Tag: Adipurush

  • ʻಆದಿಪುರುಷ್‌ʼ ಸಿನಿಮಾದ ಹಿರಿಯ ನಟಿ ಆಶಾ ಶರ್ಮಾ ನಿಧನ

    ʻಆದಿಪುರುಷ್‌ʼ ಸಿನಿಮಾದ ಹಿರಿಯ ನಟಿ ಆಶಾ ಶರ್ಮಾ ನಿಧನ

    ʻಆದಿಪುರುಷ್‌ʼ (Adipurush) ಸಿನಿಮಾದಲ್ಲಿ ಡಾರ್ಲಿಂಗ್‌ ಪ್ರಭಾಸ್‌ ಜೊತೆ ನಟಿಸಿದ್ದ ಹಿರಿಯ ನಟಿ ಆಶಾ ಶರ್ಮಾ (Asha Sharma) (88) ಭಾನುವಾರ ನಿಧನರಾಗಿದ್ದಾರೆ.

    ಏಕ್ತಾ ಕಪೂರ್‌ ಅವರ ಹಿಟ್‌ ಶೋ ʻಕುಂಕುಮ್‌ ಭಾಗ್ಯʼ (Kumkum Bhagya) ಮೂಲಕ ಜನಪ್ರಿಯರಾಗಿದ್ದ ಹಿರಿಯ ನಟಿ 88‌ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ. ಆಕೆಯ ಸಾವಿಗೆ ಇನ್ನೂ ಕಾರಣ ಬಹಿರಂಗಪಡಿಸಿಲ್ಲ.

    ಆಶಾ ಶರ್ಮಾ ನಿಧನಕ್ಕೆ ಸಿನಿ ಮತ್ತು ಟಿವಿ ಆರ್ಟಿಸ್ಟ್ಸ್ ಅಸೋಸಿಯೇಷನ್ ​​(CINTAA) ಎಕ್ಸ್‌ ಖಾತೆಯಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಸಂತಾಪ ಸೂಚಿಸಿದೆ. ಜೊತೆಗೆ ಹಿರಿಯ ನಟಿ ಹೇಮಾ ಮಾಲಿನಿ, ಪ್ರೇಮ್ ಚೋಪ್ರಾ, ಅರುಣಾ ಇರಾನಿ ಮತ್ತು ನಿರುಪಾ ರಾಯ್ ಸೇರಿದಂತೆ ಬಾಲಿವುಡ್‌ನ ಹಿರಿಯ ನಟ-ನಟಿಯರು ಕಂಬನಿ ಮಿಡಿದಿದ್ದಾರೆ.

    ʻಕುಂಕುಮ್‌ ಭಾಗ್ಯʼ ಡ್ರಾಮಾ ಶೋ ಮೂಲಕ ಜನಪ್ರಿಯವಾಗಿದ್ದ ನಟಿ ಹೆಚ್ಚಾಗಿ ತಾಯಿ ಮತ್ತು ಅಜ್ಜಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಕೊನೆಯದಾಗಿ ಪ್ರಭಾಸ್‌ ಹಾಗೂ ಕೃತಿ ಸನೋನ್‌ ನಟನೆಯ ʻಆದಿಪುರುಷ್‌ʼ ಸಿನಿಮಾದಲ್ಲಿ ʻಶಬರಿʼ ಪಾತ್ರ ನಿರ್ವಹಿಸಿದ್ದರು. ಇವರ ಪಾತ್ರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.

  • ನಾನಿನ್ನೂ ಸಿಂಗಲ್ ಆದರೆ ಮದುವೆಗೆ ರೆಡಿ ಎಂದ ಕೃತಿ ಸನೋನ್

    ನಾನಿನ್ನೂ ಸಿಂಗಲ್ ಆದರೆ ಮದುವೆಗೆ ರೆಡಿ ಎಂದ ಕೃತಿ ಸನೋನ್

    ಬಾಲಿವುಡ್ (Bollywood) ಬ್ಯೂಟಿ ಕೃತಿ ಸನೋನ್ (Kriti Sanon) ಇತ್ತೀಚೆಗೆ ‘ಮಿಮಿ’ (Mimi Film) ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಈಗ ಮದುವೆ ವಿಚಾರವಾಗಿ ನಟಿ ಮತ್ತೆ ಸುದ್ದಿಯಲ್ಲಿದ್ದಾರೆ. ನಾನಿನ್ನೂ ಸಿಂಗಲ್ ಆದರೆ ಮದುವೆಗೆ ರೆಡಿ ಎಂದು ಸಂದರ್ಶನವೊಂದರಲ್ಲಿ ಕೃತಿ ತಮ್ಮ ಹುಡುಗ (Partner) ಹೇಗಿರಬೇಕು ಎಂದು ರಿವೀಲ್ ಮಾಡಿದ್ದಾರೆ.

    ಕೃತಿ ಸನೋನ್ ಎಂಗೇಜ್ ಆಗಿದ್ದಾರೆ ಎನ್ನುವಂತಹ ಸುದ್ದಿಗಳು ಆಗಾಗ ಟಾಕ್ ಆಗುತ್ತಿರುತ್ತದೆ. ಈಗ ಸಂದರ್ಶನವೊಂದರಲ್ಲಿ ತನ್ನ ಬಾಳ ಸಂಗಾತಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನಾನಿನ್ನೂ ಸಿಂಗಲ್ ಎಂದು ಕೃತಿ ಹೇಳಿಕೆ ನೀಡಿರೋದು ಪಡ್ಡೆಹುಡುಗರಿಗೆ ಅಚ್ಚರಿಯ ಜೊತೆ ಖುಷಿ ಕೊಟ್ಟಿದೆ. ಇದನ್ನೂ ಓದಿ: ಮಂತ್ರಿಯೊಂದಿಗೆ ನನ್ನ ಪತ್ನಿಗೆ ಅಫೇರ್ ಇತ್ತು- ಶಾಕಿಂಗ್ ಹೇಳಿಕೆ ಕೊಟ್ಟ ಸಂಜಯ್ ದತ್

    ನಾನು ಒಂಟಿ ಆದರೆ ಮದುವೆಯಾಗಲು (Wedding) ರೆಡಿ, ಆ ಹುಡುಗನಲ್ಲಿ ಕೆಲವು ಗುಣಗಳು ಇರಲೇಬೇಕು ಎಂದು ತಮ್ಮ ಮನದಾಸೆಯನ್ನ ನಟಿ ಹಂಚಿಕೊಂಡಿದ್ದಾರೆ. ಪ್ರೀತಿಯಲ್ಲಿ ಪ್ರಾಮಾಣಿಕತೆಯನ್ನು ಬಯಸುತ್ತೇನೆ. ತನಗಿಂತ ತಾನು ಮದುವೆಯಾಗುವ ಹುಡುಗ ಎತ್ತರವಿರಬೇಕು. ಒಳ್ಳೆಯ ಮನುಷ್ಯನಾಗಿರಬೇಕು ಎಂದು ನಟಿ ಹೇಳಿದ್ದಾರೆ.

    ಕೃತಿ ಸನೋನ್ ಅವರ ಹೆಸರು ಬಾಹುಬಲಿ (Bahubali) ನಟ ಪ್ರಭಾಸ್ (Prabhas) ಜೊತೆ ಸದ್ದು ಮಾಡಿತ್ತು. ಇಬ್ಬರು ಪ್ರೀತಿಯಲ್ಲಿದ್ದಾರೆ, ಸದ್ಯದಲ್ಲೇ ಮದುವೆ ಕೂಡ ಆಗುತ್ತಾರೆ ಎಂದು ಸುದ್ದಿಯಾಗಿತ್ತು.

