Tag: Aditya-L1

  • ಆದಿತ್ಯ ಮಿಷನ್‌ ಉಡಾವಣೆಯಾದ ದಿನವೇ ಇಸ್ರೋ ಮುಖ್ಯಸ್ಥ ಸೋಮನಾಥ್‌ಗೆ ಕ್ಯಾನ್ಸರ್‌

    ಆದಿತ್ಯ ಮಿಷನ್‌ ಉಡಾವಣೆಯಾದ ದಿನವೇ ಇಸ್ರೋ ಮುಖ್ಯಸ್ಥ ಸೋಮನಾಥ್‌ಗೆ ಕ್ಯಾನ್ಸರ್‌

    – ಮಾಧ್ಯಮದ ಜೊತೆ ಕ್ಯಾನ್ಸರ್‌ ಅನುಭವ ಹಂಚಿಕೊಂಡ ಸೋಮನಾಥ್‌

    ನವದೆಹಲಿ: ಆದಿತ್ಯ-ಎಲ್1 (Aditya-L1) ಮಿಷನ್ ಉಡಾವಣೆಯಾದ ದಿನವೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮುಖ್ಯಸ್ಥ ಎಸ್ ಸೋಮನಾಥ್ (Somnath) ಅವರಿಗೆ ಕ್ಯಾನ್ಸರ್ (Cancer) ಇರುವುದು ಪತ್ತೆಯಾಗಿತ್ತು.

    ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ಚಂದ್ರಯಾನ-3 ಮಿಷನ್ (Chandrayaan-3 mission) ಉಡಾವಣೆ ಸಮಯದಲ್ಲಿ ಕೆಲವು ಆರೋಗ್ಯ ಸಮಸ್ಯೆಗಳಿದ್ದವು. ಆದರೆ ಆ ಸಮಯದಲ್ಲಿ ನನಗೆ ಸ್ಪಷ್ಟವಾದ ಮಾಹಿತಿ ಇರಲಿಲ್ಲ. ಆದಿತ್ಯ-ಎಲ್1 ಮಿಷನ್ ಉಡಾವಣೆಯಾದ ದಿನ ಸ್ಕ್ಯಾನಿಂಗ್‌ ಮಾಡಿದಾಗ ಕ್ಯಾನ್ಸರ್‌ ಇರುವುದು ದೃಢಪಟ್ಟಿತು ಎಂದು ತಿಳಿಸಿದರು. ಇದನ್ನೂ ಓದಿ: ಕ್ಯಾನ್ಸರ್‌ ಭಯ ಬೇಡ – ಕಿಮೋಥೆರಪಿ ಎಂದರೇನು? ಅದು ಹೇಗೆ ಕೆಲಸ ಮಾಡುತ್ತೆ?

    ಕ್ಯಾನ್ಸರ್‌ ಇರುವುದು ದೃಢಪಡುತ್ತಿದ್ದಂತೆ ನನಗೆ ಮಾತ್ರವಲ್ಲ ಈ ಸವಾಲಿನ ಅವಧಿಯಲ್ಲಿ ನನ್ನ ಕುಟುಂಬ ಮತ್ತು ಸಹೋದ್ಯೋಗಿಗಳಿಗೂ ಆಘಾತವಾಯಿತು ಎಂದು ಹೇಳಿದರು. ಇದನ್ನೂ ಓದಿ: ಕೇವಲ 100 ರೂ. ಕ್ಯಾನ್ಸರ್‌ಗೆ ಚಿಕಿತ್ಸೆ – ಟಾಟಾ ಸಂಸ್ಥೆಯಿಂದ ಮಾತ್ರೆ ಅಭಿವೃದ್ಧಿ

    ಆದಿತ್ಯ ಎಲ್ 1, ಸೂರ್ಯನನ್ನು ಅಧ್ಯಯನ ಮಾಡಲು ತನ್ನ ಪ್ರಯಾಣವನ್ನು ಪ್ರಾರಂಭಿಸಿದಾಗ ಬಳಿಕ ಸೋಮನಾಥ್‌ ರೂಟಿನ್‌ ಸ್ಕ್ಯಾನ್‌ಗೆ ಒಳಗಾದರು. ಈ ವೇಳೆ ಕ್ಯಾನ್ಸರ್‌ ಇರುವುದು ದೃಢಪಡುತ್ತಿದ್ದಂತೆ ಹೆಚ್ಚಿನ ಚಿಕಿತ್ಸೆಗೆ ಚೆನ್ನೈಯ ಆಸ್ಪತ್ರಗೆ ದಾಖಲಾದರು. ಈ ಕ್ಯಾನ್ಸರ್‌ ಅನುವಂಶೀಯತೆಯಿಂದ ಕ್ಯಾನ್ಸರ್‌ ಬಂದಿರುವುದು ಗೊತ್ತಾಯಿತು. ಸೋಮನಾಥ್ ಅವರಿಗೆ ಶಸ್ತ್ರಚಿಕಿತ್ಸೆಯ ನಂತರ ಕಿಮೊಥೆರಪಿ ಮಾಡಲಾಯಿತು.

    ಆಸ್ಪತ್ರೆಯಲ್ಲಿ ಕೇವಲ ನಾಲ್ಕು ದಿನಗಳನ್ನು ಕಳೆದ ನಂತರ ಸೋಮನಾಥ್‌ ಮತ್ತೆ ಇಸ್ರೋದಲ್ಲಿ ತಮ್ಮ ಕರ್ತವ್ಯಕ್ಕೆ ಹಾಜರಾದರು. ಐದನೇ ದಿನದಿಂದ ಯಾವುದೇ ನೋವು ಇಲ್ಲದೆ ಕೆಲಸ ಮಾಡಲಾರಂಭಿಸಿದರು.

    ನಾನು ನಿಯಮಿತವಾಗಿ ತಪಾಸಣೆ ಮತ್ತು ಸ್ಕ್ಯಾನ್‌ಗೆ ಒಳಗಾಗುತ್ತೇನೆ. ಈಗ ನಾನು ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ ಮತ್ತು ನನ್ನ ಕರ್ತವ್ಯವನ್ನು ಪುನರಾರಂಭಿಸಿದ್ದೇನೆ ಎಂದು ಸೋಮನಾಥ್ ಹೇಳಿದರು.

    ಚಂದ್ರಯಾನ-3 (Chandrayaan-3) ಯೋಜನೆಯ ಯಶಸ್ಸಿನ ನಂತರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸೂರ್ಯನನ್ನು ಅಧ್ಯಯನ ಮಾಡಲು ಸೆಪ್ಟೆಂಬರ್ 3 ರಂದು ಅದಿತ್ಯ ಎಲ್‌1 ಮಿಷನ್‌ ಆರಂಭಿಸಿತ್ತು. ಆದಿತ್ಯ-ಎಲ್1 ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಸೂರ್ಯನ ಹೊರಗಿನ ಪದರಗಳು (ಕರೋನಾ) ಮತ್ತು ಎಲ್-1 (ಸೂರ್ಯ-ಭೂಮಿಯ ಲಗ್ರಾಂಜಿಯನ್ ಪಾಯಿಂಟ್) ಅಧ್ಯಯನ ಮಾಡುತ್ತಿದೆ.

     

  • ಆದಿತ್ಯ-L1 ಮಿಷನ್‌ ಸಕ್ಸಸ್‌; ನಿಗದಿತ ಕಕ್ಷೆ ತಲುಪಿದ ನೌಕೆ – ISRO ಸಾಧನೆಗೆ ಮೋದಿ ಮೆಚ್ಚುಗೆ

    ಆದಿತ್ಯ-L1 ಮಿಷನ್‌ ಸಕ್ಸಸ್‌; ನಿಗದಿತ ಕಕ್ಷೆ ತಲುಪಿದ ನೌಕೆ – ISRO ಸಾಧನೆಗೆ ಮೋದಿ ಮೆಚ್ಚುಗೆ

    ಬೆಂಗಳೂರು: 110 ದಿನಗಳ ಸುದೀರ್ಘ ಪ್ರಯಾಣದ ಬಳಿಕ ಇಸ್ರೋ ಆದಿತ್ಯ ಎಲ್1 (Aditya-L1) ನೌಕೆಯು ‌15 ಲಕ್ಷ ಕಿಮೀ ಕ್ರಮಿಸಿ ಅಂತಿಮ ಕಕ್ಷೆ ತಲುಪಿದೆ. ಈ ಮೂಲಕ ಸೂರ್ಯನ ಅಧ್ಯಯನಕ್ಕೆ ಇಸ್ರೋ ಸಜ್ಜಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪ್ರಸಂಶೆ ವ್ಯಕ್ತಪಡಿಸಿದ್ದಾರೆ.

