Tag: Aditi Rao Hydari

  • ಸಿಹಿ ಸುದ್ದಿ ಕೊಡಲು ಸಜ್ಜಾದ್ರಾ ನಟ ಸಿದ್ಧಾರ್ಥ್- ಅದಿತಿ ರಾವ್‌ ಹೈದರಿ?

    ಸಿಹಿ ಸುದ್ದಿ ಕೊಡಲು ಸಜ್ಜಾದ್ರಾ ನಟ ಸಿದ್ಧಾರ್ಥ್- ಅದಿತಿ ರಾವ್‌ ಹೈದರಿ?

    ಚಿತ್ರರಂಗದಲ್ಲಿ ಗಟ್ಟಿಮೇಳ ಸೌಂಡ್ ಜೋರಾಗಿದೆ. ಇತ್ತೀಚಿಗೆ ನಾಗಶೌರ್ಯ ಮದುವೆಯಾದ ಬೆನ್ನಲ್ಲೇ ಶರ್ವಾನಂದ್ ಎಂಗೇಜ್ ಆಗುವ ಮೂಲಕ ಗುಡ್ ನ್ಯೂಸ್ ಕೊಟ್ಟಿದ್ದರು. ಇದೀಗ ಅದೇ ಹಾದಿಯಲ್ಲಿ ನಟ ಸಿದ್ಧಾರ್ಥ್ (Siddarth) ಮತ್ತು ಅದಿತಿ ರಾವ್ (Aditi Rao) ಸೇರಿದ್ದಾರೆ. ಸದ್ಯದಲ್ಲೇ ಈ ಜೋಡಿ ತಮ್ಮ ಅಭಿಮಾನಿಗಳಿಗೆ ಸ್ವೀಟ್ ನ್ಯೂಸ್ ಕೊಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ಬ್ಯಾಚುಲರ್ ಲೈಫ್‌ಗೆ ಸೆಲೆಬ್ರಿಟಿಗಳು ಈಗ ಗುಡ್ ಬೈ ಹೇಳ್ತಿದ್ದಾರೆ. ಇತ್ತೀಚಿಗೆ ನಾಗಶೌರ್ಯ (Nagashourya) ಕನ್ನಡದ ಹುಡುಗಿ ಅನುಷಾ ಶೆಟ್ಟಿ ಅವರನ್ನು ಮದುವೆಯಾದರು. ಈ ವರ್ಷದ ಆರಂಭದಲ್ಲಿಯೇ ರಕ್ಷಿತಾ ರೆಡ್ಡಿ ಜೊತೆ ನಟ ಶರ್ವಾನಂದ್ (Sharwanand) ಎಂಗೇಜ್‌ಮೆಂಟ್ ಮಾಡಿಕೊಂಡು ಅಚ್ಚರಿ ಮೂಡಿಸಿದ್ದರು. ಶರ್ವಾನಂದ್ ನಿಶ್ಚಿತಾರ್ಥಕ್ಕೆ ಜೋಡಿಯಾಗಿ ಸಿದ್ಧಾರ್ಥ್ ಮತ್ತು ಅದಿತಿ ರಾವ್ ಹೈದರಿ (Aditi Rao Hydari) ಎಂಟ್ರಿ ಕೊಟ್ಟಿದ್ದರು. ಹಾಗಾಗಿ ಈ ಸೆಲೆಬ್ರಿಟಿ ಜೋಡಿ ಬಗ್ಗೆ ಮದುವೆ (Wedding) ಬಗ್ಗೆ ಚರ್ಚೆ ನಡೆಯುತ್ತಿದೆ.

    ಸಾಕಷ್ಟು ಸಮಯದಿಂದ ಸಿದ್ಧಾರ್ಥ್ ಮತ್ತು ಅದಿತಿ ಡೇಟಿಂಗ್ ಮಾಡ್ತಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿಗೆ ಸಿನಿಮಾದಲ್ಲಿ ನಟಿಸಿದ್ದ ವೇಳೆ ಇಬ್ಬರ ನಡುವೆ ಪ್ರೇಮಾಂಕುರ ಆಗಿರುವ ಬಗ್ಗೆ ಸುದ್ದಿ ಇದೆ. ಆದರೆ ಇಬ್ಬರು ತಮ್ಮ ಸಂಬಂಧದ ಬಗ್ಗೆ ಎಲ್ಲೂ ಕೂಡ ಅಧಿಕೃತವಾಗಿ ಬಾಯ್ಬಿಟ್ಟಿಲ್ಲ.

