Tag: adopted daughter

  • ಬೀದಿಯಲ್ಲಿ ಬಿದ್ದಿದ್ದ ಮಗು ತಂದು ಸಾಕಿದ್ದ ತಾಯಿ – 13 ವರ್ಷಕ್ಕೆ ಅದೇ ಮಗಳಿಂದ ಹೋಯ್ತು ಜೀವ!

    ಬೀದಿಯಲ್ಲಿ ಬಿದ್ದಿದ್ದ ಮಗು ತಂದು ಸಾಕಿದ್ದ ತಾಯಿ – 13 ವರ್ಷಕ್ಕೆ ಅದೇ ಮಗಳಿಂದ ಹೋಯ್ತು ಜೀವ!

    ಭುವನೇಶ್ವರ: ಒಡಿಶಾದಲ್ಲಿ(Odisha) ರಸ್ತೆಬದಿಯಲ್ಲಿ ಬಿಟ್ಟು ಹೋಗಿದ್ದ ಮಗುವನ್ನು ತಂದು ಸಾಕಿ ಬೆಳೆಸಿದ್ದ ತಾಯಿಯನ್ನೇ ಸಾಕುಮಗಳು ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಒಡಿಶಾದಲ್ಲಿ ನಡೆದಿದೆ.

    ಗಜಪತಿ ಜಿಲ್ಲೆಯ ಪರಲಖೆಮುಂಡಿಯ(Paralakhemundi) ರಾಜಲಕ್ಷ್ಮೀ(54) ಕೊಲೆಯಾದ ಮಹಿಳೆ. ಮಕ್ಕಳಿಲ್ಲದ ರಾಜಲಕ್ಷ್ಮೀ(Rajalaxmi) ದಂಪತಿ 14 ವರ್ಷಗಳ ಹಿಂದೆ ಭುವನೇಶ್ವರದ ರಸ್ತೆಬದಿಯಲ್ಲಿ ಅನಾಥವಾಗಿ ಬಿದ್ದಿದ್ದ 3 ದಿನದ ಮಗು ಸಿಕ್ಕಿತ್ತು. ಆ ಮಗುವನ್ನು ಕಾನೂನು ಪ್ರಕಾರವಾಗಿಯೇ ಅವರು ದತ್ತು ಪಡೆದಿದ್ದರು. ಇದನ್ನೂ ಓದಿ: ಜಿಎಸ್‌ಟಿ ಸಂಗ್ರಹಣೆಯಲ್ಲಿ ಪ್ರಥಮ ಸ್ಥಾನ ಗಳಿಸಿ – ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ಸಿಎಂ ಕರೆ

    ಸ್ವಲ್ಪ ಸಮಯದ ನಂತರ ರಾಜಲಕ್ಷ್ಮೀ ಪತಿ ನಿಧನರಾದರು. ಅಂದಿನಿಂದ, ರಾಜಲಕ್ಷ್ಮೀ ಒಂಟಿಯಾಗಿಯೇ ಮಗಳನ್ನು ಬೆಳೆಸಿದರು. ಬಳಿಕ ಮಗಳ ವಿದ್ಯಾಭ್ಯಾಸದ ಸಲುವಾಗಿ ಪರಲಖೆಮುಂಡಿಗೆ ಆಗಮಿಸಿ, ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇದನ್ನೂ ಓದಿ: ಆರ್‌ಸಿಬಿ, ಕೆಕೆಆರ್‌ ಪಂದ್ಯ 5 ಓವರ್‌ಗೆ ಸೀಮಿತವಾಗುತ್ತಾ?

