ಕಾಬೂಲ್: ಮಹಿಳೆಯರಿಗೆ (Woman) ಅಮ್ಯೂಸ್‍ಮೆಂಟ್ ಪಾರ್ಕ್‍ಗಳಿಗೆ (Amusement Park) ಹಾಗೂ ಜಿಮ್‌ಗಳಿಗೆ ತೆರಳಲು ಅವಕಾಶವಿಲ್ಲ ಎಂದು ಅಫ್ಘಾನಿಸ್ತಾನದ (Afghan) ತಾಲಿಬಾನ್ ಸರ್ಕಾರ ತಿಳಿಸಿದೆ.
ಸದ್ಗುಣ ಮತ್ತು ಪ್ರಿವೈನ್ಶನ್ ಆಫ್ ವೈಸ್ (ಎಂಪಿವಿಪಿವಿ) ಪ್ರಚಾರ ಸಚಿವಾಲಯದ ವಕ್ತಾರರು ಈ ಸೂಚನೆಯನ್ನು ಹೊರಡಿಸಿದ್ದಾರೆ. ಮಹಿಳೆಯರಿಗೆ ಕಾಬೂಲ್‌ನ (Kabul) ಅಮ್ಯೂಸ್‍ಮೆಂಟ್ ಪಾರ್ಕ್‍ಗಳಿಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಹಾಗೂ ಜಿಮ್‌ಗಳಿಗೂ ಪ್ರವೇಶಿಸದಂತೆ ಮಹಿಳೆಯರಿಗೆ ನಿಷೇಧ ಹೇರಲಾಗಿದೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಬೂಲ್‍ನ ಅಮ್ಯೂಸ್‍ಮೆಂಟ್ ಪಾರ್ಕ್‍ನಲ್ಲಿ ಹಲವಾರು ಮಹಿಳೆಯರು ಪಾರ್ಕ್ ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಷ್ಟೇ ಅಲ್ಲದೇ ಕೆಲವರು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಚಿಕಿತ್ಸೆ, ಮಹಿಳಾ ರೋಗಿಯನ್ನು ಥಳಿಸಿದ ಡಾಕ್ಟರ್
ಕಳೆದ ವರ್ಷ ಆಗಸ್ಟ್‌ನಲ್ಲಿ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಅಲ್ಲಿನ ಮಹಿಳೆಯರ ಚಲನೆ, ವಾಕ್, ಅಭಿವ್ಯಕ್ತಿ, ಕೆಲಸದ ಅವಕಾಶಗಳು ಹಾಗೂ ಉಡುಪಿನ ಸ್ವಾತಂತ್ರ್ಯದ ಮೇಲೆ ತೀವ್ರ ನಿರ್ಬಂಧಗಳನ್ನು ಹಾಕಿದೆ. ಇದನ್ನೂ ಓದಿ:ಪತ್ನಿಯನ್ನು ಕೊಚ್ಚಿ ಕೊಂದು ಮನೆಗೆ ಬೀಗ ಹಾಕಿ ಪರಾರಿಯಾದ ಪಾಪಿ ಪತಿ
Live Tv
[brid partner=56869869 player=32851 video=960834 autoplay=true]
ಬರ್ಲಿನ್: ತಾಲಿಬಾನ್ ಸರ್ಕಾರ ಅಫ್ಘಾನ್‍ನಲ್ಲಿರುವ ಮಹಿಳೆಯರ ಮೇಲೆ ನಿರ್ಬಂಧಗಳನ್ನು ಹೆಚ್ಚು ವಿಧಿಸುತ್ತಿರುವುದನ್ನು ಏಳು ಕೈಗಾರಿಕೀಕರಣಗೊಂಡ ರಾಷ್ಟ್ರಗಳು(G7) ಖಂಡಿಸಿದೆ.
ಮಹಿಳೆಯರು ಮತ್ತು ಹುಡುಗಿಯರ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲು ತುರ್ತಾಗಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ತಾಲಿಬಾನ್‍ಗೆ ಕರೆ ನೀಡುತ್ತೇವೆ ಎಂದು ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್ ಮತ್ತು ಯುನೈಟೆಡ್ ಸ್ಟೇಟ್ಸ್‍ನ ವಿದೇಶಾಂಗ ಮಂತ್ರಿಗಳು ಗುರುವಾರ ತಿಳಿಸಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮಿರದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ಮುಂದುವರಿಯುತ್ತಿದೆ: ಒಮರ್ ಅಬ್ದುಲ್ಲಾ
ಸಮಾಜದಲ್ಲಿ ಸಂಪೂರ್ಣವಾಗಿ, ಸಮಾನವಾಗಿ ಭಾಗವಹಿಸಲು ಎಲ್ಲರಿಗೂ ಅವಕಾಶವಿದೆ. ಆ ಹಕ್ಕು ಮತ್ತು ಸಾಮರ್ಥ್ಯವನ್ನು ತೀವ್ರವಾಗಿ ಮಿತಿಗೊಳಿಸುವುದು ಮತ್ತು ನಿರ್ಬಂಧಿತ ಕ್ರಮಗಳನ್ನು ಹೇರುವುದನ್ನು ನಾವು ಖಂಡಿಸುತ್ತೇವೆ. ಮಹಿಳೆಯರು ಮತ್ತು ಹುಡುಗಿಯರ ಹಕ್ಕುಗಳನ್ನು ನಿರ್ಬಂಧಿಸುವ ಮೂಲಕ, ತಾಲಿಬಾನ್ ಅಂತರರಾಷ್ಟ್ರೀಯ ಸಮುದಾಯದಿಂದ ತಮ್ಮನ್ನು ಮತ್ತಷ್ಟು ಪ್ರತ್ಯೇಕಿಸಿಕೊಳ್ಳುತ್ತಿದೆ ಎಂದು ವಿರೋಧ ವ್ಯಕ್ತಪಡಿಸಿದರು.
1996 ರಿಂದ 2001 ರ ಸಮಯದಲ್ಲಿ ತಾಲಿಬಾನ್ ಮಾನವ ಹಕ್ಕುಗಳನ್ನು ಉಲ್ಲಂಘಿಸಿ ಹಲವು ಕೃತ್ಯಗಳನ್ನು ಮಾಡಿತ್ತು. ಆದರೆ ಕಳೆದ ವರ್ಷ ತಾಲಿಬಾನ್ ಮತ್ತೆ ಅಧಿಕಾರವನ್ನು ವಶಪಡಿಸಿಕೊಳ್ಳಬೇಕಾದರೆ ನಾವು ಮಾನವ ಹಕ್ಕುಗಳನ್ನು ಯಾವುದೇ ಕಾರಣಕ್ಕೂ ಉಲ್ಲಂಘಿಸುವುದಿಲ್ಲ. ಶಾಂತಿಯಿಂದ ಆಡಳಿತ ನಡೆಸುತ್ತೇವೆ ಎಂದು ಭರವಸೆಯನ್ನು ಕೊಟ್ಟಿತ್ತು. ಇದನ್ನೂ ಓದಿ: ನಡು ರಸ್ತೆಯಲ್ಲಿ ಉಪನ್ಯಾಸಕನ ಬರ್ಬರ ಹತ್ಯೆ
ಆದರೂ ಸಹ ತಾಲಿಬಾನ್ ಅಫ್ಘನ್ ಪ್ರಜೆಗಳ ಹಕ್ಕುಗಳನ್ನು ಹೆಚ್ಚು ನಿರ್ಬಂಧಿಸಿದೆ. ಅದರಲ್ಲಿಯೂ ವಿಶೇಷವಾಗಿ ಹುಡುಗಿಯರು ಮತ್ತು ಮಹಿಳೆಯರು ಮಾಧ್ಯಮಿಕ ಶಾಲೆಗಳಿಗೆ ಮತ್ತು ಅನೇಕ ಸರ್ಕಾರಿ ಉದ್ಯೋಗಗಳಿಗೆ ಬರುವುದನ್ನು ತಡೆಯಲಾಗಿದೆ. ಈ ಹಿನ್ನೆಲೆ G7 ರಾಷ್ಟ್ರ ತಾಲಿಬಾನ್ ಸರ್ಕಾರದ ನಡವಳಿಕೆಯನ್ನು ತೀವ್ರವಾಗಿ ಖಂಡಿಸುತ್ತಿದೆ.
ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನಿಗಳು ತಮ್ಮ ವಿಕೃತ ಕಾನೂನುಗಳ ಮೂಲಕ ಜನರನ್ನು ಭಯಭೀತಗೊಳಿಸುವ ಜೊತೆಗೆ ಕಿರುಕುಳ ನೀಡುತ್ತಿರುವ ವಿಷಯ ಹೊಸತೇನು ಅಲ್ಲ. ಇದೀಗ ಕೇಶ ವಿನ್ಯಾಸಕ್ಕೂ ನಿಷೇಧ ಹೇರಿರುವುದು ಸುದ್ದಿಯಾಗುತ್ತಿದೆ.
ಪುರುಷರ ಕೇಶ ವಿನ್ಯಾಸ ಮೇಲೂ ನಿಷೇಧ ಹೇರಿರುವುದಾಗಿ ಘೋಷಿಸಿದೆ. ದಕ್ಷಿಣ ಅಫ್ಘಾನಿಸ್ತಾನದ ಹೆಲ್ಮಂಡ್ ಪ್ರಾಂತ್ಯದಲ್ಲಿ ಪುರುಷರು ಸ್ಟೈಲಿಷ್ ಕೇಶ ವಿನ್ಯಾಸ, ಕ್ಲೀನ್ ಶೇವ್ ಮಾಡಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಇದನ್ನೂ ಓದಿ: ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ
ಸ್ಲಾಮಿಕ್ ಓರಿಯಂಟೇಶನ್ ಸಚಿವಾಲಯದ ಅಧಿಕಾರಿಗಳು, ಪ್ರಾಂತೀಯ ರಾಜಧಾನಿ ಲಷ್ಕರ್ ಗಾಹ್‍ನಲ್ಲಿರುವ ಪುರುಷರ ಸಲೂನ್‍ಗಳ ಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ, ಸ್ಟೈಲಿಷ್ ಕೇಶ ವಿನ್ಯಾಸ, ಸಂಪೂರ್ಣ ದಾಡಿ ತೆಗೆಯುವುದು ಹಾಗೂ ಟ್ರಿಮ್ ಮಾಡಬಾರದು ಎಂದು ಸೂಚಿಸಿದೆ. ಇದನ್ನೂ ಓದಿ: ಹೋಟೆಲ್‍ನಲ್ಲಿ ಲಂಚ ಸ್ವೀಕರಿಸುತ್ತಿದ್ದ ಇನ್ಸ್ಪೆಕ್ಟರ್ ಎಸಿಬಿ ಬಲೆಗೆ!
ಕ್ಷೌರದ ಅಂಗಡಿಗಳಲ್ಲಿ ಜನಪ್ರಿಯ ಸಂಗೀತ ಇಲ್ಲವೇ ಶ್ಲೋಕಗಳನ್ನು ಬಳಸಬಾರದು ಎಂದು ಸಹ ತಾಲಿಬಾನ್ ಆದೇಶಿಸಿದೆ. ಪ್ರಸ್ತುತ ತಾಲಿಬಾನ್ ಆಡಳಿತದಲ್ಲಿ ಅನುಸರಿಸುತ್ತಿರುವ ದಮನಕಾರಿ ಕಾನೂನು ನೋಡಿದರೆ ಮತ್ತೆ ಹಳೆಯ ನೀತಿಗಳಿಗೆ ಮರಳುತ್ತಿವೆ. ನಾವು ಬದಲಾಗಿದ್ದೇವೆ ಎಂದು ಹೇಳುತ್ತಲೇ ತಮ್ಮ ಹಳೆಯ ಧೋರಣೆಯನ್ನು ಪಾಲಿಸುತ್ತಾ ತಾಲಿಬಾನ್, ಅಫ್ಘಾನಿಸ್ತಾನದಲ್ಲಿ ದೊಡ್ಡ ಪ್ರಮಾಣದ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಮುಂದುವರಿಸಿದೆ. ಈ ಗುಂಪು ಇತ್ತೀಚೆಗೆ ಪಶ್ಚಿಮ ಹೆರಾತ್ ನಗರದಲ್ಲಿ ಅಪಹರಿಸಲು ಯತ್ನಿಸಿದ ನಾಲ್ವರ ಹತ್ಯೆ ನಡೆಸಿ ಅವರ ಮೃತ ದೇಹಗಳನ್ನು ಬಹಿರಂಗ ಸ್ಥಳದಲ್ಲಿ ಪ್ರದರ್ಶಿಸಿತ್ತು.
ಕಾಬೂಲ್: ತಾಲಿಬಾನ್ ಉಗ್ರರಿಂದ ತಪ್ಪಿಸಿಕೊಂಡು ಅಫ್ಘಾನಿಸ್ತಾನವನ್ನು ತೊರತೆದು ಅನೇಕರು ಬೇರೆಕಡೆ ಪ್ರಯಾಣವನ್ನು ಬೆಳೆಸುತ್ತಿದ್ದಾರೆ. ಫಿಲ್ಮ್ ಮೇಕರ್ ಹಾಗೂ ಫೋಟೋ ಜರ್ನಲಿಸ್ಟ್ ರೋಯಾ ಹೈದರಿ ಅಪ್ಘಾನಿಸ್ತಾನ ತೊರೆದು ಫ್ರಾನ್ಸ್ ಸೇರಿದ್ದಾರೆ. ಅವರು ಭಾವನಾತ್ಮಕ ಪತ್ರವನ್ನು ಬರೆದುಕೊಂಡಿದ್ದಾರೆ.
ವಿಮಾನ ನಿಲ್ದಾಣದಲ್ಲಿ ನಿಂತಿರುವ ಫೋಟೋ ಹಾಕಿರುವ ಅವರು ಮತ್ತೊಮ್ಮೆ ನಾನು ನನ್ನ ತಾಯ್ನಾಡಿನಿಂದ ಓಡುತ್ತಿದ್ದೇನೆ. ಮತ್ತೊಮ್ಮೆ ನನ್ನ ಜೀವನವನ್ನು ನಾನು ಶೂನ್ಯದಿಂದ ಪ್ರಾರಂಭಿಸಲಿದ್ದೇನೆ. ನಾನು ನನ್ನ ಕ್ಯಾಮೆರಾಗಳನ್ನು ಮತ್ತು ಮೃತಪಟ್ಟ ಆತ್ಮವನ್ನು ನನ್ನೊಂದಿಗೆ ಸಾಗರದಾಚೆ ತೆಗೆದುಕೊಂಡು ಹೋಗುತ್ತಿದ್ದೇನೆ. ನಾವು ಮತ್ತೆ ಭೇಟಿಯಾಗುವವರೆಗೂ ಭಾರವಾದ ಹೃದಯದಿಂದ ಮಾತೃಭೂಮಿಗೆ ವಿದಾಯ ಎಂದಿದ್ದಾರೆ. ಇದನ್ನೂ ಓದಿ: ನಟ ಚಿರಂಜೀವಿ ಭೇಟಿಗಾಗಿ 600 ಕಿ.ಮೀ ಸೈಕಲ್ ತುಳಿದ ಅಭಿಮಾನಿ
I left my whole life, my home in order to continue to have a voice. Once again,I am running from my motherland. Once again, I am going to start from zero.
I took only my cameras and a dead soul with me across an ocean. With a heavy heart, goodbye motherland.
