Tag: Advertising

  • ಶಾರೂಖ್, ಅಕ್ಷಯ್, ಅಜಯ್ ದೇವಗನ್‌ಗೆ ಕೇಂದ್ರ ಸರ್ಕಾರ ನೋಟಿಸ್

    ಶಾರೂಖ್, ಅಕ್ಷಯ್, ಅಜಯ್ ದೇವಗನ್‌ಗೆ ಕೇಂದ್ರ ಸರ್ಕಾರ ನೋಟಿಸ್

    ನವದೆಹಲಿ: ತಂಬಾಕು (Tobacco) ಕಂಪನಿಗಳನ್ನು ಅನುಮೋದಿಸಿದ್ದಕ್ಕೆ ನಟರಾದ ಶಾರುಖ್ ಖಾನ್ (Shah Rukh Khan), ಅಕ್ಷಯ್ ಕುಮಾರ್ (Akshay Kumar) ಹಾಗೂ ಅಜಯ್ ದೇವಗನ್ (Ajay Devgn) ಅವರಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ನೋಟಿಸ್ ನೀಡಿದೆ.

    ನ್ಯಾಯಾಂಗ ನಿಂದನೆ ಅರ್ಜಿಗೆ ಪ್ರತಿಕ್ರಿಯಿಸಿದ ಡೆಪ್ಯುಟಿ ಸಾಲಿಸಿಟರ್ ಜನರಲ್ ಎಸ್‌ಬಿ ಪಾಂಡೆ ಅಕ್ಟೋಬರ್ 20 ರಂದು ತಂಬಾಕು ಕಂಪನಿಗಳನ್ನು ಅನುಮೋದಿಸಿದ್ದಕ್ಕಾಗಿ ನಟರಾದ ಶಾರುಖ್ ಖಾನ್, ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್ ಅವರಿಗೆ ಸಿಸಿಪಿಎ ನೋಟಿಸ್ ನೀಡಿದೆ ಎಂದು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠಕ್ಕೆ ತಿಳಿಸಿದ್ದಾರೆ.

    ವಕೀಲ ಮೋತಿಲಾಲ್ ಯಾದವ್ ಅವರು ಸಾರ್ವಜನಿಕರ ಆರೋಗ್ಯಕ್ಕೆ ಹಾನಿಕಾರಕವಾದ ಕೆಲವು ಉತ್ಪನ್ನಗಳು, ವಸ್ತುಗಳ ಜಾಹೀರಾತುಗಳು ಅಥವಾ ಅನುಮೋದನೆಗಳಲ್ಲಿ ಸೆಲೆಬ್ರಿಟಿಗಳು, ವಿಶೇಷವಾಗಿ ಪದ್ಮ ಪ್ರಶಸ್ತಿ ಪುರಸ್ಕೃತರು ಭಾಗವಹಿಸುವ ಕುರಿತು ಸಮಸ್ಯೆಗಳನ್ನು ಉಲ್ಲೇಖಿಸಿ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಲೋಕ ಸಮರ ಗೆಲ್ಲಲು ಕಾಂಗ್ರೆಸ್‌ ತಯಾರಿ – 4 ಕ್ಷೇತ್ರದಲ್ಲಿ ನಿಲ್ತಾರಾ ಸೆಲೆಬ್ರಿಟಿ ಅಭ್ಯರ್ಥಿಗಳು?

    ಸೆಪ್ಟೆಂಬರ್ 2022ರ ಆದೇಶವನ್ನು ಪಾಲಿಸದಿದ್ದಕ್ಕಾಗಿ ನ್ಯಾಯಾಂಗ ನಿಂದನೆ ಕ್ರಮವನ್ನು ಕೋರಿ ಸಲ್ಲಿಸಿದ ಮನವಿಯಲ್ಲಿ ನ್ಯಾಯಾಲಯವು ಆಗಸ್ಟ್ 2023 ರಲ್ಲಿ ಕ್ಯಾಬಿನೆಟ್ ಕಾರ್ಯದರ್ಶಿ, ಮುಖ್ಯ ಆಯುಕ್ತರು ಮತ್ತು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು. ಇದರಲ್ಲಿ ಅರ್ಜಿದಾರರಿಗೆ ಭಾರತ ಸರ್ಕಾರವನ್ನು ಸಂಪರ್ಕಿಸಲು ತಿಳಿಸಲಾಗಿದೆ.

    ನೋಟಿಸ್‌ಗೆ ಪ್ರತಿಕ್ರಿಯಿಸಿದ ಡೆಪ್ಯುಟಿ ಸಾಲಿಸಿಟರ್ ಜನರಲ್, ನಟರಾದ ಶಾರುಖ್ ಖಾನ್, ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್ ಅವರಿಗೆ ಅಕ್ಟೋಬರ್ 20 ರಂದು ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ನ್ಯಾಯಮೂರ್ತಿ ರಾಜೇಶ್ ಸಿಂಗ್ ಚೌಹಾಣ್ ಅವರ ಪೀಠಕ್ಕೆ ತಿಳಿಸಿದರು.

    ನಟ ಅಮಿತಾಬ್ ಬಚ್ಚನ್ ಅವರು ತಮ್ಮ ಒಪ್ಪಂದವನ್ನು ರದ್ದುಗೊಳಿಸಿದ್ದರೂ, ತಮ್ಮ ಜಾಹೀರಾತು ತೋರಿಸಿದ ತಂಬಾಕು ಕಂಪನಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ನ್ಯಾಯಾಲಯ ಮುಂದಿನ ವಿಚಾರಣೆಯನ್ನು 2024ರ ಮೇ 9ಕ್ಕೆ ನಿಗದಿಪಡಿಸಿದೆ. ಇದನ್ನೂ ಓದಿ: ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು – ಇಂದು ಸುಪ್ರೀಂನಿಂದ ತೀರ್ಪು

  • ನಮ್ಮ ಜಾಹೀರಾತಿನಲ್ಲಿ ಮತ ಯಾಚನೆ ಮಾಡಿಲ್ಲ, ಇದು ನೀತಿ ಸಂಹಿತೆ ಉಲ್ಲಂಘನೆ ಅಲ್ಲ: ಡಿಕೆಶಿ

    ನಮ್ಮ ಜಾಹೀರಾತಿನಲ್ಲಿ ಮತ ಯಾಚನೆ ಮಾಡಿಲ್ಲ, ಇದು ನೀತಿ ಸಂಹಿತೆ ಉಲ್ಲಂಘನೆ ಅಲ್ಲ: ಡಿಕೆಶಿ

    ಬೆಂಗಳೂರು: ತೆಲಂಗಾಣದಲ್ಲಿ (Telangana) ನಮ್ಮ ಸರ್ಕಾರದ ಜಾಹೀರಾತಿನಲ್ಲಿ ನಮ್ಮ ಸಾಧನೆಗಳನ್ನು ಹೇಳಿಕೊಂಡಿದ್ದೇವೆಯೇ ಹೊರತು ಮತಯಾಚನೆ ಮಾಡಿಲ್ಲ. ಹೀಗಾಗಿ ಇದು ನೀತಿ ಸಂಹಿತೆ (Code Of Conduct) ಉಲ್ಲಂಘನೆ ಆಗುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ.

