ಬೆಂಗಳೂರು: ಏರೋ ಇಂಡಿಯಾ-2025 ರಲ್ಲಿ ಭಾರತೀಯ ಸೇನಾ ವಿಂಗ್ ಕಮಾಂಡರ್‌ಗಳು, ಪೈಲೆಟ್‌ಗಳ ಬಳಕೆಗಾಗಿಯೇ ಕನ್ನಡಿಗರು ತಯಾರು ಮಾಡಿರುವ ಅಡ್ವಾನ್ಸ್ಡ್ ಹೆಲ್ಮೆಟ್ ಗಮನ ಸೆಳೆಯುತ್ತಿದೆ.
ವರ್ಚಸ್ ಏರೋ ಸ್ಪೇಸ್ ಸಂಸ್ಥೆ ಸುಮಾರು 8 ರಿಂದ 10 ಕೋಟಿ ವೆಚ್ಚದ, ಒಂದು ಕೆ.ಜಿ. ತೂಕದ ಅಡ್ವಾನ್ಸ್ಡ್ ಹೆಲ್ಮೆಟ್ ಇದು.
ಸೆನ್ಸಾರ್ ಮೂಲಕ ಫೈಟರ್ ಜೆಟ್ ಮೇಲಿರುವ ಪೈಲೆಟ್‌ಗೆ ಸುತ್ತಲಿನ ಪ್ರದೇಶದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುತ್ತದೆ. ಜೊತೆಗೆ, ಕಣ್ಣಂಚಿನಲ್ಲೇ ಎಲ್ಲವು ತಿಳಿಯುವಂತೆ ಅಭಿವೃದ್ಧಿ ಪಡಿಸಲಾಗಿದೆ.
ಸದ್ಯ ಭಾರತದ ವಾಯುಪಡೆಯಲ್ಲಿರುವ ತೇಜಸ್ ವಿಮಾನದ ಅಪ್‌ಗ್ರೇಡ್ ವರ್ಷನ್‌ಗೆ ಮತ್ತು ಬಹುನೀರಿಕ್ಷಿತ ಭಾರತ ವಾಯಸೇನೆಯ ಮುಂಬರುವ ಫೈಟರ್ ಜೆಟ್ ಅಮ್ಕಾಗೆ ಬಳಕೆ ಮಾಡಲು ತಯಾರಿ ಮಾಡಲಾಗಿದೆ.
ಬೆಂಗಳೂರು: ಯಲಂಹಕದಲ್ಲಿ ನಡೆಯುತ್ತಿರುವ ‘ಏರೋ ಇಂಡಿಯಾ 2025’ (Aero India 2025) ಆಕರ್ಷಣೀಯವಾಗಿದೆ. ಇಂದಿನಿಂದ ಸಾರ್ವಜನಿಕರಿಗೆ ಏರ್ ಶೋ ವೀಕ್ಷಣೆಗೆ ಅವಕಾಶ ಸಿಗಲಿದೆ.0
ಇಂದು, ನಾಳೆ ಲಕ್ಷಾಂತರ ಜನ ಭಾಗಿಯಾಗುವ ಸಾಧ್ಯತೆ ಇದೆ. ಮೊದಲ ಮೂರು ದಿನ ಕೇವಲ ಅಡ್ವಾ ಪ್ರದೇಶಕ್ಕೆ ಮಾತ್ರ ಸಾರ್ವಜನಿಕರಿಗೆ ಅವಕಾಶ ನೀಡಲಾಗಿತ್ತು. ಇಂದಿನಿಂದ ಎರಡು ದಿನ ಸಂಪೂರ್ಣ ಏರೋ ಇಂಡಿಯಾ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಲಿದೆ.
ಒಂದು ಸಾವಿರ, ಎರಡೂವರೆ ಸಾವಿರಕ್ಕೆ ಟಿಕೆಟ್ ಪಡೆದವರು ಸಂಪೂರ್ಣ ಏರೋ ಇಂಡಿಯಾ ವೀಕ್ಷಣೆಗೆ ಅವಕಾಶ ಇರಲಿದೆ. ಇಂದು ಕೂಡ ಬೆಳಗ್ಗೆ 9:30 ರಿಂದ 12 ಮತ್ತು ಮಧ್ಯಾಹ್ನ 2:30 ರಿಂದ ಸಂಜೆ 5 ಗಂಟೆ ವರೆಗೆ ಏರ್ ಶೋ ಎರಡು ಪ್ರದರ್ಶನ ಇರಲಿದೆ.
ಸೂರ್ಯಕಿರಣ, ಆಮೆರಿಕದ ಎಫ್ 35, ರಷ್ಯಾದ ಎಸ್‌ಯು 57, ತೇಜಸ್ ಎಲ್ಸಿಎ, ಎಲ್ಯುಹೆಚ್ ಹೆಲಿಕಾಪ್ಟರ್ ಪ್ರದರ್ಶನ ಕಣ್ಮನ ಸೆಳೆಯಲಿದೆ. ಎರಡೂವರೆ ಸಾವಿರ, 5 ಸಾವಿರ ಟಿಕೆಟ್ ಪಡೆದವರಿಗೆ ಕಾರ್ಯಕ್ರಮ ಪ್ರದೇಶದ ಹೊರಭಾಗ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
1 ಸಾವಿರ ರೂ. ಟಿಕೆಟ್ ಪಡೆದವರಿಗೆ ಜಕ್ಕೂರು, ಜಿಕೆವಿಕೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಇರಲಿದೆ. ಈ ಭಾಗದಲ್ಲಿ ಸವಾರರಿಗೆ ಕಳೆದು ಮೂರು ದಿನಕ್ಕಿಂತಲೂ ಹೆಚ್ಚು ವಾಹನ ದಟ್ಟನೆ ಎಫೆಕ್ಟ್ ಇಂದು, ನಾಳೆ ತಟ್ಟುವ ಸಾಧ್ಯತೆ ಇದೆ.
ತುಮಕೂರಿನ ಹೆಎಎಲ್ ಏಷ್ಯಾದ ಅತಿ ದೊಡ್ಡ ವಿಮಾನ ತಯಾರಿಕಾ ಕಾರ್ಖಾನೆಯತ್ತ ವಿದೇಶಿ ರಕ್ಷಣಾ ಅಧಿಕಾರಿಗಳ ಚಿತ್ತ ನೆಟ್ಟಿದೆ. ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಉತ್ಪಾದನೆಗೊಳ್ಳುತ್ತಿರುವ ಉತ್ಪನ್ನಗಳ ಬಗ್ಗೆ ಜಗತ್ತಿನ ಮಾರುಕಟ್ಟೆಗೆ ಭಾರತೀಯ ಕಂಪನಿಗಳು ಪರಿಚಯಿಸಲಿವೆ.