Until we meet again pic.twitter.com/MI3H8lQ5e4
ಸಾವು ಒಮ್ಮೆ ಮಾತ್ರ ಬರುತ್ತದೆ. ಅವರು ನನ್ನನ್ನು ಕೊಂದರೆ ನಾನು ಹೆದರುವುದಿಲ್ಲ. ಆದರೆ ನನ್ನನ್ನು ಜೈಲಿನಲ್ಲಿ ಹಾಕಿಟ್ಟರೆ ನನ್ನ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎನ್ನುವ ಭಯವಷ್ಟೇ. ಅಪ್ಘಾನಿಸ್ತಾನದ ಪ್ರಾಂತ್ಯಗಳು ತಾಲೀಬಾನಿಗಳ ವಶವಾಗಿದೆ. ಸಾಕಷ್ಟು ಜನರು ಹತ್ಯೆಗೊಳಗಾಗಿದ್ದಾರೆ. ಹೆಣ್ಣು ಮಕ್ಕಳನ್ನು ಕಂಡ ಕಂಡಲ್ಲಿ ಅತ್ಯಾಚಾರ ಮಾಡಲಾಗುತ್ತಿದೆ. ಅನೇಕ ಶಾಲೆಗಳು ನೆಲಸಮಗೊಂಡಿವೆ. ಈಗ ಅಪ್ಘಾನಿಸ್ತಾನದ ನಿರ್ದೇಶಕಿ ಸಹ್ರಾ ಕರೀಮಿ ಸಾಮಾಜಿಕ ಜಾಲತಾಣದಲ್ಲಿ ಪತ್ರವೊಂದನ್ನು ಬರೆದುಕೊಂಡು ಸಹಾಯ ಕೇಳಿದ್ದರು. ಚಲನಚಿತ್ರ ನಿರ್ಮಾತೃರರನ್ನು ತಾಲೀಬಾನ್‍ನಿಂದ ರಕ್ಷಿಸಬೇಕು ಎಂದು ನಾನು ನೋವಿನಿಂದ ಕೇಳಿಕೊಳ್ಳುತ್ತಿದ್ದೇನೆ. ಕಳೆದ ಕೆಲವು ವಾರಗಳಲ್ಲಿ ಹಲವು ಪ್ರಾಂತ್ಯಗಳ ಮೇಲೆ ತಾಲಿಬಾನ್ ಉಗ್ರರು ನಿಯಂತ್ರಣ ಸಾಧಿಸಿದ್ದಾರೆ. ಅವರು ಇಲ್ಲಿ ಹತ್ಯಾಕಾಂಡ ಮಾಡುತ್ತಿದ್ದಾರೆ. ಅನೇಕ ಮಕ್ಕಳನ್ನು ಅವರು ಅಪಹರಿಸಿದ್ದಾರೆ. ಹುಡುಗಿಯರನ್ನು ಮಾರಿದ್ದಾರೆ ಎಂದು ಅವರು ಬರೆದುಕೊಂಡಿದ್ದರು.
I will never stay quiet. This pain I’m having in my chest is only making me stronger. My art is stronger than this war. My people are stronger than these cowards.
ಅಪ್ಘಾನಿಸ್ತಾನ ಸಂಪೂರ್ಣವಾಗಿ ತಾಲಿಬಾನಿಗಳ ಕಪಿಮುಷ್ಟಿ ಸೇರಿದೆ. ಈ ಕಾರಣಕ್ಕೆ ಅನೇಕರು ದೇಶಬಿಟ್ಟು ತೆರಳುತ್ತಿದ್ದಾರೆ. ಈ ಮಧ್ಯೆ ತಾಲಿಬಾನಿಗಳು ಸಿನಿಮಾ ನಿರ್ಮಾಣದ ಮೇಲೆ ತಾಲಿಬಾನಿಗಳು ನಿಬರ್ಂಧ ಹೇರಿದ್ದಾರೆ. ಹೀಗಾಗಿ ಅಲ್ಲಿನ ಸಿನಿಮಾ ನಿರ್ಮಾತೃರರು ದೇಶ ಬಿಟ್ಟು ತೊರೆಯುತ್ತಿದ್ದಾರೆ.
ಕಾಬೂಲ್: ಅಫ್ಘಾನ್ ನಾಗರಿಕರು ದೇಶ ಬಿಟ್ಟು ತೆರಳದಂತೆ ತಾಲಿಬಾನ್ ಉಗ್ರರು ಕಟ್ಟಪ್ಪಣೆ ಹೊರಡಿಸಿದ್ದಾರೆ. ಈನಿಟ್ಟಿನಲ್ಲಿ ಕಾಬೂಲ್ ವಿಮಾನ ನಿಲ್ದಾಣಕ್ಕೆ ಹೋಗದಂತೆ ತಡೆಯೊಡ್ಡುತ್ತಿರುವುದರಿಂದ ಅಫ್ಘಾನ್ ನಾಗರಿಕರು ಕಂಗಾಲಾಗಿದ್ದಾರೆ.
ಕಾಬೂಲ್ ವಿಮಾನ ನಿಲ್ದಾಣದಿಂದ ವಿದೇಶಿ ಪ್ರಜೆಗಳು ತೆರಳಬಹುದಾಗಿದೆ ಎಂದು ತಾಲಿಬಾನ್ ಉಗ್ರ ಸಂಘಟನೆಯ ವಕ್ತಾರ ಜಬೀವುಲ್ಲಾ ಮಜಾಹಿದ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದು, ಅಫ್ಘಾನಿಸ್ತಾನ್ ಪ್ರಜೆಗಳು ದೇಶ ಬಿಟ್ಟು ತೆರಳದಂತೆ ತಡೆಯೊಡ್ಡಲು ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಆದರೆ ವಿದೇಶಿ ಪ್ರಜೆಗಳು ಈ ರಸ್ತೆಯಲ್ಲಿ ತೆರಳಬಹುದಾಗಿದೆ. ಇದನ್ನೂ ಓದಿ: ಅಘ್ಘಾನ್ ಪ್ರಜೆಗಳಲ್ಲಿ ಇ-ವೀಸಾವಿದ್ದರೆ ಮಾತ್ರ ಭಾರತ ಪ್ರವೇಶ
ಈಗಾಗಲೇ ಅಮೆರಿಕ ಘೋಷಿಸಿರುವಂತೆ ಅಗಸ್ಟ್ 31ರೊಳಗೆ ಕಾಬೂಲ್ ವಿಮಾನ ನಿಲ್ದಾಣದಿಂದ ಜನರನ್ನು ಏರ್‍ಲಿಫ್ಟ್ ಮಾಡಬೇಕು. ಅಲ್ಲದೇ ಸೇನೆಯನ್ನು ಸಂಪೂರ್ಣವಾಗಿ ಹಿಂಪಡೆಯಬೇಕು. ಅಷ್ಟೇ ಅಲ್ಲದೆ ಅಂತಿಮ ಗಡುವನ್ನು ವಿಸ್ತರಿಸುವುದಿಲ್ಲ ಎಂದು ತಾಲಿಬಾನ್ ತಿಳಿಸಿದೆ.
ಅಗಸ್ಟ್ 31ರ ಬಳಿಕ ಜನರ ಸ್ಥಳಾಂತರಕ್ಕೆ ನಾವು ಅವಕಾಶ ನೀಡುವುದಿಲ್ಲ. ವೈದ್ಯರು, ತಂತ್ರಜ್ಞರು ದೇಶದಲ್ಲಿಯೇ ಇದ್ದು ತಮ್ಮ ಕೆಲಸವನ್ನು ಮುಂದುವರಿಸಬೇಕು ಎಂದು ತಾಲಿಬಾನ್ ಕಟ್ಟಪ್ಪಣೆ ಹೊರಡಿಸಿದೆ.
ನವದಹಲಿ: ಅಫ್ಘಾನಿಸ್ತಾನದಲ್ಲಿ ಪ್ರಸ್ತುತ ಅಭದ್ರತಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಇನ್ನು ಮುಂದೆ ಎಲ್ಲಾ ಅಘ್ಘಾನ್ ಪ್ರಜೆಗಳು ಇ-ವೀಸಾದೊಂದಿಗೆ ಮಾತ್ರ ಭಾರತಕ್ಕೆ ಪ್ರಯಾಣಿಸಬೇಕು ಎಂದು ಗೃಹ ವ್ಯವಹಾರಗಳ ಸಚಿವಾಲಯ ನಿರ್ಧರಿಸಿದೆ.
