ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಲ್ಲಿ ಓರ್ವನಾಗಿದ್ದ ಆದಿತ್ಯ ಆಳ್ವಾನನ್ನ ಚೆನ್ನೈನಲ್ಲಿ ಪೊಲೀಸರು ಬಂಧಿಸಿದ್ದು, ಬೆಂಗಳೂರಿಗೆ ಕರೆ ತರಲಾಗಿದೆ.
ಕಳೆದ ನಾಲ್ಕು ತಿಂಗಳಿನಿಂದ ಆದಿತ್ಯ ಆಳ್ವಾ ನಾಪತ್ತೆಯಾಗಿದ್ದು, ಈತನ ರೆಸಾರ್ಟ್ ನಲ್ಲಿ ಡ್ರಗ್ಸ್ ಪಾರ್ಟಿ ನಡೆಯುತ್ತಿದ್ದು ಎನ್ನಲಾಗಿದೆ. ನಟಿ ರಾಗಿಣಿ ದ್ವಿವೇದಿ, ವೈಭವ್ ಜೈನ್ ಸೇರಿದಂತೆ ಹಲವರ ಜೊತೆ ಆದಿತ್ಯ ಆಳ್ವಾ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ದಿವಂಗತ ಮಾಜಿ ಸಚಿವ ಜೀವರಾಜ್ ಆಳ್ವಾ ಪುತ್ರನಾಗಿರುವ ಆದಿತ್ಯನ ಹುಡುಕಾಟಕ್ಕಾಗಿ ಮುಂಬೈನಲ್ಲಿರು ಬಾವ ನಟ ವಿವೇಕ್ ಓಬೇರಾಯ್ ಮನೆ ಮೇಲೆಯೂ ದಾಳಿ ನಡೆಸಿದ್ದರು.
ಸದ್ಯ ಚೆನ್ನೈನಲ್ಲಿ ಬಂಧಿಸಲಾಗಿರುವ ಬಗ್ಗೆ ಮಾಹಿತಿಗಳು ತಿಳಿದು ಬಂದಿದ್ದು, ಇಷ್ಟು ದಿನ ಎಲ್ಲಿದ್ದ ಎಂಬುದರ ಕುರಿತು ತಿಳಿದು ಬರಬೇಕಿದೆ. ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣದಲ್ಲಿ ಆದಿತ್ಯ ಆಳ್ವಾ ಆರನೇ ಆರೋಪಿಯಾಗಿದ್ದಾರೆ.
ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ ಕೇಸ್ ವಿಚಾರವಾಗಿ ಇಂದು ಬಾಲಿವುಡ್ ನಟ ವಿವೇಕ್ ಒಬೆರಾಯ್ ಮನೆ ಮೇಲೆ ಬೆಂಗಳೂರು ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ.
ಡ್ರಗ್ ಮಾಫಿಯಾ ಕೇಸಿನಲ್ಲಿ ಪ್ರಮುಖ ಆರೋಪಿಯಾಗಿರುವ ಆದಿತ್ಯ ಆಳ್ವಾ ನಾಪತ್ತೆಯಾಗಿದ್ದು, ಆತನನನ್ನು ವಿಚಾರಣೆಗೆ ಒಳಪಡಿಸಲು ಸಿಸಿಬಿ ಪೊಲೀಸರು ಹುಡುಕುತ್ತಿದ್ದಾರೆ. ಆರೋಪಿ ಆದಿತ್ಯ ಆಳ್ವಾ, ನಟ ವಿವೇಕ್ ಒಬೆರಾಯ್ ಅವರ ಸಂಬಂಧಿಯಾಗಿದ್ದು ಅವರ ಮನೆಯಲ್ಲಿ ಇರಬಹುದು ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆ ಇಂದು ಒಬೆರಾಯ್ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ರೇಡ್ ಮಾಡಿದ್ದಾರೆ.
ನಾಪತ್ತೆಯಾಗಿರುವ ಆರೋಪಿ ಆದಿತ್ಯ ಆಳ್ವಾನಿಗೆ ವಿವೇಕ್ ಒಬೆರಾಯ್ ತನ್ನ ಮನೆಯಲ್ಲಿ ಆಶ್ರಯ ನೀಡಿರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಮನೆಯಲ್ಲಿ ಸರ್ಚ್ ಮಾಡಲು ಬೆಂಗಳೂರು ಸಿಸಿಬಿ ಪೊಲೀಸರು ಕೋರ್ಟಿನಿಂದ ಸರ್ಚ್ ವಾರೆಂಟ್ ಪಡೆದುಕೊಂಡಿದ್ದರು. ಈ ವಿಚಾರವಾಗಿ ನಿನ್ನೆಯೇ ಮುಂಬೈಗೆ ಸಿಸಿಬಿ ಅಧಿಕಾರಿಗಳು ಹೋಗಿದ್ದರು. ಆದರೆ ಮುಂಬೈ ಪೊಲೀಸರು ಸರಿಯಾಗಿ ಸ್ಪಂದಿಸದ ಕಾರಣ ಇಂದು ತಡವಾಗಿ ವಿವೇಕ್ ಒಬೆರಾಯ್ ಮನೆ ಮೇಲೆ ದಾಳಿ ಮಾಡಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ರವಿಶಂಕರ್ ಬಂಧನವಾಗುತ್ತಿದ್ದಂತೆ ಆದಿತ್ಯ ಆಳ್ವಾ ನಾಪತ್ತೆಯಾಗಿದ್ದು, ಮುಂಬೈ ಅಥವಾ ದೆಹಲಿಯಲ್ಲಿರೋ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಆದಿತ್ಯ ಆಳ್ವಾ ಮನೆಯಲ್ಲಿ ನಡೆಯುತ್ತಿದ್ದ ಪಾರ್ಟಿಗಳಿಗೆ ರಾಜಕಾರಣಿ ಮತ್ತು ಉದ್ಯಮಿಗಳ ಮಕ್ಕಳು ಸೇರಿದಂತೆ ಹಲವು ತಾರೆಯರು ಭಾಗಿಯಾಗುತ್ತಿದ್ದಾರೆ. ಪಾರ್ಟಿಗಳಲ್ಲಿ ಡ್ರಗ್ಸ್ ಹೊಳೆ ಹರಿಯುತ್ತಿತ್ತು ಎಂದು ತಿಳಿದು ಬಂದಿತ್ತು.
