Tag: adivi sesh

  • ಅಡವಿ ಶೇಷ್, ಮೃಣಾಲ್ ನಟನೆಯ ‘ಡಕಾಯಿಟ್’ ಚಿತ್ರದ ಟೀಸರ್ ಔಟ್

    ಅಡವಿ ಶೇಷ್, ಮೃಣಾಲ್ ನಟನೆಯ ‘ಡಕಾಯಿಟ್’ ಚಿತ್ರದ ಟೀಸರ್ ಔಟ್

    ಡವಿ ಶೇಷ್, ಮೃಣಾಲ್ ಠಾಕೂರ್, ಅನುರಾಗ್ ಕಶ್ಯಪ್ (Anurag Kashyap) ನಟನೆಯ ‘ಡಕಾಯಿಟ್’ ಚಿತ್ರದ (Dacoit) ಟೀಸರ್ ರಿಲೀಸ್ ಆಗಿದೆ. ಬಾಲಿವುಡ್ ನಟ ಅನುರಾಗ್ ಮತ್ತು ಅಡವಿ ಶೇಷ್ ಕಾಂಬಿನೇಷನ್ ಮಸ್ತ್ ಆಗಿದೆ. ಟೀಸರ್ ನೋಡಿರೋ ಅಭಿಮಾನಿಗಳಿಗೆ ಚಿತ್ರದ ಬಗ್ಗೆ ಕುತೂಹಲ ಮೂಡಿಸಿದೆ. ಇದನ್ನೂ ಓದಿ:ದೀಕ್ಷಿತ್ ಶೆಟ್ಟಿ ನಿರ್ಮಾಣದ ‘ವಿಡಿಯೋ’ ಚಿತ್ರದ ಟೀಸರ್ ರಿಲೀಸ್

    ಟೀಸರ್ ಶುರುವಿನಲ್ಲೇ ಅಡವಿ ಶೇಷ್ ಖಡಕ್ ಡೈಲಾಗ್‌ನಿಂದ ಶುರುವಾಗಿದೆ. ಅನುರಾಗ್ ಕಶ್ಯಪ್ ಖಡಕ್ ಅವತಾರ, ಮೃಣಾಲ್ ನಟನೆ, ಹೀರೋ ಅಡವಿ ಶೇಷ್ ಅವರ ಆ್ಯಕ್ಷನ್ ಸೀನ್ ನೋಡಿದ್ರೆ ಭಯಂಕರ ಎಂದೆನಿಸುತ್ತಿದೆ. ಪ್ರೀತಿ, ದ್ರೋಹ, ಪ್ರತಿಕಾರದ ಕಥೆಯೇ ಡಕಾಯಿಟ್ ಚಿತ್ರವಾಗಿದ್ದು, ಇದರ ಬಗ್ಗೆ ಟೀಸರ್‌ನಲ್ಲಿ ಸುಳಿವು ಬಿಟ್ಟು ಕೊಟ್ಟಿದೆ. ಇದನ್ನೂ ಓದಿ: ಗರ್ಲ್‌ಫ್ರೆಂಡ್ ಗೌರಿ ಜೊತೆ ಆಮೀರ್ ಖಾನ್ ಲಂಚ್ ಡೇಟ್

    ‘ಮಹಾರಾಜ’ ಚಿತ್ರದ ಬಳಿಕ ಮತ್ತೊಮ್ಮೆ ದಕ್ಷಿಣದ ಸಿನಿಮಾ ‘ಡಕಾಯಿಟ್’ನಲ್ಲಿ ಬಾಲಿವುಡ್ ನಟ ಕಮ್ ನಿರ್ದೇಶಕ ಅನುರಾಗ್ ಕಶ್ಯಪ್ ನಟಿಸಿದ್ದಾರೆ. ಈ ಸಿನಿಮಾದಲ್ಲೂ ಅವರಿಗೆ ಪವರ್‌ಫುಲ್ ಪಾತ್ರವೇ ಸಿಕ್ಕಿದೆ. ಈ ವರ್ಷದ ಅಂತ್ಯ ಡಿ.25ರಂದು ಸಿನಿಮಾ ರಿಲೀಸ್ ಆಗಲಿದೆ. ತೆಲುಗು, ತಮಿಳು, ಹಿಂದಿಯಲ್ಲಿ ರಿಲೀಸ್‌ಗೆ ಸಜ್ಜಾಗಿದೆ.