    ರಾಜಲಕ್ಷ್ಮೀ ಅವರು ಮಗಳನ್ನು ಸುಸಂಸ್ಕೃತವಾಗಿ ಬೆಳೆಸಿದ್ದರು. ಕಾಲಕ್ರಮೇಣ ಆಕೆ ದೇವಸ್ಥಾನದ ಅರ್ಚಕ ಗಣೇಶ್ ರಾತ್ (21) ಮತ್ತು ದಿನೇಶ್ ಸಾಹು(20)ವಿನೊಂದಿಗೆ ಒಡನಾಟ ಬೆಳೆಸಿಕೊಂಡು, ತರಗತಿಗಳಿಗೆ ಬಂಕ್ ಮಾಡಿ ಅವರೊಂದಿಗೆ ಸುತ್ತಾಡುತ್ತಿದ್ದಳು. ಈ ವಿಚಾರ ತಿಳಿದ ರಾಜಲಕ್ಷ್ಮೀ, ಮಗಳಿಗೆ ಬೈದು ಬುದ್ದಿವಾದ ಹೇಳಿದ್ದರು.

    ಕೋಪಗೊಂಡ ಆಕೆ ಈ ವಿಚಾರವನ್ನು ವಾಟ್ಸಾಪ್ ಚಾಟ್ ಮೂಲಕ ಇಬ್ಬರು ಗೆಳೆಯರ ತಿಳಿಸಿದ್ದಳು. ಬಳಿಕ ಆಕೆಯ ಇಬ್ಬರು ಗೆಳೆಯರೊಂದಿಗೆ ಸೇರಿ ತಾಯಿಯ ಕೊಲೆಯ ಪ್ಲ್ಯಾನ್‌ ಮಾಡಿದ್ದರು. ರಾಜಲಕ್ಷ್ಮೀಯನ್ನು ಕೊಲೆಮಾಡಿ ಆಸ್ತಿಯನ್ನು ಪಡೆಯಬಹುದು ಹಾಗೂ ನೀನು ಸ್ವತಂತ್ರವಾಗಿ ಬಾಳಬಹುದು ಎಂದೆಲ್ಲಾ ಗೆಳೆಯರು ಹುಡುಗಿಯ ತಲೆತುಂಬಿದ್ದರು. ಇದನ್ನೂ ಓದಿ: ಬುರ್ಖಾಧಾರಿ ಮಹಿಳೆಯರಿಂದ ಮಗು ಕಿಡ್ನ್ಯಾಪ್‍ಗೆ ಯತ್ನ – ತಡೆಯಲು ಬಂದ ತಾಯಿಗೆ ಚಾಕು ಇರಿತ

    ಇದರಿಂದ ಪ್ರಚೋದಿತಲಾದ ಮಗಳು ಏ. 29ರಂದು ಸಂಜೆ, ತಾಯಿ ರಾಜಲಕ್ಷ್ಮೀಗೆ ನಿದ್ರೆ ಮಾತ್ರೆಗಳನ್ನು ನೀಡಿದ್ದಳು. ರಾಜಲಕ್ಷ್ಮೀ ಪ್ರಜ್ಞಾಹೀನಳಾದ ನಂತರ, ಇಬ್ಬರು ಸ್ನೇಹಿತರಿಗೆ ಕರೆ ಮಾಡಿ ಮನೆಗೆ ಬರುವಂತೆ ತಿಳಿಸಿದ್ದಳು, ಬಳಿಕ ಮೂವರು ಸೇರಿ ರಾಜಲಕ್ಷ್ಮೀಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು.

    ಬಳಿಕ ಆಕೆಯೇ ಕುಟುಂಬಸ್ಥರಿಗೆ ಕರೆ ಮಾಡಿ ತಾಯಿಗೆ ಹುಷಾರಿಲ್ಲ ಎಂದು ತಿಳಿಸಿ, ಆಸ್ಪತ್ರೆಗೆ ಕರೆದೊಯ್ದಿದ್ದಳು. ಆಸ್ಪತ್ರೆಯಲ್ಲಿ ವೈದ್ಯರು ರಾಜಲಕ್ಷ್ಮೀಮೃತಪಟ್ಟಿದ್ದಾರೆ ಎಂದು ಹೇಳಿದ್ದರು. ಈ ಹಿಂದೆ ರಾಜಲಕ್ಷ್ಮೀಗೆ ಹೃದಯಾಘಾತವಾಗಿದ್ದರಿಂದ, ಇದನ್ನೇ ದಾಳವಾಡಿ ಬಳಸಿಕೊಂಡು ತಾಯಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರನ್ನು ನಂಬಿಸಿದ್ದಳು. ಇದನ್ನೂ ಓದಿ: ಮೈದಾನಕ್ಕೆ ನುಗ್ಗಿ ಕೊಹ್ಲಿಯನ್ನು ಹಗ್ ಮಾಡ್ತೀನಿ – ಪೋಸ್ಟ್ ಹಾಕಿ ಪೊಲೀಸರ ಅತಿಥಿಯಾದ ಯುವಕ

