Tag: Advocates

  • ರಾಮನಗರ ಎಸ್ಪಿಯನ್ನ ಸಸ್ಪೆಂಡ್ ಮಾಡಿ – ವಕೀಲರ ಬೆಂಬಲಕ್ಕೆ ನಿಂತ ಹೆಚ್‌ಡಿಕೆ

    ರಾಮನಗರ ಎಸ್ಪಿಯನ್ನ ಸಸ್ಪೆಂಡ್ ಮಾಡಿ – ವಕೀಲರ ಬೆಂಬಲಕ್ಕೆ ನಿಂತ ಹೆಚ್‌ಡಿಕೆ

    – ವಕೀಲರ ಆಹೋರಾತ್ರಿ ಧರಣಿಗೆ ಅಶೋಕ್‌, ಹೆಚ್‌ಡಿಕೆ ಸಾಥ್‌
    – ರಾಮನಗರದಲ್ಲಿ ಮುಂದುವರಿದ ಪೊಲೀಸರು-ವಕೀಲರ ಜಟಾಪಟಿ

    ರಾಮನಗರ: ರಾಮನಗರದಲ್ಲಿ ಪೋಲಿಸರು-ವಕೀಲರ ನಡುವಿನ ಸಂಘರ್ಷ ಮುಂದುವರಿದಿದೆ. 40 ವಕೀಲರ ಮೇಲೆ ಎಫ್‌ಐಆರ್ ಖಂಡಿಸಿ ಕಳೆದೊಂದು ವಾರದಿಂದ ವಕೀಲ ಸಂಘ ಮಾಡ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ.

    ಸೋಮವಾರ ರಾಮನಗರದಲ್ಲಿ ನಡೆಯುತ್ತಿರುವ ವಕೀಲರ ಪ್ರತಿಭಟನಾ ಸ್ಥಳಕ್ಕೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಸೇರಿದಂತೆ ಪ್ರಮುಖ ನಾಯಕರು ಭೇಟಿ ನೀಡಿದ್ದಾರೆ. ಈ ವೇಳೆ ವಕೀಲರ ಸಮಸ್ಯೆ ಆಲಿಸಿದ ಹೆಚ್‌ಡಿಕೆ ಈ ವಿಚಾರದಲ್ಲಿ ಕೇವಲ ಪಿಎಸ್‌ಐ ಮಾತ್ರವಲ್ಲ, ಎಸ್ಪಿಯನ್ನೇ ಸಸ್ಪೆಂಡ್ ಮಾಡಬೇಕು ಅಂತ ಒತ್ತಾಯಿಸಿದ್ದಾರೆ.

    ಯಾರೋ ರಫೀಕ್ ಎಂಬಾತ ವಕೀಲರ ಮೇಲೆ ದೂರು ನೀಡಿದ್ದಾನೆ. ಯಾರೋ ಪ್ರಗತಿಪರರು ವಕೀಲರ ಸಂಘದಲ್ಲಿ ಹೋಗಿ ಗಲಾಟೆ ಆಗಿದೆ ಅಂದರು. ಎಷ್ಟು ಜನ ಪ್ರಗತಿಪರರಿಗೆ ಗಾಯ ಆಗಿದೆ? ಎಷ್ಟು ಜನ ಆಸ್ಪತ್ರೆಗೆ ಸೇರಿದ್ದಾರೆ? ಇಲ್ಲಿ ಸ್ಥಳೀಯ ಶಾಸಕ, ಜಿಲ್ಲಾ ಮಂತ್ರಿ ಆಡಳಿತ ಮಾಡ್ತಿದ್ದೀರಾ ಅಥವಾ ಪ್ರಗತಿಪರರು ಆಡಳಿತ ಮಾಡ್ತಿದ್ದೀರಾ.? ನ್ಯಾಯಾಲಯದ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದಿದ್ದಿದ್ದು ಒಬ್ಬ ಮುಸ್ಲಿಂ, ದೂರು ಕೊಟ್ಟಿದ್ದು ಮುಸ್ಲಿಂ, ಸ್ಥಳೀಯ ಶಾಸಕ ಮುಸ್ಲಿಂ, ಇಲ್ಲಿನ ಪಿಎಸ್‌ಐ ಸಹ ಮುಸ್ಲಿಂ, ಅಲ್ಲಿ ಏನು ನಡೆಯುತ್ತಿದೆ ಅಂತ ಗೊತ್ತಾಗ್ತಿದೆ. ವಕೀಲರ ಆವರಣಕ್ಕೆ ಹೋಗಲು ಇವರಿಗೆ ಅನುಮತಿ ಕೊಟ್ಟಿದ್ದು ಯಾರು? ವಕೀಲ ಸಂಘಕ್ಕೆ ಮನವಿ ಕೊಡಲು ಡಿಸ್ಟ್ರಿಕ್ಟ್ ಜಡ್ಜ್ ಅನುಮತಿ ಕೊಡಬೇಕು, ಕೊಟ್ಟಿದ್ದಾರಾ? ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.

