Tag: Aeroplane

  • ವಿಮಾನಕ್ಕೆ ಬಿಳಿ ಬಣ್ಣ ಹಚ್ಚೋದ್ಯಾಕೆ?

    ವಿಮಾನಕ್ಕೆ ಬಿಳಿ ಬಣ್ಣ ಹಚ್ಚೋದ್ಯಾಕೆ?

    ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ವಿಮಾನದ ಬಣ್ಣ ಬಿಳಿಯಾಗಿರುತ್ತದೆ. ಇನ್ನು ಕೆಲವು ವಿಮಾನಗಳು ಮಾತ್ರ  ಬೇರೆ ಬಣ್ಣಗಳದ್ದಾಗಿರುತ್ತದೆ. ಆದರೆ ಹೆಚ್ಚಿನ ವಿಮಾನಗಳು ಬಿಳಿ ಬಣ್ಣವನ್ನು ಹೊಂದಿರುತ್ತವೆ. ಯಾಕೆ ಬಿಳಿ ಬಣ್ಣವನ್ನೇ ಹೆಚ್ಚಾಗಿ ಬಳಸುತ್ತಾರೆ? ಇದರ ಹಿಂದೆ ಏನಾದರೂ ಕಾರಣವಿದ್ಯಾ? ಎಂಬ ಪ್ರಶ್ನೆ ಹಲವರಿಗೆ ಮೂಡಿರಬಹುದು. ನಿಜ ವಿಮಾನಕ್ಕೆ ಬಿಳಿ ಬಣ್ಣ ಬಳಿಯುವುದಕ್ಕೆ ಕೆಲವು ಕಾರಣಗಳಿವೆ. 

    ಬಿಳಿ ಬಣ್ಣ ಬಳಿಯುವುದು ಚಂದಕ್ಕೆ ಮಾತ್ರವಲ್ಲದೆ ವೈಜ್ಞಾನಿಕ, ಸುರಕ್ಷತಾ ದೃಷ್ಟಿಯಿಂದಾಗಿ ಈ ಬಣ್ಣವನ್ನು ಬಳಸಲಾಗುತ್ತದೆ. ವಿಮಾನದ ಸುರಕ್ಷತೆಯನ್ನು ಕಾಪಾಡುವುದು, ಜೊತೆಗೆ ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ಹಾಗೂ ಇನ್ನಿತರ ಕೆಲವು ಲಾಭಕ್ಕಾಗಿ ಬಿಳಿ ಬಣ್ಣವನ್ನು ಬಳಸುತ್ತಾರೆ.

    ಈ ಬಿಳಿ ಬಣ್ಣ ವಿಮಾನವನ್ನು ಸೂರ್ಯನ ಬೆಳಕಿನಿಂದ ರಕ್ಷಣೆ ಮಾಡುವುದಲ್ಲದೆ, ರನ್ ವೇಯಲ್ಲಿ ವಿಮಾನಗಳ ಸುರಕ್ಷಿತ ಸಂಚಾರಕ್ಕಾಗಿ ಸಹಾಯ ಮಾಡುತ್ತದೆ. ಜೊತೆಗೆ ವಿಮಾನದ ಒತ್ತಡವನ್ನು ಕೂಡ ಇದು ಕಡಿಮೆ ಮಾಡುತ್ತದೆ. ವಿಮಾನದ ಮೇಲೆ ಉಂಟಾಗುವ ಬಿರುಕುಗಳು, ತುಕ್ಕು ಹಿಡಿಯುವುದು ಗುರುತಿಸಲು ಸಹಕಾರಿಯಾಗುತ್ತದೆ. ಅಲ್ಲದೆ ತಜ್ಞರು ಹೇಳುವ ಪ್ರಕಾರ ಅಪಘಾತಗಳ ಸಂಖ್ಯೆಯನ್ನು ಕೂಡ ಇದು ಕಡಿಮೆ ಮಾಡುವಲ್ಲಿ ಉಪಯುಕ್ತವಾಗುತ್ತದೆ ಎನ್ನಲಾಗಿದೆ. 