ಅಫ್ಘಾನಿಸ್ತಾನದಲ್ಲಿ ಪ್ರಸ್ತುತ ನೆಲೆಸಿರುವ ಅಭದ್ರತಾ ಪರಿಸ್ಥಿತಿ ಹಿನ್ನೆಲೆಯಲ್ಲಿ ಮತ್ತು ಇ-ತುರ್ತು ಎಕ್ಸ್-ಮಿಸಲೇನಿಯಸ್ ವೀಸಾ’ವನ್ನು ಪರಿಚಯಿಸುವ ಮೂಲಕ ವೀಸಾ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸಿರುವುದರಿಂದ, ಇನ್ನು ಮುಂದೆ ಎಲ್ಲಾ ಅಘ್ಘಾನ್ ಪ್ರಜೆಗಳು ಇ-ವೀಸಾದೊಂದಿಗೆ ಮಾತ್ರ ಭಾರತಕ್ಕೆ ಪ್ರಯಾಣಿಸಲು ಅವಕಾಶ ನೀಡಲು ಗೃಹ ಸಚಿವಾಲಯ ತಯಾರಿ ನಡೆಸಿದೆ. ಇದನ್ನೂ ಓದಿ: ತಾಲಿಬಾನಿಗಳು ಹುಡುಕುತ್ತಾ ನನ್ನ ಮನೆಗೆ ಬಂದ್ರು: ಅಫ್ಘಾನಿಸ್ತಾನದ ಮೊದಲ ಮಹಿಳಾ ಮೇಯರ್
Owing to prevailing security situation in Afghanistan all Afghan nationals henceforth must travel to India only on e-Visa
— PIB – Ministry of Home Affairs (@PIBHomeAffairs) August 25, 2021
ಕೆಲವು ಅಘ್ಘಾನ್ ಪ್ರಜೆಗಳ ಪಾಸ್‌ಪೋರ್ಟ್ ಗಳು ಕಳೆದುಹೋಗಿವೆ ಎಂಬ ವರದಿಗಳನ್ನು ಗಮನದಲ್ಲಿಟ್ಟುಕೊಂಡು, ಪ್ರಸ್ತುತ ಭಾರತದಲ್ಲಿಲ್ಲದ ಎಲ್ಲಾ ಅಘ್ಘಾನ್ ಪ್ರಜೆಗಳಿಗೆ ಈ ಹಿಂದೆ ನೀಡಲಾಗಿದ್ದ ವೀಸಾಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನ್ಯಗೊಳಿಸಲಾಗಿದೆ. ಇನ್ನು ಮುಂದೆ ಭಾರತಕ್ಕೆ ಪ್ರಯಾಣಿಸಲು ಬಯಸುವ ಆಫ್ಘನ್ ಪ್ರಜೆಗಳು www.indianvisaonline.gov.in ಮೂಲಕ ಇ-ವೀಸಾಗೆ ಅರ್ಜಿ ಸಲ್ಲಿಸಬಹುದು ಎಂದು ಗೃಹ ಸಚಿವಾಲಯ ಆದೇಶ ಹೊರಡಿಸಿದೆ. ಇದನ್ನೂ ಓದಿ: ಜನರು ಕೊರೊನಾ ಜೊತೆ ಬದುಕೋದನ್ನ ಕಲಿತುಕೊಳ್ಳಬೇಕು: WHO ಡಾ. ಸೌಮ್ಯ ಸ್ವಾಮಿನಾಥನ್
ವಾಷಿಂಗ್ಟನ್: ತಾಲಿಬಾನಿಯರ ಕೈವಶವಾಗಿರುವ ಅಫ್ಘಾನಿಸ್ತಾನದ ಕಾಬೂಲ್‍ನಿಂದ ಜರ್ಮನಿಯ ರ್‍ಯಾಮ್‌ಸ್ಟೈನ್ ವಾಯುನೆಲೆಗೆ ಹಾರಿದ ವಾಯುಪಡೆಯ ಸಿ-17 ವಿಮಾನದಲ್ಲಿ ಅಫ್ಘಾನಿಸ್ತಾನದ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿರುವುದಾಗಿ ಅಮೆರಿಕ ಮಿಲಿಟರಿ ಮಾಹಿತಿ ನೀಡಿದೆ.
During a flight from an Intermediate Staging Base in the Middle East, the mother went into labor and began having complications. The aircraft commander decided to descend in altitude to increase air pressure in the aircraft, which helped stabilize and save the mother’s life.
ರ್‍ಯಾಮ್‌ಸ್ಟೈನ್ ವಾಯುನೆಲೆಯ ಸಹಕಾರದೊಂದಿಗೆ ಅಫ್ಘಾನಿಸ್ತಾನದಲ್ಲಿ ಸಿಲುಕಿರುವವರನ್ನು ರಕ್ಷಿಸುವ ವೇಳೆ ಈ ಘಟನೆಗೆ ಸಿ-17 ವಿಮಾನ ಸಾಕ್ಷಿಯಾಗಿದೆ. ಇದೇ ವಿಚಾರದ ಕುರಿತು ಟ್ವೀಟ್ ಮಾಡಿರುವ ಅಮೆರಿಕ ಮಿಲಿಟರಿಯ ಏರ್ ಮೊಬಿಲಿಟಿ ಕಮಾಂಡ್, ಕಾಬೂಲ್‍ನಿಂದ ಜರ್ಮನಿಗೆ ಹೊರಟಿದ್ದ ವಿಮಾನದಲ್ಲಿ ಶನಿವಾರದಂದು ಮಹಿಳಾ ಪ್ರಯಾಣಿಕರೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ ವಿಮಾನದಲ್ಲಿ ವಾಯು ಒತ್ತಡವನ್ನು ಮತ್ತಷ್ಟು ಹೆಚ್ಚು ಮಾಡುವ ಸಲುವಾಗಿ ವಿಮಾನ ಹಾರಾಟದ ಎತ್ತರವನ್ನು ಹೆಚ್ಚಿಸಲು ವಿಮಾನದ ಕಮಾಂಡರ್ ತೀರ್ಮಾನಿಸಿದ್ದರು. ಆ ರೀತಿ ಮಾಡುವುದರಿಂದ ಗರ್ಭಿಣಿಯ ದೇಹದ ಆರೋಗ್ಯದಲ್ಲಿ ಸ್ಥಿರತೆ ಕಾಪಾಡಿಕೊಳ್ಳುವುದು ಸಾಧ್ಯವಾಗುತ್ತದೆ ಹಾಗೂ ಜೀವಕ್ಕೆ ಅಪಾಯವಾಗದಂತೆ ನೋಡಿಕೊಳ್ಳಲು ಸಹಕಾರವಾಗುತ್ತದೆ ಎನ್ನುವುದು ಅವರಿಗೆ ತಿಳಿದಿತ್ತು ಎಂದು ಹೇಳಿದೆ. ಇದನ್ನೂ ಓದಿ: ನಮ್ಮಲ್ಲೂ ಅಯೋಗ್ಯ ಸ್ವಾಮೀಜಿಗಳು ಇದ್ದಾರೆ- ಯತ್ನಾಳ್ ಕಿಡಿ
Medical support personnel from the 86th Medical Group help an Afghan mother and family off a U.S. Air Force C-17, call sign Reach 828, moments after she delivered a child aboard the aircraft upon landing at Ramstein Air Base, Germany, Aug. 21. (cont..) pic.twitter.com/wqR9dFlW1o
Upon landing, Airmen from the 86th MDG came aboard and delivered the child in the cargo bay of the aircraft. The baby girl and mother were transported to a nearby medical facility and are in good condition.
ರ್‍ಯಾಮ್‌ಸ್ಟೈನ್ ವಾಯುನೆಲೆಗೆ ಬರುತ್ತಿದ್ದಂತೆಯೇ, ಅಮೆರಿಕದ ವೈದ್ಯಕೀಯ ಸಿಬ್ಬಂದಿ ಗರ್ಭಿಣಿಗೆ ವಿಮಾನದಲ್ಲೇ ಚಿಕಿತ್ಸೆ ಆರಂಭಿಸಿದರು. ಹೆರಿಗೆ ನೋವು ಅದಾಗಲೇ ಕಾಣಿಸಿಕೊಂಡಿತ್ತಾದ್ದರಿಂದ ಹೆರಿಗೆ ಮಾಡಿಸಲಾಯಿತ್ತು. ಅದೃಷ್ಟವಶಾತ್ ಯಾವುದೇ ತೊಂದರೆ ಇಲ್ಲದೇ ಹೆರಿಗೆ ಆಗಿದ್ದು, ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಕ್ಷಣವೇ ತಾಯಿ ಮತ್ತು ಮಗುವನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದ್ದು ಇದೀಗ ತಾಯಿ, ಮಗೂ ಇಬ್ಬರೂ ಆರೋಗ್ಯವಾಗಿದ್ದಾರೆ.