    ರಾಜಲಕ್ಷ್ಮೀಯದ್ದು ಸಹಜ ಸಾವು ಎಂದು ಭಾವಿಸಿದ್ದ ಕುಟುಂಬಸ್ಥರಿಗೆ ಹುಡುಗಿ ಭುವನೇಶ್ವರದಲ್ಲಿ ಬಿಟ್ಟು ಹೋಗಿದ್ದ ಮೊಬೈಲ್ ಕೊಲೆಯ ರಹಸ್ಯವನ್ನು ಬಿಚ್ಚಿಟ್ಟಿದೆ. ರಾಜಲಕ್ಷ್ಮೀ ಅವರ ಸಹೋದರ ಸಿಬಾ ಪ್ರಸಾದ್ ಮಿಶ್ರಾ ಆಕೆಯ ಮೊಬೈಲ್ ಅನ್ನು ಪರಿಶೀಲಿಸಿದಾಗ ಹುಡುಗಿ ಸ್ನೇಹಿತರೊಂದಿಗೆ ಸೇರಿ ಕೊಲೆಯ ಸಂಚು ರೂಪಿಸಿರುವುದು ಬಯಲಾಗಿದೆ. ಇದನ್ನೂ ಓದಿ: Kolar | ವಿದ್ಯುತ್ ತಂತಿ ಸ್ಪರ್ಶಿಸಿ ಸಾರಿಗೆ ನೌಕರ ಸಾವು

    ಈ ಚಾಟ್‌ನಲ್ಲಿ ರಾಜಲಕ್ಷ್ಮಿಯನ್ನು ಕೊಂದು ಚಿನ್ನಾಭರಣಗಳು ಮತ್ತು ಹಣವನ್ನು ವಶಪಡಿಸಿಕೊಂಡ ಬಗ್ಗೆಯೂ ಉಲ್ಲೇಖಿಸಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಸಿಬಾ ಪ್ರಸಾದ್ ಮೇ 14ರಂದು ಪರಲಖೆಮುಂಡಿ ಪೊಲೀಸ್ ಠಾಣೆಯಲ್ಲಿ(Paralakhemundi Police Station) ದೂರು ದಾಖಲಿಸಿದ್ದರು. ಇದನ್ನೂ ಓದಿ: ಪಾಕ್ ವಿರುದ್ಧ ವಿದೇಶಗಳಿಗೆ ಸರ್ವಪಕ್ಷ ನಿಯೋಗ – ಯಾವ ದೇಶಕ್ಕೆ ಯಾರು ಹೋಗ್ತಾರೆ?

    ತನಿಖೆ ಆರಂಭಿಸಿದ ಪೊಲೀಸರು ಮೂವರು ಆರೋಪಿಗಳಾದ ಅಪ್ರಾಪ್ತ ಹುಡುಗಿ, ಗಣೇಶ್ ರಾತ್ ಮತ್ತು ದಿನೇಶ್ ಸಾಹುವನ್ನು ಬಂಧಿಸಿದ್ದಾರೆ. ಹುಡುಗಿಯು ತಾಯಿಯ ಕೆಲವು ಚಿನ್ನದ ಆಭರಣಗಳನ್ನು ಈ ಹಿಂದೆ ಗಣೇಶ್ ರಾತ್‌ಗೆ ಹಸ್ತಾಂತರಿಸಿದ್ದಳು. ಆತ ಚಿನ್ನಾಭರಣಗಳನ್ನು 2.4 ಲಕ್ಷ ರೂ.ಗೆ ಅಡವಿಟ್ಟಿದ್ದ ಎನ್ನಲಾಗಿದೆ. ಆರೋಪಿಯಿಂದ ಸುಮಾರು 30 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

