Tag: Adult

  • ಅಡಲ್ಟ್ ಕಂಟೆಂಟ್ ವಿರುದ್ಧ ಗರಂ ಆದ ಸಲ್ಮಾನ್ ಖಾನ್

    ಅಡಲ್ಟ್ ಕಂಟೆಂಟ್ ವಿರುದ್ಧ ಗರಂ ಆದ ಸಲ್ಮಾನ್ ಖಾನ್

    ದೇ ಮೊದಲ ಬಾರಿಗೆ ಅಚ್ಚರಿಯ ಮಾತುಗಳನ್ನೂ ಆಡಿದ್ದಾರೆ ಬಾಲಿವುಡ್ (Bollywood) ನಟ ಸಲ್ಮಾನ್ ಖಾನ್ (Salman Khan). ಚಿತ್ರೋದ್ಯಮದ ಅನೇಕರಿಗೆ ವರದಾನವಾಗಿರುವ ಓಟಿಟಿ ಬಗ್ಗೆ ಅವರು ಗರಂ ಆಗಿದ್ದಾರೆ. ಈ ವೇದಿಕೆಯಲ್ಲಿ ಬರುವ ಸಿನಿಮಾ, ಸಾಕ್ಷ್ಯಚಿತ್ರ, ವೆಬ್ ಸಿರೀಸ್ ಗಳಿಗೆ ಸೆನ್ಸಾರ್ ಮಾಡಿಸಬೇಕು ಎಂದು ಅವರು ಮಾತನಾಡಿದ್ದಾರೆ. ಅದರಲ್ಲೂ ಅಡಲ್ಟ್ (Adult) ಕಂಟೆಂಟ್ ನಿಂದ ತುಂಬಿರುವ ಓಟಿಟಿಗಳನ್ನು ಕೂಡಲೇ ಭಾರತದಲ್ಲಿ ನಿಲ್ಲಿಸಬೇಕು ಎಂದು ಸಲಹೆ ಮಾಡಿದ್ದಾರೆ.

    ಕಿಸ್ಸಿಂಗ್ (Kissing), ಎಕ್ಸ್ ಪೋಸ್, ವಯಸ್ಕರ ಚಿತ್ರಗಳು, ನೀಲಿ ಚಿತ್ರಗಳು, ಅತಿಯಾದ ರೊಮ್ಯಾನ್ಸ್ ಹೊಂದಿದ ದೃಶ್ಯಗಳು ಓಟಿಟಿಯಲ್ಲಿ ಹೇರಳವಾಗಿ ಸಿಗುತ್ತಿವೆ. ನಮ್ಮ ಸುಸಂಸ್ಕೃತ ರಾಷ್ಟ್ರ, ನಾವು ಭಾರತದಲ್ಲಿ ಬದುಕುತ್ತಿದ್ದೇವೆ ಎನ್ನುವುದನ್ನು ಮರೆತು ಅಂತಹ ಚಿತ್ರಗಳಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ಅದು ಆಗಬಾರದು. ಕೂಡಲೇ ಅಂತಹ ಕಂಟೆಂಟ್ ಅನ್ನು ತಗೆದು ಹಾಕಬೇಕು ಎಂದಿದ್ದಾರೆ ಸಲ್ಲು. ಇದನ್ನೂ ಓದಿ: ಸುದೀಪ್ ಖಾಸಗಿ ವಿಡಿಯೋ ಬೆದರಿಕೆ ಹಿಂದೆ ಕಾರು ಡ್ರೈವರ್ ಇರುವ ಶಂಕೆ

    ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಡಿಜಿಟಲ್ ಯುಗದ ಜೊತೆಗೆ ಯುವ ನಟರ ಬಗ್ಗೆಯೂ ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ. ‘ಚಿತ್ರೋದ್ಯಮಕ್ಕೆ ಯುವ ಪ್ರತಿಭೆಗಳು ಬರುತ್ತಿವೆ. ಅವರೂ ಕಷ್ಟ ಪಡುತ್ತಿದ್ದಾರೆ. ಆದರೂ, ನಾವು ಐದಾರು ಜನ ಅವರಿಗೆ ಸ್ಪರ್ಧೆ  ಕೊಡುತ್ತಲೇ ಇರುತ್ತೇವೆ. ಈ ಹೊತ್ತಿನ ನಟರು ಒಂದೋ ಎರಡೋ ಸಿನಿಮಾ ಹಿಟ್ ಆದ ತಕ್ಷಣವೇ ಸಂಭಾವನೆ ಜಾಸ್ತಿ ಮಾಡಿಕೊಳ್ಳುತ್ತಾರೆ. ನಮ್ಮದು ಹಾಗಿರಲಿಲ್ಲ’ ಎಂದಿದ್ದಾರೆ.