ಯಾರು ಈ ಆದಿತ್ಯ ಆಳ್ವಾ?
ಆದಿತ್ಯ ಆಳ್ವಾ ಮಾಜಿ ಸಚಿವ ಜೀವರಾಜ್ ಆಳ್ವಾ ಪುತ್ರ. ಆದಿತ್ಯ ಆಳ್ವಾನ ಸಹೋದರಿಯನ್ನು ನಟ ವಿವೇಕ್ ಒಬೆರಾಯ್‍ಗೆ ಮದುವೆ ಮಾಡಿಕೊಡಲಾಗಿದೆ. ಹೀಗಾಗಿ ಬಾಮೈದನ ರಕ್ಷಣೆಗಾಗಿ ನಟ ವಿವೇಕ್ ಒಬೆರಾಯ್ ನಿಂತಿರುವ ಶಂಕೆ ವ್ಯಕ್ತವಾಗಿದ್ದು, ಇಂದು ಅವರ ಮನೆಯ ಮೇಲೂ ಸಿಸಿಬಿ ದಾಳಿ ಮಾಡಿದೆ.
ಬೆಂಗಳೂರು: ಡ್ರಗ್ಸ್ ಪ್ರಕರಣ ಬಂದಾಗ ಸ್ಯಾಂಡಲ್‍ವುಡ್ ಕಲಾವಿದರು, ಶ್ರೀಮಂತರ ಮಕ್ಕಳು, ರಾಜಕಾರಣಿಗಳ ಮಕ್ಕಳು ಬೆಂಗಳೂರಿನ ರೆಸಾರ್ಟ್‍ನಲ್ಲಿ ಪಾರ್ಟಿ ಮಾಡುತ್ತಿದ್ದರು. ಲಾಕ್‌ಡೌನ್ ಸಮಯದಲ್ಲೂ ಪಾರ್ಟಿ ಜೋರಾಗಿ ನಡೆಯುತ್ತಿತ್ತು. ಆದರೆ ಬೆಂಗಳೂರಿನ ಯಾವ ರೆಸಾರ್ಟ್‌ನಲ್ಲಿ ಈ ರೀತಿಯ ಪಾರ್ಟಿ ನಡೆಯುತ್ತಿತ್ತು ಎಂಬ ವಿಚಾರ ಅಧಿಕೃತವಾಗಿ ಸಿಕ್ಕಿರಲಿಲ್ಲ. ಆದರೆ ಈಗ ಸಿಸಿಬಿ ಪೊಲೀಸರು ಪ್ರಕರಣದ 6ನೇ ಆರೋಪಿಯಾಗಿರುವ ಆದಿತ್ಯ ಆಳ್ವಾ ರೆಸಾರ್ಟ್ ಮೇಲೆ ದಾಳಿ ಮಾಡುವ ಮೂಲಕ ಮತ್ತಷ್ಟು ಸಾಕ್ಷ್ಯ ಸಂಗ್ರಹಕ್ಕೆ ಮುಂದಾಗಿದ್ದಾರೆ.
ಪ್ರಕರಣ ದಾಖಲಾದ ಬಳಿಕ ನಾಪತ್ತೆಯಾಗಿರುವ ಮಾಜಿ ಸಚಿವ ದಿ. ಜೀವರಾಜ್ ಆಳ್ವಾ ಪುತ್ರ ಆದಿತ್ಯ ಆಳ್ವಾ ಹೆಬ್ಬಾಳದಲ್ಲಿ ‘ಹೌಸ್ ಆಫ್ ಲೈಫ್’ಹೆಸರಿನಲ್ಲಿ ರೆಸಾರ್ಟ್ ತೆರೆದಿದ್ದ. ಬರೋಬ್ಬರಿ 10 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಈ ಸುಂದರವಾರ ರೆಸಾರ್ಟ್ ತೆರೆಯಲಾಗಿದೆ. ಈ ಜಾಗದಲ್ಲಿ ಕೊರೊನಾ ಲಾಕ್‌ಡೌನ್ ಸಮಯದಲ್ಲೂ ಪಾರ್ಟಿ ನಡೆದಿತ್ತು.
ಇಲ್ಲಿ ಮದುವೆ, ಖಾಸಗಿ ಕಾರ್ಯಕ್ರಮ, ಹಬ್ಬ ಮಾತ್ರವಲ್ಲದೇ 4 ಎಕ್ರೆ ಜಾಗದಲ್ಲಿ ಫ್ಯಾಶನ್ ಶೋ ನಡೆಸಲು ಅವಕಾಶವಿತ್ತು. ಆದರೆ ಇಲ್ಲಿ ಹೆಚ್ಚಾಗಿ ಸೆಲೆಬ್ರಿಟಿಗಳ ನೈಟ್ ಲೈಫ್ ಪಾರ್ಟಿ ನಡೆಯುತ್ತಿತ್ತು. ಇದನ್ನೂ ಓದಿ: ಸಿಸಿಬಿ ಮುಂದೆ ತಮ್ಮ ಲವ್ ಬ್ರೇಕಪ್ ಸ್ಟೋರಿ ಬಿಚ್ಚಿಟ್ಟ ನಟಿಯರು
ಈ ಪಾರ್ಟಿಗೆ ಬಾಲಿವುಡ್ ಸ್ಯಾಂಡಲ್‌ವುಡ್ ಸ್ಟಾರ್ಸ್ ಗಳನ್ನು ಕೂಡ ಕರೆಯಲಾಗುತ್ತಿತ್ತು. ಇತ್ತೀಚೆಗೆ ಹೋಳಿ ಸೇರಿದಂತೆ ಹೊಸ ವರ್ಷದ ಪಾರ್ಟಿ, ಪ್ರೇಮಿಗಳ ದಿನಾಚರಣೆ ಕೂಡ ನಡೆಸಲಾಗಿತ್ತು. ಇಲ್ಲಿ ಸಂಗೀತ ಕಾರ್ಯಕ್ರಮಕ್ಕೆ ಅಂತಾರಾಷ್ಟ್ರೀಯ ಖ್ಯಾತಿಯ ಡಿಜೆಗಳನ್ನು ಕರೆಸಲಾಗುತ್ತಿತ್ತು. ಡಿಜೆಗಳನ್ನು ಇಲ್ಲಿ ಕರೆಸಿ ಮತ್ತಿನ ಲೋಕದಲ್ಲಿ ತೇಲಿಸಲಾಗುತ್ತಿತ್ತು. ಇದರ ಜೊತೆಗೆ ಲಲನೆಯೆ ಫ್ಯಾಶನ್ ಶೋ ಸಹ ಆಯೋಜಿಸಲಾಗುತ್ತಿತ್ತು.