    ಶಾಹಿದ್ ಕಪೂರ್ (Shahid Kapoor) ಜೊತೆ ಕೃತಿ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಮುಂದಿನ ವರ್ಷ ಈ ಚಿತ್ರ ತೆರೆಗೆ ಬರಲಿದೆ. ಹೊಸ ಬಗೆಯ ಪಾತ್ರಗಳತ್ತ ನಟಿ ಎದುರು ನೋಡುತ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಆದಿಪುರುಷ್’ ಸೋಲಿನ ಬಳಿಕ ಮಾಸ್ ಆಗಿ ಎಂಟ್ರಿ ಕೊಟ್ರು ಕೃತಿ ಸನೋನ್

    ‘ಆದಿಪುರುಷ್’ ಸೋಲಿನ ಬಳಿಕ ಮಾಸ್ ಆಗಿ ಎಂಟ್ರಿ ಕೊಟ್ರು ಕೃತಿ ಸನೋನ್

    ಬಾಲಿವುಡ್ ಬ್ಯೂಟಿ ಕೃತಿ ಸನೋನ್ (Kriti Sanon) ‘ಆದಿಪುರುಷ್’ (Adipurush) ಸೋಲಿನ ಬಳಿಕ ‘ಗಣಪತ್’ (Ganapath) ಸಿನಿಮಾ ಮೂಲಕ ಸದ್ದು ಮಾಡ್ತಿದ್ದಾರೆ. ಟೈಗರ್ ಶ್ರಾಫ್ ನಟನೆಯ ‘ಗಣಪತ್: ಎ ಹೀರೋ ಈಸ್ ಬಾರ್ನ್’ ಕೃತಿ ನಾಯಕಿಯಾಗಿದ್ದು, ಚಿತ್ರದ ಪೋಸ್ಟರ್ ರಿವೀಲ್ ಆಗಿದೆ. ಸೀತೆಯಾಗಿ ಗಮನ ಸೆಳೆದ ನಟಿ ಈಗ ಮಾಸ್ & ಕ್ಲಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ.

    ಗಣಪತಿ ಹಬ್ಬದಂದು ‘ಗಣಪತ್: ಎ ಹೀರೋ ಈಸ್ ಬಾರ್ನ್’ ಕೃತಿ ಸನೋನ್ ಲುಕ್ ರಿವೀಲ್ ಆಗಿದೆ. ಸಖತ್ ರಗಡ್ ಆಗಿ ನಟಿ ಕಾಣಿಸಿಕೊಂಡಿದ್ದಾರೆ. ನಟಿಯ ಹೊಸ ಪ್ರಯತ್ನಕ್ಕೆ ಅಭಿಮಾನಿಗಳು ಭೇಷ್ ಎಂದಿದ್ದಾರೆ. ಇದನ್ನೂ ಓದಿ:‘ಆದಿಪುರುಷ್’ ಸೋಲಿನ ಬಳಿಕ ಮಾಸ್ ಆಗಿ ಎಂಟ್ರಿ ಕೊಟ್ರು ಕೃತಿ ಸನೋನ್

     

    View this post on Instagram

     

    A post shared by Pooja Entertainment (@pooja_ent)

    ಟೈಗರ್ ಶ್ರಾಫ್‌ಗೆ ಕೃತಿ ನಾಯಕಿಯಾಗಿ ನಟಿಸಿದ್ದಾರೆ. ಅಮಿತಾಭ್ ಬಚ್ಚನ್ ಸ್ಪೆಷಲ್ ರೋಲ್‌ನಲ್ಲಿ ನಟಿಸಿದ್ದಾರೆ. ಇದೊಂದು ಪಕ್ಕಾ ಆ್ಯಕ್ಷನ್ ಕಮ್ ಲವ್‌ಸ್ಟೋರಿಯಾಗಿದೆ. ಸಿನಿಮಾ ಕಥೆ ಕೂಡ ಭಿನ್ನವಾಗಿದೆ.

    ಅಕ್ಟೋಬರ್ 20ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಿಂದಿ, ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಚಾರಣೆಗೆ ಬರುವಂತೆ ‘ಆದಿ ಪುರುಷ’ ತಂಡಕ್ಕೆ ಹೈಕೋರ್ಟ್ ಸೂಚನೆ

    ವಿಚಾರಣೆಗೆ ಬರುವಂತೆ ‘ಆದಿ ಪುರುಷ’ ತಂಡಕ್ಕೆ ಹೈಕೋರ್ಟ್ ಸೂಚನೆ

    ದಿ ಪುರುಷ ಸಿನಿಮಾವನ್ನು ನಿಷೇಧಿಸುವಂತೆ ಕೋರಿ ಕುಲದೀಪ್ ತಿವಾರಿ ಹಾಗೂ ನವೀನ್ ಧವನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ನಡೆಸಿದ ಅಲಹಾಬಾದ್ ಹೈಕೋರ್ಟಿನ ನ್ಯಾಯಮೂರ್ತಿಗಳಾದ ರಾಜೇಶ್ ಸಿಂಗ್ ಚೌಹಾನ್ ಮತ್ತು ಪ್ರಕಾಶ್ ಸಿಂಗ್ ಅವರಿದ್ದ ದ್ವಿಸದಸ್ಯ ಪೀಠ  ಜುಲೈ 27ಕ್ಕೆ ಸಿನಿಮಾದ ನಿರ್ದೇಶಕ ಓಂ ರಾವುತ್, ನಿರ್ಮಾಪಕ ಭೂಷಣ್ ಕುಮಾರ್ ಹಾಗೂ ಬರಹಗಾರ ಮನೋಜ್ ಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.

    ಅಲ್ಲದೇ, ಈ ಸಿನಿಮಾವು ಸಾರ್ವಜನಿಕರ ಭಾವನೆಗೆ ಧಕ್ಕೆ ತರುವಂತಿದೆಯೇ ಎಂದು ಪರಿಶೀಲಿಸಿದ ಐವರು ಸದಸ್ಯರಿರುವ ಸಮಿತಿಯನ್ನು ನೇಮಿಸಬೇಕು ಎಂದು ಸರಕಾರಕ್ಕೂ ಹೈಕೋರ್ಟ್ ಸೂಚನೆ ನೀಡಿದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ನೀಡಿರುವ ಪ್ರಮಾಣಪತ್ರವನ್ನು ಮರುಪರಿಶೀಲಿಸಲು ನ್ಯಾಯಮೂರ್ತಿಗಳು ಸೂಚಿಸಿದ್ದಾರೆ.

    ಆದಿಪುರುಷ ಸಿನಿಮಾ ರಿಲೀಸ್ ಆಗಿ ವಾರದ ನಂತರ ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿದ್ದರೂ, ಅದರ ಕುರಿತಾಗಿ ನಡೆಯುತ್ತಿರುವ ಚರ್ಚೆ ಮಾತ್ರ ನಿಂತಿಲ್ಲ. ಹಲವು ಕಡೆ ಸಿನಿಮಾದ ಬಗ್ಗೆ ದೂರು ನೀಡಲಾಗಿದೆ. ದೇಶದ ಹೈಕೋರ್ಟ್ ಗಳು ಚಿತ್ರದ ಚಿಂತನೆಯನ್ನು ಗಂಭೀರವಾಗಿ ತಗೆದುಕೊಂಡಿವೆ. ಹೀಗಾಗಿ ಚಿತ್ರ ತಂಡಕ್ಕೆ ಸಂಕಷ್ಟ ಎದುರಾಗುತ್ತಲೇ ಇದೆ.