ಮಲ್ಟಿರೋಲ್ ಫೈಟರ್ ಏರ್ ಕ್ರಾಫ್ಟ್ ಆಕರ್ಷಣೆ
ಎರಡನೇ ದಿನದ ಏರ್ ಶೋನಲ್ಲಿ ಸ್ವೀಡನ್ ದೇಶದ ಮಲ್ಟಿರೋಲ್ ಫೈಟರ್ ಏರ್ ಕ್ರಾಫ್ಟ್ ಎಲ್ಲರನ್ನೂ ಆಕರ್ಷಿಸುತ್ತಿದೆ. ಸಾಬ್ ಕಂಪನಿಯಿAದ ನಿರ್ಮಿತವಾದ ಈ ಫೈಟರ್ ಏರ್ ಕ್ರಾಫ್ಟನ್ನು ಭಾರತಕ್ಕೆ ಪರಿಚಯಿಸುವ ಕುರಿತು ಉಭಯ ರಾಷ್ಟ್ರಗಳ ಜೊತೆ ಮಾತುಕತೆ ಕೂಡ ನಡೆಯುತ್ತಿದೆ.
ಬ್ರೆಜಿಲ್ ಯುದ್ಧ ಕಾರ್ಗೋ ವಿಮಾನ
ಆಧುನಿಕ ಯುದ್ಧಗಳ ಸಂಧರ್ಭದಲ್ಲಿ ಫೈಟರ್ ಜೆಟ್‌ಗಳಷ್ಟೇ ಪ್ರಾಮುಖ್ಯತೆ ಕಾರ್ಗೋ ವಿಮಾನಗಳಿಗೂ ಇದೆ. ಫೈಟರ್ ಜೆಟ್‌ಗಳು ಶತ್ರುವಿನ ಮೇಲೆ ಮುಗಿಬೀಳುವ ಸಾಮಾರ್ಥ್ಯ ಹೊಂದಿವೆ. ಕಾರ್ಗೋ ವಿಮಾನಗಳು ಫೈಟರ್ ಜೆಟ್‌ಗಳಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತವೆ. ಅದೇ ರೀತಿ ಈ ಬಾರಿ ಏರ್ ಶೋನಲ್ಲಿ ಸಿ-390 ಮಿಲಿನಿಯಂ ಹೆಸರಿನ ಭಾರೀ ಗಾತ್ರದ ಬ್ರೆಜಿಲ್ ಮೂಲದ ಕಾರ್ಗೋ ವಿಮಾನ ತನ್ನತ್ತ ಸೆಳೆಯುತ್ತಿದೆ. ವಾಯುಸೇನೆಯಲ್ಲಿ 6 ರೀತಿಯ ಕಾರ್ಯವನ್ನ ಮಾಡಿ, ತನ್ನ ಸೇನೆಗೆ ಬಲ ತುಂಬುವ ಈ ಕಾರ್ಗೋ ಸದ್ಯ ಬ್ರೆಜಿಲ್, ಪೋರ್ಚುಗಲ್, ಹಂಗೇರಿ ದೇಶಗಳಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ತಮ್ಮ ಸೇನೆಗೆ ಈ ಬಾಹುಬಲಿಯನ್ನ ಸೇರ್ಪಡೆ ಮಾಡಲು ಅನೇಕ ದೇಶಗಳು ಕೂಡ ಸಾಲಿನಲ್ಲಿ ಕಾದು ನಿಂತಿವೆ.
ಏರ್ ಶೋನ ಎರಡನೇ ದಿನವನ್ನ ನೋಡಲು ರಕ್ಷಣಾ ಇಲಾಖೆ ಅಧಿಕಾರಿಗಳ ಕುಟುಂಬಗಳು, ಗಣ್ಯರು ಯಲಹಂಕದ ವಾಯುನೆಲೆಗೆ ಆಗಮಿಸಿದ್ದಾರೆ.
ಬೆಂಗಳೂರು: ನೋಡುಗರ ಹೃದಯ ಬಡಿತ ಹೆಚ್ಚಿಸುವ 15ನೇ ಆವೃತ್ತಿಯ ವೈಮಾನಿಕ ಪ್ರದರ್ಶನ ʻಏರೋ ಇಂಡಿಯಾ 2025ʼ (Aero India 2025) ಇಂದಿನಿಂದ ಶುರುವಾಗಿದೆ. ಕೇಂದ್ರ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದ್ದಾರೆ. ಐದು ದಿನಗಳ ಕಾಲ ಏರ್ ಶೋ ನಡೆಯಲಿದ್ದು, ಮೊದಲ ದಿನವೇ ಬೆಂಗಳೂರಿಗರಿಗೆ ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ.