    ತೆಲಂಗಾಣದ ಪತ್ರಿಕೆಗಳಲ್ಲಿ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ (Guarantee Scheme) ಜಾಹೀರಾತಿನ (Advertising) ವಿಚಾರವಾಗಿ ಚುನಾವಣಾ ಆಯೋಗ ನೋಟಿಸ್ ಜಾರಿ ಬಗ್ಗೆ ಸದಾಶಿವನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಜಾಹೀರಾತಿನಲ್ಲಿ ಸರ್ಕಾರದ ಕೆಲಸದ ಬಗ್ಗೆ ಮಾಹಿತಿ ಇದೆ. ಕಾಂಗ್ರೆಸ್ (Congress) ಪಕ್ಷಕ್ಕೆ ಅಥವಾ ಇಂತಹ ಅಭ್ಯರ್ಥಿಗಳಿಗೆ ಮತ ಹಾಕಿ ಎಂದು ಜಾಹೀರಾತಿನಲ್ಲಿ ತಿಳಿಸಿಲ್ಲ. ಇದು ಉಲ್ಲಂಘನೆ ಹೇಗೆ ಆಗುತ್ತದೆ? ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿಲ್ಲ ಎಂದು ಅವರು ಅಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ:  3ನೇ ಕಂತಿಗಾಗಿ ಮತ್ತೆ ಬಂದ ಸುರ್ಜೇವಾಲಾ: ಸಿ.ಟಿ ರವಿ

    ನಾವು ಪತ್ರಿಕೆ ಹಾಗೂ ಮ್ಯಾಗಜಿನ್‌ಗಳಲ್ಲಿ ನೀಡುವ ಜಾಹೀರಾತು ಕೆಲವೊಮ್ಮೆ ತೆಲಂಗಾಣ, ತಮಿಳುನಾಡು ಸೇರಿದಂತೆ ಬೇರೆ ರಾಜ್ಯಗಳಿಗೂ ಹೋಗುತ್ತದೆ. ನಾವು ಮತ ಯಾಚನೆ ಮಾಡಿದ್ದರೆ ಆಗ ನಿಯಮ ಉಲ್ಲಂಘನೆ ಆಗುತ್ತಿತ್ತು. ಚುನಾವಣಾ ಆಯೋಗದ ನೋಟಿಸ್‌ಗೆ ಉತ್ತರ ನೀಡುತ್ತೇವೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಸ್ವಚ್ಚತೆ, ನೈರ್ಮಲ್ಯ ಸಂರಕ್ಷಣೆಗೆ ಸ್ಥಳೀಯ ಸಂಸ್ಥೆಗಳಿಗೆ 2 ಸಾವಿರ ಕೋಟಿ ಅನುದಾನ: ಡಿಕೆಶಿ

    ನಿಗಮ ಮಂಡಳಿ ನೇಮಕ ಸಭೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರವಾಗಿ ಈಗಾಗಲೇ ಎರಡು ಮೂರು ಸುತ್ತಿನ ಸಭೆಗಳು ನಡೆದಿವೆ. ಇಂದು ಕೂಡ ಸಭೆ ಮಾಡಿ ಪಟ್ಟಿಯನ್ನು ದೆಹಲಿಗೆ ರವಾನಿಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಸಿಎಂರ ಜನಸ್ಪಂದನವನ್ನು ಅಭಿನಂದಿಸುತ್ತೇನೆ, ಎಲ್ಲವನ್ನು ಟೀಕಿಸಲ್ಲ: ಹೆಚ್‌ಡಿಕೆ

  • ತುಕಡೆ ಗ್ಯಾಂಗ್ ವಿರುದ್ಧ ಮಾತನಾಡಿದ್ದಕ್ಕೆ ಕಂಗನಾ ಕಳೆದುಕೊಂಡ ದುಡ್ಡೆಷ್ಟು?

    ತುಕಡೆ ಗ್ಯಾಂಗ್ ವಿರುದ್ಧ ಮಾತನಾಡಿದ್ದಕ್ಕೆ ಕಂಗನಾ ಕಳೆದುಕೊಂಡ ದುಡ್ಡೆಷ್ಟು?

    ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಪ್ರತಿ ಬಾರಿಯೂ ಬಾಲಿವುಡ್ (Bollywood) ನಟ, ನಟಿಯರು ಹಾಗೂ ನಿರ್ದೇಶಕರ ವಿರುದ್ಧ ಹಾರಿಹಾಯುತ್ತಿದ್ದ ಕಂಗನಾ ಈ ಬಾರಿ ರಾಜಕಾರಣಿಗಳು, ರಾಜಕೀಯ ವಿರೋಧಿಗಳು ಹಾಗೂ ತುಕಡೆ ತುಕಡೆ ಗ್ಯಾಂಗ್ (Tukade Tukade Gang) ವಿರುದ್ಧ ಮಾತನಾಡಿದ್ದಾರೆ. ಇವರನ್ನು ವಿರೋಧಿಸಿದ್ದಕ್ಕಾಗಿ ಭಾರೀ ಪ್ರಮಾಣದಲ್ಲಿ ದಂಡ ತೆತ್ತಿರುವ ಕುರಿತು ಮಾತನಾಡಿದ್ದಾರೆ.

    ನಟನೆಯಷ್ಟೇ ಕಾಂಟ್ರವರ್ಸಿಗೂ ಫೇಮಸ್ ಆಗಿರುವ ಕಂಗನಾ (Kangana Ranaut), ತಾವು ನಂಬಿಕೊಂಡ ಸಿದ್ದಾಂತಕ್ಕೆ ಬದ್ಧರಾಗಿ ಯಾವಾಗಲೂ ಮಾತನಾಡುತ್ತಾರೆ. ಹಾಗಾಗಿಯೇ ಕಂಗನಾ ಮೇಲೆ ಮುಗಿಬಿದ್ದವರ ಸಂಖ್ಯೆ ಬಹಳ. ಅವರ ವೈಯಕ್ತಿಕ ಬದುಕು ಹಾಗೂ ಸಿನಿಮಾ ಬದುಕಿನ ಮೇಲೆ ಅವರ ಮಾತೇ ಸಾಕಷ್ಟು ಕೆಟ್ಟ ಪರಿಣಾಮವನ್ನು ಬೀರಿವೆ. ಅದು ಯಾವ ಪ್ರಮಾಣದಲ್ಲಿ ಎನ್ನುವುದನ್ನು ಈ ಬಾರಿ ಕಂಗನಾ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಬಾಯ್‌ಫ್ರೆಂಡ್ ಪರಿಚಯಿಸಿದ ಕೀರ್ತಿ ಸುರೇಶ್- ಹುಡುಗ ಯಾರು?

