Tag: Aditi Rao

  • ಜಮಾಲಿ ಗುಡ್ಡ ಚಿತ್ರದ ಟ್ರೇಲರ್ ರಿಲೀಸ್ : ಡಿಸೆಂಬರ್ 30ರಂದು ತೆರೆಗೆ

    ಜಮಾಲಿ ಗುಡ್ಡ ಚಿತ್ರದ ಟ್ರೇಲರ್ ರಿಲೀಸ್ : ಡಿಸೆಂಬರ್ 30ರಂದು ತೆರೆಗೆ

    ಟ ರಾಕ್ಷಸ ಎಂದೇ ಖ್ಯಾತರಾಗಿರುವ ಡಾಲಿ ಧನಂಜಯ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿರುವ  “once upon  a time in ಜಮಾಲಿಗುಡ್ಡ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದರು. ಈ ಚಿತ್ರ ಒಂದು ಕಾಲ್ಪನಿಕ ಪ್ರಪಂಚ. ಜೊತೆಗೆ ಭಾವನಾತ್ಮಕ ಪಯಣ ಕೂಡ. ಧನಂಜಯ ಹಾಗೂ ಬೇಬಿ‌ ಪ್ರಾಣ್ಯ ನಡುವಿನ ಸನ್ನಿವೇಶಗಳು ಸುಂದರವಾಗಿ ಮೂಡಿಬಂದಿದೆ. 95 – 96 ರ ಕಾಲಘಟ್ಟದಲ್ಲಿ ನಡೆಯುವ ಕಥೆಯಿದು. ಚಿಕ್ಕಮಗಳೂರಿನ ಬಾಬಾಬುಡನಗಿರಿಯ ಸೊಬಗು ಚಿತ್ರದ ಮತ್ತೊಂದು ಹೈಲೈಟ್. ಅಲ್ಲೇ ಹೆಚ್ಚಿನ ಚಿತ್ರೀಕರಣ ನಡೆದಿದೆ. “ಜಮಾಲಿ ಗುಡ್ಡ” ಚಿತ್ರ ಉತ್ತಮವಾಗಿ ಮೂಡಿಬರಲು ನಿರ್ಮಾಪಕರು ಹಾಗೂ ಇಡೀ ಚಿತ್ರತಂಡದ ಸಹಕಾರ ಕಾರಣ ಎಂದರು ನಿರ್ದೇಶಕ ಕುಶಾಲ್ ಗೌಡ.

    “ಜಮಾಲಿಗುಡ್ಡ” ಈ ವರ್ಷದ ನನ್ನ ನಟನೆಯ 6 ನೇ ಚಿತ್ರವಾಗಿ ಬಿಡುಗಡೆಯಾಗುತ್ತಿದೆ. ಇದೊಂದು ಫೀಲ್ ಗುಡ್ ಸಿನಿಮಾ.‌ ಕುಟುಂಬ ಸಮೇತರಾಗಿ ಬಂದು ನೋಡಬಹುದಾದ ಚಿತ್ರ. ಕುಶಾಲ್ ಗೌಡ ಅವರು ಈ ಚಿತ್ರಕ್ಕಾಗಿ ಫೇಸ್ ಬುಕ್ ಮೂಲಕ ನಿರ್ಮಾಪಕರನ್ನು ಹುಡುಕಿದರು. ಆಗ ಶ್ರೀಹರಿ ಸಿಕ್ಕರು. ನಾನು‌ ಕೂಡ ಬ್ಯುಸಿ ಇದ್ದೆ. ಆದರೆ, ಹೆಚ್ಚಿನ ಚಿತ್ರೀಕರಣ ಬಾಬಾಬುಡನಗಿರಿಯಲ್ಲೇ ನಡೆಯಬೇಕಿತ್ತು. ಅದರಲ್ಲೂ  ಸೆಪ್ಟೆಂಬರ್-ಅಕ್ಟೋಬರ್ ತಿಂಗಳ ವಾತಾವರಣದಲ್ಲೇ ಚಿತ್ರೀಕರಣ ನಡೆಯಬೇಕಾಗಿದ್ದರಿಂದ ಬೇಗ ಈ ಚಿತ್ರೀಕರಣದಲ್ಲಿ ಪಾಲ್ಗೊಂಡೆ.   ಛಾಯಾಗ್ರಾಹಕ ಕಾರ್ತಿಕ್ ಸೇರಿದಂತೆ ಇಡೀ ತಂತ್ರಜ್ಞರ ಕಾರ್ಯವೈಖರಿ ಹಾಗೂ ಅದಿತಿ ಪ್ರಭುದೇವ ಅವರ ಆದಿಯಾಗಿ ಎಲ್ಲಾ ಕಲಾವಿದರ ಅಭಿನಯ  ಚೆನ್ನಾಗಿದೆ. ಚಿತ್ರ ಯಶಸ್ವಿಯಾಗಲಿ. ನಿರ್ಮಾಪಕರು ಮತ್ತಷ್ಟು ಚಿತ್ರ ನಿರ್ಮಾಣ ಮಾಡಲಿ ಎಂದರು ನಾಯಕ ಡಾಲಿ ಧನಂಜಯ.

