Tag: advertisements

  • ಯಾವ ರೀತಿ ಜಾಹೀರಾತು ಪ್ರಕಟಿಸಿದ್ದೀರಿ ಅದೇ ಗಾತ್ರದಲ್ಲಿ ಪತ್ರಿಕೆಯಲ್ಲಿ ಕ್ಷಮೆ ಕೇಳಿ: ಪತಂಜಲಿಗೆ ಸುಪ್ರೀಂ ಸೂಚನೆ

    ಯಾವ ರೀತಿ ಜಾಹೀರಾತು ಪ್ರಕಟಿಸಿದ್ದೀರಿ ಅದೇ ಗಾತ್ರದಲ್ಲಿ ಪತ್ರಿಕೆಯಲ್ಲಿ ಕ್ಷಮೆ ಕೇಳಿ: ಪತಂಜಲಿಗೆ ಸುಪ್ರೀಂ ಸೂಚನೆ

    – ಪತಂಜಲಿ ವಿರುದ್ಧ ಕ್ರಮ ಕೈಗೊಳ್ಳದ್ದಕ್ಕೆ ಕೇಂದ್ರದ ವಿರುದ್ಧವೂ ತರಾಟೆ

    ನವದೆಹಲಿ: ಯಾವ ರೀತಿ ಜಾಹೀರಾತು (Advertisements) ಪ್ರಕಟಿಸಿದ್ದೀರಿ ಅದೇ ಗಾತ್ರದಲ್ಲಿ ಪತ್ರಿಕೆಯಲ್ಲಿ ಕ್ಷಮೆಯನ್ನು ಕೇಳಬೇಕೆಂದು ಪತಂಜಲಿ (Patanjali) ಸಂಸ್ಥೆಗೆ ಸುಪ್ರೀಂ ಕೋರ್ಟ್‌ (Supreme Court) ಆದೇಶಿಸಿದೆ. ಅದೇ ರೀತಿಯಾಗಿ ಪತಂಜಲಿ ವಿರುದ್ಧ ಕ್ರಮ ಕೈಗೊಳ್ಳದ್ದಕ್ಕೆ ಕೇಂದ್ರ ಸರ್ಕಾರವನ್ನು (Union Government) ಸುಪ್ರೀಂ ತರಾಟೆಗೆ ತೆಗೆದುಕೊಂಡಿದೆ.

    ಯೋಗ ಗುರು ಬಾಬಾ ರಾಮದೇವ್ (Baba Ramdev) ಮತ್ತು ಆಚಾರ್ಯ ಬಾಲಕೃಷ್ಣ (Acharya Balkrishna) ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ಇಂದು ನ್ಯಾ.ಹಿಮಾ ಕೊಹ್ಲಿ ಮತ್ತು ನ್ಯಾ. ಅಮಾನುಲ್ಲಾ ಅವರಿದ್ದ ದ್ವಿಸದಸ್ಯ ಪೀಠದಲ್ಲಿ ನಡೆಯಿತು.

    ಬಾಬಾ ರಾಮ್‌ದೇವ್ ಪರ ವಾದ ಮಂಡಿಸಿದ ವಕೀಲ ಮುಕುಲ್ ರೋಹಟಗಿ, ಪತ್ರಿಕೆಗಳಲ್ಲಿ ಕ್ಷಮಾಪಣೆ ಪ್ರಕಟವಾಗಿದೆ ಎಂದು ಕೋರ್ಟ್‌ ಗಮನಕ್ಕೆ ತಂದರು. ಈ ವೇಳೆ ನಿನ್ನೆ ಯಾಕೆ ಕ್ಷಮಾಪಣೆ ಪ್ರಕಟವಾಗಿದೆ ಎಂದು ಪ್ರಶ್ನಿಸಿದ ಪೀಠ ಜಾಹೀರಾತು ಯಾವ ಗಾತ್ರದಲ್ಲಿ ಪ್ರಕಟವಾಗಿದೆಯೇ ಅದೇ ರೀತಿಯಾಗಿ ಕ್ಷಮೆ ಕೇಳಬೇಕೆಂದು ಆದೇಶಿಸಿತು. ಇದನ್ನೂ ಓದಿ: ಕಾಂಗ್ರೆಸ್ ಆಡಳಿತದಲ್ಲಿ ಹನುಮಾನ್ ಚಾಲೀಸಾ ಕೇಳೋದು ಅಪರಾಧ: ಬೆಂಗ್ಳೂರಿನ ಹಲ್ಲೆ ಪ್ರಸ್ತಾಪಿಸಿ ಮೋದಿ ಕಿಡಿ