    ಆದಿಪುರುಷ (Adipurush) ಸಿನಿಮಾವನ್ನು ನೇಪಾಳ ಸರಕಾರ ಬ್ಯಾನ್ ಮಾಡಿತ್ತು. ಚಿತ್ರದಲ್ಲಿ ಸೀತೆ ಬಗ್ಗೆ ಹೇಳಲಾದ ಡೈಲಾಗ್ ಸರಿಯಾಗಿಲ್ಲ ಎಂದು ಕಠ್ಮಂಡು ಮೇಯರ್ ಕೋರ್ಟ್ ಮೆಟ್ಟಿಲು ಏರಿದ್ದರು. ಸಿನಿಮಾವನ್ನು ಬ್ಯಾನ್ ಮಾಡುವುದು ಸರಿಯಲ್ಲ ಎಂದು ಅಲ್ಲಿನ ಹೈಕೋರ್ಟ್ ಹೇಳಿದ್ದರೂ, ಇತಿಹಾಸಕ್ಕೆ ಅಪಚಾರ ಮಾಡಬಾರದು ಎನ್ನುವುದನ್ನು ಎತ್ತಿ ಹಿಡಿದಿತ್ತು. ಇದೀಗ ಅಲಹಾಬಾದ್ (Allahabad) ಹೈಕೋರ್ಟ್ ಕೂಡ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಇದನ್ನೂ ಓದಿ:ಗೋಲ್ಡನ್ ಟೆಂಪಲ್‌ನಲ್ಲಿ ಪಾತ್ರೆ ತೊಳೆದು ಸೇವೆ ಸಲ್ಲಿಸಿದ ರಾಘವ್- ಪರಿಣಿತಿ ಜೋಡಿ

    ಆದಿಪುರುಷ ಸಿನಿಮಾದ ಚಿತ್ರಕಥೆ ಮತ್ತು ಸಂಭಾಷಣೆ ಕುರಿತಂತೆ  ಸಲ್ಲಿಸಲಾದ ಅರ್ಜಿಯನ್ನು ಕೈಗೆತ್ತಿಕೊಂಡ ಅಲಹಾಬಾದ್ ಹೈಕೋರ್ಟಿನ (High Court) ಲಕ್ನೋ ಪೀಠವು ಚಿತ್ರತಂಡದ ಜೊತೆ ಸೆನ್ಸಾರ್ ಮಂಡಳಿಯನ್ನು ತೀವ್ರವಾಗಿ ಟೀಕಿಸಿದೆ. ‘ಭಾರತೀಯರು ಸಂಹಿಷ್ಟುಗಳು ಎನ್ನುವ ಕಾರಣಕ್ಕೆ ಸಹನೆ ಪರೀಕ್ಷೆ ಮಾಡಲಾಗುತ್ತಿದೆಯೇ?’ ಎಂದು ಪ್ರಶ್ನೆ ಮಾಡಿದೆ.

    ರಾಮಾಯಣವನ್ನು ಜನರು ಪವಿತ್ರ ಎಂದು ದಿನವೂ ಪಠಿಸುತ್ತಾರೆ. ರಾಮಚರಿತಮಾನಸವನ್ನು ಓದುತ್ತಾರೆ. ಇಂತಹ ರಾಮಾಯಣವನ್ನೇ ಸಿನಿಮಾ ಮಾಡಿ, ಆ ನಂತರ ಸಿನಿಮಾಗೂ ರಾಮಾಯಣಕ್ಕೂ ಸಂಬಂಧವಿಲ್ಲ ಎಂದರೆ ಮಾಡಿದ ತಪ್ಪು ಮುಚ್ಚಿದಂತೆ ಆಗುತ್ತದೆ? ಚಿತ್ರದಲ್ಲಿನ ಸಂಭಾಷಣೆಗಳು ಕೂಡ ಅಪಮಾನ ಮಾಡುವಂತಿವೆ. ಈ ಸಿನಿಮಾ ನೋಡಿದ ಮೇಲೂ ಜನರು ತಾಳ್ಮೆ ಕಳೆದುಕೊಂಡಿಲ್ಲ ಎನ್ನುವುದು ಅವರ ಸಹಿಷ್ಣುತೆಯನ್ನು ತೋರಿಸುತ್ತದೆ’ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದೆ.

     

    ದೇವರು ಎಂದು ಪೂಜಿಸುವ ಭಗವಾನ್ ಹನುಮಾನ್ ಮತ್ತು ಸೀತೆಯನ್ನು ಸಿನಿಮಾದಲ್ಲಿ ಏನೂ ಅಲ್ಲ ಎನ್ನುವಂತೆ ತೋರಿಸಿದ್ದೀರಿ. ಕೆಲವು ದೃಶ್ಯಗಳು ವಯಸ್ಕ ವರ್ಗಕ್ಕೆ ಸೇರುವಂತಹವು ಆಗಿವೆ. ನೀವು ಏನನ್ನು ತೋರಿಸಲು ಹೊರಟಿದ್ದೀರಿ ಎಂದು ಪ್ರಶ್ನೆ ಮಾಡಿದ್ದಲ್ಲದೇ, ಸಂಭಾಷಣೆ ಬರೆದಿರುವ ಮನೋಜ್ (Manoj) ಅವರಿಗೂ ನೋಟಿಸ್ ನೀಡಿ, ಕಕ್ಷಿದಾರನನ್ನಾಗಿ ಮಾಡಿ ಎಂದು ನಿರ್ದೇಶನ ನೀಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿನಿಮಾ ಮಾಡುವವರು ಧಾರ್ಮಿಕ ವಿಚಾರಗಳಿಂದ ದೂರವಿರಿ : ಅಲಹಾಬಾದ್ ಹೈಕೋರ್ಟ್

    ಸಿನಿಮಾ ಮಾಡುವವರು ಧಾರ್ಮಿಕ ವಿಚಾರಗಳಿಂದ ದೂರವಿರಿ : ಅಲಹಾಬಾದ್ ಹೈಕೋರ್ಟ್

    ದಿಪುರುಷ (Adipurush) ಸಿನಿಮಾ ವಿಚಾರವಾಗಿ ಅಲಹಾಬಾದ್ (Allahabad) ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದೆ. ಕೇವಲ ಆದಿಪುರುಷ ಸಿನಿಮಾ ಟೀಮ್ ಗೆ ಮಾತ್ರವಲ್ಲ, ಇತರ ಸಿನಿಮಾ ಮಾಡುವ ನಿರ್ದೇಶಕರಿಗೆ ಅದು ಕಿವಿಮಾತು ಹೇಳಿದೆ. ಸಿನಿಮಾ ಮಾಡುವವರು ಧಾರ್ಮಿಕ ವಿಚಾರಗಳಿಂದ ದೂರವಿರಿ ಎಂದು ಹೇಳಿದೆ.

    ಆದಿಪುರುಷ ಸಿನಿಮಾದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಅಲಹಾಬಾದ್ ಹೈಕೋರ್ಟ್ (High Court) ನ್ಯಾಯಮೂರ್ತಿಗಳಾದ ರಾಜೇಶ್ ಸಿಂಗ್ ಚೌಹಾಣ್ ಮತ್ತು ನ್ಯಾಯಮೂರ್ತಿ ಶ್ರೀ ಪ್ರಕಾಶ್ ಸಿಂಗ್ ಆದಿಪುರುಷ ಚಿತ್ರತಂಡವನ್ನು ತರಾಟೆಗೆ ತಗೆದುಕೊಂಡಿದ್ದಷ್ಟೇ ಅಲ್ಲ, ‘ನೀವು ಇದೇ ರೀತಿ ತಪ್ಪಾಗಿ ಕುರಾನ್ (Quran) ಬಗ್ಗೆ ಸಣ್ಣದೊಂದು ಡಾಕ್ಯೂಮೆಂಟರಿ ಮಾಡಿ ಮುಂದೇನಾಗತ್ತೆ ಅಂತ ನೋಡಿ’ ಎಂದು ಮೌಖಿಕವಾಗಿ ಕುಟುಕಿದರು. ಇದನ್ನೂ ಓದಿ:ಹಾಲಿವುಡ್ ಸಂದರ್ಶನದಲ್ಲಿ ಆಲಿಯಾ ಭಟ್ ಹೀಗಾ ಮಾಡೋದು- ರಣ್‌ಬೀರ್ ಪತ್ನಿ ಟ್ರೋಲ್

    ಮುಂದುವರೆದು ಮಾತನಾಡಿದ ನ್ಯಾಯಾಧೀಶರು, ‘ಯಾವುದೇ ಧರ್ಮದ (Religious) ವಿಷಯಗಳನ್ನು ತಪ್ಪಾಗಿ ತೋರಿಸಬೇಡಿ. ಕೋರ್ಟಿಗೆ ಯಾವುದೇ ಧರ್ಮವಿಲ್ಲ. ಬೈಬಲ್ (Bible), ಕುರಾನ್ ಅಂತ ವಿಚಾರಗಳನ್ನೂ ತೆಗೆದುಕೊಳ್ಳಬೇಡಿ’ ಎಂದು ತಾಕೀತು ಮಾಡಿದರು. ಧಾರ್ಮಿಕ ವಿಷಯಗಳನ್ನು ಎತ್ತಿಕೊಂಡು ಸಿನಿಮಾ ಮಾಡುವುದು ತಮಾಷೆ ವಿಷಯವಲ್ಲ. ಆದಿಪುರುಷ ಸಿನಿಮಾದ ನಿರ್ಮಾಪಕರು ನ್ಯಾಯಾಲಯಕ್ಕೆ ಹಾಜರಾಗಬೇಕು’ ಎಂದು ತಿಳಿಸಿದರು.