ಏರ್ ಶೋ ನಡೆಯುವ ಸ್ಥಳದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದ್ದು, ಬೆಳ್ಳಂಬೆಳಗ್ಗೆಯೇ ವಾಹನ ಸವಾರರು ಪರದಾಡುವಂತಾಗಿದೆ. ಕಿಲೋಮೀಟರ್‌ಗಟ್ಟಲೇ ವಾಹನಗಳು ನಿಂತ ಹಿನ್ನೆಲೆಯಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಟ್ರಾಫಿಕ್ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಏರ್ ಶೋ ಉದ್ಘಾಟನಾ ಕಾರ್ಯಕ್ರಮದ ಸ್ಟಾಲ್‌ಗಳಿಗೆ ಬರುವ ಗಣ್ಯರಿಗೂ ಟ್ರಾಫಿಕ್ ಬಿಸಿ ತಟ್ಟಿದೆ. ಕಳೆದ ಎರಡು ಗಂಟೆಯಿಂದ ವಾಹನಗಳು ನಿಧಾನಗತಿಯಲ್ಲಿ ಸಂಚರಿಸುತ್ತಿವೆ. ಇದನ್ನೂ ಓದಿ: ಮದುವೆಯಲ್ಲಿ ಡಾನ್ಸ್ ಮಾಡುತ್ತಿದ್ದಾಗಲೇ ಹೃದಯ ಸ್ತಂಭನ – ವೇದಿಕೆಯಲ್ಲೇ ಎಂಬಿಎ ಪದವೀಧರೆ ಸಾವು
ಹಲವು ರಸ್ತೆಗಳಲ್ಲಿ ಸಂಚಾರ ಮಾರ್ಪಾಡು:
ಇನ್ನೂ ಇಂದಿನಿಂದ ಏರ್ ಶೋ ಆರಂಭ ಹಿನ್ನೆಲೆ 5 ದಿನಗಳ ಕಾಲ ಏರ್‌ಪೋರ್ಟ್ ರಸ್ತೆಯ ಸವಾರರಿಗೆ ಟ್ರಾಫಿಕ್ ಬಿಸಿ ತಟ್ಟುವ ಸಾಧ್ಯತೆ ಇದೆ. ವಿದೇಶಿ ಗಣ್ಯರು ಆಗಮಿಸುವ ಕಾರಣ ಎಲಿವೇಟೆಡ್ ರಸ್ತೆಯ ಓಡಾಟವನ್ನ ಕೆಲ ಕಾಲ ಬಂದ್ ಮಾಡಲಾಗುತ್ತೆ. ಸರ್ವೀಸ್ ರಸ್ತೆಯಲ್ಲೇ ಸಂಚಾರ ಮಾಡಬೇಕಿರೋ ಕಾರಣ ಆ ಭಾಗದ ವಾಹನ ಸವಾರರು 5 ದಿನಗಳ ಕಾಲ ಇದೇ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಇನ್ನೂ, ಏರ್ ಪೋರ್ಟ್ ರಸ್ತೆ ಸುತ್ತಮುತ್ತ ಹಲವು ರಸ್ತೆಗಳಲ್ಲಿ ಸಂಚಾರ ಮಾರ್ಪಾಡು ಮಾಡಿ ಸಂಚಾರಿ ಪೊಲೀಸರು ಆದೇಶಿಸಿದ್ದಾರೆ. ಇದನ್ನೂ ಓದಿ: ಜನಾಂಗೀಯ ಹಿಂಸಾಚಾರ; ಬಿಕ್ಕಟ್ಟಿನ ರಾಜ್ಯದ ಸಿಎಂ ರಾಜೀನಾಮೆ – ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಯಾಗುತ್ತಾ?
ಯಾವೆಲ್ಲ ವಾಹನಗಳಿಗೆ ಸಂಚಾರ ನಿಷೇಧ
* ಲಾರಿ, ಟ್ರಕ್, ಬಸ್, ಸರಕು ಸಾಗಾಣಿಕೆ ವಾಹನಗಳಿಗೆ ಸಂಚಾರ ನಿರ್ಬಂಧ
* ಮೇಖ್ರಿ ವೃತ್ತದಿಂದ-ಎಂವಿಐಟಿ ಕ್ರಾಸ್‌ವರೆಗೆ ಸಂಚಾರ ನಿಷೇಧ
* ಗೊರಗುಂಟೆಪಾಳ್ಯದಿಂದ ಹೆಬ್ಬಾಳ ಮಾರ್ಗವಾಗಿ ಹೆಣ್ಣೂರು ಕ್ರಾಸ್‌ವರೆಗೆ ನಿಷೇಧ
* ನಾಗವಾರ ಜಂಕ್ಷನ್‌ನಿಂದ ರೇವಾ ಕಾಲೇಜ್ ಜಂಕ್ಷನ್‌ವರೆಗೆ ಸಂಚಾರ ನಿಷೇಧ
* ಹೆಸರಘಟ್ಟ, ಚಿಕ್ಕಬಾಣಾವರ ಕಡೆಯಿಂದ ಬೆಂಗಳೂರು ಕಡೆಗೆ ಸಂಚಾರ ನಿಷೇಧ
* ಜಿಕೆವಿಕೆ ಕ್ಯಾಂಪಸ್‌ನಲ್ಲಿ ಸಾರ್ವಜನಿಕರಿಗೆ ಉಚಿತ ಪಾರ್ಕಿಂಗ್ ವ್ಯವಸ್ಥೆ
ಬೆಂಗಳೂರು: ದೇಶದ 15ನೇ ಆವೃತ್ತಿಯ ವೈಮಾನಿಕ ಪ್ರದರ್ಶನ ʻಏರೋ ಇಂಡಿಯಾ 2025ʼ (Aero India 2025) ಇಂದಿನಿಂದ ಆರಂಭಗೊಳ್ಳುತ್ತಿದೆ. ಈ ಹಿನ್ನೆಲೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Bengaluru International Airport) ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಇಂದು (ಸೋಮವಾರ) ಬೆಳಗ್ಗೆ 9 ರಿಂದ ಮಧ್ಯಾಹ್ನ 12ರ ವರೆಗೆ, ಮಧ್ಯಾಹ್ನ 2 ರಿಂದ ಸಂಜೆ 4ರ ವರೆಗೆ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಲಿದೆ. ಫೆಬ್ರವರಿ 11 ಮತ್ತು 12 ರಂದು ಮಧ್ಯಾಹ್ನ 12 ರಿಂದ ಮಧ್ಯಾಹ್ನ 3ರ ವರೆಗೆ, ಫೆಬ್ರವರಿ 13 ಮತ್ತು 14ರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12ರ ವರೆಗೆ, ಮಧ್ಯಾಹ್ನ 2 ರಿಂದ ಸಂಜೆ 5ರ ವರೆಗೆ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೂಲಗಳು ತಿಳಿಸಿವೆ. ಏರ್‌ಶೋನಲ್ಲಿ ವೈಮಾನಿಕ ಪ್ರದರ್ಶನ ಹಿನ್ನೆಲೆಯಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: Aero India 2025 | ವೈಮಾನಿಕ ಪ್ರದರ್ಶನಕ್ಕಿಂದು ಚಾಲನೆ – ರಷ್ಯಾ, ಅಮೆರಿಕ ಸೇರಿ 90 ದೇಶಗಳು ಭಾಗಿ
ಯಲಹಂಕ ವಾಯುನೆಲೆಯಲ್ಲಿ ಇಂದು ಬೆಳಗ್ಗೆ 9:30ರ ವೇಳೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಲಿದ್ದಾರೆ. ದೇಶ – ವಿದೇಶಗಳ ಪ್ರಮುಖ ನಾಯಕರು, ರಕ್ಷಣಾ ವಿಭಾಗದ ಅಧಿಕಾರಿಗಳು ಏರ್ ಶೋ ನಲ್ಲಿ ಭಾಗಿಯಾಗಲಿದ್ದಾರೆ. ಫೆಬ್ರವರಿ 14ರ ವರೆಗೆ ನಡೆಯಲಿರುವ ಏರ್ ಶೋನಲ್ಲಿ ಅಮೆರಿಕ, ರಷ್ಯನ್ ಸೇರಿದಂತೆ ವಿವಿಧ ದೇಶಗಳ ಯುದ್ಧ ವಿಮಾನಗಳು ಭಾಗಿಯಾಗಲಿವೆ. ಇದನ್ನೂ ಓದಿ: Hassan | ಮದುವೆಯಾಗಲು ಪ್ರಿಯತಮೆ ನಿರಾಕರಣೆ – ವಿಷ ಸೇವಿಸಿ ಯುವಕ ಆತ್ಮಹತ್ಯೆ
ಈ ಬಾರಿಯ ವಿಶೇಷತೆ ಏನು?