    ಇನ್ನು ವಿಮಾನಯಾನ ಸಂಸ್ಥೆಗಳು ತಮ್ಮ ಗುರುತನ್ನು ಪ್ರದರ್ಶಿಸಲು ಇದನ್ನು ಬಳಸುತ್ತಾರೆ ಎನ್ನಲಾಗುತ್ತದೆ. ಸಾಮಾನ್ಯವಾಗಿ ಈ ಬಣ್ಣವು ಹಣವನ್ನ ಉಳಿಸುತ್ತದೆ, ಪ್ರಯಾಣಿಕರನ್ನ ರಕ್ಷಿಸುತ್ತದೆ ಎಂದು ಹೇಳಲಾಗುತ್ತದೆ. 

    ಬಿಳಿ ಬಣ್ಣ ಬಳಿಯುವುದರಿಂದ ವಿಮಾನದ ಸುರಕ್ಷತೆ ಹೇಗೆ?

    • ಮೊದಲನೆಯದಾಗಿ ಪ್ರಮುಖವಾಗಿ ವಿಮಾನಕ್ಕೆ ಬಿಳಿ ಬಣ್ಣ ಬಳಿಯಲು ಕಾರಣವೆಂದರೆ ಅವುಗಳ ಗೋಚರತೆ ಸುಲಭವಾಗಿ ಎದ್ದು ಕಾಣಬೇಕು ಎಂಬುದಾಗಿರುತ್ತದೆ. 
    • ವಿಮಾನದ ಪರಿಶೀಲನೆ ವೇಳೆ ವಿಮಾನದ ಮೇಲಿನ ಬಿರುಕುಗಳು, ತುಕ್ಕು ಹಿಡಿದಿರುವುದು ಹಾಗೂ ತೈಲ ಸೋರಿಕೆಯಾಗುತ್ತಿರುವ ಕುರಿತು ಪತ್ತೆ ಹಚ್ಚಲು ಇದು ಸುಲಭವಾಗುತ್ತದೆ. ಇಂತಹ ಸಮಸ್ಯೆಗಳನ್ನು ವಿಮಾನಯಾನ ಶುರುವಾಗುವ ಮೊದಲೇ ಗುರುತಿಸುವುದರಿಂದ ಸಣ್ಣಪುಟ್ಟ ಸಮಸ್ಯೆಗಳು ದೊಡ್ಡದಾಗುವುದನ್ನು ತಡೆಯಬಹುದು ಹಾಗೂ ಪ್ರಯಾಣಿಕರ ಸುರಕ್ಷತೆಯನ್ನು ಇದು ಕಾಪಾಡುತ್ತದೆ. 
    • ಇನ್ನು ಬಿಳಿ ಬಣ್ಣವು ಪೈಲಟ್ ಸೇರಿದಂತೆ ವಿಮಾನ ನಿಲ್ದಾಣದಲ್ಲಿರುವ ಸಿಬ್ಬಂದಿಗೂ ಇದು ಸುಲಭವಾಗಿ ಗುರುತಿಸಲು ಸಹಾಯ ಮಾಡುತ್ತದೆ. 
    • ಮೂಲಗಳ ಪ್ರಕಾರ ಬಿಳಿ ಬಣ್ಣ ವಿಮಾನದ ಸುರಕ್ಷತೆಗೆ ತುಂಬಾ ಒಳ್ಳೆಯದು ಎನ್ನಲಾಗುತ್ತದೆ.

    ಬಿಳಿ ಬಣ್ಣ ಬಳಿಯುವುದರಿಂದ ವೆಚ್ಚ ಕಡಿಮೆಯಾಗುತ್ತದೆ ಹೇಗೆ? 