    ಈ ಚಿತ್ರ ನನ್ನ ವೃತ್ತಿ ಬದುಕಿನಲ್ಲಿ ಸದಾ ನೆನಪಿನಲ್ಲಿ ಉಳಿಯುವ ಸಿನಿಮಾವಾಗಲಿದೆ. ಈ ಚಿತ್ರದ ಭಾವನಾತ್ಮಕ ಸನ್ನಿವೇಶಗಳಲ್ಲಿ ನಾನು ಎಷ್ಟೋ ಕಡೆ ಸಹಜವಾಗಿ ಅತ್ತಿದ್ದು ಇದೆ. ಅಂತಹ ಅದ್ಭುತ ಸನ್ನಿವೇಶಗಳು ಈ ಚಿತ್ರದಲ್ಲಿದೆ. ಧನಂಜಯ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ನಿಮ್ಮೆಲ್ಲರ ಪ್ರೋತ್ಸಾಹ ನಮ್ಮ ಚಿತ್ರದ ಮೇಲಿರಲಿ ಎಂದರು ನಟಿ ಅದಿತಿ ಪ್ರಭುದೇವ. ಇದನ್ನೂ ಓದಿ: ದೀಪಿಕಾ ಅಸಭ್ಯ ನೃತ್ಯ ಸಿನಿಮಾ ನೋಡದಂತೆ ಮಾಡಿದೆ – `ಪಠಾಣ್’ ಹೆಸರು ಬಳಕೆಗೆ ಮುಸ್ಲಿಂ ಧರ್ಮಗುರು ಆಕ್ಷೇಪ

    ನಾನು ಮೂಲತಃ ಚಿತ್ರೋದ್ಯಮಿ ಅಲ್ಲ. ನಮ್ಮದೇ ಬೇರೆ ಉದ್ಯಮ ಇದೆ. ಆದರೆ ನನಗೆ ಇಪ್ಪತ್ತು ವರ್ಷಗಳ ಹಿಂದೆ ಚಿತ್ರದಲ್ಲಿ ಅಭಿನಯಿಸುವ ಆಸೆಯಿತ್ತು. ಅದು ಆಗಲಿಲ್ಲ. ಈಗ ನಿರ್ಮಾಪಕನಾಗಿದ್ದೇನೆ. ಡಿಸೆಂಬರ್ 30ರಂದು ನಮ್ಮ ಚಿತ್ರ ತೆರೆಗೆ ಬರುತ್ತಿದೆ ನಿಮ್ಮೆಲ್ಲರ ಬೆಂಬಲವಿರಲಿ ಎಂದರು ನಿರ್ಮಾಪಕ ಶ್ರೀಹರಿ. ಚಿತ್ರದಲ್ಲಿ ನಟಿಸಿರುವ ಯಶ್ ಶೆಟ್ಟಿ, ರುಶಿಕಾ, ದಿವ್ಯ, ಪ್ರಾಣ್ಯ, ಸಂತು, ಸಂಕಲನಕಾರ ಹರೀಶ್ ಕೊಮ್ಮೆ ಮುಂತಾದವರು ಚಿತ್ರದ ಬಗ್ಗೆ ಮಾತನಾಡಿದರು. ಕಾರ್ತಿಕ್ ಛಾಯಾಗ್ರಹಣ ಹಾಗೂ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಹಿನ್ನೆಲೆ ಸಂಗೀತ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬನ್ಸಾಲಿ ನಿರ್ದೇಶನದಲ್ಲಿ ಬಹುಭಾಷಾ ನಟಿ ಅದಿತಿ ರಾವ್