  • ನಗರ ಜೀವನ ಶೈಲಿಗೆ ಹೊಂದಿಕೊಳ್ಳದ್ದಕ್ಕೆ 9ರ ದತ್ತುಪುತ್ರಿಯನ್ನು ಕೊಂದು ಚರಂಡಿಗೆ ಎಸೆದ

    ನಗರ ಜೀವನ ಶೈಲಿಗೆ ಹೊಂದಿಕೊಳ್ಳದ್ದಕ್ಕೆ 9ರ ದತ್ತುಪುತ್ರಿಯನ್ನು ಕೊಂದು ಚರಂಡಿಗೆ ಎಸೆದ

    ಮುಂಬೈ: ನಗರದ ಜೀವನ ಶೈಲಿಗೆ ಹೊಂದಿಕೊಂಡಿಲ್ಲ ಎಂದು ತಂದೆಯೋರ್ವ ತಾನು ದತ್ತು ಪಡೆದಿದ್ದ 9 ವರ್ಷದ ಬಾಲಕಿಯನ್ನು ಹೊಡೆದು ಕೊಂದಿರುವ ಘಟನೆ ಮಹಾರಾಷ್ಟ್ರದ ಥಾಣೆ ನಗರದಲ್ಲಿ ನಡೆದಿದೆ.

    38 ವರ್ಷದ ಪ್ರಕಾಶ್ ರಾಥೋಡ್ ದತ್ತುಪಡೆದ 9 ವರ್ಷದ ಮಗು ನಗರದ ಜೀವನ ಶೈಲಿಗೆ ಹೊಂದಿಕೊಳ್ಳುತ್ತಿಲ್ಲ. ಬಟ್ಟೆಗಳನ್ನು ಕೊಳೆ ಮಾಡಿಕೊಳ್ಳುತ್ತಾಳೆ ಎಂದು ಹೊಡೆದು ಸಾಯಿಸಿ ಡ್ರಮ್‍ನಲ್ಲಿ ತುಂಬಿ ದೊಡ್ಡ ಚರಂಡಿಗೆ ಎಸೆದಿದ್ದಾನೆ. ಮಗುವಿನ ನಿಜವಾದ ತಾಯಿ ಹಲವು ವಾರಗಳ ನಂತರವು ಮಗುವನ್ನು ಭೇಟಿ ಮಾಡಲು ಸಾಧ್ಯವಾಗದೆ ಇದ್ದಾಗ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

    ತಾಯಿ ನೀಡಿದ ದೂರಿನ ಮೇರೆಗೆ ವಿಚಾರಣೆ ಮಾಡಿದ ಪೊಲೀಸರಿಗೆ ದತ್ತು ಪಡೆದ ಪ್ರಕಾಶ್ ಮಗು ನಗರದ ಪದ್ಧತಿಗೆ ಹೊಂದಿಕೊಳ್ಳುತ್ತಿಲ್ಲ ಎಂದು ಮಗುವನ್ನು ಹೊಡೆದು ಕೊಂದು ನಂತರ ತನ್ನ ಪತ್ನಿ ಮತ್ತು ಸಂಬಂಧಿಕರೊಬ್ಬರ ಸಹಾಯದಿಂದ ಮೃತದೇಹವನ್ನು ಒಂದು ಡ್ರಮ್ ಗೆ ತುಂಬಿ ಅದಕ್ಕೆ ಸಿಮೆಂಟ್ ಪ್ಲಾಸ್ಟರ್ ಮಾಡಿ ದೊಡ್ಡ ಚರಂಡಿಗೆ ಎಸೆದಿದ್ದಾನೆ ಎಂಬ ವಿಚಾರ ಬೆಳಕಿಗೆ ಬಂದಿದೆ.

