. ಇದನ್ನು ನೋಡಿ ಸಂಗೀತಗಾರ ಅಳುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ.

    ಅಫ್ಘಾನಿಸ್ತಾನದ ಹಿರಿಯ ವರದಿಗಾರ ಅಬ್ದುಲ್ಹಕ್ ಒಮೆರಿ ಟ್ವಿಟ್ಟರ್ ನಲ್ಲಿ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಂದೂಕು ಹಿಡಿದ ಸಿಬ್ಬಂದಿ, ಅಳುತ್ತಿದ್ದ ಸಂಗೀತಗಾರನನ್ನು ನೋಡಿ ನಗುತ್ತಿರುವ ದೃಶ್ಯ ಸಹ ಸೆರೆಯಾಗಿದೆ. ಇದನ್ನು ನೋಡಿದ ನೆಟ್ಟಿಗರು ತಾಲಿಬಾನ್ ಕ್ರೂರತೆ ಎಷ್ಟರ ಮಟ್ಟಿಗೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ವಾರಪೂರ್ತಿ ಜನಜಾತ್ರೆ, ವಾರಾಂತ್ಯದಲ್ಲಿ ಕರ್ಫ್ಯೂ – ಆತಂಕದಲ್ಲಿ ಕಾಫಿನಾಡು ಜನತೆ

    ಸಂಗೀತಗಾರ ಎಷ್ಟೇ ಕೇಳಿಕೊಂಡರೂ, ಅತ್ತರೂ ಆತನ ಕಡೆ ಗಮನಕೊಡದೆ ಸಿಬ್ಬಂದಿ ಸಂಗೀತಗಾರನ ಸಂಗೀತ ವಾದ್ಯವನ್ನು ಸುಟ್ಟುಹಾಕಿದರು. ಇದನ್ನು ನೋಡಿದ ಸಂಗೀತಗಾರನ ಅಳು ಮುಗಿಲು ಮುಟ್ಟಿತ್ತು. ಈ ಘಟನೆಯು ಅಫ್ಘಾನಿಸ್ತಾನದ ಝಜೈಅರುಬ್ ಜಿಲ್ಲೆಯಲ್ಲಿ ನಡೆದಿದೆ ಎಂದು ಒಮೆರಿ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

    ಈ ಹಿಂದೆ ತಾಲಿಬಾನಿಗಳು ವಾಹನಗಳಲ್ಲಿ ಸಂಗೀತ ಪ್ರದರ್ಶನ ಹಾಗೂ ಮದುವೆಗಳಲ್ಲಿ ಲೈವ್ ಸಂಗೀತವನ್ನು ನಿಷೇಧಿಸಿದೆ.

    ಇದರ ಜೊತೆಗೆ ತಾಲಿಬಾನಿಗಳು ಷರಿಯಾ ಕಾನೂನನ್ನು ಸಹ ಜಾರಿಗೆ ತಂದಿದ್ದು, ಅಫ್ಘಾನಿಸ್ತಾನದ ಹೆರಾತ್ ಪ್ರಾಂತ್ಯದ ಬಟ್ಟೆ ಅಂಗಡಿಗಳಲ್ಲಿ ಇದ್ದ ಹೆಣ್ಣು ಗೊಂಬೆಗಳ ಶಿರಚ್ಛೇದ ಮಾಡಲಾಗುತ್ತಿದೆ. ಇದನ್ನೂ ಓದಿ: ಗಾಳಿಪಟ ಹಾರಿಸುವಾಗ ಬಿದ್ದು ಒಂದೇ ದಿನ 63ಕ್ಕೂ ಹೆಚ್ಚು ಮಂದಿಗೆ ಗಾಯ

    ಬಟ್ಟೆ ಅಂಗಡಿಯಲ್ಲಿ ಹೆಣ್ಣು ಗೊಂಬೆಗಳನ್ನು ಬಳಸುವುದು ಷರಿಯಾ ಕಾನೂನಿನ ಉಲ್ಲಂಘನೆ ಎಂದು ತಾಲಿಬಾನ್ ತಿಳಿಸಿದೆ. ಈ ಹೊಸ ಮಾರ್ಗಸೂಚಿಗಳನ್ನು ನಾವು ಅನುಸರಿಸುವುದಿಲ್ಲ ಎಂದು ಕೆಲವು ಗುಂಪುಗಳು ವಿರೋಧವನ್ನು ವ್ಯಕ್ತಪಡಿಸಿವೆ.

