Tag: administrator

  • ಚಲನಚಿತ್ರ ನಿರ್ಮಾಪಕರ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸಿದ ಸರಕಾರ : ಚುನಾವಣೆ ಅನಿವಾರ್ಯ

    ಚಲನಚಿತ್ರ ನಿರ್ಮಾಪಕರ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸಿದ ಸರಕಾರ : ಚುನಾವಣೆ ಅನಿವಾರ್ಯ

    ರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ಬೆನ್ನೆಲ್ಲೆ, ಚಲನಚಿತ್ರ ನಿರ್ಮಾಪಕರ ಸಂಘದ ಚುನಾವಣೆ ಕೂಡ ನಡೆಸಬೇಕೆಂದು ಮತ್ತು ಚುನಾವಣೆ ನಡೆಯುವವರಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕೆಂದು ನಿರ್ಮಾಪಕ ಕೃಷ್ಣೇಗೌಡ ಸಹಕಾರ ಸಂಘಗಳ ಉಪ ನಿಬಂಧಕರಿಗೆ ದೂರು ನೀಡಿದ್ದರು. ಅದರ ಅನ್ವಯ, ಇದೀಗ ಆರು ತಿಂಗಳ ಅವಧಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.

    ಈಗಿರುವ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಅಧಿಕಾರ ಅವಧಿ ಸೆಪ್ಟೆಂಬರ್ 2021ಕ್ಕೆ ಮುಕ್ತಾಯವಾಗಿತ್ತು. ಆನಂತರ ಚುನಾವಣೆ ನಡೆಸದೇ ಅಧಿಕಾರಿ ಮುಂದುವರೆಸಲಾಗಿತ್ತು. ಹಾಗಾಗಿ ನಿರ್ಮಾಪಕ ಕೃಷ್ಣೇಗೌಡ ಅವರು ಸಹಕಾರ ಇಲಾಖೆಗೆ ಪತ್ರ ಬರೆದು, ‘ಸೆಪ್ಟೆಂಬರ್ 2021ರಲ್ಲೇ ಸಂಘದ ಪದಾವಧಿಯು ಮುಕ್ತಾಗೊಂಡಿರುವುದು ಕಂಡು ಬಂದಿದ್ದು, ಅವಧಿ ಮುಗಿದಿರುವ ಆಡಳಿತ ಮಂಡಳಿಯು ಅನಧಿಕೃತವಾಗಿ ಮುಂದುವರೆದಿರುತ್ತದೆ. ಸಂಘದ ಆಡಳಿತ ಮಂಡಳಿ ಚುನಾವಣೆಯನ್ನು ನಿಗದಿತ ಅವಧಿಯಲ್ಲಿ ನಡೆಸಲು ವಿಫಲವಾಗಿರುವುದರಿಂದ ಆಡಳಿತಾಧಿಕಾರಿಯನ್ನು ನೇಮಿಸಲಾಗಿದೆ ಎಂದು’ ಆದೇಶದ ಹೊರಡಿಸಲಾಗಿದೆ. ಇದನ್ನೂ ಓದಿ : ಜೈ ಶ್ರೀರಾಮ್ ಎನ್ನುತ್ತಾ ಮುಸ್ಲಿಮರನ್ನು ಹತ್ಯೆ ಮಾಡುವುದು, ಕಾಶ್ಮೀರ ಪಂಡಿತರ ಹತ್ಯೆಗೆ ಸಮ: ಸಾಯಿ ಪಲ್ಲವಿ ವೀಡಿಯೋ ವೈರಲ್