‘ಟೆಕ್ನೋ ಪಾರ್ಟಿʼ ಹೆಸರಲ್ಲಿ ಇಲ್ಲಿ ದೊಡ್ಡ ಮಟ್ಟದ ಈವೆಂಟ್ ನಡೆಯುತ್ತಿತ್ತು. ವಿವಿಐಪಿಗಳಿಗೆ ಪ್ರತ್ಯೇಕವಾಗಿರುವ ಟೇಬಲ್ ಬುಕ್ಕಿಂಗ್ ವ್ಯವಸ್ಥೆ ಇರುತ್ತಿತ್ತು. ಹೌಸ್ ಆಫ್ ಲೈಫ್ ವೆಬ್‌ಸೈಟ್‌ನಲ್ಲೂ ಬೆಂಗಳೂರಿನ ನೈಟ್ ಲೈಫ್ ಪಾರ್ಟಿಗೆ ಈ ಜಾಗ ಹೇಳಿ ಮಾಡಿಸಿದಂತಿದೆ ಎಂದು ವಿಶೇಷವಾಗಿ ಬರೆಯಲಾಗಿದೆ.
ಸ್ಯಾಂಡಲ್‌ವುಡ್ ಕಲಾವಿದರು ಇಲ್ಲಿ ಕನ್ನಡ ಕಿರುತೆರೆಯ ಕಲಾವಿದರು ಈ ರೆಸಾರ್ಟ್‌ಗೆ ಆಗಮಿಸುತ್ತಿದ್ದರು. ರಾತ್ರಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಕೆಲವೇ ಮಾದಿಗೆ ಮಾತ್ರ ಆಹ್ವಾನ ನೀಡಲಾಗುತ್ತಿತ್ತು. ತಡರಾತ್ರಿ ನಡೆಯುತ್ತಿದ್ದ ಈ ಮೋಜು ಮಸ್ತಿಯ ಪಾರ್ಟಿಯಲ್ಲಿ ಏನು ಇರುತ್ತಿತ್ತು ಎಂಬುದರ ಬಗ್ಗೆ ಈಗ ಸಿಸಿಬಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸಿಸಿ ಕ್ಯಾಮೆರಾಗಳ ಡಿವಿಆರ್ ಹಾಗೂ ಮ್ಯಾನೇಜರ್ ರಾಮದಾಸ್ ಜೊತೆ ಸಿಬ್ಬಂದಿಯನ್ನು ವಶಕ್ಕೆ ಪಡೆದು ಮಾಹಿತಿ ಪಡೆಯುತ್ತಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಭಾಗಿಯಾದವರ ಕಾಂಟ್ಯಾಕ್ಟ್ ಲಿಸ್ಟ್ ತಯಾರು ಮಾಡುತ್ತಿದ್ದಾರೆ. ಈಗ ಭಾಗಿಯಾದವರಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಯಲು ಸಿಸಿಬಿ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅದಿತ್ಯ ಆಳ್ವಾ ಮನೆ ಮೇಲೆ ಸಿಸಿಬಿ ಪೊಲೀಸರ ದಾಳಿ ಮಾಡಲು ಕಾರಣ ಏನು? ಆರೋಪಿಗಳು ಹೇಳಿದ್ದು ಏನು?
ಮಾಜಿ ಸಚಿವರಾಗಿದ್ದ ಜೀವರಾಜ್ ಆಳ್ವಾ ಅವರು ಎಕ್ರೆಗೆ 6 ಲಕ್ಷ ರೂ. ನೀಡಿ ಈ ಜಾಗವನ್ನು ಖರೀದಿಸಿ ಫಾರಂ ಹೌಸ್ ಮಾಡಲು ಮುಂದಾಗಿದ್ದರು. ಆದರೆ ಆದಿತ್ಯ ಆಳ್ವಾ ಈ ಜಾಗವವನ್ನು ರೆಸಾರ್ಟ್ ಮಾಡಿಕೊಂಡಿದ್ದ. ಸದ್ಯ ಈ ಜಾಗ 300 ಕೋಟಿ ರೂ. ಮೌಲ್ಯ ಹೊಂದಿದೆ ಎಂದು ಅಂದಾಜಿಸಲಾಗಿದೆ.
ಬೆಂಗಳೂರು: ಡ್ರಗ್ಸ್ ಮಾಫಿಯಾದ ಪ್ರಮುಖ ಆರೋಪಿ ಆದಿತ್ಯ ಆಳ್ವಾ ನಿವಾಸದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಹೆಬ್ಬಾಳದಲ್ಲಿರುವ ಹೌಸ್ ಆಫ್ ಲೀವ್ಸ್ ಮನೆಯ ಮೇಲೆ ಇನ್‍ಸ್ಪೆಕ್ಟರ್ ಗಳಾದ ಅಂಜುಮಾಲಾ ನಾಯ್ಕ್, ಪನೀತ್ ನೇತೃತ್ವದಲ್ಲಿ ದಾಳಿ ನಡೆದಿದೆ. ಆರೋಪಿ ಆದಿತ್ಯ ಆಳ್ವಾ ಮಾಜಿ ಸಚಿವ ಜೀಬರಾಜ್ ಆಳ್ವಾ ಅವರ ಪುತ್ರನಾಗಿದ್ದಾನೆ. ನಟ ವಿವೇಕ್ ಓಬೇರಾಯ್ ಅವರ ಮೈದುನ. ಬರೋಬ್ಬರಿ ಆರು ಎಕರೆ ವಿಸ್ತೀರ್ಣದಲ್ಲಿ ಆದಿತ್ಯ ಆಳ್ವಾ ಮನೆ ಇದೆ. ಇದೇ ಮನೆಯಲ್ಲಿ ವೀಕೆಂಡ್ ಪಾರ್ಟಿಗಳು ನಡೆಯುತ್ತಿರುವ ಬಗ್ಗೆ ಆರೋಪಿ ರವಿಶಂಕರ್ ತಪ್ಪೊಪ್ಪಿಕೊಂಡಿದ್ದನು. ಸಿಸಿಬಿ ಬಂಧಿಸಿರುವ ಆರು ಆರೋಪಿಗಳು ಆದಿತ್ಯ ಆಳ್ವಾ ಹೆಸರನ್ನು ಉಲ್ಲೇಖಿಸಿರುವ ಬಗ್ಗೆ ತಿಳಿದು ಬಂದಿದೆ.