ನವದೆಹಲಿ: ಸಂಕಷ್ಟದ ಸಮಯ, ಗಡಿಗಳನ್ನು ಮುಕ್ತವಾಗಿಡಿ ಎಂದು ಅಫ್ಘಾನ್ ನೆರೆರಾಷ್ಟ್ರಗಳಿಗೆ ವಿಶ್ವಸಂಸ್ಥೆ ಕರೆ ನೀಡಿದೆ.
ಸದ್ಯ, ಅಪಾಯದಲ್ಲಿರುವವರಿಗೆ ಯಾವುದೇ ದಾರಿಯಿಲ್ಲ ಎಂದಿರುವ ವಿಶ್ವಸಂಸ್ಥೆಯ ನಿರಾಶ್ರಿತರ ಮಾನವ ವಕ್ತಾರ ಶಬಿಯಾ ಮಂಟೂ, ಅಫ್ಘಾನಿಸ್ತಾನದಲ್ಲಿ ಬೆಳೆಯುತ್ತಿರುವ ಪರಿಸ್ಥಿತಿಯಲ್ಲಿ ನಾಗರಿಕರು, ವಿಶೇಷವಾಗಿ ಮಹಿಳೆಯರು ಮತ್ತು ಹುಡುಗಿಯರ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆಯ ಅಪಾಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನಕ್ಕೆ ನಮ್ಮ ನೆರವು ಬೇಕಿದೆ: ಸೋನುಸೂದ್
ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಜನಸಂದಣಿ ಮತ್ತು ರನ್ ವೇನಲ್ಲಿ ವಿಮಾನಗಳಲ್ಲಿ ನೇತಾಡುತ್ತಿರುವ ವ್ಯಕ್ತಿಗಳ ವೀಡಿಯೋ ತುಣುಕನ್ನು ಪ್ರಸ್ತಾಪಿಸಿರುವ ಮಂಟೂ, ಅಫ್ಘಾನಿಸ್ತಾನ ತೊರೆಯಲು ಸಾಧ್ಯವಾಗದೆ ಉಳಿದಿರುವವರನ್ನು ಮರೆಯಲು ಸಾಧ್ಯವಿಲ್ಲ. ಈ ಸ್ಥಳಾಂತರಿಸುವಿಕೆಗಳು ಜೀವರಕ್ಷಕವಾಗಿವೆ, ಅವುಗಳು ನಿರ್ಣಾಯಕವಾಗಿವೆ, ಅವುಗಳು ಅಗತ್ಯವಿದೆ. ಇದಕ್ಕೆ ಅಂತಾರಾಷ್ಟ್ರೀಯ ಸಹಕಾರದ ಅಗತ್ಯವಿದೆ ಎಂದಿದ್ದಾರೆ.
ಈ ವರ್ಷದ ಆರಂಭದಿಂದಲೂ, ಯುಎನ್‍ಹೆಚ್‍ಸಿಆರ್ ದೇಶದ 230,000 ಜನರಿಗೆ ತುರ್ತು ಸಹಾಯ ಒದಗಿಸಿದೆ. ಇದರಲ್ಲಿ ನಗದು ನೆರವು, ನೈರ್ಮಲ್ಯ ಬೆಂಬಲ ಮತ್ತು ಇತರ ಪರಿಹಾರ ವಸ್ತುಗಳು ಸೇರಿವೆ. ಸ್ಥಳಾಂತರಗೊಂಡ ಸುಮಾರು ಅರ್ಧ ಮಿಲಿಯನ್ ಆಫ್ಘಾನ್ನರಿಗೆ ಅಗತ್ಯಗಳ ಮೌಲ್ಯಮಾಪನಗಳು ನಡೆಯುತ್ತಿವೆ. ಅವರಲ್ಲಿ 80ಪ್ರತಿಶತ ಮಹಿಳೆಯರು ಮತ್ತು ಮಕ್ಕಳು ಎಂದು ಯುಎನ್ ಸಂಸ್ಥೆ ಹೇಳಿದೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಶುರುವಾಗಿದೆ. ಕೆಲವೇ ದಿನಗಳಲ್ಲಿ ಅಧಿಕೃತ ಸರ್ಕಾರ ರಚನೆಯಾಗಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಇರುವುದಿಲ್ಲ ಎಂದಿರುವ ವಕ್ತಾರರು ಷರಿಯತ್ ಕಾನೂನಿನ ಅಡಿಯಲ್ಲಿ ಆಡಳಿತ ನಡೆಸುವುದಾಗಿ ಹೇಳಿದ್ದಾರೆ. 1996 ಮಾದರಿಯಲ್ಲಿ ಈಗ ತಾಲಿಬಾನ್ ಈಗ ಇರುವುದಿಲ್ಲ, ಷರಿಯತ್ ವ್ಯಾಪ್ತಿಯಲ್ಲಿ ಮಹಿಳೆಯರಿಗೂ ಸ್ವಾತಂತ್ರ್ಯ ನೀಡುವುದಾಗಿಯೂ ತಾಲಿಬಾನ್ ವಕ್ತಾರರು ಹೇಳಿದ್ದಾರೆ.
ಆದರೆ ಈ ಹೇಳಿಕೆ ನಡುವೆಯೇ ಅಫ್ಘಾನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯರನ್ನು ಕೆಲಸದಿಂದ ವಜಾ ಮಾಡಲಾಗುತ್ತಿದೆ. ಸರ್ಕಾರಿ ಸಾಮ್ಯದ ಸುದ್ದಿ ವಾಹಿನಿವೊಂದರ ಪ್ರಮುಖ ನಿರೂಪಕಿಯನ್ನೂ ಈಗ ಕೆಲಸದಿಂದ ತೆಗೆದು ಹಾಕಲಾಗಿದೆ. ಮಹಿಳೆಯರಿಗೆ ಸ್ವಾತಂತ್ರ್ಯ ನೀಡುವುದಾಗಿ ಹೇಳಿದ್ದ ತಾಲಿಬಾನ್ ಷರಿಯತ್ ಕಾನೂನು ಹೇಗೆ ಅರ್ಥೈಸಿ ಕೊಳ್ಳುತ್ತಿದೆ ಎನ್ನುವುದು ಇಲ್ಲಿಯವರೆಗೂ ಗೊಂದಲಮಯವಾಗಿದೆ. ಈ ಹಿನ್ನೆಲೆಯಲ್ಲಿ ಷರಿಯತ್ ಕಾನೂನು ಎಂದರೇನು? ಇದನ್ನು ಅಫ್ಘಾನ್ ನಲ್ಲಿ ತಾಲಿಬಾನ್ ಅರ್ಥೈಸಿಕೊಂಡಿದೆ. ಈ ಕಾನೂನಿನ ವ್ಯಾಪ್ತಿಯಲ್ಲಿ ಮಹಿಳೆಯರ ಭವಿಷ್ಯ ಹೇಗಿರಲಿದೆ ಎಂದು ನೋಡೋಣ.
ಷರಿಯಾ ಎಂದರೇನು?
