Tag: Aditya-L1

  • ಆದಿತ್ಯ L1 ಮಿಷನ್‍ನ ಯಶಸ್ವಿ ಉಡಾವಣೆಗೆ ರಾಜ್ಯಪಾಲ ಅಭಿನಂದನೆ

    ಆದಿತ್ಯ L1 ಮಿಷನ್‍ನ ಯಶಸ್ವಿ ಉಡಾವಣೆಗೆ ರಾಜ್ಯಪಾಲ ಅಭಿನಂದನೆ

    ಬೆಂಗಳೂರು: ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ ಎಲ್1 (Aditya L1 ಮಿಷನ್‍ನ ಯಶಸ್ವಿ ಉಡಾವಣೆಗೊಳಿಸಿದ ಇಸ್ರೋ ತಂಡಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರು ಅಭಿನಂದಿಸಿದ್ದಾರೆ.

    ಇಸ್ರೋ ಅಧ್ಯಕ್ಷ ಸೋಮನಾಥ್  (Somanath) ಅವರಿಗೆ ಅಭಿನಂದನೆ ಪತ್ರ ಬರೆದಿದ್ದು, ಚಂದ್ರಯಾನ-3 ರ ಯಶಸ್ವಿ ಮಿಷನ್ ನಂತರ, ಇಸ್ರೋ ಆದಿತ್ಯ-ಎಲ್ 1 ಮಿಷನ್ ಅನ್ನು ಯೋಜಿಸಿ ಯಶಸ್ವಿಯಾಗಿ ಪ್ರಾರಂಭಿಸಿದೆ. ಇದು ಸೂರ್ಯನನ್ನು ಅಧ್ಯಯನ ಮಾಡಲು ಮೊದಲ ಬಾಹ್ಯಾಕಾಶ ಆಧಾರಿತ ಭಾರತೀಯ ಮಿಷನ್ ಆಗಿದೆ ಎಂದು ತಿಳಿದುಕೊಳ್ಳಲು ಅಪಾರ ಸಂತೋಷವಾಗಿದೆ.

    ಇಸ್ರೋದ (ISRO) ಅಸಾಧಾರಣ ಸಾಧನೆಗಳು ನಮ್ಮ ಸಮಾಜದಲ್ಲಿ ವೈಜ್ಞಾನಿಕ ಮನೋಭಾವವನ್ನು ಬಲಪಡಿಸುತ್ತದೆ ಮತ್ತು ನಮ್ಮ ಯುವಕರಿಗೆ ವೈಜ್ಞಾನಿಕ ಪ್ರಯತ್ನದ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಲು ಸ್ಫೂರ್ತಿ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ಇದನ್ನೂ ಓದಿ: ಆದಿತ್ಯ ಎಲ್-1 ಯಶಸ್ವಿ ಉಡಾವಣೆ – ಇಸ್ರೋ ವಿಜ್ಞಾನಿಗಳಿಗೆ ಮೋದಿ ಅಭಿನಂದನೆ

    ಈ ಮಿಷನ್ ಸೌರ ಚಟುವಟಿಕೆಗಳನ್ನು ಮತ್ತು ಬಾಹ್ಯಾಕಾಶದ ಮೇಲೆ ಅದರ ಪರಿಣಾಮವನ್ನು ವೀಕ್ಷಿಸಲು ಹೆಚ್ಚಿನ ಪ್ರಯೋಜನವನ್ನು ಒದಗಿಸುತ್ತದೆ. ಈ ಅಸಾಧಾರಣ ಯಶಸ್ಸು ಬ್ರಹ್ಮಾಂಡದ ರಹಸ್ಯಗಳನ್ನು ಅನ್ಲಾಕ್ ಮಾಡಲು ಪಟ್ಟುಬಿಡದೆ ವೈಜ್ಞಾನಿಕ ಜ್ಞಾನವನ್ನು ಅನುಸರಿಸುತ್ತಿರುವ ನಮ್ಮ ವಿಜ್ಞಾನಿಗಳ ಸಮರ್ಪಣೆ ಮತ್ತು ಬದ್ಧತೆಗೆ ಕಾರಣವಾಗಿದೆ.

    ಅಮೃತ ಕಾಲದ ಸಮಯದಲ್ಲಿ ಭಾರತಕ್ಕೆ ಕೀರ್ತಿ ತರುವ ಪ್ರಯತ್ನಗಳಲ್ಲಿ ನೀವು ಮತ್ತು ನಿಮ್ಮ ತಂಡವು ಅತ್ಯುತ್ತಮವಾಗಿರಲಿ ಎಂದು ನಾನು ಬಯಸುತ್ತೇನೆ. ಭಾರತವನ್ನು ಹೆಮ್ಮೆಪಡುವಂತೆ ಮಾಡುವ ಸಮರ್ಪಣೆ ಮತ್ತು ಸಾಧನೆಗಾಗಿ ಮತ್ತೊಮ್ಮೆ ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಚಿತ್ರಾತಿ ವಿಚಿತ್ರಗಳ ಉರಿ ಉಂಡೆ ನಮ್ಮ ಸೂರ್ಯ: ಡಾ. ಎಪಿ ಭಟ್

    ವಿಚಿತ್ರಾತಿ ವಿಚಿತ್ರಗಳ ಉರಿ ಉಂಡೆ ನಮ್ಮ ಸೂರ್ಯ: ಡಾ. ಎಪಿ ಭಟ್

    ಉಡುಪಿ: ಸೂರ್ಯನ (Sun) ಅಧ್ಯಯನಕ್ಕೆ ಇಳಿಯುವ ಮೂಲಕ ಭಾರತ ಖಗೋಳದಲ್ಲಿ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಆದಿತ್ಯನ ಅಧ್ಯಯನ ಸುಲಭವಿಲ್ಲ. ಬೆಂಕಿ ಉಗುಳುವ ಉರಿ ಉಂಡೆಯನ್ನು ಭೂಮಿ ಮೇಲೆ ನಿಂತು ನೋಡಲು ಸಾಧ್ಯವಿಲ್ಲ. ಹಾಗಾದರೆ 15 ಲಕ್ಷ ಕೀ.ಮೀ ಆಚೆಗೆ ಹೇಗಿರುತ್ತದೆ ಎಂಬುದೇ ಎಲ್ಲರ ಕುತೂಹಲ. ಉಡುಪಿಯ ಖಗೋಳಶಾಸ್ತ್ರಜ್ಞ ಡಾ.ಎ.ಪಿ ಭಟ್ (Dr.A.P.Bhat) ಸೂರ್ಯ ಅಧ್ಯಯನದ ಆಳವಾದ ಸಮಗ್ರ ಮಾಹಿತಿ ನೀಡಿದ್ದಾರೆ.