    ‘ನಾನು ದೇಶ ವಿರೋಧಿಗಳ ಬಗ್ಗೆ ಮಾತನಾಡಿದ್ದಕ್ಕೆ, ತುಕಡೆ ತುಕಡೆ ಗ್ಯಾಂಗ್ ವಿರುದ್ಧ ತಿರುಗಿ ಬಿದ್ದಿದ್ದಕ್ಕೆ ಈ ವರ್ಷದಲ್ಲಿ ಕನಿಷ್ಠ 30 ರಿಂದ 40 ಕೋಟಿ ರೂಪಾಯಿಗಳನ್ನು (Money) ಕಳೆದುಕೊಂಡಿದ್ದೇನೆ. ಕನಿಷ್ಠ 25 ಜಾಹೀರಾತುಗಳಿಂದ (Advertising) ನಾನು ಆಚೆ ಬಂದಿದ್ದೇನೆ. ಈ ದೇಶ ವಿರೋಧಿಗಳ ಬಗ್ಗೆ ಮಾತನಾಡಿದ್ದಕ್ಕೆ ರಾತ್ರೋರಾತ್ರಿ ಜಾಹೀರಾತುಗಳಿಂದ ನನ್ನನ್ನು ಕೈ ಬಿಟ್ಟರು. ಆದರೂ, ನಾನು ಮಾತನಾಡುವುದನ್ನು ನಿಲ್ಲಿಸುವುದಿಲ್ಲ’ ಎಂದಿದ್ದಾರೆ.

    ಕಂಗನಾ ಈ ಮಾತುಗಳನ್ನು ಆಡುವುದಕ್ಕೆ ಕಾರಣ ಎಲಾನ್ ಮಸ್ಕ್ ಸಂದರ್ಶನ. ಶ್ರೀಮಂತ ಉದ್ಯಮಿ ಎಲಾನ್ ಸಂದರ್ಶನವೊಂದರಲ್ಲಿ ‘ನಾನು ಅನಿಸಿದ್ದನ್ನು ಹೇಳಿದ್ದರಿಂದ ಸಾಕಷ್ಟು ಹಣವನ್ನು ಕಳೆದುಕೊಂಡೆ’ ಎಂದಿದ್ದಾರೆ. ಈ ಮಾತುಗಳಿಗೆ ಉತ್ತರ ಎನ್ನುವಂತೆ ತಾವೂ ಹಣ ಕಳೆದುಕೊಂಡಿದ್ದರ ಬಗ್ಗೆ ಕಂಗನಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

  • ಸೆಲೆಬ್ರಿಟಿ, ಸಾಮಾಜಿಕ ಮಾಧ್ಯಮ ಪ್ರಭಾವಿಗಳಿಗೆ ಹೊಸ ಗೈಡ್‌ಲೈನ್ಸ್

    ಸೆಲೆಬ್ರಿಟಿ, ಸಾಮಾಜಿಕ ಮಾಧ್ಯಮ ಪ್ರಭಾವಿಗಳಿಗೆ ಹೊಸ ಗೈಡ್‌ಲೈನ್ಸ್

    ನವದೆಹಲಿ: ಸೆಲೆಬ್ರಿಟಿಗಳು, ಸಿನಿಮಾ ನಟ-ನಟಿಯರು, ಪ್ರಭಾವಿ ವ್ಯಕ್ತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಜಾಹೀರಾತು (Advertising) ನೀಡುವುದು ಸಾಮಾನ್ಯ. ಆದರೆ ಇನ್ನು ಮುಂದೆ ಯಾವುದೇ ವಸ್ತು ಅಥವಾ ಸೇವೆಗಳನ್ನು ಪ್ರಚಾರ ಮಾಡುವಾಗ ಸೆಲೆಬ್ರಿಟಿ (Celebrity) ಅಥವಾ ಪ್ರಭಾವಿ ವ್ಯಕ್ತಿಗಳು (Influencers) ಕೆಲ ಗೈಡ್‌ಲೈನ್ಸ್ ಅನ್ನು ಪಾಲಿಸಬೇಕೆಂದು ಕೇಂದ್ರ ತಿಳಿಸಿದೆ.

    ಸೆಲೆಬ್ರಿಟಿಗಳು ಹಾಗೂ ಪ್ರಭಾವಿ ವ್ಯಕ್ತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಉತ್ಪನ್ನ ಹಾಗೂ ಸೇವೆಗಳನ್ನು ಅನುಮೋದಿಸುವಾಗ ಕಡ್ಡಾಯವಾಗಿ ಎಂಡೋರ್ಸ್ಮೆಂಟ್ಸ್ ನೋ-ಹೌ (Endorsements Know-How) ಎಂಬ ಹೊಸ ಮಾರ್ಗಸೂಚಿಯನ್ನು (Guideline) ಅನುಸರಿಸಬೇಕು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ತಿಳಿಸಿದೆ. ಇದರ ಪ್ರಕಾರ ಉತ್ಪನ್ನಗಳನ್ನು ಪ್ರಚಾರ ಮಾಡುವಾಗ ಜಾಹೀರಾತು (Advertisement), ಪ್ರಾಯೋಜಿತ (Sponsored), ಸಹಯೋಗ (Collaboration) ಅಥವಾ ಪಾವತಿಸಿದ ಪ್ರಚಾರದಂತಹ (Paid Promotion) ಪದಗಳನ್ನು ಬಳಸಬೇಕು ಎಂದು ಹೇಳಿದೆ.

    ಗ್ರಾಹಕ ವ್ಯವಹಾರಗಳ ಇಲಾಖೆ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಅತಿ ಹೆಚ್ಚು ಫಾಲೋರ್ಸ್‌ಗಳನ್ನು ಹೊಂದಿರುವ ವ್ಯಕ್ತಿಗಳು ಯಾವುದೇ ವಸ್ತು ಅಥವಾ ಸೇವೆಗಳನ್ನು ಪ್ರಚಾರ ಮಾಡುವಾಗ ತಾವು ಯಾವ ಉದ್ದೇಶಕ್ಕಾಗಿ ನಿರ್ದಿಷ್ಟ ಉತ್ಪನ್ನವನ್ನು ಪ್ರಚಾರ ಮಾಡುತ್ತಿರುವುದು ಎಂಬುದನ್ನು ಕಡ್ಡಾಯವಾಗಿ ತಿಳಿಸಬೇಕಿದೆ. ಹಣದ ಲಾಭಕ್ಕೋ, ಕೊಡುಗೆಯೋ ಎಂಬುದನ್ನು ಉಲ್ಲೇಖಿಸಬೇಕು ಎಂದಿದೆ. ಇದನ್ನೂ ಓದಿ: ಮತ್ತೆ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾದ ಮೆಟಾ

    ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಉತ್ಪನ್ನದ ಪ್ರಚಾರದ ಸಂದರ್ಭ ಅದರಲ್ಲಿ ಜಾಹೀರಾತು, ಪ್ರಾಯೋಜಿತ, ಸಹಯೋಗ ಅಥವಾ ಪಾಲುದಾರಿಕೆ ಎಂದು ತಿಳಿಸಬೇಕು. ಅಥವಾ ಆ ಪದಗಳನ್ನು ಹ್ಯಾಶ್‌ಟ್ಯಾಗ್ ಅಥವಾ ಶೀರ್ಷಿಕೆಗಳಲ್ಲಿ ಪಠ್ಯವಾಗಿ ಸೂಚಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

