Tag: afghanistan

  • ಒಂದೇ ಓವರ್‌ನಲ್ಲಿ 48 ರನ್‌ ಚಚ್ಚಿದ ಆಫ್ಘನ್‌ ಬ್ಯಾಟರ್‌ – ಮೈದಾನದಲ್ಲೇ ಕಣ್ಣೀರಿಟ್ಟ ಬೌಲರ್‌

    ಒಂದೇ ಓವರ್‌ನಲ್ಲಿ 48 ರನ್‌ ಚಚ್ಚಿದ ಆಫ್ಘನ್‌ ಬ್ಯಾಟರ್‌ – ಮೈದಾನದಲ್ಲೇ ಕಣ್ಣೀರಿಟ್ಟ ಬೌಲರ್‌

    ಕಾಬೂಲ್‌: ಭಾರತದ ಐಪಿಎಲ್‌ (IPL) ಬಳಿಕ ವಿಶ್ವದೆಲ್ಲೆಡೆ ಟಿ20 ಕ್ರಿಕೆಟ್‌ ಟೂರ್ನಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಇಂತಹ ಟಿ20 ಲೀಗ್‌ಗಳಲ್ಲಿ (T20 Cricket League) ಹಲವು ದಾಖಲೆ ಸಿಡಿಸಿರುವುದನ್ನೂ ನಾವು ನೋಡಿದ್ದೇವೆ.

    ಅದಕ್ಕೆ ತಾಜಾ ಉದಾಹರಣೆ ಎನ್ನುವಂತೆ ಕಾಬೂಲ್ ಪ್ರೀಮಿಯರ್ ಲೀಗ್‌ ಟಿ20 ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನದ (Afghanistan) ಬ್ಯಾಟರ್‌ ಒಬ್ಬರು ಒಂದೇ ಓವರ್‌ನಲ್ಲಿ 7 ಸಿಕ್ಸ್‌ಗಳೊಂದಿಗೆ 48 ರನ್‌ ಸಿಡಿಸುವ ಮೂಲಕ ದಾಖಲೆ ಬರೆದಿದ್ದಾರೆ. 48 ರನ್‌ ಚಚ್ಚಿಸಿಕೊಂಡ ಬೌಲರ್‌ ಮೈದಾನದಲ್ಲಿ ಕಣ್ಣೀರಿಟ್ಟಿರುವ ಪ್ರಸಂಗ ಗಮನ ಸೆಳೆದಿದೆ.

    ಕಾಬೂಲ್‌ ಪ್ರೀಮಿಯರ್‌ ಲೀಗ್‌ನಲ್ಲಿ ಶಾಹೀನ್‌ ಹಂಟರ್ಸ್‌ ಹಾಗೂ ಅಬಾಸಿನ್‌ ಡಿಫೆಂಡರ್ಸ್‌ ನಡುವಿನ ಪಂದ್ಯದಲ್ಲಿ ಎದುರಾಳಿ ತಂಡದ ಅಮೀರ್ ಝಜೈ (Amir Zazai) ಬೌಲಿಂಗ್‌ಗೆ ಅಫ್ಘಾನಿಸ್ತಾನದ ಸ್ಟಾರ್‌ ಆಟಗಾರ ಸೆಡಿಕುಲ್ಲಾ ಅಟಲ್ (Sediqullah Atal) ಒಂದೇ ಓವರ್‌ನಲ್ಲಿ 7 ಸಿಕ್ಸ್‌ಗಳೊಂದಿಗೆ 48 ರನ್‌ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಎಸೆತದಲ್ಲಿ ನೋಬಾಲ್‌ ನೊಂದಿಗೆ ಅಟಲ್‌ ಸಿಕ್ಸ್‌ ಬಾರಿಸಿದರು, 2ನೇ ಎಸೆತ ವೈಡ್‌ನೊಂದಿಗೆ ಫೋರ್‌ಗೆ ತಲುಪಿತು. ಮುಂದಿನ ಆರು ಎಸೆತಗಳನ್ನೂ 6,6,6,6,6,6 ಬಾರಿಸಿ ಭರ್ಜರಿ ಶತಕದೊಂದಿಗೆ ಮಿಂಚಿದರು.

    ಮೊದಲು ಬ್ಯಾಟಿಂಗ್‌ ಮಾಡಿದ್ದ ಶಾಹಿನ್‌ ಹಂಟರ್ಸ್‌ 20 ಓವರ್‌ಗಳ ಅಂತ್ಯಕ್ಕೆ 6 ವಿಕೆಟ್‌ ನಷ್ಟಕ್ಕೆ 213 ರನ್‌ ಬಾರಿಸಿತ್ತು. ಅಟಲ್‌ ಟೀಂ ಪರವಾಗಿ 56 ಎಸೆತಗಳಲ್ಲಿ 7 ಬೌಂಡರಿ, 10 ಸಿಕ್ಸರ್‌ಗಳೊಂದಿಗೆ 118 ರನ್‌ ಚಚ್ಚಿ ಅಜೇಯರಾಗುಳಿದರು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಡಿಫೆಂಡರ್ಸ್‌ 18.3 ಓವರ್‌ಗಳಲ್ಲಿ 121 ರನ್‌ ಗಳಿಗೆ ಸರ್ವಪತನ ಕಂಡಿತು.

    ಅಫ್ಘಾನಿಸ್ತಾನ ಕ್ರಿಕೆಟ್‌ ಮಂಡಳಿ ಭ್ರಷ್ಟವಾಗಿದೆ.
    ಈ ಮಧ್ಯೆ ಅಫ್ಘಾನಿಸ್ತಾನದ ಕ್ರಿಕೆಟಿಗ ಉಸ್ಮಾನ್‌ ಘನಿ, ಅಫ್ಘಾನಿಸ್ತಾನದ ಅಂತರರಾಷ್ಟ್ರೀಯ ತಂಡದಿಂದ ಹೊರಗುಳಿದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ ಬದುಕಿಗೆ ಗುಡ್‌ಬೈ ಹೇಳುವುದಾಗಿ ತಿಳಿಸಿದ್ದಾರೆ. ಅಫ್ಘಾನಿಸ್ತಾನ ಕ್ರಿಕೆಟ್‌ ಮಂಡಳಿ ಅತ್ಯಂತ ಭ್ರಷ್ಟವಾಗಿದೆ. ಆದ್ದರಿಂದ ನಾನು ಕ್ರಿಕೆಟ್‌ನಿಂದಲೇ ವಿರಾಮ ತೆಗೆದುಕೊಳ್ಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಹಿಳೆಯರ ಬ್ಯೂಟಿ ಸಲೂನ್‌ಗಳನ್ನ ನಿಷೇಧಿಸಿ – ತಾಲಿಬಾನ್‌ ಸರ್ಕಾರ

    ಮಹಿಳೆಯರ ಬ್ಯೂಟಿ ಸಲೂನ್‌ಗಳನ್ನ ನಿಷೇಧಿಸಿ – ತಾಲಿಬಾನ್‌ ಸರ್ಕಾರ

    ಕಾಬೂಲ್‌: ಈ ಹಿಂದೆ ಮಹಿಳೆಯರು (Womens) ಮನರಂಜನಾ ಸ್ಥಳಗಳಿಗೆ ಹೋಗುವುದನ್ನ ನಿಷೇಧಿಸಿದ್ದ ಅಫ್ಘಾನಿಸ್ತಾನದಲ್ಲಿರುವ ತಾಲಿಬಾನ್‌ ಸರ್ಕಾರ ಇದೀಗ ಕಾಬೂಲ್‌ ಸೇರಿದಂತೆ ಇತರ ಪ್ರಾಂತ್ಯಗಳಲ್ಲಿ ಮಹಿಳೆಯರ ಬ್ಯೂಟಿ ಸಲೂನ್‌ಗಳನ್ನ (Women Beauty Salons) ನಿಷೇಧಿಸುವಂತೆ ಆದೇಶಿಸಿದೆ.

