ರೋಮ್: ಇಲ್ಲಿನ ಕರಾವಳಿ ಪ್ರದೇಶದ ನಗರ ಕ್ರೋಟೋನ್‌ನಲ್ಲಿ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ದುರಂತಕ್ಕೀಡಾಗಿದ್ದು (Italy Boat Wreck), ಭಾರತ (India), ಪಾಕಿಸ್ತಾನ (Pakistan) ಹಾಗೂ ಅಫ್ಘಾನಿಸ್ತಾನದ 40ಕ್ಕೂ ಹೆಚ್ಚು ವಲಸಿಗರು (Migrants) ಸಾವನ್ನಪ್ಪಿರುವ ಘಟನೆ ನಡೆದಿದೆ.
120 ಮಂದಿಯನ್ನು ಹೊತ್ತ ದೋಣಿಯು ಭೀಕರ ಅಲೆಗಳ ಹೊಡೆತಕ್ಕೆ ಸಿಲುಕಿ, ತುಂಡು ತುಂಡಾಗಿದೆ. ದಡದಿಂದ ಕೆಲವು ಮೀಟರ್‌ಗಳ ಅಂತರದಲ್ಲೇ ಈ ಅವಘಡ ಸಂಭವಿಸಿದ್ದು, ಮಕ್ಕಳು ಸೇರಿದಂತೆ 40ಕ್ಕೂ ಹೆಚ್ಚು ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಈಗಾಗಲೇ 43 ಮಂದಿಯ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಸಾವಿರಾರು ಮೈಲಿ ದೂರವಿದ್ದರೂ ಸಿಗುತ್ತೆ ನೈಜ ಮುತ್ತಿನ ಗಮ್ಮತ್ತು – ಏನಿದು ಕಿಸ್ಸಿಂಗ್ ಡಿವೈಸ್ ಕರಾಮತ್ತು?
ಪಾಕಿಸ್ತಾನದ 24 ಮಂದಿ ಸಾವು: ದೋಣಿ ದುರಂತದಲ್ಲಿ ಪಾಕಿಸ್ತಾನದ 24ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಕಂಬನಿ ಮಿಡಿದಿದ್ದಾರೆ. ಅಲ್ಲದೇ ಇಟಲಿಯ ದೋಣಿ ದುರಂತದಲ್ಲಿ 24ಕ್ಕೂ ಹೆಚ್ಚು ಪಾಕಿಸ್ತಾನಿಯರು ಮುಳುಗಿ ಸಾವನ್ನಪ್ಪಿರುವುದು ಆತಂಕಕಾರಿ ಸಂಗತಿಯಾಗಿದೆ. ಆದಷ್ಟು ಬೇಗನೆ ಇರದ ಸತ್ಯಾಸತ್ಯತೆಗಳನ್ನು ಪತ್ತೆಹಚ್ಚುವಂತೆ ವಿದೇಶಾಂಗ ಕಚೇರಿಗೆ ನಿರ್ದೇಶನ ನೀಡುತ್ತೇನೆ ಎಂದು ಹೇಳಿದ್ದಾರೆ.
ಗ್ಯಾಂಗ್ಟಾಕ್: ಟರ್ಕಿ, ಸಿರಿಯಾ (Turkey Syria Earthquake) ದೇಶಗಳಲ್ಲಿ ಭೂಕಂಪನ ಸಂಭವಿಸಿದ್ದು ಸಾವಿರಾರು ಜನರನ್ನ ಬಲಿ ಪಡೆದಿದೆ. ಈಗಾಗಲೇ 33 ಸಾವಿರ ಮಂದಿ ಮೃತಪಟ್ಟಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಅಲ್ಲದೇ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
— National Center for Seismology (@NCS_Earthquake) February 13, 2023
ಈ ಬೆನ್ನಲ್ಲೇ ಸೋಮವಾರ (ಫೆ.13) ಬೆಳ್ಳಂಬೆಳಗ್ಗೆ ಸಿಕ್ಕಿಂನಲ್ಲಿ (Sikkim) 4.3 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದೆ. ಭೂಕಂಪನವು ಸಿಕ್ಕಿಂನ ಯುಕ್ಸೋಮ್‌ನ ವಾಯುವ್ಯ ಭಾಗದಲ್ಲಿ ಮುಂಜಾನೆ 4.15ರ ಸುಮಾರಿಗೆ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ ಗುರುತಿಸಲಾಗಿದೆ. ಇದನ್ನೂ ಓದಿ: ವಾರದಲ್ಲಿ 4ನೇ ಕಾರ್ಯಾಚರಣೆ – ಮತ್ತೊಂದು ಹಾರುವ ವಸ್ತುವನ್ನು ಹೊಡೆದುರುಳಿಸಿದ ಅಮೆರಿಕ
— National Center for Seismology (@NCS_Earthquake) February 13, 2023
ಭಾನುವಾರ ಮಧ್ಯಾಹ್ನ ಅಸ್ಸಾಂನ (Assam) ನಾಗಾನ್‌ನಲ್ಲಿ 4.0 ತೀವ್ರತೆಯ ಭೂಕಂಪನ ಸಂಭವಿಸಿದ ಒಂದು ದಿನದ ನಂತರ ಕಂಪನ ಸಂಭವಿಸಿದೆ. ಎರಡು ದಿನಗಳ ಹಿಂದೆಯಷ್ಟೇ ಗುಜರಾತ್‌ನ (Gujarat) ಸೂರತ್ ಜಿಲ್ಲೆಯಲ್ಲೂ 3.8 ತೀವ್ರತೆಯ ಭೂಕಂಪನ ದಾಖಲಾಗಿತ್ತು.
