Tag: adventure

  • ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಶೂಟಿಂಗ್ ನಲ್ಲಿ ಭರ್ಜರಿ ಹೊಡೆದಾಟ

    ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಶೂಟಿಂಗ್ ನಲ್ಲಿ ಭರ್ಜರಿ ಹೊಡೆದಾಟ

    ನ್ನಡಿಗ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದ ಶೂಟಿಂಗ್ ಮತ್ತೆ ಶುರುವಾಗಿದೆ. ಮಳೆ ಮತ್ತು ಇತರ ಕಾರಣಗಳಿಂದಾಗಿ ಒಂದು ವಾರಗಳ ಕಾಲ ಶೂಟಿಂಗ್ ನಿಂದ ಬಿಡುಗಡೆ ಪಡೆದುಕೊಂಡಿದ್ದ ಚಿತ್ರತಂಡ ಮತ್ತೆ ಈಗ ಚಿತ್ರೀಕರಣವನ್ನು ಆರಂಭಿಸಿದೆ. ಈ ಬಾರಿ ಆಕ್ಷನ್ ದೃಶ್ಯವೊಂದನ್ನು ಸೆರೆ ಹಿಡಿಯಲು ನಿರ್ದೇಶಕ ಪ್ರಶಾಂತ್ ನೀಲ್ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ.

    ಸಲಾರ್ ಸಿನಿಮಾದ ಬಹುತೇಕ ಶೂಟಿಂಗ್ ಮುಗಿಯುತ್ತಿದ್ದು, ಇದೀಗ ಸಾಹಸ ಸನ್ನಿವೇಶವನ್ನು ಚಿತ್ರೀಕರಣ ಮಾಡುತ್ತಿದ್ದಾರಂತೆ. ಇದೊಂದು ಪ್ರಮುಖ ಆಕ್ಷನ್ ಸನ್ನಿವೇಶ ಎನ್ನಲಾಗುತ್ತಿದೆ. ಈ ದೃಶ್ಯಕ್ಕಾಗಿ ಪ್ರಭಾಸ್ ಕೂಡ ಭರ್ಜರಿ ತಾಲೀಮು ಕೂಡ ನಡೆಸಿದ್ದಾರೆ ಎನ್ನಲಾಗುತ್ತಿದೆ. ಪಕ್ಕಾ ತಯಾರಿಯೊಂದಿಗೆ ಪ್ರಭಾಸ್ ಕ್ಯಾಮೆರಾ ಮುಂದೆ ನಿಂತಿದ್ದಾರೆ. ನಿನ್ನೆಯಿಂದ ಈ ಸನ್ನಿವೇಶವನ್ನು ಶೂಟ್ ಮಾಡುತ್ತಿದ್ದಾರಂತೆ ಪ್ರಶಾಂತ್ ನೀಲ್. ಇದನ್ನೂ ಓದಿ:ಸ್ಟಾರ್ ನಟನ ಜೊತೆ ಮದುವೆಯಾಗಲಿದ್ದಾರಾ ‘ಮೈನಾ’ ಹುಡುಗಿ ನಿತ್ಯಾ ಮೆನನ್?

    ಪ್ರಶಾಂತ್ ನೀಲ್ ಅವರಿಗೆ ಇನ್ನೂ ಎರಡು ಚಿತ್ರಗಳ ಒತ್ತಡವಿರುವುದರಿಂದ ಈ ಸಿನಿಮಾವನ್ನು ಅಂದುಕೊಂಡ ವೇಳೆಗೆ ಮುಗಿಸಲೇಬೇಕಾಗಿದೆಯಂತೆ. ಹಾಗಾಗಿ ಪಕ್ಕಾ ಪ್ಲ್ಯಾನ್ ನೊಂದಿಗೆ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರಂತೆ. ಈ ಸಿನಿಮಾ ಮುಗಿಯುತ್ತಿದ್ದಂತೆಯೇ ಕೆಜಿಎಫ್ 3 ಮಾಡುವ ಪ್ಲ್ಯಾನ್ ಕೂಡ ಇದೆಯಂತೆ. ಆದರೆ, ಈ ನಡುವೆ ಜ್ಯೂನಿಯರ್ ಎನ್.ಟಿ. ಆರ್ ಗೂ ಸಿನಿಮಾ ಮಾಡಲು ಅವರು ಹೊರಟಿದ್ದಾರೆ. ಹಾಗಾಗಿ ಎರಡು ಸಿನಿಮಾದಲ್ಲಿ ಒಂದನ್ನು ಮುಂದಿನ ವರ್ಷ ಕೈಗೆತ್ತಿಕೊಳ್ಳುವ ಅನಿವಾರ್ಯತೆ ಅವರದ್ದು.

