Tag: Aditi Rao Hydari

  • 400 ವರ್ಷಗಳ ಹಿಂದಿನ ಪುರಾತನ ದೇವಸ್ಥಾನದಲ್ಲಿ ಮದುವೆಯಾದ ಸಿದ್ಧಾರ್ಥ್, ಅದಿತಿ

    400 ವರ್ಷಗಳ ಹಿಂದಿನ ಪುರಾತನ ದೇವಸ್ಥಾನದಲ್ಲಿ ಮದುವೆಯಾದ ಸಿದ್ಧಾರ್ಥ್, ಅದಿತಿ

    ಮಿಳಿನ ಸ್ಟಾರ್ ನಟ ಸಿದ್ಧಾರ್ಥ್ (Actor Siddarth) ಮತ್ತು ಅದಿತಿ ರಾವ್ ಹೈದರಿ (Aditi Rao Hydari) ಇಂದು (ಸೆ.16)  ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. 400 ವರ್ಷಗಳ ಹಿಂದಿನ ಪುರಾತನ ದೇವಸ್ಥಾನದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ. ಮದುವೆಯ ಸಂಭ್ರಮದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

     

    View this post on Instagram

     

    A post shared by Aditi Rao Hydari (@aditiraohydari)

    ಹಲವು ವರ್ಷಗಳ ಪ್ರೀತಿಗೆ ಇಂದು ಸಿದ್ಧಾರ್ಥ್‌, ಅದಿತಿ ರಾವ್‌ ಮದುವೆಯ ಮುದ್ರೆ ಒತ್ತಿದ್ದಾರೆ. 400 ವರ್ಷಗಳ ಹಿಂದಿನ ವನಪರ್ತಿ ಪುರಾತನ ದೇವಸ್ಥಾನದಲ್ಲಿ ಈ ಜೋಡಿ ಹಸೆಮಣೆ ಏರಿದೆ. ಇನ್ನೂ ಸಿದ್ಧಾರ್ಥ್‌ ಜೊತೆಗಿನ ಅದಿತಿ ಮದುವೆಯ ಫೋಟೋ ಶೇರ್‌ ಮಾಡಿ, ನೀವೇ ನನ್ನ ಸೂರ್ಯ, ನೀವೇ ನನ್ನ ಚಂದ್ರ ಮತ್ತು ನನ್ನ ಎಲ್ಲಾ ನಕ್ಷತ್ರಗಳು ಎಂದು ಬರೆದುಕೊಂಡಿದ್ದಾರೆ. ಶಾಶ್ವತ ಪ್ರೀತಿ, ಬೆಳಕು, ಮ್ಯಾಜಿಕ್‌ ಪ್ರಾರಂಭ ಎಂದಿದ್ದಾರೆ ನಟಿ.

    ಅದಿತಿ ಮತ್ತು ಸಿದ್ಧಾರ್ಥ್‌ ಇಬ್ಬರಿಗೂ ಇದು 2ನೇ ಮದುವೆಯಾಗಿದೆ. ಮೊದಲ ಮದುವೆಗೆ ಡಿವೋರ್ಸ್‌ ನೀಡಿದ ಬಳಿಕ ಸಿನಿಮಾವೊಂದರ ಚಿತ್ರೀಕರಣದಲ್ಲಿ ಪರಿಚಯವಾಗಿ ಇಂದು ಮದುವೆ ಮುನ್ನುಡಿ ಬರೆದಿದೆ. ಹೊಸ ಜೋಡಿಗೆ ಸಿನಿಮಾ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.

  • ಹೈದ್ರಾಬಾದ್‌ನಲ್ಲಿ ಅದಿತಿ-ಸಿದ್ದಾರ್ಥ್ ಮದುವೆ ತಯಾರಿ

    ಹೈದ್ರಾಬಾದ್‌ನಲ್ಲಿ ಅದಿತಿ-ಸಿದ್ದಾರ್ಥ್ ಮದುವೆ ತಯಾರಿ

    ಸೆನ್ಸೇಷನಲ್ ತಾರಾ ಜೋಡಿ, ಬಹುಭಾಷಾ ನಟಿ ಅದಿತಿ ರಾವ್ ಹೈದರಿ (Aditi Rao Hydari) ಹಾಗೂ ತಮಿಳು ನಟ ಸಿದ್ದಾರ್ಥ್ (Siddharth) ಶೀಘ್ರದಲ್ಲೇ ಮದುವೆಯಾಗಲಿದ್ದು (Marriage) ಪೂರ್ವ ತಯಾರಿ ಭರದಿಂದ ಸಾಗಿದೆ. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರೇಮಿಗಳು ಕಳೆದ ಮಾರ್ಚ್ ತಿಂಗಳಲ್ಲಿ ಗುಪ್ತವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದೇ ಜಾಗದಲ್ಲೀಗ ಡೆಸ್ಟಿನೇಷನ್ ವೆಡ್ಡಿಂಗ್  ಪ್ಲ್ಯಾನ್ ಮಾಡಿದ್ದಾರೆ.

    400 ವರ್ಷಗಳ ಐತಿಹಾಸಿಕ ಹಿನ್ನಲೆಯುಳ್ಳ ದೇವಸ್ಥಾನದಲ್ಲೇ ಅದಿತಿ ತಾನು ಪ್ರೀತಿಸಿದ ಹುಡುಗ ಸಿದ್ದಾರ್ಥ್ ಜೊತೆ ಸಪ್ತಪದಿ ತುಳಿಯಲು ಸಿದ್ಧರಾಗಿದ್ದಾರೆ. ಹೈದ್ರಾಬಾದ್‌ನಿಂದ ನೂರೈವತ್ತು ಕಿಲೋಮೀಟರ್ ದೂರವಿರುವ ವಾನಪರ್ತಿಯ ಶ್ರೀರಂಗಪುರಂ ದೇವಸ್ಥಾನದಲ್ಲಿ ಅದಿತಿ-ಸಿದ್ದಾಥ್ ಮದುವೆಗೆ ಪ್ಲಾö್ಯನ್ ಆಗಿದೆ. ಈ ದೇವಸ್ಥಾನ ಅದಿತಿಗೆ ಭಾವನಾತ್ಮಕವಾಗಿ ಪ್ರಭಾವ ಬೀರಿರುವ ಜಾಗ ಎಂದು ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಅಜ್ಜಿಯನ್ನ ಕಳೆದುಕೊಂಡಿದ್ದ ಅದಿತಿಗೆ ಅವರ ಆಶೀರ್ವಾದ ಇಲ್ಲಿ ಸಿಗುವ ಭಾವನೆಯಂತೆ. ಕಾರಣ ಅದಿತಿ ಪೂರ್ವಜರಿಗೆ ಈ ದೇವಾಲಯದ ಜೊತೆ ಇರುವ ನಂಟನ್ನ ಮದುವೆಯಲ್ಲಿ ಬೆಸೆಯುವ ಯೋಜನೆ.

