Tag: Aditi Prabhudev

  • ಮನಾಲಿ ಮಂಜಿನಲ್ಲಿ ‘ಮ್ಯಾಟ್ನಿ’ ಚಿತ್ರದ ಸಾಂಗ್ ಶೂಟ್

    ಮನಾಲಿ ಮಂಜಿನಲ್ಲಿ ‘ಮ್ಯಾಟ್ನಿ’ ಚಿತ್ರದ ಸಾಂಗ್ ಶೂಟ್

    ಮ್ಯಾಟ್ನಿ (Matinee) ಸತೀಶ್ ನಿನಾಸಂ (Satish Ninasam), ರಚಿತಾ ರಾಮ್ ಹಾಗೂ ಅದಿತಿ ಪ್ರಭುದೇವ (Aditi Prabhudev) ಅಭಿನಯದ ಸಿನಿಮಾ. ಸತೀಶ್ ಮತ್ತು ರಚಿತಾ ಎರಡನೇ ಬಾರಿ ಜೊತೆಯಾಗಿದ್ದು ಅಯೋಗ್ಯ ನಂತ್ರ ಮತ್ತೆ ಈ ಜೋಡಿ ತೆರೆ ಮೇಲೆ ಒಟ್ಟಿಗೆ ಮಿಂಚಲಿದೆ. ಈಗಾಗಲೇ ಸಾಂಗ್ ಮೂಲಕ ಸದ್ದು ಮಾಡ್ತಿರೋ ಮ್ಯಾಟ್ನಿ ತಂಡ ಈಗ ಮತ್ತೊಂದು ರೋಮ್ಯಾಟಿಕ್ ಹಾಡಿನ ಮೂಲಕ ಪ್ರೇಕ್ಷಕರ ಮುಂದೆ ಬಂದಿದೆ.

    ಸದ್ಯ ಬಿಡುಗಡೆಯಾಗಿರೋ ನಿನಗಾಗಿ ಮಿಡಿಯುವುದು ಈ ಹೃದಯ ಅನ್ನೋ ಹಾಡಿನಲ್ಲಿ ಸತೀಶ್ ನಿನಾಸಂ ಹಾಗೂ ಅದಿತಿ ಪ್ರಭುದೇವಾ ಕಾಣಿಸಿಕೊಂಡಿದ್ದಾರೆ. ಈ ಕಂಪ್ಲೀಟ್ ಹಾಡನ್ನು ಮನಾಲಿಯಲ್ಲಿ ಚಿತ್ರೀಕರಣ ಮಾಡಿದ್ದು ಹಾಡು ಸಖತ್ ಬ್ಯೂಟಿಫುಲ್ ಹಾಗೂ ರೋಮ್ಯಾಂಟಿಕ್ ಆಗಿ ಮೂಡಿ ಬಂದಿದೆ.

    ಇನ್ನು ಈ ಹಾಡನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಿಡುಗಡೆ ಮಾಡುವ ಮೂಲಕ ಮ್ಯಾಟ್ನಿ ಸಿನಿಮಾತಂಡಕ್ಕೆ ಆಲ್ ದ ಬೆಸ್ಟ್ ಹೇಳಿದ್ದಾರೆ. ನಿನಗಾಗಿ ಮಿಡಿಯುವುದು ಹಾಡಿನ ಜೊತೆಗೆ ಮೇಕಿಂಗ್ ಅನ್ನು ಬಿಡುಗಡೆ ಮಾಡಿರೋ ತಂಡ ಮೂರು ದಿನಗಳ ಕಾಲ ಮನಾಲಿ ಚಿತ್ರೀಕರಣ ಹೇಗಿತ್ತು ಅದರ ಜೊತೆ ಚಿತ್ರತಂಡ ಮನಾಲಿಯಲ್ಲಿ ಏನೆಲ್ಲಾ ಸಾಹಸ ಮಾಡಿ ಚಿತ್ರೀಕರಣ ಮಾಡಿದೆ ಅನ್ನೋದನ್ನ ಮೇಕಿಂಗ್ ಮೂಲಕ ತಿಳಿಸಿದ್ದಾರೆ.

    ಮ್ಯಾಟ್ನಿ ಸಿನಿಮಾವನ್ನ ಮನೋಹರ್ ಕಾಂಪಲ್ಲಿ ನಿರ್ದೇಶನ ಮಾಡಿದ್ದು ಪಾರ್ವತಿ ಎಸ್ ಗೌಡ ಚಿತ್ರಕ್ಕೆ ಎಫ್ ಥ್ರೀ ಪ್ರೊಡಕ್ಷನ್ಸ್ ಮೂಲಕ ಬಂಡವಾಳ ಹೂಡಿದ್ದಾರೆ. ಇನ್ನು ಈ ಹಾಡಿಗೆ ಕೀರ್ತನ್ ಪೂಜಾರಿ ಕ್ಯಾಮೆರಾ ವರ್ಕ್ ಮಾಡಿದ್ದು, ಸಂತು ಮಾಸ್ಟರ್ ಕೋರಿಯೋಗ್ರಾಫ್ ಮಾಡಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಮಾಡಿರೋ ಮ್ಯಾಟ್ನಿ ಸಿನಿಮಾದ ಈ ರೋಮ್ಯಾಂಟಿಕ್ ಹಾಡನ್ನ ಹೇಮಂತ್ ಕುಮಾರ್ ಗಂಜಂ ಬರೆದಿದ್ದು ಸಾದ್ವಿನಿ ಕೊಪ್ಪ ಹಾಡನ್ನ ಹಾಡಿದ್ದಾರೆ.

     

    ಮ್ಯಾಟ್ನಿ ಸಿನಿಮಾದಲ್ಲಿ ಸತೀಶ್ ನಿನಾಸಂ , ರಚಿತಾ ರಾಮ್, ಅದಿತಿ ಪ್ರಭುದೇವಾ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ. ಶಿವರಾಜ್ ಕೆ ಆರ್ ಪೇಟೆ, ನಾಗಭೂಷನ್, ಪೂರ್ಣ ಮೈಸೂರು, ದಿಗಂತ್ ಸೇರಿದಂತೆ ತಬಲ ನಾಣಿ, ಪ್ರಕಾಶ್ ತುಂಬಿನಾಡು,ಗೋಪಿ ಮಿಮಿಕ್ರಿ,ತುಳಸಿ ಶಿವಮಣಿ  ಇನ್ನು ಅನೇಕರು ಅಭಿನಯಿಸಿದ್ದಾರೆ ಏರ್ಪಿಲ್ 5 ರಂದು ಮ್ಯಾಟ್ನಿ ಸಿನಿಮಾ ರಾಜ್ಯಾಧ್ಯಂತ ತೆರೆಗೆ ಬರ್ತಿದೆ.

  • ನಾನು ಅಮ್ಮನಾಗುತ್ತಿದ್ದೇನೆ: ಗುಡ್ ನ್ಯೂಸ್ ಕೊಟ್ಟ ನಟಿ ಅದಿತಿ ಪ್ರಭುದೇವ್

    ನಾನು ಅಮ್ಮನಾಗುತ್ತಿದ್ದೇನೆ: ಗುಡ್ ನ್ಯೂಸ್ ಕೊಟ್ಟ ನಟಿ ಅದಿತಿ ಪ್ರಭುದೇವ್

    ನ್ನಡದ (Sandalwood) ಹೆಸರಾಂತ ನಟಿ ಅದಿತಿ ಪ್ರಭುದೇವ್ (Aditi Prabhudev), ಹೊಸ ವರ್ಷದ ದಿನದಂದು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡಿರುವ ಅದಿತಿ, ತಾವು ಅಮ್ಮನಾಗುತ್ತಿರುವ (Pregnant)ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಜೀವನದಲ್ಲಿ ಪ್ರತಿಯೊಬ್ಬರು ಪ್ರೀತಿಯಿಂದ ಗೌರವದಿಂದ ಕಾಣುವ ಸಂಬಂಧ ಅಮ್ಮ. ಪ್ರತಿಕ್ಷಣ ನಮಗಾಗಿ ಮಿಡಿಯುವ ಜೀವ. ಅಮ್ಮ 2024ಕ್ಕೆ ನಾನು ಅಮ್ಮನಾಗುವೆ’ ಎಂದು ಅವರು ಪೋಸ್ಟ್ ಹಾಕಿದ್ದಾರೆ.

    ಕಳೆದ ವರ್ಷ ನವೆಂಬರ್ 28ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡಿನಲ್ಲಿ ಅದಿತಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಉದ್ಯಮಿ ಯಶಸ್ ಜೊತೆ ಹೊಸ ಬದುಕಿಗೆ ಕಾಲಿಟ್ಟಿದ್ದರು. ಮದುವೆಯಾಗಿ ಒಂದು ವರ್ಷ ಒಂದು ತಿಂಗಳಿಗೆ ಅಮ್ಮನಾಗುವ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

    ಕನ್ನಡ ಸಿನಿಮಾ ರಂಗ ಕಂಡ ಅಪರೂಪದ ನಟಿ ಅದಿತಿ ಪ್ರಭುದೇವ್. ಯಾವುದೇ ಕಾಂಟ್ರವರ್ಸಿಗೆ ಗುರಿಯಾಗದೇ ಅತ್ಯುತ್ತಮ ಪಾತ್ರಗಳನ್ನು ಮಾಡುತ್ತಾ ಬಂದರು. ಸಿಕ್ಕಿರುವ ಪಾತ್ರಗಳಲ್ಲೇ ತೃಪ್ತಿ ಪಟ್ಟುಕೊಂಡವರು. ಕಿರುತೆರೆಯ ಮೂಲಕ ಬಣ್ಣದ ಪ್ರಪಂಚಕ್ಕೆ ಬಂದು, ಆನಂತರ ಸಿನಿಮಾಗಳನ್ನು ಮಾಡಿದವರು.