    • ವಿಮಾನಕ್ಕೆ ಬಣ್ಣ ಬಳಿಯುವುದೆಂದರೆ ಸುಲಭವಾದ ಕೆಲಸವಲ್ಲ. ಜೊತೆಗೆ ವಿಮಾನಯಾನ ಸಂಸ್ಥೆಗೂ ಇದು ಕಡಿಮೆ ವೆಚ್ಚದ್ದೇನು ಅಲ್ಲ. ಆದರೆ ಒಂದು ವಿಮಾನಕ್ಕೆ ಬಣ್ಣ ಬಳಿಯಬೇಕೆಂದರೆ ಒಂದು ನಿರ್ದಿಷ್ಟವಾದ ವೆಚ್ಚ ಉಂಟಾಗುತ್ತದೆ. ಹೀಗಿರುವಾಗ ವಿಮಾನಕ್ಕೆ ಬಿಳಿ ಬಣ್ಣ ಬಳಿಯುವುದು ಸಾಮಗ್ರಿ ಹಾಗೂ ಶ್ರಮ ಎರಡರಲ್ಲೂ ಅಗ್ಗವಾಗಿರುತ್ತದೆ. 
    • ಬಿಳಿ ಬಣ್ಣದ ಹೊರತಾಗಿ ಬೇರೆ ಬಣ್ಣವನ್ನ ಬಳಸುವುದಕ್ಕಿಂತ ಅಥವಾ ಬಳಿಯುವುದಕ್ಕಿಂತ ಇದು ತುಂಬಾ ಕಡಿಮೆ ವೆಚ್ಚವನ್ನ ಹೊಂದಿರುತ್ತದೆ. 
    • ಒಂದು ವೇಳೆ ಬೇರೆ ಬೇರೆ ಬಣ್ಣ ಹಚ್ಚುವುದಾದರೆ ಮೊದಲಿಗೆ ಬಿಳಿ ಬಣ್ಣ ಬಳಿದು ತದನಂತರ ಬೇರೆ ಬಣ್ಣದ ಕನಿಷ್ಠ ಎರಡು ಮೂರು ಪದರಗಳನ್ನ ಬಳಿಯಬೇಕಾಗುತ್ತದೆ. ಆದರೆ ಬಿಳಿ ಬಣ್ಣದ ವಿಷಯ ಬಂದಾಗ ಹೆಚ್ಚಿನ ಪದರಗಳ ಅವಶ್ಯಕತೆ ಇರುವುದಿಲ್ಲ. ಹೀಗಾಗಿ ಇದು ತುಂಬಾ ಅಗತ್ಯವಾಗಿರುತ್ತದೆ. ಅಲ್ಲದೆ ಬಿಳಿ ಬಣ್ಣ ಸಮಯಕ್ಕೆ ತಕ್ಕಂತೆ ಮಸುಕಾಗುತ್ತದೆ. ಆದರೆ ಪದೇ ಪದೇ ಬಣ್ಣ ಬಳಿಯುವ ಅವಶ್ಯಕತೆ ಇರುವುದಿಲ್ಲ. 
    • ಇನ್ನು ವಿಮಾನವನ್ನು ರನ್ ವೇಯ ಮೇಲೆ ಬಿಳಿ ಬಣ್ಣ ತಂಪಾಗಿರುತ್ತದೆ. ಏಕೆಂದರೆ ತೀವ್ರ ಬಿಸಿಲಿನಿಂದಾಗಿ ಕಾದ ರನ್ ವೇನಲ್ಲಿ ವಿಮಾನ ಚಲಿಸಿದಾಗ ಅದರ ಶಾಖ ಇದಕ್ಕೆ ಪೂರ್ಣ ಪ್ರಮಾಣದಲ್ಲಿ ತಗುಲುವುದಿಲ್ಲ. ಅಲ್ಲದೆ ಬಿಳಿ ಬಣ್ಣದಿಂದಾಗಿ ವಿಮಾನಯಾನ ಸಂಸ್ಥೆಗಳು ಒಳ್ಳೆಯ ಉಳಿತಾಯವನ್ನು ಮಾಡುತ್ತವೆ. 

    ಬಿಳಿ ಬಣ್ಣದಿಂದಾಗಿ ಪ್ರಯಾಣಿಕರ ಸುರಕ್ಷತೆ ಹೇಗೆ?