ಅಫ್ಘಾನ್‌ನಲ್ಲೂ ಭೂಕಂಪನ: ಇಂದು (ಫೆ.13) ಬೆಳಗ್ಗೆ ಅಫ್ಘಾನಿಸ್ತಾನದ (Afghanistan) ಫೈಜಾಬಾದ್‌ನಲ್ಲಿಯೂ 4.3 ತೀವ್ರತೆಯ ಭೂಕಂಪ ಸಂಭವಿಸಿದೆ. ಇಲ್ಲಿನ ಈಶಾನ್ಯ ನಗರವಾದ ಫೈಜಾಬಾದ್‌ನ ಆಗ್ನೇಯಕ್ಕೆ 100 ಕಿಮೀ ದೂರದಲ್ಲಿ ಭೂಕಂಪನ ಉಂಟಾಗಿದೆ. ಬೆಳಗ್ಗೆ 6:47ರ ಸುಮಾರಿಗೆ 135 ಕಿಮೀ ಆಳದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಭೂಕಂಪನ ರಾಷ್ಟ್ರೀಯ ಕೇಂದ್ರ ತಿಳಿಸಿದೆ.
ಮಾಸ್ಕೋ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (NSA Ajit Doval) ಮತ್ತು ರಷ್ಯಾ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಗುರುವಾರ ಮಾಸ್ಕೋದಲ್ಲಿ (Moscow) ಭೇಟಿಯಾಗಿ ದ್ವಿಪಕ್ಷೀಯ ಚರ್ಚೆ ನಡೆಸಿದರು.
ಅಜಿತ್ ದೋವಲ್ ಅವರು ಅಧ್ಯಕ್ಷ ಪುಟಿನ್ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು ಎಂದು ರಾಯಭಾರ ಕಚೇರಿ ಟ್ವೀಟ್ ಮಾಡಿದೆ.
ಬುಧವಾರ ದೋವಲ್ ಅವರು ರಷ್ಯಾ ಆಯೋಜಿಸಿದ್ದ ಅಫ್ಘಾನಿಸ್ತಾನದ (Afghanistan) ಭದ್ರತಾ ಮಂಡಳಿಗಳು/ಎನ್‌ಎಸ್‌ಎಗಳ ಕಾರ್ಯದರ್ಶಿಗಳ ಐದನೇ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ದೋವಲ್ ಅವರು ಭಯೋತ್ಪಾದನೆಯನ್ನು ರಫ್ತು ಮಾಡಲು ಅಫ್ಘಾನ್ ಪ್ರದೇಶವನ್ನು ಬಳಸಲು ಯಾವುದೇ ದೇಶವನ್ನು ಅನುಮತಿಸಬಾರದು. ಅಗತ್ಯವಿರುವ ಸಮಯದಲ್ಲಿ ಭಾರತದ ಎಂದಿಗೂ ಅಫ್ಘಾನ್ ಜನರನ್ನು ಕೈಬಿಡುವುದಿಲ್ಲ ಎಂದು ಪ್ರತಿಪಾದಿಸಿದರು. ಇದನ್ನೂ ಓದಿ: 7 ಸಾವಿರ ಉದ್ಯೋಗಿಗಳನ್ನ ಕೆಲಸದಿಂದ ತೆಗೆಯಲು ಮುಂದಾದ The Walt Disney
ರಷ್ಯಾ ಮತ್ತು ಭಾರತವಲ್ಲದೆ, ಇರಾನ್, ಕಜಕಿಸ್ತಾನ್, ಕಿರ್ಗಿಸ್ತಾನ್, ಚೀನಾ, ತಜಿಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ನವದೆಹಲಿಯಲ್ಲಿ ನಡೆಯಲಿರುವ ಜಿ-20 ವಿದೇಶಾಂಗ ಸಚಿವರ ಸಭೆಗೆ ವಾರಗಳ ಮುಂಚೆಯೇ ದೋವಲ್ ಮಾಸ್ಕೋಗೆ ಭೇಟಿ ನೀಡಿದ್ದಾರೆ. ಮಾರ್ಚ್ 1 ಮತ್ತು 2 ರಂದು ನಡೆಯಲಿರುವ ಸಭೆಯಲ್ಲಿ ಭಾಗವಹಿಸಲು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.
🇮🇳 NSA Ajit Doval called on HE President Putin. Wide-ranging discussion on bilateral and regional issues. Agreed to continue work towards implementing the India-Russia strategic partnership. pic.twitter.com/SMHe6VI9ve
ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ರಷ್ಯಾಕ್ಕೆ ಭೇಟಿ ನೀಡಿದ ಮೂರು ತಿಂಗಳ ನಂತರ ದೋವಲ್ ಭೇಟಿ ನೀಡಿದ್ದಾರೆ.
ಉಕ್ರೇನ್ ಮೇಲೆ ಯುದ್ಧ ಸಾರಿದ ಹೊರತಾಗಿಯೂ ಭಾರತ ಮತ್ತು ರಷ್ಯಾ ನಡುವಿನ ಸಂಬಂಧಗಳು ಗಟ್ಟಿಯಾಗಿ ಉಳಿದಿವೆ. ಪಾಶ್ಚಿಮಾತ್ಯ ದೇಶಗಳ ವಿರೋಧದ ನಡುವೆಯೂ ರಷ್ಯಾದ ಕಚ್ಚಾ ತೈಲದ ಆಮದು ಗಣನೀಯವಾಗಿ ಹೆಚ್ಚಾಗುತ್ತಿದೆ.
ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣವನ್ನು ಭಾರತ ಇನ್ನೂ ಖಂಡಿಸಿಲ್ಲ. ರಾಜತಾಂತ್ರಿಕತೆ ಮತ್ತು ಮಾತುಕತೆಯ ಮೂಲಕ ಬಿಕ್ಕಟ್ಟನ್ನು ಪರಿಹರಿಸಬೇಕು ಎಂದು ಭಾರತ ಆಗ್ರಹಿಸಿದೆ.
Live Tv
[brid partner=56869869 player=32851 video=960834 autoplay=true]
ಕಾಬೂಲ್: ಆರ್ಥಿಕ ಸಂಬಂಧ ಬೆಳೆಸುವ ಹೆಸರಿನಲ್ಲಿ ಆ ದೇಶವನ್ನೇ ಲೂಟಿ ಮಾಡುವ ಚಾಳಿ ಬೆಳೆಸಿಕೊಂಡಿರುವ ಚೀನಾಗೆ (China) ಈಗ ಅಫ್ಘಾನಿಸ್ತಾನ (Afghanistan) ಬಿಸಿ ಮುಟ್ಟಿಸಿದೆ.
ಕಳ್ಳಸಾಗಣೆಯಲ್ಲಿ (Smuggling Precious Stones) ತೊಡಗಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ತಾಲಿಬಾನ್ ಆಡಳಿತ ಇಬ್ಬರು ಚೀನಿ ಪ್ರಜೆಗಳನ್ನು ಬಂಧಿಸಿದೆ. 1,000 ಮೆಟ್ರಿಕ್ ಟನ್ ಲಿಥಿಯಂ-ಒಳಗೊಂಡಿರುವ ಬಂಡೆಗಳನ್ನು ಕಳ್ಳ ಸಾಗಾಣೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಚೀನಿ ಪ್ರಜೆಗಳು ಸೇರಿದಂತೆ ಐವರನ್ನು ಪೂರ್ವ ಅಫ್ಘಾನಿಸ್ತಾನದ ಜಲಾಲಾಬಾದ್‌ನ ಪಟ್ಟಣದಲ್ಲಿ ಬಂಧಿಸಲಾಗಿದೆ.
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಮಧ್ಯೆ ಹೋಗಿರುವ ಡ್ಯುರಾಂಡ್ ಗಡಿ ರೇಖೆಯ ಉದ್ದಕ್ಕೂ ಇರುವ ಅಫ್ಘಾನ್ ಪ್ರಾಂತ್ಯಗಳಾದ ನುರಿಸ್ತಾನ್ ಮತ್ತು ಕುನಾರ್‌ನಿಂದ ಅಕ್ರಮವಾಗಿ ಈ ಬಡೆಯನ್ನು ಹೊರತೆಗೆಯಲಾಗಿದೆ. ವಶಪಡಿಸಿಕೊಳ್ಳಲಾದ ಬಂಡೆಗಳಲ್ಲಿ 30 ಪ್ರತಿಶತದಷ್ಟು ಲಿಥಿಯಯಂ ಇದೆ ತಾಲಿಬಾನ್ ಗುಪ್ತಚರ ಅಧಿಕಾರಿಗಳು ಅಫ್ಘಾನ್ ದೂರದರ್ಶನ ಚಾನೆಲ್‌ಗಳಿಗೆ ತಿಳಿಸಿದ್ದಾರೆ.
ಅಸ್ಥಿರತೆಯಿಂದಾಗಿ ಚೀನಾ ಅಫ್ಘಾನಿಸ್ತಾನದೊಂದಿಗೆ ಎಚ್ಚರಿಕೆಯಿಂದ ವ್ಯವಹಾರ ನಡೆಸುತ್ತಿದೆ. ಅಗ್ಗದ ಸರಕುಗಳ ಸೀಮಿತ ವ್ಯಾಪಾರವನ್ನು ಹೊರತುಪಡಿಸಿ ಚೀನಿಯರು ಅಫ್ಘಾನಿಸ್ತಾನದಲ್ಲಿ ಯಾವುದೇ ದೊಡ್ಡ ಹೂಡಿಕೆ ಮಾಡಿಲ್ಲ.
Live Tv
[brid partner=56869869 player=32851 video=960834 autoplay=true]
ಕಾಬೂಲ್: ಅಫ್ಘಾನಿಸ್ತಾನವನ್ನು (Afghanistan) ವಶಪಡಿಸಿಕೊಂಡ ನಂತರ ತಾಲಿಬಾನ್ (Taliban) ಸರ್ಕಾರ ಒಂದೆಲ್ಲಾ ಒಂದು ವಿಷಯಕ್ಕೆ ಚರ್ಚೆ ಆಗುತ್ತಿದೆ. ಇತ್ತೀಚೆಗಷ್ಟೇ ಮಹಿಳೆಯರ ಶಿಕ್ಷಣಕ್ಕೆ ನಿಷೇಧ ಹೇರಿ ಭಾರೀ ಟೀಕೆಗೆ ಒಳಗಾಗಿತ್ತು. ಇದೀಗ ಕಳ್ಳತನ ಆರೋಪದ ಮೇಲೆ ನಾಲ್ವರ ಕೈಗಳನ್ನು ಸಾರ್ವಜನಿಕವಾಗಿ ಕತ್ತರಿಸುವುದರ ಮೂಲಕ ಮತ್ತೇ ಚರ್ಚೆ ಗ್ರಾಸವಾಗಿದೆ.