ಈ ಬಾರಿ 42,438 ವಿಸ್ತೀರ್ಣದಲ್ಲಿ ಏರ್ ಶೋ ನಡೆಯುತ್ತಿದ್ದು, ವಿವಿಧ 30 ದೇಶಗಳ ರಕ್ಷಣಾ ಸಚಿವರು, ವಿವಿಧ ದೇಶಗಳ 43 ಮಂದಿ ಸೇನಾ ಮುಖ್ಯಸ್ಥರು ಭಾಗಿಯಾಗಲಿದ್ದಾರೆ. ಒಟ್ಟಾರೆ 90 ದೇಶಗಳು ಏರೋ ಇಂಡಿಯಾದವನ್ನು ಪ್ರತಿನಿಧಿಸಲಿವೆ. 70 ಯುದ್ಧ ವಿಮಾನಗಳು, ಸರಕು, ತರಬೇತಿ ವಿಮಾನಗಳು, 30 ವಿಮಾನಗಳು, ಹೆಲಿಕಾಫ್ಟರ್ ಹೃದಯ ಬಡಿತ ಹೆಚ್ಚಿಸುವ ಕಸರತ್ತು ನಡೆಸಲಿವೆ. ರಷ್ಯನ್ & ಅಮೆರಿಕನ್ ಯುದ್ಧ ವಿಮಾನಗಳು ಈ ಪ್ರದರ್ಶನದ ಆಕರ್ಷಣೆಯಾಗಿವೆ. ಇದನ್ನೂ ಓದಿ: IND vs ENG, 2nd ODI: ರೋಹಿತ್ ಅಬ್ಬರದ ಶತಕ, ಜಡೇಜಾ ಸ್ಪಿನ್ ಜಾದು – ಆಂಗ್ಲರ ವಿರುದ್ಧ ಭಾರತಕ್ಕೆ 4 ವಿಕೆಟ್‌ಗಳ ಜಯ
ಅಲ್ಲದೇ ವಿವಿಧ ದೇಶಗಳ 900ಕ್ಕೂ ಹೆಚ್ಚು ಉತ್ಪಾದಕರು ಇದರಲ್ಲಿ ಭಾಗಿಯಾಗಲಿದ್ದಾರೆ. ಎಐ, ಡ್ರೋನ್, ಸೈಬರ್ ಸೆಕ್ಯೂರಿಟಿ, ಗ್ಲೋಬರ್ ಏರೋಸ್ಪೇಸ್, ನೂತನ ತಂತ್ರಜ್ಞಾನಗಳನ್ನು ಪರಿಚಯಿಸಲಿದ್ದಾರೆ. ಆತ್ಮನಿರ್ಭರ ಭಾರತ ಉತ್ಪನ್ನಗಳು ಈ ಬಾರಿಯ ಶೋನಲ್ಲಿ ಇರಲಿವೆ. 100 ವಿವಿಧ ಕಂಪನಿಗಳ ಸಿಇಒಗಳು, 50 ವಿದೇಶಿ ಓಎಂಎಸ್ ಭಾಗಿಯಾಗಲಿದ್ದಾರೆ. ಹೂಡಿಕೆ, ಸಂಶೋಧನೆ, ಜಾಯಿಂಟ್ ವೆಂಚರ್, ರಕ್ಷಣಾ ವಲಯದ ಬಗ್ಗೆ ಚರ್ಚೆ ನಡೆಯಲಿದೆ. 10 ವಿವಿಧ ವಿಷಯಗಳನ್ನ ಒಳಗೊಂಡ ಸೆಮಿನಾರ್‌ಗಳು ಇರಲಿದೆ. 70ಕ್ಕೂ ಹೆಚ್ಚು ಫ್ಲೈಯಿಂಗ್ ಡಿಸ್‌ಪ್ಲೇಗಳು ಏರ್ ಶೋನಲ್ಲಿ ಇರಲಿವೆ. 7 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ವೀಕ್ಷಕರು ಆಗಮಿಸುವ ನಿರೀಕ್ಷೆ ಹೊಂದಲಾಗಿದೆ.
– 70 ಯುದ್ಧ ವಿಮಾನ, 100ಕ್ಕೂ ಹೆಚ್ಚು ರಾಷ್ಟ್ರಗಳ ಪ್ರತಿನಿಧಿಗಳು ಭಾಗಿ
– ಏರ್‌ಪೋರ್ಟ್ ಸುತ್ತಮುತ್ತ ಹಲವು ರಸ್ತೆಗಳ ಸಂಚಾರದಲ್ಲಿ ಮಾರ್ಪಾಡು
ಬೆಂಗಳೂರು: ನೋಡುಗರ ಹೃದಯ ಬಡಿತ ಹೆಚ್ಚಿಸುವ ವೈಮಾನಿಕ ಕಸರತ್ತು, ವೈಮಾನಿಕ ಹಾಗೂ ಬಾಹ್ಯಾಕಾಶ ಉದ್ದಿಮೆ, ಉದ್ಯಮಿಗಳ ಮುಖಾಮುಖಿಗೆ ವೇದಿಕೆಯಾಗಲಿರುವ ದೇಶದ 15ನೇ ಆವೃತ್ತಿಯ ವೈಮಾನಿಕ ಪ್ರದರ್ಶನ ʻಏರೋ ಇಂಡಿಯಾ 2025ʼ (Aero India 2025) ಸೋಮವಾರ ಶುರುವಾಗಲಿದೆ.