  • ಮನುಷ್ಯಾಕೃತಿ ಬೊಂಬೆಗಳ ತಲೆಯನ್ನು ಕತ್ತರಿಸಿ – ತಾಲಿಬಾನ್ ಆದೇಶ

    ಮನುಷ್ಯಾಕೃತಿ ಬೊಂಬೆಗಳ ತಲೆಯನ್ನು ಕತ್ತರಿಸಿ – ತಾಲಿಬಾನ್ ಆದೇಶ

    ಕಾಬುಲ್: ಅಫ್ಘಾನಿಸ್ತಾನದ ಅಂಗಡಿ ಮಾಲೀಕರಿಗೆ ತಾಲಿಬಾನ್ ಮನುಷ್ಯಾಕೃತಿಯ ಬೊಂಬೆ ತಲೆಗಳನ್ನು ತೆಗೆದು ಹಾಕುವಂತೆ ಸೂಚಿಸಿದೆ. ಮನುಷ್ಯಾಕೃತಿಯ ಬೊಂಬೆಗಳು ಇಸ್ಲಾಮಿಕ್ ಧರ್ಮಕ್ಕೆ ವಿರೋಧವಾದುದು ಎಂಬ ಕಾರಣಕ್ಕೆ ಈ ಹೊಸ ವಿಲಕ್ಷಣ ಆದೇಶವನ್ನು ಜಾರಿಗೊಳಿಸಿದೆ.

    ಕಳೆದ ವರ್ಷ ಆಗಸ್ಟ್‌ನಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಮಹಿಳೆಯರ ಸ್ವಾತಂತ್ರವನ್ನು ಮೊಟಕುಗೊಳಿಸುತ್ತಿದೆ. ಮಹಿಳೆಯರಿಗೆ ಹಿಜಾಬ್ ಕಡ್ಡಾಯಗೊಳಿಸಿರುವುದರಿಂದ ಹಿಡಿದು ಹದಿಹರೆಯದ ಹೆಣ್ಣು ಮಕ್ಕಳು ಶಾಲೆಗೆ ಹೋಗುವುದನ್ನು ತಡೆಯುವವರೆಗೆ ತಾಲಿಬಾನ್ ಅಮಾನವೀಯ ನೀತಿಗಳನ್ನು ಜಾರಿಗೊಳಿಸಿದೆ. ಇದನ್ನೂ ಓದಿ: ಅಫ್ಘಾನಿಸ್ತಾನಕ್ಕೆ ಭಾರತದ ನೆರವು – ಇರಾನ್ ಸಹಾಯ

    ಇದೀಗ ತಾಲಿಬಾನ್ ಸರ್ಕಾರ ಅಂಗಡಿಗಳಲ್ಲಿ ಬಳಕೆಯಾಗುವ ಮನುಷ್ಯಾಕೃತಿಗಳ ಬೊಂಬೆಗಳ ತಲೆಗಳನ್ನು ತೆಗೆದುಹಾಕುವಂತೆ ಅಫ್ಘಾನಿಸ್ತಾನದ ಜನರಿಗೆ ಸೂಚಿಸಿದೆ. ಮನುಷ್ಯಾಕೃತಿ ಅಥವಾ ಪ್ರತಿಮೆಗಳು ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿವೆ. ಇವುಗಳನ್ನು ವಿರೂಪಗೊಳಿಸಬೇಕು ಎಂದು ಹೆರಾತ್ ಪ್ರಾಂತ್ಯ ಸಚಿವಾಲಯ ಮುಖ್ಯಸ್ಥರಾದ ಅಜೀಜ್ ರಹಮಾನ್ ಹೇಳಿದ್ದಾರೆ. ಇದನ್ನೂ ಓದಿ: ಯಾವುದೇ ಆರೋಪವಿಲ್ಲದಿದ್ರೂ 3 ವರ್ಷ ಜೈಲುವಾಸ ಅನುಭವಿಸಿದ ಸೌದಿ ರಾಜಕುಮಾರಿ!

    ಮೂಲಗಳ ಪ್ರಕಾರ ಕೆಲವು ಅಂಗಡಿ ಮಾಲೀಕರು ಬೊಂಬೆಗಳ ತಲೆಯನ್ನು ಬಟ್ಟೆಗಳಿಂದ ಮುಚ್ಚಿ ಕಾನೂನಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಇದನ್ನು ಬಯಲು ಮಾಡುತ್ತಲೇ ದೊಡ್ಡ ಮೊತ್ತದ ದಂಡವನ್ನು ಹಲವು ಅಂಗಡಿ ಮಾಲೀಕರಿಗೆ ವಿಧಿಸಿದೆ.

  • ಅಫ್ಘಾನಿಸ್ತಾನಕ್ಕೆ ಭಾರತದ ನೆರವು – ಇರಾನ್ ಸಹಾಯ

    ನವದೆಹಲಿ: ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಗಂಭೀರ ಮಾನವೀಯ ಬಿಕ್ಕಟ್ಟಿಗೆ ಸಿಲುಕಿದೆ. ಭಾರತ ಅಫ್ಘಾನಿಸ್ತಾನಕ್ಕೆ ನೆರವು ನೀಡುತ್ತಿದ್ದು, ಇದೀಗ ಭಾರತದೊಂದಿಗೆ ಇರಾನ್ ಕೈ ಜೋಡಿಸಲು ಮುಂದಾಗಿದೆ.