    ಮಾತ್ರವಲ್ಲದೇ ಪ್ರಚಾರ ಮಾಡುತ್ತಿರುವ ವ್ಯಕ್ತಿಗಳು ಯಾವುದೇ ಉತ್ಪನ್ನಗಳನ್ನು ತಾವು ಬಳಸದೇ ಇದ್ದಲ್ಲಿ ಅವುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡುವಂತಿಲ್ಲ. ಸರಳ ಸ್ಪಷ್ಟ ಭಾಷೆಯಲ್ಲಿ ಅನುಮೋದನೆಗಳನ್ನು ಮಾಡಬೇಕು ಎಂದು ಕಟ್ಟುನಿಟ್ಟಾಗಿ ತಿಳಿಸಿದೆ. ಇದನ್ನೂ ಓದಿ: ಫಾಸ್ಟ್ ಟ್ಯಾಗ್‌ನಲ್ಲಿ ಹಣವಿಲ್ಲದೇ ಟೋಲ್ ಬಳಿಯೇ ನಿಂತ‌ ಇವಿ ಬಸ್‌ಗಳು

  • ಅನುಮತಿ ಪಡೆಯದೇ ಜಾಹೀರಾತು: ಇಬ್ಬರು ಅಭ್ಯರ್ಥಿಗಳ ವಿರುದ್ಧ FIR ದಾಖಲು

    ಅನುಮತಿ ಪಡೆಯದೇ ಜಾಹೀರಾತು: ಇಬ್ಬರು ಅಭ್ಯರ್ಥಿಗಳ ವಿರುದ್ಧ FIR ದಾಖಲು

    ಮಂಗಳೂರು: ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಅನುಮತಿ ಪಡೆಯದೇ ಜಾಹೀರಾತು, ಪಕ್ಷದ ಚಿಹ್ನೆ ಜೊತೆಗೆ ಮತದಾರರ ಪಟ್ಟಿಯನ್ನು ವೆಬ್‍ಸೈಟಿನಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ಪರಿಣಾಮ ಇಬ್ಬರು ಅಭ್ಯರ್ಥಿಗಳ ವಿರುದ್ಧ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ಹಾಗೂ ಜೆಡಿಎಸ್ ಅಭ್ಯರ್ಥಿ ಹೆಚ್.ಕೆ.ರಾಮು ವಿರುದ್ಧ ಜಿ.ಪಂ ಉಪ ಕಾರ್ಯದರ್ಶಿ ಭೀಮಸೇನ್ ಗುಡೂರ್ ದೂರು ನೀಡಿದ್ದಾರೆ. ಈ ಹಿನ್ನೆಲೆ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಐಪಿಸಿ 171(ಸಿ) ಅಡಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಪೊಲೀಸರನ್ನ ಹತ್ಯೆ ಮಾಡಿದ್ದ ಭಯೋತ್ಪಾದಕ ಎನ್‍ಕೌಂಟರ್ 

    JD(S) will emerge as single largest party – G T Deve Gowda

    ನಡೆದಿದ್ದೇನು?
    ಮೀಡಿಯಾ ಸರ್ಟಿಫಿಕೇಷನ್ ಹಾಗೂ ಮಾನಿಟರಿಂಗ್ ಕಮಿಟಿಯಿಂದ ಯಾವುದೇ ಅನುಮತಿ ಪಡೆಯದೇ ಪಕ್ಷದ ಚಿಹ್ನೆಯಡಿ ಮತದಾರರ ಪಟ್ಟಿ ಅಪ್ಲೋಡ್ ಮಾಡಲಾಗಿದೆ. ಈ ಹಿನ್ನೆಲೆ ಜಾಹೀರಾತು ನೀಡಿದ್ದ ಅಭ್ಯರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

  • ನನ್ನಿಂದ ತಪ್ಪಾಯ್ತು – ತಂಬಾಕು ಬ್ರ್ಯಾಂಡ್ ಅಂಬಾಸಿಡರ್ ಪಟ್ಟ ತ್ಯಜಿಸಿದ ಅಕ್ಷಯ್

    ನನ್ನಿಂದ ತಪ್ಪಾಯ್ತು – ತಂಬಾಕು ಬ್ರ್ಯಾಂಡ್ ಅಂಬಾಸಿಡರ್ ಪಟ್ಟ ತ್ಯಜಿಸಿದ ಅಕ್ಷಯ್

    ಮುಂಬೈ: ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ಇತ್ತೀಚೆಗೆ ಪಾನ್ ಮಸಾಲಾ ಬ್ರ್ಯಾಂಡ್ ಅಂಬಾಸಿಡರ್ ಆಗುತ್ತಿರುವುದರ ಬಗ್ಗೆ ಭಾರೀ ಟ್ರೋಲ್ ಆಗಿದ್ದರು. ಹಲವು ದಿನಗಳಿಂದ ಅಕ್ಷಯ್ ಅಭಿಮಾನಿಗಳು ಅವರ ಈ ನಡೆಗೆ ಬೇಸರ ವ್ಯಕ್ತಪಡಿಸಿದ್ದರಿಂದ ಇದೀಗ ಅಕ್ಷಯ್ ಬ್ರ್ಯಾಂಡ್ ಅಂಬಾಸಿಡರ್ ಪಟ್ಟವನ್ನು ತ್ಯಜಿಸುತ್ತಿರುವುದಾಗಿ ಘೋಷಿಸಿದ್ದಾರೆ.

    ಪಾನ್ ಮಸಾಲಾ ಬ್ರಾಂಡ್ ಒಂದರ ಜಾಹಿರಾತಿಗಾಗಿ ಬಾಲಿವುಡ್ ತಾರೆಗಳಾದ ಶಾರೂಖ್ ಖಾನ್, ಅಜಯ್ ದೇವಗನ್ ಹಾಗೂ ಅಕ್ಷಯ್ ಕುಮಾರ್ ಕೆಲಸ ಮಾಡುತ್ತಿದ್ದರು. ಆದರೆ ಇದರಿಂದ ಅಕ್ಷಯ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಹೀಗಾಗಿ ಅಕ್ಷಯ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಅಭಿಮಾನಿಗಳಿಗೆ ಕ್ಷಮೆ ಕೋರಿದ್ದಾರೆ. ಇದನ್ನೂ ಓದಿ: ಏಪ್ರಿಲ್ 28 ರಂದು ಇಸ್ರೇಲ್‍ನಲ್ಲಿ ಬಿಡುಗಡೆಯಾಗಲಿದೆ ‘ದಿ ಕಾಶ್ಮೀರ್ ಫೈಲ್ಸ್’

