Tag: Adviti Shetty

  • ಆಸ್ಟ್ರೇಲಿಯಾ ಪ್ರತಿಷ್ಠಿತ ಚಿತ್ರೋತ್ಸವದಲ್ಲಿ ಬ್ರಹ್ಮಕಮಲ

    ಆಸ್ಟ್ರೇಲಿಯಾ ಪ್ರತಿಷ್ಠಿತ ಚಿತ್ರೋತ್ಸವದಲ್ಲಿ ಬ್ರಹ್ಮಕಮಲ

    ಮೆಲ್ಬೋರ್ನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ (Chirotsava) ಗೆ ಸಿದ್ದು ಪೂರ್ಣಚಂದ್ರ (Siddu Poornchandra) ನಿರ್ದೇಶನದ  ಕನ್ನಡದ ‘ಬ್ರಹ್ಮಕಮಲ’ (Brahmakamala) ಚಿತ್ರ ಆಯ್ಕೆಯಾಗಿದೆ. ಪ್ರಪಂಚದ ಹಲವು ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ‌ ಇದೂ ಒಂದು. ಇಂತಹ ಫೆಸ್ಟಿವಲ್ ಗೆ ನಮ್ಮ ಚಿತ್ರ ಆಯ್ಕೆಯಾಗಿರುವುದು ಅತೀವ ಸಂತೋಷ ತಂದಿದೆ ಎಂದಿದ್ದಾರೆ ನಿರ್ದೇಶಕ ಸಿದ್ದು ಪೂರ್ಣಚಂದ್ರ.

    ಈಗಾಗಲೇ ಫ್ರಾನ್ಸ್ ನಲ್ಲಿ ನಡೆದ ಈಡಿಪ್ಲೇ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ, ಸಿಡ್ನಿಯ ವಂಡರ್ ಲ್ಯಾಂಡ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಬೆಸ್ಟ್ ಫೀಚರ್ ಫಿಲ್ಮ್ ಪ್ರಶಸ್ತಿ,  ನೇಪಾಳದ ಓಲ್ಡ್ ಮಂಕ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲೂ ಬೆಸ್ಟ್ ಫೀಚರ್ ಫಿಲ್ಮ್ ಪ್ರಶಸ್ತಿ ಮತ್ತು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಕೂಡ ಲಭಿಸಿದೆ. ಇಂಡೋ‌ ಸಿಂಗಪುರ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಅದ್ವಿತಿ ಶೆಟ್ಟಿಗೂ (Adviti Shetty) ಅತ್ಯುತ್ತಮ ನಟಿ ಪ್ರಶಸ್ತಿ ಬಂದಿದೆ.

    ದಾದಾ ಸಾಹೇಬ್ ಫಾಲ್ಕೆ, ಅರುಣೋದಯ, ಕಲಕರಿ, ಚಲನಚಿತ್ರೋತ್ಸವಗಳನ್ನು ಒಳಗೊಂಡಂತೆ ಹಲವು ಚಲನಚಿತ್ರೋತ್ಸವಗಳಿಗೆ  ಆಯ್ಕೆಯಾಗಿರುವುದು ಇಡೀ ತಂಡಕ್ಕೆ ಸಂತಸ ತಂದಿದೆ. ವಿಶೇಷವಾದ ಕಥಾ ಹಂದರ ಈ ಚಿತ್ರದಲ್ಲಿರುವುದರಿಂದ ನನಗೆ ಮೊದಲಿನಿಂದಲೂ ಈ ಕಥೆಯ ಮೇಲೆ ನಂಬಿಕೆ ಇತ್ತು. ಈ ಚಿತ್ರ ಇನ್ನೂ  ಹಲವು ಪ್ರಶಸ್ತಿಗಳನ್ನು ತಂದು ಕೊಡುತ್ತದೆ ಎಂಬ ವಿಶ್ವಾಸ ಇದೆ. ಇದನ್ನೂ ಓದಿ:ಸಮಂತಾರಂತೆ ಐಟಂ ಡ್ಯಾನ್ಸ್ ಒಪ್ಪಲ್ಲ- ನಾಗಚೈತನ್ಯ ಮಾಜಿಪತ್ನಿಗೆ ಕೃತಿ ಶೆಟ್ಟಿ ಟಕ್ಕರ್