    ಭಾರತ ಅಫ್ಘಾನಿಸ್ತಾನಕ್ಕೆ ಕೋವಿಡ್-19 ಲಸಿಕೆಗಳು, ಗೋಧಿ ಹಾಗೂ ಔಷಧೀಯ ವಸ್ತುಗಳನ್ನು ರವಾನಿಸಲು ಮುಂದಾಗುತ್ತಿದೆ. ಈಗಾಗಲೇ ದೇಶ 2 ಬಾರಿ ವಿಮಾನದ ಮೂಲಕ ಕೋವಿಡ್ ಲಸಿಕೆಗಳನ್ನು ರವಾನಿಸಿದೆ. ಪಾಕಿಸ್ತಾನದ ಮಾರ್ಗದ ಮೂಲಕ ಅಫ್ಘಾನಿಸ್ತಾನಕ್ಕೆ ಆಹಾರ ಪದಾರ್ಥಗಳನ್ನೂ ವಿತರಿಸುವ ಯೋಜನೆ ನಡೆಸಿದೆ.

    ಭಾರತದ ಈ ಮಾನವೀಯ ನೆರವಿಗೆ ಇದೀಗ ಇರಾನ್ ಸಹಾಯ ಮಾಡಲು ಮುಂದಾಗಿದೆ. ಇರಾನ್ ವಿದೇಶಾಂಗ ಸಚಿವ ಹುಸೇನ್ ಅಮೀರ್-ಅಬ್ದುಲ್ಲಾಹಿಯಾನ್ ಅವರು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಶನಿವಾರ ದೂರವಾಣಿ ಕರೆಯಲ್ಲಿ ಇದರ ಬಗ್ಗೆ ಪ್ರಸ್ತಾಪ ಮಾಡಿರುವುದಾಗಿ ಇರಾನ್ ಅಂತರಾಷ್ಟ್ರೀಯ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಯಾವುದೇ ಆರೋಪವಿಲ್ಲದಿದ್ರೂ 3 ವರ್ಷ ಜೈಲುವಾಸ ಅನುಭವಿಸಿದ ಸೌದಿ ರಾಜಕುಮಾರಿ!

    ಇರಾನ್ – ಅಫ್ಘಾನಿಸ್ತಾನದಲ್ಲಿ 920 ಕಿ.ಮೀ.ನ ಗಡಿ ಹೊಂದಿದೆ. ಭಾರತ ಅಫ್ಘಾನಿಸ್ತಾನಕ್ಕೆ ಸರಕುಗಳನ್ನು ಸಾಗಿಸಲು ಪಾಕಿಸ್ತಾನದ ಮಾರ್ಗವಾಗಿ ಹೋಗಬೇಕಾಗುತ್ತದೆ. ಆದರೆ ಭಾರತ ಪಾಕಿಸ್ತಾನದ ವೈರತ್ವ ಇದಕ್ಕೆ ಅಡ್ಡಿಪಡಿಸುತ್ತಿದೆ.

    ಇದೀಗ ಭಾರತ ಅಫ್ಘಾನಿಸ್ತಾನಕ್ಕೆ ನೀಡುತ್ತಿರುವ ನೆರವಿಗೆ ಇರಾನ್ ಕೈ ಜೋಡಿಸುವುದಾಗಿ ಹೇಳಿದೆ. ಭಾರತ ಸರಕುಗಳನ್ನು ಸಮುದ್ರಮಾರ್ಗವಾಗಿ ಇರಾನ್ ತಲುಪಿಸಿದರೆ ಸುಲಭವಾಗಿ ಅಫ್ಘಾನಿಸ್ತಾನಕ್ಕೆ ಕಳುಹಿಸಲು ಸಾಧ್ಯವಾಗಲಿದೆ. ಇದನ್ನೂ ಓದಿ: ಪಾಕಿಸ್ತಾನದ ಮರ‍್ರೆಯಲ್ಲಿ ಭಾರೀ ಹಿಮಪಾತ – 10 ಮಕ್ಕಳು ಸೇರಿ 22 ಮಂದಿ ಬಲಿ

    ಭಾರತ 2022ರ ಹೊಸ ವರ್ಷದ ದಿನದಂದೇ 5 ಲಕ್ಷ ಕೋವಿಡ್-19 ಲಸಿಕೆಗಳನ್ನು ವಿಮಾನದ ಮೂಲಕ ಕಾಬುಲ್‌ಗೆ ಕಳುಹಿಸಿತ್ತು. ಇದು ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಭಾರತ ಕಳುಹಿಸಿದ ಎರಡನೇ ಸಹಾಯವಾಗಿದೆ.