    ತಾಲಿಬಾನ್(Taliban) ಸಚಿವಾಲಯದ ವಕ್ತಾರ ಮೊಹಮ್ಮದ್ ಅಕಿಫ್ ಮಹಜರ್ ಕೂಡಲೇ ಮಹಿಳೆಯರ ಬ್ಯೂಟಿ ಸಲೊನ್‌ಗಳನ್ನ ನಿಷೇಧಿಸಲು ಆದೇಶ ಹೊರಡಿಸುವಂತೆ ಕಾಬೂಲಿನ ಮುನ್ಸಿಪಾಲಿಟಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿಯರು ಹಾಜರಾಗದಿದ್ರೆ ನಮಗೂ ಉನ್ನತ ಶಿಕ್ಷಣ ಬೇಡ – ತಾಲಿಬಾನ್‌ಗೆ ವಿದ್ಯಾರ್ಥಿಗಳಿಂದ ಎಚ್ಚರಿಕೆ

    ಈ ನಡುವೆ ಪುರುಷರು ನಿರುದ್ಯೋಗಿಗಳಾಗಿದ್ದಾರೆ, ತಮ್ಮ ಕುಟುಂಬವನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮಹಿಳೆಯರು ಒಂದೊತ್ತಿನ ಊಟಕ್ಕಾಗಿ ಬ್ಯೂಟಿ ಸಲೂನ್‌ಗಳಲ್ಲಿ ಕೆಲಸ ಮಾಡಲು ಹೋಗ್ತಿದ್ದಾರೆ. ಅದನ್ನೂ ನಿಷೇಧಿಸಿದ್ರೆ ನಾವೇನು ಮಾಡಬೇಕು? ಎಂದು ಮೇಕಪ್‌ ಕಲಾವಿಧ ರೈಹಾನ್ ಮುಬಾರಿಜ್ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನೀವು ಬರಬೇಡಿ.. ನಿಮ್ಮ ಮನೆಯ ಪುರುಷರನ್ನು ಕೆಲಸಕ್ಕೆ ಕಳಿಸಿ: ಮಹಿಳಾ ಉದ್ಯೋಗಿಗಳಿಗೆ ತಾಲಿಬಾನ್‌ ಸೂಚನೆ

    ಪುರುಷರಿಗೆ ಉದ್ಯೋಗವಿದ್ದರೆ ನಾವು ಮನೆಯಿಂದ ಹೊರಬರುವುದಿಲ್ಲ. ಆದ್ರೆ ಇಂತಹ ಪರಿಸ್ಥಿತಿಯಲ್ಲಿ ನಾವೇನು ಮಾಡೋದು? ನಾವು ಹಸಿವಿನಿಂದ ಸಾಯುವಂತ ಪರಿಸ್ಥಿತಿ ಬಂದಿದೆ. ಅದನ್ನೇ ನೀವು ಬಯಸುತ್ತಿದ್ದೀರಿ ಎಂದು ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ.

    ಈ ಹಿಂದೆ ಮುಸ್ಲಿಂ ಹುಡುಗಿಯರು ಹಾಗೂ ಯುವತಿಯರು ಶಾಲೆ-ಕಾಲೇಜುಗಳಿಗೆ ಹೋಗುವುದು, ಎನ್‌ಜಿಒಗಳಲ್ಲಿ ಕೆಲಸ ಮಾಡುವುದನ್ನ ತಾಲಿಬಾನ್‌ ಸರ್ಕಾರ ನಿಷೇಧಿಸಿತ್ತು. ಆ ನಂತರ ಪುರುಷ-ಮಹಿಳೆ ರೆಸ್ಟೋರೆಂಟ್‌ನಲ್ಲಿ ಒಟ್ಟಿಗೆ ಕುಳಿತು ಊಟ ಮಾಡುವುದು, ಪಾರ್ಕ್‌ಗೆ ಹೋಗುವುದು, ಚಿತ್ರಮಂದಿರ ಮತ್ತು ಇತರ ಮನರಂಜನಾ ಪ್ರದೇಶಗಳಿಗೆ ಹೋಗುವುದಕ್ಕೂ ಬ್ರೇಕ್‌ ಹಾಕಿದೆ. ಇದೀಗ ಮಹಿಳೆಯರ ಬ್ಯೂಟಿ  ಸಲೂನ್‌ಗಳನ್ನ ನಿಷೇಧಿಸಿ ಆದೇಶ ಹೊರಡಿಸಿದೆ.

    ಕಾಬೂಲಿನ ನಿವಾಸಿಗಳು, ಸರ್ಕಾರವು ತನ್ನ ಕ್ರಮಗಳಿಗೆ ಒಂದು ಚೌಕಟ್ಟನ್ನು ರೂಪಿಸಬೇಕು. ಆ ಚೌಕಟ್ಟು ಇಸ್ಲಾಂಗೆ ಅಥವಾ ದೇಶಕ್ಕೆ ಹಾನಿಯಾಗದ ರೀತಿಯಲ್ಲಿ ಇರಬೇಕು ಎಂದು ಮನವಿ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗ್ಳೂರಿನಲ್ಲಿ ಕಣಕ್ಕಿಳಿಯುತ್ತಾ ಪಾಕ್‌ ತಂಡ – ಭದ್ರತೆ ಕಾರಣ ನೀಡಿದ್ರೆ ಸ್ಥಳ ಬದಲಾವಣೆ ಮಾಡಬಹುದು ಎಂದ ಅಶ್ವಿನ್‌

    ಬೆಂಗ್ಳೂರಿನಲ್ಲಿ ಕಣಕ್ಕಿಳಿಯುತ್ತಾ ಪಾಕ್‌ ತಂಡ – ಭದ್ರತೆ ಕಾರಣ ನೀಡಿದ್ರೆ ಸ್ಥಳ ಬದಲಾವಣೆ ಮಾಡಬಹುದು ಎಂದ ಅಶ್ವಿನ್‌

    ಮುಂಬೈ: ಮುಂದಿನ ಅಕ್ಟೋಬರ್‌ ತಿಂಗಳಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ (ODI WorldCup) ಟೂರ್ನಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ತಗಾದೆ ತಗೆದಿದೆ. ಭಾರತದಲ್ಲಿ ತಮಗೆ ನಿಗದಿಪಡಿಸಿದ ಸ್ಥಳಗಳು ಆರಾಮದಾಯಕವಾಗಿಲ್ಲ. ಹಾಗಾಗಿ ಸ್ಥಳ ಬದಲಾವಣೆ ಮಾಡುವಂತೆ ICCಗೆ ಪಾಕ್‌ (Pakistan) ತಂಡ ಮನವಿ ಮಾಡಿದೆ.

    ಈಗಾಗಲೇ ಭಾರತ ತಂಡ ಪಾಕಿಸ್ತಾನದಲ್ಲಿ ಏಷ್ಯಾಕಪ್‌ (AisaCup) ಪಂದ್ಯವನ್ನಾಡಲು ಬಿಸಿಸಿಐ ನಿರಾಕರಿಸಿದ್ದು, ಪಾಕಿಸ್ತಾನ ತಂಡ ಕೂಡ ಭಾರತ ನಿಗದಿಪಡಿಸಿದ ಸ್ಥಳದಲ್ಲಿ ವಿಶ್ವಕಪ್‌ ಆಡುವುದಿಲ್ಲ ಎಂದು ಕಿರಿಕ್‌ ತೆಗೆದಿದೆ. ಪಾಕ್‌ ಮಾಜಿ ಕ್ರಿಕೆಟಿಗರು ಪಾಕ್‌ ತಂಡ ಭಾರತಕ್ಕೆ ಹೋಗದಂತೆ ಸಲಹೆ ನೀಡಿದ್ದಾರೆ. ಈ ಕುರಿತು ಟೀಂ ಇಂಡಿಯಾ (Team India) ಸ್ಪಿನ್‌ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಪ್ರತಿಕ್ರಿಯಿಸಿದ್ದಾರೆ.

    ಸಂದರ್ಶನವೊಂದರಲ್ಲಿ ಮಾತನಾಡಿದ ಅಶ್ವಿನ್‌, 2023ರ ಏಕದಿನ ವಿಶ್ವಕಪ್‌ ಟೂರ್ನಿಯ ವೇಳಾಪಟ್ಟಿ ಇನ್ನೂ ಪ್ರಕಟಿಸಿಲ್ಲ. ಕರಡು ವೇಳಾಪಟ್ಟಿಯನ್ನು ಐಸಿಸಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಅಷ್ಟೇ ಎಂದಿದ್ದಾರೆ. ಇದನ್ನೂ ಓದಿ: ಮೋದಿ ಕ್ರೀಡಾಂಗಣದಲ್ಲಿ ಇಂಡೋ ಪಾಕ್ ಕದನ – ರಣರೋಚಕ ಪಂದ್ಯಕ್ಕಾಗಿ ಕಾಯ್ತಿದ್ದಾರೆ ಫ್ಯಾನ್ಸ್

    ಈ ನಡುವೆ ಪಾಕಿಸ್ತಾನ ಸ್ಥಳ ಬದಲಾಯಿಸುವಂತೆ ಮನವಿ ಮಾಡಿದೆ. ಕರಡು ವೇಳಾಪಟ್ಟಿಯ ಪ್ರಕಾರ ಪಾಕಿಸ್ತಾನ ಬೆಂಗಳೂರಿನಲ್ಲಿ, ಅಫ್ಘಾನಿಸ್ತಾನ ಆಸ್ಟ್ರೇಲಿಯಾ (Australia) ವಿರುದ್ಧ ಚೆನ್ನೈನ ಚೇಪಾಕ್‌ ಕ್ರೀಡಾಂಗಣದಲ್ಲಿ ಆಡಲಿದೆ. ಆದ್ರೆ ಆವರ ಸ್ಥಳ ಬದಲಾಯಿಸುವಂತೆ ಕೋರಿದ್ದಾರೆ. ಯಾವುದೇ ಪಂದ್ಯಗಳಿಗೆ ಭದ್ರತೆಯ ಕಾರಣವಿದ್ದರೆ ಮಾತ್ರ ಐಸಿಸಿ ಅಂತಹ ಮನವಿಯನ್ನ ಪರಿಗಣಿಸುತ್ತೆ. ಇಲ್ಲದಿದ್ದರೆ ಪಾಕಿಸ್ತಾನ ತಂಡ ನಿಗದಿ ಮಾಡಿದ ಸ್ಥಳದಲ್ಲೇ ಆಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಆ.31 ರಿಂದ ಏಕದಿನ ಏಷ್ಯಾಕಪ್; ಲಂಕಾ, ಪಾಕ್ ಆತಿಥ್ಯ – ಬುಮ್ರಾ, ಅಯ್ಯರ್ ಕಂಬ್ಯಾಕ್ ಸಾಧ್ಯತೆ

    ಪಾಕಿಸ್ತಾನ ತನ್ನ ಮನವಿಯಲ್ಲೇ ಚೆನ್ನೈನಲ್ಲಿ ಆಡಲು ಪರಿಸ್ಥಿತಿ ಅನುಕೂಲವಾಗಿದೆ ಎಂದು ಹೇಳಿದೆ. ಒಂದು ವೇಳೆ ಅಫ್ಘಾನಿಸ್ತಾನ (Afghanistan) ತಂಡಕ್ಕೆ ಸ್ಥಳ ಬದಲಾವಣೆ ಮಾಡಿದರೆ ಇದರ ಪ್ರಯೋಜನ ಪಾಕಿಸ್ತಾನ ಪಡೆಯುತ್ತದೆ. ಹಾಗಾಗಿ ಐಸಿಸಿ ಈ ಮನವಿಯನ್ನ ಪರಿಗಣಿಸುವುದು ಅನುಮಾನವಿದೆ. ಒಂದು ವೇಳೆ ಪಾಕಿಸ್ತಾನ ಭದ್ರತೆಗೆ ಸಂಬಂಧಿಸಿದಂತೆ ಮೌಲ್ಯಯುತ ಕಾರಣ ನೀಡಿದ್ರೆ ಪಂದ್ಯ ಸ್ಥಳಾಂತರಕ್ಕೆ ಅನುಮತಿ ನೀಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

    ಚೆನ್ನೈ ಪಿಚ್‌ ಸ್ಪಿನ್‌ಗೆ ಪೂರಕವಾಗಿದೆ, ಆಸ್ಟ್ರೇಲಿಯಾ-ಅಫ್ಘಾನಿಸ್ತಾನದ ಎದುರು ಆಡುವುದಾದರೆ ಈಗಾಗಲೇ ಆ ಪಿಚ್‌ನಲ್ಲಿ ಅನುಭವ ಹೊಂದಿರುವ ಬೌಲರ್‌ಗಳನ್ನು ಎದುರಿಸಬೇಕಾಗುತ್ತದೆ. 2023ರ ಐಪಿಎಲ್‌ ನಲ್ಲಿ ಗುಜರಾತ್‌ ಟೈಟಾನ್ಸ್‌ ತಂಡದಲ್ಲಿದ್ದ ಆಫ್ಘನ್‌ ಬೌಲರ್‌ಗಳಾದ ರಶೀದ್ ಖಾನ್ ಮತ್ತು ನೂರ್ ಅಹ್ಮದ್ ಈಗಾಗಲೇ ಈ ಪಿಚ್‌ನಲ್ಲಿ ಆಡಿರುವ ಅನುಭವ ಪಡೆದಿದ್ದಾರೆ. ಆದ್ರೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬ್ಯಾಟಿಂಗ್‌ ಪಿಚ್‌ ಆಗಿದ್ದು, ಪಾಕಿಸ್ತಾನ ಎದುರಾಳಿ ತಂಡವನ್ನ ಹೇಗೆ ಎದುರಿಸಲಿದೆ ಎಂಬುದನ್ನ ಕಾದು ನೋಡಬೇಕಿದೆ ಎಂದು ಹೇಳಿದ್ದಾರೆ.

