Tag: Aditya Thackeray

  • ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿ: ಆದಿತ್ಯ ಠಾಕ್ರೆ ಕಿರಿಕ್‌

    ಬೆಳಗಾವಿ: ಚಳಿಗಾಲದ ಅಧಿವೇಶನ (Winter Session) ಆರಂಭಗೊಳ್ಳುವ ಸಂದರ್ಭದಲ್ಲೇ ಮಹಾರಾಷ್ಟ್ರದ ಮಾಜಿ ಸಿಎಂ ಉದ್ದವ್‌ ಠಾಕ್ರೆ (Uddhav Thackeray) ಪುತ್ರ ಆದಿತ್ಯ ಠಾಕ್ರೆ ಉದ್ಧಟತನದ ಹೇಳಿಕೆ ನೀಡಿದ್ದಾರೆ.

    ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡು ಮಹಾ ವಿಕಾಸ ಅಘಾಡಿ ಒಕ್ಕೂಟ ಮಾಡಿಕೊಂಡಿರುವ ಶಿವಸೇನೆ ಶಾಸಕ ಆದಿತ್ಯ ಠಾಕ್ರೆ (Aditya Thackeray) ಗಡಿ ವಿವಾದವನ್ನು ಕೆದಕಿದ್ದಾರೆ. ಬೆಳಗಾವಿ ಗಡಿ ವಿವಾದದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ.

    ಗಡಿ ವಿವಾದ ಇತ್ಯರ್ಥ ಆಗುವವರೆಗೂ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ:  ಮಹಾರಾಷ್ಟ್ರದಲ್ಲಿ ಎಸ್‌ಪಿ ಬಿಜೆಪಿಯ ಬಿ ಟೀಂ – ಆದಿತ್ಯ ಠಾಕ್ರೆ ಆಕ್ರೋಶ

    ಉದ್ದವ್‌ ಠಾಕ್ರೆ ನೇತೃತ್ವದ ಬಣ ಗಡಿ ವಿಚಾರವನ್ನು ಕೆದಕುವುದು ಹೊಸದೆನಲ್ಲ. ಇಲ್ಲಿಯವರೆಗೆ ಭಾಷಾ ವಿಷ ಬೀಜ ಬಿತ್ತುತ್ತಿದ್ದ ಉದ್ಧವ ಠಾಕ್ರೆ ಈಗ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕು ಎಂದು ಹೇಳುವ ಮೂಲಕ ಮತ್ತೆ ಕ್ಯಾತೆ ತೆಗೆದಿದ್ದಾರೆ.

  • ನಿರ್ಮಾಣ ಹಂತದಲ್ಲಿದ್ದ ಸೇತುವೆ ಉದ್ಘಾಟಿಸಿದ ಆದಿತ್ಯ ಠಾಕ್ರೆ ವಿರುದ್ಧ ದೂರು

    ನಿರ್ಮಾಣ ಹಂತದಲ್ಲಿದ್ದ ಸೇತುವೆ ಉದ್ಘಾಟಿಸಿದ ಆದಿತ್ಯ ಠಾಕ್ರೆ ವಿರುದ್ಧ ದೂರು

    ಮುಂಬೈ: ಕಾಮಗಾರಿ ಪೂರ್ಣವಾಗದ ಸೇತುವೆಯನ್ನು ಉದ್ಘಾಟಿಸಿದ ಶಿವಸೇನೆ ನಾಯಕ ಆದಿತ್ಯ ಠಾಕ್ರೆ (Aaditya Thackeray) ವಿರುದ್ಧ ದೂರು ದಾಖಲಾಗಿದೆ.

    ಮುಂಬೈ ಮಹಾನಗರ ಪಾಲಿಕೆ (BMC)ಯು ಠಾಕ್ರೆ ವಿರುದ್ಧ ಈ ದೂರು ನೀಡಿದೆ. ದೂರಿನಲ್ಲಿ ಗುರುವಾರ ರಾತ್ರಿ ಪೂರ್ಣಗೊಳ್ಳದ ಲೋವರ್ ಪರೇಲ್‍ನಲ್ಲಿ ಡೆಲಿಸ್ಲೆ ಸೇತುವೆಯ ಎರಡನೇ ಕ್ಯಾರೇಜ್‍ವೇಯನ್ನು ಆದಿತ್ಯ ಠಾಕ್ರೆ ಅವರು ಉದ್ಘಾಟಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

    ಸೇತುವೆಯ (Bridge Inauguration) ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಅಲ್ಲದೆ ಬಳಕೆಗೆ ಸುರಕ್ಷಿತವೆಂದು ಪ್ರಮಾಣೀಕರಿಸಲಾಗಿಲ್ಲ. ಸೇತುವೆಯನ್ನು ಅಕಾಲಿಕವಾಗಿ ಬಳಸುವ ವಾಹನ ಚಾಲಕರಿಗೆ ಸಂಭವನೀಯ ಅಪಾಯಗಳ ಬಗ್ಗೆ ನಾಗರಿಕ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಇದನ್ನೂ ಓದಿ: ಶಮಿ ತವರಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾದ ಯೋಗಿ ಸರ್ಕಾರ

    ಸದ್ಯ ದೂರಿನ ಹಿನ್ನೆಲೆಯಲ್ಲಿ ಆದಿತ್ಯ ಠಾಕ್ರೆ ಜೊತೆಗೆ ಸುನಿಲ್ ಶಿಂದ್ ಹಾಗೂ ಸಚಿನ್ ಅಹಿರ್ ವಿರುದ್ಧ ಐಪಿಸಿ ಸೆಕ್ಷನ್ 143 (ದಂಡನೆ), 149 (ಅಕ್ರಮವಾಗಿ ಗುಂಪುಗೂಡುವಿಕೆ), 336 ಜೀವನ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕಾಯಿದೆ) ಹಾಗೂ 447 (ಕ್ರಿಮಿನಲ್ ಅತಿಕ್ರಮಣಕ್ಕೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ದಕ್ಷಿಣ ಮುಂಬೈ ಮತ್ತು ಲೋವರ್ ಪರೇಲ್ ನಡುವಿನ ನಿರ್ಣಾಯಕ ಸಂಪರ್ಕವಾದ ಡೆಲಿಸ್ಲೆ ಸೇತುವೆಯನ್ನು ಜೂನ್‍ನಲ್ಲಿ ಭಾಗಶಃ ತೆರೆಯಲಾಯಿತು. ಕರಿ ರಸ್ತೆಯನ್ನು ಲೋವರ್ ಪರೇಲ್‍ಗೆ ಸಂಪರ್ಕಿಸುವ ಮತ್ತೊಂದು ಹಂತವು ಸೆಪ್ಟೆಂಬರ್ ನಲ್ಲಿ ತೆರೆಯಲ್ಪಟ್ಟಿತು.

  • ‘ಮಹಾ’ದಲ್ಲಿ ಕುದುರದ ಬಿಜೆಪಿ-ಸೇನೆ ಮೈತ್ರಿ- ರಾಜ್ಯಪಾಲರನ್ನ ಭೇಟಿಯಾದ ಆದಿತ್ಯ ಠಾಕ್ರೆ

    ‘ಮಹಾ’ದಲ್ಲಿ ಕುದುರದ ಬಿಜೆಪಿ-ಸೇನೆ ಮೈತ್ರಿ- ರಾಜ್ಯಪಾಲರನ್ನ ಭೇಟಿಯಾದ ಆದಿತ್ಯ ಠಾಕ್ರೆ

    ಮುಂಬೈ: ಚುನಾವಣೆ ಮುಗಿದು ಫಲಿತಾಂಶ ಬಂದು ವಾರ ಕಳೆದರೂ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಾಗಿಲ್ಲ. ಮುಖ್ಯಮಂತ್ರಿ ಪಟ್ಟದ ಪಟ್ಟನ್ನು ಶಿವಸೇನೆ ಸಡಿಲಿಸಿಲ್ಲ.

    ಶಿವಸೇನೆಯು ಗುರುವಾರ ಸಂಜೆ ವೇಳೆಗೆ ರಾಜ್ಯಪಾಲರನ್ನು ಭೇಟಿಯಾಗಿದ್ದು, ಸರ್ಕಾರ ರಚನೆಗೆ ಹಕ್ಕು ಮಂಡಿಸಿದೆ. ಜೊತೆಗೆ, ಎನ್‍ಸಿಪಿ, ಕಾಂಗ್ರೆಸ್ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿಗೆ ತಲೆಬಿಸಿ ಹೆಚ್ಚಿಸಿದೆ. ಈ ಮಧ್ಯೆ ಶಿವಸೇನೆ ಶಾಸಕಾಂಗ ಸಭೆಯ ನಾಯಕರಾಗಿ ಏಕನಾಥ್ ಶಿಂಧೆ ಆಯ್ಕೆಯಾಗಿದ್ದಾರೆ.

    ಏಕನಾಥ್ ಶಿಂಧೆ ಮತ್ತು ಸುಭಾಶ್ ದೇಸಾಯಿ ಮಧ್ಯೆ ಫೈಟ್ ಇತ್ತು. ಇಬ್ಬರೂ ಫಡ್ನವೀಸ್ ಸಂಪುಟದಲ್ಲಿ ಸಚಿವರಾಗಿದ್ದರು. ಆದರೆ ಶಿಂಧೆ ಅವರಿಗೆ ಅದೃಷ್ಟ ಒಲಿದಿದೆ. ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಗೊಂದಿರುವ 29 ವರ್ಷದ ಆದಿತ್ಯ ಠಾಕ್ರೆ ಇನ್ನೂ ಶಾಸಕಂಗದ ಕಾರ್ಯನಿರ್ವಹಣೆಯ ಬಗ್ಗೆ ಒಂದೆರಡು ವರ್ಷಗಳ ಕಾಲ ಅರ್ಥ ಮಾಡಿಕೊಳ್ಳಬೇಕು. ಆದ್ದರಿಂದ ಸದ್ಯಕ್ಕೆ ಆದಿತ್ಯ ಠಾಕ್ರೆ ಬಿಜೆಪಿ-ಶಿವಸೇನೆ ಸಮ್ಮಿಶ್ರ ಸರ್ಕಾರದ ಭಾಗವಾಗಿರುವುದಿಲ್ಲ ಅಂತ ಶಿವಸೇನೆ ಸ್ಪಷ್ಟಪಡಿಸಿದೆ.

    ರಾಜ್ಯಪಾಲರ ಭೇಟಿಯ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಆದಿತ್ಯ ಠಾಕ್ರೆ, ರಾಜ್ಯದಲ್ಲಿ ಇತ್ತೀಚಿಗೆ ಸುರಿದ ಭಾರೀ ಮಳೆಯಿಂದಾಗಿ ಹಾನಿಗೊಳಗಾದ ರೈತರು ಮತ್ತು ಮೀನುಗಾರರಿಗೆ ನೆರವು ನೀಡುವಂತೆ ರಾಜ್ಯಪಾಲರನ್ನು ಕೋರಿದ್ದೇವೆ. ಅವರು ಸ್ವತಃ ಕೇಂದ್ರದೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.

  • 1 ರೂ. ಆರೋಗ್ಯ ಕ್ಲಿನಿಕ್, 10 ರೂ. ಊಟ- ಶಿವಸೇನೆ ಪ್ರಣಾಳಿಕೆ ಬಿಡುಗಡೆ

    1 ರೂ. ಆರೋಗ್ಯ ಕ್ಲಿನಿಕ್, 10 ರೂ. ಊಟ- ಶಿವಸೇನೆ ಪ್ರಣಾಳಿಕೆ ಬಿಡುಗಡೆ

    ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಬಿಜೆಪಿ ಮಿತ್ರಪಕ್ಷ ಶಿವಸೇನೆ ಶನಿವಾರ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈ ಪ್ರಣಾಳಿಕೆಯಲ್ಲಿ ಸುಮಾರು 200 ಕಾಯಿಲೆಗಳಿಗೆ 1 ರೂಪಾಯಿಯಲ್ಲಿ ತಪಾಸಣೆ ಸೌಲಭ್ಯ, ಹತ್ತು ರೂಪಾಯಿಗೆ ಫುಲ್ ಮೀಲ್ಸ್, ವಿದ್ಯುತ್ ಬಿಲ್ ಕಡಿತ, ರೈತರ ಋಣ­ಭಾರ ಇಳಿಕೆ ಹೀಗೆ ಹಲವು ಅಂಶಗಳನ್ನು ಉಲ್ಲೇಖಿಸಲಾಗಿದೆ.

    ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ಮತ್ತು ಯುವ ಸೇನಾ ಮುಖ್ಯಸ್ಥ ಆದಿತ್ಯ ಠಾಕ್ರೆ ಅವರು ಶನಿವಾರ ಪ್ರಣಾಳಿಕೆ ಬಿಡುಗಡೆ ಮಾಡಿದರು. ಅ. 21ರಂದು 288 ಸ್ಥಾನಗಳಿಗಾಗಿ ಚುನಾವಣೆ ನಡೆಯಲಿದ್ದು, ಶಿವಸೇನೆ 124 ಸ್ಥಾನಗಳಲ್ಲಿ ಸ್ಪರ್ಧೆಗಿಳಿಯುತ್ತಿದೆ. ಬಿಜೆಪಿ ಮತ್ತು ಇತರೆ ಸಣ್ಣ ಮಿತ್ರಪಕ್ಷಗಳು ಉಳಿದ 164 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಚುನಾವಣ ಅಖಾಡಕ್ಕೆ ಇಳಿಸಲಿದೆ.

    ಚುನಾವಣೆಯಲ್ಲಿ ಗೆದ್ದು, ಅಧಿಕಾರಕ್ಕೆ ಬಂದರೆ “ರೂ. 1 ಆರೋಗ್ಯ ಕ್ಲಿನಿಕ್” ಯೋಜನೆಯಡಿಯಲ್ಲಿ ಜನರಿಗೆ 200ಕ್ಕೂ ಹೆಚ್ಚು ಕಾಯಿಲೆಗಳಿಗೆ ಕೈಗೆಟುಕುವ ದರದಲ್ಲಿ ತಪಾಸಣೆ ಒದಗಿಸುತ್ತದೆ ಎಂದು ಉದ್ಧವ್ ಅವರು ಹೇಳಿದರು. ಜೊತೆಗೆ ವಿದ್ಯುತ್ ದರ ಕಡಿತ ಹಾಗೂ ರಾಜ್ಯಾದ್ಯಂತ 1 ಸಾವಿರ ಭೋಜನಾಲಯ ಸ್ಥಾಪಿಸಿ ಅಲ್ಲಿ 10 ರೂಪಾಯಿಗೆ ಗುಣಮಟ್ಟದ ಊಟ ನೀಡುವ ಭರವಸೆಯನ್ನು ನೀಡಿದರು. ಪ್ರತಿ ಜಿಲ್ಲೆಯಲ್ಲೂ ಭೋಜನಾಲಯ ತೆರೆಯುತ್ತೇವೆ. ಇದನ್ನು ನಡೆಸಲು ಮಹಿಳಾ ಸ್ವಸಹಾಯ ಗುಂಪುಗಳ ಸಹಾಯ ಪಡೆಯುತ್ತೇವೆ ಎಂದು ಉದ್ಧವ್ ಠಾಕ್ರೆ ತಿಳಿಸಿದರು.

    ಹಾಗೆಯೇ 300 ಯುನಿಟ್‍ಗಳ ವರೆಗೆ ಬಳಸುವ ವಿದ್ಯುತ್‍ಗೆ ಶೇ. 30ರಷ್ಟು ದರ ಕಡಿತ ಮಾಡಲಾಗುತ್ತೆ. ಹಳ್ಳಿಗಳಿಗೆ ವಿಶೇಷ ಬಸ್ ಸೇವೆ, ಬಡ ರೈತರಿಗೆ ವಾರ್ಷಿಕ 10 ಸಾವಿರ ರೂಪಾಯಿ ನೆರವು, ರೈತರ ಸಾಲಮನ್ನಾ ಹಾಗೂ ರಸಗೊಬ್ಬರ ಬೆಲೆ ನಿಗದಿ ಸೇರಿದಂತೆ ಹಲವು ಭರವಸೆಯನ್ನು ತನ್ನ ಪ್ರಣಾಳಿಕೆಯಲ್ಲಿ ಶಿವಸೇನೆ ಪ್ರಸ್ತಾಪಿಸಿದೆ.

    ಅತ್ತ ಕಾಂಗ್ರೆಸ್-ಎನ್‍ಸಿಪಿ ಮೈತ್ರಿಕೂಟ, ಸಂಚಾರಿ ನಿಯಮ ಉಲ್ಲಂಘನೆ ದಂಡದ ಮೊತ್ತ ಕಡಿಮೆ ಮಾಡುವುದಾಗಿ ಹಾಗೂ ತಕ್ಷಣ ರೈತರ ಸಾಲ ಮನ್ನಾ ಮಾಡುವ ವಿಚಾರ ಸೇರಿ ಹಲವು ಭರವಸೆಗಳ ಪ್ರಣಾಳಿಕೆಯನ್ನು ಅಕ್ಟೋಬರ್ 7ರಂದು ಬಿಡುಗಡೆ ಮಾಡಿದೆ. ಇತ್ತ ಶಿವಸೇನಾ ಮಿತ್ರ ಪಕ್ಷ ಬಿಜೆಪಿ ಇನ್ನೂ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿಲ್ಲ.