     

    ತೆಲುಗಿನ `ಮಹಾ ಸಮುದ್ರಂ’ ಚಿತ್ರದಲ್ಲಿ ಅದಿತಿ ಸಿದ್ದಾರ್ಥ್ ತೆರೆಹಂಚಿಕೊಂಡಿದ್ದರು ಬಳಿಕ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದರು. ಪ್ರೀತಿಯ ವಿಚಾರ ಗುಟ್ಟಾಗೇ ಇಟ್ಟಿದ್ದ ಜೋಡಿ ಎಂಗೇಜ್ಮೆಂಟ್ ಆದ್ಮೇಲೆ ಸಂಬಂಧವನ್ನ ಆಫಿಷಿಯಲ್ ಆಗಿ ಘೋಷಿಸಿದ್ದರು. ಇದೀಗ ಮದುವೆ ದಿನಾಂಕವೂ ನಿಗದಿಯಾಗಿದ್ದು ಅದ್ದೂರಿಯಾಗಿ ಪ್ರಕೃತಿ ಮಧ್ಯೆ ಸತಿಪತಿಯಾಗಲು ನಿರ್ಧರಿಸಿದ್ದಾರಂತೆ ಅದಿತಿ ಸಿದ್ದಾರ್ಥ್.

  • ಇಟಲಿಗೆ ಹಾರಿದ ಲವ್ ಬರ್ಡ್ಸ್- ಮದುವೆಗೂ ಮುನ್ನ ಅದಿತಿ ಜೊತೆ ಸಿದ್ಧಾರ್ಥ್‌ ಜಾಲಿ ಟ್ರಿಪ್

    ಇಟಲಿಗೆ ಹಾರಿದ ಲವ್ ಬರ್ಡ್ಸ್- ಮದುವೆಗೂ ಮುನ್ನ ಅದಿತಿ ಜೊತೆ ಸಿದ್ಧಾರ್ಥ್‌ ಜಾಲಿ ಟ್ರಿಪ್

    ಚಿತ್ರರಂಗದಲ್ಲಿ ಸದ್ಯ ಲವ್ ಬರ್ಡ್ಸ್ ಎಂದೇ ಹೈಲೆಟ್ ಆಗಿರುವ ಜೋಡಿ ಅಂದರೆ ತಮಿಳು ಸಿದ್ಧಾರ್ಥ್ (Actor Siddarth) ಮತ್ತು ಅದಿತಿ ರಾವ್ ಹೈದರಿ. ಇಬ್ಬರೂ ಇತ್ತೀಚೆಗೆ ತಮ್ಮ ಎಂಗೇಜ್‌ಮೆಂಟ್ ವಿಚಾರವನ್ನು ಅಧಿಕೃತವಾಗಿ ಅನೌನ್ಸ್ ಮಾಡಿದ್ದರು. ಈ ಬೆನ್ನಲ್ಲೇ ಇಟಲಿಗೆ ಹಾರಿದ್ದಾರೆ. ಸಿದ್ಧಾರ್ಥ್ ಜೊತೆಗಿನ ರೊಮ್ಯಾಂಟಿಕ್ ಫೋಟೋವನ್ನು ‘ಹೀರಾಮಂಡಿ’ (Heeramandi) ನಟಿ ಅದಿತಿ (Aditi Rao Hydari) ಹಂಚಿಕೊಂಡಿದ್ದಾರೆ.

    ಸಾಕಷ್ಟು ಸಮಯದಿಂದ ಇಬ್ಬರ ಡೇಟಿಂಗ್ ಬಗ್ಗೆ ಭಾರೀ ಸುದ್ದಿಯಾಗಿತ್ತು. ಆದರೆ ಇಬ್ಬರೂ ಈ ಬಗ್ಗೆ ಪ್ರತಿಕ್ರಿಯೆ ನೀಡದೇ ಸೈಲೆಂಟ್ ಆಗಿದ್ದರು. ಅದ್ಯಾವಾಗ ಈ ಜೋಡಿ ಬಗ್ಗೆ ಎಂಗೇಜ್‌ಮೆಂಟ್ ಬಗ್ಗೆ ಸುದ್ದಿ ವೈರಲ್ ಆಯ್ತೋ ಆಗ ನಿಶ್ಚಿತಾರ್ಥ ಆಗಿರುವ ಬಗ್ಗೆ ಅಧಿಕೃತ ಘೋಷಣೆ ಮಾಡುವ ಮೂಲಕ ಫ್ಯಾನ್ಸ್‌ಗೆ ಸಿಹಿಸುದ್ದಿ ನೀಡಿದ್ದರು. ಈಗ ಮದುವೆಗೂ ಮುನ್ನ ಸಿದ್ಧಾರ್ಥ್ ಮತ್ತು ಅದಿತಿ ಜೋಡಿ ಇಟಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಇಬ್ಬರೂ ಜಾಲಿಯಾಗಿ ಟ್ರಿಪ್‌ ಮಾಡುತ್ತಿದ್ದಾರೆ. ಇದನ್ನೂ ಓದಿ:ಸಾಮಾನ್ಯರಂತೆ ರೋಡ್ ಸೈಡ್‌ನಲ್ಲಿ ಸ್ನೇಹಿತರ ಜೊತೆ ಚಾಟ್ಸ್ ಸವಿದ ಧ್ರುವ ಸರ್ಜಾ

     

    View this post on Instagram

     

    A post shared by Aditi Rao Hydari (@aditiraohydari)

    ಇಟಲಿಯಲ್ಲಿ ಸುಂದರ ಜಾಗಗಳಿಗೆ ಸಿದ್ಧಾರ್ಥ್ ಜೋಡಿ ಭೇಟಿ ನೀಡಿದ್ದಾರೆ. ಇಬ್ಬರೂ ವೆಕೇಷನ್ ಮೂಡ್‌ಗೆ ಜಾರಿದ್ದಾರೆ. ಇಬ್ಬರ ರೊಮ್ಯಾಂಟಿಕ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡ್ತಿದ್ದಂತೆ ಮದುವೆ ಮುಂಚೆನೇ ಹನಿಮೂನ್ ಮಾಡ್ತಿಕೊಳ್ತಿದ್ದೀರಾ ಎಂದು ಸಿದ್ಧಾರ್ಥ್ ಮತ್ತು ಅದಿತಿಗೆ ನೆಟ್ಟಿಗರು ಕಾಲೆಳೆದಿದ್ದಾರೆ.

    ಸದ್ಯ ನಟಿ ಅದಿತಿ ಹೀರಾಮಂಡಿ ನಂತರ ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಇಂಡಿಯನ್‌ 2’ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ಸಿದ್ಧಾರ್ಥ್‌ ಕೈಯಲ್ಲಿವೆ. ಇದರ ನಡುವೆ ಮದುವೆ ಬಗ್ಗೆ ಗುಡ್ ನ್ಯೂಸ್ ಕೊಡ್ತಾರಾ? ಎಂದು ಕಾದುನೋಡಬೇಕಿದೆ.

  • ಮದುವೆ ಆಗಿಲ್ಲ, ಎಂಗೇಜ್ಮೆಂಟ್ ಅಷ್ಟೇ ನಡೆದಿದ್ದು: ಅದಿತಿ ಸ್ಪಷ್ಟನೆ

    ಮದುವೆ ಆಗಿಲ್ಲ, ಎಂಗೇಜ್ಮೆಂಟ್ ಅಷ್ಟೇ ನಡೆದಿದ್ದು: ಅದಿತಿ ಸ್ಪಷ್ಟನೆ

    ಬಾಲಿವುಡ್ ನಟಿ ಅದಿತಿ ರಾವ್ ಹೈದರಿ(Aditi Rao Hydari) ಕಾಲಿವುಡ್ ನಟ ಸಿದ್ಧಾರ್ಥ್  (Siddarth) ಸದ್ದಿಲ್ಲದೇ ಮದುವೆಯಾ ಆಗಿದ್ದಾರೆ ಎಂದು ನಿನ್ನೆಯಷ್ಟೇ ಭರ್ಜರಿ ಸುದ್ದಿ ಆಗಿತ್ತು. ತೆಲಂಗಾಣದ ವನಪರ್ತಿ ಜಿಲ್ಲೆಯಲ್ಲಿರುವ ಶ್ರೀರಂಗಪುರಂನಲ್ಲಿರುವ ಶ್ರೀ ರಂಗನಾಯಕ ಸ್ವಾಮಿ ದೇವಸ್ಥಾನದಲ್ಲಿ ಸಿಂಪಲ್ ಆಗಿ ಈ ಜೋಡಿ ಮದುವೆಯಾಗಿದೆ ಎಂದು ಹೇಳಲಾಗಿತ್ತು. ಈ ಮದುವೆಗೆ ಇನ್ನಷ್ಟು ರೆಕ್ಕೆಪುಕ್ಕಗಳು ಬಂದಿದ್ದವು.

    ಇರಾ ಖಾನ್ ಮದುವೆಯಲ್ಲಿ ಕಾಣಿಸಿಕೊಂಡಿದ್ದ ಅದಿತಿ ಮತ್ತು ಸಿದ್ಧಾರ್ಥ ಅವರ ಫೋಟೋವನ್ನೇ ಮದುವೆ ಫೋಟೋ ಎಂದು ವೈರಲ್ ಮಾಡಲಾಗಿತ್ತು. ಶೂಟಿಂಗ್ ಎಂದು ಸುಳ್ಳು ಹೇಳಿ ಇಬ್ಬರೂ ಮದುವೆ ಆಗಿದ್ದಾರೆ ಎಂದು ಆರೋಪಿಸಲಾಗಿತ್ತು. ಎಲ್ಲದಕ್ಕೂ ಅದಿತಿ ಉತ್ತರ ನೀಡಿದ್ದಾರೆ. ಹಿ ಸೇಡ್ ಎಸ್.. ಎಂಗೇಜ್ಡ್’ (Engaged) ಎಂದು ಸಿದ್ಧಾರ್ಥನ ಜೊತೆಗಿರುವ ಫೋಟೋ ಹಂಚಿಕೊಂಡಿದ್ದಾರೆ. ಇದೀಗ ತಾವು ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಘೋಷಣೆ ನೀಡಿದ್ದಾರೆ.

    ಈ  ಜೋಡಿ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿತ್ತು. ಆದರೆ ಈ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಆದರೆ ಸಿದ್ಧಾರ್ಥ್ ಜೊತೆಗಿನ ಖಾಸಗಿ ಫೋಟೋ ಹಂಚಿಕೊಂಡು ಹೊಸ ವರ್ಷದಂದು ಮದುವೆ (Wedding) ಬಗ್ಗೆ ಸುಳಿವು ನೀಡಿದ್ದರು ಅದಿತಿ ರಾವ್.

    ನ್ಯೂ ಇಯರ್ ಸಂಭ್ರಮವನ್ನು ನಟಿ ಅದಿತಿ- ಸಿದ್ಧಾರ್ಥ್ ಜೋಡಿ ವಿದೇಶದಲ್ಲಿ ಸೆಲೆಬ್ರೇಟ್ ಮಾಡಿದ್ದರು. ಈ ಕುರಿತ ಇಬ್ಬರೂ ಕೂಡ ಚೆಂದದ ಫೋಟೋ ಶೇರ್ ಮಾಡಿ ಅಭಿಮಾನಿಗಳಿಗೆ ಶುಭಕೋರಿದ್ದರು. ಈ ಮೂಲಕ ಎಂಗೇಜ್ ಆಗಿರೋದು ಖಚಿತವಾಗಿತ್ತು. ಫೋಟೋ ಶೇರ್ ಮಾಡ್ತಿದ್ದಂತೆ ಮದುವೆ ಯಾವಾಗ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದರು.

    2021ರಲ್ಲಿ ‘ಮಹಾ ಸಮುದ್ರಂ’ ಸಿನಿಮಾ ವೇಳೆ, ಅದಿತಿ- ಸಿದ್ಧಾರ್ಥ್ ಪರಿಚಿತರಾದರು. ಅಲ್ಲಿಂದ ಶುರುವಾದ ಸ್ನೇಹ ಪ್ರೀತಿಗೆ ತಿರುಗಿತ್ತು. ಸಾಕಷ್ಟು ಪಾರ್ಟಿ ಮತ್ತು ಸೆಲೆಬ್ರಿಟಿ ಮದುವೆ ಸಮಾರಂಭಗಳಲ್ಲಿ ಇಬ್ಬರೂ ಜೊತೆಯಾಗಿಯೇ ಹೋಗುವ ಮೂಲಕ ಹೈಲೆಟ್ ಆದರು.

     

    ಇಬ್ಬರೂ ಪ್ರೀತಿ ಬಗ್ಗೆ ಅಧಿಕೃತವಾಗಿ ಹೇಳದೇ ಇದ್ದರೂ ಹೊಸ ಫೋಟೋ ಶೇರ್ ಮಾಡಿ ಮದುವೆ ಬಗ್ಗೆ ಪರೋಕ್ಷವಾಗಿ ಹೇಳಿದ್ರಾ ಎಂಬ ಅನುಮಾನ ಅಭಿಮಾನಿಗಳನ್ನ ಕಾಡ್ತಿತ್ತು. ಇದೀಗ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದೆ ಜೋಡಿ.

  • ಅದಿತಿ ರಾವ್ ಜೊತೆ ಮದುವೆಯಾದ ನಟ ಸಿದ್ದಾರ್ಥ

    ಅದಿತಿ ರಾವ್ ಜೊತೆ ಮದುವೆಯಾದ ನಟ ಸಿದ್ದಾರ್ಥ

    ಬಾಲಿವುಡ್ ನಟಿ ಅದಿತಿ ರಾವ್ ಹೈದರಿ(Aditi Rao Hydari) ಕಾಲಿವುಡ್ ನಟ ಸಿದ್ಧಾರ್ಥ್  (Siddarth) ಸದ್ದಿಲ್ಲದೇ ಮದುವೆಯಾದ ವಿಚಾರ ಕಾಲಿವುಡ್ ಅಂಗಳದಿಂದ ಬಂದಿದೆ. ತೆಲಂಗಾಣದ ವನಪರ್ತಿ ಜಿಲ್ಲೆಯಲ್ಲಿರುವ ಶ್ರೀರಂಗಪುರಂನಲ್ಲಿರುವ ಶ್ರೀ ರಂಗನಾಯಕ ಸ್ವಾಮಿ ದೇವಸ್ಥಾನದಲ್ಲಿ ಸಿಂಪಲ್ ಆಗಿ ಈ ಜೋಡಿ ಮದುವೆಯಾಗಿದೆ ಎನ್ನಲಾಗುತ್ತಿದೆ. ಅಧಿಕೃತವಾಗಿ ಈ ಕುರಿತಂತೆ ಜೋಡಿ ಹೇಳಿಕೊಳ್ಳದೇ ಇದ್ದರೂ, ಇರಾ ಖಾನ್ ಮದುವೆಯಲ್ಲಿ ಕಾಣಿಸಿಕೊಂಡಿದ್ದ ಅದಿತಿ ಮತ್ತು ಸಿದ್ಧಾರ್ಥ ಫೋಟೋವನ್ನೇ ಮದುವೆ ಫೋಟೋ ಎಂದು ವೈರಲ್ ಮಾಡಲಾಗುತ್ತಿದೆ.

    ಈ  ಜೋಡಿ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿತ್ತು. ಆದರೆ ಈ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಆದರೆ ಸಿದ್ಧಾರ್ಥ್ ಜೊತೆಗಿನ ಖಾಸಗಿ ಫೋಟೋ ಹಂಚಿಕೊಂಡು ಹೊಸ ವರ್ಷದಂದು ಮದುವೆ (Wedding) ಬಗ್ಗೆ ಸುಳಿವು ನೀಡಿದ್ದರು ಅದಿತಿ ರಾವ್.

    ನ್ಯೂ ಇಯರ್ ಸಂಭ್ರಮವನ್ನು ನಟಿ ಅದಿತಿ- ಸಿದ್ಧಾರ್ಥ್ ಜೋಡಿ ವಿದೇಶದಲ್ಲಿ ಸೆಲೆಬ್ರೇಟ್ ಮಾಡಿದ್ದರು. ಈ ಕುರಿತ ಇಬ್ಬರೂ ಕೂಡ ಚೆಂದದ ಫೋಟೋ ಶೇರ್ ಮಾಡಿ ಅಭಿಮಾನಿಗಳಿಗೆ ಶುಭಕೋರಿದ್ದರು. ಈ ಮೂಲಕ ಎಂಗೇಜ್ ಆಗಿರೋದು ಖಚಿತವಾಗಿತ್ತು. ಫೋಟೋ ಶೇರ್ ಮಾಡ್ತಿದ್ದಂತೆ ಮದುವೆ ಯಾವಾಗ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದರು.

    2021ರಲ್ಲಿ ‘ಮಹಾ ಸಮುದ್ರಂ’ ಸಿನಿಮಾ ವೇಳೆ, ಅದಿತಿ- ಸಿದ್ಧಾರ್ಥ್ ಪರಿಚಿತರಾದರು. ಅಲ್ಲಿಂದ ಶುರುವಾದ ಸ್ನೇಹ ಪ್ರೀತಿಗೆ ತಿರುಗಿತ್ತು. ಸಾಕಷ್ಟು ಪಾರ್ಟಿ ಮತ್ತು ಸೆಲೆಬ್ರಿಟಿ ಮದುವೆ ಸಮಾರಂಭಗಳಲ್ಲಿ ಇಬ್ಬರೂ ಜೊತೆಯಾಗಿಯೇ ಹೋಗುವ ಮೂಲಕ ಹೈಲೆಟ್ ಆದರು.

     

    ಇಬ್ಬರೂ ಪ್ರೀತಿ ಬಗ್ಗೆ ಅಧಿಕೃತವಾಗಿ ಹೇಳದೇ ಇದ್ದರೂ ಹೊಸ ಫೋಟೋ ಶೇರ್ ಮಾಡಿ ಮದುವೆ ಬಗ್ಗೆ ಪರೋಕ್ಷವಾಗಿ ಹೇಳಿದ್ರಾ ಎಂಬ ಅನುಮಾನ ಅಭಿಮಾನಿಗಳನ್ನ ಕಾಡ್ತಿತ್ತು. ಇದೀಗ ಸದ್ದಿಲ್ಲದೇ ಮದುವೆ ಕೂಡ ಆಗಿದ್ದಾರೆ ಎನ್ನುವ ಮಾಹಿತಿ ಇದೆ.

  • ಸಿದ್ಧಾರ್ಥ್ ಜೊತೆಗಿನ ಹೊಸ ಫೋಟೋ ಹಂಚಿಕೊಂಡು ಮದುವೆ ಸುಳಿವು ನೀಡಿದ್ರಾ ಅದಿತಿ?

    ಸಿದ್ಧಾರ್ಥ್ ಜೊತೆಗಿನ ಹೊಸ ಫೋಟೋ ಹಂಚಿಕೊಂಡು ಮದುವೆ ಸುಳಿವು ನೀಡಿದ್ರಾ ಅದಿತಿ?

    ಬಾಲಿವುಡ್ ನಟಿ ಅದಿತಿ ರಾವ್ ಹೈದರಿ(Aditi Rao Hydari), ಕಾಲಿವುಡ್ ನಟ ಸಿದ್ಧಾರ್ಥ್ (Siddarth) ಜೋಡಿ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿಲ್ಲ. ಆದರೆ ಸಿದ್ಧಾರ್ಥ್ ಜೊತೆಗಿನ ಖಾಸಗಿ ಫೋಟೋ ಹಂಚಿಕೊಂಡು ಹೊಸ ವರ್ಷದಂದು ಮದುವೆ (Wedding) ಬಗ್ಗೆ ಸುಳಿವು ನೀಡಿದ್ರಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡುತ್ತಿದೆ.

    ನ್ಯೂ ಇಯರ್ ಸಂಭ್ರಮವನ್ನು ನಟಿ ಅದಿತಿ- ಸಿದ್ಧಾರ್ಥ್ ಜೋಡಿ ವಿದೇಶದಲ್ಲಿ ಸೆಲೆಬ್ರೇಟ್ ಮಾಡಿದ್ದಾರೆ. ಈ ಕುರಿತ ಇಬ್ಬರೂ ಕೂಡ ಚೆಂದದ ಫೋಟೋ ಶೇರ್ ಮಾಡಿ ಅಭಿಮಾನಿಗಳಿಗೆ ಶುಭಕೋರಿದ್ದಾರೆ. ಈ ಮೂಲಕ ಎಂಗೇಜ್ ಆಗಿರೋದು ಖಚಿತವಾಗಿದೆ. ಫೋಟೋ ಶೇರ್ ಮಾಡ್ತಿದ್ದಂತೆ ಮದುವೆ ಯಾವಾಗ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.  ಇದನ್ನೂ ಓದಿ:ಬೋಲ್ಡ್ ಆದ ‘ಟೋಬಿ’ ಸುಂದರಿ- ಕನ್ನಡದ ಆಲಿಯಾ ಭಟ್ ಎಂದ ಫ್ಯಾನ್ಸ್

     

    View this post on Instagram

     

    A post shared by Aditi Rao Hydari (@aditiraohydari)

    2021ರಲ್ಲಿ ‘ಮಹಾ ಸಮುದ್ರಂ’ ಸಿನಿಮಾ ವೇಳೆ, ಅದಿತಿ- ಸಿದ್ಧಾರ್ಥ್ ಪರಿಚಿತರಾದರು. ಅಲ್ಲಿಂದ ಶುರುವಾದ ಸ್ನೇಹ ಪ್ರೀತಿಗೆ ತಿರುಗಿತ್ತು. ಸಾಕಷ್ಟು ಪಾರ್ಟಿ ಮತ್ತು ಸೆಲೆಬ್ರಿಟಿ ಮದುವೆ ಸಮಾರಂಭಗಳಲ್ಲಿ ಇಬ್ಬರೂ ಜೊತೆಯಾಗಿಯೇ ಹೋಗುವ ಮೂಲಕ ಹೈಲೆಟ್ ಆದರು.

    ಇಬ್ಬರೂ ಪ್ರೀತಿ ಬಗ್ಗೆ ಅಧಿಕೃತವಾಗಿ ಹೇಳದೇ ಇದ್ದರೂ ಹೊಸ ಫೋಟೋ ಶೇರ್ ಮಾಡಿ ಮದುವೆ ಬಗ್ಗೆ ಪರೋಕ್ಷವಾಗಿ ಹೇಳಿದ್ರಾ ಎಂಬ ಅನುಮಾನ ಅಭಿಮಾನಿಗಳನ್ನ ಕಾಡ್ತಿದೆ. ಸದ್ಯದಲ್ಲೇ ಮದುವೆ ಬಗ್ಗೆ ಗುಡ್ ನ್ಯೂಸ್ ಕೊಡುತ್ತಾರಾ ಕಾದುನೋಡಬೇಕಿದೆ.

  • ಕ್ಯಾಮೆರಾಗೆ ಮುಖ ತೋರಿಸದೇ ಗರ್ಲ್‌ಫ್ರೆಂಡ್‌ ಅದಿತಿ ಜೊತೆ ವಿದೇಶಕ್ಕೆ ಹಾರಿದ ಸಿದ್ಧಾರ್ಥ್

    ಕ್ಯಾಮೆರಾಗೆ ಮುಖ ತೋರಿಸದೇ ಗರ್ಲ್‌ಫ್ರೆಂಡ್‌ ಅದಿತಿ ಜೊತೆ ವಿದೇಶಕ್ಕೆ ಹಾರಿದ ಸಿದ್ಧಾರ್ಥ್

    ಸೌತ್ ಸಿನಿಮಾರಂಗದಲ್ಲಿ ಒಂದ್ ಕಡೆ ವರುಣ್ ತೇಜ್- ಲಾವಣ್ಯ ಎಂಗೇಜ್‌ಮೆಂಟ್ ಸಿದ್ಧತೆ ಭರದಿಂದ ಸಾಗುತ್ತಿದೆ. ಇನ್ನೊಂದು ಕಡೆ ಸಿದ್ಧಾರ್ಥ್- ಅದಿತಿ ರಾವ್ ಹೈದರಿ (Aditi Rao Hydari) ಓಡಾಟ, ಇಬ್ಬರ ಲವ್ವಿ-ಡವ್ವಿ ಸಖತ್ ಸದ್ದು ಮಾಡುತ್ತಿದೆ. ಇದೀಗ ಸಿದ್- ಅದಿತಿ ಜೋಡಿ, ಕ್ಯಾಮೆರಾ ಮುಂದೆ ಮುಖ ಮುಚ್ಚಿಕೊಂಡು ವಿದೇಶಕ್ಕೆ ಹಾರಿದ್ದಾರೆ.

    ‘ಮಹಾಸುಮುದ್ರಂ’ (Mahasamudram) ಸೆಟ್‌ನಲ್ಲಿ ಶುರುವಾದ ಇಬ್ಬರ ಗೆಳೆತನ ಇದೀಗ ಪ್ರೀತಿಯ ಹಂತಕ್ಕೆ ಬಂದು ತಲುಪಿದೆ. ಇಬ್ಬರ ಡೇಟಿಂಗ್, ಮೀಟಿಂಗ್ ಎಲ್ಲವೂ ಜೋರಾಗಿದೆ. ಚಿತ್ರರಂಗದಲ್ಲಿ ಒಬ್ಬೊಬ್ಬರೇ ಸ್ಟಾರ್ ಜೋಡಿ ಹಸೆಮಣೆ (Wedding)  ಏರುತ್ತಿದ್ದಾರೆ. ಹೀಗಿರುವಾಗ ಸಿದ್- ಅದಿತಿ, ತಮ್ಮ ಪ್ರೀತಿ (Love) ಬಗ್ಗೆ ಎಲ್ಲೂ ಅಧಿಕೃತವಾಗಿ ಹೇಳದೇ ಸೈಲೆಂಟ್ ಆಗಿದ್ದಾರೆ. ಸದ್ಯದಲ್ಲೇ ಈ ಜೋಡಿ ಗುಡ್ ನ್ಯೂಸ್ ಕೊಡುತ್ತಾರಾ ಅಂತಾ ಫ್ಯಾನ್ಸ್ ಎದುರು ನೋಡ್ತಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ಈಗ ಸಿದ್ಧಾರ್ಥ್ (Siddarth) ಮತ್ತು ಅದಿತಿ ರಾವ್ (Aditi Rao) ಇಬ್ಬರೂ ಪ್ರವಾಸಕ್ಕೆ ಹಾರಿದ್ದಾರೆ. ಇಬ್ಬರೂ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಅದಿತಿ ಮಾತ್ರ ಕ್ಯಾಮೆರಾಗೆ ಹಾಯ್ ಹೇಳುತ್ತಾ ಹೋದರು. ಆದರೆ ಸಿದ್ಧಾರ್ಥ್ ಮಾಸ್ಕ್ ಮತ್ತು ಕನ್ನಡಕ ಹಾಕಿದ್ದರು. ಕ್ಯಾಮೆರಾ ಕಡೆ ತಿರುಗಿಯೂ ನೋಡದೆ ಹೊರಟು ಹೋದರು. ಅದಿತಿ ಮಾತ್ರ ಸೋಲೊ ಪೋಸ್ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಇಬ್ಬರೂ ಎಲ್ಲಿಗೆ ಹಾರಿದ್ದಾರೆ ಎನ್ನುವುದು ಬಹಿರಂಗವಾಗಿಲ್ಲ. ಇದನ್ನೂ ಓದಿ:‘ಘೋಸ್ಟ್’ ಚಿತ್ರದ ಸೆಟ್ ಗೆ ಭೇಟಿ ನೀಡಿದ ಸಚಿವ ಮಧು ಬಂಗಾರಪ್ಪ

    ಸಿದ್ಧಾರ್ಥ್ ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅದಿತಿ ಹಿಂದಿ- ಸೌತ್ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಆದಷ್ಟು ಬೇಗ ಈ ಜೋಡಿ ಕೂಡ ಮದುವೆ ಬಗ್ಗೆ ಸಿಹಿಸುದ್ದಿ ಕೊಡಲಿ ಅಂತಾ ಫ್ಯಾನ್ಸ್ ಕಾಯ್ತಿದ್ದಾರೆ.

  • ಕೈ ಸನ್ನೆ ಮೂಲಕ ಡೇಟಿಂಗ್ ಬಗ್ಗೆ ಉತ್ತರಿಸಿದ ನಟಿ ಅದಿತಿ ರಾವ್ ಹೈದರಿ

    ಕೈ ಸನ್ನೆ ಮೂಲಕ ಡೇಟಿಂಗ್ ಬಗ್ಗೆ ಉತ್ತರಿಸಿದ ನಟಿ ಅದಿತಿ ರಾವ್ ಹೈದರಿ

    ಬೊಮ್ಮರಿಲ್ಲು ಖ್ಯಾತಿಯ ನಟ ಸಿದ್ದಾರ್ಥ್ ಮತ್ತು ಬಾಲಿವುಡ್ ನಟಿ ಅದಿತಿ ರಾವ್ ಹೈದರಿ ಡೇಟಿಂಗ್ ವಿಚಾರ ಮತ್ತೆ ಸಿನಿಮಾ ರಂಗದಲ್ಲಿ ಭಾರೀ ಸದ್ದು ಮಾಡಿದೆ. ಇಬ್ಬರೂ ಒಟ್ಟಾಗಿ ಹಲವಾರು ಬಾರಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಸಿನಿಮಾವನ್ನೂ ಮಾಡಿದ್ದಾರೆ. ಅನೇಕ ಕಾರ್ಯಕ್ರಮಗಳಲ್ಲಿ ಜಂಟಿಯಾಗಿಯೇ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಇಬ್ಬರೂ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗಲಿ ಅಲ್ಲಿ ಡೇಟಿಂಗ್ ವಿಚಾರವನ್ನು ಕೇಳಲಾಗುತ್ತದೆ. ಅವರು ಕೂಡ ಜಾಣ್ಮೆಯಿಂದಲೂ ಉತ್ತರಿಸುತ್ತಾರೆ.

    ಈವರೆಗೂ ಡೇಟಿಂಗ್ ವಿಚಾರವನ್ನು ಅಲ್ಲಗಳೆಯುತ್ತಲೇ ಬಂದಿರುವ ಈ ಜೋಡಿ ಇತ್ತೀಚೆಗೆ ಮಾತ್ರ ಸತ್ಯವನ್ನು ಒಪ್ಪಿಕೊಂಡಿದೆ. ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಅದಿತಿ ರಾವ್ ಹೈದರಿ ಅವರಿಗೆ ಡೇಟಿಂಗ್ ಕುರಿತಾಗಿ ಪ್ರಶ್ನೆ ಮಾಡಿದಾಗ,  ಆ ಕುರಿತು ತಾವು ಏನೂ ಹೇಳುವುದಿಲ್ಲ ಎಂದು ಕೈ ಸನ್ನೆ ಮಾಡಿ ಹೇಳುವ ಮೂಲಕ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಅದರಲ್ಲೂ ಜಾಣ ನಡೆ ಪ್ರದರ್ಶನ ಮಾಡಿದ್ದಾರೆ.

    ಇತ್ತೀಚಿಗಷ್ಟೇ ತೆಲುಗು ನಟ ಶರ್ವಾನಂದ್ (Sharwanand) ಎಂಗೇಜ್‌ಮೆಂಟ್‌ಗೆ ಸಿದ್ಧಾರ್ಥ್- ಅದಿತಿ ಜೋಡಿಯಾಗಿ ಬಂದು ಶುಭಹಾರೈಸಿದ್ದರು. ಈ ಬೆನ್ನಲ್ಲೇ ಸಿದ್-ಅದಿತಿ ಡೇಟಿಂಗ್ ಸುದ್ದಿಗೆ ಸದ್ದು ಮಾಡಿತ್ತು. ಅಷ್ಟಕ್ಕೂ ಈ ಡೇಟಿಂಗ್ ಸುದ್ದಿ ನಿಜಾನಾ ಎಂಬುದಕ್ಕೆ ನಟಿ ಅದಿತಿ ರಾವ್ ಹೈದರಿ (Aditi Rao Hydari) ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಲೇ ಬಂದಿದ್ದಾರೆ. ಇದನ್ನೂ ಓದಿ:ಮುದ್ದು ಮಗಳ ಜೊತೆಗಿನ ಚೆಂದದ ವೀಡಿಯೋ ಹಂಚಿಕೊಂಡ ಧ್ರುವ ಸರ್ಜಾ

    ನಟಿ ಅದಿತಿ- ಸಿದ್ಧಾರ್ಥ್ (Actor Siddarth) ಅವರು `ಮಹಾ ಸಮುದ್ರಂ’ ಎಂಬ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಚಿತ್ರದ ಸೆಟ್‌ನಲ್ಲಿ ಇಬ್ಬರಿಗೂ ಪ್ರೇಮಾಂಕುರವಾಗಿದೆ ಎನ್ನಲಾಗುತ್ತಿದೆ. 2021ರಿಂದ ಇಬ್ಬರೂ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮುಂಬೈನಲ್ಲಿ ರೆಸ್ಟೋರೆಂಟ್‌ನಲ್ಲಿ ಸಾಕಷ್ಟು ಬಾರಿ ಈ ಜೋಡಿ ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು ಇದೆ. ಸದ್ಯ ಟಿಟೌನ್ ಅಂಗಳದಲ್ಲಿ ಈ ವಿಚಾರ ಅನೇಕರ ಚರ್ಚೆಗೆ ಗ್ರಾಸವಾಗಿದೆ.

    ಈ ಹಿಂದೆಯೂ ಅದಿತಿ ನಟನೆಯ `ತಾಜ್’ (Taj) ಚಿತ್ರದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಅದಿತಿಗೆ ಸಿದ್ಧಾರ್ಥ್ ಜೊತೆಗಿನ ಡೇಟಿಂಗ್ (Dating) ಬಗ್ಗೆ ಕೇಳಲಾಗಿತ್ತು. ನನಗೆ ತುಂಬಾ ಹಸಿವಾಗುತ್ತಿದೆ. ಹಾಗಾಗಿ ನಾನು ಹೋಗಿ ತಿನ್ನುತ್ತೇನೆ ಎಂದು ನಟಿ ಏನೂ ಹೇಳಲದೇ ಹೊರಟಿದ್ದರು. ಈ ಪ್ರಶ್ನೆಗೆ ಊಟದ ನೆಪ ಹೇಳುವ ಮೂಲಕ ನಟಿ ಜಾರಿಕೊಂಡಿದ್ದರು.

  • ಅದಿತಿ ಜೊತೆ ಮಸ್ತ್ ಆಗಿ ಹೆಜ್ಜೆ ಹಾಕಿದ ಸಿದ್ಧಾರ್ಥ್

    ಅದಿತಿ ಜೊತೆ ಮಸ್ತ್ ಆಗಿ ಹೆಜ್ಜೆ ಹಾಕಿದ ಸಿದ್ಧಾರ್ಥ್

    ಸೌತ್‌ನ ಮುದ್ದಾದ ಜೋಡಿ ಅದಿತಿ ರಾವ್ ಹೈದರಿ (Aditi Rao Hydari) ಮತ್ತು ಸಿದ್ಧಾರ್ಥ್ (Siddarth) ಮತ್ತೆ ಸುದ್ದಿಯಲ್ಲಿದ್ದಾರೆ. ಅದಿತಿ- ಸಿದ್ಧಾರ್ಥ್ ಜೋಡಿಯ ಡೇಟಿಂಗ್ (Dating) ವದಂತಿ ಬೆನ್ನಲ್ಲೇ ಇಬ್ಬರ ಡ್ಯಾನ್ಸ್ ವೀಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನೂ ಓದಿ: ಪವನ್ ಕಲ್ಯಾಣ್ ಚಿತ್ರದಲ್ಲಿ ಸೊಂಟ ಬಳುಕಿಸಲು ಸಜ್ಜಾದ ನಟಿ ಶ್ರೀಲೀಲಾ

    ಬಹುಭಾಷಾ ನಟಿ ಅದಿತಿ- ಸಿದ್ಧಾರ್ಥ್ `ಮಹಾಸಮುದ್ರಂ’ (Mahasamudram) ಚಿತ್ರದ ಸೆಟ್‌ನಲ್ಲಿ ಪರಿಚಿತರಾದರು. ಈ ಚಿತ್ರದಲ್ಲಿ ಇಬ್ಬರು ಒಟ್ಟಿಗೆ ನಟಿಸಿದರು. ಇಲ್ಲಿಂದ ಶುರುವಾದ ಗೆಳೆತನ ಈಗ ಒಬ್ಬರನೊಬ್ಬರು ಪ್ರೀತಿಸುತ್ತಿದ್ದಾರೆ. ಸಾಕಷ್ಟು ವರ್ಷಗಳಿಂದ ಡೇಟಿಂಗ್ ಮಾಡ್ತಿದ್ದಾರೆ. ಈ ಬಗ್ಗೆ ಎಲ್ಲೂ ಕೂಡ ಅಧಿಕೃತವಾಗಿ ಹೇಳದೇ ಕ್ಯಾಮೆರಾ ಮುಂದೆ ಸೈಲೆಂಟ್ ಆಗಿದ್ದಾರೆ.

     

    View this post on Instagram

     

    A post shared by Aditi Rao Hydari (@aditiraohydari)

    ಸದ್ಯ ಇಬ್ಬರೂ ಒಟ್ಟಿಗೆ ರೀಲ್ಸ್ (Reels) ಮಾಡಿದ್ದಾರೆ. ಟಮ್ ಟಮ್ ಹಾಡಿಗೆ ಅದಿತಿ-ಸಿದ್ಧಾರ್ಥ್ ಹೆಜ್ಜೆ ಹಾಕಿದ್ದಾರೆ. ಈ ಕುರಿತ ವೀಡಿಯೋವನ್ನ ನಟಿ ಅದಿತಿ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ. ಈ ಜೋಡಿಯ ಡ್ಯಾನ್ಸ್ ಫ್ಯಾನ್ಸ್‌ಗೆ ಇಷ್ಟವಾಗಿದೆ. ಈ ವೀಡಿಯೋ ನೋಡ್ತಿದ್ದಂತೆ ಅಭಿಮಾನಿಗಳು ನಿಮ್ಮ ಮದುವೆ ಯಾವಾಗ ಎಂದು ಕಾಮೆಂಟ್ ಮಾಡಿದ್ದಾರೆ. ಚಿತ್ರರಂಗದಲ್ಲಿ ಸ್ಟಾರ್ ನಟ-ನಟಿಯರು ಹಸೆಮಣೆ ಏರುತ್ತಿದ್ದಾರೆ. ಇನ್ನೂ ಅದಿತಿ- ಸಿದ್ಧಾರ್ಥ್ ಜೋಡಿ ಕೂಡ ಮದುವೆಯ ಬಗ್ಗೆ ಗುಡ್ ನ್ಯೂಸ್ ಕೊಡುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

    ಅದಿತಿ ರಾವ್ ಹೈದರಿ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ `ಹೀರಾಮಂಡಿ’ ಮತ್ತು `ತಾಜ್’ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ನಟ ಸಿದ್ಧಾರ್ಥ್ ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  • ಸಿದ್ಧಾರ್ಥ್ ಜೊತೆಗಿನ ಡೇಟಿಂಗ್ ವಿಚಾರಕ್ಕೆ ನಟಿ ಅದಿತಿ ರಾವ್‌ ಹೈದರಿ ಪ್ರತಿಕ್ರಿಯೆ

    ಸಿದ್ಧಾರ್ಥ್ ಜೊತೆಗಿನ ಡೇಟಿಂಗ್ ವಿಚಾರಕ್ಕೆ ನಟಿ ಅದಿತಿ ರಾವ್‌ ಹೈದರಿ ಪ್ರತಿಕ್ರಿಯೆ

    ಚಿತ್ರರಂಗದಲ್ಲಿ ಗಟ್ಟಿಮೇಳದ ಸೌಂಡ್ ಜೋರಾಗಿದೆ. ಸ್ಟಾರ್ ಜೋಡಿಗಳು ಸಾಲಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇತ್ತೀಚಿಗಷ್ಟೇ ತೆಲುಗು ನಟ ಶರ್ವಾನಂದ್ (Sharwanand) ಎಂಗೇಜ್‌ಮೆಂಟ್‌ಗೆ ಸಿದ್ಧಾರ್ಥ್- ಅದಿತಿ ಜೋಡಿಯಾಗಿ ಬಂದು ಶುಭಹಾರೈಸಿದ್ದರು. ಈ ಬೆನ್ನಲ್ಲೇ ಸಿದ್-ಅದಿತಿ ಡೇಟಿಂಗ್ ಸುದ್ದಿಗೆ ಸದ್ದು ಮಾಡಿತ್ತು. ಅಷ್ಟಕ್ಕೂ ಈ ಡೇಟಿಂಗ್ ಸುದ್ದಿ ನಿಜಾನಾ ಎಂಬುದಕ್ಕೆ ನಟಿ ಅದಿತಿ ರಾವ್ ಹೈದರಿ (Aditi Rao Hydari) ಪ್ರತಿಕ್ರಿಯೆ ನೀಡಿದ್ದಾರೆ.

    ನಟಿ ಅದಿತಿ- ಸಿದ್ಧಾರ್ಥ್ (Actor Siddarth) ಅವರು `ಮಹಾ ಸಮುದ್ರಂ’ ಎಂಬ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಚಿತ್ರದ ಸೆಟ್‌ನಲ್ಲಿ ಇಬ್ಬರಿಗೂ ಪ್ರೇಮಾಂಕುರವಾಗಿದೆ ಎನ್ನಲಾಗುತ್ತಿದೆ. 2021ರಿಂದ ಇಬ್ಬರೂ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮುಂಬೈನಲ್ಲಿ ರೆಸ್ಟೋರೆಂಟ್‌ನಲ್ಲಿ ಸಾಕಷ್ಟು ಬಾರಿ ಈ ಜೋಡಿ ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು ಇದೆ. ಸದ್ಯ ಟಿಟೌನ್ ಅಂಗಳದಲ್ಲಿ ಈ ವಿಚಾರ ಅನೇಕರ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ನಟ ತಾರಕ ರತ್ನ ಅಂತಿಮ ದರ್ಶನಕ್ಕೆ ತೆಲುಗು ಫಿಲ್ಮ್ ಚೇಂಬರ್ ವ್ಯವಸ್ಥೆ

    ಅದಿತಿ ನಟನೆಯ `ತಾಜ್’ (Taj) ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಈ ಕಾರ್ಯಕ್ರಮದಲ್ಲಿ ಅದಿತಿಗೆ ಸಿದ್ಧಾರ್ಥ್ ಜೊತೆಗಿನ ಡೇಟಿಂಗ್ (Dating) ಬಗ್ಗೆ ಕೇಳಲಾಗಿದೆ. ಅದಕ್ಕೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ತುಂಬಾ ಹಸಿವಾಗುತ್ತಿದೆ. ಹಾಗಾಗಿ ನಾನು ಹೋಗಿ ತಿನ್ನುತ್ತೇನೆ ಎಂದು ನಟಿ ಹೊರಟಿದ್ದಾರೆ. ಈ ಪ್ರಶ್ನೆಗೆ ಊಟದ ನೆಪ ಹೇಳುವ ಮೂಲಕ ನಟಿ ಜಾರಿಕೊಂಡಿದ್ದಾರೆ.

    ಅಥಿಯಾ ಶೆಟ್ಟಿ-ರಾಹುಲ್, ಸಿದ್-ಕಿಯಾರಾ, ಸ್ವರಾ ಭಾಸ್ಕರ್ ಮದುವೆಯ ಗುಡ್ ನ್ಯೂಸ್ ನೀಡಿದರು. ಮುಂದಿನ ದಿನಗಳಲ್ಲಿ ಸಿದ್ಧಾರ್ಥ್- ಅದಿತಿ ಕೂಡ ಮದುವೆ (Wedding) ಬಗ್ಗೆ ಅಪ್‌ಡೇಟ್ ನೀಡಿದ್ದರು ಅಚ್ಚರಿಪಡಬೇಕಿಲ್ಲ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನ ಕಾದುನೋಡಬೇಕಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k