ಸೌತ್ ನಟಿ ಸಮಂತಾ (Samantha) ಮತ್ತೆ ಸಿನಿಮಾಗಳಲ್ಲಿ ಆ್ಯಕ್ಟಿವ್ ಆಗಿದ್ದಾರೆ. ‘ಸಿಟಾಡೆಲ್’ ಬಳಿಕ ಮತ್ತೊಂದು ಬಾಲಿವುಡ್ ಪ್ರಾಜೆಕ್ಟ್ ಅನ್ನು ಒಪ್ಪಿಕೊಂಡಿದ್ದಾರೆ. ‘ಆಶಿಕಿ 2’ ಆದಿತ್ಯಾ ರಾಯ್ ಕಪೂರ್ (Aditya Rou Kapoor) ಜೊತೆ ಸಮಂತಾ ರೊಮ್ಯಾನ್ಸ್ ಮಾಡಲು ರೆಡಿಯಾಗಿದ್ದಾರೆ. ಇದನ್ನೂ ಓದಿ:ಹಾಲಿವುಡ್‌ನತ್ತ ರಕ್ಕಮ್ಮ- ಆ್ಯಕ್ಷನ್ ಅವತಾರ ತಾಳಿದ ಜಾಕ್ವೆಲಿನ್
ವಿಜಯ್ ದೇವರಕೊಂಡ ಜೊತೆಗಿನ ‘ಖುಷಿ’ (Kushi) ಸಿನಿಮಾದ ರಿಲೀಸ್ ಬಳಿಕ ಸಮಂತಾ ನಟಿಸುತ್ತಿರುವ ಪ್ರಾಜೆಕ್ಟ್ ಬಗ್ಗೆ ಯಾವುದೇ ಅಪ್ಡೇಟ್ ಸಿಕ್ಕಿರಲಿಲ್ಲ. ಖುಷಿ ಸಿನಿಮಾ ನಟಿಸುತ್ತಿದ್ದ ವೇಳೆ ‘ಸಿಟಾಡೆಲ್ ಹನಿ ಬನಿ’ ವೆಬ್ ಸರಣಿ ಇದೇ ನವೆಂಬರ್‌ನಲ್ಲಿ ರಿಲೀಸ್ ಆಗಲಿದೆ. ಈಗ ಅಭಿಮಾನಿಗಳು ಖುಷಿಪಡುವಂತಹ ಸಿಹಿಸುದ್ದಿ ಸಿಕ್ಕಿದೆ.
ರಾಜ್ ಮತ್ತು ಡಿಕೆ ನಿರ್ಮಾಣದ ಹೊಸ ವೆಬ್ ಸರಣಿ ‘ರಕ್ತ ಬ್ರಹ್ಮಾಂಡ್’ದಲ್ಲಿ ಸಮಂತಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಸೆಟ್‌ಗೆ ಎಂಟ್ರಿ ಕೊಟ್ಟಿರುವ ಬಗ್ಗೆ ನಟಿ ಬರೆದುಕೊಂಡಿದ್ದಾರೆ. ಹಲವು ತಿಂಗಳುಗಳ ನಂತರ ಸೆಟ್‌ಗೆ ಮರಳಿರೋದು ಖುಷಿ ಇದೆ ಎಂದಿದ್ದಾರೆ. ಅಂದಹಾಗೆ, ಸಮಂತಾಗೆ ರಾಹಿ ಅನಿಲ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇವತ ಜೊತೆಗೆ ಆದಿತ್ಯಾ ರಾಯ್ ಕಪೂರ್, ವಮಿಕಾ ಗಬ್ಬಿ, ಅಲಿ ಫಜಲ್ ಕೂಡ ನಟಿಸುತ್ತಿದ್ದಾರೆ.
ಮೊದಲ ಬಾರಿಗೆ ಆದಿತ್ಯಾ ರಾಯ್ ಕಪೂರ್ ಮತ್ತು ಸಮಂತಾ ಜೊತೆಯಾಗಿ ಕಾಣಿಸಿಕೊಳ್ತಿದ್ದಾರೆ. ಈ ಪ್ರಾಜೆಕ್ಟ್ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.
‘ಲೈಗರ್’ (Liger) ನಟಿ ಅನನ್ಯಾ ಪಾಂಡೆ (Ananya Panday) ಮತ್ತು ಆದಿತ್ಯ ರಾಯ್ ಕಪೂರ್ (Aditya Roy Kapoor) ನಡುವೆ ಡೇಟಿಂಗ್ ವದಂತಿಗಳು ಹೊಸದೇನಲ್ಲ. ಆದರೆ ಈ ಜೋಡಿ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬೆನ್ನಲ್ಲೇ ಆದಿತ್ಯ ರಾಯ್ ಕಪೂರ್ ಅವರು ಸಾರಾ ಅಲಿ ಖಾನ್ (Sara Ali Khan) ಅವರೊಂದಿಗೆ ಪಾರ್ಟಿಯೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾರ್ಟಿಯ ಹಲವು ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ವೈರಲ್ ಆದ ಫೋಟೋದಲ್ಲಿ ಆದಿತ್ಯ ಮತ್ತು ಸಾರಾ ಅವರು ನಿರ್ಮಾಪಕ ಅನುರಾಗ್ ಬಸು ಅವರೊಂದಿಗೆ ಸಮಯವನ್ನು ಕಳೆಯುತ್ತಿರುವುದು ಕಾಣಬಹುದು. ‘ಮೆಟ್ರೋ ಇನ್ ಡಿನೋ’ ಸಿನಿಮಾ ಸೆಟ್‌ನಲ್ಲಿ ಆಯೋಜಿಸಲಾದ ನಿರ್ದೇಶಕರ ಹುಟ್ಟುಹಬ್ಬದ ಸಂದರ್ಭದ ಫೋಟೋಗಳಿವು ಎನ್ನಲಾಗುತ್ತಿದೆ. ಆದಿತ್ಯ ಮತ್ತು ಸಾರಾ ಚಿತ್ರಗಳಲ್ಲಿ ಪರಸ್ಪರ ಹತ್ತಿರವಾಗಿ ನಿಂತಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ಗೆ ಹಾರಿದ ಕನ್ನಡತಿ- ಡೈರೆಕ್ಟರ್ ವಿಕ್ರಮ್ ಭಟ್ ಸಿನಿಮಾದಲ್ಲಿ ಶ್ರುತಿ ಪ್ರಕಾಶ್
ಅಂದಹಾಗೆ, ಅನನ್ಯಾ ಮತ್ತು ಆದಿತ್ಯ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ವದಂತಿ 2022ರಲ್ಲಿ ಶುರುವಾಗಿತ್ತು. 2022ರಲ್ಲಿ ಕೃತಿ ಸನೂನ್ ಅವರ ದೀಪಾವಳಿ ಪಾರ್ಟಿಯಲ್ಲಿ ಜೋಡಿ ಕಾಣಿಸಿಕೊಂಡಾಗ ವದಂತಿ ಸುದ್ದಿಗಳು ಮತ್ತಷ್ಟು ಹೆಚ್ಚಾಯ್ತು. ಅಂಬಾನಿ ಮನೆ ಮಗನ ವಿವಾಹ ಪೂರ್ವ ಕಾರ್ಯಕ್ರಮದಲ್ಲಿಯೂ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದರು.
ಕಾರ್ತಿಕ್ ಆರ್ಯನ್ (Sara Ali Khan) ಜೊತೆ ಸಾರಾ ಬ್ರೇಕಪ್ ಮಾಡಿಕೊಂಡು ಸಿಂಗಲ್ ಲೈಫ್ ಲೀಡ್ ಮಾಡುತ್ತಾ ಇದ್ದರು. ಅನನ್ಯಾ ಪ್ರೀತಿಗೆ ಗುಡ್ ಬೈ ಹೇಳಿರೋ ಆದಿತ್ಯಾ ಇದೀಗ ಸಾರಾ ಜೊತೆ ಹೊಸ ಪ್ರೇಮ ಕಹಾನಿ ಶುರು ಮಾಡುತ್ತಾರಾ? ಎಂದು ಕಾದುನೋಡಬೇಕಿದೆ.
ಬಾಲಿವುಡ್‌ನ (Bollywood) ನಯಾ ಜೋಡಿ ಅನನ್ಯಾ ಪಾಂಡೆ- ಆದಿತ್ಯ ರಾಯ್ ಕಪೂರ್ (Adithya Roy Kapoor) ಅವರು ರೊಮ್ಯಾಂಟಿಕ್ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಪೋರ್ಚುಗಲ್‌ನಲ್ಲಿ ಈ ಲವ್ ಬರ್ಡ್ಸ್ ಫೋಟೋಗ್ರಾಫರ್ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ.
ಕೆ.ಎಲ್ ರಾಹುಲ್- ಅಥಿಯಾ ಶೆಟ್ಟಿ, ಸಿದ್- ಕಿಯಾರಾ ಜೋಡಿಯಂತೆ ಮತ್ತೊಂದು ಹೊಸ ಜೋಡಿ ಹಸೆಮಣೆ ಏರುವ ಸುದ್ದಿ ಕೊಡ್ತಾರಾ ಕಾಯಬೇಕಿದೆ. ಸದ್ಯ ಮುಂಬೈ ಗಲ್ಲಿ ಮತ್ತು ವಿದೇಶದಲ್ಲೂ ಅನನ್ಯಾ ಪಾಂಡೆ(Ananya Panday) – ಆದಿತ್ಯ ರಾಯ್ ಕಪೂರ್ ಜೋಡಿ ಕೈ ಕೈ ಹಿಡಿದು ಓಡಾಡುತ್ತಿದ್ದಾರೆ. ಇಬ್ಬರ ಡೇಟಿಂಗ್ ಬಗ್ಗೆ ಸಾಕಷ್ಟು ಸುದ್ದಿ ಸೌಂಡ್ ಮಾಡ್ತಿದೆ.
ಕೆಲ ದಿನಗಳ ಹಿಂದೆ ಸ್ಪೇನ್‌ನಲ್ಲಿ ಅನನ್ಯಾ- ಆದಿತ್ಯ ಜೋಡಿ ಒಟ್ಟಿಗೆ ಇರುವ ರೊಮ್ಯಾಂಟಿಕ್ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಈಗ ಇಬ್ಬರು ಪೋರ್ಚುಗಲ್‌ನ (Portugal) ರೆಸ್ಟೋರೆಂಟ್‌ವೊಂದರಲ್ಲಿ ಅನನ್ಯಾ- ಆದಿತ್ಯ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರ ಕಣ್ ಸಲಿಗೆ ಫೋಟೋ ಸಖತ್ ವೈರಲ್ ಆಗುತ್ತಿದೆ.
ಸಾಕಷ್ಟು ವರ್ಷಗಳಿಂದ ಆದಿತ್ಯ- ಅನನ್ಯಾ ಪಾಂಡೆ ಇಬ್ಬರು ಪರಿಚಿತರು. ಹಾಗಾಗಿ ಡೇಟಿಂಗ್ ಸುದ್ದಿಗೆ ಈ ಜೋಡಿಯ ನಯಾ ಪುಷ್ಟಿ ನೀಡುತ್ತಿದೆ. ಇಬ್ಬರೂ ಅವರು ಪ್ರತ್ಯೇಕವಾಗಿ ವಿಮಾನ ಏರಿ ವಿದೇಶಕ್ಕೆ ತೆರಳಿದ್ದಾರೆ. ಆದರೆ ಅವರಿಬ್ಬರೂ ಹೋಗಿರುವುದು ಒಂದೇ ಲೊಕೇಷನ್‌ಗೆ. ಸ್ಪೇನ್‌ನಲ್ಲಿ ಸಂಗೀತ ಕಾರ್ಯಕ್ರಮವೊಂದಕ್ಕೆ ಅವರು ಹಾಜರಿ ಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸ್ಟೋರಿಗಳನ್ನು ಅಪ್‌ಲೋಡ್ ಮಾಡಿಕೊಂಡಿದ್ದಾರೆ. ಇಬ್ಬರ ಸ್ಟೋರಿಯಲ್ಲೂ ಸಾಮ್ಯತೆ ಇರುವುದರಿಂದ ಅಭಿಮಾನಿಗಳಿಗೆ ಎಲ್ಲವೂ ಸ್ಪಷ್ಟವಾಗಿದೆ. ಇಷ್ಟೇ ಅಲ್ಲ, ಅವರಿಬ್ಬರ ನಡುವಿನ ಆಪ್ತತೆಗೆ ಸಾಕ್ಷಿ ಒದಗಿಸುವಂತಹ ಇನ್ನೊಂದು ಫೋಟೋ ಕೂಡ ವೈರಲ್ ಆಗಿದೆ. ಇದನ್ನೂ ಓದಿ:ತೆಲುಗಿನ ಮತ್ತೊಬ್ಬ ನಟಿಯ ದಾಂಪತ್ಯದಲ್ಲಿ ಬಿರುಕು- ಪತಿ ಜೊತೆ ಸ್ವಾತಿ ರೆಡ್ಡಿ ಡಿವೋರ್ಸ್?
ಅನನ್ಯಾರನ್ನು ಆದಿತ್ಯ ಅವರು ಹಿಂಬದಿಯಿಂದ ತಬ್ಬಿಕೊಂಡು ನಿಂತಿರುವ ಫೋಟೋ ಸದ್ದು ಮಾಡುತ್ತಿದೆ. ಇದನ್ನು ನೋಡಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಇಷ್ಟು ದಿನಗಳ ಕಾಲ ಈ ಜೋಡಿ ಹಕ್ಕಿಗಳು ತಮ್ಮ ಪ್ರೀತಿ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಆದರೆ ಈಗ ಎಲ್ಲವೂ ಬಟಾಬಯಲಾಗಿದೆ. ಕದ್ದು-ಮುಚ್ಚಿ ಡೇಟಿಂಗ್ ಮಾಡುತ್ತಿರುವ ರಹಸ್ಯ ರಿವೀಲ್ ಆಗಿದೆ. ಫ್ಯಾನ್ಸ್ ಬಗೆ ಬಗೆಯ ರೀತಿಯಲ್ಲಿ ಕಾಮೆಂಟ್ ಮಾಡ್ತಿದ್ದಾರೆ.ಇನ್ನೂ ಕೆಲವು ತಿಂಗಳುಗಳ ಹಿಂದೆ ಇವೆಂಟ್‌ವೊಂದರಲ್ಲಿ ಇಬ್ಬರು ಜೊತೆಯಾಗಿ ರ‍್ಯಾಂಪ್ ವಾಕ್ ಮಾಡಿದ್ದು. ಜೋಡಿಯಾಗಿ ಹಲವು ಇವೆಂಟ್‌ನಲ್ಲಿ ಭಾಗಿಯಾಗುತ್ತಿದ್ದರು. ಅಂದಿನ ಆದಿತ್ಯ- ಅನನ್ಯಾ ಅವರ ಫೋಟೋಶೂಟ್ ಸಖತ್ ವೈರಲ್ ಆಗಿತ್ತು. ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದರು ಕೂಡ ತಮ್ಮ ರಿಲೇಷನ್‌ಶಿಪ್ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿಲ್ಲ.