ಷರಿಯತ್ ಅಥಾವ ಶರಿಯಾ ಖುರಾನ್, ಪ್ರವಾದಿ ಮುಹಮ್ಮದ್ ಅವರ ಜೀವನ ಕಥೆಗಳು ಮತ್ತು ಧಾರ್ಮಿಕ ವಿದ್ವಾಂಸರ ತೀರ್ಪುಗಳನ್ನು ಆಧರಿಸಿದೆ. ಇದು ಇಸ್ಲಾಂನ ನೈತಿಕ ಮತ್ತು ಕಾನೂನು ಚೌಕಟ್ಟನ್ನು ರೂಪಿಸುತ್ತದೆ. ಖುರಾನ್ ನೈತಿಕ ಜೀವನಕ್ಕೆ ಒಂದು ಮಾರ್ಗವನ್ನು ವಿವರಿಸುತ್ತದೆ, ಆದರೆ ಇಲ್ಲಿ ಒಂದು ನಿರ್ದಿಷ್ಟ ಕಾನೂನುಗಳಿಲ್ಲ. ಷರಿಯತ್‍ನ ಒಂದು ವ್ಯಾಖ್ಯಾನವು ಮಹಿಳೆಯರಿಗೆ ವ್ಯಾಪಕವಾದ ಹಕ್ಕುಗಳನ್ನು ನೀಡಬಲ್ಲದು, ಇನ್ನೊಂದು ಮಹಿಳೆಯರಿಗೆ ಕೆಲವು ಹಕ್ಕುಗಳನ್ನು ಮಾತ್ರ ನೀಡಬಹುದು. ಆದರೆ ತಾಲಿಬಾನ್ ಹೇರುವ ಕೆಲವು ನಿಯಮಗಳು ಷರಿಯತ್ ಕಾನೂನುಗಳನ್ನು ಮೀರಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಷರಿಯತ್ ನ ವ್ಯಾಖ್ಯಾನಗಳು ಮುಸ್ಲಿಂ ಪ್ರಪಂಚದಾದ್ಯಂತ ಚರ್ಚೆಯ ವಿಷಯವಾಗಿದೆ ಮತ್ತು ಎಲ್ಲಾ ಹಲವು ಸರ್ಕಾರಗಳು ತಮ್ಮ ಕಾನೂನು ವ್ಯವಸ್ಥೆಯನ್ನು ಷರಿಯಾದ ಮೇಲೆ ಆಧರಿಸಿವೆ. ತಾಲಿಬಾನ್ ಷರಿಯಾ ಕಾನೂನಿನ ಅಡಿಯಲ್ಲಿ ಸರ್ಕಾರ ಸ್ಥಾಪಿಸುತ್ತಿದ್ದಾರೆ ಎಂದರೆ ಅವರು ಇಸ್ಲಾಮಿಕ್ ವಿದ್ವಾಂಸರು ಅಥವಾ ಇತರ ಇಸ್ಲಾಮಿಕ್ ಅಧಿಕಾರಿಗಳು ಒಪ್ಪುವ ರೀತಿಯಲ್ಲಿ ಸರ್ಕಾರ ರಚನೆ ಮಾಡಲಿದ್ದಾರೆ ಎಂದು ಅರ್ಥವಲ್ಲ.
ಷರಿಯಾ ಏನು ಸೂಚಿಸುತ್ತದೆ?
ಕಳ್ಳತನ ಮತ್ತು ವ್ಯಭಿಚಾರದಂತಹ ಕೆಲವು ನಿರ್ದಿಷ್ಟ ಅಪರಾಧಗಳನ್ನು ಷರಿಯತ್ ಪಟ್ಟಿ ಮಾಡುತ್ತದೆ ಮತ್ತು ಆರೋಪಗಳ ಪರಿಸ್ಥಿತಿಯ ಮಾನದಂಡಗಳ ಆಧಾರದಲ್ಲಿ ಶಿಕ್ಷೆಗಳನ್ನು ವಿಧಿಸುತ್ತದೆ. ಅಲ್ಲದೇ ಇದು ಯಾವಾಗ ಮತ್ತು ಹೇಗೆ ಪ್ರಾರ್ಥನೆ ಮಾಡಬೇಕು, ಮದುವೆ ಅಥಾವ ವಿಚ್ಛೇದನ ಹೇಗೆ ಮಾಡಬೇಕು ಎನ್ನುವುದನ್ನು ನೈತಿಕ ನೆಲೆಗಟ್ಟಿನಲ್ಲಿ ಆಧ್ಯಾತ್ಮಿಕ ಮಾರ್ಗದರ್ಶನ ಮಾಡುತ್ತದೆ. ಪುರುಷ ಬೆಂಗಾವಲು ಇಲ್ಲದೆ ಮಹಿಳೆಯರು ಮನೆಯಿಂದ ಹೊರಬರುವುದನ್ನು ಅಥವಾ ಹೆಚ್ಚಿನ ಉದ್ಯೋಗಗಳಲ್ಲಿ ಕೆಲಸ ಮಾಡುವುದನ್ನು ಷರಿಯತ್ ಕಾನೂನು ತಡೆಯುವುದಿಲ್ಲ.
ತಾಲಿಬಾನ್ ಈ ಹಿಂದೆ ಷರಿಯಾವನ್ನು ಹೇಗೆ ಅರ್ಥೈಸಿತು?
1996 ರಿಂದ 2001 ರವರೆಗೆ ತಾಲಿಬಾನ್ ಅಫ್ಘಾನಿಸ್ತಾನವನ್ನು ನಿಯಂತ್ರಿಸಿದಾಗ, ಅವರು ದೂರದರ್ಶನ ಮತ್ತು ಸಂಗೀತ ಉಪಕರಣಗಳನ್ನು ನಿಷೇಧಿಸಿದರು. ನಡವಳಿಕೆ, ಉಡುಗೆ ಮತ್ತು ಚಲನೆಯ ಮೇಲಿನ ನಿರ್ಬಂಧಗಳನ್ನು ಹೇರಿದರು. ಪರಿಶೀಲನೆಗೆ ನೈತಿಕತೆ ಪೊಲೀಸ್ ಅಧಿಕಾರಿಗಳು ನೇಮಿಸಿದರು, ತಮ್ಮ ನಿಯಮಗಳನ್ನು ಪಾಲಿಸದ ಮಹಿಳೆಯರನ್ನು ಅವಮಾನಿಸಿದರು ಮತ್ತು ಚಾವಟಿ ಏಟಿನಿಂದ ಶಿಕ್ಷಿಸಿದರು. 1996 ರಲ್ಲಿ, ಅಫ್ಘಾನಿಸ್ತಾನದ ಕಾಬೂಲ್‍ನಲ್ಲಿ ಮಹಿಳೆಯೊಬ್ಬಳು ಉಗುರು ಬಣ್ಣ ಧರಿಸಿದ್ದಕ್ಕಾಗಿ ಹೆಬ್ಬೆರಳಿನ ತುದಿಯನ್ನು ಕತ್ತರಿಸಿದ್ದರು. ವ್ಯಭಿಚಾರದ ಆರೋಪ ಹೊತ್ತ ಮಹಿಳೆಯರನ್ನು ಕಲ್ಲಿನಿಂದ ಹೊಡೆದು ಸಾಯಿಸಲಾಯಿತು. ಮಹಿಳೆಯರು ಮನೆಯ ಹೊರಗೆ ಕೆಲಸ ಮಾಡುವುದನ್ನು ಅಥವಾ ಪುರುಷ ರಕ್ಷಕರಿಲ್ಲದೆ ಮನೆಯಿಂದ ಹೊರ ಹೋಗುವುದನ್ನು ನಿಷೇಧಿಸಿದರು, ಹುಡುಗಿಯರ ಶಾಲೆಗೆ ಹೋಗದಂತೆ ತಡೆದರು ಮತ್ತು ನಿಯಮ ಉಲ್ಲಂಘಿಸಿದ ಜನರನ್ನು ಸಾರ್ವಜನಿಕವಾಗಿ ಹೊಡೆದು ಶಿಕ್ಷಿಸಿದರು. ಇದನ್ನೂ ಓದಿ: ಪ್ರತಿಭಟನಾಕಾರರ ಮೇಲೆ ತಾಲಿಬಾನಿಗಳಿಂದ ಗುಂಡಿನ ದಾಳಿ
ಈಗಿನ ಪರಿಸ್ಥಿತಿ ಏನು?