ಯಲಹಂಕ ವಾಯುನೆಲೆಯಲ್ಲಿ (Yelahanka Air Base) ಇಂದು ಬೆಳಗ್ಗೆ 9:30ರ ವೇಳೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಲಿದ್ದಾರೆ. ದೇಶ – ವಿದೇಶಗಳ ಪ್ರಮುಖ ನಾಯಕರು, ರಕ್ಷಣಾ ವಿಭಾಗದ ಅಧಿಕಾರಿಗಳು ಏರ್ ಶೋ ನಲ್ಲಿ ಭಾಗಿಯಾಗಲಿದ್ದಾರೆ. ಇಂದಿನಿಂದ ಫೆಬ್ರವರಿ 14ರ ವರೆಗೆ ನಡೆಯಲಿರುವ ಏರ್ ಶೋನಲ್ಲಿ ಅಮೆರಿಕ, ರಷ್ಯನ್ ಸೇರಿದಂತೆ ವಿವಿಧ ದೇಶಗಳ ಯುದ್ಧ ವಿಮಾನಗಳು ಭಾಗಿಯಾಗಲಿವೆ. ಇದನ್ನೂ ಓದಿ: IND vs ENG, 2nd ODI: ರೋಹಿತ್ ಅಬ್ಬರದ ಶತಕ, ಜಡೇಜಾ ಸ್ಪಿನ್ ಜಾದು – ಆಂಗ್ಲರ ವಿರುದ್ಧ ಭಾರತಕ್ಕೆ 4 ವಿಕೆಟ್‌ಗಳ ಜಯ
ಈ ಬಾರಿ ʻರನ್ ವೇ ಟು ಬಿಲಿಯನ್ ಆಪರ್ಚುನಿಟಿ ಟ್ಯಾಗ್ ಲೈನ್ʼನಲ್ಲಿ ಏರ್ ಶೋ ಜರುಗಲಿದೆ. 100ಕ್ಕೂ ಹೆಚ್ಚು ದೇಶಗಳ, 900ಕ್ಕೂ ಹೆಚ್ಚು ಉತ್ಪಾದಕರು ಭಾಗಿಯಾಗುತ್ತಿದ್ದು, ಎಐ, ಡ್ರೋನ್, ಗ್ಲೋಬಲ್ ಏರೋ ಸ್ಪೇಸ್, ಸೇರಿದಂತೆ ನೂತನ ತಂತ್ರಜ್ಞಾನದ ವಿವಿಧ ವಸ್ತುಪ್ರದರ್ಶನಗಳನ್ನ ಕಣ್ತುಂಬಿಕೊಳ್ಳುವ ಅವಕಾಶ ಇರಲಿದೆ. ಕೊನೆಯ ಎರಡು ದಿನ ಸಾರ್ವಜನಿಕರಿಗೆ ಮುಕ್ತ ಅವಕಾಶ ಇರಲಿದೆ.
ಈ ಬಾರಿಯ ವಿಶೇಷತೆ ಏನು?
ಈ ಬಾರಿ 42,438 ವಿಸ್ತೀರ್ಣದಲ್ಲಿ ಏರ್ ಶೋ ನಡೆಯುತ್ತಿದ್ದು, ವಿವಿಧ 30 ದೇಶಗಳ ರಕ್ಷಣಾ ಸಚಿವರು, ವಿವಿಧ ದೇಶಗಳ 43 ಮಂದಿ ಸೇನಾ ಮುಖ್ಯಸ್ಥರು ಭಾಗಿಯಾಗಲಿದ್ದಾರೆ. ಒಟ್ಟಾರೆ 90 ದೇಶಗಳು ಏರೋ ಇಂಡಿಯಾದವನ್ನು ಪ್ರತಿನಿಧಿಸಲಿವೆ. 70 ಯುದ್ಧ ವಿಮಾನಗಳು, ಸರಕು, ತರಬೇತಿ ವಿಮಾನಗಳು, 30 ವಿಮಾನಗಳು, ಹೆಲಿಕಾಫ್ಟರ್ ಹೃದಯ ಬಡಿತ ಹೆಚ್ಚಿಸುವ ಕಸರತ್ತು ನಡೆಸಲಿವೆ. ರಷ್ಯನ್ & ಅಮೆರಿಕನ್ ಯುದ್ಧ ವಿಮಾನಗಳು ಈ ಪ್ರದರ್ಶನದ ಆಕರ್ಷಣೆಯಾಗಿವೆ. ಇದನ್ನೂ ಓದಿ: ಫೆ.11ರಂದು ‘ಇನ್ವೆಸ್ಟ್ ಕರ್ನಾಟಕ 2025’ಕ್ಕೆ ಚಾಲನೆ – ಹೂಡಿಕೆ ಉತ್ಸವಕ್ಕೆ ಮುನ್ನುಡಿ: ಎಂ.ಬಿ.ಪಾಟೀಲ್
ಅಲ್ಲದೇ ವಿವಿಧ ದೇಶಗಳ 900ಕ್ಕೂ ಹೆಚ್ಚು ಉತ್ಪಾದಕರು ಇದರಲ್ಲಿ ಭಾಗಿಯಾಗಲಿದ್ದಾರೆ. ಎಐ, ಡ್ರೋನ್, ಸೈಬರ್ ಸೆಕ್ಯೂರಿಟಿ, ಗ್ಲೋಬರ್ ಏರೋಸ್ಪೇಸ್, ನೂತನ ತಂತ್ರಜ್ಞಾನಗಳನ್ನು ಪರಿಚಯಿಸಲಿದ್ದಾರೆ. ಆತ್ಮನಿರ್ಭರ ಭಾರತ ಉತ್ಪನ್ನಗಳು ಈ ಬಾರಿಯ ಶೋನಲ್ಲಿ ಇರಲಿವೆ. 100 ವಿವಿಧ ಕಂಪನಿಗಳ ಸಿಇಒಗಳು, 50 ವಿದೇಶಿ ಓಎಂಎಸ್ ಭಾಗಿಯಾಗಲಿದ್ದಾರೆ. ಹೂಡಿಕೆ, ಸಂಶೋಧನೆ, ಜಾಯಿಂಟ್ ವೆಂಚರ್, ರಕ್ಷಣಾ ವಲಯದ ಬಗ್ಗೆ ಚರ್ಚೆ ನಡೆಯಲಿದೆ. 10 ವಿವಿಧ ವಿಷಯಗಳನ್ನ ಒಳಗೊಂಡ ಸೆಮಿನಾರ್‌ಗಳು ಇರಲಿದೆ. 70ಕ್ಕೂ ಹೆಚ್ಚು ಫ್ಲೈಯಿಂಗ್ ಡಿಸ್‌ಪ್ಲೇಗಳು ಏರ್ ಶೋನಲ್ಲಿ ಇರಲಿವೆ. 7 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ವೀಕ್ಷಕರು ಆಗಮಿಸುವ ನಿರೀಕ್ಷೆ ಹೊಂದಲಾಗಿದೆ.