    ಇಂಡಿಯನ್ ಮೆಡಿಕಲ್ ಅಸೋಷಿಯನ್ (IMA) ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದುವರಿಸಿದ ಪೀಠ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ನೀಡುವ ಇತರ FMCG ಕಂಪನಿಗಳ ವಿರುದ್ಧ ಕ್ರಮ ಕೈಗೊಂಡಿರುವ ಬಗ್ಗೆ ಕೇಂದ್ರವನ್ನು ಈ ವೇಳೆ ಪ್ರಶ್ನಿಸಿತು.

    ಪತಂಜಲಿ ವಿರುದ್ಧ ಕ್ರಮ ಕೈಗೊಳ್ಳುವ ಬದಲು 1945 ರ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ನಿಯಮಗಳ 170ನೇ ನಿಯಮದ ಅಡಿಯಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಆಯುಷ್ ಸಚಿವಾಲಯವು 2023 ರಲ್ಲಿ ಎಲ್ಲಾ ರಾಜ್ಯ ಸರ್ಕಾರಗಳಿಗೆ ಪತ್ರವನ್ನು ಕಳುಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿತು.

    ಅಧಿಕಾರಿಗಳು ಆದಾಯವನ್ನು ನೋಡುವಲ್ಲಿ ನಿರತರಾಗಿದ್ದಂತೆ ತೋರುತ್ತಿದೆ ಎಂದು ನ್ಯಾ. ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಒಂದು ಸುದ್ದಿಟಿವಿಯಲ್ಲಿ ಆಂಕರ್ ಪತಂಜಲಿ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಏನಾಯಿತು ಎಂಬುದರ ಕುರಿತು ಓದುತ್ತಿದ್ದಾರೆ. ಇದೆ ಅವಧಿಯಲ್ಲಿ ಜಾಹೀರಾತು ಪತಂಜಲಿ ಕೂಡಾ ಚಾಲನೆಯಲ್ಲಿದೆ ಎಂತಹ ಪರಿಸ್ಥಿತಿ ಎಂದು ನ್ಯಾ. ಅಮಾನುಲ್ಲಾ ಟೀಕಿಸಿದರು. ಇದನ್ನೂ ಓದಿ: ನೇಹಾ ಹಿರೇಮಠ ತಂದೆಯ ಬಳಿ ಕ್ಷಮೆಯಾಚಿಸಿದ ಸಿಎಂ!

     

    ಪತಂಜಲಿ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಸರ್ಕಾರ ಹೇಗೆ ಪತ್ರ ಬರೆಯಿತು ಎಂಬುದನ್ನು ವಿವರಿಸಬೇಕು ಎಂದು ಹೇಳಿದ ಪೀಠ, ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಆಕ್ಟ್ ಮತ್ತು ಡ್ರಗ್ಸ್ ಮತ್ತು ಮ್ಯಾಜಿಕ್ ರೆಮಿಡೀಸ್ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯಿದೆಯಂತಹ ಕಾನೂನುಗಳ ಅನುಷ್ಠಾನವನ್ನು ಸೂಕ್ಷ್ಮವಾಗಿ ಗಮನಿಸುವುದಾಗಿ ಕೋರ್ಟ್‌  ತಿಳಿಸಿತು.

