Tag: Adithyanath

  • ಯೋಗಿ ಆದಿತ್ಯನಾಥ್‍ಗೆ ಅವರ ಚಪ್ಪಲಿಯಿಂದಲೇ ಹೊಡೆಯಬೇಕು ಅನ್ನಿಸಿತು: ಉದ್ದವ್ ಠಾಕ್ರೆ

    ಯೋಗಿ ಆದಿತ್ಯನಾಥ್‍ಗೆ ಅವರ ಚಪ್ಪಲಿಯಿಂದಲೇ ಹೊಡೆಯಬೇಕು ಅನ್ನಿಸಿತು: ಉದ್ದವ್ ಠಾಕ್ರೆ

    ಮುಂಬೈ: ಯೋಗಿ ಆದಿತ್ಯನಾಥ್ ಅವರ ಇತ್ತೀಚೆಗೆ ಪಾಲ್ಗರ್ ಭೇಟಿ ವೇಳೆ ಅವರ ಚಪ್ಪಲಿಯಿಂದಲೇ ಅವರಿಗೆ ಹೊಡೆಯಬೇಕು ಅಂತ ಅನ್ನಿಸಿತು ಎಂದು ಶಿವಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ ಕಿಡಿ ಕಾರಿದ್ದಾರೆ.

    ಯೋಗಿಯವರು ಚಪ್ಪಲಿ ಹಾಕಿಕೊಂಡೆ ಮರಾಠ ಯೋಧ ಛತ್ರಪತಿ ಶಿವಾಜಿಯವರ ಫೋಟೋಕ್ಕೆ ಹಾರವನ್ನು ಹಾಕಿದ್ದನ್ನು ನೋಡಿ ಅದೇ ಚಪ್ಪಲಿಯಿಂದ ಅವರ ಮುಖಕ್ಕೆ ಹೊಡೆಯುವ ಮನಸ್ಸಾಯಿತು. ಯೋಗಿಯವರು ಕಪಟವೇಷಧಾರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಿಎಂ ಆದಿತ್ಯನಾಥ್ ಯೋಗಿ ಅಲ್ಲ ಒಬ್ಬ ಭೋಗಿ. ಯೋಗಿ ಅಗಿದ್ದರೆ ಎಲ್ಲವನ್ನು ತ್ಯಜಿಸಿ ಗುಹೆಯಲ್ಲಿ ಕೂರಬೇಕಿತ್ತು. ಇವರು ಮುಖ್ಯಮಂತ್ರಿ ಗಾದಿಯಲ್ಲಿ ಕೂತಿದ್ದಾರೆ ಎಂದು ವ್ಯಂಗ್ಯವಾಡಿದರು.

    ಈ ಹಿಂದಿನ ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅವರು ತಮ್ಮ ದಾರಿಯಲ್ಲಿ ಬರುವವರನ್ನು ಬಿಜೆಪಿ ಕೊಲೆಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

    ಮುಂದಿನ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದೇವೆ. ನಾಸಿಕ್ ಮತ್ತು ಪರ್ಭಾನಿ ಹಾಗೂ ಪಾಲ್ಗರ್ ಲೋಕಸಭಾ ಉಪಚುನಾವಣೆ ಗೆಲುವು ವಿಜಯದ ಟ್ರೇಲರ್ ಅಷ್ಟೆ. ಮುಂದಿನ ನಮ್ಮ ಹೆಜ್ಜೆಗಳು ಮಹಾರಾಷ್ಟ್ರ ರಾಜಕಾರಣದ ದಿಶೆಯನ್ನೇ ಬದಲಾಯಿಸುತ್ತದೆ ಎಂದು ಗುಡುಗಿದರು.