    ಏಪ್ರಿಲ್ 21ರ ಮಧ್ಯರಾತ್ರಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿದ ಅಕ್ಷಯ್, ನನ್ನನ್ನು ಕ್ಷಮಿಸಿ, ನನ್ನ ಎಲ್ಲಾ ಅಭಿಮಾನಿಗಳು ಹಾಗೂ ಹಿತೈಷಿಗಳಿಗೆ ನಾನು ಕ್ಷಮೆ ಯಾಚಿಸಲು ಬಯಸುತ್ತೇನೆ. ಕಳೆದ ಕೆಲವು ದಿನಗಳಿಂದ ನಿಮ್ಮ ಪ್ರತಿಕ್ರಿಯೆಗಳು ನನ್ನ ಮೇಲೆ ಗಾಢ ಪರಿಣಾಮ ಬೀರಿದೆ. ನಾನು ತಂಬಾಕನ್ನು ಅನುಮೋದಿಸಿಲ್ಲ ಹಾಗೂ ಅನುಮೋದಿಸುವುದಿಲ್ಲ. ಆದರೆ ನಾನು ಗೌರವಿಸುತ್ತೇನೆ. ವಿಮಲ್ ಎಲೈಚಿ ಅವರೊಂದಿಗೆ ನನ್ನ ಒಡನಾಟ ನಿಮ್ಮ ಭಾವನೆಗಳಿಗೆ ನೋವುಂಟು ಮಾಡಿರುವುದು ನನಗೆ ತಿಳಿದಿದೆ. ಹೀಗಾಗಿ ನಾನು ಇದರಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ಅಸ್ಸಾಂ ಪೊಲೀಸರಿಂದ ಗುಜರಾತ್ MLA ಜಿಗ್ನೇಶ್ ಮೇವಾನಿ ಬಂಧನ

     

    View this post on Instagram

     

    A post shared by Akshay Kumar (@akshaykumar)

    ನಾನು ಈ ಜಾಹೀರಾತಿನಿಂದ ಪಡೆದ ಹಣವನ್ನು ಒಳ್ಳೆಯ ಕೆಲಸಕ್ಕೆ ಕೊಡುಗೆ ನೀಡಲು ನಿರ್ಧರಿಸಿದ್ದೇನೆ. ನನ್ನ ಹಾಗೂ ಬ್ರ್ಯಾಂಡ್‌ನೊಂದಿಗಿರುವ ಒಪ್ಪಂದದ ಅವಧಿ ಮುಗಿಯುವವರೆಗೂ ಜಾಹಿರಾತನ್ನು ಪ್ರಸಾರ ಮಾಡುವುದನ್ನು ಕಂಪನಿ ಮುಂದುವರಿಸಬಹುದು. ಆದರೆ ಮುಂದೆ ಯಾವುದೇ ರೀತಿಯಾಗಿ ಹೆಜ್ಜೆ ಇಡುವಲ್ಲಿ ಅತ್ಯಂತ ಜಾಗರೂಕನಾಗಿ ಇರುತ್ತೇನೆ ಎಂಬ ಭರವಸೆ ನೀಡುತ್ತೇನೆ ಎಂದಿದ್ದಾರೆ.

    ಅಕ್ಷಯ್ ಕುಮಾರ್ ಈ ಹಿಂದೆ ಮದ್ಯ ಹಾಗೂ ತಂಬಾಕು ಸೇವನೆ ವಿರುದ್ಧ ಮಾತನಾಡಿರುವ ವೀಡಿಯೋಗಳು ಬಹಳ ಪ್ರಸಿದ್ಧಿ ಪಡೆದಿದ್ದವು. ಆದರೆ ಇತ್ತೀಚೆಗೆ ಅಕ್ಷಯ್ ಪಾನ್ ಮಸಾಲಾ ಜಾಹಿರಾತಿನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಬೇಸರ ತಂದಿದ್ದಾರೆ.

  • ಕಿಕ್ ಏರಿಸಲು ಹೊರಟಿದ್ದ ಸಮಂತಾಗೆ ‘ನೋ ನೋ’ ಅಂದ ಟ್ರೋಲಿಗರು

    ಕಿಕ್ ಏರಿಸಲು ಹೊರಟಿದ್ದ ಸಮಂತಾಗೆ ‘ನೋ ನೋ’ ಅಂದ ಟ್ರೋಲಿಗರು

    ಕೌಟುಂಬಿಕ ಕಾರಣಗಳಿಂದಾಗಿಯೇ ಹೆಚ್ಚು ಸುದ್ದಿ ಆಗುತ್ತಿರುವ ಸಮಂತಾ, ಇದೀಗ ಜಾಹೀರಾತು ಒಂದರಲ್ಲಿ ಕಾಣಿಸಿಕೊಂಡಿದ್ದಕ್ಕೆ ಸಖತ್ ಟ್ರೋಲ್ ಆಗಿದ್ದಾರೆ. ಕಿಕ್ ಏರಿಸಲು ಹೊರಟಿದ್ದ ಈ ಮಿಲ್ಕಿ ಬ್ಯೂಟಿಗೆ ‘ಹಾಗೆಲ್ಲ ಮಾಡ್ಬೇಡಿ’ ಎಂದು ಅಭಿಮಾನಿಗಳು ಬುದ್ದಿ ಹೇಳಿದ್ದಾರೆ. ‘ನೀವು ಅಂತಹ ಕಾಸ್ಟ್ಯೂಮ್ ಹಾಕಿಕೊಳ್ಳುವುದು ನಮಗೆ ಇಷ್ಟವಿಲ್ಲ’ ಎಂದು ಕಾಮೆಂಟ್ ಕೂಡ ಮಾಡಿದ್ದಾರೆ. ಇದನ್ನೂ ಓದಿ : ಮೆಗಾಸ್ಟಾರ್ ಚಿರಂಜೀವಿ ಹೊಸ ಚಿತ್ರದಲ್ಲಿ ಕಮಲ್ ಹಾಸನ್ ಪುತ್ರಿ ಶ್ರುತಿ

    ಸಮಂತಾ ಇತ್ತೀಚೆಗೆ ಆಲ್ಕೋಹಾಲ್ ಕಂಪೆನಿಯೊಂದರ ಜಾಹೀರಾತಿನಲ್ಲಿ ನಟಿಸಿದ್ದಾರೆ. ಆ ವಿಡಿಯೋದಲ್ಲಿ ಅವರು ಎರಡು ಬಗೆಯ ಕಾಸ್ಟ್ಯೂಮ್ ಧರಿಸಿದ್ದಾರೆ. ಅವೆರಡೂ ಸಮಂತಾಗೆ ಒಪ್ಪಿಲ್ಲವಂತೆ. ಹಾಗಾಗಿ ‘ಇಂತಹ ಅರೆಬರೆ ಕಾಸ್ಟ್ಯೂಮ್ ಗಳಲ್ಲಿ ಕಾಣಿಸಿಕೊಳ್ಳಬೇಡಿ. ಆ ರೀತಿಯಲ್ಲಿ ನಿಮ್ಮನ್ನು ನಾವು ನೋಡಲು ಸಾಧ್ಯವಿಲ್ಲ’ ಎಂದು ಅಭಿಮಾನಿಗಳು ಕೂಡ ಗರಂ ಆಗಿದ್ದಾರೆ. ಇದನ್ನೂ ಓದಿ : ಇಂದು ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವರ್ಣರಂಜಿತ ತೆರೆ