    Live Tv
    [brid partner=56869869 player=32851 video=960834 autoplay=true]

  • 105 ಕೆ.ಜಿ.ಯ ಚೀಲ ಹೊತ್ತು 1 ಕಿ.ಮೀ. ದೀರ್ಘದಂಡ ನಮಸ್ಕಾರ ಹಾಕಿದ 19ರ ಯುವಕ

    105 ಕೆ.ಜಿ.ಯ ಚೀಲ ಹೊತ್ತು 1 ಕಿ.ಮೀ. ದೀರ್ಘದಂಡ ನಮಸ್ಕಾರ ಹಾಕಿದ 19ರ ಯುವಕ

    ಬಾಗಲಕೋಟೆ: ಕುರಿಗಾಹಿ 19 ವರ್ಷದ ಯುವಕ ಬರೋಬ್ಬರಿ 105 ಕೆ.ಜಿ.ತೂಕದ ಚೀಲವನ್ನು ಬೆನ್ನ ಮೇಲೆ ಹೊತ್ತು 1 ಕಿ.ಮೀ.ವರೆಗೆ ದೀರ್ಘದಂಡ ನಮಸ್ಕಾರ ಹಾಕಿ ಹುಬ್ಬೇರಿಸುವಂತೆ ಮಾಡಿದ್ದಾನೆ.

    ಜಿಲ್ಲೆಯ ಬಾದಾಮಿ ತಾಲೂಕಿನ ಕರಡಿಗುಡ್ಡ ಎಸ್.ಎ ಗ್ರಾಮದ 19 ವರ್ಷದ ಕುರಿಗಾಹಿ ಯುವಕ ಆನಂದ್ ಗಳಕ್ಕನವರ್ ವಿಶಿಷ್ಟ ಸಾಧನೆ ಮಾಡಿ ಜನರ ಮನಸ್ಸನ್ನ ಗೆದ್ದಿದ್ದಾರೆ. ಯುವಕ ಬರೋಬ್ಬರಿ 105 ಕೆ.ಜಿ. ತೂಕದ ಚೀಲವನ್ನು ಬೆನ್ನ ಮೇಲೆ ಹೊತ್ತು, ಯಾರ ಸಹಾಯವೂ ಇಲ್ಲದೆ, ದಾರಿಯುದ್ದಕ್ಕೂ ದೀರ್ಘದಂಡ ನಮಸ್ಕಾರ ಹಾಕುತ್ತ ಒಂದು ಕಿಲೋಮೀಟರ್ ವೆರೆಗೂ ಸಾಗಿ ವಿಶಿಷ್ಟ ಸಹಸ ಮಾಡಿದ್ದಾರೆ. ಇದನ್ನೂ ಓದಿ: ಯೋಗಿಗೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ – ಉದ್ದವ್ ವಿರುದ್ಧ ದೂರು

    ಸುಮಾರು ಎರಡು ವರ್ಷಗಳಿಂದ ಈ ಸಾಹಸದ ಅಭ್ಯಾಸ ಮಾಡಿ, ಈಗ ಚೀಲ ಹೊತ್ತು ದೀರ್ಘದಂಡ ನಮಸ್ಕಾರ ಹಾಕುತ್ತ 1 ಕಿಲೋಮೀಟರ್ ವರೆಗೆ ಸಾಗುವ ಸಾಧನೆಗೆ ಪಾತ್ರನಾಗಿದ್ದಾರೆ. ಯುವಕ ಆನಂದ್ ಗಳಕ್ಕನವರ್, ವೃತ್ತಿಯಿಂದ ಗುರಿಗಾಹಿ ಆಗಿದ್ದರಿಂದ ಬಡ ಯುವಕ ಸಾಧನೆ ಪರಿಚಯವಾಗಿಲ್ಲ. ಹೀಗಾಗಿ ಊರಿನ ಗೆಳೆಯರು ಆನಂದ್ ಸಹಾಸದ ವಿಡಿಯೋಗಳನ್ನು ಸಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

    ಆನಂದ್ ಅವರ ಸಹಾಸದ ವೀಡಿಯೋ ತುಣುಕುಗಳು ವೈರಲ್ ಆಗುತ್ತಿದ್ದಂತೆ ಸಾಹಸಿಗ ಆನಂದ್ ಅವರನ್ನು ಸಾಹಸ ಪ್ರದರ್ಶಿಸುವಂತೆ ಹತ್ತಾರು ಹಳ್ಳಿಯ ಜನ ಆಹ್ವಾನಿಸುತ್ತಿದ್ದಾರೆ. ಅಲ್ಲದೆ ಇವರ ಸಾಹಸ ಕಂಡು ಕ್ರೀಡಾಸಕ್ತರು ಸಹಾಯ ಮಾಡಿದರೆ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಭಾಗವಹಿಸಬಹುದಾಗಿದೆ. ಹಳ್ಳಿ ಪ್ರತಿಭೆಗೆ ತರಬೇತಿಯ ಅವಶ್ಯಕತೆ ಇದೆ ಎಂದು ಜನ ಹೇಳಿದ್ದಾರೆ.

    ಸಾಹಸ ಮೆರೆಯುವ ಗ್ರಾಮೀಣ ಕ್ರೀಡೆಗಳು ಹಾಗೂ ಯುವ ಜನರ ಭಾರ ಎತ್ತುವ ವಿಶಿಷ್ಟ ಸ್ಪರ್ಧೆಗಳು ಇತ್ತೀಚೆಗೆ ಕಡಿಮೆಯಾಗುತ್ತಿವೆ. ಈ ಹಿಂದೆ ಯುವಕರು ಕಲ್ಲು ಎತ್ತುವ ಸ್ಪರ್ಧೆ, ಚೀಲ ಹೊತ್ತು ಸಾಗುವ ಸ್ಪರ್ಧೆ ಸೇರಿದಂತೆ ಅನೇಕ ಸಾಹಸಗಳನ್ನು ಮಾಡುತ್ತಿದ್ದರು. ಆದರೆ ಇಂದಿನ ಗ್ರಾಮೀಣ ಭಾಗದ ಯುವಜನತೆ ಇಂತಹ ಸಹಾಸಗಳತ್ತ ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಹಳ್ಳಿ ಭಾಗದಲ್ಲಿ ಇಂತಹ ಸಾಹಸಗಳು ಕಾಣ ಸಿಗುವುದು ಅಪರೂಪವಾಗಿವೆ.