    ಚಾನ್ ಪಾಷಾ ಎಂಬ ವ್ಯಕ್ತಿ ನ್ಯಾಯಾಂಗ ನಿಂದನೆ ಪೋಸ್ಟ್ ಹಾಕಿದ್ದ. ಆತನ ಮೇಲೆ ಯಾವ ಸೆಕ್ಷನ್ ಹಾಕಿದ್ರಿ? ಆತನ ಪರವಾಗಿ ವಕೀಲರ ಸಂಘಕ್ಕೆ ರಫೀಕ್ ಹಾಗೂ ಪ್ರಗತಿಪರರು ಹೋಗಿದ್ದಾರೆ. ಇದರಲ್ಲಿ ಸ್ಥಳೀಯ ಶಾಸಕನ ಕೈವಾಡ ಏನು ಎಂಬುದು ನನಗೆ ಗೊತ್ತು? ಬೆಂಗಳೂರಿನಿಂದ ಯಾವನು ಡೈರೆಕ್ಷನ್ ಕೊಟ್ಟ ಅಂತ ಗೊತ್ತು. ಈ ಘಟನೆಯನ್ನ ಮುಚ್ಚಿಹಾಕಿಸುವ ಹುನ್ನಾರ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ.

  • ಚಿಕ್ಕಮಗಳೂರಲ್ಲಿ ಪೊಲೀಸರು-ವಕೀಲರ ಗಲಾಟೆ ಪ್ರಕರಣ; ರಸ್ತೆ ತಡೆದು 200 ಕ್ಕೂ ಹೆಚ್ಚು ಪೊಲೀಸರಿಂದ ಪ್ರತಿಭಟನೆ

    ಚಿಕ್ಕಮಗಳೂರಲ್ಲಿ ಪೊಲೀಸರು-ವಕೀಲರ ಗಲಾಟೆ ಪ್ರಕರಣ; ರಸ್ತೆ ತಡೆದು 200 ಕ್ಕೂ ಹೆಚ್ಚು ಪೊಲೀಸರಿಂದ ಪ್ರತಿಭಟನೆ

    ಚಿಕ್ಕಮಗಳೂರು: ಯುವ ವಕೀಲನ ಮೇಲೆ ಪೊಲೀಸರು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ (Chikkamagaluru) ವಕೀಲರು ಮತ್ತು ಪೊಲೀಸರ ನಡುವಿನ ವಿವಾದ ತಾರಕಕ್ಕೇರಿದೆ. 6 ಪೊಲೀಸರ ಅಮಾನತು ಮತ್ತು ಗಲಾಟೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದ್ದ ಒಬ್ಬ ಪೊಲೀಸ್ ಬಂಧನ ಖಂಡಿಸಿ ಪೊಲೀಸರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

    ಕಾಫಿನಾಡ ಪೊಲೀಸರು ರಾಷ್ಟ್ರೀಯ ಹೆದ್ದಾರಿ-173 ತಡೆದು 200 ಕ್ಕೂ ಹೆಚ್ಚು ಪೊಲೀಸರು ತಡರಾತ್ರಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಪಶ್ಚಿಮ ವಲಯ ಐಜಿ ಚಂದ್ರಗುಪ್ತ ಅವರ ಮನವಿಗೂ ಬಗ್ಗದ ಪೋಲೀಸರು ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

    ಚಿಕ್ಕಮಗಳೂರು ನಗರದ 6 ಠಾಣೆ ಪೊಲೀಸರು ಕೆಲಸ ನಿಲ್ಲಿಸಿ, ನಾವ್ಯಾರು ಕೆಲಸ ಮಾಡಲ್ಲ ಅಂತ ಠಾಣೆ ಬಳಿ ಜಮಾಯಿಸಿದರು. ಕೆಲಸ ಬಿಟ್ಟು ಬಂದ 100 ಕ್ಕೂ ಹೆಚ್ಚು ಪೊಲೀಸರು, ಕುಟುಂಬಗಳ ಜೊತೆ ಠಾಣೆ ಮುಂದೆ ಜಮಾಯಿಸಿದರು. ಪೊಲೀಸರಿಗೆ ರಕ್ಷಣೆ ಇಲ್ಲ ಎಂದು ಪೊಲೀಸರು ಹಾಗೂ ಕುಟುಂಬಗಳು ಆರೋಪ ಮಾಡಿದ್ದಾರೆ.