    ಸೆಪ್ಟೆಂಬರ್ 2 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (SDSC-SHAR) ಆದಿತ್ಯ-L1 ಏಳು ಪೇಲೋಡ್‌ಗಳೊಂದಿಗೆ ಉಡಾವಣೆಗೊಂಡಿತ್ತು. ಭೂಮಿಯಿಂದ ಸುಮಾರು 15 ಲಕ್ಷ ಕಿಮೀ ದೂರದಲ್ಲಿರುವ L1 ಪಾಯಿಂಟ್‌ ಕಡೆಗೆ ಭೂ ಕಕ್ಷೆಯಿಂದ ಬಾಹ್ಯಾಕಾಶ (Space) ನೌಕೆಯನ್ನು ಕಳುಹಿಸಿತ್ತು. ಶನಿವಾರ ಬೆಳಗ್ಗಿನಿಂದಲೇ ಹಾಲೋ ಆರ್ಬಿಟ್ ಅಳವಡಿಕೆಯ ಕಾರ್ಯವನ್ನು ಮುಂದುವರಿಸಿ ಲಗ್ರೇಂಜ್‌ ಪಾಯಿಂಟ್-1 ರಲ್ಲಿ ಇರಿಸಲು ಪ್ರಾರಂಭಿಸಿತ್ತು. ಅಂದುಕೊಂಡಂತೆ ಆದಿತ್ಯ ಎಲ್‌-1 ನೌಕೆಯು ನಿಗದಿತ ಕಕ್ಷೆ ತಲುಪಿದ್ದು, ದೊಡ್ಡ ಯಶಸ್ಸು ತಂದುಕೊಟ್ಟಿದೆ. 2023ರ ಚಂದ್ರಯಾನ-3 ಯಶಸ್ವಿ ಬಳಿಕ ಇಸ್ರೋ (ISRO) ಸ್ಥಾಪಿಸಿದ ಮಹತ್ವದ ಮೈಲುಗಲ್ಲು ಇದಾಗಿದೆ.

    ಇನ್ಮುಂದೆ ಆದಿತ್ಯ L1 ನೌಕೆಯು ನಿಗದಿತ ಕಕ್ಷೆಯಲ್ಲಿ ನಿಂತು ಹಗಲು, ರಾತ್ರಿ ಹಾಗೂ ಗ್ರಹಣಗಳ ಅಡೆತಡೆ ಇಲ್ಲದೇ ಸೂರ್ಯನನ್ನು ನಿರಂತರವಾಗಿ ಅಧ್ಯಯನ ಮಾಡಲಿದೆ. ಸೂರ್ಯನಲ್ಲಿ ನಡೆಯುವ ಚಟುವಟಿಕೆಗಳು ಹಾಗೂ ಅಂತರಿಕ್ಷದ ವಾತಾವರಣದ ಮೇಲೆ ಅದರ ಪರಿಣಾಮವನ್ನು ಅಧ್ಯಯನ ನಡೆಸಲಿದೆ.

    ಇಸ್ರೋದ ಮಹತ್ವದ ಸಾಧನೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ಭಾರತ ಮತ್ತೊಂದು ಹೆಗ್ಗುರುತನ್ನು ಸೃಷ್ಟಿಸಿದೆ. ಭಾರತದ ಮೊದಲ ಸೌರ ವೀಕ್ಷಣಾಲಯ ಆದಿತ್ಯ-ಎಲ್1 ತನ್ನ ಗಮ್ಯಸ್ಥಾನವನ್ನು ತಲುಪಿದೆ. ಇದು ಅತ್ಯಂತ ಸಂಕೀರ್ಣ ಮತ್ತು ಸಂಕೀರ್ಣವಾದ ಬಾಹ್ಯಾಕಾಶ ಕಾರ್ಯಾಚರಣೆಗಳ ನಡುವೆ ಸಾಕ್ಷಾತ್ಕಾರದಲ್ಲಿ ನಮ್ಮ ವಿಜ್ಞಾನಿಗಳ ನಿರಂತರ ಸಮರ್ಪಣೆಗೆ ಸಾಕ್ಷಿಯಾಗಿದೆ. ಈ ಅಸಾಧಾರಣ ಸಾಧನೆಯನ್ನು ದೇಶದ ಜನತೆಯೊಂದಿಗೆ ಸೇರಿ ಶ್ಲಾಘಿಸುತ್ತೇನೆ. ಜೊತೆಗೆ ಮಾನವ ಪ್ರಯೋಜನಗಳಿಗಾಗಿ ವಿಜ್ಞಾನದ ಅನ್ವೇಷಣೆಗಳನ್ನು ಮುಂದುವರಿಸುತ್ತೇವೆ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಸೂರ್ಯನತ್ತ ಜಿಗಿದವರು ಯಾರ‍್ಯಾರು?
    1960ರಲ್ಲಿ ಅಮೆರಿಕ ನಾಸಾ ಕೈಗೊಂಡಿದ್ದ ಪಯೋನಿರ್‌-5 ಮೊಟ್ಟ ಮೊಲದ ಸೂರ್ಯನ ಅನ್ವೇಷಣೆಯಾಗಿತ್ತು. ಈವರೆಗೆ ಒಟ್ಟು 14 ಬಾರಿ ಸೂರ್ಯನ ಅನ್ವೇಷಣೆಗಳನ್ನ ಕೈಗೊಂಡಿದೆ. ಅಮೆರಿಕ, ಜರ್ಮನಿ ಹಾಗೂ ಯುರೋಪಿಯನ್‌ ಬಾಹ್ಯಾಕಾಶ ಸಂಸ್ಥೆ ಸೇರಿ ಒಟ್ಟು 22 ಬಾರಿ ಸೂರ್ಯನ ಕಾರ್ಯಾಚರಣೆ ನಡೆದಿದೆ

    ಯಾವುದು ಹೇಗೆ ಕಾರ್ಯ ನಿರ್ವಹಿಸುತ್ತವೆ?
    * ವಿಸಿಬಲ್ ಎಮಿಷನ್ ಲೈನ್ ಕರೊನಾಗ್ರಾಫ್ (VELC):
    ಈ ಪೇಲೋಡ್ ಸೂರ್ಯನ ವಾತಾವರಣದ ಅತ್ಯಂತ ಹೊರಪದರವಾದ ಕರೊನಾದ ಚಿತ್ರಗಳನ್ನು ಸೆರೆಹಿಡಿಯುತ್ತದೆ.

    * ಸೋಲಾರ್ ಅಲ್ಟ್ರಾವೈಲೆಟ್ ಇಮೇಜಿಂಗ್ ಟೆಲಿಸ್ಕೋಪ್ (SUIT):
    ಈ ಪೇಲೋಡ್ ಸೂರ್ಯನ ವಾತಾವರಣದ ಒಂದು ಪದರವಾದ ಕ್ರೋಮೊಸ್ಪಿಯರ್ ಚಿತ್ರಗಳನ್ನ ತೆಗೆಯಲಿದೆ. ಈ ಕ್ರೋಮೊಸ್ಪಿಯರ್ ಎನ್ನುವುದು ಸೂರ್ಯನ ವಾತಾವರಣದಲ್ಲಿ ಫೋಟೊಸ್ಪಿಯ‌ರ್‌ ಮೇಲಿರುತ್ತದೆ.

    * ಸೋಲಾರ್ ವಿಂಡ್ ಪಾರ್ಟಿಕಲ್ ಎಕ್ಸ್‌ಪಿರಿಮೆಂಟ್‌ (ASPEX):
    ಈ ಪೇಲೋಡ್ ಸೋಲಾರ್‌ ವಿಂಡ್, ಅಂದರೆ ಚಾರ್ಜ್‌ ಹೊಂದಿರುವ ಕಣಗಳ ಚಲನೆಯನ್ನ ಅಳೆಯಲು ಬಳಕೆಯಾಗುತ್ತದೆ.

    * ಪ್ಲಾಸ್ಮಾ ಅನಲೈಸರ್ ಪ್ಯಾಕೇಜ್ ಫಾರ್ ಆದಿತ್ಯ (PAPA):
    ಈ ಪೇಲೋಡ್‌ ಸೂರ್ಯನ ಸುತ್ತಲೂ ಇರುವ ಪ್ಲಾಸ್ಮಾ ಅಥವಾ ಚಾರ್ಜ್ ಹೊಂದಿರುವ ಅನಿಲವನ್ನ ಅಳೆಯಲು ನೆರವಾಗುತ್ತದೆ.