    ಆದಿಪುರುಷ ಸಿನಿಮಾದ ವಿಚಾರವಾಗಿ ಈ ಚಿತ್ರವನ್ನು ನಿಷೇಧಿಸಬೇಕು ಎಂದು ಅಲಹಾಬಾದ್ ಕೋರ್ಟಿಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಧೀಶರು, ಸಿನಿಮಾ ಮತ್ತು ಧರ್ಮದ ಬಗ್ಗೆ ಸಾಕಷ್ಟು ಪಾಠಗಳನ್ನು ಮಾಡಿದರು. ಸೂಕ್ಷ್ಮ ವಿಷಯಗಳನ್ನು ಸಿನಿಮಾದಲ್ಲಿ ತರದಂತೆ ಮೌಖಿಕ ಆದೇಶ ಮಾಡಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆದಿಪುರುಷನಿಗೆ ಸೋಲಾದರೂ ಪ್ರಭಾಸ್ ಸಿನಿಮಾ ಹಣ ಹೂಡಲಿದೆ ಕನ್ನಡ ಸಂಸ್ಥೆ

    ಆದಿಪುರುಷನಿಗೆ ಸೋಲಾದರೂ ಪ್ರಭಾಸ್ ಸಿನಿಮಾ ಹಣ ಹೂಡಲಿದೆ ಕನ್ನಡ ಸಂಸ್ಥೆ

    ಪ್ರಭಾಸ್ ನಟನೆಯ ಆದಿಪುರುಷ (Adipurush) ಸಿನಿಮಾಗೆ ನಿರೀಕ್ಷೆ ಫಲಿತಾಂಶ ಬಾರದೇ ಇದ್ದರೂ, ಪ್ರಭಾಸ್ ಅವರ ಡಿಮಾಂಡ್ ಗೆ ಯಾವುದೇ ಧಕ್ಕೆ ಬಂದಿಲ್ಲ ಎಂದೇ ಹೇಳಬಹುದು. ಸದ್ಯ ಅವರು ಕೈಯಲ್ಲಿ ಎರಡು ಚಿತ್ರಗಳು ಇದ್ದರೂ, ಮತ್ತೊಂದು ಚಿತ್ರಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾವನ್ನು ಕನ್ನಡದ ಸಂಸ್ಥೆಯೇ ನಿರ್ಮಾಣ ಮಾಡಲಿದೆ ಎನ್ನುವುದು ವಿಶೇಷ.

    ಈಗಾಗಲೇ ಪ್ರಭಾಸ್ (Prabhas) ನಟನೆಯ ಸಲಾರ್ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಹಣ ಹೂಡಿಕೆ ಮಾಡಿದೆ. ಕನ್ನಡದ ನಿರ್ದೇಶಕರೇ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಲಾರ್ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದ ನಂತರ ಪ್ರಭಾಸ್ ಪ್ರಾಜೆಕ್ಟ್ ಕೆ ಚಿತ್ರದಲ್ಲೂ ತೊಡಗಿಕೊಂಡಿದ್ದಾರೆ. ಈ ನಡುವೆ ಮತ್ತೊಂದು ಚಿತ್ರಕ್ಕೆ ಗ್ನಿನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಹೃದಯ ಕಿತ್ತು ಎದೆಗೆ ಹಚ್ಚಿಕೊಂಡು ಪಾರ್ಟಿಗೆ ಬಂದ ಉರ್ಫಿ ಜಾವೇದ್

    ಕೆಡಿ ಸೇರಿದಂತೆ ಹಲವು ಸಿನಿಮಾಗಳನ್ನು ಕನ್ನಡದಲ್ಲಿ ಮಾಡುತ್ತಿರುವ ಕೆವಿಎನ್ ಪ್ರೊಡಕ್ಷನ್ (KVN Production) ಸಂಸ್ಥೆಯು ಪ್ರಭಾಸ್ ಅವರ ಹೊಸ ಸಿನಿಮಾವನ್ನು ನಿರ್ಮಾಣ ಮಾಡಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಪ್ರಭಾಸ್ ಜೊತೆ ಸಂಸ್ಥೆಯ ಮುಖ್ಯಸ್ಥರು ಒಂದು ಸುತ್ತಿನ ಮಾತುಕತೆ ಕೂಡ ಮಾಡಿದ್ದಾರೆ. ಪ್ರಭಾಸ್ ಕೂಡ ಒಪ್ಪಿಕೊಂಡಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ.

    ಕೇವಲ ಪ್ರಭಾಸ್ ಒಪ್ಪಿದ್ದಷ್ಟೇ ಅಲ್ಲ, ಈ ಸಿನಿಮಾದ ನಿರ್ದೇಶಕರು ಯಾರು ಎನ್ನುವ ಮಾಹಿತಿಯೂ ಸೋರಿಕೆಯಾಗಿದೆ. ಗಬ್ಬರ್ ಸಿಂಗ್ ಸೇರಿದಂತೆ ಅನೇಕ ಹಿಟ್ ಚಿತ್ರಗಳನ್ನು ನೀಡಿರುವ ಹರೀಶ್ ಶಂಕರ್ (Harish Shankar) ಈ ಸಿನಿಮಾಗೆ ನಿರ್ದೇಶಕರು ಎಂದು ಹೇಳಲಾಗುತ್ತಿದೆ. ಈ ಎಲ್ಲ ವಿಷಯಗಳು ಹರಿದಾಡುತ್ತಿದ್ದರೂ, ಯಾರೂ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ.

     

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಆದಿಪುರುಷನಿಗೆ ಬಿಗ್ ರಿಲೀಫ್ : ಬ್ಯಾನ್ ತೆರವುಗೊಳಿಸಿದ ನೇಪಾಳ ಹೈಕೋರ್ಟ್

    ಆದಿಪುರುಷನಿಗೆ ಬಿಗ್ ರಿಲೀಫ್ : ಬ್ಯಾನ್ ತೆರವುಗೊಳಿಸಿದ ನೇಪಾಳ ಹೈಕೋರ್ಟ್

    ಪ್ರಭಾಸ್ ನಟನೆಯ ಆದಿಪುರುಷ ಸಿನಿಮಾಗೆ ನೇಪಾಳ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಸೀತೆಯ ಕುರಿತಾದ ಡೈಲಾಗ್ ಅನ್ನು ಪ್ರಶ್ನಿಸಿ ಕಠ್ಮಂಡು ಮೇಯರ್ ಬಲೇನ್ ಶಾ ಕೋರ್ಟ್ ಮೊರೆ ಹೋಗಿದ್ದರು. ಜೊತೆಗೆ ನೇಪಾಳದಲ್ಲಿ ಈ ಸಿನಿಮಾವನ್ನು ಬ್ಯಾನ್ ಮಾಡಲಾಗಿತ್ತು. ಈ ಬ್ಯಾನ್ ಪ್ರಶ್ನಿಸಿ ಚಿತ್ರತಂಡ ಕೂಡ ಕೋರ್ಟ್ ಮೆಟ್ಟಿಲು ಏರಿತು.