    ಈ ಕಥೆ ನಮ್ಮ ರಾಮನಗರದ ಹತ್ತಿರದ ಒಂದು ಹಳ್ಳಿಯಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಕಥೆಯನ್ನು ಹೆಣೆದಿದ್ದೇನೆ. ಆ ಕುಟುಂಬ ಮಾಡಿದ ಒಂದು ತಪ್ಪಿನಿಂದಾಗಿ  ಆ ಮನೆಯವರೆಲ್ಲರೂ ಈಗಲೂ ಜೈಲಿನಲ್ಲಿದ್ದಾರೆ.

  • ‘ಧೀರ ಸಾಮ್ರಾಟ್’ ಸಿನಿಮಾಗೆ ಸಾಥ್ ನೀಡಿದ ಧ್ರುವ ಸರ್ಜಾ

    ‘ಧೀರ ಸಾಮ್ರಾಟ್’ ಸಿನಿಮಾಗೆ ಸಾಥ್ ನೀಡಿದ ಧ್ರುವ ಸರ್ಜಾ

    ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಧೀರ ಸಾಮ್ರಾಟ್’ (Dheera Samrat) ಚಿತ್ರವು ತೆರೆಗೆ ಬರುವ ಹಂತ ತಲುಪಿದೆ. ಪ್ರಚಾರದ ಸಲುವಾಗಿ ‘ಏನ್ ಚಂದ ಕಾಣಿಸ್ತಾವಳೆ’ ಸಾಲಿನ ಸಾಂಗ್ ಅನಾವರಣ ಸಮಾರಂಭ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆಯಿತು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಸರಿಯಾದ ಸಮಯಕ್ಕೆ ಹಾಜರಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುಮಾರು ಒಂದೂವರೆ ದಶಕಕ್ಕೂ ಹೆಚ್ಚು ಕಾಲ ವಾಹಿನಿಯಲ್ಲಿ ನಿರೂಪಕ, ಕಾರ್ಯಕ್ರಮದ ಮುಖ್ಯಸ್ಥನಾಗಿ ಸೇವೆ ಸಲ್ಲಿಸಿದ ಅನುಭವ ಇರುವ ಪವನ್‌ ಕುಮಾರ್(ಪಚ್ಚಿ) (Pawan Kumar) ಸಿನಿಮಾಕ್ಕೆ ಕಥೆ ಬರೆದು, ನಿರ್ದೇಶನ ಮಾಡಿರುವ ಜತೆಗೆ ನೋಡುಗರು ಇಷ್ಟಪಡುವಂತಹ ನಕರಾತ್ಮಕ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಾಗೂ ಶೀರ್ಷಿಕೆ ಗೀತೆಗೆ ಸಾಹಿತ್ಯ ಮತ್ತು ಸಂಭಾಷಣೆಯಲ್ಲಿ ತೊಡಗಿಕೊಂಡಿದ್ದಾರೆ.