  • ಭಾರತದಲ್ಲಿ ಭೀಕರ ರೈಲು ದುರಂತ ಕಂಡು ತುಂಬಾ ದುಃಖವಾಗಿದೆ – ಪಾಕಿಸ್ತಾನ, ತಾಲಿಬಾನ್‌ ಸಂತಾಪ

    ಭಾರತದಲ್ಲಿ ಭೀಕರ ರೈಲು ದುರಂತ ಕಂಡು ತುಂಬಾ ದುಃಖವಾಗಿದೆ – ಪಾಕಿಸ್ತಾನ, ತಾಲಿಬಾನ್‌ ಸಂತಾಪ

    ಇಸ್ಲಾಮಾಬಾದ್‌: ಭಾರತದ ಒಡಿಶಾದಲ್ಲಿ ನಡೆದ ಭೀಕರ ರೈಲು ಅಪಘಾತದಲ್ಲಿ (Odisha Train Crash) ಮೃತಪಟ್ಟವರ ಸಂಖ್ಯೆ 261ಕ್ಕೆ ಏರಿಕೆಯಾಗಿದ್ದು 900ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಅವರಲ್ಲಿ 650ಕ್ಕೂ ಹೆಚ್ಚು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ.

    ಒಡಿಶಾದ ಬಾಲಸೋರ್‌ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ನಡೆದ ತ್ರಿಪಲ್‌ ರೈಲು ದುರಂತಕ್ಕೆ ಪಾಕಿಸ್ತಾನ (Pakistan) ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೋ ಜರ್ದಾರಿ (Bilawal Bhutto Zardari) ಹಾಗೂ ಅಫ್ಘಾನಿಸ್ತಾನದ ತಾಲಿಬಾನ್‌ನ (Taliban) ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಂತಾಪ ಸೂಚಿಸಿದೆ. ಇದನ್ನೂ ಓದಿ: ಒಡಿಶಾ ರೈಲು ದುರಂತ ಹೇಗಾಯ್ತು..? ಘಟನೆಗೆ ಕಾರಣ ಏನು..?

    ಭಾರತದ ಒಡಿಶಾದಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ಹೆಚ್ಚಿನ ಸಾವು ನೋವಾಗಿರುವುದು ತಿಳಿದು ದುಃಖವಾಗಿದೆ. ಸಂತ್ರಸ್ತರ ಕುಟುಂಬಗಳಿಗೆ ದೇವರು ದುಃಖ ಭರಿಸುವ ಶಕ್ತಿ ಕೊಡಲಿ. ರೈಲು ದುರಂತದಲ್ಲಿ ಗಾಯಗೊಂಡವರು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಶುಭ ಹಾರೈಸಿವೆ. ಅಷ್ಟೇ ಅಲ್ಲದೇ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ, ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌ ಸೇರಿದಂತೆ ದೇಶ-ವಿದೇಶ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ದೊಡ್ಡಮಟ್ಟದ ಸದ್ದು ಕೇಳಿಬಂತು; ದುರಂತದ ಘನಘೋರ ದೃಶ್ಯ ಬಿಚ್ಚಿಟ್ಟ ಕನ್ನಡಿಗ

  • 12 ಸಾವಿರ ಕೋಟಿ ಮೌಲ್ಯದ 2.5 ಟನ್ ಡ್ರಗ್ಸ್ ಜಪ್ತಿ – ಪಾಕ್ ಆರೋಪಿಯ ಬಂಧನ

    12 ಸಾವಿರ ಕೋಟಿ ಮೌಲ್ಯದ 2.5 ಟನ್ ಡ್ರಗ್ಸ್ ಜಪ್ತಿ – ಪಾಕ್ ಆರೋಪಿಯ ಬಂಧನ

    ತಿರುವನಂತನಪುರಂ: 12,000 ಕೋಟಿ ರೂ. ಮೌಲ್ಯದ ಸುಮಾರು 2,500 ಕೆಜಿ ಮೆಥಾಂಫೆಟಮೈನ್ ಎಂಬ ಮಾದಕ ವಸ್ತುವನ್ನು ನೌಕಾಪಡೆ (Navy) ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದೆ.

    ಕೇರಳ (Kerala), ಕರಾವಳಿಯಲ್ಲಿ ಹಡಗಿನ ಮೂಲಕ ಸಾಗಿಸುತ್ತಿದ್ದ ಪಾಕ್  (Pakistan) ಮೂಲದ ಆರೋಪಿಯನ್ನು ಬಂಧಿಸಿದ್ದಾರೆ. ಇದು ದೇಶದಲ್ಲಿ ವಶಪಡಿಸಿಕೊಳ್ಳಲಾದ ಅತಿ ಹೆಚ್ಚು ಪ್ರಮಾಣದ ಮೆಥಾಂಫೆಟಮೈನ್ ಆಗಿದೆ. ಸಾಗರ ಮಾರ್ಗವಾಗಿ ನಡೆಯುವ ಕಳ್ಳಸಾಗಾಣಿಕೆಯ ಗುರಿಯಾಗಿಸಿ ನಡೆಸುವ `ಅಪರೇಷನ್ ಸಮುದ್ರಗುಪ್ತ್’ ಕಾರ್ಯಾಚರಣೆ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: CBI ನಿರ್ದೇಶಕರ ಆಯ್ಕೆ ಪಟ್ಟಿಯಲ್ಲಿ ಕರ್ನಾಟಕದ ಡಿಜಿಪಿ ಪ್ರವೀಣ್‌ ಸೂದ್‌ ಹೆಸರು

    ಕರಾವಳಿಯಲ್ಲಿ ಸಾಗುತ್ತಿದ್ದ ಹಡಗನ್ನು ತಡೆದು ಅಧಿಕಾರಿಗಳು ಪರಿಶೀಲನೆ ನಡೆಸಿದಾಗ 134 ಚೀಲಗಳಲ್ಲಿ ಮೆಥಾಂಫೆಟಮೈನ್‍ನನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ. ವಶ ಪಡಿಸಿಕೊಂಡ ಡ್ರಗ್ಸ್ ಹಾಗೂ ಆರೋಪಿಯನ್ನು ಎನ್‍ಸಿಬಿಯ ವಶದಲ್ಲಿರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


    ಕಳೆದ ಒಂದೂವರೆ ವರ್ಷದಲ್ಲಿ ದಕ್ಷಿಣ ಭಾಗದ ಸಮುದ್ರದ ಮೂಲಕ ಸಾಗಣಿಕೆಯಾಗುವ ಮಾದಕ ವಸ್ತುಗಳ ವಶಪಡಿಸಿಕೊಂಡಿರುವ ಪ್ರಕರಣದಲ್ಲಿ ಇದು ಮೂರನೇ ಪ್ರಕರಣವಾಗಿದೆ. ಇತ್ತೀಚೆಗೆ 500 ಕೆ.ಜಿ ಹೆರಾಯಿನ್ ಮತ್ತು 529 ಕೆ.ಜಿ ಹಶಿಶ್‍ನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಮಾದಕವಸ್ತುಗಳು ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ (Afghanistan) ಮೂಲಕ ಸಾಗಿಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 2024ರ ಹೊತ್ತಿಗೆ ಬಿಜೆಪಿ ಅಂತ್ಯ ಶುರು: ಮಮತಾ ಬ್ಯಾನರ್ಜಿ

  • ಅಫ್ಘಾನಿಸ್ತಾನದಲ್ಲಿ ಉದ್ಯಾನವನ, ರೆಸ್ಟೊರೆಂಟ್‌ಗಳಿಗೆ ಕುಟುಂಬ, ಮಹಿಳೆಯರೊಂದಿಗೆ ಹೋಗೋದು ಬ್ಯಾನ್

    ಅಫ್ಘಾನಿಸ್ತಾನದಲ್ಲಿ ಉದ್ಯಾನವನ, ರೆಸ್ಟೊರೆಂಟ್‌ಗಳಿಗೆ ಕುಟುಂಬ, ಮಹಿಳೆಯರೊಂದಿಗೆ ಹೋಗೋದು ಬ್ಯಾನ್

    ಕಾಬೂಲ್: ಅಫ್ಘಾನಿಸ್ತಾನದ (Afghanistan) ಹೆರಾತ್ (Herat) ಪ್ರಾಂತ್ಯದಲ್ಲಿ ಉದ್ಯಾನವನಗಳು (Gardens) ಹಾಗೂ ರೆಸ್ಟೊರೆಂಟ್‌ಗಳಿಗೆ (Restaurant) ಕುಟುಂಬ (Family) ಹಾಗೂ ಮಹಿಳೆಯರು (Women) ಹೋಗುವುದನ್ನು ತಾಲಿಬಾನ್ (Taliban) ನಿಷೇಧಿಸಿದೆ ಎಂದು ಸೋಮವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ತಾಲಿಬಾನ್ ಮುಖ್ಯವಾಗಿ ಮಹಿಳೆಯರ ಮೇಲೆ ಹಿಡಿತ ಸಾಧಿಸುವುದನ್ನು ಮುಂದುವರಿಸುತ್ತಲೇ ಇದೆ. ಈ ಹಿಂದೆ ಪಾರ್ಕ್, ಜಿಮ್, ವಿಶ್ವವಿದ್ಯಾಲಯಗಳಿಗೆ ಮಹಿಳೆಯರು ಹೋಗುವುದನ್ನು ನಿಷೇಧಿಸಿದ ತಾಲಿಬಾನ್ ಇದೀಗ ಕುಟುಂಬದೊಂದಿಗೂ ಉದ್ಯಾನವನ ಹಾಗೂ ರೆಸ್ಟೊರೆಂಟ್‌ಗಳಿಗೆ ಹೋಗುವುದನ್ನು ನಿಷೇಧಿಸಿದೆ.

    ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರದೇಶದಲ್ಲಿ ತಾಲಿಬಾನ್ ಲಿಂಗ ಪ್ರತ್ಯೇಕತೆಯ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ ಈಗ ಪುರುಷರು ಫ್ಯಾಮಿಲಿ ರೆಸ್ಟೊರೆಂಟ್‌ಗಳಲ್ಲಿ ಕುಟುಂಬದ ಸದಸ್ಯರೊಂದಿಗೆ ಊಟ ಮಾಡುವಂತಿಲ್ಲ. ಮಾತ್ರವಲ್ಲದೇ ಪುರುಷರು ಹಾಗೂ ಮಹಿಳೆಯರು ಒಟ್ಟಿಗೆ ಉದ್ಯಾನವನಕ್ಕೂ ಹೋಗುವಂತಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಮುಸ್ಲಿಮರು ಭಾರತದಲ್ಲಿ ಚೆನ್ನಾಗೇ ಇದ್ದಾರೆ: ಪಾಶ್ಚಿಮಾತ್ಯ ದೇಶಗಳ ವಿರುದ್ಧ ಸೀತಾರಾಮನ್ ಕಿಡಿ

    ಸಾರ್ವಜನಿಕ ಪ್ರದೇಶಗಳಲ್ಲಿ ಮಹಿಳೆಯರು ಹಿಜಬ್ ಅನ್ನು ಸರಿಯಾಗಿ ಧರಿಸದ ಕಾರಣ ಹಾಗೂ ಇಂತಹ ಪ್ರದೇಶಗಳಲ್ಲಿ ಲಿಂಗ ಮಿಶ್ರಣದ ಕಾರಣದಿಂದಾಗಿ ಈ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೆಸ್ಟೊರೆಂಟ್‌ಗಳಲ್ಲಿ ಊಟಕ್ಕೆ ನಿಷೇಧ ಹೆರಾತ್ ಪ್ರದೇಶದಲ್ಲಿ ಮಾತ್ರವೇ ಅನ್ವಯಿಸುತ್ತದೆ. ಇಂತಹ ಆವರಣಗಳು ಪರುಷರಿಗೆ ತೆರೆದಿರುತ್ತದೆ ಎಂದು ವರದಿಗಳು ತಿಳಿಸಿವೆ.

    ಈ ಹಿಂದೆ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಪುರುಷರು ಹಾಗೂ ಮಹಿಳೆಯರು ವಿವಿಧ ದಿನಗಳಲ್ಲಿ ಉದ್ಯಾನವನಕ್ಕೆ ಭೇಟಿ ನೀಡಬಹುದು ಎಂದು ತಿಳಿಸಿತ್ತು. ಇದರ ಪ್ರಕಾರ ಗುರುವಾರ, ಶುಕ್ರವಾರ ಮತ್ತು ಶನಿವಾರ ಉದ್ಯಾನವನಗಳಲ್ಲಿ ಮಹಿಳೆಯರಿಗೆ ಹೋಗಲು ಅವಕಾಶವಿದ್ದು, ಭಾನುವಾರ, ಸೋಮವಾರ, ಮಂಗಳವಾರ ಹಾಗೂ ಬುಧವಾರ ಪುರುಷರಿಗೆ ಮಾತ್ರವೇ ತೆರೆಯಲಾಗುತ್ತದೆ ಎಂದು ತಿಳಿಸಲಾಗಿತ್ತು. ಇದನ್ನೂ ಓದಿ: ಉದ್ಯೋಗಿಯಿಂದಲೇ ಬ್ಯಾಂಕ್‌ನಲ್ಲಿ ಗುಂಡಿನ ದಾಳಿ – 5 ಮಂದಿ ಸಾವು, 9 ಮಂದಿಗೆ ಗಾಯ

  • IPL 2023: ಮೋದಿ ಕ್ರೀಡಾಂಗಣದಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದ ರಶೀದ್‌ ಖಾನ್‌

    IPL 2023: ಮೋದಿ ಕ್ರೀಡಾಂಗಣದಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದ ರಶೀದ್‌ ಖಾನ್‌

    ಅಹಮದಾಬಾದ್‌: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ಭಾನುವಾರ ಕೋಲ್ಕತ್ತಾ ನೈಟ್‌ರೈಡರ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ (Gujarat Titans) ಹಾಗೂ ಅಫ್ಘಾನಿಸ್ತಾನದ ಸ್ಪಿನ್‌ ಮಾಂತ್ರಿಕ ರಶೀದ್‌ ಖಾನ್‌ (Rashid Khan) ಹ್ಯಾಟ್ರಿಕ್‌ ವಿಕೆಟ್‌ ಪಡೆದ ಸಾಧನೆ ಮಾಡಿದ್ದಾರೆ.

    ಕೆಕೆಆರ್‌ (KKR) ವಿರುದ್ಧ ನಡೆದ ಪಂದ್ಯದಲ್ಲಿ ತಂಡದ ಗೆಲುವಿಗೆ ಕೊನೆಯ 4 ಓವರ್‌ಗಳಲ್ಲಿ 50 ರನ್‌ಗಳ ಅಗತ್ಯವಿತ್ತು. ಈ ವೇಳೆ 17ನೇ ಓವರ್‌ನಲ್ಲಿ ಬೌಲಿಂಗ್‌ ಮಾಡಿದ ರಶೀದ್‌ ಖಾನ್‌ ಮೊದಲ ಎಸೆತದಲ್ಲೇ ಆ್ಯಂಡ್ರೆ ರಸ್ಸೆಲ್‌ (1 ರನ್‌) ವಿಕೆಟ್‌ ಪಡೆದರು. 2ನೇ ಎಸೆತದಲ್ಲಿ ಸುನೀಲ್‌ ನರೇನ್‌ ಅವರನ್ನ ಡಕೌಟ್‌ ಮಾಡಿದರು. 3ನೇ ಎಸೆತದಲ್ಲಿ ಶಾರ್ದೂಲ್‌ ಠಾಕೂರ್‌ ಅವರನ್ನ ಔಟ್‌ ಮಾಡುವ ಮೂಲಕ ರಶೀದ್ ಖಾನ್ ಹ್ಯಾಟ್ರಿಕ್ ಸಾಧನೆ ಮಾಡಿದರು. ಇದನ್ನೂ ಓದಿ: IPL 2023: ವಿರಾಟ್‌ ಕೊಹ್ಲಿ ಐಪಿಎಲ್‌ ದಾಖಲೆ ಉಡೀಸ್‌ ಮಾಡಿದ ವಾರ್ನರ್‌

    ಐಪಿಎಲ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಶೀದ್‌ ಖಾನ್‌ ಹ್ಯಾಟ್ರಿಕ್‌ ಪಡೆದಿದ್ದಾರೆ. ಈ ಮೂಲಕ ಹ್ಯಾಟ್ರಿಕ್‌ ಸಾಧನೆ ಮಾಡಿದ ಅಫ್ಘಾನಿಸ್ತಾನದ ಮೊದಲ ಬೌಲರ್ ಸಹ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: IPL 2023: ಕೊನೆಯ ಓವರ್‌ನಲ್ಲಿ 6, 6, 6, 6, 6 -‌ KKRಗೆ 3 ವಿಕೆಟ್‌ಗಳ ರೋಚಕ ಜಯ

    ಹ್ಯಾಟ್ರಿಕ್‌ ಪಡೆದ 22ನೇ ಆಟಗಾರ: ಐಪಿಎಲ್‌ನಲ್ಲಿ ರಶೀದ್‌ ಖಾನ್‌ ಹ್ಯಾಟ್ರಿಕ್‌ ವಿಕೆಟ್‌ ಪಡೆದ 18ನೇ ಬೌಲರ್‌ ಆಗಿದ್ದಾರೆ. ಅಲ್ಲದೇ ಇದು ಐಪಿಎಲ್‌ ಇತಿಹಾಸದಲ್ಲಿ 22ನೇ ಹ್ಯಾಟ್ರಿಕ್‌ ಆಗಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿದ್ದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಲಕ್ಷ್ಮಿಪತಿ ಬಾಲಾಜಿ ಐಪಿಎಲ್‌ ಉದ್ಘಾಟನಾ ಆವೃತ್ತಿಯಲ್ಲೇ ಕಿಂಗ್ಸ್‌ XI ಪಂಜಾಬ್‌ (ಇಂದಿನ ಕಿಂಗ್ಸ್‌ ಪಂಜಾಬ್‌ ತಂಡ) ವಿರುದ್ಧ ನಡೆದ ಪಂದ್ಯದಲ್ಲಿ ಹ್ಯಾಟ್ರಿಕ್‌ ಪಡೆದ ಮೊದಲಿಗನಾಗಿದ್ದಾರೆ.

  • ರಂಜಾನ್ ಸಂದರ್ಭ ಸಂಗೀತ ನಿಷೇಧ – ಅಫ್ಘಾನಿಸ್ತಾನದ ಮಹಿಳಾ ರೇಡಿಯೋ ಸ್ಟೇಷನ್ ಮುಚ್ಚಿದ ತಾಲಿಬಾನ್

    ರಂಜಾನ್ ಸಂದರ್ಭ ಸಂಗೀತ ನಿಷೇಧ – ಅಫ್ಘಾನಿಸ್ತಾನದ ಮಹಿಳಾ ರೇಡಿಯೋ ಸ್ಟೇಷನ್ ಮುಚ್ಚಿದ ತಾಲಿಬಾನ್

    ಕಾಬೂಲ್: ಇಸ್ಲಾಮಿಕ್ ಎಮಿರೇಟ್‌ನ ಕಾನೂನುಗಳು ಮತ್ತು ನಿಬಂಧನೆಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಅಫ್ಘಾನಿಸ್ತಾನದಲ್ಲಿ (Afghanistan) ಮಹಿಳಾ ಚಾಲಿತ ರೇಡಿಯೊ ಕೇಂದ್ರವನ್ನು (Radio Station) ಮುಚ್ಚಲಾಗಿದೆ.

    ವರದಿಗಳ ಪ್ರಕಾರ 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ರೇಡಿಯೊ ಸ್ಟೇಷನ್ ‘ಸದಾಯ್ ಬನೋವನ್’ ಮುಸ್ಲಿಮರ ಪವಿತ್ರ ರಂಜಾನ್ (Ramadan) ತಿಂಗಳಿನಲ್ಲಿ ಸಂಗೀತವನ್ನು ನುಡಿಸಿದೆ ಎಂದು ತಾಲಿಬಾನ್ (Taliban) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರೇಡಿಯೋ ಸ್ಟೇಷನ್‌ನಲ್ಲಿ 8 ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಅವರಲ್ಲಿ 6 ಮಂದಿ ಮಹಿಳೆಯರೇ ಇದ್ದಾರೆ ಎನ್ನಲಾಗಿದೆ.

    ಇತ್ತೀಚೆಗೆ ರಂಜಾನ್ ಸಮಯದಲ್ಲಿ ಸಂಗೀತಗಳನ್ನು ಪ್ರಸಾರ ಮಾಡುವ ಮೂಲಕ ರೇಡಿಯೋ ಸ್ಟೇಷನ್ ಇಸ್ಲಾಮಿಕ್ ಎಮಿರೇಟ್‌ನ ಕಾನೂನುಗಳು ಮತ್ತು ನಿಬಂಧನೆಗಳನ್ನು ಹಲವಾರು ಬಾರಿ ಉಲ್ಲಂಘಿಸಿದೆ. ಈ ಉಲ್ಲಂಘನೆಯ ಕಾರಣದಿಂದ ರೇಡಿಯೋ ಕೇಂದ್ರವನ್ನು ಮುಚ್ಚಲಾಗಿದೆ ಎಂದು ಬಡಾಕ್ಷನ್ ಪ್ರಾಂತ್ಯದ ಮಾಹಿತಿ ಮತ್ತು ಸಂಸ್ಕೃತಿಯ ನಿರ್ದೇಶಕ ಮೊಯೆಜುದ್ದೀನ್ ಅಹ್ಮದಿ ಹೇಳಿದ್ದಾರೆ. ಇದನ್ನೂ ಓದಿ: ಕಾರ್ಗಿಲ್ ಯುದ್ಧದ ಹೀರೋ ರಸ್ತೆ ಅಪಘಾತದಲ್ಲಿ ದುರ್ಮರಣ

    ಈ ರೇಡಿಯೋ ಸ್ಟೇಷನ್ ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನದ ನೀತಿಯನ್ನು ಒಪ್ಪಿಕೊಂಡರೆ ಮತ್ತು ಅಂತಹದನ್ನು ಮತ್ತೆ ಪುನರಾವರ್ತಿಸುವುದಿಲ್ಲ ಎಂಬುದನ್ನು ಖಚಿತಪಡಿಸಿದರೆ ನಾವು ಅದನ್ನು ಮತ್ತೆ ಕಾರ್ಯನಿರ್ವಹಿಸಲು ಅನುಮತಿಸುತ್ತೇವೆ ಎಂದು ಅಹ್ಮದಿ ತಿಳಿಸಿದ್ದಾರೆ.

    ಈ ನಡುವೆ ರೇಡಿಯೋ ಸ್ಟೇಷನ್‌ನ ಮುಖ್ಯಸ್ಥರು ಇಸ್ಲಾಮಿಕ್ ಕಾನೂನನ್ನು ಉಲ್ಲಂಘಿಸಿದ ಆರೋಪವನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ರೇಡಿಯೋ ಸ್ಟೇಷನ್ ಅನ್ನು ಮುಚ್ಚುವ ಅಗತ್ಯವೇ ಇರಲಿಲ್ಲ. ನಾವು ಸಂಗೀತವನ್ನು ಪ್ರಸಾರ ಮಾಡಿರುವುದಾಗಿ ತಾಲಿಬಾನ್ ಹೇಳಿದೆ. ಆದರೆ ನಾವು ಯಾವುದೇ ರೀತಿಯ ಸಂಗೀತವನ್ನು ಪ್ರಸಾರ ಮಾಡಿಲ್ಲ ಎಂದು ತಿಳಿಸಿದ್ದಾರೆ.

    ಅಫ್ಘಾನಿಸ್ತಾನವನ್ನು 2021ರಲ್ಲಿ ತಾಲಿಬಾನ್ ವಶಪಡಿಸಿಕೊಂಡ ಬಳಿಕ ಆರಂಭದಲ್ಲಿ ಮೃದುವಾಗಿಯೇ ಆಡಳಿತದ ಭರವಸೆಯನ್ನು ನೀಡಿತ್ತು. ಆದರೆ ಬಳಿಕ ನಿಧಾನವಾಗಿ ಮಹಿಳೆಯರ ಹಕ್ಕು ಹಾಗೂ ಸ್ವಾತಂತ್ರ್ಯಗಳನ್ನು ತಾಲಿಬಾನ್ ಕಸಿದುಕೊಳ್ಳಲು ಪ್ರಾರಂಭಿಸಿತು. ಇದಕ್ಕೆ ಉದಾಹರಣೆ ಎಂಬಂತೆ ಪಾರ್ಕ್, ಜಿಮ್ ಹಾಗೂ ಸರ್ವಜನಿಕ ಸ್ನಾನಗೃಹಗಳಿಂದ ಮಹಿಳೆಯರನ್ನು ನಿಷೇಧಿಸಲಾಯಿತು. ಇಷ್ಟು ಮಾತ್ರವಲ್ಲದೇ ಅಫ್ಘಾನಿಸ್ತಾನದಲ್ಲಿ ಮಹಿಳೆಯರನ್ನು ವಿಶ್ವವಿದ್ಯಾನಿಲಯಗಳಿಗೆ ಹೋಗುವುದನ್ನೂ ತಡೆಯಲಾಯಿತು. ಇದು ದೇಶದ ಯುವಜನರಲ್ಲಿ ಹಾಗೂ ಅಂತಾರಾಷ್ಟ್ರೀಯವಾಗಿ ಖಂಡನೆಗೆ ಗುರಿಯಾಯಿತು. ಇದನ್ನೂ ಓದಿ: Naxals killed: ಜಾರ್ಖಂಡ್‌ನಲ್ಲಿ ಎನ್‌ಕೌಂಟರ್‌ಗೆ 5 ನಕ್ಸಲರು ಬಲಿ

  • ದೆಹಲಿಯಲ್ಲಿ ಪ್ರಬಲ ಭೂಕಂಪನ – ಬೆಚ್ಚಿ ಮನೆಯಿಂದಾಚೆ ಓಡಿಬಂದ ಜನ

    ದೆಹಲಿಯಲ್ಲಿ ಪ್ರಬಲ ಭೂಕಂಪನ – ಬೆಚ್ಚಿ ಮನೆಯಿಂದಾಚೆ ಓಡಿಬಂದ ಜನ

    ನವದೆಹಲಿ: ಅಫ್ಘಾನಿಸ್ತಾನದಲ್ಲಿ ಮಂಗಳವಾರ ಸಂಜೆ ಪ್ರಬಲ ಭೂಮಿ ಕಂಪಿಸಿದ ನಂತರ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಹಲವಾರು ಸೆಕೆಂಡುಗಳ ಕಾಲ ಪ್ರಬಲವಾದ ಕಂಪನ ಉಂಟಾಗಿದೆ.

    ರಿಕ್ಟರ್ ಮಾಪಕದಲ್ಲಿ 6.6 ತೀವ್ರತೆ ದಾಖಲಾಗಿದೆ. ಉತ್ತರ ಭಾರತದ ಹಲವು ಭಾಗಗಳಲ್ಲಿ ಭೂಕಂಪನ ಉಂಟಾಗಿದೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್, ರಜೌರಿ ಸೇರಿದಂತೆ ಎಲ್ಲ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ದೇಶದ ರಾಜಧಾನಿ ದೆಹಲಿಯಕಲ್ಲೂ ಭೂಮಿ ಕಂಪಿಸಿದೆ. ಪಂಜಾಬ್, ಚಂಡೀಗಢ, ಉತ್ತರಾಖಂಡದಲ್ಲಿ ಭೂಮಿ ಕಂಪಿಸಿದ ಅನುಭವವಾಗುತ್ತಿದ್ದಂತೆ ಜನರು ತಮ್ಮ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.

    ದೆಹಲಿಯಲ್ಲಿ ಸುಮಾರು 136 ಕಿ.ಮೀ ಆಳದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಅಫ್ಘಾನಿಸ್ತಾನದ ಫಯಜಾಬಾದ್ ಭೂಕಂಪದ ಕೇಂದ್ರ ಬಿಂದುವಾಗಿದೆ. ಸದ್ಯ ಭೂಕಂಪನದ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ಜನ ಬೀದಿಗಳಲ್ಲಿ ಜಮಾಯಿಸಿರುವುದನ್ನು ಕಾಣಬಹುದಾಗಿದೆ. ಈ ಬಗ್ಗೆ ಜನ ಕೂಡ ಪ್ರತಿಕ್ರಿಯೆ ನಿಡಿದ್ದು, ಭೂಕಂಪನದಿಂದ ಮನೆಗಳಲ್ಲಿದ್ದ ವಸ್ತುಗಳು ಬಿದ್ದಿರುವುದಾಗಿ ತಿಳಿಸಿದ್ದಾರೆ.

    ವರದಿಗಳ ಪ್ರಕಾರ, ಭಾರತ ಮಾತ್ರವಲ್ಲದೇ ತುರ್ಕಮೆನಿಸ್ತಾನ್, ಕಜಕಿಸ್ತಾನ್, ಪಾಕಿಸ್ತಾನ, ತಜಕಿಸ್ತಾನ್, ಉಜ್ಬೇಕಿಸ್ತಾನ್, ಚೀನಾ, ಅಫ್ಘಾನಿಸ್ತಾನ್ ಮತ್ತು ಕಿರ್ಗಿಸ್ತಾನ್ ಸೇರಿದಂತೆ ಹಲವು ದೇಶಗಳಲ್ಲಿ  ಭೂಕಂಪನ ಸಂಭವಿಸಿದೆ ಎಂಬುದು ತಿಳಿದುಬಂದಿದೆ.

  • ತಾಲಿಬಾನ್‌ನಿಂದ ISIS ಉಗ್ರನ ಹತ್ಯೆ

    ತಾಲಿಬಾನ್‌ನಿಂದ ISIS ಉಗ್ರನ ಹತ್ಯೆ

    ಕಾಬೂಲ್: ಅಫ್ಘಾನಿಸ್ತಾನದ (Afghanistan) ರಾಜಧಾನಿಯಲ್ಲಿ ರಾಜತಾಂತ್ರಿಕರ ಹತ್ಯೆಗೆ ಮುಂದಾಗಿದ್ದ ಐಸಿಸ್‌ ಉಗ್ರನನ್ನು (ISIS Terrorist) ತಾಲಿಬಾನ್‌ (Taliban) ಪಡೆ ಹತ್ಯೆ ಮಾಡಿದೆ.

    ತಾಲಿಬಾನ್‌ ಪಡೆಗಳು ಕಾರ್ಯಾಚರಣೆ ನಡೆಸಿ ಐಸಿಸ್‌ನ ಗುಪ್ತಚರ ಮತ್ತು ಕಾರ್ಯಾಚರಣೆ ಮುಖ್ಯಸ್ಥ ಕ್ವಾರಿ ಫತೇಹ್‌ನನ್ನು ಹತ್ಯೆ ಮಾಡಿದೆ ಎಂದು ತಾಲಿಬಾನ್‌ ಸರ್ಕಾರದ ವಕ್ತಾರ ಜಬಿವುಲ್ಲಾ ಮುಜಾಹಿದ್‌ ತಿಳಿಸಿದ್ದಾರೆ. ಇದನ್ನೂ ಓದಿ: ಬಸ್ ನಿಲ್ದಾಣಕ್ಕೆ ಕಾರು ಡಿಕ್ಕಿ – ಭಾರತೀಯ ಮೂಲದ ವಿದ್ಯಾರ್ಥಿನಿ ಸಾವು

    ರಾಜತಾಂತ್ರಿಕರು, ಮಸೀದಿಗಳ ಮೇಲಿನ ದಾಳಿಗೆ ಕಾಬೂಲ್‌ನಲ್ಲಿ ಫತೇಹ್ ಸಂಚು ರೂಪಿಸಿದ್ದ. ಈ ಸಂಬಂಧದ ಕಾರ್ಯಾಚರಣೆಗಳ ಮಾಸ್ಟರ್‌ ಮೈಂಡ್‌ ಈತನೇ ಆಗಿದ್ದ ಎಂದು ಮುಜಾಹಿದ್‌ ಹೇಳಿದ್ದಾರೆ.

    ತಾಲಿಬಾನ್ ಆಡಳಿತಕ್ಕೆ ಐಸಿಎಸ್‌ ಅತಿದೊಡ್ಡ ಭದ್ರತಾ ಸವಾಲಾಗಿದೆ. ವಿದೇಶಿಯರು, ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಸರ್ಕಾರಿ ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತಿದೆ. ಎರಡೂ ಗುಂಪುಗಳು ಕಠಿಣವಾದ ಸುನ್ನಿ ಇಸ್ಲಾಮಿಸ್ಟ್ ಸಿದ್ಧಾಂತವನ್ನು ಪ್ರತಿಪಾದಿಸುತ್ತವೆ. ಇದನ್ನೂ ಓದಿ: ಹೆಚ್ಚುತ್ತಿರುವ ತಾಪಮಾನ, ಮಾರ್ಚ್‌ನಿಂದ ಮೇವರೆಗೂ ಹೈ ಅಲರ್ಟ್ 

    ಈ ಹಿಂದೆ ಕಾಬೂಲ್‌ನ ಅನೇಕ ಕಡೆಗಳಲ್ಲಿ ಐಸಿಸ್‌ ದಾಳಿಗಳನ್ನು ನಡೆಸಿದೆ. ದಾಳಿಯಲ್ಲಿ ನೂರಾರು ಮಂದಿ ಸಾವಿಗೀಡಾಗಿದ್ದಾರೆ. ಆತ್ಮಾಹುತಿ ದಾಳಿಗಳ ವಿಚಾರವಾಗಿ ಐಸಿಸ್‌ ವಿರುದ್ಧ ತಾಲಿಬಾನ್‌ ನಿರಂತರವಾಗಿ ಆರೋಪಗಳನ್ನು ಮಾಡುತ್ತಿದೆ.