    • ಬಿಳಿ ಬಣ್ಣ ವಿಮಾನಕ್ಕೆ ಮಾತ್ರ ಪ್ರಯೋಜನವಾಗದೆ ಪ್ರಯಾಣಿಕರಿಗೂ ಇದು ಸಹಾಯ ಮಾಡುತ್ತದೆ. ವಿಮಾನಯಾನದ ಸಮಯದಲ್ಲಿ ಸೂರ್ಯನ ಬೆಳಕು ವಿಮಾನದ ಮೇಲೆ ಬೀಳುತ್ತದೆ. ಇದನ್ನ ಕಡಿಮೆ ಮಾಡಲು ಬಿಳಿ ಬಣ್ಣ ಸಹಾಯ ಮಾಡುತ್ತದೆ. ಹೌದು, ಬಿಳಿ ಬಣ್ಣ ಬಿಸಿಲಿನ ಸಮಯದಲ್ಲಿ ಹೆಚ್ಚಿನ ಬಿಸಿಲನ್ನು ಹೀರಿಕೊಳ್ಳುವುದಿಲ್ಲ. ಈ ಮೂಲಕ ವಿಮಾನದಲ್ಲಿರುವ ಪ್ರಯಾಣಿಕರಿಗೆ ಇದು ಸಹಾಯವಾಗುತ್ತದೆ ಹಾಗೂ ವಿಮಾನಯಾನವನ್ನು ಆರಾಮದಾಯಕವಾಗಿರಿಸುತ್ತದೆ. 
    • ಇನ್ನು ವಿಮಾನದ ಹೊರ ಭಾಗದಲ್ಲಿರುವ ಆನ್ ಬೋರ್ಡ್ ವ್ಯವಸ್ಥೆಗಳು ಶಾಖದಿಂದ ಹಾನಿಯಾಗುವ ಸಾಧ್ಯತೆ ಇರುತ್ತದೆ. ಇವುಗಳನ್ನು ಕೂಡ ಬಿಳಿ ಬಣ್ಣ ರಕ್ಷಿಸುತ್ತದೆ. 

    ಬಿಳಿ ಬಣ್ಣ ಬಳಿಯುವುದರಿಂದ ಹಕ್ಕಿ ಡಿಕ್ಕಿ ಕಡಿಮೆಯಾಗುವ ಸಾಧ್ಯತೆ ಹೇಗೆ?

    • ವಿಮಾನಕ್ಕೆ ಬಿಳಿ ಬಣ್ಣ ಬಳಿಯುವುದಕ್ಕೂ ಹಾಗೂ ಹಕ್ಕಿ ಡಿಕ್ಕಿಗೂ ಏನು ಸಂಬಂಧ? ಎನ್ನಿಸಬಹುದು. ಆದರೆ ಸಂಬಂಧವಿದೆ. ತಜ್ಞರು ಹೇಳುವ ಪ್ರಕಾರ ವಿಮಾನಕ್ಕೆ ಬಿಳಿ ಬಣ್ಣ ಬಳಿಯುವುದರಿಂದ ಪಕ್ಷಿ ಡಿಕ್ಕಿ ಆಗುವುದು ಕಡಿಮೆಯಾಗುತ್ತದೆ. ಬಣ್ಣವೂ ಕೂಡ ವನ್ಯಜೀವಿಗಳ ಮೇಲೆ ಪರಿಣಾಮ ಬೀರುತ್ತದೆ. ಹೌದು ಬಿಳಿ ಬಣ್ಣ ಅಥವಾ ತಿಳಿಯಾದ ಬಣ್ಣವನ್ನ ಪಕ್ಷಿಗಳು ನೋಡಿದಾಗ ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತದೆ. ಹೀಗಾಗಿ ಪಕ್ಷಿ ಡಿಕ್ಕಿ ಆಗುವುದು ಕಡಿಮೆಯಾಗುತ್ತದೆ ಎನ್ನಲಾಗಿದೆ. 
    • ಅದಲ್ಲದೆ ವಿಮಾನಕ್ಕೆ ಬಿಳಿ ಬಣ್ಣ ಬಳಿಯುವುದರಿಂದ ವನ್ಯಜೀವಿಗಳು ಹಾಗೂ ಮಾನವರು ತಕ್ಷಣವೇ ಗುರುತಿಸುತ್ತಾರೆ. 