    salman

    ಸಿನಿಮಾದಲ್ಲಿ ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎನ್ನುವ ವಿವೇಕವು ಎಲ್ಲರಿಗೂ ಇರಬೇಕು. ಸಮಾಜವನ್ನು ಹಾಳು ಮಾಡುವಂತಹ, ಜನರಿಗೆ ಮೋಸವಾಗದಂತಹ ವಿಷಯಗಳನ್ನು ಎತ್ತಿಕೊಂಡು ಸಿನಿಮಾ ಮಾಡಬೇಕಿದೆ. ಅದರಲ್ಲೂ ದೇಶಭಕ್ತಿ ಸಾರುವಂತಹ, ಸಮಾಜಗಳನ್ನು ಒಂದಾಗಿಸುವಂತಹ ಕಥೆಗಳು ಹೆಚ್ಚಾಗಿ ಬರಲಿ ಎಂದಿದ್ದಾರೆ ಸಲ್ಮಾನ್ ಖಾನ್.

  • ಹೊಸ ಹಲ್ಲು ಹುಟ್ಟಿಲ್ಲವೆಂದು ಪ್ರಧಾನಿಗೆ ಪತ್ರ ಬರೆದ ಪುಟಾಣಿಗಳು

    ಹೊಸ ಹಲ್ಲು ಹುಟ್ಟಿಲ್ಲವೆಂದು ಪ್ರಧಾನಿಗೆ ಪತ್ರ ಬರೆದ ಪುಟಾಣಿಗಳು

    ನವದೆಹಲಿ: ಹಾಲು ಹಲ್ಲು ಬಿದ್ದು ಹೊಸ ಹಲ್ಲು ಇನ್ನೂ ಹುಟ್ಟಿಲ್ಲ ಅಂತ ಪ್ರಧಾನಿಗೆ ಪುಟಾಣಿಗಳು ಅಸ್ಸಾಂನ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಮತ್ತು ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದಿರುವುದು ಎಲ್ಲಡೆ ಸುದ್ದಿಯಾಗುತ್ತಿದೆ.

    adult teeth

    ಪ್ರತದಲ್ಲಿ ಏನಿದೆ?
    ಪ್ರೀತಿಯ ಹಿಮಾಂತ ಮಾಮ ನನ್ನ ಹಲ್ಲುಗಳು ಬಿದ್ದು ಹೋಗಿವೆ. ಇದುವರೆಗೂ ಬಂದಿಲ್ಲ. ಆದ ಕಾರಣ ನಾನು ನನ್ನ ಇಷ್ಟದ ಆಹಾರವನ್ನು ಸೇವಿಸಲು ಆಗುತ್ತಿಲ್ಲ. ದಯವಿಟ್ಟು ಏನಾದರೂ ಕ್ರಮ ಕೈಗೊಳ್ಳಿ. ಪ್ರೀತಿಯ ಮೋದಿಜೀ, ನನ್ನ ಮೂರು ಹಲ್ಲುಗಳು ಉದುರಿ ಹೋಗಿವೆ. ದಯವಿಟ್ಟು ನನ್ನ ಹಲ್ಲು ಇದುವರೆಗೂ ಬಾರದೇ ಇರುವುದಕ್ಕೆ ಏನಾದರೂ ಒಂದು ಕ್ರಮ ತೆಗೆದುಕೊಳ್ಳಿ. ನನ್ನ ಇಷ್ಟದ ಆಹಾರವನ್ನು ಜಗಿಯಲು, ತಿನ್ನಲು ಬಹಳ ಕಷ್ಟಪಡುತ್ತಿದ್ದೇನೆ.

    ಈ ರೀತಿಯ ಪತ್ರ ಬರೆದ ಇಬ್ಬರು ಮಕ್ಕಳು, ಸ್ವಂತ ಅಕ್ಕ-ತಮ್ಮನಾಗಿದ್ದಾರೆ. ಆರು ವರ್ಷದ ರಾವ್ಜ ಮತ್ತು ಐದು ವರ್ಷದ ಆರ್ಯನ್ ಮೂಲತಃ ಅಸ್ಸಾಮಿನವರು. ಇವರಿಬ್ಬರು ಸೇರಿಕೊಂಡು ಅಸ್ಸಾಂನ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಇವರು ಬರೆದಿರುವ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮುದ್ದಾದ ಬರವಣಿಗೆ ಮತ್ತು ವಿಚಾರಕ್ಕೆ ನೆಟ್ಟಿಗರ ಮನಸ್ಸನ್ನು ಗೆದ್ದಿದ್ದಾರೆ ಈ ಪುಟಾಣಿಗಳು.