    ನಮ್ಮ ಅನ್ನದಾತ ನಮ್ಮ ದಿನಪ. ಇವನನ್ನು ಬಳಿ ಸಾರುವಂತಿಲ್ಲ. ಇಳಿದು ನೋಡಿದವರಿಲ್ಲ. ನಮ್ಮ ಸೂರ್ಯನ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ. ನಮ್ಮ ಭೂಮಿಯ ಲಕ್ಷ ಲಕ್ಷ ಸಸ್ಯಗಳು, ಪ್ರಾಣಿಗಳು, ಇಡೀ ಮನುಕುಲದ ಸೃಷ್ಟಿ, ಸ್ಥಿತಿ ಲಯಕ್ಕೂ ಕಾರಣೀಕರ್ತ ನಮ್ಮ ಸೂರ್ಯ. ಸೌರವ್ಯೂಹದ 8 ಗ್ರಹಗಳು ಸುಮಾರು 182 ಉಪಗ್ರಹಗಳಾದ ಚಂದ್ರರು, ಲಕ್ಷ ಕೋಟಿ ಕಲ್ಲುಂಡೆಗಳು, ಲಕ್ಷ ಲಕ್ಷ ಧೂಮಕೇತುಗಳು ಎಲ್ಲವನ್ನೂ ಅವುಗಳದೇ ಅಕ್ಷಗಳಲ್ಲಿ ತಿರುತಿರುಗಿಸಿ ಕುಣಿಸುವವ ನಮ್ಮ ಸೂರ್ಯ. ಇದನ್ನೂ ಓದಿ: Aditya L1 Launch: ಸೂರ್ಯ ಶಿಕಾರಿಗೆ ಹೊರಟ ಆದಿತ್ಯ

    ಭೂಮಿ ಮತ್ತು ಸೂರ್ಯರ ದೂರ ಸುಮಾರು 15 ಕೋಟಿ ಕಿ.ಮೀ. ಆದರೆ ಸೂರ್ಯನ ಗುರುತ್ವ ಹಿಡಿತ ಸುಮಾರು ಇದರ ಲಕ್ಷ ಪಟ್ಟು ದೂರದವರೆಗೂ ( ಒಂದು ಲಕ್ಷ AU) ವ್ಯಾಪಿಸಿದೆ. ಆದರೆ, ನಮ್ಮ ಸೂರ್ಯ, ನಮ್ಮ ಆಕಾಶಗಂಗೆಯ ಅಸಂಖ್ಯ ನಕ್ಷತ್ರಗಳಲ್ಲಿ ಒಂದು ಸಾಮಾನ್ಯ ನಕ್ಷತ್ರ. ಸುಮಾರು ಸಾವಿರ ಕೋಟಿ ವರ್ಷದ ತನ್ನ ಆಯುಷ್ಯದಲ್ಲಿ 460 ಕೋಟಿ ವರ್ಷ ಕ್ರಮಿಸಿ ಈಗ ಮಧ್ಯ ವಯಸ್ಕ. ತನ್ನ ಅಂತಿಮ ಹಂತದಲ್ಲಿ ಬೃಹತ್ ನಕ್ಷತ್ರಗಳಂತೆ ಸೂಪರ್ ನೋವಾ ಆಗಲಾರ. ಕಪ್ಪುರಂಧ್ರ (Black Hole)) ಆಗಲಾರ. ಇನ್ನು 540 ಕೋಟಿ ವರ್ಷಗಳ ನಂತರ ಶ್ವೇತ ಕುಬ್ಜನಾಗಿ ನಂದಿ ಧೂಳಾಗುವನು. ನಮ್ಮ ಸುರುಳಿ ಗ್ಯಾಲಾಕ್ಸಿ, ಆಕಾಶ ಗಂಗೆಯ ಸುಮಾರು 10 ಸಾವಿರ ಕೋಟಿ ನಕ್ಷತ್ರಗಳಂತೆ ತನ್ನ ಪಾಡಿಗೆ ತಾನು ಗ್ಯಾಲಾಕ್ಸಿಯ ಕೇಂದ್ರದ ಸುತ್ತ ಸುಮಾರು 28 ಸಾವಿರ ಜ್ಯೋತಿ ವರ್ಷ ದೂರದಲ್ಲಿ ಸುತ್ತುತ್ತಿದ್ದಾನೆ. ಇದನ್ನೂ ಓದಿ: ಭಾರತಕ್ಕೆ ಗೌರವ ತರುವ ಕೆಲಸವನ್ನ ಕರ್ನಾಟಕದಿಂದ ಇಸ್ರೋ ಮಾಡ್ತಿದೆ: ಡಿಕೆಶಿ

    ಆಶ್ಚರ್ಯವೆಂದರೆ ನಮ್ಮ ಸೌರವ್ಯೂಹದ ಒಟ್ಟು ದ್ರವ್ಯರಾಶಿಯ 99.86 ಅಂಶ ತನ್ನಲ್ಲೇ ಇರಿಸಿಕೊಂಡಿರುವ ಸೂರ್ಯನ ದ್ರವ್ಯರಾಶಿ ಭೂಮಿಯ ದ್ರವ್ಯರಾಶಿಗಿಂತ ಸುಮಾರು 3,33,333ಪಟ್ಟು ಹೆಚ್ಚು. ನಮ್ಮ ಭೂಮಿಯ ಗಾತ್ರಕ್ಕಿಂತ 13 ಲಕ್ಷ ಪಟ್ಟು ದೊಡ್ಡದಿರುವ ಸೂರ್ಯ ಹೊಟ್ಟೆಮೇಲೆ 108 ಭೂಮಿ ಮಣಿಗಳ ಸರವಿಡಬಹುದು. ಸಕಲ ವಿದ್ಯುತ್ ಕಾಂತಿಯ ಕಿರಣಗಳನ್ನೂ ದಶದಿಶೆಗೆ ಹೊರ ಸೂಸುತ್ತಿರುವ ನಮ್ಮ ಸೂರ್ಯ ಸೌರವ್ಯೂಹದ ಆಧಾರಸ್ತಂಭ. ಅದೇನು ಭೂತಾಯಿಯ ಅದೃಷ್ಟವೋ, ಬೇರೆ ಯಾವ ಗ್ರಹದಲ್ಲೂ ಜೀವ ಜಂತುಗಳಿಗೆ ಬೇಕಾಗುವ ವಾತಾವರಣ ಸೌರವ್ಯೂಹದ ಬೇರಾವ ಗ್ರಹ, ಉಪಗ್ರಹಗಳಲ್ಲಿ ಇರಿಸದೇ ಭೂಮಿಯಲ್ಲಿ ಇರಿಸಿದ್ದಾನೆ. ಇದನ್ನೂ ಓದಿ: ಕಾವೇರಿ ಹೋರಾಟದ ಅಖಾಡಕ್ಕಿಳಿದ ದಳಪತಿಗಳು- ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಬೃಹತ್ ಪ್ರತಿಭಟನೆ