    ಇನ್ನು ಹೆಚ್ಚಿನ ವಿಮಾನಯಾನ ಸಂಸ್ಥೆಗಳು ತಮ್ಮ ಲೋಗೋಗಳ ಹಿನ್ನೆಲೆಯಾಗಿ ಬಿಳಿ ಬಣ್ಣವನ್ನು ಬಳಸುತ್ತವೆ. ಬಿಸಿಲಿನ ಪ್ರತಿಫಲನ, ಹಣದ ಉಳಿತಾಯ ಸೇರಿದಂತೆ ವಿಮಾನದ ಕಾರ್ಯ ಕ್ಷಮತೆ ಎಲ್ಲವನ್ನ ಉತ್ತಮವಾಗಿರಿಸಲು ಇದು ಸಹಾಯ ಮಾಡುತ್ತದೆ. ಇದು ಈಗಿನಿಂದಲ್ಲ. ಮೊದಲಿನಿಂದಲೂ ಇದನ್ನು ವಿಮಾನಯಾನ ಸಂಸ್ಥೆಗಳು ಅಳವಡಿಸಿಕೊಂಡು ಬಂದಿವೆ. ಅದಲ್ಲದೆ ಬಿಳಿ ಬಣ್ಣವು ಸರಳ ವಿನ್ಯಾಸವೆಂದು ನಂಬಲಾಗಿದೆ.

  • Shankh Air | ಭಾರತಕ್ಕೆ ಬರಲಿದೆ ಮತ್ತೊಂದು ವಿಮಾನಯಾನ ಕಂಪನಿ – ಉತ್ತರಪ್ರದೇಶದಿಂದ ಹಾರಾಟ ಆರಂಭ

    Shankh Air | ಭಾರತಕ್ಕೆ ಬರಲಿದೆ ಮತ್ತೊಂದು ವಿಮಾನಯಾನ ಕಂಪನಿ – ಉತ್ತರಪ್ರದೇಶದಿಂದ ಹಾರಾಟ ಆರಂಭ

    ಲಕ್ನೋ: ಶಂಖ್ ಏರ್ ಎಂಬ ಹೊಸ ವಿಮಾನಯಾನ ಸಂಸ್ಥೆ ಗಗನಕ್ಕೇರಲು ಸಿದ್ಧವಾಗಿದ್ದು, ಇದು ಉತ್ತರ ಪ್ರದೇಶದ (Uttar Pradesh) ಮೊದಲ ವಿಮಾನಯಾನ ಸಂಸ್ಥೆಯಾಗಿದೆ.

    ಶಂಖ್ ಏರ್ (Shankh Air) ವಿಮಾನಯಾನ ಸಂಸ್ಥೆಯು ನಾಗರಿಕ ವಿಮಾನಯಾನ ಸಚಿವಾಲಯದಿಂದ (Ministry of Civil Aviation) ಅನುಮೋದನೆ ಪಡೆದುಕೊಂಡಿದ್ದು, ಭಾರತದ ವಾಯುಯಾನ ಕ್ಷೇತ್ರದಲ್ಲಿ ಹೊಸ ಪ್ರವೇಶಕ್ಕಾಗಿ ಸಜ್ಜಾಗಿದೆ.ಇದನ್ನೂ ಓದಿ: ಮೇಲ್ನೋಟಕ್ಕೆ ಸಿಎಂ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಹೈಕೋರ್ಟ್ ಹೇಳಿದೆ – ಪ್ರಹ್ಲಾದ್ ಜೋಶಿ

    ಈ ಮೂಲಕ ಚೊಚ್ಚಲ ಹೆಜ್ಜೆಯನ್ನು ಇಡಲು ಶಂಖ್ ವಿಮಾನಯಾನ ಸಂಸ್ಥೆ ಸಿದ್ಧವಾಗಿದೆ. ಇದು ಉತ್ತರಪ್ರದೇಶದ ಲಕ್ನೋ (Lucknow) ಮತ್ತು ನೋಯ್ಡಾದಲ್ಲಿ (Noida) ಕೇಂದ್ರಗಳನ್ನು ಹೊಂದಿದೆ.