ಕಂದಹರ್‌ನ ಅಹ್ಮದ್ ಶಾಹಿ ಸ್ಟೇಡಿಯಂನಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಗವರ್ನರ್ ಕಚೇರಿಯ ವಕ್ತಾರ ಹಾಜಿ ಝೈದ್ ಮಾಹಿತಿ ನೀಡಿದ್ದು, ವಿವಿಧ ಅಪರಾಧಗಳಿಗಾಗಿ ಫುಟ್ಬಾಲ್ ಕ್ರೀಡಾಂಗಣದಲ್ಲಿ ಕಳ್ಳತನದ (Theft) ಆರೋಪದ ಮೇರೆಗೆ 4 ಮಂದಿಗಳ ಕೈಯನ್ನು ಕತ್ತರಿಸಲಾಯಿತು. ಜೊತೆಗೆ 9 ಮಂದಿಯನ್ನು ಥಳಿಸಲಾಯಿತು. ಆ ಅಪರಾಧಿಗಳಿಗೆ 25-29 ಬಾರಿ ಹೊಡೆಯಲಾಗಿದೆ ಎಂದು ತಿಳಿಸಿದ್ದಾರೆ.
The Taliban have reportedly cut off the hands of 4 people in a football stadium in Kandahar today, accused of theft, in front of spectators.
People are being lashed, amputated & executed in Afghanistan, without fair trial and due process.
ಘಟನೆ ವೇಳೆ ತಾಲಿಬಾನ್ ಅಧಿಕಾರಿಗಳು, ಧಾರ್ಮಿಕ ಮೌಲ್ವಿಗಳು, ಹಿರಿಯರು ಮತ್ತು ಸ್ಥಳೀಯ ಜನರು ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದರು. ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಫೋಟೋದಲ್ಲಿ 9 ಮಂದಿ ಅಪರಾಧಿಗಳು ಹುಲ್ಲಿನ ಮೇಲೆ ಕುಳಿತಿರುವುದನ್ನು ಕಾಣಬಹುದು. ಇದನ್ನೂ ಓದಿ:ಆರತಿ ಕೊಲೆ ಕೇಸ್ – ಹತ್ಯೆಗೈದ ಆರೋಪಿಯ ಶವ ಕೆರೆಯಲ್ಲಿ ಪತ್ತೆ
ಕಾಬೂಲ್: ಅಫ್ಘಾನಿಸ್ತಾನವನ್ನು (Afghanistan) ತಾಲಿಬಾನ್ (Taliban) ವಶಪಡಿಸಿಕೊಳ್ಳುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದಿದ್ದ ಮಾಜಿ ಸಂಸದೆ (Former Lawmaker) ಗುಂಡಿಕ್ಕಿ ಕೊಂದಿರುವ ಘಟನೆ ಅಫ್ಘನ್ ರಾಜಧಾನಿ ಕಾಬೂಲ್‌ನಲ್ಲಿ (Kabul) ನಡೆದಿರುವುದಾಗಿ ಅಲ್ಲಿನ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಅಫ್ಘಾನಿಸ್ತಾನದ ಮಾಜಿ ಸಂಸದೆ ಮುರ್ಸಲ್ ನಬಿಜಾದಾ (Mursal Nabizada)(32) ಅವರ ಮನೆಗೆ ಶನಿವಾರ ರಾತ್ರಿ ವೇಳೆ ಬಂದೂಕುಧಾರಿಗಳು ನುಗ್ಗಿದ್ದು, ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಗುಂಡಿನ ದಾಳಿ ವೇಳೆ ನಬಿಜಾದಾ ಅವರ ಅಂಗರಕ್ಷಕರೊಬ್ಬರು ಕೂಡಾ ಸಾವನ್ನಪ್ಪಿದ್ದಾರೆ ಎಂದು ಕಾಬೂಲ್ ಪೊಲೀಸ್ ವಕ್ತಾರ ಖಾಲಿದ್ ಜದ್ರಾನ್ ಹೇಳಿದ್ದಾರೆ.
ಮುರ್ಸಲ್ ನಬಿಜಾದಾ ಅವರು ಈ ಹಿಂದಿನ ಅಮೆರಿಕ ಬೆಂಬಲಿತ ಸರ್ಕಾರದ ಸಂಸತ್ತಿನ ಸದಸ್ಯರಾಗಿದ್ದರು. ಅವರು ಅಫ್ಘಾನಿಸ್ತಾನದ ಒಬ್ಬ ನಿರ್ಭೀತ ನಾಯಕಿಯಾಗಿದ್ದರು ಎಂದು ಮಾಜಿ ಶಾಸಕ ಮರಿಯಮ್ ಸೊಲೈಮಂಖಿಲ್ ತಿಳಿಸಿದ್ದಾರೆ. ಆಗಸ್ಟ್ 2021 ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ವೇಳೆ ಅವರು ತಮ್ಮ ಅಧಿಕಾರದಿಂದ ಕೆಳಗಿಳಿಯಬೇಕಾಯಿತು.