    ತಪ್ಪುದಾರಿಗೆಳೆಯುವ ಜಾಹೀರಾತುಗಳಿಂದ ಪ್ರಭಾವಿತರಾಗಿ ಔಷಧಗಳನ್ನು ಸೇವಿಸುವ ಶಿಶುಗಳು ಮತ್ತು ಮಕ್ಕಳು ಮತ್ತು ವೃದ್ಧರ ಆರೋಗ್ಯದ ಮೇಲೆ ಇದು ಹೇಗೆ ಪರಿಣಾಮ ಬೀರುತ್ತದೆ. ನಾವು ನಿರ್ದಿಷ್ಟವಾಗಿ ಒಬ್ಬರ ಮೇಲೆ ಅರೋಪಿಸುತ್ತಿಲ್ಲ, ಗ್ರಾಹಕರು/ಸಾರ್ವಜನಿಕರನ್ನು ಹೇಗೆ ದಾರಿ ತಪ್ಪಿಸಲಾಗುತ್ತಿದೆ ಎಂಬುದರ ಕುರಿತು ಹೆಚ್ಚಿನ ಹಿತಾಸಕ್ತಿಯಾಗಿದೆ ಎಂದು ಎಂದು ನ್ಯಾಯಾಲಯ ಹೇಳಿತು. ಅಲ್ಲದೇ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯವನ್ನು ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಸೇರಿಸಲು ನ್ಯಾಯಾಲಯ ನಿರ್ಧರಿಸಿದೆ.

    ಪ್ರಕರಣದ ಅರ್ಜಿ ವಿಚಾರಣೆಯನ್ನು ಏ.30ಕ್ಕೆ ಮುಂದೂಡಿದ ಪೀಠ ಅಂದು ನ್ಯಾಯಾಲಯಕ್ಕೆ ಪತಂಜಲಿ ಸಂಸ್ಥಾಪಕರಾದ ರಾಮ್‌ದೇವ್ ಮತ್ತು ಬಾಲಕೃಷ್ಣ ಹಾಜರಾಗಬೇಕೆಂದು ಸೂಚಿಸಿದೆ.

  • ಟಿವಿ, ವೆಬ್‍ಸೈಟ್‍ಗಳಲ್ಲಿ ಬೆಟ್ಟಿಂಗ್ ಜಾಹೀರಾತು ಪ್ರಸಾರ ಮಾಡಬೇಡಿ: ಕೇಂದ್ರ ಖಡಕ್ ಸೂಚನೆ

    ಟಿವಿ, ವೆಬ್‍ಸೈಟ್‍ಗಳಲ್ಲಿ ಬೆಟ್ಟಿಂಗ್ ಜಾಹೀರಾತು ಪ್ರಸಾರ ಮಾಡಬೇಡಿ: ಕೇಂದ್ರ ಖಡಕ್ ಸೂಚನೆ

    ನವದೆಹಲಿ: ಟಿವಿ (TV), ವೆಬ್‍ಸೈಟ್‍ಗಳಲ್ಲಿ (Website) ಬೆಟ್ಟಿಂಗ್ ಜಾಹೀರಾತು (Gambling And Betting Ads) ಪ್ರಸಾರ ಮಾಡದಂತೆ ಕೇಂದ್ರ ಸರ್ಕಾರ ಖಡಕ್ ಸೂಚನೆ ರವಾನಿಸಿದೆ.

    ಸ್ಯಾಟಲೈಟ್ ಟಿವಿ (Satellite TV) ಮತ್ತು ಒಟಿಟಿ (OTT) ಪ್ಲಾಟ್‍ಫಾರ್ಮ್‍ಗಳಾದ ನೆಟ್‍ಫ್ಲಿಕ್ಸ್ (Netflix), ಹಾಟ್‍ಸ್ಟಾರ್ (Hotstar) ಮತ್ತು ಅಮೆಜಾನ್ ಪ್ರೈಮ್ ವೀಡಿಯೋ (Amazon Prime Video) ಮತ್ತು ಇತರ ಡಿಜಿಟಲ್ ಮಾಧ್ಯಮಗಳು ಪ್ರೇಕ್ಷಕರನ್ನು ಗುರಿಯಾಗಿಟ್ಟುಕೊಂಡು ಜೂಜು ಮತ್ತು ಬೆಟ್ಟಿಂಗ್ ಕುರಿತಾಗಿ ಉತ್ತೇಜಿಸುವ ಜಾಹೀರಾತುಗಳನ್ನು (Advertisements) ಪ್ರಸಾರ ಮಾಡುವುದನ್ನು ದೇಶದಲ್ಲಿ ತಕ್ಷಣವೇ ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ದಂಡ ಹಾಕಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (Ministry of Information and Broadcasting) ಆದೇಶಿಸಿದೆ. ಇದನ್ನೂ ಓದಿ: ಮನೆಯಲ್ಲಿ ಕತ್ತು ಸೀಳಿ ಐಪಿಎಸ್‌ ಅಧಿಕಾರಿ ಹತ್ಯೆ

    ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಬೆಟ್ಟಿಂಗ್ ಸೈಟ್‍ಗಳ ಜಾಹೀರಾತುಗಳನ್ನು ಪ್ರಸಾರ ಮಾಡದಂತೆ ಸುದ್ದಿ ವೆಬ್‍ಸೈಟ್‍ಗಳು, ಒಟಿಟಿ ಪ್ಲಾಟ್‍ಫಾರ್ಮ್‍ಗಳು ಮತ್ತು ಖಾಸಗಿ ಉಪಗ್ರಹ ಚಾನೆಲ್‍ಗಳಿಗೆ ಸೂಚನೆ. ಯಾವುದೇ ರೀತಿಯ ಬೆಟ್ಟಿಂಗ್ ಮತ್ತು ಜೂಜಿನ ಕುರಿತಾಗಿ ಉತ್ತೇಜಿಸುವ ಜಾಹೀರಾತನ್ನು ಪ್ರಸಾರ ಮಾಡಬೇಡಿ. ಈ ಸೂಚನೆಯನ್ನು ಉಲ್ಲಂಘಿಸಿದರೆ ಅದಕ್ಕೆ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಶಿಸ್ತುಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಬ್ಯಾನ್ ಬೆನ್ನಲ್ಲೇ ರಸ್ತೆ ಮೇಲೆ ಪಿಎಫ್‍ಐಯಿಂದ ಎಚ್ಚರಿಕೆಯ ಬರಹ

    ಈಗಾಗಲೇ ಡಿಜಿಟಲ್ ಮಾಧ್ಯಮ ಮತ್ತು ಒಟಿಟಿ ಪ್ಲಾಟ್‍ಫಾರ್ಮ್‍ಗಳಲ್ಲಿ ಈ ರೀತಿಯ ಬೆಟ್ಟಿಂಗ್ ಜಾಹೀರಾತುಗಳು ಪ್ರಸಾರ ಆಗುತ್ತಿರುವುದು ಹೆಚ್ಚಾಗಿದೆ. ಹಾಗಾಗಿ ಇಂತಹ ಜಾಹೀರಾತುಗಳಿಗೆ ಕಡಿವಾಣ ಹಾಕಬೇಕಾಗಿದೆ. ಇನ್ಮುಂದೆ ಬೆಟ್ಟಿಂಗ್ ಜಾಹೀರಾತುಗಳಿಗೆ ಸಂಬಂಧಿಸಿದ ಯಾವುದೇ ರೀತಿ ಮಾಹಿತಿಯನ್ನು ಪ್ರಸಾರ ಮಾಡದಂತೆ ಸರ್ಕಾರ ಸೂಚಿಸಿದೆ.

    Live Tv
    [brid partner=56869869 player=32851 video=960834 autoplay=true]

  • ತಿರುಪತಿ ಬಸ್ ಟಿಕೆಟ್‍ನಲ್ಲಿ ಹಜ್, ಜೆರುಸಲೆಂ ತೀರ್ಥಯಾತ್ರೆ ಜಾಹೀರಾತು: ಜಗನ್ ವಿರುದ್ಧ ಬಿಜೆಪಿ ಕಿಡಿ

    ತಿರುಪತಿ ಬಸ್ ಟಿಕೆಟ್‍ನಲ್ಲಿ ಹಜ್, ಜೆರುಸಲೆಂ ತೀರ್ಥಯಾತ್ರೆ ಜಾಹೀರಾತು: ಜಗನ್ ವಿರುದ್ಧ ಬಿಜೆಪಿ ಕಿಡಿ

    ಹೈದರಾಬಾದ್: ತಿರುಪತಿ -ತಿರುಮಲ ನಗರದ ಮಧ್ಯೆ ಪ್ರಯಾಣಿಸುವ ಆಂಧ್ರಪ್ರದೇಶ ರಸ್ತೆ ಸಾರಿಗೆ ನಿಗಮದ ಬಸ್‍ನಲ್ಲಿ ನೀಡಿರುವ ಟಿಕೆಟ್‍ಗಳು ಭಾರೀ ವಿವಾದಕ್ಕೆ ಗುರಿಯಾಗಿವೆ.