ಏರ್‌ಪೋರ್ಟ್ ರಸ್ತೆಯ ಸವಾರರಿಗೆ ಟ್ರಾಫಿಕ್ ಬಿಸಿ:
ಇನ್ನೂ ಇಂದಿನಿಂದ ಏರ್ ಶೋ ಆರಂಭ ಹಿನ್ನೆಲೆ 5 ದಿನಗಳ ಕಾಲ ಏರ್‌ಪೋರ್ಟ್ ರಸ್ತೆಯ ಸವಾರರಿಗೆ ಟ್ರಾಫಿಕ್ ಬಿಸಿ ತಟ್ಟುವ ಸಾಧ್ಯತೆ ಇದೆ. ವಿದೇಶಿ ಗಣ್ಯರು ಆಗಮಿಸುವ ಕಾರಣ ಎಲಿವೇಟೆಡ್ ರಸ್ತೆಯ ಓಡಾಟವನ್ನ ಕೆಲ ಕಾಲ ಬಂದ್ ಮಾಡಲಾಗುತ್ತೆ. ಸರ್ವೀಸ್ ರಸ್ತೆಯಲ್ಲೇ ಸಂಚಾರ ಮಾಡಬೇಕಿರೋ ಕಾರಣ ಆ ಭಾಗದ ವಾಹನ ಸವಾರರು 5 ದಿನಗಳ ಕಾಲ ಇದೇ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಇನ್ನೂ, ಏರ್ ಪೋರ್ಟ್ ರಸ್ತೆ ಸುತ್ತಮುತ್ತ ಹಲವು ರಸ್ತೆಗಳಲ್ಲಿ ಸಂಚಾರ ಮಾರ್ಪಾಡು ಮಾಡಿ ಸಂಚಾರಿ ಪೊಲೀಸರು ಆದೇಶಿಸಿದ್ದಾರೆ. ಇದನ್ನೂ ಓದಿ: Hassan | ಮದುವೆಯಾಗಲು ಪ್ರಿಯತಮೆ ನಿರಾಕರಣೆ – ವಿಷ ಸೇವಿಸಿ ಯುವಕ ಆತ್ಮಹತ್ಯೆ
ಯಾವೆಲ್ಲ ವಾಹನಗಳಿಗೆ ಸಂಚಾರ ನಿಷೇಧ
* ಲಾರಿ, ಟ್ರಕ್, ಬಸ್, ಸರಕು ಸಾಗಾಣಿಕೆ ವಾಹನಗಳಿಗೆ ಸಂಚಾರ ನಿರ್ಬಂಧ
* ಮೇಖ್ರಿ ವೃತ್ತದಿಂದ-ಎಂವಿಐಟಿ ಕ್ರಾಸ್‌ವರೆಗೆ ಸಂಚಾರ ನಿಷೇಧ
* ಗೊರಗುಂಟೆಪಾಳ್ಯದಿಂದ ಹೆಬ್ಬಾಳ ಮಾರ್ಗವಾಗಿ ಹೆಣ್ಣೂರು ಕ್ರಾಸ್‌ವರೆಗೆ ನಿಷೇಧ
* ನಾಗವಾರ ಜಂಕ್ಷನ್‌ನಿಂದ ರೇವಾ ಕಾಲೇಜ್ ಜಂಕ್ಷನ್‌ವರೆಗೆ ಸಂಚಾರ ನಿಷೇಧ
* ಹೆಸರಘಟ್ಟ, ಚಿಕ್ಕಬಾಣಾವರ ಕಡೆಯಿಂದ ಬೆಂಗಳೂರು ಕಡೆಗೆ ಸಂಚಾರ ನಿಷೇಧ
* ಜಿಕೆವಿಕೆ ಕ್ಯಾಂಪಸ್‌ನಲ್ಲಿ ಸಾರ್ವಜನಿಕರಿಗೆ ಉಚಿತ ಪಾರ್ಕಿಂಗ್ ವ್ಯವಸ್ಥೆ
ಬೆಂಗಳೂರು: 15ನೇ ಆವೃತ್ತಿಯ ಏರೋ ಇಂಡಿಯಾ (Aero India 2025) ವೈಮಾನಿಕ ಪ್ರದರ್ಶನ ಫೆ.10ರ ಸೋಮವಾರದಿಂದ ಸಿಲಿಕಾನ್ ಸಿಟಿಯಲ್ಲಿ ಆರಂಭವಾಗಲಿದೆ. ಈಗಾಗಲೇ ಅಮೆರಿಕದ ಎಫ್-35, ರಷ್ಯಾದ ಎಸ್‌ಯು-35 ಯುದ್ಧ ವಿಮಾನ (Fighter Jet) ಯಲಹಂಕದ ವಾಯುನೆಲೆಗೆ ಬಂದಿಳಿದಿವೆ.