    ಶಂಖ್ ಏರ್ ಇದು ಭಾರತದ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ. ಜೊತೆಗೆ ಅಂತರರಾಜ್ಯಗಳಿಗೂ ಸೇವೆ ಸಲ್ಲಿಸಲು ಸಿದ್ಧವಾಗಿದೆ. ಇದು ಪ್ರಮುಖ ನಗರಗಳನ್ನು ಸಂಪರ್ಕಿಸುವುದು, ಕಡಿಮೆ ಪ್ರದೇಶಗಳಲ್ಲಿ ವಾಯು ಸಂಪರ್ಕವನ್ನು ಸುಧಾರಿಸುವ ಉದ್ದೇಶವನ್ನು ಹೊಂದಿದೆ.

    ಈ ವಿಮಾಂನಯಾನ ಸಂಸ್ಥೆಯು ದೇಶದ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ 63 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿದೆ ಮತ್ತು ಮತ್ತಷ್ಟು ವಿಸ್ತರಿಸುವ ಗುರಿಯನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ.

    ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ವಿವರಗಳ ಪ್ರಕಾರ, ಶಂಖ್ ಏರ್ ಹೊಚ್ಚ ಹೊಸ ಬೋಯಿಂಗ್ 737-800 ವಿಮಾನದೊಂದಿಗೆ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತದೆ.ಇದನ್ನೂ ಓದಿ: 10 ತಿಂಗಳ ಮಗುವನ್ನು ಹೊತ್ತೊಯ್ದು ಅತ್ಯಾಚಾರ – ಆರೋಪಿಯನ್ನು ಬಡಿದು ಪೊಲೀಸರಿಗೊಪ್ಪಿಸಿದ ಜನ

  • ಇಂಡಿಗೋ ವಿಮಾನ ಸಿಬ್ಬಂದಿಯ ಜೊತೆ ಅನುಚಿತ ವರ್ತನೆ- ಸ್ವೀಡಿಷ್ ಪ್ರಜೆಯ ಬಂಧನ

    ಇಂಡಿಗೋ ವಿಮಾನ ಸಿಬ್ಬಂದಿಯ ಜೊತೆ ಅನುಚಿತ ವರ್ತನೆ- ಸ್ವೀಡಿಷ್ ಪ್ರಜೆಯ ಬಂಧನ

    ನವದೆಹಲಿ: ಇಂಡಿಗೋ (IndiGo) 6ಇ-1052 ಬ್ಯಾಂಕಾಕ್-ಮುಂಬೈ ವಿಮಾನದಲ್ಲಿ ಸಿಬ್ಬಂದಿಗೆ ಕಿರುಕುಳ (Harassment) ನೀಡಿದ ಸ್ವೀಡಿಷ್ (Swedish) ಪ್ರಜೆಯನ್ನು ಗುರುವಾರ ಬಂಧಿಸಲಾಗಿದೆ (Arrest) ಎಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸ್ ಮಾಹಿತಿ ಪ್ರಕಾರ, ಬಂಧಿತ ವ್ಯಕ್ತಿಯನ್ನು ಕ್ಲಾಸ್ ಎರಿಕ್ ಹೆರಾಲ್ಡ್ ಜೋನಾಸ್ಮ್ (62) ಎಂದು ಗುರುತಿಸಲಾಗಿದೆ. ಕ್ಲಾಸ್ ಎರಿಕ್ ಹೆರಾಲ್ಡ್ ಜೋನಾಸ್ಮ್ ಮದ್ಯಪಾನ ಮಾಡಿದ್ದರು ಮತ್ತು ಆಹಾರ ಖರೀದಿಗೆ ಪಾವತಿ ಮಾಡುವಾಗ ಸಿಬ್ಬಂದಿಯನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ದೂರು ದಾಖಲಿಸಿದ್ದರು. ಮುಂಬೈನಲ್ಲಿ (Mumbai) ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಕ್ಲಾಸ್ ಎರಿಕ್‌ನನ್ನು ಏರ್‌ಲೈನ್ ಸಿಬ್ಬಂದಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ- ಚೆನೈ ಕಲಾಕ್ಷೇತ್ರದ ಪ್ರೊಫೆಸರ್ ವಿರುದ್ಧ ದೂರು ದಾಖಲು