    ಸರದಿಯಂತೆ ಮೊದಲು ಮೈಕ್ ತೆಗೆದುಕೊಂಡ ನಿರ್ದೇಶಕರು “ನಮ್ಮ ಸಿನಿಮಾ ಮಹೂರ್ತಕ್ಕೆ ಬಂದು, ಈಗ ಎಷ್ಟೇ ಬ್ಯುಸಿ ಇದ್ದರೂ, ಶೂಟಿಂಗ್‌ಗೆ ಬ್ರೇಕ್ ಮಾಡಿ ಹಾಡನ್ನು ಬಿಡುಗಡೆ ಮಾಡಿರುವುದು ಎಲ್ಲರ ಅಚ್ಚುಮೆಚ್ಚಿನ ಧ್ರುವ ಸರ್ಜಾ, ಸ್ನೇಹಕ್ಕೆ ಸಾಹುಕಾರ ಎಂದೇ ಹೇಳಬಹುದು. ಕುಟುಂಬ ಸಮೇತ ನೋಡಬಹುದಾದ ಸೆಸ್ಪನ್ಸ್ ಥ್ರಿಲ್ಲರ್ ಕಥೆಯನ್ನು ಹೊಂದಿದೆ. ಐದು ಧೀರ ಹುಡುಗರ ಗೆಳತನ ಹೇಗಿರುತ್ತೆ ಎಂಬುದನ್ನು ಹೇಳಲಾಗಿದೆ. ಕೊನೆತನಕ ಕುತೂಹಲ ಕಾಯ್ದಿರಿಸಿದ್ದು, ಕ್ಲೈಮಾಕ್ಸ್‌ನಲ್ಲಿ ಪ್ರೇಕ್ಷಕರನ್ನು ಸೀಟಿನ ತುದಿಗೆ ಬರುವಂತೆ ಮಾಡುತ್ತದೆ. ಒಂದು ಎಳೆ ಬಿಟ್ಟುಕೊಟ್ಟರೂ ಸಿನಿಮಾದ ಸಾರಾಂಶ ತಿಳಿಯುತ್ತದೆ. ಪ್ರಶ್ನೆ ಎನ್ನುವಂತೆ ಸಾವಿಗೆ ಸಾವಿಲ್ಲ ಅಂತ ಅಡಿಬರಹವಿದೆ. ಒಬ್ಬ ವ್ಯಕ್ತಿಗೆ ಸಂಬಂಧಿಸದೆ ಸಮಾಜದಲ್ಲಿ ಯಾವುದೋ ಒಂದು  ವರ್ಗದಲ್ಲಿ ಶೋಷಣೆ ಆಗುತ್ತಿರುತ್ತದೆ. ಇಂತಹ ಮುಖ್ಯ ಅಂಶಗಳನ್ನು ಸನ್ನಿವೇಶಕ್ಕೆ ಬಳಸಲಾಗಿದೆ” ಎಂದರು.

    ತನ್ವಿ ಪ್ರೊಡಕ್ಷನ್ ಹೌಸ್ ಮುಖಾಂತರ ನಿರ್ಮಾಣ ಮಾಡಲಾಗಿದೆ. ಧೀರ ಸಾಮ್ರಾಟ್ ಅಂದರೆ ಏನು, ಯಾತಕ್ಕೆ ಈ ಟೈಟಲ್ ಇಡಲಾಗಿದೆ. ಕೊನೆಯಲ್ಲಿ ಯಾರು ಎಂಬುದು ತಿಳಿಯಲಿದೆ ಎಂದು ಗುಲ್ಬರ್ಗಾದ ಗುರುಬಂಡಿ ಹೇಳಿದರು. ನಾಯಕ ರಾಕೇಶ್‌ಬಿರದಾರ್, ನಾಯಕಿ ಅದ್ವಿತಿ ಶೆಟ್ಟಿ ಪಾತ್ರದ ವಿವರವನ್ನು ಗೌಪ್ಯವಾಗಿಟ್ಟರು. ಇದನ್ನೂ ಓದಿ:ನಾನು ಮಂಡ್ಯದವಳೇ, ಗೌಡ್ತಿ, ನಾನು ಗೌಡ್ತಿ ಎನ್ನುವುದನ್ನು ಯಾರೂ ಕಿತ್ತುಕೊಳ್ಳಲು ಆಗಲ್ಲ: ರಮ್ಯಾ