  • ಸತ್ತೆ ಹೋದ್ರು ಎಂದು ಕೊಂಡ ಅರ್ಚಕ ಪವಾಡ ಸದೃಶವಾಗಿ ಬಚಾವ್

    ಸತ್ತೆ ಹೋದ್ರು ಎಂದು ಕೊಂಡ ಅರ್ಚಕ ಪವಾಡ ಸದೃಶವಾಗಿ ಬಚಾವ್

    ಮೈಸೂರು: ಕಳೆದ ಶನಿವಾರ ಬೆಳಗ್ಗೆ ಸ್ನೇಹಿತರ ಜೊತೆ ಸವಾಲು ಹಾಕಿ ಭೋರ್ಗರೆಯುತ್ತಿದ್ದ ಕಪಿಲಾ ನದಿಯಲ್ಲಿ ಈಜಲು ಬಿದ್ದಿದ್ದ ನಂಜನಗೂಡಿನ ಅರ್ಚಕ ವೆಂಕಟೇಶ್ ಪವಾಡ ಸದೃಶವಾಗಿ ಪರಾಗಿದ್ದಾರೆ.

    ನಂಜನಗೂಡಿನ ಸೇತುವೆ ಮೇಲಿಂದ ಹೆಜ್ಜಿಗೆ ಸೇತುವೆವರೆಗೂ ಈಜುತ್ತೇನೆ ಎಂದು ವೆಂಕಟೇಶ್ ಸ್ನೇಹಿತರ ಜೊತೆ ಸವಾಲಾಕಿದ್ದರು. ಆದರೆ ಹರಿಯುವ ನದಿಯಲ್ಲಿ ಹಾದಿ ತಪ್ಪಿದ ವೆಂಕಟೇಶ್ ತಾವು ತಲುಪಬೇಕಾದ ಸ್ಥಳ ಬಿಟ್ಟು ಬೇರೆ ಸ್ಥಳಕ್ಕೆ ಹೋಗಿದ್ದರು. ನದಿಯೊಳಗೆ ಹಾಕಿದ್ದ ದೊಡ್ಡ ಪೈಪ್ ಒಳಗೆ ನುಸುಳಿ ಬಿಟ್ಟಿದ್ದರು. ನಂತರ ಅಲ್ಲಿಂದ ಪಾರಾಗಿ ಸೇತುವೆಯೊಂದನ್ನು ಹಿಡಿದು ಅದರ ಅಡಿ ಮಲಗಿದ್ದರು.

    ಶನಿವಾರದಿಂದ ನಾಪತ್ತೆಯಾಗಿದ್ದ ಕಾರಣ ಅವರು ಸತ್ತೆ ಹೋಗಿದ್ದಾರೆ ಎನ್ನಲಾಗಿತ್ತು. ಆದರೆ ಇಂದು ಸಂಜೆ ವೇಳೆಗೆ ಈಜಿಕೊಂಡು ಮತ್ತೆ ದಡ ಸೇರಲು ಯಶಸ್ವಿಯಾಗಿದ್ದಾರೆ. ಕಳೆದ 2 ದಿನಗಳಿಂದ ಊಟವಿಲ್ಲದೆ ಸೇತುವೆ ಕೆಳಗೆ ಮಲಗಿದ್ದ ಅವರು ನೀರಿನಲ್ಲಿ ತೇಲಿ ಬಂದ ಎಳನೀರು ಕುಡಿದು ಕಾಲ ಕಳೆದಿದ್ದರು.

    ನೀರಿನಲ್ಲಿ ಕೊಚ್ಚಿ ಹೋಗಿದ್ದ ಅವರಿಗೆ ಸಣ್ಣ ಪ್ರಮಾಣದ ಗಾಯಗಳಾಗಿದೆ. ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಹಣಕ್ಕಾಗಿ ಸವಾಲು ಎಸೆದು ಈಜಲು ಹೋಗಿಲ್ಲ. ಹೊಳೆ ತುಂಬಿದ ವೇಳೆ ಈಜುವುದು ಒಂದು ಹವ್ಯಾಸವಾಗಿದ್ದು, ನೀರಿನಲ್ಲಿ ಈಜುವುದು ನಮಗೇ ಒಂದು ರೀತಿ ಸಾಹಸವಾಗಿದೆ. ಈ ಹಿಂದೆ ಹಲವು ಬಾರಿ ನಾವು ಇಂತಹದ್ದೆ ಸಾಹಸ ಮಾಡಿದ್ದೇವೆ. ಆದರೆ ನನಗೆ ಈ ಸೇತುವೆಯ ಬಗ್ಗೆ ಹೆಚ್ಚು ಮಾಹಿತಿ ಇರಲಿಲ್ಲ. ಆದ್ದರಿಂದ ಸಮಸ್ಯೆ ಎದುರಾಗಿತ್ತು. ಯೋಗ ಹಾಗೂ ಉಪವಾಸ ಇರುವುದು ಅಭ್ಯಾಸವಿರುವುದರಿಂದ ಯಾವುದೇ ಸಮಸ್ಯೆ ಎದುರಾಗಲಿಲ್ಲ. ಯಾರ ಸಹಾಯವನ್ನು ನಿರೀಕ್ಷೆ ಮಾಡದೆ ಮತ್ತೆ ಈಜಿ ದಡಕ್ಕೆ ಬಂದೆ ಎಂದು ತಿಳಿಸಿದರು.