    adult teeth

    ಈ ಪತ್ರಗಳನ್ನು ಅವರ ತಾಯಿಯ ಚಿಕ್ಕಪ್ಪ ಮುಖ್ತರ್ ಅಹಮದ್ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈಗ ಅವು ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಗೆದ್ದಿವೆ. ಅವರ ಚಿಕ್ಕಪ್ಪ ಪತ್ರಗಳ ಫೋಟೋ ತೆಗೆದು, ಹಿಮಂತ ಬಿಸ್ವ ಶರ್ಮ, ನರೇಂದ್ರ ಮೋದಿಯವರಿಗೆ ನನ್ನ ಸೊಸೆ ರಾವ್ಜಾ (6 ವರ್ಷ) ಮತ್ತು ಸೋದರಳಿಯ ಆರ್ಯನ್ (5 ವರ್ಷ) ನನ್ನ ಸೊಸೆ ಮತ್ತು ಸೋದರಳಿಯರು ತಮ್ಮದೇ ಆದ ರೀತಿಯಲ್ಲಿ ಬರೆದಿದ್ದಾರೆ. ದಯವಿಟ್ಟು ಅವರ ಹಲ್ಲುಗಳಿಗೆ ಏನಾದರೂ ಸಲಹೆ ಸೂಚನೆ ನೀಡಿ, ಏಕೆಂದರೆ ಅವರು ತಮ್ಮ ನೆಚ್ಚಿನ ಆಹಾರವನ್ನು ಜಗಿಯಲು ಸಾಧ್ಯವಾಗುತ್ತಿಲ್ಲ ಎಂದು ಬರೆದು ಶೇರ್ ಮಾಡಿಕೊಂಡಿದ್ದಾರೆ.

  • ದೊಣ್ಣೆಯಿಂದ ಹೊಡೆದು ಬೆದರಿಸುತ್ತಿದ್ದ ಗ್ಯಾಂಗ್ ಅರೆಸ್ಟ್

    ದೊಣ್ಣೆಯಿಂದ ಹೊಡೆದು ಬೆದರಿಸುತ್ತಿದ್ದ ಗ್ಯಾಂಗ್ ಅರೆಸ್ಟ್

    – ನಾಲ್ವರು ದರೋಡೆಕೋರರು ಪೊಲೀಸರ ವಶಕ್ಕೆ
    – ಆರೋಪಿಗಳ ಮೊಬೈಲ್ ನೋಡಿ ಪೊಲೀಸರು ಶಾಕ್

    ಕಲಬುರಗಿ: ಇತ್ತೀಚಿನ ಕೆಲ ವರ್ಷಗಳಲ್ಲಿ ಕ್ರೈಂ ಸುದ್ದಿಗಳ ಮೂಲಕವೇ ರಾಜ್ಯದ ಗಮನ ಸೆಳೆಯುತ್ತಿರುವ ಕಲಬುರಗಿ ಜಿಲ್ಲೆಯಲ್ಲಿ ರೌಡಿಗಳ ಅಟ್ಟಹಾಸ ನಿಲ್ಲುತ್ತಿಲ್ಲ. ಹೀಗಂತ ಪೊಲೀಸರು ಸಹ ಕೈಕಟ್ಟಿ ಕುಳಿತಿಲ್ಲ. ಬದಲಾಗಿ ಕ್ರೈಂ ಲೋಕದ ಮೇಲೆ ಒಂದು ಕಣ್ಣಿಟ್ಟು ಭರ್ಜರಿ ಬೇಟೆ ಮುಂದುವರಿಸಿದ್ದಾರೆ.

    ಅದೇ ರೀತಿ ನಿನ್ನೆ ರಾತ್ರಿ ಕಲಬುರಗಿ ನಗರ ರೌಡಿ ನಿಗ್ರಹ ಪಡೆಯಿಂದ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಆರು ಜನ ಖತರ್ನಾಕ್ ದರೋಡೆಕೋರರ ಬಂಧನ ಮಾಡಿದ್ದಾರೆ. ಕಳೆದ ರಾತ್ರಿ ಕಲಬುರಗಿ ನಗರದ ಹೊರವಲಯದಲ್ಲಿ ಇರುವ ಖಚಿತ ಮಾಹಿತಿ ಮೇರೆಗೆ ಪಿಎಸ್ ಐ ವಾಹಿದ ಕೋತ್ವಾಲ್ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

    ಮೊಬೈಲ್ ನೋಡಿ ಪೊಲೀಸರಿಗೆ ಶಾಕ್: ಆರೋಪಿಗಳನ್ನು ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಗೆ ಕರೆ ತಂದಿದ್ದು, ಆರೋಪಿಗಳು ಈ ಹಿಂದೆ ಹಲವು ಯುವಕರಿಗೆ ದೋಣ್ಣೆಗಳಿಂದ ಹಲ್ಲೆ ಮಾಡಿ ಆ ವೀಡಿಯೋಗಳಿರುವುದು ಮೊಬೈಲ್‍ನಲ್ಲಿ ಪತ್ತೆಯಾಗಿವೆ. ಅವರ ಮಾತು ಕೇಳದಿದ್ರೆ ಹೀಗೆ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿ ಜನರಿಗೆ ಬೆದರಿಸುತ್ತಿದ್ದೆವು ಎಂದು ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ನಾಲ್ವರು ಆರೋಪಿಗಳ ಮೇಲೆ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ಜೈಲಿಗೆ ಕಳುಹಿಸಿದ್ದಾರೆ.