ಶತ್ರುಗಳ ವಿರುದ್ಧ ರಹಸ್ಯ ಕಾರ್ಯಾಚರಣೆ ನಡೆಸಬಲ್ಲ 5ನೇ ತಲೆಮಾರಿನ ಅತ್ಯಾಧುನಿಕ ಯುದ್ಧ ವಿಮಾನಗಳು ಈ ಬಾರಿಯ ಏರ್ ಶೋ ನಲ್ಲಿ ಗಮನ ಸೆಳೆಯಲಿವೆ. ಈಗಾಗಲೇ ತಾಲೀಮು ಆರಂಭಿಸಿರುವ ಎಸ್‌ಯು 57 ಜೊತೆಗೆ ಇಂದಿನಿಂದ ಎಫ್-35 ಮತ್ತು ಎರಡು ಎಫ್-16 ವಿಮಾನಗಳು ತಾಲೀಮು ನಡೆಸಲಿವೆ. ಇದನ್ನೂ ಓದಿ: ನಾಳೆಯಿಂದ ಏರೋ ಇಂಡಿಯಾ ಶೋ – ಬಾನಂಗಳದಲ್ಲಿ ಮೋಡಿ ಮಾಡಲಿವೆ ಲೋಹದ ಹಕ್ಕಿಗಳು
ಬೆಂಗಳೂರು: ನಾಳೆಯಿಂದ (ಫೆ.10) 15ನೇ ಆವೃತ್ತಿಯ ಏರೋ ಇಂಡಿಯಾ ಶೋ (Aero India Show) ಆರಂಭವಾಗಲಿದೆ. ಯಲಹಂಕದ (Yelahanka) ವಾಯು ನೆಲೆಯಲ್ಲಿ ನಡೆಯಲಿರುವ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಈ ಬಾರಿ ಹಲವು ದಾಖಲೆಗಳ ನೀರಿಕ್ಷೆಗಳನ್ನ ಹುಟ್ಟಿಸಿದೆ.
ರನ್ ಟು ಎ ಬಿಲಿಯನ್ ಆಪರ್ಚುನಿಟೀಸ್ ಎಂಬ ವಿಶಾಲ ಧ್ಯೇಯದೊಂದಿಗೆ 5 ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಯಲಹಂಕ ವಾಯುನೆಲೆ ಸಿದ್ಧವಾಗಿದೆ. ಫೆಬ್ರವರಿ 10 ರಿಂದ 14ರವರೆಗೆ ನಡೆಯಲಿರುವ ಏರ್ ಶೋಗೆ ದೇಶ, ವಿದೇಶದ ಗಣ್ಯರು ಆಗಮಿಸಲಿದ್ದಾರೆ. ದೇಶ, ವಿದೇಶದ ವಾಯುಪಡೆಯ ವಿಮಾನಗಳು ಬಾನಂಗಳದಲ್ಲಿ ಮೋಡಿ ಮಾಡಲು ರೆಡಿಯಾಗಿವೆ. ಇದನ್ನೂ ಓದಿ: ಅಬ್ಬಬ್ಬಾ.. ಮೊದಲ ಚಿತ್ರಕ್ಕೆ ಇಷ್ಟೊಂದು ಸಂಭಾವನೆ ಪಡೆದಿದ್ದಾರಾ ಮೊನಾಲಿಸಾ?
ಕಾರ್ಯಕ್ರಮವನ್ನು ಭಾರತೀಯ ರಕ್ಷಣಾ ಇಲಾಖೆಯ ಸಚಿವ ರಾಜನಾಥ್ ಸಿಂಗ್ ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದ ಮೊದಲ ಮೂರು ದಿನ ಅಂದರೆ ಫೆಬ್ರವರಿ 10, 11, 12ರವರೆಗೆ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯವಹಾರ ದಿನಗಳಾಗಿರುತ್ತವೆ. 13 ಮತ್ತು 14ರಂದು ಸಾರ್ವಜನಿಕ ವೀಕ್ಷಣೆಗೆ ಅವಕಾಶವನ್ನ ಕಲ್ಪಿಸಲಾಗಿದೆ. ಏರೋಸ್ಪೇಸ್ ವಲಯದಿಂದ ದೊಡ್ಡ ಶ್ರೇಣಿಯ ಮಿಲಿಟರಿ ವೇದಿಕೆಗಳ ವಾಯು ಪ್ರದರ್ಶನ, ವಸ್ತು ಪ್ರದರ್ಶನಗಳನ್ನು ಒಳಗೊಂಡಿದೆ. ಇದನ್ನೂ ಓದಿ: ಐಶ್ವರ್ಯ ಕೇಸಲ್ಲೀಗ ಪೊಲೀಸರಿಗೆ ಸಿಡಿಆರ್ ಸಂಕಷ್ಟ – ಎಸಿಪಿ ಚಂದನ್‌ಗೆ ಹೆಗಲಿಗೆ ತನಿಖೆ ಹೊಣೆ
ಏರೋ ಇಂಡಿಯಾ ಶೋ ಹೈಲೈಟ್ಸ್:
* ರಕ್ಷಣಾ ಸಚಿವರುಗಳ ಸಮಾವೇಶ, ದೇಶ ವಿದೇಶದ ರಕ್ಷಣಾ ಇಲಾಖೆಯ ಉನ್ನತ ಶ್ರೇಣಿಯ ಅಧಿಕಾರಿಗಳು ಭಾಗಿ.
* ಮೊದಲ ಮೂರು ದಿನ ಉದ್ಯಮದ ವೃತ್ತಿಪರರು, ನೀತಿ ನಿರೂಪಕರು, ಹೂಡಿಕೆದಾರರಿಗೆ ಮೀಸಲು.
* ಸಿಇಒ ದುಂಡು ಮೇಜಿನ ಸಭೆ, ಮಂಥನ್ ಸ್ಟಾರ್ಟ್ಅಪ್ ಕಾರ್ಯಕ್ರಮ.
* ಏರೋಸ್ಪೇಸ್ ಕಂಪನಿಗಳ ವ್ಯಾಪಾರ ಮೇಳ.
* ಆತ್ಮನಿರ್ಭರ್ ಯೋಜನೆಯಡಿ ಭಾರತೀಯ ರಕ್ಷಣಾ ಉತ್ಪಾದನೆ ಜಗತ್ತಿಗೆ ಪರಿಚಯಿಸುವುದು.
* ಭಾರತದಲ್ಲಿ ಉತ್ಪಾದನೆಯ ಉಪಕರಣಗಳನ್ನ ಇತರ ದೇಶಗಳಿಗೆ ಮಾರಾಟ ಮಾಡುವ ಕುರಿತು ಒಡಂಬಡಿಕೆಗಳು.