    ಕೊನೆಯಲ್ಲಿ ಮಾತನಾಡಿದ ಧ್ರುವ ಸರ್ಜಾ, “ಸಿನಿಮಾ ಅಣ್ಣ ಚಿರಂಜೀವಿ ಸರ್ಜಾ ಹುಟ್ಟುಹಬ್ಬದಂದು ಸೆಟ್ಟೇರಬೇಕಾಗಿತ್ತು. ಕಾರಣಾಂತರದಿಂದ 2020ಕ್ಕೆ ಮುಂದೂಡಲಾಯಿತು. ನಿರ್ದೇಶಕರು ಹೇಳಿದರು. ನಾವೆಲ್ಲರು ಹೊಸಬರು ಅಂತ. ನಾನು ಅದ್ದೂರಿ ಮಾಡಿದಾಗ ಹೊಸಬನಾಗಿದ್ದೆ. ಅಂದು ಪವನ್‌ಗೆ ವಾಹಿನಿಯಲ್ಲಿ ಜಾಸ್ತಿ ಸಲ ಹಾಡನ್ನು ಪ್ರಸಾರ ಮಾಡು ಎಂದು ದುಂಬಾಲು ಬಿದ್ದಿದ್ದೆ. ನಮ್ಮದು ಹೋಗೋ ಬಾರೋ ಗೆಳತನ. ಆ ಸಮಯದಲ್ಲಿ ಸಾಕಷ್ಟು ಜನರು ಪ್ರೋತ್ಸಾಹ ಕೊಟ್ಟಿದ್ದರು. ಅದರಲ್ಲಿ ಪವನ್ ಕೂಡ ಒಬ್ಬರು. ಈಗ ಅವರ ಪ್ರಥಮ ನಿರ್ದೇಶನದ ಚಿತ್ರ ಎಂದಾಗ ಅವರಿಗೆ ಪ್ರೋತ್ಸಾಹ ಕೊಡುವುದು ನಮ್ಮ ಕರ್ತವ್ಯವಾಗಿದೆ. ಅದರಲ್ಲೂ ಹೆಚ್ಚಾಗಿ ಗೆಳೆಯ. ಹೊಸಬರಿಗೆ ಉತ್ತೇಜನ ನೀಡಿ ಅಂತ ಕೇಳಿಕೊಳ್ಳುತ್ತೇನೆ. ಅವರಲ್ಲೂ ಪ್ರತಿಭೆ ಎನ್ನುವುದು ಇರುತ್ತದೆ. ಇಂಥವರನ್ನು ಬೆಳೆಸಿದರೆ ಪ್ರೇರೆಪಿಸಿದಂತೆ ಮತ್ತು ಅವರ ಕಲೆಗೆ ಬೆಲೆ ಕೊಟ್ಟಂತೆ ಆಗುತ್ತದೆ. ನಾಯಕ ಚೆನ್ನಾಗಿ ಕುಣಿದಿದ್ದಾರೆ.  ಅದಕ್ಕೆ ಕಾರಣ ನನ್ನ ಫೇವರೇಟ್ ಡ್ಯಾನ್ಸ್ ಮಾಸ್ಟರ್ ಮುರಳಿ. ಪವನ್ ತಾಯಿ ವರ್ಷಕ್ಕೆ ಆಗುವಷ್ಟು ಬಿರಿಯಾನಿ ತಿನ್ನಿಸುತ್ತಾರೆ. ಎಲ್ಲರೂ ಸಾಂಗ್ ನೋಡಿ ಹೊಸಬರನ್ನು ಬೆಳಸಿರಿ” ಎಂದು ಮಾತಿಗೆ ವಿರಾಮ ಹಾಕಿದರು.

    ತಾರಾಗಣದಲ್ಲಿ ಶಂಕರ ಭಟ್, ಶೋಭರಾಜ್, ನಾಗೇಂದ್ರ ಅರಸು, ಬಲರಾಜವಾಡಿ, ರಮೇಶ್‌ ಭಟ್, ಯತಿರಾಜ್, ಮನಮೋಹನ್‌ ರೈ, ಇಂಚರ, ಸಂಕಲ್ಪ್‌ ಪಾಟೀಲ್ ರವಿರಾಜ್, ಜ್ಯೋತಿ ಮರೂರು, ಮಂಡ್ಯಾ ಚಂದ್ರು, ಗಿರಿಗೌಡ, ಪ್ರೇಮ, ಹರೀಶ್‌ ಅರಸ್. ಬೇಬಿ ಪರಿಣಿತ, ನಂದಿತ ಮುಂತಾದವರು ನಟಿಸಿದ್ದಾರೆ. ಭರ್ಜರಿ ಚೇತನ್, ಡಾ.ಎನ್.ನಾಗೇಂದ್ರಪ್ರಸಾದ್ ಸಾಹಿತ್ಯದ ಒಟ್ಟು ನಾಲ್ಕು ಹಾಡುಗಳಿಗೆ ರಾಘವ್‌ ಸುಭಾಷ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ವೀರೇಶ್.ಎನ್.ಟಿ.ಎ ಹಾಗೂ ಅರುಣ್‌ಸುರೇಶ್, ಸಂಕಲನ ಸತೀಶ್‌ ಚಂದ್ರಯ್ಯ, ಹಿನ್ನಲೆ ಶಬ್ದ ವಿನು ಮನಸು, ಸಂಭಾಷಣೆ ಎ.ಆರ್.ಸಾಯಿರಾಮ್, ಸಾಹಸ ಕೌರವ ವೆಂಕಟೇಶ್, ನೃತ್ಯ ಮುರಳಿ-ಕಿಶೋರ್-ಸಾಗರ್ ಅವರದಾಗಿದೆ. ಬೆಂಗಳೂರು, ಕನಕಪುರ, ನೆಲಮಂಗಲ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

  • ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ‘ಬ್ರಹ್ಮಕಮಲ’ ಚಿತ್ರ

    ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ‘ಬ್ರಹ್ಮಕಮಲ’ ಚಿತ್ರ

    ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಹಲವು ಪ್ರಶಸ್ತಿಗಳನ್ನು ಗಳಿಸಿದ  ‘ದಾರಿ ಯಾವುದಯ್ಯ ವೈಕುಂಠಕ್ಕೆ’ ಚಿತ್ರದ ನಿರ್ದೇಶಕ ಸಿದ್ದು ಪೂರ್ಣಚಂದ್ರ ಈಗ ‘ಬ್ರಹ್ಮ ಕಮಲ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ.  ಈ ಚಿತ್ರ ಕೂಡ  ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಆಯ್ಕೆಯಾಗಿ ಜನಮನ ಮುಟ್ಟುತ್ತಿದೆ.

    ಪೂರ್ಣಚಂದ್ರ ಫಿಲಂಸ್ ಮೂಲಕ ಈ ಚಿತ್ರ ನಿರ್ಮಾಣವಾಗಿದೆ. ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಮುಖ್ಯಪಾತ್ರದಲ್ಲಿ ಅದ್ವಿತಿಶೆಟ್ಟಿ ಅಭಿನಯಿಸಿದ್ದಾರೆ. ಉಳಿದಂತೆ ಋತುಚೈತ್ರ, ಲೋಕೇಂದ್ರಸೂರ್ಯ, ಬಲ ರಾಜವಾಡಿ, ಗಂಡಸಿ ಸದಾನಂದಸ್ವಾಮಿ,ಕವಿತ ಕಂಬಾರ್, ರಾಧಾ ರಾಮಚಂದ್ರ ಇನ್ನೂ ಮುಂತಾದವರು ಆಭಿನಯಿಸಿದ್ದಾರೆ. ಇದನ್ನೂ ಓದಿ:ಯಶ್ ಕಾಲ್ ಮಾಡಿ ಕೆಜಿಎಫ್- 3ಗೆ ರೆಡಿಯಾಗಿ ಅಂದ್ರು- ನಟಿ ರವೀನಾ ಟಂಡನ್

    ಈಗಾಗಲೇ ಬೆಂಗಳೂರು ಚಲನಚಿತ್ರೋತ್ಸವದಲ್ಲೂ ಈ ಚಿತ್ರ ಪ್ರದರ್ಶನ ಕಂಡಿದೆ. ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವಕ್ಕೆ ‘ಬ್ರಹ್ಮಕಮಲ’ ಆಯ್ಕೆಯಾಗಿದೆ. ಈ ವಿಷಯ ಇಡೀ ಚಿತ್ರತಂಡಕ್ಕೆ ಸಂತಸತಂದಿದೆ ಎನ್ನುತ್ತಾರೆ ನಿರ್ದೇಶಕ ಸಿದ್ದು ಪೂರ್ಣಚಂದ್ರ.

  • ‘ಬ್ರಹ್ಮಕಮಲ’ ಸಿನಿಮಾದಲ್ಲಿ ಹುಡುಗಿಯರದ್ದೇ ಸಿಂಹಪಾಲು

    ‘ಬ್ರಹ್ಮಕಮಲ’ ಸಿನಿಮಾದಲ್ಲಿ ಹುಡುಗಿಯರದ್ದೇ ಸಿಂಹಪಾಲು

    ಸಾಕಷ್ಟು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ‘ದಾರಿ ಯಾವುದಯ್ಯಾ ವೈಕುಂಠಕೆ’ ಚಿತ್ರದ ಖ್ಯಾತಿಯ ನಿರ್ದೇಶಕ ‘ಸಿದ್ದು ಪೂರ್ಣಚಂದ್ರ’ ಅವರು   ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಚಿತ್ರ ‘ಬ್ರಹ್ಮಕಮಲ’. ಸಿದ್ದು ಪೂರ್ಣಚಂದ್ರ ಅವರೇ ಈ ಚಿತ್ರವನ್ನು ನಿರ್ಮಾಣ ಕೂಡ ಮಾಡಿದ್ದಾರೆ.

    ಚಿತ್ರದ ಮೊದಲ ನೋಟವನ್ನು ಹೊಸ ವರ್ಷಕ್ಕೆ  ಬಿಡುಗಡೆ ಮಾಡಿ ಚಿತ್ರತಂಡ ಹರ್ಷ ವ್ಯಕ್ತಪಡಿಸಿದೆ. ರಾತ್ರಿ ಹುಟ್ಟಿ ರಾತ್ರಿಯೇ ಮುರುಟಿ ಹೋಗುವ ಒಂದು ಮಗುವಿನ ಸುತ್ತ ಘಟಿಸುವ ಕಥೆಯೇ ಬ್ರಹ್ಮ ಕಮಲ. ಈಗಾಗಲೇ ಚಿತ್ರೀಕರಣ ಮುಗಿಸಿ ಸೆನ್ಸಾರ್ ಮಂಡಳಿಯಿಂದ ‘ಯು’ ಸರ್ಟಿಫಿಕೇಟ್ ಪಡೆದುಕೊಂಡಿದೆ. ಇದನ್ನೂ ಓದಿ: ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ

    ‘ಬ್ರಹ್ಮಕಮಲ’ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಅದ್ವಿತಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ. ಲೋಕೇಂದ್ರ ಸೂರ್ಯ, ಋತು ಚೈತ್ರ, ಮಮತಾ ರಾಹುತ್,ಪ್ರಮಿಳಾ ಸುಬ್ರಹ್ಮಣ್ಯ, ಬಲ ರಾಜ್ವಾಡಿ, ಸಿದ್ದು ಪೂರ್ಣಚಂದ್ರ, ಆಟೋ ನಾಗರಾಜ್, ಗಂಡಸಿ ಸದಾನಂದಸ್ವಾಮಿ, ಕವಿತಾ ಕಂಬಾರ್, ರಾಧಾ ರಾಮಚಂದ್ರ ಇನ್ನೂ ಮುಂತಾದವರು ತಾರಾಬಳಗದಲ್ಲಿದ್ದಾರೆ.

    ಛಾಯಾಗ್ರಹಣ ಲೋಕೇಂದ್ರ ಸೂರ್ಯನಾರಾಯಣ,  ಸಂಕಲನ ದೀಪು ಸಿ ಎಸ್, ಸಂಗೀತ ಅನಂತ್ ಆರ್ಯನ್ ಹೊಣೆ ಹೊತ್ತಿದ್ದಾರೆ. ಕಾರ್ಯಕಾರಿ ನಿರ್ಮಾಪಕರು ಎ.ಕೆ. ಪುಟ್ಟರಾಜು ಮತ್ತು ಪ್ರಮಿಳಾ ಸುಬ್ರಹ್ಮಣ್ಯಂ. ನಿರ್ಮಾಣ ನಿರ್ವಹಣೆ ನಾಗರತ್ನ ಕೆ ಹೆಚ್, ವಸ್ತ್ರ ವಿನ್ಯಾಸ ಋತು ಚೈತ್ರ, ಕಲೆ ಬಸವರಾಜ್ ಆಚಾರ್ ಕೆ ಆರ್.

    Live Tv
    [brid partner=56869869 player=32851 video=960834 autoplay=true]