ಶನಿವಾರ ರಾತ್ರಿ ನಡೆದಿರುವ ಗುಂಡಿನ ದಾಳಿಯಲ್ಲಿ ಮುರ್ಸಲ್ ನಬಿಜಾದಾ ಹಾಗೂ ಅವರ ಅಂಗರಕ್ಷಕ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ನಬಿಜಾದಾ ಅವರ ಸಹೋದರ ಕೂಡಾ ಗಾಯಗೊಂಡಿದ್ದಾರೆ. ಘಟನೆಯನ್ನು ಭದ್ರತಾ ಪಡೆಗಳು ಗಂಭೀರವಾಗಿ ತೆಗೆದುಕೊಂಡಿದ್ದು, ತನಿಖೆಯನ್ನು ಪ್ರಾರಂಭಿಸಿದೆ. ಇದನ್ನೂ ಓದಿ: ಹಾಕಿ ವಿಶ್ವಕಪ್ – ಭಾರತ, ಇಂಗ್ಲೆಂಡ್ ಪಂದ್ಯ ಡ್ರಾನಲ್ಲಿ ಅಂತ್ಯ
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ಬಳಿಕ ಉನ್ನತ ಸರ್ಕಾರಿ ಹುದ್ದೆಯಲ್ಲಿರುವವರಿಗೆ ದೇಶವನ್ನು ತೊರೆಯಲು ಅವಕಾಶ ನೀಡಲಾಗಿತ್ತು. ಅಂತಹ ಉನ್ನತ ಹುದ್ದೆಯಲ್ಲಿದ್ದ ಹಲವಾರು ಮಹಿಳೆಯರು ವಿದೇಶಕ್ಕೆ ತೆರಳಿದ್ದರು. ಆದರೆ ನಬಿಜಾದಾ ಮಾತ್ರ ತನ್ನ ಜನರಿಗಾಗಿ ಅಫ್ಘಾನಿಸ್ತಾನದಲ್ಲೇ ಉಳಿಯಲು ಹಾಗೂ ಹೋರಾಡಲು ನಿರ್ಧರಿಸಿದ್ದರು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಸೋಮವಾರ ಬೆಂಗಳೂರಿನಲ್ಲಿ ಪ್ರಿಯಾಂಕಾ ಅಬ್ಬರ- 1 ಲಕ್ಷ ಮಹಿಳಾ ಕಾರ್ಯಕರ್ತರು ಭಾಗಿ ಸಾಧ್ಯತೆ
Live Tv
[brid partner=56869869 player=32851 video=960834 autoplay=true]
ಸಿಡ್ನಿ: ಅಫ್ಘಾನಿಸ್ತಾನ (Afghanistan) ವಿರುದ್ಧ ಏಕದಿನ ಸರಣಿ (ODI) ಆಡಬೇಕಾಗಿದ್ದ ಆಸ್ಟ್ರೇಲಿಯಾ (Australia) ತಂಡ ಇದೀಗ ಈ ಸರಣಿಯಿಂದ ಹಿಂದೆ ಸರಿದಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ (Taliban) ಆಡಳಿತ ಕಂಡು ಮುನಿಸಿಕೊಂಡಿರುವ ಆಸ್ಟ್ರೇಲಿಯಾ ಈ ನಿರ್ಧಾರ ತೆಗೆದುಕೊಂಡಿದೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದಿಂದ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಬೇಸತ್ತು, ಈ ನಿರ್ಧಾರಕ್ಕೆ ಮುಂದಾಗಿದೆ. ತಾಲಿಬಾನ್ ಸರ್ಕಾರ ಅಲ್ಲಿನ ಮಹಿಳೆಯರ ಹಕ್ಕನ್ನು ಕಸಿದುಕೊಳ್ಳುತ್ತಿದ್ದು, ಮಹಿಳೆಯ ಶಿಕ್ಷಣ ಸೇರಿದಂತೆ ಉದ್ಯೋಗಗಳಿಗೆ ನಿಷೇಧ ಹೇರಿದ ಬೆನ್ನಲ್ಲೇ ಆಕ್ಷೇಪಗಳು ಕೇಳಿಬರುತ್ತಿದೆ. ಹಾಗಾಗಿ ಮಹಿಳೆಯ ಹಕ್ಕನ್ನು ಹತ್ತಿಕ್ಕುತ್ತಿರುವ ತಾಲಿಬಾನ್ ಕ್ರಮವನ್ನು ಖಂಡಿಸಿ ಈ ನಿರ್ಧಾರ ತೆಗದುಕೊಂಡಿದೆ. ಇದನ್ನೂ ಓದಿ: 6ನೇ ತರಗತಿಯೊಳಗಿನ ಹೆಣ್ಣು ಮಕ್ಕಳಿಗೆ ಮಾತ್ರ ಶಿಕ್ಷಣ – ಮಹಿಳಾ ಶಿಕ್ಷಣಕ್ಕೆ ತಾಲಿಬಾನ್ ಅಸ್ತು
ಆಸ್ಟ್ರೇಲಿಯಾ ಮಹಿಳೆಯರ ಹಕ್ಕು ಮತ್ತು ಮಹಿಳೆಯರು ಕೂಡ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ಸಂಪೂರ್ಣ ಬೆಂಬಲ ನೀಡುತ್ತದೆ. ಆದರೆ ತಾಲಿಬಾನ್ ಇತ್ತೀಚೆಗೆ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಶಿಕ್ಷಣ ಸಹಿತ ಉದ್ಯೋಗಕ್ಕೆ ನಿಷೇಧ ಹೇರಿತ್ತು. ಪಾರ್ಕ್ ಮತ್ತು ಜಿಮ್‍ಗೆ ತೆರಳಬಾರದೆಂದು ಸೂಚಿಸಿತ್ತು. ಇದನ್ನು ವಿರೋಧಿಸಿ ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದ್ದರು. ಈ ಬೆನ್ನಲ್ಲೇ ಕ್ರಿಕೆಟ್ ಆಸ್ಟ್ರೇಲಿಯಾ ಮಹಿಳೆಯರ ಪರ ಬೆಂಬಲ ವ್ಯಕ್ತಪಡಿಸಿ ಅಘ್ಫಾನಿಸ್ತಾನ ವಿರುದ್ಧ ಕ್ರಿಕೆಟ್ ಸರಣಿ ಆಡದಿರಲು ನಿರ್ಧರಿಸಿದೆ.
