Tag: advertising board

  • 2ನೇ ಮಹಡಿಯಿಂದ ಆಯತಪ್ಪಿ ಬಿದ್ದ 84ರ ವೃದ್ಧ-ಜೀವ ಉಳಿಸಿತು ಜಾಹಿರಾತು ಫಲಕ

    2ನೇ ಮಹಡಿಯಿಂದ ಆಯತಪ್ಪಿ ಬಿದ್ದ 84ರ ವೃದ್ಧ-ಜೀವ ಉಳಿಸಿತು ಜಾಹಿರಾತು ಫಲಕ

    ಬೀಜಿಂಗ್: 86 ವರ್ಷದ ವೃದ್ಧರೊಬ್ರು ಆಯತಪ್ಪಿ ಎರಡನೇ ಮಹಡಿಯಿಂದ ಬಿದ್ದು, ಕಟ್ಟಡದ ಮುಂಭಾಗಕ್ಕೆ ಹಾಕಿದ್ದ ಜಾಹಿರಾತು ಫಲಕದಿಂದಾಗಿ ಬದುಕುಳಿದಿರುವ ಘಟನೆ ಚೀನಾದ ತೈಹುವಿನ ಆ್ಯಂಕಿಂಗ್ ಸಿಟಿಯಲ್ಲಿ ನಡೆದಿದೆ.

    ವೃದ್ಧ 2ನೇ ಮಹಡಿಯಿಂದ ಬಿದ್ದ ತಕ್ಷಣ ಮುಂಭಾಗದಲ್ಲಿ ಜಾಹಿರಾತು ಫಲಕ ಮತ್ತು ಕಟ್ಟಡದ ನಡುವೆ ಸಿಲುಕಿಕೊಂಡಿದ್ದಾರೆ. ವೃದ್ಧ ವ್ಯಕ್ತಿ ಸಿಲುಕಿಕೊಂಡಿದ್ದನ್ನು ನೋಡಿದ ಸ್ಥಳೀಯರು ಮೇಲಕ್ಕೆ ಎಳೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ ಕಟ್ಟಡ ಮತ್ತು ಜಾಹಿರಾತಿನ ಬೋರ್ಡ್ ನ ಇಕ್ಕಾಟದ ಸ್ಥಳದಲ್ಲಿ ಸಿಲುಕಿದ್ದರಿಂದ ಮೇಲೆತ್ತಲು ಸಾಧ್ಯವಾಗಿಲ್ಲ.

    ವೃದ್ಧರನ್ನು ಮೇಲೆತ್ತಲು ಸಾಧ್ಯವಾಗದೇ ಇದ್ದಾಗ ಸ್ಥಳೀಯರು ಅಗ್ನಿ ಶಾಮಕದಳದ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಎತ್ತರವಾದ ಏಣಿಯ ಸಹಾಯದಿಂದ ವೃದ್ಧರನ್ನು ರಕ್ಷಿಸಿದ್ದಾರೆ. ವೃದ್ಧ ಜಾಹಿರಾರು ಬೋರ್ಡ್ ನ ಅಲ್ಯೂಮಿನಿಯಂ ನ ಸರಳುಗಳ ಮಧ್ಯೆ ಸಿಕ್ಕಿದ್ರಿಂದ ರಕ್ಷಣಾ ಕಾರ್ಯ ವಿಳಂಬವಾಯಿತು.

    ಈ ಎಲ್ಲ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಇತ್ತೀಚೆಗೆ ಮೂರನೇ ಮಹಡಿಯಿಂದ ಮಗು ಆಯತಪ್ಪಿ ಬಿದ್ದಿತ್ತು. ಈ ವೇಳೆ ಸ್ಥಳೀಯ ವ್ಯಕ್ತಿಯೊಬ್ಬರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಮಗುವನ್ನು ರಕ್ಷಣೆ ಮಾಡಿದ್ದರು.

  • ಬಿಲ್ಡಿಂಗ್‍ ಗೆ ಕಟ್ಟಿದ್ದ ಜಾಹೀರಾತು ಫಲಕ ಏರಿದ ಬೀದಿ ನಾಯಿ – ಕೆಳಗಿಳಿಯಲು ಪರದಾಟ!

    ಬಿಲ್ಡಿಂಗ್‍ ಗೆ ಕಟ್ಟಿದ್ದ ಜಾಹೀರಾತು ಫಲಕ ಏರಿದ ಬೀದಿ ನಾಯಿ – ಕೆಳಗಿಳಿಯಲು ಪರದಾಟ!

    ದಾವಣಗೆರೆ: ನಗರದಲ್ಲಿ ಜಾಹೀರಾತು ಫಲಕವೊಂದರ ಮೇಲೆ ಬೀದಿ ನಾಯಿಯೊಂದು ಏರಿ ಕುಳಿತ್ತಿದ್ದು, ಕೆಳಗಿಳಿಯಲಾಗದೆ ಪರದಾಟ ನಡೆಸಿರುವ ಘಟನೆ ವಿದ್ಯಾನಗರದ ಸಾಯಿ ರೆಸಿಡೆನ್ಸಿ ಸ್ಕೂಲ್ ಕಟ್ಟಡದಲ್ಲಿ ನಡೆದಿದೆ.

    ಶನಿವಾರ ರಾತ್ರಿ ವಿದ್ಯಾನಗರದ ಸಾಯಿ ರೆಸಿಡೆನ್ಸಿ ಸ್ಕೂಲ್ ಕಟ್ಟಡದ ಒಳಗೆ ಆಕಸ್ಮಿಕವಾಗಿ ಬೀದಿ ನಾಯಿಯೊಂದು ಹೋಗಿದೆ. ಆದರೆ ಇಂದು ಶಾಲೆಗೆ ರಜೆ ಇರುವ ಕಾರಣ ಶಾಲಾ ಕಟ್ಟಡದ ಬಾಗಿಲು ತೆರೆದಿರಲಿಲ್ಲ. ಆದರೆ ಕಟ್ಟಡದಿಂದ ಹೊರಬರಲು ನಾಯಿ ಪ್ರಯತ್ನಿಸಿ ಕೊನೆಗೆ ಶಾಲೆಯ ಕಟ್ಟಡಕ್ಕೆ ಕಟ್ಟಿದ್ದ ಜಾಹೀರಾತು ಫಲಕವನ್ನು ಹತ್ತಿದೆ. ಆದರೆ ಅಲ್ಲಿಂದ ಕೆಳಗಿಳಿಯಲು ಸಾಧ್ಯವಾಗದೇ ಪರದಾಡಿದೆ.

    ನಾಯಿ ತುಂಬಾ ಹೊತ್ತು ಹಿಂದೆ-ಮುಂದೆ ನೋಡಿದೆ, ಕೂತಿದೆ ಏನೇನೊ ಪ್ರಯತ್ನ ಮಾಡಿದೆ. ಆದರೆ ಸಾಧ್ಯವಾಗಿಲ್ಲ. ಕೊನೆಗೆ ಕೂಗಾಡಲು ಪ್ರಾರಂಭಿಸಿದೆ. ಕೊನೆಗೆ ನಾಯಿಯ ಗೋಳಾಟ ಕೇಳಿಸಿಕೊಂಡ ಸಾರ್ವಜನಿಕರು ಬಂದು ಜಾಹೀರಾತು ಫಲಕದಿಂದ ಕೆಳಗೆ ಇಳಿಸಿ ರಕ್ಷಣೆ ಮಾಡಿದ್ದಾರೆ.

    https://www.youtube.com/watch?v=EEYxzESXYFo