    ಹೋದಲೆಲ್ಲಾ ಒಟ್ಟಿಗೆ ಕಾಣಿಸಿಕೊಳ್ಳುವ ಸಿದ್ಧಾರ್ಥ್ ಮತ್ತು ಅದಿತಿ ತಮ್ಮ ಏನಿಲ್ಲಾ ಅಂತಲೇ ಮೌನವಾಗಿ ಬಿಟ್ಟಿದ್ದಾರೆ. ಆದರೆ ಇತ್ತೀಚಿನ ಶರ್ವಾನಂದ್ ನಿಶ್ಚಿತಾರ್ಥಕ್ಕೆ ಇವರು ಜೊತೆಯಾಗಿ ಹೋಗಿರೋದು ಅನೇಕರ ಚರ್ಚೆಗೆ ಗ್ರಾಸವಾಗಿದೆ. ಸದ್ಯದಲ್ಲೇ ಸಿದ್ಧಾಥ್- ಅದಿತಿ ಕೂಡ ಮದುವೆ ಬಗ್ಗೆ ಬ್ರೇಕಿಂಗ್ ನ್ಯೂಸ್ ಕೊಡಲಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಮೂರು ಮದುವೆ ಗುಟ್ಟನ್ನು ಬಿಚ್ಚಿಟ್ಟ ನಟ ಪವನ್ ಕಲ್ಯಾಣ್

    ಇನ್ನೂ ಅದಿತಿ ಅವರ ಮೊದಲ ಪತಿ ಸತ್ಯದೀಪ್ ಮಿಶ್ರಾ (sathyadeep Mishra) ಅವರು ಇತ್ತೀಚಿಗೆ ಮಸಾಬಾ ಗುಪ್ತಾ (Masaba Gupta) ಅವರನ್ನ ಮದುವೆಯಾದರು. ಹಾಗಾಗಿ ಅದಿತಿ ಮದುವೆ ಬಗ್ಗೆ ಅಪ್‌ಡೇಟ್ ಅನ್ನು ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ʻಬೊಂಬೆʼಯಂತ ಅದಿತಿ‌, ಬೊಮ್ಮರಿಲ್ಲು ಹೀರೋ ಜೊತೆ ರೊಮ್ಯಾನ್ಸ್

    ʻಬೊಂಬೆʼಯಂತ ಅದಿತಿ‌, ಬೊಮ್ಮರಿಲ್ಲು ಹೀರೋ ಜೊತೆ ರೊಮ್ಯಾನ್ಸ್

    ಟಾಲಿವುಡ್‌ನ ಸದ್ಯದ ಹಾಟ್ ಟಾಪಿಕ್ ಅಂದರೆ ಅದಿತಿ ರಾವ್ ಹೈದರಿ ಮತ್ತು ತೆಲುಗಿನ ಸ್ಟಾರ್ ನಟ ಸಿದ್ಧಾರ್ಥ್ ಪ್ರೇಮ ಕಹಾನಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ ಮುಂಬೈನಲ್ಲಿ ಒಟ್ಟಿಗೆ ಕ್ಯಾಮೆರಾ ಕಣ್ಣಿಗೆ ಈ ಜೋಡಿ ಸೆರೆಯಾಗಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ತೆಲುಗಿನ ಸಾಕಷ್ಟು ಸಿನಿಮಾಗಳ ಮೂಲಕ ಗಮನ ಸೆಳೆದ ನಟ ಸಿದ್ಧಾರ್ಥ್ ಈಗ ಪ್ರೀತಿಯಲ್ಲಿ ಬಿದ್ದಿದ್ದಾರೆ. ಟಾಲಿವುಡ್ ಚೆಲುವೆ ಅದಿತಿ ರಾವ್ ಹೈದರಿ ಜೊತೆ ಸಿದ್ಧಾರ್ಥ್ ಡೇಟಿಂಗ್ ಮಾಡುತ್ತಿದ್ದಾರೆ. ಟಿಟೌನ್ ತುಂಬೆಲ್ಲಾ ಈ ಜೋಡಿಯ ಪ್ರೇಮ ಕಹಾನಿ ಸಖತ್ ಸದ್ದು ಮಾಡುತ್ತಿದೆ. ಮುಂಬೈನ ಸೆಲೂನ್‌ಯೊಂದರ ಮುಂದೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಪಾಪರಾಜಿಗಳ ಕಣ್ಣಿಗೆ ಟಿಟೌನ್‌ನ ಲವ್ ಬರ್ಡ್ಸ್ ಅದತಿ ಮತ್ತು ಸಿದ್ಧಾರ್ಥ್ ಕಾಣಿಸಿಕೊಂಡಿದ್ದಾರೆ.ಇದನ್ನೂ ಓದಿ:ಡಿಸೆಂಬರ್ ನಿಂದ ಸುದೀಪ್ ನಟನೆಯ ಹೊಸ ಸಿನಿಮಾದ ಶೂಟಿಂಗ್ ಶುರು

    ಕಳೆದ ವರ್ಷ ರಿಲೀಸ್ ಆಗಿದ್ದ `ಮಹಾ ಸಮುದ್ರಂ’ ಚಿತ್ರದಲ್ಲಿ ಅದಿತಿ ಮತ್ತು ಸಿದ್ಧಾರ್ಥ್ ಒಟ್ಟಿಗೆ ನಟಿಸಿದ್ದರು. ಈ ಚಿತ್ರದ ಮೂಲಕ ಸಿನಿಪ್ರೇಕ್ಷಕರಿಗೂ ಇಷ್ಟವಾಗಿದ್ದರು. ಈ ಚಿತ್ರದಿಂದ ಪರಿಚಯವಾದ ಗೆಳೆತನ ಈಗ ಪ್ರೀತಿಗೆ ತಿರುಗಿ, ಕಳೆದ ವರ್ಷದಿಂದ ಈ ಜೋಡಿ ಏಂಗೇಜ್ ಆಗಿದ್ದಾರೆ. ಅಷ್ಟಕ್ಕೂ ಈ ಡೇಟಿಂಗ್ ವಿಚಾರ ನಿಜಾನಾ ಅಂತಾ ಅದಿತಿ ಮತ್ತು ಸಿದ್ಧಾರ್ಥ್ ಅಧಿಕೃತವಾಗಿ ತಿಳಿಸಿಕೊಡುವವೆರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಮಣಿರತ್ನಂ ಸಿನಿಮಾದಲ್ಲಿ ನಾಯಕಿ ಆಗಲು ನಾನು ಚಿತ್ರರಂಗಕ್ಕೆ ಬಂದಿದ್ದೆ : ಅದಿತಿ ರಾವ್

    ಮಣಿರತ್ನಂ ಸಿನಿಮಾದಲ್ಲಿ ನಾಯಕಿ ಆಗಲು ನಾನು ಚಿತ್ರರಂಗಕ್ಕೆ ಬಂದಿದ್ದೆ : ಅದಿತಿ ರಾವ್

    ಮುಂಬೈ: ನಾನು ಚಿತ್ರರಂಗಕ್ಕೆ ಬಂದಿದ್ದೆ ಮಣಿರತ್ನಂ ಸಿನಿಮಾಗಳಲ್ಲಿ ನಾಯಕಿಯಾಗಲು ಎಂದು ಪ್ಯಾನ್ ಇಂಡಿಯಾ ನಟಿ ಅದಿತಿ ರಾವ್ ಹೈದರಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

    ಅದಿತಿ ತಮ್ಮ ಸಿನಿ ಜರ್ನಿ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ್ದು, ನಾನು ಹಲವು ಭಾಷೆಗಳಲ್ಲಿ ನಟಿಸುವುದರಿಂದ ನನಗೆ ಕೆಲವೊಮ್ಮೆ ಗೊಂದಲವಾಗುತ್ತೆ. ನಾನು ಯಾವ ಭಾಷೆಯ ಸಿನಿಮಾ ಮಾಡಲು ಸೆಟ್ ಗೆ ಹೋಗುತ್ತೇನೂ ಆ ಭಾಷೆ ನಡುವೆ ನಾನು ಬೆರೆಯುತ್ತೇನೆ. ನಾನು ತೆಲುಗು ಮಾತನಾಡಬೇಕು ಎಂದುಕೊಂಡಾಗ, ನಾನು ತಮಿಳು ಮಾತನಾಡಲು ಪ್ರಾರಂಭಿಸುತ್ತೇನೆ. ಶೂಟಿಂಗ್ ಸೆಟ್ ಗೆ ಹೋದಾಗ ನಾನು ಆ ಭಾಷೆಯಲ್ಲಿ ಮಾತನಾಡುತ್ತೇನೆ. ನಾನು ಇದನ್ನು ನಿಜವಾಗಿಯೂ ಆನಂದಿಸುತ್ತೇನೆ ಎಂದು ನಗುತ್ತಾ ಉತ್ತರಿಸಿದರು. ಇದನ್ನೂ ಓದಿ: ತಂದೆಯ `ಧಡ್ಕನ್’ ಸಿನಿಮಾ ರಿಮೇಕ್‍ನಲ್ಲಿ ನಟಿಸಲು ಬಯಸುತ್ತೇನೆ: ಅಹಾನ್ ಶೆಟ್ಟಿ

     

    View this post on Instagram

     

    A post shared by Aditi Rao Hydari (@aditiraohydari)

    ಅದಿತಿ ಮಣಿರತ್ನಂ, ಸಂಜಯ್ ಲೀಲಾ ಬನ್ಸಾಲಿ ಮತ್ತು ಸುಧೀರ್ ಮಿಶ್ರಾ ಅವರಂತಹ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಚಿತ್ರರಂಗಕ್ಕೆ ಬಂದಿದ್ದೆ ಮಣಿರತ್ನಂ ಸಿನಿಮಾಗಳಲ್ಲಿ ನಾಯಕಿಯಾಗಲು. ಮಣಿರತ್ನಂ ಅವರೊಂದಿಗೆ ಕೆಲಸ ಮಾಡುವುದು ನನ್ನ ಕನಸಗಿತ್ತು. ಮುಂದೊಂದು ದಿನ ಅವನೊಂದಿಗೆ ಕೆಲಸ ಮಾಡುವ ಆಸೆಯಿಂದ ಸಿನಿಮಾ ಪ್ರವೇಶಿಸಿದ್ದೆ ಎಂದು ಬಹಿರಂಗಪಡಿಸಿದರು.

    ನಾನು ಮಣಿರತ್ನಂ ಸಿನಿಮಾದಲ್ಲಿ ನಾಯಕಿಯಾಗಬೇಕೆಂದು ಬಯಸಿದ್ದೆ ಮತ್ತು ಅದೇ ನನ್ನನ್ನು ಚಲನಚಿತ್ರಗಳಿಗೆ ಸೇರುವಂತೆ ಮಾಡಿತು. ಆದರೆ ಇದು ಕೇವಲ ಕನಸು. ಆದರೂ ನಾನು ಇದನ್ನು ಮಾಡಲು ಬಯಸಿದೆ. ನಾನು ಮೊದಲು ಮಣಿ ಸರ್ ಅವರ ಮೊದಲ ಭಾಷೆ ಕಲಿತೆ. ನನ್ನ ಶ್ರಮಕ್ಕೆ ತಕ್ಕಂತೆ ನಾನು ಅವರ ಜೊತೆ ಕೆಲಸ ಮಾಡಿದೆ ಎಂದು ಖುಷಿ ವ್ಯಕ್ತಪಡಿಸಿದರು.

    ನಾನು 2010-11 ರ ಸುಮಾರಿಗೆ ಮುಂಬೈಗೆ ಹೋಗಿ ಹಿಂದಿ ಸಿನಿಮಾ ಮಾಡಲು ಪ್ರಾರಂಭಿಸಿದೆ. ನಾನು ಸಹ ತುಂಬಾ ಎಡವುತ್ತಿದ್ದೆ. ಆದರೆ ಎಲ್ಲದಕ್ಕಿಂತ ನನ್ನ ಕನಸು ನನಗೆ ತುಂಬಾ ಮುಖ್ಯವಾಗಿತ್ತು. ಅಂತಿಮವಾಗಿ ನಾನು 2016 ರಲ್ಲಿ ಮಣಿ ಸರ್ ಅವರೊಂದಿಗೆ ಕೆಲಸ ಮಾಡಿದೆ ಎಂದು ನಗುತ್ತಾ ಹೇಳಿದರು.

    ನಾನು ಮೊದಲ ದಿನ ಚಿತ್ರದ ಸೆಟ್‍ಗೆ ಕಾಲಿಟ್ಟಾಗ, ನನಗೆ ಏನೂ ತಿಳಿದಿರಲಿಲ್ಲ. ನಾನು ನಟನೆಯನ್ನು ಆನಂದಿಸುತ್ತಿದ್ದೆ. ಏಕೆಂದರೆ ನಾವು ಸೆಟ್‍ನಲ್ಲಿ ಇದ್ದಾಗ ನಮಗೆ ಪ್ರತಿಯೊಂದು ಅಂಶವು ಹೊಸದನ್ನು ಕಲಿಸುತ್ತಿರುತ್ತೆ. ನಾವು ಎಲ್ಲವನ್ನು ಸರಿಯಾಗಿ ನೋಡಿ ಕಲಿಯಬೇಕು ಎಂದು ವಿವರಿಸಿದರು. ಇದನ್ನೂ ಓದಿ: ‘ನಾವು ಬಿಗ್‍ಬಿ ಅಭಿಮಾನಿಗಳು’ ಎಂದ ಸುಜೋಯ್ ಘೋಷ್ – ಕುರ್ತಾ ಬಗ್ಗೆ ಪ್ರಶ್ನಿಸಿದ ಅಭಿಷೇಕ್ ಬಚ್ಚನ್

     

    View this post on Instagram

     

    A post shared by Aditi Rao Hydari (@aditiraohydari)

    ಅದಿತಿ ಇಲ್ಲಿಯವರೆಗೆ ಮಣಿರತ್ನಂ ಅವರೊಂದಿಗೆ ಎರಡು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅವು ‘ಕಾಟ್ರು ವೆಲಿಯಿದೈ'(2017) ಮತ್ತು ‘ಚೆಕ್ಕ ಚಿವಂತ ವಾನಂ'(2018). 2021 ರಲ್ಲಿ ದಿ ಗರ್ಲ್ ಆನ್ ದಿ ಟ್ರೈನ್, ಸರ್ದಾರ್ ಕಾ ಗ್ರ್ಯಾಂಡ್‍ಸನ್, ಮಹಾ ಸಮುದ್ರಂ(ತೆಲುಗು) ಸಿನಿಮಾಗಳಲ್ಲಿ ನಟಿಸಿದ್ದಾರೆ.

    ಪ್ಯಾನ್-ಇಂಡಿಯಾ ನಟಿ ಅದಿತಿ ಹಿಂದಿ, ತಮಿಳು, ತೆಲುಗು, ಮರಾಠಿ ಮತ್ತು ಇತರ ಭಾಷೆಗಳಲ್ಲಿ ತಮ್ಮ ಬಹುಮುಖ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಆಕೆಯ ಜನಪ್ರಿಯ ಹಿಂದಿ ಸಿನಿಮಾ ‘ಯೇ ಸಾಲಿ ಜಿಂದಗಿ’, ‘ವಜೀರ್’, ದಕ್ಷಿಣ ಭಾರತದಲ್ಲಿ ‘ಸಮ್ಮೋಹನಂ’, ‘ವಿ’ ಮತ್ತು ‘ಸೈಕೋ’ಗಳನ್ನು ಸಿನಿಮಾಗಳಲ್ಲಿ ನಟಿಸಿದ್ದಾರೆ.