    ಈ ವೇಳೆ ಎಸ್ಪಿ ಎದುರು ಪೊಲೀಸ್ ಪೇದೆ ಕಣ್ಣೀರಿಟ್ಟಿದ್ದಾರೆ. ನಾವು ಕಾನೂನು ಗೌರವಿಸುತ್ತೇವೆ. ಅವರು ನಿಮಗೇನು ಗೌರವ ಕೊಟ್ಟರು ಸರ್. ಮಾತಾಡೋದಾದ್ರೆ ಇಲ್ಲೇ ಮಾತಾಡಿ ಸರ್, ಒಳಗೆ ಬರಲ್ಲ ಎಂದು ಹಠ ಹಿಡಿದರು.

    ಪ್ರಕರಣ ಏನು?
    ಹೆಲ್ಮೆಟ್ ಹಾಕದ ವಕೀಲರ ಮೇಲೆ ಪೊಲೀಸರು ನಡೆಸಿದ ಹಲ್ಲೆ ಖಂಡಿಸಿ ವಕೀಲರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ್ದರು. ವಕೀಲ ಪ್ರೀತಂ ಮೇಲೆ ಹಲ್ಲೆ ನಡೆಸಿರುವ ಪೊಲೀಸರನ್ನು ಕೂಡಲೇ ಬಂಧಿಸಬೇಕು ಎಂದು ಕಲಾಪಕ್ಕೂ ಹಾಜರಾಗದೇ ಪಟ್ಟು ಹಿಡಿದಿದ್ದರು.

    ಪ್ರಕರಣ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಪಿಎಸ್‌ಐ ಮಹೇಶ್ ಪೂಜಾರಿ ಸೇರಿ 6 ಪೊಲೀಸರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಇದನ್ನು ಖಂಡಿಸಿ ಪೊಲೀಸರು ಬೀದಿಗಿಳಿದಿದ್ದಾರೆ.

  • ಮಕ್ಕಳನ್ನು ಹೆರುವ ವಿಷಯದ ಆಯ್ಕೆ ಮಹಿಳೆಗೆ ಬಿಟ್ಟಿದ್ದು – ಹೈಕೋರ್ಟ್

    ಮಕ್ಕಳನ್ನು ಹೆರುವ ವಿಷಯದ ಆಯ್ಕೆ ಮಹಿಳೆಗೆ ಬಿಟ್ಟಿದ್ದು – ಹೈಕೋರ್ಟ್

    ತಿರುವನಂತಪುರಂ: ಗರ್ಭ ಧರಿಸುವ ಅಥವಾ ಧರಿಸದೇ ಇರುವ ಮಹಿಳೆಯ ಸಂತಾನೋತ್ಪತ್ತಿ (Reproductive) ಆಯ್ಕೆ ವಿಚಾರದಲ್ಲಿ ಮಹಿಳಾ ಹಕ್ಕಿಗೆ (Woman’s Right) ಯಾವುದೇ ನಿರ್ಬಂಧವಿಲ್ಲ ಎಂದು ಕೇರಳ ಹೈಕೋರ್ಟ್ (Kerala High Court) ಹೇಳಿದೆ.

    ಸುಚಿತ್ರಾ ಶ್ರೀವಾಸ್ತವ ವರ್ಸಸ್ ಚಂಡೀಗಢ ಆಡಳಿತ ಪ್ರಕರಣದಲ್ಲಿ ಸುಪ್ರೀಂಕೋರ್ಟ್ (Supreme Court) ನೀಡಿದ ತೀರ್ಪನ್ನು ಉಲ್ಲೇಖಿಸಿ ನ್ಯಾಯಮೂರ್ತಿ ವಿ.ಜಿ ಅರುಣ್ ನೇತೃತ್ವದ ಏಕಸದಸ್ಯ ಪೀಠವು, ಸಂವಿಧಾನದ-21 (Constitution of India) ವಿಧಿಯ ಅಡಿ ಸಂತಾನೋತ್ಪತ್ತಿ ಆಯ್ಕೆ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಹಕ್ಕು ಮಹಿಳೆಗೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: 