    crime

    ಇಂಡಿಗೋ ಈ ಘಟನೆಯನ್ನು ದೃಢಪಡಿಸಿದೆ ಮತ್ತು ಅಗತ್ಯ ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗಿದೆ ಎಂದು ಹೇಳಿದೆ. ಆದರೆ ಇದುವರೆಗೆ ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ಕ್ಲಾಸ್ ಎರಿಕ್ ಕಳೆದ ಮೂರು ತಿಂಗಳಲ್ಲಿ ಭಾರತದಲ್ಲಿ ಬಂಧಿಸಲ್ಪಟ್ಟ ಎಂಟನೇ ಅಶಿಸ್ತಿನ ವಿಮಾನ ಪ್ರಯಾಣಿಕ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ವಾಣಿಜ್ಯ ಬಳಕೆಯ LPG ಸಿಲಿಂಡರ್ ಬೆಲೆ ಇಳಿಕೆ

    ಮಾರ್ಚ್ 23 ರಂದು ದುಬೈ-ಮುಂಬೈ ಇಂಡಿಗೋ ವಿಮಾನದಲ್ಲಿ ಮದ್ಯ ಸೇವಿಸಿ ಸಹ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ನಿಂದಿಸಿದ ಇಬ್ಬರು ಪ್ರಯಾಣಿಕರನ್ನು ಬಂಧಿಸಿ ಬಳಿಕ ಜಾಮೀನು ನೀಡಲಾಗಿತ್ತು. ಇದನ್ನೂ ಓದಿ: ಸಾಕುನಾಯಿಯ ಮೇಲೆ 2 ವರ್ಷ ಅತ್ಯಾಚಾರವೆಸಗಿದ 60ರ ವ್ಯಕ್ತಿ

  • ಪಿಐಎ ಮಾದರಿಯ ಏರೋಪ್ಲೇನ್ ಬಲೂನ್ ಕಾಶ್ಮೀರದಲ್ಲಿ ಪತ್ತೆ

    ಪಿಐಎ ಮಾದರಿಯ ಏರೋಪ್ಲೇನ್ ಬಲೂನ್ ಕಾಶ್ಮೀರದಲ್ಲಿ ಪತ್ತೆ

    ಶ್ರೀನಗರ: ಪಾಕಿಸ್ತಾನ ಪಿಐಎ(ಪಾಕಿಸ್ತಾನ ಇಂಟರ್‌ ನ್ಯಾಷನಲ್ ಏರ್ ಲೈನ್ಸ್) ಹೆಸರು ಇರುವ ವಿಮಾನ ಬಲೂನ್ ಒಂದು ಜಮ್ಮು ಮತ್ತು ಕಾಶ್ಮೀರದ ಸೋಟ್ರಾ ಚಕ್ ಗ್ರಾಮದ ಹಿರೇನಗರ್ ಪ್ರದೇಶದಲ್ಲಿ ಪತ್ತೆಯಾಗಿದೆ.

    ಬಲೂನ್ ಜಮ್ಮು ಕಾಶ್ಮೀರದ ಸೋಟ್ರಾ ಚಕ್ ಗ್ರಾಮದಲ್ಲಿ ಕಾಣಿಸುತ್ತಿದ್ದಂತೆ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಪಿಐಎ ಮಾದರಿಯ ಬಲೂನ್ ಕುರಿತು ಮಾಹಿತಿ ಬಂದೊಡನೆ ಕಾರ್ಯಪ್ರವೃತ್ತರಾದ ರಾಜ್‍ಭಾಗ್ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಬಲೂನ್‍ನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.