Cricket Australia is committed to supporting growing the game for women and men around the world, including in Afghanistan, and will continue to engage with the Afghanistan Cricket Board in anticipation of improved conditions for women and girls in the country. pic.twitter.com/cgQ2p21X2Q
ಇತ್ತ ತಾಲಿಬಾನ್ ನಡೆ ಕಂಡು ಅಲ್ಲಿನ ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದ್ದರು. ಈ ಬೆನ್ನಲ್ಲೇ ಪದವಿ ಕಾಲೇಜಿನ ಪುರುಷ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿದ್ದರು. ಮಹಿಳಾ ವಿದ್ಯಾರ್ಥಿಗಳು ಹಾಜರಾಗುವವರೆಗೂ ನಾವೂ ಹಾಜರಾಗುವುದಿಲ್ಲ ಎಂದು ಪ್ರತಿಭಟನೆಗೆ ಮುಂದಾಗಿದ್ದರು. ಮಹಿಳೆಯರಿಗೆ ಬುರ್ಕಾ ನಿಷೇಧ ಹೇರಿದ್ದ ಬೆನ್ನಲ್ಲೇ ಮಹಿಳಾ ಶಿಕ್ಷಣ (Women Education) ನಿಷೇಧಿಸಿದ್ದ ತಾಲಿಬಾನ್ (Taliban) ಇದೀಗ ಮತ್ತೆ ಮಹಿಳಾ ಶಿಕ್ಷಣ ಮುಂದುವರಿಸುವ ನಿರ್ಧಾರ ಕೈಗೊಂಡಿದೆ. 1 ರಿಂದ 6ನೇ ತರಗತಿ ವರೆಗಿನ ಅಥವಾ ಅದಕ್ಕಿಂತಲೂ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳಿಗೆ ಶಾಲೆಗಳಲ್ಲಿ (Schools) ತಮ್ಮ ಅಧ್ಯಯನ ಮುಂದುವರಿಸಲು ಅವಕಾಶ ನೀಡಿದೆ.
Live Tv
[brid partner=56869869 player=32851 video=960834 autoplay=true]
ಕಾಬೂಲ್: ಮಹಿಳೆಯರಿಗೆ ಬುರ್ಕಾ ನಿಷೇಧ ಹೇರಿದ್ದ ಬೆನ್ನಲ್ಲೇ ಮಹಿಳಾ ಶಿಕ್ಷಣ (Women Education) ನಿಷೇಧಿಸಿದ್ದ ತಾಲಿಬಾನ್ (Taliban) ಮತ್ತೆ ಮಹಿಳಾ ಶಿಕ್ಷಣ ಮುಂದುವರಿಸುವ ನಿರ್ಧಾರ ಕೈಗೊಂಡಿದೆ. 1 ರಿಂದ 6ನೇ ತರಗತಿವರೆಗಿನ ಅಥವಾ ಅದಕ್ಕಿಂತಲೂ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳಿಗೆ ಶಾಲೆಗಳಲ್ಲಿ (Schools) ತಮ್ಮ ಅಧ್ಯಯನ ಮುಂದುವರಿಸಲು ಅವಕಾಶ ನೀಡಿದೆ.
ತಾಲಿಬಾನ್ ಶಿಕ್ಷಣ ಸಚಿವಾಲಯವು (Taliban Education Ministry) 6ನೇ ತರಗತಿಯೊಳಗಿನ ಹೆಣ್ಣುಮಕ್ಕಳಿಗೆ ಬಾಲಕಿಯರಿಗೆ ಶಾಲೆಗಳು ಮತ್ತು ಶೈಕ್ಷಣಿಕ ಕೇಂದ್ರಗಳನ್ನು ತೆರೆಯುವಂತೆ ಅಧಿಕಾರಿಗಳಿಗೆ ಪತ್ರಾದೇಶ ಹೊರಡಿಸಿದೆ.
ಕೆಲ ದಿನಗಳ ಹಿಂದೆ ತಾಲಿಬಾನ್ ಮಹಿಳಾ ಶಿಕ್ಷಣಕ್ಕೆ (Women Education) ಸಂಪೂರ್ಣ ನಿಷೇಧ ಹೇರಿತ್ತು. ಇದನ್ನು ವಿರೋಧಿಸಿ ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದ್ದರು. ಈ ಬೆನ್ನಲ್ಲೇ ಪದವಿ ಕಾಲೇಜಿನ ಪುರುಷ ವಿದ್ಯಾರ್ಥಿಗಳು ತರಗತಿಗಳನ್ನ ಬಹಿಷ್ಕರಿಸಿದ್ದರು. ಮಹಿಳಾ ವಿದ್ಯಾರ್ಥಿಗಳು ಹಾಜರಾಗುವವರೆಗೂ ನಾವೂ ಹಾಜರಾಗುವುದಿಲ್ಲ ಎಂದು ಪ್ರತಿಭಟನೆಗೆ ಮುಂದಾಗಿದ್ದರು.