    ತಿರುಪತಿ ಬಸ್‍ಗಳಲ್ಲಿ ನೀಡುವ ಟಿಕೆಟ್‍ಗಳ ಹಿಂಭಾಗದಲ್ಲಿ ಹಜ್ ಹಾಗೂ ಜೆರುಸಲೆಮ್ ತೀರ್ಥಯಾತ್ರೆಯ ಕುರಿತು ಸಿಎಂ ವೈ.ಎಸ್.ಜಗನ್‍ಮೋಹನ್ ರೆಡ್ಡಿ ಸರ್ಕಾರವು ಮುದ್ರಿಸಿದೆ. ಹೀಗಾಗಿ ಆಂಧ್ರ ಪ್ರದೇಶ ಬಿಜೆಪಿ ನಾಯಕರು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

    ಈ ವಿಚಾರವನ್ನು ಪ್ರಯಾಣಿಕರೊಬ್ಬರು ಬುಧವಾರ ಪ್ರಾದೇಶಿಕ ವ್ಯವಸ್ಥಾಪಕರ ಗಮನಕ್ಕೆ ತಂದಿದ್ದರು. ಆಗ ಅವರು ಹಿಂದೂಯೇತರ ಯಾತ್ರೆಗಳ ಬಗ್ಗೆ ಮುದ್ರಿತವಾಗಿರುವ ಟಿಕೆಟ್‍ಗಳ ಬಂಡಲ್ ತಪ್ಪಾಗಿ ತಿರುಪತಿಗೆ ಬಂದಿದೆ ಅಂತ ತಿಳಿಸಿದ್ದರು ಎಂದು ವರದಿಯಾಗಿದೆ.

    ತಿರುಪತಿ ಬಸ್‍ಗಳ ಟಿಕೆಟ್‍ನಲ್ಲಿ ಮುದ್ರಿಸಿದ ಜಾಹೀರಾತು ವಿಷಯವನ್ನು ನಮ್ಮ ಗಮನಕ್ಕೆ ತರಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ. ಜೊತೆಗೆ ಇದು ಅಲ್ಪಸಂಖ್ಯಾತ ಇಲಾಖೆ ಹೊರಡಿಸಿದ ಸರ್ಕಾರದ ಜಾಹೀರಾತು ಎಂದು ಸಾರಿಗೆ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರು ಹೇಳಿದ್ದಾರೆ.

    ಹೈದರಾಬಾದ್‍ನ ಬಿಜೆಪಿ ಶಾಸಕ ರಾಜಾ ಸಿಂಗ್ ಅವರು ಬಸ್ ಟಿಕೆಟ್ ವಿಚಾರವಾಗಿ ಈಗಾಗಲೇ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ಹಿಂದೂ ಧರ್ಮದವರಲ್ಲ. ಅವರಿಗೆ ಹಿಂದೂ ಧರ್ಮದ ಮೇಲೆ ನಂಬಿಕೆಯೂ ಇಲ್ಲ. ಹೀಗಾಗಿ ಅಲ್ಪಸಂಖ್ಯಾತ ಧರ್ಮಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ ಎಂದು ಬಿಜೆಪಿ ನಾಯಕರು ದೂರಿದ್ದಾರೆ.