    ಸರಕಾರವು ಆಡಳಿತಾಧಿಕಾರಿಯನ್ನು ನೇಮಿಸಿರುವ ಕಾರಣದಿಂದಾಗಿ ಅಧ್ಯಕ್ಷರಾಗಿದ್ದ ಡಿ.ಕೆ.ರಾಮಕೃಷ್ಣ ಅವರು ರಾಜೀನಾಮೆ ಕೊಡುವಂತಾಗಿದೆ. ಅಲ್ಲದೇ, ಆಡಳಿತಾಧಿಕಾರಿಯು ಕೂಡಲೇ ಸಂಘದ ಪ್ರಭಾರ ವಹಿಸಿಕೊಂಡು, ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆಸಿ, ಚುನಾಯಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಿ, ಸರಕಾರಕ್ಕೆ ವರದಿ ಸಲ್ಲಿಸಬೇಕಾಗಿದೆ. ಈ ಆದೇಶ ಪ್ರತಿಯನ್ನು ನಿರ್ಮಾಪಕ ಕುಮಾರ್ ಶ್ರೀನಿವಾಸ್ ಮೂರ್ತಿ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡು ಶೀಘ್ರದಲ್ಲೇ ಚುನಾವಣೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

    Live Tv

  • ಹೈವೆಯಲ್ಲಿ ನಡೀತು ಖಾಸಗಿ ಬಸ್ ಸಿಬ್ಬಂದಿಯ ಫೈಟ್

    ಹೈವೆಯಲ್ಲಿ ನಡೀತು ಖಾಸಗಿ ಬಸ್ ಸಿಬ್ಬಂದಿಯ ಫೈಟ್

    -ರಾಡ್ ಹಿಡಿದು ಜಗಳವಾಡಿದ ಡ್ರೈವರ್, ಕಂಡಕ್ಟರ್

    ಉಡುಪಿ: ಖಾಸಗಿ ಬಸ್ ಸಿಬ್ಬಂದಿ ರಾಡ್ ಹಿಡಿದು ಹೆದ್ದಾರಿಯಲ್ಲಿ ಜಗಳವಾಡಿರುವ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನಲ್ಲಿ ನಡೆದಿದೆ.

    ಪ್ರಯಾಣಿಕರನ್ನು ಬಸ್ ಗೆ ಹತ್ತಿಸುವ ವಿಚಾರದಲ್ಲಿ ಎರಡು ಖಾಸಗಿ ಬಸ್ಸಿನ ಸಿಬ್ಬಂದಿ ನಡುವೆ ಜಟಾಪಟಿ ನಡೆದಿದೆ. ಕೋಹಿನೂರ್ ಬಸ್ ಚಾಲಕ ಸಫಿಯುಲ್ಲಾ, ಎಕೆಎಂಎಸ್ ಬಸ್ ಚಾಲಕ ಇರ್ಷಾದ್ ನಿರ್ವಾಹಕ ಪವನ್ ಶೆಟ್ಟಿ ನಡುವೆ ಗಲಾಟೆ ನಡೆದಿದೆ. ಈ ಘಟನೆ ಉಡುಪಿ ಜಿಲ್ಲೆ ಕಾಪು ತಾಲೂಕಿ ರಾಷ್ಟ್ರೀಯ ಹೆದ್ದಾರಿ 66ಯಲ್ಲಿ ನಡೆದಿದೆ.

    ಖಾಸಗಿ ಬಸ್ ಸಿಬ್ಬಂದಿ ಜಗಳವನ್ನ ಪ್ರಯಾಣಿಕರ ಮೊಬೈಲಿನಲ್ಲಿ ಸೆರೆಯಾಗಿದೆ. ಪ್ರಯಾಣಿಕರು ಬಸ್ಸಲ್ಲಿ ಇರುವಾಗಲೇ ಈ ಘಟನೆ ನಡೆದಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ಅಜಾಗರೂಕತೆಯಿಂದ ಅತಿ ವೇಗದಲ್ಲಿ ಎರಡೂ ಬಸ್ ಗಳನ್ನು ಚಲಾಯಿಸಲಾಗಿದೆ. ಬಸ್ ಓವರ್ ಟೇಕ್ ಮಾಡಿ ಅಡ್ಡಗಟ್ಟಿ ಬಸ್ ನ ಸಿಬ್ಬಂದಿ ರಾಡ್ ಹಿಡಿದು ಗೂಂಡಾಗಿರಿ ಮಾಡಿದ್ದಾರೆ.