     

    ಇದೇ ಜನವರಿ 26ರಂದು ಅದಿತಿ ಪ್ರಭದೇವ ನಟನೆಯ ಅಲೆಕ್ಸಾ ಸಿನಿಮಾ ರಿಲೀಸ್ ಆಗಲಿದೆ. ಮದುವೆ ನಂತರ ಸಿನಿಮಾಗಳನ್ನು ಒಪ್ಪಿಕೊಳ್ಳದ ಅದಿತಿ, ಪತಿಯ ಜೊತೆ ಕಾಡು ಸುತ್ತಾಟ, ಅಡುಗೆ ತಯಾರಿ, ಯೂಟ್ಯೂಬ್ ಹೀಗೆ ತಮ್ಮದೇ ಆದ ರೀತಿಯಲ್ಲಿ ದಿನಗಳನ್ನು ಕಳೆಯುತ್ತಿದ್ದಾರೆ.

  • ‘ಅಲೆಕ್ಸಾ’ ಚಿತ್ರಕ್ಕಾಗಿ ತನಿಖಾಧಿಕಾರಿಯಾದ ಅದಿತಿ ಪ್ರಭುದೇವ

    ‘ಅಲೆಕ್ಸಾ’ ಚಿತ್ರಕ್ಕಾಗಿ ತನಿಖಾಧಿಕಾರಿಯಾದ ಅದಿತಿ ಪ್ರಭುದೇವ

    ವನ್ ತೇಜ್ ಹಾಗೂ ಅದಿತಿ ಪ್ರಭುದೇವ ಪ್ರಮುಖಪಾತ್ರದಲ್ಲಿ ನಟಿಸಿರುವ ‘ಅಲೆಕ್ಸಾ’ (Alexa)ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು. ಜೀವ (Jeeva) ನಿರ್ದೇಶಿಸಿರುವ ಈ ಚಿತ್ರದ ಟೀಸರ್ (Teaser) ಬಿಡುಗಡೆಯಾಗಿ ಮೆಚ್ಚುಗೆ ಪಡೆಯುತ್ತಿದೆ. ವಿ.ಚಂದ್ರು ನಿರ್ಮಾಣದ ಈ ಚಿತ್ರ ನವೆಂಬರ್ ನಲ್ಲಿ ತೆರೆಗೆ ಬರುತ್ತಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾಹಿತಿ ನೀಡಿದರು.

    ಇದೊಂದು ಮರ್ಡರ್ ಮಿಸ್ಟರಿ ಚಿತ್ರ. ಕಥೆ ಕೇಳಿದ ತಕ್ಷಣ ನಿರ್ಮಾಪಕರು ಇಷ್ಟಪಟ್ಟರು. ಇನ್ವೆಸ್ಟಿಕೇಶನ್ ಆಫೀಸರ್ ಆಗಿ ಅದಿತಿ ಪ್ರಭುದೇವ (Aditi Prabhudev) ನಟಿಸಿದ್ದಾರೆ. ಪವನ್ ತೇಜ್ (Pawan Tej) ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಫಾರ್ಮಾಸೆಟಿಕಲ್ ಮಾಫಿಯಾ ಬಗ್ಗೆ ಕೂಡ ಕ್ಲೈಮ್ಯಾಕ್ಸ್ ನಲ್ಲಿ ತೋರಿಸಿದ್ದೇವೆ‌. ಈ ಚಿತ್ರದ ಎರಡನೇ ಭಾಗವನ್ನು ತೆರೆಗೆ ತರುವ ಆಲೋಚನೆ ಇದೆ. ಮೈಸೂರು, ಮಡಿಕೇರಿ ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೇವೆ. ಮೂರು ಹಾಡುಗಳು ಹಾಗೂ ನಾಲ್ಕು ಸಾಹಸ ಸನ್ನಿವೇಶಗಳು ಚಿತ್ರದಲ್ಲಿದೆ.‌ ಅಕ್ಟೋಬರ್ ಕೊನೆ ಅಥವಾ ನವೆಂಬರ್ ನಲ್ಲಿ ಚಿತ್ರವನ್ನು ತೆರೆಗೆ ಬರಲಿದೆ ಎಂದು ನಿರ್ದೇಶಕ ಜೀವ ತಿಳಿಸಿದರು.

    ನನಗೆ ನಿಜಜೀವನದಲ್ಲಿ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸ್ಸಿತ್ತು. ಅದು ಆಗಲಿಲ್ಲ.‌ ನಿರ್ದೇಶಕರು ನೀವು ಈ ಚಿತ್ರದಲ್ಲಿ ಇನ್ವೆಸ್ಟಿಕೇಶನ್ ಆಫೀಸರ್ ಅಂದ ತಕ್ಷಣ ಒಪ್ಪಿಕೊಂಡೆ. ಸಾಹಸ ದೃಶ್ಯಗಳಲ್ಲೂ ಕಾಣಿಸಿಕೊಳ್ಳುವ ಕನಸ್ಸಿತ್ತು. ಅದು ಈ ಚಿತ್ರದಲ್ಲಿ ನನಸ್ಸಾಗಿದೆ. ಸಾಹಸ ನಿರ್ದೇಶಕ ರವಿವರ್ಮ ಹಾಗೂ ಮಾಸ್ ಮಾದ ಅವರು ಸಾಹಸ ಸಂಯೋಜನೆಯಲ್ಲಿ ನಾನು ಅಭಿನಯಿಸಿರುವ ಸಾಹಸ ಸನ್ನಿವೇಶಗಳು ಚೆನ್ನಾಗಿ ಬಂದಿದೆ ಎಂದರು ನಟಿ ಅದಿತಿ ಪ್ರಭುದೇವ. ಇದನ್ನೂ ಓದಿ:ರಶ್ಮಿಕಾ ಮಂದಣ್ಣ ಜೊತೆ ಸಂಪರ್ಕದಲ್ಲಿದ್ದೇನೆ, ಆಕೆಯ ಸಕ್ಸಸ್ ಬಗ್ಗೆ ಖುಷಿಯಿದೆ- ರಕ್ಷಿತ್ ಶೆಟ್ಟಿ

    ಚಿತ್ರದಲ್ಲಿ ಗಂಡ – ಹೆಂಡತಿ ಕೊಲೆ ಆಗಿರುತ್ತದೆ. ಆ‌ ಕೊಲೆಯ ತನಿಖೆಯ ಸುತ್ತ ಕಥೆ ಸಾಗುತ್ತದೆ ಎಂದು ಮಾತನಾಡಿದ ನಾಯಕ ಪವನ್ ತೇಜ್ ಅದಿತಿ ಪ್ರಭುದೇವ ಅವರ ಜೊತೆ ನಟಿಸುವ ಹಂಬಲವಿತ್ತು. ಈ ಚಿತ್ರದಲ್ಲಿ ನಟಿಸಿದ್ದೇನೆ ಎಂದರು. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ನೋಡಿ. ಪ್ರೋತ್ಸಾಹ ನೀಡಿ ಎನ್ನುತ್ತಾರೆ ನಿರ್ಮಾಪಕ ವಿ.ಚಂದ್ರು. ಚಿತ್ರದ ಬಹುತೇಕ ಕಲಾವಿದರು, ತಂತ್ರಜ್ಞರು ಹಾಗೂ ಚಿತ್ರದ ವಿತರಕರಾದ ರಿಲಯನ್ಸ್ ಎಂಟರ್ಟೈನ್ಮೆಂಟ್ ಅವರು ‘ಅಲೆಕ್ಸಾ’ ಬಗ್ಗೆ ಮಾತನಾಡಿದರು.

    ಪವನ್ ತೇಜ್, ಅದಿತಿ ಪ್ರಭುದೇವ, ನಾಗಾರ್ಜುನ್, ಮೇಘಶ್ರೀ, ಮಿಮಿಕ್ರಿ ಗೋಪಿ, ಚಂದ್ರಕಲಾ ಮೋಹನ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.  ಸತೀಶ್ ಬಿ  ಅವರ ಛಾಯಾಗ್ರಹಣ ಹಾಗೂ ಉಮೇಶ್ ಆರ್ ಬಿ  ಸಂಕಲನ ಅಲೆಕ್ಸಾ ಚಿತ್ರದಲ್ಲಿ ಸುಂದರವಾಗಿ ಮೂಡಿಬಂದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ತೋತಾಪುರಿ 2’ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿದ ಶಿವರಾಜ್ ಕುಮಾರ್

    ‘ತೋತಾಪುರಿ 2’ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿದ ಶಿವರಾಜ್ ಕುಮಾರ್

    ವರಸ ನಾಯಕ ಜಗ್ಗೇಶ್ ಮತ್ತು ಡಾಲಿ ಧನಂಜಯ್ ಕಾಂಬಿನೇಷನ್ ನ ‘ತೋತಾಪುರಿ 2’ ಸಿನಿಮಾದ ಟ್ರೈಲರ್ (Trailer) ಅನ್ನು ಇಂದು ನಟ ಶಿವರಾಜ್ ಕುಮಾರ್ (Shivaraj Kumar) ಬಿಡುಗಡೆ ಮಾಡಿದರು. ಜೊತೆಗೆ ಅಭಿಮಾನಿಗಳಿಗೆ ಗಣೇಶ್ ಹಬ್ಬ ಶುಭಾಶಯಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ತೋತಾಪುರಿ ಸಿನಿಮಾದ ನಿರ್ಮಾಪಕ ಸುರೇಶ್ ಅವರ ಜೊತೆಗಿನ ಬಾಂಧವ್ಯವನ್ನೂ ನೆನಪಿಸಿಕೊಂಡರು ಶಿವಣ್ಣ.

    ರಿಲೀಸ್ ಆಗಿರುವ ಟ್ರೈಲರ್ ನಲ್ಲಿ ಧನಂಜಯ್, ಜಗ್ಗೇಶ್, ಅದಿತಿ ಪ್ರಭುದೇವ್, ಸುಮನ್ ರಂಗನಾಥ್ ಅವರ ಪಾತ್ರಗಳನ್ನು ಇಟ್ಟುಕೊಂಡು ಸಿನಿಮಾದ ಝಲಕ್ ತೋರಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ. ಹಾಸ್ಯ, ಎಮೋಷನ್ ಜೊತೆಗೊಂದು ಅದ್ಭುತ ಸಂದೇಶವನ್ನು ಈ ಸಿನಿಮಾ ನೀಡಲಿದೆ ಎನ್ನುವುದು ಟ್ರೈಲರ್ ನೋಡಿದರೆ ಅರ್ಥವಾಗುತ್ತದೆ.

    ಸಿದ್ಲಿಂಗು ಖ್ಯಾತಿಯ ನಿರ್ದೇಶಕ ವಿಜಯ್ ಪ್ರಸಾದ್ ಈಗಾಗಲೇ ಒಂದು ತೋತಾಪುರಿಯನ್ನು ಪ್ರೇಕ್ಷಕರಿಗೆ ತಿನ್ನಿಸಿದ್ದಾರೆ. ಮತ್ತೊಂದು ತೋತಾಪುರಿ ತಿನ್ನಿಸಲು ರೆಡಿ ಮಾಡಿಕೊಂಡಿದ್ದಾರೆ. ಜಗ್ಗೇಶ್ ಮತ್ತು ಡಾಲಿ ಧನಂಜಯ್ ಕಾಂಬಿನೇಷನ್ ನ ‘ತೋತಾಪುರಿ’ ಸಿನಿಮಾ ಈಗಾಗಲೇ ಪ್ರೇಕ್ಷಕರ ಮನಗೆದ್ದಿದೆ. ತೋತಾಪುರಿ ಸಿನಿಮಾವನ್ನು ಜನರು ಮೆಚ್ಚಿಕೊಂಡ ಬೆನ್ನಲ್ಲೇ ತೋತಾಪುರಿ 2 (Thothapuri 2) ಸಿನಿಮಾವನ್ನು ಟ್ರೈಲರ್ ರಿಲೀಸ್ ಆಗಿದೆ.

    ಕೆ.ಎ.ಸುರೇಶ್ (KA Suresh) ಆರ್ಟ್ಸ್ ಬ್ಯಾನರ್ ಅಡಿಯಲ್ಲಿ  ಈ ಸಿನಿಮಾ ನಿರ್ಮಾಣಗೊಂಡಿದ್ದು, ನೀರ್ ದೋಸೆ ಚಿತ್ರದ ಯಶಸ್ವೀ ತಂಡ ಮತ್ತೊಮ್ಮೆ `ತೋತಾಪುರಿ’ಯ ಮೂಲಕ ಒಂದಾಗಿರೋದು ವಿಶೇಷ. ನಿರ್ದೇಶಕ ವಿಜಯಪ್ರಸಾದ್ (Vijay Prasad) ಅವರ ಈ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ (Jaggesh), ದತ್ತಣ್ಣ, ಸುಮನ್ ರಂಗನಾಥ್ ಮತ್ತೆ ಒಂದಾಗಿದ್ದಾರೆ. ಇದಲ್ಲದೆ ಉದ್ಯಮಿಯ ಪಾತ್ರದಲ್ಲಿ ಡಾಲಿ ಧನಂಜಯ ಮತ್ತು ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸಿದ್ದಾರೆ. ಇದನ್ನೂ ಓದಿ:ಗೃಹಪ್ರವೇಶದ ಫೋಟೋ ಹಂಚಿಕೊಂಡ ‘ನಾಗಿಣಿ 2’ ನಟಿ

    ನಿರ್ಮಾಪಕ ಕೆ ಎ ಸುರೇಶ್ ಅವರ ಹಿಂದಿನ ಸಿನಿಮಾಗಳಿಗಿಂತ ಹೆಚ್ಚಿನ ಭರವಸೆ ಈ ಚಿತ್ರ ಮೂಡಿಸಿದೆ. ಮಾರುಕಟ್ಟೆಯಲ್ಲಿ ಈ ತಂಡದ ಬಗ್ಗೆಯೇ ದೊಡ್ಡ ನಿರೀಕ್ಷೆ ಉದ್ಭವವಾಗಿದೆ. ಕನ್ನಡ ಚಿತ್ರ ರಂಗದಲ್ಲಿ ಯಶಸ್ಸನ್ನು ಬೆನ್ನಿಗೆ ಕಟ್ಟಿಕೊಂಡಿರುವ ನಿರ್ಮಾಪಕ ಕೆ ಎ ಸುರೇಶ್ `ತೋತಾಪುರಿ’. ಚಿತ್ರದಲ್ಲಿ ಮೊದಲ ಬಾರಿಗೆ ಡಾಲಿ ಧನಂಜಯ್ (Dhananjay),  ಜಗ್ಗೇಶ್ ಜೊತೆಯಾಗಿದ್ದಾರೆ. ನಾಯಕಿ ಅದಿತಿ ಪ್ರಭುದೇವ ಮುಸ್ಲಿಂ ಹುಡುಗಿ, ಸುಮನ್ ರಂಗನಾಥ್ ಕ್ರಿಶ್ಚಿಯನ್ ಹೆಣ್ಣುಮಗಳಾಗಿ ಅಭಿನಯಿಸಿದ್ದಾರೆ.

     

    ನವರಸ ನಾಯಕ ಜಗ್ಗೇಶ್ ಅವರ ಚಿತ್ರಜೀವನದಲ್ಲಿ ಇದೇ ಮೊದಲ ಬಾರಿಗೆ 100ಕ್ಕೂ ಹೆಚ್ಚು ದಿವಸಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ನಿರ್ಮಾಪಕ ಕೆ ಎ ಸುರೇಶ್ `ರಾಜು ಕನ್ನಡ ಮೀಡಿಯಂ’ ಚಿತ್ರದ ಯಶಸ್ಸಿನ ನಂತರ ಒಂದು ಭರವಸೆ ಮೂಡಿಸುವ ತಂಡದ ಜೊತೆ ಹಣ ಹೂಡಿದ್ದಾರೆ. ವಿಜಯಪ್ರಸಾದ್ `ಸಿದ್ಲಿಂಗು’ ಸಿನಿಮಾದಲ್ಲಿ ಟೀಚರ್ ಆಗಿದ್ದ ಸುಮನ್ ರಂಗನಾಥ್ ಈ ಚಿತ್ರದಲ್ಲೂ ಪ್ರಮುಖ ಪಾತ್ರ ಗಿಟ್ಟಿಸಿಕೊಂಡಿದ್ದಾರೆ. ಅನೂಪ್ ಸೀಳಿನ್ ಸಂಗೀತ, ನಂಜೇಶ್ ಬಾಬು ಛಾಯಾಗ್ರಹಣ ಮಾಡಿದ್ದಾರೆ. ಮೈಸೂರು, ಶ್ರೀರಂಗಪಟ್ಟಣ, ಕೊಡಗಿನಲ್ಲಿ ಚಿತ್ರೀಕರಣ ಮಾಡಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸತೀಶ್ ನೀನಾಸಂ ನಟನೆಯ ‘ಮ್ಯಾಟ್ನಿ’ ಹಾಡು ರಿಲೀಸ್: ಚಿತ್ರತಂಡ ಹೇಳಿದ್ದೇನು?

    ಸತೀಶ್ ನೀನಾಸಂ ನಟನೆಯ ‘ಮ್ಯಾಟ್ನಿ’ ಹಾಡು ರಿಲೀಸ್: ಚಿತ್ರತಂಡ ಹೇಳಿದ್ದೇನು?

    ನೀನಾಸಂ ಸತೀಶ್ (Satish Ninasam) ಹಾಗೂ ರಚಿತಾರಾಮ್ (Rachita Ram) ಅಭಿನಯಿಸಿದ್ದ ಅಯೋಗ್ಯ ಚಿತ್ರದ  ‘ಏನಮ್ಮಿ ಏನಮ್ಮಿ’ ಹಾಡು ಸಖತ್ ಹಿಟ್ ಆಗಿತ್ತು. ಈಗಲೂ ಆ ಹಾಡು ಜನಪ್ರಿಯ. ಈಗ ಅವರಿಬ್ಬರ ಕಾಂಬಿನೇಶನ್ ನಲ್ಲಿ ಮೂಡಿಬಂದಿರುವ ‘ಮ್ಯಾಟ್ನಿ’ (Matinee) ಚಿತ್ರದಿಂದ ‘ಸಂಜೆ ಮೇಲೆ ಸುಮ್ನೆ ಫೋನು ಮಾಡ್ಲ ನಿಂಗೆ’ ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ.

    ಪೂರ್ಣಚಂದ್ರ ತೇಜಸ್ವಿ ಬರೆದು ಸಂಗೀತ ನೀಡಿರುವ ಹಾಗೂ ವಿಜಯ್ ಪ್ರಕಾಶ್ ಹಾಡಿರುವ ಈ ಹಾಡಿಗೂ (Song) ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ. ಇತ್ತೀಚೆಗೆ ಈ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು. ಇದನ್ನೂ ಓದಿ:ಎಂಗೇಜ್‌ಮೆಂಟ್ ಸಂಭ್ರಮದಲ್ಲಿ ನಿರ್ಮಾಪಕ ಅನುರಾಗ್ ಕಶ್ಯಪ್ ಪುತ್ರಿ ಆಲಿಯಾ

    ಬಹಳ ಅದ್ಭುತವಾದ ಹಾಡು. ಕಲಾ ನಿರ್ದೇಶನ, ನೃತೃ ನಿರ್ದೇಶನ, ಛಾಯಾಗ್ರಹಣ ಎಲ್ಲವೂ ಚೆನ್ನಾಗಿದೆ ಎಂದು ಮಾತು ಪ್ರಾರಂಭಿಸಿದ  ನೀನಾಸಂ ಸತೀಶ್,  ನಾನೊಬ್ಬ ಪ್ರೇಕ್ಷಕನಾಗಿ ನೋಡಿದಾಗ ಈ ಹಾಡು ಬಹಳ ಚೆನ್ನಾಗಿದೆ ಎಂದೆನಿಸುತ್ತದೆ. ನನ್ನ ಕೆರಿಯರ್ ನಲ್ಲಿ ಇದು ಬೆಸ್ಟ್ ಸಾಂಗ್ ಇದು. ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರಿಗೆ ಬಹಳ ತೊಂದರೆ ಕೊಟ್ಟಿದ್ದೇನೆ. ಅವರು ಅಷ್ಟೇ ಚೆನ್ನಾಗಿ ಹಾಡು ಮಾಡಿದ್ದಾರೆ. ಈ ಹಾಡನ್ನು ಮೊದಲು ಅವರೇ ಹಾಡಿದ್ದರು. ಎಲ್ಲರೂ ಇಷ್ಟಪಟ್ಟಿದ್ದರು. ಆದರೂ ಈ ಹಾಡನ್ನು ವಿಜಯಪ್ರಕಾಶ್ ಹಾಡಿದರೆ ಚೆನ್ನಾಗಿರುತ್ತದೆ ಎಂದೆನಿಸಿತು. ಅದಕ್ಕೆ ಪೂರ್ಣಚಂದ್ರ ಅವರು ಒಪ್ಪಿಕೊಂಡು ವಿಜಯಪ್ರಕಾಶ್ ಅವರಿಂದ ಹಾಡಿಸಿದ್ದಾರೆ ಎಂದರು ಸತೀಶ್,

    ಮುಂದುವರೆದು ಮಾತನಾಡಿದ ಸತೀಶ್, ‘ನಿರ್ದೇಶಕ ಮನೋಹರ್ ಅವರು ಕಥೆ ಹೇಳಿದಾಗ ತಕ್ಷಣ ಒಪ್ಪಿಕೊಂಡೆ. ಬಹಳ ಚೆನ್ನಾಗಿ ಕಥೆ ಮಾಡಿಕೊಂಡಿದ್ದಾರೆ. ಅಯೋಗ್ಯ ನಂತರ ನಾನು ಮತ್ತು ರಚಿತಾ ಒಟ್ಟಿಗೆ ಅಭಿನಯಿಸಿರುವ ಚಿತ್ರವಿದು. ಈ ಚಿತ್ರದ ಕಥೆ ಕೇಳಿದಾಗ, ಈ ಕಥೆಗೆ ರಚಿತಾ ರಾಮ್ ಅವರೇ ಸೂಕ್ತ ಅನಿಸಿತು. ನಂತರ ಮತ್ತೊಬ್ಬ ನಾಯಕಿಯಾಗಿ ಅದಿತಿ (Aditi Prabhudev) ಚಿತ್ರತಂಡ ಸೇರಿದರು. ಈಗಾಗಲೇ ರಚಿತಾ ರಾಮ್ ಅವರು ಈ ಚಿತ್ರದಲ್ಲಿದ್ದಾರೆ.  ಒಬ್ಬರು ಇರುವಾಗ ಅದಿತಿ ಒಪ್ಪುತ್ತಾರಾ ಎಂಬ ಗೊಂದಲವಿತ್ತು. ಅವರು ಒಂದೇ ಮಾತಿಗೆ ಒಪ್ಪಿಕೊಂಡರು. ನಾಗಭೂಷಣ್, ಶಿವರಾಜ್ ಕೆ.ಆರ್. ಪೇಟೆ, ಪೂರ್ಣ ಎಲ್ಲರೂ ಸ್ನೇಹಿತರು. ಎಲ್ಲರೂ ಚೆನ್ನಾಗಿ ಮಾಡಿದ್ದಾರೆ. ಮುಂದೆ ನನ್ನ ಹಾಗೂ ಅದಿತಿ ಅವರ ಇನ್ನೊಂದು ಹಾಡು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಸೆಪ್ಟೆಂಬರ್ ನಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

    ಈ ಹಾಡಿನ ಚಿತ್ರೀಕರಣದಲ್ಲೇ ಇದು ಬಹಳ ಚೆನ್ನಾಗಿ ಮೂಡಿಬರುತ್ತದೆ ಎಂದೆನಿಸಿತ್ತು. ಅದರಂತೆ ಹಾಡು ಬಹಳ ಚೆನ್ನಾಗಿ ಮೂಡಿಬಂದಿದೆ. ಹಾಡು, ಸಾಹಿತ್ಯ ಬಹಳ ಚೆನ್ನಾಗಿದೆ. ಸಂತು ಬಹಳ ಚೆನ್ನಾಗಿ ನೃತ್ಯ ನಿರ್ದೇಶನ ಮಾಡಿದ್ದಾರೆ. ತುಂಬಾ ಎಂಜಾಯ್ ಮಾಡಿಕೊಂಡು ಚಿತ್ರೀಕರಣ ಮಾಡಿದ್ದೇವೆ. ಪ್ರತಾಪ್ ಅವರು ಅದ್ಭುತ ಸೆಟ್‌ಗಳನ್ನು ಹಾಕಿದ್ದಾರೆ. ಅದರಲ್ಲೂ ಒಂದು ಸೆಟ್ ನಲ್ಲಿ ಚಿತ್ರೀಕರಣ ಮಾಡಿದ್ದು, ಸ್ವಿಟ್ಜರ್ ಲ್ಯಾಂಡ್ ನಲ್ಲಿ ಚಿತ್ರೀಕರಣ ಮಾಡಿದ ಹಾಗನಿಸಿತು. ಇಡೀ ತಂಡದ ಶ್ರಮದಿಂದ ಈ ಹಾಡು ಚೆನ್ನಾಗಿ ಮೂಡಿ ಬಂದಿದೆ. ನಿರ್ದೇಶಕರ ಮನೋಹರ್ ಕಥೆ ಮಾಡಿಕೊಂಡು ಬಂದಾಗ ಖುಷಿಯಾಯಿತು. ಅದ್ಭುತವಾದ ತಾರಾಗಣ ಈ ಚಿತ್ರದಲ್ಲಿದೆ. ಒಳ್ಳೆಯ ಪಾತ್ರವಿದೆ. ಇದರಲ್ಲಿ ಹೊಸ ಶೇಡ್ ಇದೆ. ಟ್ರೈಲರ್ ಬಿಡುಗಡೆಯಾದಾಗ ನನ್ನ ಪಾತ್ರದ ಬಗ್ಗೆ ಗೊತ್ತಾಗುತ್ತದೆ ಎಂದರು ರಚಿತರಾಮ್.

    ಚಿತ್ರಕ್ಕೆ ಹಾಡುಗಳು ಇನ್ವಿಟೇಶನ್ ಎನ್ನುತ್ತೇವೆ. ಅದೇ ರೀತಿ ನಮ್ಮ ಚಿತ್ರದ ಅದ್ಭುತ ಹಾಡನ್ನು ಬಿಡುಗಡೆ ಮಾಡುವ ಮೂಲಕ ಪ್ರೇಕ್ಷಕರನ್ನು ನಮ್ಮ ಚಿತ್ರ ವೀಕ್ಷಣೆಗೆ ಆಹ್ವಾನಿಸುತ್ತಿದ್ದೇವೆ. ಸತೀಶ್ ಹಾಗೂ ರಚಿತಾರಾಮ್ ಅಭಿನಯದ ಈ ಹಾಡು ಅದ್ಭುತವಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದು ಅದಿತಿ ಪ್ರಭುದೇವ ತಿಳಿಸಿದರು.

    ನಿರ್ಮಾಪಕಿ ಪಾರ್ವತಿ ಎಸ್ ಗೌಡ, ನಿರ್ದೇಶಕ ಮನೋಹರ್ ಕಾಂಪಲ್ಲಿ,  ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ, ಪೂರ್ಣಚಂದ್ರ ಮೈಸೂರು ಹಾಗು ನಟರಾದ ನಾಗಭೂಷಣ್, ಶಿವರಾಜ್ ಕೆ.ಆರ್. ಪೇಟೆ ಮುಂತಾದವರು ಮ್ಯಾಟ್ನಿ ಸಿನಿಮಾ ಮತ್ತು ಹಾಡುಗಳ ಕುರಿತು ಮಾತನಾಡಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಳೆ ಸತೀಶ್ ನೀನಾಸಂ ನಟನೆಯ ‘ಮ್ಯಾಟ್ನಿ’ ಚಿತ್ರದ ಹಾಡು ರಿಲೀಸ್

    ನಾಳೆ ಸತೀಶ್ ನೀನಾಸಂ ನಟನೆಯ ‘ಮ್ಯಾಟ್ನಿ’ ಚಿತ್ರದ ಹಾಡು ರಿಲೀಸ್

    ನ್ನಡದ ಹೆಸರಾಂತ ನಟ ಸತೀಶ್ ನೀನಾಸಂ ನಟನೆಯ ‘ಮ್ಯಾಟ್ನಿ’ ಸಿನಿಮಾದ ಹಾಡುಗಳು ನಾಳೆ ಬಿಡುಗಡೆಯಾಗಲಿವೆ. ಈಗಾಗಲೇ ಅಯೋಗ್ಯ ಸಿನಿಮಾದಲ್ಲಿ ಸಖತ್ತಾಗಿ ಹಾಡುಗಳಿಗೆ ಹೆಜ್ಜೆ ಹಾಕಿದ್ದ ಸತೀಶ್ ಮತ್ತು ರಚಿತಾ ರಾಮ್ ಕೂಡ ಈ ಸಿನಿಮಾದಲ್ಲಿ ಇರುವುದರಿಂದ ಹಾಡುಗಳು (Songs)ನಿರೀಕ್ಷೆ ಮೂಡಿಸಿವೆ. ಈ ಸಿನಿಮಾದಲ್ಲಿ ಜೋಡಿ ಯಾವ ರೀತಿಯ ಹಾಡಿಗೆ ಹೆಜ್ಜೆ ಹಾಕಿರಬಹುದು ಎನ್ನುವ ಪ್ರಶ್ನೆ ಮೂಡಿಸಿವೆ.

    ಅಯೋಗ್ಯ’ (Ayogya) ಸಿನಿಮಾದ ಸೂಪರ್ ಹಿಟ್ ಜೋಡಿ ನೀನಾಸಂ ಸತೀಶ್- ಡಿಂಪಲ್ ಕ್ವೀನ್ ರಚಿತಾ ರಾಮ್(Rachita Ram) ಮತ್ತೆ ಜೊತೆಯಾಗಿ ಬರೋದಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಈ ಸಿನಿಮಾದ ಏನು ಅಪ್‌ಡೇಟ್ ಸಿಗದೇ ಬೇಸರದಲ್ಲಿದ್ದ ಫ್ಯಾನ್ಸ್‌ಗೆ ಸಿನಿಮಾ ತಂಡ ಗುಡ್ ನ್ಯೂಸ್ ಕೊಟ್ಟಿದೆ. ಮ್ಯಾಟ್ನಿ (Matinee) ಸಿನಿಮಾ ರಿಲೀಸ್ ಯಾವಾಗ? ಸಿನಿಮಾ ಸಾಂಗ್, ಟೀಸರ್, ಟ್ರೈಲರ್ ರಿಲೀಸ್ ಆಗಲಿ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ‌ ಈಗ ಸಿಹಿಸುದ್ದಿ ಕೊಟ್ಟಿದ್ದಾರೆ. ಇದನ್ನೂ ಓದಿ:ರಾಜೀವ್ ಅಭಿನಯದ ‘ಉಸಿರೇ ಉಸಿರೇ ಚಿತ್ರದ ಫಸ್ಟ್ ಸಾಂಗ್ ರಿಲೀಸ್

    ಏನಮ್ಮಿ ಏನಮ್ಮಿ ಅಂತಾ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಲೆ ಸೃಷ್ಟಿಸಿದ ಜೋಡಿ ಸತೀಶ್ ನೀನಾಸಂ- ರಚಿತಾ ರಾಮ್ ಫೇರ್ ಮತ್ತೆ ಮ್ಯಾಟ್ನಿ ಸಿನಿಮಾದ ಮೂಲಕ ಒಂದಾಗುತ್ತಿದೆ. ಮನೋಹರ್ ಕಾಂಪಳ್ಳಿ ನಿರ್ದೇಶನದ ‘ಮ್ಯಾಟ್ನಿ’ ಸಿನಿಮಾ ಮೂಡಿ ಬಂದಿದೆ. ಸತೀಶ್- ರಚ್ಚು ʼಮ್ಯಾಟ್ನಿʼ ಚಿತ್ರೀಕರಣ ಕೂಡ ಮುಗಿದಿದೆ. ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ.

     

    ಸತೀಶ್ ನೀನಾಸಂಗೆ(Satish Ninasum) ರಚಿತಾ ರಾಮ್ ಮಾತ್ರ ನಾಯಕಿಯಲ್ಲ, ಅದಿತಿ ಪ್ರಭುದೇವ (Aditi Prabhudeva) ಕೂಡ ನಟಿಸಿದ್ದಾರೆ. ರಚಿತಾ ರಾಮ್, ಅದಿತಿ ಪಾತ್ರಕ್ಕೂ ಸಿಕ್ಕಾಪಟ್ಟೆ ಪ್ರಾಮುಖ್ಯತೆಯಿದೆ. ಮ್ಯಾಟ್ನಿ ಮೂಲಕ ಡಿಫರೆಂಟ್ ಆಗಿರೋ ಕಥೆ ಹೇಳೋದ್ದಕ್ಕೆ ಈ ಸ್ಟಾರ್ಸ್ ರೆಡಿಯಾಗಿದ್ದಾರೆ. ಮ್ಯಾಟ್ನಿ ಶೋ ಯಾವಾಗ ಎಂಬುದೇ ಈಗ ಪ್ರಶ್ನೆಯಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸತೀಶ್ ನೀನಾಸಂ ಹುಟ್ಟು ಹಬ್ಬಕ್ಕೆ ‘ಮ್ಯಾಟ್ನಿ’ ಪೋಸ್ಟರ್

    ಸತೀಶ್ ನೀನಾಸಂ ಹುಟ್ಟು ಹಬ್ಬಕ್ಕೆ ‘ಮ್ಯಾಟ್ನಿ’ ಪೋಸ್ಟರ್

    ಸ್ಯಾಂಡಲ್ ವುಡ್ ಹೆಸರಾಂತ ನಟ ಸತೀಶ್ ನೀನಾಸಂ ಇಂದು ಹುಟ್ಟು ಹಬ್ಬವನ್ನು (Birthday) ಆಚರಿಸಿಕೊಳ್ಳುತ್ತಿದ್ದಾರೆ. ಈ ಬಾರಿಯ ಹುಟ್ಟು ಹಬ್ಬಕ್ಕಾಗಿ ಅವರ ‘ಮ್ಯಾಟ್ನಿ’ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಪೋಸ್ಟರ್ ರಿಲೀಸ್ ಮಾಡುವ ಮೂಲಕ ನೆಚ್ಚಿನ ನಟನ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದೆ. ದಸರಾ, ಅಶೋಕ ಬ್ಲೇಡ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿರುವ ಸತೀಶ್, ಇದೀಗ ಮ್ಯಾಟ್ನಿ ಸಿನಿಮಾದ ಬಹುತೇಕ ಕೆಲಸಗಳನ್ನು ಮುಗಿಸಿದ್ದಾರೆ.

    ಮೊನ್ನೆಯಷ್ಟೇ ಸತೀಶ್ ನೀನಾಸಂ (Satish Ninasam) ನಿರೀಕ್ಷಿತ ‘ಮ್ಯಾಟ್ನಿ’ (Matney) ಸಿನಿಮಾದ ಡಬ್ಬಿಂಗ್ (Dubbing) ಮುಗಿಸಿದ್ದಾರೆ. ಈಗಾಗಲೇ ತಮ್ಮ ಭಾಗದ ಮಾತಿನ ಮರುಲೇಪನವನ್ನು ಮಾಡಿರುವುದಾಗಿ ಸತೀಶ್ ಹೇಳಿದ್ದಾರೆ. ಮ್ಯಾಟ್ನಿಗೆ ಡಬ್ಬಿಂಗ್ ಮಾಡುವ ಮೂಲಕ ಚಿತ್ರತಂಡಕ್ಕೆ ಸಿನಿಮಾ ಬಿಡುಗಡೆ ತಯಾರಿಗೆ ಅನುವು ಮಾಡಿಕೊಟ್ಟಿದ್ದಾರೆ.

    ಅಯೋಗ್ಯ ಸಿನಿಮಾದ ಹಿಟ್ ಕಾಂಬಿನೇಶನ್ ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ (Rachita Ram) ಮತ್ತೊಮ್ಮೆ ತೆರೆ ಮೇಲೆ ಮೋಡಿ ಮಾಡಲು ಒಂದಾಗಿರುವ ಚಿತ್ರ ‘ಮ್ಯಾಟ್ನಿ’. ಸ್ಯಾಂಡಲ್‍ವುಡ್ ನಲ್ಲಿ ಹೊಸ ಅಲೆ ಸೃಷ್ಟಿಸಲು ಸಜ್ಜಾಗಿರುವ ಮನೋಹರ್ ಕಾಂಪಲಿ (Manohar Kampali)  ಚೊಚ್ಚಲ ನಿರ್ದೇಶನದ ಚಿತ್ರವಿದು. ಪ್ರೇಮಿಗಳ ದಿನಕ್ಕೆ ಟೀಸರ್ ಉಡುಗೊರೆಯಾಗಿ ನೀಡಿತ್ತು. ಟೀಸರ್ ಬಗ್ಗೆ ಭಾರೀ ಮೆಚ್ಚುಗೆಯ ಮಾತುಗಳು ಕೇಳಿ ಬಂದಿದ್ದವು. ಇದನ್ನೂಓದಿ:ಹೆಣ್ಣು ಮಗುವಿನ ತಂದೆಯಾದ ನಟ ರಾಮ್ ಚರಣ್

    ‘ಮ್ಯಾಟ್ನಿ’ಯ ಟೀಸರ್ ಕಲರ್ ಫುಲ್ ಸೆಟ್, ಮನ ಸೆಳೆಯೋ ಬ್ಯಾಗ್ರೌಂಡ್ ಮ್ಯೂಸಿಕ್, ರಚ್ಚು ಲುಕ್ ಎಲ್ಲವೂ ಕಣ್ಣಿಗೆ ಹಬ್ಬ ನೀಡಿದ್ದರೆ, ಸತೀಶ್ ನೀನಾಸಂ ಪ್ರೇಮ ನಿವೇದನೆ, ಪ್ರೀತಿಯ ಸಾಲುಗಳು ಕಣ್ಮನ ಸೆಳೆದಿದ್ದವು.  ಮನೋಹರ್ ಕಾಂಪಲಿ ಇಬ್ಬರು ಸ್ಟಾರ್ ಜೋಡಿಗೆ ಸರಿ ಹೊಂದುವಂತಹ ಒಂದೊಳ್ಳೆ ಕಥೆ ಹೆಣೆದಿದ್ದು ನಿರ್ದೇಶಕನಾಗಿ ತಮ್ಮನ್ನು ಸಹ ಪ್ರೂವ್ ಮಾಡಿಕೊಳ್ಳಲು ಸಕಲ ತಯಾರಿ ಮಾಡಿಕೊಂಡಿದ್ದಾರೆ.

    ರೋಮ್ಯಾಂಟಿಕ್ ಲವ್ ಸ್ಟೋರಿ ಸಬ್ಜೆಕ್ಟ್ ಇರುವ ಮ್ಯಾಟ್ನಿ ಚಿತ್ರದಲ್ಲಿ ಸತೀಶ್ ನೀನಾಸಂ ಶ್ರೀಮಂತ ಮನೆತನದ ಹುಡುಗನ ಪಾತ್ರಕ್ಕೆ ಬಣ್ಣಹಚ್ಚಿದ್ದು, ಲವರ್ ಬಾಯ್ ಅವತಾರವೆತ್ತಿದ್ದಾರೆ. ಈಗಾಗಲೇ ಅಯೋಗ್ಯ ಸಿನಿಮಾದಲ್ಲಿ ಸತೀಶ್ ಹಾಗೂ ರಚ್ಚು ಜೋಡಿ ಹಿಟ್ ನೀಡಿದ್ದು, `ಮ್ಯಾಟ್ನಿ’ ಸಿನಿಮಾದಲ್ಲೂ ಈ ಜೋಡಿ ಮೋಡಿ ಮಾಡಲಿದೆ ಎನ್ನುವ ನಿರೀಕ್ಷೆಯೂ ಹೆಚ್ಚಿದೆ.

     

    ಸದ್ಯ ಇದೊಂದು ಲವ್ ಸ್ಟೋರಿ ಎಂದಿರುವ ನಿರ್ದೇಶಕರು ಸಿನಿಮಾ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.  ಎಫ್ 3 ಪ್ರೊಡಕ್ಷನ್ಸ್ ಬ್ಯಾನರ್ ನಡಿ ಪಾರ್ವತಿ ಎಸ್ ಗೌಡ ಚಿತ್ರವನ್ನು ನಿರ್ಮಿಸಿದ್ದು, ಲೂಸಿಯ ಖ್ಯಾತಿಯ ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ, ಸುಧಾಕರ್ ಸಿನಿಮಾಟೋಗ್ರಫಿ. ಕೆ.ಎಂ.ಪ್ರಕಾಶ್ ಸಂಕಲನ ಚಿತ್ರಕ್ಕಿದೆ.

  • ಹೊಸ ಭರವಸೆ ಮೂಡಿಸುವ ಲವ್ ಯೂ ಅಭಿ

    ಹೊಸ ಭರವಸೆ ಮೂಡಿಸುವ ಲವ್ ಯೂ ಅಭಿ

    ನ್ನಡದಲ್ಲಿ ವೆಬ್ ಸಿರೀಸ್ (Web Series) ತೀರಾ ಕಡಿಮೆ. ಅದರಲ್ಲೂ ಗುಣಮಟ್ಟದಲ್ಲಿ ತಯಾರಾದ ಕಥೆಗಳು ಇನ್ನೂ ಕಡಿಮೆ. ಈ ಎಲ್ಲ ಕೊರತೆಯನ್ನು ನೀಗಿಸುತ್ತದೆ ವಿಕ್ರಮ್ ರವಿಚಂದ್ರನ್ (Vikram Ravichandran) ಹಾಗೂ ಅದಿತಿ ಪ್ರಭುದೇವ (Aditi Prabhudev) ಕಾಂಬಿನೇಷನ್ ನ ‘ಲವ್ ಯೂ ಅಭಿ’ (Love U AbhiAbhi)ವೆಬ್ ಸಿರೀಸ್. ಗುಣಮಟ್ಟದಲ್ಲಿ ಉತ್ಕೃಷ್ಟತೆ ಮತ್ತು ತಾಂತ್ರಿಕತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ಅದ್ಭುತವಾಗಿ ಏಳು ಕಂತುಗಳನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಕಾಳಿ.

    ಈಗಾಗಲೇ ಮದುವೆಯಾಗಿ ಒಂದು ಮಗುವನ್ನೂ ಹೆತ್ತಿರುವ ಅಭಿ, ತನ್ನದೇ ಆದ ಕನಸುಗಳನ್ನು ಕಟ್ಟಿಕೊಂಡಿರುವ ಶಿವ, ಈ ಜೋಡಿಯ ಜೀವನದಲ್ಲಿ ನಡೆಯುವ ಘಟನೆಗಳೇ ಲವ್ ಯೂ ಅಭಿ ಕಥೆಯ ಜೀವಾಳ. ಶಿವ ಮತ್ತು ಅಭಿ ಪಾತ್ರವನ್ನು ಇಬ್ಬರೂ ನಟರು ಸಮರ್ಥವಾಗಿ ನಿಭಾಯಿಸಿದ್ದಾರೆ.  ಏಳು ಕಂತುಗಳು ಕುತೂಹಲವನ್ನು ಉಳಿಸಿಕೊಂಡು ಕಂತಿನಿಂದ ಕಂತಿಗೆ ಕೊಂಡಿಯಾಗಿ ನೋಡುಗನನ್ನು ಹಿಡಿದಿಡುತ್ತವೆ.

    ಮನರಂಜನಾ ಲೋಕದಲ್ಲೀಗ ಹೊಸ ಆವೇಗ ಸೃಷ್ಟಿಸಿರುವ ಜಿಯೋ ಸಿನಿಮಾ ಕನ್ನಡದಲ್ಲಿ ವೆಬ್ ಸಿರೀಸ್ ಆರಂಭಿಸಿದೆ. ಅದರ ಮೊದಲ ಭಾಗವಾಗಿ ಲವ್ ಯೂ ಅಭಿ ಎಂಬ ಸಿರೀಸ್ ಶುರು ಮಾಡಿದೆ.  ಅಚ್ಚರಿಯ ಸಂಗತಿ ಅಂದರೆ, ಇಲ್ಲಿರುವ ಏಳು ಎಪಿಸೋಡ್ ಗಳನ್ನು ಅದು ಉಚಿತವಾಗಿ ನೋಡುಗನಿಗೆ ನೀಡಿದೆ. ಈ ಮೂಲಕ ಹೊಸ ಕ್ರಾಂತಿಯನ್ನೇ ಶುರು ಮಾಡಿದೆ. ಇದನ್ನೂ ಓದಿ:ಕಾಲೆಳೆದ ನಟಿಗೆ ಸ್ನೇಹದ ಹಸ್ತಚಾಚಿದ ರಶ್ಮಿಕಾ ಮಂದಣ್ಣ

    ಕನ್ನಡ ದೃಶ್ಯಮಾಧ್ಯಮ ಲೋಕಕ್ಕೆ ಹೊಸ ಫ್ಲೇವರ್ ಪರಿಚಯಿಸಲಿರುವ ಈ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಲ್ಲಿ ಹೊಸ ಉತ್ಸಾಹದ ನಟರ ಜೊತೆಗೆ ವಿನಯಾ ಪ್ರಸಾದ್, ರಚಿತಾ ಮಹಾಲಕ್ಷ್ಮಿ, ಅಶೋಕ್ ಶರ್ಮ, ಶ್ರೀನಾಥ್, ಅಂಬಿಕಾ, ಶ್ರೀನಿವಾಸ ಮೂರ್ತಿ, ಸುಂದರ್ರಾಗಜ್‌ ಹೀಗೆ ಅನುಭವಿ ಕಲಾವಿದರ ದಂಡೂ ಇದೆ. ‘ಲವ್‌ ಯು ಅಭಿ’ಗೆ ಅರುಣ್ ಬ್ರಹ್ಮ  ಕ್ಯಾಮೆರಾ ಚಳಕವಿದ್ದು, ಪ್ರದಿಪ್‌ ರಾಘವ್ ಸಂಕಲನ ಮಾಡಿದ್ದಾರೆ. ನಿಜಿಲ್‌ ದಿನಕರ್‍ ಸಂಗೀತ ನಿರ್ದೇಶನ ಮತ್ತು ಧ್ವನಿ ವಿನ್ಯಾಸವನ್ನು ನಿರ್ವಹಿಸಿದ್ದಾರೆ. ಅಭಿಲಾಷ್‌ ಗೌಡ ಮತ್ತು ಜಿ.ವಿ. ಸತೀಶ್‌ ಕುಮಾರ್ ಜಂಟಿಯಾಗಿ ಮಾತು ಪೋಣಿಸಿದ್ದಾರೆ.

    ಪಾತ್ರಗಳ ಆಯ್ಕೆ, ಕಥೆಯನ್ನು ತಗೆದುಕೊಂಡು ಹೋಗಿರುವ ರೀತಿ. ಪ್ರತಿ ಪಾತ್ರಗಳ ಜೀವಂತಿಕೆ. ತಾಂತ್ರಿಕ ಶ್ರೀಮಂತಿಕೆ ಮತ್ತು ಪ್ರತಿ ದೃಶ್ಯವನ್ನು ಕಟ್ಟಿಕೊಟ್ಟ ರೀತಿಯ ಕಾರಣದಿಂದಾಗಿ ಲವ್ ಯೂ ಅಭಿ ಗಮನ ಸೆಳೆಯುತ್ತದೆ. ಮತ್ತಷ್ಟು ಗುಣಮಟ್ಟದ ವೆಬ್ ಸಿರೀಸ್ ಗೆ ಈ ಕಂತುಗಳು ಮುನ್ನುಡಿ ಬರೆಯುತ್ತವೆ.

  • ಕ್ರೇಜಿಸ್ಟಾರ್ ಪುತ್ರನ ಜೊತೆ ವೆಬ್ ಸಿರೀಸ್ ನಲ್ಲಿ ಕಾಣಿಸಿಕೊಂಡ ಅದಿತಿ ಪ್ರಭುದೇವ್

    ಕ್ರೇಜಿಸ್ಟಾರ್ ಪುತ್ರನ ಜೊತೆ ವೆಬ್ ಸಿರೀಸ್ ನಲ್ಲಿ ಕಾಣಿಸಿಕೊಂಡ ಅದಿತಿ ಪ್ರಭುದೇವ್

    ನರಂಜನೆಯ ಹೊಸ ಪರ್ವ ಆರಂಭಿಸಲು ‘JioCinema’ ಓಟಿಟಿ ವೇದಿಕೆ ಸಿದ್ಧವಾಗಿದೆ. ತನ್ನ ವೀಕ್ಷಕರಿಗೆ ವೈವಿಧ್ಯಮಯ ರಂಜನೆಯ ರಸದೂಟ ಉಣಬಡಿಸುವ ಉದ್ದೇಶದ ಭಾಗವಾಗಿ ‘ಲವ್‌ ಯು ಅಭಿ’ (Love You Abhi) ಎಂಬ ಕನ್ನಡ ವೆಬ್‌ ಸಿರೀಸ್‌ (Web Series) ಮೇ 19ರಂದು ‘JioCinema’ದಲ್ಲಿ ನೇರವಾಗಿ ಬಿಡುಗಡೆಗೊಳ್ಳುತ್ತಿದೆ. ಇದನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ. ಕಾಳಿ ವೇಲಾಯುಧಂ ನಿರ್ಮಾಣ ಮಾಡಿ ನಿರ್ದೇಶಿಸಿರುವ ‘JioCinema’ ಒರಿಜಿನಲ್‌ ವೆಬ್‌ ಸಿರೀಸ್‌ನಲ್ಲಿ ಅದಿತಿ ಪ್ರಭುದೇವ (Aditi Prabhudev), ವಿಕ್ರಮ್‌ ರವಿಚಂದ್ರನ್‌ ಮತ್ತು ರವಿಶಂಕರ್‍ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.

    ಎಲ್ಲರೊಳಗೊಬ್ಬ ಶಿವ

    ಹಿರಿಯ ನಟ ರವಿಚಂದ್ರನ್‌ ಅವರ ಪುತ್ರ ವಿಕ್ರಮ್‌ ರವಿಚಂದ್ರನ್ (Vikram Ravichandran) ಅವರಿಗೂ ಇದು ಮೊದಲ ವೆಬ್‌ ಸಿರೀಸ್‌. ತಮ್ಮ ಪಾತ್ರದ ಕುರಿತು ತುಂಬ ಉತ್ಸಾಹದಿಂದ ವಿವರಿಸುತ್ತಾರೆ ವಿಕ್ರಮ್. ‘ಶಿವ ನಿಮ್ಮನ್ನು ಕಾಡುತ್ತಾನೆ, ನಿಮ್ಮ ಮನಸ್ಸನ್ನು ಚುಚ್ಚುತ್ತಾನೆ. ಯಾಕೆಂದರೆ ಈ ಶಿವ ಎಲ್ಲರೊಳಗೂ ಇದ್ದಾನೆ. ಹಲವು ನಿಗೂಢಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಅದನ್ನು ಯಾರೊಂದಿಗೂ ಹಂಚಿಕೊಳ್ಳದ ವ್ಯಕ್ತಿ ಆತ. ಒಂದೊಮ್ಮೆ ಅವನು ಹಂಚಿಕೊಳ್ಳಲು ಯತ್ನಿಸಿದರೂ ಪರಿಸ್ಥಿತಿ ಅದಕ್ಕೆ ವಿರುದ್ಧವಾದ ಸನ್ನಿವೇಶವನ್ನು ಸೃಷ್ಟಿಸಿಬಿಡುತ್ತದೆ. ‘ಪ್ರೇಮ ಮತ್ತು ಯುದ್ಧದಲ್ಲಿ ಎಲ್ಲವೂ ನ್ಯಾಯೋಚಿತವೇ’ ಎಂಬ ಮಾತಿದೆ. ಆದರೆ ಶಿವ ಮತ್ತು ಅವನ ಬದುಕಿನ ವಿಷಯಕ್ಕೆ ಬಂದಾಗ, ಅವನ ಪ್ರೇಮದಲ್ಲಿಯೂ, ಬದುಕಿನಲ್ಲಿ ಹೋರಾಟದಲ್ಲಿಯೂ ನ್ಯಾಯೋಚಿತವಾಗಿದ್ದು ನಡೆಯುವುದೇ ಇಲ್ಲ’. ಎಂದು ತಮ್ಮ ಪಾತ್ರದ ಕುರಿತು ವಿವರಿಸುತ್ತಾರೆ ಶಿವನ ಪಾತ್ರಕ್ಕೆ ಜೀವ ತುಂಬಿದ ವಿಕ್ರಮ್ ರವಿಚಂದ್ರನ್.

    ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಅದಿತಿ ಪ್ರಭುದೇವ ‘ಲವ್‌ ಯು ಅಭಿ’ಯ ಮೂಲಕ ವೆಬ್‌ ಸಿರೀಸ್‌ ಜಗತ್ತಿಗೂ ಜಿಗಿದಿದ್ದಾರೆ. ಇವರಿಬ್ಬರ ಕ್ಯೂಟ್‌ ಕಾಂಬಿನೇಷನ್‌ ಜೊತೆ ಖ್ಯಾತ ನಟ ರವಿಶಂಕರ್‍ ಅವರ ಅಬ್ಬರದ ಭರ್ಜರಿ ಮಸಾಲೆಯೂ ಇದೆ. ಪೊಲೀಸ್‌ ಅಧಿಕಾರಿಯಾಗಿ ರವಿಶಂಕರ್‍ ಅವರ ಆರ್ಭಟವನ್ನು ನೋಡಿಯೇ ಸವಿಯಬೇಕು. ಇದನ್ನೂ ಓದಿ:’ಟೈಗರ್ ನಾಗೇಶ್ವರ್ ರಾವ್’ ಸಿನಿಮಾದ ಕನ್ನಡ ಫಸ್ಟ್ ಲುಕ್ ಗೆ ಶಿವಣ್ಣ ವಾಯ್ಸ್

    ‘ಎಲ್ಲ ಕಲಾವಿದರೂ ತಮ್ಮದೇ ಆದ ರಿದಮ್ ನಲ್ಲಿ, ಮನೋಭಾವದಲ್ಲಿ ನಟಿಸುತ್ತ ಹೋಗುತ್ತಿರುತ್ತೇವೆ. ಕಲಾವಿದರ ಜರ್ನಿ ಹಾಗೆಯೇ ಇರುತ್ತದೆ. ಒಂದೊಂದ್ಸಲ ಅದು ಬ್ರೇಕ್ ಆಗಬೇಕಾಗುತ್ತದೆ. ಅಭಿ ನನ್ನ ನಟನಾಪಯಣವನ್ನು ಹಾಗೆ ಬ್ರೇಕ್ ಮಾಡಿದಂಥ ಪಾತ್ರ. ನನ್ನ ಇಡೀ ವ್ಯಕ್ತಿತ್ವಕ್ಕೇ ಚಾಲೆಂಜ್ ಮಾಡಿದಂಥ ಪಾತ್ರ. ಆ ಪಾತ್ರದಲ್ಲಿ ನಟಿಸುತ್ತ ನನ್ನ ವ್ಯಕ್ತಿತ್ವದಲ್ಲೂ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದೀನಿ. ಐ ಲವ್ ಅಭಿ. ಬಹುಶಃ ತುಂಬ ಜನರಿಗೆ ಅಭಿ ಇಷ್ಟ ಆಗ್ತಾಳೆ’ ಎಂದು ತುಂಬ ವಿಶ್ವಾಸದಿಂದ ಹೇಳುತ್ತಾರೆ ಅದಿತಿ ಪ್ರಭುದೇವ.

    ಪ್ರೇಮ, ವಿರಹ, ಕೊಲೆ, ತನಿಖೆ ಹೀಗೆ ನೋಡುಗರನ್ನು ಕುರ್ಚಿಯ ತುದಿಯಲ್ಲಿ ಕೂಡುವಂತೆ ಮಾಡಬಲ್ಲ ಎಲ್ಲ ಅಂಶಗಳೂ ಇದರಲ್ಲಿದೆ. ಒಂದು ಸಾವಿನ ಸುತ್ತ ಬೆಳೆಯುತ್ತ ಹೋಗುವ ಈ ಕಥನದಲ್ಲಿ ಮನಸ್ಸನ್ನು ಭಾವುಕಗೊಳಿಸುವ ಸನ್ನಿವೇಶಗಳಿವೆ, ದಾಂಪತ್ಯದ ಮಧುರ ಕ್ಷಣಗಳನ್ನು ಉಣಬಡಿಸುವ ದೃಶ್ಯಗಳಿವೆ, ಪ್ರೇಮದ ವ್ಯಾಮೋಹ ಮತ್ತು ಸತ್ಯದ ಹಂಬಲದ ನಡುವಿನ ಘರ್ಷಣೆಯೂ ಇದೆ. ಅನುಮಾನ, ವಂಚನೆ, ಮುಗ್ಧ ಪ್ರೇಮ, ಒಳ್ಳೆಯತನ, ಸ್ವಾರ್ಥ, ಪ್ರಾಮಾಣಿಕತೆ ಎಲ್ಲ ಗುಣಗಳೂ ಸೇರಿ ರೂಪುಗೊಂಡ ಅಪರೂಪದ ರಸಪಾಕ ‘ಲವ್‌ ಯು ಅಭಿ’. ಮೂವತ್ತು ನಿಮಿಷಗಳ ಏಳು ಎಪಿಸೋಡ್‌ಗಳಲ್ಲಿ ಅಭಿಯ ಬದುಕಿನ ಕಥೆಯನ್ನು ಹೇಳಲಾಗಿದೆ.

    ಕನ್ನಡ ದೃಶ್ಯಮಾಧ್ಯಮ ಲೋಕಕ್ಕೆ ಹೊಸ ಫ್ಲೇವರ್ ಪರಿಚಯಿಸಲಿರುವ ಈ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಲ್ಲಿ ಹೊಸ ಉತ್ಸಾಹದ ನಟರ ಜೊತೆಗೆ ವಿನಯಾ ಪ್ರಸಾದ್, ರಚಿತಾ ಮಹಾಲಕ್ಷ್ಮಿ, ಅಶೋಕ್ ಶರ್ಮ, ಶ್ರೀನಾಥ್, ಅಂಬಿಕಾ, ಶ್ರೀನಿವಾಸ ಮೂರ್ತಿ, ಸುಂದರ್‍ರಾಜ್‌ ಹೀಗೆ ಅನುಭವಿ ಕಲಾವಿದರ ದಂಡೂ ಇದೆ.

    ‘ಲವ್‌ ಯು ಅಭಿ’ಗೆ ಅರುಣ್ ಬ್ರಹ್ಮ ಅವರ ಕ್ಯಾಮೆರಾ ಚಳಕವಿದ್ದು, ಪ್ರದಿಪ್‌ ರಾಘವ್ ಸಂಕಲನ ಮಾಡಿದ್ದಾರೆ. ನಿಜಿಲ್‌ ದಿನಕರ್‍ ಸಂಗೀತ ನಿರ್ದೇಶನ ಮತ್ತು ಧ್ವನಿ ವಿನ್ಯಾಸವನ್ನು ನಿರ್ವಹಿಸಿದ್ದಾರೆ. ಅಭಿಲಾಷ್‌ ಗೌಡ ಮತ್ತು ಜಿ.ವಿ. ಸತೀಶ್‌ ಕುಮಾರ್ ಜಂಟಿಯಾಗಿ ಮಾತುಗಳನ್ನು ಪೋಣಿಸಿದ್ದಾರೆ.

  • ಮನಾಲಿ ಚಳಿಯಲ್ಲಿ ಸತೀಶ್ ನೀನಾಸಂ ಜೊತೆ ಹೆಜ್ಜೆ ಹಾಕಿದ ಅದಿತಿ

    ಮನಾಲಿ ಚಳಿಯಲ್ಲಿ ಸತೀಶ್ ನೀನಾಸಂ ಜೊತೆ ಹೆಜ್ಜೆ ಹಾಕಿದ ಅದಿತಿ

    ನ್ನಡದ ಹೆಸರಾಂತ ನಟ ಸತೀಶ್ ನೀನಾಸಂ (Satish Ninasam) ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ನಟನೆಯ ಸಾಲು ಸಾಲು ಚಿತ್ರಗಳು ಹಿಟ್ ಆಗುತ್ತಿದ್ದಂತೆಯೇ ಬಹುಬೇಡಿಕೆಯ ನಟರಾಗಿದ್ದಾರೆ. ಹಾಗಾಗಿ ಅವರ ಕೈಲಿ ಇದೀಗ ನಾಲ್ಕೈದು ಚಿತ್ರಗಳು ಇವೆ. ಒಂದೊಂದೇ ಶೂಟಿಂಗ್ ಮುಗಿಸುತ್ತಿದ್ದಾರೆ. ಸದ್ಯ ಮ್ಯಾಟ್ನಿ (Matney) ಸಿನಿಮಾದ ಹಾಡಿನ ಚಿತ್ರೀಕರಣದಲ್ಲಿ ಅವರು ಬ್ಯುಸಿಯಾಗಿದ್ದು ಶೂಟಿಂಗ್ ಗಾಗಿ ಮನಾಲಿಗೆ (Manali) ಪ್ರಯಾಣ ಬೆಳೆಸಿದ್ದಾರೆ.

    ಸದ್ಯ ಮನಾಲಿಯಲ್ಲಿ ಮ್ಯಾಟ್ನಿ ಸಿನಿಮಾದ ಹಾಡೊಂದರ ಚಿತ್ರೀಕರಣ ನಡೆಯುತ್ತಿದ್ದು, ಈ ಹಾಡಿನಲ್ಲಿ ಸತೀಶ್ ಜೊತೆ ಅದಿತಿ ಪ್ರಭುದೇವ್ (Aditi Prabhudev) ಹೆಜ್ಜೆ ಹಾಕುತ್ತಿದ್ದಾರೆ. ಇದೊಂದು ರೋಮ್ಯಾಂಟಿಕ್ ಗೀತೆಯಾಗಿದ್ದು, ಕೊರವ ಚಳಿಯಲ್ಲಿ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಹಿಮದ ಮಧ್ಯೆ ಈ ಜೋಡಿ ಹಾಡಿಗೆ ಹೆಜ್ಜೆ ಹಾಕುತ್ತಿದೆ. ಇದನ್ನೂ ಓದಿ: ಆಗ ಭಾಯ್, ಈಗ ಪತಿ: ಟ್ರೋಲ್ ಆಯ್ತು ನಟಿ ಸ್ವರಾ ಭಾಸ್ಕರ್ ಪೋಸ್ಟ್

    ಶೂಟಿಂಗ್ ಕುರಿತಾಗಿ ಮಾತನಾಡಿರುವ ಸತೀಶ್, ‘ಈ ಸಿನಿಮಾದ ಅಷ್ಟೂ ಹಾಡುಗಳು ವಿಶೇಷವಾಗಿ ಮೂಡಿ ಬಂದಿವೆ. ರಚಿತಾ (Rachita Ram) ಮತ್ತು ನಾನು ಈ ಹಿಂದೆ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದೆವು. ಆ ಹಾಡು ಕೂಡ ಅದ್ಧೂರಿಯಾಗಿ ಮೂಡಿ ಬಂದಿದೆ. ಇದೀಗ ಅದಿತಿ ಜೊತೆ ಮತ್ತೊಂದು ಹಾಡಿಗೆ ಹೆಜ್ಜೆ ಹಾಕಿರುವೆ. ಮನಾಲಿಯಲ್ಲಿ ಈವರೆಗೂ ಯಾರೂ ಹೋಗಿರದೇ ಇರುವಂಥ ಸ್ಥಳದಲ್ಲಿ ಶೂಟ್ ಮಾಡಲಾಗಿದೆ. ಮೈನಸ್ ಚಳಿ ಇತ್ತು. ಹಿಮ ಬೀಳುತ್ತಿತ್ತು. ಅದೊಂದು ಅದ್ಭುತ ಅನುಭವ’ ಎನ್ನುತ್ತಾರೆ.

    ಈ ಸಿನಿಮಾದ ಮತ್ತೊಂದು ಹಾಡಿದ್ದು, ಆ ಹಾಡಿನ ಚಿತ್ರೀಕರಣದ ನಂತರ ಮ್ಯಾಟ್ನಿ ಸಂಪೂರ್ಣ ಶೂಟಿಂಗ್ ಮುಗಿಸಲಿದೆ. ಈ ಸಿನಿಮಾವನ್ನು ಮನೋಹರ್ ಕಾಂಪಲ್ಲಿ ನಿರ್ದೇಶನ ಮಾಡುತ್ತಿದ್ದು, ಪಾರ್ವತಿ ನಿರ್ಮಾಪಕರು. ಪೂರ್ಣ ಚಂದ್ರ ತೇಜಸ್ವಿ ಅವರ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬಂದಿದೆ. ಶಿವರಾಜ್ ಕೆ.ಆರ್ ಪೇಟೆ ಸೇರಿದಂತೆ ನುರಿತ ಕಲಾವಿದರೇ ತಾರಾಗಣದಲ್ಲಿ ಇದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k