  • ಅಡುಗೆ ಮನೆಯಿಂದ ಹಿಮಾಲಯದವರೆಗೆ – ಮೈನಸ್ 5 ಡಿಗ್ರಿಯಲ್ಲಿ ಗೃಹಿಣಿಯರ ಪರ್ವತಾರೋಹಣ

    ಅಡುಗೆ ಮನೆಯಿಂದ ಹಿಮಾಲಯದವರೆಗೆ – ಮೈನಸ್ 5 ಡಿಗ್ರಿಯಲ್ಲಿ ಗೃಹಿಣಿಯರ ಪರ್ವತಾರೋಹಣ

    ಮೈಸೂರಿನ ದಿಟ್ಟ ನಾರಿಯರು ಇಂದಿನ ಪಬ್ಲಿಕ್ ಹೀರೋಗಳು

    ಮೈಸೂರು: ಹಿಮಾಲಯ ವಿಶ್ವದ ಅತಿ ಎತ್ತರದ ಪರ್ವತ ಪ್ರದೇಶ ಇದನ್ನ ಏರೋಕೆ ಯುವಕ, ಯುವತಿಯರೂ ಸಹ ಕಷ್ಟ ಪಡುತ್ತಾರೆ. ಆದರೆ ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೇ ಸುಮಾರು 14,500 ಅಡಿಗಳಷ್ಟು ಎತ್ತರದ ಹಿಮಾಲಯದ ಬರಾಟ್ ಸರ್‍ಪಾಸ್‍ನಲ್ಲಿ ನಗರದ ಮಹಿಳೆಯರು ತ್ರಿವರ್ಣಧ್ವಜ ಹಾರಿಸಿ ಬಂದಿದ್ದಾರೆ.

    ಹಿಮಾಲಯವನ್ನ ಏರೋದು ಕಷ್ಟಸಾಧ್ಯ. ವಿಶ್ವದ ಅತಿ ಎತ್ತರದ ಪರ್ವತವನ್ನು ಮೈಸೂರಿನ ಮಹಿಳೆಯರು ಏರಿ, ತ್ರಿವರ್ಣ ಧ್ವಜವನ್ನ ಹಾರಿಸಿದ್ದಾರೆ. ಈ ಚಾರಣದಲ್ಲಿ ಗೃಹಿಣಿಯರೇ ಹೆಚ್ಚಾಗಿ ಇದ್ದದ್ದು ವಿಶೇಷವಾಗಿತ್ತು. 13 ವರ್ಷದ ವಯೋಮಾನದಿಂದ 65 ವರ್ಷದ 27 ಮಹಿಳೆಯರು 15 ದಿನದ ಚಾರಣವನ್ನ ಮೈನಸ್ 5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ 8 ದಿನಗಳ ಕಾಲ ಯಶಸ್ವಿಯಾಗಿ ಮುಗಿಸಿದ್ದಾರೆ. ನಿರ್ಮಲ ಮಠಪತಿ, ಸುಮಾ ಮಹೇಶ್, ಚಾಂದಿನಿ ಕುಶಾಲಪ್ಪ ಸೇರಿದಂತೆ 14 ಗೃಹಿಣಿಯರು ಹಿಮಾಲಯ ಪರ್ವತ ಏರಿ ಬಂದಿದ್ದಾರೆ.

    ಈ ಸಾಹಸದಲ್ಲಿ ಒಟ್ಟು 14 ಗೃಹಿಣಿಯರು ಭಾಗವಹಿಸಿ, ನಾವು ಕೇವಲ ಅಡುಗೆ ಮನೆಗೆ ಸೀಮಿತ ಅಲ್ಲ ಇಂತಹ ಸಾಹಸವನ್ನೂ ಮಾಡುತ್ತೇವೆ ಎಂದು ತೋರಿಸಿ ಕೊಟ್ಟಿದ್ದಾರೆ.

    ಮೈಸೂರಿನ ಟೈಗರ್ ಅಡ್ವೆಂಚರ್ ಫೌಂಡೇಷನ್ ನೇತೃತ್ವದಲ್ಲಿ ಮಹಿಳೆಯರು ಈ ಸಾಹಸ ಮಾಡಿದ್ದರು. ಪರ್ವತ ಏರಿ ಇಳಿಯಲು 8 ದಿನ ಆಗಿದೆ. ಇವರು ಮೇ ತಿಂಗಳಲ್ಲಿ ಹೋಗಿದ್ದು, ಮೂರು ದಿನಗಳ ಹಿಂದೆ ಪ್ರವಾಸ ಮುಗಿಸಿ ಹಿಂದಿರುಗಿ ಬಂದಿದ್ದಾರೆ.