    ನಾಲ್ವರು ಬಸ್ ಸಿಬ್ಬಂದಿ ಗೂಂಡಾ ವರ್ತನೆಯಿಂದ ಬಸ್‍ನಲ್ಲಿದ್ದ ಪ್ರಯಾಣಿಕರು ಕಂಗಾಲಾಗಿದ್ದಾರೆ. ಘಟನೆ ನಂತರ ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಯ ಕುರಿತು ಆಕ್ರೋಶ ವ್ಯಕ್ತವಾಗಿದೆ. ಸಾರಿಗೆ ಹಾಗೂ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿದ್ದಾರೆ. ಕಾಪು ಠಾಣೆಯಲ್ಲಿ ದೂರು ದೂರು ದಾಖಲಾಗಿದೆ.

  • ಕೊಲ್ಲರು ಮೂಕಾಂಬಿಕಾ ದೇಗುಲದ ಲಕ್ಷ್ಮಿ ಮಂಟಪ ಪ್ರವೇಶಿಸಿದ ಮಾಜಿ ಮಹಿಳಾ ಅಧಿಕಾರಿ- ಭಕ್ತರಿಂದ ಭಾರೀ ಆಕ್ರೋಶ

    ಕೊಲ್ಲರು ಮೂಕಾಂಬಿಕಾ ದೇಗುಲದ ಲಕ್ಷ್ಮಿ ಮಂಟಪ ಪ್ರವೇಶಿಸಿದ ಮಾಜಿ ಮಹಿಳಾ ಅಧಿಕಾರಿ- ಭಕ್ತರಿಂದ ಭಾರೀ ಆಕ್ರೋಶ

    ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಲಕ್ಷ್ಮಿ ಮಂಟಪವನ್ನು ವಿವಾದಿತ ಮಹಿಳಾ ಅಧಿಕಾರಿಯೊಬ್ಬರು ಪ್ರವೇಶಿಸಿ ಭಾರೀ ಚರ್ಚೆಗೆ ಕಾರಣವಾಗಿದ್ದಾರೆ. ಈ ವಿಡಿಯೋ ವಾಟ್ಸಾಪ್‍ನಲ್ಲಿ ಹರಿದಾಡುತ್ತಿದ್ದು, ಅರ್ಚಕರ ವಿರುದ್ಧ ಭಕ್ತರು ಕಿಡಿಕಾರಿದ್ದಾರೆ.

    ಬೈಂದೂರಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತಾಧಿಕಾರಿಯಾಗಿದ್ದ ಉಮಾ ಅವರು ಲಕ್ಷ್ಮಿ ಮಂಟಪ ಪ್ರವೇಶಿಸಿದ್ದಾರೆ. ದೇವಸ್ಥಾನದ ಒಳಗಿನ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಮುಖಂಡರೊಬ್ಬರು ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ವಿಡಿಯೋ ನೋಡಿದ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಯಾಕೆ ಪ್ರವೇಶಿಸಬಾರದು?
    ನವರಾತ್ರಿಯಲ್ಲಿ ಕೊಲ್ಲೂರಿನಲ್ಲಿ ಮಹಿಳೆಯರಿಗೆ ಬಾಗಿನ ಕೊಡುವ ಸಂಪ್ರದಾಯ ಇದೆ. ನವರಾತ್ರಿಯ ಮೊದಲ ದಿನ ಒಬ್ಬರಿಗೆ, ಎರಡನೇ ದಿನ ಇಬ್ಬರಿಗೆ ಹೀಗೆ ಕ್ರಮವಾಗಿ ನೀಡುತ್ತಾ ಬಂದು ಕೊನೆಯ (9ನೇ) ದಿನ ಗ್ರಾಮದ 9 ಜನ ಬ್ರಾಹ್ಮಣ ಮಹಿಳೆಯರಿಗೆ ಬಾಗಿನ ಕೊಡುವ ಸಂಪ್ರದಾಯವಿದೆ. ಆ ಸಂದರ್ಭದಲ್ಲಿ ಮಾತ್ರ ಮಹಿಳೆಯರು ಲಕ್ಷ್ಮಿ ಮಂಟಪ ಪ್ರವೇಶಿಸಬಹುದು. ಆದರೆ ಅಧಿಕಾರಿ ಉಮಾ ಅವರು ನವರಾತ್ರಿ ದೇವಸ್ಥಾನ ಭೇಟಿ ಸಂದರ್ಭದಲ್ಲಿ ಲಕ್ಷ್ಮಿ ಮಂಟಪ ಪ್ರವೇಶಿಸಿದ್ದರಿಂದ ಅಪಚಾರ ಆಗಿದೆ ಎಂಬುದು ಸದ್ಯದ ಆರೋಪ.