    ಆದಿಪುರುಷ ಸಿನಿಮಾ ಕುರಿತಾದ ಅರ್ಜಿಯನ್ನು ಕೈಗೆತ್ತಿಕೊಂಡ ನೇಪಾಳ ಹೈಕೋರ್ಟ್, ‘ಸಿನಿಮಾ ಸೆನ್ಸಾರ್ ಆಗಿದೆ. ಸೆನ್ಸಾರ್ ಮಂಡಳಿಯು ಚಿತ್ರವನ್ನು ಒಪ್ಪಿಕೊಂಡ ಮೇಲೆ ಬ್ಯಾನ್ ಗೆ ಅರ್ಥವಿಲ್ಲ. ಹಾಗಾಗಿ ಬ್ಯಾನ್ ತೆರೆವುಗೊಳಿಸಿ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಇದರಿಂದಾಗಿ ನೇಪಾಳದಲ್ಲಿ ಆದಿಪುರುಷ ಚಿತ್ರಕ್ಕೆ ದೊಡ್ಡ ಗೆಲುವು ಸಿಕ್ಕಿದೆ. ಆದರೆ, ಕೋರ್ಟ್ ತೀರ್ಪು ಏನೇ ಬಂದರೂ, ಸಿನಿಮಾ ಪ್ರದರ್ಶನಕ್ಕೆ ಬಿಡುವುದಿಲ್ಲ ಎಂದಿದ್ದಾರೆ ಬಲೇನ್ ಶಾ.

    ಆದಿಪುರುಷ (Adi Purush) ಸಿನಿಮಾದಲ್ಲಿ ಸೀತೆಯನ್ನು ಭಾರತದ ಮಗಳು ಎಂದು ಕರೆದ ಡೈಲಾಗ್ ಕುರಿತಂತೆ ಕಠ್ಮಂಡು ಮೇಯರ್ ಈ ಹಿಂದೆ ಆಕ್ಷೇಪ ವ್ಯಕ್ತ ಪಡಿಸಿದ್ದರು. ಸಿನಿಮಾದಲ್ಲಿ ಸುಳ್ಳು ಇತಿಹಾಸವನ್ನು ಹೇಳಿದ್ದಕ್ಕೆ ಚಿತ್ರವನ್ನು ಕಠ್ಮಂಡುವಿನಲ್ಲಿ ಬ್ಯಾನ್ ಮಾಡಿದ್ದರು. ಡೈಲಾಗ್ ತಗೆಯುವಂತೆ ಚಿತ್ರತಂಡಕ್ಕೆ ಹೇಳಿದ್ದರೂ ಡೈಲಾಗ್ ಅನ್ನು ತಗೆಯದೇ ಇರುವ ಕಾರಣಕ್ಕಾಗಿ ಕಠ್ಮಂಡು ಮೇಯರ್ ಸುತ್ತೋಲೆ ಹೊರಡಿಸಿದ್ದಾರೆ. ಇದನ್ನೂ ಓದಿ:ಅಮ್ಮು ಜೊತೆಗಿನ ಮದುವೆ ಬಗ್ಗೆ ರಾಕೇಶ್ ಅಡಿಗ ಸ್ಪಷ್ಟನೆ

    ಬರೀ ಆದಿಪುರುಷ ಸಿನಿಮಾ ಮಾತ್ರವಲ್ಲ, ಕಠ್ಮಂಡುನಲ್ಲಿ (Kathmandu) ಒಟ್ಟು 17 ಚಿತ್ರಮಂದಿರಗಳಿದ್ದು ಈ ಅಷ್ಟೂ ಚಿತ್ರಮಂದಿರಗಳಲ್ಲೂ ಭಾರತೀಯ ಸಿನಿಮಾಗಳನ್ನು ಪ್ರದರ್ಶನ ಮಾಡಬಾರದು ಎಂದು ಆದೇಶ ಹೊರಡಿಸಿರುವುದಾಗಿ ಮೇಯರ್ ಬಲೇನ್ ಶಾ (Balen Shah) ಟ್ವೀಟ್ ಮಾಡಿದ್ದರು. ಆದಿಪುರುಷ ಸಿನಿಮಾ ಸೇರಿದಂತೆ ಭಾರತದ ಅಷ್ಟೂ ಸಿನಿಮಾಗಳನ್ನೂ ಬ್ಯಾನ್ (Ban) ಮಾಡಿರುವುದಾಗಿ ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.

    ಓಂ ರಾವತ್ (Om Raut) ನಿರ್ದೇಶನದ ‘ಆದಿಪುರುಷ್’ ಸಿನಿಮಾಗೆ ಕೆಟ್ಟ ವಿಮರ್ಶೆ ವ್ಯಕ್ತವಾಗಿದೆ. ಈ ಸಿನಿಮಾದ ಹಲವು ಅಂಶಗಳನ್ನು ಟೀಕಿಸಲಾಗುತ್ತಿದೆ. ರಾಮಾಯಣವನ್ನು ಆಧರಿಸಿದ ಈ ಚಿತ್ರದಲ್ಲಿ ಪ್ರಭಾಸ್ ಅವರು ರಾಮನ ಪಾತ್ರ ಮಾಡಿದ್ದಾರೆ. ಸೀತೆಯಾಗಿ ಕೃತಿ ಸನೋನ್ ಕಾಣಿಸಿಕೊಂಡಿದ್ದಾರೆ. ಆಂಜನೇಯನಾಗಿ ದೇವದತ್ತ ನಾಗೆ ಅವರು ಅಭಿನಯಿಸಿದ್ದಾರೆ. ಲಕ್ಷ್ಮಣನ ಪಾತ್ರಕ್ಕೆ ಸನ್ನಿ ಸಿಂಗ್ ಅವರು ಬಣ್ಣ ಹಚ್ಚಿದ್ದಾರೆ. ಸೈಫ್ ಅಲಿ ಖಾನ್ ಅವರು ರಾವಣನಾಗಿ ಅಬ್ಬರಿಸಿದ್ದಾರೆ. ಆದರೆ ರಾಮಾಯಣವನ್ನು ತೋರಿಸಿದ ರೀತಿ ಸರಿಯಾಗಿಲ್ಲ ಎಂದು ಪ್ರೇಕ್ಷಕರು ತಕರಾರು ತೆಗೆದಿದ್ದಾರೆ. ಸೈಫ್‌ರನ್ನ ಮಾಡ್ರನ್ ರಾವಣನಂತೆ ತೋರಿಸಿರೋದು ಟ್ರೋಲ್ ಆಗುತ್ತಿದೆ. ಸಿನಿಮಾ ನೈಜವಾಗಿ ತೋರಿಸಿಲ್ಲ ಎಂದು ಟೀಕೆ ಮಾಡಿದ್ದಾರೆ.

    ಚಿತ್ರಕಥೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಸಿನಿಮಾದ ಸಂಭಾಷಣೆಕಾರ ಮನೋಜ್ ಮುಂತಶೀರ್ ಅವರು ಮಾತು ಬದಲಾಯಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ‘ಆದಿಪುರುಷ್’ ಸಿನಿಮಾವನ್ನು ಟ್ರೋಲ್ ಮಾಡಲಾಗುತ್ತಿದೆ. ಪಾತ್ರಗಳನ್ನು ತೋರಿಸಿದ ರೀತಿ, ಗ್ರಾಫಿಕ್ಸ್ ಗುಣಮಟ್ಟ ಸೇರಿದಂತೆ ಅನೇಕ ವಿಚಾರಗಳನ್ನು ಜನರು ಟೀಕಿಸುತ್ತಿದ್ದಾರೆ. ಈ ನಡುವೆ ಸಂಭಾಷಣಕಾರ ಮನೋಜ್ ಮುಂತಶೀರ್ ಅವರು ನೀಡಿದ ಕೇಳಿಕೆ ಸೆನ್ಸೇಷನ್ ಕ್ರಿಯೆಟ್ ಮಾಡಿದೆ. ಇದನ್ನು ನಾನು ಮೊದಲೇ ಹೇಳಿದ್ದೇ ಮತ್ತು ಈಗಲೂ ಹೇಳುತ್ತೇನೆ. ಈ ಸಿನಿಮಾದ ಹೆಸರು ಆದಿಪುರುಷ್. ನಾವು ರಾಮಾಯಣವನ್ನು ಸಿನಿಮಾ ಮಾಡಿಲ್ಲ. ರಾಮಾಯಾಣಕ್ಕೂ ಆದಿಪುರುಷ್‌ ಸಿನಿಮಾಗೂ ಸಂಬಂಧವಿಲ್ಲ. ಅದರಿಂದ ತುಂಬ ಸ್ಫೂರ್ತಿ ಪಡೆದಿದ್ದೇವೆ. ಡಿಸ್‌ಕ್ಲೈಮರ್‌ನಲ್ಲೂ ನಾವು ಅದನ್ನೇ ಹೇಳಿದ್ದೇವೆ ಎಂದು ಮನೋಜ್ ಮುಂತಶೀರ್ ಹೇಳಿದ್ದಾರೆ.

  • ರಾಜಮೌಳಿ ‘ಮಹಾಭಾರತ’ ಮಾಡ್ತಾರೆ- ವಿಜಯೇಂದ್ರ ಪ್ರಸಾದ್ ಗುಡ್ ನ್ಯೂಸ್

    ರಾಜಮೌಳಿ ‘ಮಹಾಭಾರತ’ ಮಾಡ್ತಾರೆ- ವಿಜಯೇಂದ್ರ ಪ್ರಸಾದ್ ಗುಡ್ ನ್ಯೂಸ್

    ಪ್ರಭಾಸ್, ಕೃತಿ ಸನೋನ್ ನಟನೆಯ ‘ಆದಿಪುರುಷ್’ (Adipurush) ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದೆ. ಚಿತ್ರದ ಬಗ್ಗೆ ಅಭಿಮಾನಿಗಳಿಂದ ಆಕ್ರೋಶ್ ವ್ಯಕ್ತವಾಗಿದೆ. ಆದಿಪುರುಷ್ ಬ್ಯಾನ್ ಮಾಡಿ ಅಂತಾ ಆಗ್ರಹ ಕೂಡ ಕೇಳಿ ಬರುತ್ತಿದೆ. ಇದರ ಬೆನ್ನಲ್ಲೇ ಬಾಹುಬಲಿ, ಆರ್‌ಆರ್‌ಆರ್ ಖ್ಯಾತಿಯ ರಾಜಮೌಳಿ ಮಹಾಭಾರತವನ್ನ ಸಿನಿಮಾ ಮಾಡುವುದಾಗಿ ಖ್ಯಾತ ಬರಹಗಾರ ವಿಜಯೇಂದ್ರ ಪ್ರಸಾದ್ ಸಿಹಿಸುದ್ದಿ ನೀಡಿದ್ದಾರೆ. ಇದನ್ನೂ ಓದಿ:ತಮಿಳಿನ ಕ್ಯಾಪ್ಟನ್ ಮಿಲ್ಲರ್ ಶೂಟಿಂಗ್ ಮುಗಿಸಿದ ಶಿವಣ್ಣ

    ಬಾಹುಬಲಿಯಿಂದಾನೇ (Bahubali) ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಗಿದೆ. ಹಾಗೇ ದಕ್ಷಿಣ ಭಾರತದ ಸೂಪರ್‌ಸ್ಟಾರ್‌ಗಳಿಗೂ ಪ್ಯಾನ್ ಇಂಡಿಯಾ ಇಮೇಜ್ ಸಿಕ್ಕಿದೆ. ಸಿನಿಮಾದಿಂದ ಸಿನಿಮಾಗೆ ರಾಜಮೌಳಿ (Rajamouli) ರೇಂಜ್ ಬದಲಾಗುತ್ತಲೇ ಇದೆ. ಈ ಮಧ್ಯೆ ರಾಜಮೌಳಿ ಮಹಾಭಾರತ ಸಿನಿಮಾ ಮಾಡುವ ಬಗ್ಗೆನೂ ಚರ್ಚೆ ಆರಂಭ ಆಗಿದೆ. ಇತ್ತೀಚೆಗಷ್ಟೇ ತೆರೆಕಂಡಿರೋ ಪೌರಾಣಿಕ ಸಿನಿಮಾ ಆದಿಪುರುಷ್ ಫ್ಲಾಪ್ ಆಗಿದೆ. ಇದೇ ಬೆನ್ನಲ್ಲೇ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಮಹಾಭಾರತದ ಬಗ್ಗೆ ಕೆಲವು ಆಸಕ್ತಿಕರ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಸಂದರ್ಶನವೊಂದರಲ್ಲಿ ವಿಜಯೇಂದ್ರ ಪ್ರಸಾದ್ (Vijendra Prasad) ‘ಮಹಾಭಾರತ’ದ ಬಗ್ಗೆ ಹೇಳಿದ್ದೇನು?

    ರಾಜಮೌಳಿಗೆ ಸಿನಿಮಾಗಳಲ್ಲಿ ಸಾಹಸ ದೃಶ್ಯಗಳನ್ನು ಹೆಚ್ಚು ಇಷ್ಟ. ಹಾಗಾಗಿ ಕಥೆಯಲ್ಲಿ ಹೆಚ್ಚೆಚ್ಚು ಸಾಹಸ ದೃಶ್ಯಗಳನ್ನೇ ಸೃಷ್ಟಿ ಮಾಡುತ್ತೇನೆಂದು ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ. ಹಾಗೇ ರಾಜಮೌಳಿ ಬಯಸಿದಂತೆ ಮಹಾಭಾರತ (Mahabharatha) ಸ್ಕ್ರಿಪ್ಟ್ ರೆಡಿ ಮಾಡಿದ್ದೇನೆ ಎಂದು ಹೇಳಿದ್ದಾರೆ. ಇದೇ ವೇಳೆ ಬಾಹುಬಲಿ ಸ್ಕ್ರಿಪ್ಟ್ ಮಾಡುವಾಗ ರಾಜಮೌಳಿ ತಂದೆ ಬಳಿ ಹೇಳಿಕೊಂಡ ಮಾತನ್ನು ನೆನಪಿಸಿಕೊಂಡಿದ್ದಾರೆ. ಬಾಹುಬಲಿ ಸ್ಕ್ರಿಪ್ಟ್ ಬರೆಯುತ್ತಿದ್ದಾಗ, ಒಂದು ರಾಜಮೌಳಿ ಬಂದು ನನ್ನ ಬಳಿ ಕೇಳಿದ್ದರು. ಅಪ್ಪ ನಾವ್ಯಾಕೆ ಈ ಸಿನಿಮಾ ಮಾಡುತ್ತಿದ್ದೇವೆ ಅಂತ ಗೊತ್ತಾ? ಅಂತ ಕೇಳಿದ್ದರು. ಆಗ ನಾನು ಯಾಕೆ ಎಂದು ಕೇಳಿದೆ. ಈ ಸಿನಿಮಾದಲ್ಲಿ ರಾಜರು, ಅರಮನೆಗಳು, ರಾಣಿಯರು, ಎದುರಾಳಿಗಳು ಹಾಗೆಯೇ ಅದ್ದೂರಿತನ ಎಲ್ಲವೂ ಇದೆ. ಈ ಸಿನಿಮಾ ಮೂಲಕ ಮುಂದಿನ ದಿನಗಳಲ್ಲಿ ನಾನು ಮಹಾಭಾರತವನ್ನು ಮಾಡಲು ಎಷ್ಟು ರೆಡಿಯಿದ್ದೇನೆ ಎಂದು ಪರೀಕ್ಷೆ ಮಾಡಿಕೊಳ್ಳಲು ಮಾಡುತ್ತಿದ್ದೇನೆ ಎಂದು ರಾಜಮೌಳಿ ಹೇಳಿದ್ದನ್ನು ನೆನಪಿಸಿಕೊಂಡಿದ್ದಾರೆ.

    ‘ಬಾಹುಬಲಿ’ ಸಿನಿಮಾ ಮಾಡುವಾಗ ಈ ಸಿನಿಮಾ ಗೆದ್ದರೆ, ಮಹಾಭಾರತ ಸಿನಿಮಾ ಮಾಡುತ್ತೇನೆ ರಾಜಮೌಳಿ ಎಂದಿದ್ದರು ಎಂದು ವಿಜಯೇಂದ್ರ ಪ್ರಸಾದ್ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ. ದೇವರ ದಯೆಯಿಂದ ಆ ಸಿನಿಮಾ ಸಿನಿಮಾ ಆಗುತ್ತೆ. ರಾಜಮೌಳಿ ಸಿನಿಮಾ ಮಾಡುತ್ತಾರೆ ಎಂದು ರಾಜಮೌಳಿ ತಂದೆ ಅಪ್‌ಡೇಟ್ ನೀಡಿದ್ದಾರೆ.

    ಬಾಹುಬಲಿ, ಬಾಹುಬಲಿ 2, ಆರ್‌ಆರ್‌ಆರ್ ಸಿನಿಮಾಗಳನ್ನ ಕೊಟ್ಟಿರೋ ರಾಜಮೌಳಿ ಅವರ ಮಹಾಭಾರತ ಮಾಡುವ ಬಗ್ಗೆ ಸಿಹಿಸುದ್ದಿ ನೀಡಿರೋದು ಫ್ಯಾನ್ಸ್ಗೆ ಖುಷಿ ಕೊಟ್ಟಿದೆ. ಒಂದು ಸಿನಿಮಾಗೆ 3-4 ವರ್ಷ ಸಮಯ ಮೀಸಲಿಡುವ ರಾಜಮೌಳಿ ಅವರ ಸಿನಿಮಾ ಮೇಲಿನ ಪ್ರೀತಿ ಅಭಿಮಾನಿಗಳಿಗೆ ತಿಳಿದಿದೆ ಹಾಗಾಗಿ ‘ಮಹಾಭಾರತ’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದಾರೆ.

  • ಆದಿಪುರುಷ ಬ್ಯಾನ್ ಮಾಡಿ ಎಂದು ಪ್ರಧಾನಿಗೆ ಪತ್ರ ಬರೆದ ಸಿನಿ ಅಸೋಷಿಯೇಷನ್

    ಆದಿಪುರುಷ ಬ್ಯಾನ್ ಮಾಡಿ ಎಂದು ಪ್ರಧಾನಿಗೆ ಪತ್ರ ಬರೆದ ಸಿನಿ ಅಸೋಷಿಯೇಷನ್

    ಆಲ್ ಇಂಡಿಯಾ ಸಿನಿ ಅಸೋಷಿಯೇಷನ್ ‘ಆದಿಪುರುಷ’ (Adipurush) ಸಿನಿಮಾದ ಮೇಲೆ ಸಾಕಷ್ಟು ಆರೋಪಗಳನ್ನು ಮಾಡಿದ್ದು, ಕೂಡಲೇ ಸಿನಿಮಾ ಪ್ರದರ್ಶನವನ್ನು ನಿಲ್ಲಿಸುವಂತೆ ಹಾಗೂ ಶಾಶ್ವತವಾಗಿ ಈ ಸಿನಿಮಾವನ್ನು ಬ್ಯಾನ್ (Ban) ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಪತ್ರವೊಂದನ್ನು ಬರೆದಿದೆ. ಅಲ್ಲದೇ, ನಿರ್ದೇಶಕ ಓಂ ರಾವುತ್ ಮತ್ತು ಲೇಖಕ ಮನೋಜ್ ಮೇಲೆ ಎಫ್.ಐ.ಆರ್ ದಾಖಲಿಸಬೇಕು ಎಂದು ಅದು ಒತ್ತಾಯ ಮಾಡಿದೆ.

    ಹಿಂದೂಗಳ ಭಾವನೆಯನ್ನು ನೋವಿಸುವಂತಹ ಅನೇಕ ಸಂಗತಿಗಳು ಸಿನಿಮಾದಲ್ಲಿವೆ. ಭಗವಾನ್ ಶ್ರೀರಾಮ್ ಮತ್ತು ರಾವಣನನ್ನು ಕಾರ್ಟೂನ್ ರೀತಿಯಲ್ಲಿ ತೋರಿಸಲಾಗಿದೆ. ಹಿಂದೂಗಳ ಭಾವನೆಗೆ ಧಕ್ಕೆ ಬರುವಂತೆ ಚಿತ್ರ ತಯಾರಿಸಲಾಗಿದೆ. ಈ ಸಿನಿಮಾದಿಂದಾಗಿ ಅನೇಕರು ನೋವನ್ನುಂಡಿದ್ದಾರೆ. ಹಾಗಾಗಿ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಮಾತ್ರವಲ್ಲ, ಓಟಿಟಿ ಸೇರಿದಂತೆ ಯಾವ ವೇದಿಕೆಯಲ್ಲೂ ಪ್ರದರ್ಶನವಾಗಬಾರದು ಎಂದು ಸಿನಿ ಅಸೋಷಿಯೇಷನ್ (Cine Association) ಪ್ರಧಾನಿಗೆ ಮನವಿ ಮಾಡಿಕೊಂಡಿದೆ. ಇದನ್ನೂ ಓದಿ:ಲೈಂಗಿಕ ಕಿರುಕುಳ ಆರೋಪ: ಧಾರಾವಾಹಿ ನಿರ್ಮಾಪಕನ ಮೇಲೆ ಎಫ್.ಐ.ಆರ್ ದಾಖಲು

    ಆದಿಪುರುಷ ಸಿನಿಮಾವನ್ನು ಗಂಭೀರವಾಗಿ ತೆಗೆದುಕೊಂಡಿರುವ ಸಿನಿ ಅಸೋಷಿಯೇಷನ್ ಸಿನಿಮಾವನ್ನು ಬ್ಯಾನ್ ಮಾಡಲೇಬೇಕು ಎಂದು ಪ್ರಧಾನಿಯನ್ನು ಒತ್ತಾಯಿಸಿದ್ದಾರೆ. ಇತಿಹಾಸವನ್ನು ಈ ಸಿನಿಮಾದಲ್ಲಿ ತಿರುಚಲಾಗಿದೆ. ಅಲ್ಲದೇ ಡೈಲಾಗ್ ನಲ್ಲೂ ಹಿಂದೂ ಧರ್ಮಕ್ಕೆ ಅವಹೇಳನ ಮಾಡುವಂತಹ ಪದಗಳನ್ನು ಬಳಸಲಾಗಿದೆ. ಹೀಗಾಗಿ ಕೂಡಲೇ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಪತ್ರದಲ್ಲಿ ಬರೆಯಲಾಗಿದೆ.

    ನಟ ಪ್ರಭಾಸ್ (Prabhas) ಅವರು ಇಂತಹ ಕೆಟ್ಟ ಸಿನಿಮಾದ ಭಾಗವಾಗಬಾರದಿತ್ತು. ಕೃತಿ ಸನೂನ್ ಸೇರಿದಂತೆ ನುರಿತ ಕಲಾವಿದರೇ ಈ ಸಿನಿಮಾದಲ್ಲಿದ್ದಾರೆ. ಶೂಟಿಂಗ್ ಮಾಡುವಾಗ ಇವರಿಗೆ ಅರ್ಥವಾಗಲಿಲ್ಲವೆ? ಎಂದು ಹಲವರು ಕೇಳಿದ್ದಾರೆ.

  • ‘ಆದಿಪುರುಷ’ನಿಗೆ ಸಂಕಷ್ಟ: ಚಿತ್ರ ನಿಲ್ಲಿಸುವಂತೆ ದೆಹಲಿ ಹೈಕೋರ್ಟಿಗೆ ಅರ್ಜಿ

    ‘ಆದಿಪುರುಷ’ನಿಗೆ ಸಂಕಷ್ಟ: ಚಿತ್ರ ನಿಲ್ಲಿಸುವಂತೆ ದೆಹಲಿ ಹೈಕೋರ್ಟಿಗೆ ಅರ್ಜಿ

    ನಿನ್ನೆಯಷ್ಟೇ ಜಗತ್ತಿನಾದ್ಯಂತ ಬಿಡುಗಡೆಯಾಗಿರುವ ಆದಿಪುರುಷ ಸಿನಿಮಾ ಪ್ರದರ್ಶನವನ್ನು ನಿಲ್ಲಿಸುವಂತೆ ದೆಹಲಿ (Delhi) ಹೈಕೋರ್ಟಿಗೆ (High Court) ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿವೆ ಹಿಂದೂಪರ ಸಂಘಟನೆಗಳು. ಈ ಸಿನಿಮಾದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆಯಾಗುವಂತಹ ಸಾಕಷ್ಟು ಅಂಶಗಳು ಇವೆ. ಹಾಗಾಗಿ ಸಿನಿಮಾ ಪ್ರದರ್ಶನವನ್ನು ನಿಲ್ಲಿಸುವಂತೆ ಸಂಘಟನೆಗಳು ಮನವಿ ಮಾಡಿಕೊಂಡಿವೆ.

    ರಾಮಾಯಣವನ್ನು ತಮಗೆ ಬೇಕಾದಂತೆ ಬದಲಾಯಿಸಿಕೊಂಡಿದ್ದಾರೆ. ಅದು ಹಿಂದೂಗಳಿಗೆ ಮತ್ತು ಹಿಂದೂ (Hindu) ದೇವರುಗಳಿಗೆ ಮಾಡಿರುವ ಅಪಮಾನ. ಈ ಹಿಂದೆಯೇ ಅನೇಕ ಅಂಶಗಳನ್ನು ಚಿತ್ರತಂಡದ ಗಮನಕ್ಕೆ ತರಲಾಗಿತ್ತು. ಎಲ್ಲವನ್ನೂ ಬದಲಾವಣೆ ಮಾಡುವುದಾಗಿ ಚಿತ್ರತಂಡ ತಿಳಿಸಿತ್ತು. ಆದರೆ, ಯಾವುದೇ ಬದಲಾವಣೆಯನ್ನು ಮಾಡದೇ ಹಳೆ ಸಿನಿಮಾವನ್ನೇ ಬಿಡುಗಡೆ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

    ನೇಪಾಳದಲ್ಲಿ ಸಿನಿಮಾ ಬ್ಯಾನ್ ?

    ಪ್ರಭಾಸ್ (Prabhas) ನಟನೆಯ ಆದಿಪುರುಷ (Adipurusha) ಸಿನಿಮಾ ಎಲ್ಲ ಕಡೆ ತುಂಬಿದ ಪ್ರದರ್ಶನ ಕಾಣುತ್ತಿದ್ದರೆ ನೇಪಾಳದಲ್ಲಿ ಅದು ಬಿಡುಗಡೆಯಾಗಿಲ್ಲ. ಚಿತ್ರದ ಒಂದು ಡೈಲಾಗ್ ಬಗ್ಗೆ ಕಠ್ಮಂಡು (Kathmandu)  ಮೇಯರ್ ಗರಂ ಆಗಿದ್ದು, ವಿವಾದಿತ  ಆ ಡೈಲಾಗ್ ತಗೆಯದಿದ್ದರೆ ಸಿನಿಮಾವನ್ನು ಬ್ಯಾನ್ ಮಾಡುವುದಾಗಿ ಅವರು ಹೇಳಿದ್ದಾರೆ. ಅಲ್ಲದೇ, ಮೂರು ದಿನ ಗಡುವು ಕೂಡ ನೀಡಿದ್ದಾರೆ.

    ಆದಿಪುರುಷ ಸಿನಿಮಾ ಮೊದಲಿನಿಂದಲೂ ವಿವಾದಕ್ಕೀಡು ಆಗುತ್ತಲೇ ಇದೆ. ಸಿನಿಮಾದ ಗ್ರಾಫಿಕ್ಸ್, ರಾವಣನ ಪಾತ್ರ, ತಿರುಪತಿಯಲ್ಲಿ ನಟಿಗೆ ಮುತ್ತಿಟ್ಟ ನಿರ್ದೇಶಕ ಹೀಗೆ ನಾನಾ ಕಾರಣಗಳಿಂದ ಸಿನಿಮಾ ಸುದ್ದಿಯಾಗುತ್ತಿದೆ. ಈ ಬಾರಿ ಡೈಲಾಗ್ ವೊಂದು ಹಲವು ಜನರ ಭಾವನೆಗೆ ಸಂಚಕಾರ ತಂದಿದೆಯಂತೆ. ಇದನ್ನೂ ಓದಿ:ಯಶ್ ಸಿನಿಮಾಗಾಗಿ ಬೆಂಗಳೂರಿನಲ್ಲಿ ಬೀಡು ಬಿಟ್ಟ ಡೈರೆಕ್ಟರ್- ಇಲ್ಲಿದೆ ಗುಡ್ ನ್ಯೂಸ್

    ಈ ಸಿನಿಮಾದಲ್ಲಿ ‘ಸೀತಾ ಭಾರತದ ಮಗಳು..’ ಎಂದು ಡೈಲಾಗ್ ಹೇಳಿಸಲಾಗಿದೆ. ಈ ಮಾತಿಗೆ ಕಠ್ಮುಂಡು ಮೇಯರ್ (Mayor) ಆಕ್ಷೇಪನೆಯನ್ನು ಎತ್ತಿದ್ದಾರೆ. ರಾಮಾಯಣದ ಪ್ರಕಾರ ಸೀತೆಯು ನೇಪಾಳದ ಜಾನಕ್ ಪುರದಲ್ಲಿ ಜನಿಸಿದ್ದಾರೆ. ಇಲ್ಲಿಗೆ ಶ್ರೀರಾಮ ಬಂದು ಸೀತೆಯನ್ನು ಮದುವೆ ಆಗಿರುವ ಉಲ್ಲೇಖ ಕೂಡ ಇದೆ. ಆದರೆ, ಸಿನಿಮಾದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಮತ್ತು ಸುಳ್ಳು ಹೇಳಲಾಗಿದೆ ಎಂದು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

     

    ಈಗಾಗಲೇ ನೇಪಾಳದಲ್ಲಿ ಈ ಸಿನಿಮಾದ ಸೆನ್ಸಾರ್ ಅನ್ನು ತಡೆಹಿಡಿಯಲಾಗಿದೆ. ಆದರೆ, ಉಳಿದ ಕಡೆ ಸಿನಿಮಾ ಪ್ರದರ್ಶನವಾಗುತ್ತಿದೆ. ಎಲ್ಲೆಲ್ಲಿ ಈ ಸಿನಿಮಾ ಪ್ರದರ್ಶನವಾಗುತ್ತಿದೆಯೋ ಅಲ್ಲಲ್ಲಿ, ಈ ಡೈಲಾಗ್ ತಗೆಯಲೇಬೇಕು ಎಂದು ಮೇಯರ್ ಒತ್ತಾಯಿಸಿದ್ದಾರೆ. ಸಿನಿಮಾವನ್ನು ನೇಪಾಳದಲ್ಲಿ ಬ್ಯಾನ್ ಮಾಡುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.