    ಮೃಣಾಲ್ ಮುಂಬೈನ ಬಾಲಿವುಡ್ ನಟಿಯಾಗಿದ್ರು. ಅವರಿಗೆ ಹೆಚ್ಚು ಜನಪ್ರಿಯತೆ ತಂದು ಕೊಟ್ಟಿದ್ದು ದಕ್ಷಿಣದ ಸಿನಿಮಾಗಳು. ಸೀತಾ ರಾಮಂ, ಹಾಯ್ ನಾನ್ನಾ, ಫ್ಯಾಮಿಲಿ ಸ್ಟಾರ್ ಚಿತ್ರಗಳು ಸಕ್ಸಸ್ ಕಂಡಿವೆ. ಈಗ ಮತ್ತೆ ‘ಡಕಾಯಿಟ್’ ಚಿತ್ರದ ಮೂಲಕ ಅವರು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

  • ‘ಗೂಢಚಾರಿ’ ಚಿತ್ರಕ್ಕೆ 6 ವರ್ಷದ ಸಂಭ್ರಮ- ಸೀಕ್ವೆಲ್ ಬಗ್ಗೆ ಹೊರಬಿತ್ತು ಇಂಟರೆಸ್ಟಿಂಗ್‌ ಅಪ್‌ಡೇಟ್

    ‘ಗೂಢಚಾರಿ’ ಚಿತ್ರಕ್ಕೆ 6 ವರ್ಷದ ಸಂಭ್ರಮ- ಸೀಕ್ವೆಲ್ ಬಗ್ಗೆ ಹೊರಬಿತ್ತು ಇಂಟರೆಸ್ಟಿಂಗ್‌ ಅಪ್‌ಡೇಟ್

    ತೆಲುಗು ಚಿತ್ರರಂಗದಲ್ಲಿ ದಾಖಲೆ ಬರೆದ ಸೂಪರ್ ಹಿಟ್ ಸಿನಿಮಾ ‘ಗೂಢಚಾರಿ’ಗೆ (Goodachari) 6 ವರ್ಷದ ಸಂಭ್ರಮ. ಶಶಿ ಕಿರಣ್ ಟಿಕ್ಕಾ ನಿರ್ದೇಶನದ ಈ ಸ್ಪೈ ಆ್ಯಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಅಡಿವಿ ಶೇಷ್ ಹೀರೊ ಆಗಿ ನಟಿಸಿದ್ದರು. ಯಾವುದೇ ನಿರೀಕ್ಷೆ ಇಲ್ಲದೇ ಬಂದ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಅಂದಾಜು 6 ಕೋಟಿ ರೂ. ಬಜೆಟ್ ಸಿನಿಮಾ 25-30 ಕೋಟಿ ರೂ. ದೋಚಿತ್ತು. ಈಗ ‘ಗೂಢಚಾರಿ 2’ (Goodachari 2) ಸಿನಿಮಾ ನಿರ್ಮಾಣವಾಗುತ್ತಿದೆ. ಈ ಚಿತ್ರದ ಶೇ.40ರಷ್ಟು ಮುಕ್ತಾಯಗೊಂಡಿದೆ. ಬಹಳ ಅದ್ಧೂರಿಯಾಗಿ ‘ಗೂಢಚಾರಿ 2’ ನಿರ್ಮಾಣ ಮಾಡಲಾಗುತ್ತಿದೆ. ಗೂಢಚಾರಿಗೆ 6 ವರ್ಷದ ಸಂಭ್ರಮದಲ್ಲಿ ‘ಗೂಢಚಾರಿ 2’ ಸಿನಿಮಾದ ಆರು ಸ್ಟನ್ನಿಂಗ್ ಲುಕ್ ಬಿಡುಗಡೆ ಮಾಡಲಾಗಿದೆ.

    ‘ಗೂಢಚಾರಿ’ ಬಗ್ಗೆ ಮಾತಾನಾಡಿದ ನಾಯಕ ಅಡಿವಿ ಶೇಷ್(Adivi Sesh), ಗೂಢಚಾರಿ ಹಲವು ಕಾರಣಗಳಿಂದ ವಿಶೇಷ ಚಿತ್ರವಾಗಿದೆ. ಸದ್ಯ ‘ಗೂಢಚಾರಿ 2’ ದೊಡ್ಡ ಮಟ್ಟದಲ್ಲಿ ಮೂಡಿ ಬರುತ್ತಿದೆ. G2 ಅಭಿಮಾನಿಗಳಿಗೆ ಸಖತ್ ಟ್ರೀಟ್ ನೀಡಲಿದೆ ಎಂದು ತಿಳಿಸಿದರು.‌ ಇದನ್ನೂ ಓದಿ:ತರುಣ್ –ಸೋನಲ್ ಮದುವೆ: ಲವ್‍ ಸ್ಟೋರಿಗೆ ದರ್ಶನ್ ಕಾರಣ

    ಸೂಪರ್ ಹಿಟ್ ಸಿನಿಮಾ ಗೂಢಚಾರಿ ಸೀಕ್ವೆಲ್‌ಗೆ ಸ್ವತಃ ಅಡಿವಿ ಶೇಷ್ ಕಥೆ ಬರೆದಿದ್ದು, ‘ಕಾರ್ತೀಕೇಯ- 2’, ‘ಮೇಜರ್’ ಹಾಗೂ ‘ಕಾಶ್ಮೀರಿ ಫೈಲ್ಸ್’ನಂತ ಸೂಪರ್ ಹಿಟ್ ಸಿನಿಮಾ ನಿರ್ಮಾಣ ಮಾಡಿರೋ ದೊಡ್ಡ ನಿರ್ಮಾಣ ಸಂಸ್ಥೆಗಳು ‘ಗೂಢಚಾರಿ- 2’ಗೆ ಬಂಡವಾಳ ಹೂಡುತ್ತಿವೆ. ಪೀಪಲ್ ಮೀಡಿಯಾ ಫ್ಯಾಕ್ಟರಿ, ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಮತ್ತು ಎಕೆ ಎಂಟಟೈನ್ಮೆಂ ಟ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಬ್ಯಾನರ್ ನಡಿ ಟಿಜಿ. ವಿಶ್ವಪ್ರಸಾದ್ ಮತ್ತು ಅಭಿಷೇಕ್ ಅಗರ್ ವಾಲ್ ಜಂಟಿಯಾಗಿ ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ.

    ‘ಗೂಢಚಾರಿ’ ಚಿತ್ರದಲ್ಲಿ ಅಡಿವಿ ಶೇಷ್ ಜೊತೆ ಶೋಬಿತಾ, ಜಗಪತಿ ಬಾಬು, ಪ್ರಕಾಶ್ ರಾಜ್ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದರು. ಸೂಪರ್ ಸಿನಿಮಾ ಸೀಕ್ವೆಲ್‌ನಲ್ಲೇ ನಟಿಸಿ ಮತ್ತೊಮ್ಮೆ ಗೆಲ್ಲುವ ಉತ್ಸಾಹದಲ್ಲಿ ಅಡಿವಿ ಶೇಷ್ ಇದ್ದಾರೆ. ಅಡಿವಿ ಶೇಷ್ ನಟನೆಯ ‘ಮೇಜರ್’ ಚಿತ್ರದ ಎಡಿಟರ್ ವಿನಯ್ ಕುಮಾರ್ ಸಿರಿಗಿನೀದಿ ಈ ಚಿತ್ರದ ಮೂಲಕ ನಿರ್ದೇಶಕನಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. 2025ರಲ್ಲಿ ‘ಗೂಢಚಾರಿ 2’ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

  • ಅಡಿವಿ ಶೇಷ್ ‘ಗೂಢಾಚಾರಿ-2’ಗೆ ಇಮ್ರಾನ್ ಹಶ್ಮಿ ಎಂಟ್ರಿ

    ಅಡಿವಿ ಶೇಷ್ ‘ಗೂಢಾಚಾರಿ-2’ಗೆ ಇಮ್ರಾನ್ ಹಶ್ಮಿ ಎಂಟ್ರಿ

    ಟಾಲಿವುಡ್‌ನಲ್ಲಿ ನೂತನ ದಾಖಲೆ ಮಾಡಿದ ಸೂಪರ್ ಹಿಟ್ ಚಿತ್ರ ‘ಗೂಢಚಾರಿ’ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಅಡಿವಿ ಶೇಷ್ (Aditi Sesh) ಅವರ ಅಭಿನಯದಲ್ಲಿ ಮೂಡಿಬಂದ ಆ್ಯಕ್ಷನ್-ಥ್ರಿಲ್ಲರ್ ಶೈಲಿಯ ಆ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮವಾಗಿ ಕಲೆಕ್ಷನ್ ಮಾಡಿತ್ತು. ಈಗ ಈ ಸಿನಿಮಾಗೆ ಸೀಕ್ವೆಲ್ ಸಿದ್ಧವಾಗುತ್ತಿರುವುದು ಕೂಡ ಗೊತ್ತಿದೆ. ‘ಗೂಢಚಾರಿ 2’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ರಿಲೀಸ್ ಆಗಿ ಸಖತ್ ಸದ್ದು ಮಾಡಿದೆ. ಇದೀಗ ‘ಗೂಢಚಾರಿ’ ಸೀಕ್ವೆಲ್‌ಗೆ ಬಾಲಿವುಡ್ ಸ್ಟಾರ್ ಎಂಟ್ರಿಯಾಗಿದ್ದಾರೆ.

    ‘ಗೂಢಚಾರಿ 2’ (Goodachari 2) ಸಿನಿಮಾದಲ್ಲಿ ಬಾಲಿವುಡ್ ಖ್ಯಾತ ನಟ ಇಮ್ರಾನ್ ಹಶ್ಮಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಟೈಗರ್ 3 ಸಿನಿಮಾ ಮೂಲಕ ಪ್ರೇಕ್ಷಕರಿಂದ ಚಪ್ಪಾಳೆ ಪಡೆದಿರುವ ಅವರೀಗ ಟಾಲಿವುಡ್‌ನತ್ತ ಹೆಜ್ಜೆ ಇಟ್ಟಿದ್ದಾರೆ. ‘ಗೂಢಚಾರಿ’ ಬಳಗ ಇಮ್ರಾನ್ (Emraan Hashmi) ಫಸ್ಟ್ ಲುಕ್ ರಿಲೀಸ್ ಮಾಡಿ ಅವರನ್ನು ಸ್ವಾಗತಿಸಿದೆ. ಆದ್ರೆ ಯಾವ ಪಾತ್ರದಲ್ಲಿ ಇಮ್ರಾನ್ ನಟಿಸುತ್ತಿದ್ದಾರೆ ಎಂಬ ಕುತೂಹಲವನ್ನು ಹಾಗೇ ಉಳಿಸಿಕೊಂಡಿದೆ. ಇಮ್ರಾನ್ ಹಶ್ಮಿ ಎಂಟ್ರಿಗೆ ಇಡೀ ಚಿತ್ರತಂಡ ಖುಷಿಯಾಗಿದೆ. ಇದನ್ನೂ ಓದಿ:ಕಾಟೇರ ನಿರ್ದೇಶಕನಿಗೆ ಎರಡು ಸಿನಿಮಾಗಳ ಕಾಲ್ ಶೀಟ್ ಕೊಟ್ಟ ದರ್ಶನ್

    ‘ಗೂಢಚಾರಿ 2’ ಸಿನಿಮಾ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಆಗಿದ್ದು, ದೊಡ್ಡ ಬಜೆಟ್‌ನಲ್ಲಿ ನಿರ್ಮಾಣ ಆಗುತ್ತಿದೆ. ಅಡಿವಿ ಶೇಷ್ ಅಭಿನಯಿಸಿದ್ದ ‘ಮೇಜರ್’ ಚಿತ್ರಕ್ಕೆ ಸಂಕಲನಕಾರ ಆಗಿದ್ದ ವಿನಯ್ ಕುಮಾರ್ ಸಿರಿಗಿನೀದಿ ಅವರು ‘ಗೂಢಚಾರಿ 2’ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ.

    ‘ಗೂಢಚಾರಿ 2’ ಚಿತ್ರಕ್ಕೆ ಅಡಿವಿ ಶೇಷ್ ಅವರೇ ಕಥೆ ಬರೆದಿದ್ದಾರೆ. ‘ಕಾರ್ತೀಕೇಯ 2’, ‘ಮೇಜರ್’ ಮತ್ತು ‘ದಿ ಕಾಶ್ಮೀರ್ ಫೈಲ್ಸ್’ ರೀತಿಯ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ನಿರ್ಮಾಣ ಸಂಸ್ಥೆಗಳು ಗೂಢಚಾರಿ 2 ಚಿತ್ರಕ್ಕೆ ಬಂಡವಾಳ ಹೂಡುತ್ತಿವೆ. ಪೀಪಲ್ ಮೀಡಿಯಾ ಫ್ಯಾಕ್ಟರಿ, ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಹಾಗೂ ‘ಎ.ಕೆ. ಎಂಟರ್ಟೇನ್ಮೆಂಟ್ ಇಂಡಿಯಾ ಪ್ರೈವೆಟ್ ಲಿಮಿಟೆಡ್’ ಬ್ಯಾನರ್ ಮೂಲಕ ಟಿ.ಜಿ. ವಿಶ್ವಪ್ರಸಾದ್ ಹಾಗೂ ಅಭಿಷೇಕ್ ಅಗರ್ವಾಲ್ ಅವರು ಜೊತೆಯಾಗಿ ‘ಗೂಢಚಾರಿ 2’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಬನಿತಾ ಸಂಧು ಅಡಿವಿ ಶೇಷ್‌ಗೆ ಜೋಡಿಯಾಗಿ ನಟಿಸುತ್ತಿದ್ದಾರೆ.