ಮಾನವಹಕ್ಕುಗಳ ಆಯೋಗ, ತಾಲಿಬಾನ್ ಶಿಕ್ಷಣ ಕ್ರಮವನ್ನು ನಾಚಿಕೆಗೇಡಿನ ನಿರ್ಧಾರ ಎಂದು ಖಂಡಿಸಿತ್ತು. ಇದು ತಾಲಿಬಾನ್ `ಅಫ್ಘನ್ನರ ಮೂಲಭೂತ ಹಕ್ಕುಗಳ’ ಗೌರವದ ಕೊರತೆಯನ್ನು ಸ್ಪಷ್ಟಪಡಿಸುತ್ತದೆ ಎಂದು ಕಿಡಿ ಕಾರಿತು. ಈ ಬೆನ್ನಲ್ಲೇ ತಾಲಿಬಾನ್ ಶಿಕ್ಷಣ ನೀತಿ ಮಾನವೀಯತೆಗೆ ವಿರೋಧ, ಮಹಿಳಾ ಶಿಕ್ಷಣದ ನೀತಿಗಳಲ್ಲಿ ಬದಲಾವಣೆಯ ಅಗತ್ಯವಿದೆ ವಿದೇಶಿ ಸರ್ಕಾರಗಳು ಹೇಳಿದ್ದವು. ಇದನ್ನೂ ಓದಿ: ಹಿಜಬ್ ಸೂಚನೆ ಕಡೆಗಣನೆ, ಮಹಿಳೆಯರು ಮದುವೆಗೆ ಹೋಗುವ ಉಡುಪು ಧರಿಸುತ್ತಾರೆ: ತಾಲಿಬಾನ್ ಸಮರ್ಥನೆ
G7 ಗುಂಪಿನ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪಿಯನ್ ಯೂನಿಯನ್ ವಿದೇಶಾಂಗ ಸಚಿವರು ನಿಷೇಧವನ್ನು ಹಿಂತೆಗೆದುಕೊಳ್ಳುವಂತೆ ತಾಲಿಬಾನ್‌ಗೆ ಒತ್ತಾಯಿಸಿದ್ದರು. ಟರ್ಕಿ, ಕತಾರ್ ಮತ್ತು ಪಾಕಿಸ್ತಾನ ಸೇರಿದಂತೆ ಮುಸ್ಲಿಂ ರಾಷ್ಟ್ರಗಳೂ ಅಸಮಾಧಾನ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ತಮ್ಮ ಶಿಕ್ಷಣ ನೀತಿಯನ್ನು ಮರುಪರಿಶೀಲಿಸಿದ ತಾಲಿಬಾನ್ ಸಚಿವಾಲಯ 6ನೇ ತರಗತಿಯೊಳಗಿನ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅಸ್ತು ಎಂದಿದೆ. ಇದನ್ನೂ ಓದಿ: ವಿದ್ಯಾರ್ಥಿನಿಯರು ಹಾಜರಾಗದಿದ್ರೆ ನಮಗೂ ಉನ್ನತ ಶಿಕ್ಷಣ ಬೇಡ – ತಾಲಿಬಾನ್‌ಗೆ ವಿದ್ಯಾರ್ಥಿಗಳಿಂದ ಎಚ್ಚರಿಕೆ
ಆದ್ರೆ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದ ತಾಲಿಬಾನ್ ಸರ್ಕಾರದ ಉನ್ನತ ಶಿಕ್ಷಣ ಸಚಿವ ನಿದಾ ಮೊಹಮ್ಮದ್ ನದೀಮ್, ವಿಶ್ವವಿದ್ಯಾನಿಲಯಗಳಲ್ಲಿ ಲಿಂಗಗಳ ಸಮೀಕರಣ ತಡೆಗಟ್ಟಲು ಈ ನೀತಿ ಪರಿಚಯಿಸಲಾಗಿದೆ. ಅಫ್ಘಾನಿಸ್ತಾನದ ಆಂತರಿಕ ವ್ಯವಹಾರಗಳಲ್ಲಿ ವಿದೇಶಿಯರು ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದರು.
