Tag: Adolf Hitler

  • ಹಿಟ್ಲರ್‌ ವಾಚ್‌ ಹರಾಜು – ಮೊತ್ತ ಎಷ್ಟು ಗೊತ್ತಾ?

    ಹಿಟ್ಲರ್‌ ವಾಚ್‌ ಹರಾಜು – ಮೊತ್ತ ಎಷ್ಟು ಗೊತ್ತಾ?

    ವಾಷಿಂಗ್ಟನ್: ನಾಜಿ ನಾಯಕ ಅಡಾಲ್ಫ್ ಹಿಟ್ಲರ್‌ಗೆ ಸೇರಿದ್ದು ಎನ್ನಲಾದ ಕೈಗಡಿಯಾರವನ್ನು ಹರಾಜಿಗೆ ಹಾಕಲಾಗಿದ್ದು, ಭಾರೀ ಮೊತ್ತಕ್ಕೆ ಕೈಗಡಿಯಾರ ಮಾರಾಟವಾಗಿದೆ.

    ಅಮೆರಿಕದಲ್ಲಿ ನಡೆದ ಹರಾಜಿನಲ್ಲಿ ಹಿಟ್ಲರ್‌ ವಾಚ್‌ ಬರೋಬ್ಬರಿ 8.70 ಕೋಟಿ ರೂ. (1.1 ಮಿಲಿಯನ್‌ ಯುಎಸ್‌ ಡಾಲರ್‌)ಗೆ ಮಾರಾಟವಾಗಿದೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ಒಪ್ಪಿಗೆ ಸಿಗಬೇಕಾದರೆ ಮಾನವ ಹಕ್ಕು ಗೌರವಿಸಿ: ತಾಲಿಬಾನ್‍ಗೆ UN ಖಡಕ್ ಎಚ್ಚರಿಕೆ

    ಅನಾಮಧೇಯ ಬಿಡ್ಡರ್‌ಗೆ ಮಾರಾಟವಾದ ಹ್ಯೂಬರ್ ಕೈಗಡಿಯಾರವು ಸ್ವಸ್ತಿಕ್‌ ಮಾದರಿ ಚಿತ್ರ ಹಾಗೂ AH ಎಂಬ ಆಂಗ್ಲ ಅಕ್ಷರಗಳನ್ನು ಹೊಂದಿದೆ. ಇದನ್ನು ಅಲೆಕ್ಸಾಂಡರ್ ಹಿಸ್ಟಾರಿಕಲ್ ಆಕ್ಷನ್ಸ್ ಹರಾಜು ಹಾಕಿತು. ಇದು ಚಿನ್ನದ ರಿವರ್ಸಿಬಲ್ ವಾಚ್ ಆಗಿದೆ. ಇದನ್ನು ಹಿಟ್ಲರ್‌ಗೆ ಏಪ್ರಿಲ್ 20, 1933 ರಂದು ಅವರ 44ನೇ ಹುಟ್ಟುಹಬ್ಬದಂದು ಉಡುಗೊರೆಯಾಗಿ ನೀಡಲಾಗಿತ್ತು. ಇದನ್ನು ಐತಿಹಾಸಿಕ ಎರಡನೇ ಮಹಾಯುದ್ಧದ ಅವಶೇಷ ಎಂದು ವಿವರಿಸಲಾಗಿದೆ.

    ಗಡಿಯಾರವು ಮೂರು ದಿನಾಂಕಗಳನ್ನು ಒಳಗೊಂಡಿದೆ. ಹಿಟ್ಲರ್‌ನ ಜನ್ಮ ದಿನಾಂಕ, ಅವರು ಚಾನ್ಸೆಲರ್ ಆದ ದಿನಾಂಕ ಮತ್ತು ಮಾರ್ಚ್ 1933 ರಲ್ಲಿ ನಾಜಿ ಪಕ್ಷವು ಚುನಾವಣೆಯಲ್ಲಿ ಗೆದ್ದ ದಿನಾಂಕ ಇದೆ. ಹರಾಜು ಸಂಸ್ಥೆಯ ಪ್ರಕಾರ, ಸುಮಾರು 30 ಫ್ರೆಂಚ್ ಸೈನಿಕರು ಬರ್ಘೋಫ್ ಮೇಲೆ ದಾಳಿ ಮಾಡಿದಾಗ ವಾಚ್ ಅನ್ನು ವಶಕ್ಕೆ ಪಡೆದಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಬಿನ್ ಲಾಡೆನ್ ಕುಟುಂಬದಿಂದ ಪ್ರಿನ್ಸ್ ಚಾರ್ಲ್ಸ್ ಚಾರಿಟಿಗೆ ಭಾರೀ ಮೊತ್ತದ ದೇಣಿಗೆ

    ಈ ಕೈಗಡಿಯಾರದ ಹರಾಜನ್ನು ಯಹೂದಿ ನಾಯಕರು ಖಂಡಿಸಿದ್ದರು. ಮಾರಾಟವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದರು. 34 ಯಹೂದಿ ನಾಯಕರು ಸಹಿ ಮಾಡಿದ್ದ ಬಹಿರಂಗ ಪತ್ರದಲ್ಲಿ, ಈ ವಾಚ್‌ ಹರಾಜಿಗೆ ವಿರೋಧ ವ್ಯಕ್ತಪಡಿಸಲಾಗಿತ್ತು ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

    Live Tv
    [brid partner=56869869 player=32851 video=960834 autoplay=true]

  • ಹಿಟ್ಲರ್ ವೇಷದಲ್ಲಿ ಕಾಣಿಸಿಕೊಂಡ ಸಂಸದ!