    ಉಮಾ ಅವರು ಅಧಿಕಾರದಲ್ಲಿ ಅನೇಕ ಅಕ್ರಮಗಳು ನಡೆದಿದ್ದು, ಭಕ್ತರೊಬ್ಬರು ಹರಕೆ ನೀಡಿದ್ದ ಚಿನ್ನವನ್ನು ಅಡ ಇಟ್ಟು ದೇವಳದ ಸಿಬ್ಬಂದಿ ಗೋಲ್‍ಮಾಲ್ ಮಾಡಿದ್ದರು. ಅವರು ಅಧಿಕಾರದಲ್ಲಿ ಇರುವುದಾಗ ಲಕ್ಷ್ಮಿ ಮಂಟಪ ಪ್ರವೇಶಕ್ಕೆ ಅವಕಾಶ ಕೊಟ್ಟಿತ್ತು. ಆದರೆ ಈಗ ವಿವಾದ ಎದುರಿಸುತ್ತಿರುವಾಗ ದೇವಸ್ಥಾನ ಹಾಗೂ ಲಕ್ಷ್ಮಿ ಮಂಟಪ ಪ್ರವೇಶ ನೀಡಿದ್ದಕ್ಕೆ ಭಾರೀ ಟೀಕೆ ವ್ಯಕ್ತವಾಗಿದೆ.

    ಉಮಾ ಈ ಹಿಂದೆ ಅಧಿಕಾರಿಯಾಗಿದ್ದರು ಎಂಬ ಕಾರಣಕ್ಕೆ ಕೆಲ ಅರ್ಚಕರು ಲಕ್ಷ್ಮಿ ಮಂಟಪ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಇದನ್ನು ನೋಡಿದ ಮತ್ತೊಂದು ಗುಂಪು ಇದಕ್ಕೆ ತಗಾದೆ ಎತ್ತಿದೆ. ಇತ್ತ ಭಕ್ತರು ಕೂಡ ಅರ್ಚಕರ ವಿರುದ್ಧ ಕಿಡಿಕಾರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೇಲಾಧಿಕಾರಿಗಳ ಕಿರುಕುಳ ತಾಳಲಾರದೇ ನಿರ್ವಾಹಕ ಆತ್ಮಹತ್ಯೆ!

    ಮೇಲಾಧಿಕಾರಿಗಳ ಕಿರುಕುಳ ತಾಳಲಾರದೇ ನಿರ್ವಾಹಕ ಆತ್ಮಹತ್ಯೆ!

    ರಾಯಚೂರು: ಮೇಲಾಧಿಕಾರಿಗಳ ಕಿರುಕುಳ ತಾಳಲಾರದೇ ವಿಷ ಸೇವಿಸಿ, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಎನ್‍ಇ ಕೆಎಸ್‌ಆರ್‌ಟಿಸಿ ಲಿಂಗಸೂರು ಡಿಪೋ ಬಸ್ ನಿರ್ವಾಹಕರೊಬ್ಬರು ಶನಿವಾರ ತಡರಾತ್ರಿ ಮೃತಪಟ್ಟಿದ್ದಾರೆ.