ಮಹಿಳೆಯರಿಗೆ ಷರಿಯತ್ ಕಾನೂನು ಅಡಿ ಕೆಲಸ ಮಾಡಲು ಅವಕಾಶ ಮಾಡಿಕೊಡಲಾಗುವುದು ಎನ್ನಲಾಗಿದೆ. ಅದಕ್ಕೆ ಪೂರಕ ಎನ್ನುವಂತೆ ಮಹಿಳಾ ನಿರೂಪಕಿ ತಾಲಿಬಾನ್ ವಕ್ತಾರರ ಸಂದರ್ಶನ ನಡೆಸುವ ಮೂಲಕ ಭರವಸೆ ಹುಟ್ಟಿಸುವ ಪ್ರಯತ್ನ ಮಾಡಲಾಯಿತು. ಆದರೆ ಇದಾದ ಒಂದೆರಡು ದಿನಗಳಲ್ಲಿ ಎಲ್ಲ ಸುದ್ದಿ ಮಾಧ್ಯಮಗಳಲ್ಲಿ ಮಹಿಳೆಯರು ಕಾರ್ಯ ನಿರ್ವಹಿಸದಂತೆ ಒತ್ತಡ ಹೇರಲಾಗಿದೆ. ಮಹಿಳೆಯರನ್ನು ಪ್ರವೇಶ ನೀಡದ ಬಗ್ಗೆ ಮಹಿಳಾ ನಿರೂಪಕಿ ಬಹಿರಂಗವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ನಮ್ಮ ಸೈನಿಕರ ಮೇಲೆ ದಾಳಿಯಾದ ಮರು ಕ್ಷಣವೇ ಪ್ರತಿದಾಳಿ – ಅಮೆರಿಕ ಅಧ್ಯಕ್ಷ ಬೈಡನ್ ಎಚ್ಚರಿಕೆ
ಸದ್ಯ ಕಾಬೂಲ್‍ನ ಹೊರಗೆ, ಕೆಲವು ಮಹಿಳೆಯರಿಗೆ ಪುರುಷ ಸಂಬಂಧಿಕರ ಸಹಾಯವಿಲ್ಲದೆ ಮನೆಯಿಂದ ಹೊರಹೋಗಬೇಡಿ ಎಂದು ಹೇಳಲಾಗಿದೆ ಮತ್ತು ತಾಲಿಬಾನ್ ಮಹಿಳೆಯರನ್ನು ವಿಶ್ವವಿದ್ಯಾನಿಲಯಕ್ಕೆ ಪ್ರವೇಶಿಸದಂತೆ ತಡೆಯಲಾಗುತ್ತಿದೆ. ತಾಲಿಬಾನಿಗಳು ಕೆಲವು ಮಹಿಳಾ ಚಿಕಿತ್ಸಾಲಯಗಳು ಮತ್ತು ಬಾಲಕಿಯರ ಶಾಲೆಗಳನ್ನು ಮುಚ್ಚಿದ್ದಾರೆ. ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ “ಇಸ್ಲಾಮಿಕ್ ಕಾನೂನಿನ ಮಿತಿಯೊಳಗೆ” ಅಥವಾ ತಮ್ಮ ಹೊಸದಾಗಿ ಸ್ಥಾಪಿತವಾದ ಆಡಳಿತದ ಅಡಿಯಲ್ಲಿ ಶರಿಯಾ ಹಕ್ಕುಗಳನ್ನು ಹೊಂದಿರುತ್ತದೆ ಎಂದು ಪ್ರತಿಜ್ಞೆ ಮಾಡಿದ್ದಾರೆ. ಆದರೆ ಇದರ ಅರ್ಥವೇನೆಂದು ಈವರೆಗೂ ಸ್ಪಷ್ಟವಾಗುತ್ತಿಲ್ಲ. ಇದನ್ನೂ ಓದಿ:“ಜೋರಾದ ಸದ್ದು ಕೇಳಿಸ್ತು.. ನೋಡಿದ್ರೆ ಮನೆ ಮೇಲೆ ಇಬ್ರು ಬಿದ್ದಿದ್ರು”
ಕಾಬೂಲ್: ತಾಲಿಬಾನ್ ಉಗ್ರರಿಗಾಗಿ ಕಾಯುತ್ತಿದ್ದೇನೆ, ನನ್ನನ್ನು ಕೊಲ್ಲುತ್ತಾರೆ ಎಂದು ಅಫ್ಘಾನಿಸ್ತಾನದ ಮೊದಲ ಮಹಿಳಾ ಮೇಯರ್ ಜರಿಫಾ ಗಫಾರಿ ಆತಂಕವನ್ನು ಕ್ಯಕ್ತಪಡಿಸಿದ್ದಾರೆ.
ಜರಿಫಾ ಗಫಾರಿ ತನ್ನ 27ನೇ ವಯಸ್ಸಿನಲ್ಲಿ ಮೇಯರ್ ಹುದ್ದೆಗೇರಿ ಅಫ್ಘಾನಿಸ್ತಾನದ ಮೊದಲ ಮಹಿಳಾ ಮೇಯರ್ ಎನ್ನುವ ಖ್ಯಾತಿಗೆ ಪಾತ್ರರಾದವರು. 2018ರಲ್ಲಿ ಮೇಯರ್ ಗಾದಿಗೆ ಏರಿದ್ದ ಜರಿಫಾ ತನ್ನ ದೇಶದ ಭವಿಷ್ಯದ ಬಗ್ಗೆ ಹಲವು ಕನಸುಗಳನ್ನು ಕಟ್ಟಿಕೊಂಡಿದ್ದವರು.
ಕೆಲ ವಾರಗಳ ಹಿಂದೆ ತಾಲಿಬಾನ್ ದೇಶದ ಜಿಲ್ಲೆಗಳನ್ನು ವಶಪಡಿಸಿಕೊಳ್ಳುವುದರಲ್ಲಿ ತೊಡಗಿದ್ದಾಗಲೂ ಅವರು ಆಶಾಭಾವವನ್ನು ಹೊಂದಿದ್ದರು. ಆಫ್ಘನ್ ಸೇನೆ ತಾಲಿಬಾನ್ ಅನ್ನು ಹಿಮ್ಮೆಟ್ಟಿಸಲಿದೆ ಎಂದೇ ನಂಬಿದ್ದರು. ಕೇವಲ ಎರಡೇ ವಾರಗಳ ಅವಧಿಯಲ್ಲಿ ಅವರ ಆಶಾಗೋಪುರ ಕುಸಿದು ಧರಾಶಾಯಿಯಾಗಿದೆ. ಈ ಸಮಯದಲ್ಲಿ ಅವರು ಮಾಧ್ಯಮಕ್ಕೆ ನೀಡಿರುವ ಸಂದರ್ಶನ ಅಫ್ಘಾನಿಸ್ತಾನದಲ್ಲಿ ಮುಂಬರಲಿರುವ ಭೀಕರ ಕ್ಷಣಗಳಿಗೆ ಕೈಗನ್ನಡಿ ಹಿಡಿದಂತಿದೆ. ಇದನ್ನೂ ಓದಿ: ತಾಲಿಬಾನ್ ಉಗ್ರರ ಸರ್ಕಾರಕ್ಕೆ ಪಾಕಿಸ್ತಾನ, ಚೀನಾ, ಇರಾನ್ ಬೆಂಬಲ
ತಾಲಿಬಾನಿಗಳು ನಾನಿರುವಲ್ಲಿಗೇ ಬಂದು ನನ್ನನ್ನು ಕೊಲ್ಲುವುದನ್ನೇ ಎದುರು ನೋಡುತ್ತಿದ್ದೇನೆ. ಏಕೆಂದರೆ ತಾಲಿಬಾನಿಗಳ ಕಣ್ಣು ಮೊದಲು ಬೀಳುವುದೇ ನನ್ನಂಥವಳ ಮೇಲೆ. ತಾಲಿಬಾನಿಗಳ ರಾಜ್ಯದಲ್ಲಿ ಶಿಕ್ಷೆಗೆ ಒಳಗಾಗಲು ದೇಶದ್ರೋಹದ ಕೆಲಸವನ್ನೇ ಮಾಡಬೇಕೆಂದಿಲ್ಲ. ಇಲ್ಲಿ ಹೆಣ್ಣಾಗಿ ಹುಟ್ಟಿದರೆ ಸಾಕು. ನನ್ನನ್ನಾಗಲಿ ನನ್ನ ಕುಟುಂಬವನ್ನಾಗಲಿ ರಕ್ಷಣೆ ಮಾಡಲು ಯಾರೂ ಇಲ್ಲ. ನನ್ನ ಸಹಾಯಕ್ಕೆ ಯಾರೂ ಬಾರರು. ಅದು ನನಗೆ ಚೆನ್ನಾಗಿ ಗೊತ್ತಿದೆ. ಹಾಗೆಂದು ನಾನು ಓಡಿಹೋಗಲು ಆಗುವುದಿಲ್ಲ. ಓಡಿ ಹೋದರೂ ಎಲ್ಲಿಗೇ ಎಂದು ಓಡಲಿ. ಎಲ್ಲೆಡೆ ಅವರೇ ತುಂಬಿಕೊಂಡಿರುವಾಗ ಎಲ್ಲಿ ಅವಿತುಕೊಳ್ಳಲಿ ಎಂದು ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಉಗ್ರರಿಗೆ ಆಟ, ಮಹಿಳೆಯರಿಗೆ ಪ್ರಾಣ ಸಂಕಟ – ಷರಿಯತ್ ಏನು ಹೇಳುತ್ತದೆ? ತಾಲಿಬಾನ್ ಕಾನೂನು ಏನು?
ದನಿಯೆತ್ತರಿಸಿ ಮಾತನಾಡುವ, ರಾಜಕೀಯದಲ್ಲಿ ಉನ್ನತ ಹುದ್ದೆಗೇರಿರುವ ಹೆಣ್ನನ್ನು ತಾಲಿಬಾನಿಗಳು ಎಂದಿಗೂ ಉಳಿಸುವುದಿಲ್ಲ. ನನ್ನ ಸೇನೆಯಲ್ಲಿ ಜನರಲ್ ಹುದ್ದೆಯ ಅಧಿಕಾರಿಯಾಗಿದ್ದವರು. ಅವರನ್ನು ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಇದುವರೆಗೂ ನನ್ನ ಮೇಲೆ ಮೂರು ಬಾರಿ ಕೊಲೆ ಯತ್ನಗಳು ನಡೆದಿವೆ. ಪ್ರಜಾಪ್ರಭುತ್ವ ಸರ್ಕಾರ ಇದ್ದ ಸಮಯದಲ್ಲೇ ತಾಲಿಬಾನಿಗಳು ಅವರ ಕಡೆಯವರಿಮ್ದ ನನ್ನನ್ನು ಕೊಲ್ಲಲು ಶತಪ್ರಯತ್ನ ನಡೆಸಿದ್ದರು. ಈ ಬಾರಿ ಅವರದೇ ಸರ್ಕಾರ ಬರುತ್ತಿದೆ. ರಾಜಧಾನಿಗೆ ತಾಲಿಬಾನ್ ಮುತ್ತಿಗೆ ಹಾಕುತ್ತಿದ್ದಂತೆಯೇ ಸರ್ಕಾರ ಹಾಗೂ ಸೇನೆಯ ಉನ್ನತ ಮಟ್ಟದ ಅಧಿಕಾರಿಗಳು ಮುಳುಗುತ್ತಿದ್ದ ಹಡಗನ್ನು ತ್ಯಜಿಸಿದಂತೆ ಸುರಕ್ಷಿತ ಸ್ಥಳಗಳಿಗೆ ತಪ್ಪಿಸಿಕೊಂಡು ಹೋದರು. ಆದರೆ ನನ್ನಂಥವರಿಗೆ ಬೇರೆಲ್ಲೂ ಹೋಗಿ ಅವಿತುಕೊಳ್ಳುವ ಶಕ್ತಿ ಇಲ್ಲ. ಇದನ್ನೂ ಓದಿ: ಅಮ್ಯೂಸ್‍ಮೆಂಟ್ ಪಾರ್ಕ್‍ನಲ್ಲಿ ಮಕ್ಕಳಂತೆ ಆಟವಾಡಿದ ತಾಲಿಬಾನಿಗಳು
ಅಫ್ಘಾನಿಸ್ತಾನಕ್ಕೆ ತಾಲಿಬಾನ್ ಬಂಡುಕೋರರು ನುಗ್ಗಿ ದಾಂಧಲೆ ಶುರುವಿಟ್ಟುಕೊಂಡ ಸಂದರ್ಭದಲ್ಲಿ ದೇಶದ ವಿವಿಧ ಪ್ರಾಂತ್ಯಗಳಿಂದ ಜನರು ವಲಸೆ ಬಂದಿದ್ದು ರಾಜಧಾನಿ ಕಾಬೂಲಿಗೆ. ದೇಶದ ಯಾವುದೇ ಮೂಲೆಯಲ್ಲಿ ತಾಲಿಬಾನಿ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಇಡೀ ದೇಶ ಅವರ ತೆಕ್ಕೆಗೆ ಜಾರುವುದಿಲ್ಲ ಎನ್ನುವ ಒಂದೇ ಒಂದು ನಂಬಿಕೆಯಿಂದ ಅವರು ಕಾಬೂಲಿಗೆ ಬಂದಿದ್ದರು. ಅವರು ಕಾಬೂಲಿನ ಬೀದಿಗಳಲ್ಲಿ ಕುಟುಂಬ ಸಹಿತ ಬಿಡಾರ ಹೂಡಿದ್ದರು. ಇದನ್ನೂ ಓದಿ: ಅಫ್ಘಾನ್ ಸೇನೆ ಹೋರಾಟ ಮಾಡದೇ ಇರುವಾಗ ನಮ್ಮವರು ಬಲಿಯಾಗುವುದರಲ್ಲಿ ಅರ್ಥವಿಲ್ಲ : ಬೈಡನ್
ಅವರೆಲ್ಲರ ಪ್ರಾರ್ಥನೆ ಅಲ್ಲಾಹ್ ಕಿವಿ ಮುಟ್ಟಿಲ್ಲ. ದೇಶ ತಾಲಿಬಾನ್ ತೆಕ್ಕೆಗೆ ಜಾರಿದೆ. ಕಾಬೂಲಿನ ಬೀದಿಗಳಲ್ಲಿ ನೆಲೆನಿಂತಿರುವ ಮಂದಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ತಮ್ಮ ಊರುಗಳಿಗೆ ಮರಳುತ್ತಾರೆ. ತಾಲಿಬಾನಿ ರಾಜ್ಯಭಾರಕ್ಕೆ ತಲೆಬಾಗುತ್ತಾರೆ. ಇಲ್ಲವೇ ಅವರ ವಿರೋಧ ಕಟ್ಟಿಕೊಂಡು ಮಸಣ ಸೇರುತ್ತಾರೆ. ಮಹಿಳೆಯರಿಗೆ, ಹೆಣ್ಣುಮಕ್ಕಳಿಗೆ ನಮ್ಮ ಆಡಳಿತದಲ್ಲಿ ಯಾವುದೇ ಅಪಾಯ ಒದಗುವುದಿಲ್ಲ ಎಂದು ತಾಲಿಬಾನ್ ಹೇಳಿದೆ ಎಂಬುದೇನೋ ನಿಜ. ಆದರೆ ಈವರೆಗಿನ ವಿದ್ಯಮಾನಗಳನ್ನು ಗಮನಿಸಿದರೆ ತಾಲಿಬಾನ್ ತನ್ನ ಯಾವ ಮಾತನ್ನು ಪಾಲಿಸಿದೆ ಎನ್ನುವುದರ ಲೆಕ್ಕ ಸಿಗುವುದಿಲ್ಲ. ಇದನ್ನೂ ಓದಿ: ಅಫ್ಘಾನಿಸ್ತಾನದ ಹಿಂದೂ-ಸಿಖ್ಖರು ಭಾರತಕ್ಕೆ ಬರಲು ಸರ್ಕಾರದ ನೆರವು
ಅಫ್ಘಾನ್ ಸರ್ಕಾರ ಮತ್ತು ಸೇನೆ ಜೊತೆ ಕೆಲಸ ನಿರ್ವಹಿಸಿದವರಿಗೆ ಕ್ಷಮೆ ನೀಡಲಾಗುವುದು ಎಂದು ತಾಲಿಬಾನ್ ತಿಳಿಸಿದೆ. ಆದರೆ ಇನ್ನೊಂದೆಡೆ ಈಗಾಗಲೇ ತಾಲಿಬಾನ್ ತನ್ನ ವಿರೋಧಿಗಳನ್ನು ಮಟ್ಟ ಹಾಕುವ ಸಲುವಾಗಿ ಮಾರಣಹೋಮ ಶುರು ಮಾಡಿದೆ ಎನ್ನುವ ವರದಿಗಳು ಕೇಳಿಬರುತ್ತಿವೆ.