    ಬನ್ಸಾಲಿ ನಿರ್ದೇಶನದಲ್ಲಿ ಬಹುಭಾಷಾ ನಟಿ ಅದಿತಿ ರಾವ್

    ಬಾಲಿವುಡ್‌ನ ಸ್ಟಾರ್ ನಿರ್ದೇಶಕರಲ್ಲಿ ಒಬ್ಬರಾಗಿರುವ ಸಂಜಯ್ ಲೀಲಾ ಬನ್ಸಾಲಿ `ಗಂಗೂಬಾಯಿ ಕಾಥಿಯಾವಾಡಿ’ ಸಕ್ಸಸ್ ನಂತರ `ಹೀರಾಮಂಡಿ’ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಬಹುಭಾಷಾ ನಟಿ ಅದಿತಿ ರಾವ್ ಇದೀಗ ಈ ಚಿತ್ರತಂಡ ಸೇರಿಕೊಂಡಿದ್ದಾರೆ.

    ಭಿನ್ನ ಕಥೆಯನ್ನ ತೆರೆಯ ಮೇಲೆ ತೋರಿಸುವುದರಲ್ಲಿ ನಿರ್ದೇಶಕ ಸಂಜಯ್ ಲೀಲಿ ಬನ್ಸಾಲಿ ಯಾವಾಗಲೂ ಮುಂದು. ರಾಮ್ ಲೀಲಾ, ಪದ್ಮಾವತ್, ಬಾಜಿರಾವ್ ಮಸ್ತಾನಿ, ಬಿಟೌನ್‌ನಲ್ಲಿ ಹವಾ ಸೃಷ್ಟಿಸಿದ ನಿರ್ದೇಶಕ ಈಗ ಹೀರಾ ಮಂಡಿ ಚಿತ್ರದ ನಿರ್ದೇಶನದತ್ತ ಮುಖ ಮಾಡಿದ್ದಾರೆ. ಈ ಚಿತ್ರಕ್ಕೆ ಪ್ರಮುಖ ಪಾತ್ರದಲ್ಲಿ ಫರ್ದೀನ್ ಖಾನ್‌ಗೆ ನಾಯಕಿಯಾಗಿ ಅದಿತಿ ರಾವ್ ಹೈದರಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:ಸಿನಿಮಾರಂಗಕ್ಕೆ ಗುಡ್ ಬೈ: ರಾಜಕೀಯ ಅಖಾಡಕ್ಕೆ ರಶ್ಮಿಕಾ ಮಂದಣ್ಣ

    ಸಿನಿಮಾ ರಿಲೀಸ್‌ಗೂ ಮುನ್ನವೇ ಸಾಕಷ್ಟು ನಿರೀಕ್ಷೇ ಹುಟ್ಟು ಹಾಕಿರುವ ಬನ್ಸಾಲಿ ನಿರ್ದೇಶನದ ಈ ಚಿತ್ರದಲ್ಲಿ ಮೊದಲ ಬಾರಿಗೆ ಫರ್ದೀನ್ ಖಾನ್ ಮತ್ತು ಅದಿತಿ ರಾವ್ ಕಾಣಿಸಿಕೊಳ್ತಿದ್ದಾರೆ. ಈ ಹೊಸ ಜೋಡಿ ಬನ್ಸಾಲಿ ಚಿತ್ರದಲ್ಲಿ ಹೇಗೆ ಮೋಡಿ ಮಾಡಬಹುದು ಅಂತಾ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಅದಿತಿ ರಾವ್ ಜೊತೆ ಸಮಂತಾ ಮಾಜಿ ಬಾಯ್ ಫ್ರೆಂಡ್ ಸಿದ್ದಾರ್ಥ ಡೇಟಿಂಗ್

    ಅದಿತಿ ರಾವ್ ಜೊತೆ ಸಮಂತಾ ಮಾಜಿ ಬಾಯ್ ಫ್ರೆಂಡ್ ಸಿದ್ದಾರ್ಥ ಡೇಟಿಂಗ್

    ಬಾಲಿವುಡ್ ನಟಿ ಅದಿತಿ ರಾವ್ ಜೊತೆ ತಮಿಳು ನಟ ಸಿದ್ದಾರ್ಥ ಡೇಟಿಂಗ್ ಮಾಡುತ್ತಿದ್ದಾರಂತೆ. ಈ ವಿಷಯ ಆಗಾಗಿ ಬಿಟೌನ್ ನಲ್ಲಿ ಗಾಸಿಪ್ ಆಗಿ ಹರಿದಾಡುತ್ತಿತ್ತು. ಆದರೆ, ನಿನ್ನೆ ಈ ಜೋಡಿ ತಡರಾತ್ರಿ ಹೋಟೆಲ್ ನಿಂದ ಬರುತ್ತಿರುವ ಸನ್ನಿವೇಶ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಾಗಾಗಿ ಇಬ್ಬರೂ ಡೇಟಿಂಗ್ ನಲ್ಲಿ ಇರುವ ವಿಚಾರ ಬಹಿರಂಗವಾಗಿದೆ.

    ಸಿದ್ದಾರ್ಥ ಈ ಮೊದಲು ಸಮಂತಾ ಜೊತೆ ಡೇಟಿಂಗ್ ನಲ್ಲಿದ್ದರು. ಕೆಲ ವರ್ಷಗಳ ಕಾಲ ಜೊತೆಯಾಗಿಯೇ ಸುತ್ತಾಡಿದರು. ಆನಂತರ ಇಬ್ಬರ ಲವ್ ಬ್ರೇಕ್ ಅಪ್ ಆಯಿತು. ಸಮಂತಾ ಮದುವೆ ಮಾಡಿಕೊಂಡರು. ಸಿದ್ದಾರ್ಥ ಹೋರಾಟ ಎನ್ನುತ್ತಾ ದಿನಗಳನ್ನು ದೂಡಿದರು. ಇತ್ತ ಸಮಂತಾ ಡಿವೋರ್ಸ್ ಪಡೆದುಕೊಂಡು ಒಂಟಿಯಾಗಿದ್ದಾರೆ. ಆ ಕಡೆ ಸಿದ್ಧಾರ್ಥ ಅದಿತಿ ರಾವ್ ಜೊತೆ ಜಂಟಿಯಾಗಿ ಸುತ್ತಾಡುತ್ತಿದ್ದಾರೆ. ಇದನ್ನೂ ಓದಿ:ಮಗನ ಜೊತೆ ಮೊದಲ ಬಾರಿಗೆ ರೀಲ್ಸ್ ಮಾಡಿದ ಸಂಜನಾ ಗಲ್ರಾನಿ

    ಅದಿತಿ ರಾವ್ ಮತ್ತು ಸಿದ್ದಾರ್ಥ ಅವರು ಇದೀಗ ಮುಂಬೈನಲ್ಲೇ ಬೀಡು ಬಿಟ್ಟಿದ್ದಾರೆ ಎನ್ನುವ ಸುದ್ದಿಯೂ ಇದೆ. ಅಲ್ಲದೇ, ಶೂಟಿಂಗ್ ಸ್ಥಳದಲ್ಲೂ ಒಟ್ಟಿಗೆ ಕಾಣಿಸಿಕೊಂಡಿದ್ದನ್ನೂ ನೋಡಿದವರು ಇದ್ದಾರೆ. ಹಾಗಾಗಿ ಈ ಜೋಡಿ ಡೇಟಿಂಗ್ ನಲ್ಲಿ ಇರುವುದು ಪಕ್ಕಾ ಎನ್ನುತ್ತಾರೆ ಆಪ್ತರು. ಈ ಕುರಿತಂತೆ ಇಬ್ಬರೂ ಯಾವುದೇ ರೀತಿಯಲ್ಲಿ ಮಾಹಿತಿಯನ್ನು ಹಂಚಿಕೊಂಡಿಲ್ಲ. ಹಾಗಾಗಿ ಇದು ಕೂಡ ಗಾಸಿಪ್ ಕಾಲಂನಲ್ಲಿ ಕಾಣಿಸಿಕೊಳ್ಳಬಹುದು.

    Live Tv
    [brid partner=56869869 player=32851 video=960834 autoplay=true]

  • ಯಾರಿಗೆ ಯಾರುಂಟು ಚಿತ್ರಕ್ಕೆ ಯೋಗರಾಜ್ ಭಟ್ ಹಾರೈಕೆ!

    ಯಾರಿಗೆ ಯಾರುಂಟು ಚಿತ್ರಕ್ಕೆ ಯೋಗರಾಜ್ ಭಟ್ ಹಾರೈಕೆ!

    ಬೆಂಗಳೂರು: ಹಾಡುಗಳ ಮೂಲಕವೇ ಹವಾ ಸೃಷ್ಟಿಸೋ ಚಿತ್ರಗಳೆಲ್ಲ ಗೆಲುವು ದಾಖಲಿಸುತ್ತವೆಂದು ನಂಬಿಕೆಯಿದೆ. ಈ ಸೂತ್ರದ ಆಧಾರದಲ್ಲಿ ಹೇಳೋದಾದರೆ ರಘುನಾಥ್ ನಿರ್ಮಾಣದ ಯಾರಿಗೆ ಯಾರುಂಟು ಚಿತ್ರದ ಗೆಲುವೂ ನಿಚ್ಚಳವಾದಂತಿದೆ. ಈ ಚಿತ್ರದ ಹಾಡುಗಳೆಲ್ಲ ಈಗಾಗಲೇ ಟ್ರೆಂಡ್ ಸೆಟ್ ಮಾಡಿವೆ. ಇನ್ನೇನು ಶೀಘ್ರದಲ್ಲಿಯೇ ಬಿಡುಗಡೆಗೆ ತಯಾರಾಗಿ ನಿಂತಿರೋ ಯಾರಿಗೆ ಯಾರುಂಟು ಬಗ್ಗೆ ನಿರ್ದೇಶಕ ಯೋಗರಾಜ ಭಟ್ ಮೆಚ್ಚುಗೆಯ ಮಾತಾಡುತ್ತಲೇ ಶುಭ ಹಾರೈಸಿದ್ದಾರೆ.

    ಹುಮ್ಮಸ್ಸು ಹೊಂದಿರೋ ತಂಡವೊಂದರಿಂದ ರೂಪುಗೊಂಡಿರೋ ಈ ಚಿತ್ರ ಯಾರಿಗೆ ಯಾರುಂಟು ಎರವಿನ ಸಂಸಾರ ಎಂಬ ದಾಸವಾಣಿಯ ಸಾಲುಗಳನ್ನು ಹೊಂದಿರೋ ಚಿತ್ರ. ಸಂಗೀತವನ್ನೂ ಪ್ರಧಾನವಾಗಿಸಿಕೊಂಡಿರೋ ಇದು ತಮ್ಮ ಪರಿಚಿತರನೇಕರು ಸೇರಿ ಮಾಡಿರೋ ಚಿತ್ರ. ಎಲ್ಲರೂ ನೋಡಿ ಈ ಪ್ರಯತ್ನವನ್ನು ಗೆಲ್ಲಿಸಬೇಕಾಗಿ ಯೋಗರಾಜ ಭಟ್ ಕೇಳಿಕೊಂಡಿದ್ದಾರೆ.

    ಕಿರಣ್ ಗೋವಿ ನಿರ್ದೇಶನದ ಈ ಚಿತ್ರ ಯೋಗರಾಜ ಭಟ್ ಮಾತಿನಂತೆಯೇ ಬದುಕಿನ ನಾನಾ ಮಗ್ಗುಲುಗಳನ್ನು ಭರ್ಜರಿ ಮನರಂಜನೆಯೊಂದಿಗೆ ತೆರೆದಿಡುವ ಚಿತ್ರ. ಈಗಾಗಲೇ ಇದರ ಅಸಲಿ ಕಥೆಯೇನು ಅಂತ ಪ್ರೇಕ್ಷಕರು ಚರ್ಚಿಸಲಾರಂಭಿಸಿದ್ದಾರೆ. ಒರಟ ಪ್ರಶಾಂತ್ ಮೂರು ವರ್ಷದ ಬಳಿಕ ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರೋ ಕಾತರ ಹೊಂದಿದ್ದಾರೆ. ಕೃತಿಕಾ ರವೀಂದ್ರ, ಲೇಖಾ ಚಂದ್ರ ಮತ್ತು ಅದಿತಿ ರಾವ್ ಈ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv