Tag: Adivasi

  • ಕಾಫಿನಾಡಿನಲ್ಲಿ ರೋಡಿಲ್ಲದೇ ಗರ್ಭಿಣಿ ಪರದಾಟ

    ಕಾಫಿನಾಡಿನಲ್ಲಿ ರೋಡಿಲ್ಲದೇ ಗರ್ಭಿಣಿ ಪರದಾಟ

    ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಆದಿವಾಸಿಗಳ ಗೋಳು ಕೇಳುವವರಿಲ್ಲದಂತಾಗಿದೆ. ರಸ್ತೆ ಇಲ್ಲದೇ ಬಾಣಂತಿಯನ್ನು ಬಡಿಗೆಯಲ್ಲಿ ಹೊತ್ತೊಯ್ದ ಮನ ಕಲಕುವ ಘಟನೆ ಕಳಸ ತಾಲೂಕಿನ ಬಿಳಿಗಲ್ ಗ್ರಾಮದಲ್ಲಿ ನಡೆದಿದೆ.

    ರಸ್ತೆ ಇಲ್ಲದೇ ಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗುಸೇತುವೆ ದಾಟಿ, 2 ಕಿ.ಮೀ ಹೊತ್ತು ಗ್ರಾಮಸ್ಥರು ಸಾಗಿದ್ದಾರೆ. ಕುದುರೆಮುಖ ಕಂಪನಿ ಆರಂಭವಾದಾಗ ಬಿಳಗಲ್ ಗ್ರಾಮವನ್ನ ಸ್ಥಳಾಂತರಿಸಲಾಗಿತ್ತು. ಅಂದಿನಿಂದ ಈವರೆಗೂ ಇವರ ಬಗ್ಗೆ ಯಾವ ಅಧಿಕಾರಿಗಳೂ ಗಮನ ಕೊಟ್ಟಿರಲಿಲ್ಲ. ಇದನ್ನೂ ಓದಿ: ಆಸ್ಪತ್ರೆಗಾಗಿ ಟ್ಟಿಟ್ಟರ್ ಅಭಿಯಾನ – ದೇಶದ 35 ಟಾಪ್ ಹ್ಯಾಷ್ ಟ್ಯಾಗ್ ನಡಿ ಟ್ರೆಂಡಿಂಗ್

    ಯಾರಾದ್ರೂ ಕಾಯಿಲೆ ಬಿದ್ದರೆ ಅವರನ್ನೂ ಗ್ರಾಮದಿಂದ ಹೆದ್ದಾರಿವರೆಗೂ ಹೊತ್ತುಕೊಂಡೇ ಬರಬೇಕೆಂದು ಗ್ರಾಮಸ್ಥರು ಕಣ್ಣೀರು ಹಾಕಿದ್ದಾರೆ. ಸದ್ಯ ಗ್ರಾಮದಲ್ಲಿ 35 ಆದಿವಾಸಿ ಕುಟುಂಬಗಳು ವಾಸಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೆಟ್ಟ-ಕೆಟ್ಟ ಪದಗಳಿಂದ ಬೈದ್ರೆ ಈ ಊರಿನಲ್ಲಿ ಜನರಿಗೆ ಒಲಿಯುತ್ತೆ ದೇವರು

    ಕೆಟ್ಟ-ಕೆಟ್ಟ ಪದಗಳಿಂದ ಬೈದ್ರೆ ಈ ಊರಿನಲ್ಲಿ ಜನರಿಗೆ ಒಲಿಯುತ್ತೆ ದೇವರು

    ಮಡಿಕೇರಿ: ನಾವು ದೇವರನ್ನು ಏನಂತಾ ಬೇಡ್ತೀವಿ, ಒಳ್ಳೆ ಬುದ್ಧಿ ಕೊಡಪ್ಪಾ ಅಥವಾ ನಾನು ಮಾಡುವ ಕೆಲಸದಲ್ಲಿ ಯಶಸ್ಸುಗಳಿಸುವಂತೆ ಮಾಡಪ್ಪ ಅಂತಾ ಕೇಳ್ಕೋತೀವಿ. ಅವರು ಬೇಡಿಕೊಂಡಿದ್ದು ನಡೆದ್ರೆ, ಕೋಳಿಯನ್ನು ಮೇಲಕ್ಕೆ ಎಸೆಯುವ ಮೂಲಕ ಹರಕೆ ತೀರಿಸುತ್ತಾರೆ. ಆದ್ರೆ ಇಲ್ಲಿ ವಿವಿಧ ವೇಷ ಹಾಕಿಕೊಂಡು ದೇವರನ್ನು ಬೈದ್ರೆ ದೇವ್ರು ಒಲಿಯುತ್ತೆ ಎಂದು ಜನರು ನಂಬಿದ್ದಾರೆ.

    ಕೊಡಗು ಜಿಲ್ಲೆ ಪೋನ್ನಂಪೇಟೆ ತಾಲೂಕಿನ ಗೋಣಿಕೊಪ್ಪದ ದೇವರ ಪುರದಲ್ಲಿ ಪ್ರತಿ ವರ್ಷ ಶ್ರೀ ಅಯ್ಯಪ್ಪ ಭದ್ರಕಾಳಿ ದೇವಸ್ಥಾನದಲ್ಲಿ ‘ಕುಂಡೆ ಹಬ್ಬ’ ಆಚರಿಸಲಾಗುತ್ತೆ. ಈ ಭದ್ರಕಾಳಿ ದೇವರಿಗೆ ವಿವಿಧ ವೇಷ ತೊಟ್ಟು ಕೆಟ್ಟ ಪದಗಳಿಂದ ಬೈದ್ರೆ ದೇವರು ಒಲಿಯುತ್ತದೆ ಅನ್ನೋ ನಂಬಿಕೆ ಇಲ್ಲಿನ ಜನ್ರದ್ದು. ತಿತಿಮತಿ, ಪಾಲಿಬೆಟ್ಟ, ಗೋಣಿಕೊಪ್ಪಲು, ಸಿದ್ದಾಪುರ ಕುಟ್ಟ ಇಲ್ಲಿನ ಸುತ್ತಮುತ್ತಲಿನ ಆದಿವಾಸಿಗಳು ಈ ಹಬ್ಬವನ್ನ ಆಚರಿಸ್ತಾರೆ. ಇದನ್ನೂ ಓದಿ: ಯೋಗ ಕೇವಲ ವ್ಯಾಯಾಮವಲ್ಲ, ಯೋಗ ವಿಜ್ಞಾನದ ನಾಲ್ಕನೇ ಆಯಾಮ: ಥಾವರ್ ಚಂದ್ ಗೆಹ್ಲೋಟ್ 

    ಹೀಗೆ ಅಂಗಡಿಗಳಿಗೆ ಹೋಗಿ ಮತ್ತು ಆದಿ ಬೀದಿಯಲ್ಲಿ ಹೋಗೋ ಜನ್ರನ್ನು ಅಡ್ಡಗಟ್ಟಿ ಹಣ ವಸೂಲಿ ಮಾಡುವುದು ಈ ಹಬ್ಬದ ವಿಶೇಷತೆ. ಹುಡುಗರು, ಹುಡುಗಿ ತರಹ ವಿವಿಧ ವೇಷಭೂಷಣ ತೊಟ್ಟು ಕುಣಿದು ಕುಪ್ಪಳಿಸುತ್ತಾ ದೇವರನ್ನ ಬೈದು ಹರಕೆ ತೀರಿಸುತ್ತಾರೆ ಕೊನೆಯಲ್ಲಿ ಜೀವಂತ ಕೋಳಿಯನ್ನು ಮೇಲಕ್ಕೆ ಎಸೆಯುವ ಮೂಲಕ ತಮ್ಮ ಹರಕೆ ತೀರಿಸುತ್ತಾರೆ.

    ಹುಡುಗರೆಲ್ಲಾ ಹುಡುಗಿಯ ವೇಷತೊಟ್ಟು ಅಂಗಡಿಗಳಲ್ಲಿ ಹಾಗೂ ಸಾರ್ವಜನಿಕರನ್ನ ಅಡ್ಡಕಟ್ಟಿ ಭಿಕ್ಷೆ ಬೇಡುವುದು ಇಲ್ಲಿನ ಸಂಪ್ರದಾಯ. ಹುಡುಗಿ, ಹೆಂಗಸರು, ಮುದುಕಿ, ಇನ್ನಿತರ ವೇಷಭೂಷಣಗಳನ್ನು ಧರಿಸುತ್ತಾರೆ. ಡಬ್ಬಗಳು, ಡೋಲು, ಪಾತ್ರೆ ಸೋರೆಕಾಯಿ ಬುರುಡೆ ಸೇರಿದಂತೆ ಇನ್ನಿತರ ವಸ್ತುಗಳಿಂದ ವಿವಿಧ ರೀತಿಯ ಸಂಗೀತ ಬರುವಂತೆ ಮ್ಯೂಸಿಕ್ ಬಾರಿಸುತ್ತಾ ಕೆಟ್ಟಕೆಟ್ಟ ಪದಗಳಿಂದ ಸಿಕ್ಕ-ಸಿಕ್ಕವರನ್ನು ನಿಂದಿಸುತ್ತಾರೆ.

    ಆದಿವಾಸಿಗಳು ತಮ್ಮ ಸಾಕುಪ್ರಾಣಿಗಳಿಗೆ ಹಾಗೂ ತಮಗೆ ಆರೋಗ್ಯದಲ್ಲಿ ವ್ಯತ್ಯಾಸವಾದ್ರೆ, ಈ ಭದ್ರಕಾಳಿ ದೇವರ ಮೊರೆ ಹೋಗಿ ಹರಕೆ ಹೊತ್ತುಕೊಳ್ಳುತ್ತಾರೆ. ಆ ಹರಕೆ ತೀರಿಸಲು ವರ್ಷಕ್ಕೊಂದು ಬಾರಿ ನಡೆಯುವ ಈ ಕುಂಡೆ ಹಬ್ಬದಲ್ಲಿ ಹುಡುಗರು ಹುಡುಗಿ ವೇಷಧರಿಸಿ ಕೆಟ್ಟ ಪದಗಳಿಂದ ಬೈದರೆ ದೇವರು ಒಲಿಯುತ್ತೆ, ಒಳ್ಳೆಯದಾಗುತ್ತದೆ ಎನ್ನುವುದು ಇಲ್ಲಿನ ಜನ್ರ ನಂಬಿಕೆ. ಇದನ್ನೂ ಓದಿ:  ತಮಿಳು ಭಾಷೆಯನ್ನು ಕೇಂದ್ರದ ಅಧಿಕೃತ ಭಾಷೆಯಾಗಿ ಘೋಷಿಸಿ: ಸ್ಟಾಲಿನ್ ಒಟ್ಟಾರೆ ಈ ಆದಿವಾಸಿಗಳ ಆಚರಣೆಯಂತೂ ವಿಭಿನ್ನವಾಗಿದೆ. ಕಾಡಿನೊಳಗೆ ಹಾಗೂ ಕಾಫಿತೋಟಗಳಲ್ಲಿ ವರ್ಷಪೂರ್ತಿ ಕೂಲಿ ಕಾರ್ಮಿಕರಾಗಿ ದುಡಿಯುವ ಈ ಜನ ವರ್ಷಕ್ಕೊಂದು ಬಾರಿ ಬಿಡುವು ಮಾಡಿಕೊಂಡು ಇಂತಹ ಆಚರಣೆ ಮಾಡ್ತಿದ್ದಾರೆ. ಅಲ್ಲದೇ ತಮ್ಮ ಹಿರಿಯರು ನಡೆಸಿಕೊಂಡು ಬಂದ ಪದ್ದತಿ ಆಚಾರ ವಿಚಾರ ರೂಢಿ ಸಂಪ್ರದಾಯವನ್ನ ಮರೆಯದೇ ಈಗಲೂ ಆಚರಿಸುತ್ತಿದ್ದಾರೆ.

  • ಚಿಕ್ಕ ಚಿಕ್ಕ ಕಲ್ಲುಗಳಿಂದ ಪುಟ್ಟ ಕಾಲುವೆ ನಿರ್ಮಿಸಿಕೊಂಡ ಆದಿವಾಸಿ ರೈತರು

    ಚಿಕ್ಕ ಚಿಕ್ಕ ಕಲ್ಲುಗಳಿಂದ ಪುಟ್ಟ ಕಾಲುವೆ ನಿರ್ಮಿಸಿಕೊಂಡ ಆದಿವಾಸಿ ರೈತರು

    – ವಿದ್ಯುತ್, ಮೋಟಾರು ಬೇಡ
    – ಮನವಿಗೆ ಸ್ಪಂದಿಸದ ಸಕಾರ, ರೈತರಿಂದಲೇ ಸಮಸ್ಯೆಗೆ ಪರಿಹಾರ

    ಜೈಪುರ: ಜಗತ್ತಿನ ಸಂಪರ್ಕವಿಲ್ಲದೇ ದಟ್ಟಾರಣ್ಯದಲ್ಲಿ ಬದುಕು ಕಟ್ಟಿಕೊಂಡ ಆದಿವಾಸಿಗಳ ಜೀವನ ಶೈಲಿ ಮಾದರಿ ಆಗಿರುತ್ತೆ. ಆಧುನಿಕ ಜಗತ್ತಿನ ಒತ್ತಡಗಿಳಲ್ಲದ ಅವರ ನೆಮ್ಮದಿಯ ಬದುಕು ನಮ್ಮದಾಗಿರಲಿ ಎಂದು ಎಷ್ಟೋ ಜನ ಬಯಸುತ್ತಾರೆ. ಇದೀಗ ಅಂತವುದೇ ಒಂದು ಆದಿವಾಸಿಗಳ ಉಪಾಯ ಸರ್ಕಾರಕ್ಕೆ ಚಾಟಿ ಬೀಸಿದೆ. ಅರಣ್ಯದಲ್ಲಿ ಚಿಕ್ಕ ಚಿಕ್ಕ ಕಲ್ಲುಗಳನ್ನಿರಿಸಿ ಪುಟ್ಟ ಕಾಲುವೆ ನಿರ್ಮಿಸಿಕೊಂಡಿದ್ದಾರೆ.

    ರಾಜಸ್ಥಾನದ ಉದಯಪುರದಿಂದ 125 ಕಿ ಲೋ ಮೀಟರ್ ದೂರದಲ್ಲಿರುವ ಆದಿವಾಸಿ ಕ್ಷೇತ್ರ ಕೊಟೆಡಾದ ವೀರಾ ಗ್ರಾಮದ  ಸುಮಾರು 20 ರೈತ ಕುಟುಂಬಗಳು ವಾಸವಾಗಿವೆ. ಎಲ್ಲ ಕುಟುಂಬಗಳ ತುಂಡು ಕೃಷಿ ಭೂಮಿಯನ್ನ ಹೊಂದಿದ್ದು, ಅಷ್ಟರಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಆದ್ರೆ ಮಳೆಗಾಲದ ಮಳೆಯಿಂದ ಒಂದು ಬೆಳೆ ಬೆಳೆಯುತ್ತಿದ್ದ ರೈತ ಕುಟುಂಬಗಳಿಗೆ ಎರಡನೇ ಬೆಳೆ ಗಗನ ಕುಸುಮವಾಗಿತ್ತು.

    ಈ ಸಮಸ್ಯೆಗೆ ಪರಿಹಾರ ನೀಡುವಂತೆ ಆದಿವಾಸಿಗಳು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಹಾಗಾಗಿ ತಾವೇ ಕಾಲುವೆ ನಿರ್ಮಿಸಿಕೊಳ್ಳುವ ಮೂಲಕ ಸ್ವಾವಲಂಬಿಗಳಾಗಿದ್ದಾರೆ. ಗಗನ ಕುಸುಮವಾಗಿದ್ದ ಎರಡನೇ ಬೆಳೆಯನ್ನ ಬೆಳೆಯುತ್ತಿದ್ದಾರೆ.

    ವಿದ್ಯುತ್ ಕೇಳದ ಪುಟ್ಟ ಕಾಲುವೆ: ಯೆಸ್, ರೈತರು ವಿದ್ಯುತ್ ಕೇಳದ ಪುಟ್ಟ ಕಾಲುವೆ ನಿರ್ಮಿಸಿಕೊಂಡಿದ್ದಾರೆ. ಕೃಷಿ ಜಮೀನಿನ ಮೇಲ್ಭಾಗದಲ್ಲಿ ನದಿ ಹರಿಯುತ್ತಿದೆ. ಹಾಗಾಗಿ ನದಿಯಿಂದಲೇ ಪುಟ್ಟ ಕಾಲುವೆ ನಿರ್ಮಿಸಲು ರೈತ ಕುಟುಂಬಗಳು ಪ್ಲಾನ್ ಮಾಡಿದ್ದವು. ಆದ್ರೆ ಅರಣ್ಯ ಪ್ರದೇಶವಾಗಿದ್ದರಿಂದ ಭೂಮಿ ಸಮತಟ್ಟಾಗಿರಲಿಲ್ಲ. ಆದ್ದರಿಂದ ಅರಣ್ಯದಲ್ಲಿಯ ಕಲ್ಲುಗಳಿಂದಲೇ ಸೇತುವೆ ನಿರ್ಮಿಸಿ, ಮೇಲೆ ಪ್ಲಾಸ್ಟಿಕ್ ಕವರ್ ಹಾಕಿದ್ದಾರೆ. ಈ ಪ್ಲಾಸ್ಟಿಕ್ ಪೇಪರ್ ಮೇಲೆ ನೀರು ಹರಿದು ರೈತರ ಜಮೀನುಗಳಿಗೆ ತಲುಪುತ್ತದೆ.

    ಪ್ಲಾಸ್ಟಿಕ್ ಪೇಪರ್ ಕೊಳೆಯಲ್ಲ. ಹಾಗಾಗಿ ಅದನ್ನ ಕಲ್ಲುಗಳ ಸೇತುವೆ ಮೇಲೆ ಹಾಕಲಾಯ್ತು. ಮಳೆ ಮತ್ತು ಪ್ರವಾಹ ಹೆಚ್ಚಾದಾಗ ಕಲ್ಲುಗಳು ಬಿದ್ದಿರುತ್ತವೆ. ಈ ಸಮಯದಲ್ಲಿ ಸೇತುವೆ ಕೆಲಸಕ್ಕಾಗಿ ಪಾಳಿಯ ಮೇಲೆ ಕೆಲಸ ಮಾಡುತ್ತೇವೆ. ಹಾಗೆಯೇ ಎಲ್ಲರೂ ಸರದಿಯಂತೆ ನೀರನ್ನ ತೆಗೆದುಕೊಳ್ಳುವಂತೆ ಎಂದು ರೈತರು ಹೇಳುತ್ತಾರೆ.

  • ಆದಿವಾಸಿ ಯುವಕನ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಹಲ್ಲೆ ಆರೋಪ

    ಆದಿವಾಸಿ ಯುವಕನ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಹಲ್ಲೆ ಆರೋಪ

    ಮಡಿಕೇರಿ: ಕಟ್ಟಿಗೆ ತರಲು ಕಾಡಿಗೆ ಹೋಗಿದ್ದ ಆದಿವಾಸಿ ಯುವಕರ ಮೇಲೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಲ್ಲೆ ನಡೆಸಿರುವ ಆರೋಪ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ದಿಡ್ಡಳ್ಳಿ ಸಮೀಪದ ಅಣ್ಣಿಗೇರಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಕಟ್ಟಿಗೆ ತರಲು ಕಾಡಿಗೆ ತೆರಳಿದ್ದ ದಿಡ್ಡಳ್ಳಿ ನಿವಾಸಿಗಳಾದ ನಾಗೇಶ್ ಹಾಗೂ ಸೋಮು ವಾಪಸ್ ಬರುವಾಗ ಅರಣ್ಯ ರಕ್ಷಕರಾದ ನಾಗೇಶ್ ಮತ್ತು ತಿಮ್ಮ ದೌರ್ಜನ್ಯ ನಡೆಸಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ದಿಡ್ಡಳ್ಳಿಯಿಂದ ಅಣ್ಣಿಗೇರಿಗೆ ಎಳೆದೊಯ್ದು ಮನ ಬಂದಂತೆ ಹಲ್ಲೆ ಮಾಡಿದ್ದಾರೆ. ಕೈ, ಕಾಲು ಭಾಗ ಊತ ಬರುವಂತೆ ಮನಸೋ ಇಚ್ಛೆ ಥಳಿಸಿದ್ದಾರೆ.

    ಮರಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಯೇ ಕತ್ತರಿಸಿ ನಮ್ಮ ವಿರುದ್ಧ ಸುಳ್ಳು ಹೇಳಿದ್ದಾರೆ. ಮೂಲ ನೆಲೆಗಳಲ್ಲಿ ಗೆಡ್ಡೆ, ಗೆಣಸು, ಮೇವು ಹಾಗೂ ಉರುವಲಿಗೆ ಒಣ ಮರಗಳನ್ನು ಬಳಸಿಕೊಳ್ಳುವ ಹಕ್ಕು ಆದಿವಾಸಿಗಳಿಗೆ ಇದೆ. ಹೀಗಿದ್ದರೂ ವಿನಾಃ ಕಾರಣ ಹಲ್ಲೆ ಮಾಡಿದ್ದಾರೆ. ಕೂಡಲೇ ಇಬ್ಬರನ್ನೂ ಅಮಾನತು ಮಾಡಬೇಕು. ಇದಕ್ಕೆಲ್ಲ ಕುಮ್ಮಕ್ಕು ನೀಡಿರುವ ಮತ್ತಿಗೋಡಿನ ಆರ್‍ಎಫ್‍ಓ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.