    ಜಗನ್ ಮೋಹನ್ ರೆಡ್ಡಿ ಅವರು ಅಮೆರಿಕದಲ್ಲಿ ಕಳೆದ ವಾರ ನಡೆದ ಕಾರ್ಯಕ್ರಮವೊಂದರಲ್ಲಿ ದೀಪ ಹಚ್ಚಲು ನಿರಾಕರಿಸಿದ್ದರು. ದೀಪ ಹಚ್ಚದೇ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಹಿಂದೂ ಸಂಪ್ರದಾಯಕ್ಕೆ ಅಗೌರವ ತೋರಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

  • ವಾಟ್ಸಪ್ ಯೂ ಟರ್ನ್ – ಇನ್ನು ಮುಂದೆ ಬರುತ್ತೆ ಜಾಹೀರಾತು!

    ವಾಟ್ಸಪ್ ಯೂ ಟರ್ನ್ – ಇನ್ನು ಮುಂದೆ ಬರುತ್ತೆ ಜಾಹೀರಾತು!

    ಕ್ಯಾಲಿಫೋರ್ನಿಯಾ: ಯಾವುದೇ ಕಾರಣಕ್ಕೂ ಜಾಹೀರಾತು ಪ್ರಕಟಿಸುವುದಿಲ್ಲ ಎಂದು ಹೇಳಿದ್ದ ವಾಟ್ಸಪ್ ಈಗ ತನ್ನ ಈ ನಿರ್ಧಾರದಲ್ಲಿ ಯೂ ಟರ್ನ್ ಹೊಡೆಯುವ ಸಾಧ್ಯತೆಯಿದೆ.

    ಹೌದು, ಫೇಸ್ ಬುಕ್ ಮಾಲೀಕತ್ವದ ವಾಟ್ಸಪ್ ನಲ್ಲಿ ಇನ್ನು ಮುಂದೆ ಜಾಹೀರಾತು ಪ್ರಕಟಗೊಳ್ಳಲಿದೆ. ಪ್ರಸ್ತುತ ವಾಟ್ಸಪ್ ಬಳಕೆದಾರರ ಪೈಕಿ ಶೇ.50 ರಷ್ಟು ಬಳಕೆದಾರರು ಸ್ಟೇಟಸ್ ಅಪ್‍ಡೇಟ್ ಮಾಡುತ್ತಿದ್ದಾರೆ. ಈ ಸ್ಟೇಟಸ್ ಅಪ್‍ಡೇಟ್ ಮಾಡುವ ಜಾಗದಲ್ಲೇ ಜಾಹೀರಾತನ್ನು ಪ್ರಕಟಿಸಲು ವಾಟ್ಸಪ್ ಸಿದ್ಧತೆ ನಡೆಸಿದೆ ಎಂದು ಮಾಧ್ಯಮವೊಂದು ವರದಿ ಪ್ರಕಟಿಸಿದೆ.

    ಇಲ್ಲಿಯವರೆಗೆ ವಾಟ್ಸಪ್ ನಲ್ಲಿ ಖಾತೆ ತೆರೆಯಲು ಫೋನ್ ನಂಬರ್ ಇದ್ದರೆ ಸಾಕಿತ್ತು. ವರ್ಷ, ಇಮೇಲ್, ಆಸಕ್ತಿ ವಿಚಾರಗಳನ್ನು ಕೇಳುತ್ತಿರಲಿಲ್ಲ. ಆದರೆ ಈಗ ಜಾಹೀರಾತು ಪ್ರಕಟಿಸಲು ಮುಂದಾಗಿದ್ದು, ಯಾವ ರೀತಿ ಬಳಕೆದಾರರ ಡೇಟಾ ಪಡೆದು ಜಾಹೀರಾತು ಪ್ರಕಟಿಸುತ್ತದೆ ಎನ್ನುವ ಪ್ರಶ್ನೆ ಎದ್ದಿದೆ.