    ಲಿಂಗಸೂರು ಜಂಗಿರಾಂಪುರ ತಾಂಡಾ ಟೋಪಣ್ಣ ಆತ್ಮಹತ್ಯೆ ಮಾಡಿಕೊಂಡ ನಿರ್ವಾಹಕ. ಟೋಪಣ್ಣನ ಸಾವಿಗೆ ಮೇಲಾಧಿಕಾರಿಗಳಾದ ನಾಗರಾಜ್, ರಾಘವೇಂದ್ರ ಕಾರಣ ಅಂತ ಮೃತನ ಕುಟುಂಬದವರು ಡಿಪೋ ಮುಂದೆ ಶವವಿಟ್ಟು, ಬಸ್ಸುಗಳು ಹೊರಗೆ ಹೋಗದಂತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಕಿರುಕುಳ ಕೊಟ್ಟ ಮೇಲಾಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

    ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರೂ ಕೆಲವರು ಕಲ್ಲು ತೂರಾಟ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.

    ಏನಿದು ಪ್ರಕರಣ?
    ಸೆಪ್ಟಂಬರ್ 3 ರಂದು ಟೋಪಣ್ಣ ವಿಷ ಸೇವಿಸಿದ್ದರು. ತಕ್ಷಣವೇ ಅವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆ ಅಗತ್ಯವಾಗಿದ್ದರಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ತಡರಾತ್ರಿ ಟೋಪಣ್ಣ ಮೃತಪಟ್ಟಿದ್ದರು. ಇದರಿಂದ ಆಕ್ರೋಶ ವ್ಯಕ್ತಪಡಿಸಿದ ಮೃತರ ಸಂಬಂಧಿಕರು ಡಿಪೋ ಮುಂದೆ ಟೆಂಟ್ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

    ಮೃತ ಟೋಪಣ್ಣ ಅವರನ್ನು ಮೇಲಾಧಿಕಾರಿಗಳು ಲಿಂಗಸುಗೂರಿನಿಂದ ಸಿಂಧನೂರಿಗೆ ವರ್ಗಾವಣೆ ಮಾಡಿದ್ದರು. ಆದರೆ ಕೆಲಸ ನೀಡದೇ ಲಂಚಕೊಡುವಂತೆ ಪೀಡಿಸುತ್ತಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

    ಮೃತನ ಕುಟುಂಬದ ಜೊತೆ ಮಾತುಕತೆ ನಡೆಸಿದ ಅಧಿಕಾರಿಗಳು, ಆಸ್ಪತ್ರೆಯ ಖರ್ಚು, ಕುಟುಂಬದ ಒಬ್ಬರಿಗೆ ಉದ್ಯೋಗ ಹಾಗೂ ಸ್ವಲ್ಪ ಮಟ್ಟದ ಪರಿಹಾರ ಧನವನ್ನು ನೀಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನುವ ವಿಚಾರ ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/JKTPSKrbGdk

  • ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕ ವಿಚಾರ- ವಿಚಾರಣೆಯಿಂದ ಹಿಂದೆ ಸರಿದ ನ್ಯಾ. ಎಸ್‍ಕೆ ಮುಖರ್ಜಿ

    ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕ ವಿಚಾರ- ವಿಚಾರಣೆಯಿಂದ ಹಿಂದೆ ಸರಿದ ನ್ಯಾ. ಎಸ್‍ಕೆ ಮುಖರ್ಜಿ

    ಬೆಂಗಳೂರು: ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣದ ವಿಚಾರಣೆಯಿಂದ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಹಿಂದೆ ಸರಿದಿದ್ದಾರೆ.

    “ನನ್ನ ವಿರುದ್ಧ ಪ್ರತಿವಾದಿ ಮಠದವರು ಪೂರ್ವಾಗ್ರಹ ಭಾವನೆ ವ್ಯಕ್ತಪಡಿಸಿರುವುದರಿಂದ ವಿಚಾರಣೆಯಿಂದ ಹಿಂದೆ ಸರಿಯುತ್ತಿದ್ದೇನೆ” ಎಂಬ ಕಾರಣ ನೀಡಿ ನ್ಯಾ. ಎಸ್.ಕೆ. ಮುಖರ್ಜಿ ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ.

    ಈ ಮೂಲಕ ರಾಘವೇಶ್ವರ ಶ್ರೀ ವಿರುದ್ಧದ ದಾಖಲಾದ ಪ್ರಕರಣದಿಂದ ಹಿಂದೆ ಸರಿದ ಏಳನೇ ನ್ಯಾಯಮೂರ್ತಿಯಾಗಿದ್ದಾರೆ.

    ಮುಖರ್ಜಿ ಅವರು ಕೋರ್ಟ್‌ನಲ್ಲಿ ನಡೆಸಿದ ವಿಚಾರಣೆ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಈ ವರದಿ ನೋಡಿದರೆ ಅವರು ಈ ಪ್ರಕರಣದಲ್ಲಿ ಪೂರ್ವಗ್ರಹ ಪೀಡಿತರಾಗಿದ್ದಾರೆ. ಈ ಕಾರಣಕ್ಕೆ ನಮಗೆ ಈ ಪ್ರಕರಣದಲ್ಲಿ ನ್ಯಾಯ ಸಿಗುವ ಸಾಧ್ಯತೆ ಕಾಣುತ್ತಿಲ್ಲ. ಆದ್ದರಿಂದ ಅವರು  ತಮ್ಮ ಮುಂದಿರುವ ರಾಮಚಂದ್ರಾಪುರ ಮಠದ ವಿರುದ್ಧದ ಪಿಐಎಲ್‌ ವಿಚಾರಣೆಯಿಂದ ಹಿಂದೆ ಸರಿಯಬೇಕು ಎಂದು ಅಖಿಲ ಹವ್ಯಕ ಮಹಾಸಭಾ ಈ ಹಿಂದೆ ಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸಿತ್ತು.

    ಈ ಹಿಂದೆ ಅತ್ಯಾಚಾರ ಆರೋಪ ಬಂದಾಗ ಆರು ನ್ಯಾಯಾಧೀಶರು ವಿಚಾರಣೆ ನಡೆಸೋದಿಲ್ಲ ಅಂತ ಪ್ರಕರಣದಿಂದ ಹಿಂದೆ ಹೋಗಿದ್ರು. ನ್ಯಾ. ಕೆ.ಎನ್ ಫಣೀಂದ್ರ, ನ್ಯಾ. ರಾಮ್‍ಮೋಹನ್ ರೆಡ್ಡಿ, ನ್ಯಾ. ಎನ್ ಕುಮಾರ್, ನ್ಯಾ. ಹೆಚ್‍ಜಿ ರಮೇಶ್, ನ್ಯಾ ಭಜಂತ್ರಿ ಹಾಗೂ ನ್ಯಾ. ಸುಭ್ರೋ ಕಮಲ್ ಮುಖರ್ಜಿ ವಿವಿಧ ಕಾರಣಗಳಿಂದ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದರು.

    ರಾಮಚಂದ್ರಪುರ ಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಬೇಕೆಂದು ಎದುರ್ಕಳ ಈಶ್ವರ ಭಟ್ ಮತ್ತು ಜೈಕೃಷ್ಣ ಅವರು ಹೈಕೋರ್ಟ್ ಮೊರೆ ಹೋಗಿದ್ದರು. 22 ಬ್ಯಾಂಕ್ ಅಕೌಂಟ್‍ಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿತ್ತು. ವಿಚಾರಣೆ ನಡೆಸಿದ್ದ ಹೈಕೋರ್ಟ್ ಸರ್ಕಾರಕ್ಕೆ ತನಿಖೆ ನಡೆಸುವಂತೆ ಆದೇಶಿಸಿತ್ತು.

    ಮನವಿಯಲ್ಲಿ ಏನಿತ್ತು?: ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಿಸಬೇಕು ಮತ್ತು ಸ್ವಾಮೀಜಿ ಮಠದಲ್ಲಿದ್ದು ಅಧಿಕಾರ ಚಲಾಯಿಸುವುದನ್ನು ತಡೆಯಬೇಕು ಎಂದು ಒತ್ತಾಯಿಸಿಎದುರ್ಕಳ ಈಶ್ವರ ಭಟ್ ಮತ್ತು ಜೈಕೃಷ್ಣ ಅವರು 2016ರ ಏಪ್ರಿಲ್ 30 ರಂದು ಅಂದಿನ ಮುಖ್ಯಕಾರ್ಯದರ್ಶಿ ಅರವಿಂದ್ ಜಾಧವ್ ಅವರಿಗೆ ಮನವಿ ಸಲ್ಲಿಸಿದ್ದರು. ಪೀಠಾಧಿಪತಿ ಸ್ಥಾನದಿಂದ ರಾಘವೇಶ್ವರ ಶ್ರೀಗಳನ್ನು ಕೆಳಗಿಳಿಸಬೇಕು. ಮಠದ ಸ್ಥಿರ ಮತ್ತು ಚರಾಸ್ತಿ ಮೇಲೆ ನಿಯಂತ್ರಣ ಹೊಂದದಂತೆ ಸೂಚಿಸಬೇಕು. ಪೂಜಾ ಕಾರ್ಯವನ್ನು ಹೊರತು ಪಡಿಸಿ ಮಠದ ಎಲ್ಲ ವ್ಯವಹಾರಗಳನ್ನು ನೋಡಿಕೊಳ್ಳಲು ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಧ್ಯಕ್ಷತೆಯಲ್ಲಿ ಸಮಿತಿ ನೇಮಿಸಬೇಕೆಂದು ಅವರು ಮನವಿ ಮಾಡಿಕೊಂಡಿದ್ದರು.

     

  • ನೀವು ವಾಟ್ಸಪ್ ಅಡ್ಮಿನ್ ಆಗಿದ್ದೀರಾ? ಹಾಗಾದ್ರೆ ಹುಷಾರಾಗಿರಿ

    ನೀವು ವಾಟ್ಸಪ್ ಅಡ್ಮಿನ್ ಆಗಿದ್ದೀರಾ? ಹಾಗಾದ್ರೆ ಹುಷಾರಾಗಿರಿ

    ವಾರಣಾಸಿ: ನೀವು ಫೇಸ್‍ಬುಕ್/ ವಾಟ್ಸಪ್ ಗ್ರೂಪಿನ ಅಡ್ಮಿನ್ ಆಗಿದ್ದೀರಾ? ಹಾಗಾದ್ರೆ ಹುಷಾರಾಗಿರಿ. ನಿಮ್ಮ ಗ್ರೂಪಿನ ಯಾವೊಬ್ಬ ಸದಸ್ಯ ಸುಳ್ಳು ಮಾಹಿತಿ, ವದಂತಿಯನ್ನು ಶೇರ್ ಮಾಡಿದ್ರೆ ನೀವು ಜೈಲಿಗೆ ಹೋಗುವ ಪ್ರಸಂಗ ಬಂದರೂ ಆಶ್ಚರ್ಯವೆನಿಲ್ಲ.

    ಹೌದು. ಸಾಮಾಜಿಕ ಜಾಲತಾಣಗಳ ಮೂಲಕ ಗಲಭೆಗಳಿಗೆ ಪ್ರಚೋದನೆ ನೀಡುವಂತಹ ವಿಚಾರಗಳನ್ನು ಹಾಕುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಉತ್ತರಪ್ರದೇಶದ ವಾರಣಾಸಿ ಜಿಲ್ಲೆಯ ಪೊಲೀಸರು ಮುಂದಾಗಿದ್ದಾರೆ.

    ಈ ವಿಚಾರವಾಗಿ ವಾರಣಾಸಿಯ ಜಿಲ್ಲಾಧಿಕಾರಿ ಯೋಗೇಶ್ವರ್ ರಾಮ್ ಮಿಶ್ರಾ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿತಿನ್ ತಿವಾರಿ ಜಂಟಿ ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ, ವದಂತಿಯನ್ನು ಹರಡಿದರೆ ಆ ಗ್ರೂಪಿನ ಅಡ್ಮಿನ್ ಮೇಲೆ ಸೈಬರ್ ಕ್ರೈಮ್ ಕಾನೂನು, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ನ್ಯೂಸ್ ಹೆಸರಿನಲ್ಲಿ ಗ್ರೂಪ್‍ಗಳು ಕ್ರಿಯೇಟ್ ಆಗಿವೆ. ಆದರೆ ಈ ಗ್ರೂಪ್‍ಗಳಲ್ಲಿ ಸುಳ್ಳು ಸುದ್ದಿಗಳು ಪ್ರಕಟವಾಗುತ್ತಿದ್ದು, ಕ್ರಾಸ್ ಚೆಕ್ ಮಾಡದೇ ಸುದ್ದಿಗಳನ್ನು ಶೇರ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲು ಮುಂದಾಗಿದ್ದೇವೆ ಎಂದು ಜಿಲ್ಲಾಡಳಿತ ತಿಳಿಸಿದೆ.

    ಇದನ್ನೂ ಓದಿ:ವಾಟ್ಸಪ್‍ನಲ್ಲಿ ಸ್ಮೈಲೀ ಕಳುಹಿಸಿದ್ರೆ ಬೀಳುತ್ತೆ ಕೇಸ್!

    ಗ್ರೂಪಿನಲ್ಲಿ ಸದಸ್ಯನೊಬ್ಬ ಸುಳ್ಳು ಸುದ್ದಿ ಅಥವಾ ಧಾರ್ಮಿಕ ಸೌಹಾರ್ದತೆಗೆ ಅಡ್ಡಿ ತರುವಂತಹ ವಿಚಾರ, ವದಂತಿಯನ್ನು ಹಾಕಿದ್ರೆ ಅಡ್ಮಿನ್ ಆದವನು ಕೂಡಲೇ ಆತನನ್ನು ಗ್ರೂಪ್‍ನಿಂದ ಕಿತ್ತು ಹಾಕಬೇಕು. ಈ ರೀತಿಯ ಸಂದೇಶಗಳು ಹರಿದಾಡಿದರೆ ಜನರು ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ನೀಡಬಹುದು. ಬುಧವಾರ ಈ ಆದೇಶ ಪ್ರಕಟವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ  ವ್ಯಕ್ತಪಡಿಸಲು ಅವಕಾಶವಿದೆ. ಇದರ ಜೊತೆಗೆ ಜವಾಬ್ದಾರಿಯೂ ಇದೆ ಎಂದು ತಿಳಿಸಲಾಗಿದೆ.

    ವಾರಣಾಸಿ ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುತ್ತಿರುವ ಲೋಕಸಭಾ ಕ್ಷೇತ್ರವಾಗಿದ್ದು, ಭಾರತದಲ್ಲಿ ಪ್ರಸ್ತುತ 20 ಕೋಟಿಗೂ ಅಧಿಕ ಮಂದಿ ವಾಟ್ಸಪ್ ಬಳಸುತ್ತಿದ್ದಾರೆ.

    ಇದನ್ನೂ ಓದಿ:ಇನ್ನು ಮುಂದೆ ವಾಟ್ಸಪ್‍ನಲ್ಲೂ ಹಣ ಸೆಂಡ್ ಮಾಡಬಹುದು!