    ಗರ್ಭಧರಿಸುವ ಅಥವಾ ಗರ್ಭಧರಿಸದೇ ಇರುವ ತನ್ನ ಆಯ್ಕೆಯ ಹಕ್ಕನ್ನು ಚಲಾಯಿಸಲು ಮಹಿಳೆಗೆ ಯಾವುದೇ ನಿರ್ಬಂಧವಿರುವುದಿಲ್ಲ. ಇದು ಆಕೆಯ ವೈಯಕ್ತಿಕ ಸ್ವಾತಂತ್ರ‍್ಯದ ಭಾಗವಾಗಿದೆ ಎಂದು ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.

    20 ವಾರ ಮೀರಿದ ಗರ್ಭಾವಸ್ಥೆಯನ್ನು ಗರ್ಭಪಾತ ಮಾಡಿಸುವ ಆಯ್ಕೆ ವಿಧಾನದಿಂದ ಅವಿವಾಹಿತ ಮಹಿಳೆಯನ್ನು ಹೊರಗಿಡುವುದು ಸಂವಿಧಾನ 14ನೇ ವಿಧಿಗೆ ವಿರುದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ (Supreme Court) ಇತ್ತೀಚೆಗೆ ಹೇಳಿದ್ದನ್ನು ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿತು.

    ಸಹಪಾಠಿಯೊಂದಿಗೆ ನಡೆಸಿದ ಒಪ್ಪಿತ ಲೈಂಗಿಕ ಸಂಪರ್ಕದಿಂದಾಗಿ ಗರ್ಭ ಧರಿಸಿದ್ದನ್ನು ತೆಗೆಸಲು ಕೋರಿ 23 ವರ್ಷದ ಎಂಬಿಎ ವಿದ್ಯಾರ್ಥಿನಿ (MBA Student) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಪೀಠವು ಈ ಆದೇಶ ಮಾಡಿತು.

    ಏನಿದು ಪ್ರಕರಣ?
    ಗರ್ಭ ನಿರೋಧಕ ವಿಫಲವಾಗಿದ್ದರಿಂದ ಎಂಬಿಎ ವಿದ್ಯಾರ್ಥಿನಿ ಗರ್ಭ ಧರಿಸಿದ್ದಳು. ಅಲ್ಲದೇ ಆಕೆ ಪಾಲಿಸಿಸ್ಟಿಕ್ ಓವೇರಿಯನ್ ಕಾಯಿಲೆಯಿಂದ ಬಳಲುತ್ತಿದ್ದಳು. ಅಲ್ಟ್ರಾ ಸೌಂಡ್ ಸ್ಕ್ಯಾನ್ ಮಾಡಿಸಿದ ಬಳಿಕ ಗರ್ಭಧರಿಸುವ ವಿಚಾರ ತಿಳಿದಿದೆ.

    ವಿದ್ಯಾರ್ಥಿನಿ ನಿಯಂತ್ರಿತವಾಗಿ ಮುಟ್ಟಾಗದೇ ಇರುವುದರಿಂದ ತಪಾಸಣೆಗೆ ವೈದ್ಯರ ಬಳಿ ತೆರಳಿದ್ದಳು. ಈ ವೇಳೆ ವೈದ್ಯರು ಅಲ್ಟ್ರಾ ಸ್ಕ್ಯಾನ್ ಮಾಡಿಸಲು ಸೂಚಿಸಿದ್ದಾರೆ. ಬಳಿಕವೇ ಈ ವಿಚಾರ ತಿಳಿದಿದೆ. ಇದರಿಂದ ಮಾನಸಿಕ ಮತ್ತು ದೈಹಿಕವಾಗಿ ಯಾತನೆ ಅನುಭವಿಸುತ್ತಿದ್ದು, ಲೈಂಗಿಕ ಸಂಬಂಧ ಹೊಂದಿದ್ದ ಸಹಪಾಠಿಯು ಉನ್ನತ ಶಿಕ್ಷಣ ಪಡೆಯಲು ವಿದೇಶಕ್ಕೆ ತೆರಳಿದ್ದಾನೆ ಎಂದು ಆಕೆ ಮನವಿಯಲ್ಲಿ ವಿವರಿಸಿದ್ದಾಳೆ.