    ಹಿಟ್ಲರ್ ವೇಷದಲ್ಲಿ ಕಾಣಿಸಿಕೊಂಡ ಸಂಸದ!

    ನವದೆಹಲಿ: ಆಂಧ್ರ ಪ್ರದೇಶಕ್ಕೆ ವಿಶೇಷ ಮೀಸಲಾತಿ ನೀಡುವಂತೆ ಒತ್ತಾಯಿಸಿ ತೆಲುಗು ದೇಶಂ ಪಕ್ಷದ (ಟಿಡಿಪಿ) ಸಂಸದ ನರಮಳ್ಳಿ ಶಿವಪ್ರಸಾದ್ ವಿಭಿನ್ನ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ.

    ಗುರುವಾರ ಕಲಾಪಕ್ಕೆ ಹಿಟ್ಲರ್ ವೇಷದಲ್ಲಿಯೇ ಶಿವಪ್ರಸಾದ್ ಬಂದಿದ್ದು, ದಿಟ್ಟ ಅಡಾಲ್ಫ್ ಹಿಟ್ಲರ್ ನಂತೆ ಕಂಡರು. ಈ ಹಿಂದೆಯೂ ಅವರು ಅನೇಕ ಪ್ರತಿಭಟನೆ ವೇಳೆ ಕೃಷ್ಣ, ಬಿ.ಆರ್.ಅಂಬೇಡ್ಕರ್, ಶಾಲಾ ವಿದ್ಯಾರ್ಥಿ, ಜಾನಪದ ಕಲಾವಿದ, ಪುಟ್ಟಪರ್ತಿ ಸಾಯಿ ಬಾಬಾ ಹಾಗೂ ಮಹಿಳೆಯ ವೇಷ ತೊಟ್ಟು ಕೇಂದ್ರ ಸರ್ಕಾರದ ವಿರುದ್ಧ ಅಣುಕು ಪ್ರತಿಭಟನೆ ಮಾಡಿದ್ದರು.

    ಹಿಟ್ಲರ್ ವೇಷದಲ್ಲಿ ಕಾಣಿಸಿಕೊಂಡು, ಸಂಸತ್ ಭವನದ ಮುಂದೆ ಟಿಡಿಪಿ ಪಕ್ಷದ ಉಳಿದ ಸಂಸದರ ಜೊತೆಗೂಡಿ ಪ್ರತಿಭಟನೆ ನಡೆಸಿದ್ದಾರೆ. ಎನ್‍ಡಿಎ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಆಂಧ್ರ ಪ್ರದೇಶಕ್ಕೆ ವಿಶೇಷ ಮೀಸಲಾತಿ ಸಂಬಂಧ ಅನುಧಾನ ನೀಡಬೇಕು ಎಂದು ಒತ್ತಾಯಿಸಿದರು.

    ಆಂಧ್ರ ಪ್ರದೇಶದ ಚಿತ್ತೂರು ಲೋಕಸಭಾ ಕ್ಷೇತ್ರದ ಸಂಸದ ಶಿವಪ್ರಸಾದ್ ಇತ್ತೀಚೆಗಷ್ಟೇ ಎನ್‍ಡಿಎ ಒಕ್ಕೂಟದಿಂದ ಹೊರಬಂದ ಟಿಡಿಪಿಯ ಸದಸ್ಯರಾಗಿದ್ದಾರೆ. ಅವೈಜ್ಞಾನಿಕ ರಾಜ್ಯ ವಿಭಜನೆಯಿಂದ ಆಗಿರುವ ನಷ್ಟ ಪರಿಹರಿಸಲು ಕೇಂದ್ರ ಸರ್ಕಾರ ಕೈ ಜೋಡಿಸಬಹುದು ಎನ್ನುವ ಕಾರಣಕ್ಕೆ ನಾವು ಬೆಂಬಲ ನೀಡಿದ್ದೇವು. ಆದರೆ ಬಿಜೆಪಿಯಿಂದ ನಮಗೆ ಅನ್ಯಾಯವಾಗಿದೆ ಎಂದು ಶಿವಪ್ರಸಾದ್ ದೂರಿದರು.

    ಸಂಸದ ಶಿವಪ್ರಸಾದ್ ಟಾಲಿವುಡ್ ನಟನಾಗಿದ್ದು, 20 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 2005 ರಲ್ಲಿ ಬಿಡುಗಡೆಯಾದ ಡೆಂಜರ್ ಸಿನಿಮಾದಲ್ಲಿ ಕುತಂತ್ರ ರಾಜಕಾರಣಿ ಪಾತ್ರ ನಿರ್ವಹಿಸಿ ಅತ್ಯುತ್ತಮ ಖಳ ನಟ ವಿಭಾಗದ ನಂದಿ ಪ್ರಶಸ್ತಿ ಪಡೆದಿದ್ದಾರೆ.