    ಮಗುವಿನ ನಿಜವಾದ ತಾಯಿ ಬಡ ವಿಧವೆಯಾಗಿದ್ದು, ಆಕೆಯ ಸೋದರ ಸಂಬಂಧಿಯಾಗಿದ್ದ ಪ್ರಕಾಶ್ ರಾಥೋಡ್ ನಿನ್ನ ಮಗುವನ್ನು ದತ್ತು ಕೊಡು ನಾವು ಶ್ರೀಮಂತರಾಗಿದ್ದು, ನಗರದಲ್ಲಿ ನಿಮ್ಮ ಮಗಳನ್ನು ಬೆಳೆಸುತ್ತೇವೆ, ಓದಿಸುತ್ತೇವೆ ಎಂದು ಹೇಳಿದ್ದಾನೆ. ಊಟಕ್ಕೂ ಸಮಸ್ಯೆ ಇರುವ ನನ್ನ ಬಳಿ ನನ್ನ ಮಗಳು ಬೆಳೆಯುವುದು ಬೇಡ ನಗರದಲ್ಲಿ ಬೆಳೆದು ವಿದ್ಯಾವಂತೆಯಗಲಿ ಎಂಬ ಕನಸನ್ನು ಇಟ್ಟುಕೊಂಡು ಆಕೆ ಅವರಿಗೆ ತನ್ನ ಮಗಳನ್ನು ನೀಡಿದ್ದಾಳೆ.

    ಮಗುವನ್ನು ದತ್ತು ಪಡೆದ ಪ್ರಕಾಶ್ ದಂಪತಿ ಮಗುವನ್ನು ಓದಿಸದೆ ದಿನಲೂ ಹೊಡೆಯುತ್ತಿದ್ದರು. ಮನೆ ಕೆಲಸ ಮಾಡಲು ಇಟ್ಟುಕೊಂಡಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ. ಇದಲ್ಲದೇ ಆರೋಪಿ ಪ್ರಕಾಶ್ ಪತ್ನಿ ಟೈಲರಿಂಗ್ ಕೆಲಸ ಮಾಡುತ್ತಿದ್ದು, ಆ ಕೆಲಸ ಮಾಡಲು ಆ ಮಗು ಅವಳಿಗೆ ದಿನ ಸಹಾಯ ಮಾಡುತಿತ್ತು ಎಂದು ಪೊಲೀಸರು ಹೇಳಿದ್ದಾರೆ.

    ಡಿಸೆಂಬರ್ 7 ರಂದು ಮಗು ಬಟ್ಟೆಯನ್ನು ಮಣ್ಣು ಮಾಡಿಕೊಂಡು ಬಂದಿದೆ ಎಂದು ಪ್ರಕಾಶ್ ಮಗುವಿಗೆ ತುಂಬ ಹೊಡೆದಿದ್ದಾನೆ. ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಆಗ ಮಗುವಿನ ಮೃತದೇಹವನ್ನು ಡ್ರಮ್ ಒಳಗೆ ಹಾಕಿ ಅದಕ್ಕೆ ಸಿಮೆಂಟ್ ತುಂಬಿ ಚರಂಡಿಗೆ ಎಸೆದಿದ್ದಾರೆ. ಈ ವಿಚಾರವಾಗಿ ಪ್ರಕಾಶ್ ಪತ್ನಿಯನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಸತ್ಯ ಹೊರಬಂದಿದ್ದು ಆರೋಪಿ ಪ್ರಕಾಶ್ ಪರಾರಿಯಾಗಿದ್ದಾನೆ.