    ಫೇಸ್ ಬುಕ್ ನಲ್ಲಿ ಬಳಕೆದಾರರ ಆಸಕ್ತಿಯನ್ನು ನೋಡಿಕೊಂಡು ಜಾಹೀರಾತುಗಳು ಅವರ ವಾಲಿನಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ವಾಟ್ಸಪ್ ಬಳಕೆದಾರ ಈ ವಿಚಾರದ ಬಗ್ಗೆಯೇ ಆಸಕ್ತಿ ಹೊಂದಿದ್ದಾನೆ ಎನ್ನುವುದನ್ನು ತಿಳಿಯಲು ಸಾಧ್ಯವಿಲ್ಲ. ಹೀಗಾಗಿ ಜಿಪಿಎಸ್ ಮಾಹಿತಿಯನ್ನು ಆಧಾರಿಸಿ ಅಥವಾ ಫೋನ್ ನಂಬರ್ ಯಾವ ರಾಜ್ಯದ ವ್ಯಾಪ್ತಿಗೆ ಬರುತ್ತದೋ ಆ ಮಾಹಿತಿಯನ್ನು ಆಧಾರಿಸಿ ಜಾಹೀರಾತು ಪ್ರಕಟಿಸುತ್ತಾ ಎನ್ನುವ ಪ್ರಶ್ನೆ ಈಗ ಹುಟ್ಟಿಕೊಂಡಿದೆ.

    ಫೇಸ್‍ಬುಕ್ ಈಗಾಗಲೇ ಒಂದೊಂದೆ ಆದಾಯದ ಮೂಲಗಳನ್ನು ಹುಡುಕುತ್ತಿದೆ. ಇನ್ ಸ್ಟಾಗ್ರಾಮ್ ನಲ್ಲಿ ಜಾಹೀರಾತು ಪ್ರಕಟಿಸುತ್ತಿದೆ. ಇದರ ಜೊತೆಯಲ್ಲಿ ಮೆಸೇಂಜಿಂಗ್ ಅಪ್ಲಿಕೇಶನ್ ಗಳಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ವಾಟ್ಸಪ್ ನಲ್ಲೂ ಆದಾಯ ಮಾಡಲು ಸಿದ್ಧತೆ ನಡೆಸುತ್ತಿದ್ದು, ಮುಂದಿನ ವಾಟ್ಸಪ್ ಅಪ್‍ಡೇಟ್ ನಲ್ಲಿ ಈ ವಿಶೇಷತೆ ಸೇರ್ಪಡೆಯಾಗುವ ಸಾಧ್ಯತೆಯಿದೆ.

    ಈ ಹಿಂದೆ ವಾಟ್ಸಪ್ ತನ್ನ ಬ್ಲಾಗಿನಲ್ಲಿ ನಾವು ಯಾವುದೇ ಕಾರಣಕ್ಕೂ ಜಾಹೀರಾತನ್ನು ಪ್ರಕಟಿಸುವುದಿಲ್ಲ ಎಂದು ಹೇಳಿತ್ತು.

    ಫೇಸ್‍ಬುಕ್ ಮಾಲೀಕತ್ವದ ವಾಟ್ಸಪ್ ಕಂಪೆನಿ ಗ್ರಾಹಕರ ಅನುಮತಿ ಪಡೆಯದೇ ಅವರ ಡೇಟಾವನ್ನು ಫೇಸ್‍ಬುಕ್ ನಲ್ಲಿ ಬಳಕೆ ಮಾಡುತ್ತಿದೆ ಎಂದು ಈ ಹಿಂದೆ ಯುರೋಪಿಯನ್ ಜನರಲ್ ಡೇಟಾ ಪ್ರೊಟೆಕ್ಷನ್ ರೆಗ್ಯುಲೇಶನ್ ಆರೋಪಿಸಿತ್ತು. ಈ ಆರೋಪಕ್ಕೆ ತನ್ನ ಬ್ಲಾಗ್ ನಲ್ಲಿ ಪ್ರತಿಕ್ರಿಯಿಸಿರುವ ವಾಟ್ಸಪ್ ಗ್ರಾಹಕರ ಯಾವುದೇ ಮಾಹಿತಿಯನ್ನು ನಾವು ಫೇಸ್‍ಬುಕ್ ನಲ್ಲಿ ಬಳಕೆ ಮಾಡುತ್ತಿಲ್ಲ. ಅಷ್ಟೇ ಅಲ್ಲದೇ ಸ್ಪಾಮ್ ಮೆಸೇಜ್ ಕಳುಹಿಸುವುದಿಲ್ಲ ಎಂದು ತಿಳಿಸಿತ್ತು.