    ಗರ್ಭಧಾರಣೆಯನ್ನು ಮುಂದವರಿಸಿದರೆ ಮಾನಸಿಕ ವೇದನೆ ಹೆಚ್ಚಾಗಲಿದೆ. ಜೊತೆಗೆ ಮಗು ಪಡೆಯುವುದು ಶಿಕ್ಷಣ ಮತ್ತು ಜೀವನ ನಿರ್ವಹಣೆಗೆ ಅಡ್ಡಿಯಾಗಲಿದೆ. ಗರ್ಭಾವಸ್ಥೆಯು 24 ವಾರ ದಾಟಿರುವುದರಿಂದ ಯಾವುದೇ ಆಸ್ಪತ್ರೆ ಗರ್ಭಪಾತ ಮಾಡಿಸಲು ಸಿದ್ಧವಿಲ್ಲ. ಹೀಗಾಗಿ, ನ್ಯಾಯಾಲಯ ಮೆಟ್ಟಿಲೇರಿದ್ದಾಗಿ ಆಕೆ ಮನವಿಯಲ್ಲಿ ಉಲ್ಲೇಖಿಸಿದ್ದಳು. ಇದನ್ನೂ ಓದಿ: ಕೋಟೆ ನಾಡಿನಲ್ಲಿ ದಾರುಣ ಘಟನೆ – ಒಂದೇ ಕುಟುಂಬದ ಮೂವರು ಆತ್ಮಹತ್ಯೆ

    ಇದನ್ನು ಪರಿಗಣಿಸಿರುವ ಪೀಠವು ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿಸಿದೆ. ಪ್ರಕ್ರಿಯೆ ನಡೆಸಲು ವೈದ್ಯಕೀಯ ತಂಡ ರಚಿಸುವಂತೆ ಸಂಬಂಧಿತ ಆಸ್ಪತ್ರೆಗೆ ನಿರ್ದೇಶಿಸಿದೆ. ಒಂದೊಮ್ಮೆ ಮಗು ಜೀವಂತವಾಗಿ ಉಳಿದರೆ ಮಗುವಿಗೆ ಅತ್ಯುತ್ತಮ ವೈದ್ಯಕೀಯ ವ್ಯವಸ್ಥೆ ಮಾಡುವಂತೆ ನ್ಯಾಯಾಲಯವು ಆಸ್ಪತ್ರೆಗೆ ನಿರ್ದೇಶನ ನೀಡಿದೆ.

    ಅರ್ಜಿದಾರರ ಪರ ವಕೀಲರಾದ ಆಕಾಶ್ ಎಸ್, ಗಿರೀಶ್ ಕುಮಾರ್, ವಿ.ಎಸ್ ವರಲಕ್ಷ್ಮೀ ಹಾಗೂ ಎಸ್. ನೀತು ವಾದಿಸಿದರು.

    Live Tv
    [brid partner=56869869 player=32851 video=960834 autoplay=true]

  • ಹೊಳೆನರಸೀಪುರ ಕೋರ್ಟ್ ಆವರಣದಲ್ಲಿಯೇ ಪತ್ನಿಯ ಕತ್ತು ಸೀಳಿದ ಪತಿ

    ಹೊಳೆನರಸೀಪುರ ಕೋರ್ಟ್ ಆವರಣದಲ್ಲಿಯೇ ಪತ್ನಿಯ ಕತ್ತು ಸೀಳಿದ ಪತಿ

    – ಎಸ್ಕೇಪ್ ಆಗ್ತಿದ್ದ ಆರೋಪಿಯನ್ನು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು

    ಹಾಸನ: ಕೋರ್ಟ್ ಆವರಣದಲ್ಲೇ ಪತಿಯೇ ಪತ್ನಿಯ ಕತ್ತು ಸೀಳಿ ಕೊಲೆ ಮಾಡಲು ಯತ್ನಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಪತ್ನಿ ಆಸ್ಪತ್ರೆಯಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದಲ್ಲಿ ನಡೆದಿದೆ.

    ಚೈತ್ರಾ (32) ಕೊಲೆಯಾದ ಮಹಿಳೆಯಾಗಿದ್ದು, ಶಿವಕುಮಾರ್ ಕೊಲೆ ಆರೋಪಿಯಾಗಿದ್ದಾನೆ. ಹೊಳೆನರಸೀಪುರ ತಾಲ್ಲೂಕಿನ, ತಟ್ಟೆಕೆರೆ ಗ್ರಾಮದ ಶಿವಕುಮಾರ್ ಹಾಗೂ ಚನ್ನರಾಯಪಟ್ಟಣ ತಾಲ್ಲೂಕಿನ, ನುಗ್ಗೇಹಳ್ಳಿ ಹೋಬಳಿ ಅವೇರಹಳ್ಳಿ ಗ್ರಾಮದ ಚೈತ್ರಾ ಕಳೆದ 7 ವರ್ಷದ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಎರಡು ಹೆಣ್ಣುಮಕ್ಕಳಿದ್ದು, ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಇಲ್ಲದ ಕಾರಣ ಮೂರು ವರ್ಷಗಳ ಹಿಂದೆ ಶಿವಕುಮಾರ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದನು. ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಗೆ ಕಾಂತಾರ ಸಿನಿಮಾದಿಂದ ಮೊದಲ ಹಾಡು ಗಿಫ್ಟ್

    ಚೈತ್ರಾ ಜೀವನಾಂಶ ಕೋರಿ ಕೋರ್ಟ್ ಮೆಟ್ಟಿಲೇರಿದ್ದಳು. ಇಂದು ಹೊಳೆನರಸೀಪುರದ ನ್ಯಾಯಾಲಯದಲ್ಲಿ ಲೋಕ ಅದಾಲತ್ ನಡೆದಿದ್ದು, ಇಲ್ಲಿ ನ್ಯಾಯಧೀಶರು ದಂಪತಿ ಮನವೊಲಿಸಿ ಒಂದಾಗಿ ಬಾಳುವಂತೆ ತಿಳಿ ಹೇಳಿದ್ದರು. ನಂತರ ಇಬ್ಬರು ಪರಸ್ಪರ ಮಾತನಾಡಿಕೊಂಡು ಬರುವಂತೆ ಕಳುಹಿಸಿದ್ದರು. ಈ ವೇಳೆ ಚೈತ್ರಾ ಮಗಳನ್ನು ಶೌಚಾಲಯಕ್ಕೆ ಕರೆದುಕೊಂಡು ಹೋಗಿದ್ದಾಳೆ. ಆಕೆಯನ್ನು ಹಿಂಬಾಲಿಸಿ ಹೋದ ಶಿವಕುಮಾರ್ ಶೌಚಾಲಯದಲ್ಲೇ ಚಾಕುವಿನಿಂದ ಪತ್ನಿಯ ಕತ್ತು ಕೊಯ್ದು ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಚೈತ್ರಾ ಕುಸಿದು ಬಿದ್ದು ರಕ್ತಸ್ರಾವದಿಂದ ಒದ್ದಾಡುತ್ತಿದ್ದನ್ನು ಕಂಡ ವಕೀಲರು ಹಾಗೂ ಸಾರ್ವಜನಿಕರು ಕೂಡಲೇ ಆಕೆಯನ್ನು ಹೊಳೆನರಸೀಪುರ ಆಸ್ಪತ್ರೆಗೆ ದಾಖಲಿಸಿ, ತಪ್ಪಿಸಿಕೊಂಡು ಓಡುತ್ತಿದ್ದ ಶಿವಕುಮಾರ್‌ನ ಬೆನ್ನತ್ತಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಮಡಿಕೇರಿಗೆ ತೆರಳುತ್ತಿದ್ದ KSRTC ಬಸ್ ಅಪಘಾತ – ಜನರ ರಕ್ಷಣೆಗೆ ಮುಂದಾದ ಅಪ್ಪಚ್ಚು ರಂಜನ್

    ಚೈತ್ರಾಗೆ ಹೊಳೆನರಸೀಪುರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಅಂಬುಲೆನ್ಸ್‌ನಲ್ಲಿ ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಆಸ್ಪತ್ರೆಗೆ ದಾಖಲಾದ ಕೆಲವೇ ನಿಮಿಷಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಚೈತ್ರಾ ಕೊನೆಯುಸಿರೆಳೆದಿದ್ದಾಳೆ. ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು, ಹೊಳೆನರಸೀಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ʻಒಂದು ಕುಟುಂಬ, ಒಂದು ಸರ್ಕಾರಿ ಕೆಲಸʼ – ನೀತಿಯನ್ನು ಎತ್ತಿ ಹಿಡಿದ ಹೈಕೋರ್ಟ್‌

    ʻಒಂದು ಕುಟುಂಬ, ಒಂದು ಸರ್ಕಾರಿ ಕೆಲಸʼ – ನೀತಿಯನ್ನು ಎತ್ತಿ ಹಿಡಿದ ಹೈಕೋರ್ಟ್‌

    ಗ್ಯಾಂಗ್ಟಾಕ್: ಸಿಕ್ಕಿಂ ರಾಜ್ಯ ಸರ್ಕಾರದ ʻಒಂದು ಕುಟುಂಬ – ಒಂದು ಸರ್ಕಾರಿ ಕೆಲಸʼ ಯೋಜನೆಯನ್ನು ಸಿಕ್ಕಿಂ ಹೈಕೋರ್ಟ್ ಎತ್ತಿಹಿಡಿದಿದೆ. ಯೋಜನೆಯ ಸತ್ಯಾಸತ್ಯತೆಗಳ ಬಗ್ಗೆ ಯಾವುದೇ ಸಂದೇಹವಿಲ್ಲ, ಇದು ನಾಗರಿಕರಿಗೆ ಪ್ರಯೋಜನಕಾರಿಯಾಗಿದೆ ಎಂದು ಹೇಳಿದೆ.

    ಮಾಜಿ ಮುಖ್ಯಮಂತ್ರಿ ಪವನ್ ಚಾಮ್ಲಿಂಗ್ ಅವರು ಪ್ರಾರಂಭಿಸಿದ ಈ ಯೋಜನೆಯಡಿ 13,000 ಕ್ಕೂ ಹೆಚ್ಚು ನಾಗರಿಕರು ಉದ್ಯೋಗ ಪಡೆದಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ಬಿಸ್ವನಾಥ್ ಸೋಮದ್ದರ್ ಮತ್ತು ನ್ಯಾಯಮೂರ್ತಿ ಮೀನಾಕ್ಷಿ ಮದನ್ ರೈ ಅವರ ವಿಭಾಗೀಯ ಪೀಠ ಗಮನಿಸಿದೆ. ಇದನ್ನೂ ಓದಿ: ಸ್ಥಳಾಂತರವಾಗಲು ಬಯಸುವ ಕಾಶ್ಮೀರಿ ಪಂಡಿತರಿಗೆ ಮಹಾರಾಷ್ಟ್ರದ ಬಾಗಿಲು ಯಾವಾಗ್ಲೂ ತೆರೆದಿರುತ್ತದೆ: ಆದಿತ್ಯ ಠಾಕ್ರೆ

    Law

    ಸಿಕ್ಕಿಂ ರಾಜ್ಯದಲ್ಲಿ ನೆಲೆಸಿರುವ 13,000ಕ್ಕೂ ಹೆಚ್ಚು ನಾಗರಿಕರು ಈ ಪ್ರಕ್ರಿಯೆಯಲ್ಲಿ ಉದ್ಯೋಗ ಪಡೆದಿದ್ದಾರೆ. ಒಂದು ಕುಟುಂಬಕ್ಕೆ ಒಂದು ಉದ್ಯೋಗ ಒದಗಿಸುವ ಈ ನೀತಿಯು ಸದುದ್ಧೇಶ ಹೊಂದಿದೆ. ಹಾಗಾಗಿ ಸಿಕ್ಕಿಂ ಸರ್ಕಾರಿ ಸೇವಾ ನಿಯಮ-1974ರ ಅಡಿಯಲ್ಲಿ ಒದಗಿಸಲಾದ ತಾಂತ್ರಿಕತೆಗಳ ಆಧಾರದ ಮೇಲೆ ಈ ಹಂತದಲ್ಲಿ ಯೋಜನೆಯ ಪ್ರಯೋಜನಕಾರಿ ಸ್ವರೂಪವನ್ನು ಅನುಮಾನಿಸಲಾಗುವುದಿಲ್ಲ ಮತ್ತು ಪರಿಶೀಲಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇದನ್ನೂ ಓದಿ: 20 ಮಂದಿಯ ರಾಜೀನಾಮೆಯ ಬೆನ್ನಲ್ಲೇ ನೂತನ ಸಚಿವ ಸಂಪುಟ ರಚನೆ- 13 ಮಂದಿ ಪ್ರಮಾಣವಚನ