  • ಸೂಟ್‍ಕೇಸ್‍ನಲ್ಲಿ ಶವ – ಪುತ್ರಿಯೇ ತಂದೆಯನ್ನು ಕತ್ತರಿಸಿ ನದಿಗೆ ಎಸೆದ್ಳು

    ಸೂಟ್‍ಕೇಸ್‍ನಲ್ಲಿ ಶವ – ಪುತ್ರಿಯೇ ತಂದೆಯನ್ನು ಕತ್ತರಿಸಿ ನದಿಗೆ ಎಸೆದ್ಳು

    – ಪೊಲೀಸರಿಗೆ ಸುಳಿವು ನೀಡಿದ ಸ್ವೆಟರ್

    ಮುಂಬೈ: ಇತ್ತೀಚಿಗೆ ಮುಂಬೈನ ಮಹೀಮ್ ಬೀಚ್‍ನಲ್ಲಿ ಸೂಟ್‍ಕೇಸ್‍ನಲ್ಲಿ ಕತ್ತರಿಸಿದ ಮನುಷ್ಯನ ಅಂಗಗಳು ಸಿಕ್ಕಿದ್ದವು. ಈ ಪ್ರಕರಣದ ಬೆನ್ನತ್ತಿ ಹೊರಟ ಪೊಲೀಸರಿಗೆ ದತ್ತುಪುತ್ರಿಯೇ ತಂದೆಯನ್ನು ಕೊಂದು ಎಸೆದಿದ್ದಾಳೆ ಎಂಬ ಅಘಾತಕಾರಿ ವಿಷಯ ಗೊತ್ತಾಗಿದೆ

    ಡಿಸೆಂಬರ್ 2 ರಂದು ಮಹೀಮ್ ಬೀಚ್‍ನ ಮಖ್ದೂಮ್ ಷಾ ಬಾಬಾ ದರ್ಗಾದ ಹಿಂಬದಿಯಲ್ಲಿ ದಾರಿಹೋಕರಿಗೆ ಕಪ್ಪಬಣ್ಣದ ಸೂಟ್‍ಕೇಸ್ ಕಾಣಿಸಿತ್ತು. ಅದರಲ್ಲಿ ಮನುಷ್ಯನ ಅಂಗಗಳು ಇರುವುದನ್ನು ಕಂಡ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ದಾರಿಹೋಕರ ಮಾಹಿತಿಯಂತೆ ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ಸೂಟ್‍ಕೇಸ್‍ನಲ್ಲಿ ಕತ್ತರಿಸಿದ ಮಾನವನ ಕಾಲು ಮತ್ತು ಕೈ ಹಾಗೂ ಅವನ ಖಾಸಗಿ ಅಂಗ ಸಿಕ್ಕಿತ್ತು.

    ಈ ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ಆರಂಭ ಮಾಡಿದ ಪೊಲೀಸರಿಗೆ ಸೂಟ್‍ಕೇಸ್‍ನಲ್ಲಿ ಇದ್ದ ಅಂಗಗಳು ಬೆನೆಟ್ ರೀಬೆಲ್ಲೊ (59) ಅವರದ್ದು ಎಂದು ತಿಳಿದು ಬಂದಿದೆ. ಆತನ ದತ್ತುಪುತ್ರಿಯೇ ಬೆನೆಟ್ ಅವರನ್ನು ಗೆಳೆಯನ ಜೊತೆ ಸೇರಿಕೊಂಡು ಕೊಲೆ ಮಾಡಿ ನಂತರ ಮೃತ ದೇಹವನ್ನು ಕತ್ತರಿಸಿ ನದಿಗೆ ಎಸೆದಿದ್ದಾಳೆ ಎಂದು ತಿಳಿದು ಬಂದಿದೆ.