Live Tv
[brid partner=56869869 player=32851 video=960834 autoplay=true]
ಕಾಬೂಲ್: ಅಫ್ಘಾನಿಸ್ತಾನದ (Afghanistan) ರಾಜಧಾನಿ ಕಾಬೂಲ್‌ನ ಮಿಲಿಟರಿ ವಿಮಾನ ನಿಲ್ದಾಣದಲ್ಲಿ (Kabul Military Airport) ಸ್ಫೋಟ ಸಂಭವಿಸಿದ್ದು, 10 ಜನರು ಸಾವನ್ನಪ್ಪಿದ್ದಾರೆ. ಸ್ಫೋಟದಲ್ಲಿ 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾಬೂಲ್‌ನ ಮಿಲಿಟರಿ ವಿಮಾನ ನಿಲ್ದಾಣದ ಮುಖ್ಯ ಗೇಟ್‌ಗೆ ಸಮೀಪದಲ್ಲಿ ಸ್ಫೋಟ ಸಂಭವಿಸಿದ್ದು, ಅನೇಕರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ (Taliban) ಆಂತರಿಕ ಸಚಿವಾಲಯದ ವಕ್ತಾರ ಅಬ್ದುಲ್ ನಫೀ ಟಕ್ಕೂರ್ ತಿಳಿಸಿದ್ದಾರೆ. ದಾಳಿ ಜವಾಬ್ದಾರಿಯನ್ನು ಈವರೆಗೂ ಯಾವ ಉಗ್ರ ಸಂಘಟನೆಯೂ ಹೊತ್ತಿಲ್ಲ. ಇದನ್ನೂ ಓದಿ: ಹೊಸ ವರ್ಷ ಆಚರಣೆ ವೇಳೆ ಕಾಲ್ತುಳಿತಕ್ಕೆ ಸಿಲುಕಿ 9 ಮಂದಿ ಸಾವು
ಈಚೆಗಷ್ಟೇ ಉತ್ತರ ತಖಾರ್ ಪ್ರಾಂತ್ಯದ ರಾಜಧಾನಿ ತಾಲೂಕನ್ ನಗರದಲ್ಲಿ ಸ್ಫೋಟವೊಂದು ಸಂಭವಿಸಿತ್ತು. ಈ ವೇಳೆ ನಾಲ್ವರು ಗಾಯಗೊಂಡಿದ್ದರು. ಇದಾದ ಮೂರು ದಿನಗಳಲ್ಲೇ ಮತ್ತೊಂದು ಸ್ಫೋಟ ಸಂಭವಿಸಿದೆ.
ತಾಲಿಬಾನ್ ಭದ್ರತಾ ಕಮಾಂಡರ್ ಅಬ್ದುಲ್ ಮುಬಿನ್ ಸಫಿ, ಸ್ಫೋಟ ಕುರಿತು ಅಧಿಕೃತ ಹೇಳಿಕೆ ನೀಡಿದ್ದಾರೆ. ಅಲ್ಲದೇ ಸ್ಥಳೀಯ ಆಡಳಿತ ಸಿಬ್ಬಂದಿಯ ಮೇಜಿನ ಕೆಳಗೆ ಬಾಂಬ್ ಇರಿಸಲಾಗಿದೆ ಎಂದು ಖಾಮಾ ಪ್ರೆಸ್ ವರದಿ ಮಾಡಿದೆ. ಇದನ್ನೂ ಓದಿ: ಪಾಕಿಸ್ತಾನ ವಿರುದ್ಧ ಯುದ್ಧ ಸಾರುವುದಾಗಿ ಬೆದರಿಕೆ ಹಾಕಿದ ತಾಲಿಬಾನ್
Live Tv
[brid partner=56869869 player=32851 video=960834 autoplay=true]
ಕಾಬೂಲ್: ಅಫ್ಘಾನಿಸ್ತಾನದ (Afghanistan) ಎಲ್ಲಾ ಸ್ಥಳೀಯ ಹಾಗೂ ವಿದೇಶಿ ಸರ್ಕಾರೇತರ ಸಂಸ್ಥೆಗಳಿಗೆ (NGO) ಮಹಿಳಾ ಉದ್ಯೋಗಿಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ತಾಲಿಬಾನ್ (Taliban) ಆದೇಶಿಸಿದೆ.
ವಿಶ್ವವಿದ್ಯಾನಿಲಯಗಳಲ್ಲಿ ಮಹಿಳೆಯರಿಗೆ ಅವಕಾಶ ನೀಡಬಾರದು ಎಂದ ಬೆನ್ನಲ್ಲೇ ತಾಲಿಬಾನ್ ಮತ್ತೊಂದು ಆದೇಶ ಹೊರಡಿಸಿದೆ. ಇದರ ವಿರುದ್ಧ ಅಫ್ಘಾನಿಸ್ತಾನದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಅಲ್ಲದೇ ಜಾಗತಿಕವಾಗಿ ಖಂಡನೆ ಕೂಡ ವ್ಯಕ್ತವಾಗಿದೆ.
ವಿಶ್ವವಿದ್ಯಾನಿಲಯ ಶಿಕ್ಷಣದ ಮೇಲಿನ ನಿಷೇಧವನ್ನು ಪ್ರತಿಭಟಿಸುವ ಮಹಿಳೆಯರನ್ನು ಚದುರಿಸಲು ತಾಲಿಬಾನ್ ಭದ್ರತಾ ಪಡೆಗಳು ನೀರಿನ ಫಿರಂಗಿಯನ್ನು ಬಳಸಿದವು ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಅಫ್ಘಾನಿಸ್ತಾನದ ಮಹಿಳೆಯರು ನಿಷೇಧದ ವಿರುದ್ಧ ಪ್ರಮುಖ ನಗರಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ಒಂದೇ ದಿನ 3.7 ಕೋಟಿ ಮಂದಿಗೆ ಸೋಂಕು
ವಿವಿಗಳಲ್ಲಿ ಮಹಿಳೆಯರಿಗೆ ಶಿಕ್ಷಣ ನಿಷೇಧಿಸಿದ ತಾಲಿಬಾನ್ ಆದೇಶಕ್ಕೆ ಸೌದಿ ಅರೇಬಿಯಾ, ಟರ್ಕಿ, ಯುನೈಟೆಡ್ ಅರಬ್ ಎಮಿರೇಟ್ಸ್‌ನಂತಹ ದೇಶಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
Live Tv
[brid partner=56869869 player=32851 video=960834 autoplay=true]