ಡ್ರಗ್ಸ್ ಪ್ರಕರಣದಲ್ಲಿ ರವಿಶಂಕರ್ ಬಂಧನವಾಗುತ್ತಿದ್ದಂತೆ ಆದಿತ್ಯ ಆಳ್ವಾ ನಾಪತ್ತೆಯಾಗಿದ್ದು, ಮುಂಬೈ ಅಥವಾ ದೆಹಲಿಯಲ್ಲಿರೋ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಆದಿತ್ಯ ಆಳ್ವಾ ಮನೆಯಲ್ಲಿ ನಡೆಯುತ್ತಿದ್ದ ಪಾರ್ಟಿಗಳಿಗೆ ರಾಜಕಾರಣಿ ಮತ್ತು ಉದ್ಯಮಿಗಳ ಮಕ್ಕಳು ಸೇರಿದಂತೆ ಹಲವು ತಾರೆಯರು ಭಾಗಿಯಾಗುತ್ತಿದ್ದಾರೆ. ಪಾರ್ಟಿಗಳಲ್ಲಿ ಡ್ರಗ್ಸ್ ಹೊಳೆ ಹರಿಯುತ್ತಿತ್ತು ಎಂದು ತಿಳಿದು ಬಂದಿದೆ.
ಸದ್ಯ ಇಂದು ಬೆಳಗ್ಗೆ ಆದಿತ್ಯ ಆಳ್ವಾ ಮನೆಯಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು ಶೋಧ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈ ಮೊದಲು ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಮನೆಯ ಮೇಲೆಯೂ ಸಿಸಿಬಿ ದಾಳಿ ನಡೆಸಿತ್ತು.
ರವಿಶಂಕರ್ ಹೇಳಿದ್ದೇನು?: ಪಾರ್ಟಿಗಳಿಗೆ ಬರುತ್ತಿದ್ದ ಶ್ರೀಮಂತ ಪರಿಚತರಿಗೆ ECSTASY PILL ಮಾತ್ರೆಗಳನ್ನು ವೈಭವ್ ಜೈನ್ ಸರಬರಾಜು ಮಾಡುತ್ತಿದ್ದನು. ಆದಿತ್ಯ ಆಳ್ವಾಗೆ ಸೇರಿದ ಹೌಸ್ ಆಫ್ ಲೈಫ್ ಮಾನ್ಯತಾ ಟೆಕ್ ಪಾರ್ಕ್ ಪಕ್ಕದ ಫಾರಂ ಹೌಸ್ ಮತ್ತು ಕಿಟಿಕೊ ಕ್ಲಬ್ ಗಳಲ್ಲಿ ಪಾರ್ಟಿ ಆಯೋಜನೆ ಮಾಡಲಾಗುತ್ತಿತ್ತು. ಪಾರ್ಟಿ ಆಯೋಜನೆ ಸ್ಥಳ, ಬರೋರ ಹೆಸರುಗಳನ್ನ ವಾಟ್ಸಪ್ ಮೂಲಕ ಮೊದಲೇ ತಿಳಿಸಲಾಗುತ್ತಿತ್ತು ಎಂದು ಆರೋಪಿ ರವಿಶಂಕರ್ ಹೇಳಿದ್ದನು.
ಬೆಂಗಳೂರು: ನಾನು ಹಾಗೂ ರಾಗಿಣಿ ಒಟ್ಟಿಗೆ ಡ್ರಗ್ಸ್ ಸೇವನೆ ಮಾಡುತ್ತಿದ್ದೆವು ಎಂದು ಸಿಸಿಬಿ ಮುಂದೆ ಆರೋಪಿ ರವಿಶಂಕರ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ.
ಸ್ಯಾಂಡಲ್ ವುಡ್ ಡ್ರಗ್ ಲಿಂಕ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಆರೋಪಿ ರವಿಶಂಕರ್ ಬಾಯಿಬಿಡಿಸಿದ್ದಾರೆ. ಈ ವೇಳೆ ಆತ ನಾನು ರಾಗಿಣಿ ಒಟ್ಟಿಗೆ ಡ್ರಗ್ ಸೇವನೆ ಮಾಡಿದ್ವಿ. ಒಂದು ಮಾತ್ರೆಯ ‘ಕಾಲು ಭಾಗ’ ಇಬ್ಬರು ತಗೊಂಡಿದ್ವಿ. ವೈಭವ್ ಜೈನ್ ಮೂಲಕ ಡ್ರಗ್ಸ್ ತರಿಸಿಕೊಂಡಿದ್ವಿ ಎಂಬುದಾಗಿ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಸೆಂಟ್ ಮಾರ್ಕ್ಸ್ ರಸ್ತೆಯ ಏರ್ ಲೈನ್ಸ್ ಹೋಟೆಲ್‍ನಲ್ಲಿ ನಾನು ರಾಗಿಣಿ ಭೇಟಿಯಾಗಿದ್ವಿ. ಸೆಂಟ್ ಮಾರ್ಕ್ಸ್ ರಸ್ತೆಯ ಕಬಾಬ್ ಕಾರ್ನರ್ ಬಳಿ ಡ್ರಗ್ಸ್ ನೀಡಿದ್ದ. ಆನಂತರ ನಾವು ಅದನ್ನ ಪಡೆದುಕೊಂಡು ಊಟ ಮಾಡಿ ಹೋಗಿದ್ದೆವು. ಬಳಿಕ ನಾವು ಹೊಟೇಲ್‍ಗೆ ವಾಪಸ್ ಹೋದೆವು ಎಂಬ ಮಾಹಿತಿಯನ್ನು ರವಿಶಂಕರ್ ನೀಡಿದ್ದಾನೆ.
ಕೊರೊನಾ ಲಾಕ್‍ಡೌನ್ ಟೈಂ ಸಮಯದಲ್ಲೂ ನಮ್ಮ ಬಿಸಿನೆಸಲ್ ನಿಲ್ಲಿಸಿರಲಿಲ್ಲ. ನಗರದಲ್ಲಿ ಎಲ್ಲಾ ಕ್ಲೋಸ್ ಆದ ಮೇಲೆ ಬೆಂಗಳೂರಿನ ಹೊರವಲಯಕ್ಕೆ ಶಿಫ್ಟ್ ಆಗಿತ್ತು. ಆ ನಂತರ ಪಾರ್ಟಿಗಳನ್ನ ನಗರದ ಹೊರವಲಯಕ್ಕೆ ಶಿಫ್ಟ್ ಮಾಡಲಾಯ್ತು. ಅಲ್ಲಿ ವಿನಯ್, ಅರುಣ್, ಚರಣ್ ಸಾಥ್ ನೀಡಿದ್ರು. ವೈಭವ್ ಅಲ್ಲಿಗೆ ಡ್ರಗ್ ಸಪ್ಲೈ ಮಾಡ್ತಾ ಇದ್ದ. ಅಲ್ಲದೆ ಸೋಷಿಯಲ್ ಮೀಡಿಯಾ ಮೂಲಕ ಶ್ರೀಮಂತರ ಮಕ್ಕಳಿಗೆ ಮೆಸೇಜ್ ಮಾಡಿ ಕೆಲ ಕೋಡ್ ವರ್ಡ್ ಗಳ ಮೂಲಕ ಕರೆಸಲಾಗ್ತಿತ್ತು. ಈ ವೇಳೆ ಜಿಮ್ಮರ್ ಪ್ರಶಾಂತ್ ರಾಂಕಾ ಆಯೋಜನೆಗೆ ಸಾಥ್ ನೀಡಿದ್ದ. ಇನ್ನೂ ಪಾರ್ಟಿ ಆಯೋಜನೆಗೆ ಪ್ರಶಾಂತ್ ರಾಜ್ ಫಾರಂ ಹೌಸ್ ವ್ಯವಸ್ಥೆ ಮಾಡ್ತಿದ್ದ. ಈ ಪಾರ್ಟಿಗಳಿಗೆ ಎಕ್ಟಸಿ ಪಿಲ್ಸ್ ಡ್ರಗ್ ಬಳಕೆ ಮಾಡಲಾಗ್ತಿತ್ತು ಎಂದು ರವಿಶಂಕರ್ ವಿವರಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಆದಿತ್ಯ ಆಳ್ವಾ, ವೈಭವ್ ಪಾತ್ರವೇನು?:
ಪ್ರಕರಣದಲ್ಲಿ ಆದಿತ್ಯ ಆಳ್ವಾ ಮತ್ತು ವೈಭವ್ ದಂಧೆ ಮಾಹಿತಿ ಏನು ಎಂಬುದರ ಬಗ್ಗೆಯೂ ಎಳೆ ಎಳೆಯಾಗಿ ರವಿಶಂಕರ್ ಬಿಚ್ಚಿಟ್ಟಿದ್ದಾನೆ. ಮಾಜಿ ಸಚಿವರ ಪುತ್ರನೊಬ್ಬ ಗೋಲ್ಡ್ ಬ್ಯುಸಿನೆಸ್ ಮ್ಯಾನ್ ವೈಭವ್‍ಗೆ ಸಾಥ್ ನೀಡಿದ್ದಾನೆ. ಹೌದು ಈ ವೈಭವ್ ಜೈನ್ ಗೆ ಸಾಥ್ ನೀಡಿದ್ದು ದಿ.ಜೀವರಾಜ್ ಆಳ್ವಾ ಪುತ್ರ ಆದಿತ್ಯಾ ಆಳ್ವಾ. ವೈಭವ್ ಪಾರ್ಟಿ ಆಯೋಜಿಸಲು ಆದಿತ್ಯ ಮಾನ್ಯತಾ ಟೆಕ್ ಪಾರ್ಕ್ ಬಳಿಯ ಜಾಗದ ವ್ಯವಸ್ಥೆ ಮಾಡಿದ್ದ. ತನ್‍ನ ಹೌಸ್ ಆಫ್ ಲಿಫ್ಟ್ ಪಕ್ಕದ ಫಾರಂ ಹೌಸ್ & ಕಿಟ್ ಕ್ಲೋಕ್ಕನ್ ನಲ್ಲಿ ಆಯೋಜನೆ ಮಾಡಿದ್ದ. ಅದಕ್ಕೆ ನಾನು ಮತ್ತೆ ರಾಗಿಣಿ ಸಾಥ್ ನೀಡಲು ಶುರು ಮಾಡಿದ್ವಿ. ನಮ್ಮ ಮೊಬೈಲ್ ನಂಬರ್ ಕಾಂಟ್ಯಾಕ್ಟ್ ಬಳಸಿಕೊಂಡ್ವಿ. ದೊಡ್ಡ ದೊಡ್ಡವರ ಮಕ್ಕಳನ್ನ ಪಾರ್ಟಿಗೆ ಕರೆಸುತ್ತಿದ್ವಿ. ಆರೋಪಿಗಳೆಲ್ಲರೂ ಒಟ್ಟಿಗೆ ಸೇರಿ ಈ ಬ್ಯುಸಿನೆಸ್ ನಡೆಸುತ್ತಿದ್ದರು.
ಪ್ರತೀಕ್ ಶೆಟ್ಟಿ ರೋಲ್ ಬಿಚ್ಚಿಟ್ಟ ರವಿಶಂಕರ್.!
ಪ್ರತೀಕ್ ಶೆಟ್ಟಿ 2018ರ ಬಾಣಸವಾಡಿ ಕ್ರೈಂ ನಂಬರ್ 588ರ ಆರೋಪಿ. ಅದೇ ಪ್ರಕರಣದ ಮುಂದುವರಿದ ಭಾಗವಾಗಿಯೂ ಸದ್ಯ ತನಿಖೆ ನಡೆಯುತ್ತಿದೆ. ಈ ಪ್ರತೀಕ್ ಶೆಟ್ಟಿ ರವಿಶಂಕರ್ ಹೆಂಡತಿ ತಂಗಿಯ ಬಾಯ್ ಫ್ರೆಂಡ್. ಆತ ಟೆಕ್ಕಿಯಾಗಿದ್ದು, ಆತನಿಗೆ ಚಿನ್ನದ ವ್ಯಾಪಾರಿ ವೈಭವ್ ಜೈನ್ ಬ್ಯುಸಿನೆಸ್ ಪಾರ್ಟನರ್ ಆಗಿದ್ದ. ಹೀಗಾಗಿ ಈ ಡ್ರಗ್ಸ್ ಬ್ಯುಸಿನೆಸ್ ಮಾಡಲು ಕೂಡ ಪಾರ್ಟನರ್ ಆದ. ಇವರು ಮೂರು ನಾಲ್ಕು ವರ್ಷಗಳಿಂದ ಈ ಬ್ಯುಸಿನೆಸ್ ಮಾಡ್ತಿದ್ದಾರೆ. ವೀಕ್ ಎಂಡ್ ಪಾರ್ಟಿ ಆಯೋಜನೆ ಮಾಡಿ ಹಣ ಮಾಡ್ತಿದ್ದರು. ಬಂದವರಿಗೆ, ಊಟ, ಎಣ್ಣೆ ಮತ್ತು ಮಾದಕ ಮತ್ತು ಸಪ್ಲೆ ಮಾಡ್ತಿದ್ದರಂತೆ. ಹೀಗೆ ಮಾಡಲು ಹೋಗಿ 2018 ರಲ್ಲಿ ತಗ್ಲಾಕೊಂಡು ಜೈಲಿಗೆ ಹೋಗಿದ್ದ. ಈ ವೇಳೆ ವೈಭವ್ ಜೈನ್ ಹೆಸರು ಕೇಳಿ ಬಂದಿತ್ತು. ಆಗ ಮಾಜಿ ಮಿನಿಸ್ಟರ್ ಮಗ ಅಂತ ಆದಿತ್ಯ ಆಳ್ವಾ, ವೈಭವ್ ನ ಬಚಾವ್ ಮಾಡಿದ್ನಂತೆ. ಸದ್ಯ ಆ ಕೇಸ್ ತನಿಖೆ ಈಗ ನಡೆಯುತ್ತಿದೆ.
ಒಟ್ಟಿನಲ್ಲಿ ಸ್ಯಾಂಡಲ್ ವುಡ್ ಡ್ರಗ್ ಲಿಂಕ್ ಆರೋಪ ಪ್ರಕರಣಕ್ಕೆ ಸಂಬಂಧಿಸದಂತೆ ವಿಚಾರಣೆಯ ವೇಳೆ ಆರೋಪಿಗಳ ಬಣ್ಣ ಬಯಲಾಗುತ್ತಿದೆ. ಅಲ್ಲದೆ ಈ ಮಧ್ಯೆ ಆರೋಪಿಗಳ ಇತರ ಕೆಲ ಪ್ರಕರಣಗಳು ಕೂಡ ಒಂದೊಂದಾಗಿ ಹೊರಬರುತ್ತಿದ್ದು, ಮುಂದೇನಾಗುತ್ತೆ ಎಂಬುದನ್ನು ಕಾದುನೋಡಬೇಕಿದೆ.
ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ದಂಧೆಯ ಒಂದೊಂದೆ ಮುಖಗಳು ಬಯಲಾಗುತ್ತಿವೆ. ಈ ಡ್ರಗ್ಸ್ ದಂಧೆಯನ್ನು ಬಗೆದಷ್ಟೂ ಮತ್ತಷ್ಟು ವಿಷಯಗಳು, ವ್ಯಕ್ತಿಗಳ ನಂಟು ಹೊರ ಬರುತ್ತಿದ್ದು, ಮಾಜಿ ಸಚಿವ ಜೀವರಾಜ್ ಆಳ್ವ ಪುತ್ರ ಆದಿತ್ಯ ಆಳ್ವ ಕೂಡ ಮಾಫಿಯಾದ ಸೂತ್ರಧಾರಿ.
ಸಿಸಿಬಿ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸ್ಯಾಂಡಲ್‌ವುಡ್ ಡ್ರಗ್ ಪ್ರಕರಣದಲ್ಲಿ ರಾಗಿಣಿ ಎರಡನೇ ಆರೋಪಿಯಾಗಿದ್ದರೆ ಆದಿತ್ಯ ಆಳ್ವ ಆರನೇ ಆರೋಪಿಯಾಗಿದ್ದಾನೆ.
ಮತ್ತೊಂದು ಕಡೆ, ಜೀವರಾಜ್ ಆಳ್ವ ಅಳಿಯನಾಗಿರುವ ಬಾಲಿವುಡ್ ನಟ ವಿವೇಕ್ ಒಬೇರಾಯ್ ಹೆಸರು ಕೂಡ ಈಗ ಥಳಕು ಹಾಕಿಕೊಂಡಿದೆ. ಶ್ರೀಲಂಕಾದ ಕ್ಯಾಸಿನೋದಲ್ಲಿ ನಡೆದ ಪಾರ್ಟಿಯಲ್ಲಿ ನಟಿ ಸಂಜನಾ ಜೊತೆ ವಿವೇಕ್ ಒಬೇರಾಯ್ ಕಾಣಿಸಿಕೊಂಡಿದ್ದಾರೆ.
ಈ ಎಲ್ಲ ಕಾರಣಕ್ಕೆ ಸ್ಯಾಂಡಲ್‍ವುಡ್‍ನಿಂದ ಬಾಲಿವುಡ್‍ವರೆಗೆ ಡ್ರಗ್ಸ್ ಜಾಲ ಹಬ್ಬಿದ್ಯಾ? ಇನ್ನಷ್ಟು ಸ್ಟಾರ್‌ಗಳ ಮುಖವಾಡ ಬಯಲಾಗುತ್ತಾ ಎನ್ನುವುದು ಕುತೂಹಲ ಕೆರಳಿಸಿದೆ.
ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ಈಗ ಕೇಳಿ ಬರುತ್ತಿರುವ ವ್ಯಕ್ತಿಗಳು ಈ ವ್ಯವಹಾರದಲ್ಲಿ ಬಹಳ ಸಣ್ಣವರು. ಸ್ಯಾಂಡಲ್‌ವುಡ್ ಮಾತ್ರವಲ್ಲ ಬಾಲಿವುಡ್‌ವರೆಗೂ ಈ ಲಿಂಕ್ ಹಬ್ಬಿದೆ. ಸಾಕ್ಷ್ಯಗಳು ಸರಿಯಾಗಿ ಸಿಕ್ಕಿದರೆ ದೊಡ್ಡ ದೊಡ್ಡ ವ್ಯಕ್ತಿಗಳು ಹೊರ ಬರುತ್ತಾರೆ. ಮುಂದಿನ ದಿನಗಳಲ್ಲಿ ಯಾರೆಲ್ಲ ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಎಲ್ಲ ವಿವರಗಳು ಹೊರಬರಲಿದೆ ಎಂದು ತಿಳಿಸಿದ್ದರು.
ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸರು ರಾಗಿಣಿ ಜೊತೆ ಮಾಜಿ ಸಚಿವ, ದಿ. ಜೀವರಾಜ್ ಪುತ್ರ ಆದಿತ್ಯ ಆಳ್ವಾ ಸೇರಿದಂತೆ 12 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಸಿಸಿಬಿಯ ನಾರ್ಕೊಟಿಕ್ಸ್ ಎಸಿಪಿ ಗೌತಮ್ ನೀಡಿದ ಸ್ವಯಂಪ್ರೇರಿತ ದೂರಿನ ಆಧಾರದ ಮೇಲೆ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಎಫ್‌ಐಆರ್ ದಾಖಲಾಗಿತ್ತು. ಬಂಧಿತ ಆರೋಪಿಗಳೊಂದಿಗೆ ಸಂಪರ್ಕ ಹೊಂದಿದ್ದ ಬಗ್ಗೆ ಸಾಕ್ಷಿ ಹಾಗೂ ಪುರಾವೆಗಳು ಸಿಕ್ಕಿರುವ ಹಿನ್ನೆಯಲ್ಲಿ ಗೌತಮ್ ಅವರು ದೂರು ನೀಡಿದ್ದರು. ವಾಟ್ಸಾಪ್ ಮೆಸೇಜ್‍ಗಳು ಹಾಗೂ ಪೆಡ್ಲರ್ ಗಳ ನೀಡಿರುವ ಮಾಹಿತಿ ಅನ್ವಯ ನಟಿ ರಾಗಿಣಿ ಅವರ ಕೈವಾಡದ ಬಗ್ಗೆ ಸಾಕ್ಷಿ ಲಭ್ಯವಾಗಿದ್ದು, ಡ್ರಗ್ ಡೀಲರ್ ಗಳ ಜೊತೆ ಒಡನಾಟವನ್ನು ಹೊಂದಿದ್ದಾರೆ. ಅನೇಕ ಬಾರಿ ಡ್ರಗ್ ಡೀಲ್ ಮಾಡಿರುವ ಬಗ್ಗೆ ಮಾಹಿತಿ ಖಚಿತವಾದ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಇದನ್ನೂ ಓದಿ: ಮೇಘನಾ ರಾಜ್ ಬಳಿ ಕ್ಷಮೆ ಕೋರಿದ ಇಂದ್ರಜಿತ್ ಲಂಕೇಶ್
12 ಮಂದಿ ಆರೋಪಿಗಳು ಯಾರು?
ಶಿವಪ್ರಕಾಶ್ ಮೊದಲ ಆರೋಪಿ ಆಗಿದ್ದರೆ ರಾಗಿಣಿ ಎರಡನೇ ಆರೋಪಿಯಾಗಿದ್ದಾರೆ. ಪಾರ್ಟಿ ಆಯೋಜಿಸುತ್ತಿದ್ದ ವಿರೇನ್ ಖನ್ನಾ ಎ3, ಪ್ರಶಾಂತ್ ರಂಕಾ ಎ4, ವೈಭವ್ ಜೈನ್ ಎ5, ಆದಿತ್ಯ ಆಳ್ವಾ ಎ6, ಲೂಮ್ ಪೆಪ್ಪರ್ ಎ7, ಪ್ರಶಾಂತ್ ರಿಜು ಎ8, ಅಶ್ವಿನ್ ಎ9, ಅಭಿ ಸ್ವಾಮಿ ಎ10, ರಾಹುಲ್ ಎ11, ವಿನಯ್ ಎ12 ಆರೋಪಿಗಳಾಗಿದ್ದಾರೆ.
ನಾರ್ಕೊಟಿಕ್ ಡ್ರಗ್ಸ್ ಆ್ಯಂಡ್ ಸೈಕೊಟ್ರಾಫಿಕ್ ಸಬ್‌ಸ್ಟೆನ್ಸಸ್ (ಎನ್‍ಡಿಪಿಎಸ್) ಆ್ಯಕ್ಟ್ ಸೆಕ್ಷನ್ 21, 21ಸಿ, 27ಎ, 27ಬಿ, 29, ಐಪಿಸಿ 120ಬಿ ಅಡಿ 12 ಮಂದಿ ವಿರುದ್ಧ ಕೇಸ್ ದಾಖಲಾಗಿದೆ. ಈಗ ರಾಗಿಣಿ, ವಿರೇನ್ ಖನ್ನಾ, ಶಿವಪ್ರಕಾಶ್‌ನನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳು ಪರಾರಿಯಾಗಿದ್ದು ಅವರನ್ನು ಹುಡುಕುವ ಕಾರ್ಯ ನಡೆಯುತ್ತಿದೆ.
ಯಾವ ಸೆಕ್ಷನ್ ಏನು ಹೇಳುತ್ತದೆ? ಎನ್‍ಡಿಪಿಎಸ್ 21 – ಮಾದಕ ವಸ್ತುಗಳನ್ನು ಅಕ್ರಮವಾಗಿ ತಯಾರು ಮಾಡುವುದು, ಮಾರಾಟ ಮಾಡುವುದು, ಸಾಗಾಟ ಮಾಡುವುದು ಅಪರಾಧ.
ಎನ್‍ಡಿಪಿಎಸ್ 21ಸಿ – ವಾಣಿಜ್ಯ ಉದ್ದೇಶಕ್ಕಾಗಿ ಮಾದಕವಸ್ತುಗಳ ಸಂಗ್ರಹಣೆ ಮತ್ತು ಮಾರಾಟ ಮಾಡುವುದು ನಿಷಿದ್ಧ. ಆರೋಪ ಸಾಬೀತಾದರೆ 10 ವರ್ಷಕ್ಕೆ ಮೇಲ್ಪಟ್ಟು ಶಿಕ್ಷೆ.
ಎನ್‍ಡಿಪಿಎಸ್ 27 ಎ – ಮಾದಕ ವಸ್ತುಗಳಿಗೆ ಸಂಬಂಧಿಸಿ ಹಣಕಾಸು ನೆರವು. ನೇರವಾಗಿ ಅಥವಾ ಪರೋಕ್ಷವಾಗಿ ಅಥವಾ ಮಾದಕ ವಸ್ತು ಸಾಗಣಿಕೆಗೆ ನೆರವಾಗುವುದು ಅಪರಾಧ.
ಎನ್‍ಡಿಪಿಎಸ್ 27 ಬಿ – ಮಾದಕವಸ್ತು ಸೇವನೆ ಕೂಡ ಅಪರಾಧ. ಆರು ತಿಂಗಳ ಶಿಕ್ಷೆ ಅಥವಾ 10 ಸಾವಿರ ದಂಡ.
ಎನ್‍ಡಿಪಿಎಸ್ 29 – ಅಪರಾಧಿಕ ಒಳ ಸಂಚಿಗೆ ಸಹಾಯ ಮಾಡುವುದು. ಅಂತೆಯೇ ಒಳ ಸಂಚು ಮಾಡಲು ವೇದಿಕೆ ಕಲ್ಪಿಸುವುದು ಪಾರ್ಟಿ ಆಯೋಜನೆ ಮಾಡುವುದು ಕೂಡ ಶಿಕ್ಷಾರ್ಹ ಅಪರಾಧ.
ಐಪಿಸಿ 120 ಬಿ – ಅಪರಾಧಿಕ ಒಳಸಂಚು.
ದೂರಿನಲ್ಲಿ ಏನಿದೆ?
ಎಸಿಪಿ ಗೌತಮ್ ನೀಡಿದ ದೂರಿನಲ್ಲಿ ಪ್ರಕರಣ ಸಂಬಂಧ ರವಿಶಂಕರ್ ಕರೆಯಿಸಿ ವಿಚಾರಣೆ ನಡೆಸಿದ್ದೇವೆ. ಪ್ರಕರಣದ ಆರೋಪಿಗಳು ಎಲ್ಲಾ ಒಂದು ಸಿಂಡಿಕೇಟ್ ಮಾಡಿಕೊಂಡಿದ್ದಾರೆ. ಮೊದಲ ಆರೋಪಿಯಿಂದ ಹಿಡಿದು 12ನೇ ಆರೋಪಿಯಾಗಿರುವ ವ್ಯಕ್ತಿಗಳು ನಗರದ ಪ್ರತಿಷ್ಠಿತ ಹೋಟೆಲಿನಲ್ಲಿ ಸೇರುತ್ತಿದ್ದರು. ಮಾದಕ ವಸ್ತುಗಳನ್ನು ತರಿಸಿಕೊಂಡು ಮಾರಾಟ ಮಾಡುತ್ತಿದ್ದರು. ಪ್ರತಿಷ್ಠಿತ ಸಿನಿಮಾ ತಾರೆಯರು, ಉದ್ಯಮಿಗಳ ಮಕ್ಕಳು, ರಾಜಕಾರಣಿಗಳ ಪುತ್ರರಿಗೆ ಡ್ರಗ್ಸ್‌ಗಳನ್ನು ಮಾರಾಟ ಮಾಡುತ್ತಿದ್ದರು. ಕೆಲವೊಮ್ಮೆ ಒಟ್ಟಿಗೆ ಸೇರಿ ಡ್ರಗ್ ಪಾರ್ಟಿ ಮಾಡಿದ್ದಾರೆ. ಜೊತೆಗೆ ಇವರು ಖುದ್ದು ಸೇವನೆ ಸಹ ಮಾಡಿದ್ದಾರೆ. ಒಳಸಂಚು ಮಾಡಿಕೊಂಡು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ. ಇದನ್ನೂ ಓದಿ: ಗಾಂಜಾ ತುಂಬಿದ್ದ 8 ಸಿಗರೇಟ್ ಪತ್ತೆ – ಪೊಲೀಸರ ದಾಳಿ ವೇಳೆ ರಾಗಿಣಿ ಮನೆಯಲ್ಲಿ ಏನೇನು ಸಿಕ್ಕಿದೆ?
ಶಿಕ್ಷೆ ಏನು ?
ಮಾದಕ ವಸ್ತುಗಳನ್ನ ಮೂರು ವಿಧವಾಗಿ ವಿಂಗಡನೆ ಮಾಡಲಾಗುತ್ತದೆ. ಸ್ಮಾಲ್ ಕ್ವಾಲಿಟಿ, ಮಿಡಲ್ ಕ್ವಾಲಿಟಿ, ಕಮರ್ಷಿಯಲ್ ಕ್ವಾಲಿಟಿ ಎಂದು ವಿಂಗಡಿಸಲಾಗುತ್ತದೆ. ಪೆಡ್ಲರ್ ಮತ್ತು ಗ್ರಾಹಕರ ವಿರುದ್ಧ ಎನ್‍ಡಿಪಿಎಸ್ ಕಾಯ್ದೆಯ ಅಡಿ ದಾಖಲಾದ ಪ್ರಕರಣ ಸಾಬೀತಾದರೆ ಪೆಡ್ಲರ್‌ಗಳಿಗೆ ಕನಿಷ್ಟ 10 ವರ್ಷದಿಂದ ಗರಿಷ್ಠ 20 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಗ್ರಾಹಕರಿಗೆ ಕನಿಷ್ಟ 3 ವರ್ಷದಿಂದ ಗರಿಷ್ಟ 10 ವರ್ಷ ಸೆರೆವಾಸ ವಿಧಿಸಬಹುದು. ಸ್ಮಾಲ್ ಕ್ವಾಂಟಿಟಿ ಯ ಅಡಿ ದಾಖಲಾಗುವ ಕೇಸ್ ನಲ್ಲಿ ಮಾತ್ರ ಕನಿಷ್ಠ ಒಂದು ವರ್ಷ ಜೈಲು 10 ಸಾವಿರ ದಂಡ ವಿಧಿಸಬಹುದು.