    * ಸೋಲಾರ್ ಲೋ ಎನರ್ಜಿ ಎಕ್ಸ್-ರೇ ಸ್ಪೆಕ್ಟೋಮೀಟ‌ರ್‌ (SOLEXS):
    ಸೂರ್ಯನಿಂದ ಹೊರಬರುವ ಉತ್ಕೃಷ್ಟ ಶಕ್ತಿಯ ಎಕ್ಸ್-ರೇಗಳನ್ನು ಅಳೆಯುವ ಪೇಲೋಡ್ ಇದು.

    * ಹೈ ಎನರ್ಜಿ ಎಲ್1 ಆರ್ಬಿಟಿಂಗ್ ಎಕ್ಸ್ ರೇ ಸೆಕ್ಟೋಮೀಟರ್ (HEL1OS):
    ಈ ಪೇಲೋಡ್ ಸೂರ್ಯನಿಂದ ಹೊರಬರುವ ಹೈ ಎನರ್ಜಿ ಎಕ್ಸ್ ರೇ ಹೊರಸೂಸುವಿಕೆಯನ್ನು ಅಳೆಯುತ್ತದೆ.

    * ಮ್ಯಾಗ್ನೆಟೊಮೀಟರ್:
    ಸೂರ್ಯನ ಮತ್ತು ಸುತ್ತಮುತ್ತಲಿನ ಕಾಂತಕ್ಷೇತ್ರವನ್ನು ಅಳೆಯುವ ಪೇಲೋಡ್ ಇದು.

  • ಇಸ್ರೋದಿಂದ ದಿಟ್ಟ ಹೆಜ್ಜೆ – ಇಂದು ನಿಗದಿತ ಕಕ್ಷೆಗೆ ಸೇರಲಿದೆ ಆದಿತ್ಯ ಎಲ್1

    ಇಸ್ರೋದಿಂದ ದಿಟ್ಟ ಹೆಜ್ಜೆ – ಇಂದು ನಿಗದಿತ ಕಕ್ಷೆಗೆ ಸೇರಲಿದೆ ಆದಿತ್ಯ ಎಲ್1

    ನವದೆಹಲಿ: ಭೂಮಿಯಿಂದ ಸೂರ್ಯನತ್ತ (Sun) ಹೊರಟು ನಾಲ್ಕು ತಿಂಗಳ ಪೂರೈಸಿ, 15 ಲಕ್ಷ ಕಿ.ಮೀ ಕ್ರಮಿಸಿರುವ ಆದಿತ್ಯ ಎಲ್1 (Aditya-L1) ನೌಕೆಯನ್ನು ಇಂದು ಅದರ ನಿಗದಿತ ಕಕ್ಷೆಗೆ ಸೇರಿಸಲು ಇಸ್ರೋ (ISRO) ವಿಜ್ಞಾನಿಗಳು ಸಜ್ಜಾಗಿದ್ದಾರೆ.

    ಕಳೆದ ವರ್ಷ ಸೆ.2ರಂದು ಆದಿತ್ಯ ಎಲ್1 ನೌಕೆಯನ್ನು ಇಸ್ರೋ ಉಡಾವಣೆ ಮಾಡಿತ್ತು. ಇದೀಗ 15 ಲಕ್ಷ ಕಿ.ಮೀ ಸಂಚರಿಸಿ ನಿಗದಿತ ಕಕ್ಷೆಯ ಬಳಿ ಸಮೀಪಿಸಿರುವ ಅದನ್ನು ಎಲ್1 ಪಾಯಿಂಟ್ ಎಂಬ ನಿರ್ವಾತ ಪ್ರದೇಶಕ್ಕೆ ಸೇರಿಸಲಾಗುತ್ತದೆ. ಉಪಗ್ರಹವನ್ನು ಸುಮಾರು ಸಂಜೆ 4 ಗಂಟೆಗೆ ಲ್ಯಾಗ್ರೇಂಜ್ ಪಾಯಿಂಟ್ 1 (L1) ಗೆ ಸೇರಿಸುವ ನಿರೀಕ್ಷೆಯಿದೆ. ಅಕಸ್ಮಾತ್ ಅದನ್ನು ಆ ಪ್ರದೇಶಕ್ಕೆ ಸೇರಿಸದೇ ಇದ್ದರೆ ಅದು ಸೂರ್ಯನೆಡೆಗೆ ಸಂಚರಿಸಿ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಇಂದು (ಶನಿವಾರ) ಇಸ್ರೋಗೆ ಮಹತ್ವದ ದಿನವಾಗಿದೆ. ಇದನ್ನೂ ಓದಿ: ಲಕ್ಷದ್ವೀಪಕ್ಕೆ ಮೋದಿ ಭೇಟಿ: ಮಾಲ್ಡೀವ್ಸ್‌ಗೆ ಬಿಗ್‌ ಶಾಕ್‌

    ಎಲ್1 ಪಾಯಿಂಟ್ ಎಂಬುದು ಭೂಮಿಯಿಂದ ಸೂರ್ಯನಿಗಿರುವ ಒಟ್ಟು ದೂರದಲ್ಲಿ ನೂರನೇ ಒಂದರ ಭಾಗವಾಗಿದೆ. ಇಲ್ಲಿಂದ, ಹಗಲು, ರಾತ್ರಿ ಹಾಗೂ ಗ್ರಹಣಗಳ ಅಡೆತಡೆ ಇಲ್ಲದೇ ಆದಿತ್ಯ ಎಲ್1 ನೌಕೆಯು ಸೂರ್ಯನನ್ನು ನಿರಂತರವಾಗಿ ಅಧ್ಯಯನ ಮಾಡಲಿದೆ. ಸೂರ್ಯನಲ್ಲಿ ನಡೆಯುವ ಚಟುವಟಿಕೆಗಳು ಹಾಗೂ ಅಂತರಿಕ್ಷದ ವಾತಾವರಣದ ಮೇಲೆ ಅದರ ಪರಿಣಾಮವನ್ನು ಆದಿತ್ಯ ಎಲ್1 ಅಧ್ಯಯನ ನಡೆಸಲಿದೆ. ಆದಿತ್ಯ ಎಲ್1 ನಾಲ್ಕು ಪೆಲೋಡ್‍ಗಳನ್ನು ಹೊಂದಿದ್ದು, ಅಲ್ಲಿಂದ ನೇರವಾಗಿ ಇಸ್ರೋಗೆ ಮಾಹಿತಿ ರವಾನಿಸಲಿದೆ.

    ಚಂದ್ರಯಾನ 3 ಯಶಸ್ವಿಯಾದ ಬಳಿಕ ಇದು ಇಸ್ರೋದ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಇದರ ಬೆನ್ನಲ್ಲೇ ಹೊಸವರ್ಷದ ಮೊದಲ ದಿನವೇ ಕಪ್ಪು ಕುಳಿಗಳ ಅಧ್ಯಯನಕ್ಕೆ  ಎಕ್ಸ್‌ಪೋಸ್ಯಾಟ್ ಉಪಗ್ರಹದ ಉಡಾವಣೆಯನ್ನು ಇಸ್ರೋ ಯಶಸ್ವಿಯಾಗಿ ಮಾಡಿತ್ತು. ಇದನ್ನೂ ಓದಿ: ಮಸ್ಕ್‌ನ ಸ್ಪೇಸ್‍ಎಕ್ಸ್ ರಾಕೆಟ್‍ನಲ್ಲಿ ಶೀಘ್ರ ಇಸ್ರೋ ಉಪಗ್ರಹ ಉಡಾವಣೆ

  • ಭೂಮಿ ಕಕ್ಷೆ ತೊರೆದ ಆದಿತ್ಯ ಎಲ್‌1 ನೌಕೆ – 110 ದಿನಗಳ ಸೂರ್ಯ ಯಾತ್ರೆ ಆರಂಭ

    ಭೂಮಿ ಕಕ್ಷೆ ತೊರೆದ ಆದಿತ್ಯ ಎಲ್‌1 ನೌಕೆ – 110 ದಿನಗಳ ಸೂರ್ಯ ಯಾತ್ರೆ ಆರಂಭ

    ನವದೆಹಲಿ: ಸೂರ್ಯನನ್ನು ಅಧ್ಯಯನ ಮಾಡುವ ಭಾರತದ ಮೊದಲ ಬಾಹ್ಯಾಕಾಶ-ಆಧಾರಿತ ಮಿಷನ್ ಆದಿತ್ಯ-ಎಲ್ 1 (Aditya L1) ಬಾಹ್ಯಾಕಾಶ ನೌಕೆಯು ಭೂಮಿಯ ಕಕ್ಷೆಯಿಂದ ಹೊರನಡೆದು, ಲಾಗ್ರೇಂಜ್ ಪಾಯಿಂಟ್ 1 (ಎಲ್ 1) ಕಡೆಗೆ ಹೆಜ್ಜೆ ಇಟ್ಟಿದೆ.

    ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಟ್ರಾನ್ಸ್-ಲಗ್ರಾಂಜಿಯನ್ ಪಾಯಿಂಟ್ 1 (TL1I) ಕಕ್ಷೆ ಎತ್ತರಿಸುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿತು. L1 ಗೆ ಬಾಹ್ಯಾಕಾಶ ನೌಕೆಯ 110 ದಿನಗಳ ಪ್ರಯಾಣ ಈಗ ಆರಂಭಗೊಂಡಿದೆ. ಈ ಕುರಿತು ಇಸ್ರೋ, ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದೆ. ಇದನ್ನೂ ಓದಿ: ಇದು ಅಸಂಬದ್ಧ, ಪ್ರೇರಿತ- ಕೆನಡಾ ಆರೋಪ ತಿರಸ್ಕರಿಸಿದ ಭಾರತ

    TL1I ಭೂಮಿಯಿಂದ ಸುಮಾರು 15 ಲಕ್ಷ ಕಿಮೀ ದೂರದಲ್ಲಿರುವ L1 ಪಾಯಿಂಟ್‌ ಕಡೆಗೆ ಭೂ ಕಕ್ಷೆಯಿಂದ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿದೆ. ಆದಿತ್ಯ ನೌಕೆಯು ಈಗ ಸೂರ್ಯ-ಭೂಮಿ ಎಲ್‌1 ಪಾಯಿಂಟ್‌ ಕಡೆಗೆ ಪ್ರಯಾಣ ಆರಂಭಿಸಿದೆ.

    ಸೆಪ್ಟೆಂಬರ್ 2 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (SDSC-SHAR) ಆದಿತ್ಯ-L1 ಏಳು ಪೇಲೋಡ್‌ಗಳೊಂದಿಗೆ ಉಡಾವಣೆಗೊಂಡಿತ್ತು. ಇದನ್ನೂ ಓದಿ: ಹಳೆ ಸಂಸತ್‌ ಭವನದಲ್ಲಿ ಸಂಸದರ ಮೆಗಾ ಫೋಟೋಶೂಟ್‌ – ಸುಂದರ ನೆನಪುಗಳೊಂದಿಗೆ ವಿದಾಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಣೇಶ ಹಬ್ಬದಂದೇ ಇಸ್ರೋ ಗುಡ್‌ನ್ಯೂಸ್ – ಡೇಟಾ ಸಂಗ್ರಹಿಸಲು ಆರಂಭಿಸಿದ ಆದಿತ್ಯ L1

    ಗಣೇಶ ಹಬ್ಬದಂದೇ ಇಸ್ರೋ ಗುಡ್‌ನ್ಯೂಸ್ – ಡೇಟಾ ಸಂಗ್ರಹಿಸಲು ಆರಂಭಿಸಿದ ಆದಿತ್ಯ L1

    ಬೆಂಗಳೂರು: ಸೂರ್ಯನ ಬ್ಯಾಹ್ಯ ವಾತಾವರಣ ಅಧ್ಯಯನಕ್ಕೆ ಭಾರತೀಯ ಬ್ಯಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ISRO) ಗಣೇಶ ಚತುರ್ಥಿ ಹಬ್ಬದಂದೇ ಗುಡ್‌ನ್ಯೂಸ್‌ ಕೊಟ್ಟಿದೆ. ಸೂರ್ಯ ಶಿಕಾರಿಗೆ ಭೂಮಿಯಿಂದ ಹೊರಟ ಆದಿತ್ಯ ಎಲ್‌-1 (Aditya-L1 Mission) ನೌಕೆ ಈಗಾಗಲೇ 4ನೇ ಕಕ್ಷೆಯನ್ನು ಯಶಸ್ವಿಯಾಗಿ ತಲುಪಿದೆ.

    ಇದೀಗ ನಿಗದಿತ ಕಕ್ಷೆ (L1 ಪಾಯಿಂಟ್‌) ಸೇರುವುದಕ್ಕೂ ಮುನ್ನವೇ ವೈಜ್ಞಾನಿಕ ದತ್ತಾಂಶ (Scientific Data) ಕಳುಹಿಸಲು ಪ್ರಾರಂಭಿಸಿದೆ. ಈ ಕುರಿತು ಇಸ್ರೋ ತನ್ನ ಟ್ವಿಟ್ಟರ್‌ X ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: Aditya L1: ಮೊದಲ ಕಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಆದಿತ್ಯ ನೌಕೆ – ಸೂರ್ಯನತ್ತ ಮತ್ತೊಂದು ಹೆಜ್ಜೆ

    ಸೂರ್ಯನ ಬಾಹ್ಯ ವಾತಾವರಣ ಅಧ್ಯಯನಕ್ಕೆ ಕಳುಹಿಸಿರುವ ಆದಿತ್ಯ-ಎಲ್‌1 ವೈಜ್ಞಾನಿಕ ದತ್ತಾಂಶಗಳನ್ನ ಸಂಗ್ರಹಿಸಲು ಪ್ರಾರಂಭಿಸಿದೆ. STEPS ಉಪಕರಣದ ಸಂವೇದಕಗಳು (ಸೆನ್ಸಾರ್‌ಗಳು) ಭೂಮಿಯಿಂದ 50,000 ಕಿಮೀಗಿಂತ ಹೆಚ್ಚಿನ ದೂರದಲ್ಲಿ ಸೂಪರ್-ಥರ್ಮಲ್ ಮತ್ತು ಶಕ್ತಿಯುತ ಅಯಾನುಗಳು (Energetic Ions) ಮತ್ತು ಎಲೆಕ್ಟ್ರಾನ್‌ಗಳನ್ನು ಅಳೆಯಲು ಪ್ರಾರಂಭಿಸಿದೆ. ಈ ಡೇಟಾವು ವಿಜ್ಞಾನಿಗಳಿಗೆ ಭೂಮಿಯ ಸುತ್ತಲಿನ ಕಣಗಳ ನಡವಳಿಕೆಯನ್ನ ವಿಶ್ಲೇಷಿಸಲು ಸಹಾಯ ಮಾಡುತ್ತದೆ. ಜೊತೆಗೆ ಅಂಕಿ ಅಂಶವು ಒಂದು ಘಟಕದಿಂದ ಸಂಗ್ರಹಿಸಲಾದ ಶಕ್ತಿಯುತ ಕಣ ಪರಿಸರದಲ್ಲಿ ವ್ಯತ್ಯಾಸಗಳನ್ನೂ ತೋರಿಸುತ್ತದೆ ಎಂದು ತಿಳಿಸಿದೆ.

    ಚಂದ್ರಯಾನ-3 ಯಶಸ್ಸಿನ ಬಳಿಕ ಸೂರ್ಯನ ಅಧ್ಯಯನಕ್ಕೆ ಇಸ್ರೋ ಆದಿತ್ಯ-ಎಲ್‌1 ಬಾಹ್ಯಾಕಾಶ ನೌಕೆಯನ್ನು ಸೆ.2 ರಂದು ಉಡಾವಣೆ ಮಾಡಿತ್ತು. ನೌಕೆಯು ಸೆ.10 ರಂದು 3ನೇ ಕಕ್ಷೆ ಹಾಗೂ ಸೆಪ್ಟೆಂಬರ್‌ 14ರಂದು 4ನೇ ಕಕ್ಷೆಗೆ ಸೇರುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಿತ್ತು. ಇದನ್ನೂ ಓದಿ: Aditya-L1: ಆದಿತ್ಯ ನೌಕೆ 4ನೇ ಕಕ್ಷೆ ಬದಲಾವಣೆ ಪ್ರಕ್ರಿಯೆ ಯಶಸ್ವಿ – ಮುಂದಿನ ಹಂತ ‘ಭೂಮಿಯಿಂದ ಬೀಳ್ಕೊಡುಗೆ’

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಗನಯಾತ್ರಿಗಳ ಆರೋಗ್ಯದ ಮೇಲೆ ಬಾಹ್ಯಾಕಾಶ ಪ್ರಯಾಣದ ಪರಿಣಾಮಗಳೇನು? – ಪರಿಹಾರವೇನು? 

    ಗಗನಯಾತ್ರಿಗಳ ಆರೋಗ್ಯದ ಮೇಲೆ ಬಾಹ್ಯಾಕಾಶ ಪ್ರಯಾಣದ ಪರಿಣಾಮಗಳೇನು? – ಪರಿಹಾರವೇನು? 

    ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ISRO) ಇತ್ತೀಚೆಗಷ್ಟೇ ಚಂದ್ರಯಾನ-3 (Chandrayaan-3) ಯಶಸ್ವಿ ಕಂಡು, ಇದೀಗ ಸೂರ್ಯಯಾನ ಯಶಸ್ಸಿನ ನಿರೀಕ್ಷೆಯಲ್ಲಿದೆ. ನಾವು ಗಗನಯಾತ್ರೆ ಎಂದಾಕ್ಷಣ ಸಾಮಾನ್ಯರ ಮನಸ್ಸಿನಲ್ಲಿ ಏನೋ ಒಂದು ಕೌತುಕ, ಮನಸ್ಸಿನಲ್ಲಿ ತಮ್ಮದೇ ಕಲ್ಪನೆ. ಗುರುತ್ವಾಕರ್ಷಣೆ ಇಲ್ಲದ ಬಾಹ್ಯಾಕಾಶದಲ್ಲಿ (Space) ಹಕ್ಕಿಯಂತೆ ಹಾರಾಡುವ ಅದ್ಭುತವೇ ಸರಿ. ಆದ್ರೆ ಬಾಹ್ಯಾಕಾಶದಲ್ಲಿ ಹಕ್ಕಿಗಳಂತೆ ಹಾರಾಡಿ ಮತ್ತು ಮನುಷ್ಯ ಸಹಜ ಜೀವನಕ್ಕೆ ತೆರೆದುಕೊಳ್ಳುವುದು ಅಷ್ಟು ಸುಲಭವಲ್ಲ. ಅದಕ್ಕೆಂದೇ ಸೂಕ್ತ ಮಾರ್ಪಾಡುಗಳನ್ನ ಮಾಡಿಕೊಳ್ಳಬೇಕಾಗುತ್ತೆ. 

    ಹೌದು. ಬಾಹ್ಯಾಕಾಶ ಪ್ರಯಾಣ ಕೈಗೊಂಡ ಬಳಿಕ, ಗಗನಯಾತ್ರಿಗಳು ಬಾಹ್ಯಾಕಾಶದ ಕನಿಷ್ಠ ಗುರುತ್ವಾಕರ್ಷಣೆಯ (Gravity) ಕಾರಣದಿಂದ ಒಂದಷ್ಟು ಆರೋಗ್ಯ ಸಂಬಂಧಿ ವಿಚಾರಗಳು (Health Issues) ಹಾಗೂ ಶಾರೀರಿಕ ಬದಲಾವಣೆಗಳನ್ನ ಎದುರಿಸುವ ಸಾಧ್ಯತೆಗಳಿವೆ. ಅದರಲ್ಲಿನ ಕೆಲವು ಪರಿಸ್ಥಿತಿಗಳನ್ನ ನಾವಿಲ್ಲಿ ಕಾಣಬಹುದು. 

    ಮೂಳೆಗಳು ಬಲಹೀನವಾಗುತ್ತವೆ:

    ಬಾಹ್ಯಾಕಾಶ ಪ್ರಯಾಣದ ಸಂದರ್ಭದಲ್ಲಿ ದೀರ್ಘಕಾಲದ ತನಕ ಕನಿಷ್ಠ ಗುರುತ್ವಾಕರ್ಷಣೆಗೆ ಒಳಗಾಗುವುದು ಸ್ನಾಯು ಕ್ಷೀಣತೆಯ ಸಮಸ್ಯೆ ಉಂಟುಮಾಡಬಲ್ಲದು. ಅಂದರೆ, ಕಡಿಮೆ ದೈಹಿಕ ಚಟುವಟಿಕೆಗಳ ಕಾರಣದಿಂದ ಸ್ನಾಯುಗಳ ಅಂಗಾಂಶಗಳು ಕ್ರಮೇಣ ಕಡಿಮೆಯಾಗಿ, ಶಕ್ತಿ ಕಳೆದುಕೊಳ್ಳುತ್ತವೆ. 

    ಗಗನಯಾತ್ರಿಗಳು (Astronauts) ಸಾಮಾನ್ಯವಾಗಿ ಈ ಸಮಸ್ಯೆಯನ್ನ ಎದುರಿಸಿ, ಭೂಮಿಗೆ ಮರಳಿದ ಬಳಿಕ, ಸ್ನಾಯು ಭಾರ ಮತ್ತು ಶಕ್ತಿಯನ್ನ ಮರಳಿ ಪಡೆಯಲು ದೈಹಿಕ ಪುನರ್ವಸತಿ ಚಿಕಿತ್ಸೆ ಪಡೆಯಬೇಕಾಗುತ್ತದೆ. ಸ್ನಾಯು ಕ್ಷೀಣತೆಯ ಕಾರಣದಿಂದ, ದುರ್ಬಲತೆ ಮತ್ತು ಚಲನಹೀನತೆ ಉಂಟಾಗಬಹುದು. ಇದನ್ನ ಎದುರಿಸಲು, ಗಗನಯಾತ್ರಿಗಳು ದೈಹಿಕ ಚಿಕಿತ್ಸೆ, ಶಕ್ತಿ ತರಬೇತಿ ಹಾಗೂ ನಿರಂತರ ವ್ಯಾಯಾಮ ನಡೆಸುತ್ತಾರೆ. ಅದರೊಂದಿಗೆ ಮೂಳೆಯ ಸಾಂದ್ರತೆ ಕಳೆದುಕೊಳ್ಳುವುದು ಬಾಹ್ಯಾಕಾಶದಲ್ಲಿ ಇನ್ನೊಂದು ಕಳವಳಕಾರಿ ವಿಚಾರ. ಇದರಿಂದಾಗಿ ಮೂಳೆಗಳು ಬಲಹೀನವಾಗುತ್ತವೆ. ಗಗನಯಾತ್ರಿಗಳು ಇದನ್ನ ಎದುರಿಸಲು ನಿಯಮಿತ ವ್ಯಾಯಾಮ, ಉತ್ತಮ ಪೋಷಕಾಂಶಗಳ ಸೇವನೆಯಂತಹ ಕ್ರಮಗಳನ್ನ ಕೈಗೊಳ್ಳುತ್ತಾರೆ.

    ಹೃದಯ ಬಡಿತ ಹೆಚ್ಚಾಗುತ್ತೆ, ತಲೆ ಸುತ್ತು ಜಾಸ್ತಿಯಾಗುತ್ತೆ:

    ಬಾಹ್ಯಾಕಾಶ ಪ್ರಯಾಣ ಗಗನಯಾತ್ರಿಗಳಲ್ಲಿ ಆರ್ಥೋಸ್ಟಾಟಿಕ್ ಇಂಟಾಲರೆನ್ಸ್ (ಮಾನಸಿಕ ಅಸಹಿಷ್ಣುತೆ) ಸೇರಿದಂತೆ, ಹೃದಯದ ರಕ್ತನಾಳದ ಬದಲಾವಣೆಗಳನ್ನ ತರಬಲ್ಲದು. ಇದರ ಪರಿಣಾಮವಾಗಿ ಅವರಲ್ಲಿ ಕುಳಿತಲ್ಲಿಂದ ಅಥವಾ ಮಲಗಿದಲ್ಲಿಂದ ಎದ್ದು ನಿಲ್ಲುವಾಗ ತಲೆಸುತ್ತು, ಮೂರ್ಛೆ ಹೋಗುವುದು ಅಥವಾ ಹೃದಯ ಬಡಿತ ಪ್ರಮಾಣ ಹೆಚ್ಚಳ ಕಂಡುಬರಬಹುದು. ಈ ಪರಿಸ್ಥಿತಿ ರಕ್ತದೊತ್ತಡದ ನಿಯಂತ್ರಣದಲ್ಲಿನ ಬದಲಾವಣೆ ಹಾಗೂ ಸ್ವಯಂಚಾಲಿತ ನರಮಂಡಲದ ಕಾರ್ಯಾಚರಣೆಯ ಕಾರಣದಿಂದ ಉಂಟಾಗಬಹುದು. ಇದರ ಚಿಕಿತ್ಸೆ ಸಾಮಾನ್ಯವಾಗಿ ಜೀವನಶೈಲಿಯಲ್ಲಿನ ಬದಲಾವಣೆ, ಹೆಚ್ಚಿನ ದ್ರವ ಆಹಾರ ಮತ್ತು ಉಪ್ಪಿನ ಸೇವನೆ, ಸಂಕೋಚನ ವಸ್ತ್ರಗಳನ್ನು ಧರಿಸುವುದು (ದೇಹಕ್ಕೆ ಆರಾಮದಾಯಕ ಹಾಗೂ ಸುರಕ್ಷಿತ ಅನ್ನಿಸುವ ಉಡುಪುಗಳು) ಮತ್ತು ಕೆಲವು ಸಂದರ್ಭಗಳಲ್ಲಿ ಸುಗಮವಾಗಿ ಎದ್ದು ನಿಲ್ಲುವಂತಾಗಲು ಔಷಧೀಯ ಕ್ರಮಗಳನ್ನೂ ಒಳಗೊಂಡಿರುತ್ತದೆ.

    ದೃಷ್ಟಿಯ ಬದಲಾವಣೆಗಳು: 

    ಕೆಲವು ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಕಣ್ಣಿನ ಸಮಸ್ಯೆಗಳನ್ನೂ ಎದುರಿಸುತ್ತಾರೆ. ಉದಾಹರಣೆಗೆ ಕಣ್ಣುಗಳಲ್ಲಿ ದ್ರವದ ಬದಲಾವಣೆಗಳು ದೃಷ್ಟಿಯನ್ನು ದುರ್ಬಲಗೊಳಿಸಬಹುದು. ಈ ಸ್ಥಿತಿಯನ್ನು ಸ್ಪೇಸ್ ಫ್ಲೈಟ್-ಅಸೋಸಿಯೇಟೆಡ್ ನ್ಯೂರೋ-ಆಕ್ಯುಲರ್ ಸಿಂಡ್ರೋಮ್ (ಎಸ್ಎಎನ್ಎಸ್) ಎಂದು ಕರೆಯಲಾಗುತ್ತದೆ. 

    ಕ್ಯಾನ್ಸರ್‌ಗೆ ತುತ್ತಾಗುವ ಅಪಾಯವಿದೆ: 

    ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಅಧಿಕ ಮಟ್ಟದ ಕಾಸ್ಮಿಕ್ ವಿಕಿರಣಕ್ಕೆ ಒಡ್ಡಿಕೊಳ್ಳುತ್ತಾರೆ. ಇದರ ಪರಿಣಾಮವಾಗಿ, ಕಾಲಾನಂತರದಲ್ಲಿ ಕ್ಯಾನ್ಸರ್ ಮತ್ತು ಇತರ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಅಪಾಯವು ಹೆಚ್ಚಾಗಿರುತ್ತದೆ. 

    ಮಾನಸಿಕ ಪರಿಣಾಮಗಳೇನು? 

    ಬಾಹ್ಯಾಕಾಶ ಯಾತ್ರೆಯು ಏಕಾಂತತೆ, ಬಂಧನದ ಭಾವ ಮೂಡಿಸುತ್ತದೆ ಮತ್ತು ಇದರಿಂದ ಉಂಟಾಗುವ ಒತ್ತಡವು ಮನಸ್ಥಿತಿಯಲ್ಲಿ ಬದಲಾವಣೆ ಉಂಟುಮಾಡಿ, ಆತಂಕ ಮತ್ತು ಖಿನ್ನತೆಯಂತಹ ಕೆಲವು ಮಾನಸಿಕ ಸಮಸ್ಯೆಗಳನ್ನ ತಂದೊಡ್ಡಬಹುದು.

    ರೋಗನಿರೋಧಕ ಶಕ್ತಿ ಕುಗ್ಗಿಸುತ್ತೆ: 

    ಬಾಹ್ಯಾಕಾಶ ಯಾನವು ರೋಗನಿರೋಧಕ ವ್ಯವಸ್ಥೆಯನ್ನು ಬಹುತೇಕ ದುರ್ಬಲಗೊಳಿಸಿ, ಗಗನಯಾತ್ರಿಗಳನ್ನು ಸೋಂಕುಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಿಸುತ್ತದೆ.

    ವೆಸ್ಟಿಬ್ಯುಲರ್ ಸಮಸ್ಯೆಗಳು:

    ಒಳಗಿವಿಯ ಸಮತೋಲನ ವ್ಯವಸ್ಥೆಯಲ್ಲಿ ಉಂಟಾಗುವ ಬದಲಾವಣೆಗಳು ಬಾಹ್ಯಾಕಾಶ ಯಾನದ ಸಮಯದಲ್ಲಿ ಮತ್ತು ಆಮೇಲೂ ದಿಕ್ಕು ತಪ್ಪಿಸುವಿಕೆ ಮತ್ತು ಚಲನೆಯಲ್ಲಿ ಅಸಮತೋಲನಕ್ಕೆ ಕಾರಣವಾಗಬಹುದು.

    ಈ ಎಲ್ಲ ಆರೋಗ್ಯ ಸಮಸ್ಯೆಗಳನ್ನ ನಿಯಂತ್ರಿಸಲು, ಗಗನಯಾತ್ರಿಗಳು ತಮ್ಮ ಕಾರ್ಯಾಚರಣೆಗೆ ಪೂರ್ವದಲ್ಲಿ ಹಾಗೂ ಪೂರ್ಣಗೊಂಡ ಮೇಲೆ ಸಂಪೂರ್ಣ ವೈದ್ಯಕೀಯ ಮೌಲ್ಯಮಾಪನಗಳಿಗೆ ಒಳಗಾಗುತ್ತಾರೆ. ಜೊತೆಗೆ ಸೂಕ್ಷ್ಮ ಗುರುತ್ವಾಕರ್ಷಣೆಯ ನಕಾರಾತ್ಮಕ ಪರಿಣಾಮಗಳನ್ನ ಕಡಿಮೆ ಮಾಡಲು ತಮ್ಮ ಕಾರ್ಯಗಳ ಸಮಯದಲ್ಲೂ ಅವರು ವ್ಯಾಯಾಮ ಮತ್ತು ಪುನರ್ವಸತಿ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುತ್ತಾರೆ. ಅಲ್ಲದೇ, ಬಾಹ್ಯಾಕಾಶ ಯಾನಕ್ಕೆ ಸಂಬಂಧಿಸಿದ ಈ ಆರೋಗ್ಯ ಸವಾಲುಗಳನ್ನ ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಮತ್ತು ಪರಿಹರಿಸಲು ಅನೇಕ ಸಂಶೋಧನೆಗಳು ಪ್ರಗತಿಯಲ್ಲಿವೆ.

    ಮಾಹಿತಿ: ಗಿರೀಶ್ ಲಿಂಗಣ್ಣ (ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
    – ಮೋಹನ ಬನ್ನಿಕುಪ್ಪೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Aditya L1: ತೆಗೆದ ಭೂಮಿ, ಚಂದ್ರನ ಚಿತ್ರವನ್ನು ಹಂಚಿಕೊಂಡ ಇಸ್ರೋ

    Aditya L1: ತೆಗೆದ ಭೂಮಿ, ಚಂದ್ರನ ಚಿತ್ರವನ್ನು ಹಂಚಿಕೊಂಡ ಇಸ್ರೋ

    ನವದೆಹಲಿ: ಭಾರತದ (India) ಮಹತ್ವಾಕಾಂಕ್ಷೆಯ ಆದಿತ್ಯ-ಎಲ್1 (Aditya -L1) ನೌಕೆ ಬಾಹ್ಯಾಕಾಶದಿಂದ ಭೂಮಿ ಮತ್ತು ಚಂದ್ರನ ಚಿತ್ರಗಳನ್ನು ಸೆರೆಹಿಡಿದಿದೆ. ಈ ಚಿತ್ರವನ್ನು ಇಸ್ರೋ (ISRO) ಹಂಚಿಕೊಂಡಿದೆ.

    ಆದಿತ್ಯ-ಎಲ್1 ಉದ್ದೇಶಿತ ಕಕ್ಷೆಯನ್ನು ತಲುಪಿದ ನಂತರ ದಿನಕ್ಕೆ 1,440 ಚಿತ್ರಗಳನ್ನು ಕಳುಹಿಸುವ ನಿರೀಕ್ಷೆಯಿದೆ. ಈ ಮೂಲಕ ಭಾರತದ ಬಾಹ್ಯಾಕಾಶ ಸಂಶೋಧನಾ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಆದಿತ್ಯ-ಎಲ್1 ತೆರೆಯಲಿದೆ. ಈ ಮೂಲಕ ಹೆಚ್ಚು ಆಕರ್ಷಕ ಚಿತ್ರಗಳು ಮತ್ತು ಮೌಲ್ಯಯುತ ಮಾಹಿತಿಯನ್ನು ಒದಗಿಸುವ ನಿರೀಕ್ಷೆಯಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Aditya L1: ಎರಡನೇ ಕಕ್ಷೆ ಯಶಸ್ವಿಯಾಗಿ ಪ್ರವೇಶಿಸಿದ ಆದಿತ್ಯ ನೌಕೆ

    ಶ್ರೀಹರಿಕೋಟಾ ಉಡಾವಣಾ ಕೇಂದ್ರದಿಂದ ಸೆಪ್ಟೆಂಬರ್ 2 ರಂದು ಆದಿತ್ಯ-ಎಲ್1ನ್ನು ಉಡಾವಣೆ ಮಾಡಲಾಯಿತು. ಇದು ಭಾರತದ ಮೊದಲ ಸೂರ್ಯನ ಅಧ್ಯಯನದ ಮಿಷನ್ ಆಗಿದೆ. ಇದು ಭೂಮಿಯ ಎರಡು ಸುತ್ತು ಸುತ್ತಿ ಮುಗಿಸಿದೆ. ಮುಂಬರುವ ದಿನಗಳಲ್ಲಿ ಭೂಮಿಯ ಕಕ್ಷೆಯಿಂದ ತನ್ನ ಗುರಿಯಾದ ಸೂರ್ಯನೆಡೆಗೆ ಸಾಗಲಿದೆ. ಸುಮಾರು 15,00,000 ಕಿಲೋಮೀಟರ್ ದೂರದಲ್ಲಿ ಇರಲಿದ್ದು ಅಲ್ಲಿಂದಲೇ ಸೂರ್ಯನನ್ನು ಅಧ್ಯಯನ ನಡೆಸಲಿದೆ.