    ಮಹಿಳೆಯರಿಗೆ ಹೃಷಿಕೇಶದ ಅಲಕನಂದಾ ನದಿ ಬಳಿ ಅಲ್ಲಿನ ಹವಾಮಾನಕ್ಕೆ ಒಗ್ಗುವಂತೆ ತರಬೇತಿ ನೀಡಿದ್ದು, ಬಳಿಕ ಡೆಹ್ರಾಡೂನ್ ತಲುಪಿ ಅಲ್ಲಿಂದ ಸಂಕ್ರಿ ಬೇಸ್ ಕ್ಯಾಂಪ್‍ನಲ್ಲಿ ಚಳಿಗೆ ದೇಹ ಒಗ್ಗಿಸಿಕೊಳ್ಳಲು ತರಬೇತಿ ಪಡೆದುಕೊಂಡಿದ್ದರು. ಇವರಿಗೆ ತರಬೇತಿ ಕೊಟ್ಟಿರೋದು ಟೈಗರ್ ಅಡ್ವೆಂಚರ್ ಫೌಂಡೇಶನ್.

    https://www.youtube.com/watch?v=2ghlz5HtzdE

  • ಜನ ಐಸ್‍ಲ್ಯಾಂಡಿಗೆ ಪ್ರವಾಸ ಯಾಕೆ ಹೋಗ್ತಾರೆ? ಅಂಥ ವಿಶೇಷತೆ ಏನಿದೆ?

    ಜನ ಐಸ್‍ಲ್ಯಾಂಡಿಗೆ ಪ್ರವಾಸ ಯಾಕೆ ಹೋಗ್ತಾರೆ? ಅಂಥ ವಿಶೇಷತೆ ಏನಿದೆ?

    ಸುತ್ತಲು ನೀರು, ಅಷ್ಟೇ ಅಲ್ಲದೇ ಮಂಜುಗೆಡ್ಡೆ, ಇದರ ಜೊತೆ ಜ್ವಾಲಾಮುಖಿಗಳು ಒಂದೇ ಕಡೆ ಇರುವುದು ಅಪರೂಪ. ಆದರೆ ಯುರೋಪ್ ಖಂಡದಲ್ಲಿರುವ ಐಸ್‍ಲ್ಯಾಂಡ್‍ಗೆ ನೀವು ಪ್ರವಾಸ ಹೋದರೆ ನೀವು ಈ ಮೂರು ದೃಶ್ಯಗಳನ್ನು ಕಣ್ತುಂಬಿ ನೋಡಬಹುದು.

    ಯುರೋಪ್ ಖಂಡ ಮತ್ತು ಗ್ರೀನ್ ಲ್ಯಾಂಡ್ ಮಧ್ಯೆ ಇರುವ ಅಟ್ಲಾಂಟಿಕ್ ಮಹಾಸಾಗರದಲ್ಲಿ ಐಸ್‍ಲ್ಯಾಂಡ್ ದ್ವೀಪವಿದೆ. ಪ್ರಪಂಚದ 18ನೇ ದೊಡ್ಡ ದ್ವೀಪ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಐಸ್‍ಲ್ಯಾಂಡ್ ತನ್ನ ಪ್ರಕೃತಿ ಸೌಂದರ್ಯದಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ. ಐಸ್‍ಲ್ಯಾಂಡ್‍ನ ಜಿಡಿಪಿಯಲ್ಲಿ ಶೇ.5ರಷ್ಟು ಪಾಲನ್ನು ಪಡೆದುಕೊಂಡಿರುವುದು ಪ್ರವಾಸೋದ್ಯಮದ ಹೆಗ್ಗಳಿಕೆ.

    ಕಳೆದ 15 ವರ್ಷದಲ್ಲಿ ಪ್ರವಾಸೋದ್ಯಮ ಉದ್ಯಮ ಭಾರೀ ಬೆಳವಣಿಗೆಯಾಗಿದ್ದು ಜುಲೈ- ಸೆಪ್ಟೆಂಬರ್ ನಡುವಿನ ಬೇಸಿಗೆಯ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಐಸ್‍ಲ್ಯಾಂಡಿಗೆ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಐಸ್‍ಲ್ಯಾಂಡ್ ನಲ್ಲಿ ಅಂಥ ವಿಶೇಷತೆ ಏನಿದೆ? ನೀವು ಯಾಕೆ ತೆರಳಬೇಕು ಎನ್ನುವುದಕ್ಕೆ ಟಾಪ್ 10 ಕಾರಣಗಳನ್ನು ಇಲ್ಲಿ ನೀಡಲಾಗಿದೆ.

    #1. ನೀವು ಗಮನಿಸಿರಬಹುದು ಭಾರತದಲ್ಲಿ ಮಧ್ಯಾಹ್ನದ ವೇಳೆ ಸೂರ್ಯ ನಡು ನೆತ್ತಿಯಲ್ಲಿ ಇರುತ್ತಾನೆ. ಆದರೆ ಐಸ್‍ಲ್ಯಾಂಡ್‍ನಲ್ಲಿ ಸೂರ್ಯ ನಡು ನೆತ್ತಿಗೆ ಬರೋದಿಲ್ಲ. ಉತ್ತರಧ್ರುವದ ಹತ್ತಿರ ಐಸ್‍ಲ್ಯಾಂಡ್ ಇರುವ ಕಾರಣ ಅಲ್ಲಿ ಸೂರ್ಯನ ಬೆಳಕು ಅಷ್ಟಾಗಿ ಬೀಳುವುದಿಲ್ಲ. ಗರಿಷ್ಟ ಅಂದ್ರೆ ಬೆಳಗ್ಗೆ 9 ಗಂಟೆಗೆ ಭಾರತದಲ್ಲಿ ಸೂರ್ಯ ಹೇಗೆ ಕಾಣುತ್ತಾನೋ ಅದೇ ರೀತಿಯಾಗಿ ಮಧ್ಯಾಹ್ನದ ಅವಧಿಯಲ್ಲಿ ಅಲ್ಲಿ ಕಾಣುತ್ತಾನೆ.

    #2. ಬೆಂಗಳೂರು ಮಹಾನಗರದಲ್ಲಿರುವ ಜನಸಂಖ್ಯೆ ಸುಮಾರು 1 ಕೋಟಿ. ಆದರೆ ಐಸ್‍ಲ್ಯಾಂಡ್‍ನಲ್ಲಿರುವ ಒಟ್ಟು ಜನಸಂಖ್ಯೆಯೇ 3 ಲಕ್ಷ ಮಂದಿ. 39,682 ಚದರ ಕಿ.ಮೀ ವ್ಯಾಪ್ತಿಯನ್ನು ಹೊಂದಿರುವ ಈ ದೇಶದ ಈ ಜನಸಂಖ್ಯೆ 2/3ರಷ್ಟು ಜನ ರಾಜಧಾನಿಯಾದ ರೆಕ್ಟವಿಕ್‍ನಲ್ಲಿ ವಾಸಿಸುತ್ತಿದ್ದಾರೆ. ಉಳಿದ ಕಡೆ ಜನಸಂಖ್ಯೆ ಹೇಗಿದೆ ಅಂದರೆ ಪೂರ್ವ ಭಾಗದಲ್ಲಿ ನೀವು ರಸ್ತೆಯಲ್ಲಿ ಸಂಚರಿಸಿದರೆ ಹಲವು ಕಿಲೋಮೀಟರ್ ದೂರಕ್ಕೆ ಒಂದೊಂದು ಮನೆ ಕಾಣಸಿಗುತ್ತದೆ. ಕೆಲವು ಕಡೆ 100 ಕಿ.ಮೀ -200 ಕಿ.ಮೀ ಅಂತರದಲ್ಲಿ ಮನೆ ಕಾಣಸಿಗುತ್ತದೆ.

    #3. ಚಳಿಗಾಲದಲ್ಲಿ ಸಂಪೂರ್ಣ ಐಸ್‍ಲ್ಯಾಂಡ್ ದೇಶವೇ ಮಂಜಿನಿಂದ ಆವೃತವಾಗಿರುತ್ತದೆ. ಅಟ್ಲಾಂಟಿಕ್ ವಲಯದಲ್ಲಿದ್ದರೂ ಕನಿಷ್ಠ ಉಷ್ಣಾಂಶ ಮೈನಸ್ 10 ಡಿಗ್ರಿಗೆ ಇಳಿಯುತ್ತದೆ. ಹತ್ತಿರದಲ್ಲೇ ಗಲ್ಫ್ ಸ್ಟ್ರೀಮ್ ಇರುವ ಕಾರಣ ಅಲ್ಲಿಯ ಬಿಸಿಗಾಳಿಯಿಂದಾಗಿ ಐಸ್‍ಲ್ಯಾಂಡ್ ಸ್ವಲ್ಪ ಬೆಚ್ಚಗೆ ಇರುತ್ತದೆ.

    #4. ಉತ್ತರದಿಂದ ಮೂಡುವ ಸೂರ್ಯನ ಬೆಳಕುಗಳನ್ನು ವೀಕ್ಷಿಸಲು ಐಸ್‍ಲ್ಯಾಂಡ್ ಹೇಳಿ ಮಾಡಿಸಿದ ಸ್ಥಳ.

    #5. ಐಸ್‍ಲ್ಯಾಂಡ್ ಅನ್ನು ನೀವು ಎರಡೂ ರೀತಿಯಲ್ಲಿ ನೋಡಬಹುದು. ಚಳಿಗಾಲದಲ್ಲಿ ಸಂಪೂರ್ಣ ಮಂಜು ಆವರಿಸಿ, ಬಹುತೇಕ ರಸ್ತೆಗಳು ಸಂರ್ಪೂಣವಾಗಿ ಬಂದ್ ಆಗಿರುತ್ತದೆ. ಬಹುತೇಕ ಜಲಪಾತಗಳು ಹೆಪ್ಪುಗಟ್ಟಿರುತ್ತವೆ. ಆದರೆ ಬೇಸಿಗೆಯಲ್ಲಿ ರಸ್ತೆಗಳು ಓಪನ್ ಆಗಿರುತ್ತದೆ. ಜೂನ್, ಜುಲೈ ಸೆಪ್ಟೆಂಬರ್ ಅವಧಿಯಲ್ಲಿ ಪ್ರವಾಸಿಗರು ಅತಿ ಹೆಚ್ಚು ಸಂಖ್ಯೆಯಲ್ಲಿ ಐಸ್‍ಲ್ಯಾಂಡ್‍ಗೆ ಭೇಟಿ ನೀಡುತ್ತಾರೆ.

    #6. ಅತಿಹೆಚ್ಚು ಗಾಳಿ ಬೀಸೋ ದೇಶಗಳ ಪಟ್ಟಿಯಲ್ಲಿ ಐಸ್‍ಲ್ಯಾಂಡಿಗೆ ವಿಶ್ವದಲ್ಲೇ ಎರಡನೇ ಸ್ಥಾನ. ಗಾಳಿ ಎಷ್ಟು ರಭಸವಾಗಿ ಬೀಸುತ್ತದೆ ಎಂದರೆ ಕೆಲವೊಮ್ಮೆ ಕಾರುಗಳನ್ನೇ ಅಲುಗಾಡಿಸಿ ಬಿಡುತ್ತದೆ. ಹೊರಗಡೆ ನಿಲ್ಲುವುದಂತೂ ಅಸಾಧ್ಯವಾದ ಮಾತು. ಕೊಠಡಿಗಳನ್ನು ಬುಕ್ ಮಾಡಿದ್ರೆ ಗಾಳಿ ಬೀಸುವ ಕಡೆ ಓಪನ್ ಮಾಡದಿರುವಂತೆ ಕಂಪೆನಿಗಳು ಪ್ರವಾಸಿಗರಿಗೆ ಸೂಚಿಸುತ್ತವೆ. ಒಂದು ವೇಳೆ ಓಪನ್ ಮಾಡಿದರೆ ಗಾಳಿಯ ರಭಸಕ್ಕೆ ಬಾಗಿಲು ಮುರಿದು ಬೀಳುವ ಸಾಧ್ಯತೆ ಇರುತ್ತದೆ. ಕೆಲವೊಂದು ಕಡೆಯಲ್ಲಿ ಮುರಿದು ಬಿದ್ದಿರುವ ಉದಾಹರಣೆ ಇದೆಯಂತೆ.

    #7. ಐಸ್‍ಲ್ಯಾಂಡ್ ದ್ವೀಪದೇಶವಾಗಿರುವದರಿಂದ ಸುತ್ತಲೂ ಸಮುದ್ರ ಇದೆ ಎನ್ನುವುದು ನಿಮಗೆ ತಿಳಿದಿದೆ. ಆದರೆ ಈ ಸಮುದ್ರದ ದಂಡೆಯ ಭಾರತೀಯರಿಗೆ ವಿಶೇಷವಾಗಿ ಕಂಡರೆ ಆಶ್ಚರ್ಯ ಏನಿಲ್ಲ. ಭಾರತದ ಸಮುದ್ರದಲ್ಲಿ ಬಿಳಿ ಮರಳು ಸಿಕ್ಕಿದರೆ ಅಲ್ಲಿ ಒಂದೆ ಒಂದು ಕಡೆ ಬಿಳಿ ಮರಳು ಸಿಗೋದಿಲ್ಲ. ಅಲ್ಲಿ ಕಪ್ಪು ಬಣ್ಣದ ಮರಳು ಮಾತ್ರ ಸಿಗುತ್ತದೆ. ಇದು ಅಲ್ಲಿನ ಮತ್ತೊಂದು ವಿಶೇಷತೆ.

    #8. ಕಪ್ಪು ಮರಳು ಸಮುದ್ರದ ದಂಡೆಯಲ್ಲಿ ಯಾಕೆ ಸಿಗುತ್ತೆ ಅಂತ ನೀವು ಕೇಳಬಹುದು. ಅದಕ್ಕೂ ಕಾರಣ ಇದೆ. ಅಲ್ಲಿ ಜ್ವಾಲಾಮುಖಿಗಳು ಸಾಮಾನ್ಯ. ಈ ಹಿಂದಿನ ಒಂದು ಜ್ವಾಲಾಮುಖಿ ಸುಮಾರು 1 ವರ್ಷಗಳ ಕಾಲ ಜೀವಂತವಾಗಿತ್ತು. ಜ್ವಾಲಾಮುಖಿ ಇರುವಿಕೆ ಪತ್ತೆಯಾದರೆ ಆ ಸ್ಥಳವನ್ನು ಸಂಪರ್ಕಿಸುವ ರಸ್ತೆಗಳ ಸಂಪರ್ಕ ಕಡಿತಗೊಳಿಸಲಾಗುತ್ತದೆ. ಈ ವೇಳೆ ಸ್ಥಳೀಯ ಕಂಪೆನಿಗಳು ಇದನ್ನು ವೀಕ್ಷಿಸಲೆಂದೇ ಹೆಲಿಕಾಪ್ಟರ್ ಟೂರ್‍ಗಳನ್ನು ಆಯೋಜಿಸುತ್ತದೆ.

    #9 ದೇಶದ ಹೆಸರಿನಲ್ಲಿ ‘ಐಸ್’ ಇದೆ. ಹೀಗಾಗಿ ಐಸ್‍ಲ್ಯಾಂಡಿನಲ್ಲಿ ದೊಡ್ಡ ದೊಡ್ಡ ಹಿಮದ ಪರ್ವತಗಳಿರುವುದು ಇಲ್ಲಿ ಇರುವುದು ಸಾಮಾನ್ಯ. ಅದರಲ್ಲೂ ವಟನ್‍ಜೋಕುಲ್ ಹೆಸರಿನ ಗೆಡ್ಡೆ ಐಸ್‍ಲ್ಯಾಂಡ್ ಭೂಮಿಯ ಶೇ.8ರಷ್ಟು ಜಾಗದಲ್ಲಿ ಆವರಿಸಿಕೊಂಡಿದೆ. ಹಿಮದ ಗೆಡ್ಡೆಗಳಿರುವ ಪ್ರದೇಶಗಳಲ್ಲಿ ಹೋಗುವಾಗ ಜಾಗೃತೆಯಿಂದ ಇರಬೇಕಾಗುತ್ತದೆ. ಸ್ಥಳೀಯ ಗೈಡ್‍ಗಳ ಸಹಕಾರವಿಲ್ಲದೇ ಇಲ್ಲಿ ನಡೆಯಲು ಸಾಧ್ಯವೇ ಇಲ್ಲ.

    #10 ಪ್ರಾಕೃತಿಕ ಸೌಂದರ್ಯ ಹೊರತುಪಡಿಸಿ ಐಸ್‍ಲ್ಯಾಂಡಿನ ಮತ್ತೊಂದು ವಿಶೇಷ ಏನೆಂದರೆ ಅಲ್ಲಿ ಶುದ್ಧವಾದ ಗಾಳಿಯನ್ನು ಮಾರಾಟ ಮಾಡಲಾಗುತ್ತದೆ. ಹೌದು ಬಹುತೇಕ ಅಂಗಡಿಗಳು “ಫ್ರೆಶ್ ಐಸ್‍ಲ್ಯಾಂಡಿಕ್ ಮೌಂಟೇನ್ ಏರ್” ಹೆಸರಿನ್ ಸಣ್ಣ ಟಿನ್‍ನಲ್ಲಿ ಗಾಳಿಯನ್ನು ಮಾರಾಟ ಮಾಡುತ್ತಿವೆ. ಒಂದು ಟಿನ್‍ಗೆ ಭಾರತ ಬೆಲೆ 600 ರೂ. ಅಷ್ಟೇ!.

    ಐಸ್‍ಲ್ಯಾಂಡ್ ಬಗ್ಗೆ ನೀವು ಈ ಬರಹ ಓದಿ ತಿಳಿದುಕೊಂಡಾಯ್ತು. ನೀವು ಈಗ ಅಲ್ಲಿಗೆ ಪ್ರವಾಸಕ್ಕೆ ಹೋಗಬೇಕು ಎಂದರೆ ನಿಮಗೆ ಒಂದು ಸುವರ್ಣ ಅವಕಾಶವಿದೆ. wildvoyager ಸಂಸ್ಥೆಯವರು ಐಸ್‍ಲ್ಯಾಂಡ್ ಪ್ರವಾಸವನ್ನು ಆಯೋಜಿಸಿದೆ. ಈ ಪ್ರವಾಸದ ಮೊದಲ ಬ್ಯಾಚ್ ಜೂನ್ 24ಕ್ಕೆ ಐಸ್‍ಲ್ಯಾಂಡಿಗೆ ತೆರಳಲಿದೆ

    ದೆಹಲಿ ಮೂಲದ ವೈಲ್ಡ್ ಲೈಫ್ ಫೋಟೋಗ್ರಾಫಿಯಲ್ಲಿ ಆಸಕ್ತಿ ಇರುವ ಅಲಂಕಾರ್ ಚಂದ್ರ ಎಂಬವರು ಈ ಸಂಸ್ಥೆಯನ್ನು ಹುಟ್ಟಿ ಹಾಕಿದ್ದಾರೆ. ನ್ಯಾಷನಲ್ ಜಿಯೋಗ್ರಾಫಿಕ್ ಮ್ಯಾಗಜಿನ್ ನಲ್ಲಿ ಇವರ ಬರಹಗಳು ಪ್ರಕಟಗೊಂಡಿದ್ದು, ಹಲವಾರು ದೇಶಗಳಿಗೆ ಈ ಸಂಸ್ಥೆಯ ಮೂಲಕ ಪ್ರವಾಸವನ್ನು ಆಯೋಜಿಸುತ್ತಾರೆ. ಸೋ ನೀವು ಐಸ್‍ಲ್ಯಾಂಡಿಗೆ ಹೋಗಬೇಕು ಎಂದು ಕನಸು ಕಾಣುತ್ತಿದ್ದರೆ ಈ ವೆಬ್‍ಸೈಟ್ ಮೂಲಕ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಆಸಕ್ತರು info@wildvoyager.com ಮೇಲ್ ಮಾಡುವ  ಮೂಲಕ ನೇರವಾಗಿ ಮಾಹಿತಿಯನ್ನು ಪಡೆದುಕೊಳ್ಳಬಹುದು.

    ಪ್ರವಾಸಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗೆ ಈ ವೆಬ್‍ಸೈಟನ್ನು ಕ್ಲಿಕ್ಕಿಸಿ: https://wildvoyager.com/destinations/iceland