* ಭಾರತೀಯ ನವೋಧ್ಯಮಗಳ ಪ್ರಚಾರಕ್ಕಾಗಿ, ಅಭಿವೃದ್ಧಿಗಾಗಿ ಉತ್ಪನ್ನಗಳನ್ನ ವಿಶೇಷ ಐಡೆಕ್ಸ್ ಪೆವಿಲಿಯನ್‌ನಲ್ಲಿ ಪ್ರದರ್ಶನ
* ದೇಶಿಯ ನಿರ್ಮಿತ ಯುದ್ಧ ವಿಮಾನಗಳ ಪ್ರದರ್ಶನ
* ಡೈನಾಮಿಕ್ ಏರೋಬ್ಯಾಟಿಕ್ ಪ್ರದರ್ಶನಗಳು, ಲೈವ್ ತಂತ್ರಜ್ಞಾನ ಪ್ರದರ್ಶನಗಳು
* ರಕ್ಷಣಾ ವೈಮಾನಿಕ ಕ್ಷೇತ್ರದಲ್ಲಿ ಯುದ್ಧ ವಿಮಾನಗಳು, ಉಪಕರಣಗಳು ಸೇರಿ ಉತ್ಪನ್ನಗಳ ಖರೀದಿಗೂ ಹಲವು ದೇಶಗಳೊಂದಿಗೆ ಒಪ್ಪಂದಗಳಾಗುವ ನಿರೀಕ್ಷೆ.
ಏರೋಸ್ಪೇಸ್ ಮತ್ತು ರಕ್ಷಣೆಯಲ್ಲಿ ಸ್ವದೇಶಿಕರಣವನ್ನ ಉತ್ತೇಜಿಸುವುದು, ಅತ್ಯಾಧುನಿಕ ತಂತ್ರಜ್ಞಾನಗಳು, ಉತ್ಪನ್ನಗಳನ್ನು ಪ್ರದರ್ಶನ ಮಾಡಲಾಗುತ್ತದೆ. ಇಗಾಗಲೇ 700ಕ್ಕೂ ಪ್ರದರ್ಶಕರು ನೋಂದಣಿ ಮಾಡಿಕೊಂಡಿದ್ದು, ರಕ್ಷಣಾ ವ್ಯವಸ್ಥೆಗೆ ಸಂಬಂಧಪಟ್ಟಂತೆ ತಮ್ಮ ಉತ್ಪನ್ನಗಳನ್ನು ಪ್ರದರ್ಶನ ಮಾಡಲು ತಯಾರಿಗಳು ನಡೆಯುತ್ತಿವೆ. ಏರ್ ಶೋನಲ್ಲಿ ಯಾವುದೇ ಸಮಸ್ಯೆಗಳಾಗದಂತೆ ಪಾಲಿಕೆ, ಜಿಲ್ಲಾಡಳಿತ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಇದನ್ನೂ ಓದಿ: ಮಹಾ ಕುಂಭಮೇಳಕ್ಕೆ ತೆರಳಿದ ಡಿಕೆಶಿ
ಬೆಂಗಳೂರು: ಯಲಹಂಕದ ವಾಯುನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾ 2025ರ (Aero India 2025) ಹಿನ್ನೆಲೆ ಫೆ.5ರಿಂದ ಫೆ.14ರವರೆಗೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರತಿದಿನ ಕೆಲವು ಗಂಟೆಗಳ ಕಾಲ ವಿಮಾನ ಹಾರಾಟ ಬಂದ್ ಆಗಲಿದೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಾಯುಯಾನ ಪ್ರದೇಶ ಮುಚ್ಚಲ್ಪಡಲಿದ್ದು, ಪ್ರಯಾಣಿಕರು ವಿಮಾನ ವೇಳಾಪಟ್ಟಿಗಳ ಪರಿಷ್ಕೃತ ಅಥವಾ ನವೀಕರಿಸಿದ ವಿವರಗಳಿಗಾಗಿ ಆಯಾ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಲು ಸೂಚಿಸಲಾಗಿದೆ. ಇದನ್ನೂ ಓದಿ: ಮೈಸೂರು ಮಹಾರಾಜರು ಕಟ್ಟಿಸಿದ್ದ ಶಿವನ ದೇವಾಲಯವಾಯ್ತು ಬಾರ್ & ರೆಸ್ಟೋರೆಂಟ್!
ವಿಮಾನ ವೇಳಾಪಟ್ಟಿಯ ನವೀಕೃತ ಮಾಹಿತಿಗೆ ಅನುಸಾರವಾಗಿ ತಮ್ಮ ಆಗಮನ ಮತ್ತು ನಿರ್ಗಮನವನ್ನು ಯೋಜಿಸಲು ನಾವು ವಿನಂತಿ ಮಾಡುತ್ತೇವೆ. ನಿಮ್ಮ ತಾಳ್ಮೆ ಮತ್ತು ಸಹಕಾರಕ್ಕಾಗಿ ಧನ್ಯವಾದಗಳು ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಪ್ರಕಟಣೆ ಹೊರಡಿಸಿದೆ. ಇದನ್ನೂ ಓದಿ: 3 ದಶಕಗಳ ಬಳಿಕ ಮಂಗಳೂರು ಕಡಲ ಕಿನಾರೆಗೆ ಬಂದ ಕಡಲಾಮೆಗಳು
ಫೆಬ್ರವರಿ 5: ಬೆಳಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ, ಅಪರಾಹ್ನ 3 ರಿಂದ ಸಂಜೆ 4:30ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ. ಫೆಬ್ರವರಿ 6: ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಅಪರಾಹ್ನ 3 ರಿಂದ ಸಂಜೆ 4:39ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ. ಫೆಬ್ರವರಿ 7: ಬೆಳಗ್ಗೆ 09ರಿಂದ 11 ರವರೆಗೆ ಮತ್ತು ಅಪರಾಹ್ನ 3 ರಿಂದ ಸಂಜೆ 4:30ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ. ಫೆಬ್ರವರಿ 8: ಬೆಳಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ಮತ್ತು ಅಪರಾಹ್ನ 3 ರಿಂದ ಸಂಜೆ 4:30ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ. ಫೆಬ್ರವರಿ 9: ಬೆಳಿಗ್ಗೆ 9 ರಿಂದ 11 ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ. ಫೆಬ್ರವರಿ 10: ಬೆಳಿಗ್ಗೆ 9 ರಿಂದ 11:30 ರವರೆಗೆ ಮತ್ತು ಅಪರಾಹ್ನ 2:30 ರಿಂದ 3:30 ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ. ಫೆಬ್ರವರಿ 11-12: ಮಧ್ಯಾಹ್ನ 12:00 ರಿಂದ ಅಪರಾಹ್ನ 2:30 ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ. ಫೆಬ್ರವರಿ 13-14: ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಅಪರಾಹ್ನ 2:30 ರಿಂದ ಸಂಜೆ 5:00 ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.