    ಆದಿತ್ಯ ಎಲ್-1 ಸೂರ್ಯನ ವರ್ಣಗೋಳ ಮತ್ತು ಕರೋನಾ ಸೇರಿದಂತೆ ವಿವಿಧ ಅಂಶಗಳ ಅಧ್ಯಯನಕ್ಕೆ ವಿನ್ಯಾಸಗೊಳಿಸಲಾದ ಏಳು ಪೆಲೋಡ್‍ಗಳನ್ನು ಒಯ್ಯುತ್ತಿದೆ. ಸೌರ ಸ್ಫೋಟ ಮತ್ತು ಬಾಹ್ಯಾಕಾಶ ಹವಾಮಾನದ ಮೇಲೆ ಅವುಗಳ ಪ್ರಭಾವದ ಬಗ್ಗೆ ಮಾಹಿತಿ ಕಲೆ ಹಾಕಲಿದೆ. ಈ ಮಿಷನ್ ನೇರವಾಗಿ ನೈಜ ಸಮಯದಲ್ಲಿ ಡೇಟಾವನ್ನು ಒದಗಿಸುವ ಶಕ್ತಿಹೊಂದಿದೆ. ಇದನ್ನೂ ಓದಿ: Aditya L1: ಮೊದಲ ಕಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಆದಿತ್ಯ ನೌಕೆ – ಸೂರ್ಯನತ್ತ ಮತ್ತೊಂದು ಹೆಜ್ಜೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Aditya L1: ಎರಡನೇ ಕಕ್ಷೆ ಯಶಸ್ವಿಯಾಗಿ ಪ್ರವೇಶಿಸಿದ ಆದಿತ್ಯ ನೌಕೆ

    Aditya L1: ಎರಡನೇ ಕಕ್ಷೆ ಯಶಸ್ವಿಯಾಗಿ ಪ್ರವೇಶಿಸಿದ ಆದಿತ್ಯ ನೌಕೆ

    ನವದೆಹಲಿ: ಸೂರ್ಯನ ಬಾಹ್ಯ ವಾತಾವರಣ ಅಧ್ಯಯನಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಕಳುಹಿಸಿರುವ ಆದಿತ್ಯ ಎಲ್‌1 ಬಾಹ್ಯಾಕಾಶ ನೌಕೆ (Aditya L1) ಎರಡನೇ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದೆ ಎಂದು ಇಸ್ರೋ ತಿಳಿಸಿದೆ.

    ಸೆ.5 ರಂದು ಮಧ್ಯರಾತ್ರಿ 2:45 ಕ್ಕೆ ಆದಿತ್ಯ ಎಲ್‌1 ನೌಕೆ ಎರಡನೇ ಕಕ್ಷೆಯನ್ನು ಪ್ರವೇಶಿಸಿದೆ ಎಂದು ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಇಸ್ರೋ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: Aditya L1: ಮೊದಲ ಕಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಆದಿತ್ಯ ನೌಕೆ – ಸೂರ್ಯನತ್ತ ಮತ್ತೊಂದು ಹೆಜ್ಜೆ

    ಆದಿತ್ಯ ಎಲ್‌1 ನೌಕೆಯು ಸೆ.10 ರಂದು ರಾತ್ರಿ 2:30 ಕ್ಕೆ ಮೂರನೇ ಕಕ್ಷೆಯನ್ನು ಪ್ರವೇಶಿಸಲಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಸೆ.3 ರಂದು ನೌಕೆಯು ಮೊದಲ ಕಕ್ಷೆಯನ್ನು ಯಶಸ್ವಿಯಾಗಿ ಬದಲಾಯಿಸಿತ್ತು.

    ಸೂರ್ಯನ ಅಧ್ಯಯನಕ್ಕಾಗಿ ‘ಆದಿತ್ಯ ಎಲ್1’ ಬಾಹ್ಯಾಕಾಶ ನೌಕೆಯನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಇಸ್ರೋ ಸೆ.2 ರಂದು ಉಡಾವಣೆ ಮಾಡಿತು. ಭಾರತದ ಮೊದಲ ಸೌರ ವೀಕ್ಷಣಾಲಯವನ್ನು ಸೂರ್ಯ ಮತ್ತು ಭೂಮಿ ನಡುವಿನ L1 ಪಾಯಿಂಟ್‌ನಲ್ಲಿ ಇರಿಸುವ ಮೂಲಕ ಸೂರ್ಯನ ಹೊರಗಿನ ವಾತಾವರಣ ಅಧ್ಯಯನ ಮಾಡುವ ಗುರಿಯನ್ನು ಈ ಮಿಷನ್ ಹೊಂದಿದೆ. ಇದನ್ನೂ ಓದಿ: Aditya L1 Launch: ಸೂರ್ಯ ಶಿಕಾರಿಗೆ ಹೊರಟ ಆದಿತ್ಯ

    L1 ಎಂದರೆ ಲಾಗ್ರೆಂಜ್ ಪಾಯಿಂಟ್ 1. ಅಲ್ಲಿ ಬಾಹ್ಯಾಕಾಶ ನೌಕೆಯನ್ನು ನಿಲ್ಲಿಸಲಾಗುತ್ತದೆ. ISRO ಪ್ರಕಾರ, ಆದಿತ್ಯ-L1 ಭೂಮಿಯಿಂದ ಸರಿಸುಮಾರು 15 ಕಿ.ಮೀ ದೂರದಲ್ಲಿ ಸೂರ್ಯನ ಕಡೆಗೆ ನಿಂತು ಅಧ್ಯಯನ ನಡೆಸಲಿದೆ. ಈ ಪಾಯಿಂಟ್‌ ಭೂಮಿಯಿಂದ ಸೂರ್ಯನಿಗೆ ಇರುವ ದೂರದ 1% ಭಾಗದಷ್ಟಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Aditya L1: ಮೊದಲ ಕಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಆದಿತ್ಯ ನೌಕೆ – ಸೂರ್ಯನತ್ತ ಮತ್ತೊಂದು ಹೆಜ್ಜೆ

    Aditya L1: ಮೊದಲ ಕಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಆದಿತ್ಯ ನೌಕೆ – ಸೂರ್ಯನತ್ತ ಮತ್ತೊಂದು ಹೆಜ್ಜೆ

    ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಆದಿತ್ಯ ಎಲ್‌1 (Aditya L1) ಯೋಜನೆಯಲ್ಲಿ ನೌಕೆಯನ್ನು ಭೂಮಿ ಸುತ್ತಲಿನ ಮೊದಲನೇ ಕಕ್ಷೆಗೆ ಸೇರಿಸುವಲ್ಲಿ ಇಸ್ರೋ ಯಶಸ್ವಿಯಾಗಿದೆ.

    ಬಾಹ್ಯಕಾಶದಲ್ಲಿ ನೌಕೆಯು ಸಾಮಾನ್ಯ ಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. 245 ಕಿಮೀ x 22459 ಕಿಮೀ ವ್ಯಾಪ್ತಿಯ ಹೊಸ ಕಕ್ಷೆಗೆ ನೌಕೆ ತಲುಪಿದೆ. ಸೆಪ್ಟೆಂಬರ್ 5 ರಂದು ಮಧ್ಯಾಹ್ನ 3 ಗಂಟೆಗೆ ಮತ್ತೊಂದು ಹಂತದಲ್ಲಿ ಫೈರಿಂಗ್ ನಡೆಸಲಾಗುವುದು ಎಂದು ಇಸ್ರೋ ಟ್ವೀಟ್‌ ಮಾಡಿ ತಿಳಿಸಿದೆ. ಇದನ್ನೂ ಓದಿ: ನಿದ್ರೆಗೆ ಜಾರಿದ ಚಂದ್ರಯಾನ-3 ವಿಕ್ರಮ್‌ ಲ್ಯಾಂಡರ್‌, ಪ್ರಗ್ಯಾನ್‌ ರೋವರ್‌

    ಸೂರ್ಯನ ಬಾಹ್ಯ ವಾತಾವರಣದ ಅಧ್ಯಯನಕ್ಕಾಗಿ ‘ಆದಿತ್ಯ ಎಲ್1’ ಬಾಹ್ಯಾಕಾಶ ನೌಕೆಯನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಇಸ್ರೋ ಸೆ.2 ರಂದು ಉಡಾವಣೆ ಮಾಡಿತು. ಭಾರತದ ಮೊದಲ ಸೌರ ವೀಕ್ಷಣಾಲಯವನ್ನು ಸೂರ್ಯ ಮತ್ತು ಭೂಮಿ ನಡುವಿನ L1 ಪಾಯಿಂಟ್‌ನಲ್ಲಿ ಇರಿಸುವ ಮೂಲಕ ಸೂರ್ಯನ ಹೊರಗಿನ ವಾತಾವರಣ ಅಧ್ಯಯನ ಮಾಡುವ ಗುರಿಯನ್ನು ಈ ಮಿಷನ್ ಹೊಂದಿದೆ.

    L1 ಎಂದರೆ ಲಾಗ್ರೆಂಜ್ ಪಾಯಿಂಟ್ 1. ಅಲ್ಲಿ ಬಾಹ್ಯಾಕಾಶ ನೌಕೆಯನ್ನು ನಿಲ್ಲಿಸಲಾಗುತ್ತದೆ. ISRO ಪ್ರಕಾರ, ಆದಿತ್ಯ-L1 ಭೂಮಿಯಿಂದ ಸರಿಸುಮಾರು 15 ಕಿ.ಮೀ ದೂರದಲ್ಲಿ ಸೂರ್ಯನ ಕಡೆಗೆ ನಿಂತು ಅಧ್ಯಯನ ನಡೆಸಲಿದೆ. ಈ ಪಾಯಿಂಟ್‌ ಭೂಮಿಯಿಂದ ಸೂರ್ಯನಿಗೆ ಇರುವ ದೂರದ 1% ಭಾಗದಷ್ಟಿದೆ. ಇದನ್ನೂ ಓದಿ: ಚಂದ್ರ, ಸೂರ್ಯ ಮಿಷನ್‌ ಆಯ್ತು; ಇಸ್ರೋ ಮುಂದಿನ ಆಪರೇಷನ್‌ ಯಾವುದು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಂದ್ರ, ಸೂರ್ಯ ಮಿಷನ್‌ ಆಯ್ತು; ಇಸ್ರೋ ಮುಂದಿನ ಆಪರೇಷನ್‌ ಯಾವುದು?

    ಚಂದ್ರ, ಸೂರ್ಯ ಮಿಷನ್‌ ಆಯ್ತು; ಇಸ್ರೋ ಮುಂದಿನ ಆಪರೇಷನ್‌ ಯಾವುದು?

    ನವದೆಹಲಿ: ಚಂದ್ರಯಾನ-3 (Chandrayaan-3), ಆದಿತ್ಯ ಎಲ್‌1 (Aditya L1) ಮಿಷನ್‌ ಆಯ್ತು. ಮತ್ತೊಂದು ಉಪಗ್ರಹ ಉಡಾವಣೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸಜ್ಜಾಗಿದೆ. ಖಗೋಳಶಾಸ್ತ್ರದಲ್ಲಿ ಅತ್ಯಾಧುನಿಕ ವೈಜ್ಞಾನಿಕ ತಿಳುವಳಿಕೆ ಹೆಚ್ಚಿಸುವ ಗುರಿಯನ್ನು ಇಸ್ರೋ ಹೊಂದಿದೆ.

    XPoSAT (ಎಕ್ಸ್-ರೇ ಪೋಲಾರಿಮೀಟರ್ ಉಪಗ್ರಹ) ಉಪಗ್ರಹ ಉಡಾವಣೆಗೆ ಇಸ್ರೋ ಸಿದ್ಧವಾಗಿದೆ. XPoSat (ಎಕ್ಸ್-ರೇ ಪೋಲಾರಿಮೀಟರ್ ಸ್ಯಾಟಲೈಟ್) ಭಾರತದ ಮೊದಲ ಮೀಸಲಾದ ಪೋಲಾರಿಮೆಟ್ರಿ ಮಿಷನ್. ಇದು ತೀವ್ರವಾದ ಪರಿಸ್ಥಿತಿಗಳಲ್ಲಿ ಪ್ರಕಾಶಮಾನವಾದ ಖಗೋಳ ಎಕ್ಸ್-ರೇ ಮೂಲಗಳ ವಿವಿಧ ಡೈನಾಮಿಕ್ಸ್ ಅನ್ನು ಅಧ್ಯಯನ ಮಾಡುತ್ತದೆ. ಇದನ್ನೂ ಓದಿ: Aditya L1 Launch: ಸೂರ್ಯ ಶಿಕಾರಿಗೆ ಹೊರಟ ಆದಿತ್ಯ

    ಈ ಬಾಹ್ಯಾಕಾಶ ನೌಕೆಯು ಎರಡು ವೈಜ್ಞಾನಿಕ ಪೇಲೋಡ್‌ಗಳನ್ನು ಕಡಿಮೆ ಭೂಮಿಯ ಕಕ್ಷೆಯಲ್ಲಿ ಸಾಗಿಸುತ್ತದೆ. ಒಂದು ಪ್ರೈಮರಿ ಪೇಲೋಡ್‌ POLIX (ಎಕ್ಸ್‌-ಕಿರಣಗಳಲ್ಲಿನ ಪೋಲಾರಿಮೀಟರ್‌ ಉಪಕರಣ). ಮತ್ತೊಂದು XSPECT (ಎಕ್ಸ್‌-ರೇ ಸ್ಪೆಕ್ಟ್ರೋಸ್ಕೋಪಿ ಮತ್ತು ಟೈಮಿಂಗ್)‌ ಪೇಲೋಡ್‌.

    XPoSat ಉಡಾವಣೆಗೆ ಸಿದ್ಧವಾಗಿದೆ ಎಂದು ಇಸ್ರೋದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಪ್ಪು ಕುಳಿ, ನ್ಯೂಟ್ರಾನ್ ನಕ್ಷತ್ರಗಳು, ಸಕ್ರಿಯ ಗ್ಯಾಲಕ್ಸಿಯ ನ್ಯೂಕ್ಲಿಯ, ಪಲ್ಸರ್ ವಿಂಡ್ ನೀಹಾರಿಕೆಗಳಂತಹ ವಿವಿಧ ಖಗೋಳ ಮೂಲಗಳಿಂದ ಹೊರಸೂಸುವ ಎಕ್ಸ್‌-ರೇ ಅಧ್ಯಯನ ಮಾಡಲು ಇದು ಸಹಕಾರಿಯಾಗಲಿದೆ ಎಂದು ಇಸ್ರೋ ಹೇಳಿದೆ. ಇದನ್ನೂ ಓದಿ: Aditya L1 ಮಿಷನ್ ಯಶಸ್ವಿ: ಇಸ್ರೋ ಅಧ್ಯಕ್ಷ

    ಎಕ್ಸ್-ರೇ ಪೋಲಾರಿಮೀಟರ್ ಉಪಗ್ರಹ (XPoSat) ಕಾಸ್ಮಿಕ್ ಎಕ್ಸ್‌-ಕಿರಣಗಳ ಧ್ರುವೀಕರಣವನ್ನು ಅಧ್ಯಯನ ಮಾಡಲು ಬಾಹ್ಯಾಕಾಶ ವೀಕ್ಷಣಾಲಯ ಉಡಾವಣೆಗೆ ಇಸ್ರೋ ಯೋಜಿಸಿದೆ. 2023 ಅಥವಾ ಮುಂದಿನ ವರ್ಷ ಈ ಉಪಗ್ರಹ ಉಡಾಯಿಸಲು ಇಸ್ರೋ ಪ್ಲ್ಯಾನ್‌ ಮಾಡಿದೆ. ಈ ಮಿಷನ್‌ ಅವಧಿ ಕನಿಷ್ಠ 5 ವರ್ಷ ಇರುತ್ತದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]