    ಸ್ವೆಟರ್ ನೀಡಿದ ಸುಳಿವು
    ಪ್ರಕರಣದ ತನಿಖೆ ಆರಂಭಿಸಿದ ಮಹೀಮ್ ಪೊಲೀಸ್ ಠಾಣೆಯ ಪೊಲೀಸರಿಗೆ ಶವ ಸಿಕ್ಕ ಸೂಟ್‍ಕೇಸ್‍ನಲ್ಲಿ ಎರಡು ಶರ್ಟ್, ಸ್ವೆಟರ್ ಮತ್ತು ಪ್ಯಾಂಟ್ ಸಿಕ್ಕಿತ್ತು. ಇಲ್ಲಿ ಸಿಕ್ಕ ಸ್ವೆಟರ್ ಮೇಲೆ ಪಶ್ಚಿಮ ಕುರ್ಲಾದ ಬೆಲ್ಗಾಮಿ ರಸ್ತೆಯಲ್ಲಿರುವ ಅಲ್ಮೋಸ್ ಮೆನ್ಸ್ ವೇರ್ ಅಂಗಡಿಯ ಗುರುತು ಸಿಕ್ಕಿತ್ತು. ಈ ಅಂಗಡಿಯ ಜಾಡನ್ನು ಹಿಡಿದ ಹೊರಟ ಪೊಲೀಸರಿಗೆ ಈ ಅಂಗಡಿಯಲ್ಲಿ ಇದನ್ನು ಖರೀದಿಸಿದವರು ಬೆನೆಟ್ ಎಂಬ ವ್ಯಕ್ತಿ ಎಂದು ತಿಳಿದು ಬಂದಿತ್ತು.

    ಈ ಹೆಸರನ್ನು ಫೇಸ್‍ಬುಕ್ ನಲ್ಲಿ ಹುಡುಕಿದಾಗ ಇದೇ ಸ್ವೆಟರ್ ಹಾಕಿಕೊಂಡು ಬೆನೆಟ್ ರೀಬೆಲ್ಲೊ ಎಂಬವರು ಫೋಟೋ ಹಾಕಿದ್ದನ್ನು ಪೊಲೀಸರು ಕಂಡುಹಿಡಿದ್ದಿದ್ದರು. ಫೇಸ್‍ಬುಕ್‍ಗೆ ನೀಡಿದ ವಿಳಾಸವನ್ನು ತಿಳಿದುಕೊಂಡು ಅವರ ಮನೆ ಬಳಿ ಹೋದಾಗ ಅಲ್ಲಿ ಅವರ ಮನೆ ಲಾಕ್ ಆಗಿತ್ತು. ನಂತರ ನಾವು ಅಕ್ಕಪಕ್ಕದ ಮನೆಯವರನ್ನು ವಿಚಾರಿಸಿದಾಗ ಈ ಮನೆಯಲ್ಲಿ ಬೆನೆಟ್ ತನ್ನ 19 ವರ್ಷದ ದತ್ತು ಪುತ್ರಿಯೊಂದಿಗೆ ವಾಸವಿದ್ದರು ಎಂದು ಹೇಳಿದರು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

    ಆಗ ರಿಯಾ ಬೆನೆಟ್ ರೀಬೆಲ್ಲೊ ಎಂದೂ ಕರೆಯಲ್ಪಡುವ ಬೆನೆಟ್ ಅವರ ದತ್ತು ಮಗಳು ಆರಾಧ್ಯ ಜಿತೇಂದ್ರ ಪಾಟೀಲ್ ಅವರನ್ನು ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ, ಮೊದಲಿಗೆ ನಮ್ಮ ತಂದೆ ಕೆನಾಡಗೆ ಹೋಗಿದ್ದಾರೆ ಎಂದು ಹೇಳಿದ್ದಾಳೆ. ನಂತರ ಅವರು ನನ್ನನ್ನು ಲೈಂಗಿಕವಾಗಿ ಹಿಂಸಿಸುತ್ತಿದ್ದರು. ಹಾಗಾಗಿ ನಾನು ಮತ್ತು ನನ್ನ ಗೆಳೆಯ ಸೇರಿಕೊಂಡು ಕೊಲೆ ಮಾಡಿದ್ದೇವೆ ಎಂದು ಒಪ್ಪಿಕೊಂಡಿದ್ದಾಳೆ.