    ಪುಷ್ಟಾ ಸಿನಿಮಾದ ‘ಹೂ ಅಂತೀಯಾ ಮಾವ..’ ಹಾಡಿನಲ್ಲೂ ಸಮಂತಾ ಹಾಟ್ ಹಾಟ್ ಆಗಿಯೇ ಕಾಣಿಸಿಕೊಂಡಿದ್ದರು. ಈ ಸಮಯದಲ್ಲೂ ಕೆಲವರಿಂದ ಟೀಕೆ ವ್ಯಕ್ತವಾಗಿತ್ತು. ಇಂತಹ ಹಾಡಿನಲ್ಲಿ ನೀವು ಬೋಲ್ಡ್ ಆಗಿ ಕಾಣಿಸಿಕೊಳ್ಳುವುದು ನಮಗಿಷ್ಟವಿಲ್ಲ ಎಂದು ಅಭಿಮಾನಿಗಳು ನೇರವಾಗಿಯೇ ಹೇಳಿದ್ದರು. ಅಲ್ಲದೇ, ಆ ಹಾಡಿನ ಸಾಲಿನ ಕುರಿತೂ ಆಕ್ಷೇಪ ವ್ಯಕ್ತವಾಗಿತ್ತು. ಇದನ್ನೂ ಓದಿ : ಮಾ.13ಕ್ಕೆ ಅರಮನೆ ಮೈದಾನದಲ್ಲಿ ಜೇಮ್ಸ್ ಪ್ರೀ ಇವೆಂಟ್, ಹೊಸಪೇಟೆಯಲ್ಲಿ ಸಕ್ಸಸ್ ಸಂಭ್ರಮ

    ಇದೀಗ ಜಾಹೀರಾತಿನ ಬಗ್ಗೆ ಟ್ರೋಲಿಗರು ನಾನಾ ರೀತಿಯಲ್ಲಿ ಟ್ರೋಲ್ ಮಾಡಿದ್ದಾರೆ. ತಣ್ಣಗೆ ನಕ್ಕು ಸಮಂತಾ ತಮ್ಮ ಪಾಡಿಗೆ ತಾವು ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

  • ನಿಷೇಧಿತ ತಂಬಾಕುಗಳ ಜಾಹಿರಾತಿಗೆ ಸಾಮಾಜಿಕ ಜಾಲತಾಣವೇ ವೇದಿಕೆ

    ನಿಷೇಧಿತ ತಂಬಾಕುಗಳ ಜಾಹಿರಾತಿಗೆ ಸಾಮಾಜಿಕ ಜಾಲತಾಣವೇ ವೇದಿಕೆ

    ಬೆಂಗಳೂರು: ತಂಬಾಕು ಸೇವನೆ ಹಾಗೂ ಜಾಹೀರಾತಿಗೆ ಕಡಿವಾಣವಿದ್ದರೂ ಸಾಮಾಜಿಕ ಜಾಲತಾಣದಲ್ಲಿ ತಂಬಾಕು ಸೇವನೆ ಹಾಗೂ ಮಾರಾಟದ ಬಗ್ಗೆ ರಾಜರೋಷವಾಗಿ ಜಾಹೀರಾತು ನೀಡಲಾಗುತ್ತಿದೆ ಎಂದು ನ್ಯಾಷನಲ್ ಲಾ ಸ್ಕೂಲ್ ಹಾಗೂ ಕನ್ಸೂಮರ್ ಲಾ ಆಂಡ್ ಪ್ರಾಕ್ಟೀಸಸ್ ಸಹಯೋಹದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

    2019ರಲ್ಲಿ ಎಲೆಕ್ಟ್ರಾನಿಕ್ ನಿಕೋಟಿನ್ ಡೆಲಿವೆರಿ ಸಿಸ್ಟಮ್ಸ್ (ಇಎನ್‍ಡಿಎಸ್) ಮತ್ತು ಹೀಟೆಡ್ ತಂಬಾಕು ಪದಾರ್ಥ ಇವುಗಳ ಮೇಲೆ ಕೇಂದ್ರ ಸರ್ಕಾರ ಕಾನೂನಾತ್ಮಕವಾಗಿ ನಿಷೇಧ ಹೇರಿದೆ. ಈ ಬಗ್ಗೆ ಎಲ್ಲಿಯೂ ಜಾಹೀರಾತು ನೀಡುವಂತಿಲ್ಲ. ಆದರೆ ಸಾಮಾಜಿಕ ಜಾಲತಾಣವಾದ ಫೇಸ್‍ಬುಕ್, ಟ್ವಿಟ್ಟರ್, ಇನ್‍ಸ್ಟಾಗ್ರಾಮ್, ಟೆಲಿಗ್ರಾಮ್‍ಗಳಲ್ಲಿ ಜಾಹಿರಾತು ನೀಡಲಾಗುತ್ತಿದೆ ಎನ್ನುವುದು ಸಮೀಕ್ಷೆ ಮೂಲಕ ತಿಳಿದು ಬಂದಿದೆ. ಇದನ್ನೂ ಓದಿ : ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಅಪ್ಡೇಟ್ : ಯಾವಾಗ, ಏನು ಅಂತ ನೋಡ್ಕೊಂಡ್ ಬಿಡಿ

    ನ್ಯಾಷನಲ್ ಲಾ ಸ್ಕೂಲ್ ಇಂಡಿಯಾ ಆನ್‍ಲೈನ್ ಮೂಲಕ ಈ ಸಮೀಕ್ಷೆ ನಡೆಸಲಾಗಿದೆ. ಒಟ್ಟು 23 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು, ವಿದ್ಯಾರ್ಥಿಗಳ ಬಾರ್ ಅಸೋಸಿಯೇಷನ್‍ನ ಒಟ್ಟು 4,049 ವಿದ್ಯಾರ್ಥಿಗಳನ್ನು ಈ ಸಮೀಕ್ಷೆಯಲ್ಲಿ ಒಳಪಡಿಸಲಾಗಿತ್ತು.

    ಶೇ.46 ರಷ್ಟು ಪುರುಷರು ಹಾಗೂ ಶೇ.51 ರಷ್ಟು ಮಹಿಳೆಯರು ಈ ಅಧ್ಯಯನದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಸಮೀಕ್ಷೆ ಪ್ರಕಾರ ಶೇ. 38.1 ರಷ್ಟು ಕರ್ನಾಟಕದಲ್ಲಿ ನಿಷೇಧಿತ ತಂಬಾಕು ಸೇವನೆ ಮಾರಾಟದಲ್ಲಿದ್ದು, ಕರ್ನಾಟಕವೇ ಮುಂಚೂಣಿ ರಾಜ್ಯವಾಗಿದೆ. ಮಹಾರಾಷ್ಟ್ರ ಶೇ.12.4, ತಮಿಳುನಾಡು ಶೇ.9.3, ಉತ್ತರ ಪ್ರದೇಶ ಶೇ.6.7 ಹಾಗೂ ಕೇರಳ ಶೇ.6.5 ರಷ್ಟು ಪ್ರಮಾಣದಲ್ಲಿ ಚಾಲ್ತಿಯಲ್ಲಿವೆ. ಇದನ್ನೂ ಓದಿ: ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಪ್ರಯತ್ನ ನಿಲ್ಲಲ್ಲ: ಮೋದಿ

    ಅಧ್ಯಯನದ ಕುರಿತು ಮಾತನಾಡಿದ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾದ ಪ್ರೋಫೆಸರ್. ಅಶೋಕ್ ಪಾಟೀಲ್, ಭಾರತದಲ್ಲಿ ಇ-ಸಿಗರೇಟುಗಳನ್ನು ಎಲೆಕ್ಟ್ರಾನಿಕ್ ಪ್ಲಾಟ್‍ಫಾರಂಗಳ ಮೂಲಕ ಹೆಚ್ಚಿನ ಜಾಹಿರಾತಿಗೆ ಅವಕಾಶ ಸಿಕ್ಕಿದೆ. ನಿಷೇಧಿತ ಇ-ಸಿಗರೇಟು ಹೆಚ್ಚಾಗಿ ಟೆಲಿಗ್ರಾಂನಲ್ಲಿ ಜಾಹಿರಾತು ನೀಡಲಾಗುತ್ತಿದೆ ಎಂದು ಶೇ.60ರಷ್ಟು ಮಂದಿ ಹೇಳಿದ್ದಾರೆ ಎಂದು ತಿಳಿಸಿದರು.

    ಉಳಿದಂತೆ ವಾಟ್ಸಪ್‍ನಲ್ಲಿ ಶೇ.22.6, ಫೇಸ್‍ಬುಕ್‍ನಲ್ಲಿ ಶೇ.17.3, ಟಿಕ್‍ಟಾಕ್‍ನಲ್ಲಿ ಶೇ.14.3 ಹಾಗೂ ಟ್ವಿಟ್ಟರ್‍ನಲ್ಲಿ ಶೇ.6.8 ರಷ್ಟು ಜಾಹಿರಾತು ಕಂಡಿರುವುದಾಗಿ ಸಮೀಕ್ಷೆಗೆ ಒಳಪಟ್ಟವರು ಅಭಿಪ್ರಾಯ ಪಟ್ಟಿದ್ದಾರೆ ಎಂದರು. ಸರ್ಕಾರವೂ ನಿಷೇಧದ ಬಳಿಕ ಯುವ ಜನತೆಯನ್ನು ದಾರಿ ತಪ್ಪಿಸಲು ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡುವವರ ವಿರುದ್ಧ ಹದ್ದಿನ ಕಣ್ಣಿಟ್ಟು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

  • ಅಕ್ರಮದಲ್ಲಿ ಸಚಿವರು, ಶಾಸಕರ ಪಾತ್ರದ ಬಗ್ಗೆ ತನಿಖೆಯಾಗಲಿ: ಎಎಪಿ

    ಬೆಂಗಳೂರು: ಎಸಿಬಿ ಪತ್ತೆ ಮಾಡಿರುವ ಬಿಬಿಎಂಪಿಯ ಅಕ್ರಮಗಳಲ್ಲಿ ಪ್ರಭಾವಿ ಸಚಿವರು ಹಾಗೂ ಬೆಂಗಳೂರಿನ ಶಾಸಕರುಗಳ ಪಾತ್ರ ಮಹತ್ವದ್ದಾಗಿದೆ. ಇಲ್ಲಿ ಕೇವಲ ಅಧಿಕಾರಿಗಳನ್ನು ಬಲಿಪಶು ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ಉಪಾಧ್ಯಕ್ಷ ಬಿ.ಟಿ.ನಾಗಣ್ಣ ಕಿಡಿಕಾರಿದರು.

    ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ಟಿ.ನಾಗಣ್ಣ ಅವರು, ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ 27 ಕಚೇರಿಗಳ ಮೇಲೆ ದಾಳಿ ಮಾಡಿ, ಸುಮಾರು 300 ಕೋಟಿ ರೂ. ಗಿಂತಲೂ ಹೆಚ್ಚಿನ ಮೊತ್ತದ ಹಲವು ಅಕ್ರಮಗಳನ್ನು ಬಯಲು ಮಾಡಿರುವುದು ಶ್ಲಾಘನೀಯ. ಆದರೆ ಈ ಎಲ್ಲ ಅಕ್ರಮಗಳು ಬೆಂಗಳೂರಿನ ಶಾಸಕರು ಹಾಗೂ ಸಚಿವರ ಅಣತಿಯ ಮೇರೆಗೆ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ನಿನ್ನೆ ಮದುವೆಯಾಗಿ ಇಂದು ದೇಶ ಸೇವೆಗೆ ಗನ್‌ ಹಿಡಿದ ದಂಪತಿ

    ಎಸಿಬಿಯು ಕಾಟಾಚಾರಕ್ಕೆಂಬಂತೆ ಕೇವಲ ಅಧಿಕಾರಿಗಳನ್ನು ಹೊಣೆ ಮಾಡಿ, ಶಾಸಕರು ಹಾಗೂ ಸಚಿವರನ್ನು ಪಾರು ಮಾಡುತ್ತಿದೆ. ಭ್ರಷ್ಟ ಅಧಿಕಾರಿಗಳ ಜೊತೆ ಶಾಮೀಲಾಗಿ ಹಾಗೂ ಪ್ರಾಮಾಣಿಕ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಅಕ್ರಮಕ್ಕೆ ಕಾರಣರಾದ ಜನಪ್ರತಿನಿಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

    ಬೆಂಗಳೂರಿನಲ್ಲಿ ಬಹುಮಹಡಿ ಕಟ್ಟಡಗಳಿಗೆ ಕಾನೂನುಬಾಹಿರವಾಗಿ ಅನುಮತಿ ನೀಡುವುದು ಸಾಮಾನ್ಯವಾಗಿದೆ. ಕಾಮಗಾರಿಗಳಿಗೆ ಸಂಬಂಧಿಸಿ ಒಂದೇ ಕೆಲಸಕ್ಕೆ ಎರಡೆರಡು ಬಿಲ್ ಮಾಡಿ ಸರ್ಕಾರದ ಬೊಕ್ಕಸವನ್ನು ಲೂಟಿ ಮಾಡಲಾಗುತ್ತಿದೆ. ಕಮರ್ಷಿಯಲ್ ಕಟ್ಟಡಗಳನ್ನು ರೆಸಿಡೆನ್ಸಿಯಲ್ ಕಟ್ಟಡವೆಂದು ತೋರಿಸಿ ತೆರಿಗೆ ವಂಚನೆ ಮಾಡಲು ಬಿಬಿಎಂಪಿಯ ಭ್ರಷ್ಟ ಅಧಿಕಾರಿಗಳು ಪೆÇ್ರೀತ್ಸಾಹ ನೀಡುತ್ತಿದ್ದಾರೆ. ಇವೆಲ್ಲದರಲ್ಲಿ ಶಾಸಕರು ಹಾಗೂ ಸಚಿವರಿಗೆ ಕಮಿಷನ್ ಹೋಗುತ್ತಿದ್ದು, ಅವರ ವಿರುದ್ಧವೂ ತನಿಖೆ ನಡೆದರೆ ಸತ್ಯ ಹೊರಬರಲಿದೆ ಎಂದು ಹೇಳಿದರು. ಇದನ್ನೂ ಓದಿ: ಯುದ್ಧ ಬೇಡ: ತನ್ನ ದೇಶಕ್ಕೆ ರಷ್ಯಾ ಟೆನಿಸ್‌ ತಾರೆ ಮನವಿ

    ಬೆಂಗಳೂರಿನ ಅದೂರು, ರಾಂಪುರ, ಸೀಗೆಹಳ್ಳಿ, ವೈಟ್‍ಫೀಲ್ಡ್ ಮುಂತಾದ ಕಡೆಗಳಲ್ಲಿ ಟಿಡಿಆರ್‌ಗೆ ಸಂಬಂಧಿಸಿ ತಮ್ಮ ಸಂಬಂಧಿಕರು ಹಾಗೂ ಪ್ರಭಾವಿಗಳ ಜೊತೆ ಕೈಜೋಡಿಸಿ ಬಿಬಿಎಂಪಿ ಅಧಿಕಾರಿಗಳು ಭಾರೀ ಅಕ್ರಮ ಎಸಗಿದ್ದಾರೆ. ಜಾಹೀರಾತು ಪ್ರದರ್ಶನವು ದೊಡ್ಡ ದಂಧೆಯಾಗಿದ್ದು, ಸಚಿವರು ಹಾಗೂ ಶಾಸಕರ ಒತ್ತಡಕ್ಕೆ ಮಣಿದು ಪ್ರಭಾವಿಗಳಿಂದ ಶುಲ್ಕ ಪಡೆಯದೇ ಜಾಹೀರಾತು ಪ್ರದರ್ಶಿಸಲಾಗುತ್ತಿದೆ. ಇವೆಲ್ಲದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ. ಕೇವಲ ದಾಳಿ ನಡೆಸಿ ಸುಮ್ಮನಾಗುವ ಎಸಿಬಿ ಅಧಿಕಾರಿಗಳ ನಡೆಯು ಅಕ್ರಮ ಎಸಗುವವರಿಗೆ ವರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಗೂಗಲ್‍ಗೆ 1,948 ಕೋಟಿ ರೂ. ದಂಡ ಹಾಕಿದ ಫ್ರಾನ್ಸ್

    ಗೂಗಲ್‍ಗೆ 1,948 ಕೋಟಿ ರೂ. ದಂಡ ಹಾಕಿದ ಫ್ರಾನ್ಸ್

    ಪ್ಯಾರಿಸ್: ಆನ್‍ಲೈನ್ ಜಾಹಿರಾತುಗಳ ಪ್ರದರ್ಶನಕ್ಕೆ ತನ್ನ ಮಾರುಕಟ್ಟೆಯನ್ನು ದುರುಪಯೋಗ ಪಡಿಸಿದ್ದಕ್ಕೆ ಅಮೆರಿಕದ ಗೂಗಲ್ ಕಂಪನಿ ಮೇಲೆ ಫ್ರಾನ್ಸ್ 220 ದಶಲಕ್ಷ ಯೂರೋ(ಅಂದಾಜು 1948 ಕೋಟಿ ರೂ.) ದಂಡವನ್ನು ವಿಧಿಸಿದೆ.

    ಫ್ರಾನ್ಸ್‍ನ ಸ್ಪರ್ಧಾ ನಿಯಂತ್ರಕವು ಈ ದಂಡವನ್ನು ವಿಧಿಸಿದ್ದು, ಮುಂದಿನ ದಿನಗಳಲ್ಲಿ ತನ್ನ ಆನ್‍ಲೈನ್ ಜಾಹೀರಾತಿನಲ್ಲಿ ಬದಲಾವಣೆ ಮಾಡಲಾಗುವುದು ಎಂದು ಗೂಗಲ್ ಕಂಪನಿ ತಿಳಿಸಿದೆ.

    ಗೂಗಲ್ ಕೆಲವು ಸಾಧನಗಳು ದೊಡ್ಡ ಪ್ರಕಾಶಕರಿಗೆ ಬಹುತೇಕ ಅವಶ್ಯಕವಾಗಿದೆ. ಆದರೆ ಗೂಗಲ್ ತನ್ನ ಮಾರುಕಟ್ಟೆಯನ್ನು ದುರುಪಯೋಗಪಡಿಸಿರುವುದು ತನಿಖೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ದಂಡವನ್ನು ಹೇರಲಾಗಿದೆ. ಇದನ್ನೂ ಓದಿ: ಗೂಗಲ್ ಸರ್ಚ್ ನಲ್ಲಿ ಕುವೆಂಪು ಫೋಟೋ ಬಂದಿದ್ದು ಹೇಗೆ? ಇಲ್ಲಿದೆ ಡೂಡಲ್ ಸೃಷ್ಟಿಕರ್ತನ ಕತೆ

    ಮೂರು ಮಾಧ್ಯಮ ಕಂಪನಿಗಳಾದ ನ್ಯೂಸ್ ಕಾರ್ಪೋರೇಷನ್, ಲೆ ಫಿಗರೊ ಮತ್ತು ಬೆಲ್ಜಿಯಂನ ಗ್ರೂಪ್ ರೊಸೆಲ್‍ ಗೂಗಲ್ ಇಂಟರ್ನೆಟ್ ಜಾಹೀರಾತು ಮಾರಾಟವನ್ನು ಏಕಸ್ವಾಮ್ಯಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗಿತ್ತು.

    ಗೂಗಲ್ ಜಾಹೀರಾತುಗಳು ಬಳಸುವ ವಿಧಾನಗಳು ಅಪಾರದರ್ಶಕವಾಗಿದೆ ಮತ್ತು ಅರ್ಥಮಾಡಿಕೊಳ್ಳುವುದು ಕಷ್ಟವಾಗಿದೆ. ಇದು ಅಸಮಾನತೆಯಿಂದ ಕೂಡಿದ್ದು ಅನಿಯಂತ್ರಿತ ರೀತಿಯಲ್ಲಿದೆ ಎಂದು ಹೇಳಿ ಫ್ರಾನ್ಸ್ ಸ್ಪರ್ಧಾ ನಿಯಂತ್ರಕ  2019ರಲ್ಲಿ 150 ದಶಲಕ್ಷ ಯುರೋ(1,327 ಕೋಟಿ ರೂ.) ದಂಡವನ್ನು ವಿಧಿಸಿತ್ತು. ಇದನ್ನೂ ಓದಿ: ಸಿಸ್ಕೋ, ಅಮೆಜಾನ್‌ 49 ಸಾವಿರ, ಗೂಗಲ್‌ನಲ್ಲಿ 46 ಸಾವಿರ – ಐಟಿ ಇಂಟರ್ನಿಗಳ ತಿಂಗಳ ಸಂಬಳ ಎಷ್ಟು?