    ನ್ಯೂಕ್ಲಿಯರ್ ಸಮ್ಮಿಲನ ಕ್ರಿಯೆಯಿಂದ ಕೊತಕೊತ ಕುದಿಯುವ ಪ್ಲಾಸ್ಮಾದ ಈ ನಮ್ಮ ಸೂರ್ಯನಲ್ಲಿ ಪ್ರಮುಖವಾಗಿ ಮೂರು ಪದರಗಳು. ಕೇಂದ್ರದ ಕೋರ್, ರೇಡಿಯೇಟಿವ್ ಝೋನ್ ಹಾಗೂ ಕನ್ವಿಕ್ಟಿವ್ ಝೋನ್. ಸುಮಾರು 13 ವಿಲಿಯನ್ ಡಿಗ್ರಿ ಸೆಲ್ಸಿಯಸ್‌ನ ಉಷ್ಣತೆಯಲ್ಲಿರುವ ಕೇಂದ್ರ ಕೋರ್‌ನ ನಂತರ ತಣಿಯುತ್ತಿರುವ ಇತರ ಪದರಗಳು. ಇವುಗಳ ನಂತರ ಹೊರಭಾಗದ ವಾತಾವರಣದಲ್ಲಿ ಪುನ: ಮೂರುಕವಚಗಳಿವೆ. ಅವೆಂದರೆ ಫೋಟೊಸ್ಫಿಯರ್, ಕ್ರೋಮೋಸ್ಪಿಯರ್ ಹಾಗೂ ಕೊರೋನಾ. ಅತ್ಯಂತ ಪರಮಾಶ್ಚರ್ಯವೆಂದರೆ ಈ ಸೂರ್ಯನ ಹೊರ ಪದರಗಳ ಉಷ್ಣತೆ ತಣಿದ ಹೊರ ಕವಚ ಫೋಟೋಸ್ಪಿಯರ್‌ನದ್ದು ಸುಮಾರು 6,000 ಡಿಗ್ರಿ ಆದರೆ ಅದರ ಕೊನೆಯ ಹೊರ ಕವಚ, ಕೊರೋನಾದಲ್ಲಿ 15 ಲಕ್ಷ ಡಿಗ್ರಿಗಿಂತಲೂ ಹೆಚ್ಚು. ಇವುಗಳ ಸೋಜಿಗ ಇನ್ನೂ ಗೊತ್ತಾಗಿಲ್ಲ. ಇದನ್ನೂ ಓದಿ: ಹೆಚ್‍ಡಿಕೆ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ- ಶೀಘ್ರವೇ ಡಿಸ್ಚಾರ್ಜ್

    ಆಶ್ಚರ್ಯವೆಂದರೆ 62 ಮೂಲವಸ್ತುಗಳನ್ನು ಹೊಂದಿರುವ ನಮ್ಮ ಸೂರ್ಯನಲ್ಲಿ, ಸುಮಾರು 75 ಅಂಶ ಹೈಡ್ರೋಜನ್. ಸೂರ್ಯ ನಿರಂತರ ನ್ಯೂಕ್ಲಿಯರ್ ಸಮ್ಮಿಲನ ಕ್ರಿಯೆಗಳ ಹರಿಕಾರ. ಕೇಂದ್ರದಲ್ಲಿ ಹೈಡ್ರೋಜನ್ ನಂತರ ಹೀಲಿಯಂ, ಕಾರ್ಬನ್ ಹೀಗೆ ಹೊರಹೊರಗೆ ನೀರುಳ್ಳಿ ಪದರದಲ್ಲಿರುವಂತೆ ಪದರಪದರಗಳಲ್ಲಿ ನಡೆಯುತ್ತಿರುತ್ತದೆ. ಸಹಸ್ರಾರು ವರ್ಷಗಳಿಂದ ಸೂರ್ಯನನ್ನು ಅರಿಯಲು ಮಾನವ ಪ್ರಯತ್ನ ನಡೆಯುತ್ತಲೇ ಇದೆಯಾದರೂ ಅಧ್ಯಯನ, ಚಿಂತನ ಮಂಥನಗಾಳಾಗಿದ್ದರೂ ಸಮೀಪಿಸಲು ಆಗದ ಉರಿ ಗೋಲವಾದುದರಿಂದ ಪ್ರಾಯೋಗಿಕವಾಗಿ ಅರಿಯಲು ಅಸಾಧ್ಯ. ಹಾಗಾಗಿ  ಸೋಹೋ, ಪಾರ್ಕರ್ ಮೊದಲಾದ ಅನೇಕ ಕೃತಕ ಉಪಗ್ರಹಗಳು ದೂರದಲ್ಲಿ ನಿಂತು ಅಥವಾ ಸುತ್ತ ತಿರುಗುತ್ತಾ ಅಧ್ಯಯನ ಮಾಡುತ್ತಿವೆ. ಇದನ್ನೂ ಓದಿ: ಸಂಸದ ಸ್ಥಾನದಿಂದ ಅನರ್ಹ – ಪ್ರಜ್ವಲ್ ರೇವಣ್ಣ ಮೇಲಿನ ಆರೋಪಗಳೇನು?

    ಸೂರ್ಯ ಭೂಮಿ ಜೊತೆಯಾಗಿ ಸೂರ್ಯನನ್ನು ನೆಮ್ಮದಿಯಿಂದ ಅಧ್ಯಯನ ಮಾಡಲು ಒಂದು ಒಳ್ಳೆಯ ಸ್ಥಳ ಮಾಡಿವೆ. ಅದೇ ಎಲ್1 ಸ್ಥಳ. ಭೂಮಿ ಸೂರ್ಯರ ಸರಾಸರಿ ದೂರ 15 ಕೋಟಿ ಕಿಮೀ. ಈ ದೂರದ ನಡುವೆ ಭೂಮಿಗೆ ಸಮೀಪ, ಭೂಮಿಯಿಂದ ಸುಮಾರು 15 ಲಕ್ಷ ಕಿ.ಮೀ ದೂರದಲ್ಲಿ ಈ ಎರಡರ ಗುರುತ್ವ ನಮ್ಮ ಕೃತಕ ಉಪಗ್ರಹಕ್ಕೆ ಸಮಾನವಾಗುವುದರಿಂದ ಅಲ್ಲೇ ನಾವು ಹಾರಿಸಿದ ಉಪಗ್ರಹ ಆರಾಮವಾಗಿ ಆ ಜಾಗದಲ್ಲಿ ನೆಲೆಸುತ್ತದೆ. ಭಾರತೀಯ ವಿಜ್ಞಾನಿಗಳು ಈ ಪವಿತ್ರ ಸ್ಥಳ ಎಲ್1 ನಲ್ಲಿ ನಮ್ಮ ನೆಚ್ಚಿನ ಕೃತಕ ಉಪಗ್ರಹ ಆದಿತ್ಯ ಎಲ್1 ನ್ನು ಇರಿಸಲು ಮುಂದಾಗಿದ್ದಾರೆ. ಸೂರ್ಯನ ಬಗ್ಗೆ ಅನೇಕ ಪ್ರಯೋಗಗಳನ್ನು ಮಾಡಿ ಸೂರ್ಯನನ್ನು ಅರಿಯಲು ಹೊರಟಿದ್ದಾರೆ. ಇದನ್ನೂ ಓದಿ: ಜಿಡಿಪಿ ಬೆಳವಣಿಗೆಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿದ ಭಾರತ – ಯಾವ ದೇಶದ್ದು ಎಷ್ಟು?

    ಇದು ಭಾರತದ 140 ಕೋಟಿ ಜನರ ಹೆಮ್ಮೆ: ಸೋಜಿಗಗಳ ಗೂಡಾದ ಸೂರ್ಯನನ್ನು ಅರಿಯಲು 7 ವಿಭಾಗಗಳಲ್ಲಿ ಆದಿತ್ಯ ಎಲ್1 ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಗೆಲೀಲಿಯೋ 1610ರಲ್ಲಿ ಕಂಡ ಸೂರ್ಯನ ಕಲೆಗಳು ಇವತ್ತಿಗೂ ವಿಸ್ಮಯ. ಜೊತೆ ಜೊತೆಯಾಗಿರುವ ಇವುಗಳ ಸಂಖ್ಯೆ ಪ್ರತೀ ವರ್ಷ ಬೇರೆಬೇರೆ. 11 ವರ್ಷಕ್ಕೆ ಪುನರಾವರ್ತಿಸುವ ಇವು ಒಂದು ವರ್ಷ ಇರುವುದೇ ಇಲ್ಲ. ಫೋಟೋಸ್ಪಿಯರ್‌ನಿಂದ ಚಿಮ್ಮುವ ಕಾಂತಿಯ ಸಮೂಹ ಬಹು ವಿಸ್ಮಯ ಇವುಗಳಿಗೆ ಕಾರಣವೆಂದು ಅಂದಾಜಿಸಲಾಗಿದೆ. ಸೂರ್ಯನ ಕಾಂತಿಯ ವಿಸ್ಮಯ, ಸೌರ ಕಲೆಗಳು, ಕೊರೋನಾ ವಿಚಿತ್ರ, ಬಿಡಗಡೆಯಾಗಿ ದಶ ದಿಶೆಗಳಿಗೆ ರಾಚುವ ವಿದ್ಯುತ್‌ಕಾಂತಿಯ ಕಿರಣಗಳ ಸೌರಮಾರುತಗಳ ವೈಭವ, ಕೊರೋನಲ್ ಮಾಸ್ ಇಜೆಕ್ಷನ್‌ನ ಶಕ್ತಿಯುತ ಕಣಗಳ ಪ್ರವಾಹಗಳ ಮುನ್ಸೂಚನೆ ಹೀಗೆ ಅನೇಕ ಪ್ರಯೋಗಗಳನ್ನು ಮಾಡಲು ಆದಿತ್ಯ ಎಲ್1 ಅಣಿಯಾಗಿದೆ. ಇದನ್ನೂ ಓದಿ: ಗೃಹಬಳಕೆಯ ಬೆನ್ನಲ್ಲೇ ವಾಣಿಜ್ಯ ಬಳಕೆಯ LPG ಬೆಲೆ 158 ರೂ. ಇಳಿಕೆ

    ಒಂದು ರೀತಿಯಲ್ಲಿ ನಮ್ಮ ಅರಮನೆಗಳ ಹೊರ ಕೋಟೆಯ ಮೇಲಿರುವ ಕಾವಲುಗಾರನಂತೆ ಸೂರ್ಯನಿಂದ ಬರುವ ಕಣ ಪ್ರವಾಹಗಳ ಮುನ್ನೆಚ್ಚರಿಕೆಯ ಕಾವಲುಗಾರ ನಮ್ಮ ಆದಿತ್ಯ ಎಲ್1. ಈ ಶಕ್ತಿಯುತ ಕಣಗಳು ನಮ್ಮ ವಿದ್ಯುತ್ ವ್ಯವಸ್ಥೆಯನ್ನು ತಲ್ಲಣ ಗೊಳಿಸಿಯಾವು. ಹಾಗೆ ನಮ್ಮ ಸುತ್ತಲ ಆಕಾಶದಲ್ಲಿರುವ ಕೃತಕ ಉಪಗ್ರಹಗಳನ್ನೂ ಹಾಳು ಮಾಡಿಯಾವು. ನಮ್ಮ ಭೂ ವಾತಾವರಣದ ಕಣಗಳನ್ನೂ ತಲ್ಲಣ ಗೊಳಿಸಿಯಾವು. ವಿಶ್ವವೇ ಭಾರತದ ವಿಜ್ಞಾನಿಗಳ ಈ ಕುತೂಹಲ ಪ್ರಯೋಗವನ್ನು ನಿಬ್ಬೆರಗಾಗಿ ವೀಕ್ಷಿಸುತ್ತಿವೆ. ನಮ್ಮ ವಿಜ್ಞಾನಿಗಳ ಈ ಪ್ರಾಮಾಣಿಕ ಪ್ಯಯತ್ನಕ್ಕೆ ನಮ್ಮ ಅನ್ನದಾತ ಜ್ಞಾನದಾತ ಆದಿತ್ಯ ಶುಭಹೇಳಲಿ. ನಮ್ಮ ನೆಚ್ಚಿನ ಆದಿತ್ಯ L1ಗೆ ನಮ್ಮೆಲ್ಲರ ಶುಭಾಶಯಗಳು. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆಸಲು ಸಿದ್ಧ – ಸುಪ್ರೀಂ ಕೋರ್ಟ್‍ಗೆ ಕೇಂದ್ರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆದಿತ್ಯ ಎಲ್ 1 ಉಡಾವಣೆಗೂ ಮುನ್ನ ತಿರುಪತಿಗೆ ಭೇಟಿ ನೀಡಿದ ಇಸ್ರೋ ಮುಖ್ಯಸ್ಥ

    ಆದಿತ್ಯ ಎಲ್ 1 ಉಡಾವಣೆಗೂ ಮುನ್ನ ತಿರುಪತಿಗೆ ಭೇಟಿ ನೀಡಿದ ಇಸ್ರೋ ಮುಖ್ಯಸ್ಥ

    ತಿರುಪತಿ: ಚಂದ್ರಯಾನ-3ರ ಯಶಸ್ವಿಯ ಬೆನ್ನಲ್ಲೇ ಸೂರ್ಯನ ಮೇಲೆ ಅಧ್ಯಯನ ನಡೆಸಲು ಆದಿತ್ಯ ಎಲ್ 1 (Aditya L-1) ಮಿಷನ್ ಉಡಾವಣೆಗೆ ಇಸ್ರೋ (ISRO) ಸಜ್ಜಾಗಿದೆ. ಬಾಹ್ಯಾಕಾಶಕ್ಕೆ ನೌಕೆಯನ್ನು ಕಳುಹಿಸಲು ಕ್ಷಣಗಣನೆ ಪ್ರಾರಂಭವಾಗಿದ್ದು, ಇದರ ಯಶಸ್ಸಿಗಾಗಿ ಇಸ್ರೋ ಮುಖ್ಯಸ್ಥರಾದ ಎಸ್ ಸೋಮನಾಥ್ (S Somnath) ಅವರು ತಿರುಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಆದಿತ್ಯ ಎಲ್ 1 ಉಡಾವಣೆಗೂ ಮುನ್ನ ಶುಕ್ರವಾರ ತಿರುಪತಿಯ ಬಾಲಾಜಿ ದೇವಾಲಯಕ್ಕೆ ಭೇಟಿ ನೀಡಿ ಎಸ್ ಸೋಮನಾಥ್ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಇಸ್ರೋವಿನ ಮುಂದಿನ ಮಿಷನ್ ಬಗ್ಗೆ ಮಾಹಿತಿ ನೀಡಿದ್ದಾರೆ. ಚಂದ್ರಯಾನ-3 ಮಿಷನ್‌ನ ವೈಜ್ಞಾನಿಕ ಪ್ರಯೋಗಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಾಳೆ ಆದಿತ್ಯ ಎಲ್ 1 ಉಡಾವಣೆ – ಸೂರ್ಯನ ಅಧ್ಯಯನಕ್ಕೆ ಹೇಗೆ ಸಿದ್ಧವಾಗಿದೆ ಇಸ್ರೋ?

    ಆದಿತ್ಯ ಎಲ್ 1 ಶನಿವಾರ ಬೆಳಗ್ಗೆ 11:50ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿದೆ. ಈ ಕಾರ್ಯಾಚರಣೆಯು ಗಮ್ಯ ಸ್ಥಾನವನ್ನು ತಲುಪಲು 125 ದಿನಗಳನ್ನು ತೆಗೆದುಕೊಳ್ಳಲಿದೆ. ಬಳಿಕ ಸೂರ್ಯನ ಮೇಲೆ ಅಧ್ಯಯನ ನಡೆಸಲಿದೆ ಎಂದು ಈ ಹಿಂದೆ ಎಸ್ ಸೋಮನಾಥ್ ತಿಳಿಸಿದ್ದಾರೆ. ಇದನ್ನೂ ಓದಿ: ಸೆ.11ಕ್ಕೆ ಬೆಂಗಳೂರು ಬಂದ್ – ಸರ್ಕಾರದ ವಿರುದ್ಧ ಸಿಡಿದ ಖಾಸಗಿ ಸಾರಿಗೆ ಒಕ್ಕೂಟ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Aditya-L1: ಚಂದ್ರಯಾನ ಆಯ್ತು – ಈಗ ಸೂರ್ಯ ಸವಾರಿಯತ್ತ ಇಸ್ರೋ ಚಿತ್ತ

    Aditya-L1: ಚಂದ್ರಯಾನ ಆಯ್ತು – ಈಗ ಸೂರ್ಯ ಸವಾರಿಯತ್ತ ಇಸ್ರೋ ಚಿತ್ತ

    ಸೂರ್ಯಾನ್ವೇಷಣೆಗೆ ಸಜ್ಜಾಗಿದೆ ಆದಿತ್ಯ ಎಲ್‌-1 

    ಹೊಸ ಮೈಲುಗಲ್ಲಿನತ್ತ ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ISRO) ದಾಪುಗಾಲಿಟ್ಟಿದೆ. ಚಂದ್ರಯಾನ-3ರ ವಿಕ್ರಮ್‌ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿಯುವುದಕ್ಕೆ ಕ್ಷಣಗಣನೆ ಬಾಕಿಯಿದೆ. ಈ ದೃಶ್ಯವನ್ನ ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಈ ನಡುವೆ ಸೂರ್ಯನ ಸನಿಹಕ್ಕೆ ತೆರಳುವ ಸಾಹಸಕ್ಕೆ ಇಸ್ರೋ ಭರದ ಸಿದ್ಧತೆ ನಡೆಸಿದೆ. ಬೆಂಗಳೂರಿನ ಯು.ಆರ್.ರಾವ್ ಉಪಗ್ರಹ ಕೇಂದ್ರದಲ್ಲಿ (URSC) ಸಿದ್ಧಪಡಿಸಿದಲಾದ ಉಪಗ್ರಹವನ್ನು ಶ್ರೀಹರಿಕೋಟಾದಿಂದ ಉಡಾವಣೆಗೊಳಿಸಲು ಸಜ್ಜುಗೊಳಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಇದೇ ಆಗಸ್ವ್‌ 26 ರಂದು ʻಆದಿತ್ಯ ಎಲ್-1′ (Aditya-L1) ಯೋಜನೆಯ ಉಡಾವಣೆಗೆ ಇಸ್ರೊ ಮುಂದಾಗಿದೆ. ಇದು ಭಾರತದ ಪ್ರಪ್ರಥಮ ಸೂರ್ಯ ಅಧ್ಯಯನ ಯೋಜನೆ ಎನ್ನುವುದು ಇನ್ನೊಂದು ಗರಿಮೆ. 

    ಆದಿತ್ಯ ಎಲ್-1 ಯೋಜನೆಯು ಸೌರ ಬಿರುಗಾಳಿ ಹೇಗೆ ಉಂಟಾಗುತ್ತವೆ? ಅನ್ನೋದನ್ನ ಅಧ್ಯಯನ ನಡೆಸುವ ಜೊತೆಗೆ ಅವುಗಳನ್ನ ಅರ್ಥೈಸಿಕೊಳ್ಳುವ ಉದ್ದೇಶವನ್ನೂ ಹೊಂದಿದೆ. ಇದರಿಂದ ಸೂರ್ಯನ ವರ್ತನೆ, ಭೂಮಿಯ ವಾತಾವರಣದ ಮೇಲೆ ಅದರ ಪ್ರಭಾವ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಭೀಕರ ಸೌರಮಾರುತಗಳು ಅಪ್ಪಳಿಸುವಾಗ ಮುನ್ನೆಚ್ಚರಿಕೆ ತೆಗೆದುಕೊಳ್ಳಲೂ ಸಹಾಯವಾಗುತ್ತದೆ. ಅದಕ್ಕಾಗಿಯೇ ಇಸ್ರೋ ಆದಿತ್ಯ ಎಲ್‌-1 ಯೋಜನೆಯಲ್ಲಿ ಕರೊನಾಗ್ರಾಫ್‌ ಸ್ಯಾಟಲೈಟ್‌ ಎಂಬ ವಿಶೇಷ ಉಪಗ್ರಹವನ್ನ ಬಾಹ್ಯಾಕಾಶಕ್ಕೆ ಕಳುಹಿಸಲಿದೆ. ಈ ಉಪಗ್ರಹ ವಿಜ್ಞಾನಿಗಳಿಗೆ ಸೂರ್ಯ ಮತ್ತು ʻಕರೊನಾ’ ಎಂದು ಕರೆಯಲಾಗುವ ಭಾಸ್ಕರನ ಹೊರ ವಾತಾವರಣವನ್ನ ಅಧ್ಯಯನ ನಡೆಸಿ, ಸೂರ್ಯನ ವರ್ತನೆ ಮತ್ತು ಚಟುವಟಿಕೆಗಳನ್ನು ಅರ್ಥಮಾಡಿಕೊಳ್ಳಲು ಸಹಕರಿಸುತ್ತದೆ. ಈ ಉಡಾವಣೆಗೆ ಇಸ್ರೋ ತನ್ನ ವಿಶ್ವಾಸಾರ್ಹ ರಾಕೆಟ್‌ ಪೋಲಾರ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್‌ (PSLV) ಬಳಸಿಕೊಳ್ಳಲಿದೆ.

    ಸೂರ್ಯನ ಸುತ್ತಲೂ ಫೋಟೋಸ್ಪಿಯರ್‌, ಕ್ರೋಮೊಸ್ಪಿಯರ್‌ ಮತ್ತು ಕರೊನಾ ಎಂಬ ಮೂರು ಅನಿಲ ಪದರಗಳು ಇರುತ್ತವೆ. ಫೋಟೋಸ್ಪಿಯರ್‌ ಅನ್ನೋದು ನಮಗೆ ಕಾಣುವ ಸೂರ್ಯನ ಮೇಲ್ಮೈ. ಅಲ್ಲಿಂದ ಬೆಳಕು ಬಿಡುಗಡೆಯಾಗುತ್ತದೆ. ಕ್ರೋಮೊಸ್ಪಿಯರ್‌ ಎನ್ನುವುದು ಫೋಟೊಸ್ಪಿಯರ್‌ನ ಮೇಲಿದ್ದು, ಸೂರ್ಯ ಗ್ರಹಣದ ಸಂದರ್ಭದಲ್ಲಿ ಕೆಂಪಾಗಿ ಗೋಚರಿಸುತ್ತದೆ. ಸೂರ್ಯನ ಅತ್ಯಂತ ಹೊರಗಿನ ಪದರವೇ ಕರೊನಾ. ಆದ್ರೆ, ಇದು ಸೂರ್ಯನ ಮೇಲ್ಮೈಗಿಂತಲೂ ಬಿಸಿಯಾಗಿರುತ್ತದೆ. ಸೂರ್ಯನ ವಾತಾವರಣ ಸೌರ ಮಾರುತಗಳನ್ನ ಸೃಷ್ಟಿಸುತ್ತದೆ. ಇವು ಭೂಮಿ ಮತ್ತು ಸಸ್ಯಗಳ ಮೇಲೆ ಪ್ರಭಾವ ಬೀರುತ್ತವೆ ಎಂದು ತಜ್ಞರು ಹೇಳುತ್ತಾರೆ. 

    ಇಸ್ರೋಗೆ ಏಕೆ ಸೂರ್ಯನ ಮೇಲೆ ಆಸಕ್ತಿ? 

    ಆದಿತ್ಯ ಎಲ್‌-1 ನೌಕೆ ಯು ದೀರ್ಘಾವಧಿ (ವೈಜ್ಞಾನಿಕ ಅನ್ವೇಷಣೆ) ಹಾಗೂ ಅಲ್ಪಾವಧಿ (ಸೌರ ಮಾರುತಗಳಿಂದ ನಮ್ಮ ಉಪಗ್ರಹಗಳ ರಕ್ಷಣೆ) ಯೋಜನೆಯ ಉದ್ದೇಶದಿಂದ ಈ ಸಾಹಸಕ್ಕೆ ಇಸ್ರೋ ಮುಂದಾಗಿದೆ. 2006ರಲ್ಲಿ ಈ ಬಗ್ಗೆ ಭಾರತೀಯ ಆಸ್ಟ್ರೋಫಿಸಿಕ್ಸ್ ಮತ್ತು ಆಸ್ಟ್ರೋನಾಮಿಕಲ್ ಸೊಸೈಟಿ ಆಫ್ ಇಂಡಿಯಾದ ವಿಜ್ಞಾನಿಗಳ ಗುಂಪು ಇಸ್ರೋಗೆ ಪ್ರಸ್ತಾಪಿಸಿತ್ತು. ಸೂರ್ಯನಿಂದ ಹೊರಬರುವ ವಸ್ತುಗಳಿಂದ ನಮ್ಮ ಉಪಗ್ರಹಗಳನ್ನು ರಕ್ಷಿಸುವ ಉದ್ದೇಶವನ್ನೂ ಒತ್ತಿ ಹೇಳಿತ್ತು. ಆದರೆ ಇಸ್ರೋ ಮಾಜಿ ಅಧ್ಯಕ್ಷರಾದ ಪ್ರೊ.ಯು.ಆರ್‌ ರಾವ್‌ ಮಿಷನ್‌ ವ್ಯಾಪ್ತಿಯನ್ನ ವಿಸ್ತರಿಸಲು ಸಲಹೆ ನೀಡಿದ್ದರು. ಇದೀಗ ಆಯೋಜನೆ ಮುನ್ನೆಲೆಗೆ ಬಂದಿದ್ದು, ಶೀಘ್ರದಲ್ಲೇ ಉಡಾವಣೆಗೊಳ್ಳಲಿದೆ. ಇದರಿಂದ ಚಂದ್ರಯಾನದ ಬಳಿಕ ಸೂರ್ಯಾನ್ವೇಷಣೆ ಇಸ್ರೋಗೆ ಮತ್ತಷ್ಟು ಬಲ ತುಂಬಲಿದೆ. 

    ನಮ್ಮ ಉಪಗ್ರಹಗಳನ್ನು ಹಾನಿಗೊಳಿಸಬಹುದಾದ ಸೌರ ಚಂಡಮಾರುತಗಳ ವಿರುದ್ಧ ಕಾರ್ಯಾಚರಣೆ ನಡೆಸುವುದು, ಜೊತೆಗೆ ಸೂರ್ಯನನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದು ಇದರ ಪರಿಕಲ್ಪನೆಯಾಗಿದೆ. ಸೌರ ಚಂಡಮಾರುತಗಳು ಅನೇಕ ರೂಪಗಳಲ್ಲಿ ಹೊರಬರುತ್ತವೆ. ಉದಾಹರಣೆಗೆ ಕರೋನಲ್ ಮಾಸ್ ಇಜೆಕ್ಷನ್‌ಗಳು (ಸೂರ್ಯನಿಂದ ಬಿಲಿಯನ್‌ ಟನ್‌ಗಳಷ್ಟು ವಸ್ತುವನ್ನು ಹೊರಹಾಕಲಾಗುತ್ತದೆ ಇದು ಭೂಮಿ ಸೇರಿದಂತೆ ಎಲ್ಲಿಂದಲಾದರೂ ಅಪ್ಪಳಿಸಬಹುದು), ಸೌರ ಜ್ವಾಲೆಗಳು, ಹಠಾತ್ ಸ್ಫೋಟಗಳು, ಬೆಂಕಿಯ ಕೆನ್ನಾಲಿಗೆ ಹೊರಸೂಸುವಿಕೆ, ಎಕ್ಸ್-ಕಿರಣಗಳು, ವಿದ್ಯುತ್ಕಾಂತೀಯ ಅಲೆಗಳು ಅಥವಾ ಹೆಚ್ಚಿನ ಶಕ್ತಿಯ ಕಣಗಳನ್ನು ಬಾಹ್ಯಾಕಾಶದಾದ್ಯಂತ ಹರಡಬಹುದು ಇದರಿಂದ ರೇಡಿಯೊ ಸಂವಹನಗಳನ್ನ ಅಡ್ಡಿಪಡಿಸಬಹುದು ಮತ್ತು ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳಿಗೆ ಹಾನಿ ಮಾಡಬಹುದು. ಇದೆಲ್ಲದರ ಬಗ್ಗೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಇಸ್ರೋ ಸೂರ್ಯನ ಮೇಲೆ ಸವಾರಿ ಮಾಡಲು ಮುಂದಾಗಿದೆ. 

    ಸೂರ್ಯ ಸುಮಾರು 4.5 ಶತಕೋಟಿ ವರ್ಷಗಳಷ್ಟು ಹಳೆಯ ನಕ್ಷತ್ರ, ಪ್ರಮುಖವಾಗಿ ಜಲಜನಕ ಮತ್ತು ಹೀಲಿಯಂನಿಂದ ಆವೃತ್ತವಾಗಿದೆ. ಸೂರ್ಯ ನಮ್ಮ ಸೌರವ್ಯೂಹದ ಕೇಂದ್ರ ಸ್ಥಾನದಲ್ಲಿದ್ದು, ಭೂಮಿಯಿಂದ 93 ದಶಲಕ್ಷಮೈಲು (151 ದಶಲಕ್ಷಕಿ.ಮೀ.) ದೂರದಲ್ಲಿದೆ. ಸೂರ್ಯನ ಶಕ್ತಿ ಭೂಮಿಯಲ್ಲಿ ಜೀವಿಗಳ ಅಸ್ತಿತ್ವಕ್ಕೆ ಅತ್ಯಂತ ಅವಶ್ಯ. ಸೌರಮಂಡಲದಲ್ಲೇ ಅತ್ಯಂತ ಬೃಹತ್ತಾಗಿರುವ ಸೂರ್ಯನ ಒಳಗೆ ಸುಮಾರು 13 ಲಕ್ಷ ಭೂಮಿಗಳನ್ನು ಜೋಡಿಸಿಡಬಹುದಾಗಿದೆ. ಅದರ ತಾಪಮಾನ ಅಂದಾಜು 1.5 ಕೋಟಿ ಡಿಗ್ರಿ ಸೆಲ್ಸಿಯಸ್‌ನಷ್ಟು ಸೂರ್ಯನ ಚಟುವಟಿಕೆಗಳಾದ ಉಷ್ಣ ಹೊರಸೂಸುವಿಕೆ, ಚಾರ್ಜ್ ಹೊಂದಿರುವ ಕಣಗಳ ಚಲನೆ ಸಂಪೂರ್ಣ ಸೌರವ್ಯೂಹದ ಮೇಲೆ ಪರಿಣಾಮ ಬೀರುತ್ತವೆ ಎಂದು ಬಾಹ್ಯಾಕಾಶ ತಜ್ಞರು ವಿವರಿಸಿದ್ದಾರೆ. 

    ಸೂರ್ಯನತ್ತ ಜಿಗಿದವರು ಯಾರ‍್ಯಾರು? 

    1960ರಲ್ಲಿ ಅಮೆರಿಕ ನಾಸಾ ಕೈಗೊಂಡಿದ್ದ ಪಯೋನಿರ್‌-5 ಮೊಟ್ಟ ಮೊಲದ ಸೂರ್ಯನ ಅನ್ವೇಷಣೆಯಾಗಿತ್ತು. ಈವರೆಗೆ ಒಟ್ಟು 14 ಬಾರಿ ಸೂರ್ಯನ ಅನ್ವೇಷಣೆಗಳನ್ನ ಕೈಗೊಂಡಿದೆ. ಅಮೆರಿಕ, ಜರ್ಮನಿ ಹಾಗೂ ಯುರೋಪಿಯನ್‌ ಬಾಹ್ಯಾಕಾಶ ಸಂಸ್ಥೆ ಸೇರಿ ಒಟ್ಟು 22 ಬಾರಿ ಸೂರ್ಯನ ಕಾರ್ಯಾಚರಣೆ ನಡೆದಿದೆ. 

    ಆದಿತ್ಯ ಎಲ್‌1 ಎಷ್ಟು ಪವರ್‌ ಫುಲ್‌?

    ಉಪಗ್ರಹ 1,500 ಕೆಜಿ (3,300 LB) ತೂಕ ಹೊಂದಿದೆ. ಈ ಉಪಗ್ರಹ ಹೊಂದಿರುವ ಪೇಲೋಡ್‌ಗಳು ಸೂರ್ಯನ ವಾತಾವರಣ ಮತ್ತು ಭೂಮಿಯ ಮೇಲೆ ಅದರ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತವೆ. ಈ ಪೇಲೋಡ್‌ಗಳು ಸೌರ ಬಿರುಗಾಳಿ ಮತ್ತು ಇತರ ಬಾಹ್ಯಾಕಾಶ ಹವಾಮಾನದ ಕುರಿತು ನಿಖರವಾದ ಮಾಹಿತಿ ನೀಡಿ, ನಮ್ಮ ಉಪಗ್ರಹಗಳು ಮತ್ತು ತಂತ್ರಜ್ಞಾನಗಳು ಹಾಳಾಗದಂತೆ ಕಾಪಾಡಲು ನೆರವಾಗುತ್ತವೆ. ಸೂರ್ಯನ ಅನ್ವೇಷಣೆ ಮಾಡಬೇಕಾದರೆ ಅಷ್ಟೆಲ್ಲಾ ತಾಪಮಾನವನ್ನ ಗ್ರಹಿಸಿ ಡೇಟಾ ಕಳುಹಿಸಬೇಕು ಅಂದರೆ ಉಪಗ್ರಹವೂ ಅಷ್ಟೇ ಸಾಮರ್ಥ್ಯ ಹೊಂದಿರಬೇಕಾಗುತ್ತದೆ.

    ಯಾವುದು ಹೇಗೆ ಕಾರ್ಯ ನಿರ್ವಹಿಸುತ್ತವೆ?

    * ವಿಸಿಬಲ್ ಎಮಿಷನ್ ಲೈನ್ ಕರೊನಾಗ್ರಾಫ್ (VELC):
    ಈ ಪೇಲೋಡ್ ಸೂರ್ಯನ ವಾತಾವರಣದ ಅತ್ಯಂತ ಹೊರಪದರವಾದ ಕರೊನಾದ ಚಿತ್ರಗಳನ್ನು ಸೆರೆಹಿಡಿಯುತ್ತದೆ.

    * ಸೋಲಾರ್ ಅಲ್ಟ್ರಾವೈಲೆಟ್ ಇಮೇಜಿಂಗ್ ಟೆಲಿಸ್ಕೋಪ್ (SUIT):
    ಈ ಪೇಲೋಡ್ ಸೂರ್ಯನ ವಾತಾವರಣದ ಒಂದು ಪದರವಾದ ಕ್ರೋಮೊಸ್ಪಿಯರ್ ಚಿತ್ರಗಳನ್ನ ತೆಗೆಯಲಿದೆ. ಈ ಕ್ರೋಮೊಸ್ಪಿಯರ್ ಎನ್ನುವುದು ಸೂರ್ಯನ ವಾತಾವರಣದಲ್ಲಿ ಫೋಟೊಸ್ಪಿಯ‌ರ್‌ ಮೇಲಿರುತ್ತದೆ.

    * ಸೋಲಾರ್ ವಿಂಡ್ ಪಾರ್ಟಿಕಲ್ ಎಕ್ಸ್‌ಪಿರಿಮೆಂಟ್‌ (ASPEX):
    ಈ ಪೇಲೋಡ್ ಸೋಲಾರ್‌ ವಿಂಡ್, ಅಂದರೆ ಚಾರ್ಜ್‌ ಹೊಂದಿರುವ ಕಣಗಳ ಚಲನೆಯನ್ನ ಅಳೆಯಲು ಬಳಕೆಯಾಗುತ್ತದೆ.

    * ಪ್ಲಾಸ್ಮಾ ಅನಲೈಸರ್ ಪ್ಯಾಕೇಜ್ ಫಾರ್ ಆದಿತ್ಯ (PAPA):
    ಈ ಪೇಲೋಡ್‌ ಸೂರ್ಯನ ಸುತ್ತಲೂ ಇರುವ ಪ್ಲಾಸ್ಮಾ ಅಥವಾ ಚಾರ್ಜ್ ಹೊಂದಿರುವ ಅನಿಲವನ್ನ ಅಳೆಯಲು ನೆರವಾಗುತ್ತದೆ.

    * ಸೋಲಾರ್ ಲೋ ಎನರ್ಜಿ ಎಕ್ಸ್-ರೇ ಸ್ಪೆಕ್ಟೋಮೀಟ‌ರ್‌ (SOLEXS):
    ಸೂರ್ಯನಿಂದ ಹೊರಬರುವ ಉತ್ಕೃಷ್ಟ ಶಕ್ತಿಯ ಎಕ್ಸ್-ರೇಗಳನ್ನು ಅಳೆಯುವ ಪೇಲೋಡ್ ಇದು.

    * ಹೈ ಎನರ್ಜಿ ಎಲ್1 ಆರ್ಬಿಟಿಂಗ್ ಎಕ್ಸ್ ರೇ ಸೆಕ್ಟೋಮೀಟರ್ (HEL1OS):
    ಈ ಪೇಲೋಡ್ ಸೂರ್ಯನಿಂದ ಹೊರಬರುವ ಹೈ ಎನರ್ಜಿ ಎಕ್ಸ್ ರೇ ಹೊರಸೂಸುವಿಕೆಯನ್ನು ಅಳೆಯುತ್ತದೆ.

    * ಮ್ಯಾಗ್ನೆಟೊಮೀಟರ್:
    ಸೂರ್ಯನ ಮತ್ತು ಸುತ್ತಮುತ್ತಲಿನ ಕಾಂತಕ್ಷೇತ್ರವನ್ನು ಅಳೆಯುವ ಪೇಲೋಡ್ ಇದು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]