    ನವೆಂಬರ್ 26 ರಂದು ನಾನು ಮೊದಲು ಅವರನ್ನು ಕೋಲಿನಿಂದ ಹೊಡೆದು ಹತ್ಯೆ ಮಾಡಿದೆ ನಂತರ ಸಾಂತಾ ಕ್ರೊಜ್ ಅಲ್ಲಿ ಇರುವ ನಮ್ಮ ಮನೆಯಲ್ಲಿ ಮೂರು ದಿನ ಮೃತ ದೇಹವನ್ನು ಇಟ್ಟಿಕೊಂಡಿದ್ದೆವು. ಅಮೇಲೆ ನನ್ನ ಗೆಳೆಯನ ಸಹಾಯದಿಂದ ದೇಹನ್ನು ಕತ್ತರಿಸಿ ಸೂಟ್‍ಕೇಸ್‍ಗೆ ತುಂಬಿ ವಕೋಲಾದಲ್ಲಿ ಮಿಥಿ ನದಿಗೆ ಎಸೆದು ಬಂದಿದ್ದವು ಎಂದು ಹೇಳಿದ್ದಾಳೆ.

    ಮಿಥಿ ನದಿಯಲ್ಲಿ ಎಸೆಯಲಾದ ಸೂಟ್‍ಕೇಸ್ ನಂತರ ಬಂದು ಮಹೀಮ್ ಬೀಚ್‍ನಲ್ಲಿ ಸಿಕ್ಕಿದೆ. ಈಗ ದತ್ತುಪುತ್ರಿ ಮತ್ತು ಆಕೆಯ ಗೆಳೆಯನನ್ನು ಅರೆಸ್ಟ್ ಮಾಡಿರುವ ಪೊಲೀಸರು ಹೆಚ್ಚಿನ ತನಿಖೆ ಮಾಡುತ್ತಿದ್ದಾರೆ.

  • ಸಾಕು ತಂದೆಯಿಂದಲೇ ಅತ್ಯಾಚಾರ- ತಂದೆಯ ಕೃತ್ಯಕ್ಕೆ ಗರ್ಭಿಣಿಯಾದ ಬಾಲಕಿ

    ಚಿಕ್ಕಮಗಳೂರು: ಸಾಕು ತಂದೆಯೇ ಮಗಳ ಮೇಲೆ ನಿರಂತರ ಅತ್ಯಾಚಾರವೆಸಗಿ ಮಗಳನ್ನ ಗರ್ಭಿಣಿ ಮಾಡಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ನಡೆದಿದೆ.

    ಮಕ್ಕಳಿಲ್ಲದ ಕಾರಣ ಹೆಣ್ಣು ಮಗುವೊಂದನ್ನ ದತ್ತು ತೆಗೆದುಕೊಂಡು ಸಾಕಿದ್ದ 59 ವರ್ಷದ ಕೃಷ್ಣಪ್ಪ ತಾನೇ ಎತ್ತಿ, ಮುದ್ದಾಡಿ ಬೆಳೆಸಿದ್ದ ಏಳನೇ ತರಗತಿ ಓದುತ್ತಿರೋ ಮಗಳನ್ನ ನಿರಂತರವಾಗಿ ಲೈಂಗಿಕ ತೃಪ್ತಿಗೆ ಬಳಸಿಕೊಂಡಿದ್ದ. ಆ ಬಾಲಕಿ ಈಗ ಮೂರು ತಿಂಗಳ ಗರ್ಭೀಣಿ. ಕೃಷ್ಣಪ್ಪ ಬಾಲಕಿಗೆ ಕೆಲ ನಾಟಿ ಔಷಧಿಗಳನ್ನು ಕೊಡಿಸಿದ್ದ ಎಂದು ಹೇಳಲಾಗ್ತಿದೆ.

    ಇದೀಗ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರೋ ಕೊಪ್ಪ ತಾಲೂಕಿನ ಜೈಪುರ ಪೊಲೀಸರು ಆರೋಪಿ ಕೃಷ್ಣಪ್ಪನನ್ನ ಬಂಧಿಸಿದ್ದಾರೆ. ಸಂತ್ರಸ್ಥ ಬಾಲಕಿಗೆ ಕೊಪ್ಪದ ಮಹಿಳಾ ಸಾಂತ್ವಾನ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ.