Tag: aditi rao hidari

  • ಪಾರ್ಟ್‌ನರ್ ಎಂದು ಅದಿತಿ ಜೊತೆಗಿನ ಪ್ರೀತಿ ಒಪ್ಪಿಕೊಂಡ ಸಿದ್ಧಾರ್ಥ್

    ಪಾರ್ಟ್‌ನರ್ ಎಂದು ಅದಿತಿ ಜೊತೆಗಿನ ಪ್ರೀತಿ ಒಪ್ಪಿಕೊಂಡ ಸಿದ್ಧಾರ್ಥ್

    ಕಾಲಿವುಡ್ ನಟ ಸಿದ್ಧಾರ್ಥ್- ಅದಿತಿ ರಾವ್ ಹೈದರಿ (Aditi Rao Hidari) ಸಾಕಷ್ಟು ಸಮಯದಿಂದ ಡೇಟಿಂಗ್ ಮಾಡ್ತಿದ್ದಾರೆ. ಆದರೆ ಎಲ್ಲೂ ಕೂಡ ತಮ್ಮ ಪ್ರೀತಿ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಈಗ ಅದಿತಿ ಅವರನ್ನ ತಮ್ಮ ಪಾರ್ಟ್‌ನರ್ ಎಂದು ಒಪ್ಪಿಕೊಂಡಿದ್ದಾರೆ. ಅದಷ್ಟೇ ಅಲ್ಲ, ಅದಿತಿ ಫೋಟೋ ಶೇರ್ ಮಾಡಿ ವಿಶೇಷ ಸಾಲುಗಳನ್ನ ಬರೆದುಕೊಂಡಿದ್ದಾರೆ.‌ ಇದನ್ನೂ ಓದಿ:ಪೊಲೀಸ್ ಕಸ್ಟಡಿಯಲ್ಲಿ ದೈವ ನರ್ತಕರು: ಕೊರಗಜ್ಜ ಡೈರೆಕ್ಟರ್ ಹೇಳಿದ್ದೇನು?

    ಅ.28ರಂದು ಅದಿತಿ ರಾವ್ ಹುಟ್ಟುಹಬ್ಬವಾಗಿದ್ದು, ಸಿದ್ಧಾರ್ಥ್ (Actor Siddarth) ವಿಶೇಷವಾಗಿ ಶುಭಕೋರಿದ್ದಾರೆ. ಈ ವೇಳೆ, ಪಾರ್ಟ್‌ನರ್ ಎಂದು ನಟ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಸಿದ್ಧಾರ್ಥ್ ಪೋಸ್ಟ್‌ಗೆ ಅದಿತಿ ಕೂಡ ಪ್ರತಿಕ್ರಿಯೆ ನೀಡಿ, ಧನ್ಯವಾದ ತಿಳಿಸಿದ್ದಾರೆ. ಸಿದ್ಧಾರ್ಥ್ ಶೇರ್ ಮಾಡಿರುವ ಪೋಸ್ಟ್‌ಗೆ ಅದಿತಿ ಪ್ರತಿಕ್ರಿಯೆ ನೀಡಿರೋದನ್ನ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಅದಷ್ಟು ಬೇಗ ಮದುವೆಯಾಗಿ ಎಂದು ಹಾರೈಸಿದ್ದಾರೆ.

     

    View this post on Instagram

     

    A post shared by Siddharth (@worldofsiddharth)

    ಸೆಲೆಬ್ರಿಟಿಗಳ ಸಾಕಷ್ಟು ಡಿನ್ನರ್ ಪಾರ್ಟಿಗಳಲ್ಲಿ ಸಿದ್ಧಾರ್ಥ್- ಅದಿತಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಶರ್ವಾನಂದ್ ಆರತಕ್ಷತೆಯಲ್ಲೂ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇಬ್ಬರ ಲವ್ ಬಗ್ಗೆ ಆಗಲೇ ಗುಮಾನಿ ಇತ್ತು.

    ಅದಿತಿ ಅವರು ಈ ಹಿಂದೆ ಸತ್ಯದೀಪ್ ಮಿಶ್ರಾ ಜೊತೆ ಮದುವೆಯಾಗಿದ್ರು. ಬಳಿಕ 2013ರಲ್ಲಿ ಡಿವೋರ್ಸ್ ಪಡೆದರು. ಸಿದ್ಧಾರ್ಥ್ ಕೂಡ 2003ರಲ್ಲಿ ಮೇಘನಾ ಎಂಬುವವರನ್ನ ಮದುವೆಯಾಗಿದ್ದರು. 2007ರಲ್ಲಿ ಸಿದ್ಧಾರ್ಥ್-ಮೇಘನಾ ಡಿವೋರ್ಸ್ ಪಡೆದರು. ಈಗ ಅದಿತಿ-ಸಿದ್ಧಾರ್ಥ್ ಎಂಗೇಜ್ ಆಗಿದ್ದಾರೆ. ಸದ್ಯದಲ್ಲೇ ಮದುವೆ ಬಗ್ಗೆ ಸಿಹಿಸುದ್ದಿ ಕೊಡುತ್ತಾರಾ? ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮುಂಬೈ ಹೋಟೆಲ್‌ವೊಂದರಲ್ಲಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದ ಸಿದ್ಧಾರ್ಥ್ -ಅದಿತಿ

    ಮುಂಬೈ ಹೋಟೆಲ್‌ವೊಂದರಲ್ಲಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದ ಸಿದ್ಧಾರ್ಥ್ -ಅದಿತಿ

    ಸೌತ್ ಮತ್ತು ಬಾಲಿವುಡ್‌ನಲ್ಲಿ ಸಿದ್ಧಾರ್ಥ್ (Siddarth) ಮತ್ತು ಅದಿತಿ (Aditi Rao) ಲವ್ ಟ್ರ್ಯಾಕ್ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಇತ್ತೀಚೆಗೆ ಇವರಿಬ್ಬರ ಡೇಟಿಂಗ್ ವಿಚಾರ ಹೊರಬೀಳುತ್ತಿದ್ದಂತೆ ಮುಂಬೈ ಹೋಟೆಲ್‌ವೊಂದರಲ್ಲಿ ಕ್ಯಾಮೆರಾ ಕಣ್ಣಿಗೆ ಈ ಜೋಡಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ಬ್ಯೂಟಿಗೆ ಸೌತ್ ನಟ ಫಿದಾ ಆಗಿದ್ದಾರೆ.

    ತೆಲುಗಿನ (Telagi Films) ಸಿನಿಮಾವೊಂದರಲ್ಲಿ ಜೊತೆಯಾಗಿದ್ದ ಈ ಜೋಡಿಯ ನಡುವೆ ಅಲ್ಲಿಂದ ಲವ್ವಿ ಡವ್ವಿ ಶುರುವಾಗಿತ್ತು. ಈಗ ಮುಂಬೈನಲ್ಲಿ ನಾಲ್ಕೈದು ತಿಂಗಳುಗಳಿಂದ ಈ ಜೋಡಿ ಒಟ್ಟಿಗೆ ವಾಸಿಸುತ್ತಿದ್ದಾರೆ. ಮುಂಬೈ ಹೋಟೆಲ್‌ನಿಂದ ಹೊರಬರುವಾಗ ಕ್ಯಾಮೆರಾಗೆ ಸಿಕ್ಕಿಬಿದ್ದಿದ್ದಾರೆ. ಫೋಟೋ ತೆಗೆಯಲು ಹೋದವರ ವಿರುದ್ಧ ಸಿದ್ಧಾರ್ಥ್ ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸ್ಕಿನ್‌ ಲಿಫ್ಟ್‌ ಥೆರಪಿ ಮೊರೆ ಹೋದ ಶಿವರಾಜ್‌ಕುಮಾರ್‌ ನಾಯಕಿ ಮೆಹ್ರೀನ್‌ ಫಿರ್ಜಾದ

    ಪರಸ್ಪರ ಪ್ರೀತಿಸುತ್ತಿರುವ ವಿಚಾರ ಸುದ್ದಿಯಾಗುತ್ತಿದ್ದರು ಕೂಡ ಈ ಜೋಡಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಾಕಷ್ಟು ಕಡೆ ಒಟ್ಟಾಗಿಯೇ ಕಾಣಿಸಿಕೊಳ್ಳುತ್ತಿರುವ ಸಿದ್ಧಾರ್ಥ್, ಅದಿತಿ ಮದುವೆಯ ಬಗ್ಗೆ ಮುಂದಿನ ದಿನಗಳಲ್ಲಿ ಗುಡ್ ನ್ಯೂಸ್ ಕೊಡುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • `ಹೃದಯದ ರಾಣಿ’ ಎಂದು ಪ್ರೇಯಸಿಯನ್ನ ಹಾಡಿ ಹೊಗಳಿದ ಸಿದ್ಧಾರ್ಥ್

    `ಹೃದಯದ ರಾಣಿ’ ಎಂದು ಪ್ರೇಯಸಿಯನ್ನ ಹಾಡಿ ಹೊಗಳಿದ ಸಿದ್ಧಾರ್ಥ್

    ಕಾಲಿವುಡ್ ನಟ ಸಿದ್ಧಾರ್ಥ್(Siddarth) ಸಿನಿಮಾಗಿಂತ ವೈಯಕ್ತಿಕ ವಿಚಾರವಾಗಿಯೇ ಸಖತ್ ಸುದ್ದಿಯಾಗುತ್ತಿದ್ದಾರೆ. ಬಾಲಿವುಡ್ ನಟಿ ಅದಿತಿ ರಾವ್ ಹೈದರಿ(Aditi Rao Hydari) ಜೊತೆಗಿನ ಡೇಟಿಂಗ್ ವಿಷ್ಯವಾಗಿ ಸಿದ್ಧಾರ್ಥ್ ಇತ್ತೀಚೆಗೆ ಸೌಂಡ್ ಮಾಡುತ್ತಿದ್ದಾರೆ. ಇದೀಗ ನಟಿಯ ಹುಟ್ಟಿದ ಹಬ್ಬಕ್ಕೆ ವಿಶೇಷವಾಗಿ ಸಿದ್ಧಾರ್ಥ್ ವಿಶ್ ಮಾಡಿರೋದು ಸಖತ್ ವೈರಲ್ ಆಗುತ್ತಿದೆ.

    ತಮಿಳಿನ (Kollywood) ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿರುವ ಸ್ಟಾರ್ ನಟ ಸಿದ್ಧಾರ್ಥ್ ಸದ್ಯ ಅದಿತಿ ಜೊತೆಗಿನ ಡೇಟಿಂಗ್ ವಿಚಾರವಾಗಿ ಸಖತ್ ಸದ್ದು ಮಾಡುತ್ತಿದ್ದಾರೆ. `ಮಹಾಸಮುದ್ರಂ’ (Mahasamudram) ಸಿನಿಮಾ ವೇಳೆ ಸಿದ್ಧಾರ್ಥ್ ಮತ್ತು ಅದಿತಿ ಒಟ್ಟಿಗೆ ತೆರೆಹಂಚಿಕೊಂಡಿದ್ದರು. ಈ ಪರಿಚಯವೇ ಪ್ರೀತಿಗೆ ತಿರುಗಿದೆ ಎನ್ನಲಾಗುತ್ತಿದೆ. ಸದ್ಯ ಅದಿತಿ ಹುಟ್ಟುಹಬ್ಬಕ್ಕೆ ಸ್ಪೆಷಲ್ ಆಗಿ ಸಿದ್ಧಾರ್ಥ್ ಶುಭಹಾರೈಸಿದ್ದಾರೆ. ಇದನ್ನೂ ಓದಿ:ಪುನೀತ್ ಪ್ರಥಮ ಪುಣ್ಯಸ್ಮರಣೆ: ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಭಾವುಕ ಪತ್ರ

    ಇದೇ ಅ.28ರಂದು ಅದಿತಿ ಹುಟ್ಟಿದ ಹಬ್ಬವಾಗಿದ್ದು, ಹೃದಯದ ರಾಣಿಗೆ ಜನ್ಮ ದಿನದ ಶುಭಾಶಯಗಳು ಎಂದು ಸಿದ್ಧಾರ್ಥ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನೆಟ್ಟಿಗರ ಗಮನ ಸೆಳೆದಿದೆ. ಇಬ್ಬರ ಡೇಟಿಂಗ್ ವದಂತಿಗೆ ಮತ್ತಷ್ಟು ಕುರುಹು ಸಿಕ್ಕಂತಾಗಿದೆ.

     

    View this post on Instagram

     

    A post shared by Siddharth (@worldofsiddharth)

    ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿರುವ ಅದಿತಿ ರಾವ್ ಆಕ್ಟೀವ್‌ ಆಗಿದ್ದಾರೆ. ಸೌತ್‌ ಸಿನಿಮಾಗಳಲ್ಲಿ ಸಿದ್ಧಾರ್ಥ್ ಬ್ಯುಸಿಯಾಗಿದ್ದಾರೆ. ಸದ್ಯದಲ್ಲೇ ಇಬ್ಬರು ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]