    ಸಿಕ್ಕಿಂ ರಾಜ್ಯದ ಆಡಳಿತ ಸುಧಾರಣೆ ಮತ್ತು ತರಬೇತಿ ಇಲಾಖೆಯ ಜಂಟಿ ಕಾರ್ಯದರ್ಶಿ ಉಮೇಶ್ ಸುನಮ್ ಅವರು ತಮ್ಮ ರಾಜ್ಯದ 31 ಕ್ಷೇತ್ರಗಳ ಪ್ರವಾಸಗಳನ್ನು ಪೂರ್ಣಗೊಳಿಸಿದ ನಂತರ ಮಾಜಿ ಮುಖ್ಯಮಂತ್ರಿ (ಸಿಎಂ) ಅವರು ಈ ಯೋಜನೆಯನ್ನು ಪ್ರಾರಂಭಿಸಿದ್ದಾರೆ ಎಂದು ಮನವಿ ಸಲ್ಲಿಸಲಾಗಿತ್ತು. ಈ ಪ್ರವಾಸದ ಸಮಯದಲ್ಲಿ, ಸಿಕ್ಕಿಂ ಜನರ ಮುಖ್ಯ ಕುಂದುಕೊರತೆ ಸರ್ಕಾರಿ ಸೇವೆಯಲ್ಲಿ ಉದ್ಯೋಗದ ಕೊರತೆ ಎಂದು ಗಮನಿಸಲಾಗಿದೆ ಎಂದು ಪೀಠವು ಗಮನಿಸಿತು.

    court order law

    ಅಲ್ಲದೆ, ಅಂದಿನ ಸರ್ಕಾರವು ಸರ್ಕಾರಿ ಸೇವೆಯಲ್ಲಿ ಯಾವುದೇ ಕುಟುಂಬ ಸದಸ್ಯರನ್ನು ಹೊಂದಿರದ ಅರ್ಜಿದಾರರ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು ಎಂದು ಅಂದಿನ ಸರ್ಕಾರ ನಿರ್ಧರಿಸಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.‌ ಈ ಪ್ರಶ್ನೆಯು ಯೋಜನೆಯ ಪರಿಕಲ್ಪನೆಗೆ ಕಾರಣವಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಈದ್ಗಾ ಮೈದಾನ ವಿವಾದ- ಗ್ರೌಂಡ್‍ನಲ್ಲಿ ಹಿಂದೂ ಸಂಘಟನೆಯ ಮುಖಂಡರ ಹೈಡ್ರಾಮಾ

    ಈ ಅಫಿಡವಿಟ್ ನಲ್ಲಿ 1974ರ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸದಿದ್ದರೂ ತಾಂತ್ರಿಕ ಅವಶ್ಯಕತೆಗಳನ್ನು ಅನುಸರಿಸಿದೆ. ಆದರೂ ಈ ಪ್ರಕ್ರಿಯೆಯಲ್ಲಿ ಸರ್ಕಾರ ಶಾಸನ ಬದ್ಧ ಕಾನೂನು ಮತ್ತು ನಿಯಮಗಳಿಗೆ ಕಟ್ಟುನಿಟ್ಟಾಗಿ ಪಾಲಿಸಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಇದರೊಂದಿಗೆ ಮುಂದೆ ಜನ ಕಲ್ಯಾಣ ಹಾಗೂ ಪ್ರಯೋಜನಕಾರಿ ಯೋಜನೆಗಳನ್ನು ರಾಜ್ಯ ಹಾಗೂ ಏಜೆನ್ಸಿಗಳು ಜಾರಿಗೆ ತರಲು ನ್ಯಾಯಾಲಯ ಸಲಹೆ ನೀಡಿದೆ.

    Law

    ಅರ್ಜಿದಾರರ ಪರ ಹಿರಿಯ ವಕೀಲ ಎ. ಮೌಲಿಕ್, ವಕೀಲರಾದ ಕೆ.ಡಿ.ಭುಟಿಯಾ ಮತ್ತು ರಂಜಿತ್ ಪ್ರಸಾದ್ ವಾದ ಮಂಡಿಸಿದರು. ಅಡ್ವೊಕೇಟ್ ಜನರಲ್ ವಿವೇಕ್ ಕೊಹ್ಲಿ, ಸರ್ಕಾರಿ ವಕೀಲರಾದ ವೈಡಬ್ಲ್ಯೂ ರಿಂಚೆನ್ ಮತ್ತು ಪೆಮಾ ಭುಟಿಯಾ ಅವರು ರಾಜ್ಯ ಅಧಿಕಾರಿಗಳನ್ನು ಪ್ರತಿನಿಧಿಸಿದರು.